ಪಟ್ನಾ: ದುಷ್ಕರ್ಮಿಗಳು ನಡೆಸಿದ ಗುಂಡಿನ ದಾಳಿಯಿಂದಾಗಿ ಉದ್ಯಮಿ (Businessman) ಹಾಗೂ ಆತನ ಅಂಗರಕ್ಷಕ (Bodyguard) ಮೃತಪಟ್ಟ ಘಟನೆ ಬಿಹಾರದ (Bihar) ಮುಜಾಫರ್‌ಪುರದಲ್ಲಿ ನಡೆದಿದೆ. ಘಟನೆಯಲ್ಲಿ ಮೂವರು ಗಾಯಗೊಂಡಿದ್ದಾರೆ ಎಂದು ಪೊಲೀಸರು (Police) ತಿಳಿಸಿದ್ದಾರೆ.
ಮೃತ ಉದ್ಯಮಿಯನ್ನು ಅಶುತೋಷ್ ಶಾಹಿ ಎಂದು ಗುರುತಿಸಲಾಗಿದೆ. ಗುಂಡಿನ ಚಕಮಕಿಯಲ್ಲಿ ಅವರ ಅಂಗರಕ್ಷಕ ಕೂಡ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಅವರ ಮತ್ತಿಬ್ಬರು ಅಂಗರಕ್ಷಕರು ಮತ್ತು ವಕೀಲ ಸೈಯದ್ ಖಾಸಿಂ ಹಸನ್ ಗಾಯಗೊಂಡಿದ್ದಾರೆ. ಅವರ ಸ್ಥಿತಿ ಕೂಡ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದನ್ನೂ ಓದಿ: ಇಬ್ಬರು ಹೆಣ್ಣುಮಕ್ಕಳೊಂದಿಗೆ ಬಾವಿಗೆ ಹಾರಿದ ತಾಯಿ!
ಇಬ್ಬರು ಆರೋಪಿಗಳು ಕೃತ್ಯದಲ್ಲಿ ಶಾಮೀಲಾಗಿರುವುದು ದೃಢಪಟ್ಟಿದೆ. ಆದರೆ ಗುಂಡಿನ ದಾಳಿಯಲ್ಲಿ ಒಟ್ಟು ನಾಲ್ವರು ಭಾಗಿಯಾಗಿದ್ದಾರೆ. ಬೈಕ್‍ನಲ್ಲಿ ಬಂದಿದ್ದ ನಾಲ್ವರು ಈ ಗುಂಡಿನ ದಾಳಿ ನಡೆಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಆಸ್ತಿಯ ವಿಚಾರವಾಗಿ ಈ ಹತ್ಯೆ ನಡೆದಿದೆ ಎಂದು ತಿಳಿದು ಬಂದಿದೆ. ಆದರೆ ಇದು ದೃಢಪಟ್ಟಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ಉದ್ಯಮಿ ಅಶುತೋಷ್ ಅವರಿಗೆ ಈ ಹಿಂದೆ ಶಂಭು-ಮಂಟು ಗ್ಯಾಂಗ್ ಕೊಲೆ ಬೆದರಿಕೆ ಹಾಕಿದ್ದರು. ಅವರು ಹಿಂದಿನ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ತಯಾರಿ ನಡೆಸಿದ್ದರು. ಆದರೆ ಅವರ ನಾಮಪತ್ರ ಅಸಿಂಧುಗೊಂಡಿದ್ದರಿಂದ ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಾಗಿರಲಿಲ್ಲ.ಇದನ್ನೂ ಓದಿ: ಮಹಿಳೆಯರ ಭದ್ರತೆ ಬಗ್ಗೆ ತಮ್ಮದೇ ಸರ್ಕಾರವನ್ನು ಟೀಕಿಸಿದ್ದಕ್ಕೆ ಸಚಿವ ರಾಜೇಂದ್ರ ಗುಧಾ ವಜಾ
ಡೆಹ್ರಾಡೂನ್: ಉದ್ಯಮಿಯೊಬ್ಬರನ್ನು (Businessman) ನಾಗರ ಹಾವಿನಿಂದ ಕಚ್ಚಿಸಿ ಕೊಲೆಗೈದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಉತ್ತರಾಖಂಡ (Uttarakhand) ಪೊಲೀಸರು (Police) ಬಂಧಿಸಿದ್ದಾರೆ. ಅಲ್ಲದೇ ಇನ್ನೂ ನಾಲ್ಕು ಜನರ ವಿರುದ್ಧ ಪ್ರಕರಣ ದಾಖಲಾಗಿದ್ದು ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಉತ್ತರ ಪ್ರದೇಶದ (Uttar Pradesh) ಹಾವಾಡಿಗ ರಮೇಶ್‍ನಾಥ್ ಎಂಬಾತ ಬಂಧಿತ ಆರೋಪಿಯಾಗಿದ್ದಾನೆ. ಡಾಲಿ ಆರ್ಯ ಹಾಗೂ ಆಕೆಯ ಸ್ನೇಹಿತ ದೀಪ್ ಕಂಡ್ಪಾಲ್ ಎಂಬುವವರು ಆರೋಪಿಗಳಾಗಿದ್ದು ಇವರಿಗೆ ಕುಟುಂಬಸ್ಥರು ಸಹಕರಿಸಿದ್ದಾರೆ. ಈಗ ಉಳಿದ ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ರೌಡಿಗಳಾಗಿ ಜೈಲು ಸೇರಿದ್ದವರಿಗೆ ಸಿಕ್ಕಿತು ಉಗ್ರರ ಪಾಠ!
ಜು.15 ರಂದು ತೀನ್‍ಪಾನಿ ಪ್ರದೇಶದ ಬಳಿ ಅಂಕಿತ್ ಚೌಹಾಣ್ (30) ಎಂಬಾತನ ಶವ ಕಾರಿನೊಳಗೆ ಪತ್ತೆಯಾಗಿತ್ತು. ಆತನ ದೇಹವನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಹಾವಿನ ವಿಷ ಸೇರಿ ಮೃತಪಟ್ಟಿದ್ದು ತಿಳಿದು ಬಂದಿತ್ತು. ಬಳಿಕ ಆತನ ಮೊಬೈಲ್ ಪರಿಶೀಲಿಸಿದಾಗ ಡಾಲಿ ಎಂಬ ಮಹಿಳೆಯೊಂದಿಗೆ ಸಂಪರ್ಕದಲ್ಲಿರುವುದು ಪತ್ತೆಯಾಗಿತ್ತು.
ಬಳಿಕ ಮಹಿಳೆಯ ಕರೆಯ ವಿವರಗಳನ್ನು ಆಧರಿಸಿ ಆಕೆಯ ಫೋನ್‍ನ್ನು ಟ್ರ್ಯಾಕ್ ಮಾಡಲಾಗಿದೆ. ಈ ವೇಳೆ ಮಹಿಳೆ ಹಾವಾಡಿಗನೊಂದಿಗೆ ಸಂಪರ್ಕಿಸಿರುವುದು ತಿಳಿದು ಬಂದಿದೆ. ಅಲ್ಲದೇ ಆರಂಭದಲ್ಲಿ ಕಾರಿನಲ್ಲಿ ವಿಷಾನಿಲ ಹೊರ ಸೂಸುವಿಕೆಯಿಂದ ಈ ಸಾವು ಸಂಭವಿಸಿದೆ ಎಂದು ಊಹಿಸಲಾಗಿತ್ತು. ಆದರೆ ಮರಣೋತ್ತರ ಪರೀಕ್ಷೆಯ ನಂತರ ತನಿಖೆಯ ದಾರಿ ಬದಲಾಯಿತು ಎಂದು ಹಿರಿಯ ಪೆÇಲೀಸ್ ವರಿಷ್ಠಾಧಿಕಾರಿ (ಎಸ್‍ಎಸ್‍ಪಿ) ನೈನಿತಾಲ್ ಪಂಕಜ್ ಭಟ್ ತಿಳಿಸಿದ್ದಾರೆ.
ಡಾಲಿಗೆ ಅಂಕಿತ್ ಮದ್ಯಪಾನದ ಅಮಲಿನಲ್ಲಿ ನಿಂದಿಸುತ್ತಿದ್ದ ಇದಕ್ಕಾಗಿ ಕೊಲೆಗೈಯಲಾಗಿದೆ. ಅಲ್ಲದೇ ಆತ ಅಮಲಿನಲ್ಲಿದ್ದಾಗ ಈ ಕೃತ್ಯ ಎಸಗಿದ್ದಾಗಿ ಬಂಧಿತ ಆರೋಪಿ ಹೇಳಿದ್ದಾನೆ. ಉಳಿದ ಆರೋಪಿಗಳ ಮೊಬೈಲ್ ಸ್ವಿಚ್ ಆಫ್ ಆಗಿದ್ದು ಅವರ ಪತ್ತೆಗೆ ಬಲೆ ಬೀಸಲಾಗಿದೆ. ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಪೊಲಿಸರು ತಿಳಿಸಿದ್ದಾರೆ.
ಮುಂಬೈ: ಮಹಿಳೆಯೊಬ್ಬಳು (Women) ಕೋಳಿ ರಕ್ತ (Chicken Blood) ಬಳಸಿಕೊಂಡು 64 ವರ್ಷದ ಉದ್ಯಮಿ ವಿರುದ್ಧ ಸುಳ್ಳು ರೇಪ್ ಕೇಸ್ ದಾಖಲಿಸಿ ಈಗ ಪೊಲೀಸರಿಗೆ ತಗಲಾಕ್ಕೊಂಡಿರುವ ಘಟನೆ ಮುಂಬೈನಲ್ಲಿ (Mumbai) ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
2021ರ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು (Mumbai Police) ಸ್ಥಳೀಯ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದಾಗ ಕೇಸ್ ಬೆಳಕಿಗೆ ಬಂದಿದೆ. ವಿವಿಧ ಖಾಸಗಿ ಹುದ್ದೆಗಳಲ್ಲಿರುವ ಮೋನಿಕಾ ಭಗವಾನ್ ಅಲಿಯಾಸ್ ದೇವ್ ಚೌಧರಿ, ಅನಿಲ್ ಚೌಧರಿ ಅಲಿಯಾಸ್ ಆಕಾಶ್, ಲುಬ್ನಾ ವಜೀರ್ ಅಲಿಯಾಸ್ ಸಪ್ನಾ ಆರೋಪಿಗಳಾಗಿದ್ದಾರೆ.
2019ರಲ್ಲಿ ಮೋನಿಕಾ ಮತ್ತು ಆಕೆಯ ಸಹಚರರು ಖಾಸಗಿ ವೀಡಿಯೋ ರೆಕಾರ್ಡ್ ಮಾಡಿದ್ದು, 64ರ ಉದ್ಯಮಿ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕುತ್ತಿದ್ದರು. ವೃದ್ಧನ ಬಳಿ ಎರಡು ವರ್ಷಗಳ ಅವಧಿಯಲ್ಲಿ 3.26 ಕೋಟಿ ಹಣ ವಸೂಲಿ ಮಾಡಿದರು. ಇದರಿಂದ ಬೇಸತ್ತಿದ್ದ ಉದ್ಯಮಿ 2021ರಲ್ಲಿ ಮಹಾರಾಷ್ಟ್ರದ ಸಹಾರ್ ಪೊಲೀಸ್ ಠಾಣೆಯಲ್ಲಿ ಮೋನಿಕಾ ಮತ್ತು ಆಕೆಯ ಸಹಚರರು ವಸೂಲಿ ಮಾಡಿರುವುದಾಗಿ ದೂರು ದಾಖಲಿಸಿದ್ದಾರೆ. ಇದನ್ನೂ ಓದಿ: ಅಪ್ಪು, ಶಿವಣ್ಣನ ಹೆಸರಲ್ಲೂ ವಂಚನೆ – ಬಗೆದಷ್ಟೂ ಬಯಲಾಗ್ತಿದೆ ಮಾಡೆಲ್ ನಿಶಾಳ ಕರಾಳ ಮುಖ!
ಮುಂಬೈ ಗ್ಯಾಂಗ್ ಸ್ಕೆಚ್ ಹಾಕಿದ್ದೇ ರೋಚಕ?
ಮೋನಿಕಾ ಮತ್ತವರ ಸಹಚರರ ಗ್ಯಾಂಗ್ ಸ್ಕೆಚ್ ಹಾಕಿದ್ದನ್ನು ಕಂಡು ಪೊಲೀಸರೇ ದಂಗಾಗಿದ್ದಾರೆ. ಹೌದು. 2019ರಲ್ಲಿ ಹೆಸರು ಬಹಿರಂಗಪಡಿಸದ ಉದ್ಯಮಿ ಮುಂಬೈನ ಏರ್‌ಪೋರ್ಟ್‌ನ ಪಂಚತಾರಾ ಹೋಟೆಲ್‌ನಲ್ಲಿ ತಂಗಿದ್ದರು. ಈ ವೇಳೆ ಸಪ್ನಾ ಮತ್ತು ಮೋನಿಕಾ ಪರಿಚಯವಾಗಿದ್ದಾರೆ. ನಂತರ ಅವರೊಂದಿಗೆ ರಾತ್ರಿ ಔತಣ ಕೂಟಕ್ಕೆ ಸೇರಬಹುದೇ ಅಂತಾ ಕೇಳಿದ್ದಾರೆ. ಉದ್ಯಮಿ ಒಪ್ಪಿಕೊಂಡ ನಂತರ ರಾತ್ರಿ ಅವರ ಕೊಠಡಿಯಲ್ಲೇ ಊಟಕ್ಕೆ ಸೇರಿದ್ದಾರೆ. ಇದನ್ನೂ ಓದಿ: ಬೇಗ ಬಂದುಬಿಡು ಸೀಮಾ, ಹೊಸ ಜೀವನ ಶುರು ಮಾಡೋಣ – ಸೌದಿಯಲ್ಲಿ ಮೊದಲ ಪತಿಯ ಗೋಳಾಟ
ಊಟ ಮುಗಿದ ಸ್ವಲ್ಪ ಸಮಯದ ಬಳಿಕ ಸಪ್ನಾ ಕೆಲ ದಾಖಲೆಗಳನ್ನ ಹೋಟೆಲ್ ಲಾಭಿಯಲ್ಲಿ ಯಾರಿಗಾದ್ರೂ ಕೊಟ್ಟು ಬರುತ್ತೇನೆ ಅಂತಾ ರೂಮ್ ಬಾಗಿಲು ಹಾಕಿಕೊಂಡು ಹೊರಬಂದಿದ್ದಾಳೆ. ಅದೇ ಸಮಯಕ್ಕೆ ಮೋನಿಕಾ ವಾಶ್‌ರೂಮ್ ಒಳಗೆ ಹೋಗಿದ್ದಾಳೆ. ಸ್ವಲ್ಪ ಸಮಯದ ನಂತರ ಡೋರ್ ಬೆಲ್ ಸದ್ದು ಕೇಳಿ ಉದ್ಯಮಿ ಬಾಗಿಲು ತೆರೆಯಲು ಬಂದಿದ್ದಾನೆ. ಅದೇ ಸಮಯಕ್ಕೆ ಒಳಗಿದ್ದ ಮೋನಿಕಾ ಕಿಟಾರನೆ ಕಿರುಚಿಕೊಳ್ಳಲು ಶುರು ಮಾಡುತ್ತಿದ್ದಂತೆ, ಹೊರಗಿನಿಂದ ಬಂದ ಸಪ್ನಾ ವಿಡಿಯೋ ರೆಕಾರ್ಡ್ ಮಾಡಲು ಶುರು ಮಾಡಿದ್ದಾಳೆ. ವಾಶ್ ರೂಮ್‌ಗೆ ಹೋಗಿದ್ದ ಮೋನಿಕಾ ಕ್ಷಣ ಮಾತ್ರದಲ್ಲೇ ವಿವಸ್ತ್ರಳಾಗಿ ಬೆಡ್‌ಶೀಟ್‌ನಿಂದ ತನ ಮೈ ಮುಚ್ಚಿಕೊಂಡು ಕುಳಿತಿದ್ದದ್ದು ಕಂಡುಬಂದಿದೆ. ಅಲ್ಲದೇ ಬೆಡ್‌ಶೀಟ್ ಮೇಲೆ, ಆಕೆಯ ಗುಪ್ತಾಂಗ ಇತರ ಭಾಗಗಳಿಗೆ ರಕ್ತದ ಕಲೆಗಳಾಗಿರುವುದು ಕಂಡುಬಂದಿದೆ. ಇದನ್ನು ಕಂಡ ವೃದ್ಧ ಅಲ್ಲೇ ಶಾಕ್ ಆಗಿದ್ದಾನೆ.
ಅದೇ ಸಮಯಕ್ಕೆ ಮತ್ತೊಬ್ಬ ಆರೋಪಿ ಅನಿಲ್ ಸಹ ಅಲ್ಲಿಗೆ ಬಂದಿದ್ದಾನೆ. 10 ಕೋಟಿ ಹಣ ಕೊಡದಿದ್ದರೆ ಈ ವೀಡಿಯೋವನ್ನ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಕೊನೆಗೆ ಉದ್ಯಮಿ 75 ಲಕ್ಷ ಕೊಡಲು ಒಪ್ಪಿದ್ದಾನೆ. ಆತನಿಂದ ಆಗಾಗ್ಗೆ ಬೆದರಿಕೆ ಹಾಕಿ 2 ವರ್ಷಗಳಲ್ಲಿ 3.26 ಕೋಟಿ ವಸೂಲಿ ಮಾಡಿದ್ದಾರೆ. 1 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕೂಡ ವಸೂಲಿ ಮಾಡಿದ್ದರು. ಇದರಿಂದ ಬೇಸತ್ತ ಉದ್ಯಮಿ 2021ರ ನವೆಂಬರ್ 17ರಂದು ಸಹರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಸಂಬಂಧ ಕೇಸ್ ದಾಖಲಿಸಿಕೊಂಡ ಪೊಲೀಸರು ಮತ್ತೊಮ್ಮೆ ಹಣ ಸುಲಿಗೆ ಮಾಡುವ ಸಮಯಕ್ಕೆ ದಾಳಿ ಮಾಡಿ ಬಂಧಿಸಿದ್ದಾರೆ.
ತನಿಖೆ ವೇಳೆ ಮೋನಿಕಾ ಕೋಳಿ ರಕ್ತವನ್ನ ತಾನೇ ಗುಪ್ತಾಂಗಕ್ಕೆ ಹಚ್ಚಿಕೊಂಡಿದ್ದಾಳೆ, ಜೊತೆಗೆ ಬೆಡ್‌ಶೀಟ್ ಮೇಲೂ ಸುರಿದು ಬ್ಲ್ಯಾಕ್ ಮೇಲ್ ಮಾಡಿ ಹಣ ವಸೂಲಿ ಮಾಡಿರುವುದು ಸಾಬೀತಾಗಿದೆ. ಆರೋಪಿಗಳಿಂದ 49.35 ಲಕ್ಷ ರೂ. ವಶಕ್ಕೆ ಪಡೆದುಕೊಂಡಿದ್ದು, ಜೈಲಿಗಟ್ಟಲಾಗಿದೆ. ತನಿಖೆ ಮುಂದುವರಿದಿದೆ.
– ಅತ್ತ ಪತ್ನಿಗೆ ಕಾಲು ಆಪರೇಷನ್, ಮಗನಿಗೆ ಅನಾರೋಗ್ಯ; ಇತ್ತ ಉದ್ಯಮಿ ಕಿಡ್ನಾಪ್
ಕೋಲಾರ: ಇಟ್ಟಿಗೆ ಕೊಳ್ಳುವ ನೆಪದಲ್ಲಿ ಉದ್ಯಮಿಯೊಬ್ಬರನ್ನು ಕಿಡ್ನಾಪ್ (Kidnap) ಮಾಡಿ ಬಿಡುಗಡೆಗೆ 5 ಕೋಟಿ ರೂ. ಹಣಕ್ಕೆ ಬೇಡಿಕೆ ಇಟ್ಟಿರುವ ಘಟನೆ ಕೋಲಾರದಲ್ಲಿ ನಡೆದಿದೆ. ಕೋಲಾರ (Kolar) ಜಿಲ್ಲೆಯ ಮಾಲೂರು ಪಟ್ಟಣದ ಮಾಲೂರು ಮಾರುತಿನಗರ ನಿವಾಸಿ ಬಾಬು ಕಿಡ್ನಾಪ್ ಆಗಿರುವ ಉದ್ಯಮಿ.
ಮಾಲೂರು ತಾಲೂಕಿನ ಹೆಡಗಿನಬೆಲೆ ಬಳಿ ಇರುವ ಇಟ್ಟಿಗೆ ಕಾರ್ಖಾನೆ ಬಳಿ ಇಟ್ಟಿಗೆ ಬೇಕು ಎಂದು ಕರೆಯಿಸಿಕೊಂಡಿರುವ ದುಷ್ಕರ್ಮಿಗಳು ಬುಧವಾರ ಕಿಡ್ನಾಪ್ ಮಾಡಿದ್ದಾರೆ. ಬಾಬು ಅವರಿಗೆ ಸೇರಿದ ವಾಸವಿ ಇಟ್ಟಿಗೆ ಕಾರ್ಖಾನೆ ಬಳಿ ಬರುವಂತೆ ತಿಳಿಸಿರುವ ಆರೋಪಿಗಳು ಬಳಿಕ ಅವರನ್ನು ಕಿಡ್ನಾಪ್ ಮಾಡಿದ್ದಾರೆ. ಬಳಿಕ ಬಾಬು ಕುಟುಂಬಸ್ಥರಿಗೆ ಕರೆ ಮಾಡಿ 5 ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಮಾಲೂರು ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ದುಷ್ಕರ್ಮಿಗಳ ಬೆನ್ನತ್ತಿದ್ದಾರೆ. ಪೊಲೀಸರು 3 ತಂಡಗಳ ರಚನೆ ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ. ಅಪಹರಣಕಾರರ ಜಾಡು ಹಿಡಿಯಲು ಪೊಲೀಸರು ತೀವ್ರ ಶೋಧಕಾರ್ಯ ಮುಂದುವರಿಸಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಇದನ್ನೂ ಓದಿ: ಕಲಬುರಗಿಯಲ್ಲಿ ನಾಲ್ವರು ಅಪ್ರಾಪ್ತರಿಂದಲೇ 9ರ ಬಾಲಕಿ ಮೇಲೆ ಅತ್ಯಾಚಾರ
ಕಿಡ್ನಾಪ್ ಆಗಿರುವ ಬಾಬು ಮನೆಯಲ್ಲಿ ಸಂಕಷ್ಟಗಳ ಸರಮಾಲೆ ಎದುರಾಗಿದ್ದು, ಬಾಬು ಪತ್ನಿಗೆ ಕಾಲು ಆಪರೇಷನ್ ಆಗಿ ನಡೆಯಲಾರದ ಪರಿಸ್ಥಿತಿ ಇದೆ. ಇತ್ತ ಮಗ ಮಂಜುನಾಥ್ ಅವರಿಗೆ ಪೆರಾಲಿಸಿಸ್ ಆಗಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಈ ನಡುವೆ ದುಷ್ಕರ್ಮಿಗಳು ಪೋನ್ ಕರೆ ಮಾಡಿ ಹಣದ ಬೇಡಿಕೆ ಬಂದಿರುವುದು ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ.
ಬಾಬು ಮನೆಯಲ್ಲಿ ಆತಂಕದ ಛಾಯೆ ಎದುರಾಗಿದ್ದು, ಪತ್ನಿ ವರಲಕ್ಷ್ಮಿ ಕುಟುಂಬದ ಸಂಕಷ್ಟ ನೆನೆದು ಕಣ್ಣೀರು ಹಾಕಿದ್ದಾರೆ. ಪತಿಯನ್ನು ಸುರಕ್ಷಿತವಾಗಿ ಕರೆತರುವಂತೆ ಮಾಲೂರು ಪೊಲೀಸರಿಗೆ ವರಲಕ್ಷ್ಮಿ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಇಟ್ಟಿಗೆಯಿಂದ ಜಜ್ಜಿ ಗರ್ಭಿಣಿ ಹತ್ಯೆ – ಆರೋಪಿಗಳು ಅರೆಸ್ಟ್
ಕಾರವಾರ: ಗೋವಾದ (Goa) ವೆರ್ಣಾ ಕೈಗಾರಿಕಾ ಪ್ರದೇಶದಲ್ಲಿ ಕಾರ್ಮಿಕರ ಪೂರೈಕೆ ಉದ್ಯಮ ನಿರ್ವಹಿಸುತ್ತಿದ್ದ ಕಾರವಾರ ತಾಲೂಕಿನ ಗೋಪಶಿಟ್ಟಾ ಮೂಲದ ಉದ್ಯಮಿ (Businessman) ಶ್ಯಾಮ್ ಪಾಟೀಲ್ ಅವರ ಕುಟುಂಬ ಆತ್ಮಹತ್ಯೆಗೆ (Suicide) ಶರಣಾಗಿದೆ.
ಶ್ಯಾಮ್ ಪಾಟೀಲ್ (40), ಪತ್ನಿ ಜ್ಯೋತಿ ಪಾಟೀಲ್ (37), ಮಗ ಧಕ್ಷ್ ಪಾಟೀಲ್ (12) ಸಾಮೂಹಿಕ ಆತ್ಮಹತ್ಯೆಗೆ ಶರಣಾಗಿದ್ದಾರೆ. ಪತ್ನಿ ಮತ್ತು ಪುತ್ರ ಕಾರವಾರ (Karwar) ನಗರದ ಕೋಡಿಬಾಗದಲ್ಲಿರುವ ಕಾಳಿ ಸೇತುವೆಯಿಂದ ಜಿಗಿದು ಆತ್ನಹತ್ಯೆ ಮಾಡಿಕೊಂಡಿದ್ದು, ಶ್ಯಾಮ್ ಪಾಟೀಲ್ ನಗರದಿಂದ 60 ಕಿ.ಮೀ. ದೂರದಲ್ಲಿರುವ ಗೋವಾ ರಾಜ್ಯದ ಪಾಡಿ ಅರಣ್ಯ ಪ್ರದೇಶದಲ್ಲಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಬೆಳಗಾವಿಯಲ್ಲಿ ತಹಶೀಲ್ದಾರ್ ಅನುಮಾನಾಸ್ಪದ ಸಾವು – ಪತ್ನಿ, ಆಕೆ ಸಹೋದರನ ವಿರುದ್ಧ ಕೊಲೆ ಆರೋಪ
ಪುತ್ರ ಹಾಗೂ ಪತ್ನಿಯ ಮೃತದೇಹ ದೇವಬಾಗ ಕಡಲತೀರದಲ್ಲಿ ದೊರೆತಿದೆ. ಶ್ಯಾಮ್ ಮೃತದೇಹ ಪಾಡಿ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿದೆ. ಗುರುವಾರ ನಸುಕಿನ ಜಾವ ದೇವಬಾಗ ಕಡಲತೀರದಲ್ಲಿ ಬಾಲಕನ ಮೃತದೇಹ ಪತ್ತೆಯಾಗಿತ್ತು. ಚಿತ್ತಾಕುಲ ಠಾಣೆ ಪೊಲೀಸರು ತನಿಖೆ ಆರಂಭಿಸಿದ ಬಳಿಕ ಕುಟುಂಬದ ಸದಸ್ಯರು ಸಾಮೂಹಿಕ ಆತ್ಮಹತ್ಯೆಗೆ ಶರಣಾಗಿರುವುದು ಬೆಳಕಿಗೆ ಬಂದಿದೆ. ಇದನ್ನೂ ಓದಿ: ಪ್ರೇಮವೈಫಲ್ಯ – ಮನನೊಂದ ಯುವತಿ ಚಿತ್ರಾವತಿ ನದಿಗೆ ಹಾರಿ ಆತ್ಮಹತ್ಯೆ!
ಉದ್ಯಮಿ ಶ್ಯಾಮ್ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಗಿ ಗೋವಾದ ಕುಕಳ್ಳಿ ಠಾಣೆ ಪೊಲೀಸರು ಮಾಹಿತಿ ನೀಡಿದ್ದಾರೆ. ಪತ್ನಿ, ಪುತ್ರ ಆತ್ಮಹತ್ಯೆ ಮಾಡಿಕೊಂಡ ಬಳಿಕ ಶ್ಯಾಮ್ ಇಲ್ಲಿಂದ ಗೋವಾ ಭಾಗಕ್ಕೆ ತೆರಳಿ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆಯಿದ್ದು, ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಘಟನೆ ಸಂಬಂಧ ಚಿತ್ತಾಕುಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಮದುವೆಯಾಗಲು ಹೆಣ್ಣು ಸಿಗದೆ ಮನನೊಂದು ಯುವಕ ಆತ್ಮಹತ್ಯೆ
ವಾಷಿಂಗ್ಟನ್: ಅಟ್ಲಾಂಟಿಕ್ ಸಾಗರದಲ್ಲಿ ಮುಳುಗಿದ್ದ ಟೈಟಾನಿಕ್ (Titanic) ಹಡಗಿನ ಅವಶೇಷಗಳನ್ನ ನೋಡಲು ಸಣ್ಣ ಜಲಾಂತರ್ಗಾಮಿಯಲ್ಲಿ (Submersible) ತೆರಳಿದ್ದ ವಿಶ್ವದ ಐವರು ಶ್ರೀಮಂತರು ಮೃತಪಟ್ಟಿದ್ದಾರೆ ಎಂದು ಅಮೆರಿಕದ ಕೋಸ್ಟ್ ಗಾರ್ಡ್ ಖಚಿತಪಡಿಸಿದೆ.
ಪ್ರವಾಸಿಗರನ್ನು ಕರೆದೊಯ್ದಿದ್ದ ಸೀಮಿತ ಪ್ರದೇಶದಲ್ಲಿ ಸಂಚರಿಸುವ ಸಣ್ಣ ಜಲಾಂತರ್ಗಾಮಿ (Submersible) ಸಾಗರದ ಒಳಗಡೆ ಸುಮಾರು 1,600 ಅಡಿ (488 ಮೀಟರ್) ಆಳದಲ್ಲಿ ಟೈಟಾನಿಕ್ ಹಡಗಿನ ಅವಶೇಷಗಳ ಬಳಿ ಸ್ಫೋಟಗೊಂಡಿದೆ. ಇದರಿಂದಾಗಿ ಐವರು ದುರಂತ ಸಾವಿಗೀಡಾಗಿದ್ದಾರೆ. ರಿಮೋಟ್ ಕಂಟ್ರೋಲ್ ಸಾಧನದಿಂದ ಇದನ್ನು ಪತ್ತೆಹೆಚ್ಚಲಾಗಿದೆ. ಜಲಾಂತರ್ಗಾಮಿ ಸಬ್‌ಮರ್ಸಿಬಲ್‌ನಲ್ಲಿ ಒಬ್ಬ ಪೈಲಟ್ ಮತ್ತು ನಾಲ್ವರು ಪ್ರಯಾಣಿಕರಿದ್ದರು ಎಂದು ಹೇಳಿದೆ.
ಈ ಕುರಿತು ಓಷಿಯನ್‌ಗೇಟ್ ಎಕ್ಸ್‌ಪೆಡಿಷನ್ ಸಹ ಪ್ರಕಟಣೆ ಬಿಡುಗಡೆಗೊಳಿಸಿದ್ದು, ಕಂಪನಿಯ ಸಿಇಒ ಸ್ಟಾಕ್‌ಟನ್ ರಷ್ ಸೇರಿದಂತೆ ಜಲಾಂತರ್ಗಾಮಿಯಲ್ಲಿ ಸಂಚರಿಸಿದ್ದ ಎಲ್ಲ ಐದು ಮಂದಿಯೂ ಮೃತಪಟ್ಟಿದ್ದಾರೆ ಎಂದು ತಿಳಿಸಿದೆ. ಟೈಟಾನಿಕ್ ಹಡಗಿನ ಅವಶೇಷಗಳನ್ನು ನೋಡಲು ಜಲಾಂತರ್ಗಾಮಿಯಲ್ಲಿ ತೆರಳಿದ್ದ ಒಶಿಯನ್‌ಗೇಟ್ ಸಿಇಒ ಸ್ಟಾಕ್‌ಟನ್ ರಷ್, ಬ್ರಿಟಿಷ್ ಉದ್ಯಮಿ ಹಮೀಶ್ ಹಾರ್ಡಿಂಗ್, ಪಾಲ್ ಹೆನ್ರಿ ನಾರ್ಗಿಯೊಲೆಟ್, ಪಾಕಿಸ್ತಾನದ ಉದ್ಯಮಿ ಶಹಜಾದಾ ದಾವೂದ್ ಮತ್ತು ಅವರ ಮಗ ಸುಲೇಮಾನ್ ದಾವೂದ್ ಭಾನುವಾರವಷ್ಟೇ ಕಣ್ಮರೆಯಾಗಿದ್ದರು.
ಟೈಟಾನಿಕ್ ಹಡಗಿನ ಅವಶೇಷಗಳನ್ನ ನೋಡಲು ಸಣ್ಣ ಜಲಾಂತರ್ಗಾಮಿ ಅಟ್ಲಾಂಟಿಕ್ ಸಾಗರದಲ್ಲಿ ಕಳೆದ ನಾಲ್ಕು ದಿನಗಳ ಹಿಂದೆ ನಾಪತ್ತೆಯಾಗಿತ್ತು. ಇದಕ್ಕೆ ಯುಎಸ್ ಕೋಸ್ಟ್ ಗಾರ್ಡ್ ಸಿಬ್ಬಂದಿ ತೀವ್ರವಾಗಿ ಹುಡುಕಾಟ ನಡೆಸಿದ್ದರು. 96 ತಾಸು ಸಾಗರದಲ್ಲಿ ಸಂಚರಿಸುವಷ್ಟು ಆಮ್ಲಜನಕವನ್ನಷ್ಟೇ ಅದು ಹೊಂದಿತ್ತು. ಇದನ್ನೂ ಓದಿ: ಟೈಟಾನಿಕ್ ಅವಶೇಷ ನೋಡಲು ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಜಲಾಂತರ್ಗಾಮಿ ನಾಪತ್ತೆ
ಟೈಟಾನಿಕ್ ದುರಂತ:
ದೈತ್ಯ ಟೈಟಾನಿಕ್ ಹಡಗು 1912ರಲ್ಲಿ ತನ್ನ ಮೊದಲ ಪ್ರಯಾಣದಲ್ಲೇ ಮಂಜುಗಡ್ಡೆಗೆ ಡಿಕ್ಕಿ ಹೊಡೆದು ಅಟ್ಲಾಂಟಿಕ್ ಸಾಗರದಲ್ಲಿ ಮುಳುಗಿತು. ಈ ದುರಂತದಲ್ಲಿ 1,500ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು. ಈ ಹಡಗಿನ ಅವಶೇಷವನ್ನು 1985ರಲ್ಲಿ ಕಂಡುಹಿಡಿಯಲಾಯಿತು. ಅಟ್ಲಾಂಟಿಕ್‌ನ ಆಳದಲ್ಲಿರುವ ಈ ಅವಶೇಷವನ್ನು ಅಂದಿನಿಂದ ಇಂದಿನವರೆಗೂ ವ್ಯಾಪಕವಾಗಿ ಪರಿಶೋಧಿಸಲಾಗುತ್ತಿದೆ.
ವಾಷಿಂಗ್ಟನ್: ಉತ್ತರ ಅಟ್ಲಾಂಟಿಕ್‌ನಲ್ಲಿ ಟೈಟಾನಿಕ್ (Titanic) ಅವಶೇಷಗಳನ್ನು ವೀಕ್ಷಿಸಲು ತೆರಳಿದ್ದ ಜಲಾಂತರ್ಗಾಮಿಯೊಂದು (Submarine) ನಾಪತ್ತೆಯಾಗಿರುವ ಘಟನೆ ನಡೆದಿತ್ತು. ಇದೀಗ ನಾಪತ್ತೆಯಾಗಿರುವ ಜಲಾಂತರ್ಗಾಮಿಯಲ್ಲಿ ಪ್ರಯಾಣಿಸುತ್ತಿದ್ದ ಐವರಲ್ಲಿ ಪಾಕಿಸ್ತಾನದ ಪ್ರಮುಖ ಉದ್ಯಮಿ (Pakistani businessman) ಹಾಗೂ ಅವರ ಪುತ್ರ ಸೇರಿದ್ದರು ಎಂದು ಅವರ ಕುಟುಂಬ ಮಂಗಳವಾರ ತಿಳಿಸಿದೆ.
ಓಷನ್‌ಗೇಟ್ ಎಕ್ಸ್‌ಪೆಂಡಿಷನ್ಸ್ ಕಂಪನಿ ನಿರ್ವಹಿಸುತ್ತಿದ್ದ ಟೂರಿಸ್ಟ್ ಕ್ರಾಫ್ಟ್ ಭಾನುವಾರ ಸಾಗರಕ್ಕಿಳಿದ 2 ಗಂಟೆಗಳಲ್ಲಿ ಸಂಪರ್ಕವನ್ನು ಕಡಿದುಕೊಂಡಿದೆ. ಅದು 96 ಗಂಟೆಗಳ ಆಮ್ಲಜನಕ ಪೂರೈಕೆ ಹೊಂದಿದೆ. ಜಲಾಂತರ್ಗಾಮಿಯೊಂದಿಗೆ ಸಂಪರ್ಕವನ್ನು ಮರುಸ್ಥಾಪಿಸಲು ಹಾಗೂ ಅದನ್ನು ಸುರಕ್ಷಿತವಾಗಿ ಕರೆತರಲು ಅನೇಕ ಸರ್ಕಾರಿ ಸಂಸ್ಥೆಗಳು ಹಾಗೂ ಕಂಪನಿಗಳು ಜಂಟಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದೀಗ ನಾಪತ್ತೆಯಾಗಿರುವ ಜಲಾಂತರ್ಗಾಮಿಯಲ್ಲಿ ಪ್ರಯಾಣಿಸುತ್ತಿದ್ದ ಐವರಲ್ಲಿ ಪಾಕಿಸ್ತಾನದ ಶ್ರೀಮಂತ ಉದ್ಯಮಿಗಳಲ್ಲೊಬ್ಬರಾದ ಶಹಜಾದಾ ದಾವೂದ್ (Shahzada Dawood) ಹಾಗೂ ಅವರ ಮಗ ಹುಸೇನೆ ದಾವೂದ್ ಇದ್ದರು ಎಂಬುದು ತಿಳಿದುಬಂದಿದೆ. ಶಹಜಾದಾ ದಾವೂದ್ ಖ್ಯಾತ ಎಂಗ್ರೋ ಕಂಪನಿಯ ಉಪಾಧ್ಯಕ್ಷ. ಎಂಗ್ರೋ ಇಂಧನ, ಕೃಷಿ, ಪೆಟ್ರೋಕೆಮಿಕಲ್ಸ್ ಹಾಗೂ ದೂರಸಂಪರ್ಕದಲ್ಲಿ ಹೂಡಿಕೆ ಮಾಡುವ ಸಂಸ್ಥೆಯಾಗಿದೆ. ಇದು 2022ರ ಕೊನೆಯಲ್ಲಿ 350 ಶತಕೋಟಿ ರೂ. ಆದಾಯವನ್ನು ಘೋಷಿಸಿದೆ. ಇದನ್ನೂ ಓದಿ: ಟೈಟಾನಿಕ್ ಅವಶೇಷ ನೋಡಲು ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಜಲಾಂತರ್ಗಾಮಿ ನಾಪತ್ತೆ
ನಾಪತ್ತೆಯಾಗಿರುವ ಜಲಾಂತರ್ಗಾಮಿಯಲ್ಲಿ ಪ್ರಯಾಣಿಸುತ್ತಿದ್ದ ಮತ್ತೊಬ್ಬ ಪ್ರಯಾಣಿಕನನ್ನು ಬ್ರಿಟಿಷ್ ಉದ್ಯಮಿ ಹಮೀಶ್ ಹಾರ್ಡಿಂಗ್ ಎಂದು ಗುರುತಿಸಲಾಗಿದೆ. ಇದೀಗ ಅಮೆರಿಕ ಹಾಗೂ ಕೆನಡಾದ ಹಡಗುಗಳು ಮಾತ್ರವಲ್ಲದೇ ವಿಮಾನಗಳು ಕೂಡಾ ಜಲಾಂತರ್ಗಾಮಿ ಹುಡುಕಾಟಕ್ಕೆ ಇಳಿದಿವೆ. ಇದನ್ನೂ ಓದಿ: ಅಮೆರಿಕದಲ್ಲಿ ಎಲೋನ್ ಮಸ್ಕ್ ಭೇಟಿಯಾಗ್ತಾರೆ ಪ್ರಧಾನಿ ಮೋದಿ
ಬೆಂಗಳೂರು: ಫಾಲೋ ಮಾಡಿಕೊಂಡು ಬಂದು ನಡು ರಸ್ತೆಯಲ್ಲಿ ಥಳಿಸಿ ಲೇಡಿ ಡಾನ್ (Lady Don) ಉದ್ಯಮಿ ಮೇಲೆ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದೆ.
ಅಖಿಲ್ ಅಲಿಯಾಸ್ ಹೇಮಾದ್ರಿ ಎಂಬ ಉದ್ಯಮಿ ಹಲ್ಲೆಗೊಳಗಾದ ವ್ಯಕ್ತಿ. ಹಲ್ಲೆ ನಡೆಸಿದ ವ್ಯಕ್ತಿಗಳಲ್ಲಿ ಒಬ್ಬನಾದ ಆರೋಪಿ ರೋನಿತ್ ಕಾರು ಬ್ಯಸಿನೆಸ್ ವಿಚಾರದಲ್ಲಿ ಉದ್ಯಮಿಗೆ ವಂಚನೆ ಮಾಡಿದ್ದ. ಈ ಹಿನ್ನೆಲೆ ಅಖಿಲ್ ಯಲಹಂಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು ರೋನಿತ್‌ನನ್ನು ಬಂಧಿಸಿದ್ದರು. ಬಳಿಕ ಜಾಮೀನು ಪಡೆದು ರೋನಿತ್ ಹೊರಗೆ ಬಂದಿದ್ದ. ಇದನ್ನೂ ಓದಿ: ಗ್ಯಾರಂಟಿ ಸಿಎಂ ಭಾಗ್ಯ ಕೊಡಿ – ಹೈಕಮಾಂಡ್ ಮುಂದೆ ಸಿದ್ದು, ಡಿಕೆಶಿ ವಾದ ಏನು?
ಉದ್ಯಮಿ ತನ್ನ ವಿರುದ್ಧ ದೂರು ನೀಡಿದ ಹಿನ್ನೆಲೆ ರೋನಿತ್ ಪದೇ ಪದೇ ಅಖಿಲ್‌ಗೆ ಬೆದರಿಕೆ ಹಾಕುತ್ತಿದ್ದು, ಸೇಡು ತೀರಿಸಿಕೊಳ್ಳುವ ಸಲುವಾಗಿ ಸಮಯಕ್ಕಾಗಿ ಕಾಯುತ್ತಿದ್ದ. ಅಖಿಲ್ ಕಚೇರಿ ಕೆಲಸ ಮುಗಿಸಿ ಮನೆಗೆ ತೆರಳುವ ವೇಳೆ ರೋನಿತ್ ಮತ್ತು ಆತನ ಟೀಂ ಉದ್ಯಮಿಯನ್ನು ಫಾಲೋ ಮಾಡಿಕೊಂಡು ಬಂದು ಎಲ್ ಆಂಡ್ ಟಿ ಅಪಾರ್ಟ್ಮೆಂಟ್ ಬಳಿ ಅಡ್ಡ ಹಾಕಿದ್ದಾರೆ. ಇದನ್ನೂ ಓದಿ: ನಾನು ತಪ್ಪು ಮಾಡಿದ್ರೆ ನನ್ನ ವಂಶ ನಿರ್ವಂಶವಾಗಲಿ – ಮಳವಳ್ಳಿ ಬಿಜೆಪಿ ಪರಾರ್ಜಿತ ಅಭ್ಯರ್ಥಿ
ನಂತರ ಲೇಡಿ ಡಾನ್ ದುರ್ಗಾ ಅಲಿಯಾಸ್ ಸಹನಾ ಸೇರಿದಂತೆ ಐವರು ಸೇರಿ ಉದ್ಯಮಿ ಅಖಿಲ್ ಕಾರಿನಲ್ಲಿರುವಾಗಲೇ ಅವರ ಮೇಲೆ ಹಲ್ಲೆ ನಡೆಸಿ ಅವರ ಕಾರಿನ ಗ್ಲಾಸ್ ಒಡೆದು ಹಾಕಿದ್ದಾರೆ. ಬಳಿಕ ಅಖಿಲ್‌ಗೆ ಕೊಲೆ ಬೆದರಿಕೆ ಹಾಕಿದ್ದಾರೆ. ಈ ಕುರಿತು ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಸಮ್ಮಿಶ್ರ ಸರ್ಕಾರದ ಪತನದಲ್ಲಿ ಸಿದ್ದರಾಮಯ್ಯ ಪಾತ್ರ ನಿರಾಕರಿಸಲು ಸಾಧ್ಯವೇ: ಸುಧಾಕರ್ ಬಾಂಬ್
ಬಾಲಿವುಡ್ ನಟಿ, ವಿವಾದಿತ ತಾರೆ ಶೆರ್ಲಿನ್ ಚೋಪ್ರಾ (Sherlyn Chopra) ಉದ್ಯಮಿಯೊಬ್ಬರ ವಿರುದ್ಧ ಲೈಂಗಿಕ ಕಿರುಕುಳದ (Sexual Harassment) ಆರೋಪ ಮಾಡಿದ್ದಾರೆ. ಕೇವಲ ಆರೋಪ ಮಾತ್ರವಲ್ಲ, ಅವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ವಿಡಿಯೋ ಆಲ್ಬಂ ಮಾಡೋಣ ಎಂದು ಹೇಳಿಕೊಂಡ ಬಂದ ವ್ಯಕ್ತಿ ಅಸಭ್ಯವಾಗಿ ತಮ್ಮೊಂದಿಗೆ ನಡೆದುಕೊಂಡಿದ್ದಾನೆ ಎಂದು ಅವರು ದೂರಿನಲ್ಲಿ ದಾಖಲಿಸಿದ್ದಾರೆ.
ಮುಂಬೈ (Mumbai) ಮೂಲದ ಉದ್ಯಮಿ (Businessman) ಸುನಿಲ್ ಪರಸ್ಮಾನಿ ಲೋಧಾ (Sunil Parasmani Lodha) ಎನ್ನುವವರು ಸದ್ಯ ದುಬೈನಲ್ಲಿದ್ದಾರೆ. ಶೆರ್ಲಿನ್ ಜೊತೆ ಆಲ್ಬಂ ಸಾಂಗ್ ಮಾಡುವುದಕ್ಕಾಗಿಯೇ ದುಬೈನಿಂದ ಬಂದಿದ್ದೇನೆ ಎಂದು ಹೇಳಿಕೊಂಡು ಹೋಟೆಲ್ ಗೆ ಕರೆಯಿಸಿಕೊಂಡಿದ್ದಾರೆ. ಮಾತುಕತೆಯ ನಂತರ ತನ್ನದು ಕಾರು ಇಲ್ಲ, ಹಾಗಾಗಿ ಶೆರ್ಲಿನ್ ಗೆ ಡ್ರಾಪ್ ಕೇಳಿದ್ದಾರೆ. ಶೆರ್ಲಿನ್ ತಮ್ಮ ಮನೆಗೆ ಮೊದಲು ಡ್ರಾಪ್ ಮಾಡಿಸಿಕೊಂಡು, ಆಮೇಲೆ ಉದ್ಯಮಿಯನ್ನು ಬಿಟ್ಟು ಬರಲು ಡ್ರೈವರ್ ಗೆ ಸೂಚಿಸಿದ್ದಾರೆ.
ಶೆರ್ಲಿನ್ ಮನೆ ಬರುತ್ತಿದ್ದಂತೆಯೇ ‘ನಿಮ್ಮ ಮನೆಯನ್ನು ನೋಡಬಹುದಾ?’ ಎಂದು ಕೇಳಿದನಂತೆ ಆ ಉದ್ಯಮಿ. ಮನೆ ನೋಡಲು ಕರೆದುಕೊಂಡು ಹೋಗಿದ್ದಾರೆ ಶೆರ್ಲಿನ್. ಆನಂತರ ಮಾತುಕತೆ ಆಡುತ್ತಾ ಉದ್ಯಮಿ ಅಲ್ಲಿಯೇ ಊಟ ಮಾಡಿದ್ದಾನೆ. ನಂತರ ನೀನು ಸಖತ್ ಹಾಟ್ ಆಗಿ ಕಾಣ್ತಿದ್ದೀಯಾ, ನನ್ನಿಂದ ಕಂಟ್ರೋಲ್ ಮಾಡ್ಕೊಳ್ಳೋಕೆ ಆಗ್ತಿಲ್ಲ ಎಂದು ಕಿರುಕುಳ ಶುರು ಮಾಡಿದ್ದಾನೆ. ಅಲ್ಲಿಂದ ಆತನನ್ನು ಓಡಿಸುವ ಪ್ರಯತ್ನ ಮಾಡಿದ್ದಾರೆ ಶೆರ್ಲಿನ್. ಜಾರ್ಜರ್ ಕೇಳುವ ನೆಪದಲ್ಲಿ ಮತ್ತೆ ಬಂದು ಕಿರುಕುಳ ನೀಡಿದನಂತೆ. ಇವಿಷ್ಟನ್ನೂ ಪೊಲೀಸ್ ದೂರಿನಲ್ಲಿ ಬರೆದಿದ್ದಾರೆ ಶೆರ್ಲಿನ್.
ನಟಿ ಕೊಟ್ಟ ದೂರಿನನ್ವಯ ಆ ಉದ್ಯಮಿಯ ವಿರುದ್ಧ ಜುಹಾ (Juha) ಠಾಣೆ ಪೊಲೀಸರು ಐಪಿಸಿ ಸೆಕ್ಷನ್ 354, 506, 509ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿದ್ದಾರೆ. ಪೊಲೀಸ್, ಕೋರ್ಟ್ ವಿಚಾರದಲ್ಲಿ ಶೆರ್ಲಿನ್ ಸದಾ ಸುದ್ದಿಯಲ್ಲಿ ಇರುತ್ತಾರೆ. ಈ ಹಿಂದೆ ಈಕೆ ಮತ್ತು ಈಕೆಯ ಗೆಳತಿ ರಾಖಿ ಸಾವಂತ್ ಇಂಥದ್ದೇ ಮತ್ತೊಂದು ವಿಚಾರಕ್ಕೆ ಕೋರ್ಟ್ ಮೆಟ್ಟಿಲು ಏರಿದ್ದರು. ನಂತರ ಕೇಸ್ ವಾಪಸ್ಸು ಪಡೆದು ಸ್ನೇಹಿತೆಯರಾಗಿದ್ದಾರೆ.
ನ್ಯೂಯಾರ್ಕ್: ಶತಕೋಟಿ ಉದ್ಯಮಿ, ಮಾಧ್ಯಮ ದೊರೆ 92 ವರ್ಷದ ರೂಪರ್ಟ್ ಮುರ್ಡೋಕ್ (Rupert Murdoch) 5ನೇ ಮದುವೆಯನ್ನು ಇದ್ದಕ್ಕಿದ್ದಂತೆ ಸ್ಥಗಿತಗೊಳಿಸಿದ್ದಾರೆ.
ಮಾಡೆಲ್ ಮತ್ತು ನಟಿ ಜೆರ್ರಿ ಹಾಲ್ (Jerry Hall) ಅವರಿಗೆ ವಿಚ್ಛೇದನ ನೀಡಿದ 8 ತಿಂಗಳ ಬಳಿಕ 66 ವರ್ಷದ ಆನ್ ಲೆಸ್ಲಿ ಸ್ಮಿತ್ (Ann Lesley Smith) ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಉಳಿದ ಜೀವನ ಆಕೆಯೊಂದಿಗೆ ಕಳೆಯಲು ನಿರ್ಧರಿಸಿದ್ದರು. ಆದರೆ ಇದ್ದಕ್ಕಿದ್ದಂತೆ ನಿಶ್ಚಿತಾರ್ಥ ಆದ ಒಂದೇ ವಾರದಲ್ಲಿ ಮದುವೆ ಪ್ಲಾನ್ ಕೈಬಿಟ್ಟಿದ್ದಾರೆ.
ಇತ್ತೀಚೆಗೆ ನ್ಯೂಯಾರ್ಕ್ ಪೋಸ್ಟ್‌ಗೆ ಪ್ರತಿಕ್ರಿಯಿಸಿದ್ದ ಅವರು, ನಾನು ಪ್ರೀತಿಯಲ್ಲಿ ಬೀಳಲು ತುಂಬಾ ಹೆದರುತ್ತಿದ್ದೆ. ಆದರೆ ಇದು ನನ್ನ ಕೊನೆಯದು ಎಂದು ನನಗೆ ತಿಳಿದಿತ್ತು. ಈಗ ನಾನು ಸಂತೋಷವಾಗಿದ್ದೇನೆ. ನಾವಿಬ್ಬರೂ ನಮ್ಮ ಜೀವನದ ದ್ವಿತೀಯಾರ್ಧವನ್ನು ಒಟ್ಟಿಗೆ ಕಳೆಯಲು ಎದುರು ನೋಡುತ್ತಿದ್ದೇವೆ ಎಂದು ಮುರ್ಡೋಕ್ ಹೇಳಿದ್ದರು.
ಫಾಕ್ಸ್ ನ್ಯೂಸ್ ಮತ್ತು ಯುನೈಟೆಡ್ ಕಿಂಗ್‌ಡಮ್‌ನ ಟ್ಯಾಬ್ಲಾಯ್ಡ್ ಪತ್ರಿಕೆ ದಿ ಸನ್ ಮಾಲೀಕರಾಗಿರುವ ಮುರ್ಡೋಕ್ ಮೊದಲ 3 ಪತ್ನಿಯರಿಂದ 6 ಮಕ್ಕಳನ್ನು ಪಡೆದಿದ್ದಾರೆ. 14 ವರ್ಷದ ಹಿಂದೆ ಸ್ಮಿತ್ ವಿಧವೆಯಾಗಿದ್ದು, ಕಳೆದ ಸೆಪ್ಟೆಂಬರ್‌ನಲ್ಲಿ ಇಬ್ಬರು ಮೊದಲ ಬಾರಿಗೆ ಭೇಟಿಯಾಗಿದ್ದರು. ಈ ವೇಳೆ ಸಂಕ್ಷಿಪ್ತ ಸಂವಾದ ನಡೆಸಿದ ಎರಡು ವಾರದ ಬಳಿಕ ಮುರ್ಡೋಕ್ ತನ್ನ ಪ್ರೀತಿಯನ್ನು ವ್ಯಕ್ತಪಡಿಸಿದ್ದರು. ಇದನ್ನೂ ಓದಿ: 92ನೇ ವಯಸ್ಸಿನಲ್ಲಿ 5ನೇ ಮದುವೆ – ಇದು ಕೊನೆಯದ್ದು ಎಂದ ಮುರ್ಡೋಕ್
ಮಾಡಲ್ ಹಾಗೂ ನಟಿ ಜೆರ್ರಿ ಹಾಲ್‌ರನ್ನು ಮುರ್ಡೋಕ್ ಮದುವೆಯಾಗಿ 6 ವರ್ಷ ಸಂಸಾರ ನಡೆಸಿ ಕಳೆದ ವರ್ಷ ಡಿವೋರ್ಸ್ ನೀಡಿದ್ದರು. ಹಾಲ್‌ಗೂ ಮುನ್ನ 1999 ರಿಂದ 2013ರ ವರೆಗೆ ವೆಂಡಿ ಡೆಂಗ್, 1967 ರಿಂದ 1999ರವರೆಗೆ ಅನ್ನಾ ಮರಿಯಾ ಟ್ರೋವ್, 1956 ರಿಂದ 1967ರವರೆಗೆ ಪ್ಯಾಟ್ರಿಕಾ ಬೂಕರ್ ಜೊತೆ ಮುರ್ಡೋಕ್ ಜೀವನ ನಡೆಸಿದ್ದರು.
ರೂಪರ್ಟ್ ಮುರ್ಡೋಕ್ ಫಾಕ್ಸ್ ಕಾರ್ಪೋರೇಷನ್‌ನ ಅಧ್ಯಕ್ಷರಾಗಿದ್ದಾರೆ. ಇದು ಫಾಕ್ಸ್ ಬ್ರಾಡ್‌ಕಾಸ್ಟಿಂಗ್, ಫಾಕ್ಸ್ ಸ್ಪೋರ್ಟ್ಸ್, ಫಾಕ್ಸ್ ಬ್ಯುಸಿನೆಸ್ ಹಾಗೂ ಫಾಕ್ಸ್ ನ್ಯೂಸ್‌ನ ಮಾಲೀಕತ್ವವನ್ನು ಹೊಂದಿದೆ.