Tag: ಉದ್ಯಮ

  • ಕೃಷಿ ಕೂಡ ಉದ್ಯಮವೇ, ಉದ್ಯಮಿಗಳಾಗಿ ಹತ್ತಾರು ಜನರಿಗೆ ಉದ್ಯೋಗ ನೀಡಿ: ಡಿಕೆಶಿ

    ಕೃಷಿ ಕೂಡ ಉದ್ಯಮವೇ, ಉದ್ಯಮಿಗಳಾಗಿ ಹತ್ತಾರು ಜನರಿಗೆ ಉದ್ಯೋಗ ನೀಡಿ: ಡಿಕೆಶಿ

    -ಇಲ್ಲಿರುವ ಮಕ್ಕಳಲ್ಲಿ ಯಾರಾದರೂ ಒಬ್ಬರು ಮುಂದೆ ಡಿಕೆ ಶಿವಕುಮಾರ್ ಆಗಬೇಕು

    ರಾಮನಗರ: ಕೃಷಿ (Agriculture) ಕೂಡ ಈಗ ಒಂದು ಉದ್ಯಮವೇ. ಉದ್ಯೋಗಿಗಳಾಗುವುದಕ್ಕಿಂತ ಹತ್ತಾರು ಜನರಿಗೆ ಉದ್ಯೋಗ ನೀಡುವ ಉದ್ದಿಮೆದಾರರಾಗುವುದು ನಿಮ್ಮ ಗುರಿಯಾಗಬೇಕು ಎಂದು ಕಾಲೇಜು ವಿದ್ಯಾರ್ಥಿಗಳಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಸಲಹೆ ನೀಡಿದರು.

    ಕನಕಪುರದ (Kanakapura) ಕರಿಯಪ್ಪ ಕೃಷಿ ಕಾಲೇಜು ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ನಮ್ಮ ಜಿಲ್ಲೆಯಲ್ಲಿ ಹಾಲು ಹಾಗೂ ರೇಷ್ಮೆ ಉತ್ಪಾದನೆಯಲ್ಲಿ ಉತ್ತಮ ಸಾಧನೆ ಮಾಡಿದೆ. ಇದರ ಜೊತೆಗೆ ಬೆಂಗಳೂರಿನ ಸುತ್ತಮುತ್ತಲ ಪ್ರದೇಶದಲ್ಲಿ ಹೂವಿನ ಬೆಳೆ ಹಾಕುವುದರಿಂದ ಆರ್ಥಿಕವಾಗಿ ಪ್ರಗತಿ ಸಾಧಿಸಬಹುದು. ನೀವು ಕೇವಲ ಎಂಜಿನಿಯರ್ ಆಗುವುದಷ್ಟೇ ನಿಮ್ಮ ಗುರಿಯಾಗುವುದು ಬೇಡ. ನೀವೇ ಹತ್ತಾರು ಜನರಿಗೆ ಉದ್ಯೋಗ ಸೃಷ್ಟಿಸುವಂತೆ ನೀವು ಬೆಳೆಯಬೇಕು. ಸ್ವಯಂ ಉದ್ಯೋಗವೇ ಶ್ರೇಷ್ಠ ಉದ್ಯೋಗವಾಗಿದೆ. ಆ ನಿಟ್ಟಿನಲ್ಲಿ ನೀವು ಗಮನಹರಿಸಿ ಎಂದರು. ಇದನ್ನೂ ಓದಿ: ನಿಯಂತ್ರಣ ತಪ್ಪಿ ಕಾಲುವೆಗೆ ಬಿದ್ದ ಬೈಕ್ – ಅಂಜನಾದ್ರಿ ಬೆಟ್ಟಕ್ಕೆ ಹೊರಟಿದ್ದ ಸವಾರ ಸಾವು

    ಈಗಿನ ಕಾಲದಲ್ಲಿ ಯಾವುದೇ ಶಿಕ್ಷಕರು ತಾವು ಮಕ್ಕಳಿಗಿಂತ ಬುದ್ಧಿವಂತರು ಎಂದು ಭಾವಿಸಿದರೆ ಅದು ತಪ್ಪು. ಇನ್ನು ಮುಂದೆ ಶಾಲಾ ಕಾಲೇಜುಗಳಲ್ಲಿ ಯಾವುದೇ ಕಾರ್ಯಕ್ರಮವಾದರೂ ಶಿಕ್ಷಕರು ವೇದಿಕೆ ಮೇಲೆ ಇರಬಾರದು. ಇಡೀ ಕಾರ್ಯಕ್ರಮವನ್ನು ಮಕ್ಕಳೇ ನಡೆಸಬೇಕು. ಅವರೇ ಸ್ವಾಗತ ಭಾಷಣ ಮಾಡಬೇಕು. ಇದರಿಂದ ಅವರಲ್ಲಿನ ಪ್ರತಿಭೆ ಅನಾವರಣವಾಗುತ್ತದೆ. ಅವರಲ್ಲಿ ನಾಯಕತ್ವ ಗುಣ ಬೆಳೆಯುತ್ತದೆ. ನಾಯಕರನ್ನು ಬೆಳೆಸುವವನೇ ನಿಜವಾದ ನಾಯಕ. ಮಕ್ಕಳಿಗೆ ಉತ್ತೇಜನ ನೀಡಬೇಕು ಎಂದು ಹೇಳಿದರು. ಇದನ್ನೂ ಓದಿ: ಶಿಗ್ಗಾಂವಿ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು – ಭಾನುವಾರ ಕ್ಷೇತ್ರದ ಮತದಾರರಿಗೆ ಕೃತಜ್ಞತಾ ಸಮಾವೇಶ

    ಇಲ್ಲಿರುವ ಮಕ್ಕಳಲ್ಲಿ ಯಾರಾದರೂ ಒಬ್ಬರು ಮುಂದೆ ಡಿ.ಕೆ. ಶಿವಕುಮಾರ್ ಆಗಬೇಕು. ನಾನು ಕೂಡ ಶಿಕ್ಷಣ ಸಂಸ್ಥೆ ನಡೆಸಿದ್ದೇನೆ. ಈಗ ನನ್ನ ಮಕ್ಕಳಿಗೆ ಜವಾಬ್ದಾರಿ ವಹಿಸಿದ್ದೇನೆ. ಈ ಕಾಲೇಜಿಗೆ ಬೆಂಗಳೂರು ದಕ್ಷಿಣ ಕೃಷಿ ಕಾಲೇಜು ಎಂದು ಹೆಸರಿಡಲು ಬಯಸಿದ್ದೆ. ಆದರೆ ನೀವು ಈ ಶಾಲೆಯ ಸಂಸ್ಥಾಪಕರಾದ ಕರಿಯಪ್ಪನವರ ಹೆಸರು ಇಟ್ಟಿದ್ದೀರಿ. ಅವರ ಹೆಸರಾಗಿರುವುದರಿಂದ ಇದು ಹಾಗೇ ಇರಲಿ. ನಾವೆಲ್ಲರೂ ಬೆಂಗಳೂರು ಜಿಲ್ಲೆಯವರು ಎಂಬುದು ನಿಮ್ಮೆಲ್ಲರ ತಲೆಯಲ್ಲಿರಲಿ. ನಿಮ್ಮ ತಂದೆ ತಾಯಿ ಒಂದಿಂಚೂ ಜಾಗವನ್ನು ಮಾರಲು ಬಿಡಬೇಡಿ. ಮುಂದೆ ಈ ಭೂಮಿಗೆ ಯಾವ ಬೆಲೆ ಬರಲಿದೆ ಎಂದು ನಿಮಗೆ ಊಹೆಯೂ ಇಲ್ಲ. ಚೆಲುವರಾಯಸ್ವಾಮಿ ಅವರು ತಮ್ಮ ಸಚಿವಾಲಯದಿಂದ ಈ ಕೃಷಿ ಕಾಲೇಜು ನೀಡಿ ನಿಮ್ಮೆಲ್ಲರಿಗೂ ನೆರವು ನೀಡಿದ್ದಾರೆ ಎಂದು ನುಡಿದರು. ಇದನ್ನೂ ಓದಿ: ಕ್ಷೇತ್ರದ ಅಭಿವೃದ್ಧಿಯೇ ನನ್ನ ಮೊದಲ ಗುರಿ: ಶೈಲೇಂದ್ರ ಬೆಲ್ದಾಳೆ

  • ಅಮೇರಿಕ ರಾಯಭಾರ ಕಚೇರಿ| 20ನೇ ನೆಕ್ಸಸ್ ಬ್ಯುಸಿನೆಸ್ ಇನ್‌ಕ್ಯುಬೇಟರ್ ಕಾರ್ಯಕ್ರಮಕ್ಕೆ ಅರ್ಜಿ ಆಹ್ವಾನ

    ಅಮೇರಿಕ ರಾಯಭಾರ ಕಚೇರಿ| 20ನೇ ನೆಕ್ಸಸ್ ಬ್ಯುಸಿನೆಸ್ ಇನ್‌ಕ್ಯುಬೇಟರ್ ಕಾರ್ಯಕ್ರಮಕ್ಕೆ ಅರ್ಜಿ ಆಹ್ವಾನ

    ಚೆನ್ನೈ: ನವದೆಹಲಿಯಲ್ಲಿನ ಯು.ಎಸ್. ರಾಯಭಾರ (US Embassy) ಕಚೇರಿಯು ಅಲ್ಲಿನ ಅಮೇರಿಕನ್ ಸೆಂಟರ್‌ನಲ್ಲಿ ಉದ್ಯಮಿಗಳ ಮಾರ್ಗದರ್ಶನಕ್ಕಾಗಿ ಪ್ರತಿಷ್ಠಿತ ನೆಕ್ಸಸ್ ಕಾರ್ಯಕ್ರಮ ಆಯೋಜಿಸಿದ್ದು, ಆಸಕ್ತರಿಂದ ಅರ್ಜಿ ಆಹ್ವಾನಿಸಿದೆ. ಒಂಭತ್ತು ವಾರಗಳ ಈ ತರಬೇತಿಯು ಮುಂದಿನ ವರ್ಷ ಫೆಬ್ರವರಿ 2 ರಿಂದ ಆರಂಭವಾಗಲಿದ್ದು, ನೆಕ್ಸಸ್‌ ಸರಣಿಯಲ್ಲಿ ಇದು 20ನೇ ಕಾರ್ಯಕ್ರಮವಾಗಿದೆ.

    ನೆಕ್ಸಸ್‌ ಕಾರ್ಯಕ್ರಮದಲ್ಲಿ ಭಾರತದ (India) 15 ನವೋದ್ಯಮಗಳಿಗೆ ಭಾರತೀಯ ಮತ್ತು ಅಮೇರಿಕನ್‌ ತಜ್ಞರಿಂದ ತರಬೇತಿ ಪಡೆಯುವ ಅವಕಾಶ ದೊರೆಯಲಿದೆ. ಈಗಿನ ಮಾರುಕಟ್ಟೆಯ ಅಗತ್ಯಕ್ಕೆ ತಕ್ಕಂತೆ ತಂತ್ರಜ್ಞಾನವನ್ನು ಮೇಲ್ದರ್ಜೆಗೆ ಏರಿಸಲು, ಮಾರುಕಟ್ಟೆಯ ನಾಡಿಮಿಡಿತ ಅರಿಯಲು ಮತ್ತು ಗುರಿ ನಿಗದಿ ಪಡಿಸಿಕೊಳ್ಳಲು ಈ ತಜ್ಞರು ನೆರವಾಗಲಿದ್ದಾರೆ. ನವೋದ್ಯಮಗಳ ಮೇಲೆ ಕೃತಕ ಬುದ್ಧಿಮತ್ತೆಯ ಪ್ರಭಾವ ಮತ್ತು ಉದ್ಯಮಿಗಳ ಮಾನಸಿಕ ಆರೋಗ್ಯದ ಮಹತ್ವದ ಕುರಿತು ಚರ್ಚಿಸಲಾಗುತ್ತದೆ.

    ಆರಂಭಿಕ ಒಂಭತ್ತು ವಾರಗಳ ತರಬೇತಿ ಕಾರ್ಯಕ್ರಮದ ನಂತರ ನಾಲ್ಕು ಕಂಪನಿಗಳಿಗೆ ಹೆಚ್ಚಿನ ಬೆಂಬಲಕ್ಕಾಗಿ ನೆಕ್ಸಸ್ ನಲ್ಲಿ ಉಳಿಯಲು ಆಹ್ವಾನಿಸಲಾಗುತ್ತದೆ. ಈ ಕಂಪನಿಗಳಿಗೆ ಹೆಚ್ಚುವರಿ ಎಂಟು ತಿಂಗಳವರೆಗೆ ಇನ್ಕ್ಯುಬೇಟರ್ ಸೌಲಭ್ಯಗಳು ಮತ್ತು ನೆಟ್‌ವರ್ಕ್‌ ಸೌಲಭ್ಯವನ್ನು ನೀಡುವುದಕ್ಕಾಗಿ ಪೂರ್ಣ ಪ್ರಮಾಣದಲ್ಲಿ ಅವಕಾಶವನ್ನು ನೀಡಲಾಗುತ್ತದೆ. ಈ ಸಮಯದಲ್ಲಿ, ನೆಕ್ಸಸ್ ತಜ್ಞರ ತಂಡವು ಅವರ ಉತ್ಪನ್ನಗಳನ್ನು ಮಾರುಕಟ್ಟೆಗೆ ತರಲು, ಅವರ ಗ್ರಾಹಕ ಮತ್ತು ಆದಾಯದ ಮೂಲಗಳನ್ನು ಹೆಚ್ಚಿಸಲು ಹಾಗೂ ಸೂಕ್ತವಾದಲ್ಲಿ ಅವರ ಕಾರ್ಯಾಚರಣೆಗಳ ಮೌಲ್ಯಮಾಪನಕ್ಕಾಗಿ ಹಣವನ್ನು ಪಡೆಯಲು ಸಹಾಯ ಮಾಡುವ ಮೂಲಕ ಅವರ ಕಂಪನಿಗಳನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಅವರೊಂದಿಗೆ ಕೆಲಸ ಮಾಡುತ್ತದೆ.  ಇದನ್ನೂ ಓದಿ: ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳ ಮಾನ್ಯತೆ ನಿಯಮ ಸಡಿಲ – ಶೇ.25ರಷ್ಟು ವಿದ್ಯಾರ್ಥಿಗಳಿದ್ದರೂ ಮಾನ್ಯತೆ!

    ಈ ತರಬೇತಿಯಲ್ಲಿ ಭಾಗವಹಿಸಲು ಆಸಕ್ತಿ ಹೊಂದಿರುವ ಉದ್ಯಮಿಗಳು ಜನವರಿ 5, 2025 ರೊಳಗಾಗಿ www.startupnexus.in  ಅರ್ಜಿ ಸಲ್ಲಿಸಬೇಕು. ಆಯ್ಕೆಯಾದವರಿಗೆ ಜನವರಿ 17, 2025 ರೊಳಗೆ ಸೂಚಿಸಲಾಗುವುದು.

    ನೆಕ್ಸಸ್ʼನ 20 ನೇ ಕಾರ್ಯಕ್ರಮದಲ್ಲಿ ತರಬೇತಿ ನೀಡಲು, ಯು.ಎಸ್. ರಾಯಭಾರ ಕಚೇರಿಯು ಕನೆಕ್ಟಿಕಟ್ ವಿಶ್ವವಿದ್ಯಾಲಯದ (ಯುಕಾನ್) ಜಾಗತಿಕ ತರಬೇತಿ ಮತ್ತು ಅಭಿವೃದ್ಧಿ ಸಂಸ್ಥೆ (ಜಿಟಿಡಿಐ) ನೊಂದಿಗೆ ಪಾಲುದಾರಿಕೆ ಹೊಂದಿದೆ. ನವದೆಹಲಿಯಲ್ಲಿರುವ ಯು.ಎಸ್. ರಾಯಭಾರ ಕಚೇರಿ ಮತ್ತು ಯು.ಎಸ್. ಡಿಪಾರ್ಟ್‌ಮೆಂಟ್‌ ಆಫ್‌ ಸ್ಟೇಟ್‌ ಈ ಕಾರ್ಯಕ್ರಮಕ್ಕೆ ಅನುದಾನ ನೀಡಿವೆ. ಅಮೇರಿಕ ಮತ್ತು ಭಾರತದ ನಡುವಿನ ಸಾಂಸ್ಕೃತಿಕ ಮತ್ತು ಆರ್ಥಿಕ ಸಂಬಂಧಗಳನ್ನು ಉತ್ತೇಜಿಸುವ ಸಂದರ್ಭದಲ್ಲಿ ಸುಸ್ಥಿರ ಸಮುದಾಯ ಅಭಿವೃದ್ಧಿಯನ್ನು ಸಕ್ರಿಯಗೊಳಿಸುವುದು ಪಾಲುದಾರಿಕೆಯ ಗುರಿಯಾಗಿದೆ.

    2017 ರಲ್ಲಿ ಮೊದಲ ಒಕ್ಕೂಟವನ್ನು ಪ್ರಾರಂಭಿಸಿದಾಗಿನಿಂದ, 230 ಭಾರತೀಯ ವಾಣಿಜ್ಯೋದ್ಯಮಿಗಳು ಮತ್ತು ಕಳೆದ 19 ನೆಕ್ಸಸ್ ಕಾರ್ಯಕ್ರಮಗಳು ಒಟ್ಟಾರೆಯಾಗಿ 90 ಮಿಲಿಯನ್ ಡಾಲರ್‌ ಬಾಹ್ಯ ಹೂಡಿಕೆ ಸಂಗ್ರಹಿಸಿವೆ.

     

  • ಹಿಂದೆ ಉದ್ಯಮ ಬೆಳೆದಾಗ ನಿರ್ದಿಷ್ಟ ವ್ಯಕ್ತಿಗೆ ಮಾರುವಂತೆ ಒತ್ತಡ ಇತ್ತು, ಈಗ ಯಾರೂ ಒತ್ತಡ ಹೇರಲ್ಲ : ಏರ್‌ಸೆಲ್‌ ಸಂಸ್ಥಾಪಕ ಶಿವಶಂಕರನ್

    ಹಿಂದೆ ಉದ್ಯಮ ಬೆಳೆದಾಗ ನಿರ್ದಿಷ್ಟ ವ್ಯಕ್ತಿಗೆ ಮಾರುವಂತೆ ಒತ್ತಡ ಇತ್ತು, ಈಗ ಯಾರೂ ಒತ್ತಡ ಹೇರಲ್ಲ : ಏರ್‌ಸೆಲ್‌ ಸಂಸ್ಥಾಪಕ ಶಿವಶಂಕರನ್

    – ಈಗ ಉದಾರೀಕರಣಗೊಂಡ ಭಾರತವಾಗಿ ಬದಲಾಗಿದೆ
    – ಹಣಕಾಸು ಸಮಸ್ಯೆಯಿಂದ 2018ರಲ್ಲಿ ಮಾರುಕಟ್ಟೆಯಿಂದ ಏರ್‌ಸೆಲ್‌ ನಿರ್ಗಮನ

    ನವದೆಹಲಿ: ಹಿಂದೆ ಉದ್ಯಮ (Business) ಬೆಳೆಯಲು ಪ್ರಾರಂಭಿಸಿದರೆ ನಿರ್ದಿಷ್ಟ ವ್ಯಕ್ತಿಗೆ ಮಾರಾಟ ಮಾಡುವಂತೆ ಒತ್ತಡ ಹೇರಲಾಗುತ್ತಿತ್ತು ಎಂದು ಏರ್‌ಸೆಲ್ ಸಂಸ್ಥಾಪಕ ಚಿನ್ನಕಣ್ಣನ್ ಶಿವಶಂಕರನ್ (Aircel founder C Sivasankaran) ಸ್ಪೋಟಕ ಆರೋಪ ಮಾಡಿದ್ದಾರೆ.

    ಈಗ ನೀವು ವ್ಯವಹಾರ  ಆರಂಭಿಸಿದ್ದರೆ ನಿಮ್ಮ ಮೇಲೆ ಯಾರೂ ಒತ್ತಡ ಹೇರಲು ಸಾಧ್ಯವಿಲ್ಲ. ನಿಮಗೆ ಬೇಕಾದುದನ್ನು ನೀವು ಮಾಡಬಹುದು ಎಂದು ಹೇಳಿದರು.

    ಏರ್‌ಸೆಲ್‌ ಕಂಪನಿಯು ಹಣಕಾಸಿನ ಸಮಸ್ಯೆಗಳಿಂದಾಗಿ ಫೆಬ್ರವರಿ 2018 ರಲ್ಲಿ ಮಾರುಕಟ್ಟೆಯಿಂದ ನಿರ್ಗಮಿಸಿತ್ತು. ಸಂದರ್ಶನವೊಂದರಲ್ಲಿ ಶಿವಶಂಕರನ್ ಮಾತನಾಡಿದ್ದು ಈಗ ಬಿಜೆಪಿಗೆ ಹೊಸ ಅಸ್ತ್ರ ಸಿಕ್ಕಿದೆ.

    ತಮಿಳುನಾಡು ಬಿಜೆಪಿ (BJP) ಅಧ್ಯಕ್ಷ ಅಣ್ಣಾಮಲೈ (Annamalai) ಶಿವಶಂಕರನ್ ಅವರ ವಿಡಿಯೋವನ್ನು ಅಪ್ಲೋಡ್‌ ಮಾಡಿ, ಯುಪಿಎ (UPA) ಆಡಳಿತದಲ್ಲಿ ಉದ್ಯಮಿಗಳಿಗೆ ಬೆದರಿಕೆ ಇದ್ದ ಕಾರಣ ಭಾರತದ ಅಭಿವೃದ್ಧಿಗೆ ಹಿನ್ನಡೆಯಾಗಿತು. ಏರ್‌ಸೆಲ್ ಸಂಸ್ಥಾಪಕ ಶಿವಶಂಕರನ್ ಅವರ ಹೇಳಿಕೆಯು ನಮ್ಮ ದೇಶದ ಸಂಪತ್ತಿನ ಸೃಷ್ಟಿಕರ್ತರು ಇಂದು ನಮ್ಮ ಪ್ರೀತಿಯ ಪ್ರಧಾನಿ ಮೋದಿ (Narendra Modi) ಅವರ ನೇತೃತ್ವದಲ್ಲಿ ಎಷ್ಟು ಸುಲಭವಾಗಿ ಶ್ರಮಿಸುತ್ತಿದ್ದಾರೆ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದು ಬರೆದಿದ್ದಾರೆ.  ಇದನ್ನೂ ಓದಿ: ಮತಗಟ್ಟೆ ದತ್ತಾಂಶ ಅಪ್ಲೋಡ್ ಮಾಡುವುದು ಕಷ್ಟ – ಸುಪ್ರೀಂ ಕೋರ್ಟ್‌

    ಚಿನ್ನಕಣ್ಣನ್‌ ಹೇಳಿದ್ದೇನು?
    ನಾನು ಡೀಲ್‌ನಿಂದ ಕೇವಲ 3,400 ಕೋಟಿ ರೂಪಾಯಿಗಳನ್ನು ಮಾಡಿದ್ದೇನೆ. ಒಂದು ವೇಳೆ AT&T ಮಾರಾಟ ಮಾಡಿದ್ದರೆ ನನಗೆ 8 ಶತಕೋಟಿ ಸಿಗುತ್ತಿತ್ತು. ಇಂದು ಯಾರೂ ನಿಮ್ಮ ಮೇಲೆ ಒತ್ತಡ ಹೇರಲು ಸಾಧ್ಯವಿಲ್ಲ. 10 ವರ್ಷದ ಹಿಂದೆ ನಿರ್ದಿಷ್ಟ ವ್ಯಕ್ತಿಗೆ ಕಂಪನಿಯನ್ನು ಮಾರಾಟ ಮಾಡುವಂತೆ ಒತ್ತಡ ಹೇರಲಾಗುತ್ತಿತ್ತು. ವ್ಯವಹಾರದಲ್ಲಿ ರಾಜಕಾರಣಿಗಳು ಮಧ್ಯಪ್ರವೇಶಿಸಿದ್ದರಿಂದ ನಾನು ನಷ್ಟ ಅನುಭವಿಸಿದೆ ಎಂದು ತಿಳಿಸಿದರು.

     

    ಈಗ ನೀವು ವ್ಯಾಪಾರವನ್ನು ಆರಂಭಿಸಿದರೂ ಯಾರೂ ನಿಮ್ಮ ಮೇಲೆ ಒತ್ತಡ ಹೇರಲು ಸಾಧ್ಯವಿಲ್ಲ. ಈಗ ಉದಾರೀಕರಣಗೊಂಡ ಭಾರತವಾಗಿ ಬದಲಾಗಿದೆ. ಅವರು ನನಗೆ ಮಾರಾಟ ಮಾಡಲು ಒತ್ತಡ ಹೇರಿದ್ದರು ಎನ್ನುವುದು ನನ್ನ ದೂರು ಅಲ್ಲ. ನನ್ನ ದೂರು ನನಗೆ 8 ಶತಕೋಟಿ ಆಫರ್ ಮಾಡಿದವರಿಗೆ ಮಾರಾಟ ಮಾಡಲು ಅವರು ನನಗೆ ಅವಕಾಶ ನೀಡಬೇಕಾಗಿತ್ತು ಎಂದರು.

    ಹಣಕಾಸಿನ ಸಮಸ್ಯೆಗಳಿಂದಾಗಿ ಏರ್‌ಸೆಲ್‌ ಕಂಪನಿ ಫೆಬ್ರವರಿ 2018 ರಲ್ಲಿ ಮಾರುಕಟ್ಟೆಯಿಂದ ನಿರ್ಗಮಿಸಿತು. 2006 ರಲ್ಲಿ ಶ್ರೀಲಂಕಾದ ತಮಿಳು ಮೂಲದ ಮಲೇಷಿಯಾದ ಪ್ರಜೆ ಆನಂದ ಕೃಷ್ಣನ್ ಒಡೆತನದ ಮ್ಯಾಕ್ಸಿಸ್ ಬರ್ಹಾದ್ 74% ಪಾಲನ್ನು ಸ್ವಾಧೀನಪಡಿಸಿಕೊಳ್ಳುವ ಮೂಲಕ ಏರ್‌ಸೆಲ್ ಅನ್ನು ಸ್ವಾಧೀನಪಡಿಸಿಕೊಂಡಿತು. ಏರ್‌ಸೆಲ್-ಮ್ಯಾಕ್ಸಿಸ್ ಒಪ್ಪಂದ 2011 ರಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ತಮ್ಮ ಪಾಲನ್ನು ಮ್ಯಾಕ್ಸಿಸ್‌ಗೆ ಮಾರಾಟ ಮಾಡುವಂತೆ ನನ್ನ ಮೇಲೆ ಒತ್ತಡ ಇತ್ತು ಎಂದು ಶಿವಶಂಕರನ್ ಆರೋಪಿಸಿದ್ದರು.

  • ಸ್ಪಿನ್ ಮಾಂತ್ರಿಕ ಮುತ್ತಯ್ಯ ಮುರಳೀಧರನ್ ಹೊಸ ಇನ್ನಿಂಗ್ಸ್ ಆರಂಭ – ಧಾರವಾಡದಲ್ಲಿ 900 ಕೋಟಿ ಹೂಡಿಕೆ

    ಸ್ಪಿನ್ ಮಾಂತ್ರಿಕ ಮುತ್ತಯ್ಯ ಮುರಳೀಧರನ್ ಹೊಸ ಇನ್ನಿಂಗ್ಸ್ ಆರಂಭ – ಧಾರವಾಡದಲ್ಲಿ 900 ಕೋಟಿ ಹೂಡಿಕೆ

    ಧಾರವಾಡ: ಸಾಮಾನ್ಯವಾಗಿ ಕ್ರಿಕೆಟಿಗರು (Cricketer) ವೃತ್ತಿ ಜೀವನಕ್ಕೆ ವಿದಾಯ ಹೇಳಿದ ಮೇಲೆ ಕೋಚ್ ಇಲ್ಲವೇ ಬೇರೆ ಬೇರೆ ಜವಾಬ್ದಾರಿಗಳನ್ನು ವಹಿಸಿಕೊಂಡು ಕ್ರಿಕೆಟ್‌ಗಾಗಿಯೇ ಜೀವನ ಮುಡಿಪಾಗಿ ಇಡುತ್ತಾರೆ. ಆದರೆ ಕೆಲವರು ಮಾತ್ರ ಬೇರೆ ಬೇರೆ ಕ್ಷೇತ್ರಗಳ ಕಡೆ ಹೋಗುತ್ತಾರೆ. ಅಂತವರಲ್ಲಿ ಶ್ರೀಲಂಕಾದ (Sri Lanka) ಕ್ರಿಕೆಟ್ ದಿಗ್ಗಜ ಮುತ್ತಯ್ಯ ಮುರಳೀಧರನ್ (Muttiah Muralitharan) ಕೂಡಾ ಒಬ್ಬರು.

    ಇವರು ಇಡೀ ವಿಶ್ವವನ್ನೇ ಬೆರಗು ಮಾಡಿದಂತ ಸ್ಪಿನ್ ಮಾಂತ್ರಿಕ. ಟೆಸ್ಟ್ ಕ್ರಿಕೆಟ್‌ನಲ್ಲಿ 800 ವಿಕೆಟ್ ಪಡೆದರೆ, ಏಕ ದಿನ ಕ್ರಿಕೆಟ್‌ನಲ್ಲಿ 536 ವಿಕೆಟ್ ಪಡೆದವರು. ಮುತ್ತಯ್ಯ ಕ್ರಿಕೆಟ್ ಜೀವನಕ್ಕೆ ವಿದಾಯ ಹೇಳಿದ ಬಳಿಕ ಶ್ರೀಲಂಕಾದಲ್ಲಿ ಸಿಲೋನ್ ಬೇವರೆಜಸ್ ಕ್ಯಾನ್ ಕಂಪನಿ ಮೂಲಕ ತಂಪು ಪಾನೀಯ ಮತ್ತು ಎನರ್ಜಿ ಡ್ರಿಂಕ್ ಉತ್ಪಾದನಾ ಉದ್ಯಮಕ್ಕೆ ಕೈ ಹಾಕಿ ಯಶಸ್ವಿಯಾದವರು. ಅವರೇ ಈಗ ಧಾರವಾಡದಲ್ಲಿ (Dharwad) ತಮ್ಮದೇ ತಂಪು ಪಾನೀಯ ಉದ್ಯಮ ಆರಂಭಿಸುವುದಕ್ಕೆ ಮುಂದಾಗಿದ್ದಾರೆ.

    ಹೌದು, ತಮ್ಮ ಉದ್ಯಮಕ್ಕಾಗಿ ಧಾರವಾಡ ತಾಲೂಕಿನ ಮುಮ್ಮಿಗಟ್ಟಿ ಬಳಿಯ ಕೈಗಾರಿಕಾ ಜಮೀನನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಕಳೆದ ವಾರವಷ್ಟೇ ಮುಮ್ಮಿಗಟ್ಟಿಗೆ ಬಂದು ಸ್ಥಳವನ್ನೂ ನೋಡಿಕೊಂಡು ಹೋಗಿದ್ದಾರೆ. ಈ ಕೈಗಾರಿಕೆ ಸ್ಥಾಪನೆಗೆ ಎಫ್‌ಎಂಸಿಜಿ ಕ್ಲಸ್ಟರ್ ಅಡಿಯಲ್ಲಿ ಸುಮಾರು 900 ಕೋಟಿ ರೂ. ಹೂಡಿಕೆ ಮಾಡಲು ಮುರಳೀಧರನ್ ಸಿದ್ಧರಾಗಿದ್ದು, ಮೊದಲ ಹಂತದಲ್ಲಿ 256.30 ಕೋಟಿ ರೂ. ಬಂಡವಾಳ ಹೂಡಿಕೆ ಮಾಡುತ್ತಿದ್ದಾರೆ. ಈ ಮೂಲಕ 200 ಜನರಿಗೆ ಇಲ್ಲಿ ಉದ್ಯೋಗ ಸೃಷ್ಟಿಯಾಗಲಿದೆ. ಇದನ್ನೂ ಓದಿ: ಪಾಕಿಸ್ತಾನದ ಸಂಸತ್ತು ವಿಸರ್ಜನೆ – ಸಾರ್ವತ್ರಿಕ ಚುನಾವಣೆಗೆ ಸಜ್ಜು

    ಮೊದಲ ಹಂತದಲ್ಲಿ ಮುತ್ತಯ್ಯಗೆ ಕೆಐಎಡಿಬಿ 15 ಎಕರೆ ಭೂಮಿ ಒದಗಿಸಲಾಗುತ್ತಿದ್ದು, ಒಟ್ಟು 3 ಹಂತಗಳಲ್ಲಿ ಉದ್ಯಮ ವಿಸ್ತರಿಸಲು ಕಂಪನಿ ಯೋಜಿಸಿದೆ. ಇದಕ್ಕಾಗಿ 32 ರಿಂದ 36 ಎಕರೆ ಭೂಮಿಗೆ ಬೇಡಿಕೆ ಸಲ್ಲಿಸಿದ್ದಾರೆ. ಮುರಳೀಧರನ್ ಆಗಸ್ಟ್ 5 ರಂದು ಮುಮ್ಮಿಗಟ್ಟಿ ಕೈಗಾರಿಕೆ ಪ್ರದೇಶಕ್ಕೆ ಭೇಟಿ ನೀಡಿ ಜಮೀನು ಪರಿಶೀಲಿಸಿದ್ದಾರೆ. ಸರ್ಕಾರದ ಹಂತದಲ್ಲಿ ಉದ್ಯಮ ಆರಂಭಕ್ಕೆ ಅನುಮೋದನೆ ದೊರೆತಿದ್ದು, ಮುಂಬರುವ 2-3 ವರ್ಷದಲ್ಲಿ ಕಾಮಗಾರಿ ಆರಂಭಿಸುವ ಸಾಧ್ಯತೆ ಇದೆ.

    ಒಟ್ಟಾರೆಯಾಗಿ ಉದ್ಯಮ ಕ್ಷೇತ್ರದಲ್ಲಿ ಧಾರವಾಡ ತನ್ನದೆಯಾದ ಛಾಪು ಮೂಡಿಸಿದ್ದು, ಅದೇ ಕಾರಣಕ್ಕೆ ಈಗ ದೂರದ ಶ್ರೀಲಂಕಾದಿಂದ ಮುತ್ತಯ್ಯ ಮುರಳೀಧರನ್ ಧಾರವಾಡಕ್ಕೆ ಬಂದಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಪೇಸಿಎಂಗೆ ಬಿಜೆಪಿ ಪೇಸಿಎಸ್ ತಿರುಗೇಟು- ಚಲುವರಾಯಸ್ವಾಮಿ ವಿರುದ್ಧ ಕ್ಯೂಆರ್ ಕೋಡ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಒಂದೇ ದಿನ ಕರಗಿತು 46 ಸಾವಿರ ಕೋಟಿ – ಇದೊಂದು ಆಧಾರ ರಹಿತ ವರದಿ ಎಂದ ಅದಾನಿ ಗ್ರೂಪ್‌

    ಒಂದೇ ದಿನ ಕರಗಿತು 46 ಸಾವಿರ ಕೋಟಿ – ಇದೊಂದು ಆಧಾರ ರಹಿತ ವರದಿ ಎಂದ ಅದಾನಿ ಗ್ರೂಪ್‌

    ಮುಂಬೈ: ಲೆಕ್ಕಪತ್ರ ವಂಚನೆ ಮತ್ತು ಸ್ಟಾಕ್ ಮ್ಯಾನಿಪ್ಯುಲೇಷನ್ ಮಾಡಿದೆ ಎಂಬ ವಿದೇಶಿ ಸಂಸ್ಥೆಯ ವರದಿ ಪ್ರಕಟವಾದ ಬೆನ್ನಲ್ಲೇ ಅದಾನಿ ಸಮೂಹದ (Adani Groups) ಕಂಪನಿಗಳ ಷೇರುಗಳ (Share) ಬೆಲೆ ಭಾರೀ ಇಳಿಕೆ ಕಂಡಿದೆ.

    ಅಮೆರಿಕದ ಹಿಂಡೆನ್‌ಬರ್ಗ್ (Hindenburg) ರಿಸರ್ಚ್‌ನ ವರದಿಯ ನಂತರ ಇಂದು ಒಂದೇ ದಿನ ಅದಾನಿ ಸಮೂಹ ಕಂಪನಿಯ ಮೌಲ್ಯ 46 ಸಾವಿರ ಕೋಟಿ ರೂ. ಕರಗಿದೆ. ಈ ವರದಿ ಆಧಾರ ರಹಿತ ವರದಿಯಾಗಿದೆ ಎಂದು ಅದಾನಿ ಗ್ರೂಪ್‌ ಪ್ರತಿಕ್ರಿಯಿಸಿದೆ.

    ವರದಿಯಲ್ಲಿ ಏನಿದೆ?
    ಎರಡು ವರ್ಷಗಳ ತನಿಖೆಯ ನಂತರ ಹಿಂಡೆನ್‌ಬರ್ಗ್ ವರದಿ ಪ್ರಕಟವಾಗಿದೆ. ದಶಕಗಳ ಅವಧಿಯ ವ್ಯವಹಾರದಲ್ಲಿ ಅದಾನಿ ಸಮೂಹ ಸ್ಟಾಕ್ ಮ್ಯಾನಿಪ್ಯುಲೇಷನ್ ಮತ್ತು ಲೆಕ್ಕಪತ್ರ ವಂಚನೆ ಎಸಗಿದೆ ಎಂದು ಆರೋಪಿಸಿದೆ.

    ಅದಾನಿ ಗ್ರೂಪ್‌ನ ಮಾಜಿ ಹಿರಿಯ ಕಾರ್ಯನಿರ್ವಾಹಕರು ಸೇರಿದಂತೆ ಹಲವಾರು ಜನರನ್ನು ಸಂಶೋಧನೆಗಾಗಿ ಸಂದರ್ಶಿಸಲಾಗಿದೆ. ಸಾವಿರಾರು ದಾಖಲೆಗಳನ್ನು ಪರಿಶೀಲಿಸಲಾಗಿದೆ. ಹನ್ನೆರಡು ವಿವಿಧ ರಾಷ್ಟ್ರಗಳಲ್ಲಿ ಅದಾನಿ ಕಂಪನಿಗಳನ್ನು ವೀಕ್ಷಿಸಲಾಗಿದೆ ಎಂದು ಹೇಳಿದೆ.

    ಅದಾನಿ ಗ್ರೂಪ್‌ ಭಾರೀ ಸಾಲ ಮಾಡಿದೆ. ತಮ್ಮ ಸಾಲಗಳಿಗೆ ಷೇರುಗಳನ್ನೇ ಒತ್ತೆ ಇಡುತ್ತಿದೆ. ಇದರಿಂದಾಗಿ ಸಮೂಹದ ಆರ್ಥಿಕ ಸ್ಥಿತಿ ಅಪಾಯದಲ್ಲಿದೆ ಎಂದು ವರದಿಯಲ್ಲಿ ಉಲ್ಲೇಖಿಸಿದೆ.

    ಷೇರು ಬೆಲೆ ಕುಸಿತ:
    ಬುಧವಾರದ ವಹಿವಾಟಿನಲ್ಲಿ ಅದಾನಿ ಟೋಟಲ್ ಗ್ಯಾಸ್, ಅದಾನಿ ಎಂಟರ್‌ಪ್ರೈಸಸ್, ಅದಾನಿ ಟ್ರಾನ್ಸ್‌ಮಿಷನ್, ಅದಾನಿ ಗ್ರೀನ್ ಎನರ್ಜಿ, ಅದಾನಿ ಪೋರ್ಟ್ಸ್ ಮತ್ತು ವಿಶೇಷ ಆರ್ಥಿಕ ವಲಯ, ಅದಾನಿ ಪವರ್ ಮತ್ತು ಅದಾನಿ ವಿಲ್ಮಾರ್ ಶೇರುಗಳು ಮೌಲ್ಯ ಶೇ.1-4ರಷ್ಟು ಕುಸಿತ ಕಂಡಿವೆ. ಇದನ್ನೂ ಓದಿ: Womens IPL: ದಾಖಲೆಯ 4,669 ಕೋಟಿ ರೂ.ಗೆ ಮಹಿಳಾ ಐಪಿಎಲ್‍ನ 5 ತಂಡಗಳು ಹರಾಜು

    ಅದಾನಿ ಗ್ರೂಪ್‌ ಪ್ರತಿಕ್ರಿಯೆ ಏನು?
    ನಮ್ಮ ಸಂಸ್ಥೆಯ ವಿರುದ್ಧ ಪ್ರಕಟಿಸಿದ ವರದಿ ನಮಗೆ ಆಘಾತ ತಂದಿದೆ. ಭಾರತದ ಅತ್ಯುನ್ನತ ನ್ಯಾಯಾಲಯಗಳಿಂದ ಪರೀಕ್ಷಿಸಲ್ಪಟ್ಟ ಮತ್ತು ತಿರಸ್ಕರಿಸಲ್ಪಟ್ಟ ಹಳೆಯ, ಆಧಾರರಹಿತ ಆರೋಪಗಳುನ್ನು ಆಧಾರಿಸಿ ವರದಿ ಮಾಡಲಾಗಿದೆ.

    ಹಣಕಾಸು ತಜ್ಞರು ಮತ್ತು ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಕ್ರೆಡಿಟ್ ರೇಟಿಂಗ್ ಏಜೆನ್ಸಿಗಳು ಸಿದ್ಧಪಡಿಸಿದ ವಿವರವಾದ ವಿಶ್ಲೇಷಣೆ ಮತ್ತು ವರದಿಗಳ ಆಧಾರದ ಮೇಲೆ ಹೂಡಿಕೆದಾರ ಸಮುದಾಯವು ಯಾವಾಗಲೂ ಅದಾನಿ ಗ್ರೂಪ್‌ನಲ್ಲಿ ನಂಬಿಕೆಯನ್ನು ಇರಿಸಿದೆ. ನಮ್ಮ ತಿಳುವಳಿಕೆಯುಳ್ಳ ಮತ್ತು ಜ್ಞಾನವುಳ್ಳ ಹೂಡಿಕೆದಾರರು ಪಟ್ಟಭದ್ರ ಹಿತಾಸಕ್ತಿಗಳನ್ನು ಹೊಂದಿರುವ ಏಕಪಕ್ಷೀಯ ಆಧಾರರಹಿತ ವರದಿಗಳಿಂದ ಪ್ರಭಾವಿತರಾಗುವುದಿಲ್ಲ.

    ಮುಂದುವರಿದ ಸಾರ್ವಜನಿಕ ಕೊಡುಗೆ(FPO) ಅಥವಾ ಹೊಸದಾಗಿ ಷೇರುಗಳನ್ನು ಮಾರುಕಟ್ಟೆ ಬಿಡುಗಡೆ ಪ್ರಕ್ರಿಯೆಯನ್ನು ಹಾಳು ಮಾಡುವ ದುರುದ್ದೇಶಪೂರಿತ ಪ್ರಯತ್ನ. ವರದಿಯನ್ನು ಪ್ರಕಟಿಸುವ ಮೊದಲು ಹಿಂಡೆನ್‌ಬರ್ಗ್ ರಿಸರ್ಚ್ ನಮ್ಮನ್ನು ಸಂಪರ್ಕಿಸಲು ಯಾವುದೇ ಪ್ರಯತ್ನ ಮಾಡಲಿಲ್ಲ. ನಮ್ಮ ಸಮೂಹ ಎಲ್ಲಾ ಕಾನೂನುಗಳನ್ನು ಪಾಲಿಸುತ್ತದೆ ಎಂದು ಹೇಳಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಇಂಗ್ಲಿಷ್‌ ಪದವೀಧರೆ ಈಗ ಚಾಯ್‌ವಾಲಿ – ಯುವತಿ ಭವಿಷ್ಯದ ಕನಸಿಗೆ ಜನರ ಮೆಚ್ಚುಗೆ

    ಇಂಗ್ಲಿಷ್‌ ಪದವೀಧರೆ ಈಗ ಚಾಯ್‌ವಾಲಿ – ಯುವತಿ ಭವಿಷ್ಯದ ಕನಸಿಗೆ ಜನರ ಮೆಚ್ಚುಗೆ

    ನವದೆಹಲಿ: ಬ್ರಿಟಿಷ್‌ ಕೌನ್ಸಿಲ್‌ (British Council ) ಲೈಬ್ರರಿಯಲ್ಲಿ ಉದ್ಯೋಗ ಮಾಡಿಕೊಂಡಿದ್ದ ಯುವತಿ ಈಗ ದೆಹಲಿಯ (Delhi) ಬೀದಿಯಲ್ಲಿ ಚಹಾ (Roadside Tea Stall) ಮಾರಾಟ ಮಾಡುವ ಮೂಲಕ ಸುದ್ದಿಯಾಗಿದ್ದಾರೆ.

    26 ವರ್ಷದ ಶರ್ಮಿಷ್ಠ ಘೋಷ್‌ ಇಂಗ್ಲಿಷ್‌ ಪದವೀಧರೆ. ಭವಿಷ್ಯದಲ್ಲಿ ದೊಡ್ಡ ಚಹಾ ಉದ್ಯಮ ನಡೆಸುವ ಕನಸು ಕಂಡಿದ್ದು, ಈಗ ಚಹಾ ಮಾರಾಟ ಮಾಡುತ್ತಿದ್ದಾರೆ.

    ಶರ್ಮಿಷ್ಠ ಘೋಷ್‌ (Sharmistha Ghosh) ಅವರ ಉದ್ಯಮಕ್ಕೆ ಸ್ನೇಹಿತೆ ಲುಫ್ತಾನ್ಸಾನದಲ್ಲಿ ಕೆಲಸ ಮಾಡುತ್ತಿರುವ ಭಾವನಾ ರಾವ್‌ ಸಹ ಸಾಥ್‌ ನೀಡಿದ್ದಾರೆ. ಈಗ ಇವರಿಬ್ಬರು ಜೊತೆಯಾಗಿ ದೆಹಲಿಯ ರಸ್ತೆ ಬದಿಯಲ್ಲಿ ಸಂಜೆ ಚಹಾ ಮಾರಾಟ ಮಾಡುತ್ತಿದ್ದಾರೆ.  ಇದನ್ನೂ ಓದಿ: ಭಾರತದೊಂದಿಗೆ 3 ಯುದ್ಧಗಳನ್ನು ಮಾಡಿದ ನಂತರ ಪಾಕಿಸ್ತಾನ ಪಾಠ ಕಲಿತಿದೆ – ಶೆಹಬಾಜ್ ಷರೀಫ್

    ಬ್ರಿಗೇಡಿಯರ್ ಸಂಜಯ್ ಖನ್ನಾ ಅವರು ಲಿಂಕ್ಡ್‌ಇನ್‌ನಲ್ಲಿ ಇವರಿಬ್ಬರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಪೋಸ್ಟ್‌ ಮಾಡಿದ ಬಳಿಕ ಈಗ ಇವರು ಹೆಚ್ಚು ಸುದ್ದಿಯಾಗಿದ್ದಾರೆ.

    ಇಬ್ಬರು ಯುವತಿಯರ ಕೆಲಸಕ್ಕೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಯಾವುದೇ ಕೆಲಸ ದೊಡ್ಡದು, ಚಿಕ್ಕದಲ್ಲ. ಪ್ರತಿ ಕೆಲಸವು ದೊಡ್ಡದೇ. ಶ್ರಮವಹಿಸಿ ಮಾಡಿದರೆ ಖಂಡಿತ ಯಶಸ್ಸು ಸಿಗುತ್ತದೆ. ಆರಂಭದಲ್ಲಿ ಸಣ್ಣ ಕನಸು, ಸಣ್ಣ ಉದ್ಯೋಗ ಮಾಡಿದವರೇ ಈಗ ದೊಡ್ಡ ಉದ್ಯಮಿಗಳಾಗಿದ್ದಾರೆ ಎಂದು ಬರೆದು ಶ್ಲಾಘಿಸಿ ಭವಿಷ್ಯದ ಕನಸಿಗೆ ಶುಭ ಹಾರೈಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕೈಗಾರಿಕಾ ಸ್ಥಾಪನೆಗಾಗಿ ಹೆಚ್ಚುವರಿ 50 ಸಾವಿರ ಎಕರೆ ಜಮೀನು ಭೂ ಸ್ವಾಧೀನ – ನಿರಾಣಿ

    ಕೈಗಾರಿಕಾ ಸ್ಥಾಪನೆಗಾಗಿ ಹೆಚ್ಚುವರಿ 50 ಸಾವಿರ ಎಕರೆ ಜಮೀನು ಭೂ ಸ್ವಾಧೀನ – ನಿರಾಣಿ

    ಬೆಂಗಳೂರು: ರಾಜ್ಯದಲ್ಲಿ ಕೈಗಾರಿಕೆಗಳ (Industry) ಸ್ಥಾಪನೆಗಾಗಿ ಹೆಚ್ಚುವರಿಯಾಗಿ 50 ಸಾವಿರ ಎಕರೆ ಭೂಮಿಯನ್ನು ಸ್ವಾಧೀನ (Land Acquisition) ಪಡಿಸಿಕೊಳ್ಳಲಾಗುತ್ತಿದೆ. ಬೆಂಗಳೂರಿನಲ್ಲಿ (Bengaluru) 20 ಸಾವಿರ ಮತ್ತು ಇತರ ಜಿಲ್ಲೆಗಳಲ್ಲಿ 30 ಸಾವಿರ ಎಕರೆ ಭೂಮಿ ಸೇರಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ (Murgesh Nirani) ಹೇಳಿದರು.

    ವಿಧಾನ ಪರಿಷತ್ತಿನ (Legislative Council) ಪ್ರಶ್ನೋತ್ತರದಲ್ಲಿ ಸದಸ್ಯರಾದ ಸಲೀಂ ಅಹಮ್ಮದ್, ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ (KKRDB) ಮಂಜೂರಾದ ನಿವೇಶನ ಅಥವಾ ಭೂಮಿಯಲ್ಲಿ ಎಷ್ಟು ಸಮಯದಲ್ಲಿ ಕೈಗಾರಿಕೆ ಸ್ಥಾಪನೆ ಮಾಡಬೇಕು. ಒಂದು ವೇಳೆ ಉದ್ಯಮ ಸ್ಥಾಪನೆಯಾಗದೇ ಇದ್ದರೆ ಯಾವ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಉರ್ಫಿಗೆ ತಂದ ಸಿಮ್ ಕಾರ್ಡ್ ಸಂಕಷ್ಟ: ಸಿಮ್ ಕಾರ್ಡ್ ಕಾಸ್ಟ್ಯೂಮ್ ಕಂಡು ಮನೆಗೆ ಬಂದ ಪೊಲೀಸ್

    ಕೈಗಾರಿಕೆ ಇಲಾಖೆಯಿಂದ 188 ಕೈಗಾರಿಕಾ ಪ್ರದೇಶ ಸ್ಥಾಪಿಸಲಾಗಿದೆ. ಅದಕ್ಕಾಗಿ 1.60 ಲಕ್ಷ ಎಕರೆ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲಾಗಿತ್ತು. ಅದರಲ್ಲಿ 52,008 ಎಕರೆಯನ್ನು ಅಭಿವೃದ್ಧಿಪಡಿಸಲಾಗಿದೆ. ಉಳಿದ ಭೂಮಿಯನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದು ನಿರಾಣಿ ಹೇಳಿದರು.

    ಯೋಜನೆಯ ಅಂದಾಜು ಗಾತ್ರ ಆಧರಿಸಿ ಉದ್ಯಮ ಆರಂಭಿಸಲು ಕಾಲಮಿತಿ ನಿಗದಿ ಪಡಿಸಲಾಗುತ್ತದೆ. ಉಕ್ಕು ಉದ್ಯಮಗಳಿಗೆ 5 ವರ್ಷಗಳವರೆಗೂ ಸಮಯ ಬೇಕಾಗುತ್ತದೆ. ಒಟ್ಟಾರೆ ಉದ್ಯಮ ಆರಂಭಕ್ಕೆ ಗರಿಷ್ಠ 10 ವರ್ಷಗಳ ಕಾಲಾವಕಾಶ ನೀಡಲಾಗುತ್ತದೆ. ಅದರ ಒಳಗೆ ಉದ್ಯಮ ಆರಂಭವಾಗದಿದ್ದರೆ ನೋಟಿಸ್ ನೀಡಿ ಭೂಮಿ ಹಿಂಪಡೆಯುವ ಪ್ರಕ್ರಿಯೆ ನಡೆಸಲಾಗುವುದು. ಈವರೆಗೂ 117 ಉದ್ದಿಮೆದಾರರಿಗೆ ನೋಟಿಸ್ ನೀಡಲಾಗಿದೆ. ಕೆಲವರು ನ್ಯಾಯಾಲಯಕ್ಕೆ ಹೋಗಿ ತಡೆಯಾಜ್ಞೆ ತಂದಿದ್ದಾರೆ ಇನ್ನೂ ಮುಂದೆ ಕೆವಿಯಟ್ ಹಾಕಿ ಭೂಮಿ ಹಿಂಪಡೆಯಲು ಮುಂದಿನ ಕ್ರಮ ಜರುಗಿಸಲಾಗುವುದು ಎಂದು ನಿರಾಣಿ ಉತ್ತರಿಸಿದರು.

    ನವೆಂಬರ್ ಮೊದಲ ವಾರದಲ್ಲಿ ರಾಜ್ಯದಲ್ಲಿ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆಯುತ್ತಿದೆ. ವಿದೇಶ ಬಂಡವಾಳ ಹೂಡಿಕೆಯಲ್ಲಿ ನಮ್ಮ ರಾಜ್ಯ ಸತತ ನಾಲ್ಕನೇ ತ್ರೈಮಾಸಿಕದಲ್ಲೂ ಮೊದಲ ಸ್ಥಾನದಲ್ಲಿದೆ. ದೇಶದ ಹೂಡಿಕೆಯಲ್ಲಿ ಶೇ.38ರಷ್ಟು ಪಾಲನ್ನು ನಾವು ಹೊಂದಿದ್ದೇವೆ ಎಂದು ನಿರಾಣಿ ಹೇಳಿದರು.

    Live Tv
    [brid partner=56869869 player=32851 video=960834 autoplay=true]

  • 4Gಗಿಂತ 5G ಎಷ್ಟು ಭಿನ್ನ, ಪರಿಣಾಮಕಾರಿ? ಇಲ್ಲಿದೆ ಮಾಹಿತಿ..

    4Gಗಿಂತ 5G ಎಷ್ಟು ಭಿನ್ನ, ಪರಿಣಾಮಕಾರಿ? ಇಲ್ಲಿದೆ ಮಾಹಿತಿ..

    ನವದೆಹಲಿ: ಭಾರತವು 5G ಮೊಬೈಲ್‌ ನೆಟ್‌ವರ್ಕ್‌ ಪ್ರಾರಂಭಕ್ಕೆ ಉತ್ಸುಕವಾಗಿದೆ. 5G ನೆಟ್‌ವರ್ಕ್‌ ಹೇಗೆ ಕೆಲಸ ಮಾಡುತ್ತದೆ, 4Gಗಿಂತ ಹೇಗೆ ಭಿನ್ನ, ತಾಂತ್ರಿಕ ಹಾಗೂ ವ್ಯವಹಾರ ಕ್ಷೇತ್ರದ ಇದರ ಪರಿಣಾಮ ಹೇಗಿರುತ್ತದೆ ಎಂಬ ಬಗ್ಗೆ ಗ್ರಾಹಕರಲ್ಲಿ ಹಲವಾರು ಪ್ರಶ್ನೆಗಳು ಉದ್ಭವಿಸುತ್ತವೆ. ಈ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.

    5G ಮತ್ತು 4G ವೇಗದ ವ್ಯತ್ಯಾಸ:
    5G ಹೆಚ್ಚು ವೇಗದಿಂದ ಕೂಡಿದೆ. ಡೌನ್‌ಲೋಡ್‌ಗಳು ಪ್ರತಿ ಸೆಕೆಂಡಿಗೆ 10 GB (ಗಿಗಾಬೈಟ್) ಅಥವಾ ಅದಕ್ಕಿಂತ ಹೆಚ್ಚಿನದ್ದಾಗಿದೆ. TRAI ಪ್ರಕಾರ ಭಾರತದಲ್ಲಿ 4G ಬಳಕೆದಾರರಿಗೆ ಪ್ರಸ್ತುತ ಸರಾಸರಿ ಡೌನ್‌ಲೋಡ್ ವೇಗಕ್ಕಿಂತ 5G 30 ಪಟ್ಟು ವೇಗವಾಗಿದೆ. ಇದು ಸುಮಾರು 21 Mbps (ಸೆಕೆಂಡಿಗೆ ಮೆಗಾಬೈಟ್‌) ಸರಾಸರಿ ವೇಗ ಹೊಂದಿದೆ.

    5G ಇಂಟರ್ನೆಟ್ ಅನ್ನು ಬಳಸಿಕೊಂಡು 5 GB ಚಲನಚಿತ್ರವನ್ನು 35 ಸೆಕೆಂಡುಗಳಲ್ಲಿ (4Gಯಲ್ಲಿ 40 ನಿಮಿಷ ಆಗುತ್ತದೆ) ಡೌನ್‌ಲೋಡ್ ಮಾಡಬಹುದು. 3G ಯಲ್ಲಿ 2 ಗಂಟೆ ಬೇಕಾಗುತ್ತದೆ. 2G ಯಲ್ಲಿ 2.8 ದಿನಗಳ ಸಮಯ ಹಿಡಿಯುತ್ತದೆ.

    5Gಯಿಂದ ಏನನ್ನು ನಿರೀಕ್ಷಿಸಬಹುದು?
    ಉತ್ತಮ ವೇಗದಲ್ಲಿ 4K ಗುಣಮಟ್ಟದ ಲೈವ್ ವೀಡಿಯೊ ಪ್ರಸಾರ, ಉತ್ತಮ ಮತ್ತು ಗುಣಮಟ್ಟದ ವೀಡಿಯೊ ಕರೆಗಳು, ಮಲ್ಟಿಮೀಡಿಯಾ ಸಂವಹನ, ವೀಡಿಯೋ ಗೇಮ್‌ ಆಡುವಾಗ ನೆಟ್‌ವರ್ಕ್‌ನಲ್ಲಿ ಹೆಚ್ಚಿನ ಸಮಸ್ಯೆ ಕಾಣಿಸುವುದಿಲ್ಲ. ಇದನ್ನೂ ಓದಿ: 5ಜಿ ಹರಾಜು – ಮೊದಲ ದಿನವೇ 1.45 ಲಕ್ಷ ಕೋಟಿ ಮೀರಿದ ಬಿಡ್ ಮೊತ್ತ

    ಉದ್ಯಮದ ಮೇಲೆ 5G ಪರಿಣಾಮ ಏನು?
    5G ರೋಲ್‌ಔಟ್ ರಿಮೋಟ್ ಡೇಟಾ ಮಾನಿಟರಿಂಗ್ ಮತ್ತು ಟೆಲಿಮೆಡಿಸಿನ್‌ನಲ್ಲಿ ಹೆಚ್ಚಿನ ಅಭಿವೃದ್ಧಿ ತರುವ ನಿರೀಕ್ಷೆಯಿದೆ. ನಿರ್ದಿಷ್ಟವಾಗಿ, ರಿಮೋಟ್ ಸರ್ಜರಿಗಳು ಮತ್ತು ರಿಮೋಟ್ ಸೆನ್ಸಿಂಗ್ ಸ್ಟೇಷನ್‌ಗಳ ಮೇಲ್ವಿಚಾರಣೆಯನ್ನು ಸಕ್ರಿಯಗೊಳಿಸುವಾಗ ಸಹಾಯಕವಾಗಿರುತ್ತದೆ.

    5G ನೆಟ್‌ವರ್ಕ್ ದಟ್ಟಣೆಯನ್ನು ಕಡಿಮೆ ಮಾಡುತ್ತದೆಯೇ?
    5Gಯಿಂದ ಗ್ರಾಹಕರಿಗೆ ದೊಡ್ಡ ಪ್ರಯೋಜನವೆಂದರೆ ಉತ್ತಮ ನೆಟ್‌ವರ್ಕ್ ನಿರ್ವಹಣೆ. ಹೆಚ್ಚಿನ ವೇಗದ ನೆಟ್‌ವರ್ಕ್ ಸ್ವಭಾವತಃ ಹೆಚ್ಚು ಪರಿಣಾಮಕಾರಿಯಾಗಿದೆ. ಮೂರು ವಿಭಿನ್ನ ಬ್ಯಾಂಡ್‌ಗಳಲ್ಲಿ ಕಾರ್ಯನಿರ್ವಹಿಸುತ್ತದೆ. 100MHz ಲೋವ್‌ ಬ್ಯಾಂಡ್, 2.3GHz ಮಿಡ್-ಬ್ಯಾಂಡ್ ಮತ್ತು ಹೈ ಬ್ಯಾಂಡ್. ಮಿಡ್-ಬ್ಯಾಂಡ್ ಆವರ್ತನಗಳು ಕವರೇಜ್ ಮತ್ತು ವೇಗದ ಅತ್ಯುತ್ತಮ ಸಮತೋಲನವನ್ನು ನೀಡುತ್ತವೆ. ಇದು ಬಳಕೆದಾರರಿಗೆ ಹೆಚ್ಚಿನ ಸ್ಪೆಕ್ಟ್ರಮ್ ಅನ್ನು ಮುಕ್ತಗೊಳಿಸುತ್ತದೆ. ಹೆಚ್ಚಿನ ಜನಸಂದಣಿ ಮತ್ತು ಕ್ರೀಡಾಂಗಣಗಳಲ್ಲಿಯೂ ಸಹ ಬಳಕೆದಾರರು ಉತ್ತಮ ನೆಟ್‌ವರ್ಕ್ ಸಂಪರ್ಕವನ್ನು ಹೊಂದಿದ್ದಾರೆ ಎಂಬುದನ್ನು ಇದು ಖಚಿತಪಡಿಸುತ್ತದೆ. ಇದನ್ನೂ ಓದಿ: 5ಜಿ ಹರಾಜು – ಸ್ಪೀಡ್ ಎಷ್ಟಿರುತ್ತೆ ಗೊತ್ತಾ?

    5G ಪ್ರಾರಂಭವಾದ ನಂತರ ಹೆಚ್ಚಿನ ಬಳಕೆದಾರರಿಗೆ ಸಿಗುವ ಪ್ರಯೋಜನಗಳೆಂದರೆ, ವೇಗ ಮತ್ತು ಉತ್ತಮ ನೆಟ್‌ವರ್ಕ್‌ ಸಂಪರ್ಕ. ಇದು ಮುಂದಿನ ಪೀಳಿಗೆಯ ನೆಟ್‌ವರ್ಕ್ ಕಂಪ್ಯೂಟಿಂಗ್‌ನ ಭವಿಷ್ಯದ ಬೆನ್ನೆಲುಬಾಗಿ ರೂಪುಗೊಳ್ಳುತ್ತಿದೆ. ಮುಂದಿನ ಕೆಲವು ವರ್ಷಗಳಲ್ಲಿ ನಿಜವಾದ ಅನುಕೂಲತೆಯ ಪರಿಣಾಮ ಗೋಚರಿಸುತ್ತದೆ.

    Live Tv
    [brid partner=56869869 player=32851 video=960834 autoplay=true]

  • ಮೂಲಸೌಲಭ್ಯ ಉದ್ಯಮ ದೊಡ್ಡ ಬದಲಾವಣೆ ತರಲಿದೆ: ಬೊಮ್ಮಾಯಿ

    ಮೂಲಸೌಲಭ್ಯ ಉದ್ಯಮ ದೊಡ್ಡ ಬದಲಾವಣೆ ತರಲಿದೆ: ಬೊಮ್ಮಾಯಿ

    ಬೆಂಗಳೂರು: ಮೂಲಸೌಲಭ್ಯ ಉದ್ಯಮ ದೊಡ್ಡ ಬದಲಾವಣೆ ತರಲಿದೆ. ರಸ್ತೆ, ಗಣಿಗಾರಿಕೆ, ಸೇತುವೆ ನಿರ್ಮಾಣ ಸೇರಿದಂತೆ ಎಲ್ಲಾ ವಲಯಗಳಲ್ಲಿ ಮೂಲಸೌಲಭ್ಯದಿಂದ ದೊಡ್ಡ ಬದಲಾವಣೆ ತರಬಹುದಾಗಿದ್ದು, ಇದಕ್ಕಾಗಿ ಅತ್ಯಾಧುನಿಕ ತಂತ್ರಜ್ಞಾನದ ಬಳಕೆ, ಯಂತ್ರೋಪಕರಣಗಳು ಬಂದಿವೆ. ಇವುಗಳನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದು ಉದ್ಯಮಿಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

    ಸಿಎಂ ಬೊಮ್ಮಾಯಿ ಬೆಂಗಳೂರಿನ ಬಿಐಇಸಿಯಲ್ಲಿ ಮಂಗಳವಾರ ಆರಂಭವಾದ ಕಟ್ಟಡ ನಿರ್ಮಾಣ ಸಲಕರಣೆಗಳ ಎಕ್ಸ್ಕಾನ್ 2022 ವಸ್ತು ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿ, ಕಂಪನಿಗಳ ನಾವೀನ್ಯತೆ, ಹೊಸ ಚಿಂತನೆಗಳ ವಿಚಾರ ವಿನಿಮಯ ಮಾಡಿಕೊಳ್ಳಲು ಎಕ್ಸ್ಕಾನ್ 2022 ವಸ್ತು ಪ್ರದರ್ಶನ ಸೂಕ್ತ ವೇದಿಕೆಯಾಗಿದೆ. ರಾಜ್ಯದಲ್ಲಿ ಹೂಡಿಕೆ ಮಾಡಲಿಚ್ಛಿಸುವ ಉದ್ದಿಮೆಗಳಿಗೆ ಸರ್ಕಾರ ಎಲ್ಲಾ ರೀತಿಯ ಸಹಕಾರ ನೀಡಲಿದೆ ಎಂದರು.

    ಐಟಿಬಿಟಿ, ಸ್ಟಾರ್ಟ್ಅಪ್, ಆರ್‌ಎಂಡಿಗಳಲ್ಲಿ ರಾಜ್ಯ ಮುಂಚೂಣಿಯಲ್ಲಿದೆ. ಈ ಅವಕಾಶವನ್ನು ಬಳಸಿಕೊಂಡು ಕಂಪನಿಗಳು ರಾಜ್ಯದಲ್ಲಿ ಬಂಡವಾಳ ಹೂಡುವ ಮೂಲಕ ರಾಜ್ಯ ಹಾಗೂ ದೇಶದ ಅಭಿವೃದ್ಧಿಗೆ ಕೊಡುಗೆ ನೀಡಬೇಕು. ಕರ್ನಾಟಕದಲ್ಲಿ ಸರ್ಕಾರಿ ಹಾಗೂ ಖಾಸಗಿ ಸ್ವಾಮ್ಯದ ಸಂಸ್ಥೆಗಳಿವೆ. ಬಿಹೆಚ್‌ಇಎಲ್, ಹೆಚ್‌ಎಎಲ್ ನಂತಹ ಅನೇಕ ಬೃಹತ್ ಸಂಸ್ಥೆಗಳು ರಾಜ್ಯದಲಿದ್ದು, ರಾಜ್ಯದ ಎಕೋಸಿಸ್ಟಂ ಈ ಸಂಸ್ಥೆಗಳು ಕೊಡುಗೆ ನೀಡಿವೆ ಎಂದು ತಿಳಿಸಿದರು.

    ರಾಜ್ಯದಲ್ಲಿ ಗರಿಷ್ಟ ಸಂಖ್ಯೆಯ ಸ್ಟಾರ್ಟ್ ಅಪ್‌ಗಳಿವೆ. ದೇಶದ ಶೇ.50 ಕ್ಕಿಂತಲೂ ಹೆಚ್ಚಿನ ಸ್ಟಾರ್ಟ್ ಅಪ್‌ಗಳು ಹಾಗೂ ಯೂನಿಕಾರ್ನ್ಗಳು ರಾಜ್ಯದಲ್ಲಿವೆ. ವಿದೇಶಿ ಬಂಡವಾಳ ರಾಜ್ಯಕ್ಕೆ ಹರಿದು ಬಂದಿದೆ. 400ಕ್ಕೂ ಹೆಚ್ಚು ಖಾಸಗಿ ಹಾಗೂ ಸರ್ಕಾರಿ ಸಂಶೋಧನಾ ಕೇಂದ್ರಗಳು ರಾಜ್ಯದಲ್ಲಿದ್ದು, ಅದರಲ್ಲಿ 180 ಬೆಂಗಳೂರಿನಲ್ಲಿದೆ. ಡಿಆರ್‌ಡಿಒ ಸಂಸ್ಥೆ ರಾಜ್ಯಕ್ಕೆ ಕೊಡುಗೆ ನೀಡಿದೆ. ಸೌರಶಕ್ತಿ ಸಂಗ್ರಹಣೆ, ಸೆಮಿಕಂಡಕ್ಟರ್ ಕ್ಷೇತ್ರಕ್ಕೆ ರಾಜ್ಯ ಒತ್ತು ನೀಡುತ್ತಿದೆ. ಕರ್ನಾಟಕವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೇರಿಸಲು ಸರ್ವ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ನುಡಿದರು. ಇದನ್ನೂ ಓದಿ: ಬಡವರಿಗಾಗಿ ರೂಪಿಸಿರುವ ಕಾರ್ಯಕ್ರಮಗಳ ಸಕಾಲಿಕ ಅನುಷ್ಠಾನಕ್ಕೆ ಸೂಚನೆ: ಬೊಮ್ಮಾಯಿ

    ಸಂಶೋಧನೆಗಳು ತಳಹಂತದಿಂದ ನಡೆಯಬೇಕು: ಹಣದಿಂದ ಹಣ ಬರುವುದಿಲ್ಲ. ದುಡಿಮೆಯಿಂದ ಹಣ ಬರುತ್ತದೆ. ದುಡಿಮೆಯ ತಳಹಂತದಲ್ಲಿರುವವರ ಬಗ್ಗೆ ಕಾಳಜಿ ವಹಿಸಬೇಕು. ತಳಹಂತದಲ್ಲಿ ದುಡಿಯುವ ವರ್ಗಕ್ಕೆ ಸಹಾಯ ಮಾಡಲು ಹೊಸ ಚಿಂತನೆ ಮಾಡಬೇಕು. ಯೋಜನೆಯ ಪ್ರಾಯೋಗಿಕತೆ, ನೈಜತೆ ಬಗ್ಗೆ ತಿಳಿಯುವುದೇ ತಳಹಂತದಲ್ಲಿ. ಸಂಶೋಧನೆಗಳು ಈ ಹಂತದಲ್ಲಿ ನಡೆಯಬೇಕು. ಕರ್ನಾಟಕದಲ್ಲಿ ಸಣ್ಣ ಗ್ಯಾರೇಜಿನಿಂದ ಹಿಡಿದು ದೊಡ್ಡ ಕೈಗಾರಿಕೆಗಳವರೆಗೆ ಆರ್ ಆ್ಯಂಡ್ ಡಿ(ಸಂಶೋಧನೆ ಹಾಗೂ ಅಭಿವೃದ್ಧಿ) ನೀತಿಯನ್ನು ಜಾರಿಗೊಳಿಸಲಾಗಿದೆ.

    ಯುವಕರಲ್ಲಿ ಸ್ವಂತಿಕೆಯನ್ನು ಹಾಗೂ ನಾವೀನ್ಯತೆಯನ್ನು ಪ್ರೋತ್ಸಾಹಿಸಬೇಕು. ಜಪಾನ್ ದೇಶದಂತೆ ಸಂಪೂರ್ಣ ಎಕೋ ಸಿಸ್ಟಂ ಸಂಶೋಧನೆಗೆ ಒತ್ತು ನೀಡುವಂತಿರಬೇಕು. ಸುಸಜ್ಜಿತ ಕ್ಯೂಬಿಕಲ್ಸ್ಗಳಲ್ಲಿ ಮಾತ್ರ ಸೀಮಿತವಾಗಿರದೇ, ಸಂಶೋಧನೆಗಳು ಎಲ್ಲೆಡೆ ನಡೆಯಬೇಕು. ಈ ದಿಸೆಯಲ್ಲಿ ಕರ್ನಾಟಕ ನಡೆಯುತ್ತಿದ್ದು, ಹಲವು ವಿನೂತನ ಯೋಜನೆಗಳನ್ನು ರಾಜ್ಯದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದರು. ಇದನ್ನೂ ಓದಿ: ನಟಿ ಚೇತನಾ ರಾಜ್ ಸಾವು ಪ್ರಕರಣ – ಆಸ್ಪತ್ರೆ ವಿರುದ್ಧ ನೋಟಿಸ್ ಜಾರಿ

    ಸವಾಲುಗಳು ಅವಕಾಶಗಳನ್ನು ಒದಗಿಸುತ್ತವೆ: ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಸಾಂಕ್ರಾಮಿಕವಿದ್ದರೂ ಬೆಳೆಯಲು ಸಾಧ್ಯ ಎಂದು ಜಗತ್ತಿಗೆ ಬಿಂಬಿಸಲಾಗಿದೆ. ಸವಾಲುಗಳು ಅವಕಾಶಗಳನ್ನು ಒದಗಿಸುತ್ತವೆ. ಸವಾಲುಗಳಿಲ್ಲದಿದ್ದರೆ, ಅಭಿವೃದ್ಧಿಯೂ ಇಲ್ಲ. ಸವಾಲುಗಳು ಹೆಚ್ಚಿದ್ದಷ್ಟೂ ಅಭಿವೃದ್ಧಿ ಹೆಚ್ಚಾಗುತ್ತದೆ. ಮೊದಲನೇ ಹಾಗೂ ಎರಡನೇ ವಿಶ್ವಯುದ್ದಗಳು ಸಾರಿಗೆ, ಎಲೆಕ್ಟಾçನಿಕ್ಸ್, ಮೆಕ್ಯಾನಿಕಲ್ ಕ್ಷೇತ್ರಗಳಲ್ಲಿ ಹೊಸ ತಂತ್ರಜ್ಞಾನಕ್ಕೆ ಎಡೆ ಮಾಡಿಕೊಟ್ಟಿತು. ವಿಶ್ವಯುದ್ದಗಳು ಆಗದಿದ್ದರೆ ಜಾಗತಿಕ ಬೆಳವಣಿಗೆಯೂ ಆಗುತ್ತಿರಲಿಲ್ಲ. ಯಾವುದೇ ಹೊಸ ಘಟನೆ ಸಂಭವಿಸಿದಾಗ ನೂರು ಹೊಸ ಅವಕಾಶಗಳಿಗೆ ದಾರಿ ಮಾಡಿಕೊಡುತ್ತದೆ ಎಂದರು.

    ಮೂಲಸೌಕರ್ಯ ಮೂಲಭೂತ ಅವಶ್ಯಕತೆಗಳಲ್ಲಿ ಒಂದಾಗಿದೆ. ಉತ್ತಮ ವೇಗವನ್ನು ಸಾಧ್ಯವಾಗಿಸುವ ಸಾರಿಗೆ ವ್ಯವಸ್ಥೆ ಅಗತ್ಯವಿದೆ. ಕ್ಷಿಪ್ರಗತಿಯಲ್ಲಿ ನಮ್ಮ ಗಮ್ಯವನ್ನು ತಲುಪಿಸುವ ವೇಗವನ್ನು ಹೊಂದಿರುವ ರೈಲುಗಳ ಅಗತ್ಯವಿದೆ. ಮೂಲಸೌಕರ್ಯದ ಪರಿಕಲ್ಪನೆ ಬದಲಾಗಿದೆ. ಎಕ್ಸ್‌ಕಾನ್-11 ನೇ ಆವೃತ್ತಿಯು ಬೆಳೆವಣಿಗೆಯ ರೇಖೆಯಲ್ಲಿ ಅತ್ಯುನ್ನತ ಸ್ಥಾನಕ್ಕೆ ಕೊಂಡೊಯ್ಯಲು ಸಾಧ್ಯವಿದೆ. ದೇಶಕ್ಕೆ ಲಾಭವಾಗುವಂತೆ ಬೆಳೆಯಬಹುದಾಗಿದೆ ಎಂದು ತಿಳಿಸಿದರು.

  • ರಾಜ್ಯದ ನಾಲ್ಕು ಕಡೆ ಮಹಿಳೆಯರಿಗಾಗಿ ಪ್ರತ್ಯೇಕ ಉದ್ಯಮ ಪಾರ್ಕ್ ಪ್ರಾರಂಭ

    ರಾಜ್ಯದ ನಾಲ್ಕು ಕಡೆ ಮಹಿಳೆಯರಿಗಾಗಿ ಪ್ರತ್ಯೇಕ ಉದ್ಯಮ ಪಾರ್ಕ್ ಪ್ರಾರಂಭ

    -ಮಹಿಳಾ ಉದ್ಯಮಿಗಳಿಗೆ ಸರ್ಕಾರದಿಂದ ಪ್ರೋತ್ಸಾಹ

    ಬೆಂಗಳೂರು: ಮಹಿಳೆಯರನ್ನು ಉದ್ಯಮದತ್ತ ಇನ್ನಷ್ಟು ಆಕರ್ಷಿಸಲು ಮೈಸೂರು, ಧಾರವಾಡ, ಹಾರೋಹಳ್ಳಿ ಮತ್ತು ಕಲಬುರಗಿಯಲ್ಲಿ ಮಹಿಳೆಯರಿಗಾಗಿಯೇ ಪ್ರತ್ಯೇಕ ಮಹಿಳಾ ಉದ್ಯಮ ಪಾರ್ಕ್‍ಗಳು ಶೀಘ್ರದಲ್ಲೇ ಪ್ರಾರಂಭವಾಗಲಿವೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್ ನಿರಾಣಿ ಅವರು ಹೇಳಿದ್ದಾರೆ.

    ಗುರುವಾರ ನಗರದ ಖಾಸಗಿ ಹೊಟೇಲ್‍ನಲ್ಲಿ ಅಂತಾರಾಷ್ಟ್ರೀಯ ಮಹಿಳಾ ಉದ್ಯಮ ಶೀಲತಾ ಪ್ರಯುಕ್ತ ಉಬುಂಟು ಸಂಸ್ಥೆ ಹಮ್ಮಿಕೊಂಡಿದ್ದ ‘ಟುಗೆದರ್ ವಿ ಗ್ರೋ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಉಬಂಟು, (UNUNTU-consortium of women entrepreneur’s associations) ಇದೊಂದು ಮಹಿಳಾ ವಾಣಿಜ್ಯೋದಮ ಒಕ್ಕೂಟಗಳ ಸಂಘಟನೆಯಾಗಿದೆ. ಇದರಡಿ ಸುಮಾರು 30 ಮಹಿಳಾ ಉದ್ಯಮಿಗಳ ಸಂಘಟನೆಗಳು ಹಾಗೂ 1500 ಸದಸ್ಯರ ಒಂದೇ ವೇದಿಕೆಯಡಿ ಕೆಲಸ ಮಾಡುತ್ತಾರೆ. ದೇಶದಲ್ಲೇ ಮೊದಲ ಬಾರಿಗೆ ಮಹಿಳಾ ಉದ್ಯಮಿಗಳಿಗಾಗಿಯೇ ನಿರ್ದಿಷ್ಟ ಕೈಗಾರಿಕಾ ಪಾರ್ಕ್ ಸ್ಥಾಪಿಸುತ್ತಿರುವ ಮೊದಲ ರಾಜ್ಯ ನಮ್ಮ ಕರ್ನಾಟಕ. ಇದರ ಸದುಪಯೋಗವನ್ನು ಪಡೆದುಕೊಂಡರೆ ಇದರ ಉದ್ದೇಶ ಸಾರ್ಥಕವಾಗುತ್ತದೆ ಎಂದು ತಿಳಿಸಿದರು.

    ಮಹಿಳೆಯರು ಸ್ವಯಂ ಉದ್ಯಮಿಗಳಾಗಿ ಇನ್ನೊಬ್ಬರಿಗೆ, ಉದ್ಯೋಗ ನೀಡುವ ಹಂತಕ್ಕೆ ಬೆಳೆಯುವ ಮೂಲಕ ರಾಜ್ಯದ ಕೈಗಾರಿಕಾ ಪ್ರಗತಿಯಲ್ಲಿ ಕೈ ಜೋಡಿಸಬೇಕು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಹಿಳೆಯರು ಎಲ್ಲಾ ಕ್ಷೇತ್ರದಲ್ಲೂ ಮುಂಚೂಣಿಯಲ್ಲಿದ್ದಾರೆ. ನೀವು ಉದ್ಯೋಗ ಪಡೆದರಷ್ಟೇ ಸಾಲದು. ಉದ್ಯಮಿಯಾಗುವುದರ ಜೊತೆಗೆ ನೂರಾರು ಜನರಿಗೆ ಕೆಲಸ ಕೊಡುವ ಮಟ್ಟಕ್ಕೆ ಬೆಳೆದಾಗ ಮಹಿಳಾ ಸಬಲೀಕರಣಕ್ಕೆ ನಿಜವಾದ ಅರ್ಥ ಬರುತ್ತದೆ ಎಂದು ಅಭಿಪ್ರಾಯಪಟ್ಟರು. ಇದನ್ನೂ ಓದಿ: ಬಿಟ್‍ಕಾಯಿನ್ ಹಗರಣ – ರಾಕೇಶ್ ಸಿದ್ದರಾಮಯ್ಯ ಹೆಸರು ಎಳೆದು ತಂದ ಬಿಜೆಪಿ

    ಇನ್ಫೋಸಿಸ್‍ನ ಸುಧಾ ನಾರಾಯಣ ಮೂರ್ತಿ, ಕಿರಣ್ ಮಜುಂದಾರ್ ಷಾ, ಸೇರಿದಂತೆ ಅನೇಕ ಯಶಸ್ವಿ ಮಹಿಳಾ ಉದ್ಯಮಿಗಳು ನಮಗೆಲ್ಲರಿಗೂ ಆದರ್ಶಪ್ರಾಯವಾಗಿದ್ದಾರೆ. ಅವರ ಜೀವನದ ಯಶೋಗಾಧೆ ಇಂದಿನ ಯುವ ಮಹಿಳಾ ಉದ್ಯಮಿಗಳಿಗೆ ಪ್ರೇರಣೆಯಾಗಬೇಕು. ಮಹಿಳೆಯರನ್ನು ಉದ್ಯಮದತ್ತ ಆಕರ್ಷಿಸಲು ನಮ್ಮ ಸರ್ಕಾರ ರಾಜ್ಯದಲ್ಲಿ ಅನೇಕ ಯೋಜನೆಗಳನ್ನು ಜಾರಿ ಮಾಡಿದೆ. ಉದ್ಯಮ ಶೀಲತೆಯ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಳ್ಳುವ ಮೂಲಕ ಉದ್ಯೋಗದಾತರಾಗಿ ಎಂದು ಸಲಹೆ ನೀಡಿದರು.

    ಸ್ವಂತ ಉದ್ಯಮ ಸ್ಥಾಪಿಸಿ, ಉದ್ಯೋಗದಾತರಾಗುವುದರ ಜೊತಗೆ ಇತರರೂ ನಿಮ್ಮಂತೆ ಉದ್ಯಮಿಗಳಾಗಬೇಕು ಎಂಬುದು ನನ್ನ ಅಭಿಲಾಷೆಯಾಗಿದೆ. ಈ ನಿಟ್ಟಿನಲ್ಲಿ ನಮ್ಮಇಲಾಖೆ ‘ ಉದ್ಯಮಿಯಾಗು, ಉದ್ಯೋಗ ನೀಡು’ ಕಾರ್ಯಕ್ರಮ ಹಮ್ಮಿಕೊಂಡಿದ್ದೇವು. ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿದ್ದು, ಮುಂಬರುವ ದಿನಗಳಲ್ಲಿ ಬೇರೆಬೇರೆ ಜಿಲ್ಲೆಗಳಲ್ಲೂ ಈ ಕಾರ್ಯಕ್ರಮನಡೆಯಲಿದೆ. ಮಹಿಳಾ ಉದ್ಯಮಿಗಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಹೆಚ್ಚಿನ ಅರಿವಿರುವ “ಉಬುಂಟು” ದಂತಹ ಸಂಸ್ಥೆಗಳು ಈಗ ಬೆಂಬಲ ನೀಡುವ ವ್ಯವಸ್ಥೆಯಾಗಿ ಮಾರ್ಪಟ್ಟಿವೆ. ನಿಮ್ಮ ಇಂಥ ಪ್ರಯತ್ನಗಳಲ್ಲಿ ಸರ್ಕಾರ ನಿಮ್ಮ ಜೊತೆ ಇರುತ್ತದೆ. ದೇಶದಲ್ಲಿಂದು ಮಹಿಳೆಯರೇ ನಡೆಸುವಂಥಹ ಉದ್ಯಮಗಳ ಸಂಖ್ಯೆ 13.5 ರಿಂದ 15.7 ದಶಲಕ್ಷವಿದ್ದು, ಒಟ್ಟು ಉದ್ಯಮಗಳಲ್ಲಿ ಇದರ ಪಾಲು ಶೇ.20ರಷ್ಟಿದೆ ಎಂಬುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ. ಉದ್ಯಮಶೀಲತೆಯ ಗುಣಮಟ್ಟ ಮತ್ತು ಉತ್ಪಾದನಾ ಪ್ರಮಾಣವನ್ನು ಹೆಚ್ಚಿಸುವ ಮೂಲಕ ಮಹಿಳಾ ಸ್ವಾಮ್ಯದ ಉದ್ಯಮಗಳನ್ನು 30 ದಶಲಕ್ಷಕ್ಕೆ ಹೆಚ್ಚಿಸಬಹುದು. ಮಹಿಳೆಯರು ಮನಸ್ಸು ಮಾಡಿದರೆ ಈ ಗುರಿ ತಲುಪುವುದು ಕಷ್ಟವೇನಲ್ಲ ಎಂದು ಕಿವಿಮಾತು ಹೇಳಿದರು. ಇದನ್ನೂ ಓದಿ: ಬಿಟ್‌ಕಾಯಿನ್‌ ಹಗರಣದಲ್ಲಿ ಸಿಎಂ ತಲೆದಂಡ ಪಡೆಯಲಿದೆ: ಪ್ರಿಯಾಂಕ್ ಖರ್ಗೆ

    1948ರ ಫ್ಯಾಕ್ಟರಿ ತಿದ್ದುಪಡಿ ಕಾಯಿದೆಯಡಿ ಕಾರ್ಖಾನೆಗಳಲ್ಲಿ ರಾತ್ರಿ 7 ರಿಂದ ಬೆಳಿಗ್ಗೆ 6 ರವರೆಗೆ ಕೆಲಸ ಮಾಡಲು ಸರ್ಕಾರ ಮಹಿಳೆಯರಿಗೆ ಅನುಮತಿ ನೀಡಿದೆ. ನೂತನ ಕೈಗಾರಿಕಾ ನೀತಿಯಡಿ SC/ST, ಮಹಿಳೆಯರು ಸೇರಿದಂತೆ ವಿಶೇಷ ವರ್ಗದ ಉದ್ಯಮಿಗಳಿಗೆ ಹೆಚ್ಚುವರಿ ಪ್ರೋತ್ಸಾಹವನ್ನು ಪ್ರಸ್ತಾಪಿಸಲಾಗಿದೆ. ರಾಜ್ಯ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭಾ ನೇತೃತ್ವದ ಉಬುಂಟು ಮಹಿಳೆಯರಲ್ಲಿ ಉದ್ಯಮ ಶೀಲತೆಯ ಮನೋಭಾವವನ್ನು ಪ್ರೋತ್ಸಾಹಿಸಿ ಅವರು ಯಶಸ್ಸನ್ನು ಸಾಧಿಸಲು ನೆರವಾಗಿದೆ. ಇಂಥ ಸಂಘಟನೆಯ ಸಾರಥ್ಯ ವಹಿಸಿರುವ ಅವರ ಪರಿಶ್ರಮಕ್ಕೆ ಮೆಚ್ಚುಗೆ ಸೂಚಿಸಿದರು. ಇದನ್ನೂ ಓದಿ: ಬಿಜೆಪಿಯವ್ರಿಗೆ ಮಾನ-ಮರ್ಯಾದೆ ಇಲ್ಲ, ರಾಕೇಶ್ ಈಗ ಬದುಕಿದ್ದಾರಾ?- ಸಿದ್ದು ಗರಂ