Tag: ಉದಯ್ ಕುಮಾರ್

  • ಹದಗೆಟ್ಟಿರುವ ಶಿಕ್ಷಣ ವ್ಯವಸ್ಥೆಗೆ ‘ಬನ್ ಟೀ’ಯಲ್ಲಿದೆ ಪರಿಹಾರ

    ಹದಗೆಟ್ಟಿರುವ ಶಿಕ್ಷಣ ವ್ಯವಸ್ಥೆಗೆ ‘ಬನ್ ಟೀ’ಯಲ್ಲಿದೆ ಪರಿಹಾರ

    ಸ್ಯಾಂಡಲ್‌ವುಡ್‌ನಲ್ಲಿ ವಾರಕ್ಕೆ ಅನೇಕ ಸಿನಿಮಾಗಳು ರಿಲೀಸ್ ಆಗುತ್ತಿವೆ. ಅದರಲ್ಲಿ ಹೊಸಬರ ಹೊಸ ಸಿನಿಮಾಗಳೂ ಇವೆ. ಇದೀಗ ಮತ್ತೊಂದು ಹೊಸಬರ ಸಿನಿಮಾ ರಿಲೀಸ್ ರೆಡಿಯಾಗಿದೆ. ಹೌದು, ‘ಬನ್ ಟೀ’  (Bun Tee) ಎನ್ನುವ ಸಿನಿಮಾ ಚಿತ್ರಮಂದಿರಕ್ಕೆ ಬರಲು ಸಜ್ಜಾಗಿದೆ. ರಿಲೀಸ್‌ಗೂ ಮೊದಲೇ ಸಿನಿಮಾತಂಡ ಟ್ರೈಲರ್ ಮೂಲಕ ಮಾಧ್ಯಮದ ಮುಂದೆ ಹಾಜರಾಗಿತ್ತು. ‘ಬನ್ ಟೀ’ ಅಂದಾಕ್ಷಣ ಇದು ಬನ್ ಮತ್ತು ಟೀ ಬಗ್ಗೆ ಇರುವ ಸಿನಿಮಾ ಅಂತ ಅಂದ್ಕೋಬೇಡಿ, ಇದು ಶಿಕ್ಷಣದ  ಬಗ್ಗೆ ಇರುವ ಚಿತ್ರ.

    ಬನ್ ಟೀ ಚಿತ್ರಕ್ಕೆ ಉದಯ್ ಕುಮಾರ್ (Uday Kumar) ನಿರ್ದೇಶಕರು. ಉದಯ್ ಕುಮಾರ್ ತನ್ನ ಸ್ನೇಹಿತನ ಜೀವನದಲ್ಲಿ ನಡೆದ ಕಥೆಯನ್ನೇ ಸಿನಿಮಾ ಮಾಡಿದ್ದಾರೆ. ಈ ಚಿತ್ರದಲ್ಲಿ ನಾಯಕ ಮತ್ತು ನಾಯಕಿ ಎನ್ನುವ ಕಾನ್ಸೆಪ್ಟ್ ಇರದೆ ಸಂಪೂರ್ಣ ಕಂಟೆಂಟ್ ಮೇಲೆ ಇರುವ ಚಿತ್ರವಾಗಿದೆ. ಬನ್ ಟೀ ಪ್ರಮುಖ ಪಾತ್ರದಲ್ಲಿ ಉಮೇಶ್ (Umesh) ಮತ್ತು ಶ್ರೀದೇವಿ (Sridevi), ಗುಂಡಣ್ಣ ಚಿಕ್ಕಮಗಳೂರು ಸೇರಿದಂತೆ ಅನೇಕರು ನಟಿಸಿದ್ದಾರೆ. ನಟ ಉಮೇಶ್ ಲಾಯರ್ ಆಗಿ ಕೆಲಸ ಮಾಡುತ್ತಿದ್ದರು. ಆದರೆ ಈ ಸಿನಿಮಾದ ಕಾನ್ಸೆಪ್ಟ್ ಇಷ್ಟ ಆಗಿ ನಟಿಸಿದ್ದಾರೆ. ನಟಿ ಶ್ರೀದೇವಿ ಅವರಿಗೂ ಇದು ಮೊದಲ ಸಿನಿಮಾವಾಗಿದೆ. ಇದನ್ನೂ ಓದಿ:ಕಾಗೆ ಮೇಲಿನ ಕಥೆಯ ಮೂಲಕ ಮತ್ತೆ ಚಿತ್ರರಂಗಕ್ಕೆ ಬಂದ ದಿಲೀಪ್

    ಬನ್ ಟೀ ಸಿನಿಮಾದಲ್ಲಿ ಮೌರ್ಯ ಮತ್ತು ತನ್ಮಯಿ ಇಬ್ಬರು ಬಾಲ ಕಲಾವಿದರು ನಟಿಸಿದ್ದಾರೆ. ಬನ್‌ ಟೀ ಪಾತ್ರದಲ್ಲಿ  ಮೌರ್ಯ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾವನ್ನು ಯಾವುದೇ ಸೆಟ್ ಬಳಸದೆ ಶೂಟಿಂಗ್ ಮಾಡಿದ್ದಾರೆ. ಸ್ಲಮ್, ಮಾರ್ಕೆಟ್ ಸೇರಿದಂತೆ ಅನೇಕ ಕಡೆ ಚಿತ್ರೀಕರಣ ಮಾಡಿದ್ದಾರೆ. ಹದಗೆಟ್ಟಿರುವ ಶಿಕ್ಷಣದ ವ್ಯವಸ್ಥೆ, ಸಂಪೂರ್ಣವಾಗಿ ಕಮರ್ಷಿಯಲ್ ಆಗಿರುವ ಶಿಕ್ಷಣದ ಸುತ್ತ ಬನ್ ಟೀ ಸಿನಿಮಾದ ಕತೆ ಸುತ್ತುತ್ತದೆ.

    ಬನ್ ಟೀ ಚಿತ್ರಕ್ಕೆ ಕೇಶವ್ ಆರ್ ನಿರ್ಮಾಣ ಮಾಡಿದ್ದಾರೆ.   ಪ್ರದ್ಯೋತ್ತನ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಈ ಸಿನಿಮಾದಲ್ಲಿ ಹಾಡುಗಳು ಇರದಿದ್ದರೂ ಬ್ಯಾಗ್ರೌಂಡ್ ಮ್ಯೂಸಿಕ್ ಅದ್ಭುತವಾಗಿ ಬಂದಿದೆ ಎನ್ನುವುದು ಟ್ರೈಲರ್ ನೋಡಿದ್ರೆ ಗೊತ್ತಾಗುತ್ತಿದೆ. ರಾಜ ರಾವ್ ಕ್ಯಾಮರಾ ವರ್ಕ್ ಸಿನಿಮಾಗಿದೆ. ಸದ್ಯ ಟ್ರೈಲರ್ ಮೂಲಕ ಗಮನ ಸೆಳೆಯುತ್ತಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ದಿ. ಕಲಾಕೇಸರಿ ಉದಯಕುಮಾರ್ ಪತ್ನಿ ಸುಶೀಲಾದೇವಿ ವಿಧಿವಶ

    ದಿ. ಕಲಾಕೇಸರಿ ಉದಯಕುಮಾರ್ ಪತ್ನಿ ಸುಶೀಲಾದೇವಿ ವಿಧಿವಶ

    ಬೆಂಗಳೂರು: ಕನ್ನಡ ಚಲನಚಿತ್ರ ರಂಗದ ಮೇರು ನಟ ಕಲಾಕೇಸರಿ ಉದಯಕುಮಾರ್ ಪತ್ನಿ ಸುಶೀಲಾ ದೇವಿ ಇಂದು ವಿಧಿವಶರಾಗಿದ್ದಾರೆ.

    ಉದಯಕುಮಾರ್ ಅವರು 1969ರಲ್ಲಿ ಸ್ಥಾಪಿಸಿದ್ದ ಉದಯಕಲಾ ನಿಕೇತನ ಸಂಸ್ಥೆಯ ಅಧ್ಯಕ್ಷರಾಗಿ ಸಂಸ್ಥೆಯನ್ನು ಮುನ್ನಡೆಸಿದ ಸುಶೀಲಾದೇವಿ ಉದಯಕುಮಾರ್(84) ಅವರು ನಿಧನರಾಗಿದ್ದಾರೆ. ಉದಯಕಲಾ ನಿಕೇತನ ಸಂಸ್ಥೆಯ ಮೂಲಕ, ನಟನೆ, ನೃತ್ಯ ಮತ್ತು ಸಂಗೀತ ತರಬೇತಿ ಶಿಬಿರಗಳು, ಕಾರ್ಯಾಗಾರಗಳನ್ನು ಸಂಸ್ಥೆಯ ಮೂಲಕ ನಡೆಸುತ್ತಾ ನಿರಂತರವಾಗಿ ಸಾಂಸ್ಕøತಿಕ ಲೋಕವನ್ನು ಶ್ರೀಮಂತಗೊಳಿಸಿದ್ದಾರೆ. ಇದನ್ನೂ ಓದಿ: ನಾನು ಫುಲ್ ಥ್ರಿಲ್ ಆಗಿದ್ದೇನೆ ಅಂದ್ರು ಡಿಂಪಲ್ ಕ್ವೀನ್ ರಚಿತಾ

    84ನೇ ವಯಸ್ಸಿನಲ್ಲಿ ನಿಧನರಾದ ಸುಶೀಲಾದೇವಿ ಅವರು ಕ್ಯಾನ್ಸರ್‍ನಿಂದ ಬಳಲುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಅವರು ಮಕ್ಕಳಾದ ವರ್ಧಿನಿ ಮೂರ್ತಿ, ರೇಣುಕಾಬಾಲಿ ಉದಯಕುಮಾರ್, ಕಲಾನಿಕೇತನದ ಸದಸ್ಯರು ಹಾಗೂ ಅಸಂಖ್ಯಾತ ಅಭಿಮಾನಿಗಳನ್ನು ಅಗಲಿದ್ದಾರೆ. ಇದನ್ನೂ ಓದಿ: ಹಿಮಾಚಲ ಪ್ರದೇಶದಿಂದ ಬೆಂಗ್ಳೂರಿಗೆ ಬಂದು ಮಂಜನನ್ನು ಭೇಟಿಯಾದ ನಟಿ ನಿಧಿ

    ಭಗವಂತನು ಮೃತರ ಆತ್ಮಕ್ಕೆ ಸದ್ಗತಿಯನ್ನು ನೀಡಲಿ. ಕುಟುಂಬ ವರ್ಗದವರು ಮತ್ತು ಅಭಿಮಾನಿಗಳಿಗೆ ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ನೀಡಲಿ.

  • ನಟ ಉದಯ್ ಕುಮಾರ್ ಪತ್ನಿ ಇನ್ನಿಲ್ಲ

    ನಟ ಉದಯ್ ಕುಮಾರ್ ಪತ್ನಿ ಇನ್ನಿಲ್ಲ

    ಬೆಂಗಳೂರು: ಕನ್ನಡ ಚಿತ್ರರಂಗದ ಧೃವತಾರೆ ಕಲಾಕೇಸರಿ ಉದಯ್ ಕುಮಾರ್ ಅವರ ಧರ್ಮಪತ್ನಿ ಕಮಲಮ್ಮ ಉದಯ್ ಕುಮಾರ್ ಇಂದು ದೈವಾಧೀನರಾಗಿದ್ದಾರೆ.

    ಕನ್ನಡ ಸಿನಿರಂಗದಲ್ಲಿ ಕುಮಾರತ್ರಯರು ಎಂದೇ ಖ್ಯಾತಿ ಪಡೆದಿದ್ದ ರಾಜ್‍ಕುಮಾರ್, ಉದಯ್‍ಕುಮಾರ್, ಕಲ್ಯಾಣ್‍ಕುಮಾರ್ 60-70ರ ದಶಕದಲ್ಲಿ ಬಹುದೊಡ್ಡ ಹೆಸರು ಮಾಡಿದ್ದರು. ಉದಯ್ ಕುಮಾರ್ ಅವರು ನಾಯಕ ನಟ ಸೇರಿದಂತೆ, ವಿಲನ್, ಪೋಷಕ ಪಾತ್ರಗಳಲ್ಲಿ ನಟಿಸಿ ಹೆಸರು ಪಡೆದಿದ್ದರು. ಉದಯ್ ಕುಮಾರ್ ಅವರಿಗೆ ಅವರ ಧರ್ಮಪತ್ನಿ ಕಮಲಮ್ಮ ಬೆನ್ನಿಗೆ ನಿಂತಿದ್ದರು.

    ಪವನಸುತ ಕೇಸರಿ ಕಲಾ ಶಾಲಾ ಪ್ರತಿಷ್ಠಾನವನ್ನು ಸ್ಥಾಪಿಸಿದ್ದ ಕಮಲಮ್ಮ ಅವರು ಹಲವು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ಅಂತಿಮ ದಿನಗಳವರೆಗೂ ಪ್ರತಿಷ್ಠಾನದ ಮೂಲಕ ಕಲಾ ಸೇವೆಯನ್ನು ಮುಂದುವರಿಸಿದ್ದರು. ಕಲಾಕೇಸರಿ ಹೆಸರನಲ್ಲಿ ಕನ್ನಡ ಸೇವೆಯನ್ನು, ಪ್ರತಿಷ್ಠಾನದ ಹೆಸರಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುತ್ತಿದ್ದರು.

    ಉದಯ್‍ಕುಮಾರ್ ಸ್ಮರಣಾರ್ಥ ಕಮಲಮ್ಮ ಹಾಗೂ ಪುತ್ರ ವಿಕ್ರಂ ಉದಯ್‍ಕುಮಾರ್, ಪುತ್ರಿ ಶ್ಯಾಮಲತ ಅವರು ಸೇರಿ ಪ್ರತಿಷ್ಠಾನವನ್ನು ಸ್ಥಾಪಿಸಿದ್ದರು. ಆನೇಕಲ್ ನಲ್ಲಿರುವ ಕಲಾಶಾಲೆಯನ್ನು ಇವರ ಕುಟುಂಬ ನಡೆಸುತ್ತಿದೆ. ಇಲ್ಲಿ ಶಾಸ್ತ್ರೀಯ ಸಂಗೀತ ಹಾಗೂ ಪ್ರದರ್ಶನ ಕಲೆಗಳು, ಭರತನಾಟ್ಯವನ್ನು ಕಲಿಯಲು ಅವಕಾಶವಿದೆ. ಕಮಲಮ್ಮನವರ ಅಂತಿಮ ವಿಧಿ-ವಿಧಾನದ ಎಲ್ಲಾ ಕಾರ್ಯಗಳು ಆನೇಕಲ್ ನಲ್ಲಿ ಮಾಡಲಾಗುತ್ತದೆ ಎಂಬ ಮಾಹಿತಿ ಲಭಿಸಿದೆ.