Tag: ಉದಯಪುರ ಹತ್ಯೆ

  • ಭಯೋತ್ಪಾದಕರಿಗೆ ಕಾಂಗ್ರೆಸ್‌ ಮುಕ್ತ ಅವಕಾಶ ಕೊಟ್ಟಿದೆ; ಉದಯಪುರ ಟೈಲರ್‌ ಹತ್ಯೆ ಖಂಡಿಸಿದ ಮೋದಿ

    ಭಯೋತ್ಪಾದಕರಿಗೆ ಕಾಂಗ್ರೆಸ್‌ ಮುಕ್ತ ಅವಕಾಶ ಕೊಟ್ಟಿದೆ; ಉದಯಪುರ ಟೈಲರ್‌ ಹತ್ಯೆ ಖಂಡಿಸಿದ ಮೋದಿ

    ಜೈಪುರ: ಭಯೋತ್ಪಾದಕರು ಕೃತ್ಯಗಳನ್ನ ಎಸಗಲು ಕಾಂಗ್ರೆಸ್‌ ಮುಕ್ತ ಅವಕಾಶ ಕೊಟ್ಟಿದೆ. ಹೀಗಿರುವಾಗ ಅಪರಾಧಿಗಳಿಗೆ ಕಾನೂನಿನ ಮೇಲೆ ಭಯ ಹೇಗೆ ಬರುತ್ತದೆ? ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ವಾಗ್ದಾಳಿ ನಡೆಸಿದರು.

    ರಾಜಸ್ಥಾನದಲ್ಲಿ ಬಿಜೆಪಿ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಳೆದ ವರ್ಷ ಜೂನ್‌ ತಿಂಗಳಲ್ಲಿ ಉದಯಪುರದ ಟೈಲರ್‌ ಕನ್ಹಯ್ಯಾ ಲಾಲ್‌ ಹತ್ಯೆ (Udaipur Tailor Killing) ಪ್ರಕರಣವನ್ನು ಖಂಡಿಸಿದರು. ಜೊತೆಗೆ ರಾಜಸ್ಥಾನ ಸಿಎಂ ಅಶೋಕ್‌ ಗೆಹ್ಲೋಟ್‌ ಸರ್ಕಾರ ವಿರುದ್ಧ ವಾಗ್ದಾಳಿ ನಡೆಸಿದರು. ಈ ವಿಚಾರದಲ್ಲಿಯೂ ಕಾಂಗ್ರೆಸ್‌ ವೋಟ್‌ಬ್ಯಾಂಕ್‌ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಟ್ರ್ಯಾಕ್ ಮೇಲೆ ಕಲ್ಲು, ರಾಡ್‌ಗಳನ್ನಿಟ್ಟ ಕಿಡಿಗೇಡಿಗಳು – ವಂದೇ ಭಾರತ್ ರೈಲು ತುರ್ತು ನಿಲುಗಡೆ

    ಉದಯಪುರದಲ್ಲಿ ಅಂತಹ ಘಟನೆಯನ್ನು ಯಾರೂ ಊಹಿಸಿರಲ್ಲ. ಜನ ಸಾಮಾನ್ಯರಂತೆ ಬಟ್ಟೆ ಹೊಲಿಸುವ ನೆಪದಲ್ಲಿ ಬಂದು ಟೈಲರ್‌ ಕತ್ತು ಕತ್ತರಿಸುತ್ತಾರೆ. ಆ ಸಂದರ್ಭದಲ್ಲಿ ಕಾಂಗ್ರೆಸ್‌ ಸರ್ಕಾರ ಏನು ಕ್ರಮ ಕೈಗೊಂಡಿತು? ಆ ಘಟನೆಯನ್ನೂ ಕಾಂಗ್ರೆಸ್‌ ವೋಟ್‌ ಬ್ಯಾಂಕಿಗೆ (Congress Vote Bank) ಬಳಸಿಕೊಂಡಿತು. ತಲೆ ಕಡಿಯುವ ಪರಿಸರದಲ್ಲಿ ಹೊಸ ಉದ್ಯಮಗಳಿಗೆ ಹೂಡಿಕೆ ಹೇಗೆ ಬರುತ್ತದೆ? ಇದು ಸಾಮಾನ್ಯ ಅಪರಾಧವಲ್ಲ. ಕಾಂಗ್ರೆಸ್‌ ಸರ್ಕಾರದ ವೋಟ್‌ ಬ್ಯಾಂಕ್‌ ರಾಜಕಾರಣದ ಪರಿಣಾಮ ಎಂದು ಕಿಡಿ ಕಾರಿದ್ದಾರೆ. ಇದನ್ನೂ ಓದಿ: ಉದಯಪುರ ಟೈಲರ್‌ ಹತ್ಯೆ ಪ್ರಕರಣ – ಟೀಕೆ ಬೆನ್ನಲ್ಲೇ 32 ಪೊಲೀಸ್‌ ಅಧಿಕಾರಿಗಳ ವರ್ಗಾವಣೆ

    ಕಾಂಗ್ರೆಸ್‌ ಸರ್ಕಾರ (Congress Government) ಭಯೋತ್ಪಾದಕರ ಬಗ್ಗೆ ಪ್ರೀತಿಯಿಂದ ವರ್ತಿಸುತ್ತಿದೆ. ಅಪರಾಧಿಗಳ ವಿರುದ್ಧ ಕ್ರಮ ಕೈಗೊಳ್ಳುವ ಬದಲು ಇನ್ನಷ್ಟು ಕೃತ್ಯಗಳನ್ನ ಎಸಗಲು ಮುಕ್ತ ಅವಕಾಶ ನೀಡುತ್ತಿದೆ. ಹೀಗಿರುವಾಗ ಅಪರಾಧಿಗಳಿಗೆ ಕಾನೂನಿನ ಮೇಲೆ ಭಯ ಹೇಗೆ ಬರುತ್ತದೆ? ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಉದಯಪುರದ ಹತ್ಯೆ ಖಂಡನೀಯ: ಇದು ದೇಶದ ಕಾನೂನು, ಇಸ್ಲಾಂ ಧರ್ಮಕ್ಕೆ ವಿರುದ್ಧವಾದದ್ದು – ಮುಸ್ಲಿಂ ಮಂಡಳಿ

    ಕಳೆದ ವರ್ಷ ಜೂನ್‌ ತಿಂಗಳಿನ ಲ್ಲಿ ಪ್ರವಾದಿ ಮೊಹಮ್ಮದ್‌ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ನೂಪುರ್‌ ಶರ್ಮಾರನ್ನು ಬೆಂಬಲಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ವಿವಾದಾತ್ಮಕ ಪೋಸ್ಟ್‌ ಹಾಕಿಕೊಂಡಿದ್ದರು ಎಂಬ ಕಾರಣಕ್ಕೆ ರಾಜಸ್ಥಾನದ ಉದಯಪುರದಲ್ಲಿ ಟೈಲರ್‌ ಕನ್ಹಯ್ಯ ಲಾಲ್‌ ಎಂಬುವವರನ್ನು ಇಬ್ಬರು ದುಷ್ಕರ್ಮಿಗಳು ಮಂಗಳವಾರ ಕತ್ತು ಸೀಳಿ ಹತ್ಯೆ ಮಾಡಿದ್ದರು. ಈ ಘಟನೆಯಿಂದ ರಾಜಸ್ಥಾನದ ದೇಶದ ವಿವಿಧೆಡೆ ಪ್ರತಿಭಟನೆ ಭುಗಿಲೆದ್ದಿತ್ತು. ಇದನ್ನೂ ಓದಿ: ಕಗ್ಗತ್ತಲ ಮಳೆಯಲ್ಲಿ ನದಿಯನ್ನು ರಸ್ತೆ ಎಂದು ತೋರಿಸಿದ ಜಿಪಿಎಸ್ – ಕಾರು ಮುಳುಗಿ ಕೇರಳದ ಇಬ್ಬರು ವೈದ್ಯರು ಸಾವು

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನೂಪುರ್ ಹೇಳಿಕೆಯಿಂದ ಕೋಮು ಉದ್ವಿಗ್ನತೆ ಸೃಷ್ಟಿಸಿದ್ದು ಕೇವಲ ವೋಟಿಗಾಗಿ – ಸಿನ್ಹಾ ಗುಡುಗು

    ನೂಪುರ್ ಹೇಳಿಕೆಯಿಂದ ಕೋಮು ಉದ್ವಿಗ್ನತೆ ಸೃಷ್ಟಿಸಿದ್ದು ಕೇವಲ ವೋಟಿಗಾಗಿ – ಸಿನ್ಹಾ ಗುಡುಗು

    ನವದೆಹಲಿ: ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾರ ವಿವಾದಾತ್ಮಕ ಹೇಳಿಕೆಯಿಂದಾಗಿ ಕೋಮು ಉದ್ವಿಗ್ನತೆ ಸೃಷ್ಟಿಯಾಗಿದೆ. ಇದರಿಂದಾಗಿ ಉದಯಪುರ, ಅಮರಾವತಿ ಹತ್ಯೆಯ ನಂತರ ಬಂದ ಹೇಳಿಕೆಗಳು ಕೋಮು ಉದ್ವಿಗ್ನತೆ ಸೃಷ್ಟಿಸಿ ಮತ ಪಡೆಯುವ ಉದ್ದೇಶ ಹೊಂದಿವೆ. ಈ ಎಲ್ಲ ಕೋಮು ಗಲಭೆಗಳು ಸೃಷ್ಟಿಸಿದ್ದೂ ಮತ ಪಡೆಯುವ ಉದ್ದೇಶದಿಂದಲೇ ಎಂದು ರಾಷ್ಟ್ರಪತಿ  ಸ್ಥಾನಕ್ಕೆ ಸ್ಪರ್ಧಿಸಿರುವ ಪ್ರತಿ ಪಕ್ಷಗಳ ಅಭ್ಯರ್ಥಿ ಯಶವಂತ ಸಿನ್ಹಾ ವಾಗ್ದಾಳಿ ನಡೆಸಿದ್ದಾರೆ.

    ರಾಷ್ಟ್ರಪತಿ ಚುನಾವಣೆಗೂ ಮುನ್ನ ಯಶವಂತ್ ಸಿನ್ಹಾ ಗುಜರಾತ್‌ನ ವಿಧಾನಸೌಧಕ್ಕೆ ಭೇಟಿ ನೀಡಿ ಕಾಂಗ್ರೆಸ್ ಮತ್ತು ಇತರ ಪಕ್ಷದ ನಾಯಕರ ಜೊತೆ ಸಭೆ ನಡೆಸಿದರು. ಬಳಿಕ ಅಮಾನತುಗೊಂಡಿರುವ ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾ ಹೇಳಿಕೆ ವಿವಾದ, ಉದಯಪುರ ಹತ್ಯೆ ಹಾಗೂ ಅಮರಾವತಿ ವೈದ್ಯನ ಹತ್ಯೆಗಳ ಕುರಿತಾಗಿ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಇದನ್ನೂ ಓದಿ: `ಪವಿತ್ರ’ಪ್ರೇಮ ವಿಫಲ – ಯುವಕ ಕೈಕೊಟ್ಟನೆಂದು ಕಾಲೇಜಿನಲ್ಲೇ ವಿದ್ಯಾರ್ಥಿನಿ ನೇಣಿಗೆ ಶರಣು

    ದೇಶದಲ್ಲಿ ಕೋಮು ಉದ್ವಿಗ್ನತೆಯನ್ನು ಸೃಷ್ಟಿಸಲು ಇದು ಯೋಜಿತ ಪಿತೂರಿಯಾಗಿದೆ. ಕೇವಲ ಮತಕ್ಕಾಗಿ ಕಾನೂನು ಸುವ್ಯವಸ್ಥೆ ಸೃಷ್ಟಿಸುವ ಷಡ್ಯಂತ್ರವಿದೆ. ಪ್ರಧಾನಿ ನರೇಂದ್ರ ಮೋದಿ ಮನ್ ಕಿ ಬಾತ್‌ನಲ್ಲಿ ಮಾತನಾಡುತ್ತಾರೆ. ಇಂತಹ ದೊಡ್ಡ ಘಟನೆಗಳು ಉದಯಪುರ, ಅಮರಾವತಿಯಲ್ಲಿ ನಡೆದಿವೆ. ಈವರೆಗೂ ಕೇಂದ್ರ ಸರ್ಕಾರದಿಂದ ಒಂದೇ ಒಂದು ಹೇಳಿಕೆಯನ್ನೂ ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ, ಗೃಹಸಚಿವರು ಅಥವಾ ರಕ್ಷಣಾ ಸಚಿವರು ಇಲ್ಲಿವರೆಗೆ ಯಾರೂ ಏನನ್ನೂ ಕೇಳಿಲ್ಲ. ಗುಜರಾತ್‌ನಲ್ಲಿ ಯಾವಾಗಲೂ ಸೆಕ್ಷನ್ 144 ಅಂತಹ ಪರಿಸ್ಥಿತಿ ಏಕೆ ಇದೆ. ತುರ್ತು ಪರಿಸ್ಥಿತಿಯ ಸಂದರ್ಭದಲ್ಲೂ ಇಂದಿನ ಸ್ಥಿತಿ ಇರಲಿಲ್ಲ ಎಂದು ವಿಷಾದಿಸಿದರು. ಇದನ್ನೂ ಓದಿ: ಫಸ್ಟ್ ನೈಟ್ ಅನ್ನೋದೇ ಇಲ್ಲ ಎಂದು ಹೇಳಿ ಪತಿಯನ್ನೇ ಬೆಚ್ಚಿ ಬೀಳಿಸಿದ ನಟಿ ಆಲಿಯಾ ಭಟ್

    ಇದೇ ವೇಳೆ ರಾಷ್ಟ್ರಪತಿ ಚುನಾವಣೆ ಕುರಿತು ಮಾತನಾಡಿದ ಸಿನ್ಹಾ, ಅಧ್ಯಕ್ಷೀಯ ಚುನಾವಣೆ ಬಹಳ ಮುಖ್ಯ. ರಬ್ಬರ್ ಸ್ಟಾಂಪ್ ಅಧ್ಯಕ್ಷರು ಅಲ್ಲಿ ಕುಳಿತರೆ ಏನೂ ಬದಲಾಗುವುದಿಲ್ಲ. ಈ ಚುನಾವಣೆಯಲ್ಲಿ ನಾವು ಯಾವ ಜಾತಿಯಿಂದ ಬಂದವರು ಎಂಬುದು ಮುಖ್ಯವಲ್ಲ. ಯಾವ ಸಿದ್ಧಾಂತ ಪ್ರತಿನಿಧಿಸುತ್ತೇವೆ ಎಂಬುದು ಮುಖ್ಯ ಎಂದು ಹೇಳಿದರು.

    Live Tv
    [brid partner=56869869 player=32851 video=960834 autoplay=true]

  • ಟೈಲರ್ ಕೊಲೆಗಡುಕರನ್ನು ಗುಂಡಿಟ್ಟು ಹತ್ಯೆ ಮಾಡ್ಬೇಕು: ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ

    ಟೈಲರ್ ಕೊಲೆಗಡುಕರನ್ನು ಗುಂಡಿಟ್ಟು ಹತ್ಯೆ ಮಾಡ್ಬೇಕು: ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ

    ಕಲಬುರಗಿ: ಟೈಲರ್ ಕೊಲೆಗಡುಕರನ್ನು ಗುಂಡಿಟ್ಟು ಹತ್ಯೆ ಮಾಡಬೇಕು ಎಂದು ಶ್ರೀರಾಮಸೇನೆಯ ರಾಜ್ಯಾಧ್ಯಕ್ಷ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದರು.

    ರಾಜಸ್ಥಾನದಲ್ಲಿ ಹಿಂದೂ ವ್ಯಕ್ತಿ ಕನ್ಹಯ್ಯ ಹತ್ಯೆ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇದು ಇಡೀ ದೇಶ ತಲೆ ತಗ್ಗಿಸುವಂತಹ ವಿಚಾರವಾಗಿದೆ. ಕನ್ಹಯ್ಯ ಲಾಲ್ ಅವರನ್ನು ಆತನ ಅಂಗಡಿಗೆ ನುಗ್ಗಿ ಹಾಡು ಹಗಲೇ ಕೊಲೆ ಮಾಡಿದ್ದಾರೆ. ಕೊಲೆ ಮಾಡಿದ ಆರೋಪಿಗಳಾದ ಮೊಹಮ್ಮದ್‌ ರಿಯಾಜ್ ಮತ್ತು ಅನ್ಸಾರಿಯನ್ನು ಗುಂಡಿಟ್ಟು ಹತ್ಯೆ ಮಾಡಬೇಕು ಎಂದು ಕಿಡಿಕಾರಿದರು. ಇದನ್ನೂ ಓದಿ: ಉದಯಪುರ ಹತ್ಯೆ: ಆರೋಪಿಗಳಿಗೆ ಪಾಕ್ ಮೂಲದ ಉಗ್ರ ಸಂಘಟನೆ ಜೊತೆ ನಂಟು 

    ಕೊಲೆ ಮಾಡಿದ ನಂತರ ವೀಡಿಯೋ ಮಾಡಿ ವಿಕೃತಿ ಮೆರೆದಿದ್ದಾರೆ. ಅಲ್ಲದೆ ಹತ್ಯೆಯ ನಂತರ ವೀಡಿಯೋ ಮಾಡಿ ರಸಲುಲ್ಲಾ ಜಯೆಂಗೆ ಆಪ್ ಕೆ ಲೀಯೇ ಔರ್ ಮರೆಂಗೆ ಆಪ್ ಕೆ ಲಿಯೆ(ನಿಮಗಾಗಿ ಇನ್ನೂ ತುಂಬಾ ಜನ ಸಾಯುತ್ತಾರೆ) ಅಂತ ವೀಡಿಯೋ ಹರಿ ಬಿಟ್ಟಿದ್ದಾರೆ. ಅಲ್ಲದೇ ಪ್ರಧಾನಿ ಮೋದಿ ಅವರನ್ನು ಹತ್ಯೆ ಮಾಡುವುದಾಗಿ ಬೆದರಿಕೆವೊಡ್ಡಿದ್ದಾರೆ ಎಂದು ಅಸಮಾಧಾನಗೊಂಡರು.

    ವೀಡಿಯೋ ಹರಿ ಬಿಟ್ಟು ಮತ್ತೆ ಪರಿಸ್ಥಿತಿ ಉದ್ವಿಗ್ನವಾಗುವಂತೆ ಮಾಡಿದ್ದಾರೆ. ಇಂಥಹ ಕೊಲೆಗಡುಕರು ಇವರು ಐಸಿಸ್‍ನ ಏಜೆಂಟರು. ಇವರನ್ನು ಅರೆಸ್ಟ್ ಮಾಡಿ ಜೈಲಿಗೆ ಹಾಕಿ ಪೋಷಿಸಬಾರದು. ಇವರನ್ನು ಕಂಡಲ್ಲಿ ಗುಂಡಿಟ್ಟು ಹತ್ಯೆ ಮಾಡಬೇಕು ಎಂದು ಆಗ್ರಹಿಸಿದರು.

    ರಾಜಸ್ತಾನದಲ್ಲಿ ಕಾಂಗ್ರೆಸ್ ಸರ್ಕಾರ ಇದೆ. ಅಲ್ಲಿ ಕಾಂಗ್ರೆಸ್ ಮುಸ್ಲಿಮರ ತುಷ್ಠಿಕರಣ ಮಾಡ್ತಿದೆ. ಕಾಂಗ್ರೆಸ್ ಮುಸ್ಲಿಂ ತುಷ್ಠಿಕರಣ ಮಾಡಿದಕ್ಕೆ ಇಂಥಹ ಘಟನೆ ಜರುಗಿದೆ. ಇಂಥಹ ಘಟನೆ ಮತ್ತೆ ಮರುಕಳಿಸಬಾರದು ಅಂದ್ರೆ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ:  ನಾನು ಉದಯಪುರ ಘಟನೆಯನ್ನು ಖಂಡಿಸುತ್ತೇನೆ, ಆರೋಪಿಗಳ ವಿರುದ್ಧ ಕಠಿಣ ಕ್ರಮತೆಗೆದುಕೊಳ್ಳಿ: ಓವೈಸಿ 

    ಒಂದು ವೇಳೆ ಇಂಥಹ ಘಟನೆ ಮತ್ತೆ ಮರುಕಳಿಸಿದ್ರೆ ಅದಕ್ಕೆ ರಾಜ್ಯ ಸರ್ಕಾರವೇ ನೇರ ಹೊಣೆ ಹೊರಬೇಕು. ಈ ಘಟನೆಯಿಂದ ದೇಶದಲ್ಲಿ ಬಹುಸಂಖ್ಯಾತ ಹಿಂದೂಗಳು ಸುರಕ್ಷಿತ ಇಲ್ಲ. ಅದಕ್ಕೆ ಇಂದು ನಡೆದ ಹಿಂದೂ ವ್ಯಕ್ತಿಯ ಕೊಲೆ ಸಾಕ್ಷಿ ಎಂದರು.

    Live Tv