Tag: ಉದಯನಿಧಿ

  • ಉದಯನಿಧಿ ಸ್ಟಾಲಿನ್ ಜೊತೆಗಿನ ಗಾಸಿಪ್: ಸ್ಪಷ್ಟನೆ ನೀಡಿದ ನಟಿ ನಿವೇತಾ

    ಉದಯನಿಧಿ ಸ್ಟಾಲಿನ್ ಜೊತೆಗಿನ ಗಾಸಿಪ್: ಸ್ಪಷ್ಟನೆ ನೀಡಿದ ನಟಿ ನಿವೇತಾ

    ತಮಿಳು ನಟಿ ನಿವೇತಾ ಪೇತುರಾಜ್ ಮೊನ್ನೆಯಷ್ಟೇ ಗಾಸಿಪ್ ಕುರಿತಾಗಿ ಗರಂ ಆಗಿದ್ದರು. ತಮ್ಮನ್ನು ರಾಜಕಾರಣಿ ಉದಯನಿಧಿ ಸ್ಟಾಲಿನ್ (Udayanidhi) ಜೊತೆ ಕೆಟ್ಟದ್ದಾಗಿ ಬಿಂಬಿಸುತ್ತಿರುವುದಕ್ಕೆ ತರಾಟೆಗೆ ತಗೆದುಕೊಂಡಿದ್ದರು. ಇದೀಗ ಸಮಾಧಾನದಿಂದ ಗಾಸಿಪ್ ಕುರಿತಾಗಿ ಸ್ಪಷ್ಟನೆ ನೀಡಿದ್ದಾರೆ. ತಮ್ಮ ಕಷ್ಟದ ದಿನಗಳನ್ನೂ ಅವರು ಹಂಚಿಕೊಂಡಿದ್ದಾರೆ.

    ಮ್ಮ ಸಿನಿಮಾದಲ್ಲಿ ನಟಿಸಿದ್ದ ನಟಿಯೊಬ್ಬರಿಗೆ ರಾಜಕಾರಣಿಯೊಬ್ಬರು ಕೋಟ್ಯಂತರ ಮೌಲ್ಯದ ಫ್ಲ್ಯಾಟ್ ಕೊಡಿಸಿ, ದುಬೈನಲ್ಲಿ ಇಟ್ಟಿದ್ದಾರೆ ಎನ್ನುವ ವಿಚಾರ ತಮಿಳು ಚಿತ್ರರಂಗದಲ್ಲಿ ಭಾರೀ ಸದ್ದು ಮಾಡಿತ್ತು. ನಟಿ ನಿವೇತಾ ಪೇತುರಾಜ್, ಆ ರಾಜಕಾರಣಿಯಿಂದ (Politician) ಸಾಕಷ್ಟು ದುಬಾರಿ ಗಿಫ್ಟ್ ಗಳನ್ನು ಪಡೆದುಕೊಂಡಿದ್ದಾರೆ ಎಂದೂ ಹೇಳಲಾಗಿತ್ತು. ಆ ರಾಜಕಾರಣಿ ಬೇರೆ ಯಾರೂ ಅಲ್ಲ, ಉದಯನಿಧಿ ಸ್ಟಾಲಿನ್ ಎಂದೂ ತಳುಕು ಹಾಕಲಾಗಿತ್ತು.

    ಸೋಷಿಯಲ್ ಮೀಡಿಯಾದಲ್ಲಿ ಈ ಸುದ್ದಿ ಸಾಕಷ್ಟು ಹರಿದಾಡಿದ್ದರಿಂದ ನಿವೇತಾ ಪೇತುರಾಜ್ (Nivetha Pethuraj) ಗರಂ ಆಗಿದ್ದರು. ಈ ಸುದ್ದಿಯನ್ನು ಹರಡುತ್ತಿರುವವರಿಗೆ ವಾರ್ನ್ ಕೂಡ ನೀಡಿದ್ದರು. ನಾನು 16ನೇ ವಯಸ್ಸಿನಲ್ಲೇ ದುಡಿಯಲು ಪ್ರಾರಂಭಿಸಿದವಳು. ಅತ್ಯಂತ ಸುಂಸ್ಕೃತ ಮನೆತನದಿಂದ ಬಂದವಳು. ದುಡ್ಡು ಮಾಡಲು ಅಡ್ಡ ದಾರಿ ಹಿಡಿಯುವವಳು ಅಲ್ಲ. ಈ ಸುದ್ದಿಯನ್ನು ಹಬ್ಬಿಸುವಾಗ ಎಚ್ಚರವಿರಲಿ ಎಂದಿದ್ದರು ನಿವೇತಾ.

    ತಮ್ಮ ಕುಟುಂಬ ಹತ್ತಾರು ವರ್ಷಗಳಿಂದ ದುಬೈನಲ್ಲಿ (Dubai) ನೆಲೆಸಿದೆ. ನಾನೂ ಕೂಡ ಸಂಪಾದನೆ ಮಾಡಿಕೊಂಡು ಬಂದಿದ್ದೇನೆ. ಅದಕ್ಕಾಗಿ ಈವರೆಗೂ ಯಾವುದೇ ಅಡ್ಡದಾರಿ ತುಳಿದಿಲ್ಲ. ಅದರ ಅವಶ್ಯಕತೆಯೂ ತಮಗಿಲ್ಲ. ನಾನು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಹಾಗಾಗಿ ಇಂತಹ ವಿಷಯಗಳು ಬಂದಾಗ ನೋವಾಗತ್ತೆ ಎನ್ನುವುದು ನಿವೇತಾ ಮಾತು. ತಮಗೆ ಯಾವುದೇ ರಾಜಕಾರಣಿಯ ಜೊತೆ ನಂಟಿಲ್ಲ. ಅವರೊಂದಿಗೆ ಕೆಲಸ ಮಾಡಿದ್ದೇನೆ. ಅದು ಆಯಾ ಸಿನಿಮಾಗೆ ಮಾತ್ರ ಸಿಮೀತ. ಅದರಾಚೆ ಯಾವ ಸ್ನೇಹವೂ ಇಲ್ಲ ಎನ್ನುವುದನ್ನು ಅವರು ಸ್ಪಷ್ಟ ಪಡಿಸಿದ್ದಾರೆ.

    ಯಾರಿದು ನಿವೇತಾ?

    ತೆಲುಗು ಮತ್ತು ತಮಿಳು ನಟಿ ನಿವೇತಾ ಪೇತುರಾಜ್. ತಮಿಳಿನ ಒರು ನಾಲ್ ಕೂತು ಸಿನಿಮಾದ ಮೂಲಕ  2016ರಲ್ಲಿ ಸಿನಿಮಾ ರಂಗಕ್ಕೆ ಪ್ರವೇಶ ಮಾಡಿದರು. ಮೆಂಟಲ್ ಮದಿಲೋ ಚಿತ್ರದಿಂದ ತೆಲುಗು ಸಿನಿಮಾ ರಂಗದಲ್ಲೂ ತಮ್ಮನ್ನು ತಾವು ಗುರುತಿಸಿಕೊಂಡರು.

     

    ತಮಿಳು ನಾಡಿನ ಮಧುರೈನಲ್ಲಿ ಜನಿಸಿದರೂ, ನಂತರದ ದಿನಗಳಲ್ಲಿ ಕುಟುಂಬ ಸಮೇತ ಅವರು ದುಬೈನಲ್ಲಿ ವಾಸವಿದ್ದಾರೆ. ಹದಿನೆಂಟಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ನಿವೇತಾ, ಚಿತ್ರಲಹರಿ, ಕೆಂಪು, ಪಾಮಗ್, ಬ್ಲಡಿ ಮೇರಿ ಸೇರಿದಂತೆ ಅನೇಕ ಚಿತ್ರಗಳಲ್ಲಿ ಇವರು ನಾಯಕಿಯಾಗಿ ನಟಿಸಿದ್ದಾರೆ.  ಹಿಂದಿಯಲ್ಲಿ ಕಾಲಾ ಧಾರಾವಾಹಿಯಲ್ಲೂ ಇವರು ಕಾಣಿಸಿಕೊಂಡಿದ್ದಾರೆ.

  • ಸಿಎಂ ಸ್ಟಾಲಿನ್ ಪುತ್ರ ತಮಿಳುನಾಡಿನ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ

    ಸಿಎಂ ಸ್ಟಾಲಿನ್ ಪುತ್ರ ತಮಿಳುನಾಡಿನ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ

    ಚೆನ್ನೈ: ತಮಿಳುನಾಡು (Tamil Nadu) ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ (MK Stalin) ಅವರ ಹಿರಿಯ ಪುತ್ರ ಉದಯನಿಧಿ (Udhayanidhi) ಇಂದು ಸಂಪುಟ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

    ತಮಿಳು ನಾಡಿನ ಡಿಎಂಕೆ ಸರ್ಕಾರ ಉದಯನಿಧಿ ಅವರನ್ನು ರಾಜ್ಯದ ನೂತನ ಕ್ರೀಡಾ ಸಚಿವರನ್ನಾಗಿ ನೇಮಿಸಲಾಗಿದೆ. ಉದಯನಿಧಿ ಸ್ಟಾಲಿನ್ ಅವರು ಚೆಪಾಕ್, ತಿರುವಲ್ಲಿಕೇಣಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದಾರೆ ಹಾಗೂ ಡಿಎಂಕೆ ಯುವ ವಿಭಾಗದ ಕಾರ್ಯದರ್ಶಿಯೂ ಆಗಿದ್ದಾರೆ. ಉದಯನಿಧಿ ಅವರಿಗೆ ತಮಿಳುನಾಡು ರಾಜ್ಯಪಾಲ ಆರ್‌.ಎನ್. ರವಿ ಅವರು ರಾಜಭವನದಲ್ಲಿ ಪ್ರಮಾಣ ವಚನ ಬೋಧಿಸಿದರು. ಉದಯನಿಧಿ ಸ್ಟಾಲಿನ್ ಅವರನ್ನು 2019ರಲ್ಲಿ ಯುವ ವಿಭಾಗದ ಕಾರ್ಯದರ್ಶಿಯಾಗಿ ನೇಮಿಸಲಾಗಿತ್ತು.

    ಉದಯನಿಧಿ ಹಲವಾರು ತಮಿಳು ಚಿತ್ರಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಕಳೆದ ವರ್ಷ ತಮಿಳುನಾಡು ಚುನಾವಣೆಯಲ್ಲಿ ಸ್ಟಾರ್ ಪ್ರಚಾರಕರಾಗಿ ಹೊರಹೊಮ್ಮಿದ್ದರು. ಚುನಾವಣಾ ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ವಿರುದ್ಧ ವಾಗ್ದಾಳಿ ನಡೆಸಿ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದರು. ಇದನ್ನೂ ಓದಿ: ಭಾರತ್‌ ಜೋಡೋ ಯಾತ್ರೆಯಲ್ಲಿ RBI ಮಾಜಿ ಗವರ್ನರ್‌ ಭಾಗಿ

    2018ರಲ್ಲಿ ತಂದೆ ಎಂ. ಕರುಣಾನಿಧಿ ಅವರ ನಿಧನದ ನಂತರ ಸ್ಟಾಲಿನ್ ಡಿಎಂಕೆ ಅಧ್ಯಕ್ಷರಾದರು. 2021ರ ವಿಧಾನಸಭಾ ಚುನಾವಣೆಯಲ್ಲಿ ಡಿಎಂಕೆ ನೇತೃತ್ವದ ಒಕ್ಕೂಟವು ಗೆದ್ದ ನಂತರ ಅವರು ಮುಖ್ಯಮಂತ್ರಿಯಾದರು. ಇದನ್ನೂ ಓದಿ: ಕೋಮುವಾದಿ ಪಕ್ಷ ಮಣಿಸಲು ಕಾಂಗ್ರೆಸ್‌ ಸೇರಲು ನಿರ್ಧಾರ – ವೈಎಸ್‌ವಿ ದತ್ತ

    Live Tv
    [brid partner=56869869 player=32851 video=960834 autoplay=true]

  • ಮೂರೂವರೆ ದಶಕದ ನಂತರ ಒಂದಾದ ಕಮಲ್ ಹಾಸನ್ ಮತ್ತು ಮಣಿರತ್ನಂ

    ಮೂರೂವರೆ ದಶಕದ ನಂತರ ಒಂದಾದ ಕಮಲ್ ಹಾಸನ್ ಮತ್ತು ಮಣಿರತ್ನಂ

    ನಾಯಗನ್ ಸಿನಿಮಾದ ನಂತರ ಕಮಲ್ ಹಾಸನ್ (Kamal Haasan) ಮತ್ತು ಮಣಿರತ್ನಂ ಮತ್ತೆ ಒಟ್ಟಾಗಿ ಕೆಲಸ ಮಾಡಬೇಕು ಎನ್ನುವುದು ಭಾರತೀಯ ಸಿನಿಮಾ ರಂಗದ ಕನಸಾಗಿತ್ತು. 1987ರಲ್ಲಿ ತೆರೆಕಂಡ ಈ ಸಿನಿಮಾ ಬಾಕ್ಸ್ ಆಫೀಸ್ ಅನ್ನೇ ಶೇಕ್ ಮಾಡಿತ್ತು. ಅಲ್ಲದೇ ಇಂಥದ್ದೊಂದು ಸಿನಿಮಾ ಇದೇ ಮೊದಲ ಬಾರಿಗೆ ಬಂದಿದೆಯೇನೋ ಎನ್ನುವಂತೆ ಪ್ರತಿಕ್ರಿಯೆ ಸಿಕ್ಕಿತ್ತು. ಈ ಸಿನಿಮಾ ಬಾಕ್ಸ್ ಆಫೀಸ್ ತುಂಬಿಸಿದ್ದು ಮಾತ್ರವಲ್ಲ, ರಾಷ್ಟ್ರ ಪ್ರಶಸ್ತಿಯನ್ನೂ ತಮ್ಮ ಅಭಿನಯಕ್ಕಾಗಿ ಪಡೆದುಕೊಂಡಿದ್ದರು ಕಮಲ್.

    ಆನಂತರ ಕಮಲ್ ಮತ್ತು ಮಣಿರತ್ನಂ ಮತ್ತೆ ಒಟ್ಟಾಗಿ ಕೆಲಸ ಮಾಡುವುದಕ್ಕೆ ಆಗಲೇ ಇಲ್ಲ. ನಾಯಗನ್ ಸಿನಿಮಾ 175ಕ್ಕೂ ಹೆಚ್ಚು ದಿನಗಳ ಕಾಲ ಪ್ರದರ್ಶನ ಕಂಡರೂ, ಮತ್ತೆ ಕಾಂಬಿನೇಷನ್ ನಲ್ಲಿ ಸಿನಿಮಾ ಬರಲೇ ಇಲ್ಲ. ಹಾಗಾಗಿ ಸಹಜವಾಗಿಯೇ ಈ ಜೋಡಿಯಲ್ಲಿ ಮತ್ತೊಂದು ಸಿನಿಮಾ ಬರಬೇಕು ಎನ್ನುವುದು ಅಭಿಮಾನಿಗಳ ಆಸೆಯಾಗಿತ್ತು. ಬರೋಬ್ಬರಿ 35 ವರ್ಷಗಳ ನಂತರ ಆ ಆಸೆ ಈಡೇರುತ್ತಿದೆ. ಮಣಿರತ್ನಂ (Mani Ratnam) ಮತ್ತು ಕಮಲ್ ಹಾಸನ್ ಇದೀಗ ಜೊತೆಯಾಗಿ ಕೆಲಸ ಮಾಡಲಿದ್ದಾರೆ. ಈ ಸಿನಿಮಾವನ್ನು  ಉದಯನಿಧಿ  (Udayanidhi) ನಿರ್ಮಾಣ ಮಾಡಲಿದ್ದು, ಎ.ಆರ್.ರೆಹಮಾನ್ ಅವರ ಸಂಗೀತ ಸಂಯೋಜನೆಯಲ್ಲಿ ಹಾಡುಗಳು ಮೂಡಿ ಬರಲಿವೆ.

    ಇದು ಕಮಲ್ ಹಾಸನ್ ಅವರ 234ನೇ ಸಿನಿಮಾವಾಗಿದ್ದು, 2024ರಲ್ಲಿ ಈ ಸಿನಿಮಾ ತೆರಿಗೆ ಬರಲಿದೆ ಎಂದು ಅಂದಾಜಿಸಲಾಗಿದೆ. ಸತತ ಸೋಲಿನ ಸುಳಿಯಲ್ಲೇ ಸಿಲುಕುತ್ತಿದ್ದ ಕಮಲ್ ಹಾಸನ್, ಏಜೆಂಟ್ ವಿಕ್ರಮ್ ಸಿನಿಮಾದ ಮೂಲಕ ಮತ್ತೆ ಅಬ್ಬರಿಸಿದ್ದಾರೆ. ಈ ಸಿನಿಮಾ ಕಮಲ್ ಅವರ  ಅಷ್ಟೂ ಸಾಲ ತೀರಿಸಿದೆ ಎನ್ನಲಾಗುತ್ತಿದೆ. ಇತ್ತ ಮಣಿರತ್ನಂ ಕೂಡ ಪೊನ್ನಿಯಿನ್ ಸೆಲ್ವನ್ ಸಿನಿಮಾದ ಮೂಲಕ ಮತ್ತೊಂದು ಹಿಟ್ ಪಡೆದಿದ್ದಾರೆ. ಈ ಹಿಟ್ ಜೋಡಿಯಿಂದ ಮತ್ತೊಂದು ಹಿಟ್ ಸಿನಿಮಾ ಬರಲಿದೆ ಎನ್ನುವುದು ಇಂಡಸ್ಟ್ರಿ ಕನಸು.

    Live Tv
    [brid partner=56869869 player=32851 video=960834 autoplay=true]