Tag: ಉದಯಗಿರಿ ಪೊಲೀಸ್‌

  • ಮೊಬೈಲ್‌ ವಿಚಾರಕ್ಕೆ ಗಲಾಟೆ – ತಂದೆ ಎದೆಗೆ ಚೂರಿ ಹಾಕಿ ಕೊಂದ ಮಗ

    ಮೊಬೈಲ್‌ ವಿಚಾರಕ್ಕೆ ಗಲಾಟೆ – ತಂದೆ ಎದೆಗೆ ಚೂರಿ ಹಾಕಿ ಕೊಂದ ಮಗ

    ಮೈಸೂರು: ಮೊಬೈಲ್‌ (Mobile) ವಿಚಾರಕ್ಕೆ ನಡೆದ ಗಲಾಟೆಯೊಂದು ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಮೈಸೂರಿನಲ್ಲಿ (Mysuru) ನಡೆದಿದೆ. 2ನೇ ಹೆಂಡತಿಯ ಮಗ ತಂದೆ ಎದೆಗೆ ಚೂರಿ ಹಾಕಿ ಕೊಂದು ಪರಾರಿಯಾಗಿದ್ದಾನೆ. ಇದನ್ನೂ ಓದಿ: ಬೀದಿ ಕಾಮಣ್ಣ ಎಸ್ಕೇಪ್‌ ಆಗಿದ್ದರ ಹಿಂದಿದೆ ಲವ್‌ ಕಹಾನಿ – ಆರೋಪಿಗೆ ಹೋಮ್‌ ಗಾರ್ಡ್ ಪ್ರೇಯಸಿ ಸಾಥ್

    ಭಾನುವಾರ ತಡರಾತ್ರಿ ಮೈಸೂರಿನ ಶಾಂತಿನಗರದಲ್ಲಿ ಘಟನೆ ನಡೆದಿದೆ. ಸೈಯದ್ ಮುತ್ತಿಫ್ (35) ಕೊಲೆಯಾದ ತಂದೆ, ಮತೀನ್ (21) ಕೊಲೆ ಮಾಡಿದ ಮಗ. ಇದನ್ನೂ ಓದಿ: ಹುಬ್ಬಳ್ಳಿ ಕೃತ್ಯ ಮಾಸುವ ಮುನ್ನ ಬೀದರ್‌ನಲ್ಲಿ ಘಟನೆ – ಗೇಟ್ ಬಳಿ ಆಟವಾಡ್ತಿದ್ದ ಬಾಲಕಿ ಅಪಹರಣಕ್ಕೆ ಯತ್ನಿಸಿದ ಯುವಕ

    2ನೇ ಹೆಂಡತಿ ಪುತ್ರನಾದ ಮತೀನ್‌ ಮನೆಗೆ ಬರುವಂತೆ ಕರೆ ಮಾಡಿದ್ದಾನೆ. ಆದ್ರೆ ತಂದೆ ಮನೆಗೆ ಬರ್ತಿದಂತೆ ಎದೆಗೆ ಚೂರಿಯಿಂದ ಚುಚ್ಚಿ ಕೊಲೆ ಮಾಡಿ, ಅಲ್ಲಿಂದ ಎಸ್ಕೇಪ್‌ ಆಗಿದ್ದಾನೆ. ಈ ಸಂಬಂಧ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಶಿವಮೊಗ್ಗದ ಲಾಡ್ಜ್‌ನಲ್ಲಿ ಹುಬ್ಬಳ್ಳಿ ಮೂಲದ ಉದ್ಯಮಿ ಅನುಮಾನಾಸ್ಪದ ಸಾವು

  • ಮುಸ್ಲಿಮರು ಪುರುಸೊತ್ತಿಲ್ಲದೆ ಮಕ್ಕಳು ಹುಟ್ಟಿಸುತ್ತಾರೆ ಅನ್ನೋದು ಪ್ರಚೋದನೆನಾ? – ಪ್ರತಾಪ್‌ ಸಿಂಹ

    ಮುಸ್ಲಿಮರು ಪುರುಸೊತ್ತಿಲ್ಲದೆ ಮಕ್ಕಳು ಹುಟ್ಟಿಸುತ್ತಾರೆ ಅನ್ನೋದು ಪ್ರಚೋದನೆನಾ? – ಪ್ರತಾಪ್‌ ಸಿಂಹ

    – ಸೆಲೆಬ್ರಿಟಿಗಳೇ ಕಂಟ್ರೋಲ್ ಇಲ್ಲದೇ ಮಕ್ಕಳು ಹುಟ್ಟಿಸುತ್ತಿದ್ದಾರೆ
    – ಶಾರುಖ್‌ಗೆ 3, ಸೈಫ್ ಅಲಿ ಖಾನ್‌ಗೆ 4 ಮಕ್ಕಳು; ಮಾಜಿ ಸಂಸದ

    ಮೈಸೂರು: ಉದಯಗಿರಿ ಗಲಭೆ ನಡೆದ ದಿನ ನಾನು ಪೊಲೀಸರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದ್ದೇನೆಯೇ ಹೊರತು ಪ್ರಚೋದನೆ ನೀಡಿಲ್ಲ. ಒಬ್ಬ ಮುಲ್ಲಾ ಪ್ರಚೋದನೆ ಮಾಡಿದ್ರೂ ಯಾಕೆ ಅರೆಸ್ಟ್ ಮಾಡಿಲ್ಲ ಅಂತ ಕೇಳಿದ್ದೇನೆ. ಮುಸ್ಲಿಮರು (Muslims) ಪುರುಸೊತ್ತಿಲ್ಲದೇ ಮಕ್ಕಳು ಹುಟ್ಟಿಸುತ್ತಾರೆ ಅಂದಿದ್ದೇನೆ ಇದು ಪ್ರಚೋದನಕಾರಿನಾ? ಎಂದು ಮಾಜಿ ಸಂಸದ ಪ್ರತಾಪ್‌ ಸಿಂಹ (Pratap Simha) ಪ್ರಶ್ನೆ ಮಾಡಿದ್ದಾರೆ.

    ಮೈಸೂರಿನಲ್ಲಿ (Mysuru) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗೆ ಸಂಬಂಧ ಪ್ರತಿಕ್ರಿಯೆ ನೀಡಿದರು. ಇದನ್ನೂ ಓದಿ: ಬಿಜೆಪಿ ರಾಜ್ಯಾಧ್ಯಕ್ಷರನ್ನ ಭೇಟಿಯಾದ ಪ್ರತಾಪ ಸಿಂಹ – ಕುತೂಹಲ ಮೂಡಿಸಿದ ವಿಜಯೇಂದ್ರ ಭೇಟಿ

    ಪುಂಡ ಮುಸ್ಲಿಮರು ಸಾವಿರಾರು ಸಂಖ್ಯೆಯಲ್ಲಿ ಸೇರಿ ಪೊಲೀಸರ ಮೇಲೆ ಆಕ್ರಮಣ ಮಾಡಿದ್ರು. ಈ ಘಟನೆ ನಡೆದ ಬೆನ್ನಲ್ಲೇ ಪೊಲೀಸ್ ಠಾಣೆಗೆ ಭೇಟಿ ನೀಡಿ ಪೊಲೀಸರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದೆವು. ಇದು ಪ್ರಚೋದನಕಾರಿಯಾ? ಸಿದ್ದರಾಮಯ್ಯ ಸರ್ಕಾರ ಬಂದ ನಂತರ ನನ್ನ ಮೇಲೆ ಹಲವು ಎಫ್‌ಐಆರ್‌ (FIR) ಮಾಡಿದ್ದಾರೆ. ಈಗ ಉದಯಗಿರಿ ಠಾಣೆಯಲ್ಲಿ ಆಗಿದೆ. ಈ ರೀತಿ ಸಾಲು ಸಾಲು ಎಫ್‌ಐಆರ್‌ ಹಾಕಿ ಆತ್ಮಸ್ಥೈರ್ಯ ಕುಗ್ಗಿಸಬೇಕು, ಮನೆಯಿಂದ ಹೊರಬರಬಾರದು ಅಂತ ಉದ್ದೇಶದಿಂದ ಮಾಡ್ತಾ ಇದ್ದಾರೆ ಎಂದು ಕಿಡಿ ಕಾರಿದರು. ಇದನ್ನೂ ಓದಿ: ಮಹಾ ಕುಂಭಮೇಳ: ತ್ರಿವೇಣಿಯಲ್ಲಿ ಬಾಲಿವುಡ್ ನಟ ಅಕ್ಷಯ್ ಕುಮಾರ್ ಪುಣ್ಯಸ್ನಾನ

    ಆ ದಿನ ನಾನು ಪೊಲೀಸರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದ್ದೇನೆಯೇ ಹೊರತು ಪ್ರಚೋದನೆ ಮಾಡಿಲ್ಲ. ಮುಸ್ಲಿಮರು ಪುರುಸೊತ್ತಿಲ್ಲದೇ ಮಕ್ಕಳು ಹುಟ್ಟಿಸುತ್ತಾರೆ ಅಂದಿದ್ದೇನೆ ಇದು ಪ್ರಚೋದನಕಾರಿನಾ? ಅವರ ಜನಸಂಖ್ಯೆ ನೋಡಿದ್ರೆ ಗೊತ್ತಾಗುತ್ತೆ. ನಿಮ್ಮ ಮನೆಯಲ್ಲಿ 1-2 ಮಕ್ಕಳಿರೋ ಎಷ್ಟು ಜನ ಇದ್ದಾರೆ ಹೇಳಿ. ನಾನು ಸತ್ಯ ಹೇಳಿದ್ದೇನೆ. ಶಾರುಖ್‌ ಖಾನ್‌ಗೆ ಮೂರು ಮಕ್ಕಳಿದ್ದಾರೆ. ಸೈಫ್ ಅಲಿ ಖಾನ್‌ಗೆ 4 ಮಕ್ಕಳಿದ್ದಾರೆ, ನಿಮ್ಮ ಸೆಲೆಬ್ರಿಟಿಗಳೇ ಕಂಟ್ರೋಲ್ ಇಲ್ಲದೆ ಮಕ್ಕಳು ಹುಟ್ಟಿಸುತ್ತಿದ್ದಾರೆ. ಜನೋತ್ಪಾದನೆಯಲ್ಲಿ ತೊಡಗಿದ್ದೀರಿ ಎಂದು ಹೇಳಿದ್ದೇನೆ. ಮುಸ್ಲಿಮರು ಮಕ್ಕಳನ್ನ ದೇವರು ಕೊಟ್ಟ ಅಂತ ಹೇಳ್ತೀರಾ.. ನಿಮ್ಮಮಕ್ಕಳನ್ನ ದೇವರೆ ನೋಡಿಕೊಳ್ಳಲಿ.. ಸರ್ಕಾರ ಯಾಕೆ ನೋಡಿಕೊಳ್ಳಬೇಕು? ಸರ್ಕಾರ ಯಾಕೆ ಪುಕ್ಕಟೆ ನೋಡಿಕೊಳ್ಳಬೇಕು ಎಂದು ಲೇವಡಿ ಮಾಡಿದ್ದಾರೆ.

    ಅತಿಹೆಚ್ಚು ತೆರಿಗೆ ಕಟ್ಟುವವರು ಹಿಂದೂಗಳು. ಆದ್ರೆ ಸೌಲಭ್ಯ ನಿಮಗೆ ಸಿಗುತ್ತಿದೆ. ಸಂಖ್ಯೆ ಬಲ ಹೆಚ್ಚು ಮಾಡಿ ತೊಂದರೆ ಕೊಡ್ತಿದ್ದೀರಿ. ಭಯದ ವಾತಾವರಣ ಸೃಷ್ಟಿ ಮಾಡಿಸುತ್ತಿದ್ದೀರಿ ಅಂತ ಹೇಳಿದ್ದೇನೆ. ಸ್ವಾತಂತ್ರ‍್ಯ ಬಂದಾಗ ಜನಸಂಖ್ಯೆ ಎಷ್ಟಿತ್ತು.. ಈಗ ಎಷ್ಟಿದ್ದೀರಿ? ಪಾಕಿಸ್ತಾನ, ಬಾಂಗ್ಲಾದೇಶದಲ್ಲಿ ಹಿಂದೂಗಳ ಜನಸಂಖ್ಯೆ ಕಡಿಮೆಯಾಗಿದೆ. ಸತ್ಯ ಹೇಳಿರೋದು ಪ್ರಚೋದನೆ ಹೇಗಾಗುತ್ತೆ? ನಿಯಂತ್ರಣದಿಂದ ಮಕ್ಕಳು ಹುಟ್ಟಿಸಿ ಅವರಿಗೆ ವಿದ್ಯಾಭ್ಯಾಸ ಕೊಡಿಸಿ ಅಂತ ಕಿವಿ ಮಾತು ಹೇಳಿದ್ದೇನೆ. ನಿಮ್ಮ ಶಕ್ತಿಗನುಸಾರವಾಗಿ ಮಕ್ಕಳು ಹುಟ್ಟಿಸಿ ಅಂತ ಹೇಳಿದ್ದೇನೆ. ಇದು ಪ್ರಚೋದನಕಾರಿ ಹೇಳಿಕೆಯಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ. ಇದನ್ನೂ ಓದಿ: ಬೊಜ್ಜು ವಿರುದ್ಧ ಅಭಿಯಾನ – ಒಮರ್ ಅಬ್ದುಲ್ಲಾ, ಆನಂದ್ ಮಹೀಂದ್ರಾ ಸೇರಿ 10 ಗಣ್ಯರ ನಾಮ ನಿರ್ದೇಶನ ಮಾಡಿದ ಮೋದಿ