Tag: ಉದಯಗಿರಿ

  • ಉದಯಗಿರಿ ಗಲಭೆ ಕಿಚ್ಚು – ಇಂದು ಮಧ್ಯರಾತ್ರಿವರೆಗೆ ಮೈಸೂರಿನಲ್ಲಿ ನಿಷೇಧಾಜ್ಞೆ

    ಉದಯಗಿರಿ ಗಲಭೆ ಕಿಚ್ಚು – ಇಂದು ಮಧ್ಯರಾತ್ರಿವರೆಗೆ ಮೈಸೂರಿನಲ್ಲಿ ನಿಷೇಧಾಜ್ಞೆ

    ಮೈಸೂರು: ಉದಯಗಿರಿ (Udayagiri) ಪೊಲೀಸ್ ಠಾಣೆ ಮೇಲೆ ಕಲ್ಲು ತೂರಿದ ಪ್ರಕರಣದ ಕಿಚ್ಚು ಇನ್ನೂ ಆರಿಲ್ಲ. ಪೊಲೀಸರ ತನಿಖೆ ಇನ್ನೂ ಸಾಗುತ್ತಿದೆ. ಈ ನಡುವೆಯೇ ಇಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಸೇರಿದಂತೆ ಹಲವು ಹಿಂದೂ ಸಂಘಟನೆಗಳು ಜನ ಜಾಗೃತಿ ಸಮಾವೇಶ ನಡೆಸಲು ನಿರ್ಧರಿಸಿವೆ. ಕೌಂಟರ್ ಆಗಿ ದಲಿತ ಸಂಘಟನೆಗಳು ಮಾನವೀಯ ಚಳವಳಿ ಆಯೋಜಿನೆ ಮಾಡಿವೆ. ಆದರೆ ಪೊಲೀಸರು ಯಾವುದೇ ಅನುಮತಿ ನೀಡಲು ನಿರಾಕರಿಸಿದ್ದಾರೆ.

    ಎರಡೂ ಸಮಾವೇಶಕ್ಕೆ ಅನುಮತಿ ನೀಡಿದರೆ ಗಲಾಟೆ ಆಗುವ ಸಾಧ್ಯತೆ ಇರುವ ಕಾರಣ ಮೈಸೂರು ಪೊಲೀಸರು ಅಲರ್ಟ್ ಆಗಿದ್ದಾರೆ. ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್ 163 ಅಡಿ ನಿಷೇಧಾಜ್ಞೆ ಜಾರಿ ಮಾಡಿ ಆದೇಶ ಹೊರಡಿಸಿದ್ದಾರೆ. ಈ ನಿಷೇಧಾಜ್ಞೆ ಭಾನುವಾರ ಮಧ್ಯರಾತ್ರಿಯಿಂದ ಇಂದು (ಸೋಮವಾರ) ಮಧ್ಯರಾತ್ರಿವರೆಗೂ ಜಾರಿಯಲ್ಲಿರಲಿದೆ. ಇದನ್ನೂ ಓದಿ: ಪಾಕ್‌ ತಂಡದ ನಸೀಮ್‌ ಷಾ ಶೂ ಲೇಸ್‌ ಕಟ್ಟಿದ ಕಿಂಗ್‌ ಕೊಹ್ಲಿ – ವಿರಾಟ್‌ ಸರಳತೆಗೆ ಸಲಾಂ ಹೊಡೆದ ಫ್ಯಾನ್ಸ್‌

    ಉದಯಗಿರಿ ಪೊಲೀಸ್ ಠಾಣೆ ಗಲಭೆ ಪ್ರಕರಣದ ಪೊಲೀಸರಿಗೆ ದೊಡ್ಡ ಕಗ್ಗಂಟಾಗಿದೆ. ಪೊಲೀಸರಿಗೆ ಕಲ್ಲು ತೂರಿದ 980 ಪುಂಡರು ಎಲ್ಲಿದ್ದಾರೆ ಅನ್ನೋದೆ ದೊಡ್ಡ ಪ್ರಶ್ನೆಯಾಗಿದೆ. ಘಟನೆ ನಡೆದು 13 ದಿನ ಕಳೆದರೂ ಪುಂಡರು ಪೊಲೀಸರ ಕೈಗೆ ಸಿಕ್ಕಿಲ್ಲ. ಮೌಲ್ವಿಯನ್ನು ಮಾತ್ರ ಜೈಲಿಗೆ ಕಳುಹಿಸಿ ಉದಯಗಿರಿ ಪ್ರಕರಣದಲ್ಲಿ ಮೈಸೂರು ಪೊಲೀಸರು ತಣ್ಣಗಾದ್ರಾ ಅನ್ನೋ ಅನುಮಾನ ಶುರುವಾಗಿದೆ. ಇದನ್ನೂ ಓದಿ: ಶಹಬ್ಬಾಶ್ ಹುಡುಗ್ರಾ: ಪಾಕ್‌ ವಿರುದ್ಧ ಗೆದ್ದ ಟೀಂ ಇಂಡಿಯಾಗೆ ಡಿಕೆಶಿ ಅಭಿನಂದನೆ

    ಉದಯಗಿರಿ ಠಾಣೆ ಮೇಲೆ ಸಾವಿರಕ್ಕೂ ಹೆಚ್ಚು ಜನ ಕಲ್ಲು ತೂರಾಟ ನಡೆಸಿದ್ದರು ಎನ್ನಲಾಗುತ್ತಿತ್ತು. ಅದನ್ನು ಎಫ್‌ಐಆರ್‌ನಲ್ಲೂ ಉಲ್ಲೇಖಿಸಲಾಗಿತ್ತು. ಸಿಸಿಟಿವಿಯಲ್ಲಿ ಇರುವ ಅಷ್ಟೂ ಜನ ಠಾಣೆ ಧ್ವಂಸಕ್ಕೆ ಯತ್ನಿಸಿದ್ದರು ಎಂದು ಆರೋಪಿಸಲಾಗಿತ್ತು. ಆದರೆ ಸಿಸಿಟಿವಿಯಲ್ಲಿ ಇರೋ ಅಷ್ಟು ಪುಂಡರ ಬಂಧನ ಯಾವಾಗ ಅನ್ನೋ ಕೂಗು ಕೇಳಿಬಂದಿದೆ. ಗಲಭೆಗೆ ಪ್ರಚೋದಿಸಿದ ಮೌಲ್ವಿ ಮಾತ್ರ ಜೈಲಿಗೆ ಕಳುಹಿಸಿ ಪೊಲೀಸ್ರು ಸುಮ್ಮನಾದ್ರಾ? ಅಥವಾ ಪೊಲೀಸರ ಮೇಲೆ ಯಾರಾದ್ರೂ ಒತ್ತಡ ತಂದ್ರಾ ಅನ್ನೋ ಅನುಮಾನ ಮೂಡಿದೆ. ಇದನ್ನೂ ಓದಿ: ಮಂತ್ರಾಲಯಕ್ಕೆ ಶಿವಣ್ಣ ಭೇಟಿ – ರಾಯರ ವೃಂದಾವನಕ್ಕೆ ವಿಶೇಷ ಪೂಜೆ

  • ಮೈಸೂರಿನ ಉದಯಗಿರಿ ಠಾಣೆ ಗಲಭೆ ಕೇಸ್‌ – ಪ್ರಚೋದನೆ ನೀಡಿದ್ದ ಮೌಲ್ವಿ 11 ದಿನಗಳ ಬಳಿಕ ಅರೆಸ್ಟ್‌

    ಮೈಸೂರಿನ ಉದಯಗಿರಿ ಠಾಣೆ ಗಲಭೆ ಕೇಸ್‌ – ಪ್ರಚೋದನೆ ನೀಡಿದ್ದ ಮೌಲ್ವಿ 11 ದಿನಗಳ ಬಳಿಕ ಅರೆಸ್ಟ್‌

    ಮೈಸೂರು: ಉದಯಗಿರಿ ಪೊಲೀಸ್ ಠಾಣೆ (Udayagiri Police Station) ಮೇಲೆ ನಡೆದ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಚೋದನಕಾರಿ ಭಾಷಣ ಮಾಡಿದ್ದ ಮೌಲ್ವಿ ಮುಫ್ತಿ ಮುಸ್ತಾಕ್ ಮಕ್ಬೋಲಿಯನ್ನ ಸಿಸಿಬಿ ಪೊಲೀಸರು (CCB Police) ಕೊನೆಗೂ ಬಂಧಿಸಿದ್ದಾರೆ.

    ಗಲಭೆ ನಡೆದ 11 ದಿನಗಳ ಬಳಿಕ ಮೌಲ್ವಿಯನ್ನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಈ ನಡುವೆ ಮುಂಜಾಗ್ರತ ಕ್ರಮವಾಗಿ ಉದಯಗಿರಿ ಪೊಲೀಸ್ ಠಾಣೆಗೆ ಬಿಗಿ ಬಂದೂಬಸ್ತ್ ನಿಯೋಜಿಸಲಾಗಿದೆ. ಇದನ್ನೂ ಓದಿ: ಚಿನ್ನದಂಗಡಿ ದೋಚಿ ಸಲೀಸಾಗಿ ನಾಕಬಂದಿ ದಾಟಿದ ಕಳ್ಳರು – ಮೂವರು ಪೊಲೀಸರು ಸಸ್ಪೆಂಡ್

    ಉದ್ರಿಕ್ತ ಭಾಷಣ ಮಾಡಿದ್ದ ಮೌಲ್ವಿ:
    ಇದೇ ಫೆ.10ರಂದು ಉದಯಗಿರಿ (Udayagiri) ಠಾಣೆ ಮೇಲೆ ಮುಸ್ಲಿಂ ಯುವಕರ ಗುಂಪು ಕಲ್ಲು ತೂರಾಟ ನಡೆಸುವುದಕ್ಕೂ ಮುನ್ನವೇ ಮೌಲ್ವಿ (Moulvi) ಮುಫ್ತಿ ಮುಷ್ತಾಕ್ ಮಕ್ಬೋಲಿ ಪ್ರಚೋದನಕಾರಿ ಭಾಷಣ ಮಾಡಿದ್ದ ವೀಡಿಯೋ ವೈರಲ್ ಆಗಿತ್ತು. ಈತನ ಬಂಧನಕ್ಕಾಗಿ ಪೊಲೀಸರು ಹುಡುಕಾಟ ನಡೆಸಿದ್ದರು. ಇದನ್ನೂ ಓದಿ: ಮುಡಾ ಕೇಸ್‌, ಸಿಎಂಗೆ ಕ್ಲೀನ್‌ ಚಿಟ್‌ – 11,200 ಪುಟಗಳ ತನಿಖಾ ವರದಿ ಸಲ್ಲಿಕೆ

    ಮೌಲ್ವಿ ಭಾಷಣದಲ್ಲಿ ಹೇಳಿದ್ದೇನು?
    ಧರ್ಮಕ್ಕಾಗಿ ಬದುಕಿರುವ ಮುಸ್ಲಿಮರು ಇನ್ನೂ ಇದ್ದಾರೆ. ಧರ್ಮ ರಕ್ಷಣೆಯ ಬದ್ಧತೆ ನಿನ್ನೆನೂ ಇತ್ತು, ಇವತ್ತೂ ಇದೆ. ಎಲ್ಲಾ ಘೋಷಣೆ ಕೂಗಿ ನಾವು ಪ್ರಾಣ ಬೇಕಾದರೂ ಕೊಡುತ್ತೇವೆ. ಸದಾ ಮುಸ್ಲಿಮರನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಸುರೇಶ್ ಹೆಸರಿನ ನಾಯಿ, ಸುರೇಶ್ ಹೆಸರಿನ ಹರಾಮಿ. ನನ್ನ ಮಾಲೀಕನ ಬಗ್ಗೆ ಕೆಟ್ಟದಾಗಿ ಪೋಸ್ಟ್ ಮಾಡಿದ್ದಾನೆ. ಆತನನ್ನು ಕೂಡಲೇ ಬಂಧಿಸಿ. ಆತನನ್ನು ನೇಣಿಗೆ ಹಾಕಬೇಕು, ಮರಣದಂಡನೆ ವಿಧಿಸಬೇಕು ಎಂದು ಮೌಲ್ವಿ ಮಾತನಾಡಿದ್ದ.

    ನಿಮ್ಮ ಇಚ್ಚೆ ಏನು? ಆತನಿಗೆ ಮರಣದಂಡನೆಯಾಗಬೇಕು ಎಂಬುದು. ಮೈಸೂರಿನ ಎಲ್ಲಾ ಮುಸ್ಲಿಮರು ಒಂದಾಗಿ. ಇದಕ್ಕೆ ತಕ್ಕ ಉತ್ತರ ಕೊಡಬೇಕಾಗಿದೆ. ಅವಶ್ಯಕತೆ ಬಂದರೆ ನಮ್ಮ ತಲೆ ಬೇಕಾದರೂ ಕತ್ತರಿಸಿಕೊಳ್ಳುತ್ತೇವೆ. ನಮ್ಮ ಮಕ್ಕಳನ್ನ ಬೇಕಾದ್ರೂ ಬಲಿಕೊಡುತ್ತೇವೆ ಎಂದು ಪ್ರಚೋದನಕಾರಿಯಾಗಿ ಮಾತನಾಡಿದ್ದ. ಇದನ್ನೂ ಓದಿ: ಚಿನ್ನದಂಗಡಿ ದೋಚಿ ಸಲೀಸಾಗಿ ನಾಕಬಂದಿ ದಾಟಿದ ಕಳ್ಳರು – ಮೂವರು ಪೊಲೀಸರು ಸಸ್ಪೆಂಡ್

  • ಕಲ್ಲು ತೂರಾಟ ಕೇಸ್‌ – ಉದಯಗಿರಿ ಠಾಣೆ ಸಬ್ ಇನ್ಸ್‌ಪೆಕ್ಟರ್ ವರ್ಗಾವಣೆ

    ಕಲ್ಲು ತೂರಾಟ ಕೇಸ್‌ – ಉದಯಗಿರಿ ಠಾಣೆ ಸಬ್ ಇನ್ಸ್‌ಪೆಕ್ಟರ್ ವರ್ಗಾವಣೆ

    ಮೈಸೂರು: ಉದಯಗಿರಿ ಕಲ್ಲು ತೂರಾಟ ಪ್ರಕಣಕ್ಕೆ ಸಂಬಂಧಿಸಿದಂತೆ ಉದಯಗಿರಿ (Udayagiri Stone-Pelting Incident) ಠಾಣೆ ಸಬ್ ಇನ್ಸ್‌ಪೆಕ್ಟರ್ ರೂಪೇಶ್ (Rupesh) ಅವರನ್ನು ವರ್ಗಾವಣೆ ಮಾಡಲಾಗಿದೆ.

    ನಗರ ಪೊಲೀಸ್ ಆಯುಕ್ತರ ಕಚೇರಿಯ ಆಟೋಮೇಷನ್ ಸೆಂಟರ್‌ಗೆ ವರ್ಗಾವಣೆ ಮಾಡಿ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಆದೇಶ ಪ್ರಕಟಿಸಿದ್ದಾರೆ.

    ಗಲಾಟೆ ತಡೆಯಲು ಅವಕಾಶ ಇದ್ದರೂ ಕೂಡ ನಿರ್ಲಕ್ಷ್ಯ ವಹಿಸಿದ್ದರಿಂದ ಗಲಭೆ ನಡೆದಿದೆ ಎಂಬ ಮಾತುಗಳು ಕೇಳಿ ಬಂದ ಬೆನ್ನಲ್ಲೇ ರೂಪೇಶ್‌ ಅವರನ್ನು ವರ್ಗಾವಣೆ ಮಾಡಲಾಗಿದೆ.

    ಸೋಷಿಯಲ್ ಮೀಡಿಯಾದಲ್ಲಿ ಪೋಟೋ ವೈರಲ್ ಆದ ನಂತರ ಸ್ಟೇಟಸ್ ಹಾಕಿದ್ದ ಆರೋಪಿ ಸತೀಶ್ ಆಲಿಯಾಸ್ ಪಾಂಡುರಂಗನನ್ನ ರೂಪೇಶ್‌ ಠಾಣೆಗೆ ಕರೆತಂದಿದ್ದರು.

    ಬೆಳಿಗ್ಗೆಯಿಂದ ಸಂಜೆಯವರೆಗೂ ಸತೀಶ್  ಮೇಲೆ  ಕ್ರಮ ಕೈಗೊಳ್ಳಲು ಹಿಂದೇಟು ಹಾಕಿದ್ದಕ್ಕೆ ಠಾಣೆ ಮುಂದೆ ಮುಸ್ಲಿಂ ಯುವಕರ ಗುಂಪು ಜಮಾಯಿಸಿ ಗಲಾಟೆ ನಡೆಸಿತ್ತು.

  • ಮೈಸೂರು ಉದಯಗಿರಿ ಪೊಲೀಸ್ ಠಾಣೆ ಗಲಭೆ ಕೇಸ್‌ – ವಿವಾದಿತ ಪೋಸ್ಟ್ ಹಾಕಿದ್ದ ಆರೋಪಿಗೆ ಜಾಮೀನು

    ಮೈಸೂರು ಉದಯಗಿರಿ ಪೊಲೀಸ್ ಠಾಣೆ ಗಲಭೆ ಕೇಸ್‌ – ವಿವಾದಿತ ಪೋಸ್ಟ್ ಹಾಕಿದ್ದ ಆರೋಪಿಗೆ ಜಾಮೀನು

    ಮೈಸೂರು: ಉದಯಗಿರಿ ಪೊಲೀಸ್ ಠಾಣೆ (Udayagiri Police Station) ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಕೀಯ ಕೆಸರೆರಚಾಟ ಮುಂದುವರಿದಿದೆ. ಈ ನಡುವೆ ಮಹತ್ವದ ಬೆಳವಣಿಗೆ ನಡೆದಿದ್ದು, ವಿವಾದಿತ ಪೋಸ್ಟ್ ಹಾಕಿದ್ದ ಆರೋಪಿ ಸತೀಶ್‌ಗೆ ಕೋರ್ಟ್‌ ಜಾಮೀನು ಮಂಜೂರು ಮಾಡಿದೆ.

    ಆರೋಪಿ ಸತೀಶ್‌ಗೆ ಮೈಸೂರು ಕೋರ್ಟ್‌ (Mysuru Court) ಷರತ್ತುಬದ್ಧ ಜಾಮೀನು ನೀಡಿದೆ. 2ನೇ ಅಪರ ಸಿವಿಲ್ ನ್ಯಾಯಾಧೀಶರಾದ ಸರೋಜಾ ಅವರು ಆದೇಶ ಪ್ರಕಟಿಸಿದ್ದಾರೆ. ಆರೋಪಿ ಸತೀಶ್ ಪರ ವಕೀಲ ಹ.ಮಾ ಭಾಸ್ಕರ್ ವಾದ ಮಂಡಿಸಿದ್ದರು. ಇದನ್ನೂ ಓದಿ: ವಿದ್ಯಾರ್ಥಿಗಳ 13.4 ಲಕ್ಷ ಹೆಚ್ಚುವರಿ ಶುಲ್ಕ ವಾಪಸ್ ಕೊಡಿಸಿದ ಶುಲ್ಕ ನಿಯಂತ್ರಣ ಸಮಿತಿ

    ಆರೋಪಿ ಸತೀಶ್ ಪರ ವಕೀಲ ಹಾ.ಮಾ.ಭಾಸ್ಕರ್ ವಾದ ಮಂಡಿಸಿದ್ದರು. ಬಂಧನ ಸಂಬಂಧ ಕೋರ್ಟ್‌ಗೆ ಪೊಲೀಸರು ಸರಿಯಾದ ಸಾಕ್ಷ್ಯಾದಾರ ಸಲ್ಲಿಸಿಲ್ಲ, ಯಾವ ಕಾರಣದಿಂದ ಒಂದು ಧರ್ಮದ ಭಾವನೆಗೆ ಧಕ್ಕೆ ಆಗುತ್ತೆ ಎಂಬುದನ್ನು ತಿಳಿಸಿಲ್ಲ. ಪೊಲೀಸರು ಈಗಾಗಲೇ ಆರೋಪಿಯ ವಿಚಾರಣೆ ಮುಗಿಸಿದ್ದಾರೆ. ಪೋಸ್ಟ್ ಹಾಕಲಾಗಿದೆ ಎನ್ನಲಾದ ಫೋನ್ ಕೂಡ ಸೀಜ್ ಮಾಡಿದ್ದಾರೆ. ಹಾಗಾಗಿ ಸತೀಶ್‌ಗೆ ಜಾಮೀನು ನೀಡುವಂತೆ ವಾದ ಮಂಡಿಸಿದ್ದರು. ವಾದ – ಪ್ರತಿವಾದಗಳನ್ನು ಆಲಿಸಿದ ಕೋರ್ಟ್ ವಿಚಾರಣೆ ಮುಂದೂಡಿತ್ತು. ಇಂದು ಆದೇಶ ಪ್ರಕಟಿಸಿದೆ.

    ಏನಿದು ಕೇಸ್‌?
    ಇದೇ ಫೆಬ್ರವರಿ 10ರಂದು ಅವಹೇಳನಕಾರಿ ಪೋಸ್ಟ್ ವಿಚಾರಕ್ಕೆ ಮೈಸೂರಿನ ಉದಯಗಿರಿ ಪೊಲೀಸ್ ಠಾಣೆ ಮೇಲೆ ಮುಸ್ಲಿಂ ಯುವಕರ ಗುಂಪು ಕಲ್ಲು ತೂರಾಟ ನಡೆಸಿತ್ತು. ದಾಳಿಯಲ್ಲಿ ಇನ್‌ಸ್ಪೆಕ್ಟರ್ ಸೇರಿದಂತೆ 14 ಪೊಲೀಸರಿಗೆ ಗಾಯಗಳಾಗಿತ್ತು. 10ಕ್ಕೂ ಹೆಚ್ಚು ಪೊಲೀಸ್ ವಾಹನಗಳು ಜಖಂ ಆಗಿದ್ದವು. ತನಿಖೆ ಆರಂಭಿಸಿದ್ದ ಪೊಲೀಸರು 1000ಕ್ಕೂ ಹೆಚ್ಚು ಮಂದಿ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದರು.

    ಅವಹೇಳನಕಾರಿ ಪೋಸ್ಟ್ ಹಾಕಿದ್ದ ಸತೀಶ್‌ ಎಂಬಾತನನ್ನ ಪೊಲೀಸರು ಬಂಧಿಸಿದ್ದರು. ಆತನ ವಿರುದ್ಧ ಸುಮೋಟೋ ಕೇಸ್ ದಾಖಲಿಸಿ ಈ ಬಗ್ಗೆ ಪೊಲೀಸ್ ಅಧಿಕೃತ ಫೇಸ್‌ಬುಕ್‌ನಲ್ಲಿ ಮಾಹಿತಿಯನ್ನು ಮೈಸೂರು ನಗರ ಪೊಲೀಸರು ಹಂಚಿಕೊಂಡಿದ್ದರು. ಇದನ್ನೂ ಓದಿ: ಗ್ಯಾರಂಟಿಗಳಿಗೆ ಮೀಸಲಿಟ್ಟ ಹಣ ಯಾರು ನುಂಗುತ್ತಿದ್ದಾರೆ? – ರಾಜ್ಯ ಸರ್ಕಾರಕ್ಕೆ ಛಲವಾದಿ ನಾರಾಯಣಸ್ವಾಮಿ ಪ್ರಶ್ನೆ

    ಎಫ್‌ಐಆರ್‌ನಲ್ಲಿ ಸ್ಫೋಟಕ ಮಾಹಿತಿ:
    ಪೊಲೀಸರ ಎಫ್‌ಐಆರ್‌ ಮಾಹಿತಿ ಪ್ರಕಾರ, ಆರಂಭದಲ್ಲಿ ವಿವಾದಿತ ಪೋಸ್ಟ್ ಹಾಕಿದ್ದ ಆರೋಪಿಯನ್ನು ಬಂಧನ ಮಾಡಿ ಠಾಣೆಯಲ್ಲಿ ಪೊಲೀಸರು ಇರಿಸಿದ್ದರು. 9ನೇ ತಾರೀಕು ಕಲ್ಯಾಣಗಿರಿಯ ಪಾಂಡುರಂಗ ಅಲಿಯಾಸ್‌ ಸತೀಶ್‌ನನ್ನು ಠಾಣೆಗೆ ಕರೆತರಲಾಗಿತ್ತು. ರಾತ್ರಿ 8:30 ಗಂಟೆಗೆ ಠಾಣೆಯ ಬಳಿ ಮುಸ್ಲಿಂ ಯುವಕರು ಜಮಾಯಿಸಿದರು. ಆರೋಪಿಯನ್ನು ನಮ್ಮ ವಶಕ್ಕೆ ಕೊಡಿ, ನಮ್ಮ ಧರ್ಮದ ಬಗ್ಗೆ ಮಾತನಾಡಿದ್ದಾನೆ ಎಂದು ಯುವಕರ ಕೂಗಾಟ ಆರಂಭಿಸಿದ್ದಾರೆ. 9:15 ಗಂಟೆಗೆ ಏಕಾಏಕಿ 1,000 ಜನ ಮುಸ್ಲಿಂ ಯುವಕರ ಗುಂಪು ಜಮಾವಣೆ ಆಗಿ ವಾಹನ ಸಂಚಾರಕ್ಕೆ ಅಡ್ಡಿಪಡಿಸಿ ಕೂಗಾಟ ಮಾಡಿದರು.

    ಪೊಲೀಸರು ಎಷ್ಟೇ ಹೇಳಿದರೂ ಕೇಳದ ಗುಂಪು ಏಕಾಏಕಿ ಪೊಲೀಸರ ಮೇಲೆ, ಠಾಣೆಯ ಮೇಲೆ ಕಲ್ಲು ತೂರಾಟ ಮಾಡಿದರು. ಕಲ್ಲು ತೂರಾಟಕ್ಕೆ ಪೊಲೀಸ್ ಠಾಣೆಯ ಗಾಜು, ಕಿಟಕಿ ಪುಡಿ ಪುಡಿ ಆಗಿದೆ. ಬಂದೋಬಸ್ತ್‌ನಲ್ಲಿದ್ದ ಪೊಲೀಸರ ಮೇಲೆಯೂ ಕಲ್ಲು ತೂರಾಟ ಮಾಡಿದರು. ರಸ್ತೆ ಮೇಲೆ ವಾಹನ ಓಡಾಟ ಮಾಡದಂತೆ ಬೆಂಕಿ ಹಚ್ಚಿ ಪುಂಡಾಟ ಮಾಡಿದರು. ಪೊಲೀಸರ ಮೇಲೆ ಮನಬಂದಂತೆ ಕಲ್ಲು ತೂರಾಟ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಹಲವರು ಪೊಲೀಸರಿಗೆ ಗಾಯವಾದವು. ಇದನ್ನೂ ಓದಿ: ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಫರ್ನಿಚರ್ ಅಂಗಡಿ, ಗೋಡೌನ್‌ಗೆ ಬೆಂಕಿ – 1.50 ಕೋಟಿ ರೂ. ಮೌಲ್ಯದ ವಸ್ತುಗಳು ಭಸ್ಮ

    ಕಲ್ಲು ತೂರಾಟದಿಂದ ಸಾರ್ವಜನಿಕರಿಗೂ ಗಾಯವಾಗಿದೆ. ಡಿಸಿಪಿ ಸೇರಿದಂತೆ ಅನೇಕ ಪೊಲೀಸ್ ಅಧಿಕಾರಿಗಳ ವಾಹನಗಳ ಮೇಲೆ ಕಲ್ಲು ತೂರಾಟ ಮಾಡಿದರು. ಬಳಿಕ ಹೆಚ್ಚಿನ ಪೊಲೀಸ್ ಸಿಬ್ಬಂದಿ ಕರೆಸಿ ಬಲವಂತವಾಗಿ ಮುಸ್ಲಿಂ ಯುವಕರ ಗುಂಪು ಚದುರಿಸಲಾಯಿತು. ಅಧಿಕಾರಿಗಳ ಮೇಲೆ ಹಲ್ಲೆ ನಿಂದನೆ, ಸರ್ಕಾರಿ ಆಸ್ತಿ ವಾಹನಗಳ ಜಖಂ ಸೇರಿ ಆಸ್ತಿಪಾಸ್ತಿ ಹಾನಿಯಾಗಿದೆ. ಅಕ್ರಮ ಗುಂಪು ಕಟ್ಟಿ ಹಾನಿಯುಂಟು ಮಾಡಿದ ಮುಸ್ಲಿಂ ಯುವಕರ ಗುಂಪಿನ ಮೇಲೆ ಕ್ರಮಕ್ಕೆ ಎಂದು ಉದಯಗಿರಿ ಠಾಣೆಯ ಪಿಎಸ್‌ಐ ಸುನೀಲ್ ದೂರು ನೀಡಿದ್ದರು ಎಂದು ಉಲ್ಲೇಖಿಸಲಾಗಿದೆ.

  • ರಾಜ್ಯ ಸರ್ಕಾರ ದೇಶದ್ರೋಹಿಗಳ ರಕ್ಷಣೆಗೆ ನಿಂತಿದೆ: ಶೋಭಾ ಕರಂದ್ಲಾಜೆ

    ರಾಜ್ಯ ಸರ್ಕಾರ ದೇಶದ್ರೋಹಿಗಳ ರಕ್ಷಣೆಗೆ ನಿಂತಿದೆ: ಶೋಭಾ ಕರಂದ್ಲಾಜೆ

    ಬೆಂಗಳೂರು: ರಾಜ್ಯ ಸರ್ಕಾರ ದೇಶದ್ರೋಹಿಗಳ ರಕ್ಷಣೆಗೆ ನಿಂತಿದೆ. ಯಾರು ಪಾಕಿಸ್ತಾನ ಜಿಂದಾಬಾದ್ ಅಂತಾ ಹೇಳುತ್ತಾರೋ ಅವರಿಗೆ ರಕ್ಷಣೆ ಸಿಗುತ್ತದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ಕಿಡಿಕಾರಿದ್ದಾರೆ.

    ಮೈಸೂರು ಉದಯಗಿರಿ (Udayagiri) ಪೋಲೀಸ್ ಠಾಣೆ ಗಲಭೆ ವಿಚಾರದ ಕುರಿತು ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದವರಿಗೆ ರಕ್ಷಣೆ ಸಿಕ್ಕಿದಾಗಲೇ ದೇಶದ್ರೋಹಿಗಳಿಗೆ ಈ ಸರ್ಕಾರ ನಮ್ಮ ಪರವಾಗಿ ನಿಂತಿದೆ ಎಂದು ಅನ್ನಿಸಿದೆ. ನನ್ನ ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ರಾಷ್ಟ್ರಧ್ವಜ ಹಿಡಿದುಕೊಂಡು ಹೋಗುತ್ತಿದ್ದವರ ಮೇಲೆ ಅಟ್ಯಾಕ್ ನಡೆಯಿತು. ಪ್ರತಿ ಸಂದರ್ಭದಲ್ಲಿ ರಾಜ್ಯದ ಸಿಎಂ, ಡಿಸಿಎಂ, ಗೃಹ ಸಚಿವರು ದೇಶದ್ರೋಹಿಗಳ ರಕ್ಷಣೆಗೆ ನಿಂತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: 2018 ರಿಂದ ನೇಮಕಗೊಂಡ 698 ಮಂದಿ ನ್ಯಾಯಧೀಶರಲ್ಲಿ 108 ಮಹಿಳೆಯರು – ಮೇಘವಾಲ್

    ಪೊಲೀಸ್ ಠಾಣೆಗೆ ದಾಳಿ ಆದಾಗ ಡಿಸಿಎಂ ಅವರು ಮೈನರ್ಸ್ ಎಂದು ಹೇಳಿದರು. ಅಂದರೆ ಮೈನರ್ಸ್ಗೆ ರಾಜ್ಯದಲ್ಲಿ ಕಾನೂನು ಇಲ್ವಾ? ಅವರಿಗೆ ಕಲ್ಲು ಬಿಸಾಡಲು ಬರುತ್ತದೆ, ಆದರೆ ಕಾನೂನು ಕ್ರಮ ಮಾಡಲು ನಿಮಗೆ ಆಗಲ್ಲ. ಪರಮೇಶ್ವರ್ ಕೇವಲ ಅಲ್ಪಸಂಖ್ಯಾತರ, ಮುಸಲ್ಮಾನರ, ದೇಶದ್ರೋಹಿಗಳ ರಕ್ಷಣೆ ಬಿಟ್ಟು ಬೇರೆ ಯಾವ ಕೆಲಸವನ್ನೂ ಮಾಡುತ್ತಿಲ್ಲ. ಹಿಂದೂಗಳಿಗೆ, ಅಧಿಕಾರಿಗಳಿಗೆ ರಕ್ಷಣೆ ಇಲ್ಲ. ಹಿಂದೂಗಳಿಗೆ ಅನ್ಯಾಯ, ಮುಸಲ್ಮಾನರಿಗೆ ರಕ್ಷಣೆ, ಇದು ಕರ್ನಾಟಕ ರಾಜ್ಯದಲ್ಲಿ ಆಗುತ್ತಿದೆ ಎಂದು ಹರಿಹಾಯ್ದರು. ಇದನ್ನೂ ಓದಿ: ಪಕ್ಷದ ಶಿಸ್ತು ಮೀರಿ‌‌ ಮಾತನಾಡುತ್ತಿರುವ ಸಚಿವರು ಶಿಶುಪಾಲನಂತೆ, ಕಾಂಗ್ರೆಸ್ ಹೈಕಮಾಂಡ್ ಶ್ರೀಕೃಷ್ಣನಂತೆ: ಸಂಸದ ಜಿ.ಸಿ ಚಂದ್ರಶೇಖರ್

    ಆರ್‌ಎಸ್‌ಎಸ್‌ನವರು (RSS) ಮೈಸೂರು ಗಲಭೆ ಹಿಂದೆ ಇದ್ದಾರೆ ಎಂಬ ಕಾಂಗ್ರೆಸ್ ನಾಯಕರ ಆರೋಪದ ಕುರಿತು ಪ್ರತಿಕ್ರಿಯಿಸಿ, ಆರ್‌ಎಸ್‌ಎಸ್‌ನವರು ಅಂತಾ ಯಾರು ನೋಡಿದ್ದಾರೆ? ಪ್ರತಿ ಸಂಧರ್ಭದಲ್ಲೂ ಆರ್‌ಎಸ್‌ಎಸ್ ಟಾರ್ಗೆಟ್ ಮಾಡುವ ಕೆಲಸ ನಡೆಯುತ್ತಿದೆ. ಅವರ ತಪ್ಪು ಮುಚ್ಚಿಕೊಳ್ಳಲು ಆರ್‌ಎಸ್‌ಎಸ್ ಟಾರ್ಗೆಟ್ ಮಾಡುತ್ತಿರುವುದರಿಂದ ಕಾಂಗ್ರೆಸ್‌ಗೆ ಧಿಕ್ಕಾರ ಹೇಳುವ ಸಮಯ ಹತ್ತಿರ ಬಂದಿದೆ ಎಂದು ಗುಡುಗಿದರು. ಇದನ್ನೂ ಓದಿ: ಸಿದ್ದರಾಮಯ್ಯನಂತ ಮಾಸ್ ಲೀಡರ್‌ನ ಯಾರು ಬೇಡ ಅಂತಾರೆ: ಮಹದೇವಪ್ಪ

    ಜಲಜೀವನ್ ಮಿಷನ್ ಅನುದಾನ ಬಗ್ಗೆ ಸಿಎಂ ಆರೋಪ ವಿಚಾರದ ಕುರಿತು ಮಾತನಾಡಿದ ಅವರು, ಜೆಜೆಎಂ ಯೋಜನೆ ಅನುಷ್ಠಾನ ಮಾಡುವ ಏಜೆನ್ಸಿ ರಾಜ್ಯ ಸರ್ಕಾರದ್ದು. ಯಾವ ಟೆಂಡರ್ ಕೂಡಾ ಸರಿಯಾಗಿ ಕರೆದಿಲ್ಲ ನೀವು. ನಾವು ಕೊಟ್ಟಂತಹ ದುಡ್ಡನ್ನು ನೀವು ಗ್ಯಾರಂಟಿಗಳಿಗೆ ಕೊಡುತ್ತಿದ್ದೀರಿ. ಅಭಿವೃದ್ಧಿ ಕೆಲಸ ಎಲ್ಲಿದೆ? ಕೇಂದ್ರ ಸರ್ಕಾರ ಕೊಟ್ಟ ದುಡ್ಡನ್ನು ದುರುಪಯೋಗಪಡಿಸಿಕೊಂಡು ನಮ್ಮ ಮೇಲೆ ಆರೋಪ ಹೊರಿಸುವ ಕೆಲಸವನ್ನು ಸಿಎಂ ಮಾಡುತ್ತಿದ್ದಾರೆ. ನಿಮಗೆ ಸರ್ಕಾರ ಮಾಡಲು ತಾಕತ್ ಇಲ್ಲಾಂದ್ರೆ, ಯಾವುದಕ್ಕೂ ದುಡ್ಡು ಇಲ್ಲಾಂದ್ರೆ ಯಾಕೆ ಕುರ್ಚಿಯಲ್ಲಿದ್ದೀರಿ? ಕುರ್ಚಿ ಬಿಟ್ಟು ತೊಲಗಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಭೀಕರ ಅಪಘಾತ – ಸವಾರರು ಗ್ರೇಟ್‌ ಎಸ್ಕೇಪ್‌

  • ಉದಯಗಿರಿಯಲ್ಲಿ ಸಲ್ಪ ಯಾಮಾರಿದ್ರೂ ಬೀಳುತಿತ್ತು ಪೊಲೀಸರ ಹೆಣಗಳು – ಎಫ್‌ಐಆರ್‌ನಲ್ಲಿದೆ ಸ್ಫೋಟಕ ವಿಚಾರ

    ಉದಯಗಿರಿಯಲ್ಲಿ ಸಲ್ಪ ಯಾಮಾರಿದ್ರೂ ಬೀಳುತಿತ್ತು ಪೊಲೀಸರ ಹೆಣಗಳು – ಎಫ್‌ಐಆರ್‌ನಲ್ಲಿದೆ ಸ್ಫೋಟಕ ವಿಚಾರ

    ಮೈಸೂರು: ಉದಯಗಿರಿ ಪೊಲೀಸ್ ಠಾಣೆ (Udayagiri Police Station) ಮೇಲೆ ಮುಸ್ಲಿಮ್‌ ಯುವಕರ ಕಲ್ಲು ತೂರಾಟದಲ್ಲಿ ಸ್ವಲ್ಲ ಹೆಚ್ಚು ಕಡಿಮೆಯಾಗಿದ್ದರೂ ಪೊಲೀಸರ (Police) ಹೆಣಗಳು ಬೀಳುವ ಸಾಧ್ಯತೆ ಇತ್ತು.

    ಫೆ.10ರ ರಾತ್ರಿ ಉದಯಗಿರಿ ಪೊಲೀಸ್‌ ಠಾಣೆ ಮೇಲೆ ದಾಳಿ ಮಾಡಿದ ಆರೋಪಿಗಳ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಾಗಿದೆ.

    ಎಫ್‌ಐಆರ್‌ನಲ್ಲಿ ಅಕ್ರಮವಾಗಿ ಗುಂಪು ಕಟ್ಟಿಕೊಂಡು ಸರ್ಕಾರದ ಆಸ್ತಿ ಪಾಸ್ತಿ ಹಾಗೂ ಪೊಲೀಸ್ ಇಲಾಖೆಗೆ ಸಂಬಂಧಿಸಿದ ವಾಹನಗಳಿಗೆ ಹಾನಿ ಮಾಡಿದ್ದಾರೆ. ಅಷ್ಟೇ ಅಲ್ಲದೇ ಕರ್ತವ್ಯ ನಿರ್ವಹಿಸುತ್ತಿದ್ದ ಅಧಿಕಾರಿ ಸಿಬ್ಬಂದಿಗಳಿಗೆ ಅವಾಚ್ಯ ಶಬ್ದಗಳಿಂದ ಬೈದು, ಹಲ್ಲೆ ಮಾಡಿದ್ದಾರೆ. ಪೊಲೀಸರ ಸಾವು ಸಂಭವಿಸಬಹುದು ಎಂದು ತಿಳಿದು ಮುಸ್ಲಿಮ್‌ ಯುವಕರು ಕಲ್ಲು ತೂರಾಟ ಮಾಡಿದ್ದಾರೆ ಎಂದು ಉಲ್ಲೇಖ ಮಾಡಲಾಗಿದೆ.

    ಸಾರ್ವಜನಿಕ ಆಸ್ತಿ ಹಾನಿ ತಡೆ ಕಾಯ್ದೆ 1984 ಮತ್ತು ಭಾರತೀಯ ನ್ಯಾಯಾ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಆರೋಪಿಗಳ ವಿರುದ್ಧ ಕೇಸ್‌ ದಾಖಲಾಗಿದೆ. ಸೆಕ್ಷನ್‌ 110 ರ ಅಡಿ ಕೇಸ್‌ ದಾಖಲಾಗಿರುವ ಕಾರಣ ಆರೋಪಿಗಳಿಗೆ ಜಾಮೀನು ಸಿಗುವುದಿಲ್ಲ. ಇದನ್ನೂ ಓದಿ: ಮೈಸೂರಿನ ಉದಯಗಿರಿ ಗಲಾಟೆ – ಕಲ್ಲು ತೂರಿದ 1,000 ಕ್ಕೂ ಹೆಚ್ಚು ಆರೋಪಿಗಳ ವಿರುದ್ಧ ಎಫ್‌ಐಆರ್‌

    ಯಾವ್ಯಾವ ಸೆಕ್ಷನ್‌ ಅಡಿ ಕೇಸ್‌?
    189(2) – ಕಾನೂನು ವಿರುದ್ಧ ಕೂಟದ ಸದಸ್ಯ
    189(3) – ಚೆದುರು ಹೋಗಲು ಸಮಾವೇಶ ಮಾಡಲಾಗಿದೆ ಎಂದು ಗೊತ್ತಿದ್ದರೂ ಕಾನೂನು ವಿರುದ್ಧ ಗುಂಪಿನಲ್ಲಿ ಸೇರುವುದು
    189(4) – ಕಾನೂನು ವಿರುದ್ಧವಾಗಿ ಮಾರಕ ಆಯುಧಗಳನ್ನು ಹಿಡಿಯುವ ಗುಂಪನ್ನು ಸೇರುವುದು
    1 91(2)- ಒಂದೇ ಉದ್ದೇಶವನ್ನು ಪೂರ್ಣಗೊಳಿಸಲು ಕಾನೂನು ವಿರುದ್ಧ ಕೂಟದ ಪ್ರತಿಯೊಬ್ಬ ವ್ಯಕ್ತಿಯೂ ತಪ್ಪಿತಸ್ಥನಾಗುತ್ತಾನೆ.
    191(3) – ಮಾರಕ ಆಯುದ್ಧವನ್ನು ಹಿಡಿದು ದೊಂಬಿ ಮಾಡುವುದು
    132 -ಸರ್ಕಾರಿ ನೌಕರನ ಮೇಲೆ ಹಲ್ಲೆ

     


    118 – ಅಪಾಯಕಾರಿ ಆಯುಧಗಳು ಅಥವಾ ಸಾಧನಗಳ ಮೂಲಕ ಹಾನಿ
    110 – ಮಾನವ ಹತ್ಯೆಗೆ ಯತ್ನ
    121 (1) – ಸರ್ಕಾರಿ ನೌಕರನು ತನ್ನ ಕರ್ತವ್ಯ ನಿರ್ವಹಣೆ ಮಾಡದಂತೆ ಬೆದರಿಸುವುದು
    352 – ಶಾಂತಿ ಭಂಗ ಮಾಡುವ ದೃಷ್ಟಿಯಿಂದ ಅಪಮಾನ ಮಾಡುವುದು
    324 (4)- ಕೇಡು ಮತ್ತು 20 ಸಾವಿರ ರೂ. ಹೆಚ್ಚು ಮೌಲ್ಯದ ವಸ್ತುಗಳಿಗೆ ಹಾನಿ ಮಾಡುವುದು
    324(5) – ಕೇಡು ಮತ್ತು 1 ಲಕ್ಷ ರೂ. ಹೆಚ್ಚು ಮೌಲ್ಯದ ವಸ್ತುಗಳಿಗೆ ಹಾನಿ ಮಾಡುವುದು

     

  • ಮೈಸೂರಿನ ಉದಯಗಿರಿ ಗಲಾಟೆ – ಕಲ್ಲು ತೂರಿದ 1,000 ಕ್ಕೂ ಹೆಚ್ಚು ಆರೋಪಿಗಳ ವಿರುದ್ಧ ಎಫ್‌ಐಆರ್‌

    ಮೈಸೂರಿನ ಉದಯಗಿರಿ ಗಲಾಟೆ – ಕಲ್ಲು ತೂರಿದ 1,000 ಕ್ಕೂ ಹೆಚ್ಚು ಆರೋಪಿಗಳ ವಿರುದ್ಧ ಎಫ್‌ಐಆರ್‌

    ಮೈಸೂರು: ಉದಯಗಿರಿ ಪೊಲೀಸ್ ಠಾಣೆ (Udayagiri Police Station) ಗಲಭೆ ಪ್ರಕರಣ ಸಂಬಂಧ ಕಲ್ಲು ತೂರಿದ ಸಾವಿರಕ್ಕೂ ಅಧಿಕ ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

    ಪಬ್ಲಿಕ್ ಟಿವಿಗೆ ಎಫ್‌ಐಆರ್‌ ಪ್ರತಿ ಲಭ್ಯವಾಗಿದ್ದು, ಗಲಭೆಯಲ್ಲಿ ಇದ್ದವರು ಒಂದು ಸಾವಿರಕ್ಕೂ ಹೆಚ್ಚು ಎಂದು ಪೊಲಿಸರು ಅಧಿಕೃತವಾಗಿ ನಮೂದಿಸಿದ್ದಾರೆ. ಎಫ್‌ಐಆರ್ ಪ್ರತಿಯಲ್ಲಿ ಘಟನೆಯ ಸಂಪೂರ್ಣ ಮಾಹಿತಿ ಇದೆ.

    ಆರಂಭದಲ್ಲಿ ವಿವಾದಿತ ಪೋಸ್ಟ್ ಹಾಕಿದ್ದ ಆರೋಪಿಯನ್ನು ಬಂಧನ ಮಾಡಿ ಠಾಣೆಯಲ್ಲಿ ಪೊಲೀಸರು ಇರಿಸಿದ್ದರು. 9ನೇ ತಾರೀಕು ಕಲ್ಯಾಣಗಿರಿಯ ಪಾಂಡುರಂಗ ಅಲಿಯಾಸ್‌ ಸತೀಶ್‌ನನ್ನು ಠಾಣೆಗೆ ಕರೆತರಲಾಗಿತ್ತು. ರಾತ್ರಿ 8:30 ಗಂಟೆಗೆ ಠಾಣೆಯ ಬಳಿ ಮುಸ್ಲಿಂ ಯುವಕರು ಜಮಾಯಿಸಿದರು. ಆರೋಪಿಯನ್ನು ನಮ್ಮ ವಶಕ್ಕೆ ಕೊಡಿ, ನಮ್ಮ ಧರ್ಮದ ಬಗ್ಗೆ ಮಾತನಾಡಿದ್ದಾನೆ ಎಂದು ಯುವಕರ ಕೂಗಾಟ ಆರಂಭಿಸಿದ್ದಾರೆ. 9:15 ಗಂಟೆಗೆ ಏಕಾಏಕಿ 1,000 ಜನ ಮುಸ್ಲಿಂ ಯುವಕರ ಗುಂಪು ಜಮಾವಣೆ ಆಗಿ ವಾಹನ ಸಂಚಾರಕ್ಕೆ ಅಡ್ಡಿಪಡಿಸಿ ಕೂಗಾಟ ಮಾಡಿದರು.

    ಪೊಲೀಸರು ಎಷ್ಟೇ ಹೇಳಿದರೂ ಕೇಳದ ಗುಂಪು ಏಕಾಏಕಿ ಪೊಲೀಸರ ಮೇಲೆ, ಠಾಣೆಯ ಮೇಲೆ ಕಲ್ಲು ತೂರಾಟ ಮಾಡಿದರು. ಕಲ್ಲು ತೂರಾಟಕ್ಕೆ ಪೊಲೀಸ್ ಠಾಣೆಯ ಗಾಜು, ಕಿಟಕಿ ಪುಡಿ ಪುಡಿ ಆಗಿದೆ. ಬಂದೋಬಸ್ತ್‌ನಲ್ಲಿದ್ದ ಪೊಲೀಸರ ಮೇಲೆಯೂ ಕಲ್ಲು ತೂರಾಟ ಮಾಡಿದರು. ರಸ್ತೆ ಮೇಲೆ ವಾಹನ ಓಡಾಟ ಮಾಡದಂತೆ ಬೆಂಕಿ ಹಚ್ಚಿ ಪುಂಡಾಟ ಮಾಡಿದರು. ಪೊಲೀಸರ ಮೇಲೆ ಮನಬಂದಂತೆ ಕಲ್ಲು ತೂರಾಟ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಹಲವರು ಪೊಲೀಸರಿಗೆ ಗಾಯವಾದವು.

    ಕಲ್ಲು ತೂರಾಟದಿಂದ ಸಾರ್ವಜನಿಕರಿಗೂ ಗಾಯವಾಗಿದೆ. ಡಿಸಿಪಿ ಸೇರಿದಂತೆ ಅನೇಕ ಪೊಲೀಸ್ ಅಧಿಕಾರಿಗಳ ವಾಹನಗಳ ಮೇಲೆ ಕಲ್ಲು ತೂರಾಟ ಮಾಡಿದರು. ಬಳಿಕ ಹೆಚ್ಚಿನ ಪೊಲೀಸ್ ಸಿಬ್ಬಂದಿ ಕರೆಸಿ ಬಲವಂತವಾಗಿ ಮುಸ್ಲಿಂ ಯುವಕರ ಗುಂಪು ಚದುರಿಸಲಾಯಿತು. ಅಧಿಕಾರಿಗಳ ಮೇಲೆ ಹಲ್ಲೆ ನಿಂದನೆ, ಸರ್ಕಾರಿ ಆಸ್ತಿ ವಾಹನಗಳ ಜಖಂ ಸೇರಿ ಆಸ್ತಿಪಾಸ್ತಿ ಹಾನಿಯಾಗಿದೆ. ಅಕ್ರಮ ಗುಂಪು ಕಟ್ಟಿ ಹಾನಿಯುಂಟು ಮಾಡಿದ ಮುಸ್ಲಿಂ ಯುವಕರ ಗುಂಪಿನ ಮೇಲೆ ಕ್ರಮಕ್ಕೆ ಎಂದು ಉದಯಗಿರಿ ಠಾಣೆಯ ಪಿಎಸ್‌ಐ ಸುನೀಲ್ ದೂರು ನೀಡಿದ್ದರು.

  • ಧರ್ಮಕ್ಕಾಗಿ ಬದುಕಿರುವ ಮುಸ್ಲಿಮರು ಇನ್ನೂ ಇದ್ದಾರೆ: ಉದಯಗಿರಿ ದಾಂಧಲೆಗೂ ಮುನ್ನ ಮೌಲ್ವಿ ಪ್ರಚೋದನಕಾರಿ ಭಾಷಣ

    ಧರ್ಮಕ್ಕಾಗಿ ಬದುಕಿರುವ ಮುಸ್ಲಿಮರು ಇನ್ನೂ ಇದ್ದಾರೆ: ಉದಯಗಿರಿ ದಾಂಧಲೆಗೂ ಮುನ್ನ ಮೌಲ್ವಿ ಪ್ರಚೋದನಕಾರಿ ಭಾಷಣ

    ಮೈಸೂರು: ಇಲ್ಲಿನ ಉದಯಗಿರಿಯಲ್ಲಿ (Udayagiri) ನಡೆದ ಕಲ್ಲು ತೂರಾಟ ಪ್ರಕರಣಕ್ಕೂ ಮುನ್ನ ಮೌಲ್ವಿಯೊಬ್ಬರು (Moulvi) ಪ್ರಚೋದನಕಾರಿ ಭಾಷಣ ಮಾಡಿರುವ ವೀಡಿಯೋ ವೈರಲ್ ಆಗಿದೆ.

    ಮೈಕ್ ಹಿಡಿದು ಮುಫ್ತಿ ಮುಷ್ತಾಕ್ ಮಕ್ಬೋಲಿ ಎಂಬ ಮೌಲ್ವಿ ಪ್ರಚೋದನಕಾರಿ ಭಾಷಣ ಮಾಡಿದ್ದಾರೆ. ಆತನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಇದನ್ನೂ ಓದಿ: ಕಲ್ಲು ಹೊಡೆಯುವುದು ಮುಸ್ಲಿಂ ಧರ್ಮದಲ್ಲೇ ಇದೆ: ಪ್ರತಾಪ್ ಸಿಂಹ

    ಧರ್ಮಕ್ಕಾಗಿ ಬದುಕಿರುವ ಮುಸ್ಲಿಮರು ಇನ್ನೂ ಇದ್ದಾರೆ. ಧರ್ಮ ರಕ್ಷಣೆಯ ಬದ್ಧತೆ ನಿನ್ನೆನೂ ಇತ್ತು, ಇವತ್ತು ಇದೆ. ಎಲ್ಲಾ ಘೋಷಣೆ ಕೂಗಿ ನಾವು ಪ್ರಾಣ ಬೇಕಾದರೂ ಕೊಡುತ್ತೇವೆ. ಸದಾ ಮುಸ್ಲಿಮರನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಸುರೇಶ್ ಹೆಸರಿನ ನಾಯಿ, ಸುರೇಶ್ ಹೆಸರಿನ ಹರಾಮಿ. ನನ್ನ ಮಾಲೀಕನ ಬಗ್ಗೆ ಕೆಟ್ಟದಾಗಿ ಪೋಸ್ಟ್ ಮಾಡಿದ್ದಾನೆ. ಆತನನ್ನು ಕೂಡಲೇ ಬಂಧಿಸಿ. ಆತನನ್ನು ನೇಣಿಗೆ ಹಾಕಬೇಕು, ಮರಣದಂಡನೆ ವಿಧಿಸಬೇಕು ಎಂದು ಮೌಲ್ವಿ ಮಾತನಾಡಿದ್ದಾರೆ.

    ನಿಮ್ಮ ಇಚ್ಚೆ ಏನು? ಆತನಿಗೆ ಮರಣದಂಡನೆಯಾಗಬೇಕು ಎಂಬುದು. ಮೈಸೂರಿನ ಎಲ್ಲಾ ಮುಸ್ಲಿಮರು ಒಂದಾಗಿ. ಇದಕ್ಕೆ ತಕ್ಕ ಉತ್ತರ ಕೊಡಬೇಕಾಗಿದೆ. ಅವಶ್ಯಕತೆ ಬಂದರೆ ನಮ್ಮ ತಲೆ ಬೇಕಾದರೂ ಕತ್ತರಿಸಿಕೊಳ್ಳುತ್ತೇವೆ. ನಮ್ಮ ಮಕ್ಕಳ ತಲೆ ಬೇಕಾದರೂ ಬಲಿಕೊಡುತ್ತೇವೆ ಎಂದು ಪ್ರಚೋದನಕಾರಿಯಾಗಿ ಮಾತನಾಡಿದ್ದಾರೆ. ಇದನ್ನೂ ಓದಿ: ಮೈಸೂರು: ಅವಹೇಳನಕಾರಿ ಪೋಸ್ಟ್ ವಿಚಾರಕ್ಕೆ ಠಾಣೆ ಮೇಲೆಯೇ ಕಲ್ಲು ತೂರಾಟ – 14 ಪೊಲೀಸರಿಗೆ ಗಾಯ

  • RSSನ ವ್ಯಕ್ತಿ ಕೃತ್ಯ ಮಾಡಿದ್ದಾನೆ.. ಮುಸ್ಲಿಂ ಏರಿಯಾ ಠಾಣೆಯಲ್ಲಿ ಯಾಕೆ ಇಡಬೇಕಿತ್ತು?: ಪೊಲೀಸರ ನಡೆಗೆ ರಾಜಣ್ಣ ಗರಂ

    RSSನ ವ್ಯಕ್ತಿ ಕೃತ್ಯ ಮಾಡಿದ್ದಾನೆ.. ಮುಸ್ಲಿಂ ಏರಿಯಾ ಠಾಣೆಯಲ್ಲಿ ಯಾಕೆ ಇಡಬೇಕಿತ್ತು?: ಪೊಲೀಸರ ನಡೆಗೆ ರಾಜಣ್ಣ ಗರಂ

    – ಮೈಸೂರಿನ ಉದಯಗಿರಿ ಗಲಾಟೆಗೆ ಸಚಿವರ ಬೇಸರ
    – ಅವಹೇಳನಕಾರಿ ಪೋಸ್ಟ್‌; ಆರೋಪಿ ಸುರೇಶ್‌ ಅರೆಸ್ಟ್‌

    ಬೆಂಗಳೂರು: ಮೈಸೂರಿನ ಉದಯಗಿರಿ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ಪ್ರಕರಣ ಸಂಬಂಧ ಪೊಲೀಸರ ನಡೆಗೆ ಸಚಿವ ಕೆ.ಎನ್ ರಾಜಣ್ಣ ಗರಂ ಆಗಿದ್ದಾರೆ.

    ಬೆಂಗಳೂರಿನಲ್ಲಿ ಮಾಧ್ಯಮದೊಂದಿಗೆ ಮಾತನಾಡಿ, ಈ ಪೊಲೀಸರಿಗೆ ಏನಾಗಿದೆ? ಮಿನಿಮಮ್ ಕಾಮನ್ ಸೆನ್ಸ್ ಬೇಡ್ವಾ? ಯಾರೋ ಆರ್‌ಎಸ್‌ಎಸ್ ಅವನು ಕೃತ್ಯ ಮಾಡಿದ್ದಾನೆ. ಅವನ ಮೇಲೆ ಕೇಸ್ ಆಗಿದ್ದು, ಆರೆಸ್ಟ್ ಸಹ ಆಗಿದ್ದಾನೆ. ಆದರೆ ಆತನನ್ನ ಪೊಲೀಸರು ಏಕೆ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಇಟ್ಟರು? ಉದಯಗಿರಿ ಮುಸ್ಲಿಂ ಬಾಹುಳ್ಯ ಏರಿಯಾ ಎಂದು ತಿಳಿದಿದೆ. ಆದರೂ ಅಲ್ಲೇ ಯಾಕೆ ಆರೋಪಿಯನ್ನ ಇಡಬೇಕಿತ್ತು. ಈ ಪೊಲೀಸವರಿಗೆ ಬುದ್ಧಿ ಬೇಡ್ವ. ಸರ್ಕಾರದಲ್ಲಿ ನಾವಷ್ಟೇ ಅಲ್ಲ ಅಧಿಕಾರಿಗಳು ಸರಿಯಾದ ನಿರ್ಧಾರ ಮಾಡಬೇಕು ಎಂದು ಕಿಡಿಕಾರಿದ್ದಾರೆ.

    ಶಾಸಕರ ಮಗನ ರೌಡಿಸಂ ವಿಡಿಯೋ ವೈರಲ್ ವಿಚಾರವಾಗಿ ಪ್ರತಿಕ್ರಿಯಿಸಿ, ಯಾರೇ ಆಗಲಿ ಅಧಿಕಾರಿಗಳ ವಿರುದ್ಧ ಆ ರೀತಿ ಮಾತನಾಡಬಾರದು. ಅಂತಹವರಿಗೆ ಕಾನೂನು ಪ್ರಕಾರ ಶಿಕ್ಷೆ ಆಗಲೇಬೇಕು. ಮಿನಿಸ್ಟರ್ ಆಗಲಿ, ಶಾಸಕ ಆಗಲಿ ಅಥವಾ ಶಾಸಕರ ಮಗನೇ ಆಗಲಿ ಯಾರೂ ಹಾಗೆ ಮಾತನಾಡಬಾರದು. ಈ ರೀತಿ ಮಾತನಾಡುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಆಗಬೇಕು ಎಂದು ಆಗ್ರಹಿಸಿದರು.

    ಇವತ್ತು ದೆಹಲಿಗೆ ಹೋಗುತ್ತಿದ್ದೇನೆ. ಮೊದಲೇ ಹೇಳಿದ ಹಾಗೆ ನನ್ನದು ಮುಚ್ಚುಮರೆ ವ್ಯಾಪಾರ ಇಲ್ಲ. ಇಲಾಖೆಗೆ ಸಂಬಂಧಿಸಿದಂತೆ ಕೇಂದ್ರ ಸಚಿವರನ್ನು ಹಾಗೂ ಅಮಿತ್ ಶಾ ಅವರನ್ನ ಭೇಟಿ ಆಗುತ್ತಿದ್ದೇನೆ. ಇನ್ನು ಹೈಕಮಾಂಡ್ ನಾಯಕರಾದ ವೇಣುಗೋಪಾಲ್, ಸುರ್ಜೇವಾಲಾರನ್ನ ಭೇಟಿ ಆಗುತ್ತೇನೆ. ಹೇಳಲು ಒಂದೆರಡಲ್ಲ ಬೇಕಾದಷ್ಟಿದೆ. ಪಕ್ಷ ಸಂಘಟನೆಗೆ ಸಮಾವೇಶಗಳ ಅಗತ್ಯ ಇದೆ. ಯಾವುದೇ ಸಮುದಾಯವೇ ಇರಲಿ, ಪಕ್ಷದ ಒಳಗೆ ಇರಲಿದೆ. ಗುಂಪುಗಾರಿಕೆ ಮಾಡುವುದಿಲ್ಲ. ಕೆಪಿಸಿಸಿ ಅಧ್ಯಕ್ಷರ ವಿಚಾರ ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡುತ್ತೇವೆ. ಬಹಿರಂಗವಾಗಿ ಮಾತಾನಾಡುವುದಿಲ್ಲ ಎಂದರು.

  • ಔಷಧಿ ಕೊಳ್ಳಲು ಮೆಡಿಕಲ್ ಸ್ಟೋರ್‌ಗೆ ಹೋದಾಗಲೇ ಕುಸಿದು ವ್ಯಕ್ತಿ ಸಾವು

    ಔಷಧಿ ಕೊಳ್ಳಲು ಮೆಡಿಕಲ್ ಸ್ಟೋರ್‌ಗೆ ಹೋದಾಗಲೇ ಕುಸಿದು ವ್ಯಕ್ತಿ ಸಾವು

    ಮೈಸೂರು: ಔಷಧಿ ಕೊಳ್ಳಲು ಮೆಡಿಕಲ್‌ ಸ್ಟೋರ್‌ಗೆ ಹೋಗಿದ್ದಾಗಲೇ ವ್ಯಕ್ತಿಯೊಬ್ಬರು ಹೃದಯಾಘಾತದಿಂದ (Heart Attack) ಕುಸಿದು ಸಾವನ್ನಪ್ಪಿರುವ ಘಟನೆ ಮೈಸೂರಿನಲ್ಲಿ (Mysuru) ನಡೆದಿದೆ.

    ಕ್ಯಾತಮಾರನಹಳ್ಳಿಯಲ್ಲಿ ಚಿಕನ್ ಅಂಗಡಿ ನಡೆಸುತ್ತಿದ್ದ ಜಗದೀಶ್ (38) ಮೃತ ವ್ಯಕ್ತಿ. ಉದಯಗಿರಿಯ (Udayagiri) ಮೆಡಿಕಲ್ ಸ್ಟೋರ್‌ಗೆ (Medical Store) ಔಷಧಿ ಕೊಳ್ಳಲು ಹೋಗಿದ್ದಾಗ ಜಗದೀಶ್ ಏಕಾಏಕಿ ಕುಸಿದು ಬಿದ್ದಿದ್ದಾರೆ. ಇದಕ್ಕೆ ಸಂಬಂಧಿಸಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಎದೆ ನೋವು ಕಾಣಿಸಿಕೊಂಡ ಹಿನ್ನೆಲೆ ಜಗದೀಶ್ ಮೆಡಿಕಲ್ ಸ್ಟೋರ್‌ಗೆ ಔಷಧಿ ಕೊಳ್ಳಲು ಬಂದಿದ್ದರು. ಜಗದೀಶ್ ನೋವಿನ ಹಿನ್ನೆಲೆ ತಮ್ಮ ಎದೆಗೆ ಕೈಹಿಡಿದುಕೊಂಡು ಬಂದಿರುವುದು ಸಿಸಿಟಿವಿಯಲ್ಲಿ ಕಂಡುಬಂದಿದೆ. ಮೆಡಿಕಲ್ ಸಿಬ್ಬಂದಿ ಜಗದೀಶ್ ಅವರನ್ನು ವಿಚಾರಿಸುತ್ತಿದ್ದ ವೇಳೆಯೇ ಏಕಾಏಕಿ ಕುಸಿದು ಬಿದ್ದಿದ್ದಾರೆ. ಇದನ್ನೂ ಓದಿ: ಶಿವಮೊಗ್ಗಕ್ಕೆ ಬಿಜೆಪಿ ಸತ್ಯಶೋಧನಾ ಸಮಿತಿ ಭೇಟಿ – ಆಸ್ಪತ್ರೆಯಲ್ಲಿ ಗಾಯಾಳುಗಳ ಆರೋಗ್ಯ ವಿಚಾರಿಸಿದ ನಾಯಕರು

    ತಕ್ಷಣ ಮೆಡಿಕಲ್ ಸಿಬ್ಬಂದಿ ಜಗದೀಶ್ ಕಡೆಗೆ ಓಡಿ ಹೋಗಿ ಅವರನ್ನು ಎಬ್ಬಿಸಲು ಪ್ರಯತ್ನಿಸಿದ್ದಾರೆ. ಆದರೆ ಅಷ್ಟೊತ್ತಿಗಾಗಲೇ ಜಗದೀಶ್ ಪ್ರಾಣಪಕ್ಷಿ ಹಾರಿಹೋಗಿದೆ. ಉದಯಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ನಾನು ಕಾಂಗ್ರೆಸ್ ಸದಸ್ಯೆಯಲ್ಲ – ಉಲ್ಟಾ ಹೊಡೆದ ಶಾಸಕಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]