Tag: ಉತ್ತಾರಖಂಡ್

  • ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆ –   ಇಂದು ಮಧ್ಯಾಹ್ನ 3.30ಕ್ಕೆ ಚುನಾವಣಾ ಆಯೋಗದಿಂದ ದಿನಾಂಕ ಪ್ರಕಟ

    ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆ – ಇಂದು ಮಧ್ಯಾಹ್ನ 3.30ಕ್ಕೆ ಚುನಾವಣಾ ಆಯೋಗದಿಂದ ದಿನಾಂಕ ಪ್ರಕಟ

    ನವದೆಹಲಿ: ಫೆಬ್ರವರಿ ಮತ್ತು ಮಾರ್ಚ್‍ನಲ್ಲಿ ನಡೆಯಲಿರುವ ಐದು ರಾಜ್ಯಗಳ ವಿಧಾನಸಭೆಗೆ ಇಂದು ಚುನಾವಣಾ ದಿನಾಂಕ ನಿಗಧಿಯಾಗಲಿದೆ. ಮಧ್ಯಾಹ್ನ 3:30 ಕ್ಕೆ ಕೇಂದ್ರ ಚುನಾವಣಾ ಆಯೋಗ ಸುದ್ದಿಗೋಷ್ಠಿ ಕರೆದಿದ್ದು ಐದು ರಾಜ್ಯಗಳಿಗೆ ಚುನಾವಣಾ ದಿನಾಂಕ ಪ್ರಕಟಿಸಲಿದೆ.

    ಫೆಬ್ರವರಿ ಮಾರ್ಚ್ ವೇಳೆಗೆ ಉತ್ತರ ಪ್ರದೇಶ, ಪಂಜಾಬ್, ಗೋವಾ, ಮಣಿಪುರ ಮತ್ತು ಉತ್ತಾರಖಂಡ್‍ಗೆ ಚುನಾವಣೆ ನಡೆಯಬೇಕಿದೆ. ಈಗಾಗಲೇ ಕೇಂದ್ರ ಚುನಾವಣಾ ಆಯೋಗವು ಕೂಡಾ ಸಾಕಷ್ಟು ತಯಾರಿ ಮಾಡಿಕೊಂಡಿದೆ. ಇದನ್ನೂ ಓದಿ: ಅಧಿಕಾರದಲ್ಲಿದ್ದಾಗ ಕುಂಭಕರ್ಣ ನಿದ್ದೆ, ಈಗ ಮೇಕೆದಾಟು ಹೋರಾಟ: ಡಿಕೆಶಿಗೆ ಕಾರಜೋಳ ಟಾಂಗ್

    ಕೊರೊನಾ ಮೂರನೇ ಅಲೆ ಹೆಚ್ಚುತ್ತಿರುವ ಹಿನ್ನಲೆ ಚುನಾವಣೆ ಮುಂದೂಡಬೇಕು ಎನ್ನುವ ಒತ್ತಡ ಕೇಳಿ ಬಂದಿತ್ತು. ಈ ಸಂಬಂಧ ರಾಜಕೀಯ ಪಕ್ಷಗಳ ಜೊತೆಗೆ ಆಯೋಗ ಸಭೆ ನಡೆಸಿತ್ತು. ಅಲ್ಲದೇ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಿ ಚುನಾವಣೆ ನಡೆಸುವ ಸಾಧ್ಯತೆಗಳ ಬಗ್ಗೆ ಕೇಂದ್ರ ಆರೋಗ್ಯ ಇಲಾಖೆ ಮತ್ತು ಗೃಹ ಇಲಾಖೆಯ ಜೊತೆಗೂ ಮುಖ್ಯ ಆಯುಕ್ತ ಸುಶೀಲ್ ಚಂದ್ರ ಸಭೆ ನಡೆಸಿದ್ದರು. ಇದನ್ನೂ ಓದಿ: ಕೊರೊನಾ ನಿಯಮ ಉಲ್ಲಂಘಿಸಿ ಹೋರಾಟ ಮಾಡ್ಬೇಡಿ – ಕಾಂಗ್ರೆಸ್‍ಗೆ ಕಾರಜೋಳ ಮನವಿ

    ಸಭೆಯಲ್ಲಿ ರಾಜಕೀಯ ಪಕ್ಷಗಳು ನಿಗಧಿತ ಅವಧಿಯಲ್ಲಿ ಚುನಾವಣೆ ನಡೆಯಬೇಕು ಎಂದು ಮನವಿ ಮಾಡಿವೆ. ಅಲ್ಲದೇ ವ್ಯಾಕ್ಸಿನೇಷನ್ ಹೆಚ್ಚಿಸುವ ಮೂಲಕ ಕೊರೊನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುವ ಮೂಲಕ ಚುನಾವಣೆ ನಡೆಸಲು ಸಾಧ್ಯವಿದೆ ಎಂದು ಆರೋಗ್ಯ ಮತ್ತು ಗೃಹ ಇಲಾಖೆಯ ಅಧಿಕಾರಿಗಳು ಭರವಸೆ ನೀಡಿದ ಬಳಿಕ ಆಯೋಗ ದಿನಾಂಕ ಪ್ರಕಟಿಸಲು ತಿರ್ಮಾನಿಸಿದೆ.

    ಉತ್ತರ ಪ್ರದೇಶದಲ್ಲಿ 403 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, 6-7 ಹಂತಗಳಲ್ಲಿ ಮತದಾನ ನಡೆಯಬಹುದು ಎನ್ನಲಾಗಿದೆ. ಪಂಜಾಬ್ ನ 117, ಉತ್ತರಾಖಂಡ 70, ಗೋವಾದ 40 ಸ್ಥಾನಗಳಿಗೆ ಒಂದೇ ಹಂತದಲ್ಲಿ ಮತದಾನ ನಡೆಯಬಹುದು ಎನ್ನಲಾಗಿದ್ದು, ಮಣಿಪುರದ 60 ಸ್ಥಾನಗಳಿಗೆ ಭದ್ರತೆ ಕಾರಣಗಳಿಗೆ ಎರಡು ಹಂತದಲ್ಲಿ ಚುನಾವಣೆ ನಡೆಯಬಹುದು ಎಂದು ಮೂಲಗಳು ಹೇಳಿವೆ.

  • ಹರಿದ್ವಾರದ ಮಹಿಳೆಯನ್ನು ಉಪಚರಿಸಿ ಪೊಲೀಸರಿಗೆ ಮಾಹಿತಿ ನೀಡಿದ ಚಿಕ್ಕಮಗಳೂರಿಗರು

    ಹರಿದ್ವಾರದ ಮಹಿಳೆಯನ್ನು ಉಪಚರಿಸಿ ಪೊಲೀಸರಿಗೆ ಮಾಹಿತಿ ನೀಡಿದ ಚಿಕ್ಕಮಗಳೂರಿಗರು

    ಚಿಕ್ಕಮಗಳೂರು: ಉತ್ತರಾಖಂಡ್ ರಾಜ್ಯದ ಹರಿದ್ವಾರ ಮೂಲದ ಮಹಿಳೆಯೊಬ್ಬರನ್ನು ಚಿಕ್ಕಮಗಳೂರಿನ ಜನತೆ ಉಪಚರಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ಕಳೆದ ಮೂರ್ನಾಲ್ಕು ದಿನಗಳಿಂದ ಅನ್ನ-ನೀರು ಇಲ್ಲದೆ ನಿತ್ರಾಣಗೊಂಡು ಮೂಡಿಗೆರೆ ತಾಲೂಕಿನ ಬಾಳೂರಿನ ಬಸ್ ನಿಲ್ದಾಣದಲ್ಲಿ ಸುಮಾರು 55 ವರ್ಷದ ಈ ಮಹಿಳೆಯೊಬ್ಬರು ಬಿದ್ದಿದ್ದರು. ಉರ್ದು ಮಾತನಾಡುತ್ತಿರುವ ಇವರು ತನ್ನ ಹೆಸರು ಅನಿಸ್ ಕೋಟಾನ್ ಎಂದು ಹೇಳುತ್ತಿದ್ದಾರೆ.

    ಪತಿ ನಿಸಾರ್ ಅಹಮದ್ ತೀರಿಕೊಂಡ ಬಳಿಕ ದಾರಿ ತಪ್ಪಿ ಬಸ್ಸೊಂದನ್ನ ಹತ್ತಿ ಇಲ್ಲಿಗೆ ಬಂದಿರೋದಾಗಿ ಹೇಳುತ್ತಿದ್ದಾರೆ. ನನ್ನ ಸ್ವಂತ ಊರು ಹರಿದ್ವಾರದ ಬಳಿ ಇರೋದು. ನಾನು ಹರಿದ್ವಾರಕ್ಕೆ ಹೋದ್ರೆ ಅಲ್ಲಿಂದ ನನ್ನ ಗ್ರಾಮಕ್ಕೆ ಹೋಗುತ್ತೇನೆ ಎಂದು ಹೇಳಿದ್ದಾರೆ. ಕಳೆದ ಎರಡು ದಿನಗಳಿಂದ ಬಸ್ ನಿಲ್ದಾಣದಲ್ಲೇ ತಂಗಿದ್ದ ಈಕೆಯನ್ನು ಸ್ಥಳೀಯರು ಉಪಚರಿಸಿ, ಊಟ ಹಾಕಿ, ಹೊಸ ಬಟ್ಟೆ ಕೊಡಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

  • ಪ್ರವಾಹದ ನೀರಿಗೆ ರಸ್ತೆಯಲ್ಲಿದ್ದ 2 ಕಾರು, ರಿಕ್ಷಾ ಕೊಚ್ಚಿ ಹೋಯ್ತು – ವಿಡಿಯೋ

    ಪ್ರವಾಹದ ನೀರಿಗೆ ರಸ್ತೆಯಲ್ಲಿದ್ದ 2 ಕಾರು, ರಿಕ್ಷಾ ಕೊಚ್ಚಿ ಹೋಯ್ತು – ವಿಡಿಯೋ

    ಡೆಹ್ರಾಡೂನ್: ಉತ್ತರಾಖಂಡ್‍ನಲ್ಲಿ ಭಾರೀ ಮಳೆಯಗುತ್ತಿದ್ದು ಪ್ರವಾಹದ ರಭಸಕ್ಕೆ ರಸ್ತೆಯಲ್ಲಿದ್ದ ಎರಡು ಕಾರುಗಳು ಕೊಚ್ಚಿಕೊಂಡು ಹೋಗಿವೆ.

    ಹಲ್ಡ್ ವಾನಿ 2 ಕಾರುಗಳು ಪ್ರವಾಹಕ್ಕೆ ಕೊಚ್ಚಿಹೋಗಿದ್ದು, ಕಾರಿನಲ್ಲಿದ್ದ ಜನರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ನೀರಿನ ಹರಿವು ಹೆಚ್ಚಾಗುತ್ತಿದ್ದಂತೆ ಕಾರಿನಲ್ಲಿದ್ದ 4 ಪ್ರಯಾಣಿಕರು ಮತ್ತೊಂದು ಕಾರಿನ ಮೇಲೆ ಹತ್ತಿದ್ದಾರೆ.

    ಕೊನೆಯ ವ್ಯಕ್ತಿ ಹತ್ತುತ್ತಿದ್ದಂತೆ ಸ್ಯಾಂಟ್ರೋ ಕಾರು ಕೊಚ್ಚಿ ಹೋಗಿದೆ. ಕೆಲವೇ ಕ್ಷಣದಲ್ಲಿ ಪ್ರಯಾಣಿಕರು ರಕ್ಷಣೆ ಪಡೆಯಲು ಹತ್ತಿದ್ದ ಇನ್ನೊಂದು ಕಾರು ಕೊಚ್ಚಿ ಹೋಗಿದೆ. ಈ ಕಾರು ಕೊಚ್ಚಿ ಹೋಗುವುದರ ಒಳಗಡೆ ಪ್ರಯಾಣಿಕರನ್ನು ರಕ್ಷಣೆ ಮಾಡಲಾಗಿತ್ತು.

    ಎರಡು ಕಾರಿನ ಜೊತೆ ಅಲ್ಲೆ ನಿಂತಿದ್ದ ಆಟೊ ರಿಕ್ಷಾ ಸಹ ಪ್ರವಾಹದ ನೀರಿಗೆ ಕೊಚ್ಚಿ ಹೋಗಿದೆ. ಕೆಲವು ಸೆಕೆಂಡ್ ಗಳಲ್ಲಿ ನಡೆದ ಈ ಎಲ್ಲ ದೃಶ್ಯಗಳನ್ನು ಸಮೀಪದಲ್ಲಿದ್ದ ವ್ಯಕ್ತಿಗಳು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದು ವಿಡಿಯೋ ವೈರಲ್ ಆಗಿದೆ.