Tag: ಉತ್ತರ ಪ್ರದೇಶ

  • ‌ʻಬೆತ್ತಲೆಯಾಗಿ ಬರ್ತಾರೆ, ಮಹಿಳೆಯರನ್ನ ಹೊತ್ತೊಯ್ತಾರೆʼ – ಮೀರತ್‌ನಲ್ಲಿ ನಡುಕ ಹುಟ್ಟಿಸಿದ ʻನಗ್ನ ಗ್ಯಾಂಗ್‌ʼ

    ‌ʻಬೆತ್ತಲೆಯಾಗಿ ಬರ್ತಾರೆ, ಮಹಿಳೆಯರನ್ನ ಹೊತ್ತೊಯ್ತಾರೆʼ – ಮೀರತ್‌ನಲ್ಲಿ ನಡುಕ ಹುಟ್ಟಿಸಿದ ʻನಗ್ನ ಗ್ಯಾಂಗ್‌ʼ

    – ರಕ್ಷಣೆಗೆ ಡ್ರೋನ್‌, ಸಿಸಿಟಿವಿ ಕಣ್ಗಾವಲು

    ಲಕ್ನೋ: ʻದಂಡುಪಾಳ್ಯʼ ಸಿನಿಮಾವನ್ನ ನೀವು ನೋಡಿರಬಹುದು, ಈ ಸಿನಿಮಾದಲ್ಲಿ (Cinema) ಒಂಟಿ ಮನೆಗಳನ್ನ ಟಾರ್ಗೆಟ್‌ ಮಾಡುವ ಗ್ಯಾಂಗ್‌ ಮಹಿಳೆಯರನ್ನ ಅತ್ಯಾಚಾರಗೈದು ಭೀಕರವಾಗಿ ಕೊಲೆ ಮಾಡಿ ಎಸ್ಕೇಪ್‌ ಆಗ್ತಿತ್ತು. ಇದೀಗ ಅದಕ್ಕಿಂತಲೂ ಭಯಾನಕವಾದ ಗ್ಯಾಂಗ್‌ವೊಂದು ಉತ್ತರ ಪ್ರದೇಶದ ಮೀರತ್‌ನಲ್ಲಿ (UP’s Meerut) ಹುಟ್ಟಿಕೊಂಡಿದೆ.

    ಹೌದು.. ಇದಕ್ಕೆ ʻನಗ್ನ ಗ್ಯಾಂಗ್‌ ಅಥವಾ ಬೆತ್ತಲೆ ಗ್ಯಾಂಗ್‌ʼ (Nude Gang) ಅಂತ ಕರೆಯಲಾಗ್ತಿದೆ. ಬೆತ್ತಲೆಯಾಗಿ ಬರುವ ಈ ಗ್ಯಾಂಗ್‌ ಸದಸ್ಯರು ಮಹಿಳೆಯರನ್ನ ಹೊತ್ತೊಯ್ಯುತ್ತಿದ್ದಾರೆ. ಮೀರತ್‌ನಲ್ಲಿ ಇತ್ತೀಚೆಗೆ ಇಂತಹ ನಾಲ್ಕು ಪ್ರಕರಣ ವರದಿಯಾಗಿದ್ದು, ದೌರಾಲಾ ಗ್ರಾಮದ ಮಹಿಳೆಯರಲ್ಲಿ ನಡುಕ ಹುಟ್ಟಿಸಿದೆ. ರಾತ್ರಿ ವೇಳೆ ಮಹಿಳೆಯರು ಮನೆಯಿಂದಾಚೆ ಬರೋದಕ್ಕೆ ಭಯ ಪಡುವಂತಾಗಿದೆ. ವಿಷಯದ ಗಂಭೀರತೆ ಪರಿಗಣಿಸಿರುವ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಗ್ಯಾಂಗ್‌ ಪತ್ತೆಹಚ್ಚಲು ಡ್ರೋನ್‌, ಸಿಸಿಟಿವಿಗಳನ್ನು (Drone And CCTV) ಕಣ್ಗಾವಲಿಗೆ ಇರಿಸಲಾಗಿದೆ.

    ಈ ಕುರಿತು ದೌರಾಲಾ ಗ್ರಾಮದ ಮುಖ್ಯಸ್ಥ ರಾಜೇಂದ್ರ ಕುಮಾರ್ ಮಾತನಾಡಿ, ಕಳೆದ ಕೆಲ ದಿನಗಳಲ್ಲಿ ಮಹಿಳೆಯರನ್ನು ಹೊತ್ತೊಯ್ದ ನಾಲ್ಕು ಘಟನೆಗಳು ವರದಿಯಾಗಿವೆ. ಇದಕ್ಕೂ ಹಿಂದಿನ ಕೆಲ ಘಟನೆಗಳು ಜನರ ಭಯದಿಂದ ಬೆಳಕಿಗೆ ಬಂದಿಲ್ಲ. ಈ ಮೊದಲು ಗ್ರಾಮಸ್ಥರು ಇಲ್ಲಿನ ಘಟನೆಯನ್ನ ಗಂಭೀರವಾಗಿ ಪರಿಗಣಿಸಲಿಲ್ಲ. ಆದ್ರೆ ಈಗ ಪರಿಸ್ಥಿತಿ ಕೈಮೀರಿದ್ದು, ಭಯದ ವಾತಾವರಣ ನಿರ್ಮಾಣವಾಗಿದೆ. ಈ ಗ್ಯಾಂಗ್‌ ಮಹಿಳೆಯರನ್ನೇ ಟಾರ್ಗೆಟ್‌ ಮಾಡಿ ಹೊತ್ತೊಯ್ಯುತ್ತಿದ್ದಾರೆ. ಪೊಲೀಸರು ಕೂಡಲೇ ಗ್ಯಾಂಗ್‌ಅನ್ನು ಪತ್ತೆಹಚ್ಚಬೇಕೆಂದು ಆಗ್ರಹಿಸಿದ್ದಾರೆ.

    ಸಿಸಿಟಿವಿ, ಡ್ರೋನ್‌ ಕಣ್ಗಾವಲು
    ಪ್ರಕರಣದ ಗಂಭೀರತೆ ಪರಿಗಣಿಸಿದ ಬಳಿಕ ಪೊಲೀಸರು ತನಿಖೆಗಿಳಿದಿದ್ದಾರೆ. ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಹಲವು ಗಂಟೆಗಳ ಕಾಲ ಡ್ರೋನ್‌ ಮೂಲಕ ಕಾರ್ಯಾಚರಣೆ ನಡೆಸಲಾಗಿದೆ. ಜೊತೆಗೆ ಹತ್ತಿರದ ಪ್ರದೇಶಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನ ಅಳವಡಿಸಲಾಗಿದ್ದು, ಸಾರ್ವಜನಿಕರಿಗೆ ಮುನ್ನೆಚ್ಚರಿಕೆ ನೀಡಲಾಗಿದೆ.

    ಇನ್ನೂ ಈ ಪ್ರದೇಶದಲ್ಲಿ ಮಹಿಳಾ ಪೊಲೀಸರನ್ನ ಭದ್ರತೆಗೆ ನಿಯೋಜಿಸಲಾಗಿದ್ದು, ಶಂಕಿತರಿಗಾಗಿ ಹುಡುಕಾಟ ನಡೆಸುತ್ತಿದ್ದೇವೆ ಎಂದು ಸ್ಥಳ ಪರಿಶೀಲನೆ ನಡೆಸಿದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ವಿಪಿನ್ ಟಾಡಾ ತಿಳಿಸಿದ್ದಾರೆ.

  • ಮುಂಬೈನಲ್ಲಿ ಬಾಂಬ್ ಸ್ಫೋಟಿಸುವುದಾಗಿ ಬೆದರಿಕೆ – ನೋಯ್ಡಾದಲ್ಲಿ ಆರೋಪಿ ಅರೆಸ್ಟ್

    ಮುಂಬೈನಲ್ಲಿ ಬಾಂಬ್ ಸ್ಫೋಟಿಸುವುದಾಗಿ ಬೆದರಿಕೆ – ನೋಯ್ಡಾದಲ್ಲಿ ಆರೋಪಿ ಅರೆಸ್ಟ್

    ಲಕ್ನೋ: ಮುಂಬೈನಲ್ಲಿ (Mumbai) ಬಾಂಬ್ ಸ್ಫೋಟಿಸುವುದಾಗಿ (Bomb Blast) ಬೆದರಿಕೆ ಹಾಕಿದ್ದ ಆರೋಪಿಯನ್ನು ಮುಂಬೈ ಪೊಲೀಸರು  (Mumbai Police) ನೋಯ್ಡಾದಲ್ಲಿ (Noida) ಬಂಧಿಸಿದ್ದಾರೆ.

    ಬಿಹಾರ ಮೂಲದ ಅಶ್ವಿನ್ ಕುಮಾರ್ ಸುಪ್ರಾ (50) ಬಂಧಿತ ವ್ಯಕ್ತಿ. ಆರೋಪಿ ಅಶ್ವಿನ್ ಕುಮಾರ್ ನೋಯ್ಡಾದ ಮೊಬೈಲ್ ಫೋನ್ ಮತ್ತು ಸಿಮ್ ಕಾರ್ಡ್ ಬಳಸಿ ಬಾಂಬ್ ಬೆದರಿಕೆ ಹಾಕಿದ್ದಾನೆ. ತನಿಖೆಯ ಸಮಯದಲ್ಲಿ, ಬೆದರಿಕೆ ಹಾಕಲು ಬಳಸಲಾದ ಫೋನ್ ಮತ್ತು ಸಿಮ್ ಅನ್ನು ಸಹ ಅಪರಾಧ ವಿಭಾಗ ವಶಪಡಿಸಿಕೊಂಡಿದೆ. ಸದ್ಯ ಆರೋಪಿಯನ್ನು ಮುಂಬೈಗೆ ಕರೆದೊಯ್ಯಲಾಗುತ್ತಿದೆ. ಮುಂಬೈ ತಲುಪಿದ ಬಳಿಕ ಹೆಚ್ಚಿನ ವಿಚಾರಣೆ ನಡೆಯಲಿದೆ. ಇದನ್ನೂ ಓದಿ: 14 ಪಾಕಿಸ್ತಾನಿ ಉಗ್ರರು, 400 ಕೆಜಿ RDX, 34 ಮಾನವ ಬಾಂಬ್ ಸ್ಫೋಟ ನಡೆಯಲಿದೆ; ಮುಂಬೈಗೆ ಉಗ್ರ ಬೆದರಿಕೆ

    ಪಾಕಿಸ್ತಾನ ಲಷ್ಕರ್-ಎ-ಜಿಹಾದಿ ಸಂಘಟನೆಯ 14 ಉಗ್ರರು ಭಾರತ ಪ್ರವೇಶಿಸಿದ್ದಾರೆ. 400 ಕೆಜಿ ಆರ್‌ಡಿಎಕ್ಸ್ ಸ್ಫೋಟಿಸಿ ಜನರನ್ನ ಕೊಲ್ಲಲಿದ್ದಾರೆ. ಅಲ್ಲದೇ ನಗರಾದ್ಯಂತ 34 ವಾಹನಗಳಲ್ಲಿ ಮಾನವ ಬಾಂಬ್ ಸ್ಫೋಟಿಸಲಾಗುವುದು ಎಂದು ಆರೋಪಿ ಅಶ್ವಿನ್ ಕುಮಾರ್ ಮುಂಬೈ ಸಂಚಾರ ಪೊಲೀಸ್ ಠಾಣೆಗೆ ಸಂದೇಶ ಕಳುಹಿಸಿದ್ದ.

    ತನಿಖೆ ವೇಳೆ ಮೂರು ತಿಂಗಳು ಜೈಲಿಗೆ ಹೋಗಿದ್ದಕ್ಕೆ ಪ್ರತಿಕಾರ ತೀರಿಸಿಕೊಳ್ಳಲು ಪ್ರತಿಕಾರ ತೀರಿಸಿಕೊಳ್ಳಲು ಆರೋಪಿ ಹೀಗೆ ಬೆದರಿಕೆ ಹಾಕಿದ್ದಾನೆ. ಅಶ್ವಿನ್ ಕುಮಾರ್ ಮುಂಬೈ ಸಂಚಾರ ಪೊಲೀಸರಿಗೆ ಫಿರೋಜ್ ಎಂಬ ಮುಸ್ಲಿಂ ವ್ಯಕ್ತಿಯಂತೆ ನಟಿಸಿ ಬಾಂಬ್ ಬೆದರಿಕೆ ಕಳುಹಿಸಿದ್ದಾನೆ. ಫಿರೋಜ್ ಹೆಸರಿನ ಸ್ನೇಹಿತನ ಹೊಂದಿದ್ದ ಅಶ್ವಿನ್ ಕುಮಾರ್, ಹಣಕಾಸಿನ ವಿಚಾರಕ್ಕೆ ಫಿರೋಜ್ ಜೊತೆಗೆ ಜಗಳವಾಗಿತ್ತು ಈ ಹಿನ್ನಲೆ ಪೊಲೀಸರು, ಸ್ನೇಹಿತನ ಮೇಲೆ ಪ್ರತಿಕಾರ ತೀರಿಸಿಕೊಳ್ಳಲು ಫಿರೋಜ್ ಹೆಸರಿನಲ್ಲಿ ಸಂದೇಶ ಕಳುಹಿಸಿದ್ದ ಎಂದು ಪೊಲೀಸ್ ಮೂಲಗಳು ಹೇಳಿವೆ. ಇದನ್ನೂ ಓದಿ: ಮದುವೆ ಆಗೋದಾಗಿ ನಂಬಿಸಿ ಅತ್ಯಾಚಾರ ಆರೋಪ – ಎಸ್‌ಎಎಫ್ ಪೊಲೀಸ್ ಕಾನ್‌ಸ್ಟೆಬಲ್ ಅರೆಸ್ಟ್

  • ನನ್ನ ಹಣವನ್ನೆಲ್ಲ ತಿಂದು ತೇಗಿದ್ದೀಯಾ: ಡಿವೋರ್ಸ್‌ ವಿಚಾರಕ್ಕೆ ಪತ್ನಿಗೆ ಗುಂಡಿಟ್ಟು ಕೊಂದ ಪತಿ

    ನನ್ನ ಹಣವನ್ನೆಲ್ಲ ತಿಂದು ತೇಗಿದ್ದೀಯಾ: ಡಿವೋರ್ಸ್‌ ವಿಚಾರಕ್ಕೆ ಪತ್ನಿಗೆ ಗುಂಡಿಟ್ಟು ಕೊಂದ ಪತಿ

    ಲಕ್ನೋ: ಉತ್ತರ ಪ್ರದೇಶದ (Uttar Pradesh) ಗೋರಖ್‌ಪುರದ ಜನದಟ್ಟಣೆಯ ಮಾರುಕಟ್ಟೆಯಲ್ಲಿ ಬುಧವಾರ ತನ್ನ ಹೆಂಡತಿಯನ್ನು ಗುಂಡಿಕ್ಕಿ ಕೊಂದ ಆರೋಪದ ಮೇಲೆ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

    ಮಮತಾ ಚೌಹಾಣ್‌ (33) ಕೊಲೆಯಾದ ಮಹಿಳೆ. ವಿಶ್ವಕರ್ಮ ಚೌಹಾಣ್‌ ಹತ್ಯೆ ಆರೋಪಿ. ವಿಚ್ಛೇದನ ಕುರಿತು ಪತ್ನಿಯೊಂದಿಗೆ ಜಗಳ ತೆಗೆದು ಹತ್ಯೆ ಮಾಡಿದ್ದಾನೆ. ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: 14 ಪಾಕಿಸ್ತಾನಿ ಉಗ್ರರು, 400 ಕೆಜಿ RDX, 34 ಮಾನವ ಬಾಂಬ್ ಸ್ಫೋಟ ನಡೆಯಲಿದೆ; ಮುಂಬೈಗೆ ಉಗ್ರ ಬೆದರಿಕೆ

    ಈ ದಂಪತಿ 14 ವರ್ಷಗಳ ಹಿಂದೆ ವಿವಾಹವಾಗಿದ್ದರು. ಅವರಿಗೆ 13 ವರ್ಷದ ಮಗಳು ಇದ್ದಾಳೆ. ‘ಪತ್ನಿಯನ್ನು ಹತ್ಯೆ ಮಾಡಿರುವುದಕ್ಕೆ ನನಗೆ ಯಾವುದೇ ಪಶ್ಚಾತ್ತಾಪ ಇಲ್ಲ. ನನ್ನ ಹಣವನ್ನೆಲ್ಲ ತಿಂದು ತೇಗಿದ್ದಾಳೆ’ ಎಂದು ವಿಚಾರಣೆ ವೇಳೆ ಆರೋಪಿ ಹೇಳಿಕೆ ನೀಡಿದ್ದಾನೆ.

    ಮಮತಾ ಚೌಹಾಣ್‌ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. ತನ್ನ ಪತಿಯಿಂದ ಪ್ರತ್ಯೇಕವಾಗಿ ಮಗಳೊಂದಿಗೆ ವಾಸಿಸುತ್ತಿದ್ದಳು. ವಿಚ್ಛೇದನ ವಿಚಾರವಾಗಿ ಇಬ್ಬರ ನಡುವೆಯೂ ಜಗಳವಾಗಿದೆ. ಅಂಗಡಿಯೊಂದರ ಬಳಿ ನಡೆದ ತೀವ್ರ ವಾಗ್ವಾದದ ನಂತರ, ಚೌಹಾಣ್ ಪಿಸ್ತೂಲನ್ನು ಹೊರತೆಗೆದು ಆಕೆಯ ಮೇಲೆ ಎರಡು ಸುತ್ತು ಗುಂಡು ಹಾರಿಸಿದ್ದಾನೆ. ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ಸ್ಪೈ ಕ್ಯಾಮೆರಾ ಬಳಸಿ ಮಹಿಳೆ ವೀಡಿಯೋ ರೆಕಾರ್ಡ್‌ – ದೆಹಲಿಯಲ್ಲಿ ಪೈಲಟ್‌ ಬಂಧನ

    ಮಹಿಳೆಯನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು. ಅಷ್ಟರಲ್ಲಿ ಆಕೆ ಮೃತಪಟ್ಟಿದ್ದಾಳೆ. ಮೃತ ಮಹಿಳೆ ಮಗಳು ಪೊಲೀಸ್‌ ಠಾಣೆಗೆ ದೂರು ನೀಡಿದ್ದಾಳೆ. ಅಮ್ಮನಿಗೆ ಅಪ್ಪ ಕಿರುಕುಳ ನೀಡುತ್ತಿದ್ದ, ಅಕ್ರಮ ಸಂಬಂಧ ಹೊಂದಿದ್ದ ಎಂದು ದೂರಿನಲ್ಲಿ ತಿಳಿಸಿದ್ದಾಳೆ.

  • ಸಮೋಸಾ ಕೊಡಿಸಲಿಲ್ಲ ಅಂತ ವ್ಯಕ್ತಿ ಮೇಲೆ ಪತ್ನಿ, ಕುಟುಂಬಸ್ಥರಿಂದ ಹಲ್ಲೆ

    ಸಮೋಸಾ ಕೊಡಿಸಲಿಲ್ಲ ಅಂತ ವ್ಯಕ್ತಿ ಮೇಲೆ ಪತ್ನಿ, ಕುಟುಂಬಸ್ಥರಿಂದ ಹಲ್ಲೆ

    ಲಕ್ನೋ: ಸಮೋಸಾ ತರದಿದ್ದಕ್ಕೆ ಪತ್ನಿ ಮತ್ತು ಆಕೆಯ ಸಂಬಂಧಿಕರು ವ್ಯಕ್ತಿಯೊಬ್ಬನನ್ನು ಥಳಿಸಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಕೊಲೆ ಯತ್ನದ ಆರೋಪದ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

    ಆನಂದಪುರದ ನಿವಾಸಿ ಶಿವಂ ಮೇಲೆ ಆತನ ಪತ್ನಿ ಸಂಗೀತಾ, ಆಕೆಯ ಪೋಷಕರು ಉಷಾ, ರಾಮ್‌ಲಡೈಟ್ ಮತ್ತು ಮಾವ ರಾಮೋತಾರ್ ಹಲ್ಲೆ ನಡೆಸಿದ್ದಾರೆ. ಈ ಸಂಬಂಧ ಶಿವಂ ತಾಯಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

    ಸಂಗೀತಾ ತನ್ನ ಪತಿಗೆ ಸಮೋಸಾ ತರಲು ಹೇಳಿದ್ದಾಳೆ. ಆದರೆ, ಪತಿ ತರುವುದಕ್ಕೆ ನಿರಾಕರಿಸಿದ್ದಾನೆ. ಇದರಿಂದ ಕೋಪಗೊಂಡ ಪತ್ನಿ ತನ್ನ ಕುಟುಂಬದವರಿಗೆ ಕರೆ ಮಾಡಿ ಮನೆಗೆ ಕರೆಸಿಕೊಂಡಿದ್ದಾಳೆ. ಮಾರನೇ ದಿನ ಪತಿ-ಪತ್ನಿ ನಡುವೆ ರಾಜಿ ಪಂಚಾಯಿತಿ ವೇಳೆ ಹಲ್ಲೆ ನಡೆಸಲಾಗಿದೆ.

    ಘಟನೆಯ ವೀಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ. ಹಲ್ಲೆಗೊಳಗಾದ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಹಲ್ಲೆ ಮಾಡಿದವರನ್ನು ಬಂಧಿಸಲಾಗಿದ್ದು, ಹೆಚ್ಚಿನ ವಿಚಾರಣೆ ನಡೆಯುತ್ತಿದೆ.

    ಹಲ್ಲೆಗೊಳಗಾದ ವ್ಯಕ್ತಿಯ ತಾಯಿ ವಿಜಯ್ ಕುಮಾರಿ ನೀಡಿದ ದೂರಿನ ಆಧಾರದ ಮೇಲೆ, ಕೊಲೆ ಯತ್ನ ಸೇರಿದಂತೆ ಬಿಎನ್‌ಎಸ್ ಅಡಿಯಲ್ಲಿ ನಾಲ್ವರು ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ವೃತ್ತ ಅಧಿಕಾರಿ (ಸಿಒ) ಪುರನ್‌ಪುರ ಪ್ರತೀಕ್ ದಹಿಯಾ ತಿಳಿಸಿದ್ದಾರೆ.

  • Uttar Pradesh | ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ – ಇಬ್ಬರು ದುರ್ಮರಣ, ಐವರಿಗೆ ಗಾಯ

    Uttar Pradesh | ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ – ಇಬ್ಬರು ದುರ್ಮರಣ, ಐವರಿಗೆ ಗಾಯ

    ಲಕ್ನೋ: ಇಲ್ಲಿನ ಗುಡಂಬಾ (Gudamba) ಪ್ರದೇಶದ ಮನೆಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪಟಾಕಿ ಕಾರ್ಖಾನೆಯಲ್ಲಿ (Firecracker Factory) ಸ್ಫೋಟ (Blast) ಸಂಭವಿಸಿದ ಪರಿಣಾಮ ಇಬ್ಬರು ಮೃತಪಟ್ಟಿದ್ದು, ಐವರು ಗಾಯಗೊಂಡಿದ್ದಾರೆ.

    ಗುಡಂಬಾದ ಬೆಹ್ತಾ (Behta) ಪ್ರದೇಶದಲ್ಲಿ ಭಾನುವಾರಮಧ್ಯಾಹ್ನ 12 ಗಂಟೆಯ ಸುಮಾರಿಗೆ ಸ್ಫೋಟ ಸಂಭವಿಸಿದೆ. ಸ್ಫೋಟದ ಪರಿಣಾಮ ಅಕ್ಕಪಕ್ಕದ ಮನೆಗಳಿಗೂ ಹಾನಿಯಾಗಿದೆ. ಪಟಾಕಿ ಕಾರ್ಖಾನೆ ಕಾರ್ಯನಿರ್ವಹಿಸುತ್ತಿದ್ದ ಮನೆಯಲ್ಲಿ ಸ್ಫೋಟ ಸಂಭವಿಸಿದೆ. ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಮತ್ತು ಕೆಲವರು ಗಾಯಗೊಂಡಿದ್ದಾರೆ ಎಂದು ಸಹಾಯಕ ಪೊಲೀಸ್ ಆಯುಕ್ತ (ಎಸಿಪಿ) ಅನಿಂದ್ಯ ವಿಕರಂ ಸಿಂಗ್ ತಿಳಿಸಿದ್ದಾರೆ. ಇದನ್ನೂ ಓದಿ: ಗಣೇಶ ವಿಸರ್ಜನೆ ವೇಳೆ ಡ್ಯಾನ್ಸ್ ಮಾಡುತ್ತಿರುವಾಗಲೇ ಹೃದಯಾಘಾತ – ವ್ಯಕ್ತಿ ಸಾವು

    ಸ್ಫೋಟದ ನಂತರ ಛಾವಣಿಯ ಒಂದು ಭಾಗ ಕುಸಿದಿದ್ದು, ಐವರು ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದ್ದರು. ಅವರನ್ನು ಅವಶೇಷಗಳಿಂದ ಹೊರತೆಗೆದು ಆಸ್ಪತ್ರೆಗೆ ದಾಖಲಿಸಲಾಗಿದೆ. ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾ ಮ್ಯಾಜಿಸ್ಟ್ರೇಟ್ ವಿಶಾಕ್ ಜಿ, ಗಾಯಾಳುಗಳಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ. ಉಳಿದ ಮೂವರ ಆರೋಗ್ಯ ಸ್ಥಿರವಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಚೀನಾ ಕಮ್ಯುನಿಸ್ಟ್‌ ಪಕ್ಷದ ಪ್ರಬಲ ನಾಯಕ, ಜಿನ್‌ಪಿಂಗ್‌ ಆಪ್ತಮಿತ್ರನನ್ನ ಭೇಟಿಯಾದ ಮೋದಿ

    ಘಟನೆ ಕುರಿತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ. ಪರಿಹಾರ ಮತ್ತು ರಕ್ಷಣಾ ಕಾರ್ಯಗಳನ್ನು ತ್ವರಿತಗೊಳಿಸಲು ತಕ್ಷಣವೇ ಸ್ಥಳಕ್ಕೆ ತೆರಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಇದನ್ನೂ ಓದಿ: ಮಸೀದಿಯಲ್ಲಿ ಗಣೇಶನ ಪ್ರತಿಷ್ಠಾಪನೆ; ಭಾವೈಕ್ಯತೆ ಮೆರೆದ ಗ್ರಾಮಸ್ಥರು

  • 4 ತಿಂಗಳ ಮಗುವಿಗೆ ವಿಷವಿಕ್ಕಿ ಕೊಂದು ದಂಪತಿ ಆತ್ಮಹತ್ಯೆ

    4 ತಿಂಗಳ ಮಗುವಿಗೆ ವಿಷವಿಕ್ಕಿ ಕೊಂದು ದಂಪತಿ ಆತ್ಮಹತ್ಯೆ

    ಲಕ್ನೋ: ಸಾಲ ಬಾಧೆಯಿಂದ ಬಳಲುತ್ತಿದ್ದ ದಂಪತಿಯು ತಮ್ಮ 4 ತಿಂಗಳ ಮಗುವಿಗೆ ವಿಶಪ್ರಾಶನ ಮಾಡಿ ಕೊನೆಗೆ ತಾವೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರ ಪ್ರದೇಶದ ಶಹಜಹಾನ್‌ಪುರದಲ್ಲಿ ನಡೆದಿದೆ.

    ಬುಧವಾರ ಬೆಳಗ್ಗೆ ಮೂವರ ಶವಗಳು ಪ್ರತ್ಯೇಕ ಕೋಣೆಗಳಲ್ಲಿ ಕಂಡುಬಂದಿವೆ. ಕೈಮಗ್ಗ ಉದ್ಯಮಿ ಸಚಿನ್ ಗ್ರೋವರ್ (30) ಮತ್ತು ಅವರ ಪತ್ನಿ ಶಿವಾನಿ (28) ಸಾಲದ ಸುಳಿಯಲ್ಲಿ ಸಿಲುಕಿದ್ದರು. ಈ ದಂಪತಿಗೆ ನಾಲ್ಕು ತಿಂಗಳ ಗಂಡು ಮಗು ಫತೇಹ್ ಇದ್ದ.

    ಸ್ಥಳದಲ್ಲಿ ಡೆತ್‌ನೋಟ್‌ ಪತ್ತೆಯಾಗಿದೆ. ಅದರಲ್ಲಿ ಸಚಿನ್ ಸಾಲದ ಹೊರೆ ಮತ್ತು ಆದಾಯದ ಕೊರತೆಯಿಂದ ತೀವ್ರ ನೊಂದಿರುವುದಾಗಿ ಬರೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ‘ದಯವಿಟ್ಟು ನಮ್ಮ ಕಾರು ಮತ್ತು ಮನೆಯನ್ನು ಮಾರಾಟ ಮಾಡಿ ಸಾಲವನ್ನು ತೀರಿಸಬೇಡಿ. ಸಾಲ ಕೊಟ್ಟವರು ನೊಂದುಕೊಳ್ಳಬಾರದು ಎಂದು ಸಚಿನ್‌ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

    ದಂಪತಿ ಮಂಗಳವಾರ ರಾತ್ರಿ ಸೀಲಿಂಗ್ ಫ್ಯಾನ್‌ಗಳಿಗೆ ನೇಣು ಹಾಕಿಕೊಂಡಿದ್ದರು. ಮಗುವಿನ ಶವ ಮತ್ತೊಂದು ಕೋಣೆಯಲ್ಲಿ ಪತ್ತೆಯಾಗಿದೆ. ದಂಪತಿ ಆತ್ಮಹತ್ಯೆಗೂ ಮುನ್ನ ತಮ್ಮ ಮಗನಿಗೆ ವಿಷಪ್ರಾಶನ ಮಾಡಿದ್ದಾರೆ.

    ಕುಟುಂಬವು ಅವರ ಮನೆಯ ಎರಡನೇ ಮಹಡಿಯಲ್ಲಿ ವಾಸಿಸುತ್ತಿತ್ತು. ನೆಲಮಹಡಿಯಲ್ಲಿ ವಾಸಿಸುವ ಅವರ ಸಂಬಂಧಿಕರು ಶವಗಳನ್ನು ಪತ್ತೆ ಮಾಡಿದ್ದಾರೆ. ‘ಮಂಗಳವಾರ ಸಂಜೆ ತನ್ನ ಮಗ ಬ್ಯಾಂಕಿನಲ್ಲಿ 5 ಲಕ್ಷ ರೂಪಾಯಿ ಠೇವಣಿ ಇಡಬೇಕೆಂದು ಹೇಳಿದ್ದ. ಆದರೆ 3 ಲಕ್ಷ ರೂಪಾಯಿ ಹೊಂದಿಸಿದ್ದ. ಅದಕ್ಕಾಗಿ ಅವನು ಸಂಕಷ್ಟದಲ್ಲಿದ್ದ’ ಎಂದು ಸಚಿನ್ ತಾಯಿ ಪೊಲೀಸರಿಗೆ ತಿಳಿಸಿದ್ದಾರೆ.

  • ವರದಕ್ಷಿಣೆ ಕಿರುಕುಳ ನೀಡಿ ಪತ್ನಿಗೆ ಬೆಂಕಿ ಇಟ್ಟ ಪೊಲೀಸ್‌ ಕಾನ್‌ಸ್ಟೇಬಲ್‌ ‌

    ವರದಕ್ಷಿಣೆ ಕಿರುಕುಳ ನೀಡಿ ಪತ್ನಿಗೆ ಬೆಂಕಿ ಇಟ್ಟ ಪೊಲೀಸ್‌ ಕಾನ್‌ಸ್ಟೇಬಲ್‌ ‌

    – ಗ್ರೇಟರ್‌ ನೋಯ್ಡಾದಲ್ಲಿ ಮಹಿಳೆ ಭೀಕರ ಸಾವು ಪ್ರಕರಣ ಮಾಸುವ ಮುನ್ನವೇ ಮತ್ತೊಂದು ದೌರ್ಜನ್ಯ

    ಲಕ್ನೋ: ಗ್ರೇಟರ್ ನೋಯ್ಡಾದಲ್ಲಿ 26 ವರ್ಷದ ನಿಕ್ಕಿ ಭಾಟಿಯ ಭೀಕರ ಸಾವಿನ ನಂತರ, ಉತ್ತರ ಪ್ರದೇಶದಲ್ಲಿ ಮತ್ತೊಂದು ವರದಕ್ಷಿಣೆ ಸಂಬಂಧಿತ ಹಿಂಸಾಚಾರ ಪ್ರಕರಣ ಬೆಳಕಿಗೆ ಬಂದಿದೆ.

    ಅಮ್ರೋಹಾ ಜಿಲ್ಲೆಯ ಪೊಲೀಸ್‌ ಕಾನ್‌ಸ್ಟೇಬಲ್‌ವೊಬ್ಬರು ತಮ್ಮ ಪತ್ನಿಗೆ ಬೆಂಕಿ ಹಚ್ಚಿರುವ ಘಟನೆ ನಡೆದಿದೆ. ವೃತ್ತಿಯಲ್ಲಿ ನರ್ಸ್ ಆಗಿರುವ ಪಾರುಲ್ (32) ಗಂಭೀರ ಗಾಯಗೊಂಡು ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ. ಪ್ರಕರಣ ಸಂಬಂಧ ಪೊಲೀಸ್ ಕಾನ್‌ಸ್ಟೇಬಲ್ ಸೇರಿದಂತೆ ಒಂದೇ ಕುಟುಂಬದ ಆರು ಸದಸ್ಯರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

    ಉತ್ತರ ಪ್ರದೇಶ ಪೊಲೀಸ್ ಇಲಾಖೆಯಲ್ಲಿ ಕಾನ್‌ಸ್ಟೇಬಲ್ ಆಗಿರುವ ಪಾರುಲ್‌ ಅವರ ಪತಿ ದೇವೇಂದ್ರ ಇತ್ತೀಚೆಗೆ ರಾಂಪುರದಿಂದ ಬರೇಲಿಗೆ ವರ್ಗಾವಣೆಗೊಂಡು ರಜೆಯ ಮೇಲೆ ಮನೆಯಲ್ಲಿದ್ದ. ವರದಕ್ಷಿಣೆ ಕಿರುಕುಳ ನೀಡಿ ಆಕೆಗೆ ಬೆಂಕಿ ಇಟ್ಟು, ಜೀವಂತವಾಗಿ ಸುಟ್ಟುಹಾಕಲು ಯತ್ನಿಸಿದ್ದಾರೆ ಎನ್ನಲಾಗಿದೆ.

    ಪಾರುಲ್ ಸಹೋದರ ದೂರು ದಾಖಲಿಸಿದ್ದು, ಆಕೆಯ ಪತಿ ದೇವೇಂದ್ರ, ಆತನ ತಾಯಿ ಮತ್ತು ಸೋನು, ಗಜೇಶ್, ಜಿತೇಂದ್ರ, ಸಂತೋಷ್ ಎಂಬ ನಾಲ್ವರು ಪುರುಷ ಸಂಬಂಧಿಕರ ವಿರುದ್ಧ ಆರೋಪ ಹೊರಿಸಲಾಗಿದೆ. ಕೌಟುಂಬಿಕ ಹಿಂಸೆ ಮತ್ತು ಕೊಲೆಯತ್ನದ ಗಂಭೀರ ಆರೋಪಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ದೃಢಪಡಿಸಿದ್ದಾರೆ.

    ಆರು ಆರೋಪಿಗಳು ನಾಪತ್ತೆಯಾಗಿದ್ದಾರೆ. ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಂಗಳವಾರ ಮುಂಜಾನೆ ನೆರೆಹೊರೆಯವರು ತಮಗೆ ಮಾಹಿತಿ ನೀಡಿದ್ದರು ಎಂದು ಪಾರುಲ್ ತಾಯಿ ಅನಿತಾ ವಿವರಿಸಿದ್ದಾರೆ.

    ನಾನು ಸ್ಥಳಕ್ಕೆ ತಲುಪಿದಾಗ, ನನ್ನ ಮಗಳು ನೋವಿನಿಂದ ನರಳುತ್ತಿದ್ದಳು. ತೀವ್ರವಾಗಿ ಸುಟ್ಟು ಹೋಗಿದ್ದಳು. ಅವಳನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಆಕೆಯ ಸ್ಥಿತಿ ಗಂಭೀರವಾದ ಕಾರಣ ದೆಹಲಿಗೆ ಕರೆದೊಯ್ಯಬೇಕಾಯಿತು. ಅವಳು ಜೀವನ್ಮರಣ ಹೋರಾಟ ನಡೆಸುತ್ತಿದ್ದಾಳೆ ಎಂದು ತಾಯಿ ಕಣ್ಣೀರಿಟ್ಟಿದ್ದಾರೆ.

  • Uttar Pradesh | ಟ್ರ್ಯಾಕ್ಟರ್ ಟ್ರಾಲಿಗೆ ಟ್ರಕ್ ಡಿಕ್ಕಿ – 8 ಯಾತ್ರಿಕರು ದುರ್ಮರಣ, 43 ಮಂದಿಗೆ ಗಾಯ

    Uttar Pradesh | ಟ್ರ್ಯಾಕ್ಟರ್ ಟ್ರಾಲಿಗೆ ಟ್ರಕ್ ಡಿಕ್ಕಿ – 8 ಯಾತ್ರಿಕರು ದುರ್ಮರಣ, 43 ಮಂದಿಗೆ ಗಾಯ

    ಲಕ್ನೋ: ಯಾತ್ರಿಕರನ್ನು (Pilgrims) ಕರೆದೊಯ್ಯುತ್ತಿದ್ದ ಟ್ರ್ಯಾಕ್ಟರ್ ಟ್ರಾಲಿಗೆ (Tractor-Trolley) ಟ್ರಕ್ (Truck) ಡಿಕ್ಕಿ ಹೊಡೆದ ಪರಿಣಾಮ 8 ಮಂದಿ ಯಾತ್ರಿಕರು ಸಾವನ್ನಪ್ಪಿದ್ದು, 43 ಮಂದಿ ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ (Uttar Pradesh) ಬುಲಂದ್‌ಶಹರ್ (Bulandshahr) ಜಿಲ್ಲೆಯಲ್ಲಿ ನಡೆದಿದೆ.

    ಅರ್ನಿಯಾ ಬೈಪಾಸ್ ಬಳಿಯ ಬುಲಂದ್‌ಶಹರ್-ಅಲಿಗಢ ಗಡಿಯಲ್ಲಿ ಸೋಮವಾರ ನಸುಕಿನ ಜಾವ 2:10ರ ಸುಮಾರಿಗೆ ಅಪಘಾತ ಸಂಭವಿಸಿದೆ. ಮೃತರಲ್ಲಿ ಇಬ್ಬರು ಮಕ್ಕಳು ಸೇರಿದ್ದಾರೆ. ಗಾಯಗೊಂಡಿರುವ ಯಾತ್ರಿಕರ ಪೈಕಿ 12 ಮಂದಿ ಅಪ್ರಾಪ್ತರಾಗಿದ್ದಾರೆ. ಕ್ಯಾಂಟರ್ ಟ್ರಕ್ ಹಿಂದಿನಿಂದ ಟ್ರ‍್ಯಾಕ್ಟರ್ ಟ್ರಾಲಿಗೆ ಡಿಕ್ಕಿ ಹೊಡೆದ ಪರಿಣಾಮ ಅದು ಪಲ್ಟಿಯಾಗಿದೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಗ್ರಾಮೀಣ) ದಿನೇಶ್ ಕುಮಾರ್ ಸಿಂಗ್ ತಿಳಿಸಿದ್ದಾರೆ. ಇದನ್ನೂ ಓದಿ: Shivamogga | ತಾನೇ ಜನ್ಮ ನೀಡಿದ ನವಜಾತ ಶಿಶುವಿನ ಕತ್ತು ಕೊಯ್ದು ಕೊಂದಿದ್ದ ಲೇಡಿ ಅರೆಸ್ಟ್

    ಟ್ರಾಕ್ಟರ್ ಟ್ರಾಲಿಯಲ್ಲಿ 61 ಜನರು ಇದ್ದರು. ಯಾತ್ರಿಕರು ಕಾಸ್ಗಂಜ್ ಜಿಲ್ಲೆಯ ರಫತ್‌ಪುರ ಗ್ರಾಮದಿಂದ ರಾಜಸ್ಥಾನದ ಜಹರ್‌ಪೀರ್‌ಗೆ ತೀರ್ಥಯಾತ್ರೆಗಾಗಿ ಪ್ರಯಾಣಿಸುತ್ತಿದ್ದರು. 10 ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. 10 ಮಂದಿ ಗಾಯಾಳುಗಳನ್ನು ಅಲಿಘರ್ ವೈದ್ಯಕೀಯ ಕಾಲೇಜಿಗೆ, ಇನ್ನೂ 10 ಜನರನ್ನು ಬುಲಂದ್‌ಶಹರ್ ಜಿಲ್ಲಾ ಆಸ್ಪತ್ರೆಗೆ ಮತ್ತು 23 ಮಂದಿಯನ್ನು ಖುರ್ಜಾದ ಕೈಲಾಶ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಬೆಳಗಾವಿ| ದೇವಸ್ಥಾನದ ಜಾಗಕ್ಕಾಗಿ ಕೊಲೆ – ಐವರಿಗೆ ಜೀವಾವಧಿ ಶಿಕ್ಷೆ ಪ್ರಕಟ

    ಮೃತರನ್ನು ಟ್ರ‍್ಯಾಕ್ಟರ್ ಚಾಲಕ ಇ.ಯು. ಬಾಬು (40), ರಾಂಬೆಟಿ (65), ಚಾಂದನಿ (12), ಘನಿರಾಮ್ (40), ಮೋಕ್ಷಿ (40), ಶಿವಾಂಶ್ (6), ಯೋಗೇಶ್ (50) ಮತ್ತು ವಿನೋದ್ (45) ಎಂದು ಗುರುತಿಸಲಾಗಿದ್ದು, ಎಲ್ಲರೂ ಕಾಸ್ಗಂಜ್ ಜಿಲ್ಲೆಯ ನಿವಾಸಿಗಳು ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಮೃತರ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಘಟನಾ ಸ್ಥಳಕ್ಕೆ ಜಿಲ್ಲಾ ಮ್ಯಾಜಿಸ್ಟ್ರೇಟ್ ಶ್ರುತಿ, ಎಸ್‌ಎಸ್‌ಪಿ ಸಿಂಗ್ ಮತ್ತು ಇತರ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆಸ್ಪತ್ರೆಯಲ್ಲಿರುವ ಗಾಯಾಳುಗಳನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳದ ಅಪಪ್ರಚಾರಕ್ಕೆ ಫಂಡಿಂಗ್ – ಸಮೀರ್ ವಿರುದ್ಧ ಐಟಿಗೆ ದೂರು ನೀಡಲು ಚಿಂತನೆ

  • ಉತ್ತರ ಪ್ರದೇಶದ ಜಲಾಲಾಬಾದ್ ಪಟ್ಟಣಕ್ಕೆ ಪರಶುರಾಮಪುರಿ ಎಂದು ಮರುನಾಮಕರಣ

    ಉತ್ತರ ಪ್ರದೇಶದ ಜಲಾಲಾಬಾದ್ ಪಟ್ಟಣಕ್ಕೆ ಪರಶುರಾಮಪುರಿ ಎಂದು ಮರುನಾಮಕರಣ

    ಲಕ್ನೋ: ಉತ್ತರ ಪ್ರದೇಶದ ಶಹಜಹಾನ್‌ಪುರ ಜಿಲ್ಲೆಯ ಜಲಾಲಾಬಾದ್ ಪಟ್ಟಣವನ್ನು `ಪರಶುರಾಮಪುರಿ’ ಎಂದು ಮರುನಾಮಕರಣ ಮಾಡಲಾಗಿದೆ.ಇದನ್ನೂ ಓದಿ: ವಿಧಾನ ಪರಿಷತ್‌ನಲ್ಲಿ ಬಾಲ್ಯವಿವಾಹ, ದೇವದಾಸಿ ಪದ್ಧತಿ ನಿಷೇಧ ಕಾಯ್ದೆ ಪಾಸ್

    ಈ ಕುರಿತು ಉತ್ತರ ಪ್ರದೇಶದ ಮುಖ್ಯ ಕಾರ್ಯದರ್ಶಿ ಅವರು ಹೆಸರು ಬದಲಾಯಿಸುವ ವಿಚಾರವಾಗಿ ಗೃಹ ಸಚಿವಾಲಯಕ್ಕೆ ಪ್ರಸ್ತಾವನೆ ಸಲ್ಲಿಸಿ, ಅನುಮೋದಿಸುವಂತೆ ಒತ್ತಾಯಿಸಿ ಪತ್ರದಲ್ಲಿ ಉಲ್ಲೇಖಿಸಿದ್ದರು. ಸದ್ಯ ಗೃಹ ಸಚಿವ ಅಮಿತ್ ಶಾ ಅವರು ಪಟ್ಟಣದ ಮರುನಾಮಕರಣಕ್ಕೆ ಅನುಮೋದನೆ ನೀಡಿದ್ದಾರೆ.

    ಜಲಾಲಾಬಾದ್ ಪಟ್ಟಣವನ್ನು ಪರಶುರಾಮಪುರಿ ಎಂದು ಮರುನಾಮಕರಣ ಮಾಡುವ ಪ್ರಸ್ತಾವನೆಗೆ ಯಾವುದೇ ಆಕ್ಷೇಪಣೆ ಇಲ್ಲ ಎಂದು ಗೃಹ ಸಚಿವಾಲಯ ತಿಳಿಸಿದೆ. ಈ ಬೇಡಿಕೆ ಬಹಳ ದಿನಗಳಿಂದ ಬಾಕಿ ಉಳಿದಿದ್ದು, ಈ ಕ್ರಮವನ್ನು ಬಿಜೆಪಿಯವರು ಶ್ಲಾಘಿಸಿದ್ದಾರೆ.

    ಮೂಲಗಳ ಪ್ರಕಾರ, ಯುಪಿ ಸರ್ಕಾರವು ಗೃಹ ಸಚಿವಾಲಯಕ್ಕೆ ಸಲ್ಲಿಸಿದ ಪತ್ರದಲ್ಲಿ, ಜಲಾಲಾಬಾದ್ ಪಟ್ಟಣವು ದೈವಿಕ ಸಂತ ಭಗವಾನ್ ಪರಶುರಾಮರ ಜನ್ಮಸ್ಥಳ ಎಂದು ಕರೆಯಲ್ಪಡುತ್ತಿತ್ತು. ಈ ಪ್ರದೇಶದಲ್ಲಿ ಪರಶುರಾಮರ ಪ್ರಾಚೀನ ದೇವಾಲಯವಿತ್ತು ಎಂದು ತಿಳಿಸಿತ್ತು.ಇದನ್ನೂ ಓದಿ: ಅಗ್ನಿ 5 ಖಂಡಾಂತರ ಕ್ಷಿಪಣಿ ಪರೀಕ್ಷೆ ಯಶಸ್ವಿ

  • 12 ದಿನಗಳ ಹಿಂದೆ ರೈಲಿನಲ್ಲಿ ನಾಪತ್ತೆಯಾಗಿದ್ದ ಹೈಕೋರ್ಟ್‌ ತರಬೇತಿ ವಕೀಲೆ ನೇಪಾಳ ಗಡಿಯಲ್ಲಿ ಪತ್ತೆ!

    12 ದಿನಗಳ ಹಿಂದೆ ರೈಲಿನಲ್ಲಿ ನಾಪತ್ತೆಯಾಗಿದ್ದ ಹೈಕೋರ್ಟ್‌ ತರಬೇತಿ ವಕೀಲೆ ನೇಪಾಳ ಗಡಿಯಲ್ಲಿ ಪತ್ತೆ!

    ಲಕ್ನೋ: 12 ದಿನಗಳ ಹಿಂದೆ ಮಧ್ಯಪ್ರದೇಶದ ರೈಲಿನಿಂದ ನಾಪತ್ತೆಯಾಗಿದ್ದ ಮಹಿಳಾ ತರಬೇತಿ ವಕೀಲೆ ಅರ್ಚನಾ ತಿವಾರಿ (Archana Tiwari) ಉತ್ತರ ಪ್ರದೇಶದ ಲಿಂಖಿಂಪುರ ಖೇರಿ ನಗರದಲ್ಲಿ (Lakhimpur Kheri City) ಪತ್ತೆಯಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಭೋಪಾಲ್‌ನ (Bhopal) ಸರ್ಕಾರಿ ರೈಲ್ವೆ ಪೊಲೀಸರು (GRP) ಅರ್ಚನಾರನ್ನ ನೇಪಾಳ ಗಡಿಯಲ್ಲಿ ಪತ್ತೆಹಚ್ಚಿದ್ದು, ಭೋಪಾಲ್‌ಗೆ ಕರೆದೊಯ್ದು ವಿಚಾರಣೆ ನಡೆಸುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಕೇಂದ್ರದಿಂದ `ಆನ್‌ಲೈನ್ ಗೇಮಿಂಗ್ ತಡೆ’ ಮಸೂದೆಗೆ ಅನುಮೋದನೆ

    ರಕ್ಷಾಬಂಧನ ಹಬ್ಬಕ್ಕಾಗಿ ಇದೇ ಆಗಸ್ಟ್‌ 7-8ರ ತಡರಾತ್ರಿ ಅರ್ಚನಾ ಇಂದೋರ್‌ನಿಂದ ಕಟ್ನೆಗೆ ರೈಲಿನಲ್ಲಿ ಹೊರಟಿದ್ದರು. ಆದ್ರೆ ತಮ್ಮ ನಿಗದಿತ ಸ್ಥಾನ ತಲುಪದಿದ್ದಾಗ ನಾಪತ್ತೆಯಾಗಿರುವುದು ಗೊತ್ತಾಯಿತು. ಇದನ್ನೂ ಓದಿ: ಪ್ರಧಾನಿ ಮೋದಿ ಭೇಟಿಯಾದ ಚೀನಾ ವಿದೇಶಾಂಗ ಸಚಿವ ವಾಂಗ್ ಯಿ

    ವಿಚಾರಣೆ ಬಳಿಕ ಹೊರ ಬರಬೇಕಿದೆ ಸತ್ಯ
    ಕಳೆದ 12 ದಿನಗಳಿಂದ ಹುಡುಕಾಟ ನಡೆಸುತ್ತಿದ್ದ ಸರ್ಕಾರಿ ರೈಲ್ವೆ ಪೊಲೀಸ್ (ಜಿಆರ್‌ಪಿ) ಸಿಬ್ಬಂದಿ ಕೊನೆಗೂ ಅರ್ಚನಾರನ್ನ ಭಾರತ-ನೇಪಾಳ ಗಡಿಯಲ್ಲಿ ಪತ್ತೆಹಚ್ಚಿದ್ದಾರೆ ಎಂದು ರೈಲ್ವೆ ಎಸ್ಪಿ ರಾಹುಲ್ ಕುಮಾರ್ ಲೋಧಾ ಹೇಳಿದ್ದಾರೆ. ಪೊಲೀಸರು ಅರ್ಚನಾರನ್ನ ಭೋಪಾಲ್‌ಗೆ ಕರೆತರುತ್ತಿದ್ದು, ಹೇಳಿಕೆ ದಾಖಲಿಸಿದ ಬಳಿಕವೇ ಇಡೀ ಘಟನಾ ವಿವರ ತಿಳಿಯಲಿದೆ ಎಂದು ತಿಳಿಸಿದ್ದಾರೆ.

    ರಕ್ಷಣಾ ಬಂಧನ ಹಬ್ಬಕ್ಕೆ ನರ್ಮದಾ ಎಕ್ಸ್‌ಪ್ರೆಸ್ ರೈಲಿನಲ್ಲಿ ಹೊರಟಿದ್ದ ಅರ್ಚನಾ ಇಂದೊರ್‌ನಿಂದ ಹೊರಟಿದ್ದರು, ಕೊನೆಯದಾಗಿ ಇಟಾರ್ಸಿ ರೈಲು ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದರು. ಆ ಬಳಿಕ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಹಾಗಾಗಿ ಸಂಪರ್ಕ ಸಾಧ್ಯವಾಗಿರಲಿಲ್ಲ.

    ಅರ್ಚನಾ ತಿವಾರಿ ತಿವಾರಿ ಮಧ್ಯಪ್ರದೇಶ ಹೈಕೋರ್ಟ್‌ನ ಇಂದೋರ್ ಪೀಠದಲ್ಲಿ ಅಭ್ಯಾಸ ವಕೀಲರಾಗಿದ್ದರು. ಸಿವಿಲ್ ನ್ಯಾಯಾಧೀಶರ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರು. ಇದನ್ನೂ ಓದಿ: ರೈಲಿಗೂ ಲಗೇಜ್ ಪಾಲಿಸಿ – ಲಗೇಜ್‌ ಮಿತಿ ಎಷ್ಟು? ಪಾವತಿ ಮಾಡಬೇಕಾದ ಹಣ ಎಷ್ಟು?