Tag: ಉತ್ತರ ಕ್ಯಾಲಿಫೋರ್ನಿಯಾ

  • ಮನೆ ಮಾಲೀಕಳ ಪ್ರಾಣ ಉಳಿಸಲು ಪರ್ವತ ಸಿಂಹದೊಂದಿಗೆ ಹೋರಾಡಿದ ಶ್ವಾನ

    ಮನೆ ಮಾಲೀಕಳ ಪ್ರಾಣ ಉಳಿಸಲು ಪರ್ವತ ಸಿಂಹದೊಂದಿಗೆ ಹೋರಾಡಿದ ಶ್ವಾನ

    ನ್ಯೂಯಾರ್ಕ್: ನಾಯಿ ಮತ್ತು ಮನುಷ್ಯರ ನಡುವಿನ ಸ್ನೇಹ ಸಂಬಂಧವು ಯಾವಾಗಲೂ ಉತ್ತಮವಾಗಿರುತ್ತದೆ. ತನಗೆ ಅನ್ನ ಹಾಕಿದ ಮಾಲೀಕರಿಗೆ ಅದು ಯಾವಾಗಲೂ ಋಣಿಯಾಗಿರುತ್ತದೆ. ಅದರಲ್ಲಿ ಯಾವುದೇ ಸಂದೇಹವಿಲ್ಲ. ಇದಕ್ಕೆ ಸಾಕ್ಷಿಯಾಗಿ ಸಾಕಷ್ಟು ಪುರಾವೆಗಳಿವೆ. ಅಲದೇ ಮಾಲೀಕರೇನಾದರೂ ಪ್ರಾಣಾಪಾಯದಲ್ಲಿದ್ದರೆ ತನ್ನ ಪ್ರಾಣ ಒತ್ತೆಯಿಟ್ಟಾದರೂ ಕಾಪಾಡಲು ಮುಂದಾಗುತ್ತವೆ. ಇದೀಗ ಯುವತಿಯೊಬ್ಬಳು ಪರ್ವತ ಸಿಂಹದಿಂದ ದಾಳಿಗೊಳಗಾಗಿದ್ದ ಸಂದರ್ಭದಲ್ಲಿ ನಾಯಿಯೊಂದು ರಕ್ಷಿಸಿರುವ ಟ್ವೀಟ್‍ವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

    ಯುವತಿಯೊಬ್ಬಳು ತಮ್ಮ ಸಾಕು ನಾಯಿಯೊಂದಿಗೆ ವಾಯು ವಿಹಾರಕ್ಕೆಂದು ತೆರಳಿದ್ದಾಗ ಪರ್ವತ ಸಿಂಹವೊಂದು ಅವರ ಮೇಲೆ ದಾಳಿ ನಡೆಸಿದ ಘಟನೆ ಉತ್ತರ ಕ್ಯಾಲಿಫೋರ್ನಿಯಾದಲ್ಲಿ ನಡೆದಿದೆ. ಈ ವೇಳೆ ಅವಳ ಜೊತೆಯಿದ್ದ ಸಾಕು ನಾಯಿ ತನ್ನ ಮಾಲೀಕಳನ್ನು ರಕ್ಷಿಸುವ ಸಲುವಾಗಿ ಪರ್ವತ ಸಿಂಹದ ಎದುರು ನಿಂತು ಹೋರಾಡಿ ಆಕೆಯನ್ನು ರಕ್ಷಿಸಿದೆ.

    ಉತ್ತರ ಕ್ಯಾಲಿಫೋರ್ನಿಯಾದ ಟ್ರಿನಿಟಿ ನದಿಯ ಬಳಿ ಎರಿನ್ ವಿಲ್ಸನ್ ತನ್ನ ಸಾಕು ನಾಯಿಯೊಂದಿಗೆ ವಿಹರಿಸುತ್ತಿದ್ದಳು. ಈ ಸಂದರ್ಭದಲ್ಲಿ ಪರ್ವತ ಸಿಂಹವು ಆಕೆಯ ಮೇಲೆ ದಾಳಿ ನಡೆಸಿದೆ. ಈ ವೇಳೆ ಆಕೆ ಭೀತಿಯಿಂದ ಕಿರುಚಾಡಿದ್ದಾಳೆ. ಶೀಘ್ರದಲ್ಲೇ ಪರ್ವತ ಸಿಂಹವನ್ನು ಕಂಡ ನಾಯಿಯು ತನ್ನ ಪ್ರಾಣವನ್ನು ಸಹ ಲೆಕ್ಕಿಸದೆ ಅದರ ಮೇಲೆ ಮುಗಿಬಿದ್ದಿದೆ. ಘಟನೆಯಿಂದಾಗಿ ನಾಯಿಯು ತೀವ್ರ ಗಾಯಗೊಂಡಿದ್ದು, ಶ್ವಾನಕ್ಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಶ್ವಾನ ಚೇತರಿಸಿಕೊಳ್ಳುತ್ತಿದೆ. ಯುವತಿಯ ಮೇಲೆ ದಾಳಿ ಮಾಡಿದ ಸಿಂಹವು ಆಕೆಯ ಜಾಕೆಟ್ ಅನ್ನು ಎಳೆದು ತನ್ನ ಚೂಪಾದ ಉಗುರುಗಳಿಂದ ಪರಚಿದೆ.

    ಶ್ವಾನದ ಧೈರ್ಯಕ್ಕೆ ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಮಿಶ್ರ ಪ್ರತಿಕ್ರಿಯೆ ನೀಡಿ, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಹೇಳೋದು ನಾಯಿಗಿರುವ ನಿಯತ್ತು ಮನುಷ್ಯರಿಗೆ ಇರುವುದಿಲ್ಲ ಎಂದು.