Tag: ಉತ್ತರ ಕನ್ನಡ

  • ಕರಾವಳಿಯಲ್ಲಿ ಅಬ್ಬರದ ಬಿರುಗಾಳಿ ಸಹಿತ ಮಳೆ – ಮುಳುಗಿದ ರಸ್ತೆ, ಕುಸಿದ ಗುಡ್ಡ

    ಕರಾವಳಿಯಲ್ಲಿ ಅಬ್ಬರದ ಬಿರುಗಾಳಿ ಸಹಿತ ಮಳೆ – ಮುಳುಗಿದ ರಸ್ತೆ, ಕುಸಿದ ಗುಡ್ಡ

    ಕಾರವಾರ: ದೇಶದ ಕರಾವಳಿ (Karavali) ಭಾಗದಲ್ಲಿ ಅಬ್ಬರದ ಮಳೆ ಸುರಿಯುತ್ತಿದೆ. ಗಾಳಿ, ಮಳೆಯ ಆರ್ಭಟಕ್ಕೆ ಕರ್ನಾಟಕ (Karnataka) ಕರಾವಳಿ ಹಾಗೂ ಗೋವಾ (Goa) ಕರಾವಳಿ ಭಾಗದಲ್ಲಿ ಹಲವು ಅನಾಹುತ ತಂದೊಡ್ಡಿದೆ.

    ರಾಜ್ಯದಲ್ಲೇ ಉತ್ತರ ಕನ್ನಡ (Uttara Kannada) ಜಿಲ್ಲೆಯಲ್ಲಿ ಹೆಚ್ಚಿನ ಮಳೆಯಾಗಿದೆ. ಜಿಲ್ಲೆಯ ಅಂಕೋಲ ತಾಲೂಕಿನ ಹಾರವಾಡದಲ್ಲಿ ಕಳೆದ 24 ಗಂಟೆಯಲ್ಲಿ 80 ಮಿ.ಮೀ, ಬೇಲಿಕೇರಿ 76 ಮಿ.ಮೀ., ಕುಮಟಾ 72.8 ಮಿ.ಮೀ ಮಳೆಯಾಗಿದೆ. ರಾಜ್ಯದಲ್ಲಿ ರಾಯಚೂರು, ದಕ್ಷಿಣ ಕನ್ನಡ, ವಿಜಯಪುರ, ಗದಗದಲ್ಲಿ ಹೆಚ್ಚಿನ ಮಳೆ ವರದಿಯಾಗಿದೆ. ಇದನ್ನೂ ಓದಿ: ಮಧ್ಯಪ್ರದೇಶ | ಆಸ್ಟ್ರೇಲಿಯಾದ ಇಬ್ಬರು ಮಹಿಳಾ ಕ್ರಿಕೆಟಿಗರಿಗೆ ಲೈಂಗಿಕ ಕಿರುಕುಳ – ಆರೋಪಿ ಅರೆಸ್ಟ್‌

    ಉತ್ತರ ಕನ್ನಡ ಜಿಲ್ಲೆಯ ಅಂಕೋಲ, ಕುಮಟಾ, ಕಾರವಾರ ಭಾಗದಲ್ಲಿ ಹೆಚ್ಚು ಮಳೆಯಾಗಿದ್ದು, ಕಾರವಾರದಲ್ಲಿ ಇಂದು ಬೆಳಗ್ಗೆ ಸುರಿದ ಮಳೆಗೆ ನಗರದ ರೈಲ್ವೆ ನಿಲ್ದಾಣಕ್ಕೆ ಹೋಗುವ ಮಾರ್ಗದಲ್ಲಿ ನೀರು ನಿಂತು ಸವಾರರಿಗೆ ಸಮಸ್ಯೆ ತಂದೊಡ್ಡಿತು. ಇದನ್ನೂ ಓದಿ: Kolar | ಶಾಲೆಗೆ ಹೋದ ವಿದ್ಯಾರ್ಥಿನಿಯರು ನಾಪತ್ತೆ

    ಇನ್ನು ಕಾರವಾರದ ನೆರೆಯ ಗೋವಾ ರಾಜ್ಯದಲ್ಲೂ ಅಬ್ಬರದ ಗಾಳಿ-ಮಳೆ ಸುರಿದಿದ್ದು, ಗೋವಾದ ತಲೆಯಗಾವ್‌ನ ಡಾ.ಶಾಮಪ್ರಸಾದ್ ಮುಖರ್ಜಿ ಸ್ಟೇಡಿಯಮ್‌ನ ಮುಖ್ಯ ದ್ವಾರದ ಕಮಾನು ಕುಸಿದು ಬಿದ್ದು ಸಂಪೂರ್ಣ ಹಾನಿಯಾಗಿದೆ. ಇದಲ್ಲದೇ ಪಣಜಿ ನಗರದ ಹೈಕೋರ್ಟ್ ಸಮೀಪ ಇರುವ ಗುಡ್ಡ ಕುಸಿದು ಮನೆಗಳಿಗೆ ಹಾನಿ ಸಂಭವಿಸಿದೆ. ಇದಲ್ಲದೇ ಗಾಳಿಯ ಪ್ರಮಾಣ ಹೆಚ್ಚಾಗಿ ಮಳೆ ಆರ್ಭಟವೂ ಹೆಚ್ಚಾಗಿದ್ದು, ಕೆಲವು ಸಮಯ ಕಾರವಾರ-ಗೋವಾ ಹೆದ್ದಾರಿಯಲ್ಲಿ ನೀರು ನಿಂತು ಪ್ರಯಾಣಿಕರು ಪರದಾಡುವಂತಾಯಿತು. ಇನ್ನು ಕರ್ನಾಟಕ, ಗೋವಾ ಕರಾವಳಿ ಭಾಗದಲ್ಲಿ ಇನ್ನೂ ಎರಡು ದಿನ ಅಬ್ಬರದ ಮಳೆ ಸುರಿಯುವ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ. ಇದನ್ನೂ ಓದಿ: ಹೈಕಮಾಂಡ್ ಹೇಳಿದ್ರೆ ಸಚಿವ ಸ್ಥಾನ ಬಿಡಲು ರೆಡಿ: ಕೃಷ್ಣ ಬೈರೇಗೌಡ

  • ಉತ್ತರ ಕನ್ನಡ CSR ಫಂಡ್‌ಗಳು ಸರ್ಕಾರಿ ಕಚೇರಿ ಅಭಿವೃದ್ಧಿಗೆ?

    ಉತ್ತರ ಕನ್ನಡ CSR ಫಂಡ್‌ಗಳು ಸರ್ಕಾರಿ ಕಚೇರಿ ಅಭಿವೃದ್ಧಿಗೆ?

    ಕಾರವಾರ: ಉತ್ತರ ಕನ್ನಡ (Uttara Kannada) ಜಿಲ್ಲೆ ರಾಜ್ಯದಲ್ಲಿ ಹಿಂದುಳಿದ ಜಿಲ್ಲೆಗಳ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿ ಇಲ್ಲದಿದ್ದರೂ ರಾಜ್ಯದಲೇ ಅಭಿವೃದ್ಧಿಯಲ್ಲಿ ಹಿಂದೆ ಉಳಿದ ಜೋಯಿಡಾ ಈವರೆಗೂ ವಿದ್ಯುತ್, ರಸ್ತೆಗಳೇ ಕಾಣದ ಗ್ರಾಮಗಳಿರುವ ಜಿಲ್ಲೆಯಾಗಿದೆ.

    ಈ ಜಿಲ್ಲೆಯಲ್ಲಿ ಸರ್ಕಾರದ ಹಲವು ಯೋಜನೆಗಳು ಮೇಲಿಂದ ಮೇಲೆ ಹೇರಲಾಗುತ್ತಿದೆ. ಬೃಹತ್ ವಿದ್ಯುತ್ ಉತ್ಪಾದನಾ ಘಟಕ, ಕೈಗಾ ಅಣುಸ್ಥಾವರ, ಕಾರ್ಖಾನೆಗಳು, ವಾಣಿಜ್ಯ ಬಂದರು ಸೇರಿದಂತೆ ಹಲವು ಯೋಜನೆಗಳು ಇಲ್ಲಿವೆ.

    ಉತ್ತರ ಕನ್ನಡ ಜಿಲ್ಲೆಯಲ್ಲಿ ಬೃಹತ್ ಯೋಜನೆಗಳಿದ್ದರೂ ಸಮುದಾಯ ಅಭಿವೃದ್ಧಿ ನಿಧಿ (CSR) ಅನುದಾನ ರಾಜ್ಯದ ಶೇ.1 ರಷ್ಟು ಕೂಡ ಜಿಲ್ಲೆಗೆ ಸಿಗುತ್ತಿಲ್ಲ. ಸಿಕ್ಕಿರುವ ಅನುದಾನವೂ ಸರ್ಕಾರಿ ಕಚೇರಿಗಳ ಸೌಲಭ್ಯಕ್ಕೆ ಖರ್ಚಾಗುತ್ತಿವೆ. ಇದನ್ನೂ ಓದಿ: ಆಳಂದದಲ್ಲಿ 80 ರೂ.ಗೆ ವೋಟ್ ಡಿಲೀಟ್ ಸಾಕ್ಷಿ ಸಿಕ್ಕಿದೆ, ಚುನಾವಣಾ ಆಯೋಗ ಉತ್ತರಿಸಲಿ: ಪ್ರಿಯಾಂಕ್ ಖರ್ಗೆ, ಎಂ.ಬಿ ಪಾಟೀಲ್ ಆಗ್ರಹ

    ರಾಜ್ಯದಲ್ಲಿ ಪ್ರತಿ ವರ್ಷ ವಾಣಿಜ್ಯ ಕಂಪನಿಗಳ ಸಿ.ಆರ್,ಝಡ್ ಅನುದಾನದ ಎರಡರಿಂದ ಎರಡೂವರೆ ಸಾವಿರ ಕೋಟಿ ರೂ.ವರೆಗೆ ವೆಚ್ಚವಾಗುತ್ತಿದೆ. ಅದರಲ್ಲಿ ಜಿಲ್ಲೆಯಲ್ಲಿ ಶೇ.1ರಷ್ಟು ಹಣ ಕೂಡ ಖರ್ಚಾಗುತ್ತಿಲ್ಲ. ಖರ್ಚಾಗುವ ಅಲ್ಪ ಹಣವೂ ಸರ್ಕಾರಿ ಕಚೇರಿಗಳ ಪೀಠೋಪಕರಣ, ಕಚೇರಿ ಅಲಂಕಾರ, ವಾಹನ ಖರೀದಿ ಇಂಥ ಸೌಕರ್ಯಕ್ಕಾಗಿಯೇ ಹೆಚ್ಚು ಬಳಕೆ ಮಾಡಿಕೊಳ್ಳಲಾಗಿದೆ. ಇದರಿಂದ ಜಿಲ್ಲೆಯಲ್ಲಿ ಬೃಹತ್ ಯೋಜನೆಗಳು ಇದ್ದರೂ ಸ್ಥಳೀಯ ಮಟ್ಟದ ಮೂಲಭೂತ ಅಭಿವೃದ್ಧಿಗೆ ಪ್ರಯೋಜನ ಇಲ್ಲದಂತಾಗಿದೆ.

    ಉತ್ಪಾದನಾ ಉದ್ಯಮಗಳು ತಮ್ಮ ಆದಾಯದಲ್ಲಿ ಶೇ.2 ರಷ್ಟು ಹಣವನ್ನು ಸಿಎಸ್‌ಆರ್ ಚಟುವಟಿಕೆಗೆ ಮೀಸಲಿಡಬೇಕು. ಆ ಹಣವನ್ನು ಘಟಕ ಕಾರ್ಯ ವ್ಯಾಪ್ತಿಯಲ್ಲಿ ಖರ್ಚು ಮಾಡಬೇಕು. ಜಿಲ್ಲೆಯಲ್ಲಿ ದೊಡ್ಡ ಆದಾಯ ಹೊಂದಿರುವ ಕರ್ನಾಟಕ ವಿದ್ಯುತ್ ನಿಗಮ (ಕೆಪಿಸಿ), ಕೈಗಾ ಸ್ಥಾವರ, ಪೇಪರ್ ಮಿಲ್, ಗಾರ್ಮೆಂಟ್ ಇಂಡಸ್ಟ್ರೀಸ್ ಮತ್ತು ಸಕ್ಕರೆ ಕಾರ್ಖಾನೆ ಪ್ರಮುಖವಾಗಿವೆ. ಇದನ್ನೂ ಓದಿ: ಕಾಂಗ್ರೆಸ್‌ನಲ್ಲಿ ಜೋರಾದ ಉತ್ತರಾಧಿಕಾರಿ ಕದನ – ಯತೀಂದ್ರ ವಿರುದ್ಧ ಶಿಸ್ತುಕ್ರಮವೋ? ಸಿಎಂ ಪುತ್ರ ಅಂತ ಎಚ್ಚರಿಕೆಯೋ?

    ಇದರ ಜತೆಗೆ ಕದಂಬ ನೌಕಾನೆಲೆ ಮತ್ತು ವಾಣಿಜ್ಯ ಬಂದರು ಸಂಬಂಧ ಅನೇಕ ಕಂಪನಿಗಳು ಜಿಲ್ಲೆಯಲ್ಲಿ ಘಟಕ ಹೊಂದಿದೆ. ಇವುಗಳ ಸಿಎಸ್‌ಆರ್ ಅನುದಾನ ಶಾಲೆ ಕಟ್ಟಡ ಕಟ್ಟುವುದಕ್ಕೆ ಸೀಮಿತವಾದರೆ ಸಾರ್ವಜನಿಕ ಮೂಲಸೌಕರ್ಯಗಳ ಅಭಿವೃದ್ಧಿಗೆ ಕಾಣಿಕೆ ಅತ್ಯಲ್ಪ.

    ಸಿಎಸ್‌ಆರ್ ಖರ್ಚು ಎಲ್ಲಿ, ಎಷ್ಟು?
    ಕೇಂದ್ರ ಕಾರ್ಪೋರೇಟ್ ವ್ಯವಹಾರಗಳ ಸಚಿವಾಲಯದಲ್ಲಿ (MCM) ಕಂಪನಿಗಳು ಸಲ್ಲಿಸಿದ ವರದಿ ಆಧಾರದ ಮೇಲೆ 2023-24 ನೇ ಸಾಲಿನ ಮಾಹಿತಿ ದಾಖಲಾಗಿದೆ. ಅದರ ಪ್ರಕಾರ 2023-24 ವರೆಗೆ ಹಿಂದಿನ ಐದು ವರ್ಷಗಳಲ್ಲಿ ಉತ್ತರ ಕನ್ನಡ ಜಿಲ್ಲೆಗೆ ಖರ್ಚಾಗಿರುವ ಸಿಎಸ್‌ಆರ್ ಹಣ 51.96 ಕೋಟಿ ರೂ. ಮಾತ್ರ. ಇದೇ ಐದು ವರ್ಷದಲ್ಲಿ ಕರ್ನಾಟಕದಲ್ಲಿ 8,889.4 ಕೋಟಿ ಖರ್ಚು ಮಾಡಲಾಗಿದ್ದು, ಹೆಚ್ಚಾಗಿ ಮಹಾನಗರಗಳಿಗೆ ಖರ್ಚು ಮಾಡಲಾಗಿದೆ. ಆದರೆ, ಜಿಲ್ಲಾವಾರು ಖರ್ಚಾದ ಹಣ ಅತಿ ಕಡಿಮೆ ಇದ್ದು, ಕಾರ್ಖಾನೆಗಳು, ಯೋಜನಾ ಕಂಪನಿಗಳಿದ್ದರೂ ಅಲ್ಲಿಗೆ ಬಳಸುವ ಹಣ ಬೇರೆಡೆ ಬಳಸಲಾಗುತ್ತಿದೆ.

    2023-24 ರಲ್ಲಿ ರಾಜ್ಯಕ್ಕೆ 2,254.88 ಕೋಟಿ ಹಣ ಖರ್ಚು ಮಾಡಲಾಗಿದ್ದು, ಉತ್ತರ ಕನ್ನಡ ಜಿಲ್ಲೆಗೆ 19.39 ಕೋಟಿ ಮಾತ್ರ ನೀಡಲಾಗಿದೆ.

  • ಅನುದಾನ ಬಿಡುಗಡೆ ಮಾಡದಿದ್ರೆ ರಾಜಕೀಯ ನಿವೃತ್ತಿ, ಯಾವ ಪಕ್ಷಕ್ಕೂ ಹೋಗಲ್ಲ: ಶಾಸಕ ಸತೀಶ್ ಸೈಲ್

    ಅನುದಾನ ಬಿಡುಗಡೆ ಮಾಡದಿದ್ರೆ ರಾಜಕೀಯ ನಿವೃತ್ತಿ, ಯಾವ ಪಕ್ಷಕ್ಕೂ ಹೋಗಲ್ಲ: ಶಾಸಕ ಸತೀಶ್ ಸೈಲ್

    ಕಾರವಾರ: ಮಾರ್ಚ್‌ನಲ್ಲಿ ಮುಖ್ಯಮಂತ್ರಿಗಳು ಅನುದಾನ ಕೊಡದಿದ್ರೆ ರಾಜಕೀಯ ನಿವೃತ್ತಿಯಾಗುವುದಾಗಿ ಕಾರವಾರದ ಕಾಂಗ್ರೆಸ್ ಶಾಸಕ ಸತೀಶ್ ಸೈಲ್‌ Satish Sail) ಘೋಷಿಸಿದ್ದಾರೆ.

    ಕಾರವಾರದ (Karar ಸದಾಶಿವಗಡದ ಕಾಳಿ ಸಂಗಮದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕಾರವಾರದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಆಗಬೇಕು ಎಂದು ಮೂರು ವರ್ಷದಿಂದ ಮುಖ್ಯಮಂತ್ರಿಗಳಿಗೆ ಮನವಿ ಮಾಡುತ್ತಾ ಬಂದಿದ್ದೇನೆ. ಮೂರು ವರ್ಷದಿಂದ ಅನುದಾನ ಬಿಡುಗಡೆ ಆಗಿಲ್ಲ, ಘೋಷಣೆಯೂ ಆಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಇಂಟರ್‌ನ್ಯಾಷನಲ್ ನಂಬರ್‌ನಿಂದ ಬೆದರಿಕೆ ಕರೆ, ನಾನು ಹೆದರಲ್ಲ: ಪ್ರಿಯಾಂಕ್ ಖರ್ಗೆ

    ಚಿಕಿತ್ಸೆಗಾಗಿ ಜನ ಗೋವಾಕ್ಕೆ ಹೋಗಬೇಕು. ನಾನೇ ನನ್ನ ಚಿಕಿತ್ಸೆಗಾಗಿ ದೆಹಲಿಗೆ ಹೋಗುವಂತೆ ಆಗಿದೆ. ಹೀಗಾಗಿ, ಕಾರವಾರಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ತುಂಬಾ ಅವಶ್ಯವಿದೆ. ಜನ ತೊಂದರೆಯಲ್ಲಿ ಇದ್ದಾರೆ. ನಾನು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಾಡಿಯೇ ಸಿದ್ಧ ಎಂದು ಶಪಥ ಮಾಡಿದ್ದಾರೆ.

    ಮಾರ್ಚ್‌ನಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಘೋಷಣೆ ಆಗಬೇಕು. ಆಗದೇ ಇದ್ದರೆ ನಾನು ಪಕ್ಷ ಬಿಟ್ಟು ಹೋಗಲ್ಲ. ರಾಜೀನಾಮೆ ಕೊಟ್ಟು ಮನೆಯಲ್ಲಿ ಇರ್ತೀನಿ. ರಾಜಕೀಯ ನಿವೃತ್ತಿ ತೆಗೆದುಕೊಳ್ತೇನೆ. ಆಸ್ಪತ್ರೆಗೆ ಅನುದಾನ ಬಿಡುಗಡೆ ಆಗಬೇಕು. ಕಾರವಾರದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಾಡಿಕೊಡುವಂತೆ ಸಿಎಂಗೆ ಕೇಳಿಕೊಂಡಿದ್ದೆ. ಹಿಂದೆ ಅನುದಾನ ಕೊಡಲಿಲ್ಲ. ಮೂರು ವರ್ಷದಿಂದ ಈ ಬಗ್ಗೆ ಮನವಿ ಮಾಡಿದ್ದೇನೆ. ಈ ಬಜೆಟ್‌ನಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಘೋಷಣೆ ಆಗದಿದ್ರೆ ಬಜೆಟ್ ಆದ ಮಾರನೇ ದಿವಸ ಸತೀಶ್ ಬಜೆಟ್ ಮನೆಯಲ್ಲಿ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನಂಜೇಗೌಡಗೆ ತಾತ್ಕಾಲಿಕ ರಿಲೀಫ್‌ – ಶಾಸಕ ಸ್ಥಾನದಿಂದ ಅಸಿಂಧುಗೊಳಿಸಿದ್ದ ಆದೇಶಕ್ಕೆ ಸುಪ್ರೀಂ ತಡೆ

    ಯಾವ ಪಕ್ಷಕ್ಕೂ ಹೋಗುವುದಿಲ್ಲ. ಯಾವ ಕೆಲಸವನ್ನೂ ಮಾಡುವುದಿಲ್ಲ. ಐ ಯಾಮ್ ಎ ನಾಟ್ ಫಿಟ್ ಫಾರ್ ಪೀಪಲ್ ಅಂತ ತಿಳಿದುಕೊಳ್ಳುತ್ತೇನೆ. ಅನುದಾನ ಬಿಡುಗಡೆಯಾಗದಿದ್ದರೆ ರಾಜಕೀಯ ನಿವೃತ್ತಿ ಘೋಷಿಸಿ ರಾಜಕೀಯದಿಂದ ದೂರ ಇರುತ್ತೇನೆಂದು ಹೇಳಿದ್ದಾರೆ.

  • Uttara Kannada | ಬೇಲಿಕೇರಿ ಬಂದರಿನಲ್ಲಿ ಬೋಟ್ ಮುಳುಗಡೆ

    Uttara Kannada | ಬೇಲಿಕೇರಿ ಬಂದರಿನಲ್ಲಿ ಬೋಟ್ ಮುಳುಗಡೆ

    ಕಾರವಾರ: ಬಂದರಿನ ಬಳಿ ತೆರಳುತಿದ್ದ ಬೋಟಿಗೆ (Boat) ತಳಭಾಗದಲ್ಲಿ ಕಲ್ಲು ತಾಗಿ ಮುಳುಗಡೆಯಾದ ಘಟನೆ ಉತ್ತರ ಕನ್ನಡ (Uttara Kannada) ಜಿಲ್ಲೆಯ ಅಂಕೋಲ (Ankola) ತಾಲೂಕಿನ ಬೇಲಿಕೇರಿ ಬಂದರಿನಲ್ಲಿ ನಡೆದಿದೆ.

    ಶ್ರೀಕಾಂತ್ ತಾಂಡೇಲ್ ಎಂಬುವಬರಿಗೆ ಸೇರಿದ ದುರ್ಗಾ ಪ್ರಸಾದ್ ಹೆಸರಿನ ಪರ್ಷಿಯನ್ ಬೋಟ್ ಇದಾಗಿದ್ದು, ಮೀನುಗಾರಿಕೆಗೆ ತೆರಳಲು ಬೋಟ್ ಸಿದ್ಧಪಡಿಸಿ ತೆರಳುವಾಗ ಕಲ್ಲು ಹೊಡೆದು ಬೋಟ್ ಮುಳುಗಡೆಯಾಗಿ ಲಕ್ಷಾಂತರ ಮೌಲ್ಯದ ವಸ್ತುಗಳು ನಷ್ಟವಾಗಿದೆ. ಶುಕ್ರವಾರ ಇದೇ ಭಾಗದಲ್ಲಿ ಪರ್ಷಿಯನ್ ಬೋಟ್ ಮುಳುಗಡೆಯಾಗಿತ್ತು. ಇದನ್ನೂ ಓದಿ: ಗ್ರೇಟರ್‌ ಬೆಂಗಳೂರು ಚುನಾವಣೆ – 50% ಮಹಿಳಾ ಮೀಸಲಾತಿ ಮಾಡೋಣ: ಡಿಕೆ ಶಿವಕುಮಾರ್‌

    ಬಂದರಿನಲ್ಲಿ ಹೂಳು ತೆಗೆಯದೇ ಇರುವುದರಿಂದ ಬೋಟ್ ಮುಳುಗಡೆಯಾಗುತ್ತಿದೆ. ಬಂದರು ಬಳಿ ಹೂಳು ತುಂಬಿ ಅನಾಹುತ ಸೃಷ್ಟಿಯಾಗುತ್ತಿದೆ ಎಂದು ಮೀನುಗಾರರು ಆರೋಪಿಸಿದ್ದಾರೆ. ಘಟನೆ ಸಂಬಂಧ ಅಂಕೋಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: BETL ಅಧಿಕಾರಿಗಳ ನಿರ್ಲಕ್ಷ್ಯ – ಹೊಸೂರು ರಸ್ತೆಯಲ್ಲಿ ಕಿ.ಮೀ.ಗಟ್ಟಲೆ ಟ್ರಾಫಿಕ್ ಜಾಮ್

  • ಗೆಳೆಯನ ಬರ್ತ್‌ಡೇ ಸಂಭ್ರಮದಲ್ಲಿದ್ದ ಯುವಕ ಹೊಳೆಗೆ ಕಾಲುಜಾರಿ ಬಿದ್ದು ನೀರುಪಾಲು

    ಗೆಳೆಯನ ಬರ್ತ್‌ಡೇ ಸಂಭ್ರಮದಲ್ಲಿದ್ದ ಯುವಕ ಹೊಳೆಗೆ ಕಾಲುಜಾರಿ ಬಿದ್ದು ನೀರುಪಾಲು

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಅರಬೈಲ್ ಸಮೀಪದ ಕೆಳಾಸೆಯಲ್ಲಿ ಗೆಳೆಯನ ಹುಟ್ಟುಹಬ್ಬದ ಸಂಭ್ರಮಾಚರಣೆಗೆ ತೆರಳಿದ್ದ ಯುವಕನೋರ್ವ ನೀರುಪಾಲಾಗಿದ್ದಾನೆ.

    ಯಲ್ಲಾಪುರದ ಸಬಗೇರಿ ನಿವಾಸಿ ಸಾಗರ್ ದೇವಾಡಿಗ ನೀರುಪಾಲಾದ ಯುವಕ. ನಿನ್ನೆ ಮಧ್ಯಾಹ್ನದ ವೇಳೆಗೆ, ಸಾಗರ್ ತನ್ನ ಮೂರ್ನಾಲ್ಕು ಸ್ನೇಹಿತರೊಂದಿಗೆ ಹುಟ್ಟುಹಬ್ಬದ ಸೆಲಬ್ರೇಷನ್‌ಗಾಗಿ ಬೇಡ್ತಿ ಹಳ್ಳದ ಸಮೀಪವಿರುವ ಕೆಳಾಸೆ ಹೊಳೆಗೆ ಹೋಗಿದ್ದ. ಈ ಸಂದರ್ಭದಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದು, ತೇಲಿ ಹೋಗಿರುವುದಾಗಿ ತಿಳಿದು ಬಂದಿದೆ.

    ಮಾಹಿತಿ ಪಡೆದ ಯಲ್ಲಾಪುರ ಪೊಲೀಸರು ಸ್ಥಳಕ್ಕಾಗಮಿಸಿ ನಾಪತ್ತೆಯಾದ ಯುವಕನ ಶೋಧ ಕಾರ್ಯ ನಡೆಸಿದ್ದಾರೆ. ಘಟನೆ ಸಂಬಂಧ ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ರಾಮನಗರ ಸರಣಿ ಅಪಘಾತ; ಟೆಂಪೋ ಚಾಲಕ ಸಾವು, ಐವರಿಗೆ ಗಂಭೀರ ಗಾಯ

    ರಾಮನಗರ ಸರಣಿ ಅಪಘಾತ; ಟೆಂಪೋ ಚಾಲಕ ಸಾವು, ಐವರಿಗೆ ಗಂಭೀರ ಗಾಯ

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ರಾಮನಗರದ ತೀನೈಘಾಟ್ ಬಳಿ ಭೀಕರ ಸರಣಿ ಅಪಘಾತ ಸಂಭವಿಸಿ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದು, ಐವರಿಗೆ ಗಂಭೀರ ಗಾಯಗಳಾಗಿವೆ.

    ಜೊಯಿಡಾ ತಾಲೂಕಿನ ರಾಮನಗರ ಗೋವಾ ಸಂಪರ್ಕಿಸುವ ತೀನೈಘಾಟ್ ಇದಾಗಿದೆ. ವಾಹನಗಳ ನಡುವೆ ಸಂಭವಿಸಿದ ಸರಣಿ ಅಪಘಾತದಲ್ಲಿ ಟೆಂಪೋ ಚಾಲಕ ಸಾವು ಕಂಡಿದ್ದಾನೆ. ಇದಲ್ಲದೇ ಖಾಸಗಿ ಬಸ್ಸಲ್ಲಿದ್ದ ನಾಲ್ವರು ಪ್ರಯಾಣಿಕರು ಹಾಗೂ ಬೈಕ್ ಚಾಲಕ ಗಂಭೀರ ಗಾಯಗೊಂಡಿದ್ದಾರೆ.

    ಹೈದರಾಬಾದ್‌ನಿಂದ ಗೋವಾಕ್ಕೆ ತೆರಳುತ್ತಿದ್ದ ಖಾಸಗಿ ಬಸ್, ಮ್ಯಾಂಗನೀಸ್ ತುಂಬಿಕೊಂಡು ಹೋಗುತ್ತಿದ್ದ ಟ್ರಕ್‌ ಓವರ್‌ಟೇಕ್ ಮಾಡುತ್ತಿದ್ದಾಗ ಮುಂಭಾಗ ಬರುತ್ತಿದ್ದ ಟೆಂಪೋಗೆ ಬಸ್ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ನಾಲ್ಕು ವಾಹನಗಳು ಜಖಂ ಆಗಿವೆ.

    ಗಾಯಾಳುಗಳನ್ನು ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಸ್ಥಳಕ್ಕೆ ಆಗಮಿಸಿದ ರಾಮನಗರ ಪೊಲೀಸರು ಪರಿಶೀಲನೆ ನಡೆಸಿ ಸಂಚಾರಕ್ಕೆ ವ್ಯವಸ್ಥೆ ಮಾಡಿದ್ದಾರೆ. ಘಟನೆ ಸಂಬಂಧ ರಾಮನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಉ.ಕನ್ನಡ ಜಿಲ್ಲೆಯಲ್ಲಿ ಮತ್ತೆ ಭೂಕುಸಿತ – ಗೇರುಸೊಪ್ಪ ವಿದ್ಯುತ್‌ ಉತ್ಪಾದನಾ ಘಟಕ ಬಳಿಯೇ ಕುಸಿದ ಧರೆ

    ಉ.ಕನ್ನಡ ಜಿಲ್ಲೆಯಲ್ಲಿ ಮತ್ತೆ ಭೂಕುಸಿತ – ಗೇರುಸೊಪ್ಪ ವಿದ್ಯುತ್‌ ಉತ್ಪಾದನಾ ಘಟಕ ಬಳಿಯೇ ಕುಸಿದ ಧರೆ

    ಕಾರವಾರ: ಉತ್ತರ ಕನ್ನಡ (Uttara Kannada) ಜಿಲ್ಲೆಯಲ್ಲಿ ಮತ್ತೆ ಭೂಕುಸಿತವಾಗಿದೆ. ಗೇರುಸೊಪ್ಪ ವಿದ್ಯುತ್ ಉತ್ಪಾದನಾ ಘಟಕದ ಬಳಿಯೇ ಧರೆ ಕುಸಿದಿದೆ.

    ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಗೇರುಸೊಪ್ಪ ಜಲಾಶಯದ ಬಳಿ ಘಟನೆ ನಡೆದಿದೆ. ಈ ಹಿಂದೆ ಅಬ್ಬರದ ಮಳೆ ಹಿನ್ನೆಲೆಯಲ್ಲಿ ಜಲಾಶಯದಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡಲಾಗಿತ್ತು. 20 ಸಾವಿರ ಕ್ಯೂಸೆಕ್‌ಗೂ ಅಧಿಕ ನೀರು ಬಿಟ್ಟ ಹಿನ್ನೆಲೆಯಲ್ಲಿ ಜಲಾಶಯದ ತಡೆಗೋಡೆ ಪಕ್ಕದಲ್ಲೇ ಧರೆ ಕುಸಿದಿತ್ತು. ಇದೀಗ ಒಂದು ಭಾಗದ ಧರೆ ಕುಸಿದು ಮರಗಳು ಬಿದ್ದಿವೆ. ಇದನ್ನೂ ಓದಿ: ಅಹಮದಾಬಾದ್ ವಿಮಾನ ದುರಂತದಲ್ಲಿ ಮೃತಪಟ್ಟವರಿಗೆ ಗೋಕರ್ಣದಲ್ಲಿ ಪಿತೃಕಾರ್ಯ

    ಮತ್ತೆ ಹೆಚ್ಚಿನ ಮಳೆಯಾದಲ್ಲಿ ಡ್ಯಾಂನ ತಡೆಗೋಡೆ ವರೆಗೂ ಕುಸಿಯುವ ಸಾಧ್ಯತೆ ಇದೆ. ಡ್ಯಾಂನ ಎಡಭಾಗದ ಧರೆ ಕುಸಿದಿರುವುದರಿಂದ ಜಲಾಶಯಕ್ಕೆ ಯಾವುದೇ ಹಾನಿಯಿಲ್ಲ.

  • ಭಟ್ಕಳ ಅರಣ್ಯದಲ್ಲಿ ಗೋವುಗಳ ನರಮೇಧ? – ನೂರಾರು ಗೋವುಗಳ ಎಲುಬುಗಳು ಪತ್ತೆ; ಪೊಲೀಸರಿಂದ ತನಿಖೆ

    ಭಟ್ಕಳ ಅರಣ್ಯದಲ್ಲಿ ಗೋವುಗಳ ನರಮೇಧ? – ನೂರಾರು ಗೋವುಗಳ ಎಲುಬುಗಳು ಪತ್ತೆ; ಪೊಲೀಸರಿಂದ ತನಿಖೆ

    ಕಾರವಾರ: ಆ ಅರಣ್ಯದಲ್ಲಿ ನೂರಾರು ಬುರುಡೆಗಳು, ಸಾವಿರಾರು ಎಲುಬುಗಳು (Cow Bones) ಪತ್ತೆಯಾಗಿವೆ. ಪೊಲೀಸರು ಇದೀಗ ಇದರ ರಹಸ್ಯ ಹೊರಗೆಳೆಯಲು ತನಿಖೆಗಿಳಿದಿದ್ದಾರೆ.

    ಉತ್ತರ ಕನ್ನಡ (Uttara kannada) ಜಿಲ್ಲೆಯ ಭಟ್ಕಳದ ಮುಗ್ದಮ್ ಕಾಲೋನಿ ಬಳಿಯ ಅರಣ್ಯ ಇಲಾಖೆಗೆ ಸೇರಿದ ಬೆಳ್ನೆ ಅರಣ್ಯದ ಸರ್ವೇ ನಂಬರ್ 74ರ ಜಾಗದಲ್ಲಿ ನೂರಾರು ಗೋವುಗಳ ಕಳೇಬರದ ರಾಶಿಯೇ ಪತ್ತೆಯಾಗಿದೆ. ಸ್ಥಳೀಯರು ಈ ಕಾಡಿನ ಭಾಗದಲ್ಲಿ ರಾಶಿ ರಾಶಿ ಬಿದ್ದ ಗೋವುಗಳ ಅಸ್ಥಿಪಂಜರವನ್ನು ನೋಡಿ ಹಿಂದೂ ಕಾರ್ಯಕರ್ತರಿಗೆ ಮಾಹಿತಿ ನೀಡಿದ್ದಾರೆ. ಅವರು ಸ್ಥಳಕ್ಕೆ ಆಗಮಿಸಿ ವಿಡಿಯೋ ಚಿತ್ರೀಕರಣ ಮಾಡಿದ್ದಾರೆ. ಇದು ತಿಳಿಯುತ್ತಿದ್ದಂತೆ ರಾಶಿ ರಾಶಿ ಬಿದ್ದಿದ್ದ ಅಸ್ಥಿಪಂಜರಗಳನ್ನ ಆ ಸ್ಥಳದಿಂದ ಅನಾಮಿಕ ವ್ಯಕ್ತಿಗಳು ಬೇರೆಡೆ ಸಾಗಿಸಿದ್ದಾರೆ. ಸಾಗಿಸುವ ವೇಳೆ ಅವಸರದಲ್ಲಿ ಪಕ್ಕದಲ್ಲಿದ್ದ ಪುರಸಭೆಯ ವೇಸ್ಟ್ ಡಂಪಿಂಗ್ ಟ್ಯಾಂಕ್‌ಗೂ ಅಸ್ಥಿಪಂಜರಗಳನ್ನು ಹಾಕಲಾಗಿದೆ.

    ಇನ್ನು ಭಟ್ಕಳದಲ್ಲಿ ನಿರಂತರ ಗೋವಧೆ ನಡೆಯುತ್ತಿರುವ ಬಗ್ಗೆ ಹಿಂದೂ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದು, ಅಕ್ರಮವಾಗಿ ಗೋವುಗಳನ್ನು ಭಟ್ಕಳಕ್ಕೆ ತಂದು ವಧಿಸಲಾಗುತ್ತಿದೆ, ಇದಕ್ಕೆ ಪೊಲೀಸ್ ಇಲಾಖೆಯೂ ಸೇರಿಕೊಂಡಿದೆ ಎಂದು ಆರೋಪ ಮಾಡಿದ್ದಾರೆ. ಇದನ್ನೂ ಓದಿ: ನಮ್ಮ ಮೇಲೆ ಬಂದಿರುವ ಅಪವಾದಗಳು ಓಡಿ ಹೋಗುತ್ತವೆ: ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ

    ಇನ್ನು ಮೊದಲು ಪೊಲೀಸರು ಇದು ಹಳೆಯ ವಿಡಿಯೋ ಎಂದು ಘಟನೆಯನ್ನು ತಳ್ಳಿಹಾಕಿದ್ದರು. ಆದರೆ ಘಟನೆಯ ಸೂಕ್ಷ್ಮತೆ ಅರಿತ ಪೊಲೀಸರು, ಅರಣ್ಯ ಇಲಾಖೆ, ಪುರಸಭೆ ಅಧಿಕಾರಿಗಳು, ಪಶು ವೈದ್ಯಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ಇನ್ನು ಇಷ್ಟೊಂದು ದೊಡ್ಡ ಮಟ್ಟದಲ್ಲಿ ಗೋವುಗಳ ವಧೆಯಾಗಿರುವುದನ್ನು ಮನಗಂಡು ಭಟ್ಕಳ ಶಹರ ಠಾಣೆಯಲ್ಲಿ ಉಪ ಅವಲಯ ಅರಣ್ಯಾಧಿಕಾರಿ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಮದ್ದೂರು ಗಣೇಶ ಮೆರವಣಿಗೆಗೆ ಕಲ್ಲು ತೂರಿದ ಕೇಸ್‌ – ಪಾತ್ರವೇ ಇಲ್ಲದ ಪೊಲೀಸ್‌ ಅಧಿಕಾರಿ ವರ್ಗಾವಣೆ

  • ದಾಂಡೇಲಿ ಜಲಸಾಹಸ ಕ್ರೀಡೆಗಳಿಗೆ ಅನುಮತಿ ನೀಡಿದ ಜಿಲ್ಲಾಡಳಿತ; ಚಿಗುರಿದ ಪ್ರವಾಸೋದ್ಯಮ

    ದಾಂಡೇಲಿ ಜಲಸಾಹಸ ಕ್ರೀಡೆಗಳಿಗೆ ಅನುಮತಿ ನೀಡಿದ ಜಿಲ್ಲಾಡಳಿತ; ಚಿಗುರಿದ ಪ್ರವಾಸೋದ್ಯಮ

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಪರಿಸರ ಪ್ರವಾಸೋದ್ಯಮದಲ್ಲಿ ಒಂದಾದ ದಾಂಡೇಲಿ (Dandeli) ಪ್ರವಾಸೋದ್ಯಮ ಮತ್ತೆ ಚಿಗುರೊಡೆದಿದೆ. ಉತ್ತರ ಕನ್ನಡ ಜಿಲ್ಲಾಡಳಿತ ಮಳೆಗಾಲದಲ್ಲಿ ನಿಷೇಧ ಹೇರಿದ್ದ ಜಲಸಾಹಸ ಕ್ರೀಡೆಗಳಿಗೆ ಮತ್ತೆ ಅವಕಾಶ ಮಾಡಿಕೊಟ್ಟಿದ್ದು, ಪ್ರಕೃತಿ ಪ್ರಿಯರಿಗೆ, ಜಲಸಾಹಸಿಗಳಿಗೆ ದಾಂಡೇಲಿ ತೆರೆದುಕೊಂಡಿದೆ.

    ದಾಂಡೇಲಿಯಲ್ಲಿ ಯಾವೆಲ್ಲ ಚಟುವಟಿಕೆಗಳಿವೆ?
    ವೈಟ್ ವಾಟರ್ ರಾಫ್ಟಿಂಗ್

    ಕಾಳಿ ನದಿಯ ಸುಂದರ ತಾಣವಾದ ಜೋಯಿಡಾದ ಗಣೇಶ ಗುಡಿ ಬಳಿಯ ನದಿ ಭಾಗದಲ್ಲಿ ಜಿಲ್ಲಾ ಪ್ರವಾಸೋದ್ಯಮ ಇಲಾಖೆ ವೈಟ್ ವಾಟರ್ ರಾಫ್ಟಿಂಗ್‌ಗೆ ಅವಕಾಶ ಮಾಡಿಕೊಟ್ಟಿದೆ. ಕಾಳಿ ನದಿಯ ನೀರು ಶಾಂತವಾಗಿ ಹರಿದು ಕಲ್ಲು ಬಂಡೆಯ ಮೇಲೆ ದುಮ್ಮಿಕ್ಕಿ ಜಾರುಬಂಡಿಯಂತೆ ನದಿಯ ನೀರು ಹರಿಯುತ್ತದೆ. ಈ ಭಾಗದಲ್ಲಿ ರಾಫ್ಟಿಂಗ್‌ಗೆ ಅವಕಾಶ ಮಾಡಿಕೊಟ್ಟಿದ್ದು, ಇಲ್ಲಿ ರಾಫ್ಟರ್‌ನಲ್ಲಿ ಹುಟ್ಟುಗಳನ್ನು ಹಾಕುತ್ತಾ ಹೋಗುವುದೇ ಮನಮೋಹಕ. ಇಲ್ಲಿ ನದಿಯ ನೀರು ಹಾಲಿನ ನೊರೆಯಂತೆ ತನ್ನ ಬಣ್ಣ ಬದಲಿಸಿ ಹರಿಯುತ್ತದೆ. ಇದನ್ನೂ ಓದಿ: ಹಿಂದೂಗಳ ಮೇಲೆ ಲಾಠಿಚಾರ್ಜ್ ಯಾಕೆ? ಕಲ್ಲೆಸೆದವರ ಮೇಲೆ ಪೊಲೀಸರು ಪೌರುಷ ತೋರಿಸಲಿ – ಅಶ್ವಥ್ ನಾರಾಯಣ

    ಕಯಾಕಿಂಗ್, ಬೋಟಿಂಗ್‌ಗೆ ಅವಕಾಶ
    ಸದ್ಯ ಮಳೆಯಿಂದ ತನ್ನ ಸೌಂದರ್ಯ ಹೆಚ್ಚಿಸಿಕೊಂಡಿರುವ ಕಾಳಿ ನದಿ ಕಯಾಕಿಂಗ್ ಹಾಗೂ ಬೋಟಿಂಗ್ ಮಾಡಲು ಹೇಳಿಮಾಡಿಸಿದ ಸಮಯ. ಇಲ್ಲಿನ ಪರಿಸರ ವೀಕ್ಷಣೆಗೆ ಕಯಾಕಿಂಗ್ ಹಾಗೂ ಬೋಟಿಂಗ್ ಮಾಡುತ್ತಾ ನಿಸರ್ಗದ ಪರಿಸರವನ್ನು ವೀಕ್ಷಿಸಲು ಪ್ರವಾಸೋದ್ಯಮ ಇಲಾಖೆ ಅವಕಾಶ ಮಾಡಿಕೊಟ್ಟಿದೆ.

    ಇದಲ್ಲದೇ ದಾಂಡೇಲಿ, ಜೋಯಿಡಾ ಭಾಗದಲ್ಲಿ ಜಿಪ್‌ಲೈನ್‌, ಟ್ರಕ್ಕಿಂಗ್, ಜಂಗಲ್ ಸಫಾರಿ, ಕವಳೆ ಗುಹೆಗಳ ವೀಕ್ಷಣೆ, ಹಾರ್ನಬಿಲ್ ಪಕ್ಷಿಗಳ ವೀಕ್ಷಣೆ, ಸಿಂಥೇರಿ ರಾಕ್, ಮೊಸಳೆ ಪಾರ್ಕ್‌ಗಳನ್ನು ವೀಕ್ಷಿಸಬಹುದು. ವೀಕೆಂಡ್‌ನಲ್ಲಿ ಹೆಚ್ಚಿನ ಪ್ರವಾಸಿಗರು ಬರುವುದರಿಂದ ವೀಕ್‌ಡೇಸ್‌ನಲ್ಲಿ ಇಲ್ಲಿಗೆ ಬರುವುದು ಉತ್ತಮ. ಇದನ್ನೂ ಓದಿ: ಮತಗಳ್ಳತನ ಆಗಿದ್ರೆ ರಾಜೀನಾಮೆ ನೀಡಲಿ, ಬ್ಯಾಲೆಟ್ ಪೇಪರ್‌ನಿಂದ ಚುನಾವಣೆ ನಡೆಸಿ ಅಧಿಕಾರಕ್ಕೆ ಬರಲಿ: ಕಾರಜೋಳ

    ವಸತಿಗಾಗಿ ಹಲವು ಹೋಮ್ ಸ್ಟೇ ,ರೆಸಾರ್ಟ್‌ಗಳು ಇದ್ದು, ಒಂದೊಂದು ಭಾಗದಲ್ಲಿ ಒಂದೊಂದು ದರವಿದೆ. ಜೋಯಿಡಾ ಭಾಗದಲ್ಲಿ ಅಲ್ಪ ದರಗಳು ದಾಂಡೇಲಿಗೆ ಹೋಲಿಸಿದಲ್ಲಿ ಕಡಿಮೆಯಿದ್ದು, ಈ ಭಾಗವನ್ನು ತಂಗಲು ಆಯ್ಕೆ ಮಾಡಿಕೊಳ್ಳಬಹುದು. ಸದ್ಯ ಜಿಲ್ಲಾಡಳಿತ ಜಲಸಾಹಸ ಕ್ರೀಡೆಗೆ ಅನುಮತಿ ನೀಡಿದ್ದರಿಂದ ಪ್ರವಾಸೋದ್ಯಮ ಚಿಗುರೊಡೆದಿದೆ.

  • ಉತ್ತರ ಕನ್ನಡ ಜಿಲ್ಲೆಯಲ್ಲಿ ಅಬ್ಬರದ ಮಳೆ; ರಸ್ತೆ, ವಾಣಿಜ್ಯ ಸಂಕೀರ್ಣಗಳು ಜಲಾವೃತ

    ಉತ್ತರ ಕನ್ನಡ ಜಿಲ್ಲೆಯಲ್ಲಿ ಅಬ್ಬರದ ಮಳೆ; ರಸ್ತೆ, ವಾಣಿಜ್ಯ ಸಂಕೀರ್ಣಗಳು ಜಲಾವೃತ

    ಕಾರವಾರ: ಉತ್ತರ ಕನ್ನಡ (Uttara Kannada) ಜಿಲ್ಲೆಯಲ್ಲಿ ಅಬ್ಬರದ ಮಳೆ ಸುರಿಯುತ್ತಿದ್ದು, ಹಲವು ಕಡೆ ಅವಾಂತರ ಸೃಷ್ಟಿ ಮಾಡಿದೆ.

    ಕುಮಟಾ ತಾಲೂಕಿನ ಗೋಕರ್ಣ, ಮಾದನಗೇರಿಯಲ್ಲಿ ರಾಜ್ಯ ಹೆದ್ದಾರಿ 143 ರಲ್ಲಿ ಹೆಚ್ಚಿನ ಮಳೆಯಿಂದಾಗಿ ರಸ್ತೆ ಜಲಾವೃತವಾಗಿ ಹಲವು ವಾಣಿಜ್ಯ ಮಳಿಗೆಗಳಿಗೆ ನೀರು ನುಗ್ಗಿದ್ದು, ನಷ್ಟ ತಂದೊಡ್ಡಿದೆ. ಇನ್ನು ಮಾದನಗೇರಿ, ಗೋಕರ್ಣ ಭಾಗದ ಸಂಚಾರದಲ್ಲಿ ವ್ಯತ್ಯಯವಾಗಿದ್ದು, ಸವಾರರು ಪರದಾಡುವಂತಾಗಿದೆ. ಇದನ್ನೂ ಓದಿ: ಉತ್ತರಾಖಂಡದ ರುದ್ರಪ್ರಯಾಗ, ಚಮೋಲಿಯಲ್ಲಿ ಮೇಘಸ್ಫೋಟ – ಹಲವರು ನಾಪತ್ತೆ ಶಂಕೆ

    ಹೊನ್ನಾವರದಲ್ಲಿ ಲಿಂಗನಮಕ್ಕಿ ಹಾಗೂ ಗೇರುಸೊಪ್ಪದ ಜಲಾಶಯದಿಂದ ನೀರು ಹೊರಬಿಟ್ಟ ಪರಿಣಾಮ ನದಿಪಾತ್ರದ ತೋಟಗಳಿಗೆ ನೀರು ನುಗ್ಗಿದೆ. ಹೊನ್ನಾವರದ ಕರ್ನಲ್ ಕಂಬದ ಸಮೀಪ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಗುಡ್ಡದಲ್ಲಿ ಸಣ್ಣ ಪ್ರಮಾಣದ ಕುಸಿದು ರಸ್ತೆಗೆ ಬಿದ್ದಿದೆ. ಪರಿಣಾಮ ಕೆಲವು ಕಾಲ ಸಂಚಾರಕ್ಕೆ ಅಡಚಣೆಯಾಗಿತ್ತು.

    ಕಾರವಾರದಲ್ಲಿ ಸುರಿದ ಮಳೆಗೆ ಕೋಡಿಬಾಗ್‌ನ ವಿಜಯಾ ಪಾಲೇಕರ್ ಎಂಬವರ ಮನೆಯ ಗೋಡೆ ಕುಸಿತವಾಗಿ ಹಾನಿಯಾಗಿದೆ. ಇದನ್ನೂ ಓದಿ: ಲಿಂಗನಮಕ್ಕಿ, ಗೇರುಸೊಪ್ಪ ಡ್ಯಾಮ್‌ನಿಂದ ನೀರು ಬಿಡುಗಡೆ – ಜೋಗ್‌ ಫಾಲ್ಸ್‌ಗೆ ಜೀವಕಳೆ