Tag: ಉತ್ತರಾಧಿ ಮಠ

  • ಶಾ ಭೇಟಿ ವೇಳೆ ಉತ್ತರಾಧಿ ಮಠದಲ್ಲಿ ವ್ಯಕ್ತಿ ಬಳಿ ರಿವಾಲ್ವರ್ ಪತ್ತೆ!

    ಶಾ ಭೇಟಿ ವೇಳೆ ಉತ್ತರಾಧಿ ಮಠದಲ್ಲಿ ವ್ಯಕ್ತಿ ಬಳಿ ರಿವಾಲ್ವರ್ ಪತ್ತೆ!

    ಕಲಬುರಗಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಭೇಟಿ ವೇಳೆ ವ್ಯಕ್ತಿಯೊಬ್ಬರ ಬಳಿ ರಿವಾಲ್ವರ್ ಪತ್ತೆಯಾದ ಹಿನ್ನೆಲೆಯಲ್ಲಿ ಕೆಲ ಕಾಲ ಆತಂಕ ವಾತಾವರಣ ನಿರ್ಮಾಣವಾದ ಘಟನೆ ಉತ್ತರಾಧಿ ಮಠದಲ್ಲಿ ನಡೆದಿದೆ.

    ಕಲಬುರಗಿ ಜಿಲ್ಲೆ ಸೇಡಂ ತಾಲೂಕಿನ ಮಳಖೇಡದಲ್ಲಿರುವ ಉತ್ತರಾಧಿ ಮಠಕ್ಕೆ ಅಮಿತ್ ಶಾ ಇಂದು ಬೆಳಗ್ಗೆ ಭೇಟಿ ಕೊಟ್ಟಿದ್ದರು. ಈ ವೇಳೆ ರಿವಾಲ್ವರ್ ಇಟ್ಟುಕೊಂಡು ವ್ಯಕ್ತಿಯೊಬ್ಬರು ಮಠ ಪ್ರವೇಶಿಸಿದ್ದರು.

    ರಿವಾಲ್ವರ್ ಪತ್ತೆಯಾದ ತಕ್ಷಣ ಎನ್‍ಎಸ್‍ಜಿ ಮತ್ತು ಪೊಲೀಸರು ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ವಿಚಾರಣೆ ವೇಳೆ ರಿವಾಲ್ವರ್ ಇಟ್ಟುಕೊಂಡ ವ್ಯಕ್ತಿ ಸೇಡಂ ಪಟ್ಟಣದ ಬಿಜೆಪಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ನಿವೃತ್ತ ಪೊಲೀಸ್ ಇನ್ಸ್ ಪೆಕ್ಟರ್ ತುರಾಬ್ ಉಲ್ ಹಕ್(61) ಎನ್ನುವುದು ಗೊತ್ತಾಗಿದೆ.

    ವಿಚಾರಣೆ ವೇಳೆ ತನ್ನ ಬಳಿ ರಿವಾಲ್ವರ್ ಗೆ ಲೈಸೆನ್ಸ್ ಇದೆ ಎಂದು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ತುರಾಬ್ ಉಲ್ ಹಕ್ ಅವರ ಮನೆಗೆ ತೆರಳಿ ಲೈಸೆನ್ಸ್ ದಾಖಲೆಗಳನ್ನು ಪೊಲೀಸರು ಪರಿಶೀಲಿಸಿದ್ದಾರೆ. ಎಲ್ಲ ವಿಚಾರಣೆಯ ಪೊಲೀಸರು ಎಚ್ಚರಿಕೆ ನೀಡಿ ತುರಾಬ್ ಉಲ್ ಹಕ್ ಅವರನ್ನು ಬಿಡುಗಡೆ ಮಾಡಿದ್ದಾರೆ.