ಡೆಹ್ರಾಡೂನ್: ಉತ್ತರಾಖಂಡ ಸಾರಿಗೆ ಸಂಸ್ಥೆಯ ಬಸ್‌ನಲ್ಲಿ ದೆಹಲಿಯಿಂದ (Delhi) ಡೆಹ್ರಾಡೂನ್‌ಗೆ (Dehradun) ಪ್ರಯಾಣಿಸುತ್ತಿದ್ದ ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದ ಐವರು ಕಾಮುಕರನ್ನು ಪೊಲೀಸರು ಬಂಧಿಸಿದ್ದಾರೆ. ಐವರ ವಿರುದ್ಧವೂ ಪೋಕ್ಸೋ ಕೇಸ್ (POCSO Case) ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ಅಜಯ್ ಸಿಂಗ್ ಹೇಳಿದ್ದಾರೆ.
ಡೆಹ್ರಾಡೂನ್‌ನ ಪಾಟೇಲ್ ನಗರದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇನ್ನೂ ಹೆಚ್ಚಿನ ಸಾಕ್ಷ್ಯ ಸಂಗ್ರಹದಲ್ಲಿ ಪೊಲೀಸ್ ಅಧಿಕಾರಿಗಳು ತೊಡಗಿದ್ದಾರೆ ಎಂದು ಎಸ್‌ಎಸ್‌ಪಿ ತಿಳಿಸಿದ್ದಾರೆ. ಇದನ್ನೂ ಓದಿ: ಮಹಿಳೆಯರ ಮೇಲಿನ ಅಪರಾಧಕ್ಕೆ ಕ್ಷಮೆಯಿಲ್ಲ: ಮೋದಿ
ಘಟನೆ ಕುರಿತು ಪೊಲೀಸ್ ಅಧಿಕಾರಿಗಳು ಅಧಿಕೃತವಾಗಿ ಹೊರಡಿಸಿದ ಪತ್ರಿಕಾ ಪ್ರಕಟಣೆಗಳನ್ನು ಮಾತ್ರ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಬಹುದು. ಇದರ ಹೊರತಾಗಿ ಯಾವುದೇ ಸುಳ್ಳು ಸುದ್ದಿ ಪ್ರಕಟಿಸಿದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಇದನ್ನೂ ಓದಿ: ಗೋಲ್ಡನ್ ಟೆಂಪಲ್‍ನಲ್ಲಿ ಕೇಜ್ರಿವಾಲ್ ಬಿಡುಗಡೆಗೆ ಮನೀಶ್ ಸಿಸೋಡಿಯಾ ಪ್ರಾರ್ಥನೆ
ಪೋಕ್ಸೋ ಕಾಯ್ದೆ-2012ರ ಸೆಕ್ಷನ್ 23ರ ಪ್ರಕಾರ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸರಿಯಾದ ಮಾಹಿತಿಯಿಲ್ಲದೆ ವ್ಯಕ್ತಿ ಅಥವಾ ಮಾಧ್ಯಮಗಳು ಸುದ್ದಿ ಪ್ರಕಟಿಸಿದರೆ ಸಂತ್ರಸ್ತೆಯ ಪ್ರತಿಷ್ಠೆಗೆ ಧಕ್ಕೆಯುಂಟಾಗುತ್ತದೆ ಜೊತೆಗೆ ಮಾನಹಾನಿ ಮಾಡಿದಂತೆ ಆಗುತ್ತದೆ. ಈ ಅಪರಾಧ ಎಸಗಿರುವುದು ಕಂಡುಬಂದರೆ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಡೆಹ್ರಾಡೂನ್ ಎಸ್‌ಎಸ್‌ಪಿ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಕೆಂಪಣ್ಣ ವರದಿ ಬಿಡುಗಡೆಯಾದ್ರೆ ಸಿಎಂ ಪಂಚೆ, ಶರ್ಟು ಎಲ್ಲಾ ಮಸಿ ಆಗೋದು ಗ್ಯಾರಂಟಿ: ಹೆಚ್.ವಿಶ್ವನಾಥ್
– ಕೋಲ್ಕತ್ತಾ ವೈದ್ಯೆ ಅತ್ಯಾಚಾರ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಹೀನಕೃತ್ಯ
ಡೆಹ್ರಾಡೂನ್: ಕೋಲ್ಕತ್ತಾ ವೈದ್ಯೆ ಮೇಲಿನ ಅತ್ಯಾಚಾರ, ಕೊಲೆ ಪ್ರಕರಣ ಮಾಸುವ ಮುನ್ನವೇ ಉತ್ತರಾಖಂಡದಲ್ಲಿ ಮತ್ತೊಂದು ಅತ್ಯಾಚಾರ ಪ್ರಕರಣ ವರದಿಯಾಗಿದೆ. ನರ್ಸ್‌ವೊಬ್ಬರ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಲಾಗಿದೆ.
ಉತ್ತರಾಖಂಡದ ಖಾಸಗಿ ಆಸ್ಪತ್ರೆಯಿಂದ ಉತ್ತರ ಪ್ರದೇಶದ ಗಡಿ ಬಳಿಯ ತನ್ನ ಮನೆಗೆ ಹಿಂದಿರುಗುತ್ತಿದ್ದಾಗ ನರ್ಸ್ ಮೇಲೆ ಅತ್ಯಾಚಾರವೆಸಗಿ ಹತ್ಯೆಗೈಯಲಾಗಿದೆ.
ಜುಲೈ 30 ರ ಸಂಜೆ ಆಸ್ಪತ್ರೆಯಿಂದ ಹೊರಟು ನರ್ಸ್ ರುದ್ರಪುರದ ಇಂದ್ರ ಚೌಕ್‌ನಿಂದ ಇ-ರಿಕ್ಷಾವನ್ನು ಹತ್ತಿರುವುದು ಸಿಸಿಟಿವಿ ದೃಶ್ಯಗಳಲ್ಲಿ ಕಂಡುಬಂದಿದೆ. ಆದರೆ ಉತ್ತರ ಪ್ರದೇಶದ ಬಿಲಾಸ್‌ಪುರದ ಕಾಶಿಪುರ್ ರಸ್ತೆಯಲ್ಲಿರುವ ತನ್ನ ಬಾಡಿಗೆ ನಿವಾಸವನ್ನು ಆಕೆ ತಲುಪಿಲ್ಲ. ನರ್ಸ್ ತನ್ನ 11 ವರ್ಷದ ಮಗಳೊಂದಿಗೆ ತಂಗಿದ್ದಳು.
ಮರುದಿನ, ನರ್ಸ್ ಕಾಣೆಯಾಗಿರುವ ಬಗ್ಗೆ ಆಕೆಯ ಸಹೋದರಿ ದೂರು ನೀಡಿದರು. ಎಂಟು ದಿನಗಳ ನಂತರ ದಿಬ್ದಿಬಾ ಗ್ರಾಮದ ಆಕೆಯ ಮನೆಯಿಂದ ಸುಮಾರು 1.5 ಕಿಮೀ ದೂರದಲ್ಲಿರುವ ಖಾಲಿ ಜಾಗದಲ್ಲಿ ಆಕೆಯ ಶವ ಪತ್ತೆಯಾಗಿದೆ.
ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಆರೋಪಿ ಪತ್ತೆಗೆ ಪೊಲೀಸ್ ತಂಡ ರಚಿಸಿದ್ದಾರೆ. ಸಂತ್ರಸ್ತೆಯ ಕದ್ದ ಮೊಬೈಲ್ ಫೋನ್ ಪೊಲೀಸರಿಗೆ ಸಿಕ್ಕಿದೆ. ಉತ್ತರ ಪ್ರದೇಶದ ಬರೇಲಿಯ ದಿನಗೂಲಿ ಕಾರ್ಮಿಕನಾಗಿದ್ದ ಆರೋಪಿಯನ್ನು ಬುಧವಾರ ರಾಜಸ್ಥಾನದಲ್ಲಿ ಬಂಧಿಸಲಾಗಿದೆ.
ಕುಡಿದ ಅಮಲಿನಲ್ಲಿದ್ದ ಧರ್ಮೇಂದ್ರ ಸಂತ್ರಸ್ತೆಯನ್ನು ನೋಡಿ ಆಕೆಯನ್ನು ಹಿಂಬಾಲಿಸಿದ್ದಾನೆ. ನಂತರ ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ. ಬಳಿಕ ಆಕೆಯನ್ನು ಪೊದೆಯೊಂದಕ್ಕೆ ಎಳೆದೊಯ್ದು ಅತ್ಯಾಚಾರ ಎಸಗಿದ್ದಾನೆ. ಬಳಿಕ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಆಕೆಯ ಫೋನ್ ಮತ್ತು ಆಕೆಯ ಪರ್ಸ್‌ನಲ್ಲಿದ್ದ 3,000 ರೂ. ಕದ್ದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಕೋಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಕರ್ತವ್ಯದ ಸಮಯದಲ್ಲಿ ಮಹಿಳಾ ಟ್ರೈನಿ ವೈದ್ಯೆಯ ಮೇಲೆ ಅತ್ಯಾಚಾರ ಎಸಗಿ ಹತ್ಯೆ ಪ್ರಕರಣದ ವಿರುದ್ಧ ರಾಷ್ಟ್ರವ್ಯಾಪಿ ಆಕ್ರೋಶದ ನಡುವೆ ಈ ಘಟನೆ ಜರುಗಿದೆ.
ಡೆಹ್ರಾಡೂನ್: ಇತ್ತೀಚೆಗೆ ಹರಿಯಾಣ ರಾಜ್ಯ ಸರ್ಕಾರ ವಿವಿಧ ನೇಮಕಾತಿಗಳಲ್ಲಿ ಅಗ್ನಿವೀರರಿಗೆ ಶೇ.10 ರಷ್ಟು ಮೀಸಲಾತಿ ಘೋಷಿಸಿತ್ತು. ಈ ಬೆನ್ನಲ್ಲೇ ಉತ್ತರಾಖಂಡ ರಾಜ್ಯ ಸರ್ಕಾರ (Uttarakhand Government) ಮತ್ತೊಂದು ಮಹತ್ವದ ತೀರ್ಮಾನಕ್ಕೆ ಮುಂದಾಗಿದೆ. ಉತ್ತರಾಖಂಡದಲ್ಲೂ ಅಗ್ನಿವೀರರಿಗೆ ಮೀಸಲಾತಿ (Reservation For Agniveers) ಕಲ್ಪಿಸುವ ಯೋಜನೆಯನ್ನು ರಾಜ್ಯ ಸರ್ಕಾರ ತರಲಿದೆ ಎಂದು ಸಿಎಂ ಪುಷ್ಕರ್ ಸಿಂಗ್ ಧಾಮಿ ಭಾನುವಾರ ಹೇಳಿದ್ದಾರೆ.
ಉತ್ತರಾಖಂಡ ರಾಜ್ಯದ ಅಗ್ನಿವೀರರು ರಾಷ್ಟ್ರಕ್ಕೆ ಸೇವೆ ಸಲ್ಲಿಸಿದ ನಂತರ ಅವರಿಗೆ ಸರ್ಕಾರಿ ಇಲಾಖೆ ಹಾಗೂ ಪೊಲೀಸ್ ಇಲಾಖೆಯಲ್ಲಿ ಉದ್ಯೋಗ ನೀಡಲಾಗುವುದು. ಅದಕ್ಕಾಗಿ ಮೀಸಲಾತಿಗಾಗಿ ತರಲು ರಾಜ್ಯ ಸರ್ಕಾರ ಸಚಿವ ಸಂಪುಟದಲ್ಲಿ ಪ್ರಸ್ತಾವನೆ ಮಂಡಿಸಲಿದೆ ಎಂದು ಸಿಎಂ ಧಾಮಿ (Pushkar Singh Dhami) ತಿಳಿಸಿದ್ದಾರೆ. ಇದನ್ನೂ ಓದಿ: ಜು.22ರಿಂದ ಲೋಕಸಭೆ ಮುಂಗಾರು ಅಧಿವೇಶನ – 6 ಹೊಸ ಮಸೂದೆ ಮಂಡನೆಗೆ ಕೇಂದ್ರ ಸಜ್ಜು!
ಉತ್ತರಾಖಂಡ ಮಿಲಿಟರಿ ಪ್ರಾಬಲ್ಯ ರಾಜ್ಯವಾಗಿದ್ದು, ಇಲ್ಲಿನ ಯುವಕರು ದೊಡ್ಡ ಸಂಖ್ಯೆಯಲ್ಲಿ ಭಾರತೀಯ ಸೇನೆಗೆ ಸೇರಿ ಸೇವೆ ಸಲ್ಲಿಸುತ್ತಾರೆ. ಆದ್ದರಿಂದ ರಾಜ್ಯದಲ್ಲಿ ಅಗ್ನಿವೀರರಿಗೆ ಸರ್ಕಾರಿ ನೌಕರಿ ನೀಡಲು ನಿರ್ಧರಿಸಿದೆ. ಅಗ್ನಿಪಥ್ ಯೋಜನೆ ಪರಿಚಯಿಸಿದಾಗ, ನಾನು ವಿವಿಧ ಮಿಲಿಟರಿ ಅಧಿಕಾರಿಗಳು ಮತ್ತು ಅನುಭವಿಗಳನ್ನು ಭೇಟಿಯಾಗಿ ಚರ್ಚಿಸಿದ್ದೆ. ಆಗಲೇ ಅಗ್ನಿವೀರರಿಗೆ ಉದ್ಯೋಗ ನೀಡಲು ನಿರ್ಧರಿಸಿದ್ದೆವು. ಈಗ ಅದಕ್ಕೆ ಸೂಕ್ತ ಸಮಯ ಬಂದಿದೆ. ಅಗ್ನಿಪಥ್ ಯೋಜನೆಗೆ ಆಯ್ಕೆಯಾಗಿ ಸೇನೆಯಲ್ಲಿ 4 ವರ್ಷ ಸೇನೆ ಸಲ್ಲಿಸಿದ ಅಗ್ನಿವೀರ್ ಸೈನಿಕರಿಗೆ ಉತ್ತರಾಖಂಡ ಪೊಲೀಸ್ ಮತ್ತು ರಾಜ್ಯ ಇತರೇ ಸರ್ಕಾರಿ ಇಲಾಖೆಗಳಲ್ಲಿ ಉದ್ಯೋಗ ನೀಡಲಾಗುತ್ತದೆ. ಇದಕ್ಕೆ ಸಂಬಂಧಿಸಿದ ಪ್ರಸ್ತಾವನೆಯನ್ನು ಶೀಘ್ರವೇ ಸಂಪುಟದಲ್ಲಿ ಮಂಡಿಸಲಾಗುತ್ತದೆ ಎಂದು ವಿವರಿಸಿದ್ದಾರೆ.
ಅಲ್ಲದೇ ರಾಜ್ಯದಲ್ಲಿ ಕೌಶಲ ತರಬೇತಿ ಯೋಜನೆ ಜಾರಿಗೊಳಿಸಲು ಸಿದ್ಧತೆ ನಡೆಸಲಾಗಿದೆ. ಈ ಮೂಲಕ ನಿವೃತ್ತ ಅಗ್ನಿಶಾಮಕ ಸಿಬ್ಬಂದಿಗೆ ಹಲವು ಕ್ಷೇತ್ರಗಳಲ್ಲಿ ಉದ್ಯೋಗ ಸಂಬಂಧಿ ತರಬೇತಿ ನೀಡಲಾಗುವುದು. ಈ ಸಂಬಂಧವೂ ಆದಷ್ಟು ಬೇಗ ಪ್ರಸ್ತಾವನೆ ಸಿದ್ಧಪಡಿಸುವಂತೆ ಸಿಎಂ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎನ್ನಲಾಗಿದೆ. ಮುಂಬರುವ ವಿಧಾನಸಭೆ ಅಧಿವೇಶನದಲ್ಲೇ ಪ್ರಸ್ತಾವನೆ ಮಂಡಿಸುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಅಗ್ನಿವೀರರಿಗೆ 10% ಮೀಸಲಾತಿ – ಸ್ವಂತ ಉದ್ಯಮ ಆರಂಭಿಸುವವರಿಗೆ 5 ಲಕ್ಷ ರೂ. ವರೆಗೆ ಬಡ್ಡಿ ರಹಿತ ಸಾಲ: ಸಿಎಂ ಘೋಷಣೆ
ಹಾವೇರಿ (Haveri) ಜಿಲ್ಲೆಯ ಚಿಕ್ಕೇರೂರು ಹಾಗೂ ತಿಳವಳ್ಳಿ ಗ್ರಾಮಗಳ 7 ಮಂದಿ ಕನ್ನಡಿಗರು (Kannadigas) ಚಾರ್‌ಧಾಮ್ ಯಾತ್ರೆಗೆಂದು ಜೂನ್ 29ರಂದು ಪ್ರವಾಸ ಆರಂಭಿಸಿದ್ದರು. ಬದರಿನಾಥನ ದರ್ಶನ ಮುಗಿಸಿ ವಾಪಸ್ ಆಗುತ್ತಿದ್ದ ವೇಳೆ ಉತ್ತರಾಖಂಡದ ಚೆಮೋಲಿ ಜಿಲ್ಲೆಯ ಜ್ಯೋಶಿಮಠ ಎಂಬ ಗ್ರಾಮದ ಬಳಿ ಭೂಕುಸಿತ ಉಂಟಾಗಿ ಕನ್ನಡಿಗರು ಸಂಕಷ್ಟಕ್ಕೆ ಸಿಲುಕಿದ್ದರು. ಇದನ್ನೂ ಓದಿ: 6 ತಿಂಗಳ ಹಿಂದೆ ಮೃತಪಟ್ಟಿದ್ದ ಅಧಿಕಾರಿಗೆ ವರ್ಗಾವಣೆ – ಪೌರಾಡಳಿತ ಇಲಾಖೆ ಯಡವಟ್ಟು
ಘಟನೆ ಹಿನ್ನೆಲೆ ತಮ್ಮನ್ನು ರಕ್ಷಿಸುವಂತೆ ಕನ್ನಡಿಗರು ವೀಡಿಯೋ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದರು. ಇದೀಗ ರಸ್ತೆ ದುರಸ್ತಿಯಾದ ಹಿನ್ನೆಲೆ ಕನ್ನಡಿಗರು ಯಾವುದೇ ಅಪಾಯವಿಲ್ಲದೇ ವಾಪಸ್ ಆಗುತ್ತಿದ್ದಾರೆ. ಇಂದು ಸಂಜೆ ಎಲ್ಲಾ 7 ಯಾತ್ರಿಕರು ಸುರಕ್ಷಿತವಾಗಿ ದೆಹಲಿ ತಲುಪಲಿದ್ದಾರೆ. ಇದನ್ನೂ ಓದಿ: Assembly Bypolls: ಇಂಡಿಯಾ ಒಕ್ಕೂಟ 10, ಎನ್‌ಡಿಎ 2 ಕ್ಷೇತ್ರಗಳಲ್ಲಿ ಮುನ್ನಡೆ
7 ಮಂದಿ ಕನ್ನಡಿಗರ ವಿವರ:
ಶ್ರೀಧರ್ ಎಂ ಹೊಳಲ್ಕೇರಿ (62)2)
ಶಾಂತಾ ಎಸ್ ಹೊಳಲ್ಕೇರಿ (57)
ಅಶೋಕ್ ಎಸ್‌ವಿ (61)
ಭಾರತಿ ಎಎಸ್ (55)
ವೆಂಕಟೇಶ್ ಪಂಪನ್ (62)
ರಾಜೇಶ್ವರಿ ಪಂಪನ್ (60)
ರಾಹುಲ್ ಪಂಪನ್ (35)
ಡೆಹ್ರಾಡೂನ್: ಮದುವೆಯಾಗಿ ನಗದು, ಬೆಲೆಬಾಳುವ ವಸ್ತುಗಳೊಂದಿಗೆ ಪರಾರಿಯಾಗಿ ಅನೇಕ ಪುರುಷರನ್ನು ಯಾಮಾರಿಸಿದ್ದ ಮಹಿಳೆ ಈಗ ಪೊಲೀಸರ ಬಲೆಗೆ ಬಿದ್ದಿದ್ದಾಳೆ. ವೈದ್ಯಕೀಯ ತಪಾಸಣೆ ವೇಳೆ ಆಕೆಗೆ ಹೆಚ್‌ಐವಿ ಪಾಸಿಟಿವ್ ಬಂದಿರುವುದು ಪೊಲೀಸರಿಗೆ ಶಾಕ್ ನೀಡಿದೆ.
ಮದುವೆ ಹೆಸರಿನಲ್ಲಿ ಅನೇಕ ಪುರುಷರನ್ನು ವಂಚಿಸಿದ್ದ ಮಹಿಳೆಯರು ಮೇ 6 ರಂದು ಉತ್ತರಪ್ರದೇಶದ ಪೊಲೀಸರು ಬಂಧಿಸಿದ್ದರು. ಯುಪಿ ಮತ್ತು ಉತ್ತರಾಖಂಡದ ಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಆಕೆಯ ಗ್ಯಾಂಗ್‌ನ 6 ಸದಸ್ಯರನ್ನೂ ಬಂಧಿಸಿದ್ದು, ಪುಜಾಫರ್‌ನಗರ ಜೈಲಿಗೆ ಕಳುಹಿಸಲಾಗಿದೆ.
ಜಿಲ್ಲಾಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿದಾಗ ಆಕೆಗೆ ಹೆಚ್‌ಐವಿ ಸೋಂಕು ಇರುವುದು ಪತ್ತೆಯಾಗಿದೆ. ಬಂಧಿತ ಮಹಿಳೆ ಈಗ ಆಂಟಿರೆಟ್ರೋವೈರಲ್ ಥೆರಪಿ (ಎಆರ್‌ಟಿ)ಗೆ ಒಳಗಾಗುತ್ತಿದ್ದಾಳೆ ಎಂದು ಜೈಲು ಅಧೀಕ್ಷಕ ಸೀತಾರಾಮ್ ಶರ್ಮಾ ಹೇಳಿದ್ದಾರೆ.
ಮಹಿಳೆಗೆ ಹೆಚ್‌ಐವಿ ಇರುವುದು ದೃಢಪಟ್ಟಿರುವುದು ಎರಡೂ ರಾಜ್ಯಗಳ ಆರೋಗ್ಯ ಇಲಾಖೆ ಅಧಿಕಾರಿಗಳನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಈಗ ಅವಳ ಜೊತೆ ಮದುವೆಯಾಗಿ ಯಾಮಾರಿದ್ದ ಪುರುಷರಿಗಾಗಿ ತೀವ್ರ ಹುಡುಕಾಟ ನಡೆಸಲಾಗಿದೆ.
ಉತ್ತರಾಖಂಡದ ಆರೋಗ್ಯ ಇಲಾಖೆಯು, ರಾಜ್ಯದೊಳಗೆ ಆಕೆ ದೈಹಿಕ ಸಂಪರ್ಕಕ್ಕೆ ಬಂದ ಮೂವರು ಪುರುಷರು ಈಗ ಹೆಚ್ಐವಿ ಪಾಸಿಟಿವ್ ಎಂದು ದೃಢಪಡಿಸಿದ್ದಾರೆ. ಉಧಮ್ ಸಿಂಗ್ ನಗರದ ಆರೋಗ್ಯ ಇಲಾಖೆಯು ಎನ್‌ಜಿಒ ಸಹಯೋಗದೊಂದಿಗೆ ಈ ಪುರುಷರಲ್ಲಿ ಪರೀಕ್ಷೆಗಳನ್ನು ನಡೆಸಿ ART ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸೋಂಕಿತ ಪುರುಷರ ಕುಟುಂಬದ ಇತರೆ ಸದಸ್ಯರನ್ನೂ ಪರೀಕ್ಷಿಸುವ ಪ್ರಕ್ರಿಯೆ ನಡೆಯುತ್ತಿದೆ.
ಇದುವರೆಗೆ ಆರೋಪಿ ಮಹಿಳೆ ಐದು ಮದುವೆಯಾಗಿರುವುದಾಗಿ ತಿಳಿಸಿದ್ದಾಳೆ. ಐವರ ಪೈಕಿ ಮೂವರು ಪುರುಷರು ಉತ್ತರಾಖಂಡ ರಾಜ್ಯದವರೇ ಆಗಿದ್ದಾರೆ. ಆದರೆ ಆಕೆ ಇನ್ನೂ ಹೆಚ್ಚಿನ ಮಂದಿಗೆ ಮದುವೆಯಾಗಿ ವಂಚಿಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಬೆಂಗಳೂರು: ಉತ್ತರಾಖಂಡ (Uttarakhand) ಸಹಸ್ರತಾಲ್ ಟ್ರೆಕ್ಕಿಂಗ್ ವೇಳೆ ಹವಾಮಾನ ವೈಪರೀತ್ಯದಿಂದ ಅಪಾಯಕ್ಕೆ ಸಿಲುಕಿ ರಕ್ಷಿಸಲ್ಪಟ್ಟ ಕರ್ನಾಟಕದ ಚಾರಣಿಗರನ್ನು (Bengaluru Trekkers) ಬೆಂಗಳೂರಿಗೆ ಸುರಕ್ಷಿತವಾಗಿ ವಾಪಸ್ ಕರೆತರಲಾಯಿತು. ಈ ವೇಳೆ ಹಿಮ ದುರಂತ ಹಾಗೂ ಚಾರಣಿಗರ ರಕ್ಷಣೆ ಬಗ್ಗೆ ಸಚಿವ ಕೃಷ್ಣಬೈರೇಗೌಡ ಪ್ರತಿಕ್ರಿಯೆ ನೀಡಿದರು.
ನಗರದಲ್ಲಿ ಮಾತನಾಡಿದ ಅವರು, ಒಟ್ಟು 22 ಜನ ಬೆಂಗಳೂರಿಗರು ಚಾರಣಕ್ಕೆ ಹೋಗಿದ್ದರು. 9 ಜನರು ಮೃತಪಟ್ಟಿದ್ದಾರೆ. ಉಳಿದವರನ್ನ ಬೆಂಗಳೂರಿಗೆ ಕರೆದುಕೊಂಡು ಬಂದಿದ್ದೇವೆ. ಉತ್ತರಕಾಶಿಯಿಂದ ಡೆಹ್ರಾಡೂನ್ ಮೂಲಕ ಮೃತದೇಹಗಳನ್ನ ತರಲಾಗ್ತಿದೆ. 9 ಮೃತದೇಹಗಳನ್ನ ತರುವ ಚಾರ್ಟರ್ ಫ್ಲೈಟ್ ಸಿಗಲಿಲ್ಲ. ಹೀಗಾಗಿ ತಡ ಆಗುತ್ತಿದೆ. ಬೆಳಗಿನ ಜಾವದಿಂದ ಎರಡೆರೆಡು ಮೃತದೇಹಗಳಂತೆ ಐದು ಚಾರ್ಟರ್ ಫ್ಲೈಟ್ ಮೂಲಕ ಬರುತ್ತೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಸಾವಿನ ಕೂಪದಂತಿದ್ದ ಸಹಸ್ರತಾಲ್ ಹಿಮದ ಹೊದಿಕೆಯಿಂದ ಬದುಕುಳಿದವರು ಬೆಂಗಳೂರಿಗೆ ವಾಪಸ್
ನಾಮತ್ತಾಲ್‌ದಿಂದ ಸಹಸ್ತ್ರತಾಲ್ ಸರೋವರಕ್ಕೆ ಬರುವ ವೇಳೆ ಹವಮಾನ ವೈಪರೀತ್ಯವಾಗಿ ಮಂಜು ಆವರಿಸಿಕೊಂಡು, ಮುಂದೆ ಸಾಗೋದಕ್ಕೂ ಆಗದೇ ಕಾಲಕ್ರಮೇಣ ಇಬ್ಬರು, ಇನ್ನಿಬ್ಬರು ಮೃತಪಟ್ಟಿದ್ದಾರೆ. ಜೂ.3 ಮಧ್ಯಾಹ್ನ ಘಟನೆ ಆಗಿದ್ದು, ಜೂ.4 ರ ರಾತ್ರಿ ನಮಗೆ ಮಾಹಿತಿ ಸಿಕ್ಕಿತು. ಭಾರತೀಯ ವಾಯುಸೇನೆಯ ವಿಮಾನ ಮೂಲಕ ರಕ್ಷಣಾ ಕಾರ್ಯ ಮಾಡಲಾಯಿತು. ಜೂ.5 ರಂದು 11 ಜನರ ರಕ್ಷಣೆ ಮಾಡಲಾಯ್ತು. ಇವತ್ತು 13 ಜನರನ್ನು ರಾಜ್ಯ ಸರ್ಕಾರ ಕರೆದುಕೊಂಡು ಬಂದಿದೆ. ಇದರ ಖರ್ಚು ವೆಚ್ಚ ಸರ್ಕಾರ ಭರಿಸುವ ಬಗ್ಗೆ ಸಿಎಂ ಸೂಚನೆ ನೀಡಿದರು ಎಂದು ತಿಳಿಸಿದರು.
ತ್ವರಿತಗತಿಯಲ್ಲಿ ರಕ್ಷಣಾ ಕಾರ್ಯ ಆಗಿದ್ದರಿಂದ ಕೆಲವರ ಪ್ರಾಣ ಉಳಿಯಿತು. ನಮ್ಮ ರಾಜ್ಯದ ಅಧಿಕಾರಿಗಳು, ಉತ್ತರಾಖಂಡ ಅಧಿಕಾರಿಗಳು ಸಹಕಾರ ನೀಡಿದ್ದಾರೆ. ಮೃತ ಚಾರಣಿಗರ ಆತ್ಮಕ್ಕೆ ಶಾಂತಿ ಸಿಗಲಿ. ರಕ್ಷಣೆಯಾದ 13 ಜನರ ಆರೋಗ್ಯ ಸ್ಥಿರವಾಗಿದೆ. 11 ಜನ ಚಾರಣಕ್ಕೆ ಹೋಗಿದ್ದರು. ಇನ್ನಿಬ್ಬರು ಹೋಗಿರಲಿಲ್ಲ. ಇನ್ನೂ ಮಾನಸಿಕವಾಗಿ ಭಯದಲ್ಲಿದ್ದಾರೆ. ದೈಹಿಕವಾಗಿ ಸ್ಥಿರವಾಗಿದ್ದಾರೆ. ಆತಂಕದಲ್ಲಿದ್ದಾರೆ. ಚಾರಣಕಕ್ಕೆ ಹೋದ 22 ಜನ ಬೆಂಗಳೂರಿನವರೇ. ಇವರೆಲ್ಲರೂ ಹವ್ಯಾಸಿ ಚಾರಣಿಗರೇ. ಹವಾಮಾನ ವೈಪರೀತ್ಯದ ಬಗ್ಗೆ ಮುನ್ಸೂಚನೆ ಇರಲಿಲ್ಲ ಅಂತಾ ಅವರ ಹೇಳಿಕೆ. ಈ ರೀತಿಯ ಘಟನೆಗಳು ಅಪರೂಪ. ದುರಂತ ಆಗಬಾರದಿತ್ತು. ಈ ಘಟನೆ ಅನಿರೀಕ್ಷಿತ. ಈ ಟ್ರೆಕ್ಕಿಂಗ್ ರೂಟ್ ಕಠಿಣ ರೈಟ್ ಆಗಿರಲಿಲ್ಲ ಅಂತಾ ಸ್ಥಳೀಯ ಅಧಿಕಾರಿಗಳು ಹೇಳಿದರು ಎಂದು ಮಾಹಿತಿ ಹಂಚಿಕೊಂಡರು. ಇದನ್ನೂ ಓದಿ: ಹಿಮಗಾಳಿ ಬಳಿಕ ಎಲ್ಲೆಡೆ ಕಗ್ಗತ್ತಲು, ತಿಂದಿದ್ದು ಡ್ರೈಪ್ರೂಟ್ಸ್ ಮಾತ್ರ!
ಬೆಂಗಳೂರು: ಉತ್ತರಾಖಂಡದ (Uttarakhand) ಸಹಸ್ರತಾಲ್‌ಗೆ ಚಾರಣಕ್ಕೆ ಹೋಗಿದ್ದಾಗ ಹವಾಮಾನ ವೈಪರೀತ್ಯದಿಂದಾಗಿ ಕರ್ನಾಟಕದ 9 ಚಾರಣಿಗರು (Bengaluru Trekkers) ಸಾವಿಗೀಡಾಗಿದ್ದಾರೆ. ಇನ್ನುಳಿದ 13 ಮಂದಿಯನ್ನು ರಕ್ಷಿಸಲಾಗಿದೆ. ಎಲ್ಲರೂ ಸುರಕ್ಷಿತವಾಗಿ ಬೆಂಗಳೂರಿಗೆ ವಾಪಸ್ ಆಗಿದ್ದಾರೆ.
ರಕ್ಷಿಸಲ್ಪಟ್ಟ ಚಾರಣಿಗರು ಬೆಂಗಳೂರು ವಿಮಾನ ನಿಲ್ದಾಣದ (Bengaluru Airport) ಟರ್ಮಿನಲ್ 1ಗೆ ಬಂದಿಳಿದಿದ್ದಾರೆ. ಚಾರಣಿಗರು ಇಂಡಿಗೋ ಏರ್‌ಲೈನ್ಸ್ ವಿಮಾನದಲ್ಲಿ ಸಚಿವ ಕೃಷ್ಣಬೈರೇಗೌಡ ಜೊತೆಗೆ ಬೆಂಗಳೂರಿಗೆ ಬಂದಿಳಿದಿದ್ದಾರೆ. ಇದನ್ನೂ ಓದಿ: ಹಿಮಗಾಳಿ ಬಳಿಕ ಎಲ್ಲೆಡೆ ಕಗ್ಗತ್ತಲು, ತಿಂದಿದ್ದು ಡ್ರೈಪ್ರೂಟ್ಸ್ ಮಾತ್ರ!
ಸಾವಿನ ಕೂಪದಂತಿದ್ದ ಸಹಸ್ರತಾಲ್‌ನ ಹಿಮದ ಹೊದಿಕೆಯಿಂದ ಬಚಾವಾಗಿ ಸಿಲಿಕಾನ್ ಸಿಟಿಗೆ ಬಂದಿಳಿದ ಚಾರಣಿಗರು ನಿಟ್ಟುಸಿರು ಬಿಟ್ಟಿದ್ದಾರೆ.
ಏನಾಗಿತ್ತು?
ರಾಜ್ಯದ 21 ಚಾರಣಿಗರು ಹಾಗೂ ಓರ್ವ ಗೈಡರ್ ಒಳಗೊಂಡ ತಂಡವು ಮೇ 28 ರಂದು ಟ್ರೆಕ್ಕಿಂಗ್‌ಗೆ ಉತ್ತಾರಖಂಡಕ್ಕೆ ಹೋಗಿತ್ತು. ಉತ್ತರಾಕಾಶಿಯಿಂದ 35 ಕಿಮೀ ದೂರದ ಅತ್ಯಂತ ಕಠಿಣ ಹಾದಿಯ ಸಹಸ್ರತಾಲ್ ಮಯಳಿ ಎಂಬ ಎತ್ತರದ ಪ್ರದೇಶದಲ್ಲಿ ಜೂ.4 ರಂದು ಬೆಳಗ್ಗೆ ಚಾರಣ ಆರಂಭಿಸಿದ್ದರು. ಚಾರಣದ ಗಮ್ಯಸ್ಥಾನ ತಲುಪಿ ನಂತರ ಶಿಬಿರಕ್ಕೆ ವಾಪಸ್ ಆಗುತ್ತಿದ್ದಾಗ ಮಧ್ಯಾಹ್ನದ ಹೊತ್ತಿಗೆ ಹಿಮಗಾಳಿಯಿಂದಾಗಿ ಚಾರಣಿಗರು ಅಪಾಯಕ್ಕೆ ಸಿಲುಕಿದರು. ಇದನ್ನೂ ಓದಿ: ಉತ್ತರಾಖಂಡ ದುರಂತ- ಬದುಕುಳಿದ ಚಾರಣಿಗರು ಇಂದು ರಾತ್ರಿ ಬೆಂಗ್ಳೂರಿಗೆ ವಾಪಸ್
ಭೀಕರ ಹಿಮಗಾಳಿಯಿಂದಾಗಿ ಕರ್ನಾಟಕದ 9 ಚಾರಣಿಗರು ದಾರುಣ ಸಾವನ್ನಪ್ಪಿದ್ದಾರೆ. ಉಳಿದ ಚಾರಣಿಗರನ್ನು ಕಾರ್ಯಾಚರಣೆ ನಡೆಸಿ ರಕ್ಷಿಸಲಾಗಿದೆ. ರಕ್ಷಣಾ ಕಾರ್ಯಕ್ಕೆ ನೆರವಾಗಲು ಕರ್ನಾಟಕದ ಸಚಿವ ಕೃಷ್ಣಬೈರೇಗೌಡ ಅವರು ಕೂಡ ಉತ್ತರಾಖಂಡಕ್ಕೆ ತೆರಳಿದ್ದರು. ಅಪಾಯದಿಂದ ಬದುಕುಳಿದ ಚಾರಣಿಗರನ್ನು ಸುರಕ್ಷಿತವಾಗಿ ರಾಜ್ಯಕ್ಕೆ ವಾಪಸ್ ಕರೆತರಲಾಗಿದೆ.
ಡೆಹ್ರಾಡೂನ್: ಮಧ್ಯಾಹ್ನದವರೆಗೆ ಎಲ್ಲರೂ ಅಂದುಕೊಂಡಂತೆ ಟ್ರೆಕ್ಕಿಂಗ್. ನಂತರ ಶುರುವಾಯ್ತು ಮಳೆ. ಅದರ ಬೆನ್ನಲ್ಲೇ ಬಂತು 90 ಕಿ.ಮೀ.ಗಿಂತಲೂ ಹೆಚ್ಚು ವೇಗದಲ್ಲಿ ಹಿಮಗಾಳಿ. ಆ ಬಳಿಕ ನಮಗ ಕಾಣಿಸಿದ್ದು ಕಗ್ಗತ್ತಲು ಮಾತ್ರ. ಉತ್ತರಾಖಂಡ್‌ನ (Uttarakhand) ಸಹಸ್ರತಾಲ್‌ಗೆ ಟ್ರೆಕ್ಕಿಂಗ್‌ಗೆ ಹೋಗಿ ಸಿಲುಕಿದ್ದ ಚಾರಣಿಗರು ತಾವು ಎದುರಿಸಿದ ಸಂಕಷ್ಟದ ಸಮಯವನ್ನು ವಿವರಿಸಿದ್ದಾರೆ. ತಾವು ಬದುಕಿ ಬಂದ ರೋಚಕ ಕತೆಯನ್ನು ಹೇಳಿಕೊಂಡಿದ್ದಾರೆ.
ಉತ್ತರಾಖಂಡ್‌ನ ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF) 8 ಚಾರಣಿಗರನ್ನು ಬುಧವಾರ ಡೆಹ್ರಾಡೂನ್‌ಗೆ ವಾಪಸ್ ಕರೆತಂದಾಗ ಅವರ ಮುಖದಲ್ಲಿ ಭಯವು ಸ್ಪಷ್ಟವಾಗಿ ಕಾಣಿಸಿತು. ಚಾರಣಿಗರು ಆರೋಗ್ಯವಾಗಿದ್ದರೂ ಅವರು ಭಯಭೀತರಾಗಿದ್ದರು. ಕೆಲವರ ಧ್ವನಿಯೂ ಹೊರಬರುತ್ತಿರಲಿಲ್ಲ ಎಂದು ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ. ಎಸ್‌ಡಿಆರ್‌ಎಫ್ ತಂಡದವರು ಎಂಟು ಚಾರಣಿಗರನ್ನು ರಕ್ಷಿಸಿ ಡೆಹ್ರಾಡೂನ್‌ಗೆ ಕರೆತಂದು, ಇಲ್ಲಿನ ಕೊರೊನೇಷನ್ ಆಸ್ಪತ್ರೆಯಲ್ಲಿ ದಾಖಲಿಸಿದರು. ಇದನ್ನೂ ಓದಿ: ಉತ್ತರಾಖಂಡ ದುರಂತ- ಬದುಕುಳಿದ ಚಾರಣಿಗರು ಇಂದು ರಾತ್ರಿ ಬೆಂಗ್ಳೂರಿಗೆ ವಾಪಸ್
ಜೀವನಪೂರ್ತಿ ಮರೆಯೋಕಾಗಲ್ಲ!:
ಹಿಮಗಾಳಿಯ ನಡುವೆ 20 ಗಂಟೆಗೂ ಅಧಿಕ ಕಾಲ ಸಿಲುಕಿದ್ದ ಚಾರಣಿಗರು ಈ ಕರಾಳ ಅನುಭವವನ್ನು ಜೀವನಪೂರ್ತಿ ಮರೆಯಲು ಸಾಧ್ಯವೇ ಇಲ್ಲ. ಚಾರಣದ ನಡುವೆ ನಿಜಕ್ಕೂ ಏನಾಯಿತು ಎನ್ನುವುದನ್ನು ವಿವರಿಸಲೂ ಸಾಧ್ಯವಾಗುತ್ತಿರಲಿಲ್ಲ. ಅದರಲ್ಲೂ ಚಾರಣದಲ್ಲಿದ್ದವರು ಕೇವಲ ಡ್ರೈಫ್ರೂಟ್ ತಿಂದು ಜೀವ ಉಳಿಸಿಕೊಂಡಿದ್ದಾರೆ.
ಸಹಿಸಲಸಾಧ್ಯ ಚಳಿ ಶುರುವಾಯ್ತು!
ಉತ್ತರಕಾಶಿಯ ಮನೇರಿಯಲ್ಲಿರುವ ಹಿಮಾಲಯನ್ ವ್ಯೂ ಟ್ರೆಕ್ಕಿಂಗ್ ಏಜೆನ್ಸಿ ಸಹಯೋಗದೊಂದಿಗೆ ಮೇ 29 ರಂದು ಕರ್ನಾಟಕದ 22 ಚಾರಣಿಗರ ತಂಡವು ಸಹಸ್ರತಾಲ್‌ಗೆ ಚಾರಣವನ್ನು ಪ್ರಾರಂಭಿಸಿತು. ಅವರೊಂದಿಗೆ ಮೂವರು ಮಾರ್ಗದರ್ಶಕರು ಹಾಗೂ ಎಂಟು ಹೇಸರಗತ್ತೆಗಳು ಇದ್ದವು. ಜೂನ್ 2ರ ಸಂಜೆ ಇದ್ದಕ್ಕಿದ್ದಂತೆ ಹಿಮದ ಬಿರುಗಾಳಿ ಪ್ರಾರಂಭವಾಯಿತು. ಚಾರಣಿಗರು ಹೇಳುವ ಪ್ರಕಾರ, ಹಿಮ ಬಿರುಗಾಳಿಯ ವೇಗ ಗಂಟೆಗೆ 90 ಕಿ.ಮೀ. ಇರಬಹುದು. ಇದಾದ ನಂತರ ಕಣ್ಣೆದುರು ಕತ್ತಲು ಕವಿದಿತ್ತು. ತಂಡದಲ್ಲಿದ್ದವರೆಲ್ಲರೂ ಪರಸ್ಪರ ಪ್ರತ್ಯೇಕಗೊಳ್ಳಲು ಪ್ರಾರಂಭಿಸಿದರು. ಇದ್ದಕ್ಕಿದ್ದ ಹಾಗೆ ಚಳಿ ಹೆಚ್ಚಾಗಿ ಸಹಿಸಿಕೊಳ್ಳಲಾಗದೆ ಅಸಹನೀಯ ಅನ್ನಿಸಲು ಶುರುವಾಯಿತು. ಈ ಹಿಂದೆಯೂ ಚಾರಣಕ್ಕಾಗಿ ಉತ್ತರಾಖಂಡಕ್ಕೆ ಬಂದಿದ್ದೆ. ಆದರೆ ಈ ಬಾರಿ ಏನಾಯಿತು ಎಂಬುದನ್ನು ಜೀವನದಲ್ಲಿ ಎಂದಿಗೂ ಮರೆಯಲು ಸಾಧ್ಯವಾಗುವುದಿಲ್ಲ ಎಂದರು ಚಾರಣಿಗ ಜೈಪ್ರಕಾಶ್ ವಿ.ಎಸ್. ಇದನ್ನೂ ಓದಿ: ಉತ್ತರಾಖಂಡ ಹಿಮಪಾತ- ಬೆಂಗಳೂರಿನ ಪ್ರಸಿದ್ಧ ಬಹುರಾಷ್ಟ್ರೀಯ ಕಂಪನಿ ಉದ್ಯೋಗಿ ಸಾವು
ಸೋಮವಾರ ಸಂಜೆ ವೆಂಕಟೇಶ್ ಅವರಿದ್ದ ತಂಡವು ಸಹಸ್ರತಾಲ್ ಕಡೆಗೆ ಹೋಗುತ್ತಿದ್ದಾಗ ಇದ್ದಕ್ಕಿದ್ದಂತೆ ಭಾರೀ ಮಳೆ ಶುರುವಾಯಿತು. ನಂತರ ಹಿಮ ಗಾಳಿ ಬೀಸಲಾರಂಭಿಸಿತು ಎಂದು ಹೇಳಿದರು. ನಿಧಾನವಾಗಿ ಚಂಡಮಾರುತ ಬರಲಾರಂಭಿಸಿತು. ಇದರಿಂದಾಗಿ ನಾವಿದ್ದ ಜಾಗದಲ್ಲಿಯೇ ಉಳಿಯಬೇಕಾಯಿತು. ಕಗ್ಗತ್ತಲು ಆವರಿಸಿದ್ದರಿಂದ ಯಾರು ಎಲ್ಲಿದ್ದಾರೆ ಎಂದು ಗೊತ್ತಾಗ್ತಿರಲಿಲ್ಲ ಎಂದರು.
ಮೊಬೈಲ್ ಟಾರ್ಚ್ ಹಚ್ಚಿ ಮಾತುಕತೆ!
ಹಿಮಗಾಳಿಗೆ ಸಿಲುಕಿದ ಬಳಿಕ ಕತ್ತಲಾದಾಗ ಜೀವ ಉಳಿಸಿಕೊಳ್ಳುವುದು ಇನ್ನಷ್ಟು ಕಷ್ಟವಾಯಿತು. ಹೇಗೋ ಮೊಬೈಲಿನ ಟಾರ್ಚ್ ಹಚ್ಚಿ ಮಾತಾಡುತ್ತಾ ಒಬ್ಬರಿಗೊಬ್ಬರು ಸಮಾಧಾನ ಪಡಿಸುತ್ತಿದ್ದೆವು. ಬುಧವಾರ ಬೆಳಿಗ್ಗೆ ಹೆಲಿಕಾಪ್ಟರ್ ನಮ್ಮ ಬಳಿ ತಲುಪಿದಾಗ ನಾವು ಸುರಕ್ಷಿತವಾಗಿದ್ದೇವೆ ಎಂದೆನಿಸಿತು ಎಂದು ಹಿಮಗಾಳಿಯ ನಡುವೆ ಸಿಲುಕಿ, ಬದುಕಿ ಬಂದ ಬೆಚ್ಚಿ ಬೀಳುವ ಅನುಭವವನ್ನು ಸ್ಮೃತಿ ಪ್ರಕಾಶ್ ವಿವರಿಸಿದರು.
ಬೆಂಗಳೂರು: ಉತ್ತರಾಖಂಡ (Uttarakhand) ಸಹಸ್ತ್ರ ತಾಲ್ ಶಿಖರದ ಟ್ರೆಕ್ಕಿಂಗ್‍ನಲ್ಲಿ ಸಿಲುಕಿ ಬದುಕುಳಿದ ಚಾರಣಿಗರು ಇಂದು ರಾತ್ರಿ ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ ಎಂದು ಸಚಿವ ಕೃಷ್ಣಬೈರೇಗೌಡ (Krishna Byre Gowda) ಮಾಹಿತಿ ನೀಡಿದ್ದಾರೆ.
With the group of 13 at Dehradun on the way back to Bengaluru. At the same time transportation of 9 bodies to Delhi by road has also started. Tomorrow morning those bodies will be flown to Bengaluru. pic.twitter.com/vcoR6HMdXP
— Krishna Byre Gowda (@krishnabgowda) June 6, 2024
ಇನ್ನು ಮೃತ 9 ಜನ ಚಾರಣಿಗರ ದೇಹಗಳನ್ನು ಎಂಬಾಮಿಂಗ್‍ಗಾಗಿ ವಿಮಾನ ನಿಲ್ದಾಣದಿಂದ ಆಸ್ಪತ್ರೆಗೆ ಸ್ಥಳಾಂತರಿಸಿದ್ದೇವೆ. ಎಂಬಾಮಿಂಗ್ ನಂತರ ಮೃತದೇಹಗಳನ್ನು ಅಂಬುಲೆನ್ಸ್‍ಗಳ ಮೂಲಕ ದೆಹಲಿ ವಿಮಾನ ನಿಲ್ದಾಣಕ್ಕೆ ಸಾಗಿಸಲಾಗುತ್ತದೆ. ಶುಕ್ರವಾರ ಬೆಳಗ್ಗೆ ದೆಹಲಿ-ಬೆಂಗಳೂರು ವಿಮಾನಗಳಲ್ಲಿ ಮೃತ ದೇಹಗಳನ್ನು ರವಾನಿಸಲು ಸ್ಥಳವನ್ನು ಕಾಯ್ದಿರಿಸಿದ್ದೇವೆ ಎಂದಿದ್ದಾರೆ.
We have shifted all 9 bodies from the airport to the hospital for embalming. After embalming bodies will be transported in ambulances to Delhi airport. We are booking space in tomorrow morning Delhi-Bengaluru flights. As the flights are… pic.twitter.com/OlUuLFZqOq
— Krishna Byre Gowda (@krishnabgowda) June 6, 2024
ಈ ಪ್ರಕಾರ, ಈಗಾಗಲೇ ಡೆಹ್ರಾಡೂನ್ ತಲುಪಿರುವ ಬದುಕಿರುವ ಚಾರಣಿಗರು ಇಂದು ರಾತ್ರಿ 8:45 ಕ್ಕೆ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿದ್ದಾರೆ. ಟರ್ಮಿನಲ್ 1 ಗೆ ಸಚಿವ ಕೃಷ್ಣ ಬೈರೇಗೌಡ ಜೊತೆಗೆ 13 ಮಂದಿ ಚಾರಣಿಗರು ಬರುತ್ತಾರೆ.
ಕಾರವಾರ: ಉತ್ತರಾಖಂಡದಲ್ಲಿ (Uttarakhand) ಆದ ಹವಾಮಾನ ವೈಪರೀತ್ಯ ದಿಂದ ಹಿಮಪಾತವಾಗಿ ನಾಪತ್ತೆಯಾದ ಚಾರಣಿಗರಲ್ಲಿ ಶಿರಸಿ ತಾಲೂಕಿನ ಜಾಗನಹಳ್ಳಿಯ ಯುವತಿ ಪದ್ಮಿನಿ ಸಹ ಇದ್ದು, ಅವರು ಮೃತಪಟ್ಟಿರುವ ಬಗ್ಗೆ ಮಾಹಿತಿ ಹೊರಬಿದ್ದಿದೆ.
ಟ್ರೆಕ್ಕಿಂಗ್ ಗೈಡ್‌ಗಳಾಗಿ ಉತ್ತರ ಕಾಶಿಯ (Uttara kashi) ಮೂವರು ನಿವಾಸಿಗಳ ಜೊತೆ ಬೆಂಗಳೂರಿನಿಂದ 18 ಮಂದಿ ಹಾಗೂ ಪುಣೆಯಿಂದ ಒಬ್ಬರ ಜೊತೆ ತೆರಳಿದ್ದರು. ಇವರೊಂದಿಗೆ ಜಾಗನಹಳ್ಳಿ ಮೂಲದ ಬೆಂಗಳೂರು ನಿವಾಸಿ, ಗೂಗಲ್ ಕಂಪನಿಯಲ್ಲಿ ನೌಕರಿ ಮಾಡುತ್ತಿದ್ದ ಪದ್ಮಿನಿ ಹೆಗಡೆ (35) ಅವರು ಒಬ್ಬರಾಗಿದ್ದರು.
ಜೂ. 4ರಂದು ಮಧ್ಯಾಹ್ನದ ಸಮಯಕ್ಕೆ ಹವಾಮಾನ ಸರಿಯಾಗಿಲ್ಲ ಎನ್ನುವುದಾಗಿ ಪದ್ಮಿನಿ ಅವರು ತಮ್ಮ ತಾಯಿಗೆ ಮೆಸೇಜ್ ಹಾಕಿದ್ದರು. ಅವರು ನಾಪತ್ತೆಯಾಗಿದ್ದಾರೆ ಎನ್ನುವ ಮಾಹಿತಿ ನಮಗಿದೆ. ಅವರಿಗೆ ಯಾವುದೇ ಅವಘಡ ಆಗಿದೆ ಎನ್ನುವುದಾಗಿ ನಮಗೆ ಅಧಿಕೃತವಾಗಿ ಮಾಹಿತಿ ಬಂದಿಲ್ಲ ಎನ್ನುವುದಾಗಿ ಪದ್ಮಿನಿ ಅವರ ಕುಟುಂಬದವರು ನಿನ್ನೆ ತಿಳಿಸಿದ್ದರು.
ಪದ್ಮಿನಿ ಅವರ ತಂದೆ ಶ್ರೀಪತಿ ಹೆಗಡೆ ಅವರು ನಿಧನರಾಗಿದ್ದಾರೆ. ತಾಯಿ ಶೈಲಾ ಹೆಗಡೆ ಅವರು ಮುಂಬೈನಲ್ಲಿ ತಮ್ಮ ಮೊದಲ ಮಗಳ ಜತೆ ವಾಸ ಮಾಡುತ್ತಿದ್ದಾರೆ. ಇವರು ಕೂಡ ತಾಯಿ ಹಾಗೂ ಅಕ್ಕನ ಜತೆ ವಾಸವಾಗಿದ್ದರು. ಸದ್ಯ ಬೆಂಗಳೂರಿನಲ್ಲಿ ನೌಕರಿ ಮಾಡುತ್ತಿದ್ದರು ಎನ್ನುವುದಾಗಿ ತಿಳಿದು ಬಂದಿದ್ದು ಇಂದು ಮೃತರಾಗುರುವ ಮಾಹಿತಿಯನ್ನು ವಿಪತ್ತು ನಿರ್ವಹಣಾ ಕೇಂದ್ರದ ಅಧಿಕಾರಿಗಳು ಖಚಿತ ಪಡಿಸಿದ್ದು ಪಸ್ಮಿನಿಯವರ ಮೃತ ದೇಹ ಪತ್ತೆಯಾಗಬೇಕಿದೆ.