ಡೆಹ್ರಾಡೂನ್: ಉತ್ತರಾಖಂಡದಲ್ಲಿ (Uttarakhand) ಮೇಘಸ್ಫೋಟಗೊಂಡು (Cloudburst) ಹಠಾತ್ ಪ್ರವಾಹ ಉಂಟಾದ ಪರಿಣಾಮ ಉತ್ತರಕಾಶಿ (Uttarkashi) ಬಳಿ ನಿರ್ಮಾಣ ಹಂತದ ಹೋಟೆಲ್‌ನಲ್ಲಿದ್ದ 9 ಕಾರ್ಮಿಕರು ನಾಪತ್ತೆಯಾಗಿದ್ದಾರೆ.
ಬಾರ್ಕೋಟ್-ಯಮುನೋತ್ರಿ ರಸ್ತೆಯಲ್ಲಿ ಮೇಘಸ್ಫೋಟಗೊಂಡಿದೆ. ಕಾರ್ಮಿಕರು ಪ್ರಹಾಹದಲ್ಲಿ ಕೊಚ್ಚಿಹೋಗಿರುವ ಶಂಕೆ ವ್ಯಕ್ತವಾಗಿದೆ. ಸ್ಥಳದಲ್ಲಿ ಎನ್‌ಡಿಆರ್‌ಎಫ್ ಹಾಗೂ ಎಸ್‌ಡಿಆರ್‌ಎಫ್ ತಂಡ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ. ಇದನ್ನೂ ಓದಿ: Koppal | ಬುರ್ಖಾ ಧರಿಸಿದ ಕಳ್ಳಿಯರಿಂದ ಗೃಹಬಳಕೆಯ ವಸ್ತು ಕಳ್ಳತನ
ಇನ್ನು ಭಾರೀ ಮೇಘಸ್ಫೋಟದಿಂದ ಚಾರ್‌ಧಾಮ್ (Char Dham Yatra) ಯಾತ್ರೆ ಸ್ಥಗಿತಗೊಳಿಸಲಾಗಿದೆ. ಗಂಗೋತ್ರಿ, ಯಮುನೋತ್ರಿ, ಕೇದಾರನಾಥ, ಭದ್ರಿನಾಥ ಯಾತ್ರೆ ಸ್ಥಗಿತಗೊಂಡಿದೆ. ಭಾರೀ ಮಳೆಯಿಂದಾಗಿ ಯಮುನಾ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ. ರುದ್ರಪ್ರಯಾಗ ಜಿಲ್ಲೆಯ ಸೋನ್‌ಪ್ರಯಾಗ್-ಮುಂಕಟಿಯಾ ರಸ್ತೆ ಬಂದ್ ಆಗಿದೆ. ಅಲ್ಲದೇ ಕೇದಾರನಾಥಕ್ಕೆ ಪ್ರಯಾಣಿಸುವ ಯಾತ್ರಾರ್ಥಿಗಳಿಗೆ ಮಾರ್ಗ ಬಂದ್ ಮಾಡಲಾಗಿದೆ. ಇದನ್ನೂ ಓದಿ: ಪುರಿ ಜಗನ್ನಾಥ ರಥಯಾತ್ರೆಯಲ್ಲಿ ಕಾಲ್ತುಳಿತ – ಮೂವರು ಸಾವು, 10 ಮಂದಿಗೆ ಗಾಯ
ಡೆಹ್ರಾಡೂನ್: ಉತ್ತರಾಖಂಡದ (Uttarakhand) ರುದ್ರಪ್ರಯಾಗ (Rudraprayag) ಜಿಲ್ಲೆಯಲ್ಲಿ ಅಲಕಾನಂದ ನದಿಗೆ (Alakananda River) 18 ಪ್ರಯಾಣಿಕರಿದ್ದ ಬಸ್ ಬಿದ್ದು ಇಬ್ಬರು ಸಾವನ್ನಪ್ಪಿದ್ದು, 10 ಮಂದಿ ನಾಪತ್ತೆಯಾಗಿದ್ದಾರೆ.
ಏಳು ಜನರನ್ನು ರಕ್ಷಿಸಲಾಗಿದ್ದು ಪೊಲೀಸರು ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ ನಾಪತ್ತೆಯಾದವರ ಪತ್ತೆ ಕಾರ್ಯ ನಡೆಸುತ್ತಿದೆ.
#WATCH | Uttarakhand | One person dead, seven injured after an 18-seater bus falls into the Alaknanda river in Gholthir of Rudraprayag district. Teamsof SDRF, Police and Administration conduct search and rescue oeprationd
ಚಾಲಕನ ನಿಯಂತ್ರಣ ತಪ್ಪಿ ನದಿಗೆ ಬಸ್ಸು ಬಿದ್ದಿದೆ. ಕೆಲವು ಗಾಯಾಳುಗಳನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದರಿಂದ ಸಾವು ನೋವು ಕಡಿಮೆಯಾಗಿದೆ.
ಪೊಲೀಸ್, ಜಿಲ್ಲಾಡಳಿತ ಆಡಳಿತ ಮತ್ತು ವಿಪತ್ತು ನಿರ್ವಹಣಾ ವಿಭಾಗದ ಉನ್ನತ ಅಧಿಕಾರಿಗಳು ರಕ್ಷಣಾ ಕಾರ್ಯಾಚರಣೆಯನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ. ವದಂತಿಗಳನ್ನು ಹರಡದಂತೆ ಸರ್ಕಾರ ಜನರಲ್ಲಿ ಮನವಿ ಮಾಡಿದೆ.
ಡೆಹ್ರಾಡೂನ್: ಉತ್ತರಾಖಂಡದ (Uttarakhand) ನೈನಿತಾಲ್‌ನ ಕುಮಾವೂನ್ ವಿಶ್ವವಿದ್ಯಾಲಯದ ಸುವರ್ಣ ಮಹೋತ್ಸವದಲ್ಲಿ ಭಾಗವಹಿಸಿದ್ದ ವೇಳೆ ಉಪರಾಷ್ಟ್ರಪತಿ ಜಗದೀಪ್ ಧನಕರ್ (Jagdeep Dhankhar) ಮೂರ್ಛೆ ಹೋಗಿದ್ದಾರೆ.
ನೈನಿತಾಲ್‌ನ ಕುಮಾವೂನ್ ವಿಶ್ವವಿದ್ಯಾಲಯದಲ್ಲಿ (Nainital Kumaon University) ನಡೆದ ಸುವರ್ಣ ಮಹೋತ್ಸವ ಸಮಾರಂಭದಲ್ಲಿ, ಉಪರಾಷ್ಟ್ರಪತಿ ಧನಕರ್ ಮುಖ್ಯ ಅತಿಥಿಯಾಗಿ 45 ನಿಮಿಷಗಳ ಭಾಷಣ ಮಾಡಿದರು. ಭಾಷಣದ ನಂತರ, ಉಪರಾಷ್ಟ್ರಪತಿ ವೇದಿಕೆಯಿಂದ ಇಳಿದ ತಕ್ಷಣ ಅವರ ಆರೋಗ್ಯ ಏರುಪೇರಾಗಿದ್ದು, ಅವರ ಜೊತೆ ಇದ್ದ ಮಾಜಿ ಸಂಸದ ಡಾ. ಮಹೇಂದ್ರ ಸಿಂಗ್ ಪಾಲ್ ಅವರ ಮೇಲೆಯೇ ಕುಸಿದು ಬಿದ್ದರು. ಕೂಡಲೇ ಸ್ಥಳದಲ್ಲೇ ಇದ್ದ ವೈದ್ಯರ ತಂಡ ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿದೆ. ಇದನ್ನೂ ಓದಿ: ಮಂಗಳೂರಲ್ಲಿ ‘ನೋಂದಣಿ’ ಗೋಲ್ಮಾಲ್ – ಕೋಟಿ ಬೆಲೆಯ ಕಾರಿಗೆ ಲಕ್ಷ ಬೆಲೆಯ ಕಾರಿನ ಮಾಡೆಲ್ ನಂಬರ್
ಡೆಹ್ರಾಡೂನ್: ಉತ್ತರಾಖಂಡದ (Uttarakhand) ಡೆಹ್ರಾಡೂನ್‌ನಲ್ಲಿ ಶನಿವಾರ ನಡೆದ 11ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಭಾಗಿಯಾಗಿದ್ದರು.
On the International Yoga Day, President Droupadi Murmu participated in a mass yoga demonstration at Dehradun. The President said that Yoga is the art of living a healthy life, adopting which benefits the body, mind and overall personality of a human being. pic.twitter.com/orfbi60XAh
— President of India (@rashtrapatibhvn) June 21, 2025
`ಒಂದು ಭೂಮಿಗಾಗಿ, ಒಂದು ಆರೋಗ್ಯಕ್ಕಾಗಿ ಯೋಗ’ ಎಂಬ ಥೀಮ್‌ನಲ್ಲಿ ಆಚರಿಸಲಾಗುತ್ತಿರುವ ಅಂತರರಾಷ್ಟ್ರೀಯ ಯೋಗ ದಿನದ (Yoga Day) ಅಂಗವಾಗಿ ಡೆಹ್ರಾಡೂನ್‌ನ (Dehradun) ಪೊಲೀಸ್ ಲೈನ್ಸ್‌ನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇದರಲ್ಲಿ ರಾಷ್ಟ್ರಪತಿಯವರು ಭಾಗವಹಿಸಿ ಯೋಗ ಮಾಡಿದ್ದಾರೆ. ಇದನ್ನೂ ಓದಿ: ಸಂಘರ್ಷ ತಾಂಡವ ಆಡ್ತಿರೋ ಜಗತ್ತಲ್ಲಿ ಯೋಗ ಶಾಂತಿ ತರಬಹುದು: ಮೋದಿ
ಬಳಿಕ ದೃಷ್ಟಿ ವಿಕಲಚೇತನರ ರಾಷ್ಟ್ರೀಯ ಸಬಲೀಕರಣ ಸಂಸ್ಥೆಗೆ ಭೇಟಿ ನೀಡಿದ್ದರು. ಅಲ್ಲಿ ಅವರು ವಸ್ತು ಪ್ರದರ್ಶನ ಮತ್ತು ಮಾದರಿ ಶಾಲೆಯ ವಿಜ್ಞಾನ ಪ್ರಯೋಗಾಲಯವನ್ನು ವೀಕ್ಷಿಸಿದ ಬಳಿಕ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ್ದರು. ರಾಷ್ಟ್ರಪತಿಯವರು ನೈನಿತಾಲ್‌ನ ರಾಜಭವನಕ್ಕೆ 125 ವರ್ಷಗಳು ಪೂರ್ಣಗೊಳಿಸಿದ ಸಲುವಾಗಿ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದ್ದರು.
– 3 ಕೋಟಿ ಮೌಲ್ಯದ ಬಂಗಲೆ, ಅಕ್ರಮ ಸಂಬಂಧಕ್ಕೆ ಕೊಲೆ
– ಗಂಡನ ಡೆಡ್‌ಬಾಡಿ ಕಾರಿನಲ್ಲೇ ಇಟ್ಕೊಂಡು ಸುತ್ತಾಡ್ತಿದ್ದ ರೀನಾ
ಡೆಹ್ರಾಡೂನ್: ಪ್ರೀತಿಗೆ ಕಣ್ಣಿಗೆ ಕಾಣಲ್ಲ ಅಂತಾರೆ ನಿಜ, ಆದ್ರೆ ಕೆಲವೊಮ್ಮೆ ಪ್ರೀತಿಗೆ ಹೃದಯವೂ ಇರೋದಿಲ್ಲ, ಅದು ತನ್ನ ಪ್ರೇಮಿಯನ್ನ (Lovers) ಬಿಟ್ಟು ಉಳಿದವರಿಗಾಗಿ ಕಲ್ಲಿನಷ್ಟೇ ಕಠೋರವಾಗಿರುತ್ತೆ. ಇದಕ್ಕೆ ಉತ್ತರಾಖಂಡದ ಪ್ರಕರಣವೇ ಸಾಕ್ಷಿಯಾಗಿದೆ. ಇತ್ತೀಚೆಗಷ್ಟೇ ಮೇಘಾಲಯದ ಹನಿಮೂನ್ ಪ್ರಕರಣ ಇಡೀ ದೇಶಾದ್ಯಂತ ಸದ್ದು ಮಾಡಿತ್ತು. ಇದೀಗ ಅಂತಹದ್ದೇ ಪ್ರಕರಣ ಉತ್ತರಾಖಂಡದ (Uttarakhand) ಕೋಟ್‌ದ್ವಾರದಲ್ಲಿ ನಡೆದಿದೆ.
ಹೌದು. ಕೋಟ್‌ದ್ವಾರದ ದುಗಡ್ಡ ಮಾರ್ಗದ ರಸ್ತೆ ಬದಿಯಲ್ಲಿ ಇದೇ ಜೂನ್ 5ರಂದು ಅಪರಿಚಿತ ಶವವೊಂದು ಪತ್ತೆಯಾಗಿತ್ತು. ಆತನನ್ನ ದೆಹಲಿ ನಿವಾಸಿ ರವೀಂದ್ರ ಕುಮಾರ್ ಎಂದು ಗುರುತಿಸಲಾಗಿತ್ತು. ಈ ಸಂಬಂಧ ನಿಗೂಢ ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು (Uttarakhand Police) ಕೊನೆಗೂ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೊಲೆಯ ಸೂತ್ರಧಾರಿ ಆತನ ಪತ್ನಿ ರೀನಾ ಸಿಂಧು (34) ಹಾಗೂ ಪ್ರಿಯಕರ ಪಾರಿತೋಷ್ ಅನ್ನೋದು ಗೊತ್ತಾಗಿದೆ. ಬಳಿಕ ಇಬ್ಬರನ್ನು ಬಂಧಿಸಲಾಗಿದೆ. ಆದ್ರೆ ಈ ಇಬ್ಬರು ಕೊಲೆ ಮಾಡಿದ್ದು ಹೇಗೆ? ಬಳಿಕ ಪ್ರಕರಣ ಮುಚ್ಚಿಹಾಕಲು ಏನೆಲ್ಲಾ ಪ್ರಯತ್ನ ಮಾಡಿದ್ರೂ? ಅನ್ನೋ ರೋಚಕ ಕಥೆ ತಿಳಿಯಬೇಕಿದ್ರೆ ಮುಂದೆ ಓದಿ….
ರೀನಾ ಸಿಂಧು ಯಾರು?
34 ವರ್ಷದ ರೀನಾ ಸಿಂಧು (Rina Sindhu) ಕೊಲೆಯಾದ ರವೀಂದ್ರ ಕುಮಾರ್ ಪತ್ನಿ. ಇಬ್ಬರು ಮೊರಾದಾಬಾದ್‌ನ ರಾಮಗಂಗಾ ಪ್ರದೇಶದಲ್ಲಿ ವಾಸಿಸುತ್ತಿದ್ದರು. 2ನೇ ಆರೋಪಿಯೂ ಆಗಿರುವ ರೀನಾಳ ಪ್ರಿಯಕರ ಪರಿತೋಷ್ ಕುಮಾರ್ ಬಿಜ್ನೋರ್ ಜಿಲ್ಲೆಯ ಥಾನಾ ನಗಿನಾದ ಸರೈಪುರೈನಿ ಗ್ರಾಮದ ನಿವಾಸಿ. ರೀನಾ – ರವೀಂದ್ರ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಇದನ್ನೂ ಓದಿ: ಉಡುಪಿ | ಹೆಂಡತಿ ಹೆಚ್ಚು ಮೊಬೈಲ್ ಬಳಸ್ತಾಳೆ ಅಂತ ಕಡಿದು ಕೊಂದ ಪತಿ!
ಶವ ಇಟ್ಕೊಂಡು ಕಾರಿನಲ್ಲೇ ಸುತ್ತಾಟ..
ತಮ್ಮಿಬ್ಬರ ಸರಸಕ್ಕೆ ಅಡ್ಡಿಯಾಗುತ್ತಾನೆಂದು ತಿಳಿದ ಪತ್ನಿ ರೀನಾ ಸಿಂಧು ಪ್ರಿಯಕರ ಪಾರಿತೋಷ್ ಜೊತೆಗೆ ಸೇರಿಕೊಂಡು ಕೊಲೆಗೆ ಸಂಚು ರೂಪಿಸಿದ್ದಳು ಅನ್ನೋದು ತನಿಖೆಯಲ್ಲಿ ತಿಳಿದುಬಂದಿದೆ. ಇಬ್ಬರು ಸೇರಿ ರವೀಂದ್ರನಿಗೆ ಮದ್ಯ ಕುಡುಸಿ ಬಳಿಕ ಸಲಾಕೆಯಿಂದ (ಕಬ್ಬಿಣದ ಸರಳು) ಚುಚ್ಚಿ ಕೊಂಡಿದ್ದಾರೆ. ಬಳಿಕ ಕಾರಿನಲ್ಲೇ ಶವ ಇಟ್ಕೊಂಡು ಬಹಳಷ್ಟು ಸಮಯ ಸುತ್ತಾಡಿದ ನಂತರ ಬಿಜ್ನೋರ್‌ನ ಕೋಟ್‌ದ್ವಾರಕ್ಕೆ ತಂದು ರಸ್ತೆ ಬದಿ ಎಸೆದು ಹೋಗಿದ್ದಾರೆ. ಬಳಿಕ ನೋಯ್ಡಾದಿಂದಲೇ ಪರಾರಿಯಾಗಿದ್ದಾರೆ. ಇದನ್ನೂ ಓದಿ: ಗಂಟೆಗೆ 192 ಕಿಮೀ ವೇಗದಲ್ಲಿ ಕಾರು ಚಾಲನೆ- `ಕೈ’ ಮುಖಂಡ ಸೇರಿ ಇಬ್ಬರು ದುರ್ಮರಣ
ದುರಾಸೆ, ಅಕ್ರಮ ಸಂಬಂಧವೇ ಕೊಲೆಗೆ ಕಾರಣ
ವಿಚಾರಣೆ ಸಮಯದಲ್ಲಿ ರೀನಾಳಿಗೆ ಆಸ್ತಿ ಮೇಲಿನ ಆಸೆ ಹಾಗೂ ಅಕ್ರಮ ಸಂಬಂಧವೇ ಕೊಲೆಗೆ ಕಾರಣ ಅನ್ನೋದು ಗೊತ್ತಾಗಿದೆ. ಕೊಲೆಯಾದ ಪತಿ ರವೀಂದ್ರಗೆ ಮೊರಾದಾಬಾದ್‌ನಲ್ಲಿ ದೊಡ್ಡ ಬಂಗಲೆ ಇತ್ತು. ಅದನ್ನ ಮಾರಾಟ ಮಾಡಲು ಮುಂದಾಗಿದ್ದ. ಆದ್ರೆ ರೀನಾ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಳು. ಆದ್ರೆ ರವೀಂದ್ರ ಹಠದಿಂದ ಹಿಂದೆ ಸರಿಯಲಿಲ್ಲ. ಇದೇ ಸಮಯಕ್ಕೆ ಫಿಸಿಯೋಥೆರಪಿಗಾಗಿ ಮನೆ ಬಳಿ ಬಂದಿದ್ದ ರೋಹಿ ಪಾರಿತೋಷ್‌ನನ್ನ ರೀನಾ ಭೇಟಿಯಾದಳು. ಇಬ್ಬರ ನಡುವೆ ಸ್ನೇಹ ಬೆಳೆದು ಪ್ರೀತಿಗೆ ತಿರುಗಿತ್ತು. ಈ ಅಕ್ರಮ ಸಂಬಂಧಕ್ಕೂ ಅಡ್ಡಿಯಾಗಿದ್ದನೆಂದು ಇಬ್ಬರೂ ಸೇರಿ ರವೀಂದ್ರನನ್ನ ಮುಗಿಸಲು ಸ್ಕೆಚ್ ಹಾಕಿದ್ರು.
ಕೊಂದಿದ್ದು ಯಾವಾಗ?
ಇದೇ ಮೇ 31ರಂದು ರೀನಾ, ತನ್ನ ಪತಿ ರವೀಂದ್ರನನ್ನ ಬಿಜ್ನೋರ್‌ನ ನಗೀನಾದಲ್ಲಿರುವ ಪಾರಿತೋಷ್ ಮನೆಗೆ ಕರೆದಿದ್ದಳು. ಬಳಿಕ ನಾಟಕವಾಡಿ ಮದ್ಯ ಕುಡಿಸಿದ್ದಳು. ನಂತರ ಸಲಾಕೆಯಿಂದ ಕುತ್ತಿಗೆ, ಎದೆ ಭಾಗಕ್ಕೆ ಚುಚ್ಚಿ ಕೊಂದಿದ್ದಳು. ಬಳಿಕ ಶವವನ್ನು SUV-500 ಕಾರಿನಲ್ಲಿರಿಸಿ ಮೊದಲು ರಾಮನಗರಕ್ಕೆ ಕೊಂಡೊಯ್ದರು. ಅಲ್ಲಿ ಜನನಿಬಿಡವಾಗಿದ್ದರಿಂದ ಕೋಟ್‌ದ್ವಾರಕ್ಕೆ ತೆಗೆದುಕೊಂಡು ಹೋದ್ರು. ದುಗಡ್ಡಾದ ಕಾಡುರಸ್ತೆಯ ಬಳಿ ಎಸೆದು ಹೋಗಿದ್ದರು. ಇದಾದ ನಂತರ ನೋಯ್ಡಾಗೆ ಎಸ್ಕೇಪ್ ಆಗಿದ್ದ ಕಿಲ್ಲರ್ಸ್ ಕೊಲೆಗೆ ಬಳಸಿದ್ದ ಕಾರನ್ನು ಅಲ್ಲೇ ಬಿಟ್ಟು ಮತ್ತೊಂದು ಸ್ಥಳಕ್ಕೆ ಪರಾರಿಯಾಗಿದ್ದರು. ಇದನ್ನೂ ಓದಿ: ಟ್ರ್ಯಾಕ್ಟರ್ ಕದ್ದು ಜೈಲು ಸೇರಿದ್ರು, ರಿಲೀಸ್ ಆಗಿ ಕಾರು ಕಳ್ಳತನಕ್ಕಿಳಿದ್ರು – ಮತ್ತೆ ಪೊಲೀಸರ ಅತಿಥಿಗಳಾದ ಕಳ್ರು!
ರೋಗಿಗೆ ʻಲವ್ ಟ್ರೀಟ್ಮೆಂಟ್ʼ ಕೊಟ್ಟ ರೀನಾ
56 ವರ್ಷದ ರವೀಂದ್ರ ಮೊದಲು ದೋಯಿವಾಲಾ ಪಟ್ಟಣದಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿದ್ದ. ಅಲ್ಲೇ ರೀನಾಳನ್ನ ಭೇಟಿಯಾಗಿದ್ದ, ನಂತರ ಇಬ್ಬರು ಪ್ರೀತಿಸಿ 2011ರಲ್ಲಿ ಮದುವೆಯಾದ್ರು. ರೀನಾ – ರವೀಂದ್ರ ಇಬ್ಬರಿಗೂ ಇದು 2ನೇ ಮದುವೆಯಾಗಿತ್ತು. ರವೀಂದ್ರ 2007ರಲ್ಲಿ ಮೊದಲ ಪತ್ನಿಯನ್ನ ತೊರೆದಿದ್ದ. ನಂತರ ದೆಹಲಿಯ ರಾಜೋಕ್ರಿಯಲ್ಲಿರುವ ತಮ್ಮ ಮನೆತನದ ಆಸ್ತಿಯನ್ನ ಮಾರಿ ಮೊರಾದಾಬಾದ್‌ನಲ್ಲಿ ಮೂರು ಕೋಟಿ ರೂ. ಮೌಲ್ಯದ ಬಂಗಲೆ ಖರೀದಿಸಿದ್ದ. ರೀನಾ ಫಿಸಿಯೋಥೆರಪಿಸ್ಟ್ ಆಗಿದ್ದರಿಂದ ಮನೆಯಲ್ಲೇ ಸಣ್ಣದಾಗಿ ಚಿಕಿತ್ಸಾ ಕೇಂದ್ರ ನಡೆಸುತ್ತಿದ್ದಳು. ಆಗಲೇ ಚಿಕಿತ್ಸೆ ಪಡೆಯಲು ಬಂದ ರೋಗಿ ಪಾರಿತೋಷ್‌ನನ್ನ ಭೇಟಿಯಾಗಿ ಲವ್‌ನಲ್ಲಿ ಬಿದ್ದಳು. ಇದನ್ನೂ ಓದಿ: ಮಗುವಿಗೆ ಜನ್ಮ ನೀಡಿ ರಕ್ತಸ್ರಾವದಿಂದ ಲಿವಿಂಗ್ ರಿಲೇಷನ್‌ಶಿಪ್‌ನಲ್ಲಿದ್ದ ಯುವತಿ ಸಾವು
ಕೊಲೆ ರಹಸ್ಯ ಬಯಲಾಗಿದ್ದು ಹೇಗೆ?
ಇದೇ ಜೂನ್ 17ರಂದು ಮೃತ ರವೀಂದ್ರ ಸಹೋದರ ರಾಜೇಶ್ ಕುಮಾರ್ ಕೋಟ್‌ದ್ವಾರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ರವೀಂದ್ರ ದೆಹಲಿ ಅಥವಾ ಹರಿಯಾಣದ ಬೊಹ್ರಾ ಕಲಾನ್‌ಗೆ ಬಂದಾಗೆಲ್ಲ ಕುಟುಂಬಸ್ಥರನ್ನ ಭೇಟಿಯಾಗ್ತಿದ್ದ. ಆದ್ರೆ 18 ಲಕ್ಷ ರೂ. ಚೆಕ್ ಬೌನ್ಸ್ ಪ್ರಕರಣದಲ್ಲಿ ಸಿಲುಕಿದ್ದರಿಂದ ರವೀಂದ್ರ ಬಂಧನ ಭೀತಿಯಿಂದ ಮೇ 9 ರಿಂದ ಕಣ್ಮರೆಯಾಗಿದ್ದ. ಸಾಲ ತೀರಿಸೋದಕ್ಕಾಗಿಯೇ ಮನೆ ಮಾರಲು ಬಯಸಿದ್ದ. ಆದ್ರೆ ರೀನಾ ಅದಕ್ಕೆ ವಿರುದ್ಧವಾಗಿದ್ದಳು. ಇದೇ ವಿಚಾರಕ್ಕೆ ಇಬ್ಬರ ನಡುವೆ ಜಗಳ ನಡೆಯುತ್ತಿತ್ತು.
ಇದಾದ ಬಳಿಕ ಜೂನ್ 1 ಮತ್ತು 2ರಂದು ರೀನಾ ಕೋಟ್‌ದ್ವಾರಕ್ಕೆ ಬಂದಿದ್ದಳು ಅದೇ ದಿನ ರವೀಂದ್ರ ಖರೀದಿಸಿದ್ದ ಎಸ್‌ಯುವಿ ಕೂಡ ಕಾಣೆಯಾಗಿತ್ತು. ಬಳಿಕ ನಗೀನಾ ಪಟ್ಟಣಕ್ಕೆ ಪ್ರಿಯಕರನನ್ನ ಕರೆಸಿ ಪತಿಯನ್ನ ಕೊಲ್ಲಿಸಿದ್ದಾಳೆ ಅನ್ನೋ ರಹಸ್ಯ ತನಿಖೆ ವೇಳೆ ತಿಳಿದುಬಂದಿದೆ. ಈಗಾಗಲೇ ಆರೋಪಿಗಳಿಬ್ಬರನ್ನ ಬಂಧಿಸಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಡೆಹ್ರಾಡೂನ್: ಕೇದಾರನಾಥ (Kedarnath) ದೇಗುಲಕ್ಕೆ ಪಾದಯಾತ್ರೆ ಮೂಲಕ ತೆರಳುವ ಮಾರ್ಗದಲ್ಲಿ ಬುಧವಾರ ಭೂಕುಸಿತ (Landslide) ಉಂಟಾದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿದ್ದಾರೆ.
ಜಂಗಲ್‌ಚಟ್ಟಿ (Junglechatti) ಘಾಟ್ ಬಳಿ ಬೆಳಿಗ್ಗೆ 11:20ರ ಸುಮಾರಿಗೆ ಗುಡ್ಡ ಕುಸಿತ ಸಂಭವಿಸಿದ್ದು, ಬಂಡೆಗಳು ಉರುಳಿ ಬಿದ್ದ ಪರಿಣಾಮ ಪಲ್ಲಕ್ಕಿಯಲ್ಲಿ ಯಾತ್ರಿಕರನ್ನು ಹೊತ್ತು ಸಾಗುತ್ತಿದ್ದ ಪೋರ್ಟರ್ ನಿರ್ವಾಹಕರು ಇದರಡಿ ಸಿಲುಕಿಕೊಂಡು ಮೃತಪಟ್ಟಿದ್ದಾರೆ ಎಂದು ರುದ್ರಪ್ರಯಾಗ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಪ್ರಹ್ಲಾದ್ ಕೊಂಡೆ ತಿಳಿಸಿದ್ದಾರೆ. ಇದನ್ನೂ ಓದಿ: ಮದುವೆಯಾಗಲು ಗೋವಾಕ್ಕೆ ತೆರಳಿದ್ದ ಜೋಡಿ – ಗಂಟಲು ಸೀಳಿ ಪ್ರೇಯಸಿಯ ಕೊಲೆ
ತಕ್ಷಣವೇ ಪೊಲೀಸರು ಹಾಗೂ ಎಸ್‌ಡಿಆರ್‌ಎಫ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದಾರೆ. ಪೊಲೀಸರು ಮತ್ತು ಎಸ್‌ಡಿಆರ್‌ಎಫ್ ಸಿಬ್ಬಂದಿ ಹಾಗೂ ಸ್ಥಳೀಯರು ಹಗ್ಗಗಳ ಸಹಾಯದಿಂದ ಕಮರಿಗೆ ಬಿದ್ದಿದ್ದ ಮೃತರನ್ನು ಮತ್ತು ಗಾಯಾಳುಗಳನ್ನು ಹೊರತೆಗೆಯಲು ಹರಸಾಹಸಪಟ್ಟರು. ಇದನ್ನೂ ಓದಿ: ಕೆಲಸದ ಅವಧಿ 9ರಿಂದ 10ಗಂಟೆಗೆ ಹೆಚ್ಚಳಕ್ಕೆ ಸರ್ಕಾರ ಚಿಂತನೆ – ಕಾರ್ಮಿಕ ಸಂಘಟನೆಗಳ ವಿರೋಧ
ಘಟನೆಯಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದರೇ, ಮಹಿಳೆ ಸೇರಿದಂತೆ ಮೂವರು ಗಾಯಗೊಂಡಿದ್ದಾರೆ. ಮಹಿಳೆಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಗಂಭೀರವಾಗಿ ಗಾಯಗೊಂಡ ಪುರುಷರನ್ನು ಗೌರಿಕುಂಡ್‌ನಲ್ಲಿರುವ ಆರೋಗ್ಯ ಕೇಂದ್ರಕ್ಕೆ ರವಾನಿಸಲಾಗಿದೆ ಎಂದು ಎಸ್‌ಪಿ ತಿಳಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಆಂಧ್ರ ಮಾಜಿ ಸಚಿವ ಚೆವಿ ರೆಡ್ಡಿ ಅರೆಸ್ಟ್
ಡೆಹ್ರಾಡೂನ್: ಕೇದಾರನಾಥಕ್ಕೆ (Kedarnath) ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಉತ್ತರಾಖಂಡದ (Uttarakhand) ಗೌರಿಕುಂಡ (Gaurikund) ಬಳಿ ಪತನಗೊಂಡಿದ್ದು, ಪೈಲೆಟ್, ಮಗು ಸೇರಿ ಹೆಲಿಕಾಪ್ಟರ್‌ನಲ್ಲಿದ್ದ 6 ಮಂದಿ ಸಾವನ್ನಪ್ಪಿದ್ದಾರೆ.
ಹೆಲಿಕಾಪ್ಟರ್ ಪತನಗೊಳ್ಳುವ ಮೊದಲು ತ್ರಿಜುಗಿನಾರಾಯಣ ಮತ್ತು ಗೌರಿಕುಂಡ ನಡುವೆ ಸಂಪರ್ಕ ಕಡಿತಗೊಂಡು ನಾಪತ್ತೆಯಾಗಿತ್ತು ಎಂದು ಹೆಚ್ಚುವರಿ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಡಾ. ವಿ. ಮುರುಗೇಶನ್ ತಿಳಿಸಿದ್ದಾರೆ. ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿದ್ದು, ಕಾರ್ಯಾಚರಣೆ ನಡೆಸುತ್ತಿದೆ.
ಹವಾಮಾನ ವೈಪರೀತ್ಯದದಿಂದ ಘಟನೆ ನಡೆದಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ. ರುದ್ರಪ್ರಯಾಗ್ ಜಿಲ್ಲೆಯಲ್ಲಿ ಬೆಳಗಿನ ಜಾವ 5:20ರ ಸುಮಾರಿಗೆ ಘಟನೆ ಸಂಭವಿಸಿದ್ದು, ಹೆಲಿಕಾಪ್ಟರ್ ಹೊತ್ತಿ ಉರಿದಿದೆ.
ಘಟನೆ ಸಂಬಂಧ ಕಮೀಷನರ್ ವಿನಯ್ ಶಂಕರ್ ಪಾಂಡೆ ಪ್ರತಿಕ್ರಿಯಿಸಿ, ಹೆಲಿಕ್ಯಾಪ್ಟರ್ ದುರಂತದಲ್ಲಿ ಯಾರೊಬ್ಬರೂ ಬದುಕುಳಿದಿಲ್ಲ. ಪೈಲಟ್ ಚೌಹನ್, ಒಂದು ಮಗು ಸೇರಿ ಆರು ಮಂದಿ ಮೃತಪಟ್ಟಿದ್ದಾರೆ. ಕೇದಾರನಾಥ್ ದೇವಸ್ಥಾನ ಸಮಿತಿಯ ಸದಸ್ಯರೊಬ್ಬರು ಕೂಡ ಇದೇ ಹೆಲಿಕಾಪ್ಟರ್‌ನಲ್ಲಿ ಇದ್ದರು. ಈ ಹೆಲಿಕಾಪ್ಟರ್ ಆರ್ಯನ್ ಕಂಪನಿಗೆ ಸೇರಿದೆ ಎಂದು ತಿಳಿಸಿದ್ದಾರೆ.
ಹೆಲಿಕಾಪ್ಟರ್ ದುರಂತದ ಬಗ್ಗೆ ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ ಎಕ್ಸ್‌ನಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ. ಈ ಘಟನೆ ನೋವು ತರಿಸಿದೆ. ಸ್ಥಳೀಯ ರಕ್ಷಣಾ ತಂಡಗಳು, ಸ್ಥಳಿಯ ಆಡಳಿತಗಳಿಂದ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ ಎಂದು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
ಡೆಹ್ರಾಡೂನ್: ಟೇಕ್ ಆಫ್ ವೇಳೆ ತಾಂತ್ರಿಕ ದೋಷ ಉಂಟಾದ ಪರಿಣಾಮ ಕೇದಾರನಾಥಕ್ಕೆ (Kedarnath) ತೆರಳುತ್ತಿದ್ದ ಹೆಲಿಕಾಪ್ಟರ್ (Helicopter) ಹೆದ್ದಾರಿಯಲ್ಲೇ ತುರ್ತು ಭೂಸ್ಪರ್ಶ ಮಾಡಿದ ಘಟನೆ ಉತ್ತರಾಖಂಡದ (Uttarakhand) ರುದ್ರಪ್ರಯಾಗದಲ್ಲಿ ನಡೆದಿದೆ.
#WATCH | Uttarakhand | A private helicopter en route to Kedarnath Dham made an emergency landing in Guptkashi of Rudraprayag district due to a technical fault. All the people on board the helicopter are safe: Uttarakhand ADG Law and Order Dr V Murugeshan
ಘಟನೆಯಲ್ಲಿ ಪೈಲೆಟ್‌ಗೆ ಸಣ್ಣಪುಟ್ಟ ಗಾಯಗಳಾಗಿದ್ದು, ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆಲಿಕಾಪ್ಟರ್‌ನಲ್ಲಿ ಪೈಲೆಟ್ ಹಾಗೂ ಐದು ಮಂದಿ ಪ್ರಯಾಣಿಕರಿದ್ದರು. ಘಟನೆಯಲ್ಲಿ ಪ್ರಯಾಣಿಕರಿಗೆ ಯಾವುದೇ ಹಾನಿಯಾಗಿಲ್ಲ. ಈ ಹೆಲಿಕಾಪ್ಟರ್ ಕ್ರೆಸ್ಟೆಲ್ ವಿಮಾನಯಾನ ಸಂಸ್ಥೆಗೆ ಸೇರಿದೆ. ಇದನ್ನೂ ಓದಿ: ಮಂಗಳೂರು| ಸೆಮಿನಾರ್ ತಪ್ಪಿಸಲು ವಿದ್ಯಾರ್ಥಿನಿಯಿಂದಲೇ ಮೆಡಿಕಲ್ ಕಾಲೇಜಿಗೆ ಬಾಂಬ್ ಬೆದರಿಕೆ
ಈ ಹೆಲಿಕಾಪ್ಟರ್ ರುದ್ರಪ್ರಯಾಗ (Rudraprayag) ಜಿಲ್ಲೆಯ ಬಡಾಸು ಪ್ರದೇಶದ ಹೆಲಿಪ್ಯಾಡ್‌ನಿಂದ ಮಧ್ಯಾಹ್ನ 12:52ಕ್ಕೆ ಹೊರಟಿತ್ತು. ಆದರೆ ಟೇಕ್ ಆಫ್ ನಂತರ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ಪೈಲಟ್ ಹೆದ್ದಾರಿಯಲ್ಲಿಯೇ ತುರ್ತು ಲ್ಯಾಂಡಿಂಗ್ ಮಾಡಿದ್ದಾರೆ. ತುರ್ತು ಭೂಸ್ಪರ್ಶದ ವೇಳೆ ಹೆಲಿಕಾಪ್ಟರ್‌ನ ಹಿಂಭಾಗ ಕಾರಿಗೆ ತಾಗಿದ್ದು, ಕಾರು ಜಖಂಗೊಂಡಿದೆ. ಇದನ್ನೂ ಓದಿ: ಚೆನಾಬ್ ರೈಲ್ವೆ ಸೇತುವೆ ನಿರ್ಮಾಣ ಕಾರ್ಯದಲ್ಲಿ 17 ವರ್ಷ ಕಳೆದ IISC ಪ್ರೊಫೆಸರ್ ಮಾಧವಿ ಲತಾ
ಭಾರತದಲ್ಲಿರುವ ಪ್ರತಿಯೊಂದು ಪ್ರವಾಸಿ ತಾಣವು ಒಂದಕ್ಕೊಂದು ಭಿನ್ನವಾಗಿದೆ. ದಕ್ಷಿಣ ಭಾರತವು ಸಮುದ್ರ, ದ್ವೀಪಗಳು, ಪರ್ವತ ಶಿಖರಗಳು, ಪಶ್ಚಿಮ ಹಾಗೂ ಪೂರ್ವ ಘಟ್ಟಗಳಿಂದ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ. ಇದೇ ರೀತಿ ಉತ್ತರ ಭಾರತವು ನೈಸರ್ಗಿಕ ತಾಣಗಳು, ಹಿಮಾಲಯ ಪರ್ವತ ಶ್ರೇಣಿಗಳು, ಪ್ರಮುಖ ದೇವಾಲಯಗಳು ಹಾಗೂ ವಿಭಿನ್ನ ಸರೋವರಗಳನ್ನು ತನ್ನಲ್ಲಿ ಸೃಷ್ಟಿಸಿಕೊಂಡಿದೆ. ಈ ಪೈಕಿ ಉತ್ತರ ಭಾರತದ ಪ್ರಸಿದ್ಧ ಪ್ರವಾಸಿ ತಾಣವಾದ ನೈನಿತಾಲ್ (Nainital) ಪ್ರವಾಸಿಗರನ್ನು ಪ್ರಕೃತಿ ಸೌಂದರ್ಯದ ಮೂಲಕ ತನ್ನೆಡೆಗೆ ಸೆಳೆಯುತ್ತಿದೆ.
ಇತ್ತೀಚಿನ ದಿನಗಳಲ್ಲಿ ಅಲ್ಲ…. ಮೊದಲಿನಿಂದಲೂ ನೈನಿತಾಲ್‌ಗೆ ಪ್ರವಾಸಕ್ಕೆಂದು ಹೊರಡುವ ಜನರ ಸಂಖ್ಯೆ ಹೆಚ್ಚು. ಹೀಗಿರುವಾಗ ಇತ್ತೀಚಿನ ದಿನಗಳಲ್ಲಿ ನೈನಿತಾಲ್ ಸೇರಿದಂತೆ ಉತ್ತರ ಭಾರತದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ಸಂಖ್ಯೆ ಕಡಿಮೆಯಾಗುತ್ತಿದೆ. ಇದರಿಂದಾಗಿ ಪ್ರವಾಸಿಗರನ್ನು ನಂಬಿಕೊಂಡ ಅಲ್ಲಿನ ಜನರ ಆರ್ಥಿಕ ಸ್ಥಿತಿ ಸಮಸ್ಯೆಗೀಡಾಗುತ್ತಿದೆ.
ನೈನಿತಾಲ್:
ಉತ್ತರಾಖಂಡದ (Uttarakhand) ಕುಮಾವುನ್ ಪ್ರದೇಶದಲ್ಲಿ ಕಂಡುಬರುವ ಒಂದು ಪ್ರವಾಸಿ ತಾಣವೆಂದರೆ ಅದು ನೈನಿತಾಲ್. ಇದನ್ನು ಸರೋವರಗಳ ನಗರ ಎಂದು ಕರೆಯಲಾಗುತ್ತದೆ. ಜೊತೆಗೆ ಸುಂದರವಾದ ಗಿರಿಧಾಮವನ್ನು ಇದು ಒಳಗೊಂಡಿದೆ. ಇಲ್ಲಿರುವ ಹಿಮಪರ್ವತಗಳು ಈ ಪ್ರದೇಶದ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿದೆ. ನೈನಾದೇವಿ ದೇವಾಲಯ ದೇವಿಯ ಶಕ್ತಿಪೀಠಗಳಲ್ಲಿ ಒಂದು. ಇನ್ನೂ ನವವಿವಾಹಿತರಿಗೆ ಇದು ಹನಿಮೂನ್‌ಗೆ ಒಂದು ಬೆಸ್ಟ್ ಆಯ್ಕೆ ಅಂತಾನೆ ಹೇಳಬಹುದು. ನೈನಿತಾಲ್ ಸರೋವರ ಸಿಹಿ ನೀರಿನ ಸರೋವರವಾಗಿದ್ದು, ಈ ಸರೋವರದಲ್ಲಿ ದೋಣಿ ವಿಹಾರ ಒಳ್ಳೆಯ ಅನುಭವವನ್ನು ನೀಡುತ್ತದೆ. ಈ ಸರೋವರ ಹಚ್ಚಹಸಿರಿನ ಪರ್ವತ ಶ್ರೇಣಿಗಳಿಂದ ಆವೃತ್ತವಾಗಿದ್ದು, ಅರ್ಧಚಂದ್ರನಂತೆ ಹರಿದು ಹೋಗುತ್ತದೆ. ನೈನಿತಾಲ್‌ನಲ್ಲಿ ಔಲಿ ಎಂಬ ತಾಣ, ನಂದಾದೇವಿ ರಾಷ್ಟ್ರೀಯ ಉದ್ಯಾನವನ, ಕೌಸನಿ, ಬಿನ್ಸರ್ ವನ್ಯಜೀವಿಧಾಮ, ಅಲ್ಮೋರಾ ಹೀಗೆ ಇನ್ನಿತರ ಪ್ರದೇಶಗಳಿಗೆ ಭೇಟಿ ನೀಡಬಹುದು.
ನೈನಿತಾಲ್‌ಗೆ ಹೋಗುವುದಾದರೆ ಉತ್ತರಾಖಂಡದ ಪಂತನಗರದ ವಿಮಾನ ನಿಲ್ದಾಣಕ್ಕೆ ತಲುಪಿ, ಅಲ್ಲಿಂದ ಟ್ಯಾಕ್ಸಿಗಳ ಮೂಲಕ ತಲುಪಬಹುದು. ಇನ್ನೂ ರೈಲಿನ ಮೂಲಕ ಹೋಗುವುದಾದರೆ ಕತ್ಗೊಡಮ್ ರೈಲ್ವೆ ನಿಲ್ದಾಣಕ್ಕಿಳಿದು ಅಲ್ಲಿಂದ ಬಸ್ ಅಥವಾ ಟ್ಯಾಕ್ಸಿ ಮೂಲಕ ತಲುಪಬಹುದು. ಇನ್ನೂ ದೆಹಲಿಯಿಂದ 6-7 ಗಂಟೆಗಳಲ್ಲಿ ಕಾರು ಅಥವಾ ಇನ್ನಿತರ ವಾಹನಗಳ ಮೂಲಕ ತಲುಪಬಹುದು. ಇಂತಹ ಅದ್ಭುತ ತಾಣಗಳನ್ನು ಒಳಗೊಂಡಿರುವ ನೈನಿತಾಲ್‌ಗೆ ಬೇಸಿಗೆ ತಿಂಗಳಲ್ಲಿ (ಮೇ-ಜೂನ್) ಹೆಚ್ಚಿನ ಪ್ರವಾಸಿಗರು ಭೇಟಿ ನೀಡುತ್ತಾರೆ. ಆದರೆ ಈ ಬಾರಿ ಪ್ರವಾಸಿಗರ ಸಂಖ್ಯೆಯಲ್ಲಿ ಭಾರಿ ಕುಸಿತ ಕಂಡಿದ್ದು, ಪ್ರಶ್ನೆಯನ್ನು ಹುಟ್ಟು ಹಾಕಿದೆ.
ಈ ಕುರಿತು ನೈನಿತಾಲ್ ಅಸೋಸಿಯೇಷನ್‌ನ ಅಧ್ಯಕ್ಷ ದಿಗ್ವಿಜಯ ಸಿಂಗ್ ಮಿಷ್ತ ಮಾತನಾಡಿ, ಈ ಬಾರಿ ಇಲ್ಲಿನ ಹೋಟೆಲ್ ಮತ್ತು ರೆಸಾರ್ಟ್ ಬುಕ್ಕಿಂಗ್‌ಗಳಲ್ಲಿ ಭಾರಿ ಕುಸಿತ ಕಂಡಿದ್ದು, ಕಳೆದ ವರ್ಷಕ್ಕಿಂತ ಈ ವರ್ಷ ಶೇಕಡ 90ರಷ್ಟು ಕುಸಿತ ಕಂಡಿದೆ ಎಂದು ಮಾಹಿತಿ ನೀಡಿದ್ದಾರೆ. ಇನ್ನು ಅಡ್ವಾನ್ಸ್ ಬುಕಿಂಗ್ ಮಾಡಿದ್ದ ಪ್ರವಾಸಿಗರು ತಮ್ಮ ಬುಕಿಂಗ್‌ಗಳನ್ನು ರದ್ದುಗೊಳಿಸಿದ್ದಾರೆ. ಈ ಬಾರಿ ಕುಸಿತ ಕಂಡ ಹಾಗೆ ಈತನಕ ನೈನಿತಾಲ್‌ನಲ್ಲಿ ಯಾವತ್ತೂ ಆಗಿರಲಿಲ್ಲ ಎಂದು ತಿಳಿಸಿದ್ದಾರೆ.
ಹೌದು, ಇದಕ್ಕೆಲ್ಲ ಒಂದು ಭೀಕರ ಕಾರಣವಿದೆ. ಈ ಬಾರಿ ಏ.22 ರಂದು ಜಮ್ಮು-ಕಾಶ್ಮೀರದ ಪಹಲ್ಗಾಮ್‌ನ ಬೈಸರನ್ ಕಣಿವೆಯಲ್ಲಿ ಪಾಕಿಸ್ತಾನದ ಭಯೋತ್ಪಾದಕರು ನಡೆಸಿದ ಹಿಂದೂಗಳ ನರಮೇಧದಲ್ಲಿ 26 ನಾಗರಿಕರು ಸಾವನ್ನಪ್ಪಿದರು. ಇದು ದೇಶಾದ್ಯಂತ ಭಯದ ವಾತಾವರಣ ಸೃಷ್ಟಿಸಿತ್ತು. ಜೊತೆಗೆ ಈ ಸಮಯದಲ್ಲಿ ಭಾರತ ಮತ್ತು ಪಾಕಿಸ್ತಾನದ ಗಡಿಯಲ್ಲಿ ಉದ್ವಿಗ್ನತೆ ಹೆಚ್ಚಾಗಿತ್ತು. ಹೀಗಾಗಿ ಪ್ರಾಣ ಭಯದಿಂದಾಗಿ ಈ ಕುಸಿತ ಉಂಟಾಗಿದೆ. ಇದೇ ಮೇ 1ರಂದು ನೈನಿತಾಲ್‌ನಲ್ಲಿ 12 ವರ್ಷದ ಬಾಲಕಿ ಮೇಲೆ 60 ವರ್ಷದ ವೃದ್ಧರೊಬ್ಬರು ಹಲ್ಲೆ ನಡೆಸಿದ್ದರು. ಈ ಕಾರಣದಿಂದಾಗಿ ಅಲ್ಲಿ ಕೋಮುಗಲಭೆ ಉಂಟಾಗಿ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಜೊತೆಗೆ ಪ್ರತಿಭಟನೆಗಳು ಹಾಗೂ ಕೃತ್ಯಗಳಿಗೆ ಕಾರಣವಾಯಿತು. ಈ ಪ್ರತಿಭಟನೆಯ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿ, ಭಯ ಸೃಷ್ಟಿಸಿತ್ತು. ಹೀಗಾಗಿ ಈ ಕುಸಿತ ಕಂಡು ಬಂದಿದೆ.
ಆದರೆ ಸದ್ಯದ ಪರಿಸ್ಥಿತಿಯಲ್ಲಿ ನೈನಿತಾಲ್ ಸಂಪೂರ್ಣವಾಗಿ ಸುರಕ್ಷಿತವಾಗಿದ್ದರೂ, ಕೆಲವು ಕಾರಣಗಳಿಂದ ಪ್ರವಾಸಿಗರು ಹಿಂದೇಟು ಹಾಕುತ್ತಿದ್ದಾರೆ. ಜೊತೆಗೆ ನೈನಿತಾಲ್‌ಗೆ ತೆರಳಲು ಸುಮಾರು 10 ಕಿ.ಮೀ ದೂರದಲ್ಲಿ ವಾಹನ ನಿಲುಗಡೆ ಮಾಡಲು ಅವಕಾಶವಿದೆ. ಹೀಗಾಗಿ ಅನೇಕರಿಗೆ ಇದು ಅನಾನುಕೂಲತೆ ಉಂಟು ಮಾಡಿದೆ. ಸರ್ಕಾರಿ ಪಾರ್ಕಿಂಗ್ ಸ್ಥಳಗಳಲ್ಲಿ ಪಾರ್ಕಿಂಗ್ ಶುಲ್ಕ ದಿನಕ್ಕೆ 130 ರೂ.ಯಿಂದ 500 ರೂ.ಗೆ ಏರಿಕೆಯಾಗಿದೆ. ಜೊತೆಗೆ ಟೋಲ್‌ಗಳನ್ನು ಹೆಚ್ಚಿಸಲಾಗಿದೆ. ಹೀಗಾಗಿ ನೈನಿತಾಲ್ ಪ್ರಯಾಣ ಹಲವು ಸಮಸ್ಯೆಗಳಿಂದ ಕೂಡಿದೆ. ಇದೆಲ್ಲಾ ಕಾರಣಗಳಿಂದಾಗಿ ಪ್ರವಾಸಿಗರು ಕಾಶ್ಮೀರದ ಹಲವು ಪ್ರವಾಸಿ ತಾಣಗಳು ಸೇರಿದಂತೆ ಸುತ್ತಮುತ್ತಲಿನ ರಾಜ್ಯಗಳಿಗೆ ಪ್ರವಾಸಕ್ಕೆ ಭೇಟಿ ನೀಡಲು ಹಿಂಜರಿಯುತ್ತಿದ್ದಾರೆ.
ಡೆಹ್ರಾಡೂನ್: ಗಂಗಾ ನದಿಯ ಮೂಲ ತೊರೆಗಳಲ್ಲಿ ಒಂದಾದ ಗಂಗೋತ್ರಿ ಕಡೆಗೆ ಹೊರಟಿದ್ದ ಖಾಸಗಿ ಹೆಲಿಕಾಪ್ಟರ್ ಪತನಗೊಂಡು (Private Chopper Crash) ಐವರು ಸಾವನ್ನಪ್ಪಿರುವ ಘಟನೆ ಉತ್ತರಾಖಂಡದ (Uttarakhand) ಉತ್ತರಕಾಶಿ ಜಿಲ್ಲೆಯಲ್ಲಿ ನಡೆದಿದೆ.
ಬೆಳಗ್ಗೆ 9 ಗಂಟೆ ಸುಮಾರಿಗೆ ಘಟನೆ ನಡೆದಿದೆ. ಐವರು ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಈ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಬಳಿಕ ಪೊಲೀಸರು, ಸೇನಾ ಸಿಬ್ಬಂದಿ, ವಿಪತ್ತು ನಿರ್ವಹಣಾ QRT ತಂಡ, 108 ಆಂಬ್ಯುಲೆನ್ಸ್, ಭಟ್ವಾರಿಯ ಬಿಡಿಒ, ಕಂದಾಯ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಧಾವಿಸಿದ್ದಾರೆ. ಇದನ್ನೂ ಓದಿ: ಉಗ್ರರು ಅಮಾಯಕರ ಮೇಲೆ ದಾಳಿ ಮಾಡಿ ತಪ್ಪಿಸಿಕೊಳ್ಳಲು ಆಗಲ್ಲ – ಆಪರೇಷನ್ ಸಿಂಧೂರ ಬೆಂಬಲಿಸಿದ ಇಸ್ರೇಲ್
ಪ್ರಾಥಮಿಕ ವರದಿಗಳ ಪ್ರಕಾರ, ಖಾಸಗಿ ಹೆಲಿಕಾಪ್ಟರ್‌ನಲ್ಲಿ 7 ಮಂದಿ ಪ್ರಯಾಣಿಸುತ್ತಿದ್ದರು. ಈ ಪೈಕಿ ಇಬ್ಬರು ಗಾಯಗೊಂಡಿದ್ದು, ಉಳಿದವರು ಸಾವನ್ನಪ್ಪಿದ್ದಾರೆ. ಗಾಯಗೊಂಡವರನ್ನ ಸ್ಥಳೀಯ ಆಸ್ಪತ್ರೆಗೆ (Hospital) ಚಿಕಿತ್ಸೆಗಾಗಿ ದಾಖಲಿಸಲಾಗಿದೆ ಎಂದು ಗರ್ವಾಲ್ ವಿಭಾಗೀಯ ಆಯುಕ್ತ ವಿನಯ್ ಶಂಕರ್ ಪಾಂಡೆ ತಿಳಿಸಿದ್ದಾರೆ. ಇದನ್ನೂ ಓದಿ: ಏರ್ ಇಂಡಿಯಾದಿಂದ ಸಶಸ್ತ್ರ ಪಡೆ ಸಿಬ್ಬಂದಿಗೆ ಟಿಕೆಟ್ ಉಚಿತ ಮರುಹೊಂದಿಕೆ ಆಫರ್