Tag: ಉತ್ತರಪ್ರದೇಶ ಮಿರ್ಜಾಪುರ

  • ವಿಡಿಯೋ: ಸರ್ಕಾರಿ ಶಾಲೆಯನ್ನೇ ಡ್ಯಾನ್ಸ್ ಬಾರ್ ಮಾಡಿಕೊಂಡ ಸ್ಥಳೀಯರು- ಮಕ್ಕಳು, ಶಿಕ್ಷಕರು ಕ್ಲೀನ್ ಮಾಡಿದ್ರು

    ವಿಡಿಯೋ: ಸರ್ಕಾರಿ ಶಾಲೆಯನ್ನೇ ಡ್ಯಾನ್ಸ್ ಬಾರ್ ಮಾಡಿಕೊಂಡ ಸ್ಥಳೀಯರು- ಮಕ್ಕಳು, ಶಿಕ್ಷಕರು ಕ್ಲೀನ್ ಮಾಡಿದ್ರು

    ಮಿರ್ಜಾಪುರ್: ಸರ್ಕಾರಿ ಶಾಲೆಯನ್ನೇ ಡ್ಯಾನ್ಸ್ ಬಾರ್‍ನಂತೆ ಮಾಡಿಕೊಂಡು ಸ್ಥಳೀಯರು ಎಣ್ಣೆ ಪಾರ್ಟಿ ಮಾಡಿದ್ದು, ಇಬ್ಬರು ಹುಡುಗಿಯರು ಕುಣಿಯುತ್ತಿದ್ದರೆ ಅವರ ಮೇಲೆ ನೋಟಿನ ಸುರಿಮಳೆಗೈದಿರೋ ಘಟನೆ ಉತ್ತರಪ್ರದೇಶದ ಮಿರ್ಜಾಪುರದಲ್ಲಿ ನಡೆದಿದೆ. ಈದರ ವಿಡಿಯೋ ವೈರಲ್ ಆದ ಬಳಿಕ ಈ ಬಗ್ಗೆ ತನಿಖೆಗೆ ರಾಜ್ಯ ಸರ್ಕಾರ ಆದೇಶಿಸಿದೆ.

    ಸೋಮವಾರದಂದು ರಕ್ಷಾ ಬಂಧನದ ಅಂಗವಾಗಿ ಶಾಲೆಗೆ ರಜೆ ನೀಡಲಾಗಿತ್ತು. ಈ ವೇಳೆ ಶಾಲೆಯಲ್ಲಿ ಪಾರ್ಟಿ ಮಾಡಲಾಗಿದೆ. ಗ್ರಾಮದ ಮುಖ್ಯಸ್ಥ ತನ್ನ ಮಗನ ಹುಟ್ಟುಹಬ್ಬಕ್ಕೆ ಪಾರ್ಟಿ ಏರ್ಪಡಿಸಿದ್ದರು ಎಂದು ಪತ್ರಿಕೆಯೊಂದು ವರದಿ ಮಾಡಿದೆ. ಪಾರ್ಟಿಗಾಗಿ ರಾತ್ರೋರಾತ್ರಿ ತರಗತಿಯಲ್ಲಿದ್ದ ಡೆಸ್ಕ್ ಹಾಗೂ ಚೇರ್‍ಗಳನ್ನ ತಮಗೆ ಬೇಕಾದಂತೆ ಜೋಡಿಸಿದ್ದಾರೆ.

    ಮಂಗಳವಾರ ಬೆಳಗ್ಗೆ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಶಾಲೆಗೆ ಬಂದು ನೋಡಿದಾಗ ನೆಲದ ಮೇಲೆ ಮದ್ಯ ಚೆಲ್ಲಾಡಿರುವುದು ಹಾಗೂ ಖಾಲಿ ಎಣ್ಣೆ ಬಾಟಲಿಗಳು ಬಿದ್ದಿದ್ದನ್ನು ಕಂಡು ಶಾಕ್ ಆಗಿದ್ದರು. ವಿದ್ಯಾರ್ಥಿಗಳು ಹಾಗೂ ಶಿಕ್ಷಕರೇ ಕೋಣೆಯನ್ನ ಕ್ಲೀನ್ ಮಾಡಬೇಕಾಯ್ತು.

    ಶನಿವಾರದಂದು ತರಗತಿಗಳು ಮುಗಿದ ನಂತರ ಗ್ರಾಮದ ಮುಖ್ಯಸ್ಥ ಬಂದು ಶಾಲೆಯ ಕೀಗಳನ್ನ ತೆಗೆದುಕೊಂಡು ಹೋದರು. ಆದ್ರೆ ಯಾಕೆ ಎಂದು ಹೇಳಲಿಲ್ಲ ಅಂತ ಶಾಲಾ ಮುಖ್ಯೋಪಾಧ್ಯಾಯರು ಹೇಳಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

    ಈ ಬಗ್ಗೆ ವಿಸ್ತೃತ ವರದಿ ಸಿದ್ಧಪಡಿಸುತ್ತಿದ್ದೇವೆ ಹಾಗೂ ಕ್ರಮ ಕೈಗೊಳ್ಳುತ್ತೇವೆ ಅಂತ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಇದರಲ್ಲಿ ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕರ ಪಾತ್ರವಿಲ್ಲ ಎಂದು ಅವರು ತಿಳಿಸಿದ್ದಾರೆ .

    https://www.youtube.com/watch?v=3SvMyY1uNiI