Tag: ಉತ್ತರಪ್ರದೇಶ್

  • ಒಂದೇ ಆಟೋದಲ್ಲಿ 27 ಮಂದಿ ಪ್ರಯಾಣ- ದಿಗ್ಭ್ರಮೆಗೊಂಡ ಪೊಲೀಸರು

    ಒಂದೇ ಆಟೋದಲ್ಲಿ 27 ಮಂದಿ ಪ್ರಯಾಣ- ದಿಗ್ಭ್ರಮೆಗೊಂಡ ಪೊಲೀಸರು

    ಲಕ್ನೋ: ವೃದ್ಧರು, ಮಕ್ಕಳು ಸೇರಿದಂತೆ 27 ಪ್ರಯಾಣಿಕರನ್ನು ಒಂದೇ ಆಟೋದಲ್ಲಿ ಕೂರಿಸಿಕೊಂಡು ಬಂದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಮಧ್ಯ ಉತ್ತರ ಪ್ರದೇಶದ ಫತೇಪುರದಲ್ಲಿ ಈ ಘಟನೆ ನಡೆದಿದೆ. ಕರ್ತವ್ಯದಲ್ಲಿದ್ದ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾಗ ಫತೇಪುರದ ಬಿಂಡ್ಕಿ ಕೊಟ್ವಾಲಿಪ್ರದೇಶದ ಬಳಿ ಆಟೋರಿಕ್ಷಾವನ್ನು ನಿಲ್ಲಿಸಲಾಗಿತ್ತು.

    ಈ ವೇಳೆ ಪೊಲೀಸರು ಆಟೋದಲ್ಲಿದ್ದ ಪ್ರಯಾಣಿಕರನ್ನೆಲ್ಲರನ್ನೂ ಇಳಿಯಲು ಹೇಳಿದ್ದಾರೆ. ಚಾಲಕನನ್ನು ಹೊರತುಪಡಿಸಿ ಮಕ್ಕಳು, ವೃದ್ಧರು ಸೇರಿ 27 ಜನ ಇಳಿದಿದ್ದಾರೆ. ಈ ಹಿನ್ನೆಲೆಯಲ್ಲಿ ಆಟೋವನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: ಹಣ ನೀಡಿಲ್ಲ ಅಂತ ಅಜ್ಜಿಯ ಕತ್ತು ಸೀಳಿ ಬರ್ಬರ ಹತ್ಯೆಗೈದ ಮೊಮ್ಮಗ

    ಸಾಮಾನ್ಯವಾಗಿ ಒಂದು ಆಟೋದಲ್ಲಿ 6 ಜನರು ಪ್ರಯಾಣಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಆದರೆ ಈ ಆಟೋರಿಕ್ಷಾದಲ್ಲಿ ಚಾಲಕನನ್ನು ಹೊರತುಪಡಿಸಿ 27 ಜನರು ಇರುವುದನ್ನು ನೋಡಿ ಪೊಲೀಸರೇ ದಿಗ್ಭ್ರಮೆಗೊಂಡಿದ್ದಾರೆ. ಈ ವೀಡಿಯೋವನ್ನು ದಾರಿಹೋಕರೊಬ್ಬರು ವೀಡಿಯೋವನ್ನು ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ. ಇದನ್ನೂ ಓದಿ:  2023ರ ವೇಳೆ ಜನಸಂಖ್ಯೆಯಲ್ಲಿ ಭಾರತ ಚೀನಾವನ್ನು ಮೀರಿಸಲಿದೆ: ವಿಶ್ವಸಂಸ್ಥೆ

    Live Tv
    [brid partner=56869869 player=32851 video=960834 autoplay=true]

  • ಗೋ ವ್ಯಾಪಾರ ಮತ್ತು ಹೈನುಗಾರಿಕೆಯಿಂದ ದೂರ ಉಳಿಯಿರಿ: ಮುಸ್ಲಿಮರಲ್ಲಿ ಅಜಂ ಖಾನ್ ಮನವಿ

    ಗೋ ವ್ಯಾಪಾರ ಮತ್ತು ಹೈನುಗಾರಿಕೆಯಿಂದ ದೂರ ಉಳಿಯಿರಿ: ಮುಸ್ಲಿಮರಲ್ಲಿ ಅಜಂ ಖಾನ್ ಮನವಿ

    ಲಕ್ನೋ: ಗೋ ವ್ಯಾಪಾರ ಮತ್ತು ಹೈನುಗಾರಿಕೆಯಿಂದ ದೂರ ಉಳಿಯಿರಿ ಎಂದು ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್ ಮುಸ್ಲಿಮರಲ್ಲಿ ಮನವಿ ಮಾಡಿಕೊಂಡಿದ್ದಾರೆ

    ರಾಜಸ್ತಾನದ ಅಲ್ವಾರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ಹೈನುಗಾರಿಕೆ ಮತ್ತು ಹಾಲಿನ ವ್ಯಾಪಾರದಲ್ಲಿ ತೊಡಗಿರುವ ಮುಸ್ಲಿಮರು ತಮ್ಮ ಮುಂದಿನ ಪೀಳಿಗೆಗಾಗಿ ಇದರಿಂದ ದೂರ ಉಳಿಯಬೇಕೆಂದು ಬೇಡಿಕೊಳ್ಳುತ್ತೇನೆ. ಗೋವುಗಳನ್ನು ಸುಮ್ಮನೆ ಮುಟ್ಟಿದರೂ ಗಂಭೀರವಾದ ಪರಿಣಾಮ ಎದುರಿಸಬೇಕಾಗುತ್ತದೆ. ಹಾಗಾಗಿ ಮುಸ್ಲಿಮರು ಈ ವ್ಯಾಪಾರದಿಂದ ದೂರ ಉಳಿಯಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

    ಜುಲೈ 20-21 ರ ಮಧ್ಯರಾತ್ರಿ ರಾಜಸ್ತಾನದ ಅಲ್ವಾರ್ ಎಂಬಲ್ಲಿ ಗೋವುಗಳನ್ನು ಸಾಗಿಸುತ್ತಿದ್ದ ರುಕ್ಬರ್ ಖಾನ್‍ನನ್ನು ಅಡ್ಡಗಟ್ಟಿದ ಸ್ಥಳೀಯರು ಮಾರಣಾಂತಿಕ ಹಲ್ಲೆ ನಡೆಸಿದ್ದರು. ಆದರೆ ಪೊಲೀಸರು ಹಲ್ಲೆಗೊಳಗಾದ ಆತನನ್ನು ತಡವಾಗಿ ಆಸ್ಪತ್ರೆಗೆ ದಾಖಲಿಸಿದ್ದರು ಅಷ್ಟರಲ್ಲಿ ಆತ ಮೃತಪಟ್ಟಿದ್ದ. ಈ ಘಟನೆ ದೇಶದ್ಯಾಂತ ಸಂಚಲನ ಉಂಟುಮಾಡಿದೆ. ಮರಣೋತ್ತರ ಪರೀಕ್ಷೆಯಲ್ಲಿ ಆತನ ದೇಹದಲ್ಲಿ 13 ಗಂಭೀರವಾದ ಗಾಯಗಳಾಗಿದ್ದು, ದೈಹಿಕ ಗಾಯದ ಪರಿಣಾಮದಿಂದ ಸಾವನ್ನಪ್ಪಿದ್ದಾನೆ ಎಂದು ವರದಿ ಬಂದಿತ್ತು.

    ಕಳೆದ ವರ್ಷ ಇದೇ ರೀತಿಯ ಘಟನೆಯೊಂದು ಸಂಭವಿಸಿದ್ದು, ಪೆಹ್ಲು ಖಾನ್ ಎಂಬಾತನನ್ನು ಹಸುವಿನ ಕಳ್ಳಸಾಗಾಣಿಕೆಯಲ್ಲಿ ಭಾಗಿಯಾಗಿದ್ದನು ಎಂದು ಸ್ಥಳೀಯರು ಹಲ್ಲೆ ಮಾಡಿದ್ದರು.

  • ಕೇಸ್ ಫೈಟ್ ಮಾಡಲು ಹಣ ಇಲ್ಲ, ಕಿಡ್ನಿ ಮಾರಲು ಅನುಮತಿ ನೀಡಿ – ಮೋದಿಗೆ ಕೈದಿ ಪತ್ರ

    ಕೇಸ್ ಫೈಟ್ ಮಾಡಲು ಹಣ ಇಲ್ಲ, ಕಿಡ್ನಿ ಮಾರಲು ಅನುಮತಿ ನೀಡಿ – ಮೋದಿಗೆ ಕೈದಿ ಪತ್ರ

    ಲಖ್ನೌ: ಕೈದಿಯೋರ್ವ ತನ್ನ ಮೇಲಿರುವ ಪ್ರಕರಣದಲ್ಲಿ ನ್ಯಾಯಾಲಯದಲ್ಲಿ ಕಾನೂನು ಹೋರಾಟ ನಡೆಸಲು ಹಣದ ಅವಶ್ಯಕತೆ ಇದ್ದು, ತನ್ನ ಕಿಡ್ನಿ ಮಾರಲು ಅನುಮತಿ ನೀಡಬೇಕೆಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾನೆ.

    ಲಸ್ಕರ್ ಜೈಲಿನಲ್ಲಿ ವಿಚಾರಣಾಧೀನ ಕೈದಿಯಾಗಿರುವ ರಾಜು (30) ಅಲಿಯಾಸ್ ಮದನ್ ಈ ಪತ್ರವನ್ನು ಬರೆದಿದ್ದಾನೆ. ಮಹಿಳೆ ಮೇಲಿನ ಅತ್ಯಾಚಾರ ಹಾಗೂ ಕೊಲೆ ಯತ್ನ ಕೇಸಿಗೆ ಸಂಬಂಧಪಟ್ಟಂತೆ 2014 ರಲ್ಲಿ ಜೈಲು ಸೇರಿದ್ದ ಈತ ಈಗಲೂ ನ್ಯಾಯಾಂಗ ಬಂಧನದಲ್ಲೇ ಇದ್ದಾನೆ.

    ಈ ಕೊಲೆಗೂ ತನಗೂ ಯಾವುದೇ ಸಂಬಂಧವಿಲ್ಲ, ಆದರೂ ನನ್ನನ್ನು ಕೇಸ್ ನಲ್ಲಿ ಜೈಲಿಗೆ ಹಾಕಿದ್ದಾರೆ ಎಂದು ಆರೋಪಿಸಿ ಪ್ರಧಾನಿ ಮೋದಿ ಅವರಿಗೆ ಪತ್ರದಲ್ಲಿ ದೂರು ನೀಡಿದ್ದಾನೆ.

    ಸದ್ಯ ನಾನು ಬಡವ ಹಾಗೂ ಅಸಹಾಯಕನಾಗಿದ್ದೇನೆ. ಈ ಪ್ರಕರಣದಲ್ಲಿ ಕಾನೂನು ಹೋರಾಟ ನಡೆಸಲು ನನ್ನ ಹತ್ತಿರ ಹಣ ಇಲ್ಲ. ಅದ್ದರಿಂದ ನನ್ನ ಕಿಡ್ನಿ ಮಾರಿ ಬಂದ ಹಣದಲ್ಲಿ ನ್ಯಾಯಕ್ಕಾಗಿ ಕಾನೂನು ರೀತಿಯಲ್ಲಿ ಹೋರಾಡಬೇಕು. ಅಲ್ಲದೇ ಯಾರಿಂದಲೂ ನನಗೆ ನೈತಿಕ ಸಹಾಯ ಇಲ್ಲ. ಹಾಗಾಗಿ ಆತ್ಮಹತ್ಯೆ ಮಾಡಿಕೊಳ್ಳುವುಕ್ಕಿಂತ ನನ್ನ ಕಿಡ್ನಿ ಮಾರಿ ಬಂದ ಹಣದಲ್ಲಿ ಕಾನೂನು ಹೋರಾಟ ನಡೆಸುವುದೇ ಉಳಿದಿರುವ ದಾರಿ ಎಂಬುದಾಗಿ ಪತ್ರ ಬರೆದಿದ್ದಾನೆ.

    ರಾಜು ತನ್ನ ಕಿಡ್ನಿ ಮಾರಲು ಸಹಾಯ ಮಾಡುವಂತೆ ಜೈಲು ಅಧಿಕಾರಿಗಳನ್ನು ಕೇಳಿಕೊಂಡಿದ್ದಾನೆ. ಆದರೆ ಪತ್ರದ ಕುರಿತು ಪ್ರತಿಕ್ರಿಯೆ ನೀಡಿರುವ ಜೈಲಿನ ಮುಖ್ಯ ಅಧಿಕಾರಿ, ನನಗೆ ರಾಜು ಪ್ರಧಾನಿಯವರಿಗೆ ಪತ್ರ ಬರೆದಿರುವ ವಿಷಯ ತಿಳಿದಿಲ್ಲ, ಅದಾಗಿಯೂ ಈ ಕುರಿತಂತೆ ಪರಿಶೀಲಿಸುವುದಾಗಿ ಹೇಳಿದ್ದಾರೆ. ಅಂದಹಾಗೆ ಕೈದಿ ರಾಜು ಬ್ರೈನ್ ಟ್ಯೂಮರ್ ನಿಂದ ಬಳಲುತ್ತಿದ್ದಾನೆ.

    ಈ ಕುರಿತಂತೆ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಲಯದ ವಕೀಲರಾದ ಸುರಜ್ಪೂರ್ ಮಾತನಾಡಿ, ರಾಜು ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಆತನ ಪರವಾಗಿ ಉಚಿತವಾಗಿ ವಾದ ಮಂಡಿಸುವುದಾಗಿ ತಿಳಿಸಿದ್ದಾಗಿ ವರದಿಯಾಗಿದೆ.