Tag: ಉಣಕಲ್ ಕೆರೆ

  • ಕೆರೆಯಲ್ಲಿ ಈಜಲು ತೆರಳಿದ್ದ ಬಾಲಕ ಸಾವು – 3 ದಿನವಾದರೂ ಸಿಕ್ಕಿಲ್ಲ ಶವ

    ಕೆರೆಯಲ್ಲಿ ಈಜಲು ತೆರಳಿದ್ದ ಬಾಲಕ ಸಾವು – 3 ದಿನವಾದರೂ ಸಿಕ್ಕಿಲ್ಲ ಶವ

    ಹುಬ್ಬಳ್ಳಿ: ಕೆರೆಯಲ್ಲಿ (Lake) ಈಜಲು ತೆರಳಿದ್ದ ಬಾಲಕ (Boy) ಸಾವನ್ನಪ್ಪಿರುವ ಘಟನೆ ಹುಬ್ಬಳ್ಳಿಯ (Hubballi) ಉಣಕಲ್ ಕೆರೆಯಲ್ಲಿ (Unakal Lake) ನಡೆದಿದೆ. ಕಳೆದ 3 ದಿನಗಳ ಹಿಂದೆ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

    ಹುಬ್ಬಳ್ಳಿ ಇಂದಿರಾ ನಗರದ ನಿವಾಸಿ ವೆಂಕಟೇಶ್ ವಾಲ್ಮೀಕಿ ಮೃತಪಟ್ಟ ಬಾಲಕ. ಕಳೆದ 3 ದಿನಗಳ ಹಿಂದೆ ತನ್ನ ಸ್ನೇಹಿತರ ಜೊತೆ ಕೆರೆಯಲ್ಲಿ ಈಜಾಡಲು (Swimming) ತೆರಳಿದ್ದ ವೆಂಕಟೇಶ್ ಆಳ ಇರುವಕಡೆ ನೀರಿಗೆ ಇಳಿದಿದ್ದ ಎನ್ನಲಾಗಿದೆ. ಆತ ನೀರಿನ ಸುಳಿಯಲ್ಲಿ ಸಿಲುಕಿ ಸಾವಿನಪ್ಪಿರುವ ಶಂಕೆ ವ್ಯಕ್ತವಾಗಿದೆ. ಆದರೆ 3 ದಿನವಾದರೂ ಬಾಲಕನ ಶವ ಇನ್ನೂ ಪತ್ತೆಯಾಗಿಲ್ಲ.

    ಬಾಲಕನ ಶವ ಹುಡುಕಾಟಕ್ಕೆ ಎನ್‌ಡಿಆರ್‌ಎಫ್ ತಂಡದ ಆಗಮಿಸಿದ್ದು, ಸಿಬ್ಬಂದಿ ಜೊತೆಗೆ ಸ್ಥಳೀಯ ನುರಿತ ಈಜುಗಾರರು ಹುಡುಕಾಟ ನಡೆಸಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಬಿಬಿಸಿ ಸಾಕ್ಷ್ಯಚಿತ್ರ ಪ್ರಸಾರ

    ಸುರಕ್ಷಿತ ಕ್ರಮಗಳು ಇಲ್ಲದ ಕಾರಣ ಉಣಕಲ್ ಕೆರೆಯಲ್ಲಿ ಪದೇ ಪದೇ ದುರ್ಘಟನೆಗಳು ನಡೆಯುತ್ತಿದೆ. ಮಹಾನಗರ ಪಾಲಿಕೆ ಅಧಿಕಾರಿಗಳು ಕೆರೆಯ ಸುತ್ತಲೂ ಯಾವುದೇ ಸುರಕ್ಷಿತ ಕ್ರಮಗಳನ್ನು ಕೈಗೊಳ್ಳಲು ನಿರ್ಲಕ್ಷ್ಯವಹಿಸುತ್ತಿರುವುದಕ್ಕೆ ಹು-ಧಾ ಪಾಲಿಕೆ ವಿರುದ್ಧ ಬಾಲಕನ ಪೋಷಕರು ಮತ್ತು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಜೈಂಟ್ ವ್ಹೀಲ್ ಆಡುವಾಗ ಬಾಲಕಿಯ ಕೂದಲು ಸಿಲುಕಿ ಕಿತ್ತು ಬಂತು ಚರ್ಮ – ಮೂವರ ವಿರುದ್ಧ ಕೇಸ್

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಹಣದಾಸೆಗೆ ಅಂಧ ಸ್ನೇಹಿತನನ್ನ ಕೊಂದ ವ್ಯಕ್ತಿಗೆ ಜೀವಾವಧಿ ಶಿಕ್ಷೆ!

    ಹಣದಾಸೆಗೆ ಅಂಧ ಸ್ನೇಹಿತನನ್ನ ಕೊಂದ ವ್ಯಕ್ತಿಗೆ ಜೀವಾವಧಿ ಶಿಕ್ಷೆ!

    ಹುಬ್ಬಳ್ಳಿ: ಹಣದಾಸೆಗಾಗಿ ಕುರುಡ ಸ್ನೇಹಿತನನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ 1ನೇ ಅಧಿಕ ಮತ್ತು ಜಿಲ್ಲಾ ಸತ್ರ ನ್ಯಾಯಾಲಯ ಅಪರಾಧಿ ಬಸವರಾಜ್ ಜಿಗಳೂರಗೆ 21 ಲಕ್ಷ ರೂ. ದಂಡ ಹಾಗೂ ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ.

    ಹುಬ್ಬಳ್ಳಿಯ ಉಣಕಲ್ ಕೆರೆ ಬಳಿ 2015 ಮೇ 23 ರಂದು ರಾತ್ರಿ ಅಂಧ ಜಗದೀಶ್ ಪರಮೇಶ್ವರ್ ಶಿರಗುಪ್ಪಿ ಅವರನ್ನು ಕೊಲೆಗೈದ ಬಸವರಾಜ್, 51.40 ಲಕ್ಷ ದೋಚಿಕೊಂಡು ಪರಾರಿಯಾಗಿದ್ದ. ಈ ಸಂಬಂಧ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈಗ ಬಸವರಾಜ್ ಗೆ ಜೀವಾವಧಿ ಶಿಕ್ಷೆಯನ್ನು ನ್ಯಾಯಾಲಯ ವಿಧಿಸಿದೆ. ಇದನ್ನೂ ಓದಿ: ‘ಜೈ ಶ್ರೀ ರಾಮ್’ ಹೇಳುವಂತೆ ಒತ್ತಾಯಿಸಿ ಕಾಶ್ಮೀರದ ವ್ಯಾಪಾರಿಗಳ ಮೇಲೆ ಹಲ್ಲೆ

    ಹೇಗೆ ನಡೆಯಿತು?
    ಜಗದೀಶ್ ಅವರ ಸಂಬಳದ ಅರಿಯರ್ಸ್ 21.50 ಲಕ್ಷ ಗದಗ ಬ್ಯಾಂಕ್ ಖಾತೆಗೆ ಜಮೆ ಆಗಿತ್ತು. ಅಂಧನಾಗಿರುವ ಜಗದೀಶ್ ಸಹಾಯಕ್ಕಾಗಿ ಧಾರವಾಡದ ಗೆಳೆಯ ಬಸವರಾಜ್ ಗೆ ಹಣವನ್ನು ತೆಗೆದುಕೊಂಡು ಬರಲು ಜೊತೆಗೆ ಬರುವಂತೆ ಕೇಳಿಕೊಂಡಿದ್ದ. ಅದರಂತೆ 2015 ಮೇ 22 ರಂದು ಬಸವರಾಜ್ ಜಗದೀಶ್ ಅವರನ್ನು ಕರೆದುಕೊಂಡು ಹೋಗಿ ಹಣ ವಿತ್ ಡ್ರಾ ಮಾಡಿಸಿಕೊಟ್ಟಿದ್ದ. ಆದರೆ ಇದಕ್ಕೂ ಮೊದಲೇ ಹಣವನ್ನು ದೋಚಿಕೊಂಡು ಹೋಗಬೇಕೆಂದು ಸಂಚು ರೂಪಿಸಿದ್ದನು.

    ಈ ಹಿನ್ನೆಲೆ ಆತ ಗದಗದ ಗ್ರೇನ್ ಮಾರ್ಕೆಟ್‍ನಲ್ಲಿ ಮಚ್ಚು ಖರೀದಿ ಮಾಡಿ ತಂದಿದ್ದ. ಜಗದೀಶ್ ಅವರನ್ನು ಮೇ 23 ರಂದು ರಾತ್ರಿ 8 ರ ಸುಮಾರಿಗೆ ಉಪಾಯದಿಂದ ಉಣಕಲ್ ಸಿದ್ಧಪಜ್ಜನ ಮಠದ ಹಿಂದಿರುವ ಕೆರೆ ಬಳಿ ಕರೆದುಕೊಂಡು ಹೋಗಿದ್ದ ಬಸವರಾಜ್ ಅಲ್ಲಿ ಅಂಧ ಗೆಳೆಯನಿಗೆ ಮಚ್ಚಿನಿಂದ ಸಿಕ್ಕಸಿಕ್ಕಲ್ಲಿ ಹೊಡೆದಿದ್ದ. ಗಂಭೀರ ಗಾಯಗೊಂಡ ಜಗದೀಶ್ ಬಸವರಾಜ್ ಬಳಿಯಿಂದ 1.40 ಲಕ್ಷ ಕಿತ್ತುಕೊಂಡು ಜಾಗ ಖಾಲಿ ಮಾಡಿದ್ದು, ನಂತರ ಚಿಕಿತ್ಸೆ ಫಲಕಾರಿ ಆಗದೇ ಅವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಇದನ್ನೂ ಓದಿ: ಜಿನೋಮಿಕ್ ಸೀಕ್ವೆನ್ಸ್ ಫಲಿತಾಂಶಕ್ಕೆ ಕನಿಷ್ಠ 7-8 ದಿನಗಳು ಬೇಕಾಗುತ್ತದೆ: ಸುಧಾಕರ್

    ಈ ಕುರಿತು ತನಿಖೆ ನಡೆಸಿದ ವಿದ್ಯಾನಗರ ಠಾಣೆ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಬಿರಾದಾರ ದೇವೇಂದ್ರಪ್ಪ ಎನ್ ಅವರು ಶನಿವಾರ ಶಿಕ್ಷೆ ಪ್ರಮಾಣ ಪ್ರಕಟಿಸಿದ್ದಾರೆ. ದಂಡದ 46 ಲಕ್ಷದಲ್ಲಿ 8.90 ಸಾವಿರ ಜಗದೀಶ್ ತಾಯಿಗೆ, 10 ಸಾವಿರ ಕಾನೂನು ಸೇವಾ ಪ್ರಾಧಿಕಾರಕ್ಕೆ ಭರಿಸಲು ಆದೇಶ ನೀಡಲಾಗಿದೆ. ಸರ್ಕಾರಿ ಅಭಿಯೋಜಕ ಗಿರಿಜಾ ಎಸ್. ತಮ್ಮಿನಾಳ ಈ ವಾದ ಮಂಡಿಸಿದ್ದರು.

  • ಉಣಕಲ್ ಕೆರೆಗೆ ಚನ್ನಬಸವ ಸಾಗರವೆಂದು ನಾಮಕರಣಕ್ಕೆ ಹೈಕೋರ್ಟ್ ಆದೇಶ

    ಉಣಕಲ್ ಕೆರೆಗೆ ಚನ್ನಬಸವ ಸಾಗರವೆಂದು ನಾಮಕರಣಕ್ಕೆ ಹೈಕೋರ್ಟ್ ಆದೇಶ

    ಧಾರವಾಡ: ಹುಬ್ಬಳ್ಳಿಯ ಐತಿಹಾಸಿಕ ಉಣಕಲ್ ಕೆರೆಗೆ ಚನ್ನಬಸವ ಸಾಗರವೆಂದು ನಾಮಕರಣ ಮಾಡಬೇಕು ಎಂದು ಮಹಾನಗರ ಪಾಲಿಕೆಗೆ ಹೈಕೋರ್ಟ್ ಆದೇಶ ನೀಡಿದೆ .

    2003 ರ ಜನವರಿ 16 ರಂದು ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಈ ಕುರಿತು ನಿರ್ಣಯ ಅಂಗೀಕರಿಸಿದ್ದರೂ ನಿರ್ಣಯ ಜಾರಿಗೆ ಕ್ರಮ ಕೈಗೊಳ್ಳದ ಪಾಲಿಕೆ ವಿರುದ್ಧ ಹಲವರು ನ್ಯಾಯಾಲಯದ ಮೊರೆ ಹೋಗಿದ್ದರು. ಇದೀಗ ಧಾರವಾಡ ಹೈಕೋರ್ಟ್ ಪೀಠ ಈ ಆದೇಶ ನೀಡಿದೆ.

    ಹುಬ್ಬಳ್ಳಿ- ಧಾರವಾಡ ಮಧ್ಯದ ಪ್ರಮುಖ ಆಕರ್ಷಣೆಯಾಗಿರುವ ಮತ್ತು ಶತಮಾನಗಳ ಇತಿಹಾಸ ಹೊಂದಿರುವ ಉಣಕಲ್ ಕೆರೆ ಹಾಗೂ ಆವರಣವನ್ನು ಪ್ರವಾಸಿ ಕೇಂದ್ರವಾಗಿ ಅಭಿವೃದ್ಧಿ ಪಡಿಸಲಾಗಿದೆ. ಕೆರೆ ದಂಡೆಯ ಮೇಲಿರುವ ಶ್ರೀ ಚನ್ನಬಸವೇಶ್ವರ ದೇವಸ್ಥಾನಕ್ಕೆ ಸಾವಿರಾರು ಭಕ್ತರು ಆಗಮಿಸುತ್ತಾರೆ. ಪ್ರತಿ ವರ್ಷ ಭರತ ಹುಣ್ಣಿಮೆಯಂದು ಜಾತ್ರೆ, ರಥೋತ್ಸವ ನಡೆಯುತ್ತದೆ,. ಶ್ರಾವಣ ಮಾಸದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧಾ , ಭಕ್ತಿಯಿಂದ ನಡೆಯುತ್ತವೆ. 12 ನೇ ಶತಮಾನದಲ್ಲಿ ಕಲ್ಯಾಣ ಕ್ರಾಂತಿ ನಡೆದ ನಂತರ ಶ್ರೀ ಚನ್ನಬಸವೇಶ್ವರರ ನೇತೃತ್ವದ ಶರಣರ ತಂಡ ಸಹ್ಯಾದ್ರಿಯ ಅರಣ್ಯ ಪ್ರದೇಶದ ಮಧ್ಯದ ಉಳವಿಯತ್ತ ಸಾಗಿತು. ಈ ಮಧ್ಯೆ ಅವರು ಉಣಕಲ್ ಕೆರೆ ದಂಡೆ ಮೇಲೆ ಕೆಲಕಾಲ ಉಳಿದು ಜನರಲ್ಲಿ ಜಾಗೃತಿ ಮೂಡಿಸಿದರು. ಈ ಹಿನ್ನೆಲೆಯಲ್ಲಿ ಉಣಕಲ್ ಕೆರೆ ದಂಡೆಯ ಮೇಲೆ ರೂಪಗೊಂಡಿರುವ ದೇವಸ್ಥಾನ ಬಸವ ಭಕ್ತರ ಪವಿತ್ರ ಯಾತ್ರಾ ಸ್ಥಳವಾಗಿದೆ. ಇದನ್ನೂ ಓದಿ: ಸುನಂದಾ ಪುಷ್ಕರ್ ಪ್ರಕರಣ – 7 ವರ್ಷಗಳ ಬಳಿಕ ಶಶಿ ತರೂರ್​​​ಗೆ ರಿಲೀಫ್

    ಈ ಎಲ್ಲ ಕಾರಣಗಳಿಂದ ಚನ್ನಬಸವ ಸಾಗರ ಎಂದು ನಾಮಕರಣ ಮಾಡಲು ಹಿಂದೆ ನಿರ್ಣಯ ಕೈಗೊಳ್ಳಲಾಗಿತ್ತು. ಹುಬ್ಬಳ್ಳಿಯ ಶಂಕರಗೌಡ ಪಾಟೀಲ್, ವಿನಯ್ ಪರಮಾದಿ, ಶಿವಪ್ಪ ಪಟ್ಟಣಶೆಟ್ಟಿ ಅವರು ಸೇರಿ 7 ಜನರು ನ್ಯಾಯಾಲಯದ ಮೊರೆ ಹೋಗಿ ವಾದ ಮಂಡಿಸಿದ್ದರು, ಆದರೆ ನಿರ್ಣಯ ಜಾರಿಯಾಗದ ಹಿನ್ನೆಲೆಯಲ್ಲಿ ಇವರ ಪರವಾಗಿ ವಕೀಲ ಕೆ.ಎಸ್ , ಕೋರಿಶೆಟ್ಟರ್ ವಾದ ಮಂಡಿಸಿದ್ದರು. ಇದನ್ನೂ ಓದಿ: ಅಫ್ಘಾನಿಸ್ತಾನದಿಂದ ಸೇನೆ ಹಿಂಪಡೆದಿದ್ದು ಅಮೆರಿಕಾ ಇತಿಹಾಸದಲ್ಲಿ ಕಪ್ಪು ಚುಕ್ಕೆ: ಬೈಡನ್ ವಿರುದ್ಧ ಟ್ರಂಪ್ ವಾಗ್ದಾಳಿ