Tag: ಉಡುಪಿ

  • ರಾಜ್ಯ ಸರ್ಕಾರಕ್ಕೆ ಹಿಂದೂ ವಿರೋಧಿ ಪಟ್ಟ ಕಟ್ಟುವ ಯತ್ನ: ಲಕ್ಷ್ಮೀ ಹೆಬ್ಬಾಳ್ಕರ್

    ರಾಜ್ಯ ಸರ್ಕಾರಕ್ಕೆ ಹಿಂದೂ ವಿರೋಧಿ ಪಟ್ಟ ಕಟ್ಟುವ ಯತ್ನ: ಲಕ್ಷ್ಮೀ ಹೆಬ್ಬಾಳ್ಕರ್

    ಉಡುಪಿ: ರಾಜ್ಯ ಸರ್ಕಾರಕ್ಕೆ ಹಿಂದೂ ವಿರೋಧಿ ಪಟ್ಟ ಕಟ್ಟುವ ಪ್ರಯತ್ನಗಳಾಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ (Lakshmi Hebbalkar) ಆರೋಪಿಸಿದರು.

    ಉಡುಪಿ (Udupi) ಜಿಲ್ಲೆಯ ನೀರೆ ಗ್ರಾಮ ಪಂಚಾಯತ್ ನೂತನ ಕಟ್ಟಡವನ್ನು ಉದ್ಘಾಟಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದ ಜನಪ್ರಿಯತೆಯನ್ನು ಸಹಿಸದ ಬಿಜೆಪಿ ನಾಯಕರು ಅನವಶ್ಯಕವಾಗಿ ಅಪಪ್ರಚಾರ ಮಾಡುತ್ತಿದ್ದಾರೆ. ಅಲ್ಲದೇ ಸಮಾಜದ ಕೋಮು ಸೌಹಾರ್ದತೆಯನ್ನು ಕೆಡಿಸುತ್ತಿದ್ದಾರೆ ಎಂದರು. ಇದನ್ನೂ ಓದಿ: 4 ಶಂಕಾಸ್ಪದ ಸಾವುಗಳ ತನಿಖೆಗೆ ತಿಮರೋಡಿ ದೂರು, ವಿಠಲಗೌಡ ಆರೋಪವನ್ನು ಎಸ್‌ಐಟಿ ಪರಿಶೀಲಿಸಿ ಕ್ರಮ: ಪರಮೇಶ್ವರ್

    ಸರ್ಕಾರದ ವಿರುದ್ಧ ಆರೋಪ ಮಾಡಲು ವಿಪಕ್ಷಗಳಿಗೆ ಬೇರೆ ವಿಚಾರ ಇಲ್ಲ. ರಾಜ್ಯ ಸರ್ಕಾರ ಬೀಳುತ್ತದೆ, ಗ್ಯಾರಂಟಿ ಯೋಜನೆಗಳು ಜಾರಿ ಆಗಲ್ಲ, ಒಂದು ವೇಳೆ ಜಾರಿಯಾದರೂ ನಾಲ್ಕು ತಿಂಗಳಿಗೆ ಯೋಜನೆಗಳನ್ನು ನಿಲ್ಲಿಸಲಾಗುತ್ತದೆ ಎಂದು ಅಪಪ್ರಚಾರ ಮಾಡಲಾಯಿತು. ರಾಜ್ಯದ ಜನತೆಗೆ ನಮ್ಮ ಸರ್ಕಾರ ಸಾಕಷ್ಟು ಅನುಕೂಲ ಮಾಡಿಕೊಟ್ಟಿದೆ. ಇದನ್ನು ಸಹಿಸದ ಬಿಜೆಪಿ ನಾಯಕರು ಸುಖಾಸುಮ್ಮನೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಇನ್ಮುಂದೆ ಮಲ್ಟಿಪ್ಲೆಕ್ಸ್ ಸೇರಿ ಎಲ್ಲ ಚಿತ್ರಮಂದಿರಗಳಲ್ಲಿ ಏಕರೂಪ ದರ ನಿಗದಿ; ಪ್ರತಿ ಟಿಕೆಟ್‍ಗೆ ಇಷ್ಟೇ ಬೆಲೆ

    ಕಾನೂನಿಗಿಂತ ದೊಡ್ಡವರು ಯಾರೂ ಇಲ್ಲ
    ಬಿಜೆಪಿ ಶಾಸಕ ಸಿ.ಟಿ.ರವಿ (CT Ravi) ವಿರುದ್ಧ ಎಫ್‌ಐಆರ್ ದಾಖಲಿಸಿರುವುದಕ್ಕೆ ವಿಪಕ್ಷಗಳು ಖಂಡಿಸಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದರು. ಅವರು ದ್ವೇಷಪೂರಿತ ಭಾಷಣ ಮಾಡಿದರೆ ಕ್ರಮ ಕೈಗೊಳ್ಳಲು ವಿಧಾನಸಭೆಯಲ್ಲಿ ಶಾಸನ ತರಲಾಗಿದೆ. ದ್ವೇಷಪೂರಿತ ಭಾಷಣವನ್ನು ಬಿಜೆಪಿ-ಕಾಂಗ್ರೆಸ್ ನಾಯಕರು ಯಾರೇ ಆಗಲಿ ಕ್ರಮ ಕೈಗೊಳ್ಳಲಾಗುತ್ತದೆ. ನಾಳೆ ಕಾಂಗ್ರೆಸ್ಸಿಗರು ಮಾತನಾಡಿದರೂ ಕ್ರಮ ಆಗುತ್ತದೆ. ಕಾನೂನು ಎಲ್ಲರಿಗೂ ಒಂದೇ ಅಲ್ವಾ? ಶಾಂತಿಯನ್ನು ಕದಡುವ ಕೆಲಸ ಮಾಡಿದರೆ ಖಂಡಿತ ಎಫ್‌ಐಆರ್ ಆಗುತ್ತದೆ ಎಂದು ಹೇಳಿದರು.

    ಧರ್ಮಸ್ಥಳ ನಮ್ಮೆಲ್ಲರ ಆರಾಧ್ಯ ಸ್ಥಳ
    ನಾನು ಮೊದಲಿನಿಂದಲೂ ಹೇಳಿಕೊಂಡು ಬಂದಿದ್ದೇನೆ. ಧರ್ಮಸ್ಥಳ (Dharmasthala) ನಮ್ಮೆಲ್ಲರ ಆರಾಧ್ಯ ಸ್ಥಳ, ಬಹಳಷ್ಟು ಭಕ್ತಿಯಿಂದ ನಡೆದುಕೊಳ್ಳುವ ಸ್ಥಳ. ಏನೆಲ್ಲಾ ಷಡ್ಯಂತ್ರ ಆಗಿದೆ, ಇದೆಲ್ಲಾ ಹೊರ ಬರುತ್ತೆ ಸ್ವಲ್ಪ ಕಾಯಿರಿ. ಎಸ್‌ಐಟಿ ತನ್ನ ಕೆಲಸ ಮಾಡುತ್ತಿದೆ. ಇದನ್ನು ಸಾರ್ವಜನಿಕವಾಗಿ ಹೇಳಲು ಬರಲ್ಲ. ಸ್ವಲ್ಪ ದಿನ ಕಾಯಿರಿ ಎಲ್ಲಾ ಸತ್ಯಾಸತ್ಯತೆ ಹೊರಬರುತ್ತದೆ ಎಂದರು.

  • ಉಡುಪಿ: ಟ್ರಕ್‌ನಲ್ಲಿದ್ದ 35 ಲಕ್ಷ ಮೌಲ್ಯದ 65 ಕೆಜಿ ಗಾಂಜಾ ಸೀಜ್‌

    ಉಡುಪಿ: ಟ್ರಕ್‌ನಲ್ಲಿದ್ದ 35 ಲಕ್ಷ ಮೌಲ್ಯದ 65 ಕೆಜಿ ಗಾಂಜಾ ಸೀಜ್‌

    ಉಡುಪಿ: ಕರಾವಳಿ ಜಿಲ್ಲೆ ಉಡುಪಿಯಲ್ಲಿ ಗಾಂಜಾ ಸಾಗಾಟ ಮಾರಾಟ ಮತ್ತು ಸೇವನೆ ಹೆಚ್ಚಾಗುತ್ತಿದೆ. ಪ್ರವಾಸಿಗರು ಮತ್ತು ವಿದ್ಯಾರ್ಥಿಗಳನ್ನು ಪೆಡ್ಲರ್‌ಗಳು ಟಾರ್ಗೆಟ್ ಮಾಡುತ್ತಿದ್ದಾರೆ. ಈ ನಡುವೆ ಟ್ರಕ್ ಒಂದರಲ್ಲಿ 65 ಕೆಜಿ ಗಾಂಜಾ ಉಡುಪಿ ಮಾರ್ಗದಲ್ಲಿ ಚಲಿಸುತ್ತಿದ್ದಾಗ ಪೊಲೀಸರು ದಾಳಿ ನಡೆಸಿ ಮಾಲು ಸಮೇತ ಇಬ್ಬರನ್ನು ವಶಪಡಿಸಿಕೊಂಡಿದ್ದಾರೆ.

    ಉಡುಪಿಯಲ್ಲಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಮಲ್ಪೆ ವೃತ್ತ ನಿರೀಕ್ಷಕ, ಸೆನ್ ವಿಭಾಗದ ಇನ್ಸ್ಪೆಕ್ಟರ್ ನಿತ್ಯಾನಂದ ನಾಯಕ್ ಟ್ರಕ್ ಒಂದನ್ನು ಅಡ್ಡ ಹಾಕಿದ್ದಾರೆ. ಅನುಮಾನ ಬಂದು ತಪಾಸಣೆ ನಡೆಸಿದಾಗ ಪೊಲೀಸರಿಗೆ ಶಾಕ್ ಕಾದಿತ್ತು.

    ಉಡುಪಿಯ ಕಿನ್ನಿಮೂಲ್ಕಿ ಜಂಕ್ಷನ್‌ನಲ್ಲಿ ಲಾರಿಯನ್ನು ಅಡ್ಡ ಹಾಕಿದ ಪೊಲೀಸರು ತಪಾಸಣೆ ನಡೆಸಿದ್ದಾರೆ. ಗೋಣಿಯಲ್ಲಿ ಅನುಮಾನಾಸ್ಪದ ವಸ್ತು ಇರುವುದು ಪತ್ತೆಯಾಗಿದೆ. ತೆಗೆದು ನೋಡಿದಾಗ ಅದರಲ್ಲಿ ಅಪಾರ ಪ್ರಮಾಣದ ಗಾಂಜಾ ಸಿಕ್ಕಿದೆ.

    ಮಹಜರು ನಡೆಸಿ ತೂಕ ಹಾಕಿದಾಗ 65 ಕೆಜಿಗಿಂತ ಹೆಚ್ಚು ಗಾಂಜಾ ಇರುವುದು ಬೆಳಕಿಗೆ ಬಂದಿದೆ. ಇಬ್ಬರು ಆರೋಪಿಗಳಾದ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಗಣೇಶ್, ಆಂದ್ರ ಪ್ರದೇಶದ ಅನಂತಪುರಂನ ಗೋಪಾಲ ರೆಡ್ಡಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆಂಧ್ರಪ್ರದೇಶ-ಒರಿಸ್ಸಾ ಗಡಿಭಾಗದಿಂದ ಈ ಗಾಂಜಾ ರಾವಾನೆಯಾಗಿರುವ ಸಾಧ್ಯತೆಯಿದೆ.

    ಗಾಂಜಾ ಮೌಲ್ಯ 35 ಲಕ್ಷ ರುಪಾಯಿ ಎಂದು ಅಂದಾಜಿಸಲಾಗಿದೆ. ಮಾರುಕಟ್ಟೆಯಲ್ಲಿ 50 ಲಕ್ಷ ವರೆಗೆ ಡಿಮ್ಯಾಂಡ್ ಇದೆ ಎನ್ನಲಾಗಿದೆ. 20 ಲಕ್ಷ ರೂಪಾಯಿ ಮೌಲ್ಯದ ಗೂಡ್ಸ್ ಲಾರಿ, ಎರಡು ಮೊಬೈಲ್ ಫೋನ್ ನಗದು ಸೇರಿದಂತೆ ಒಟ್ಟು 72,21,520 ರುಪಾಯಿ ಸ್ವತ್ತುಗಳನ್ನು ವಶಪಡಿಸಲಾಗಿದೆ. ಅಪಾರ ಪ್ರಮಾಣದ ಗಾಂಜಾ ಸಾಗಾಟವಾಗುತ್ತಿದ್ದದ್ದು ಎಲ್ಲಿಗೆ ಎಂಬುದನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕರಾವಳಿಯ ಪ್ರವಾಸೋದ್ಯಮ, ಶಿಕ್ಷಣ ಕ್ಷೇತ್ರವನ್ನು ಟಾರ್ಗೆಟ್ ಮಾಡುತ್ತಿರುವುದು ನಿರಂತರವಾಗಿ ನಡೆಯುತ್ತಿದೆ. ಪೊಲೀಸರು ಇದರ ಮೂಲಕ್ಕೆ ಇಳಿದು ತನಿಖೆ ನಡೆಸಬೇಕು ಎಂಬುದು ಸಾರ್ವಜನಿಕರ ಒತ್ತಾಯಿಸಿದ್ದಾರೆ.

  • ತುಳು ರಾಜ್ಯದ 2ನೇ ಅಧಿಕೃತ ಭಾಷೆ ಬೇಡಿಕೆ ಬಗ್ಗೆ ಸಂಪುಟದಲ್ಲಿ ಚರ್ಚೆ: ಡಿಕೆಶಿ

    ತುಳು ರಾಜ್ಯದ 2ನೇ ಅಧಿಕೃತ ಭಾಷೆ ಬೇಡಿಕೆ ಬಗ್ಗೆ ಸಂಪುಟದಲ್ಲಿ ಚರ್ಚೆ: ಡಿಕೆಶಿ

    – ನಿಮ್ಮ ಜೊತೆ ನಾನಿದ್ದೇನೆ, ನಿಮ್ಮ ಆಶೀರ್ವಾದ ನನ್ನ ಮೇಲಿರಲಿ

    ಬೆಂಗಳೂರು: ತುಳು ರಾಜ್ಯದ 2ನೇ ಅಧಿಕೃತ ಭಾಷೆಯಾಗಿ ಘೋಷಿಸಬೇಕು ಎಂಬ ನಿಮ್ಮ ಬೇಡಿಕೆ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚೆ ಮಾಡಲಾಗುವುದು ಎಂದು ಡಿಸಿಎಂ ಡಿ.ಕೆ ಶಿವಕುಮಾರ್ (DK Shivakumar) ಅವರು ಭರವಸೆ ನೀಡಿದರು.

    ಬೆಂಗಳೂರಿನಲ್ಲಿ ಭಾನುವಾರ ಏರ್ಪಡಿಸಿದ್ದ ʻಅಷ್ಟೆಮಿದ ಐಸಿರಿ ತುಳುವ ತರ್ಲ್ ಸಾಸಿರಿʼ ಕಾರ್ಯಕ್ರಮದಲ್ಲಿ ಶಿವಕುಮಾರ್ ಅವರು ಮಾತನಾಡಿದರು.

    ಇತ್ತೀಚೆಗೆ ಕುಂದಾಪುರದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೆ. ಆ ಕಾರ್ಯಕ್ರಮ ಈ ಕಾರ್ಯಕ್ರಮದಲ್ಲಿ ಸೇರಿರುವ ಜನ ನೋಡಿದರೆ ಮುಂದೆ ನೀವೆಲ್ಲರೂ ನಮ್ಮನ್ನು ಬೆಂಗಳೂರಿನಿಂದ ಖಾಲಿ ಮಾಡಿಸುತ್ತೀರೇನೋ ಎಂದು ಭಯವಾಗುತ್ತಿದೆ. ನಿಮ್ಮ ಈ ಶಕ್ತಿ, ಉತ್ಸಾಹ ನೋಡಿ ನನಗೆ ಈ ಅನುಮಾನ ಕಾಡುತ್ತಿದೆ ಎಂದು ಚಟಾಕಿ ಹಾರಿಸಿದರು.

    ಇಡೀ ದೇಶಕ್ಕೆ ಕರ್ನಾಟಕದ ಮೂಲಕ ಸಂಸ್ಕೃತಿ ಹಾಗೂ ಶಿಕ್ಷಣ ಕೊಟ್ಟವರು, ಧಾರ್ಮಿಕ ಶಕ್ತಿ ಕೊಟ್ಟವರು, ಬ್ಯಾಂಕ್ ವ್ಯವಸ್ಥೆ ಕೊಟ್ಟವರು ಈ ಕರಾವಳಿ ಜನ. ಆರೋಗ್ಯ ಕ್ಷೇತ್ರ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ನೀವು ಮುಂದೆ ಇದ್ದೀರಿ. ಕರಾವಳಿ ಭಾಗ, ದಕ್ಷಿಣ ಕನ್ನಡದ ಜನ ವಿದ್ಯಾವಂತರು, ಬುದ್ಧಿವಂತರು, ಪ್ರಜ್ಞಾವಂತರು. ನಿಮ್ಮ ಜೊತೆ ನಾನು ಇದ್ದೇನೆ ಎಂದು ಹೇಳಲು ಇಲ್ಲಿಗೆ ಬಂದಿದ್ದೇನೆ. ಈ ಡಿಕೆ ಶಿವಕುಮಾರ್ ನಿಮ್ಮವ ಎಂದು ಭಾವಿಸಿ. ನಾನು ನಿಮ್ಮ ಪರವಾಗಿದ್ದೇನೆ. ನೀವು ನನಗೆ ಬೆಂಬಲವಾಗಿರಿ. ನಾನು ನಿಮ್ಮ ಆಶೀರ್ವಾದವನ್ನಷ್ಟೇ ಕೇಳುತ್ತಿದ್ದೇನೆ. ನಿಮ್ಮ ಸಂಸ್ಕೃತಿ, ಇತಿಹಾಸ ದೇಶದ ಯಾವುದೇ ಭಾಗದಲ್ಲೂ ಇಲ್ಲ. ನೀವೆಲ್ಲರೂ ಕರ್ನಾಟಕ ರಾಜ್ಯದ ಆಸ್ತಿ ಎಂದು ಗುಣಗಾನ ಮಾಡಿದರು.

    ಮಂಗಳೂರು, ಉಡುಪಿ ಸೇರಿದಂತೆ ಕರಾವಳಿ ಭಾಗದ ಜನ ಉದ್ಯೋಗಕ್ಕಾಗಿ ವಲಸೆ ಹೋಗದಂತೆ ಪ್ರತ್ಯೇಕ ಪ್ರವಾಸೋದ್ಯಮ ನೀತಿ ರೂಪಿಸಲು ನಾನು ನಿಮ್ಮ ಭಾಗದ ಶಾಸಕರು, ಸ್ಪೀಕರ್ ಖಾದರ್ ಅವರ ಜೊತೆಗೆ ಚರ್ಚೆ ಮಾಡಿದ್ದೇನೆ ಎಂದು ತಿಳಿಸಿದರು.

  • ಚಂದ್ರಗ್ರಹಣ ಕಣ್ತುಂಬ ನೋಡಿ ಸಂಭ್ರಮಿಸಿ: ಭೌತವಿಜ್ಞಾನಿ ಎ.ಪಿ.ಭಟ್‌

    ಚಂದ್ರಗ್ರಹಣ ಕಣ್ತುಂಬ ನೋಡಿ ಸಂಭ್ರಮಿಸಿ: ಭೌತವಿಜ್ಞಾನಿ ಎ.ಪಿ.ಭಟ್‌

    ಉಡುಪಿ: ಚಂದ್ರಗ್ರಹಣವನ್ನು ಕಣ್ತುಂಬ ನೋಡಿ ಸಂಭ್ರಮಿಸಿ. ನಸುಗೆಂಪು ಚಂದ್ರ ಕಣ್ಣು, ಮನಸ್ಸಿಗೆ ಹಿತ ಕೊಡುತ್ತಾನೆ. ಬರಿಯ ಕಣ್ಣಿನಲ್ಲಿ ನೋಡಿ ಎಂಜಾಯ್ ಮಾಡಿ ಎಂದು ಹಿರಿಯ ಭೌತಶಾಸ್ತ್ರಜ್ಞ ಡಾ. ಎಪಿ ಭಟ್ ಹೇಳಿದ್ದಾರೆ.

    ‘ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ ಅವರು, ಚಂದ್ರನಿಗೂ ಸಮುದ್ರದ ಅಲೆಗಳಿಗೂ ಸಂಬಂಧವಿದೆ. ಹೀಗಾಗಿ, ಕೊಂಚ ವ್ಯತ್ಯಾಸಗಳು ಸಂಭವಿಸಬಹುದು ಎಂದಿದ್ದಾರೆ. ಇದನ್ನೂ ಓದಿ: 800 ವರ್ಷ ಹಳೆಯ ಸೂಗೂರೇಶ್ವರ ದೇವಸ್ಥಾನಕ್ಕೆ ತಟ್ಟದ ಗ್ರಹಣ ದೋಷ – ವಿಶಿಷ್ಟ ವಾಸ್ತುಶಿಲ್ಪವೇ ಇಲ್ಲಿ ಶ್ರೀರಕ್ಷೆ

    ಇದು ಪ್ರಕೃತಿಯ ಸುಂದರ ವಿದ್ಯಮಾನ, ನೋಡಿ ಆನಂದಿಸಬೇಕು. ಜನರು ಭಯಭೀತರಾಗುವುದು ಬೇಡ. ಪ್ರಕೃತಿಯಲ್ಲಿ ಹಲವಾರು ಏರಿಳಿತ ಇದ್ದೇ ಇರುತ್ತದೆ. ಹುಣ್ಣಿಮೆ ಅಮಾವಾಸ್ಯೆ ವೇಳೆ ಸಮುದ್ರದ ಅಲೆಯಲ್ಲಿ ವ್ಯತ್ಯಾಸ ಕಾಣುತ್ತದೆ. ಹುಣ್ಣಿಮೆಯನ್ನು ನಮ್ಮಲ್ಲಿ ಪವಿತ್ರ ದಿವಸ ಎನ್ನುತ್ತೇವೆ. ಹಾಲು ಬೆಳದಿಂಗಳಲ್ಲಿ ಕುಳಿತಾಗ ಮನಸ್ಸಿಗೆ ರಿಲ್ಯಾಕ್ಸ್‌ ಸಿಗುತ್ತದೆ. ಮನಸ್ಸಿಗೆ ಮುದ ಕೊಡುವಂತಹ ಕಾಲ. ಅದೇ ಪವಿತ್ರವಾದ ದಿವಸ ಎಂದು ತಿಳಿಸಿದ್ದಾರೆ.

    ಭೂಮಿಯವರಿಗೆ ನಾಳೆ ಚಂದ್ರ ಖುಷಿ ಕೊಡುತ್ತಿದ್ದಾನೆ. ಇದರಿಂದ ಅವರಿಗೆ ಇವರಿಗೆ ತೊಂದರೆ ಅಂತ ಹೆದರ ಬೇಕಾಗಿಲ್ಲ. ಗ್ರಹಣ ಕಾಲದಲ್ಲಿ ಹೊಸದೇನು ಆಗುವುದಿಲ್ಲ. ಇದು ನೆರಳು ಬೆಳಕಿನ ಆಟ ಅಂತ ಹಿಂದಿನಿಂದಲೂ ಹೇಳಿಕೊಂಡು ಬಂದಿದ್ದಾರೆ. ಇದರಲ್ಲಿ ಹೊಸದೇನು ಆಗುವುದಿಲ್ಲ. ಎಲ್ಲರೂ ನೋಡಿ ಆನಂದಿಸಿ ಎಂದು ಸಲಹೆ ನೀಡಿದ್ದಾರೆ. ಇದನ್ನೂ ಓದಿ: ರಕ್ತಚಂದ್ರಗ್ರಹಣ – ಬೀದರ್‌ನ ಐತಿಹಾಸಿಕ 9 ದೇವಸ್ಥಾನಗಳ ಬಾಗಿಲು ಬಂದ್

    ಪೂಜೆ, ಜಪ-ತಪ ಮಾಡುವವರು ಮಾಡಿ. ಮನಸ್ಸಿನ ಏಕಾಗ್ರತೆಗೆ ಒಳ್ಳೆಯ ಸಮಯ. ನಮಗೆ ಬೇಕು ಅಂದಾಗ ಸಿಗಲ್ಲ. ಪ್ರಕೃತಿ ವಿದ್ಯಮಾನವನ್ನು ಸಂಭ್ರಮಿಸಿ ಎಂದು ಕರೆ ಕೊಟ್ಟಿದ್ದಾರೆ.

  • ಚಂದ್ರಗ್ರಹಣ; ಉಡುಪಿ ಕೃಷ್ಣ ಮಠದಲ್ಲಿ ಹಲವು ಬದಲಾವಣೆ

    ಚಂದ್ರಗ್ರಹಣ; ಉಡುಪಿ ಕೃಷ್ಣ ಮಠದಲ್ಲಿ ಹಲವು ಬದಲಾವಣೆ

    ಉಡುಪಿ: ಚಂದ್ರಗ್ರಹಣ (Chandra Grahan) ಇರುವುದರಿಂದ ಉಡುಪಿ ಶ್ರೀಕೃಷ್ಣ ಮಠದಲ್ಲಿ (Udupi Krishna Mutt) ಪೂಜೆ ಪುನಸ್ಕಾರ, ಅನ್ನಪ್ರಸಾದ ವಿಚಾರದಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ.

    10:30ಕ್ಕೆ ಕೃಷ್ಣಮಠದಲ್ಲಿ ಭೋಜನ ವ್ಯವಸ್ಥೆ ಆರಂಭವಾಗಲಿದ್ದು, ಊಟ 12 ಗಂಟೆಗೆ ಮುಕ್ತಾಯವಾಗುತ್ತದೆ. ಮಠದಲ್ಲಿ ಗ್ರಹಣ ಶಾಂತಿ ಹೋಮ-ಹವನಗಳ ವ್ಯವಸ್ಥೆ ಇರಲಿದೆ. ಗ್ರಹಣ ಆರಂಭಕ್ಕೂ ಮೊದಲು ನೈರ್ಮಲ್ಯ ವಿಸರ್ಜನ ಪೂಜೆ ನಡೆಯಲಿದೆ. ಇದನ್ನೂ ಓದಿ: ನಾಳೆ ರಕ್ತಚಂದ್ರಗ್ರಹಣ – ಕೌತುಕದ ಬಗ್ಗೆ ವಿಜ್ಞಾನಿಗಳು ಹೇಳೋದೇನು?

    ಗ್ರಹಣ ಸ್ಪರ್ಶಕಾಲ ಮಧ್ಯಕಾಲ ಮತ್ತು ಮೋಕ್ಷಕಾಲದಲ್ಲಿ ಮಧ್ವ ಸರೋವರದಲ್ಲಿ ಭಕ್ತರಿಗೆ ತೀರ್ಥ ಸ್ನಾನ ಮಾಡುವ ವ್ಯವಸ್ತೆ ಕಲ್ಪಿಸಲಾಗಿದೆ. ಚಂದ್ರಗ್ರಹಣ ಆರಂಭಕ್ಕೂ ಮೊದಲು ರಾತ್ರಿ ಪೂಜೆ ನಡೆದು ಅಲಂಕಾರಗಳನ್ನೆಲ್ಲ ತೆಗೆದು ನೈರ್ಮಲ್ಯ ವಿಸರ್ಜನ ಪೂಜೆ ನಡೆಸಲಾಗುತ್ತದೆ.

  • 4 ಲಕ್ಷಕ್ಕೆ ನವಜಾತ ಶಿಶು ಮಾರಾಟ – ಮಂಗ್ಳೂರು ಮೂಲದ ವೈದ್ಯ ಸೇರಿ ಮೂವರು ಅರೆಸ್ಟ್

    4 ಲಕ್ಷಕ್ಕೆ ನವಜಾತ ಶಿಶು ಮಾರಾಟ – ಮಂಗ್ಳೂರು ಮೂಲದ ವೈದ್ಯ ಸೇರಿ ಮೂವರು ಅರೆಸ್ಟ್

    -ಅತ್ಯಾಚಾರ ಸಂತ್ರಸ್ತೆಯಿಂದ ಮಗು ಖರೀದಿಸಿದ್ದ ಉಡುಪಿ ದಂಪತಿಗಳು

    ಉಡುಪಿ/ಮಂಗಳೂರು: ಆಸ್ಪತ್ರೆಯಿಂದ ಕಾನೂನುಬಾಹಿರವಾಗಿ ಮಗು ಮಾರಾಟ ಮಾಡಿದ್ದ ಜಾಲವೊಂದು ಪತ್ತೆಯಾಗಿದ್ದು, ವೈದ್ಯ ಸೇರಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

    ಮಂಗಳೂರು (Mangaluru) ಮೂಲದ ವೈದ್ಯ ಡಾ.ಸೋಮೇಶ್ ಸೋಲೋಮನ್, ಮಧ್ಯವರ್ತಿ ಮಹಿಳೆ ವಿಜಯಲಕ್ಷ್ಮಿ ಹಾಗೂ ಅತ್ಯಾಚಾರ ಆರೋಪಿ ನವನೀತ್ ನಾರಾಯಣ ಬಂಧಿತ ಆರೋಪಿಗಳು.ಇದನ್ನೂ ಓದಿ: ಮಂಡ್ಯ | ಆಸ್ತಿಗಾಗಿ ಅಪ್ಪನನ್ನೇ ಟ್ರ್ಯಾಪ್‌ ಮಾಡಲು ಹೋಗಿ ತಗ್ಲಾಕೊಂಡ ಮಗ

    ಈ ಕುರಿತು ಅಂಗನವಾಡಿ ಕಾರ್ಯಕರ್ತೆಯೊಬ್ಬರು ಉಡುಪಿಯ (Udupi) ಶಿರ್ವ (Shirva) ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅಂಗನವಾಡಿಯಲ್ಲಿ ಪೋಷಣ್ ಟ್ರ‍್ಯಾಕರ್ ರಿಜಿಸ್ಟರ್ ಸಂದರ್ಭದಲ್ಲಿ ಈ ಮಗು ದಂಪತಿಗಳದ್ದಲ್ಲ ಎನ್ನೋದು ತಿಳಿದು ಬಂದಿದೆ ಎಂದು ಆರೋಪಿಸಿದ್ದಾರೆ.

    ದೂರಿನ ಆಧಾರದ ಮೇಲೆ ತನಿಖೆಗಿಳಿದ ಪೊಲೀಸರಿಗೆ ಮಗು ಮಾರಾಟ ಜಾಲ ಪತ್ತೆಯಾಗಿದೆ. ಪೊಲೀಸರ ಮಾಹಿತಿ ಪ್ರಕಾರ, ನವನೀತ್ ನಾರಾಯಣ ಎಂಬಾತ ಮಾನಸಿಕ ವೈಕಲ್ಯದ ಯುವತಿ ಮೇಲೆ ಅತ್ಯಾಚಾರ ಎಸಗಿದ್ದ. ಸಂತ್ರಸ್ತೆಗೆ ಮಗುವಾದ ಬಳಿಕ ಉಡುಪಿ ದಂಪತಿಗಳು ಆಸ್ಪತ್ರೆಯಿಂದಲೇ ಮಗುವನ್ನು ಖರೀದಿಸಿದ್ದಾರೆ. ಬಳಿಕ ವಿಜಯಲಕ್ಷ್ಮಿ ಎನ್ನುವ ಮಧ್ಯವರ್ತಿ ಮಹಿಳೆಯ ಮೂಲಕ 4 ಲಕ್ಷ ರೂ.ಯನ್ನು ಪಾವತಿಸಿದ್ದಾರೆ. ಮಗು ಮಾರಾಟದಲ್ಲಿ ವೈದ್ಯ ಡಾ.ಸೋಮೇಶ್ ಸೋಲೋಮನ್ ಶಾಮೀಲಾಗಿದ್ದಾರೆ ಎಂದು ತಿಳಿದು ಬಂದಿದೆ.

    ಸದ್ಯ ಉಡುಪಿಯ ಶಿರ್ವ ಠಾಣೆಯ ಪೊಲೀಸರು ಮೂವರನ್ನು ಬಂಧಿಸಿದ್ದು, ಮಗು ಖರೀದಿಸಿದ್ದ ಉಡುಪಿ ದಂಪತಿಗಳ ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಭದ್ರಾವತಿ | ಇಂದು ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ – 2000 ಪೊಲೀಸರ ನಿಯೋಜನೆ

  • ಉಡುಪಿ ಶ್ರೀಕೃಷ್ಣ ಮಠಕ್ಕೆ ಡಿಕೆಶಿ ಭೇಟಿ – ನಾಡಿನ ಒಳಿತಿಗಾಗಿ ಡಿಸಿಎಂ ಪ್ರಾರ್ಥನೆ

    ಉಡುಪಿ ಶ್ರೀಕೃಷ್ಣ ಮಠಕ್ಕೆ ಡಿಕೆಶಿ ಭೇಟಿ – ನಾಡಿನ ಒಳಿತಿಗಾಗಿ ಡಿಸಿಎಂ ಪ್ರಾರ್ಥನೆ

    ಉಡುಪಿ: ಜಿಲ್ಲಾ ಪ್ರವಾಸದಲ್ಲಿದ್ದ ಡಿಸಿಎಂ ಡಿಕೆ ಶಿವಕುಮಾರ್‌ ಅವರಿಂದು ಉಡುಪಿಯ ಶ್ರೀ ಕೃಷ್ಣ ಮಠಕ್ಕೆ (Udupi Shri Krishna Matha) ಭೇಟಿ ನೀಡಿ, ಶ್ರೀಕೃಷ್ಣನ ದರ್ಶನ ಪಡೆದು ನಾಡಿನ ಒಳಿತಿಗಾಗಿ ಪ್ರಾರ್ಥನೆ ಸಲ್ಲಿಸಿದರು. ಈ ವೇಳೆ ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠದ ಮಠಾಧೀಶರಾದ ಸುಗುಣೇಂದ್ರತೀರ್ಥ ಶ್ರೀಗಳು ಪ್ರಸಾದ ನೀಡಿ ಆಶೀರ್ವದಿಸಿದರು.

    ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಕೆಶಿ (DK Shivakumar), ಕೃಷ್ಣ, ಗಣಪತಿ ಆಶೀರ್ವಾದದ ಜೊತೆಗೆ ನಿಮ್ಮ ಮಾಧ್ಯಮದವರ ಆಶೀರ್ವಾದವೂ ಬೇಕು ಅಂತ ಹಾಸ್ಯ ಚಟಾಕಿ ಹಾರಿಸಿದರು. ಮುಂದುವರಿದು… ಕೃಷ್ಣಮಠದಿಂದ ಈ ಹಿಂದೆಯೇ ಆಹ್ವಾನ ಇತ್ತು. ಬಹಳ ವರ್ಷದಿಂದ ಈ ಸರ್ಕಾರ ಬಂದ್ಮೇಲೆ ಆಹ್ವಾನ ಮಾಡುತ್ತಿದ್ದರು. ಕೃಷ್ಣಮಠಕ್ಕೆ ಬರಲು ಸಾಧ್ಯವಾಗಿರಲಿಲ್ಲ ಇಂದು ಬಂದಿದ್ದೇನೆ ಎಂದರು. ಇದನ್ನೂ ಓದಿ: ಬುರುಡೆ ಕೇಸ್‌ಗೆ ಬೆಂಗಳೂರು ಲಿಂಕ್ – ಚಿನ್ನಯ್ಯ ನನ್ನ ಮನೆಯಲ್ಲಿದ್ದ, ತಲೆಬುರುಡೆ ತಂದಿದ್ದ; ʻಪಬ್ಲಿಕ್ ಟಿವಿʼಗೆ ಜಯಂತ್ ಸ್ಫೋಟಕ ಹೇಳಿಕೆ

    ಇನ್ನೂ ಧರ್ಮಸ್ಥಳದಲ್ಲಿ ಜೆಡಿಎಸ್, ಬಿಜೆಪಿ (BJP – JDS) ಸಮಾವೇಶ ವಿಚಾರ ಕುರಿತು ಮಾತನಾಡಿ, ಜೆಡಿಎಸ್ ಬಿಜೆಪಿಗೆ ಬೇರೆ ವೃತ್ತಿ ಇಲ್ಲ. ಎರಡೂ ಪಕ್ಷಗಳು ಬದುಕಿನ ಬಗ್ಗೆ ನೋಡಲ್ಲ. ಭಾವನೆ ಮೇಲೆ ಧರ್ಮದ ಮೇಲೆ ರಾಜಕಾರಣ ಮಾಡುತ್ತಾರೆ ಎಂದು ನುಡಿದರು. ಇದನ್ನೂ ಓದಿ: ದೇವರ ವಿರುದ್ಧವೇ ಸೇಡು – 10 ವರ್ಷಗಳಿಂದ ದೇವಸ್ಥಾನದ ಹುಂಡಿ ಹಣ ಕದಿಯುತ್ತಿದ್ದ HIV ಸೋಂಕಿತ ಅರೆಸ್ಟ್

    ಬಿಹಾರ ಚುನಾವಣೆಯಲ್ಲಿ ರಾಜ್ಯ ಕಾಂಗ್ರೆಸ್ ಪ್ರಚಾರ ಕುರಿತು ಮಾತನಾಡಿ, ಅದು ಸುಮ್ಮನೆ ಚರ್ಚೆ ನಡೆಯುತ್ತಿದೆ. ನಾನು ಬಿಹಾರ ಹೋಗಿದ್ದೀನಿ ನಾನು ಬಂದಿದ್ದೇನೆ. ಅವರು ಸಚಿವರ ಜೊತೆ ಹೋಗಿದ್ದಾರೆ, ನಾನು ಶಾಸಕರ ಜೊತೆ ಹೋಗಿದ್ದೇನೆ. ಕಾರ್ಯಕರ್ತರು, ಎಂಎಲ್‌ಎ, ಸಚಿವರು ಎಲ್ಲ ಒಂದೇ. ಎಲ್ಲರೂ ಪಕ್ಷದ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: ಧರ್ಮಸ್ಥಳ ಬುರುಡೆ ಕೇಸ್‌ಗೆ ಬೆಂಗಳೂರಿನ ನಂಟು – ತಿಮರೋಡಿ ಆಪ್ತ ಜಯಂತ್ ಮನೆ ಜಾಲಾಡಿದ SIT

  • ರಾಜ್ಯದ ಹಲವೆಡೆ ವರ್ಷಧಾರೆ – ಲಿಂಗನಮಕ್ಕಿ ಜಲಾಶಯದಿಂದ 50,000 ಕ್ಯೂಸೆಕ್ ನೀರು ರಿಲೀಸ್‌

    ರಾಜ್ಯದ ಹಲವೆಡೆ ವರ್ಷಧಾರೆ – ಲಿಂಗನಮಕ್ಕಿ ಜಲಾಶಯದಿಂದ 50,000 ಕ್ಯೂಸೆಕ್ ನೀರು ರಿಲೀಸ್‌

    ಬೆಂಗಳೂರು: ರಾಜ್ಯದಲ್ಲಿ ಮಳೆಯ ಆರ್ಭಟ ಮುಂದುವರಿದಿದೆ. ಗಡಿ ಜಿಲ್ಲೆ ಬೀದರ್‌ನಲ್ಲಿ ಮಳೆಯಿಂದಾಗಿ ಅವಾಂತರ ಸೃಷ್ಟಿಯಾಗಿದೆ. ಔರಾದ್ ತಾಲೂಕಿನ ಎಕಂಬಾ ಗ್ರಾಮದಲ್ಲಿರುವ ಕೆರೆ ಹೊಡೆದು ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ.

    ಗ್ರಾಮದ ಕೆಲವು ಮನೆಗಳಿಗೂ ನೀರು ನುಗ್ಗಿದೆ. ಚಿಟ್ಟವಾಡಿ ಬಳಿ ರಸ್ತೆಯ ಮೇಲೆ ಮೊಣಕಾಲುದ್ದ ನೀರು ನಿಂತಿವೆ. ಬೀದರ್‌ನಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಬೀದರ್‌ನಲ್ಲಿ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ.

    ಕಲಬುರಗಿಯ ಜೇವರ್ಗಿ ಪಟ್ಟಣದಲ್ಲಿ ಮಳೆ ನೀರು ಮನೆಗೆ ನುಗ್ಗಿದೆ. ಮನೆಯಲ್ಲಿದ್ದ ದವಸ ಧಾನ್ಯಗಳು ನೀರುಪಾಲಾಗಿದೆ. ಯಾದಗಿರಿಯಲ್ಲಿ ನೀರಿನಲ್ಲಿ ಸಿಲುಕಿದ್ದ ಹಸುವೊಂದನ್ನು ಗ್ರಾಮಸ್ಥರು ರಕ್ಷಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾದ್ಯಂತ ಮಳೆ ಹಿನ್ನಲೆ ಅಂಗನವಾಡಿಯಿಂದ ಪ್ರೌಢ ಶಾಲೆಯವರೆಗೆ ಜಿಲ್ಲಾಡಳಿತ ರಜೆಘೋಷಿಸಿದೆ.

    ಉಡುಪಿಯಲ್ಲೂ ಧಾರಾಕಾರ ಮಳೆ ಸುರಿಯುತ್ತಿದ್ದು ಅಂಗನವಾಡಿ, ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಇತ್ತ ಹೊನ್ನಾವರದ ಗೇರುಸೊಪ್ಪ ಹಾಗೂ ಲಿಂಗನಮಕ್ಕಿ ಆಣೆಕಟ್ಟಿನಿಂದ ನೀರು ಬಿಡುಗಡೆ ಮಾಡಲಾಗಿದೆ.

    ಗೇರುಸೊಪ್ಪ ಆಣೆಕಟ್ಟಿನಿಂದ 13,192 ಕ್ಯೂಸೆಕ್, ಲಿಂಗನಮಕ್ಕಿ ಜಲಾಶಯದಿಂದ 50,000 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಜೋಗ ಜಲಪಾತ ಕಣ್ಮನ ಸೆಳೀತಿದೆ.

  • ಕೃಷ್ಣನ ಊರಿನಲ್ಲಿ ಗಣಪತಿಯ ಹಬ್ಬ – ಎಐ ಪರಿಕಲ್ಪನೆಯಲ್ಲಿ ಮೂಡಿದ ಬಾಲ ಗಣಪ

    ಕೃಷ್ಣನ ಊರಿನಲ್ಲಿ ಗಣಪತಿಯ ಹಬ್ಬ – ಎಐ ಪರಿಕಲ್ಪನೆಯಲ್ಲಿ ಮೂಡಿದ ಬಾಲ ಗಣಪ

    – ಕಿನ್ನಿಮೂಲ್ಕಿ ಪಂಚಮುಖಿ ಹೇರಂಭಾ ಗಣಪತಿ

    ಉಡುಪಿ: ದೇವಾಲಯಗಳ ನಗರಿ ಉಡುಪಿಯಲ್ಲಿ ಗಣೇಶನ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಬೆಳ್ಳಂಬೆಳಗ್ಗೆ ಕಲಾವಿದರ ಮನೆಯಿಂದ ಪೂಜೆ ಮಾಡಿ ವಿಶೇಷ ಗಣಪತಿಗಳನ್ನು ಮನೆ, ಪೆಂಡಾಲ್ ಗಳಿಗೆ ತೆಗೆದುಕೊಂಡು ಹೋಗಲಾಗುತ್ತಿದೆ.

    ಕಿನ್ನಿಮೂಲ್ಕಿಯ ಕಾರ್ತಿಕ್ ಕೌಶಿಕ್ ಸಹೋದರರು ಕೃಷ್ಣನನ್ನು ಗಣಪತಿಯನ್ನು ಸೃಷ್ಟಿ ಮಾಡಿದ್ದಾರೆ. ಎಐ ಫೋಟೋದಿಂದ ಪ್ರೇರಣೆಯಿಂದ ಗಣಪತಿಯನ್ನು ರಚಿಸಿದ್ದಾರೆ. ಕೈಯಲ್ಲಿ ಕಬ್ಬು ಹಿಡಿದು ಬಾಲ ಗಣಪತಿ ಕಂಗೊಳಿಸುತ್ತಿದ್ದಾನೆ.

    ಈ ನಡುವೆ 20ನೇ ವರ್ಷದ ಕಿನ್ನಿಮೂಲ್ಕಿ ಗಣೇಶೋತ್ಸವಕ್ಕೆ ಪಂಚಮುಖಿ ಗಣಪತಿ ರಚಿಸಲಾಗಿದೆ. ಐದು ಮುಖಗಳ ಸುಂದರ ಗಣಪತಿ ಎಲ್ಲರನ್ನ ಸೆಳೆಯುತ್ತಿದ್ದಾನೆ.

  • ಉಜಿರೆಯಲ್ಲಿ ಇದ್ದಿದ್ದಕ್ಕೆ ಬಚಾವಾದೆ, ಉಡುಪಿಯಲ್ಲಿ ಇದ್ದಿದ್ರೆ ಮಲ್ಪೆ ಬೀಚಲ್ಲಿ ಫುಟ್ಬಾಲ್ ಆಡಿಸ್ತಿದ್ದೆ – ಸಮೀರ್‌ಗೆ ಯಶ್‌ಪಾಲ್ ಸುವರ್ಣ ಎಚ್ಚರಿಕೆ

    ಉಜಿರೆಯಲ್ಲಿ ಇದ್ದಿದ್ದಕ್ಕೆ ಬಚಾವಾದೆ, ಉಡುಪಿಯಲ್ಲಿ ಇದ್ದಿದ್ರೆ ಮಲ್ಪೆ ಬೀಚಲ್ಲಿ ಫುಟ್ಬಾಲ್ ಆಡಿಸ್ತಿದ್ದೆ – ಸಮೀರ್‌ಗೆ ಯಶ್‌ಪಾಲ್ ಸುವರ್ಣ ಎಚ್ಚರಿಕೆ

    ಉಡುಪಿ: ನೀನು ಉಜಿರೆಯಲ್ಲಿ (Mangaluru) ಇದ್ದದ್ದಕ್ಕೆ ಬಚಾವಾದೆ, ಉಡುಪಿಯಲ್ಲಿ ಇದ್ದಿದ್ರೆ ಮಲ್ಪೆ ಬೀಚಿನಲ್ಲಿ ಫುಟ್ಬಾಲ್ ಆಡಿಸುತ್ತಿದ್ದೆ ಎಂದು ಶಾಸಕ ಯಶ್‌ಪಾಲ್ ಸುವರ್ಣ (Yashpal Suvarna) ಯೂಟ್ಯೂಬರ್ ಸಮೀರ್‌ಗೆ (Youtuber Sameer) ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.

    `ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ ಅವರು, ಯೂಟ್ಯೂಬರ್ ಸಮೀರ್‌ಗೆ ನೇರ ಎಚ್ಚರಿಕೆ ಕೊಡುತ್ತೇನೆ. ನೀನು ಉಜಿರೆಯಲ್ಲಿ ಇದ್ದದ್ದಕ್ಕೆ ಬಚಾವಾದೆ. ಉಡುಪಿಯಲ್ಲಿ ಇರುತ್ತಿದ್ದರೆ ಮಲ್ಪೆ ಬೀಚಿನಲ್ಲಿ ಫುಟ್ಬಾಲ್ ಆಡಿಸುತ್ತಿದ್ದೆ. ನಿನ್ನನ್ನು ನಾವು ಫುಟ್ಬಾಲ್ ಮಾಡಿ ಆಡಿಸುತ್ತಿದ್ದೆವು. ಅಧಿವೇಶನ ಮುಗಿದ ಮೇಲೆ ಬರುತ್ತೇನೆ. ಸಮೀರ್ ಬಗ್ಗೆ ಒಳ್ಳೆಯ ಪ್ಲ್ಯಾನ್‌ ಮಾಡಿ, ಆತನನ್ನು ರಾಜ್ಯದಿಂದ ಓಡಿಸುತ್ತೇವೆ. ಕಾಂಗ್ರೆಸ್ ಹೈಕಮಾಂಡ್‌ನ ಒತ್ತಡದಿಂದ ಆತ ಬಂಧನವಾಗಿಲ್ಲ. ನಮ್ಮ ಸರ್ಕಾರ ಇರಲಿ, ಇರದೇ ಇರಲಿ. ನಮ್ಮದು ಹಿಂದೂ ಸಮಾಜದ ಪರ ವಾದ. ನಮ್ಮದು ಹಿಂದುತ್ವದ ಫ್ಯಾಕ್ಟರಿ, ಹಿಂದು ಸಮಾಜವನ್ನು ಒಡೆಯಲು ಸಾಧ್ಯವಿಲ್ಲ ಎಂದು ಕಿಡಿಕಾರಿದರು.ಇದನ್ನೂ ಓದಿ: ಸುಜಾತಾ ಭಟ್‌ರನ್ನು ಮೊದಲು ಪೊಲೀಸರು ವಶಕ್ಕೆ ಪಡೆದ ವಿಚಾರಣೆ ನಡೆಸಬೇಕು: ವಾಸಂತಿ ಸಹೋದರ ಒತ್ತಾಯ

    ಅಣ್ಣಪ್ಪ ಪಂಜುರ್ಲಿ ದೈವದ ಅನುಗ್ರಹವಾಗಿದೆ. ದೇವರ ಮಧ್ಯಸ್ಥಿಕೆಯಲ್ಲಿ ಎಲ್ಲ ಇತ್ಯರ್ಥ ಆಗುತ್ತದೆ. ಬಿಜೆಪಿ ಹೋರಾಟ ಒಂದು ಭಾಗ ಮಾತ್ರ. ಅಣ್ಣಪ್ಪ ಪಂಜುರ್ಲಿ ಎಲ್ಲರ ಮನೆಯ ದೇವರು. ಮೊಗವೀರ ಸಮುದಾಯದ ಪ್ರಾರ್ಥನೆ ಫಲ ಕೊಟ್ಟಿದೆ. ಕೋಟ್ಯಂತರ ದೈವಭಕ್ತರ ಪ್ರಾರ್ಥನೆ ಫಲಿಸಿದೆ. ಪರಶುರಾಮನ ಸೃಷ್ಟಿಯಲ್ಲಿ ಧರ್ಮಕ್ಕೆ ಗೆಲುವಾಗಿದೆ. ಮಂಜುನಾಥ ಸ್ವಾಮಿ, ಅಣ್ಣಪ್ಪ ಸ್ವಾಮಿ ಕಣ್ಣು ಬಿಟ್ಟಿದ್ದಾರೆ. ಉಡುಪಿ ಕೃಷ್ಣ ಮುಖ್ಯಪ್ರಾಣ ಅನ್ಯಾಯಕ್ಕೆ ಶಿಕ್ಷೆ ಕೊಟ್ಟಿದ್ದಾರೆ ಎಂದು ಹೇಳಿದರು.

    ಹಿಂದೂ ಧರ್ಮದ ಷಡ್ಯಂತ್ರಕ್ಕೆ ಫಲಿತಾಂಶ ಹೊರಬೀಳಬೇಕಿದೆ. ಹಣಕಾಸಿನ ವಿಚಾರದಲ್ಲಿ ಧರ್ಮದ ಅವಹೇಳನಕ್ಕೆ ಶಿಕ್ಷೆ ಪ್ರಾಪ್ತಿಯಾಗಿದೆ. ಹಿಂದೂ ಧರ್ಮವನ್ನು ತನ್ನ ಸ್ವಾರ್ಥಕ್ಕಾಗಿ ಬಳಸಿಕೊಂಡವರು ಶಿಕ್ಷೆ ಅನುಭವಿಸುತ್ತಿದ್ದಾರೆ. ಹಿಂದೆ ಬ್ರಿಟಿಷರ ದಬ್ಬಾಳಿಕೆ ನಡೆಯುತ್ತಿತ್ತು. ಈಗ ಕಮ್ಯುನಿಸ್ಟರ ಮಾನಸಿಕತೆ ದಬ್ಬಾಳಿಕೆ ಮಾಡುತ್ತಿದೆ. ಮತಾಂತರದ ದೊಡ್ಡ ಷಡ್ಯಂತ್ರವಿದು, ಸಂಸದ ಶಶಿಕಾಂತ್ ಸೆಂಥಿಲ್ ವಿರುದ್ಧ ಸಹ ವಿಚಾರಣೆಯಾಗಬೇಕು ಎಂದು ಆಗ್ರಹಿಸಿದರು.ಇದನ್ನೂ ಓದಿ: ಬೆಂಗಳೂರು – ಸಿಗಂದೂರು ನಡುವೆ ಕೆಎಸ್ಆರ್‌ಟಿಸಿ ನಾನ್ ಎಸಿ ಸ್ಲೀಪರ್ ಬಸ್ ಸಂಚಾರ ಆರಂಭ