Tag: ಉಡುಪಿ

  • ಚಲಿಸುತ್ತಿದ್ದ ರೈಲಿನಲ್ಲಿ ಪಿಸ್ತೂಲ್ ತೋರಿಸಿ 4.11ಕಿಲೋ ಚಿನ್ನ ದರೋಡೆ!

    ಚಲಿಸುತ್ತಿದ್ದ ರೈಲಿನಲ್ಲಿ ಪಿಸ್ತೂಲ್ ತೋರಿಸಿ 4.11ಕಿಲೋ ಚಿನ್ನ ದರೋಡೆ!

    ಉಡುಪಿ: ಚಲಿಸುತ್ತಿದ್ದ ರೈಲಿನಲ್ಲಿ ಪಿಸ್ತೂಲ್ ತೋರಿಸಿ ಚಿನ್ನ ದರೊಡೆ ಮಾಡಿದ ಘಟನೆ ಉಡುಪಿಯಲ್ಲಿ ನಡೆದಿದೆ.

    ಮುಂಬೈನಿಂದ ತಿರುವನಂತಪುರಕ್ಕೆ ತೆರಳುತ್ತಿದ್ದ ನೇತ್ರಾವತಿ ಎಕ್ಸ್ ಪ್ರೆಸ್ ರೈಲಿನಲ್ಲಿ ಈ ಘಟನೆ ನಡೆದಿದೆ. ಉಡುಪಿ ಜಿಲ್ಲೆಯ ಗಡಿಭಾಗ ಪಡುಬಿದ್ರೆ ಗ್ರಾಮವನ್ನು ಹಾದು ಹೋಗುತ್ತಿದ್ದ ವೇಳೆ ಚಿನ್ನದ ದರೋಡೆ ನಡೆದಿದೆ.

    S7 ಸ್ಲೀಪರ್ ಕೋಚ್ ನಿಂದ ರಾಜೇಂದ್ರ ಸಿಂಗ್ ಎಂಬವರನ್ನು ಆಗಂತುಕರ ತಂಡವೊಂದು ಸೀಟಿನಿಂದ ಹೊರ ಎಳೆದಿದೆ. ಬಳಿಕ ಚೂರಿ, ಪಿಸ್ತೂಲ್ ತೋರಿಸಿ ಸಿಂಗ್ ಕೈಯಲ್ಲಿದ್ದ ಸೂಟ್ ಕೇಸ್ ಎಳೆದುಕೊಂಡು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಸೂಟ್ ಕೇಸಲ್ಲಿ 4.11 ಕಿಲೋ ಚಿನ್ನದೊಡವೆಗಳಿತ್ತು ಅಂತ ಸಿಂಗ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

    ಸದ್ಯ ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್ ರೈಲು ನಿಲ್ದಾಣದಿಂದ ಪರಾರಿಯಾಗಿರೋದಾಗಿ ರಾಜೇಂದ್ರ ಸಿಂಗ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಉಡುಪಿ ಜಿಲ್ಲೆಯ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಾರ್ಕಳ ಎಎಸ್ಪಿ ಹೃಷಿಕೇಷ್ ನೇತೃತ್ವದಲ್ಲಿ ಮೂರು ತಂಡ ರಚನೆ ಮಾಡಲಾಗಿದೆ.

    ಆರೋಪಿಗಳು ಉಡುಪಿ-ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಭಾಗದಲ್ಲಿ ದರೋಡೆ ಕೃತ್ಯ ಎಸಗಿದ್ದಾರೆ. ಉಡುಪಿ ಎಸ್.ಪಿ ಡಾ. ಸಂಜೀವ ಪಾಟೀಲ್ ಮಾಹಿತಿಗಳನ್ನು ತರಿಸಿಕೊಂಡಿದ್ದು, ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿರುವುದಾಗಿ ಹೇಳಿದ್ದಾರೆ.

    ರಾಜೇಂದ್ರ ಸಿಂಗ್ ಮುಂಬೈನ ಜ್ಯುವೆಲ್ಲರಿ ಕಂಪೆನಿಯೊಂದರ ಉದ್ಯೋಗಿ. ಗೋವಾ, ಕಾರವಾರ, ಉಡುಪಿ, ಮಂಗಳೂರು, ಕೇರಳ, ತಮಿಳ್ನಾಡಿನಲ್ಲಿರೋ ಚಿನ್ನದಂಗಡಿಗಳಿಗೆ ಒಡವೆಗಳ ಸಪ್ಲೈ ಮಾಡುತ್ತಿದ್ದರು. ಸಿಂಗ್ ಆರ್ಡರ್ ತೆಗೆದುಕೊಂಡು ಚಿನ್ನ ಕೊಡಲು ರೈಲು ಹತ್ತಿದ್ದರು. ಈ ಎಲ್ಲಾ ಮಾಹಿತಿಯಿದ್ದ ಯಾರೋ ಈ ಕೃತ್ಯ ಎಸಗಿದ್ದಾರೆ ಎಂದು ಹೇಳಲಾಗುತ್ತಿದೆ.

  • ಅತ್ತೆ, ಮಾವನಿಗೆ ಸಟ್ಟುಗ ಬಿಸಿಮಾಡಿ ಬರೆ ಹಾಕಿ ಚಿತ್ರಹಿಂಸೆ ಕೊಟ್ಟಿದ್ದ ಸೊಸೆ ಅರೆಸ್ಟ್

    ಅತ್ತೆ, ಮಾವನಿಗೆ ಸಟ್ಟುಗ ಬಿಸಿಮಾಡಿ ಬರೆ ಹಾಕಿ ಚಿತ್ರಹಿಂಸೆ ಕೊಟ್ಟಿದ್ದ ಸೊಸೆ ಅರೆಸ್ಟ್

    ಉಡುಪಿ: ಅತ್ತೆ ಮಾವನನ್ನು ಚಿತ್ರಹಿಂಸೆ ಕೊಲೆಯತ್ನ ನಡೆಸಿದ್ದ ಸೊಸೆಯನ್ನ ಮಲ್ಪೆ ಠಾಣಾ ವ್ಯಾಪ್ತಿಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಹೌದು, ಹಲ್ಲೆಗೊಳಗಾದವರ ಮಕ್ಕಳಿಂದ ಅಶ್ವಿನಿ ಪೈ ವಿರುದ್ಧ ಕೇಸ್ ದಾಖಲಾಗಿತ್ತು. ದೂರಿನ ಹಿನ್ನೆಲೆಯಲ್ಲಿ ಮಲ್ಪೆಯ ನಿವಾಸದಲ್ಲಿದ್ದ ಅಶ್ವಿನಿಯನ್ನು ಪೊಲೀಸರು ಬಂಧಿಸಿದ್ದಾರೆ.

    ಏನು ಇದು ಪ್ರಕರಣ?
    ಉಡುಪಿಯ ತೆಂಕ ನಿಡಿಯೂರು ಗ್ರಾಮದ ಕೆಳಾರ್ಕಳ ಬೆಟ್ಟುವಿನಲ್ಲಿ ಮಾವ ವೆಂಕಟೇಶ ಪೈ, ಅತ್ತೆ ವೀಣಾ ಪೈ ಅವರಿಗೆ ಸೊಸೆ ಅಶ್ವಿನಿ ಪೈ ಮನಬಂದಂತೆ ಥಳಿಸಿದ್ದಳು. ಸಟ್ಟುಗ ಬಿಸಿ ಮಾಡಿ ಮೈಮೇಲೆಲ್ಲಾ ಬರೆ ಎಳೆದಿದ್ದಳು. ನೆಲಕ್ಕುರುಳಿಸಿ ಕಾಲಿಂದ ಒದ್ದು, ಮನ ಬಂದಂತೆ ಹಲ್ಲೆ ಮಾಡಿದ್ದಳು.

    ಸೊಸೆಯ ಅಟ್ಟಹಾಸದಿಂದ ಭಯಗೊಂಡು ಮಗ ಲಕ್ಷ್ಮಣ ಪೈ ಮನೆಯಿಂದ ಇನ್ನೊಬ್ಬ ಮಗ ರಮಾನಾಥ ಪೈ ಮನೆಗೆ ಶಿಫ್ಟ್ ಆಗಿದ್ದರು. ಈ ಸಂಬಂಧವಾಗಿ ಅವಾಚ್ಯ ಶಬ್ಧಗಳಿಂದ ನಿಂದನೆ ಮತ್ತು ಕೊಲೆಯತ್ನ ದೂರು ಮಲ್ಪೆ ಠಾಣೆಯಲ್ಲಿ ದಾಖಲಾಗಿತ್ತು.

  • ಬಾರ್ಕೂರು ಸಂಸ್ಥಾನದಲ್ಲಿ ನ್ಯಾಯ ಗಂಟೆ ಬಾರಿಸಿದ ಮೇಟಿ

    ಬಾರ್ಕೂರು ಸಂಸ್ಥಾನದಲ್ಲಿ ನ್ಯಾಯ ಗಂಟೆ ಬಾರಿಸಿದ ಮೇಟಿ

    ಉಡುಪಿ: ರಾಸಲೀಲೆ ಪ್ರಕರಣದಿಂದಾಗಿ ಸಚಿವ ಸ್ಥಾನ ಕಳೆದುಕೊಂಡಿದ್ದ ಎಚ್‍ವೈ ಮೇಟಿ ತನಗೆ ಅನ್ಯಾಯವಾಗಿದೆ ಅಂತ ದೈವಗಳ ಮೊರೆ ಹೋಗಿದ್ದಾರೆ.

    ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಬಾರ್ಕೂರು ಮಹಾಸಂಸ್ಥಾನಕ್ಕೆ ಇಂದು ಭೇಟಿ ನೀಡಿ ಕುಂಡೋದರ ದೈವದ ಗುಡಿಯ ಮುಂದೆ ನಿಂತು ದೂರು ಗಂಟೆ ಹೊಡೆದರು. ತನಗೆ ಅನ್ಯಾಯವಾಗಿದೆ. ನ್ಯಾಯ ಕೊಡಿಸಿ ಎಂದು ದೈವದ ಮುಂದೆ ಪ್ರಾರ್ಥನೆ ಮಾಡಿಕೊಂಡಿದ್ದಾರೆ.

    ವಿಶ್ವಭಾರತಿ ಸಂತೋಷ್ ಗುರೂಜಿ ಬಾರ್ಕೂರು ಸಂಸ್ಥಾನದ ಅಧಿಕಾರ ವಹಿಸಿಕೊಂಡ ನಂತರ ಪುರಾತನ ಕಾಲದ ಸಂಪ್ರದಾಯವನ್ನು ಮತ್ತೆ ಆರಂಭಿಸಿದ್ದಾರೆ. ತುಳುನಾಡನ್ನು ಆಳಿದ ಪಾಂಡ್ಯ ಅರಸರ ಕಾಲದಲ್ಲಿ ಇಂತದ್ದೊಂದು ನಂಬಿಕೆಯಿತ್ತು. ಯಾರಿಗಾದರೂ ಅನ್ಯಾಯವಾದ್ರೆ- ಮೋಸವಾದ್ರೆ- ಮನಸ್ಸಿನಲ್ಲಿ ಏನಾದ್ರು ಇಚ್ಛೆಗಳಿದ್ದರೆ ಅದನ್ನು ನೆನೆದುಕೊಂಡು ದೂರು ಗಂಟೆ ಬಾರಿಸಲಾಗುತ್ತಿತ್ತು. ಕುಂಡೋದರ ದೈವದ ಮುಂದೆ ನಿಂತು ತಮ್ಮ ನೋವನ್ನು ತೋಡಿಕೊಳ್ಳಲಾಗುತ್ತಿತ್ತು. ಇದೇ ಸಂಪ್ರದಾಯ ನಂಬಿಕೆಯನ್ನು ಮತ್ತೆ ಬಾರ್ಕೂರು ಸಸ್ಥಾನದ ಜೀರ್ಣೋದ್ಧಾರದ ನಂತರ ಆರಂಭಿಸಲಾಗಿದ್ದು ಮೇಟಿ ದೂರು ಗಂಟೆ ಬಾರಿಸಿದರು.

    ನಂತೋಷ ಭಾರತಿ ಗುರೂಜಿ ಸಮ್ಮುಖದಲ್ಲಿ ನಡೆದ ದೈವಪಾತ್ರಿಯ ದರ್ಶನ ಸೇವೆಯಲ್ಲಿ ಪಾಲ್ಗೊಂಡರು. ಸಂಸ್ಥಾನದ ಪ್ರಸಾದ ಪಡೆದುಕೊಂಡು ಸಮಸ್ಯೆಗಳಿಂದ ಹೊರಗೆ ಬರುವಂತೆ ಬೇಡಿಕೊಂಡಿದ್ದಾರೆ. ಇದಕ್ಕೂ ಮೊದಲು ಎಚ್ ವೈ ಮೇಟಿ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ತೆರಳಿ ದೇವಿಯ ದರ್ಶನಗೈದು ಬಂದಿದ್ದರು. ಗೆಳೆಯರು ಮತ್ತು ಸಂಬಂಧಿಕರ ಜೊತೆ ರಾಜ್ಯದ ಪ್ರಮುಖ ದೇವಸ್ಥಾನಗಳ ಭೇಟಿ ಕಾರ್ಯದಲ್ಲಿ ತೊಡಗಿದ್ದಾರೆ.

     

  • ಸಿಎಂ ಸಿದ್ದರಾಮಯ್ಯ ಎಲ್ಲೇ ಸ್ಪರ್ಧಿಸಿದ್ರೂ ಸೋಲು ಗ್ಯಾರೆಂಟಿ: ಶೋಭಾ ಕರಂದ್ಲಾಜೆ

    ಸಿಎಂ ಸಿದ್ದರಾಮಯ್ಯ ಎಲ್ಲೇ ಸ್ಪರ್ಧಿಸಿದ್ರೂ ಸೋಲು ಗ್ಯಾರೆಂಟಿ: ಶೋಭಾ ಕರಂದ್ಲಾಜೆ

    ಉಡುಪಿ: ಮುಂಬರುವ ಚುನಾವಣೆಯಲ್ಲಿ ಸಿಎಂ ಸಿದ್ದರಾಮಯ್ಯ ಎಲ್ಲೇ ಸ್ಪರ್ಧಿಸಿದರೂ ಅವರಿಗೆ ಸೋಲು ಗ್ಯಾರೆಂಟಿ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

    ಉಡುಪಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ತಮ್ಮ ಕ್ಷೇತ್ರ ಬದಲು ಮಾಡಲೇಬೇಕು. ಖಂಡಿತಾ ಅವರು ಬೇರೆ ಕಡೆ ಹೋಗಲೇಬೇಕು. ವರುಣಾ ಕ್ಷೇತ್ರ ಸಿದ್ದರಾಮಯ್ಯರ ಕೈತಪ್ಪಿಯಾಗಿದೆ. ಹೀಗಾಗಿ ಅವರು ಎಲ್ಲೇ ಸ್ಪರ್ಧಿಸಿದರೂ ಅವರಿಗೆ ಸೋಲು ಖಚಿತ ಎಂದು ಹೇಳಿದರು.

    ಬಿಎಸ್ ಯಡಿಯೂರಪ್ಪ ಅವರು ಉತ್ತರ ಕರ್ನಾಟಕದಿಂದ ಕಣಕ್ಕೆ ಇಳಿಯಲಿದ್ದಾರೆ ಎನ್ನುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಬೇರೆ ಬೇರೆ ಜಿಲ್ಲೆಯಿಂದ ಬೇಡಿಕೆ ಬರುತ್ತಿದೆ ಅವರು ಎಲ್ಲಿ ಸ್ಪರ್ಧಿಸಬೇಕು ಅನ್ನೋದನ್ನ ಇನ್ನೂ ನಿರ್ಧಾರ ಮಾಡಿಲ್ಲ. ಪ್ರೀತಿಯ ಸ್ವಕ್ಷೇತ್ರ ಶಿವಮೊಗ್ಗವನ್ನು ಬಿಡಲು ಅವರಿಗೆ ಮನಸ್ಸಿಲ್ಲ. ಸ್ಪರ್ಧೆಯ ಬಗ್ಗೆ ಯಡಿಯೂರಪ್ಪ ಬಹಳ ದ್ವಂದ್ವದಲ್ಲಿದ್ದಾರೆ. ಅವರು ಎಲ್ಲೇ ನಿಂತರೂ ಬಹುಮತದಿಂದ ಗೆಲ್ಲುತ್ತಾರೆ ಎಂದರು.

  • ಸೂರ್ಯನ ಶಾಖದಿಂದಲೇ ಓಡುತ್ತೆ ಈ ಕಾರ್: ಮಣಿಪಾಲದ ಎಂಜಿನಿಯರಿಂಗ್ ವಿದ್ಯಾರ್ಥಿಗಳ ಹೊಸ ಆವಿಷ್ಕಾರ

    ಸೂರ್ಯನ ಶಾಖದಿಂದಲೇ ಓಡುತ್ತೆ ಈ ಕಾರ್: ಮಣಿಪಾಲದ ಎಂಜಿನಿಯರಿಂಗ್ ವಿದ್ಯಾರ್ಥಿಗಳ ಹೊಸ ಆವಿಷ್ಕಾರ

    ಉಡುಪಿ: ನಮ್ಮ ದೇಶದಲ್ಲಿ ಪೆಟ್ರೋಲ್ ಬೆಲೆ ಗಗನಕ್ಕೇರುತ್ತಿದೆ. ಬೇಕಾದಷ್ಟು ಕರೆಂಟಾದ್ರೂ ಇದ್ಯಾ ಅಂದ್ರೆ ಅದೂ ಗಗನ ಕುಸುಮ. ಎಲ್ಲದಕ್ಕೂ ಪರ್ಯಾಯ ಹುಡುಕುವ ಕಾಲ ಬಂದಿದೆ. ಹೀಗಿರುವಾಗ ಎಲ್ಲರೂ ಉಚಿತವಾಗಿ ಸಿಗುವ ಸೂರ್ಯ ಶಕ್ತಿಯತ್ತ ಮುಖ ಮಾಡುತ್ತಿದ್ದು, ಮಣಿಪಾಲದ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಸೋಲಾರ್ ಕಾರನ್ನು ತಯಾರು ಮಾಡಿದ್ದಾರೆ.

    ನಾಲ್ಕು ಮಂದಿ ಆರಾಮವಾಗಿ ಓಡಾಡಬಹುದಾದ ಈ ಕಾರು ಸಂಪೂರ್ಣವಾಗಿ ಸೌರಶಕ್ತಿಯಿಂದಲೇ ಓಡುತ್ತೆ. ಕಾರಿನ ಮೇಲೆ, ಮುಂದೆ-ಹಿಂಭಾಗ ಸೋಲಾರ್ ಪ್ಯಾನಲ್ ಜೋಡಿಸಿದ್ದಾರೆ. ಕಾರಿನ ಒಳಗೆ ಬ್ಯಾಟರಿ ಬ್ಯಾಕಪ್ ಇದೆ. ಈ ಮೂಲಕ ಸೋಲಾರ್ ಎನರ್ಜಿ ಸಂಗ್ರಹ ಆಗುತ್ತೆ.

    ಒಂದು ಸಾರಿ ಕಾರೊಳಗಿರುವ ಬ್ಯಾಟರಿ ಫುಲ್ ಆದ್ರೆ ಮಿನಿಮಂ 100 ಕಿಲೋಮೀಟರ್ ಹೋಗ್ಬಹುದು. 40-50 ಸ್ಪೀಡಲ್ಲಿ ಹೋದ್ರೆ 180 ಕಿಲೋಮೀಟರ್ ದೂರ ಕ್ರಮಿಸಬಹುದು. ಸೂರ್ಯನ ಕಿರಣ 7 ಗಂಟೆ ನಿರಂತರವಾಗಿ ಕಾರಿನ ಮೇಲೆ ಬಿದ್ದರೆ ಮತ್ತೆ ಬ್ಯಾಟರಿ ತುಂಬಿಕೊಳ್ಳುತ್ತೆ. ಮೂರು ಗಂಟೆಯಲ್ಲಿ ವಿದ್ಯುತ್ತನ್ನು ಬ್ಯಾಟರಿಗೆ ಚಾರ್ಜ್ ಮಾಡುವ ವ್ಯವಸ್ಥೆಯನ್ನೂ ಕಾರೊಳಗೆ ಅಳವಡಿಸಲಾಗಿದೆ.

    ಎಲೆಕ್ಟ್ರಿಕಲ್, ಐಟಿ, ಮೆಕ್ಯಾನಿಕಲ್, ಏರೋನಾಟಿಕ್ ವಿಭಾಗದ ವಿದ್ಯಾರ್ಥಿಗಳು ಈ ಆವಿಷ್ಕಾರಕ್ಕೆ ಕೈಜೋಡಿಸಿದ್ದಾರೆ. ಚೀನಾ ಮತ್ತು ಜಪಾನ್‍ನಲ್ಲಿ ಒಬ್ಬ ಓಡಾಡುವ ಸೋಲಾರ್ ಕಾರು ತಯಾರು ಮಾಡುತ್ತಿದ್ದು, 3 ಕೋಟಿ ಕೋಟಿ ರೂಪಾಯಿ ಖರ್ಚಾಗಿದೆ. ಮಣಿಪಾಲ ವಿದ್ಯಾರ್ಥಿಗಳು 30 ಲಕ್ಷ ರೂಪಾಯಿಯಲ್ಲಿ ಈ ಸೋಲಾರ್ ಕಾರನ್ನು ತಯಾರಿಸಿದ್ದಾರೆ ಅಂತ ಪ್ರಧ್ಯಾಪಕ ಉಮಾನಂದ ಹೇಳಿದ್ದಾರೆ.

    ಅರ್ಧ ಕ್ವಿಂಟಾಲ್ ತೂಗುವ ಈ ಕಾರಿನ ಇಂಜಿನ್‍ನ ಅಳವಡಿಕೆ ಕೆಲಸ ಬಾಕಿಯಿದೆ. ಟೆಸ್ಟ್ ರೈಡ್‍ನಲ್ಲಿ ಕಾರು ಸಕ್ಸಸ್ಸಾಗಿದ್ದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಇತ್ತೀಚೆಗೆ ಹಸಿರು ಇಂಧನ ಅನಿವಾರ್ಯ ಎಂದು ಘೋಷಿಸಿದ್ದರು. ಈ ಹಿನ್ನೆಲೆಯಲ್ಲಿ ಎಂಐಟಿ ವಿದ್ಯಾರ್ಥಿಗಳ ಸಾಧನೆ ಹೆಚ್ಚಿನ ಮಹತ್ವ ಪಡೆದಿದೆ.

  • ಬಿಸಿ ಸಟ್ಟುಗದಲ್ಲಿ ಅತ್ತೆಗೆ ಬರೆ- ನೆಲಕ್ಕುರುಳಿಸಿ ಒದ್ದು ಹಿಂಸೆ ನೀಡಿದ ಸೊಸೆ

    ಬಿಸಿ ಸಟ್ಟುಗದಲ್ಲಿ ಅತ್ತೆಗೆ ಬರೆ- ನೆಲಕ್ಕುರುಳಿಸಿ ಒದ್ದು ಹಿಂಸೆ ನೀಡಿದ ಸೊಸೆ

    ಉಡುಪಿ: ಅತ್ತೆ ಸೊಸೆ ಜಗಳ ಮಾವನೋ- ಗಂಡನೇ ಮಧ್ಯಪ್ರವೇಶಿಸುವ ತನಕ ಅನ್ನೋ ಮಾತಿದೆ. ಆದ್ರೆ ಉಡುಪಿಯಲ್ಲೊಬ್ಬಳು ಕ್ರೂರಿ ಸೊಸೆ ರಾಕ್ಷಸ ಪ್ರವೃತ್ತಿ ಮೆರೆದಿದ್ದಾಳೆ. ಸಿನೆಮಾ- ಸೀರಿಯಲ್‍ಗಳಲ್ಲಿ ನೋಡೋ ಅತ್ತೆ ಸೊಸೆ ಜಗಳಕ್ಕಿಂತ ವಿಪರೀತ ಇದು.

    ಮನೆಯಲ್ಲಿದ್ದ ವೃದ್ಧ ಅತ್ತೆ- ಮಾವನಿಗೆ ಸೊಸೆ ಅಶ್ವಿನಿ ಪೈ ಮನಬಂದಂತೆ ಥಳಿಸಿದ್ದಾಳೆ. ಉಡುಪಿಯ ತೆಂಕ ನಿಡಿಯೂರು ಗ್ರಾಮದ ಕೆಳಾರ್ಕಳ ಬೆಟ್ಟುವಿನಲ್ಲಿ ಈ ಕೃತ್ಯ ನಡೆದಿದೆ. ಸಟ್ಟುಗ ಬಿಸಿ ಮಾಡಿ ಮೈಮೇಲೆಲ್ಲಾ ಬರೆ ಎಳೆದಿದ್ದಾಳೆ. ನೆಲಕ್ಕುರುಳಿಸಿ ಕಾಲಿಂದ ಒದ್ದು, ಮನ ಬಂದಂತೆ ಹಲ್ಲೆ ಮಾಡಿದ್ದಾಳೆ. ಮೊದಲೇ ವಯೋವೃದ್ಧರು ಸೊಸೆಯ ರಂಪಾಟದಿಂದ ದಿಗಿಲುಗೊಂಡಿದ್ದಾರೆ.

    ವೆಂಕಟೇಶ ಪೈ ಮತ್ತು ವೀಣಾ ಪೈ ಸೊಸೆಯ ಅಟ್ಟಹಾಸದಿಂದ ಭಯಗೊಂಡು ಮಗ ಲಕ್ಷ್ಮಣ ಪೈ ಮನೆಯಿಂದ ಇನ್ನೊಬ್ಬ ಮಗ ರಮಾನಾಥ ಪೈ ಮನೆಗೆ ಶಿಫ್ಟ್ ಆಗಿದ್ದಾರೆ. ಮಲ್ಪೆ ಪೊಲೀಸ್ ಠಾಣೆಯಲ್ಲಿ ಸೊಸೆ ಅಶ್ವಿನಿ ಪೈ ಮೇಲೆ ದೂರನ್ನು ನೀಡಿದ್ದಾರೆ. ಅವಾಚ್ಯ ಶಬ್ಧಗಳಿಂದ ನಿಂದನೆ ಮತ್ತು ಕೊಲೆಯತ್ನ ದೂರನ್ನು ಪೊಲೀಸರು ದಾಖಲು ಮಾಡಿಕೊಂಡಿದ್ದಾರೆ.

    ಪ್ರಕರಣದ ದಾಖಲಾದ ಬಳಿಕ ಆರೋಪಿ ಅಶ್ವಿನಿ ಪೈ ಮತ್ತು ಪತಿ ಲಕ್ಷ್ಮಣ ಪೈ ಈಗ ಮನೆಯಿಂದ ಕಾಣೆಯಾಗಿದ್ದಾರೆ. ಪೊಲೀಸರು ಆರೋಪಿಗಾಗಿ ಹುಡುಕಾಟ ಮಾಡುತ್ತಿದ್ದಾರೆ. ಎರಡು ದಿನಗಳ ಕಾಲ ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ವೆಂಕಟೇಶ್ ಪೈ ಮತ್ತು ವೀಣಾ ಪೈ ದಂಪತಿಯ ಮತ್ತಿಬ್ಬರು ಮಕ್ಕಳು ತಮ್ಮ ಜೊತೆ ಇರಿಸಿಕೊಂಡಿದ್ದಾರೆ. ಈ ಇಬ್ಬರು ವೃದ್ಧರ ಅವಸ್ಥೆಯನ್ನು ನೋಡಿದ್ರೆ ಎಂತಹವರಿಗೂ ಕರುಳು ಚುರ್ ಅನ್ನದೇ ಇರದು.

     

  • ಶಾಲೆಗೆ ಟಾಪರ್-ನರ್ಸಿಂಗ್ ಕೋರ್ಸ್ ಮಾಡಲು ವಿದ್ಯಾರ್ಥಿನಿಗೆ ಬೇಕಿದೆ ಸಹಾಯ

    ಶಾಲೆಗೆ ಟಾಪರ್-ನರ್ಸಿಂಗ್ ಕೋರ್ಸ್ ಮಾಡಲು ವಿದ್ಯಾರ್ಥಿನಿಗೆ ಬೇಕಿದೆ ಸಹಾಯ

    ಉಡುಪಿ: ಎಸ್‍ಎಸ್‍ಎಲ್‍ಸಿಯಲ್ಲಿ ಶಾಲೆಗೆ ಟಾಪರ್, ಪಿಯುಸಿಯಲ್ಲಿ 77 ಶೇಕಡಾ ಅಂಕ ಆದರೆ ಮುಂದಿನ ವಿದ್ಯಾಭ್ಯಾಸ ಮಾಡಲು ಹಣವಿಲ್ಲ. ಮೂರು ವರ್ಷದ ನರ್ಸಿಂಗ್ ಕೋರ್ಸ್ ಮಾಡಬೇಕೆಂಬ ಹೆಬ್ಬಯಕೆ ಇರುವ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬೇಳೂರು ಗ್ರಾಮದ ಪೂರ್ಣಿಮಾ ಬೆಳಕು ಕಾರ್ಯಕ್ರಮಕ್ಕೆ ಬಂದಿದ್ದಾರೆ.

    ಸರೋಜಾ ಮತ್ತು ನಟರಾಜ್ ದಂಪತಿಗೆ ಇಬ್ಬರು ಮಕ್ಕಳಲ್ಲಿ ಪೂರ್ಣಿಮಾ ಒಬ್ಬರು. ಕುಸಿದು ಬೀಳುವ ಪರಿಸ್ಥಿತಿಯಲ್ಲಿರುವ ಮನೆಯಲ್ಲಿ ಈ ಕುಟುಂಬ ವಾಸವಾಗಿದೆ. ಮನೆಗೆ ವಿದ್ಯುತ್ ಇಲ್ಲ, ಶೌಚಾಲಯ ಇಲ್ಲವದ ಬಡತನದ ಪರಿಸ್ಥಿತಿಲ್ಲಿ ಪೂರ್ಣಿಮಾ ವಾಸವಾಗಿದ್ದಾರೆ. ಮನೆಯಲ್ಲಿ ತಂದೆ ಮಾತ್ರ ದುಡಿಯೋದು ಹಾಗಾಗಿ ಮಗಳ ವಿದ್ಯಾಭ್ಯಾಸಕ್ಕೆ ಆರ್ಥಿಕ ಪರಿಸ್ಥಿತಿ ಅಡ್ಡಿ ಮಾಡುತ್ತಿದೆ.

    ಮೂರು ವರ್ಷದ ನರ್ಸಿಂಗ್ ಕೋರ್ಸ್ ಮಾಡಬೇಕೆಂಬ ಕನಸು ಕಾಣುತ್ತಿರುವ ಪೂರ್ಣಿಮಾಗೆ ಮಾತ್ರ ಆರ್ಥಿಕ ನೆರೆವು ಸಿಗುತ್ತಿಲ್ಲ. ವರ್ಷಕ್ಕೆ ಸುಮಾರು 60 ಸಾವಿರ ರೂಪಾಯಿಯ ಅವಶ್ಯಕತೆಯಿದೆ. ಕೋಟದ ಆಶ್ರೀತಾ ಕಾಲೇಜು 30 ಸಾವಿರ ರೂಪಾಯಿ ಹೊಂದಿಸಲು ಹೇಳಿ ಸೀಟು ಕಾಯ್ದಿರಿಸಿದ್ದಾರೆ. ಪೂರ್ಣಿಮಾ ಪಬ್ಲಿಕ್ ಟಿವಿಯ ಮೂಲಕ ಜೀವನದ ಬೆಳಕಿಗಾಗಿ ಮನವಿ ಮಾಡಿದ್ದಾರೆ.

    https://youtu.be/kRXrKuE121g

     

  • ಉಡುಪಿ ಕೃಷ್ಣಜನ್ಮಾಷ್ಟಮಿಗೆ ಅದ್ಧೂರಿ ತೆರೆ-ಫೋಟೋಗಳಲ್ಲಿ ನೋಡಿ

    ಉಡುಪಿ ಕೃಷ್ಣಜನ್ಮಾಷ್ಟಮಿಗೆ ಅದ್ಧೂರಿ ತೆರೆ-ಫೋಟೋಗಳಲ್ಲಿ ನೋಡಿ

    ಉಡುಪಿ: ಕಡೆಗೋಲು ಕೃಷ್ಣನ ನಗರಿ ಅನ್ನಬ್ರಹ್ಮನ ಕ್ಷೇತ್ರ ಉಡುಪಿಯಲ್ಲಿ ಎರಡು ದಿನಗಳ ಕಾಲ ನಡೆದ ಅಷ್ಟಮಿ ಸಂಪನ್ನಗೊಂಡಿದೆ. ಮಧ್ಯಾಹ್ನ ನಡೆದ ವಿಟ್ಲಪಿಂಡಿ ಮಹೋತ್ಸವದಲ್ಲಿ ಸಾವಿರಾರು ಮಂದಿ ಕೃಷ್ಣ ಭಕ್ತರು ರಥೋತ್ಸವದಲ್ಲಿ ಭಾಗಿಯಾದರು.

    ಚಿನ್ನದ ರಥದಲ್ಲಿ ವಿರಾಜಮಾನನಾದ ಕಡೆಗೋಲು ಶ್ರೀಕೃಷ್ಣನ ರಥದಿಂದ ಭಕ್ತ ಸಾಗರದತ್ತ ಸ್ವಾಮೀಜಿಗಳು ಪ್ರಸಾದವನ್ನು ಎಸೆದರು. ಕೃಷ್ಣನ ಮೂಲ ಪ್ರಸಾದವನ್ನು ಸ್ವೀಕರಿಸಲು ಸಾವಿರಾರು ಮಂದಿ ಭಕ್ತರು ಚಿನ್ನದ ರಥ ಮುಗಿಬಿದ್ದರು.

    ಚಿನ್ನದ ರಥೋತ್ಸವಕ್ಕೆ ರಂಗು ತುಂಬಿದ್ದು ಸಾವಿರಾರು ವೇಷಗಳು. ಸಾಂಪ್ರದಾಯಿಕ ಹುಲಿ ಕುಣಿತ , ಕರಡಿ ವೇಷ, ವಿಭಿನ್ನ ರಾಕ್ಷಸರು, ಗಮನ ಸೆಳೆದರು. ಶ್ರೀಕೃಷ್ಣನ ರಥೋತ್ಸವ ಸಾಗುತ್ತಿದ್ದಂತೆ ಮುಂಭಾಗದಲ್ಲಿ ಸಾಂಪ್ರದಾಯಿಕ ಗೊಲ್ಲ ವೇಷಧಾರಿಗಳು ಮೊಸರು ಕುಡಿಕೆಯನ್ನು ನಡೆಸಿದರು. ಶ್ರೀ ಕೃಷ್ಣ ಬೆಣ್ಣೆ ಪ್ರಿಯ , ಮೊಸರು- ತುಪ್ಪ ಪ್ರಿಯ ಅನ್ನುವ ವಾಡಿಕೆ ಇದೆ. ಈ ಹಿನ್ನೆಲೆಯಲ್ಲಿ ಈ ಮೊಸರು ಕುಡಿಕೆ ಉತ್ಸವವನ್ನು ಉಡುಪಿಯಲ್ಲಿ ಮಾತ್ರ ಸಾಂಪ್ರದಾಯಿಕವಾಗಿ ನಡೆಸಿಕೊಂಡು ಬರಲಾಗುತ್ತಿದೆ.

    ಮುಂಭಾಗದ ರತ್ನ ಖಚಿತ ರಥದಲ್ಲಿ ಚಂದ್ರಮೌಳೇಶ್ವರ ಮತ್ತು ಅನಂತೇಶ್ವರ ದೇವರನ್ನು ಹೊತ್ತು ಸಾಗಲಾಯಿತು. ಹಿಂಭಾಗದ ಚಿನ್ನದ ರಥದಲ್ಲಿ ಶ್ರೀಕೃಷ್ಣನ ಮೃಣ್ಮಯ ಮೂರ್ತಿಯನ್ನು ಮೆರವಣಿಗೆ ಮಾಡಲಾಯಿತು. ಎಂಟು ಮಠಗಳು ಇರುವ ರಥಬೀದಿಗೆ ಒಂದು ಸುತ್ತು ಬಂದ ನಂತರ ಶ್ರೀಕೃಷ್ಣನ ಮೃನ್ಮಯ ಮೂರ್ತಿಯನ್ನು ಮಠದ ಮಧ್ವ ಸರೋವರದಲ್ಲಿ ಜಲಸ್ತಂಭನ ಮಾಡಲಾಯಿತು. ಚಾತುರ್ಮಾಸ್ಯದ ಸಂದರ್ಭದಲ್ಲಿ ಭಗವಾನ್ ಶ್ರೀಕೃಷ್ಣ ಯೋಗ ನಿದ್ರೆಯಲ್ಲಿ ಇರುತ್ತಾರೆ ಎಂಬ ನಂಬಿಕೆ ಇದೆ. ಈ ಹಿನ್ನೆಲೆಯಲ್ಲಿ ಕೃಷ್ಣನ ಮೃಣ್ಮಯ ಮೂರ್ತಿಯನ್ನು ಮೆರವಣಿಗೆ ಮಾಡಲಾಯಿತು.

    ಮೆರವಣಿಗೆ ನಂತರ ಪೇಜಾವರ ಕಿರಿಯ ಶ್ರೀಪಾದರು ಶ್ರೀಕೃಷ್ಣನ ಮಣ್ಣಿನ ಮೂರ್ತಿಯನ್ನು ಮಧ್ವ ಸರೋವರದಲ್ಲಿ ಜಲಸ್ತಂಭನ ಮಾಡಿದರು. ಕೃಷ್ಣನ ಜಲಸ್ತಂಭನದ ಮೂಲಕ ಎರಡು ದಿನಗಳ ಅಷ್ಟಮಿಗೆ ತೆರೆ ಬಿದ್ದಿದೆ. ಇದಾದ ನಂತರ ರಥಬೀದಿ ಪಾರ್ಕಿಂಗ್ ಏರಿಯಾದಲ್ಲಿ ಹತ್ತಾರು ವೇದಿಕೆಗಳಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

    ಪೇಜಾವರ ಶ್ರೀಗಳ ಐತಿಹಾಸಿಕ ಐದನೇ ಪರ್ಯಾಯದ ಕೊನೆಯ ಅಷ್ಟಮಿಯನ್ನು ಆಚರಿಸಲಾಯಿತು. ಪೇಜಾವರ ಶ್ರೀಗಳು ದಾಖಲೆಯ ಎಂಬತ್ತನೇ ಶ್ರೀಕೃಷ್ಣ ಜನ್ಮಾಷ್ಟಮಿಯಲ್ಲಿ ಪಾಲ್ಗೊಂಡರು , ತನ್ನ ಪರ್ಯಾಯದ ಹತ್ತನೇ ಅಷ್ಟಮಿಯನ್ನು ಪೂರೈಸಿದ್ದಾರೆ.

  • ಕೃಷ್ಣನೂರಿನಲ್ಲಿ ಹುಲಿ ವೇಷಧಾರಿಗಳ ರಂಗಿನಾಟ – ಗಮನ ಸೆಳಿತಿದೆ ಮಾರಿಕಾಡು ವೇಷ

    ಕೃಷ್ಣನೂರಿನಲ್ಲಿ ಹುಲಿ ವೇಷಧಾರಿಗಳ ರಂಗಿನಾಟ – ಗಮನ ಸೆಳಿತಿದೆ ಮಾರಿಕಾಡು ವೇಷ

    ಉಡುಪಿ: ಉಡುಪಿ ಶ್ರೀಕೃಷ್ಣ ಮಠದಲ್ಲಿ ಶ್ರೀಕೃಷ್ಣದೇವರ ಜಯಂತಿ ಆರಂಭಗೊಂಡಿದೆ. ಅಷ್ಟಮಿ ತಿಥಿ- ರೋಹಿಣಿ ನಕ್ಷತ್ರ ಮೂಡುವ ಘಳಿಗೆಯಲ್ಲಿ ಶ್ರೀಕೃಷ್ಣನಿಗೆ ಆಘ್ರ್ಯವನ್ನು ಸಲ್ಲಿಸಲಾಯ್ತು. ನಡುರಾತ್ರಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ನೂರಾರು ಮಂದಿ ಭಕ್ತರು ಪಾಲ್ಗೊಂಡಿದ್ದರು. ನಂದಗೋಕುಲದಲ್ಲಾದ ಸಂಭ್ರಮ ಉಡುಪಿಯಲ್ಲಿಯೂ ಮರುಕಳಿಸಿತು.

    ಸಿಂಹಮಾಸ-ಕೃಷ್ಣ ಪಕ್ಷದಂದು ಶ್ರೀಕೃಷ್ಣ ಜನ್ಮತಾಳಿದ್ದಾನೆ ಎಂಬುವುದಾಗಿ ಉಲ್ಲೇಖವಿದೆ. ಅದರಂತೆ ರೋಹಿಣಿ ನಕ್ಷತ್ರ ಉದಯವಾಗುವ ಕಾಲದಲ್ಲಿ ಆಘ್ರ್ಯಪ್ರದಾನ ಮಾಡಿ ಕೃಷ್ಣಪರಮಾತ್ಮನನ್ನು ಬರಮಾಡಿಕೊಳ್ಳಲಾಯ್ತು. ಮಠದ ಗರ್ಭಗುಡಿಯಲ್ಲಿ ಶ್ರೀಕೃಷ್ಣನಿಗೆ ಪೇಜಾವರ ವಿಶ್ವೇಶತೀರ್ಥ ಶ್ರೀಗಳು ಮತ್ತು ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ನೀರಿನ ಅಘ್ರ್ಯನೀಡಿ ಸ್ವಾಗತ ಮಾಡಿದರು. ಇದಾದ ನಂತರ ಕೃಷ್ಣಾಪುರ ಸ್ವಾಮೀಜಿ ಮತ್ತು ಸೋಸೆ ಶ್ರೀಪಾದಂಗಳವರು ಅಘ್ರ್ಯಪ್ರದಾನ ಮಾಡಿದರು.

    ಚಂದ್ರಶಾಲೆಯಲ್ಲಿ ತುಳಸಿಯ ಸಾನಿಧ್ಯದಲ್ಲಿ ಚಂದ್ರನಿಗೆ ಅಘ್ರ್ಯ ಸಮರ್ಪಿಸಲಾಯ್ತು. ಕೃಷ್ಣ ಚಂದ್ರವಂಶಸ್ಥನಾಗಿರುವುದರಿಂದ ಆತನ ವಂಶಕ್ಕೂ ಇಲ್ಲಿ ಗೌರವ ಸಲ್ಲಿಸುವ ಧಾರ್ಮಿಕ ಪ್ರಕ್ರಿಯೆ ನಡೆಯಿತು. ತೆಂಗಿನ ಕಾಯಿಯ ಗಡಿಗೆ ಹಾಲನ್ನು ಶಂಖದ ಮೂಲಕ ಚಂದ್ರನಿಗೆ ಅಘ್ರ್ಯ ನೀಡುತ್ತಿದ್ದಂತೆ ಭಕ್ತರು ಪುಳಕಿತರಾದರು. ಭೂಮಿಗೆ ದೇವರ ಆಗಮನವಾಗಿದೆ ಅಂತ ಸಂಭ್ರಮಿಸಿದರು.

    ಮೊಸರುಕುಡಿಕೆ: ಶ್ರೀ ಕೃಷ್ಣನ ಜನ್ಮ ದಿನವನ್ನು ಇಂದು ನಗರದಲ್ಲಿ ಮೊಸರುಕುಡಿಕೆಯ ಮೂಲಕ ಆಚರಿಸಲಾಗುತ್ತಿದೆ. ಸಾವಿರಾರು ವೇಷಗಳ ಕುಣಿತ, ಬರುವ ಅಸಂಖ್ಯ ಭಕ್ತರಿಗೆ ಉಟೋಪಚಾರ- ಸಿಹಿ ವಿತರಣೆಯ ಮೂಲಕ ಉಡುಪಿಗೆ ಉಡುಪಿಯೇ ಕಡೆಗೋಲು ಶ್ರೀಕೃಷ್ಣನ ಜನ್ಮದಿನವನ್ನು ಆಚರಿಸುತ್ತಿದೆ. ಮಧ್ಯಾಹ್ನ 3 ಗಂಟೆ ಸುಮಾರಿಗೆ ವಿಟ್ಲಪಿಂಡಿ ಮಹೋತ್ಸವ ಆರಂಭವಾಗಲಿದೆ. ದಿನಪೂರ್ತಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ಬರುವ ಭಕ್ತರಿಗೆ ಅನ್ನಪ್ರಸಾದ ಸೇವೆ ಎಲ್ಲವನ್ನೂ ವಿತರಿಸಲು ಕೃಷ್ಣಮಠ ಸಜ್ಜಾಗಿದೆ.

    ರಂಗು ತುಂಬುತ್ತಿರುವ ವೇಷಗಳು: ಉಡುಪಿ ಇಂದು ಸಂಪೂರ್ಣ ನಂದಗೋಕುಲವಾಗಿದೆ. ಎಲ್ಲಿನೋಡಿದರಲ್ಲಿ ಮುದ್ದುಕೃಷ್ಣರು ಕಾಣಿಸುತ್ತಿದ್ದಾರೆ. ಎರಡು ದಿನ ಅಷ್ಟಮಿಯ ಉಪವಾಸ ಮಾಡಿದ್ದ ಭಕ್ತರು ಇಂದು ವಿಟ್ಲಪಿಂಡಿಯ ಸಂಭ್ರಮದಲ್ಲಿದ್ದಾರೆ.

    ಮಾರಿಕಾಡು ವೇಷ: ಉಡುಪಿ ನಗರದಾದ್ಯಂತ ಎಲ್ಲಿ ನೋಡಿದರಲ್ಲಿ ವೇಷಗಳು ಕಾಣಿಸುತ್ತಿದೆ. ಈ ಪೈಕಿ ಎಲ್ಲರ ಗಮನಸೆಳೆಯುತ್ತಿರೋದು ಮಾರಿಕಾಡು ವೇಷ. ಉಡುಪಿಯ ಯುವಕ ರಮಾಂಜಿ ಅವರು ಈ ವಿಭಿನ್ನ ವೇಷ ಹಾಕಿದ್ದಾರೆ. ದೈತ್ಯ ಪ್ರಾಣಿಯೊಂದು ಓಡಾಡಿದಂತೆ ಈ ವೇಷ ನಗರದಾದ್ಯಂತ ಸಂಚಾರ ಮಾಡುತ್ತಿದೆ. ಫೋಮ್ ಮತ್ತು ಬಣ್ಣವನ್ನು ಉಪಯೋಗಿಸಿ ಈ ವೇಷ ಹಾಕಿದ್ದಾರೆ ರಾಮಾಂಜಿ. ಅಲ್ಲದೇ ಅಷ್ಟಮಿ ಮತ್ತು ವಿಟ್ಲಪಿಂಡಿಯಂದು ಕಲೆಕ್ಟ್ ಆಗುವ ಹಣವನ್ನೆಲ್ಲಾ ನಮ್ಮಭೂಮಿ ಸಂಸ್ಥೆಗೆ ನೀಡಲಿದ್ದಾರೆ.

    ಉಡುಪಿ ನಗರದಾದ್ಯಂತ ಹುಲಿಗಳು ದಾಂಗುಡಿಯಿಟ್ಟಿದೆ. ಎಲ್ಲಿ ನೋಡಿದ್ರೂ ಉಡುಪಿಯಲ್ಲಿ ಹುಲಿಗಳೇ ಕಾಣಿಸುತ್ತಿದೆ. ತಲೆಯಲ್ಲಿ ಕಾಯಿ ಒಡೆಯುವುದು- ಬೆಂಕಿಯುಂಡೆ ಉಗುಳುವುದು- ವಿವಿಧ ಕಸರತ್ತುಗಳನ್ನ ಮಾಡುವುದು ಹುಲಿ ನೃತ್ಯದ ಸ್ಪೆಷಲ್ ಆಗಿದೆ.

  • ಉಡುಪಿಯಲ್ಲಿ ನೈತಿಕ ಪೊಲೀಸ್‍ ಗಿರಿ- ವಿದ್ಯಾರ್ಥಿಗಳನ್ನು ಹಿಡಿದ ಹಿಂದೂ ಸಂಘಟನೆ ಕಾರ್ಯಕರ್ತರು

    ಉಡುಪಿಯಲ್ಲಿ ನೈತಿಕ ಪೊಲೀಸ್‍ ಗಿರಿ- ವಿದ್ಯಾರ್ಥಿಗಳನ್ನು ಹಿಡಿದ ಹಿಂದೂ ಸಂಘಟನೆ ಕಾರ್ಯಕರ್ತರು

    ಉಡುಪಿ: ಕುಂದಾಪುರದಿಂದ ಉಡುಪಿಯತ್ತ ಸಾಗುತ್ತಿದ್ದ ಮೂವರು ಯುವತಿಯರು ಹಾಗೂ ಇಬ್ಬರು ಯುವಕರಿದ್ದ ಕಾರನ್ನು ಹಿಂದೂ ಸಂಘಟನೆ ಕಾರ್ಯಕರ್ತರು ಅಡ್ಡಗಟ್ಟಿ ಪೊಲೀಸರಿಗೊಪ್ಪಿಸಿದ ಘಟನೆ ಕೋಟೇಶ್ವರದಲ್ಲಿ ಸೋಮವಾರ ರಾತ್ರಿ ನಡೆದಿದೆ.

    ಯುವಕ-ಯುವತಿಯರನ್ನು ಉಡುಪಿಯ ಕಾಲೇಜೊಂದರ ವಿದ್ಯಾರ್ಥಿಗಳೆಂದು ಗುರುತಿಸಲಾಗಿದೆ. ಯುವಕ ಯುವತಿಯರು ಕುಂದಾಪುರದ ಮರವಂತೆ ಬೀಚ್ ನಲ್ಲಿ ಅಸಭ್ಯವಾಗಿ ನಡೆದುಕೊಳ್ಳುತ್ತಿದ್ದರು. ಸಾರ್ವಜನಿಕ ಸ್ಥಳದಲ್ಲಿ ವರ್ತನೆ ಸರಿಯಿಲ್ಲವೆಂದು ಆರೋಪಿಸಿ ಹಿಂದೂಪರ ಸಂಘಟನೆ ಕಾರ್ಯಕರ್ತರು ಯುವಕ ಯುವತಿಯರಿದ್ದ ಕಾರನ್ನು ಹಿಂಬಾಲಿಸಿ ಕೋಟೇಶ್ವರದಲ್ಲಿ ಅಡ್ಡಗಟ್ಟಿ ಕುಂದಾಪುರ ಪೊಲೀಸರಿಗೊಪ್ಪಿಸಿದ್ದರು.

    ಪೊಲೀಸ್ ಠಾಣೆಗೆ ನೂರಾರು ಮಂದಿ ಹಿಂದೂ ಸಂಘಟನೆ ಕಾರ್ಯಕರ್ತರು ಹೋಗಿದ್ದ ಹಿನ್ನೆಲೆ ಠಾಣೆಯಲ್ಲಿ ಕೆಲಕಾಲ ಬಿಗುವಿನ ವಾತಾವರಣ ಸೃಷ್ಟಿಯಾಯ್ತು. ಕಾರಣ ಪೊಲೀಸರು ಗರಂ ಆದ್ರು ಅಲ್ಲದೆ ಹಿಂದೂ ಸಂಘಟನೆ ಕಾರ್ಯಕರ್ತರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವೇಳೆ ಪೊಲೀಸರು ಸಂಘಟನೆ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು. ಯುವಕ ಯುವತಿಯರ ಪೈಕಿ ಹಿಂದೂ ಮತ್ತು ಮುಸ್ಲಿಮ್ ಧರ್ಮಿಯರು ಇದ್ದರೆಂಬೂದೇ ಈ ಎಲ್ಲಾ ಬೆಳವಣಿಗೆಗೆ ಕಾರಣವಾಗಿದೆ ಎಂದು ಹೇಳಲಾಗಿದೆ.