Tag: ಉಡುಪಿ

  • ಉಡುಪಿ ಕಾಂಗ್ರೆಸ್ ಕಾರ್ಪೊರೇಟರ್ ಗೂಂಡಾಗಿರಿ!

    ಉಡುಪಿ ಕಾಂಗ್ರೆಸ್ ಕಾರ್ಪೊರೇಟರ್ ಗೂಂಡಾಗಿರಿ!

    ಉಡುಪಿ: ಇಬ್ಬರು ಯುವಕರಿಗೆ ನಗರ ಸಭಾ ಸದಸ್ಯ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಉಡುಪಿಯಲ್ಲಿ ನಡೆದಿದೆ.

    ಉಡುಪಿ ನಗರಸಭೆಯ ಕಾಂಗ್ರೆಸ್ ನ ಸದಸ್ಯ ಆರ್.ಕೆ.ರಮೇಶ್ ಪೂಜಾರಿ ಹಲ್ಲೆ ನಡೆಸಿದವರು. ಪರ್ಕಳದ ಗಣೇಶ್ ಆಚಾರ್ಯ ಮತ್ತು ಪ್ರಾಣೇಶ್ ಆಚಾರ್ಯ ಹಲ್ಲೆಗೊಳಗಾದ ಯುವಕರು. ನಗರದ ಗುಂಡಿಬೈಲು ಎಂಬಲ್ಲಿನ ಗಣೇಶ್ ಆಚಾರ್ಯ ಅವರ ತಂದೆಗೆ ಸಂಬಂಧಪಟ್ಟ ಆಸ್ತಿ ಇದೆ.

    ಇದೇ ಪರಿಸರದಲ್ಲಿ ನಗರಸಭಾ ಕಾಮಗಾರಿ ನಡೆಯುತ್ತಿದ್ದು ಈ ಸಂದರ್ಭದಲ್ಲಿ ತಮ್ಮ ಜಮೀನಿನಲ್ಲಿರುವ ಮರಗಳನ್ನು ಕಡಿಯದಂತೆ ಗಣೇಶ್ ಆಚಾರ್ಯ ವಿನಂತಿಸಿದ್ದರು. ಆದರೆ ಮರುದಿನ ಬಂದು ನೋಡಿದಾಗ ಎಲ್ಲಾ ಮರಗಳನ್ನು ನೆಲಕ್ಕುರುಳಿಸಲಾಗಿತ್ತು. ಇದನ್ನು ಪ್ರಶ್ನಿಸಿದ ಆಚಾರ್ಯ ಸಹೋದರರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.

    ರಮೇಶ್ ಪೂಜಾರಿ ಸಹೋದರ ಪ್ರಕಾಶ್ ಮತ್ತು ಇತರ ಗೂಂಡಾ ಪಡೆ ಸೇರಿ ಈ ದುಷ್ಕೃತ್ಯ ಎಸಗಿದೆ. ಈ ಸಂದರ್ಭದ ಜಟಾಪಟಿಯಲ್ಲಿ ಗಣೇಶ್ ಆಚಾರ್ಯರ ಚಿನ್ನದ ಸರವನ್ನು ಎಗರಿಸಿದ್ದಾರೆ. ರಮೇಶ್ ಪೂಜಾರಿ ಈ ಹಿಂದೆ ನಗರಸಭಾ ಸಭಾಂಗಣದಲ್ಲಿ ಮಾಧ್ಯಮದ ಮುಂದೆ ಸಮಸ್ಯೆ ಹೇಳಿಕೊಂಡು ಬಂದ ಸಾಮಾನ್ಯ ವ್ಯಕ್ತಿಗೆ ಮನಬಂದಂತೆ ಥಳಿಸಿದ್ದರು.

    ಹ್ಯಾರಿಸ್ ಪುತ್ರ ನಲಪಾಡ್ ಮತ್ತು ಶಾಸಕ ಭೈರತಿ ಆಪ್ತನ ಪುಂಡಾಟ ಪ್ರಕರಣ ಬಿಸಿಯಾಗಿರುವಾಗಲೇ ಉಡುಪಿಯಲ್ಲಿ ನಗರಸಭೆಯ ಕಾಂಗ್ರೆಸ್ ಕಾರ್ಪೊರೇಟರ್ ಗೂಂಡಾಗಿರಿ ಮೆರೆದಿದ್ದಾರೆ. ಆರ್. ಕೆ ರಮೇಶ್ ಪೂಜಾರಿ ಇಂತಹ ಹಲವಾರು ಗೂಂಡಾ ಚಟುವಟಿಕೆಗಳನ್ನು ಮಾಡುತ್ತಾ ಬಂದಿದ್ದಾರೆ ಎಂಬುದು ಬಿಜೆಪಿಗರ ಆರೋಪ.

  • ಬಿಜೆಪಿಯದ್ದು ಡೋಂಗಿ ಹಿಂದುತ್ವ- ಕಾಂಗ್ರೆಸ್‍ಗೆ ಈಗ ಹಿಂದೂಗಳು ಕಾಣಿಸ್ತಿದ್ದಾರೆ: ಪ್ರಮೋದ್ ಮುತಾಲಿಕ್

    ಬಿಜೆಪಿಯದ್ದು ಡೋಂಗಿ ಹಿಂದುತ್ವ- ಕಾಂಗ್ರೆಸ್‍ಗೆ ಈಗ ಹಿಂದೂಗಳು ಕಾಣಿಸ್ತಿದ್ದಾರೆ: ಪ್ರಮೋದ್ ಮುತಾಲಿಕ್

    ಉಡುಪಿ: ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳು ಹಿಂದುತ್ವದ ಮೇಲೆ ಸವಾರಿ ಮಾಡಿ ಅಧಿಕಾರ ಗಿಟ್ಟಿಸುವ ಗುರಿ ಹೊಂದಿದೆ ಎಂದು ಶ್ರೀರಾಮ ಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಆರೋಪ ಮಾಡಿದ್ದಾರೆ.

    ಇಂದು ಉಡುಪಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಗೋಹತ್ಯೆಯನ್ನು ಬಿಜೆಪಿ ನಿಷೇಧ ಮಾಡಿಲ್ಲ. ನನ್ನ ಮೇಲೆ 7 ಕೇಸು ಹಾಕಿ ಜೈಲಿಗೆ ಕಳುಹಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ತಮ್ಮ ಕಾರ್ಯಕರ್ತರು ಸತ್ತರೆ ಒಮ್ಮೆ ಕಣ್ಣೀರಿಡುವ ನಾಯಕರು, ಕೋರ್ಟ್ ಗೆ ಅಲೆದಾಡುವ ಕಾರ್ಯಕರ್ತರ ಬಗ್ಗೆ ಯಾರಿಗೂ ಚಿಂತೆಯೇ ಇಲ್ಲ. ಕಾಂಗ್ರೆಸ್ ನ ಮುಸ್ಲಿಂ ತುಷ್ಟೀಕರಣದಿಂದ ದೇಶದಲ್ಲಿ ಭಯೋತ್ಪಾಧನೆ ಹುಟ್ಟಿತು. ಕಾಂಗ್ರೆಸ್ ದೇಶದಲ್ಲಿ ಧೂಳೀಪಟವಾದ ಮೇಲೆ ಈಗ ಹಿಂದೂಗಳು ನೆನಪಾಗಿದ್ದಾರೆ. ರಾಹುಲ್ ಗಾಂಧಿಯ ದೇವಸ್ಥಾನ ಮಠ ಮಂದಿರದ ಭೇಟಿ ರಾಜಕೀಯ ಅಲ್ಲದೆ ಮತ್ತೇನೂ ಅಲ್ಲ. ಈ ವರೆಗೆ ಹಿಂದೂಗಳ ಕಡೆ ತಿರುಗಿಯೂ ನೋಡದ ಕಾಂಗ್ರೆಸ್ ಪಕ್ಷದಲ್ಲಿ ಈಗ ಯಾಕೆ ಇಷ್ಟೊಂದು ಬದಲಾವಣೆ ಎಂದು ಪ್ರಶ್ನಿಸಿದರು.

    ಶ್ರೀರಾಮ ಸೇನೆ, ಶಿವಸೇನೆ ಜೊತೆ ಕೈ ಜೋಡಿಸಿದ್ದು 52 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುತ್ತೇವೆ. ಶೃಂಗೇರಿ ಅಥವಾ ತೆರದಾಳುವಿನಲ್ಲಿ ತಾನು ಸ್ಪರ್ಧಿಸುವುದಾಗಿ ಮುತಾಲಿಕ್ ಘೋಷಿಸಿದರು. ಕಾರ್ಯಕರ್ತರು ಎರಡೂ ಕಡೆಯಿಂದ ಒತ್ತಡ ತರುತ್ತಿದ್ದಾರೆ. ಯಾವುದು ಸೂಕ್ತ ಎಂದು ನಿರ್ಧರಿಸಿ ಸ್ಪರ್ಧಿಸುವುದಾಗಿ ಹೇಳಿದರು. ಶಿವಸೇನೆಯಿಂದ ಕನ್ನಡಕ್ಕೆ ಯಾವುದೇ ಹೊಡೆತ ಬೀಳುವುದಿಲ್ಲ ಎಂದು ಆಶ್ವಾಸನೆ ನೀಡಿದ ಅವರು ಬಿಜೆಪಿಯದ್ದು ಡೋಂಗಿ ಹಿಂದುತ್ವ- ನಮ್ಮದು ಪ್ರಖರ ಹಿಂದುತ್ವ, ಬಿಜೆಪಿಯ ಸೊಕ್ಕಿಗೆ ಶಿವಸೇನೆ ಉತ್ತರ ನೀಡುತ್ತದೆ ಎಂದರು.

    ಇದೇ ವೇಳೆ ಬಿಜೆಪಿ ಜೊತೆ ರಾಜೀ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಅವರು, ಈ ಹಿಂದೆಯೇ ಬಿಜೆಪಿಯ ಬಾಗಿಲು ಬಂದ್ ಮಾಡಲಾಗಿದೆ. ಇನ್ನು ಕದ ತೆರೆಯುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.

  • ವಿಡಿಯೋ: ಯಕ್ಷಗಾನ ನೋಡಿ ಮನೆಗೆ ಹಿಂದಿರುಗುತ್ತಿದ್ದವರಿಗೆ ಲಾರಿ ಡಿಕ್ಕಿ- ಸಿಸಿಟಿವಿ ಯಲ್ಲಿ ಸೆರೆಯಾಯ್ತು ಎದೆ ಝಲ್ ಅನ್ನುವ ದೃಶ್ಯ

    ವಿಡಿಯೋ: ಯಕ್ಷಗಾನ ನೋಡಿ ಮನೆಗೆ ಹಿಂದಿರುಗುತ್ತಿದ್ದವರಿಗೆ ಲಾರಿ ಡಿಕ್ಕಿ- ಸಿಸಿಟಿವಿ ಯಲ್ಲಿ ಸೆರೆಯಾಯ್ತು ಎದೆ ಝಲ್ ಅನ್ನುವ ದೃಶ್ಯ

    ಉಡುಪಿ: ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಾದಾಚಾರಿಗಳಿಬ್ಬರಿಗೆ ಲಾರಿಯೊಂದು ಡಿಕ್ಕಿ ಹೊಡೆದಿದ್ದು, ಡಿಕ್ಕಿಯಾದ ರಭಸಕ್ಕೆ ಇಬ್ಬರು ಹಾರಿ ರಸ್ತೆ ಹೊರಗೆ ಬಿದ್ದಿದ್ದಾರೆ. ಈ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ನೋಡುವವರ ಎದೆ ನಡುಗಿಸುವಂತಿದೆ.

    ಉಡುಪಿ ಜಿಲ್ಲೆ ಕುಂದಾಪುರ ತಾಲೂಕು ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಘಟನೆ ನಡೆದಿದ್ದು, ಅಪಘಾತದ ರಭಸಕ್ಕೆ ಸ್ಥಳದಲ್ಲೇ ಒಬ್ಬರು ಮೃತ ಪಟ್ಟಿದ್ದರೆ, ಮತ್ತೊಬ್ಬರು ಗಾಯಗೊಂಡಿದ್ದಾರೆ.

    ಪ್ರಭಾಕರ (27) ಎಂಬವರು ಸ್ಥಳದಲ್ಲೇ ಮೃತಪಟ್ಟವರು. ಘಟನೆಯಲ್ಲಿ ಗಾಯಗೊಂಡಿರುವವರನ್ನು ಸುರೇಶ (50) ಎಂದು ಗುರುತಿಸಲಾಗಿದೆ. ತಡರಾತ್ರಿ ಯಕ್ಷಗಾನ ನೋಡಿ ರಸ್ತೆಯ ಒಂದು ಬದಿಯಿಂದ ನಡೆದು ಹೋಗುತ್ತಿದ್ದ ವೇಳೆ ಅಪರಿಚಿತ ಲಾರಿ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಗಾಯಗೊಂಡ ಸುರೇಶ ಅವರು ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಅಪಘಾತವಾದ ನಂತರ ಲಾರಿ ಚಾಲಕ ಅವರು ಬದುಕಿದ್ದರಾ ಅಥವಾ ಸತ್ತಿದ್ದರಾ ಎಂಬುದನ್ನು ಸಹ ನೋಡಿಲ್ಲ. ಘಟನೆ ಮುಂಜಾನೆ ನಡೆದರು ಬೆಳಗಾಗುವವರೆಗೂ ಯಾರು ಇದನ್ನು ಗಮಿಸಿಲ್ಲ. ನಂತರ ದಾರಿಯಲ್ಲಿ ಹೋಗುತ್ತಿದ್ದ ಸ್ಥಳೀಯ ಹಾಲು ಮಾರುವ ಯುವಕ ಗಮನಿಸಿ ಸಾರ್ವಜನಿಕರ ನೆರವಿನಿಂದ ಗಾಯಾಳನ್ನು ಆಸ್ಪತ್ರೆಗೆ ದಾಖಲಿಸಿದ್ದಾನೆ.

    ಪ್ರಸ್ತುತ ಅಪಘಾತಕ್ಕೆ ಕಾರಣವಾದ ವಾಹನದ ಮಾಹಿತಿ ಲಭಿಸಿಲ್ಲ. ಆದರೆ ಅಪಘಾತದ ವಿಡಿಯೋ ಮಾತ್ರ ನೋಡಿದವರನ್ನು ತಲ್ಲಣಗೊಳಿಸುತ್ತಿದೆ. ಘಟನೆ ಕುರಿತು ಕುಂದಾಪುರ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ಅಪಘಾತ ನಡೆದ ಮಾರ್ಗದಲ್ಲಿರುವ ಎಲ್ಲಾ ಸಿಸಿಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿದ್ದಾರೆ.

    https://www.youtube.com/watch?v=jtjc1FagGgs

  • ರಾಹುಲ್ ಗಾಂಧಿಯದ್ದು ನೆಹರೂ ರಕ್ತ, ಟೀಕೆ ಮಾಡುವ ಬಿಜೆಪಿ ಬ್ರಿಟಿಷರ ಜೊತೆ ಕೈ ಜೋಡಿಸಿತ್ತು: ರಮಾನಾಥ ರೈ ಗರಂ

    ರಾಹುಲ್ ಗಾಂಧಿಯದ್ದು ನೆಹರೂ ರಕ್ತ, ಟೀಕೆ ಮಾಡುವ ಬಿಜೆಪಿ ಬ್ರಿಟಿಷರ ಜೊತೆ ಕೈ ಜೋಡಿಸಿತ್ತು: ರಮಾನಾಥ ರೈ ಗರಂ

    ಉಡುಪಿ: ದೇಶದಲ್ಲಿ ಅಭಿಪ್ರಾಯ ಬೇಧವಿದೆ. ತಮ್ಮ ಸ್ವಂತ ಅಭಿಪ್ರಾಯ ಮಂಡಿಸಿದವರಿಗೆ ಸಸ್ಪೆಂಡ್ ಶಿಕ್ಷೆ ಎಂದು ಅರಣ್ಯ ಸಚಿವ ರಮಾನಾಥ ರೈ ತಿರುಗೇಟು ನೀಡಿದ್ದಾರೆ.

    ಅರಣ್ಯ ಇಲಾಖೆಯ ವತಿಯಿಂದ ನಿರ್ಮಾಣವಾದ ಸಾಲುಮರದ ತಿಮ್ಮಕ್ಕ ಪಾರ್ಕ್ ಉದ್ಘಾಟಿಸಿ ಮಾತನಾಡಿದ ಅವರು, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರನ್ನು `ಬಂಡಲ್ ಶಾ’ ಎಂದು ಟೀಕಿಸಿದ್ದ ದ.ಕ ಜಿಲ್ಲೆ ಪುತ್ತೂರಿನ ಕಾನೂನು ವಿದ್ಯಾರ್ಥಿಯನ್ನು ಸಸ್ಪೆಂಡ್ ಮಾಡಲಾಗಿದೆ. ಇದು ಸರಿಯಲ್ಲ. ವಿದ್ಯಾರ್ಥಿಯಿಂದ ತಪ್ಪಾಗಿದ್ದರೆ ಕೂತು ಪರಿಹರಿಸಬಹುದಿತ್ತು ಅಂತ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಶಿಕ್ಷಣ ಸಂಸ್ಥೆ ಸಮಾಜವನ್ನು ಸುಶಿಕ್ಷಿತರನ್ನಾಗಿಸಬೇಕು. ಅದು ಬಿಟ್ಟು ಸಸ್ಪೆಂಡ್ ಮಾಡಿದ್ದಾರೆ. ಅದು ಖಾಸಗಿ ಶಿಕ್ಷಣ ಸಂಸ್ಥೆ, ಅವರ ವಿವೇಚನೆ ಮೇಲೆ ಕ್ರಮ ಕೈಗೊಂಡಿದ್ದಾರೆ. ಅಸಹಿಷ್ಣುತೆ, ಅಭಿವ್ಯಕ್ತಿ ಸ್ವಾತಂತ್ಯ ವಿಚಾರ ಮಾತಾಡಿದಾಗ ಟೀಕಿಸುತ್ತಾರೆ. ಆದರೆ ಅಂತಹ ವಾತಾವರಣ ದೇಶದಲ್ಲಿರುವುದು ನಿಜ ಅಂದಿದ್ದಾರೆ.

    ಶೋಭಾ ಕರಂದ್ಲಾಜೆಗೆ ಟಾಂಗ್: ಇದೇ ವೇಳೆ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಅವರ ರಾಜ್ಯ ಪ್ರವಾಸವನ್ನು ಟೀಕಿಸಿದ್ದ ಶೋಭಾ ಕರಂದ್ಲಾಜೆಗೆ ರೈ ಟಾಂಗೆ ಕೊಟ್ಟರು. ರಾಹುಲ್ ಮೋತಿಲಾಲ್ ನೆಹರೂ ಕುಟುಂಬದ ರಕ್ತ. ರಾಹುಲ್ ಗಾಂಧಿಗೂ, ಬೇರೆಯವರಿಗೂ ಹೋಲಿಕೆ ಇಲ್ಲ. ಪಾರಂಪರಿಕ ಇತಿಹಾಸ ಇರುವುದು ಯಾರಿಗೆ ಅನ್ನೋದು ಜನರು ತಿಳಿದುಕೊಳ್ಳಬೇಕು. ಸ್ವಾತಂತ್ರ್ಯ ಹೋರಾಟದ ಸಂದರ್ಭ ಬಿಜೆಪಿ, ಸಂಘ ಪರಿವಾರ ಬ್ರಿಟಿಷರ ಜೊತೆ ಕೈ ಜೋಡಿಸಿತ್ತು. ಕಾಂಗ್ರೆಸ್ ನಲ್ಲಿ ಯಾರೋ ಒಬ್ಬ ತಪ್ಪು ಮಾಡಿದ್ದಾರೆ, ಅವರಿಗೆ ತಕ್ಕ ಶಾಸ್ತಿಯಾಗಿದೆ. ಹಾಗೆ ನೋಡುವುದಾದರೆ ಬಾಳಿಗಾ ಕೊಂದ ನರೇಶ್ ಶೆಣೈ ಗೆ ಬಿಜೆಪಿ ವಿಐಪಿ ಪಾಸ್ ನೀಡುತ್ತೆ ಎಂದು ಕುಟುಕಿದರು.

    ನರೇಂದ್ರ ಮೋದಿ ಜೊತೆ ಶೆಣೈ ಒಟ್ಟಿಗೆ ತಿರುಗಾಡುತ್ತಾರೆ. ಮೊದಲು ಬಿಜೆಪಿಗರು ಏನು ಎನ್ನುವುದು ತಿಳಿದುಕೊಳ್ಳಲಿ. ರಾಹುಲ್ ಗಾಂಧಿ ದೇಶಕ್ಕಾಗಿ ಸರ್ವಸ್ವವನ್ನು ಕೊಟ್ಟ ಕುಟುಂಬದಿಂದ ಬಂದವರು. ಸ್ವಾತಂತ್ರ್ಯ ಹೋರಾಟ ಬಿಜೆಪಿ ದೃಷ್ಟಿಯಲ್ಲಿ ಸಣ್ಣದಿರಬಹುದು. ಬಿಜೆಪಿಗರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸದೇ ಇರುವವರು. ಯಾಕೆಂದರೆ ಬಿಜೆಪಿಗರು ಬ್ರಿಟಿಷರ ಜೊತೆ ಕೈ ಜೋಡಿಸಿದ್ದವರು ಎಂದು ಮಾತಿನಲ್ಲೇ ಚಾಟಿ ಬೀಸಿದರು.

  • ಉಡುಪಿಯಲ್ಲಿ ಮನಬಂದಂತೆ ಕಲ್ಲೆಸೆದು ಬೀದಿ ರಂಪಾಟ ಮಾಡ್ತಿದ್ದ ಮಾನಸಿಕ ಅಸ್ವಸ್ಥ ಅರೆಸ್ಟ್

    ಉಡುಪಿಯಲ್ಲಿ ಮನಬಂದಂತೆ ಕಲ್ಲೆಸೆದು ಬೀದಿ ರಂಪಾಟ ಮಾಡ್ತಿದ್ದ ಮಾನಸಿಕ ಅಸ್ವಸ್ಥ ಅರೆಸ್ಟ್

    ಉಡುಪಿ: ಜಿಲ್ಲೆಯ ಮಲ್ಪೆ, ವಡಭಾಂಡೆಶ್ವರ, ಹೂಡೆ, ಆದಿ ಉಡುಪಿ, ಸಾರ್ವಜನಿಕ ಸ್ಥಳಗಳಲ್ಲಿ ಅಪರಿಚಿತ ಮಾನಸಿಕ ರೋಗಿಯೊರ್ವ ಸಾರ್ವಜನಿಕರ ಮೇಲೆ ಹಲ್ಲೆ ಮಾಡುತ್ತಾ, ಸೊತ್ತುಗಳನ್ನು ನಾಶ ಮಾಡುತ್ತ, ಪರಿಸರದಲ್ಲಿ ಭಯ ಪಡಿಸುವ ಚಟುವಟಿಕೆಗಳನ್ನು ಮಾಡುವ ಮೂಲಕ ಜನರಲ್ಲಿ ಆತಂಕ ಸೃಷ್ಠಿಸಿದ್ದಾನೆ.

    ಸುಮಾರು 30 ವರ್ಷದ ಯುವಕನನ್ನು ಸಮಾಜಸೇವಕ ವಿಶು ಶೆಟ್ಟಿ ಅವರು ಕಾನೂನು ಪ್ರಕ್ರಿಯೆ ನಡೆಸಿ ಧಾರವಾಡದ ಮಾನಸಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಾನಸಿಕ ವ್ಯಕ್ತಿಯ ಉಗ್ರ ಪ್ರತಾಪಕ್ಕೆ ಬಹಳಷ್ಟು ಜನ ಹಲ್ಲೆಗೊಳಗಾದ ಪ್ರಕರಣಗಳು ಮಲ್ಪೆ ಪರಿಸರದಲ್ಲಿ ಈ ಹಿಂದೆ ನಡೆದಿವೆ.

    ಕಲ್ಲುಗಳನ್ನು ಕಾರಣ ಇಲ್ಲದೆ ಸಾರ್ವಜನಿಕರ ತಲೆಗೆ ಗುರಿಯಿಟ್ಟು ಹೊಡೆಯುತ್ತಿದ್ದನು. ಅಲ್ಲದೇ ಸೋಡಾ ಬಾಟಲಿಗಳನ್ನು ಎಸೆಯುತ್ತಿದ್ದ ಎಂದು ಸ್ಥಳೀಯರು ಹೇಳಿಕೊಂಡಿದ್ದಾರೆ. ಇದರಿಂದಾಗಿ ಸ್ಥಳೀಯರು, ಮಹಿಳೆಯರು, ಶಾಲಾ ಮಕ್ಕಳು ರಸ್ತೆಯಲ್ಲಿ ತಿರುಗಾಡಲು ಹೆದರುತ್ತಿದ್ದರು. ಈತನ ಉಪಟಳ ಎಲ್ಲೆ ಮೀರಿದಾಗ, ಸಾರ್ವಜನಿಕರು ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿ ಅವರ ಗಮನಕ್ಕೆ ತಂದಿದ್ದಾರೆ.

    ಸಾರ್ವಜನಿಕರ ಮನವಿಗೆ ಸ್ಪಂದಿಸಿದ ವಿಶು ಶೆಟ್ಟಿ ಅವರು ಮಾನಸಿಕ ವ್ಯಕ್ತಿಯ ರಾದ್ಧಾಂತ ಚಟುವಟಿಕೆಗಳ ವಿಚಾರ ಎಳೆ ಎಳೆಯಾಗಿ ಮನವಿಯಲ್ಲಿ ಉಲ್ಲೇಖಿಸಿ, ಜಿಲ್ಲಾಧಿಕಾರಿ ಅವರಿಗೆ ಸಲ್ಲಿಸಿದ್ದಾರೆ. ತಿಂಗಳು ಕಾಲ ನೀರಿಕ್ಷಿಸುತ್ತಾ, ಕಾಲ ಕಳೆದರೂ ಜಿಲ್ಲಾಡಳಿತದಿಂದ ಯಾವೊಂದು ಸ್ಪಂದನೆ ಸಿಕ್ಕಿರಲಿಲ್ಲ. ಇತ್ತ ಮಾನಸಿಕನ ರಂಪಾಟವು ಮದಗಜದಂತೆ ಹೆಚ್ಚಾಯಿತು. ವಾಹನಗಳ ಜಖಂಗೊಳಿಸುವುದು, ರಸ್ತೆಯಲ್ಲಿ ಅಡ್ಡಾದಿಡ್ಡಿ ಓಡಾಡಲು ಶುರು ಮಾಡಲಾರಂಭಿಸಿದ್ದಾನೆ.

    ಈ ಹಿನ್ನೆಲೆಯಲ್ಲಿ ಪೊಲೀಸರ ಸಹಾಯದಿಂದ ಸಮಾಜ ಸೇವಕರು ಒಟ್ಟಾಗಿ ಮಾನಸಿಕ ಯುವಕನನ್ನು ಹಿಡಿದು ಧಾರವಾಡದ ಮಾನಸಿಕ ಆಸ್ಪತ್ರೆಗೆ ಸೇರಿಸಿದ್ದಾರೆ. ಉಡುಪಿಯಲ್ಲಿ ಸರ್ಕಾರಿ ಮಾನಸಿಕ ಆಸ್ಪತ್ರೆ ಸ್ಥಾಪನೆ ಮಾಡಬೇಕೆಂದು ದಶಕದಿಂದ ಒತ್ತಾಯಿಸುತ್ತಾ ಇದ್ದರೂ ಸರ್ಕಾರಗಳು ಇತ್ತ ಗಮನವನ್ನೇ ಕೊಡುತ್ತಿಲ್ಲ ಎಂಬುದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.

  • ಭಾರತೀಯ ಸೇನೆಗೂ ಉಪಯುಕ್ತವಾಯ್ತು ಮಣಿಪಾಲದ ಪ್ರೊಫೆಸರ್ ಕಂಡುಹಿಡಿದ ಹೊಸ ದೂರದರ್ಶಕ

    ಭಾರತೀಯ ಸೇನೆಗೂ ಉಪಯುಕ್ತವಾಯ್ತು ಮಣಿಪಾಲದ ಪ್ರೊಫೆಸರ್ ಕಂಡುಹಿಡಿದ ಹೊಸ ದೂರದರ್ಶಕ

    ಉಡುಪಿ: ಮನುಷ್ಯನಿಗೆ ಸಾಧನೆ ಮಾಡಬೇಕು ಎಂಬ ಮನಸ್ಸಿದ್ದರೆ ಏನು ಬೇಕಾದ್ರೂ ಮಾಡಬಹುದು ಅನ್ನೋದಕ್ಕೆ ಇಂದಿನ ಪಬ್ಲಿಕ್ ಹೀರೋನೇ ಸಾಕ್ಷಿ.

    ಲ್ಯಾಬ್ ಇನ್ಸ್‍ಸ್ಟ್ರಕ್ಟರ್ ಆಗಿ ಕೆಲಸ ಮಾಡುತ್ತಿರುವ ಉಡುಪಿಯ ಮಣಿಪಾಲದ ಪ್ರೊ. ಮನೋಹರ್ ಪೇಟೆಂಟ್‍ಗಳ ಮೇಲೆ ಪೇಟೆಂಟ್ ಪಡೆದುಕೊಂಡಿದ್ದಾರೆ. ಭಾರತೀಯ ಸೇನೆಗೂ ಇವರ ಅನ್ವೇಷಣೆ ಉಪಯುಕ್ತವಾಗಿದೆ. ಪ್ರೊ. ಮನೋಹರ್ ಎಂಐಟಿ ಕಾಲೇಜಿನ ಉಪನ್ಯಾಸಕರಾಗಿದ್ದಾರೆ. ಸ್ವತಃ ಸಂಶೋಧನೆ ಮಾಡಿ, ದೂರದರ್ಶಕವನ್ನು ಕಂಡು ಹಿಡಿದಿದ್ದಾರೆ.

    ಈ ಬೈನಾಕ್ಯುಲರ್ ಒಳಗೆ 9 ಲೆನ್ಸ್ ಅಳವಡಿಸಿದ್ದಾರೆ. ಪಿವಿಸಿ ಪೈಪ್, ಭೂತಕನ್ನಡಿಗಳನ್ನು ಬಳಸಿಕೊಂಡು ಈ ಸಾಧನೆ ಮಾಡಿದ್ದಾರೆ. ಬೇರೆ ದೂರದರ್ಶಕಗಳಲ್ಲಿ ತಲೆಕೆಳಗಾಗಿ ದೃಶ್ಯಗಳು ಕಂಡರೆ, ಮನೋಹರ್ ಕಂಡುಹಿಡಿದಿರೋ ಬೈನಾಕುಲರ್‍ನಲ್ಲಿ ಕಣ್ಣಿನಲ್ಲಿ ಕಾಣಿಸುವಂತೆಯೇ ನೋಡಬಹುದು. ಮಣಿಪಾಲ ವಿವಿಯ ಎಂಐಟಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಉದ್ಯೋಗಿಯಾಗಿರುವ ಮನೋಹರ್ ವಿಜ್ಞಾನಿಗಳು ಮಾಡುವ ಸಾಧನೆಯನ್ನು ಮಾಡಿದ್ದಾರೆ. ಈಗ ತಂತ್ರಜ್ಞಾನವನ್ನು ಮತ್ತಷ್ಟು ಸುಧಾರಣೆ ಮಾಡಿದ್ದು ಮಿಲಿಟರಿ ಅಧಿಕಾರಿಗಳ ಸಂಪರ್ಕಕ್ಕಾಗಿ ಕಾಯುತ್ತಿದ್ದಾರೆ.

    ಮನೋಹರ್ ಅವರ ಸಾಧನೆಗೆ ಭಾರತ ಸರ್ಕಾರದಿಂದ ಪೇಟೆಂಟ್ ಸಿಕ್ಕಿದೆ. ಭಾರತೀಯ ಸೇನೆಯಿಂದ 200 ದೂರದರ್ಶಕಗಳನ್ನು ಸಿದ್ಧಪಡಿಸಿಕೊಡುವಂತೆ ಆರ್ಡರ್ ಬಂದಿದೆ. 10 ಕಿಲೋಮೀಟರ್ ದೂರದಲ್ಲಿರುವ ಬೋರ್ಡ್‍ಗಳನ್ನು ಮನೋಹರ್ ಅವರ ಸಾಧನದಲ್ಲಿ ನೋಡಬಹುದು, ದೂರದಲ್ಲಿರುವ ಬೋರ್ಡ್‍ಗಳನ್ನು ಓದಬಹುದು. ಶತ್ರು ರಾಷ್ಟ್ರದ ವಾಹನಗಳು ನಮ್ಮ ದೇಶದತ್ತ ಬರುತ್ತಿದ್ರೆ ಅದನ್ನು ಓದಿ ಗುರುತಿಸಬಹುದು. ಚಂದ್ರನ ಮೇಲಿನ ಗುಳಿಗಳನ್ನು ಸ್ಪಷ್ಟವಾಗಿ ನೋಡಬಹುದು. ಶನಿಗ್ರಹದ ವರ್ತುಲಗಳನ್ನು ನೋಡಬಹುದು. ಗ್ರಹಣಗಳಾದಾಗ ಈ ದೂರದರ್ಶಕದ ಮೂಲಕ ವಿದ್ಯಾರ್ಥಿಗಳಿಗೆ ಮಾಹಿತಿ ಕೊಡುವ ಕೆಲಸವನ್ನು ಪ್ರೊ. ಮನೋಹರ್ ಮಾಡುತ್ತಾ ಬಂದಿದ್ದಾರೆ.

    ಸೂಕ್ಷ್ಮದರ್ಶಕ ಮತ್ತು ದೂರ ದರ್ಶಕವನ್ನು ಬಹಳ ಕಡಿಮೆ ವೆಚ್ಚದಲ್ಲಿ ತಯಾರಿಸಿದ್ದು ಮನೋಹರ್ ಅವರ ಸಾಧನೆ. ಇಡೀ ಟೆಲಿಸ್ಕೋಪ್ ಒಂದೇ ಟ್ಯೂಬ್‍ನಲ್ಲಿ ಫಿಕ್ಸ್ ಮಾಡಿದ ಚಾಕಚಕ್ಯತೆಯನ್ನು ಸ್ಕೆಚ್ ಮಾಡಿದ್ದಾರೆ. 40 ರಿಂದ 50 ಕಿಲೋಮೀಟರ್ ವರೆಗಿನ ಯುದ್ಧಭೂಮಿಗೆ ಬಹಳ ಉಪಯುಕ್ತವಾಗಿದೆ. ಚಂದ್ರಗ್ರಹಣ, ಸೂರ್ಯಗ್ರಹಣ, ಗ್ರಹಗಳು, ಸಮುದ್ರ ಹೀಗೆ ಎಲ್ಲವನ್ನೂ ಹತ್ತಿರದಿಂದ ಕಣ್ತುಂಬಿಕೊಳ್ಳುವ ಅವಕಾಶ ಸಿಕ್ಕಿದೆ. ಮರದ ಕಟ್ಟಿಂಗ್ ಗೇಜ್ ನಿರ್ಮಾಣ ಮಾಡಿದ್ದು, ಆ ಸಾಧನಕ್ಕೂ ಪೇಟೆಂಟ್ ಸಿಕ್ಕಿದೆ. ಒಟ್ಟಿನಲ್ಲಿ ಇಂಡಿಯಾ, ಅಮೆರಿಕಾ ಸೇರಿದಂತೆ 37 ದೇಶಗಳ ಪೇಟೆಂಟ್ ಸಿಕ್ಕ ಮಹಾನ್ ಸಾಧನ ನಮ್ಮ ನಡುವೆ ಇರೋದು ಹೆಮ್ಮೆಯ ಸಂಗತಿ.

    https://www.youtube.com/watch?v=debF78Eud0g

  • ರಾಹುಲ್ ಗಾಂಧಿ ಒಬ್ಬ ಬಚ್ಚಾ, ಸಿದ್ದರಾಮಯ್ಯ ಗೂಂಡಾರಾಜ್ಯದ ಸಿಎಂ- ಉಡುಪಿಯಲ್ಲಿ ಗುಡುಗಿದ ಬಿಎಸ್ ವೈ

    ರಾಹುಲ್ ಗಾಂಧಿ ಒಬ್ಬ ಬಚ್ಚಾ, ಸಿದ್ದರಾಮಯ್ಯ ಗೂಂಡಾರಾಜ್ಯದ ಸಿಎಂ- ಉಡುಪಿಯಲ್ಲಿ ಗುಡುಗಿದ ಬಿಎಸ್ ವೈ

    ಉಡುಪಿ: ರಾಹುಲ್ ಗಾಂಧಿ ಒಬ್ಬ ಬಚ್ಚಾ. ಆತನನ್ನು ಹಿಡ್ಕೊಂಡು ಮಠ, ದೇವಸ್ಥಾನ ಹೋಗ್ತೀರಾ? ನೀವು ಏನೇ ಮಾಡಿದ್ರೂ ಈ ಬಾರಿ ಗೆಲ್ಲಲ್ಲ ಅಂತ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಗುಡುಗಿದ್ದಾರೆ.

    ನಗರದಲ್ಲಿ ನಡೆದ ಸಾಮಾಜಿಕ ಜಾಲತಾಣಿಗರ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಹುಲ್ ಗಾಂಧಿ ಇಲ್ಲೇ ಕ್ಯಾಂಪ್ ಮಾಡಲಿ. ಮಠ ದೇವಸ್ಥಾನದ ಓಟ ಮಾಡಲಿ. ಏನು ಮಾಡಿದ್ರೂ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುವುದು ಕನಸು ಎಂದರು. ಇದನ್ನೂ ಓದಿ: ಉಡುಪಿಯಲ್ಲಿ ಚುನಾವಣಾ ಚಾಣಕ್ಯನ ರಣತಂತ್ರ- ಸ್ವಾಮೀಜಿಗಳ ಜೊತೆ ಶಾ ಗೌಪ್ಯ ಮಾತುಕತೆ

    ನಾವು ಈ ಬಾರಿ 150 ಸೀಟು ಗೆಲ್ಲುತ್ತೇವೆ. ಹಿಂದೂಗಳ ವಿರೋಧಿ ಸರ್ಕಾರಕ್ಕೆ ಜನ ಬುದ್ಧಿ ಕಲಿಸುತ್ತಾರೆ. ಸೊಕ್ಕಿನ ಧಿಮಾಕಿನ ಆಡಳಿತ ಎರಡು ತಿಂಗಳು ಮಾತ್ರ. ಕಾಂಗ್ರೆಸ್ ಮನೆಗೆ ಹೋಗುವ ಕಾಲ ಬಂದಿದೆ. ಕೊನೆಯ ದಿನಗಳನ್ನು ಕಾಂಗ್ರೆಸ್ ಎಣಿಸುತ್ತಿದೆ. ರಾಜ್ಯದಲ್ಲಿ ಗೂಂಡಾ ಸರ್ಕಾರ ಅಧಿಕಾರದಲ್ಲಿದೆ. ಸಿಎಂ ಸಿದ್ದರಾಮಯ್ಯ ಪಕ್ಕದಲ್ಲಿ ರೌಡಿಗಳು, ಗೂಂಡಾಗಳು ಓಡಾಡ್ತಾರೆ ಎಂದರು. ಇದನ್ನೂ ಓದಿ: ಚರ್ಚೆ ನಡೆಯಲೆಂದೇ ತಪ್ಪಾಗಿ ವಿದ್ವತ್ ಹೆಸರನ್ನು ಹೇಳಿದ್ದೇನೆ: ಸ್ಪಷ್ಟನೆಯೊಂದಿಗೆ ಸಿಎಂಗೆ ಶಾ ಟಾಂಗ್

    ಶಾಸಕ ಹ್ಯಾರಿಸ್ ಪುತ್ರ ರೌಡಿ ನಲಪಾಡ್ ವಿರುದ್ಧ ಬಿಎಸ್ ವೈ ಆಕ್ರೋಶ ವ್ಯಕ್ತಪಡಸಿದ್ರು. ವಿದ್ವತ್ ಮತ್ತು ಮಾಧ್ಯಮದ ಮೇಲಿನ ಹಲ್ಲೆ ವಿರುದ್ಧ ಕಿಡಿ ಕಾರಿದರು. ಇನ್ನೊಬ್ಬ ಕಾಂಗ್ರೆಸ್ ಶಾಸಕ ಭೈರತಿ ಆಪ್ತ ನಾರಾಯಣ ಸ್ವಾಮಿ ಬಿಬಿಎಂ ಪಿ ಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚೋದಕ್ಕೆ ಮುಂದಾಗಿದ್ದ. ಇಂತವರನ್ನು ಇಟ್ಕೊಂಡು ಸಿದ್ದರಾಮಯ್ಯ ಸರ್ಕಾರ ಮಾಡುತ್ತಿದ್ದಾರೆ. ಇಂತವರಿಗೆ ಪ್ರಧಾನಿ ಮೋದಿ ಬಗ್ಗೆ ಮಾತನಾಡುವ ಯೋಗ್ಯತೆ ಇಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ಪಂಚೆ ಶಲ್ಯ ತೊಟ್ಟು ಶ್ರೀಕೃಷ್ಣನ ದರ್ಶನ ಮಾಡಿದ ಅಮಿತ್ ಶಾ

  • ಪಂಚೆ ಶಲ್ಯ ತೊಟ್ಟು ಶ್ರೀಕೃಷ್ಣನ ದರ್ಶನ ಮಾಡಿದ ಅಮಿತ್ ಶಾ

    ಪಂಚೆ ಶಲ್ಯ ತೊಟ್ಟು ಶ್ರೀಕೃಷ್ಣನ ದರ್ಶನ ಮಾಡಿದ ಅಮಿತ್ ಶಾ

    ಉಡುಪಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಉಡುಪಿ ಶ್ರೀಕೃಷ್ಣಮಠಕ್ಕೆ ಭೇಟಿ ಕೊಟ್ಟಿದ್ದಾರೆ. ಕನಕ ನವಗ್ರಹ ಕಿಂಡಿಯ ಮೂಲಕ ಶ್ರೀಕೃಷ್ಣನ ದರ್ಶನ ಮಾಡಿದರು.

    ಪರ್ಯಾಯ ಪಲಿಮಾರು ವಿದ್ಯಾಧೀಶ ಸ್ವಾಮೀಜಿ ಉಡುಪಿ ಕೃಷ್ಣ ಮಠದ ಇತಿಹಾಸವನ್ನು ವಿವರಿಸಿದರು. 9 ಕಿಂಡಿಗಳ ಮೂಲಕ ದರ್ಶನ ಮಾಡುವಂತೆ ಸೂಚಿಸಿದರು. ಮಹಾಪೂಜೆಯ ಸಂದರ್ಭದಲ್ಲಿ ಶಾ ಬಂದಿದ್ದರಿಂದ ಪಂಚೆ, ಶಲ್ಯ ತೊಟ್ಟು ಸಾಂಪ್ರದಾಯಿಕ ಉಡುಗೆಯಲ್ಲಿ ಮಠಕ್ಕೆ ಭೇಟಿ ಕೊಟ್ಟರು.

    ಮಹಾಪೂಜೆ ಸಂದರ್ಭದಲ್ಲೇ ಶಾ ಭೇಟಿ ಕೊಟ್ಟು ಕೃಷ್ಣನ ದರ್ಶನ ಮಾಡಿದ್ದು ವಿಶೇಷವಾಗಿತ್ತು. ಶಾ ಜೊತೆ ಬಿ.ಎಸ್ ಯಡಿಯೂರಪ್ಪ, ಮುರಳೀಧರ್ ರಾವ್, ಸಂತೋಷ್, ಶೋಭಾ ಕರಂದ್ಲಾಜೆ, ಸಿ.ಟಿ ರವಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಪರ್ಯಾಯ ಸ್ವಾಮೀಜಿಯನ್ನು ಅಮಿತ್ ಶಾ ಗೌರವಿಸಿದರು. ವಿದ್ಯಾಧೀಶ ಸ್ವಾಮೀಜಿ ಅವರು ಅಮಿತ್ ಶಾ, ಯಡಿಯೂರಪ್ಪ ಅವರನ್ನು ಸನ್ಮಾನಿಸಿದರು. ಕೃಷ್ಣಮಠದ ಕಲಾಕೃತಿ, ಐದು ಲಡ್ಡು ಪ್ರಸಾದ, ಚಕ್ಕುಲಿ, ತೀರ್ಥ ಮಂತ್ರಾಕ್ಷತೆಯನ್ನು ನೀಡಿದರು.

    ಈ ಸಂದರ್ಭ ಮಾತನಾಡಿದ ಅಮಿತ್ ಶಾ, ಉಡುಪಿ ಶ್ರೀಕೃಷ್ಣನ ದರ್ಶನ ಮಾಡಿ ಧನ್ಯನಾದೆ. ಬೆಳಗ್ಗೆಯೇ ದರ್ಶನ ಸಿಕ್ಕಿದ್ದು ಸಂತೃಪ್ತಿಯಾಗಿದೆ. ಪರ್ಯಾಯ ಸ್ವಾಮೀಜಿಯ ಭೇಟಿಯೂ ಮನಸ್ಸಿಗೆ ಖುಷಿ ತಂದಿದೆ. ನಿನ್ನೆ ಸಂತರ ಭೇಟಿಯೂ ನನ್ನ ಪಾಲಿಗೆ ಒಲಿದಿತ್ತು ಎಂದು ಹೇಳಿದರು.

    ಪರ್ಯಾಯ ಪಲಿಮಾರು ವಿದ್ಯಾಧೀಶ ಶ್ರೀ ಮಾತನಾಡಿ, ದೇಶದ ಜನರ ರಾಮ ಮಂದಿರದ ಕನಸು ನನಸು ಮಾಡಿ ಎಂದು ಹೇಳಿದರು. ರಥಬೀದಿಗೆ ತೆರಳಿದ ಶಾ, ಕನಕನ ಕಿಂಡಿಯ ಮೂಲಕ ಕೃಷ್ಣನ ದರ್ಶನ ಮಾಡಿ ತೆರಳಿದರು.

     

  • ಉಡುಪಿಯಲ್ಲಿ ಚುನಾವಣಾ ಚಾಣಕ್ಯನ ರಣತಂತ್ರ- ಸ್ವಾಮೀಜಿಗಳ ಜೊತೆ ಶಾ ಗೌಪ್ಯ ಮಾತುಕತೆ

    ಉಡುಪಿಯಲ್ಲಿ ಚುನಾವಣಾ ಚಾಣಕ್ಯನ ರಣತಂತ್ರ- ಸ್ವಾಮೀಜಿಗಳ ಜೊತೆ ಶಾ ಗೌಪ್ಯ ಮಾತುಕತೆ

    ಉಡುಪಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಎರಡು ದಿನ ಕರಾವಳಿಯ ಎರಡು ಜಿಲ್ಲೆಯಲ್ಲಿ ಓಡಾಟ ನಡೆಸಿದ್ದಾರೆ. ರಾತ್ರಿ ಪ್ರವಾಸಿ ಬಂಗಲೆಯಲ್ಲಿ ವಾಸ್ತವ್ಯಕ್ಕೆ ತೆರಳಿದ್ದ ಅಮಿತ್ ಶಾ, ರಾತ್ರೋರಾತ್ರಿ ಸ್ವಾಮೀಜಿಗಳ ಸಭೆ ನಡೆಸಿದ್ದಾರೆ.

    ಪೇಜಾವರ ಮಠಕ್ಕೆ ಆಗಮಿಸಿದ ಅಮಿತ್ ಶಾ, ಮೂರು ಜಿಲ್ಲೆಯ ಎಲ್ಲಾ ಸ್ವಾಮೀಜಿಗಳ ಜೊತೆ ಸಮಾಲೋಚನೆ ಮಾಡಿದ್ರು. ಅಮಿತ್ ಶಾ ಪಕ್ಷದ ಪರವಾಗಿ ಕೆಲ ಬೇಡಿಕೆ ಇಟ್ಟರು. ಈ ಬಾರಿಯ ಚುನಾವಣೆಯಲ್ಲಿ ಸಹಾಯ ಕೋರಿದರು. ಬಾಂಗ್ಲಾ ವಲಸಿಗರನ್ನು ಗುರುತಿಸುವ ಕಾರ್ಯ ಮಾಡಲಾಗುತ್ತಿದೆ. ಇದಕ್ಕೆ ಎಲ್ಲಾ ರಾಜ್ಯಗಳ ಸಹಕಾರ ಬೇಕು. ಸನಾತನ ಧರ್ಮದ ಮಹತ್ವ ವಿಶ್ವಕ್ಕೆ ಪರಿಚಯಿಸಲು ಸ್ವಾಮೀಜಿಗಳ ಸಹಕಾರ ಬೇಕು ಎಂದು ಅಮಿತ್ ಶಾ ಕೇಳಿಕೊಂಡರು.

    ಸಂತರು ತಮ್ಮ ಅಭಿಪ್ರಾಯ ಮಂಡಿಸಿದ್ದು, ದೇಶದಲ್ಲಿ ಸಮಾನ ಕಾನೂನು-ಸಮಾನ ನ್ಯಾಯವನ್ನು ಅಪೇಕ್ಷಿಸಿದರು. ಧರ್ಮ, ಜಾತಿಯ ಆಧಾರದಲ್ಲಿ ಸವಲತ್ತು ವಿತರಣೆಗೆ ಆಕ್ಷೇಪ ವ್ಯಕ್ತಪಡಿಸಿದ್ರು. ಮಹಾದಾಯಿ ವಿಚಾರದಲ್ಲಿ ಬಿಜೆಪಿ ಒಂದು ನಿಲುವಿಗೆ ಬರಬೇಕು. ಕಾಂಗ್ರೆಸ್ ಸಹಾಯ ಮಾಡದಿದ್ದರೂ ಕೇಂದ್ರ ಬಿಜೆಪಿ ಸರ್ಕಾರ ಹೆಚ್ಚು ಗಮನ ಕೊಡಬೇಕು ಎಂದು ಕೇಳಿಕೊಂಡರು. ಸುಮಾರು ಒಂದು ಗಂಟೆಗಳ ಕಾಲ ಸ್ವಾಮೀಜಿಗಳ ಜೊತೆ ಅಮಿತ್ ಶಾ ಗೌಪ್ಯ ಮಾತುಕತೆ ನಡೆಸಿದರು.

    ಚುನಾವಣೆ ಹತ್ತಿರ ಬರುತ್ತಿದ್ದಂತೆ ಅಮಿತ್ ಶಾ ಅವರ ಈ ನಡೆ ಬಹಳ ಮಹತ್ವ ಪಡೆದುಕೊಂಡಿದೆ. ಇಂದು ಅಮಿತ್ ಶಾ ಪೇಜಾವರ ಮಠಕ್ಕೆ ಭೇಟಿ ನೀಡಲಿದ್ದಾರೆ.

  • 68 ವರ್ಷ ಮುಚ್ಚಿದ್ದ ದೇಶದ ಭವಿಷ್ಯದ ಬಾಗಿಲನ್ನು 2014ರಲ್ಲಿ ತೆರೆದೆವು- ಕಾಂಗ್ರೆಸ್ಸಿಗೆ ಶಾ ಪಂಚ್

    68 ವರ್ಷ ಮುಚ್ಚಿದ್ದ ದೇಶದ ಭವಿಷ್ಯದ ಬಾಗಿಲನ್ನು 2014ರಲ್ಲಿ ತೆರೆದೆವು- ಕಾಂಗ್ರೆಸ್ಸಿಗೆ ಶಾ ಪಂಚ್

    ಉಡುಪಿ: ವೇದಿಕೆಯಲ್ಲಿ ರಾಜಕಾರಣದಲ್ಲಿ ಐವತ್ತು ದಾಟಿದವರು ಇದ್ದೇವೆ. ಕೆಲವೇ ವರ್ಷದಲ್ಲಿ ಯುವಕರು ನಮ್ಮ ಜಾಗದಲ್ಲಿ ಇರಬೇಕು ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹೇಳಿದರು.

    ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಜೊತೆಗಿನ ಸಂವಾದಕ್ಕೂ ಮುನ್ನ ನವ ಭಾರತ ನಿರ್ಮಾಣದಲ್ಲಿ ಯುವಕರ ಪಾತ್ರ ವಿಚಾರದಲ್ಲಿ ಶಾ ಮಾತನಾಡಿದರು. ಪಕ್ಷವನ್ನು ಪಕ್ಕಕ್ಕಿಟ್ಟು ಮಾತನಾಡುತ್ತೇನೆ, ಸ್ವಾತಂತ್ರ್ಯ ಹೋರಾಟ ಸಂದರ್ಭ ಪಕ್ಷ, ಜಾತಿ ಇರಲಿಲ್ಲ. ಸ್ವರಾಜ್ಯದ ಚಿಂತನೆ ಎಲ್ಲರ ಮನದಲ್ಲಿತ್ತು. ಈಗ ನವ ಭಾರತ ನಿರ್ಮಾಣಕ್ಕೆ ಯುವ ಪಡೆ ಟೊಂಕಕಟ್ಟಿ ನಿಲ್ಲಬೇಕು ಎಂದು ಕರೆ ನೀಡಿದರು.

    68 ವರ್ಷ ಭಾರತದ ಭವಿಷ್ಯದ ಬಾಗಿಲು ಮುಚ್ಚಿತ್ತು. ಭ್ರಷ್ಟಾಚಾರ ಭಾರತ ದೇಶವನ್ನು ಆವರಿಸಿತ್ತು. ನಾಲ್ಕು ವರ್ಷದ ಹಿಂದೆ ಬಾಗಿಲು ತೆರೆದಿದ್ದೇವೆ. 2014 ಚುನಾವಣೆ ಸುವರ್ಣಾಕ್ಷರದಲ್ಲಿ ಬರೆದೆವು. 30 ವರ್ಷದ ನಂತರ ಒಂದೇ ಪಕ್ಷ ಬಹುಮತ ಪಡೆಯಿತು, ಕಿಚಡಿ ಸರಕಾರಗಳಿಂದ ಭಾರತಕ್ಕೆ ಮುಕ್ತಿಯಾಯ್ತು. ಬಿಜೆಪಿ ಪಕ್ಷ ಸರಕಾರ ಮಾಡಲು ಅಧಿಕಾರ ಕ್ಕೆ ಬಂದಿಲ್ಲ. ಭಾರತದ ಸದೃಢತೆಯ ನಿಲುವು ಬಿಜೆಪಿದ್ದು. ಓಟ್ ಬ್ಯಾಂಕ್ ರಾಜಕಾರಣ ನಾವು ಮಾಡಲ್ಲ. ಯಾರನ್ನು ಓಲೈಕೆ ಮಾಡುವ ಉದ್ದೇಶ ನಮಗಿಲ್ಲ ಎಂದು ವಿಪಕ್ಷಗಳಿಗೆ ಟಾಂಗ್ ಕೊಟ್ಟರು.

    ದೇಶದಲ್ಲಿ ಅಂಧಕಾರ ಕವಿದಿತ್ತು. ಬಡವರ ಮನೆಯಲ್ಲಿ ಒಲೆ ಉರಿಯುತ್ತಿರಲಿಲ್ಲ, ಈಗ ಮನೆಗಳಲ್ಲಿ ಬೆಳಕು ಬಂದಿದೆ. ಅಡುಗೆ ಮನೆಗೆ ಉಚಿತ ಸಿಲಿಂಡರ್ ಬಂದಿದೆ. ಮೋದಿಯ ಸ್ವಚ್ಛ ಆಡಳಿತ ಶುರುಮಾಡಿರೋದ್ರಿಂದ ದಿನಗಳು ಕಠಿಣವಾಗಿ ಕಾಣಿಸುತ್ತಿರಬಹುದು. ಭಾರತದ ಮುಂದಿನ ದಿನಗಳು ಒಳ್ಳೆಯದಿರುತ್ತದೆ. ದೇಶಾದ್ಯಂತ ಕೋಟ್ಯಾಂತರ ಶೌಚಾಲಯ ನಿರ್ಮಾಣವಾಗಿದೆ, ಮೋದಿ ಕೇರ್, ಮುಂದಿನ 4 ವರ್ಷಗಳಲ್ಲಿ ಎಲ್ಲಾ ಮನೆಗಳಲ್ಲಿ ಎಲ್ಲಾ ಸವಲತ್ತು ಇರುತ್ತದೆ ಎಂದು ಹೇಳಿದರು.

    ಉರಿಯಲ್ಲಿ 12 ಯೋಧರ ಹತ್ಯೆಯಾಯ್ತು. ಮೋದಿ ಭಾಷಣ ಮಾಡಲಿಲ್ಲ. ಸರ್ಜಿಕಲ್ ಸ್ಟ್ರೈಕ್ ಮೂಲಕ ಉತ್ತರ ಕೊಟ್ಟರು. ಅಮೇರಿಕ, ಇಸ್ರೇಲ್ ರೀತಿ ಭಾರತೀಯ ಯೋಧರಿಗೂ ವಿಶ್ವದಲ್ಲಿ ಗೌರವವಿದೆ ಎಂದರು.

    ಯೋಧರ ಕೈಯಲ್ಲಿರುವ ಬಂದೂಕಿನ ಗೋಲಿಗೆ ಗೋಲ್ ಯಾವುದೆಂದು ಗೊತ್ತಿದೆ. ವಿರೋಧಿಗರಿಗೆ ಉತ್ತರಿಸಲು ನಮಗೆ ಗೊತ್ತಿದೆ. ನಾವು ಶಾಂತಿಯನ್ನು ಅಪೇಕ್ಷಿಸುವ ಭಾರತೀಯರು ಎಂದು ಶಾ ವಿರೋಧಿ ಪಾಕ್ ಮತ್ತು ಚೀನಾ ಕುರಿತು ಹೇಳಿದರು. ಸ್ಕಿಲ್ ಇಂಡಿಯಾ, ಸ್ಟಾರ್ಟ್ ಅಪ್ ಇಂಡಿಯಾ ನೆನಪಿಸಿದ ಶಾ, ಯುವಕರಿಗಾಗಿ ಕೇಂದ್ರ ಸರ್ಕಾರ ಬೆನ್ನೆಲುಬಾಗಿ ನಿಲ್ಲುತ್ತದೆ ಎಂದರು.