Tag: ಉಡುಪಿ ವೀಡಿಯೋ

  • ಹೆಣ್ಣುಮಕ್ಕಳ ವಿಚಾರದಲ್ಲಿ ಹಗುರವಾಗಿ ಮಾತಾಡ್ತಾರೆ, ಇಡೀ ಸರ್ಕಾರಕ್ಕೆ ನಾಚಿಕೆಯಾಗ್ಬೇಕು: ಬೊಮ್ಮಾಯಿ ಕಿಡಿ

    ಹೆಣ್ಣುಮಕ್ಕಳ ವಿಚಾರದಲ್ಲಿ ಹಗುರವಾಗಿ ಮಾತಾಡ್ತಾರೆ, ಇಡೀ ಸರ್ಕಾರಕ್ಕೆ ನಾಚಿಕೆಯಾಗ್ಬೇಕು: ಬೊಮ್ಮಾಯಿ ಕಿಡಿ

    ಹಾವೇರಿ: ಗೃಹ ಸಚಿವರು ಹೆಣ್ಣುಮಕ್ಕಳ ವಿಚಾರದಲ್ಲಿ ಹಗುರವಾಗಿ ಮಾತನಾಡಿದ್ದಾರೆ. ಇಡೀ ಸರ್ಕಾರಕ್ಕೆ ನಾಚಿಕೆಯಾಗಬೇಕು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಕಿಡಿಕಾರಿದರು.

    ಹಾವೇರಿಯಲ್ಲಿ (Haveri) ಮಾತನಾಡಿದ ಅವರು, ಹೆಣ್ಣುಮಕ್ಕಳ ಬಗ್ಗೆ ಸರ್ಕಾರಕ್ಕೆ ಏನು ಗೌರವವಿದೆ. ತನಿಖೆಗೂ ಮೊದಲೇ ಏನೂ ಆಗಿಲ್ಲ ಅಂದ್ರೆ ಪೊಲೀಸರು ಉಡುಪಿ ಪ್ರಕರಣವನ್ನ ಮುಚ್ಚಿ ಹಾಕುತ್ತಾರೆ. ಪ್ರಕರಣದಲ್ಲಿ ಏನು ಇಲ್ಲಾ ಅಂದ್ರೆ, ವಾರ ಬಿಟ್ಟು ಎಫ್‌ಐಆರ್ ಯಾಕೆ ಹಾಕಿದ್ರು? ಎಲ್ಲಾ ಮುಚ್ಚಿ ಹಾಕುವ ಕೆಲಸ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಉಡುಪಿ ವೀಡಿಯೋ ಕೇಸ್‌ – ಸಿಎಂ ವಿರುದ್ಧ ಆಕ್ಷೇಪಾರ್ಹ ಟ್ವೀಟ್‌ ಮಾಡಿದ್ದ ಬಿಜೆಪಿ ಕಾರ್ಯಕರ್ತೆ ಬಂಧನ

    ಕೆಜಿ ಹಳ್ಳಿ, ಡಿಜೆ ಹಳ್ಳಿ, ಹುಬ್ಬಳ್ಳಿ ಪ್ರಕರಣ ಬೇರೆ. ಹೋರಾಟಗಾರರ ಪ್ರಕರಣಗಳು ಬೇರೆ. ಓಲೈಕೆ ರಾಜಕಾರಣಕ್ಕಾಗಿ ದಂಗೆಕೋರರನ್ನ ಕೈಬಿಡುತ್ತೀರಿ ಅಂದ್ರೆ ಯಾರ ಪರವಾಗಿದೆ ಸರ್ಕಾರ ಎಂದು ಅಸಮಾಧಾನ ಹೊರಹಾಕಿದರು.

    ಸೂಚ್ಯಂಕದಲ್ಲಿ ಹಾವೇರಿ ಜಿಲ್ಲೆ ಹಿಂದಿದೆ. ಸಿಎಂ ಆಡಳಿತ ಮಾಡಿರುವ ಜಿಲ್ಲೆ ಎಂದು ಸಿದ್ದರಾಮಯ್ಯ ನವರು ಹಾವೇರಿಗೆ ಬಂದಾಗ ಹೇಳಿದ್ದಾರೆ. ಹಿಂದೆ ನೀವು 2013 ರಲ್ಲಿ ಸಿಎಂ ಆಗಿದ್ದಾಗ ಹಾವೇರಿಗೆ ಬಂದಿದ್ದ ಮೆಡಿಕಲ್ ಕಾಲೇಜನ್ನು ಗದಗ ಜಿಲ್ಲೆಗೆ ಕೊಟ್ಟಿರಿ. ಹಾವೇರಿಗೆ ಇಂಜಿನಿಯರ್ ಕಾಲೇಜು, ಮೆಡಿಕಲ್ ಕಾಲೇಜು ಕೊಟ್ಟಿದ್ದು ನಾವು. ನೀರಾವರಿ ಯೋಜನೆ ಕೊಟ್ಟಿದ್ದು ನಮ್ಮ ಸರ್ಕಾರ. ಜಿಲ್ಲೆಯ ಅಭಿವೃದ್ಧಿಗೆ ನಾನು ಎಲ್ಲವನ್ನೂ ಮಾಡಿದ್ದೇನೆ. ಜಿಲ್ಲೆಯಲ್ಲಿ ನಡೆದಿರುವ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಮಾಡಬೇಕು. ಯಾವುದೇ ಇಲಾಖೆಯ ಕಾಮಗಾರಿಯಲ್ಲಿ ಹಗರಣ ಆಗಿದ್ರೆ, ಎಸ್‌ಐಟಿ ತನಿಖೆಗೆ ಕೊಡಲಿ. ಸದನದಲ್ಲಿಯೂ ಇದರ ಬಗ್ಗೆ ಹೇಳಿದ್ದೇನೆ. ಎಸ್‌ಐಟಿ ತನಿಖೆಗೆ ಕೊಡಲಿ, ಏನೂ ತೊಂದರೆಯಿಲ್ಲ. ತಪ್ಪು ಮಾಡಿದವರಿಗೆ ಶಿಕ್ಷೆ ಆಗಲಿ. ಮೊದಲ ದಿನದಿಂದಲೂ ಈ ಸರ್ಕಾರ ಗೊಂದಲದಲ್ಲಿದೆ ಎಂದು ಟೀಕಿಸಿದರು. ಇದನ್ನೂ ಓದಿ: ವೀಡಿಯೋ ಹಲವು ಬಾರಿ ಫಾರ್ವರ್ಡ್ ಆಗಿದೆ: ಯಶ್‍ಪಾಲ್ ಸುವರ್ಣ ಹೊಸ ಬಾಂಬ್

    ಶಾಸಕರು-ಮಂತ್ರಿಗಳ ನಡುವೆ ಸಮನ್ವಯ ಇಲ್ಲದಿರುವುದು ಸ್ಷಷ್ಟವಾಗಿದೆ. ತೇಪೆ ಹಚ್ಚುವ ಕೆಲಸವನ್ನು ಸಿಎಂ ಮಾಡಿದ್ದಾರೆ. ಗೊಂದಲ ಇರುವುದರಿಂದ ಮೀಟಿಂಗ್ ಮಾಡಿದ್ದಾರೆ. ಎಲ್ಲವೂ ಸರಿಯಿದ್ದಿದ್ದರೆ ಹೈಕಮಾಂಡ್ ಯಾಕೆ ಬುಲಾವ್ ಮಾಡ್ತಿತ್ತು? ನಿನ್ನೆ ಮೀಟಿಂಗ್‌ನಲ್ಲಿ ಯಾವುದಕ್ಕೂ ಪರಿಹಾರ ಸಿಕ್ಕಿಲ್ಲ. ಅನುದಾನ ಕೊಡುವುದರಲ್ಲಿ ಗೊಂದಲ, ಗ್ಯಾರಂಟಿ ಅನುಷ್ಠಾನದಲ್ಲಿ ಗೊಂದಲ, ಆಡಳಿತದಲ್ಲಿ ಗೊಂದಲ, ಸರ್ಕಾರ ಗೊಂದಲದಲ್ಲಿದೆ. ಬಹಳ ದೊಡ್ಡ ಭಿನ್ನಾಭಿಪ್ರಾಯ ಇದೆ. ಶಾಸಕರನ್ನ ಸಮಾಧಾನ ಮಾಡುವ ಕೆಲಸ ಸಿಎಂ ಮಾಡಿದ್ದಾರೆ. ಈ ಸರ್ಕಾರ ಪ್ರಾರಂಭದಿAದಲೂ ಗೊಂದಲದಲ್ಲಿದೆ. ಮತ್ತಷ್ಟು ಗೊಂದಲ ಮಾಡುತ್ತಿದೆ ಎಂದು ಹೇಳಿದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]