Tag: ಉಡುಪಿ ಮಳೆ

  • ಉಡುಪಿ ಸಿದ್ಧಿವಿನಾಯಕ ದೇವಸ್ಥಾನಕ್ಕೆ 21 ದಿನದಿಂದ ಕರೆಂಟ್ ಇಲ್ಲ- ಮೆಸ್ಕಾಂ ವಿರುದ್ಧ ಭಕ್ತರ ಅಸಮಾಧಾನ

    ಉಡುಪಿ ಸಿದ್ಧಿವಿನಾಯಕ ದೇವಸ್ಥಾನಕ್ಕೆ 21 ದಿನದಿಂದ ಕರೆಂಟ್ ಇಲ್ಲ- ಮೆಸ್ಕಾಂ ವಿರುದ್ಧ ಭಕ್ತರ ಅಸಮಾಧಾನ

    ಉಡುಪಿ: ಕರಾವಳಿ ಜಿಲ್ಲೆ ಉಡುಪಿಯಲ್ಲಿ ಚಂಡಮಾರುತ ಮತ್ತು ಪೂರ್ವ ಮುಂಗಾರು ಮಳೆ ದಾಖಲೆ ಸೃಷ್ಟಿಸಿತ್ತು. ಜಿಲ್ಲೆಯಾದ್ಯಂತ ಸಾಕಷ್ಟು ಅನಾಹುತಗಳು ಕೂಡ ಆಗಿದ್ದವು. ಉಡುಪಿ ಸಿದ್ದಿವಿನಾಯಕ ದೇವಸ್ಥಾನಕ್ಕೆ 21 ದಿನದಿಂದ ಕರೆಂಟ್‌ ಇಲ್ಲದ ಕಾರಣ ಮೆಸ್ಕಾಂ ವಿರುದ್ಧ ಭಕ್ತರು ಅಸಮಾಧಾನ ಹೊರಹಾಕಿದ್ದಾರೆ.

    ಮಣಿಪಾಲ ಭಾಗದಲ್ಲಿ ಬಿದ್ದ ಗಾಳಿ ಮಳೆ ಸೃಷ್ಟಿಸಿದ ಅವಾಂತರದ ಪರಿಣಾಮ ಇನ್ನೂ ಸಹಜ ಸ್ಥಿತಿಗೆ ಬಂದಿಲ್ಲ. 22 ದಿನ ಕಳೆದರೂ ಮಣಿಪಾಲ ಸಮೀಪದ ಶೀಂಬ್ರ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಇನ್ನೂ ಕರೆಂಟ್ ಬಂದಿಲ್ಲ. ದೇಗುಲಕ್ಕೆ ಬರುವ ಭಕ್ತರಿಗೆ, ಪ್ರತಿದಿನ ಅರ್ಚನೆ-ಪೂಜೆ ಅಭಿಷೇಕ ಮಾಡುವ ಅರ್ಚಕರಿಗೆ ವಿದ್ಯುತ್ ಸಮಸ್ಯೆ ತಲೆದೋರಿದೆ.

    ಮಣಿಪಾಲ ಸಂಸ್ಥೆಗೆ ಸಂಬಂಧಿಸಿದ ರೆಸಾರ್ಟ್ ಕತ್ತಲಲ್ಲಿದೆ. ರಸ್ತೆಗೆ ಬಿದ್ದ ವಿದ್ಯುತ್ ಕಂಬ ತಂತಿಗಳು ಇನ್ನು ತೆರವಾಗಿಲ್ಲ. ಮುರಿದುಬಿದ್ದ ವಿದ್ಯುತ್ ಕಂಬ ತಂತಿಗಳ ನಡುವೆ ದೇವಸ್ಥಾನಕ್ಕೆ ಭಕ್ತರು ಓಡಾಡುತ್ತಿದ್ದಾರೆ. ಗುಡ್ಡ ಕುಸಿತದ ಸಾಧ್ಯತೆಗಳಿದ್ದು, ಈವರೆಗೆ ಜಿಲ್ಲಾಡಳಿತ ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿಲ್ಲ.

    ಮಣಿಪಾಲ ನಗರದಿಂದ ಕೂಗಳತೆ ದೂರದಲ್ಲಿರುವ ಶೀಂಬ್ರ ಸಿದ್ಧಿವಿನಾಯಕ ದೇವಸ್ಥಾನದ ಸುತ್ತಮುತ್ತ ವಿದ್ಯುತ್ ಸಮಸ್ಯೆ ಆಗಿದೆ. ಮೆಸ್ಕಾಂ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ನಿರ್ಲಕ್ಷ್ಯದಿಂದ ಕಳೆದ 20ಕ್ಕೂ ಹೆಚ್ಚು ದಿನದಿಂದ ಕರೆಂಟ್ ಇಲ್ಲ. ದೇವಸ್ಥಾನಕ್ಕೆ ಬರುವ ಭಕ್ತರಿಗೆ ಮತ್ತು ಪ್ರತಿದಿನ ಪೂಜೆ ಮಾಡುವ ಅರ್ಚಕರಿಗೆ ಇದರಿಂದ ಸಮಸ್ಯೆಯಾಗಿದೆ. ತಂತಿಗಳು ರಸ್ತೆಯಲ್ಲಿ ಬಿದ್ದಿದೆ. ವಿದ್ಯುತ್ ಕಂಬಗಳನ್ನು ತೆರವು ಮಾಡಿಲ್ಲ ಎಂದು ಕ್ಷೇತ್ರದ ಭಕ್ತ ವಾಸುದೇವ ಪರಂಪಳ್ಳಿ ಬೇಸರ ವ್ಯಕ್ತಪಡಿಸಿದ್ದಾರೆ.

  • ಉಡುಪಿ ಜಿಲ್ಲೆಯಲ್ಲಿ ಗಾಳಿ ಮಳೆ- ನಾಡದೋಣಿ ಮೀನುಗಾರಿಕೆ ಎರಡು ದಿನ ಸ್ಥಗಿತ

    ಉಡುಪಿ ಜಿಲ್ಲೆಯಲ್ಲಿ ಗಾಳಿ ಮಳೆ- ನಾಡದೋಣಿ ಮೀನುಗಾರಿಕೆ ಎರಡು ದಿನ ಸ್ಥಗಿತ

    ಉಡುಪಿ: ಜಿಲ್ಲೆಯಾದ್ಯಂತ ಮುಂಗಾರು ಮಳೆ ಮುಂದುವರೆದಿದೆ. ಕಳೆದ ಐದು ದಿನಗಳಿಂದ ಮಳೆಯಾಗುತ್ತಿದ್ದು ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ನಾಲ್ಕು ದಿಮ ವಿಸ್ತರಣೆ ಮಾಡಲಾಗಿದೆ.

    ಹವಾಮಾನ ಇಲಾಖೆ ಮಾಹಿತಿ ಪ್ರಕಾರ ಉಡುಪಿ ಜಿಲ್ಲೆಯಲ್ಲಿ ಮುಂದಿನ ನಾಲ್ಕು ದಿನ ಭಾರೀ ಮಳೆಯಾಗಲಿದೆ. ದಿನಕ್ಕೆ 100 ಮಿಲಿಮೀಟರ್ ಗೂ ಹೆಚ್ಚು ಮಳೆ ಬೀಳಲಿದ್ದು, ಆರೆಂಜ್ ಅಲರ್ಟ್ ವಿಸ್ತರಣೆ ಮಾಡಲಾಗಿದೆ. ಜಿಲ್ಲೆಯಲ್ಲಿ ಸರಾಸರಿ 28 ಮಿಲಿ ಮೀಟರ್ ಮಳೆಯಾಗಿದೆ. ಏಳು ತಾಲೂಕಿನಲ್ಲಿ ಒಟ್ಟು 21 ಮನೆಗಳಿಗೆ ಹಾನಿಯಾಗಿದೆ. ಮೋಡ ಮುಸುಕಿದ ವಾತಾವರಣ ಮುಂದುವರೆದಿದೆ. ಗಾಳಿ ಜೊತೆ ಮಳೆ ಇನ್ನೂ ಒಂದು ವಾರ ಮುಂದುವರಿಯಲಿದೆ. ಉಡುಪಿ ಜಿಲ್ಲೆಯ ನಾಲ್ಕು ತಾಲೂಕಿನಲ್ಲಿ ಎರಡು ದಿನ ನಾಡದೋಣಿ ಮೀನುಗಾರಿಕೆ ಸ್ಥಗಿತ ಮಾಡಲಾಗಿದೆ.

    ನದಿ ಸಮುದ್ರ ತೀರದಲ್ಲಿ ಜಿಲ್ಲಾಡಳಿತದಿಂದ ಕಟ್ಟೆಚ್ಚರ ರವಾನೆ ಮಾಡಿದ್ದು, ತೀರದ ಜನ ಮುಂಜಾಗೃತೆ ವಹಿಸಬೇಕು. ಅಪಾಯದ ಸಂದರ್ಭದಲ್ಲಿ ಎತ್ತರ ಪ್ರದೇಶಗಳಿಗೆ ಬರಬೇಕು ಎಂದು ಸೂಚನೆ ನೀಡಲಾಗಿದೆ. ಪ್ರವಾಸಿಗರು ನದಿ ಸಮುದ್ರ ತೀರಕ್ಕೆ ಬರಬಾರದು ಎಂದು ಜಿಲ್ಲಾಡಳಿತ ವಿನಂತಿಸಿದೆ.

  • ಉಡುಪಿಯಲ್ಲಿ ದಿಢೀರ್ ಮಿಂಚು ಗುಡುಗು ಸಹಿತ ಮಳೆ

    ಉಡುಪಿಯಲ್ಲಿ ದಿಢೀರ್ ಮಿಂಚು ಗುಡುಗು ಸಹಿತ ಮಳೆ

    ಉಡುಪಿ: ಸೂರ್ಯಾಸ್ತ ಆಗುತ್ತಿದ್ದಂತೆ ಉಡುಪಿ ಜಿಲ್ಲೆಯಾದ್ಯಂತ ಭಾರೀ ಮಳೆ ಶುರುವಾಗಿದೆ. ಕಾರ್ಕಳ ಹೆಬ್ರಿ ತಾಲೂಕಿನಲ್ಲಿ ಸಂಜೆಯೇ ಮಳೆ ಆರಂಭ ಆಗಿತ್ತು. ಸಾಗರ ತೀರದ ತಾಲೂಕುಗಳಲ್ಲಿ ಎರಡು ಗಂಟೆ ವರ್ಷಧಾರೆಯಾಗಿದೆ.

    ಅರಬ್ಬಿ ಸಮುದ್ರದ ಸಾಲಿನ ತಾಲೂಕುಗಳಾದ ಉಡುಪಿ, ಕಾಪು, ಕುಂದಾಪುರದಲ್ಲಿ ಜೋರು ವರ್ಷಧಾರೆಯಾಗಿದೆ. ಬೈಂದೂರು ತಾಲೂಕಿನ ಕರಾವಳಿ ಭಾಗದಲ್ಲಿ ಸಾಧಾರಣ ಮಳೆಯಾಗಿದ್ದು, ಪಶ್ಚಿಮ ಘಟ್ಟದ ತಪ್ಪಲಲ್ಲಿ ಗಾಳಿ ಸಹಿತ ಮಳೆಯಾಗಿದೆ. ಇಂದು ದಿನಪೂರ್ತಿ ಉಷ್ಟಾಂಶ ಹೆಚ್ಚಾಗಿತ್ತು.

    ಉಡುಪಿ ಜಿಲ್ಲೆಯಲ್ಲಿ ದಿಢೀರ್ ಮಳೆಯಾಗಿದ್ದರಿಂದ ಪೇಟೆಯೊಳಗೆ ಜನಜೀವನ ಅಸ್ತವ್ಯಸ್ಥವಾಗಿತ್ತು. ಮಳೆ ಜೊತೆ ಗುಡುಗು ಮಿಂಚು ಇದೆ. ಜಿಲ್ಲೆಯ ಹಲವೆಡೆ ವಿದ್ಯುತ್ ಸಂಪರ್ಕ ಕಡಿತ ಆಗಿದೆ. ಸುಮಾರು ಎರಡು ಗಂಟೆ ಮಳೆ ಬಿದ್ದ ಕಾರಣ ವಾತಾವರಣ ತಂಪಾಗಿದೆ. ಭತ್ತದ ಎರಡನೇ ಬೆಳೆಗೆ ಈ ಮಳೆ ವರದಾನವಾಗಿದ್ದು, ಅಡಿಕೆಗೆ ಅಡ್ಡಿಯಾಗಿದೆ.