Tag: ಉಡುಪಿ ಕೊಲೆ

  • ಗಂಡನಿಗೆ ಪ್ರತಿನಿತ್ಯ ಊಟದಲ್ಲಿ ವಿಷ ಬೆರೆಸಿ ಕೊಡ್ತಿದ್ದ ಖತರ್ನಾಕ್ ಸುಂದರಿ – ಸ್ಲೋ ಪಾಯ್ಸನ್ ಯಾವುದು?

    ಗಂಡನಿಗೆ ಪ್ರತಿನಿತ್ಯ ಊಟದಲ್ಲಿ ವಿಷ ಬೆರೆಸಿ ಕೊಡ್ತಿದ್ದ ಖತರ್ನಾಕ್ ಸುಂದರಿ – ಸ್ಲೋ ಪಾಯ್ಸನ್ ಯಾವುದು?

    – ವರ್ಷ ಕಳೆಯುವ ಮೊದಲೇ ಬೆಡ್‌ರೂಮ್‌ನಲ್ಲಿ ಕೊಲೆ
    – FSL ವರದಿಗಾಗಿ ಅಧಿಕಾರಿಗಳು ವೇಯ್ಟಿಂಗ್‌

    ಉಡುಪಿ: ಕರಿಮಣಿ ಮಾಲೀಕ ನೀನಲ್ಲ ಎನ್ನುತ್ತಾ ವಿಷ ಹಾಕಿ.. ಉಸಿರುಗಟ್ಟಿಸಿ ಕೊಂದ ರಿಲ್ಸ್ ರಾಣಿ (Reels Queen) ಪ್ರತಿಮಾ ಕಂಬಿ ಎಣಿಸುತ್ತಿದ್ದಾಳೆ. ಕೊಲೆ ಕೃತ್ಯದಲ್ಲಿ ಪ್ರಮುಖ ಪಾತ್ರವಹಿಸಿದ ಆಕೆಯ ಸ್ನೇಹಿತ ದಿಲೀಪ್ ಹೆಗ್ಡೆಯ ತೀವ್ರ ವಿಚಾರಣೆ ನಡೆಸಲಾಗುತ್ತಿದೆ. ಹೊಸ ಮನೆ ಕಟ್ಟಿಸಿ ಒಂದು ವರ್ಷ ಕಳೆಯುವ ಮೊದಲೇ ಬೆಡ್‌ರೂಮ್‌ನಲ್ಲಿ ಗಂಡನ ಉಸಿರು ನಿಲ್ಲಿಸಿದ ಕಥೆ ನಿಜಕ್ಕೂ ರೋಚಕ.. ಭಯಾನಕ…

    ಉಡುಪಿ (Udupi) ಜಿಲ್ಲೆ ಕಾರ್ಕಳದ ಪ್ರತಿಮಾ ಎಂಬ ರಿಲ್ಸ್ ರಾಣಿ ತನ್ನ ಪ್ರಿಯಕರ ದಿಲೀಪ್ ಹೆಗ್ಡೆ ಜೊತೆ ಸೇರಿ, ಮುಗ್ಧ ಪತಿ ಬಾಲಕೃಷ್ಣ ಪೂಜಾರಿಯನ್ನು ಕೊಂದಿರುವ ಅಮಾನವೀಯ ಘಟನೆ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ಪ್ರಿಯಕರ ತಂದುಕೊಟ್ಟ ಸ್ಲೋ ಪಾಯ್ಸನನ್ನು ಸ್ವಲ್ಪ ಸ್ವಲ್ಪವೇ ಕೊಟ್ಟು, ಆರೋಗ್ಯ ಹದಗೆಡುವಂತೆ ಮಾಡಿದ ಪ್ರತಿಮಾ, ಕೊನೆಗೆ ಗೆಳೆಯನ ಜೊತೆ ಸೇರಿ ಉಸಿರುಗಟ್ಟಿಸಿ ಪತಿಯನ್ನು ಕೊಂದ ಪ್ರಕರಣವಿದು. ಇದೀಗ ಆರೋಪಿಗಳಿಬ್ಬರು ಪೊಲೀಸರ ಅತಿಥಿಗಳಾಗಿದ್ದಾರೆ. ತನ್ನ ಸಹೋದರನ ಮುಂದೆ ಎಲ್ಲಾ ಸತ್ಯವನ್ನು ಬಿಚ್ಚಿಟ್ಟ ಪ್ರತಿಮಾ, ಅಜೆಕಾರು ಪೊಲೀಸರ ಮುಂದೆ ತಾನೇ ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾಳೆ. ಆಕೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ನೇರವಾಗಿ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ಕಂಬಿ ಹಿಂದೆ ಸೇರುವ ಮೊದಲೇ ಪತ್ನಿ ಪ್ರತಿಮಾ ಎಲ್ಲಾ ದುಷ್ಟ ಕೃತ್ಯವನ್ನು ಪೊಲೀಸರ ಮುಂದೆ ಬಿಚ್ಚಿಟ್ಟಿದ್ದಾಳೆ.

    ತನ್ನ ಪ್ರಿಯತಮೆಗೆ ವಿಷ ತಂದುಕೊಟ್ಟು ಕೊಲೆಯಲ್ಲಿ ಪ್ರಮುಖ ಪಾತ್ರ ವಹಿಸಿದ, ಪ್ರಿಯಕರ ದಿಲೀಪ್ ಹೆಗ್ಡೆ, ಬಾಯಿಬಿಡಲು ನಕ್ರಾ ಮಾಡುತ್ತಿದ್ದಾನೆ. ಈತನಿಂದ ಸಾಕಷ್ಟು ಸತ್ಯಗಳನ್ನು ಹೊರ ತರುವುದು ಬಾಕಿ ಇದೆ. ಹಾಗಾಗಿ ಇವನನ್ನು 5 ದಿನಗಳ ಪೊಲೀಸ್ ಕಸ್ಟಡಿಗೆ ನೀಡಿ ನ್ಯಾಯಾಲಯ ಆದೇಶ ಮಾಡಿದೆ. ಇದನ್ನೂ ಓದಿ: ಉಡುಪಿ| ಪ್ರಿಯಕರನ ಜೊತೆ ಸೇರಿ ಪತಿಯನ್ನೇ ಕೊಲೆ ಮಾಡಿದ ಪತ್ನಿ

    ಪ್ರಕರಣದ ಕುರಿತು ಉಡುಪಿ ಎಸ್ಪಿ ಡಾ. ಅರುಣ್‌ ಕುಮಾರ್‌ ಮಾಹಿತಿ ನೀಡಿದ್ದಾರೆ. ಪತಿ ಬಾಲಕೃಷ್ಣನಿಂದ ಇದ್ದರೆ ನಮ್ಮ ಸ್ನೇಹಕ್ಕೆ ಅಡ್ಡಿಯಾಗುತ್ತದೆ ಎಂದು ಪತ್ನಿ ಕೊಲೆ ಮಾಡಿದ್ದಾಳೆ. ಇಬ್ಬರ ಅಕ್ರಮ ಸಂಬಂಧಕ್ಕೆ ಪತಿ ಬದುಕಿರೋದೇ ಸಮಸ್ಯೆ ಎಂದು ಕೊಲೆಮಾಡಿರುವುದು ಸಾಬೀತಾಗಿದೆ. ಅಲ್ಲದೇ ಪ್ರತಿನಿತ್ಯ ಊಟದಲ್ಲಿ ಪತಿಗೆ ವಿಷ ಬೆರೆಸಿಕೊಡುತ್ತಿದ್ದ ಪತ್ನಿ ಪ್ರತಿಮಾ, ಪ್ಲ್ಯಾನ್ ಪ್ರಕಾರ ಪತಿಯನ್ನು ಸಾಯುಸಲು ಪ್ರಿಯಕರನನ್ನ ಮನೆಗೆ ಕರೆಸಿದ್ದಳು ಎಂದು ಒಪ್ಪಿಕೊಂಡಿರುವುದಾಗಿ ತಿಳಿಸಿದ್ದಾರೆ.

    1 ವರ್ಷದ ಮನೆ ಕಟ್ಟಿಸಿ ಹೆಂಡತಿ ಮಕ್ಕಳನ್ನ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದ ಬಾಲಕೃಷ್ಣ ಪೂಜಾರಿಯನ್ನು ಪತ್ನಿ ಕೊಂದಿದ್ದಾಳೆ. ಮನೆ ತುಂಬಾ ಅನ್ಯೋನ್ಯವಾಗಿ ಇರುವ ಫೋಟೋಗಳನ್ನು ಜೋಡಿಸಿರುವ ಕತರ್ನಾಕ್ ಸುಂದರಿ ಗಂಡನ ಜೊತೆ ಮಲಗಿ ಸುಖ ಸಂಸಾರ ಮಾಡಿದ ಬೆಡ್ ರೂಮ್ ನಲ್ಲೆ ಉಸಿರು ನಿಲ್ಲಿಸಿ ಬಿಟ್ಟಿದ್ದಾಳೆ. ಇದನ್ನೂ ಓದಿ: ಪೇಜಾವರ ಶ್ರೀ ಬಗ್ಗೆ ಹರಿಪ್ರಸಾದ್ ವಿವಾದಾತ್ಮಕ ಹೇಳಿಕೆ – ಬಾಗಲಕೋಟೆಯಲ್ಲಿ ಬ್ರಾಹ್ಮಣ ಸಮಾಜ ಆಕ್ರೋಶ

  • ಉಡುಪಿ| ಪ್ರಿಯಕರನ ಜೊತೆ ಸೇರಿ ಪತಿಯನ್ನೇ ಕೊಲೆ ಮಾಡಿದ ಪತ್ನಿ

    ಉಡುಪಿ| ಪ್ರಿಯಕರನ ಜೊತೆ ಸೇರಿ ಪತಿಯನ್ನೇ ಕೊಲೆ ಮಾಡಿದ ಪತ್ನಿ

    – ತನ್ನ ಸಹೋದರನ ಜೊತೆ ನಡೆದಿದ್ದನ್ನೆಲ್ಲ ಹೇಳಿಕೊಂಡ ಮಹಿಳೆ

    ಉಡುಪಿ: ಪ್ರಿಯಕರನ ಜೊತೆ ಸೇರಿಕೊಂಡು ಪತಿಯನ್ನು ಪತ್ನಿಯೇ ಹತ್ಯೆ ಮಾಡಿರುವ ಘಟನೆ ಉಡುಪಿ (Udupi) ಜಿಲ್ಲೆಯ ಕಾರ್ಕಳ ತಾಲೂಕಿನ ಅಜೆಕಾರಿನಲ್ಲಿ ನಡೆದಿದೆ.

    ಬಾಲಕೃಷ್ಣ ಪೂಜಾರಿ (44) ಕೊಲೆಯಾದ ವ್ಯಕ್ತಿ. ಆತನ ಪತ್ನಿ ಪ್ರತಿಮಾ ಹಾಗೂ ಆಕೆಯ ಪ್ರಿಯಕರ ದಿಲೀಪ್‌ ಹೆಗ್ಡೆಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಇದನ್ನೂ ಓದಿ: ಜಾತಿ ನಿಂದನೆ ಕೇಸ್‌ನಲ್ಲಿ 98 ಮಂದಿಗೆ ಜೀವಾವಧಿ – ತೀರ್ಪು ಪ್ರಕಟವಾಗುತ್ತಿದ್ದಂತೆ ಅಸ್ವಸ್ಥಗೊಂಡಿದ್ದ ದೋಷಿ ಸಾವು

    ನಡೆದಿದ್ದೇನು?
    ಬಾಲಕೃಷ್ಣ ಪೂಜಾರಿ ಕಳೆದ 25 ದಿನಗಳಿಂದ ಜ್ವರ, ವಾಂತಿ ಆಗಿ ಅನಾರೋಗ್ಯದಿಂದ ಬಳಲುತ್ತಿದ್ದ. ಕಾಮಾಲೆ ರೋಗ ಎಂದು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಕಾರ್ಕಳ ರೋಟರಿ, ಮಣಿಪಾಲ ಕೆಎಂಸಿ, ಮಂಗಳೂರಿನ ವೆನ್ಲಾಕ್, ಬೆಂಗಳೂರಿನ ನಿಮಾನ್ಸ್, ವಿಕ್ಟೋರಿಯಾ ಹಾಗೂ ಮಂಗಳೂರಿನ ಆಸ್ಪತ್ರೆಯಲ್ಲೂ ಚಿಕಿತ್ಸೆ ನೀಡಲಾಗಿತ್ತು. ಆದರೆ, ಅ.20 ರಂದು ಬಾಲಕೃಷ್ಣ ಮನೆಯಲ್ಲಿ ಸಾವನ್ನಪ್ಪಿದ್ದ.

    ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿ ಪ್ರತಿಮಾಳ ಸಹೋದರನೇ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಈ ಸಂಬಂಧ ಅಜೆಕಾರು ಠಾಣೆಯಲ್ಲಿ ಪ್ರಕರಣ ದಾಖಲಾಯಿತು. ತನಿಖೆ ವೇಳೆ ಪ್ರತಿಮಾ ಮತ್ತು ಆಕೆಯ ಪ್ರಿಯಕರನ ದಿಲೀಪ್‌ ಮೇಲೆ ಸಂಶಯ ವ್ಯಕ್ತವಾಗಿ ವಿಚಾರಣೆಗೆ ಒಳಪಡಿಸಲಾಯಿತು. ಇದನ್ನೂ ಓದಿ: ಅತ್ತೆ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಆರೋಪ – ಮಗ, ಸೊಸೆ ಅರೆಸ್ಟ್

    ಊಟದಲ್ಲಿ ವಿಷ ಬೆರೆಸಿದ್ದ ಪತ್ನಿ ಪ್ರತಿಮಾ?
    ಬಾಲಕೃಷ್ಣ ಸಾವಿನ ಬಳಿಕ ಪತ್ನಿ ಪ್ರತಿಮಾನ ಚಲನವಲನ ಬಗ್ಗೆ ಆಕೆಯ ಸಹೋದರನೇ ಅನುಮಾನಗೊಂಡಿದ್ದ. ಸಾವಿನ ಬಗ್ಗೆ ಆಕೆಯನ್ನು ಪ್ರಶ್ನಿಸಿದ್ದಾನೆ. ಪ್ರತಿಮಾ ತನ್ನ ಸಹೋದರನ ಬಳಿ ಎಲ್ಲವನ್ನೂ ಹೇಳಿಕೊಂಡಿದ್ದಾಳೆ. ಊಟದಲ್ಲಿ ವಿಷ ಬೆರೆಸಿ ಬಳಿಕ ಬೆಡ್‌ಶೀಟ್‌ನಿಂದ ಉಸಿರುಗಟ್ಟಿಸಿ ಕೊಲೆ ಮಾಡಿರುವುದಾಗಿ ಪ್ರತಿಮಾ ಒಪ್ಪಿಕೊಂಡಿದ್ದಾಳೆ ಎನ್ನಲಾಗಿದೆ. ಪ್ರಿಯಕರನ ಜೊತೆ ಸೇರಿಕೊಂಡು ಪತಿ ಕೊಲೆ ಮಾಡಿರುವುದಾಗಿ ಆಕೆ ಒಪ್ಪಿಕೊಂಡಿದ್ದಾಳೆಂದು ತಿಳಿದುಬಂದಿದೆ.