Tag: ಉಡುಪಿ ಕೃಷ್ಣ ಮಠ

  • ಚಂದ್ರಗ್ರಹಣ; ಉಡುಪಿ ಕೃಷ್ಣ ಮಠದಲ್ಲಿ ಹಲವು ಬದಲಾವಣೆ

    ಚಂದ್ರಗ್ರಹಣ; ಉಡುಪಿ ಕೃಷ್ಣ ಮಠದಲ್ಲಿ ಹಲವು ಬದಲಾವಣೆ

    ಉಡುಪಿ: ಚಂದ್ರಗ್ರಹಣ (Chandra Grahan) ಇರುವುದರಿಂದ ಉಡುಪಿ ಶ್ರೀಕೃಷ್ಣ ಮಠದಲ್ಲಿ (Udupi Krishna Mutt) ಪೂಜೆ ಪುನಸ್ಕಾರ, ಅನ್ನಪ್ರಸಾದ ವಿಚಾರದಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ.

    10:30ಕ್ಕೆ ಕೃಷ್ಣಮಠದಲ್ಲಿ ಭೋಜನ ವ್ಯವಸ್ಥೆ ಆರಂಭವಾಗಲಿದ್ದು, ಊಟ 12 ಗಂಟೆಗೆ ಮುಕ್ತಾಯವಾಗುತ್ತದೆ. ಮಠದಲ್ಲಿ ಗ್ರಹಣ ಶಾಂತಿ ಹೋಮ-ಹವನಗಳ ವ್ಯವಸ್ಥೆ ಇರಲಿದೆ. ಗ್ರಹಣ ಆರಂಭಕ್ಕೂ ಮೊದಲು ನೈರ್ಮಲ್ಯ ವಿಸರ್ಜನ ಪೂಜೆ ನಡೆಯಲಿದೆ. ಇದನ್ನೂ ಓದಿ: ನಾಳೆ ರಕ್ತಚಂದ್ರಗ್ರಹಣ – ಕೌತುಕದ ಬಗ್ಗೆ ವಿಜ್ಞಾನಿಗಳು ಹೇಳೋದೇನು?

    ಗ್ರಹಣ ಸ್ಪರ್ಶಕಾಲ ಮಧ್ಯಕಾಲ ಮತ್ತು ಮೋಕ್ಷಕಾಲದಲ್ಲಿ ಮಧ್ವ ಸರೋವರದಲ್ಲಿ ಭಕ್ತರಿಗೆ ತೀರ್ಥ ಸ್ನಾನ ಮಾಡುವ ವ್ಯವಸ್ತೆ ಕಲ್ಪಿಸಲಾಗಿದೆ. ಚಂದ್ರಗ್ರಹಣ ಆರಂಭಕ್ಕೂ ಮೊದಲು ರಾತ್ರಿ ಪೂಜೆ ನಡೆದು ಅಲಂಕಾರಗಳನ್ನೆಲ್ಲ ತೆಗೆದು ನೈರ್ಮಲ್ಯ ವಿಸರ್ಜನ ಪೂಜೆ ನಡೆಸಲಾಗುತ್ತದೆ.

  • ಆಡಿಸಿದಳೆಶೋದೆ ಜಗದೋದ್ಧಾರನ.. – ಉಡುಪಿಯಲ್ಲಿ ಕೀರ್ತನೆ ಹಾಡಿದ ತೇಜಸ್ವಿ ಸೂರ್ಯ ಪತ್ನಿ ಶಿವಶ್ರೀ

    ಆಡಿಸಿದಳೆಶೋದೆ ಜಗದೋದ್ಧಾರನ.. – ಉಡುಪಿಯಲ್ಲಿ ಕೀರ್ತನೆ ಹಾಡಿದ ತೇಜಸ್ವಿ ಸೂರ್ಯ ಪತ್ನಿ ಶಿವಶ್ರೀ

    – ಉಡುಪಿಯಲ್ಲಿ ಶಿವಶ್ರೀ ತೇಜಸ್ವಿ ಸಂಗೀತ ಸೇವೆ

    ಉಡುಪಿ: ಇತ್ತೀಚೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸಂಸದ ತೇಜಸ್ವಿ ಸೂರ್ಯ (Tejasvi Surya) ಮತ್ತು ಗಾಯಕಿ ಶಿವಶ್ರೀ, ಉಡುಪಿ ಶ್ರೀಕೃಷ್ಣ ಮಠದಲ್ಲಿ ಸಂಗೀತ ಸೇವೆ ನೀಡಿದ್ದಾರೆ.

    ರಥಬೀದಿಯಲ್ಲಿ ನಡೆದ ನಿತ್ಯೋತ್ಸವದಲ್ಲಿ ಭಾಗಿಯಾದ ನವದಂಪತಿಯ ಕುಟುಂಬಗಳು, ಕೃಷ್ಣ ದೇವರ ಗರ್ಭಗುಡಿಯಲ್ಲಿ ನಡೆಯುವ ಮಹಾಪೂಜೆ ಮತ್ತು ಶಯನ ಪೂಜೆಯಲ್ಲಿ ಭಾಗಿಯಾಯ್ತು. ಈ ಸಂದರ್ಭದಲ್ಲಿ ಶಿವಶ್ರೀ ತೇಜಸ್ವಿ ದೇವರ ಮುಂದೆ ಸಂಗೀತ ಸೇವೆಯನ್ನು ನೀಡಿದರು. ಇದನ್ನೂ ಓದಿ: ಕಾರು ಬಿಟ್ಟು ಬಸ್‍ನಲ್ಲಿ ಸಂಚರಿಸಿ ಮಲೆನಾಡ ಸೌಂದರ್ಯ ಸವಿದ ತೇಜಸ್ವಿ ಸೂರ್ಯ ದಂಪತಿ

    ಜಗದೋದ್ಧಾರನಾ ಆಡಿಸಿದಳು ಯಶೋಧೆ.. ಮತ್ತು ತೊರೆದು ಜೀವಿಸಬಹುದೇ ಹರಿ ನಿನ್ನ ಚರಣಗಳ ಹಾಡನ್ನು ಹಾಡಿದರು. ಪರ್ಯಾಯ ಪುತ್ತಿಗೆ ಮಠ ಮತ್ತು ಉಡುಪಿ ಶ್ರೀಕೃಷ್ಣ ಮಠದ ಸಂಗೀತಗಾರರಾದ ನಾರಾಯಣ ಶರಳಾಯರು ಸಂಗೀತದಲ್ಲಿ ಸಾಥ್ ನೀಡಿದರು. ಪತಿ ಸಂಸದ ತೇಜಸ್ವಿ ಸೂರ್ಯ ವೇದಘೋಷ ಮಾಡಿದರು.

  • ಉಡುಪಿ ಕಡೆಗೋಲು ಶ್ರೀಕೃಷ್ಣನ ದರ್ಶನ ಪಡೆದ ಕೇಂದ್ರ ಸಚಿವ ಜೋಶಿ

    ಉಡುಪಿ ಕಡೆಗೋಲು ಶ್ರೀಕೃಷ್ಣನ ದರ್ಶನ ಪಡೆದ ಕೇಂದ್ರ ಸಚಿವ ಜೋಶಿ

    ಉಡುಪಿ: ಶ್ರೀಕೃಷ್ಣ ಮಠಕ್ಕೆ (Udupi Sri Krishna Matha) ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಭೇಟಿ ನೀಡಿ, ಕಡೆಗೋಲು ಶ್ರೀಕೃಷ್ಣ ದೇವರ ದರ್ಶನ ಪಡೆದರು.

    ಪತ್ನಿ ಜ್ಯೋತಿ ಜೋಶಿ ಜೊತೆ ಕೃಷ್ಣಮಠಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಪರ್ಯಾಯ ಪುತ್ತಿಗೆ ಮಠದಿಂದ ಪ್ರಹ್ಲಾದ್ ಜೋಶಿಗೆ ಗೌರವ ಸಮರ್ಪಿಸಲಾಯಿತು. ಪುತ್ತಿಗೆ ಸುಗುಣೇಂದ್ರ ತೀರ್ಥ ಸ್ವಾಮೀಜಿಯನ್ನು ಭೇಟಿಯಾದರು. ಮಠದಲ್ಲೇ ಅನ್ನಪ್ರಸಾದ ಸ್ವೀಕಾರಿಸಿದರು.

    pralhad joshi udupi krishna matha 1

    ರನ್ಯಾ ಗೋಲ್ಡ್ ಸ್ಮಗ್ಲಿಂಗ್ ವಿಚಾರವಾಗಿ ಮಾತನಾಡಿದ ಸಚಿವರು, ರಾಜ್ಯ ಸರ್ಕಾರದ ಅಧಿಕಾರಿಗಳು ಆರೋಪಿಗೆ ಎಸ್ಕಾರ್ಟ್ ಕೊಟ್ಟಿದ್ದಾರೆ. ಪ್ರೋಟೊಕಾಲ್ ವ್ಯವಸ್ಥೆ ಮಾಡಿ ಚೆಕ್ಕಿಂಗ್ ಇಲ್ಲದೆ ಬಿಟ್ಟಿದ್ದಾರೆ. ಪ್ರಕರಣದಲ್ಲಿ ರಾಜ್ಯದ ಮಂತ್ರಿಗಳ ಹೆಸರು ಕೇಳಿಬರುತ್ತಿದೆ. ರಾಜ್ಯ ಸರ್ಕಾರ ಈ ಬಗ್ಗೆ ಚಕಾರ ಎತ್ತುತ್ತಿಲ್ಲ. ರಾಜ್ಯ ಸರ್ಕಾರದ ಮಂತ್ರಿಗಳ ಪಾತ್ರ ಇದೆ ಎನ್ನಲಾಗುತ್ತಿದೆ. ಗೃಹ ಸಚಿವ ಪರಮೇಶ್ವರ್ ಮೊದಲು ಸಿಐಡಿ ತನಿಖೆಗೆ ಕೊಟ್ಟರು. ರಾಮಚಂದ್ರ ರಾವ್ ಡಿಜಿಐ ಆಗಿರುವುದರಿಂದ ಅಡಿಷನಲ್ ಚೀಫ್ ಸೆಕ್ರೆಟರಿಗೆ ಕೊಟ್ಟಿದ್ದೇವೆ ಎಂದರು. ಕಸ್ಟಮ್ ತಪ್ಪಿಸಿ ಪ್ರೋಟೊಕಾಲ್ ಮೂಲಕ ಹೇಗೆ ಕರೆತರಲಾಯಿತು? ಭಾರತ ಸರ್ಕಾರದ ಇಂಟೆಲಿಜೆನ್ಸ್ ಬರುವವರೆಗೆ ನಿಮ್ಮ ಇಂಟೆಲಿಜೆನ್ಸ್ ಏನು ಮಾಡುತ್ತಿತ್ತು? ಈ ಥರದ ಹಲವಾರು ಪ್ರಶ್ನೆಗಳಿವೆ. ಈ ಥರದ ದುಡ್ಡು ಬಂಗಾರಗಳು ಸಮಾಜ ವಿದ್ರೋಹಿ ಕೃತ್ಯಕ್ಕೆ ಬಳಕೆಯಾಗುತ್ತದೆ. ಈ ಬಗ್ಗೆ ಸರ್ಕಾರ ಗಂಭೀರವಾಗಿ ಇರಬೇಕು. ಸಂಪೂರ್ಣ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಆಗ್ರಹಿಸಿದರು.

    ರೂಪಾಯಿ ಚಿಹ್ನೆ ನಿರಾಕರಿಸಿದ ಡಿಎಂಕೆ ಸಿಎಂ ಸ್ಟಾಲಿನ್ ನಿರ್ಧಾರದ ಬಗ್ಗೆ ಪ್ರತಿಕ್ರಿಯಿಸಿ, ಈ ರೀತಿ ಮಾಡಿರುವುದು ದುರ್ದೈವವೇ ಸರಿ. ಇದು ರಾಷ್ಟ್ರೀಯ ಹಿತಾಸಕ್ತಿಯ ವಿಚಾರ. ರೂಪಾಯಿ ಸಿಂಬಲ್ ಮೋದಿ ಮಾಡಿದ್ದಾ? ಬಿಜೆಪಿ ಮಾಡಿದ್ದಾ? ಕಾಂಗ್ರೆಸ್ ಸರ್ಕಾರ ಇರುವಾಗ ಆಗಿದ್ದಲ್ವಾ? ಇವರೆಲ್ಲ ಆಗ ಮಂತ್ರಿಗಳಾಗಿದ್ದರು. ಎ.ರಾಜ, ದಯಾನಿಧಿ ಮಾರನ್, ಎಲ್ಲರೂ ಸರ್ಕಾರದಲ್ಲಿದ್ದರು. ಯಾಕೆ ಈ ತೀರ್ಮಾನ ತೆಗೆದುಕೊಂಡ್ರಿ? ಕಾಂಗ್ರೆಸ್‌ನ ಚಿದಂಬರA ವಿತ್ತ ಸಚಿವರಾಗಿದ್ದರು. ಹಾಗಾದ್ರೆ ಸಿಂಬಲ್ ಅನ್ನು ಮಾಡಿದ್ದು ಯಾರು? ಕಾಂಗ್ರೆಸ್ ಮತ್ತು ಅವರ ಸ್ನೇಹಿತ ಪಕ್ಷಗಳು ರಾಜಕೀಯವನ್ನು ಈ ಮಟ್ಟಕ್ಕೆ ತೆಗೆದುಕೊಂಡು ಹೋಗಿವೆ. ತಥಾಕಥಿತ ಇಂಡಿ ಘಟಬಂಧನ್ ಮಾಡೋದೇ ಹೀಗೆ. ನೀವು ಮಾಡಿದ ಸಿಂಬಲ್‌ಗೆ ನಮ್ಮ ಅಭ್ಯಂತರ ಏನೂ ಇರಲಿಲ್ಲ. ಈ ಚಿಹ್ನೆಯನ್ನು ಡಿಸೈನ್ ಮಾಡಿದ್ದು ಕೂಡ ತಮಿಳುನಾಡಿನವನು. ನಿಮ್ಮ ಕ್ಷುಲ್ಲಕ ರಾಜಕಾರಣಕ್ಕೆ ಈ ರೀತಿ ಹೇಳಿಕೆ ನೀಡಬೇಡಿ ಕಿಡಿಕಾರಿದರು.

    ಡಿಎಂಕೆ ಸರ್ಕಾರದ ವೈಫಲ್ಯವನ್ನು ಮುಚ್ಚಿ ಹಾಕಲು ಈ ರೀತಿ ಮಾತನಾಡುತ್ತೀರಿ. ರೂಪಾಯಿ ಬದಲಿಸುತ್ತೀರಿ. ತ್ರಿಭಾಷಾ ಸೂತ್ರ ಮಾಡಿರೋದು ಯಾರು? ನೆಹರೂ ಕಾಲದಿಂದ ಇದೆ. ಹೊಸ ಎನ್‌ಇಪಿಯಲ್ಲಿ ತ್ರಿಭಾಷಾ ಸೂತ್ರ ಮಾಡಲು ಹೇಳಿದ್ದೇವೆ. ನಾವು ಹಿಂದಿ ಇರಬೇಕು ಅಂತ ಹೇಳಿದ್ದೇವೆವಾ? ಸುಳ್ಳು ಹೇಳಿ ಜನರನ್ನು ದಾರಿ ತಪ್ಪಿಸಿ ವಂಚನೆ ಮಾಡಿ ತಮ್ಮ ವೈಫಲ್ಯತೆಯನ್ನು ಮುಚ್ಚಿ ಹಾಕುತ್ತಿದ್ದಾರೆ ಎಂದು ಟೀಕಿಸಿದರು.

  • ಭಾರತ ಎಂದು ಹೆಸರು ಕೊಟ್ಟದ್ದೇ ಮುಸಲ್ಮಾನ ದೊರೆಗಳು ಎಂದು ಕಾಂಗ್ರೆಸ್ ಹೇಳಿದರೂ ಅಚ್ಚರಿಯಿಲ್ಲ: ಸಿ.ಟಿ.ರವಿ ವ್ಯಂಗ್ಯ

    ಭಾರತ ಎಂದು ಹೆಸರು ಕೊಟ್ಟದ್ದೇ ಮುಸಲ್ಮಾನ ದೊರೆಗಳು ಎಂದು ಕಾಂಗ್ರೆಸ್ ಹೇಳಿದರೂ ಅಚ್ಚರಿಯಿಲ್ಲ: ಸಿ.ಟಿ.ರವಿ ವ್ಯಂಗ್ಯ

    ಚಿಕ್ಕೋಡಿ: ಭಾರತ (Bharatha) ಎಂದು ಹೆಸರು ಕೊಟ್ಟದ್ದೇ ಮುಸಲ್ಮಾನ ದೊರೆಗಳು ಎಂದು ಕಾಂಗ್ರೆಸ್ ಮುಖಂಡರು (Congress Leaders) ಹೇಳಿದರೂ ಅಚ್ಚರಿಯಿಲ್ಲ ಎಂದು ಶಾಸಕ ಹಾಗೂ ಬಿಜೆಪಿ (BJP) ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ (C.T.Ravi) ವ್ಯಂಗ್ಯವಾಡಿದರು.

    ಉಡುಪಿ ಕೃಷ್ಣ ಮಠ (Udupi Krishna Math) ಜಾಗ ಕೊಟ್ಟದ್ದು ಮುಸ್ಲಿಂ ರಾಜರು ಎಂಬ ಕಾಂಗ್ರೆಸ್ ಮುಖಂಡ ಮಿಥುನ್ ರೈ(Mithun Rai) ಹೇಳಿಕೆಗೆ ಬೆಳಗಾವಿ (Belagavi) ಜಿಲ್ಲೆಯ ಚಿಕ್ಕೋಡಿ (Chikkodi) ತಾಲೂಕಿನ ಅಂಕಲಿ (Ankali) ಗ್ರಾಮದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ಇದನ್ನೂ ಓದಿ: ಉಡುಪಿ ಕೃಷ್ಣ ಮಠಕ್ಕೆ ಜಾಗ ಕೊಟ್ಟಿದ್ದು ಮುಸಲ್ಮಾನ ರಾಜರು: ಮಿಥುನ್ ರೈ ವಿವಾದ

    ಬರೀ ಕೃಷ್ಣ ಮಠ ಅಲ್ಲ, ಭಾರತ ಎಂದು ಹೆಸರು ಕೊಟ್ಟದ್ದು ಮುಸಲ್ಮಾನ ದೊರೆಗಳು. ಮುಸಲ್ಮಾನ ದೊರೆಗಳೇ ರಾಮ ಮಂದಿರ ನಿರ್ಮಾಣ ಮಾಡಿದ್ದು. ಮುಸಲ್ಮಾನ ದೊರೆಗಳೇ ಕಾಶಿ ವಿಶ್ವನಾಥನ ಪ್ರತಿಷ್ಠಾಪನೆ ಮಾಡಿದ್ದು ಎಂದು ಹೇಳಿದರೂ ಅಚ್ಚರಿ ಪಡಬೇಕಿಲ್ಲ. ಸುಳ್ಳು ಮತ್ತು ಕಾಂಗ್ರೆಸ್ (Congress) ಒಂದೇ ನಾಣ್ಯದ ಮುಖಗಳು. ಸುಳ್ಳನ್ನು ಸತ್ಯದ ರೀತಿಯಲ್ಲಿ ಹೇಳುವುದು ಅವರಿಗಿರುವ ಕಾಯಿಲೆ ಎಂದು ಟೀಕೆ ಮಾಡಿದರು. ಇದನ್ನೂ ಓದಿ: ಮಾನವ ಹಕ್ಕುಗಳನ್ನು ಬಳಸಿ ನಮ್ಮಲ್ಲಿ ಇರಲು ಸಾಧ್ಯವಿಲ್ಲ: ಅಕ್ರಮ ವಲಸಿಗರ ನಿಯಂತ್ರಣಕ್ಕೆ ಮುಂದಾದ ಬ್ರಿಟನ್

    ಸಿ.ಟಿ.ರವಿ ನೀಡಿದ್ದ ಸೀರೆ ಸುಟ್ಟು ಹಾಕಿದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಅವರೆಲ್ಲಾ ಡ್ರಾಮಾ (Drama) ಮಾಡುತ್ತಾರೆ. ಆ ರೀತಿ ನಾವು ಸೀರೆ ಕೊಡುತ್ತಿಲ್ಲ. ಅವೆಲ್ಲಾ ಕಾಂಗ್ರೆಸ್‌ನವರ ಹಳೇ ಡ್ರಾಮಾ ಎಂದು ತಿರುಗೇಟು ನೀಡಿದರು. ಇದನ್ನೂ ಓದಿ: ಹೆಂಡತಿ ಕೋಪ ಮಾಡಿಕೊಂಡಿದ್ದಾಳೆ – ಅತ್ತೆ ಮನೆಯಲ್ಲಿ ಹೋಳಿ ಆಚರಿಸೋಕೆ 10 ದಿನ ರಜೆ ಕೇಳಿದ ಇನ್ಸ್‌ಪೆಕ್ಟರ್‌