Tag: ಉಡುಗೊರೆ

  • ಪ್ರೀತಿಯ ಸೊಸೆಗೆ ಭರ್ಜರಿ ಉಡುಗೊರೆ ನೀಡಿದ ಕಿಚ್ಚ ಸುದೀಪ್

    ಪ್ರೀತಿಯ ಸೊಸೆಗೆ ಭರ್ಜರಿ ಉಡುಗೊರೆ ನೀಡಿದ ಕಿಚ್ಚ ಸುದೀಪ್

    ಬೆಂಗಳೂರು: ಕಿಚ್ಚ ಸುದೀಪ್ ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿ ಇದ್ದರೂ, ಇತ್ತೀಚಿನ ದಿನಗಳಲ್ಲಿ ಸಿನಿಮಾಗೆ ಕೊಡುವಷ್ಟೇ ಪ್ರಾಮುಖ್ಯತೆ ಫ್ಯಾಮಿಲಿಗೂ ನೀಡುತ್ತಿದ್ದಾರೆ.

    ಸುದೀಪ್ ಮಗಳ ಶಾಲೆಯ ವಾರ್ಷಿಕೋತ್ಸವ, ಬರ್ತ್‍ಡೇ ಪಾರ್ಟಿ ಹೀಗೆ ಕೆಲಸದ ಬ್ಯುಸಿಯಲ್ಲಿಯೂ ಬಿಡುವು ಮಾಡಿಕೊಂಡು ಕುಟುಂಬಸ್ಥರಿಗಾಗಿ ಸಮಯ ನೀಡುತ್ತಿದ್ದಾರೆ. ತಾನಷ್ಟೇ ಅಲ್ಲದೆ ತನ್ನ ಸುತ್ತಮುತ್ತಲಿನವರನ್ನೂ ಖುಷಿಯಿಂದ ನೋಡಿಕೊಳ್ಳಬೇಕು ಎನ್ನುವ ಉದ್ದೇಶ ಸುದೀಪ್ ಅವರಿಗೆ ಇದೆ.

    ಕಿಚ್ಚ ಸುದೀಪ್ ತನ್ನ ಸೊಸೆಯ ಹುಟ್ಟುಹಬ್ಬಕ್ಕೆ ಭರ್ಜರಿ ಉಡುಗೊರೆ ನೀಡಿದ್ದಾರೆ. ಸಹೋದರಿ ಸುಜಾತ ಸಂಜೀವ್ ಅವರ ಪುತ್ರಿ ಶ್ರೇಯಾ ಅವರ ಹುಟ್ಟುಹಬ್ಬಕ್ಕೆ ಸುದೀಪ್ ಕಾರೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ.

    ಶ್ರೇಯಾಗೆ ಮಾವ ಸುದೀಪ್ ಅವರಿಂದ ಕಪ್ಪು ಬಣ್ಣದ ಜೀಪ್ ಉಡುಗೊರೆಯಾಗಿ ಸಿಕ್ಕಿದೆ. ಸುಜಾತ ಸಂಜೀವ್ ಅವರಿಗೆ ಒಬ್ಬ ಪುತ್ರ ಕೂಡ ಇದ್ದು, ಸಂಚಿತ್ ಸಂಜೀವ್ ಮಾವನಂತೆ ಸಿನಿಮಾರಂಗದಲ್ಲಿ ಗುರುತಿಸಿಕೊಳ್ಳಲು ಈಗಾಗಲೇ ಕೆಲಸ ಆರಂಭ ಮಾಡಿದ್ದಾರೆ.

    ಸುದೀಪ್ ತಮ್ಮ ಹುಟ್ಟುಹಬ್ಬವನ್ನ ಅಭಿಮಾನಿಗಳೊಂದಿಗೆ ಸೇರಿ ಸ್ಪೆಷಲ್ ಆಗಿ ಆಚರಿಸುತ್ತಾರೆ. ಅದೇ ರೀತಿ ಕಿಚ್ಚ ತಮ್ಮ ಮನೆಯವರ ಹುಟ್ಟು ಹಬ್ಬವನ್ನು ಕೂಡ ವಿಶೇಷವಾಗಿ ಆಚರಣೆ ಮಾಡಿದ್ದು, ವಿಶೇಷ ಉಡುಗೊರೆಯನ್ನು ನೀಡಿದ್ದಾರೆ.

  • ಪವರ್ ಸ್ಟಾರ್ ಗೆ ಚಿನ್ನಲೇಪಿತ ವೆಂಕಟೇಶ್ವರ ದೇವರ ಫೋಟೋ ಉಡುಗೊರೆ ನೀಡಿದ ಪ್ರಥಮ್

    ಪವರ್ ಸ್ಟಾರ್ ಗೆ ಚಿನ್ನಲೇಪಿತ ವೆಂಕಟೇಶ್ವರ ದೇವರ ಫೋಟೋ ಉಡುಗೊರೆ ನೀಡಿದ ಪ್ರಥಮ್

    ಬೆಂಗಳೂರು: ಬಿಗ್ ಬಾಸ್ ರಿಯಾಲಿಟಿ ಶೋ ಮೂಲಕ ಜನರ ಮಧ್ಯೆ ಗುರುತಿಸಿಕೊಂಡಿರುವ ನಟ ನಿರ್ದೇಶಕ ಪ್ರಥಮ್ ಅವರು ಪುನೀತ್ ಅವರಿಗೆ ಉಡುಗೊರೆಯನ್ನು ನೀಡಿದ್ದಾರೆ.

    ಕನ್ನಡ ಸಿನಿಮಾರಂಗದಲ್ಲಿ ಯಾವುದೇ ಸ್ಟಾರ್ ಹುಟ್ಟುಹಬ್ಬವಾದರೂ ಪ್ರಥಮ್ ಅವರಿಗೆ ತಮ್ಮದೇ ಆದ ರೀತಿಯಲ್ಲಿ ಶುಭಾಶಯ ತಿಳಿಸುತ್ತಾರೆ. ಇದೀಗ ನಟ ಪುನೀತ್ ರಾಜ್ ಕುಮಾರ್ ಅವರು ಶನಿವಾರ ತಮ್ಮ 43ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಪ್ರಥಮ್ ಅವರು ಪವರ್ ಸ್ಟಾರ್ ಪುನೀತ್ ಅವರಿಗೆ ವಿಶೇಷವಾಗಿ ಹುಟ್ಟುಹಬ್ಬದ ಶುಭಾಶಯವನ್ನು ಕೋರುವುದರ ಜೊತೆಗೆ ವಿಭಿನ್ನವಾಗಿರುವ ಉಡುಗೊರೆಯನ್ನು ನೀಡಿದ್ದಾರೆ.

    ಬಂಗಾರದ ಮನುಷ್ಯನ ಪುತ್ರನಿಗೆ ಪ್ರಥಮ್ ಮತ್ತೆ ಬಂಗಾರದ ಉಡುಗೊರೆಯನ್ನು ನೀಡಿದ್ದಾರೆ. ಕಳೆದ ಬಾರಿಯೂ ಪ್ರಥಮ್ ಅಪ್ಪು ಅವರಿಗೆ ಚಿನ್ನ ಉಂಗುರವನ್ನು ನೀಡಿ ಶುಭ ಕೋರಿದ್ದರು. ಈ ಬಾರಿ ಚಿನ್ನ ಲೇಪಿತ ವೆಂಕಟೇಶ್ವರ ದೇವರ ಫೋಟೋವನ್ನು ಕೊಟ್ಟಿದ್ದಾರೆ. ಪ್ರಥಮ್ ಜೊತೆಯಲ್ಲಿ ಸಾರಾ ಗೋವಿಂದು ಹಾಗೂ ಪುತ್ರ ಅನೂಪ್ ಕೂಡ ಪವರ್ ಸ್ಟಾರ್ ಗೆ ಶುಭಾಶಯ ಕೋರಿದ್ದಾರೆ.

    ಪುನೀತ್ ಪ್ರಥಮ್ ಅವರ ಉಡುಗೊರೆಯನ್ನ ಸ್ವೀಕರಿಸಿ ಸಂತೋಷ ವ್ಯಕ್ತಪಡಿಸಿದ್ದಾರೆ. ಕೆಲವು ತಿಂಗಳುಗಳ ಹಿಂದೆ ಫ್ಯಾಮಿಲಿ ಪವರ್ ಕಾರ್ಯಕ್ರಮದಲ್ಲಿ ಪುನೀತ್, ಪ್ರಥಮ್ ಅವರಿಗೆ ಶೋ ನಲ್ಲಿ ಹಾಕಿಕೊಂಡಿದ್ದ ಬ್ಲೇಜರ್ ಅನ್ನು ಉಡುಗೊರೆಯಾಗಿ ನೀಡಿದ್ದರು.

  • ನಾಟ್ಯ ಮಯೂರಿಗೆ ಸಿಕ್ತು ಪ್ರಧಾನಿ ಮೋದಿಯಿಂದ ಸ್ಪೆಷಲ್ ಗಿಫ್ಟ್

    ನಾಟ್ಯ ಮಯೂರಿಗೆ ಸಿಕ್ತು ಪ್ರಧಾನಿ ಮೋದಿಯಿಂದ ಸ್ಪೆಷಲ್ ಗಿಫ್ಟ್

    ಬೆಂಗಳೂರು: ಸಂಗೀತ ನಿರ್ದೇಶಕ ರಘು ದೀಕ್ಷಿತ್ ಪತ್ನಿ ನಾಟ್ಯ ಮಯೂರಿ ಎಂದು ಹೆಸರುವಾಸಿಯಾಗಿರುವ ಮಯೂರಿ ಉಪಾಧ್ಯಾಯ ಅವರಿಗೆ ಪ್ರಧಾನಿ ಮೋದಿಯಿಂದ ಒಂದು ವಿಷೇಶವಾದ ಉಡುಗೊರೆ ಸಿಕ್ಕಿದೆ.

    ಮಯೂರಿ ಉಪಾಧ್ಯಾಯ ಅವರು ದೇಶದಾದ್ಯಂತ ಮಾತ್ರವಲ್ಲದೆ ಪ್ರಪಂಚದ ಮೂಲೆ ಮೂಲೆಯಲ್ಲೂ ಭಾರತೀಯ ನೃತ್ಯವನ್ನು ಪ್ರದರ್ಶನ ಮಾಡಿ ಕಲೆಯ ಕಂಪನ್ನು ಪಸರಿಸುವ ಮೂಲಕ ನಾಟ್ಯ ಮಯೂರಿ ಎಂದು ಫೇಮಸ್ ಆದವರು.

    ಮಯೂರಿ ತಮ್ಮದೇ ಆದ ನೃತ್ಯ ತಂಡವನ್ನ ಕಟ್ಟಿಕೊಂಡು ದೇಶ ವಿದೇಶಗಳಲ್ಲಿ ನಾಟ್ಯವನ್ನ ಪ್ರದರ್ಶನ ಮಾಡುತ್ತಾರೆ. ಅಷ್ಟೇ ಅಲ್ಲದೆ ಸಿನಿಮಾಗಳಿಗೂ ಕೋರಿಯೋಗ್ರಫಿ ಮಾಡುತ್ತಾರೆ. ಜೊತೆಗೆ ರಿಯಾಲಿಟಿ ಶೋಗಳಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಳ್ಳುತ್ತಾರೆ. ಮಯೂರಿ ಅವರಿಗೆ ಗಣರಾಜ್ಯೋತ್ಸವದ ಅಂಗವಾಗಿ ಪ್ರಧಾನಮಂತ್ರಿ ಕಡೆಯಿಂದ ವಿಶೇಷವಾದ ಉಡುಗೊರೆಯೊಂದು ಸಿಕ್ಕಿದೆ. ಈ ಬಗ್ಗೆ ಅವರು ಟ್ವಿಟ್ಟರ್ ನಲ್ಲಿ ಹೇಳಿಕೊಂಡಿದ್ದಾರೆ.

    ಪ್ರಧಾನಿ ಕಡೆಯಿಂದ ಮೇಕ್ ಇನ್ ಇಂಡಿಯಾ ಥೀಮ್ ನಲ್ಲಿ ಸಿದ್ಧವಾಗುವ ಕೈ ಗಡಿಯಾರವನ್ನ ಮಯೂರಿ ಅವರಿಗೆ ಉಡುಗೊರೆಯಾಗಿ ಕಳುಹಿಸಿಕೊಟ್ಟಿದ್ದಾರೆ. ಉಡುಗೊರೆಯನ್ನ ಪಡೆದ ಮಯೂರಿ ಈ ಬಗ್ಗೆ ತಮ್ಮ ಸಂತಸವನ್ನು ಟ್ವಿಟ್ಟರ್ ನಲ್ಲಿ ವ್ಯಕ್ತಪಡಿಸಿದ್ದಾರೆ.

    “ನಮ್ಮ ಪ್ರಧಾನಿ ಮೋದಿ ಅವರ ಅಮೂಲ್ಯ ಕೊಡುಗೆ ಇದು. ಅವರಿಂದ ಉಡುಗೊರೆ ಬಂದಿರುವುದು ಬೆಲೆ ಕಟ್ಟಲು ಸಾಧ್ಯವಾಗದೆ ಇರುವಂತದ್ದು” ಎಂದು ಅವರು ಟ್ವೀಟ್ ಮಾಡಿದ್ದಾರೆ. ಮೇಕ್ ಇನ್ ಇಂಡಿಯಾ ಕಾರ್ಯಕ್ರಮದಲ್ಲಿ ಮಯೂರಿ ಅವರ ತಂಡದಿಂದ ನೃತ್ಯವನ್ನ ಪ್ರದರ್ಶನ ಮಾಡಲಾಗಿತ್ತು. ಆದ್ದರಿಂದ ಪ್ರಧಾನಿ ಮೋದಿ ಅವರು ಈ ಉಡುಗೊರೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

  • ಆರತಕ್ಷತೆಯಲ್ಲಿ ನೀಡಿದ್ದ ಗಿಫ್ಟ್ ತೆರೆದಾಗ ಸ್ಫೋಟ- ಮದ್ವೆಯಾದ ಐದೇ ದಿನಕ್ಕೆ ವರ ಸಾವು!

    ಆರತಕ್ಷತೆಯಲ್ಲಿ ನೀಡಿದ್ದ ಗಿಫ್ಟ್ ತೆರೆದಾಗ ಸ್ಫೋಟ- ಮದ್ವೆಯಾದ ಐದೇ ದಿನಕ್ಕೆ ವರ ಸಾವು!

    ಭುವನೇಶ್ವರ್: ಮದುವೆಯಲ್ಲಿ ಬಂದ ಉಡುಗೊರೆಯನ್ನು ತೆರೆದಾಗ ಅದು ಸ್ಫೋಟವಾಗಿ ವರ ಹಾಗೂ ಆತನ ಅಜ್ಜಿ ಸಾವನ್ನಪ್ಪಿದ್ದು, ವಧುವಿಗೆ ಗಂಭೀರ ಗಾಯಗಳಾಗಿರುವ ಘಟನೆ ಒಡಿಶಾದ ಬೋಲಾಂಗೀರ್ ಜಿಲ್ಲೆಯಲ್ಲಿ ನಡೆದಿದೆ.

    5 ದಿನಗಳ ಹಿಂದೆ ಈ ಜೋಡಿಯ ಮದುವೆಯಾಗಿತ್ತು. ಬುಧವಾರದಂದು ಆರತಕ್ಷತೆಯ ಸಮಯದಲ್ಲಿ ಬಂದ ಉಡುಗೊರೆಯನ್ನು ತೆರೆದಾಗ ಸ್ಫೋಟವಾಗಿದೆ. ಆರತಕ್ಷತೆಯಲ್ಲಿ ಈ ಉಡುಗೊರೆ ಯಾರು ನೀಡಿದ್ದು ಎಂದು ನಾವು ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

    ಉಡುಗೊರೆ ಸ್ಫೋಟವಾಗುತ್ತಿದ್ದಂತೆ ಮನೆಯಲ್ಲಿದ್ದ ವರನ ಅಜ್ಜಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ತೀವ್ರವಾಗಿ ಗಾಯಗೊಂಡಿದ್ದ ವರ ಚಿಕಿತ್ಸೆ ಫಲಿಸದೇ ರೂರ್ಕೆಲಾ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಸ್ಫೋಟದಿಂದ ವಧುವಿಗೂ ಗಂಭೀರ ಗಾಯಗಳಾಗಿದ್ದು, ಬುರ್ಲಾದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

    ಈಗಾಗಲೇ ಸಾಕ್ಷಿಗಳನ್ನ ಸಂಗ್ರಹಿಸಲಾಗಿದ್ದು, ತನಿಖೆ ಶುರು ಮಾಡಿಕೊಂಡಿದ್ದೇವೆ ಎಂದು ಪಟ್ನಾಗಢ ಉಪ-ವಿಭಾಗೀಯ ಪೊಲೀಸ್ ಅಧಿಕಾರಿ ಸೆಸ್ದೇವ ಬರಿಹಾ ತಿಳಿಸಿದ್ದಾರೆ. ವರನ ಅಜ್ಜಿಯನ್ನು ಆಸ್ಪತ್ರೆಗೆ ಕರೆತರುವಾಗಲೇ ಅವರು ಸಾವನ್ನಪ್ಪಿದ್ದರು ಹಾಗೂ ಉಡುಗೊರೆ ಸ್ಫೋಟಗೊಂಡಾಗ ಗಾಯಗೊಂಡಿದ್ದ ವರ ಕೂಡ ರೂರ್ಕೆಲಾದ ಇಸ್ಪಟ್ ಜನರಲ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಬೋಲಾಂಗೀರ್ ನ ಮುಖ್ಯ ಜಿಲ್ಲಾ ವೈದ್ಯಕೀಯ ಅಧಿಕಾರಿ ಎಸ್. ಮಿಶ್ರಾ ತಿಳಿಸಿದ್ದಾರೆ.

  • ಜನರಿಗೆ ಕೊಟ್ಟ ಆಶ್ವಾಸನೆ ಈಡೇರಿಸದೇ ಕಾಗೆ ಹಾರಿಸಿದ ಶಾಸಕ ಶಿವರಾಜ್ ತಂಗಡಗಿ

    ಜನರಿಗೆ ಕೊಟ್ಟ ಆಶ್ವಾಸನೆ ಈಡೇರಿಸದೇ ಕಾಗೆ ಹಾರಿಸಿದ ಶಾಸಕ ಶಿವರಾಜ್ ತಂಗಡಗಿ

    ಕೊಪ್ಪಳ: ರಾಜಕೀಯ ನಾಯಕರು ಜನ ಸಮೂಹದ ಮುಂದೆ ಭಾಷಣ ಮಾಡುವಾಗ, ಕೊಟ್ಟ ಆಶ್ವಾಸನೆ ಈಡೇರಿಸದೇ ಕಾಗೆ ಹಾರಿಸೋದು ಇತ್ತೀಚೆಗೆ ಸಾಮಾನ್ಯವಾಗಿದೆ. ಆದರೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ತಮ್ಮ ಪಕ್ಷದ ಶಾಸಕರೊಂದಿಗೆ ಸೇರಿ ದೇವರಿಗೂ ಕಾಗೆ ಹಾರಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

    ಕನಕಗಿರಿ ಶಾಸಕ ಶಿವರಾಜ್ ತಂಗಡಗಿ ಮತ್ತು ರಾಹುಲ್ ಕನಕಗಿರಿಯ ಲಕ್ಷ್ಮೀ ನರಸಿಂಹ ಕನಕಾಚಲಪತಿ ದೇವರಿಗೆ ನೀಡಿದ್ದ ಆಶ್ವಾಸನೆಯನ್ನೇ ಮರೆತಿದ್ದಾರೆ. ಕಳೆದ ವಾರ ಹೈದರಾಬಾದ್ ಕರ್ನಾಟಕ ಪ್ರವಾಸದಲ್ಲಿದ್ದ ರಾಹುಲ್ ಗಾಂಧಿ ಫೆ.11 ರಂದು ಕೊಪ್ಪಳ ಜಿಲ್ಲೆ ಕಾರಟಗಿಯಲ್ಲಿ ನಡೆದ ಸಮಾವೇಶದಲ್ಲಿ ಭಾಗವಹಿಸಿದ್ದರು. ಈ ವೇಳೆ ರಾಹುಲ್ ಸನ್ಮಾನಿಸಿದ ಶಾಸಕ ಶಿವರಾಜ್ ತಂಗಡಗಿ ಬೆಳ್ಳಿ ಖಡ್ಗವನ್ನು ಉಡುಗೊರೆ ನೀಡಿದ್ದರು.

    ಖಡ್ಗ ಕೈಗಿಡುತ್ತಲೇ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸಲಹೆಯಂತೆ ರಾಹುಲ್ ಗಿಫ್ಟ್ ತಿರಸ್ಕರಿಸಿದ್ದರು. ರಾಹುಲ್ ಈ ನಡೆಗೂ ಒಂದು ಫ್ಲ್ಯಾಶ್ ಬ್ಯಾಕ್ ಇದೆ. ಅದೇನೆಂದರೆ ಫೆ. 10 ರಂದು ಹೊಸಪೇಟೆಯಲ್ಲಿ ಕೂಡ್ಲಿಗಿ ಮಾಜಿ ಶಾಸಕ ನಾಗೇಂದ್ರ ರಾಹುಲ್ ಗಾಂಧಿಗೆ ಕೆಜಿಗಟ್ಟಲೇ ಚಿನ್ನ ಮತ್ತು ಬೆಳ್ಳಿ ಮಿಶ್ರಿತ ವಾಲ್ಮೀಕಿ ಮೂರ್ತಿಯನ್ನು ಉಡುಗೊರೆಯಾಗಿ ಮಾಡಿದ್ದರು. ಇದರಿಂದ ರಾಹುಲ್ ದುಬಾರಿ ಉಡುಗೊರೆ ಪಡೆದರು ಎಂದು ಮಾಧ್ಯಮದಲ್ಲಿ ದೊಡ್ಡ ಸುದ್ದಿಯಾಗಿ, ರಾಹುಲ್ ಮುಜುಗರಕ್ಕೆ ಈಡಾಗಿದ್ದರು.

    ಕೂಡಲೇ ಎಚ್ಚೆತ್ತ ರಾಹುಲ್, ಗಿಫ್ಟ್ ವಾಪಾಸ್ ನೀಡಲು ನಿರ್ಧರಿಸಿದ್ದರು. ಆದರೆ ಸಿಎಂ ಸಿದ್ದರಾಮಯ್ಯ ಮತ್ತು ಮಲ್ಲಿಕಾರ್ಜುನ ಖರ್ಗೆ ಸಲಹೆಯಂತೆ ಧಾರ್ಮಿಕ ಮತ್ತು ದತ್ತಿ ಇಲಾಖೆಗೆ ನೀಡುವುದಾಗಿ ಘೋಷಣೆ ಮಾಡಿ ಪ್ರಕರಣಕ್ಕೆ ತೆರೆ ಎಳೆದಿದ್ದರು. ಈ ಕಾರಣಕ್ಕೆ ಶಾಸಕ ಶಿವರಾಜ್ ತಂಗಡಗಿ ನೀಡಿದ ಬೆಳ್ಳಿ ಖಡ್ಗವನ್ನು ರಾಹುಲ್ ನಿರಾಕರಿಸಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಈ ಬಗ್ಗೆ ಜನರ ಮುಂದೆ ಅನೌನ್ಸ್ ಮಾಡಿದ ಶಾಸಕ ಶಿವರಾಜ್ ತಂಗಡಗಿ, ಈ ಬೆಳ್ಳಿ ಖಡ್ಗವನ್ನು ಕನಕಾಚಲಪತಿ ದೇವಸ್ಥಾನಕ್ಕೆ ನೀಡುವುದಾಗಿ ತಿಳಿಸಿದ್ದರು.

    ಆದರೆ ಕಾರ್ಯಕ್ರಮ ಮುಗಿದು 12 ದಿನ ಕಳೆದರೂ ಖಡ್ಗ ದೇವಸ್ಥಾನ ಸೇರಿಲ್ಲ. ಇದರಿಂದ ಶಾಸಕ ತಂಗಡಗಿ ಇದನ್ನು ತಮ್ಮ ಮನೆಯಲ್ಲೇ ಇಟ್ಟುಕೊಂಡರಾ ಅಥವಾ ಮಾಧ್ಯಮಗಳ ಬಾಯಿ ಮುಚ್ಚಿಸಲು ನಾಟಕ ಮಾಡಿ, ರಾಹುಲ್ ಗಾಂಧಿಯೇ ಖಡ್ಗವನ್ನು ತೆಗೆದುಕೊಂಡು ಹೋದರಾ ಎಂಬುದು ಸದ್ಯದ ಪ್ರಶ್ನೆಯಾಗಿದೆ.

  • ಪ್ರಥಮ್ ಕೇಳಿದ ಉಡುಗೊರೆಯನ್ನೇ ನೀಡಿದ ಅಪ್ಪು

    ಪ್ರಥಮ್ ಕೇಳಿದ ಉಡುಗೊರೆಯನ್ನೇ ನೀಡಿದ ಅಪ್ಪು

    ಬೆಂಗಳೂರು: ಬಿಗ್ ಬಾಸ್ ಸೀಸನ್ 4ನ ವಿನ್ನರ್ ಒಳ್ಳೆ ಹುಡುಗ ಪ್ರಥಮ್ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಬಳಿ ಉಡುಗೊರೆಯೊಂದನ್ನು ಕೇಳಿದ್ದರು. ಕೊನೆಗೂ ನಟ ಪುನೀತ್ ಅವರು ಕೇಳಿದ ಉಡುಗೊರೆಯನ್ನೇ ನೀಡಿದ್ದಾರೆ.

    ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ನಟ ಪುನೀತ್ ನಡೆಸಿಕೊಡುತ್ತಿರುವ `ಫ್ಯಾಮಿಲಿ ಪವರ್’ ಶೋನಲ್ಲಿ ಪ್ರಥಮ್ ಮತ್ತು ಕುಟುಂಬ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಬಿಗ್ ಬಾಸ್ ಮುಗಿದ ಮೇಲೆ ಸುದೀಪ್ ಕೊಟ್ಟ ಎರಡು ಸಾವಿರ ರೂಪಾಯಿ ಹಾಗೂ ಐನೂರು ರೂಪಾಯಿ ನೋಟ್ ನ ಭದ್ರವಾಗಿ ಇಟ್ಟುಕೊಂಡಿದ್ದೇನೆ. ಇವತ್ತು ಇಲ್ಲಿ ನಿಮ್ಮ ಜೊತೆ ಸ್ಟೇಜ್ ಗೆ ಬಂದಿದ್ದು ಬಹಳ ಖುಷಿ ಆಗಿದೆ. ಶೋ ಮುಗಿದ ಮೇಲೆ ಈ ಬ್ಲೇಸರ್ ನನಗೆ ಕೊಡಿ, ಮದುವೆಗೋ, ಹನಿಮೂನ್ ವೇಳೆ ಧರಿಸುತ್ತೇನೆ ಎಂದು ಪ್ರಥಮ್ ಕೇಳಿದ್ದರು.

    ಪ್ರಥಮ್ ಕೇಳಿದ ತಕ್ಷಣ ಪುನೀತ್ ರಾಜ್ ಕುಮಾರ್ ಓಕೆ ಎಂದಿದ್ದರು. ನಂತರ ಕಾರ್ಯಕ್ರಮದ ಶೂಟಿಂಗ್ ಮುಗಿದ ಮೇಲೆ ಪುನೀತ್ ಕೊಟ್ಟ ಮಾತಿನಂತೆ ಪ್ರಥಮ್ ಗೆ ತಮ್ಮ ಬ್ಲೇಸರ್ ಕೊಟ್ಟಿದ್ದಾರೆ. ಪುನೀತ್ ಧರಿಸಿದ್ದ ಬ್ಲೇಸರ್ ಸಿಕ್ಕಿದ್ದಕ್ಕೆ ಪ್ರಥಮ್ ಕೂಡ ತುಂಬಾ ಖುಷಿಯಾಗಿದ್ದಾರೆ. ಪ್ರಥಮ್ ಕುಟುಂಬದವರ ಜೊತೆ ಸ್ಪರ್ಧಿಯಾಗಿ ಬಿಗ್ ಬಾಸ್ ಸ್ಪರ್ಧಿ ಸಮೀರಾಚಾರ್ಯ ಕುಟುಂಬವರು ಶೋನಲ್ಲಿ ಭಾಗವಹಿಸಿದ್ದರು.

     

  • ಎಷ್ಟು ಹಣ ಕೂಡಿಟ್ರೂ ಖರೀದಿಸಲಾಗದ ವಸ್ತುವನ್ನು ಅಭಿಮಾನಿಯಿಂದ ಗಿಫ್ಟ್ ಆಗಿ ಪಡೆದ ಅಪ್ಪು!

    ಎಷ್ಟು ಹಣ ಕೂಡಿಟ್ರೂ ಖರೀದಿಸಲಾಗದ ವಸ್ತುವನ್ನು ಅಭಿಮಾನಿಯಿಂದ ಗಿಫ್ಟ್ ಆಗಿ ಪಡೆದ ಅಪ್ಪು!

    ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರಿಗೆ ಅಭಿಮಾನಿಯೊಬ್ಬರು ಉಡುಗೊರೆ ನೀಡಿದ್ದು, ಆ ಉಡುಗೊರೆ ಜೊತೆ ಪುನೀತ್ ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

    ಅಭಿಮಾನಿಯೊಬ್ಬರು ಪುನೀತ್ ರಾಜ್‍ಕುಮಾರ್ ಅವರಿಗೆ ವಾಲ್ಮೀಕಿ ರಾಮಾಯಣ ಪುಸ್ತಕವನ್ನು ಉಡುಗೊರೆಯಾಗಿ ನೀಡಿದ್ದಾರೆ. ಆ ಪುಸ್ತಕದ ಜೊತೆ ಪುನೀತ್ ಫೋಟೋ ತೆಗದು ಫೇಸ್‍ಬುಕ್ ಮತ್ತು ಟ್ವಟ್ಟರ್ ನಲ್ಲಿ ಹಾಕಿದ್ದಾರೆ. ಬೆಟ್ಟದ ಹೂವು ಸಿನಿಮಾದಲ್ಲಿ ಎಷ್ಟೇ ದುಡ್ಡು ಸೇವ್ ಮಾಡಿದ್ದರೂ ತಗೊಳ್ಳೋಕೆ ಆಗಿರಲಿಲ್ಲ. ಫೈನಲಿ ಎ ಫ್ಯಾನ್ ಗಿಫ್ಟೆಡ್ ಇಟ್ ಎಂದು ಕ್ಯಾಪ್ಷನ್ ಬರೆದು ಪೋಸ್ಟ್ ಮಾಡಿದ್ದಾರೆ.

    ಬೆಟ್ಟದ ಹೂವು ಚಿತ್ರ 1985ರಲ್ಲಿ ಬಿಡುಗಡೆಯಾಗಿತ್ತು. ಈ ಚಿತ್ರದಲ್ಲಿ ಪುನೀತ್ ಅವರಿಗೆ ಪುಸ್ತಕಗಳ ಬಗ್ಗೆ ಆಸಕ್ತಿ ಇರುತ್ತದೆ. ವಾಲ್ಮೀಕಿ ರಾಮಾಯಣ ಪುಸ್ತಕ ಖರೀದಿಸಲು ಹಣವನ್ನು ಕೂಡಿಡುತ್ತಿರುತ್ತಾರೆ. ಆದರೆ ಕೊನೆಯವರೆಗೂ ಪುನೀತ್ ಈ ಚಿತ್ರದಲ್ಲಿ ವಾಲ್ಮೀಕಿ ರಾಮಾಯಣ ಪುಸ್ತಕವನ್ನು ಖರೀದಿಸಲು ಸಾಧ್ಯವಾಗಲ್ಲ. ಈ ಚಿತ್ರಕ್ಕಾಗಿ ಪುನೀತ್ ರಾಜ್‍ಕುಮಾರ್ ಅವರಿಗೆ ರಾಷ್ಟಪ್ರಶಸ್ತಿ ದೊರೆತ್ತಿತ್ತು.

    ಸದ್ಯ ಪುನೀತ್ ರಾಜ್ ಕುಮಾರ್ ನಟಿಸಿದ ‘ಅಂಜನಿಪುತ್ರ’ ಸಿನಿಮಾ 50 ದಿನ ಪೂರೈಸುವ ಹೊತ್ತಲ್ಲೇ ಅಭಿಮಾನಿಯಿಂದ ಈ ಉಡುಗೊರೆ ದೊರೆತಿದೆ. ಆದರೆ ಈ ಉಡುಗೊರೆ ಯಾರು ನೀಡಿದ್ದು ಎಂಬ ಗುಟ್ಟನ್ನು ಮಾತ್ರ ಪುನೀತ್ ಬಿಟ್ಟುಕೊಡುತ್ತಿಲ್ಲ.

     

     

  • ಬಿಗ್‍ಬಾಸ್ ವಿಜಯ ಪತಾಕೆ ಹಾರಿಸಿದ ಚಂದನ್ ಶೆಟ್ಟಿಗೆ ಅಮ್ಮನಿಂದ ಮುದ್ದಾದ ಉಡುಗೊರೆ

    ಬಿಗ್‍ಬಾಸ್ ವಿಜಯ ಪತಾಕೆ ಹಾರಿಸಿದ ಚಂದನ್ ಶೆಟ್ಟಿಗೆ ಅಮ್ಮನಿಂದ ಮುದ್ದಾದ ಉಡುಗೊರೆ

    ಬೆಂಗಳೂರು: ಬಹು ನಿರೀಕ್ಷಿತ ಬಿಗ್‍ಬಾಸ್ ಸೀಸನ್ ಐದರ ಆಟ ಮುಗಿದಿದೆ. ಎಲ್ಲರ ನಿರೀಕ್ಷೆ ಹಾಗೂ ಹಾರೈಕೆಯಂತೆ ಭರ್ಜರಿ ಮನರಂಜನೆ ನೀಡ್ತಾ ಬಂದಿದ್ದ ಚಂದನ್ ಶೆಟ್ಟಿ ಗೆಲುವಿನ ಪತಾಕೆ ಹಾರಿಸಿದ್ದಾರೆ.

    ಕನ್ನಡ ನಾಡಿನಲ್ಲಿ `ಮೂರೇ ಮೂರು ಪೆಗ್ಗಿಗೆ’ ಹಾಡಿನ ಮೂಲಕ ಫೀನಿಕ್ಸ್‍ನಂತೆ ಎದ್ದು ಬಂದ ಅದೇ ಚಂದನ್ ಶೆಟ್ಟಿ ಬಿಗ್ ಬಾಸ್ ವೇದಿಕೆಯಲ್ಲಿ ಗೆಲುವಿನ ನಗೆ ಬೀರಿದ್ದಾರೆ. ವಿನ್ ಆದ್ರೆ ಬಂದ ಹಣದಲ್ಲಿ ಅಪ್ಪ ಅಮ್ಮನಿಗೊಂದು ಮನೆ ಕೊಡಿಸ್ತೀನಿ ಎಂದು ನುಡಿದಿದ್ದ ಚಂದನ್ ಶೆಟ್ಟಿಗೆ, ಹೆತ್ತವರ ಆಶೀರ್ವಾದದಂತೆ 50 ಲಕ್ಷ ರೂಪಾಯಿ ದಕ್ಕಿದೆ. ಇದೀಗ ಬಿಗ್ ಬಾಸ್ ಗೆದ್ದ ಚಂದನ್ ಗೆ ಅವರ ತಾಯಿ ಮುದ್ದಾದ ಉಡುಗೊರೆಯನ್ನು ನೀಡಿದ್ದಾರೆ. ಇದನ್ನೂ ಓದಿ: ಬಿಗ್ ಬಾಸ್ ಮನೆಯಿಂದ ಹೊರಬಂದ ಶೃತಿ ಪ್ರಕಾಶ್‍ಗೆ ಕಾದಿತ್ತು ಸರ್ ಪ್ರೈಸ್

    ಚಂದನ್ ಶೆಟ್ಟಿ ಅವರಿಗೆ ಪ್ರಾಣಿ ಹಾಗೂ ಪಕ್ಷಿಗಳೆಂದರೆ ಬಹಳ ಪ್ರೀತಿ. ನಾಯಿ, ಬೆಕ್ಕು, ಪಕ್ಷಿಗಳನ್ನು ಸಾಕಿಕೊಳ್ಳೋಕೆ ಬಹಳ ಇಷ್ಟ ಪಡುತ್ತಾರೆ. ಆದರೆ ಬೆಂಗಳೂರಿಗೆ ಬಂದ ಮೇಲೆ ಅವರು ಪ್ರಾಣಿಗಳನ್ನು ಸಾಕಲು ಸಾಧ್ಯವಾಗಲಿಲ್ಲ. ಇದೀಗ ಅವರ ತಾಯಿ ನಾಯಿಮರಿಯನ್ನು ಉಡುಗೊರೆ ನೀಡುವ ಮೂಲಕ ಚಂದನ್ ಅವರಿಗೆ ಗೆಲುವಿನ ಖುಷಿಯ ಮೇಲೆ ಸರ್ಪೈಸ್ ನೀಡಿದ್ದಾರೆ. ಇದನ್ನೂ ಓದಿ: ಬಿಗ್ ಬಾಸ್ ಫಿನಾಲೆಯಲ್ಲಿ ಕಣ್ಣೀರಿಟ್ಟ ಕಿಚ್ಚ ಸುದೀಪ್!

    ರ್ಶಿಜ್ಲಾ ಬ್ರೀಡ್ ಎಂಬ ಚೈನಾ ನಾಯಿಮರಿಯನ್ನು ಚಂದನ್ ಅವರ ತಾಯಿ ಉಡುಗೊರೆ ನೀಡಿದ್ದಾರೆ. ಈ ನಾಯಿಮರಿಗೆ `ಆಪಲ್’ ಎಂದು ಹೆಸರಿಡಬೇಕು ಎಂದು ಚಂದನ್ ಅವರ ಆಸೆಯಾಗಿತ್ತು. ಚಂದನ್ ಅವರ ಆಸೆಯ ಪ್ರಕಾರವೇ ಆ ನಾಯಿಮರಿಗೆ `ಆಪಲ್’ ಎಂದು ಹೆಸರಿಡಲಾಗಿದೆ. ಇದನ್ನೂ ಓದಿ: ಬಿಗ್ ಬಾಸ್ ಫಿನಾಲೆ ವೇದಿಕೆಯಲ್ಲೂ ಲಿವಿಂಗ್ ಏರಿಯಾ-ಗಾರ್ಡನ್ ಏರಿಯಾ ಗಲಾಟೆ ಸದ್ದು

    ಮೂಲತಃ ಹಾಸನದ ಶಾಂತಿಗ್ರಾಮದ ಚಂದನ್ ಶೆಟ್ಟಿ ಅವರ ತಂದೆ ಪರಮೇಶ್ ಹಾಗೂ ತಾಯಿ ಪ್ರೇಮಾ. ಚಂದನ್ ಶೆಟ್ಟಿಗೆ ಓರ್ವ ತಮ್ಮನಿದ್ದಾನೆ. ಚಂದನ್ ಸಾಹಿತ್ಯ ಬರಹಗಾರನಾಗಿದ್ದು, ಅಲೆಮಾರಿ ಚಿತ್ರದಲ್ಲಿ ಸಹ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ನಂತರ ವರದನಾಯಕ, ಚಕ್ರವ್ಯೂಹ ಹಾಗೂ ಭಜರಂಗಿ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಸುಮಾರು 50ಕ್ಕೂ ಹೆಚ್ಚು ಚಿತ್ರಕ್ಕೆ ಸಾಹಿತ್ಯ ಬರೆದು, ಹಾಡಿದ್ದಾರೆ. ಇತ್ತೀಚಿಗೆ ಬಿಡುಗಡೆಯಾದ ಟಕಿಲಾ ಹಾಡು ಯೂಟ್ಯೂಬ್ ನಲ್ಲಿ ಹೆಚ್ಚು ಜನಪ್ರಿಯವಾಗಿತ್ತು.

  • ತಾಯಿ ಕೊಟ್ಟ ಉಡುಗೊರೆಯನ್ನ 40 ವರ್ಷಗಳಿಂದ ಜೋಪಾನ ಮಾಡ್ಕೊಂಡು ಜೀವನ ಕಟ್ಟಿಕೊಂಡಿರೋ ಬೆಣ್ಣೆ ಅಜ್ಜಿ

    ತಾಯಿ ಕೊಟ್ಟ ಉಡುಗೊರೆಯನ್ನ 40 ವರ್ಷಗಳಿಂದ ಜೋಪಾನ ಮಾಡ್ಕೊಂಡು ಜೀವನ ಕಟ್ಟಿಕೊಂಡಿರೋ ಬೆಣ್ಣೆ ಅಜ್ಜಿ

    ಗದಗ: ತವರು ಮನೆ ಅಂದರೆ ಹೆಣ್ಮಕ್ಕಳಿಗೆ ಎಲ್ಲಿಲ್ಲದ ಪ್ರೀತಿ. ಅದರಲ್ಲೂ ತಾಯಿ ಕೊಟ್ಟ ತವರಿನ ಉಡುಗೊರೆಯನ್ನು ಜೋಪಾನ ಮಾಡಿಕೊಂಡು ಬರುತ್ತಾರೆ. ಇಲ್ಲೊಬ್ಬರು ಅಜ್ಜಿ ಸುಮಾರು 40 ವರ್ಷಗಳಿಂದ ತಾಯಿ ಕೊಟ್ಟ ಉಡುಗೊರೆಯನ್ನು ಜೋಪಾನ ಮಾಡಿಕೊಂಡು ಬಂದಿದ್ದಾರೆ.

    ತವರಿನ ಪ್ರೀತಿಗೆ ಬೆಲೆ ಕಟ್ಟೋಕು ಆಗಲ್ಲ ಎಂಬಂತೆ ತಾಯಿ ಉಡುಗೊರೆಯಾಗಿ ಕೊಟ್ಟ ಎಮ್ಮೆಯಿಂದ ಬೆಣ್ಣೆ ವ್ಯಾಪಾರ ಮಾಡಿಕೊಂಡು ಬೆಣ್ಣೆ ಅಜ್ಜಿ ಎಂದು ಹೆಸರುವಾಸಿಯಾಗಿ ಈ ವೃದ್ಧೆ ಬೆಣ್ಣೆ ಮಾರಿ ಬದುಕು ಕಟ್ಟಿಕೊಂಡಿದ್ದಾರೆ. ಇದರಿಂದ ನಾಲ್ಕು ದಶಕಗಳಿಂದ ತವರಿನ ನೆನಪು ಶಾಶ್ವತವಾಗಿಟ್ಟುಕೊಂಡಿದ್ದಾರೆ.

    ಜಿಲ್ಲೆಯ ಶಿರಹಟ್ಟಿ ತಾಲೂಕಿನ ಹರದಗಟ್ಟಿ ತಾಂಡಾದ ಸೀತವ್ವ ಲಮಾಣಿ ಅವರು 40 ವರ್ಷದ ಹಿಂದೆ ವಿವಾಹವಾಗಿ ಹರದಗಟ್ಟಿ ತಾಂಡಾಕ್ಕೆ ಬಂದಿದ್ದರು. ಸೀತವ್ವರಿಗೆ ತವರುಮನೆಯವರು ಎಮ್ಮೆಯೊಂದನ್ನು ಉಡುಗೊರೆಯಾಗಿ ಕೊಟ್ಟಿದ್ದರು. ಹರದಗಟ್ಟಿ ತಾಂಡಾದ ನೀಲಪ್ಪನನ್ನು ಮದುವೆಯಾದ ವೇಳೆ ಸೀತವ್ವರ ಕುಟುಂಬ ತುಂಬಾ ಬಡತನದಲ್ಲಿತ್ತು. ಕುಟುಂಬಕ್ಕಂಟಿದ ಬಡತನದ ನಿವಾರಣೆಗೆ ಸೀತವ್ವ ತವರು ಮನೆಯವರು ಕೊಟ್ಟ ಎಮ್ಮೆಯನ್ನೇ ಸಾಕಿದರು. ಛಲಬಿಡದ ದಂಪತಿ ಎಮ್ಮೆ ಸಾಕಿ ಅದರಿಂದ ಬೆಣ್ಣೆ ತೆಗೆದು ಮಾರಾಟ ಮಾಡಿ ಬದುಕು ಕಟ್ಟಿಕೊಂಡಿದ್ದಾರೆ. ಒಂದು ಎಮ್ಮೆಯಿಂದ ಆರಂಭವಾದ ಇವರ ಪರಿಶ್ರಮದ ಪಯಣ ಈಗ 9 ಎಮ್ಮೆಗಳ ತುಂಬು ಕುಟುಂಬವಾಗಿದೆ.

    ಈ ಕುಟುಂಬ ಈಗ ವಾರಕ್ಕೆ 10 ಕೆಜಿ ವರೆಗೆ ಬೆಣ್ಣೆ ಉತ್ಪಾದಿಸುತ್ತಿದೆ. ವಾರಕ್ಕೆ ಅಂದಾಜು ಐದು ಸಾವಿರ ರೂ.ವರೆಗೆ ಲಾಭ ಪಡೆಯುತ್ತಿದ್ದಾರೆ. ಬಹುತೇಕರು ಇವರು ಗುಣಮಟ್ಟದ ಬೆಣ್ಣೆ ಉತ್ಪಾದನೆಯ ಭರವಸೆಯಿಂದ ಮನೆಗೆ ಬಂದು ಬೆಣ್ಣೆ ಖರೀದಿಸುತ್ತಿದ್ದಾರೆ. ನಿತ್ಯ ನೂರು ರೂಪಾಯಿವರೆಗೆ ಮೊಸರು ಕೂಡ ಮಾರಾಟ ಮಾಡ್ತಾರೆ. ಪ್ರತಿವಾರ ಬೆಣ್ಣೆ ಹಾಗೂ ಮೊಸರು ಸೇರಿ ಅಂದಾಜು 8 ಸಾವಿರ ರೂಪಾಯಿ ವರೆಗೆ ಆದಾಯ ದೊರೆಯುತ್ತಿದೆ. ಈ ಕುಟುಂಬ ಕಷ್ಟದಲ್ಲಿಯೇ ಬೆಣ್ಣೆ ಮಾರಿ ಆರ್ಥಿಕ ಸಂಕಷ್ಟ ನಿವಾರಿಸಿಕೊಂಡಿದ್ದಾರೆ. ಮಕ್ಕಳಿಗೆ ಶಿಕ್ಷಣ ನೀಡಿ ಇದ್ದದ್ದರಲ್ಲಿ ಕೊಂಚ ನೆಮ್ಮದಿ ಕಂಡುಕೊಂಡಿದ್ದಾರೆ. ಇಂದು ಅದೆಷ್ಟೋ ಯುವಕರು ಕೆಲಸವಿಲ್ಲದೆ ನಿರುದ್ಯೋಗಿಗಳಾಗಿದ್ದಾರೆ. ವಿದ್ಯಾರ್ಹತೆಗೆ ತಕ್ಕ ಕೆಲಸ ಬೇಕೆಂದು ಅಲೆದು ಕೆಲಸವಿಲ್ಲದೇ ಪರದಾಡುತ್ತಿದ್ದಾರೆ. ಆದ್ರೆ ಸೀತವ್ವ ಹಾಗೂ ನೀಲಪ್ಪ ಅವರ ಪರಿಶ್ರಮದ ಬದುಕು ಇಂದಿನ ಯುವಕರಿಗೆ ಪ್ರಾಯೋಗಿಕ ಪಾಠದಂತಿದೆ ಎಂದು ಸ್ಥಳೀಯ ಶಂಕರ್ ಹೇಳಿದರು.

    ನಾಲ್ಕು ದಶಕದ ಈ ಪರಿಶ್ರಮದ ಪಯಣದಲ್ಲಿ ಸೀತವ್ವ ಹಾಗೂ ನೀಲಪ್ಪ ದಣಿವರಿಯದ ಬದುಕು ಸಾಗಿಸಿದ್ದಾರೆ. ಇದರಿಂದಾಗಿ ಭದ್ರತೆಯೇ ಇಲ್ಲದ ಬದುಕಿಗೆ ಬೆಣ್ಣೆ ವ್ಯಾಪಾರ ಭದ್ರತೆ ನೀಡಿದೆ. ತವರಿನ ಕಾಣಿಕೆಯನ್ನು ಉಳಿಸಿಕೊಳ್ಳೋ ಜೊತೆಗೆ ಬದುಕು ರೂಪಿಸಿಕೊಂಡ ಈ ಲಂಬಾಣಿ ಕುಟುಂಬದ ಶ್ರಮದ ಬದುಕು ಇತರರಿಗೂ ಮಾದರಿಯಾಗಿದೆ.

  • ಮಗನಿಗಾಗಿ ದುಬಾರಿ ಗಿಫ್ಟ್ ನೀಡಿದ ಸೈಫ್ ಅಲಿ ಖಾನ್: ಜೀಪಿನ ಬೆಲೆ ಎಷ್ಟು ಗೊತ್ತಾ?

    ಮಗನಿಗಾಗಿ ದುಬಾರಿ ಗಿಫ್ಟ್ ನೀಡಿದ ಸೈಫ್ ಅಲಿ ಖಾನ್: ಜೀಪಿನ ಬೆಲೆ ಎಷ್ಟು ಗೊತ್ತಾ?

    ಮುಂಬೈ: ಮಕ್ಕಳ ದಿನಾಚರಣೆಯ ಪ್ರಯುಕ್ತ ಪೋಷಕರು ತಮ್ಮ ಮಕ್ಕಳಿಗೆ ಉಡುಗೊರೆಗಳನ್ನು ನೀಡುವುದು ಸಾಮಾನ್ಯ ಸಂಗತಿಯಾಗಿದೆ. ಆದರೆ ಈ ಬಾರಿಯ ಮಕ್ಕಳ ದಿನಾಚರಣೆಯಂದು ಸೈಫ್ ಅಲಿ ಖಾನ್ ಮತ್ತು ಕರೀನ ಕಪೂರ್ ದಂಪತಿ ತಮ್ಮ ಮಗನಿಗೆ ವಿಶೇಷವಾದ ಉಡುಗೊರೆಯನ್ನು ನೀಡಿ ಎಲ್ಲರ ಗಮನ ಸೆಳೆದಿದ್ದಾರೆ.

    ಸೋಮವಾರ ಸೈಫ್ ಅಲಿ ಖಾನ್ ತಮ್ಮ ಮುದ್ದಿನ ಮಗನಾದ ತೈಮೂರ್ ಗೆ ಬರೋಬ್ಬರಿ 1.30 ಕೋಟಿ ರೂ. ವೆಚ್ಚದ ಉಡುಗೊರೆಯನ್ನು ನೀಡಿದ್ದಾರೆ. ಕೆಂಪು ಬಣ್ಣದ `swanky Jeep Grand Cherokee SRT’ ಕಾರನ್ನು ಖರೀದಿಸಿದ್ದಾರೆ. ತೈಮೂರ್ ಗೆ ಇದೇ ಮೊದಲ ಉಡುಗೊರೆಯಾಗಿದೆ.

    ಮಾಧ್ಯಮದೊಂದಿಗೆ ಮಾತನಾಡಿದ ಅವರು, ಮಕ್ಕಳ ಸುರಕ್ಷತೆ ತುಂಬಾ ಮುಖ್ಯ ಈ ಜೀಪ್ ತುಂಬಾ ಸುರಕ್ಷತೆಯಿಂದ ಕೂಡಿದೆ. ಹಿಂಬದಿಯಲ್ಲಿ ಮಗುವಿಗಾಗಿ ಬೇಬಿ ನೀಟ್ ಇದೆ. ತೈಮೂರ್ ಜೊತೆ ಮೊದಲ ಡ್ರೈವ್ ಹೋಗಲು ಕಾತುರದಿಂದ ಇದ್ದೇನೆ ಎಂದು ಸಂತೋಷದಿಂದ ಹೇಳಿದರು.

    ಮಾತನ್ನು ಮುಂದುವರಿಸಿ ತೈಮೂರ್ ಕೆಂಪು ಬಣ್ಣವನ್ನು ಇಷ್ಟ ಪಡುತ್ತಾನೆ. ಆದ್ದರಿಂದ ಈ ಕಾರನ್ನು ಇಷ್ಟ ಪಡುತ್ತಾನೆ ಎಂದು ತಿಳಿಸಿದರು. ಇನ್ನು ಡಿಸೆಂಬರ್ ನಲ್ಲಿ ತೈಮೂರ್ ಹುಟ್ಟುಹಬ್ಬವಿದ್ದು, ಮೊದಲನೇ ವರ್ಷದ ಹುಟ್ಟುಹಬ್ಬಕ್ಕೆ ಮುಂಚೆಯೇ ತಮ್ಮ ಮಗನಿಗೆ ದುಬಾರಿ ಗಿಫ್ಟ್ ನೀಡಿರುವುದು ಬಾಲಿವುಡ್ ನಲ್ಲಿ ಬಿಸಿಬಿಸಿ ಚರ್ಚೆಯಾಗುತ್ತಿದೆ.