Tag: ಉಡುಗೊರೆ

  • ಮೇಘನಾ ರಾಜ್‍ಗೆ ಸಿಕ್ತು ವಿಷ್ಣುವರ್ಧನ್ ಪುತ್ರಿಯಿಂದ ಸ್ಪೆಷಲ್ ಗಿಫ್ಟ್!

    ಮೇಘನಾ ರಾಜ್‍ಗೆ ಸಿಕ್ತು ವಿಷ್ಣುವರ್ಧನ್ ಪುತ್ರಿಯಿಂದ ಸ್ಪೆಷಲ್ ಗಿಫ್ಟ್!

    ಬೆಂಗಳೂರು: ನಟ ಡಾ. ವಿಷ್ಣುವರ್ಧನ್ ಅವರ ಮಗಳು ನಟಿ ಮೇಘನಾ ರಾಜ್ ಅವರಿಗೆ ತಂದೆ ಹಾಕಿಕೊಳ್ಳುತ್ತಿದ್ದ ಅಪರೂಪದ ವಸ್ತುವನ್ನು ಉಡುಗೊರೆಯಾಗಿ ನೀಡಿದ್ದಾರೆ.

    ಇಂದು ಡಾ. ವಿಷ್ಣುವರ್ಧನ್ ಇಲ್ಲದಿದ್ದರೂ ಅವರ ಅಭಿಮಾನಿಗಳ ಮನದಲ್ಲಿ ಸದಾ ಉಳಿದುಕೊಂಡಿದ್ದಾರೆ. ಡಾ. ವಿಷ್ಣುವರ್ಧನ್ ಅವರು ಬಳಸುತ್ತಿದ್ದ ವಾಚ್ ನ್ನ ಮಗಳು ಕೀರ್ತಿ ಅವರಿಂದ ನಟಿ ಮೇಘನಾ ಉಡುಗೊರೆಯಾಗಿ ಪಡೆದುಕೊಂಡಿದ್ದಾರೆ.

    ಈ ಬಗ್ಗೆ ನಟಿ ಮೇಘನಾ ತಮ್ಮ ಟ್ಟಿಟ್ಟರ್ ನಲ್ಲಿ ಹೇಳಿಕೊಂಡಿದ್ದಾರೆ. “ವಿಷ್ಣುವರ್ಧನ್ ಅವರ ಮಗಳು ಕೀರ್ತಿ ಅವರಿಂದ ನನಗೆ ವಿಷ್ಣುವರ್ಧನ್ ಬಳಸುತ್ತಿದ್ದ ವಾಚ್ ಉಡುಗೊರೆಯಾಗಿ ಸಿಕ್ಕಿದೆ. ಇದೊಂದು ಅದ್ಭುತ ಉಡುಗೊರೆಯಾಗಿದೆ. ಧನ್ಯವಾದಗಳು ಕೀರ್ತಿ ಅಕ್ಕ” ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಕೀರ್ತಿ ಅವರು ನೀಡಿರುವ ವಾಚ್ ಹಾಕಿಕೊಂಡು ಮೆಘನಾ ಸೆಲ್ಫಿ ಕ್ಲಿಕ್ಕಿಸಿಕೊಂಡು ಆ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ.

    ಡಾ. ವಿಷ್ಣುವರ್ಧನ್ ಅವರ ಕುಟುಂಬಕ್ಕೆ ಮೇಘನಾ ರಾಜ್ ಕುಟುಂಬ ಬಹಳ ಹತ್ತಿರವಾಗಿದೆ. ಮೇಘನಾ ರಾಜ್ ಅವರ ತಂದೆ ಸುಂದರ್ ರಾಜ್ ಮತ್ತು ವಿಷ್ಣುವರ್ಧನ್ ಅವರು ಆತ್ಮೀಯ ಸ್ನೇಹಿತರಾಗಿದ್ದು, ಸಿನಿಮಾಗಳಲ್ಲಿ ಒಟ್ಟಾಗಿ ಅಭಿನಯಿಸಿದ್ದಾರೆ.

    ಮೇಘನಾ ರಾಜ್ ಚಿಕ್ಕವಯಸ್ಸಿನಲ್ಲಿ ವಿಷ್ಣುವರ್ಧನ್ ಅವರನ್ನು ಭೇಟಿ ಮಾಡಿ, ಅವರ ಜೊತೆ ಮಾತನಾಡಿ ಸಮಯ ಕಳೆದಿದ್ದಾರೆ. ಇಂದಿಗೂ ವಿಷ್ಣುವರ್ಧನ್ ಅಂದರೆ ಮೇಘನಾ ರಾಜ್ ಅಭಿಮಾನವಿದೆ. ಸದ್ಯಕ್ಕೆ ಮೇಘನಾ ರಾಜ್ ಅಭಿನಯದ ‘ಇರುವುದೆಲ್ಲವ ಬಿಟ್ಟು’ ಸಿನಿಮಾ ಇದೇ ತಿಂಗಳಲ್ಲಿ ಬಿಡುಗೆಡೆಗೆ ಸಿದ್ಧವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಹುಟ್ಟುಹಬ್ಬದಂದು ಧನ್ವಂತರಿ ಹೋಮ – ಬಂಡಿ ಮಹಾಕಾಳಿ ದೇವಸ್ಥಾನಕ್ಕೆ ಸೃಜನ್ ರಿಂದ ವಿಶೇಷ ಉಡುಗೊರೆ

    ಹುಟ್ಟುಹಬ್ಬದಂದು ಧನ್ವಂತರಿ ಹೋಮ – ಬಂಡಿ ಮಹಾಕಾಳಿ ದೇವಸ್ಥಾನಕ್ಕೆ ಸೃಜನ್ ರಿಂದ ವಿಶೇಷ ಉಡುಗೊರೆ

    ಬೆಂಗಳೂರು: ಇಂದು ನಟ ಸೃಜನ್ ಲೋಕೇಶ್ 38ನೇ ವರ್ಷದ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿಕೊಂಡಿದ್ದಾರೆ.

    ಬೆಂಗಳೂರಿನ ಗವಿಪುರಂ ಗುಟ್ಟಳ್ಳಿಯ ಬಂಡಿ ಮಹಾಕಾಳಿ ದೇವಸ್ಥಾನದಲ್ಲಿ ಸೃಜನ್ ಮತ್ತು ಪತ್ನಿ ಗ್ರೀಷ್ಮಾ ಧನ್ವಂತರಿ ಹೋಮವನ್ನು ಮಾಡಿದ್ದಾರೆ. ಈ ಹೋಮದಲ್ಲಿ ಕುಟುಂಬ ಸದಸ್ಯರು ಮತ್ತು ಸ್ನೇಹಿತರು ಪಾಲ್ಗೊಂಡಿದ್ದರು.

    ಈ ಹಿಂದೆ ಈ ದೇವಸ್ಥಾನಕ್ಕೆ ಸೃಜನ್ ಬಂದಿದ್ದರು. ಆಗ ದೇವಾಲಯ ನಿರ್ಮಾಣ ಕಾರ್ಯ ನಡೆಯುತ್ತಿತ್ತು. ಆಗ ಸೃಜನ್ ಬಂಡಿ ಮಹಾಕಾಳಿ ದೇವಸ್ಥಾನದ ಪೂರ್ವ ದಿಕ್ಕಿನ ಮಹಾದ್ವಾರವನ್ನು ಕಟ್ಟಿಸಿಕೊಡುವುದಾಗಿ ಹೇಳಿದ್ದರು. ಅದರಂತೆಯೇ ಇಂದು ಸೃಜನ್ ಹುಟ್ಟುಹಬ್ಬದ ಪ್ರಯುಕ್ತ ದೇವಾಲಯದ ದ್ವಾರದ ಉದ್ಘಾಟನೆಯನ್ನು ಮಾಡಿದ್ದಾರೆ. ವಿಶೇಷ ಎಂದರೆ ಈ ದ್ವಾರಕ್ಕೆ ನಟ ದರ್ಶನ್ ಪೇಂಟಿಂಗ್ ಮಾಡಿಸುವುದಾಗಿ ಒಪ್ಪಿಕೊಂಡಿದ್ದರು. ಅವರು ಕೂಡ ಸೃಜನ್ ಬರ್ತ್ ಡೇ ದಿನದೊಳಗೆ ದ್ವಾರದ ಉದ್ಘಾಟನೆ ಮಾಡಬೇಕು ಅಷ್ಟರಲ್ಲಿ ಬೇಗ ಕೆಲಸ ಮುಗಿಸಬೇಕು ಎಂದು ತಿಳಿಸಿದ್ದರು.

    ಹೋಮ ಮಾಡಿ, ದೇವಾಲಯದ ದ್ವಾರವನ್ನು ಉದ್ಘಾಟನೆ ಮಾಡಿ ಬಳಿಕ ಸೃಜ ಮತ್ತು ಗಜ ಎಂಬ ಹೆಸರಲ್ಲಿ ಸಾಂಕೇತಿಕವಾಗಿ ದೇವಸ್ಥಾನದ ಹಿಂಬದಿಯಲ್ಲಿ ಶ್ರೀ ಗಂಧದ ಎರಡು ಗಿಡವನ್ನು ನೆಟ್ಟಿದ್ದಾರೆ. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಸೃಜನ್, ನನಗೆ ಬಂಡಿ ಮಹಾಕಾಳಿ ದೇವಸ್ಥಾನದ ಮೇಲೆ ತುಂಬಾ ನಂಬಿಕೆ ಇದೆ. ಬಂಡಿ ಮಹಾಕಾಳಿ ದೇವಿಯನ್ನು ನಾನು ನಂಬಿದ್ದೇನೆ. ನಾನು ಅಂದುಕೊಂಡಿದ್ದೆಲ್ಲ ಇಲ್ಲಿ ಬಂದು ಹೋದ ಮೇಲೆ ಸಲೀಸಾಗಿ ಆಗಿದೆ. ಕೆಲ ದಿನದ ಹಿಂದೆ ಬಂದಾಗ ದೇವಸ್ಥಾನದ ನಿರ್ಮಾಣ ಕಾರ್ಯ ನಡೆಯುತಿತ್ತು. ಅವಾಗ ನಾನು ಪೂರ್ವ ದ್ವಾರ ಮಾಡಿಕೊಡುವುದಾಗಿ ಹೇಳಿದ್ದೆ. ಹೀಗಾಗಿ ಈ ಮಹಾತ್ಕಾರ್ಯ ನಡೆದಿದೆ ಎಂದು ಹೇಳಿದ್ದಾರೆ.

    ದರ್ಶನ್ ಕೂಡ ಇದಕ್ಕೆ ಕೈ ಜೋಡಿಸಿದ್ದು ಬಹಳ ಖುಷಿ ಇದೆ. ದರ್ಶನ್ ಕೂಡ ಈ ದೇವಸ್ಥಾನಕ್ಕೆ ಬಂದರೆ ರಿಫ್ರೆಶ್ ಆಗುತ್ತಾರೆ. ಬರ್ತ್ ಡೇ ಹಿನ್ನೆಲೆಯಲ್ಲಿ ಸುಮಾರು 500 ಗಿಡಗಳನ್ನ ಉಚಿತವಾಗಿ ನೀಡುತ್ತಿದ್ದೇವೆ. ದರ್ಶನ್ ಕೂಡ ಗಿಡಗಳನ್ನು ನೀಡಿದ್ದಾರೆ. ನಗರದಲ್ಲಿ ಮರಗಳು ಕಮ್ಮಿ ಆಗಿದೆ. ಇದರಿಂದ ತುಂಬಾ ಬೇಸರ ಮೂಡಿಸಿದೆ. ಮನೆಗೆ ಹೋದ ಮೇಲೆಯೂ ಅಕ್ಕ ಪಕ್ಕದ ಮನೆಯವರಿಗೆಲ್ಲ ಸ್ವತಃ ನಾವೇ ಹೋಗಿ ಗಿಡಗಳನ್ನ ಹಂಚಲಿದ್ದೇವೆ ಎಂದು ತಿಳಿಸಿದರು.

    ಲೋಕೇಶ್ ಪ್ರೊಡಕ್ಷನ್ ನಿಂದ ಈ ವರ್ಷದಿಂದ ಸಾಕಷ್ಟು ಕೆಲಸಗಳು ನಡೆಯಲಿದೆ. ಹೊಸಬರಿಗೆ ಹೆಚ್ಚಿನ ಅವಕಾಶ ಇದೆ. ಹಾಗೆ ಸ್ಟಾರ್ ನಟರ ಸಿನಿಮಾಗಳು ಕೂಡ ಈ ಪ್ರೊಡಕ್ಷನ್ ಹೌಸ್ ನಿಂದ ನಡೆಯಲಿದೆ. ಸದ್ಯದಲ್ಲಿಯೇ ಖಾಸಗಿ ವಾಹಿನಿಯ ಮತ್ತೊಂದು ರಿಯಾಲಿಟಿ ಶೋ ನಡೆಯಲಿದೆ. ಅದರಿಂದ ಸಾಕಷ್ಟು ಜನರಿಗೆ ಸಹಾಯ ಆಗಲಿದೆ. ದರ್ಶನ್ ಜೊತೆ ಸಿನಿಮಾ ಆದಷ್ಟು ಬೇಗ ಮಾಡುತ್ತೇನೆ. ದರ್ಶನ್ ನನ್ನ ಜೋತೆಯಲ್ಲಿ ಇರುವುದೆ ನನ್ನ ಉಡುಗೊರೆ ಎಂದು ಸಂತಸದಿಂದ ಹೇಳಿದರು.

  • ಮದ್ವೆಗೆ ವಿಶೇಷ ವರದಕ್ಷಿಣೆ ಬೇಡಿಕೆಯಿಟ್ಟ ವರ- ಬಂದ ಅತಿಥಿಗಳಿಗೆ ಸಿಕ್ತು ಭರ್ಜರಿ ಉಡುಗೊರೆ!

    ಮದ್ವೆಗೆ ವಿಶೇಷ ವರದಕ್ಷಿಣೆ ಬೇಡಿಕೆಯಿಟ್ಟ ವರ- ಬಂದ ಅತಿಥಿಗಳಿಗೆ ಸಿಕ್ತು ಭರ್ಜರಿ ಉಡುಗೊರೆ!

    ಭುವನೇಶ್ವರ್: ವರನೊಬ್ಬ ತನ್ನ ಮದುವೆಗೆ 1,000 ಸಸಿಗಳನ್ನು ವರದಕ್ಷಿಣೆಯಾಗಿ ಪಡೆದ ಘಟನೆ ಒಡಿಶಾದ ಕೇಂದ್ರಪಾಡಾ ಜಿಲ್ಲೆಯ ಬಲ್‍ಬದ್ರಪುರ ಗ್ರಾಮದಲ್ಲಿ ನಡೆದಿದೆ.

    ಸರೋಜ್ ಪೇಶೆ, ಸಸಿಗಳನ್ನು ವರದಕ್ಷಿಣೆ ಆಗಿ ಪಡೆದ ವರ. ವೃತ್ತಿಯಲ್ಲಿ ಶಿಕ್ಷಕನಾಗಿರುವ ಸರೋಜ್ ಅವರಿಗೆ ತಮ್ಮ ಮದುವೆಯಲ್ಲಿ ಪಟಾಕಿ ಸಿಡಿಸುವುದು ಹಾಗೂ ಮಂಟಪವನ್ನು ಹೂವಿನಿಂದ ಅಲಂಕಾರ ಮಾಡುವುದು ಇಷ್ಟವಿಲ್ಲ. ಬದಲಾಗಿ ಸಿಂಪಲ್ ಆಗಿ ಮದುವೆ ಆಗೋ ಇಚ್ಚೆಯಿತ್ತು.

    ತನ್ನ ಮದುವೆ ಮಾತುಕತೆ ನಡೆಯುತ್ತಿದ್ದಾಗ ಸರೋಜ್ ಒಂದು ಷರತ್ತು ಹಾಕಿದ್ದರು. ವಧು ಕಡೆಯವರು 1,000 ಸಸಿಗಳನ್ನು ವರದಕ್ಷಿಣೆ ಆಗಿ ನೀಡಬೇಕೆಂದು ಸರೋಜ್ ಬೇಡಿಕೆ ಇಟ್ಟಿದ್ದರು. ಸರೋಜ್ ಬಿಸ್ವಾಲ್ ‘ಗಾಚಾ ಟಾಯಿ ಸಾಥಿ ಟಾಯಿ (ಮರ ಒಂದು ಸಂಗಾತಿ)’ ಸಂಸ್ಥೆಯ ಸದಸ್ಯರಾಗಿದ್ದಾರೆ. ಈ ಸಂಸ್ಥೆ ಸಸಿ ನೆಡುವ ಜಾಗೃತಿ ಮೂಡಿಸುತ್ತದೆ. ಇದಕ್ಕೆ ವಧು ರಶ್ಮಿರೇಖಾ ಕೂಡ ಸಾಥ್ ನೀಡಿದ್ದರು. ವಿಶೇಷವೆಂದರೆ ರಶ್ಮಿರೇಖಾ ಕೂಡ ವೃತ್ತಿಯಲ್ಲಿ ಶಿಕ್ಷಕರಾಗಿದ್ದಾರೆ.

    ಜೂನ್ 22ರಂದು ಸರೋಜ್ ಹಾಗೂ ರಶ್ಮಿರೇಖಾ ಅವರ ಮದುವೆ ನಡೆಯಿತು. ಮದುವೆ ನಡೆಯುತ್ತಿದ್ದ ಸ್ಥಳದಲ್ಲೇ ವಧುವಿನ ಮನೆಯವರು ಒಂದು ಟ್ರಕ್‍ನಲ್ಲಿ ಸಸಿ ತರಿಸಿದ್ದರು. ಆ ಸಸಿಗಳಲ್ಲಿ ಹೆಚ್ಚು ಹಣ್ಣಿನ ಸಸಿಗಳು ಇದ್ದಿದು ವಿಶೇಷವಾಗಿತ್ತು. ಮದುವೆಯಲ್ಲಿ ಎಲ್ಲ ಶಾಸ್ತ್ರಗಳು ಮುಗಿದ ನಂತರ ಸರೋಜ್ ಸ್ವಲ್ಪ ಸಮಯ ಬಿಡುವು ಮಾಡಿಕೊಂಡು ಆ ಸಸಿಗಳನ್ನು ಮದುವೆಯಲ್ಲಿ ಭಾಗಿಯಾಗಿದ್ದ ಎಲ್ಲ ಅತಿಥಿಗಳಿಗೆ ಉಡುಗೊರೆಯಾಗಿ ನೀಡಿದ್ದರು.

    ವಿವಿಧ ರೀತಿಯಲ್ಲಿ ಕೊಡುವ ವರದಕ್ಷಿಣೆಗೆ ನನ್ನ ವಿರೋಧವಿದೆ. ಆದರೆ ನಾನು ಪರಿಸರವನ್ನು ರಕ್ಷಿಸಲು ಹಾಗೂ ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ ನೀಡಲು ಇಷ್ಟಪಡುತ್ತೇನೆ. ಹೀಗಾಗಿ ಸಂಬಂಧಿಕರಿಗೆ ಹಾಗೂ ಗ್ರಾಮಸ್ಥರಿಗೆ ಈ ಸಂದೇಶ ನೀಡೋಕೆ ನನ್ನ ಮದುವೆಗಿಂತ ಒಳ್ಳೆಯ ಅವಕಾಶವಿಲ್ಲ ಎಂದು ವರ ಸರೋಜ್ ತಿಳಿಸಿದ್ದಾರೆ.

    ನಾನು ಹಾಗೂ ನನ್ನ ಪತ್ನಿ ವೃತ್ತಿಯಲ್ಲಿ ಶಿಕ್ಷಕರಾಗಿದ್ದು, ನಮ್ಮ ವಿದ್ಯಾರ್ಥಿಗಳಿಗೆ ಇದರಿಂದ ಒಳ್ಳೆಯ ಪ್ರೇರಣೆ ಸಿಗಲಿದೆ. ಸಸಿ ನೆಡುವುದರಿಂದ ಪರಿಸರವನ್ನು ಉಳಿಸಬಹುದು ಎಂದು ವರ ಸರೋಜ್ ಹೇಳಿದ್ದಾರೆ.

  • ಮದುವೆಗೆ ಬಂದ ಅತಿಥಿಗಳಿಗೆ ಗಿಡಗಳನ್ನು ಉಡುಗೊರೆಯಾಗಿ ನೀಡಿದ ದಂಪತಿ!

    ಮದುವೆಗೆ ಬಂದ ಅತಿಥಿಗಳಿಗೆ ಗಿಡಗಳನ್ನು ಉಡುಗೊರೆಯಾಗಿ ನೀಡಿದ ದಂಪತಿ!

    ಮಂಗಳೂರು: ಮದುವೆ ಸಮಾರಂಭಗಳಲ್ಲಿ ವಿಶಿಷ್ಟ ಆಚರಣೆಗಳು ನಡೆಯುತ್ತಿರುವುದು ಇಂದು ಸಾಮಾನ್ಯವಾಗಿದ್ದು, ಮಂಗಳೂರಿನಲ್ಲಿ ನೂತನ ದಂಪತಿಗಳು ಮದುವೆಗೆ ಆಗಮಿಸಿದ ಅತಿಥಿಗಳಿಗೆ ಗಿಡಗಳನ್ನು ಉಡುಗೊರೆಯಾಗಿ ನೀಡಿ ಪರಿಸರ ಪ್ರೇಮ ಮೆರೆದಿದ್ದಾರೆ.

    ಜಿಲ್ಲೆಯ ಬಂಟ್ವಾಳ ತಾಲೂಕಿನ ಪುಣಚದಲ್ಲಿ ಇಂದು ನಡೆದ ಮದುವೆ ಎಲ್ಲರ ಗಮನ ಸೆಳೆಯಿತು. ಭಜರಂಗದಳದ ಮುಖಂಡ ಮುರಳೀಕೃಷ್ಣ ಹಸಂತಡ್ಕ ಎಂಬವರ ವಿವಾಹವು ಪುಣಚದ ಮಹಿಷಮರ್ದಿನಿ ಸಭಾಂಗಣದಲ್ಲಿ ನಡೆದಿತ್ತು. ಈ ವೇಳೆ ಮದುವೆಗೆ ಆಗಮಿಸಿದ ಅತಿಥಿಗಳಿಗೆ ದಂಪತಿ ಬೆಲೆಬಾಳುವ ರಕ್ತಚಂದನ, ಶ್ರೀಗಂಧ ಹಾಗೂ ಅನೇಕ ಮರದ ಗಿಡಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಇದನ್ನೂ ಓದಿ: ಮದುವೆಯಲ್ಲೂ ಕೆಲಸದ ಪ್ರೀತಿ ಮೆರೆದ ವರ- ಜೆಸಿಬಿಯಲ್ಲೇ ದಿಬ್ಬಣ!

    ಜಿಲ್ಲೆಯಾದ್ಯಂತ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಪರಿಸರ ಉಳಿಸುವ ದೃಷ್ಠಿಯಿಂದ ದಂಪತಿಯು ಈ ಯೋಜನೆಯನ್ನು ಹಾಕಿಕೊಂಡಿದ್ದರು. ಈ ವೇಳೆ ಅತಿಥಿಗಳಿಗೆ ಗಿಡಗಳನ್ನು ಕೊಟ್ಟು ಪೋಷಿಸಲು ಪ್ರೇರೆಪಿಸಿದ್ದಾರೆ. ಇವರ ಈ ಕಾರ್ಯವು ಪರಿಸರ ರಕ್ಷಣೆಗೆ ಮಾದರಿಯಾಗಿದೆ. ಮದುವೆಗೆ ಬಂದ ಸಾವಿರಾರು ಅತಿಥಿಗಳು ಗಿಡಗಳನ್ನು ಹೊತ್ತೊಯ್ದಿದ್ದು ವಿಶೇಷವಾಗಿತ್ತು. ಇದನ್ನೂ ಓದಿ: ಮದ್ವೆಯಲ್ಲಿ ಅತಿಥಿಗಳಿಂದ ಉಡುಗೊರೆಯಾಗಿ ಪುಸ್ತಕಗಳನ್ನು ಪಡೆದ ನವ ದಂಪತಿ

  • ಬೆಂಗ್ಳೂರಿನ ದೇವಾಲಯಕ್ಕೆ ವಿಶೇಷ ಉಡುಗೊರೆ ನೀಡಿದ್ರು ದರ್ಶನ್!

    ಬೆಂಗ್ಳೂರಿನ ದೇವಾಲಯಕ್ಕೆ ವಿಶೇಷ ಉಡುಗೊರೆ ನೀಡಿದ್ರು ದರ್ಶನ್!

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಬೆಂಗಳೂರಿನ ದೇವಾಲಯವೊಂದಕ್ಕೆ ವಿಶೇಷ ಉಡುಗೊರೆ ನೀಡಿದ್ದಾರೆ.

    ನಗರದ ಚಾಮರಾಜಪೇಟೆಯಲ್ಲಿರುವ ಬಂಡಿ ಮಹಾ ಕಾಳಿಯಮ್ಮ ದೇವಾಲಯಕ್ಕೆ ಸ್ಯಾಂಡಲ್‍ವುಡ್ ತಾರೆಯರು ಆಗಾಗ ಭೇಟಿ ನೀಡುತ್ತಿರುತ್ತಾರೆ. ಇದೀಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಆ ದೇವಾಲಯಕ್ಕೆ ಭೇಟಿ ನೀಡಿದ್ದಾರೆ.

    ದರ್ಶನ್ ದೇವಾಲಯಕ್ಕೆ ಭೇಟಿ ನೀಡಿ ದೇವಿಯ ದರ್ಶನವನ್ನು ಪಡೆದಿದ್ದಾರೆ. ಇದೇ ವೇಳೆ ದೇವಾಲಯಕ್ಕಾಗಿ ಚೀನಿ ಜಾತಿಯ ಎರಡು ನಾಯಿ ಮರಿಗಳನ್ನು ಆ ದೇವಾಲಯದ ಅರ್ಚಕರಿಗೆ ನೀಡಿದ್ದಾರೆ.

    ಪ್ರಾಣಿ ಪಕ್ಷಿಗಳನ್ನು ತುಂಬಾನೇ ಇಷ್ಟಪಡುವ ದರ್ಶನ್ ಮೈಸೂರಿನ ತನ್ನ ಫಾರ್ಮ್ ಹೌಸ್‍ನಲ್ಲಿ ಸಾಕಷ್ಟು ಪ್ರಾಣಿಗಳನ್ನು ಸಾಕಿದ್ದಾರೆ. ಪ್ರಾಣಿಗಳ ಮೇಲಿರುವ ಪ್ರೀತಿಯನ್ನು ಕಂಡು ದರ್ಶನ್ ಮೈಸೂರು ಮೃಗಾಲಯದ ಬ್ರಾಂಡ್ ಅಂಬಾಸಿಡರ್ ಆಗಿ ಆಯ್ಕೆಯಾಗಿದ್ದರು.

    ದರ್ಶನ್ ತಮ್ಮದೇ ಫಾರ್ಮ್‍ನಲ್ಲಿ ಹಲವಾರು ಪ್ರಾಣಿಗಳನ್ನು ಸಾಕುತ್ತಿದ್ದಾರೆ. ಅಲ್ಲದೇ ಮೈಸೂರಿನ ಚಾಮರಾಜೇಂದ್ರ ಮೃಗಾಲಯದಲ್ಲಿ ಹುಲಿ ಮತ್ತು ಆನೆ ಪ್ರಾಣಿಗಳನ್ನು ದತ್ತು ಪಡೆದು ಆ ಪ್ರಾಣಿಗಳ ಪಾಲನೆಗೆ ಸಹಾಯ ಮಾಡುತ್ತಿದ್ದಾರೆ.

  • ರವಿಚಂದ್ರನ್ ಹುಟ್ಟುಹಬ್ಬಕ್ಕೆ ಸಿಕ್ತು ಮಕ್ಕಳಿಂದ ಸ್ಪೆಷಲ್ ಗಿಫ್ಟ್!

    ರವಿಚಂದ್ರನ್ ಹುಟ್ಟುಹಬ್ಬಕ್ಕೆ ಸಿಕ್ತು ಮಕ್ಕಳಿಂದ ಸ್ಪೆಷಲ್ ಗಿಫ್ಟ್!

    ಬೆಂಗಳೂರು: ಕ್ರೇಜಿ ಸ್ಟಾರ್ ರವಿಚಂದ್ರನ್ ಇಂದು ತಮ್ಮ 57ನೇ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. ರವಿಚಂದ್ರನ್ ಅಭಿಮಾನಿಗಳು ರಾಜಾಜಿನಗರದ ಅವರ ಮನೆ ಮುಂದೆ ತಮ್ಮ ನೆಚ್ಚಿನ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ. ಸದ್ಯ ಅಭಿಮಾನಿಗಳು ಕೈಯಲ್ಲಿ ಗುಲಾಬಿ ಹೂ ಹಿಡಿದು ಪ್ರೇಮಲೋಕದ ಸೃಷ್ಟಿಕರ್ತನಿಗಾಗಿ ಕಾದು ಅವರ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ.

    ‘ಪಡ್ಡೆ ಹುಲಿ’ ಚಿತ್ರ ತಂಡದ ಸದಸ್ಯರು ರವಿಚಂದ್ರನ್ ಜನ್ಮದಿನದಂದು ಕೇಕ್ ಕಟ್ ಮಾಡಿ ಆಚರಣೆ ಮಾಡಿದ್ದಾರೆ. ಇನ್ನೂ ರವಿಚಂದ್ರನ್ ಹುಟ್ಟುಹಬ್ಬಕ್ಕೆ ಪಡ್ಡೆ ಹುಲಿ ಚಿತ್ರತಂಡ ಅವರ ಪಾತ್ರದ ಮೋಷನ್ ಪಿಕ್ಚರ್ ರಿಲೀಸ್ ಮಾಡಿದ್ದಾರೆ.

    ಇದೇ ವೇಳೆ ಮಾತನಾಡಿದ ರವಿಚಂದ್ರನ್, “ಅಭಿಮಾನಿಗಳಿಗೋಸ್ಕರ ನಾನು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದೇನೆ. ಈಗ ಅಭಿಮಾನಿಗಳಿಗೋಸ್ಕರ 4 ಗಂಟೆ ನಿಂತ್ಕೊಂಡು ಬೇಕಾದರೂ ಫೋಟೋ ತೆಗಿಸಿಕೊಳ್ಳುತ್ತೀನಿ. ಈ ವರ್ಷ ಮತ್ತೆ ರಣಧೀರನನ್ನು ನೋಡ್ತೀರ. ಈ ಹಿಂದೆ ಮಂಜಿನ ಹನಿಯಿಂದ ದುಡ್ಡು ಕಳೆದುಕೊಂಡೆ. ಈಗ ಹೊಸ ಕಾನ್ಸೆಪ್ಟ್ ಜೊತೆ ಬರ್ತೀನಿ” ಎಂದು ಹೇಳಿದ್ದಾರೆ.

    ನನ್ನ ಹುಟ್ಟುಹಬ್ಬಕ್ಕೆ ಮಗಳು ಗಾಗಲ್ ಗಿಫ್ಟ್ ನೀಡಿದ್ದು, ನನ್ನಲ್ಲಿರುವ ಕ್ರೇಜಿ ಹೊರಬರಲಿ ಎಂದು ಗಂಡು ಮಕ್ಕಳು ಇಬ್ಬರು ಕ್ರೇಜಿ ಎಂದು ಇರುವ ಶರ್ಟ್ ಡಿಸೈನ್ ಮಾಡಿಕೊಟ್ಟಿದ್ದಾರೆ. ಮಗಳು ಗಿಫ್ಟ್ ಕೊಟ್ಟಿರೋದರಿಂದ ಪ್ರೀತಿಯಿಂದ ಹೋಟೆಲ್ ಒಳಗಡೆಯೇ ಹಾಕಿದ್ದೇನೆ. ಈಗ ಹಾಕಿರುವ ಶರ್ಟ್ ಕೂಡ ಮಕ್ಕಳೇ ನೀಡಿದ್ದು. ಇಲ್ಲಿ ಹುಟ್ಟುಹಬ್ಬ ಆಚರಣೆ ಮುಗಿಸಿಕೊಂಡ ನಂತರ ಫ್ಯಾಮಿಲಿ ಜತೆ ಗೋವಾಗೆ ತೆರಳುತ್ತಿದ್ದೇನೆ. ನನ್ನ ತಂದೆಯ ಜತೆ ಸೇರಿ ಮಾಡಿದ ಬರ್ತಡೇ ನನಗೆ ಮರೆಯೋದಕ್ಕೆ ಸಾಧ್ಯವಿಲ್ಲ ಎಂದು ರವಿಚಂದ್ರನ್ ತಿಳಿಸಿದ್ದಾರೆ.

    ರಾಜೇಂದ್ರ ಪೊನ್ನಪ್ಪ ಕ್ಲಾಸು ಮತ್ತು ಮಾಸ್ ಎಲಿಮೆಂಟ್ಸ್ ಇರುವ ಸಿನಿಮಾ. ಈ ವರ್ಷ ನೀವು ಮತ್ತೆ ನನ್ನಲಿರುವ ರಣಧೀರನನ್ನ ನೋಡ್ತಿರ. ರಾಜೇಂದ್ರ ಪೊನ್ನಪ್ಪ 50 ಕೋಟಿ ಕಲೆಕ್ಷನ್ ಮಾಡಿದ್ರೆ ಮಂಜಿನ ಹನಿ ಶುರುಮಾಡುತ್ತೇನೆ. ಅದನ್ನ ಮಾಡಲು ನನ್ನ ಬಳಿ ಹಣವಿಲ್ಲ. ಈಗಾಗಲೇ ಮಂಜಿನ ಹನಿಗಾಗಿ 8 ಕೋಟಿ ಕಳೆದುಕೊಂಡಿದ್ದೀನಿ ಎಂದು ತಿಳಿಸಿದ್ದಾರೆ.

    ನಾನು ಅಭಿಮಾನಿಗಳಿಗಾಗಿ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳುತ್ತಿದ್ದೇನೆ. ದೂರದ ಊರುಗಳಿಂದ ಅಭಿಮಾನಿಗಳು ಬಂದಿದ್ದಾರೆ. ಅವರು ಬಂದು ಅಷ್ಟೇ ಸೇಫ್ ಆಗಿ ಹೋಗಬೇಕು. ನಾನು ಅಂಬರೀಶ್ ಕದಿಮ ಕಳ್ಳರು ಟೈಮಲ್ಲಿ ಒಟ್ಟಿಗೆ ಸೇರಿ ಹುಟ್ಟುಹಬ್ಬ ಆಚರಿಸುತ್ತಿದ್ದೀವಿ. ಈ ಬಾರಿ ತಿರುಪತಿ ಗೆ ಹೋಗಲು ಆಗಲಿಲ್ಲ ಹಾಗಾಗಿ ಈ ಬಾರಿ ಅಲ್ಲಿಂದ ಲಡ್ಡು ತರಿಸಿದ್ದೇನೆ ಎಂದು ರವಿಚಂದ್ರನ್ ಹೇಳಿದರು. ಇದನ್ನೂ ಓದಿ: 57ನೇ ವಸಂತಕ್ಕೆ ಕಾಲಿಟ್ಟ ಪ್ರೇಮಲೋಕದ ಸೃಷ್ಠಿಕರ್ತ- ಪಡ್ಡೆ ಹುಲಿ ಚಿತ್ರದಿಂದ ಸಿಕ್ತು ವಿಶೇಷ ಉಡುಗೊರೆ!

  • ಚಾಲೆಂಜಿಂಗ್ ಸ್ಟಾರ್ ಗೆ ಅಭಿಮಾನಿಯಿಂದ ಅಪರೂಪದ ಉಡುಗೊರೆ!

    ಚಾಲೆಂಜಿಂಗ್ ಸ್ಟಾರ್ ಗೆ ಅಭಿಮಾನಿಯಿಂದ ಅಪರೂಪದ ಉಡುಗೊರೆ!

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ವೀಕೆಂಡ್‍ನಲ್ಲಿ ತಮ್ಮ ಫಾರ್ಮ್ ಹೌಸ್‍ನಲ್ಲಿ ದಿನ ಕಳೆಯುತ್ತಾರೆ. ಆದರೆ ಈ ಭಾನುವಾರ ದರ್ಶನ್ ಕಡಲ ನಾಡು ಮಂಗಳೂರಿಗೆ ಪ್ರಯಾಣ ಬೆಳೆಸಿದ್ದರು.

    ಮಂಗಳೂರು ಹೊರವಲಯದ ಅಡ್ಯಾರ್ ನಲ್ಲಿ ಏರ್ಪಡಿಸಲಾಗಿದ್ದ ಯಕ್ಷ ಧ್ರುವ ಪಟ್ಲ ಕಾರ್ಯಕ್ರಮಕ್ಕೆ ದರ್ಶನ್ ನಿಗದಿತ ಸಮಯಕ್ಕಿಂತ ಮೂರು ಗಂಟೆ ತಡವಾಗಿ ಹೋಗಿದ್ದರು. ಆದರೂ ದರ್ಶನ್ ಅವರನ್ನು ನೋಡಲು ಸಾವಿರಾರು ಮಂದಿ ಕಾದು ಕುಳಿತಿದ್ದರು.

    ಚಾಲೆಂಜಿಂಗ್ ಸ್ಟಾರ್ ಬರುವುದ್ದನ್ನು ತಿಳಿದ ಸಾವಿರಾರು ಅಭಿಮಾನಿಗಳು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡರು. ನಂತರ ದರ್ಶನ್ ಬರುತ್ತಿದ್ದಂತೆ ಅಭಿಮಾನಿಗಳು ಅವರ ಜೊತೆ ಸೆಲ್ಫಿ ತೆಗೆಸಿಕೊಳ್ಳಲು ಮುಗಿಬಿದಿದ್ದರು.

    ದರ್ಶನ್ ಅವರು ಹೋಗಿ ಬರುವ ಜಾಗಗಳಲ್ಲಿ ಅವರ ಅಭಿಮಾನಿಗಳು ಅವರಿಗಾಗಿ ಉಡುಗೊರೆಯನ್ನು ನೀಡುತ್ತಾರೆ. ಆದರೆ ಮಂಗಳೂರಿನಲ್ಲಿ ಅಭಿಮಾನಿಯೊಬ್ಬರು ದರ್ಶನ್ ಅವರಿಗೆ ವಿಶೇಷವಾದ ಉಡುಗೊರೆಯನ್ನು ನೀಡಿದ್ದಾರೆ.

    ಅಭಿಮಾನಿ ತನ್ನ ನೆಚ್ಚಿನ ನಟ ದರ್ಶನ್‍ಗೆ ವ್ಯಂಗ್ಯ ಚಿತ್ರವಿರುವ ಒಂದು ಫೋಟೋವನ್ನು ಉಡುಗೊರೆಯಾಗಿ ನೀಡಿದ್ದಾರೆ. ದರ್ಶನ್ ಅವರಿಗೆ ಸಿಕ್ಕ ಈ ವಿಶೇಷವಾದ ಉಡುಗೊರೆಯನ್ನು ನೋಡಿ ಅವರ ಅಭಿಮಾನಿಗಳು ಸಾಕಷ್ಟು ಇಷ್ಟಪಟ್ಟಿದ್ದಾರೆ. ಕಾರ್ಟೂನ್ ಫೋಟೋ ನೋಡಿದ ದರ್ಶನ್ ಅಭಿಮಾನಿಗಳು ತಮ್ಮ ಸಂತಸ ವ್ಯಕ್ತಪಡಿಸಿದ್ದಾರೆ.

    ದರ್ಶನ್ ಈ ಹಿಂದೆ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ರಮಕ್ಕಾಗಿ ಕರಾವಳಿಗೆ ಹೋಗಿದ್ದರು. ಮಂಗಳೂರಿಗರ ಪ್ರೀತಿಗೆ ಕರಗಿದ ದರ್ಶನ್ ಇದೀಗ ಮತ್ತೊಮ್ಮೆ ಇನ್ನೊಂದು ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದು ವಿಶೇಷವಾಗಿತ್ತು.

  • ಸೋನಮ್ ಮದ್ವೆಗೆ ಬಂದ ಅತಿಥಿಗಳಿಗೆ ಸಿಕ್ತು ವಿಚಿತ್ರ ಗಿಫ್ಟ್!

    ಸೋನಮ್ ಮದ್ವೆಗೆ ಬಂದ ಅತಿಥಿಗಳಿಗೆ ಸಿಕ್ತು ವಿಚಿತ್ರ ಗಿಫ್ಟ್!

    ಮುಂಬೈ: ಬಾಲಿವುಡ್ ಬೆಡಗಿ ಸೋನಮ್ ಕಪೂರ್ ತನ್ನ ಗೆಳೆಯ ಆನಂದ್ ಅಹುಜಾ ಜೊತೆ ಮಂಗಳವಾರ ವಿವಾಹವಾಗಿದ್ದಾರೆ.

    ಸೋನಮ್ ಮದುವೆಗೆ ಮುಂಚೆ ಮೆಹಂದಿ, ಅರಿಶಿಣ ಶಾಸ್ತ್ರ ಮತ್ತು ಸಂಗೀತ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಎಲ್ಲಾ ಕಾರ್ಯಕ್ರಮವು ಅದ್ಧೂರಿಯಾಗಿ ನಡೆದಿದ್ದು, ಮೆಹಂದಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ಅತಿಥಿಗಳಿಗೆ ಒಂದು ವಿಶೇಷವಾದ ಉಡುಗೊರೆ ನೀಡಲಾಗಿದೆ.

    ಹೌದು, ಸೋನಮ್ ಮೆಹಂದಿ ಕಾರ್ಯಕ್ರಮಕ್ಕೆ ಬಂದಿದ್ದ ಅತಿಥಿಗಳಿಗೆಲ್ಲ ಒಂದು ಜೋಡಿ ಶೂ ನೀಡಲಾಗಿದೆ. ಆ ಶೂ ಅನ್ನು ವಿಶೇಷವಾಗಿ ಕೈ ಮಗ್ಗದಲ್ಲಿ ವಿನ್ಯಾಸಗೊಳಿಸಲಾಗಿತ್ತು. ಬಿಳಿ ಬಣ್ಣದಿಂದ ಅಲಂಕರಿಸಿ ಅದಕ್ಕೆ ಮಿರರ್ ಮತ್ತು ಸೀಕ್ವಿನ್(ಮಿನುಗು ಬಟ್ಟು) ಇತ್ಯಾದಿ ಅಲಂಕಾರಿಕ ವಸ್ತುಗಳನ್ನು ಹಾಕಿ ಶೂ ಅನ್ನು ತಯಾರಿಸಲಾಗಿತ್ತು. ಈ ರೀತಿಯ ವಿಶೇಷವಾಗಿ ತಯಾರಿಸಿದ್ದ ಶೂ ಅನ್ನು ಮೆಹಂದಿ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಬಂದಿದ್ದವರಿಗೆ ಉಡುಗೊರೆಯಾಗಿ ನೀಡಲಾಗಿತ್ತು. ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಾಲಿವುಡ್ ಬೆಡಗಿ ಸೋನಮ್ ಕಪೂರ್

    ಸೋನಮ್ ಮೇ 8ರಂದು ಬಾಂದ್ರಾದಲ್ಲಿರುವ ತನ್ನ ಆಂಟಿಯ ಬಂಗಲೆಯಲ್ಲಿ ಸಿಖ್ ಸಂಪ್ರದಾಯದಂತೆ ಮದುವೆಯಾಗಿದ್ದು, ತಮ್ಮ ಬಹುದಿನಗಳ ಗೆಳೆಯ ದೆಹಲಿ ಮೂಲದ ಉದ್ಯಮಿ ಆನಂದ್ ಅಹುಜಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

    ಸೋನಮ್ ಕಪೂರ್ ಮದುವೆಗೆ ಬಾಲಿವುಡ್‍ನ ಗಣ್ಯಾತಿಗಣ್ಯರು ಹಾಜರಾಗಿದ್ದರು. ಅಮಿತಾಬ್ ಬಚ್ಚನ್, ಅವರ ಮಕ್ಕಳು ಅಭಿಷೇಕ್, ಅಮೀರ್ ಖಾನ್, ಜಾಕ್ವೇಲಿನ್ ಫರ್ನಾಂಡಿಸ್, ರಾಣಿ ಮುಖರ್ಜಿ, ಸ್ವರ ಭಾಸ್ಕರ್ ಆಗಮಿಸಿದ್ದರು.

    ಸೋನಮ್ ಅವರ ಸೋದರ ಸಂಬಂಧಿಗಳಾದ ಜಾನ್ವಿ ಕಪೂರ್ ಹಾಗೂ ಖುಷಿ ಕಪೂರ್ ತನ್ನ ತಂದೆ ಬೋನಿ ಕಪೂರ್ ಜೊತೆ ಮದುವೆಯಲ್ಲಿ ಪಾಲ್ಗೊಂಡಿದ್ದರು. ಕರೀನಾ ಕಪೂರ್ ತನ್ನ ಪತಿ ಸೈಫ್ ಅಲಿ ಖಾನ್, ಮಗ ತೈಮೂರ್ ಹಾಗೂ ಸಹೋದರಿ ಕರಿಷ್ಮ ಕಪೂರ್ ಜೊತೆ ಕುಟುಂಬ ಸಮೇತರಾಗಿ ಆಗಮಿಸಿದ್ದು, ಎಲ್ಲರು ನವ ಜೋಡಿಗೆ ಶುಭಾ ಹಾರೈಸಿದ್ದಾರೆ. ಇದನ್ನೂ ಓದಿ: ಬೆಡ್‍ರೂಮಿಗೆ ಹೋಗೋ ಮೊದಲು ಸೋನಂಗೆ ಷರತ್ತು ಹಾಕಿದ ಆನಂದ್!

    ಮಂಗಳವಾರ ಬೆಳಗ್ಗೆ ಮದುವೆಯಾದ ನಂತರ ಸಂಜೆ ಲೀಲಾ ಹೋಟೆಲ್ ನಲ್ಲಿ ಅದ್ಧೂರಿಯಾಗಿ ಆರತಕ್ಷತೆ ಕಾರ್ಯಕ್ರಮ ಮಾಡಿಕೊಂಡಿದ್ದಾರೆ. ಆರತಕ್ಷತೆಯಲ್ಲಿ ಕತ್ರಿನಾ ಕೈಫ್, ಐಶ್ವರ್ಯ ರೈ ಬಚ್ಚನ್, ಅಲಿಯಾ ಭಟ್ ಹಾಗೂ ಹಲವು ಸಿನಿಮಾ ಗಣ್ಯರು ಮಂದಿ ಪಾಲ್ಗೊಂಡಿದ್ದರು.

    ಸದ್ಯಕ್ಕೆ ಸೋನಮ್ `ವೀರೆ ದಿ ವೆಡ್ಡಿಂಗ್’ ಸಿನಿಮಾದಲ್ಲಿ ಕರೀನಾ ಕಪೂರ್ ಜೊತೆ ನಟಿಸುತ್ತಿದ್ದಾರೆ.

  • ದರ್ಶನ್‍ಗೆ ಅಪರೂಪದ ಉಡುಗೊರೆ ನೀಡಿ ಮದ್ವೆಗೆ ಆಹ್ವಾನ ಕೊಟ್ಟ ಅಭಿಮಾನಿ

    ದರ್ಶನ್‍ಗೆ ಅಪರೂಪದ ಉಡುಗೊರೆ ನೀಡಿ ಮದ್ವೆಗೆ ಆಹ್ವಾನ ಕೊಟ್ಟ ಅಭಿಮಾನಿ

    ಬೆಂಗಳೂರು: ಪ್ರತಿಯೊಬ್ಬ ಅಭಿಮಾನಿಯೂ ತಮ್ಮ ನೆಚ್ಚಿನ ಸ್ಟಾರ್ ಗಳಿಗಾಗಿ ವಿಶೇಷವಾಗಿ ಏನನ್ನಾದರೂ ಕೊಡುತ್ತಿರುತ್ತಾರೆ. ಈಗ ದರ್ಶನ್ ಅಭಿಮಾನಿಯೊಬ್ಬರು ಭಿನ್ನವಾದ ಉಡುಗೊರೆಯನ್ನು ನೀಡಿ ತಮ್ಮ ಮದುವೆಗೆ ಆಹ್ವಾನ ಮಾಡಿದ್ದಾರೆ.

    ಕಿರಣ್ ತಮ್ಮ ಮದುವೆಗೆ ನೆಚ್ಚಿನ ನಾಯಕ ನಟನನ್ನು ಆಹ್ವಾನ ಮಾಡಲು ನಿರ್ಧರಿಸಿದ್ದಾರೆ. ಆದರೆ ಕಿರಣ್ ಲಗ್ನ ಪತ್ರಿಕೆ ಕೊಟ್ಟು ಆಹ್ವಾನ ಮಾಡುವುದು ಸಾಮಾನ್ಯವಾಗುತ್ತದೆ. ನಾನು ಬೇರೆ ರೀತಿ ಅವರಿಗೆ ಏನಾನ್ನಾದರೂ ಉಡುಗೊರೆಯಾಗಿ ನೀಡಿ ಮದುವೆಗೆ ಆಹ್ವಾನಿಸಬೇಕು ಎಂದು ಯೋಚನೆ ಮಾಡಿದ್ದಾರೆ. ಅದೇ ರೀತಿ ಹತ್ತು ದಿನದಲ್ಲಿ ದುರ್ಯೋಧನನ ಲುಕ್ ನಲ್ಲಿರುವ ದರ್ಶನ್ ಅವರ  ಫೋಟೋವನ್ನು ಪೇಂಟ್ ಮಾಡಿಸಿ ತೆಗೆದುಕೊಂಡು ಹೋಗಿದ್ದಾರೆ.

    ಸಾಮಾನ್ಯವಾಗಿ ಸ್ಟಾರ್ ಗಳು ಅಭಿಮಾನಿಗಳಿಂದ ಯಾವುದೇ ಉಡುಗೊರೆಯನ್ನು ನಿರೀಕ್ಷೆ ಮಾಡುವುದಿಲ್ಲ. ತಮ್ಮ ಸಿನಿಮಾ ನೋಡಿ ಮೆಚ್ಚುಗೆ ಸೂಚಿಸಿದರೆ ಸಾಕು ಎಂದು ಕೊಂಡಿರುತ್ತಾರೆ. ಆದರೆ ತಮ್ಮ ಅಭಿಮಾನಿ ನೀಡಿದ ಅಪರೂಪದ ಉಡುಗೊರೆಯನ್ನು ನೋಡಿ ದರ್ಶನ್ ಸ್ಟಾರ್ ಮೆಚ್ಚುಗೆಯನ್ನು ವ್ಯಕ್ತ ಪಡಿಸಿದ್ದಾರೆ.

    ಪ್ರಸ್ತುತ ದರ್ಶನ್ ಕುರುಕ್ಷೇತ್ರ ಸಿನಿಮಾ ಶೂಟಿಂಗ್ ಮುಗಿಸಿದ್ದು, ಈಗ ಯಜಮಾನ ಸಿನಿಮಾದ ಶೂಟಿಂಗ್ ನಲ್ಲಿ ತೊಡಗಿದ್ದಾರೆ.

  • ಸ್ನೇಹಿತರಿಗೆ ಮಗಳನ್ನೇ ಉಡುಗೊರೆಯಾಗಿ ನೀಡಿದ ತಂದೆ!

    ಸ್ನೇಹಿತರಿಗೆ ಮಗಳನ್ನೇ ಉಡುಗೊರೆಯಾಗಿ ನೀಡಿದ ತಂದೆ!

    ಲಕ್ನೋ: 35 ವರ್ಷದ ಮಗಳನ್ನು ತಂದೆಯೇ ತನ್ನ ಸ್ನೇಹಿತರಿಗೆ ಉಡುಗೊರೆಯಾಗಿ ನೀಡಿ ಆಕೆಯ ಮೇಲೆ ಗ್ಯಾಂಗ್‍ರೇಪ್ ಮಾಡಿಸಿದ ಘಟನೆ ಸೋಮವಾರ ಉತ್ತರಪ್ರದೇಶದ ಲಕ್ನೋದಿಂದ 70ಕಿ.ಮೀ ದೂರದಲ್ಲಿರುವ ಸಿತಾಪುರ್ ನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    50 ವರ್ಷದ ವ್ಯಕ್ತಿ ಏಪ್ರಿಲ್ 15ರಂದು ತನ್ನ ಮಗಳನ್ನು ಜಾತ್ರೆಗೆಂದು ಕಮಲಾಪುರಕ್ಕೆ ಕರೆದುಕೊಂಡು ಹೋಗಿದ್ದಾನೆ. ಜಾತ್ರೆಗೆ ಹೋಗಿ ಹಿಂತಿರುಗುವಾಗ ಆತ ತನ್ನ ಸ್ನೇಹಿತ ಮನ್ ಸಿಂಗ್‍ಗೆ ಕರೆ ಮಾಡಿ ಭೇಟಿಯಾಗಲು ಹೇಳಿದ್ದಾನೆ. ನಂತರ ಮಗಳನ್ನು ತನ್ನ ಸ್ನೇಹಿತರ ಜೊತೆ ಬರುವಂತೆ ಮನವೊಲಿಸಿ, ತನ್ನ ಮತ್ತೊಬ್ಬ ಸ್ನೇಹಿತ ಮೀರಜ್ ಮನೆಗೆ ಕರೆದುಕೊಂಡು ಹೋಗಿದ್ದಾನೆ ಎಂದು ವರದಿಯಾಗಿದೆ.

    ನಂತರ ತಂದೆ ತನ್ನ ಮಗಳನ್ನು ಸ್ನೇಹಿತರಿಗೆ ಉಡುಗೊರೆಯಾಗಿ ನೀಡಿದ್ದ. ಬಳಿಕ ಒಬ್ಬೊಬ್ಬರಾಗಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾರೆ. ಮಹಿಳೆಯನ್ನು ಮೀರಜ್ ಮನೆಯಲ್ಲಿ 18 ಗಂಟೆಗಳ ಕಾಲ ಕೂಡಿಹಾಕಿ ಅತ್ಯಾಚಾರವೆಸಗಿದ್ದಾರೆ. ನಂತರ ಮಹಿಳೆ ಸೋಮವಾರ ರಾತ್ರಿ ಅಲ್ಲಿಂದ ತಪ್ಪಿಸಿಕೊಂಡು ಬಂದು, ತನ್ನ ತಾಯಿಯ ಹತ್ತಿರ ನಡೆದ ಘಟನೆ ಬಗ್ಗೆ ತಿಳಿಸಿದ್ದಾರೆ. ಅದೇ ದಿನ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ಕೂಡ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಮೀರಜ್‍ನನ್ನು ಮಂಗಳವಾರ ಬಂಧಿಸಿದ್ದೇವೆ. ಮಹಿಳೆಯ ತಂದೆ ಹಾಗೂ ಮನ್ ಸಿಂಗ್ ತಪ್ಪಿಸಿಕೊಂಡಿದ್ದು, ಆ ಇಬ್ಬರು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದೇವೆ. ಮೀರಜ್ ವೈದ್ಯ ಎಂದು ಹೇಳಿಕೊಳ್ಳುತ್ತಿದ್ದಾನೆ. ಆದರೆ ಅವನು ತನ್ನ ಪದವಿಯನ್ನು ಸಹ ಪೂರ್ಣಗೊಳಿಸಿಲ್ಲ. ಮಹಿಳೆ ಮೇಲೆ ಈ ಕೃತ್ಯವೆಸಗುವಾಗ ಮೀರಜ್ ಕುಟುಂಬದವರು ಊರಿನಲ್ಲಿ ಇರಲಿಲ್ಲ ಎಂದು ಎಸ್‍ಎಚ್‍ಒ ಸಂಜೀತ್ ಸೋನ್ಕರ್ ತಿಳಿಸಿದ್ದಾರೆ.

    ಮಹಿಳೆ 16ನೇ ವಯಸ್ಸಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಳು. ಆದರೆ ಮದುವೆಯಾದ 2 ವರ್ಷದಲ್ಲೇ ದಾಂಪತ್ಯದಲ್ಲಿ ಬಿರುಕು ಕಾಣಿಸಿದ ಹಿನ್ನೆಲೆಯಲ್ಲಿ ತವರು ಮನೆ ಸೇರಿದ್ದಳು. ನಂತರ ನವೆಂಬರ್ 2017ರಲ್ಲಿ ತಂದೆ ಜೊತೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಆರೋಪ ಕೇಳಿ ಬಂದಿತ್ತು. ನಂತರ ಆಕೆಗೆ ಹಳ್ಳಿಯಲ್ಲಿ ಬಹಿಷ್ಕಾರ ಹಾಕಿ ತಂದೆಯನ್ನು ಜೈಲಿಗೆ ಕಳುಹಿಸಲಾಗಿತ್ತು.

    ಈ ಘಟನೆಯ ಬಳಿಕ ಮಹಿಳೆ ತನ್ನ 14 ವರ್ಷದ ಮಗನ ಜೊತೆ ಬೇರೆ ಮನೆಯಲ್ಲಿ ವಾಸಿಸುತ್ತಿದ್ದಳು. ಫೆಬ್ರವರಿಯಲ್ಲಿ ತಂದೆ ಜಾಮೀನು ಪಡೆದು ಹೊರಬಂದಿದ್ದ ಎಂದು ಸಿತಾಪುರದ ಎಸ್‍ಪಿ ಸುರೇಶ್‍ರಾವ್ ಕುಲಕರ್ಣಿ ತಿಳಿಸಿದ್ದಾರೆ.