Tag: ಉಡುಗೊರೆ

  • ಹುಟ್ಟುಹಬ್ಬದ ಉಡುಗೊರೆಯನ್ನು ಅನಾಥಶ್ರಮ, ವೃದ್ಧಾಶ್ರಮಕ್ಕೆ ತಲುಪಿಸಿದ ದರ್ಶನ್

    ಹುಟ್ಟುಹಬ್ಬದ ಉಡುಗೊರೆಯನ್ನು ಅನಾಥಶ್ರಮ, ವೃದ್ಧಾಶ್ರಮಕ್ಕೆ ತಲುಪಿಸಿದ ದರ್ಶನ್

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಹುಟ್ಟುಹಬ್ಬಕ್ಕೆ ಉಡುಗೊರೆಯಾಗಿ ಬಂದ ದವಸಧಾನ್ಯಗಳನ್ನು ಅವರ ಆಪ್ತರು ಹಾಗೂ ಅಭಿಮಾನಿಗಳು ತುಮಕೂರಿನ ಸಿದ್ಧಗಂಗಾ ಮಠ ಹಾಗೂ ರಾಜ್ಯದ ಹಲವು ಅನಾಥಶ್ರಮ, ವೃದ್ಧಾಶ್ರಮಕ್ಕೆ ನೀಡಿದ್ದಾರೆ.

    ದರ್ಶನ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಂದ ಬಂದಂತಹ ದವಸಧಾನ್ಯಗಳನ್ನು ಮಂಗಳವಾರ ರಾಜ್ಯದ ಹಲವು ಅನಾಥಾಶ್ರಮ, ವೃದ್ಧಾಶ್ರಮ ಹಾಗೂ ಸಿದ್ಧಗಂಗಾ ಮಠಕ್ಕೆ ಹೋಗಿದೆ. ಕಳೆದ ಎರಡು ದಿನಗಳಿಂದ ಅಕ್ಕಿ, ಬೇಳೆ, ಸಕ್ಕರೆ, ಎಣ್ಣೆ ಸೇರಿದಂತೆ ಹಲವು ಪದಾರ್ಥಗಳನ್ನು ವಿಗಂಡಿಸಿದ ದರ್ಶನ್ ಬಳಗ ಲಾರಿಗಳಲ್ಲಿ ತುಂಬಿಕೊಂಡು ಅನಾಥಾಶ್ರಮ ಹಾಗೂ ವೃದ್ಧಾಶ್ರಮಕ್ಕೆ ಕಳುಹಿಸಿಕೊಟ್ಟಿದ್ದಾರೆ. ಇದನ್ನೂ ಓದಿ: ಕೇಕ್ ಕತ್ತರಿಸದೇ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡ ಚಂದನವನದ ಒಡೆಯ

    ದರ್ಶನ್ ಆಪ್ತರು ಹಾಗೂ ಅಭಿಮಾನಿಗಳು ಮಂಗಳವಾರ ತುಮಕೂರಿನ ಸಿದ್ಧಗಂಗಾ ಮಠದ ಕಿರಿಯ ಸ್ವಾಮೀಜಿ ಅವರನ್ನು ಭೇಟಿ ಮಾಡಿ ದವಸಧಾನ್ಯಗಳನ್ನು ತಲುಪಿಸಿದ್ದಾರೆ. ದವಸಧಾನ್ಯದ ಜೊತೆ ದರ್ಶನ್ ಅವರು ಅದರ ಕ್ವಾಲಿಟಿ ಪತ್ರವನ್ನು ಬರೆದು ಕಳುಹಿಸಿದ್ದಾರೆ. ಇದನ್ನೂ ಓದಿ: ಬರ್ತ್ ಡೇಗೂ ಮುನ್ನವೇ ದರ್ಶನ್ ಮನೆ ತಲುಪಿದ ಗಿಫ್ಟ್

    ನನ್ನ ಹುಟ್ಟುಹಬ್ಬದ ಪ್ರಯುಕ್ತ ಅಭಿಮಾನಿಗಳು ಉಡುಗೊರೆಯಾಗಿ ನೀಡಿರುವ ಅಕ್ಕಿ, ಸಕ್ಕರೆ, ಬೇಳೆ, ಅಡುಗೆ ಎಣ್ಣೆ ಹಾಗೂ ಇತರೆ ಆಹಾರ ಪದಾರ್ಥಗಳನ್ನು ನಿಮ್ಮ ಅನಾಥಶ್ರಮ/ ವೃದ್ಧಾಶ್ರಮಕ್ಕೆ ನೀಡುತ್ತಿದ್ದೇನೆ. ದಯವಿಟ್ಟು ತಾವುಗಳು ಇದರ ಗುಣಮಟ್ಟವನ್ನು ಪರೀಕ್ಷಿಸಿ ಬಳಿಕ ಅಡುಗೆಗೆ ಉಪಯೋಗಿಸಬೇಕೆಂದು ತಮ್ಮಲ್ಲಿ ಕಳಕಳಿಯ ಮನವಿ ಎಂದು ಪತ್ರದಲ್ಲಿ ಬರೆದಿದ್ದಾರೆ.

    ದರ್ಶನ್ ಹುಟ್ಟುಹಬ್ಬದ ಮೊದಲೇ ಅವರ ಅಭಿಮಾನಿಯೊಬ್ಬರು ಲೋಡ್‍ಗಟ್ಟಲೆ ಅಕ್ಕಿ ಮೂಟೆಗಳನ್ನು ಅವರ ಮನೆಗೆ ತಲುಪಿಸಿದ್ದರು. ಅಷ್ಟೇ ಅಲ್ಲದೇ ಆರ್.ಆರ್ ನಗರದ ದರ್ಶನ್ ನಿವಾಸದ ಮುಂದೆ ಬ್ಯಾರಿಕೇಡ್ ಹಾಕಿ ವೇದಿಕೆ ರೆಡಿಮಾಡಲಾಗಿತ್ತು. ತಮ್ಮ ಹುಟ್ಟುಹಬ್ಬಕ್ಕೆ ಗಿಫ್ಟ್ ರೂಪದಲ್ಲಿ ಸಿಗುವ ಎಲ್ಲಾ ಧಾನ್ಯಗಳನ್ನು ಪ್ರತಿ ಜಿಲ್ಲೆಯ ಒಂದು ಅನಾಥಾಶ್ರಮ, ವೃದ್ಧಾಶ್ರಮ ಹಾಗೂ ಸಿದ್ಧಗಂಗಾ ಮಠಕ್ಕೆ ನೀಡುವ ಜವಾಬ್ದಾರಿಯನ್ನು ದರ್ಶನ್ ಹೊತ್ತುಕೊಂಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಫೈನಲ್ ತಲುಪಿದ ಹನುಮಂತನಿಗೆ ಲತಾ ಹಂಸಲೇಖರಿಂದ ಗಿಫ್ಟ್

    ಫೈನಲ್ ತಲುಪಿದ ಹನುಮಂತನಿಗೆ ಲತಾ ಹಂಸಲೇಖರಿಂದ ಗಿಫ್ಟ್

    ಬೆಂಗಳೂರು: ಹಾವೇರಿ ಜಿಲ್ಲೆಯ ಕುರಿಗಾಯಿ ಹನುಮಂತ ಎಂತಲೇ ಖ್ಯಾತಿ ಪಡೆದಿರುವ ಹನುಮಂತ ಅವರು ಸರಿಗಮಪ ಸೀಸನ್ 15ರ ಫೈನಲ್ ಹಂತ ತಲುಪಿದ್ದಾರೆ. ಫೈನಲ್ ಹಂತ ತಲುಪಿದ ಹನುಮಂತ ಅವರಿಗೆ ವಿಶೇಷ ಉಡುಗೊರೆ ಸಿಕ್ಕಿದೆ.

    ಸರಿಗಮಪ ಕಾರ್ಯಕ್ರಮದಲ್ಲಿ ಫೈನಲ್ ಗೆ ಹೋದ ಹನುಮಂತ ಅವರಿಗೆ ಹಾರ್ಮೋನಿಯಂ ಉಡುಗೊರೆ ಸಿಕ್ಕಿದೆ. ಹನುಮಂತ ಅವರು ಸೆಮಿ ಫೈನಲ್ ನಲ್ಲಿ ‘ಜೋಗಿ’ ಸಿನಿಮಾದ ‘ಬೇಡುವೇನು ವರವನ್ನು..’ ಹಾಡನ್ನು ಹಾಡಿದ್ದರು.  ತಮ್ಮ ಗಾಯನ ಪ್ರತಿಭೆ ಮೂಲಕ ಹನುಮಂತ ಅವರು ಸೆಮಿ ಫೈನಲ್ ನಲ್ಲಿಯೇ ಪ್ಲಾಟಿನಮ್ ಟಿಕೆಟ್ ಪಡೆದು ಫೈನಲ್ ಗೆ ಹೋಗಿದ್ದರು.

    ಹನುಮಂತ ಅವರಿಗೆ ನಾದಬ್ರಹ್ಮ ಹಂಸಲೇಖ ಅವರ ಪತ್ನಿ ಲತಾ ಅವರ ಕಡೆಯಿಂದ ಉಡುಗೊರೆಯಾಗಿ ಹಾರ್ಮೋನಿಯಂ ಸಿಕ್ಕಿದೆ. ಕಳೆದ ವಾರದ ಸಂಚಿಕೆಗೆ ಬಂದಿದ್ದ ಲತಾ ಹಂಸಲೇಖ ಅವರು ತಮ್ಮ ಕೈಯಾರೇ ಹನುಮಂತ ಅವರಿಗೆ ಹಾರ್ಮೋನಿಯಂ ನೀಡಿ ಶುಭಾಶಯ ತಿಳಿಸಿದ್ದರು.

    ಲತಾ ಹಂಸಲೇಖ ಅವರು ಈ ಹಿಂದೆ ಅಂದರೆ ಸರಿಗಮಪ ಸೀಸನ್ 14ರ ಅತಿ ಕಿರಿಯ ಸ್ಪರ್ಧಿಯಾಗಿದ್ದ ನೇಹಾಗೆ ಚಿನ್ನದ ಉಂಗುರ ನೀಡಿದ್ದರು. ಈ ಹಿಂದೆ ಹನುಮಂತ ಅವರಿಗೆ ಕಾರ್ಯಕ್ರಮದ ತೀರ್ಪುಗಾರರಾದ ವಿಜಯ್ ಪ್ರಕಾಶ್ ಅವರು ಇಯರ್ ಫೋನ್ ಅನ್ನು ಉಡುಗೊರೆಯಾಗಿ ನೀಡಿದ್ದರು.

    ಸರಿಗಮಪ ಕಾರ್ಯಕ್ರಮದ ಅಂತಿಮದಲ್ಲಿ ಕೀರ್ತನ್, ವಿಜೇತ್, ಸಾಸ್ವಿನಿ, ನಿಹಾಲ್, ಋತ್ವಿಕ್ ಹಾಗೂ ಹನುಮಂತ ಒಟ್ಟು ಆರು ಸ್ಪರ್ಧಿಗಳು ಫೈನಲ್ ಹಂತ ತಲುಪಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸರಿಗಮಪ ವೇದಿಕೆಯಲ್ಲಿ ಹನುಮಂತ ತಂಗಿಗೆ ಸಿಕ್ತು ಅಚ್ಚರಿಯ ಉಡುಗೊರೆ

    ಸರಿಗಮಪ ವೇದಿಕೆಯಲ್ಲಿ ಹನುಮಂತ ತಂಗಿಗೆ ಸಿಕ್ತು ಅಚ್ಚರಿಯ ಉಡುಗೊರೆ

    ಬೆಂಗಳೂರು: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಸರಿಗಮಪ’ ಕಾರ್ಯಕ್ರಮದಲ್ಲಿ ಹನುಮಂತ ಅವರು ಎಲ್ಲರ ಮನೆ ಮಾತಾಗಿದ್ದಾರೆ. ಈ ವಾರದ ಸರಿಗಮಪ ಕಾರ್ಯಕ್ರಮದಲ್ಲಿ ಫ್ಯಾಮಿಲಿ ರೌಂಡ್ ನಡೆಯಿತು. ಅದರಲ್ಲಿ ಹನುಮಂತ ಅವರಿಗೆ ಸಾಥ್ ನೀಡಲು ಅವರ ಸಹೋದರಿ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಈ ವೇಳೆ ಕಾರ್ಯಕ್ರಮಕ್ಕೆ ಬಂದ ಅತಿಥಿಯಿಂದ ಹನುಮಂತ ಅವರ ತಂಗಿಗೆ ಅಚ್ಚರಿಯ ಉಡುಗೊರೆ ದೊರೆತಿದೆ.

    ಸರಿಗಮಪ ಫ್ಯಾಮಿಲಿ ರೌಂಡ್‍ನಲ್ಲಿ ಹನುಮಂತ ಅವರು ತಮ್ಮ ಸಹೋದರಿ ಕಮಲ ಜೊತೆ ಜನಪದ ಹಾಡನ್ನು ಹಾಡಿದ್ದಾರೆ. ಈ ಹಾಡಿನಲ್ಲಿ ಹಳ್ಳಿಯ ಸೊಗಡನ್ನು ಹಾಗೂ ಬಡವರ ಮನೆಯಲ್ಲಿ ಹೆಣ್ಣು ಮಕ್ಕಳಿಗೆ ಆಗುವ ಕಷ್ಟಗಳ ಬಗ್ಗೆ ಬಣ್ಣಿಸಲಾಗಿತ್ತು. ಹನುಮಂತ ಹಾಗೂ ಕಮಲ ಈ ಹಾಡನ್ನು ಹಾಡಿದ ಬಳಿಕ ಕಾರ್ಯಕ್ರಮದ ನಿರೂಪಕಿ ಅನುಶ್ರೀ ಅವರು ಇಬ್ಬರನ್ನು ಮಾತನಾಡಿಸಿದ್ದಾರೆ. ಈ ವೇಳೆ ಕಮಲ ಅವರಿಗೆ ನಿಮ್ಮ ಅಣ್ಣ ಊರಿಗೆ ಬಂದಾಗ ನಿಮಗೆ ಏನು ಕೊಡುತ್ತಾರೆ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಸರಿಗಮಪ ಕಾರ್ಯಕ್ರಮದಲ್ಲಿ ದಾಖಲೆ ಬರೆದ ಹನುಮಂತ!

    ನನ್ನ ಅಣ್ಣ ಊರಿಗೆ ಬಂದಾಗ ನನಗೆ 100 ರೂ. ನೀಡಿದ್ದನು ಎಂದು ಕಮಲ ನಿರೂಪಕಿ ಅನುಶ್ರೀ ಅವರಿಗೆ ಉತ್ತರಿಸಿದ್ದರು. ಆಗ ಅನುಶ್ರೀ, ನೀವು ಆ 100 ರೂ.ಯನ್ನು ಏನು ಮಾಡಿದ್ದೀರಿ ಎಂದು ಕೇಳಿದ್ದಾಗ ನಾನು ಪುಸ್ತಕಗಳನ್ನು ಖರೀದಿಸಿದೆ ಎಂದು ಕಮಲ ಹೇಳಿದ್ದಾರೆ. ಕಮಲ ಅವರ ಮಾತನ್ನು ಕೇಳಿ ಅನುಶ್ರೀ ಹಾಗೂ ಅಲ್ಲಿದ್ದ ತೀರ್ಪುಗಾರರು ಖುಷಿಪಟ್ಟರು. ಇದೇ ವೇಳೆ ಕಾರ್ಯಕ್ರಮಕ್ಕೆ ಆಗಮಿಸಿದ ಕಾನ್ಫಿಡೆಂಟ್ ಗ್ರೂಪ್ ಮಾಲೀಕರು ಹನುಮಂತ ಹಾಗೂ ಕಮಲ ಅವರ ಹಾಡು ಕೇಳಿ 50,000 ರೂ. ಉಡುಗೊರೆ ನೀಡುವುದಾಗಿ ಘೋಷಿಸಿದರು.  ಇದನ್ನೂ ಓದಿ: ಚಾಲೆಂಜಿಂಗ್ ಸ್ಟಾರ್ ಚಿತ್ರಕ್ಕೆ ಹನುಮಂತನ ಗಾನಾಭಿಷೇಕ..!

    ಕಮಲ ಅವರು ಬಿಕಾಂ ಓದುತ್ತಿದ್ದಾರೆ. ಅವರ ಹಾಡನ್ನು ಮೆಚ್ಚಿಕೊಂಡ ಕಾನ್ಫಿಡೆಂಟ್ ಗ್ರೂಪ್ ಮಾಲೀಕರು ಕಮಲ ಅವರ ವಿದ್ಯಾಭ್ಯಾಸಕ್ಕೆ 50,000 ರೂ. ನೀಡುವುದಾಗಿ ಹೇಳಿದರು. ಅಲ್ಲದೇ ಕಮಲ ಬಿಕಾಂ ಮುಗಿಸಿದ್ದಾಗ ಅವರು ತಮ್ಮ ಕಂಪನಿಯಲ್ಲೇ ಕೆಲಸ ಕೊಡಿಸುವುದಾಗಿ ಘೋಷಿಸಿಯೇ ಬಿಟ್ಟರು. ಈ ಮಾತನ್ನು ಅವರು ಹೇಳುತ್ತಿದ್ದಂತೆ ಕಾರ್ಯಕ್ರಮದಲ್ಲಿದ್ದ ಎಲ್ಲ ಸದಸ್ಯರು ಎದ್ದು ನಿಂತು ಅವರಿಗೆ ಚಪ್ಪಾಳೆ ತಟ್ಟಿ ಗೌರವ ಸಲ್ಲಿಸಿದರು.

    ಇದಾದ ಬಳಿಕ ತೀರ್ಪುಗಾರರಾದ ವಿಜಯ್ ಪ್ರಕಾಶ್ ಅವರು, “ಹನುಮಂತ ಈ ಕಾರ್ಯಕ್ರಮದ ಫಿನಾಲೆಗೆ ಪ್ರವೇಶಿದರೆ, ನಿಮ್ಮ ಇಡೀ ಕುಟುಂಬ ಫಿನಾಲೆ ಕಾರ್ಯಕ್ರಮಕ್ಕೆ ಬರಬೇಕು” ಎಂದು ಹೇಳಿದ್ದರು. ಆಗ ಕಮಲ ನಾವು ಬರುತ್ತೇವೆ ಎಂದು ಹೇಳಿದ್ದಾರೆ. ಹನುಮಂತ ಹಾಗೂ ಕಮಲ ಹಾಡಿನ ಜನಪದ ಹಾಡಿಗೆ ಜ್ಯೂರಿ ಸದಸ್ಯರು ಫಿದಾ ಆಗಿದ್ದರು. ಇವರಿಬ್ಬರ ಹಾಡಿಗೆ ಮಹಾಗುರುಗಳು ಹಂಸಲೇಖಾ ಅವರು ಗೋಲ್ಡನ್ ಬಝರ್ ಕೂಡ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಖಾಕಿಗಳಿಗೆ ಸರ್ಕಾರದಿಂದ ವೇತನ ಹೆಚ್ಚಳದ ಉಡುಗೊರೆ!

    ಖಾಕಿಗಳಿಗೆ ಸರ್ಕಾರದಿಂದ ವೇತನ ಹೆಚ್ಚಳದ ಉಡುಗೊರೆ!

    ತುಮಕೂರು: ಖಾಕಿಗಳಿಗೆ ಸರ್ಕಾರದಿಂದ ವೇತನ ಹೆಚ್ಚಳದ ಉಡುಗೊರೆ ಸಿಕ್ಕಿದೆ. ಮುಂದಿನ ಬಜೆಟ್ ನಲ್ಲಿ ವೇತನವನ್ನು ಹೆಚ್ಚಿಸಲಾಗುವುದು ಎಂದು ಗೃಹ ಸಚಿವ ಎಂಬಿ ಪಾಟೀಲ್ ಹೇಳಿದ್ದಾರೆ.

    ಗುರು ಸೇವೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಕ್ಕೆ ಮುಂದಿನ ಬಜೆಟ್ ನಲ್ಲಿ ಔರದ್ಕರ್ ವರದಿ ಜಾರಿ ಮಾಡಿ ಪೊಲೀಸರ ಬದುಕು ಹಸನು ಮಾಡುವ ಯೋಜನೆ ರೂಪಿಸುವುದಾಗಿ ಗೃಹ ಸಚಿವ ಎಂ.ಬಿ ಪಾಟೀಲ್ ಹೇಳಿದ್ದಾರೆ.

    ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರ ಕೊನೆಯ ದರ್ಶನಕ್ಕೆ ಲಕ್ಷಾಂತರ ಜನರು ಬಿಸಿಲ ಧಗೆ, ಕತ್ತಲೆಯ ಮೌನ, ಮುಂಜಾವು ಯಾವುದನ್ನು ಲೆಕ್ಕಿಸದೇ ಜನರು ಮಠದ ಆವರಣದಲ್ಲಿ ಸೇರಿದ್ದರು. ಲಕ್ಷಾಂತರ ಜನ ಸೇರಿದರೂ ಕಿಂಚಿತ್ತೂ ಮಠದ ಆವರಣದಲ್ಲಿ ಶಿಸ್ತಿಗೆ ಲೋಪ ಬಾರದಂತೆ, ಕಾನೂನಿಗೆ ಧಕ್ಕೆ ಬಾರದಂತೆ ನಡೆದಾಡುವ ದೇವರನ್ನು ಶ್ರದ್ಧೆ ಭಕ್ತಿ ಪ್ರೀತಿಯಿಂದ ಅಂತಿಮ ವಿಧಿವಿಧಾನ ನಡೆಸಲಾಯಿತು. ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಕಾಯಕ ಯೋಗಿಯ ವಿಧಿವಿಧಾನ ನಡೆಯಿತು. ಇದನ್ನೂ ಓದಿ:  ಪೊಲೀಸ್ ಇಲಾಖೆಗೆ ಅಭಿನಂದನೆ ಸಲ್ಲಿಸಿದ ಸಿಎಂ ಕುಮಾರಸ್ವಾಮಿ

    ತುಮಕೂರು ಪೊಲೀಸರ ಜೊತೆ ಚಿಕ್ಕಬಳ್ಳಾಪುರ ಹಾಗೂ ಸುತ್ತಮುತ್ತ ಜಿಲ್ಲೆಯ ಸುಮಾರು ಮೂವತ್ತು ಸಾವಿರದಷ್ಟು ಪೊಲೀಸರ ದಂಡು ಸ್ಥಳದಲ್ಲಿ ನಿಯೋಜನೆಗೊಂಡಿತ್ತು. ಪೊಲೀಸ್ ಮಹಾನಿರ್ದೇಶಕಿ ನೀಲಮಣಿರಾಜು, ಕಮಲ್ ಪಂಥ್, ಐಜಿ ದಯಾನಂದ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲೇ ಮೊಕ್ಕಂ ಹೂಡಿ ಪ್ರತಿ ಕ್ಷಣವೂ ಮಾರ್ಗದರ್ಶನ ಕೊಡುತ್ತಿದ್ದರು. ಪೇದೆಗಳು ಒಂದು ಕ್ಷಣವೂ ವಿರಮಿಸದೇ ಪಾಳಿಗಳನ್ನು ಲೆಕ್ಕಿಸದೇ ಕೆಲಸ ಮಾಡಿದ್ದಾರೆ.

    ಪೊಲೀಸರ ಕಾರ್ಯಕ್ಕೆ ಸಿಎಂ ಕುಮಾರಸ್ವಾಮಿ ಸಹ ಮೆಚ್ಚುಗೆ ಸೂಚಿಸಿದ್ದಾರೆ. ಶ್ರೀಗಳಿಗೆ ಸರ್ಕಾರದ ಗೌರವ ವಂದನೆ ಸಲ್ಲಿಸಿದ ಬಳಿಕ ಮಾತನಾಡಿದ ಸಿಎಂ ಕುಮಾರಸ್ವಾಮಿ, ಭಕ್ತರು ಶ್ರೀಗಳ ದರ್ಶನ ಹಾಗೂ ಅಂತಿಮ ಕ್ರಿಯಾ ವಿಧಾನವರೆಗೂ ಪೊಲೀಸ್ ಇಲಾಖೆಗೆ ಸಹಕಾರ ನೀಡಿ ಶಾಂತಿಯಿಂದ ನಡೆದುಕೊಂಡ ಕಾರಣ ಧನ್ಯವಾದ ತಿಳಿಸಿದರು. ಅಲ್ಲದೇ ಸೂಕ್ತ ಭದ್ರತಾ ವ್ಯವಸ್ಥೆಗಳನ್ನು ಕೈಗೊಂಡಿದ್ದ ಪೊಲೀಸ್ ಇಲಾಖೆಯ ಕಾರ್ಯವನ್ನು ಶ್ಲಾಘಿಸಿ ಔರಾದ್ಕಾರ್ ವರದಿ ಜಾರಿ ಮಾಡುವುದಕ್ಕೆ ಶ್ರಮಿಸುತ್ತೇನೆ ಎಂದು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಟೆಕ್ಕಿ ಜೋಡಿಗೆ ಉಡುಗೊರೆಯಾಗಿ ಸಿಕ್ತು ದೇಶಿ ತಳಿಯ ಹಸುವಿನ ಕರುಗಳು

    ಟೆಕ್ಕಿ ಜೋಡಿಗೆ ಉಡುಗೊರೆಯಾಗಿ ಸಿಕ್ತು ದೇಶಿ ತಳಿಯ ಹಸುವಿನ ಕರುಗಳು

    ಮಂಡ್ಯ: ನವ ದಂಪತಿಗೆ ಹಣ, ಚಿನ್ನಾಭರಣವನ್ನು ಉಡುಗೊರೆ ನೀಡುವುದು ಸಾಮಾನ್ಯ. ಆದರೆ ಜಿಲ್ಲೆಯಲ್ಲಿ ನೂತನ ಜೋಡಿಗೆ ದೇಶಿ  ತಳಿಯ ಹಸುವಿನ ಕರುಗಳನ್ನು ಉಡುಗೊರೆ ನೀಡಲಾಗಿದೆ.

    ವರ ಕಿರಣ್ ಕುಮಾರ್ ಹಾಗೂ ವಧು ನಾಗಶ್ರೀ ಇಂದು ಮಂಡ್ಯ ಜಿಲ್ಲೆಯ ಮದ್ದೂರಿನ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕಿರಣ್ ಕುಮಾರ್ ಮತ್ತು ನಾಗಶ್ರೀ ಇಬ್ಬರು ಸಾಫ್ಟ್ ವೇರ್ ಎಂಜಿನಿಯರ್ ಗಳಾಗಿದ್ದು, ಇವರಿಗೆ ಸಾವಯವ ಕೃಷಿ ಮಾಡುವ ಸ್ನೇಹಿತರು ಎರಡು ಗಿಡ್ಡ ತಳಿಯ ಎರಡು ಕರುಗಳನ್ನು ಉಡುಗೊರೆ ರೂಪದಲ್ಲಿ ನೀಡಿದ್ದಾರೆ.

    ಭಾನುವಾರ ಕಳೆದ ರಾತ್ರಿ ಆರಕ್ಷತೆಗೆ ನಿಂತಿದ್ದ ಜೋಡಿಯನ್ನು ಕಲ್ಯಾಣ ಮಂಟಪದಿಂದ ಹೊರಗೆ ಕರೆತಂದು ಕರುಗಳನ್ನು ಗಿಫ್ಟ್ ನೀಡಿದ್ದಾರೆ. ಈ ವಿಶಿಷ್ಟ ಉಡುಗೊರೆಯನ್ನು ನೂತನ ವಧು ವರರು ಖುಷಿಯಿಂದ ಸ್ವೀಕರಿಸಿ ಕೃತಜ್ಞತೆ ಸಲ್ಲಿಸಿದ್ದಾರೆ.

    ಇದೇ ವೇಳೆ ಮಾತನಾಡಿದ ವಧು ನಾಗಶ್ರೀ, ತಮಗೆ ದೊರೆತಿರುವ ಇಂತಹ ವಿಶೇಷ ಗಿಫ್ಟ್ ಇದುವರೆಗೂ ಯಾರು ಕೊಟ್ಟಿರಲು ಸಾಧ್ಯವೇ ಇಲ್ಲ. ಮೊದಲ ಬಾರಿಗೆ ಈ ರೀತಿ ಉಡುಗೊರೆ ಕೊಟ್ಟಿದ್ದಾರೆ. ಇದು ತುಂಬಾ ನೆನಪಿನಲ್ಲಿ ಇಟ್ಟುಕೊಳ್ಳುವ ಗಿಫ್ಟ್ ಆಗಿದ್ದು, ತುಂಬಾ ಖುಷಿಯಾಗಿದೆ ಎಂದು ಸಂತಸದಿಂದ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ದರ್ಶನ್ ಗೆ ವಿನೂತನ ಗಿಫ್ಟ್ ನೀಡಿದ ಟೆಕ್ಕಿ – ಯಾರಿದು ಸಚಿನ್ ಸಂಘೆ?

    ದರ್ಶನ್ ಗೆ ವಿನೂತನ ಗಿಫ್ಟ್ ನೀಡಿದ ಟೆಕ್ಕಿ – ಯಾರಿದು ಸಚಿನ್ ಸಂಘೆ?

    – ಚಾಕೃತಿಯ ಮೇಕಿಂಗ್ ವಿಡಿಯೋ ರಿಲೀಸ್

    ಚಿಕ್ಕಬಳ್ಳಾಪುರ: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ನೀಡಿರುವ ಅಪರೂಪದ ಗಿಫ್ಟೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಈ ಗಿಫ್ಟ್ ನ ಹರಿಕಾರ ಚಾಕೃತಿ ಕರಕುಶಲ ಕಲಾವಿದ ಸಚಿನ್ ಸಂಘೆ ಎಂಬುದಾಗಿ ತಿಳಿದುಬಂದಿದೆ.

    ಹೌದು. ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕು ಮುದುಗೆರೆ ಗ್ರಾಮದ ಕಲಾವಿದ ಸಚಿನ್ ಸಂಘೆ ಅವರು ಸುಮಾರು 15 ಗಂಟೆ ಕೆಲಸ ಮಾಡಿ ದರ್ಶನ್ ಗೆ ಈ ಚಾಕೃತಿಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಸದ್ಯ ಅವರು ಇದರ ಮೇಕಿಂಗ್ ವಿಡಿಯೋವನ್ನು ರಿಲೀಸ್ ಮಾಡಿದ್ದಾರೆ.

    ಸುಣ್ಣದ ಬಳಪ (ಚಾಕ್ ಪೀಸ್) ನಲ್ಲಿ ಅರಳಿರುವ ದರ್ಶನ್ ರ ಭಾವಚಿತ್ರ ನೋಡುಗರ ಗಮನ ಸೆಳೆಯುವಂತಿದೆ. ಈಗ ಮೇಕಿಂಗ್ ವಿಡಿಯೋ ಸಹ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಅಸಲಿಗೆ ದರ್ಶನ್ ರ ಈ ಚಾಕೃತಿ ಆರಳಿಸೋಕೆ ಸಚಿನ್ ಸಂಘೆ 15 ಗಂಟೆಗಳ ಕಾಲ ತಮ್ಮ ಪರಿಶ್ರಮ ಹಾಕಿ ತುಂಬಾ ಸೊಗಸಾಗಿ ಮೂಡಿ ಬರುವಂತೆ ಮಾಡಿದ್ದಾರೆ. ಇನ್ನೂ 15 ಗಂಟೆಗಳ ತಮ್ಮ ಕಾರ್ಯವನ್ನ ಸ್ಲೋ ಮೋಷನ್ ವಿಡಿಯೋ ಮೂಲಕ 30 ಸೆಕೆಂಡ್ ಗೆ ಇಳಿಸಿ ಅದನ್ನ ತಮ್ಮ ಫೇಸ್ ಬುಕ್ ಸೇರಿದಂತೆ ಸೋಷಿಯಲ್ ಮಿಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

    ಯಾರು ಈ ಸಚಿನ್ ಸಂಘೆ…?:
    ಗೌರಿಬಿದನೂರು ತಾಲೂಕಿನ ಮುದುಗೆರೆ ಗ್ರಾಮದ ರೈತ ಕುಟುಂಬವರು. ಸದ್ಯ ಸಾಫ್ಟ್ ವೇರ್ ಎಂಜಿನಿಯರ್ ಆಗಿರುವ ಸಚಿನ್ ಸಂಘೆ, ಸಿಸ್ಕೋ ಕಂಪನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಂದ ಹಾಗೆ ತಮ್ಮ ಬಿಡುವಿನ ವೇಳೆಯಲ್ಲಿ ಆಯಾ ಸಮಯದ ಟ್ರೆಂಡ್ ಗೆ ತಕ್ಕಂತೆ ಚಾಕೃತಿ ಗಳನ್ನ ಬಿಡಿಸೋದು ಇವರ ಹವ್ಯಾಸ.

    ತಮ್ಮ ಶಾಲಾ ದಿನಗಳಿಂದಲೇ ಇಂತಹ ನೂರಾರು ಚಾಕೃತಿಗಳನ್ನ ಬಿಡಿಸಿರುವ ಸಚಿನ್ ಸಂಘೆ, ಅವುಗಳಿಂದಲೇ ಸಾಕಷ್ಟು ಹೆಸರುವಾಸಿಯಾಗಿದ್ದಾರೆ. ಬಾಲಿವುಡ್ ನಟ ಅಮಿತಾಬ್‍ಬಚ್ಚನ್ ರ ಚಾಕೃತಿಯನ್ನೂ ಕೂಡ ಮಾಡಿದ್ದರು. ತನ್ನದೇ ಚಾಕೃತಿಯನ್ನ ಕಂಡ ಅಮಿತಾಬ್‍ಬಚ್ಚನ್ ಸಚಿನ್ ಸಂಘೆ ಕೌಶಲ್ಯಕ್ಕೆ ಟ್ವಿಟ್ಟರ್ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಪ್ರಧಾನಿ ಮಂತ್ರಿ ನರೇಂದ್ರ ಮೋದಿಯ ಚಾಕೃತಿ ಬಿಡಿಸಿದ್ದ ಸಚಿನ್ ಸಂಘೆ ಅದನ್ನ ನೇರವಾಗಿ ಮೋದಿಯವರಿಗೆ ತಲುಪಿಸಿ ಅವರಿಂದಲೂ ಮೆಚ್ಚುಗೆ ಪಡೆದಿದ್ದರು.

    ಮೋದಿಯವರು ಸಹ ಅದನ್ನ ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಪ್ರಕಟ ಮಾಡಿ ಸಚಿನ್ ಸಂಘೆಯವರ ಕಾರ್ಯಕ್ಕೆ ಶಹಬ್ಬಾಸ್ ಅಂದಿದ್ದರು. ಸಚಿನ್ ಹೆಸರಿಟ್ಟಿಕೊಂಡಿರುವ ಈ ಸಚಿನ್ ಸಂಘೆ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಚಾಕೃತಿ ಸಹ ಬಿಡಿಸಿ ಅವರನ್ನ ಭೇಟಿಯಾಗಿ ಉಡುಗೊರೆ ನೀಡಿದ್ದರು. ಇಷ್ಟು ಮಾತ್ರವಲ್ಲದೇ ಇತ್ತೀಚೆಗೆ ಲೋಕಾರ್ಪಣೆಗೊಂಡ ಸರ್ದಾರ್ ವಲ್ಲಭಾಯ್ ಪಟೇಲರ ಬೃಹತ್ ಪ್ರತಿಮೆಯ ಚಾಕೃತಿಯನ್ನ ಸಹ ಸಚಿನ್ ಸಂಘೆ ಬಿಡಿಸಿದ್ದಾರೆ. 

    ಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ದರ್ಶನ್‍ಗೆ ಸಿಕ್ತು ಇದುವರೆಗೂ ಸಿಗದಂತಹ ವಿಭಿನ್ನ ಗಿಫ್ಟ್!

    ದರ್ಶನ್‍ಗೆ ಸಿಕ್ತು ಇದುವರೆಗೂ ಸಿಗದಂತಹ ವಿಭಿನ್ನ ಗಿಫ್ಟ್!

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಅಭಿಮಾನಿಗಳು ಯಾವಾಗಲೂ ಇಷ್ಟವಾದ ಉಡುಗೊರೆಯನ್ನು ಕೊಡುತ್ತಾರೆ. ಈಗ ಅಭಿಮಾನಿಯೊಬ್ಬರು ಅಪರೂಪದ ಉಡುಗೊರೆಯನ್ನ ಕೊಟ್ಟಿದ್ದಾರೆ.

    ನೆಚ್ಚಿನ ನಟ ದರ್ಶನ್‍ಗೆ ಕೊಟ್ಟಿರುವ ಉಡುಗೊರೆಯ ಫೋಟೋವನ್ನು ಅವರ ಅಭಿಮಾನಿಗಳು ತನ್ನ ಟ್ವಿಟ್ಟರ್ ನಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾರೆ. ‘ಕನ್ನಡ ಕಲಾ ಕುಲ ತಿಲಕ’ ಅಭಿಮಾನಿಗಳ ಕಡೆಯಿಂದ ದರ್ಶನ್ ಅವರಿಗೆ ಅಭಿಮಾನಿ ಕಡೆಯಿಂದ ವಿಭಿನ್ನವಾದ ಉಡುಗೊರೆ ಸಿಕ್ಕಿದೆ ಎಂದು ಬರದು ಕೊಂಡಿದ್ದಾರೆ.

    ಗಿಫ್ಟ್ ಏನು?
    ಒಂದು ಸಣ್ಣ ಸ್ತಂಭದಲ್ಲಿ ಅರ್ಧದಷ್ಟು ದರ್ಶನ್ ಆಕಾರವನ್ನು ಕೆತ್ತಿದ್ದಾರೆ. ಬಳಿಕ ಅದರ ಸುತ್ತಲು ಗಾಜಿನಿಂದ ಮುಚ್ಚಲಾಗಿದೆ. ಇದು ಕೈಬೆರಳಿನ ಗಾತ್ರದಲ್ಲಿದೆ. ಈ ಉಡುಗೊರೆಯನ್ನು ಅಂಗೈನಲ್ಲಿ ಹಿಡಿದುಕೊಳ್ಳುವಷ್ಟು ಚಿಕ್ಕದಾಗಿದೆ. ಈ ವಿಭಿನ್ನವಾದ ಉಡುಗೊರೆಯನ್ನು ಅಭಿಮಾನಿಯೇ ಅವರ ಕೈಯಾರೆ ನಟ ದರ್ಶನ್ ಅವರಿಗೆ ಕೊಟ್ಟಿದ್ದಾರೆ.

    ಅಭಿಮಾನಿ ಕಮ್ ನಟ ಆದರ್ಶ್ , ದರ್ಶನ್‍ಗೆ ಈ ಉಡುಗೊರೆಯನ್ನು ಕೊಟ್ಟಿದ್ದಾರೆ. ಆದರ್ಶ್ ‘ಗಾಂಚಲಿ’ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಆದರೆ ಆದರ್ಶ್ ನೀಡಿರುವ ಕಲಾಕೃತಿಯನ್ನ ಯಾರು ತಯಾರಿಸಿದ್ದು ಯಾರು ಎನ್ನುವ ಮಾಹಿತಿ ಇಲ್ಲ.

    https://twitter.com/DarshanFanz/status/1065143314595274752

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಇಟಲಿ ಸರ್ಕಾರದಿಂದ ಮೂರನೇ ಮಗುವನ್ನು ಹೊಂದಿದ್ದವರಿಗೆ ಭರ್ಜರಿ ಗಿಫ್ಟ್!

    ಇಟಲಿ ಸರ್ಕಾರದಿಂದ ಮೂರನೇ ಮಗುವನ್ನು ಹೊಂದಿದ್ದವರಿಗೆ ಭರ್ಜರಿ ಗಿಫ್ಟ್!

    ರೋಮ್: ಭಾರತದಲ್ಲಿ ಜನಸಂಖ್ಯಾ ನಿಯಂತ್ರಣಕ್ಕೆ ಸರ್ಕಾರವೇ ಪ್ರಚಾರ ನಡೆಸುತ್ತಿದ್ದರೆ ಇಟಲಿ ಸರ್ಕಾರ ಮೂರನೇ ಮಗುವನ್ನು ಹೊಂದಿರುವ ದಂಪತಿಗೆ ಉಡುಗೊರೆಯನ್ನು ನೀಡಲು ಮುಂದಾಗಿದೆ.

    2019 ರಿಂದ 2021 ರ ನಡುವೆ ಮೂರನೇ ಮಗುವನ್ನು ಹೊಂದಿರುವ ದಂಪತಿ 20 ವರ್ಷಗಳ ಕಾಲ ಕೃಷಿ ಮಾಡುವುದಕ್ಕಾಗಿ ಉಚಿತ ಭೂಮಿಯನ್ನು ನೀಡಲಾಗುತ್ತದೆ. ಜೊತೆಗೆ 2 ಲಕ್ಷದ ವರೆಗೆ ಬಡ್ಡಿ ಇಲ್ಲದೇ ಸಾಲವನ್ನು ಕೂಡ ನೀಡಲಾಗುತ್ತದೆ ಎಂದು ಸರ್ಕಾರ ಹೇಳಿದೆ.

    ಈ ಯೋಜನೆಯು ವಿವಾಹಿತ ದಂಪತಿಗೆ ಮಾತ್ರ ಅನ್ವಯವಾಗಿದ್ದು, ಅವಿವಾಹಿತ ಪುರುಷ ಮಹಿಳೆಯರಿಗೆ ಅನ್ವಯಿಸುವುದಿಲ್ಲ. ಸಲಿಂಗ ಮದುವೆಗಳು ಇಟಲಿಯಲ್ಲಿ ಇನ್ನೂ ಕಂಡುಬಂದಿಲ್ಲ. ಹೀಗಾಗಿ ಇದು ವಿವಾಹಿತ ಪುರುಷ ಮಹಿಳೆಯರಿಗೆ ಮಾತ್ರ ಈ ಯೋಜನೆ ಪರಿಗಣಿಸಲಾಗುವುದು. ಈ ಯೋಜನೆ ಪಡೆಯಲು ಬಯಸುವ ವಿದೇಶಿ ದಂಪತಿ ಕನಿಷ್ಠ 10 ವರ್ಷಗಳ ಕಾಲ ದೇಶದಲ್ಲಿ ವಾಸಿಸಬೇಕೆಂಬ ನಿಯಮವನ್ನು ವಿಧಿಸಲಾಗಿದೆ.

    ಕಳೆದ ವರ್ಷ ಇಟಲಿಯಲ್ಲಿ 4.64 ಲಕ್ಷ ಮಕ್ಕಳ ಜನನವಾಗಿತ್ತು. ಇಡಿ ಯುರೋಪ್ ನಲ್ಲಿ ಅತಿ ಕಡಿಮೆ ಸಂಖ್ಯೆಯಲ್ಲಿ ಮಕ್ಕಳ ಜನನವಾದ ಹಿನ್ನೆಲೆಯಲ್ಲಿ ಮುಂದೆ ಆಗಬಹುದಾದ ಸಮಸ್ಯೆಯನ್ನು ತಡೆಗಟ್ಟಲು ಇಟಲಿ ಸರ್ಕಾರ ದಂಪತಿಗೆ ಈ ಆಫರ್ ನೀಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮಕ್ಕಳು ಕೊಟ್ಟ ಉಡುಗೊರೆಯನ್ನ ನೋಡಿ ಆಶ್ಚರ್ಯ ಪಟ್ಟ ಅರ್ಜುನ್ ಸರ್ಜಾ

    ಮಕ್ಕಳು ಕೊಟ್ಟ ಉಡುಗೊರೆಯನ್ನ ನೋಡಿ ಆಶ್ಚರ್ಯ ಪಟ್ಟ ಅರ್ಜುನ್ ಸರ್ಜಾ

    ಬೆಂಗಳೂರು: ಸಿನಿಮಾ ಸ್ಟಾರ್ ಗಳು ಸಾಮಾನ್ಯವಾಗಿ ತಮ್ಮ ಅಪ್ಪ ಅಮ್ಮನಿಗೆ ಹುಟ್ಟುಹಬ್ಬಕ್ಕಾಗಿ ಉಡುಗೊರೆ ಕೊಡುತ್ತಾರೆ. ಅದರಲ್ಲೂ ಉಡುಗೊರೆಯಾಗಿ ಬೈಕ್, ಕಾರ್, ಚಿನ್ನ ಈ ರೀತಿ ದುಬಾರಿಯ ಉಡುಗೊರೆಯನ್ನು ಕೊಡುತ್ತಾರೆ. ಆದರೆ ನಟ ಅರ್ಜುನ್ ಸರ್ಜಾ ಅವರಿಗೆ ಅವರ ಮಕ್ಕಳು ನೀಡಿದ ಗಿಫ್ಟ್ ನೋಡಿ ಆಶ್ಚರ್ಯ ಪಟ್ಟಿದ್ದಾರೆ.

    ಇತ್ತೀಚೆಗಷ್ಟೆ ನಟ ಅರ್ಜುನ್ ಸರ್ಜಾ ಅವರು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಐಶ್ವರ್ಯ ಅರ್ಜುನ್ ಮತ್ತು ಅಂಜನಾ ಸರ್ಜಾ ಇಬ್ಬರು ಸೇರಿ ಅಪ್ಪನ ಹುಟ್ಟುಹಬ್ಬಕ್ಕೆ ವಿಶೇಷವಾಗಿ ಏನಾದರು ಉಡುಗೊರೆ ಕೊಡಬೇಕು ಎಂದು ಯೋಚಿಸಿ ಒಂದು ಅಪರೂಪದ ಗಿಫ್ಟ್ ನೀಡಿದ್ದಾರೆ.

    ನಟ ಅರ್ಜುನ್ ಸರ್ಜಾ ಅವರ ಮಕ್ಕಳು ಪ್ರೀತಿಯಿಂದ ತಮ್ಮ ತಂದೆಗೆ ಒಂದು ಹಸುವನ್ನು ಗಿಫ್ಟ್ ಆಗಿ ನೀಡಿದ್ದಾರೆ. ಅಪ್ಪನಿಗಾಗಿ ನೀಡಿರುವ ಹಸುವನ್ನು ಗುಜರಾತಿನಿಂದ ತೆಗೆದುಕೊಂಡು ಬರಲಾಗಿದೆ ಎಂದು ತಿಳಿದು ಬಂದಿದೆ. ಮಕ್ಕಳು ನೀಡಿರುವ ಉಡುಗೊರೆಯನ್ನು ನೋಡಿ ಒಂದು ಕ್ಷಣ ಅರ್ಜುನ್ ಸರ್ಜಾ ಅವರು ಆಶ್ಚರ್ಯ ಪಟ್ಟು, ಬಳಿಕ ಸಂತಸ ಪಟ್ಟಿದ್ದಾರೆ.

    ಅರ್ಜುನ್ ಸರ್ಜಾ ಅವರು ಮಕ್ಕಳು ಕೊಟ್ಟಿರುವ ಹಸುವಿನ ಜೊತೆ ಮತ್ತು ಕುಟುಂಬದವರ ಜೊತೆ ಸಂತಸದಿಂದ ಫೋಟೋ ಕ್ಲಿಕ್ಕಿಸಿಕೊಂಡು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಜೊತೆಗೆ “ನಮ್ಮ ಮಕ್ಕಳು ನನಗಾಗಿ ನೀಡಿರುವ ಉಡುಗೊರೆ ಇದು. ಈ ರೀತಿ ಉಡುಗೊರೆ ನೀಡುತ್ತಾರೆ ಎಂದು ನಾನು ನಿಜವಾಗಿಯೂ ಊಹಿಸಿರಲಿಲ್ಲ. ನಿಜಕ್ಕೂ ಇದು ಅತ್ಯುತ್ತಮ ಉಡುಗೊರೆಯಾಗಿದೆ” ಎಂದು ಬರೆದುಕೊಂಡಿದ್ದಾರೆ.

    ಅರ್ಜುನ್ ಸರ್ಜಾ ಅವರು ಬಾಲ್ಯದಿಂದಲೂ ಸಿನಿಮಾದಲ್ಲಿ ಅಭಿನಯಿಸಿದ್ದು, ಸ್ಯಾಂಡಲ್‍ವುಡ್ ಮಾತ್ರವಲ್ಲದೇ ಬಹುಭಾಷಾ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರ ಮಗಳು ಐಶ್ವರ್ಯ ‘ಪ್ರೇಮ ಬರಹ’ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ.

  • ಸ್ನೇಹಿತರಿಂದ ನವದಂಪತಿಗೆ 5 ಲೀ. ಪೆಟ್ರೋಲ್ ಗಿಫ್ಟ್

    ಸ್ನೇಹಿತರಿಂದ ನವದಂಪತಿಗೆ 5 ಲೀ. ಪೆಟ್ರೋಲ್ ಗಿಫ್ಟ್

    ಚೆನ್ನೈ: ಮದುವೆಯಾದ ದಂಪತಿಗೆ ಸ್ನೇಹಿತರು ಉಡುಗೊರೆಯಾಗಿ ವಿವಿಧ ರೀತಿಯ ಗಿಫ್ಟ್ ಗಳನ್ನು ಕೊಡುತ್ತಾರೆ. ಆದರೆ ತಮಿಳುನಾಡಿನ ಕಡಲೂರು ಜಿಲ್ಲೆಯ ಕುಮರಚಿಯಲ್ಲಿ ನವದಂಪತಿಗೆ ಪೆಟ್ರೋಲ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ.

    ಎಲ್ಲೆಂಜಿಯನ್ ಮತ್ತು ಕಣಿಮೊಝಿ ಇವರು ಭಾನುವಾರ ಜಿಲ್ಲೆಯ ಕುಮರಚಿಯಲ್ಲಿ ಮದುವೆಯಾಗಿದ್ದಾರೆ. ಇವರ ಮದುವೆಗೆ ಆಗಮಿಸಿದ್ದ ವರನ ಗೆಳೆಯರು 5 ಲೀಟರ್ ಪೆಟ್ರೋಲ್ ಅನ್ನು ದಂಪತಿಗೆ ಉಡುಗೊರೆಯಾಗಿ ನೀಡಿ ಶುಭಾಶಯವನ್ನು ಕೋರಿದ್ದಾರೆ. ದೇಶದಾದ್ಯಂತ ಪೆಟ್ರೋಲ್ ಡೀಸೆಲ್ ಬೆಲೆ ಅಧಿಕವಾಗಿದ್ದರಿಂದ ಸ್ನೇಹಿತರು ನವದಂಪತಿಗೆ ಉಡುಗೊರೆಯಾಗಿ ಪೆಟ್ರೋಲ್ ನೀಡಿದ್ದಾರೆ ಎನ್ನಲಾಗಿದೆ.

    ವೇದಿಕೆಯ ಮೇಲೆ ನಿಂತಿದ್ದ ವಧು-ವರಿಗೆ ಅತಿಥಿಗಳು ಶುಭಾಶಯವನ್ನು ತಿಳಿಸುತ್ತಿದ್ದರು. ಈ ವೇಳೆ ಅವರ ಸ್ನೇಹಿತರು ಒಟ್ಟಾಗಿ ಬಂದು 5 ಲೀಟರ್ ನ ಪೆಟ್ರೋಲ್ ಕ್ಯಾನೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ. ಸ್ನೇಹಿತರು ಗಿಫ್ಟ್ ಕೊಟ್ಟಾಗ ನಗುತ್ತಲೇ ವಧು-ವರ ಸ್ವೀಕರಿಸಿದ್ದಾರೆ. ಈ ವೇಳೆ ವೇದಿಕೆ ಮೇಲಿದ್ದರೆಲ್ಲರು ನಕ್ಕಿದ್ದಾರೆ. ಅಲ್ಲದೇ ಕೆಲವರು ಗಿಫ್ಟ್ ಕೊಡುತ್ತಿರುವುದನ್ನು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ. ಈ ವಿಡಿಯೋ ಕ್ಲಿಪ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಆಗಿದ್ದು, ಸದ್ಯ ಎಲ್ಲೆಲ್ಲೂ ಹರಿದಾಡುತ್ತಿದೆ.

    ವಿದ್ಯಾರ್ಥಿ ಪ್ರಭು ಮೊದಲಿಗೆ ಉಡುಗೊರೆಯಾಗಿ ಪೆಟ್ರೋಲ್ ನೀಡಿದ್ದಾರೆ. ಈ ವೇಳೆ ಮಾತನಾಡಿದ ಅವರು, ದೇಶದಾದ್ಯಂತ ಇಂಧನ ಬೆಲೆ ಏರಿಕೆ ಕುರಿತು ಜಾಗೃತಿ ಮೂಡಿಸಲು ಇದೊಂದು ಪ್ರಯತ್ನವಾಗಿದೆ. ಇಂಧನ ಬೆಲೆಗಳು ದೇಶಾದ್ಯಂತ ತೀವ್ರವಾಗಿ ಏರುತ್ತಿವೆ. ಹಾಗಾಗಿ ವರನ ಸ್ನೇಹಿತರಲ್ಲಿ ಕೆಲವರು ಪೆಟ್ರೋಲ್ ನನ್ನು ದಂಪತಿಗೆ ಉಡುಗೊರೆಯಾಗಿ ನೀಡಲು ನಿರ್ಧರಿಸಿದರು. ಜೊತೆಗೆ ಈ ಮೂಲಕ ಬೆಲೆಬಾಳುವ ಉತ್ಪನ್ನದ ಕುರಿತು ಜನರನ್ನು ಎಚ್ಚರಿಸುವ ಉದ್ದೇಶದಿಂದ ಈ ರೀತಿ ಮಾಡಲಾಗಿದೆ ಎಂದು ಹೇಳಿದ್ದಾರೆ.

    ತಮಿಳುನಾಡಿನಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ 85.15 ರೂ. ತಲುಪಿದೆ. ಇದು ರಾಜ್ಯದಲ್ಲಿಯೇ ಅಧಿಕವಾಗಿದೆ. ಪೆಟ್ರೋಲ್ ವೆಚ್ಚದಲ್ಲಿ ತೀವ್ರ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ, ಬಿಜೆಪಿ ಅಧ್ಯಕ್ಷ ಅಮಿತ್ ಷಾ ಅವರು ಸರ್ಕಾರ ಈ ವಿಚಾರದಲ್ಲಿ ಗಮನಹರಿಸಬೇಕು ಮತ್ತು ಶೀಘ್ರದಲ್ಲೇ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv