Tag: ಉಡುಗೊರೆ

  • ನೀರಜ್ ಚೋಪ್ರಾಗೆ XUV 700 ಕಾರ್ ಗಿಫ್ಟ್ ನೀಡಿದ ಮಹೀಂದ್ರಾ

    ನೀರಜ್ ಚೋಪ್ರಾಗೆ XUV 700 ಕಾರ್ ಗಿಫ್ಟ್ ನೀಡಿದ ಮಹೀಂದ್ರಾ

    ನವದೆಹಲಿ: ಟೋಕಿಯೊ ಒಲಿಂಪಿಕ್ಸ್‍ನಲ್ಲಿ ಜಾವೆಲಿನ್ ಥ್ರೋನಲ್ಲಿ ಭಾರತಕ್ಕೆ ಚಿನ್ನದ ಪದಕ ತಂದುಕೊಟ್ಟ ನೀರಜ್ ಚೋಪ್ರಾಗೆ  XUV 700 ಎಸ್‍ಯುವಿ ಕಾರ್ ಅನ್ನು ಮಹೀಂದ್ರಾ ಕಂಪೆನಿ ಉಡುಗೊರೆಯಾಗಿ ನೀಡಿದೆ.

    NEERAJ

    ಒಲಿಂಪಿಕ್ಸ್‍ನಲ್ಲಿ ಭಾರತಕ್ಕೆ ನೀರಜ್ ಮೊದಲ ಚಿನ್ನದ ಪದಕ ತಂದ ಹಿನ್ನೆಲೆಯಲ್ಲಿ ಕಾರು ಗಿಫ್ಟ್ ನೀಡುವುದಾಗಿ ಆನಂದ್ ಮಹೀಂದ್ರಾ ಅವರು ಘೋಷಿಸಿದ್ದರು. ಅಲ್ಲದೇ ಚಿನ್ನದ ಪದಕ ವಿಜೇತನ ಸಾಧನೆ ಗುರುತಿಸುವ ಉದ್ದೇಶದಿಂದ ಕಾರನ್ನು ವಿಶಿಷ್ಟವಾಗಿ ವಿನ್ಯಾಸಗೊಸಲಾಗಿತ್ತು. ಇದನ್ನೂ ಓದಿ: ಭೀಕರ ಅಪಘಾತ-11 ಮಂದಿ ಸಾವು, ನಾಲ್ವರಿಗೆ ಗಾಯ

    ಕಾರು ಉಡುಗೊರೆಯನ್ನು ಸ್ವೀರಿಸಿದ ನೀರಜ್ ಚೋಪ್ರಾ ಅವರು ಮಹೀಂದ್ರಾ ಕಂಪೆನಿಗೆ ಧನ್ಯವಾದ ತಿಳಿಸಿದ್ದಾರೆ. “ಕೆಲವು ವಿಶಿಷ್ಟ ವಿನ್ಯಾಸಗಳೊಂದಿಗೆ ಕಾರನ್ನು ರೂಪಿಸಿ ಉಡುಗೊರೆಯಾಗಿ ನೀಡಿರುವ ಆನಂದ್ ಮಹೀಂದ್ರಾ ಅವರಿಗೆ ಧನ್ಯವಾದಗಳು! ಶೀಘ್ರವೇ ಕಾರಿನಲ್ಲಿ ತಿರುಗಾಡಲು ಎದುರು ನೋಡುತ್ತಿದ್ದೇನೆ” ಎಂದು ಖುಷಿ ವ್ಯಕ್ತಪಡಿಸಿ ನೀರಜ್ ಟ್ವೀಟ್ ಮಾಡಿದ್ದಾರೆ.

    NEERAJ

    ನೀರಜ್ ಚೋಪ್ರಾ ಅವರಿಗೆ ನೀಡಿರುವ ಎಸ್‍ಯುವಿ700 ಕಾರು ಕಪ್ಪು ಬಣ್ಣದ್ದಾಗಿದೆ. ಹೊಸ ಮಹೀಂದ್ರಾ ಲೋಗೊ ಅನ್ನು ಒಳಗೊಂಡಿದೆ. ಸ್ಯಾಟಿನ್ ಚಿನ್ನದ ಲೇಪವನ್ನೂ ಹೊಂದಿದೆ. ಇದನ್ನೂ ಓದಿ: ದೆಹಲಿಯಲ್ಲಿ ಶ್ವಾನಗಳಿಗಾಗಿ ಪಾರ್ಕ್ ನಿರ್ಮಾಣ!

    ಟೋಕಿಯೊ ಒಲಿಂಪಿಕ್ಸ್ (2020)ನಲ್ಲಿ ನೀರಜ್ ಚೋಪ್ರಾ 87.58 ಮೀಟರ್ ದೂರಕ್ಕೆ ಜಾವೆಲಿನ್ ಎಸೆಯುವ ಮೂಲಕ ದಾಖಲೆ ಮುರಿದಿದ್ದರು. ಈ ವರ್ಷ ನಡೆದ ಒಲಿಂಪಿಕ್ಸ್‍ನಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ಗೆದ್ದಿದ್ದರು.

  • 60 ಕೆ.ಜಿ ಚಿನ್ನ ಧರಿಸಿ ಮದುವೆ ಮಂಟಪಕ್ಕೆ ಎಂಟ್ರಿ ಕೊಟ್ಟ ವಧು!

    60 ಕೆ.ಜಿ ಚಿನ್ನ ಧರಿಸಿ ಮದುವೆ ಮಂಟಪಕ್ಕೆ ಎಂಟ್ರಿ ಕೊಟ್ಟ ವಧು!

    – ಅತಿಥಿಗಳನ್ನು ಅಚ್ಚರಿಗೊಳಿಸಿದ ಮದುಮಗಳು

    ಬೀಜಿಂಗ್: ಜಗತ್ತಿನಾದ್ಯಂತ ಮಹಿಳೆಯರಿಗೆ ಚಿನ್ನ ಅಂದ್ರೆ ಪಂಚಪ್ರಾಣ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಅಂತೆಯೇ ಇದೀಗ ವಧು ಬರೋಬ್ಬರಿ 60 ಕೆ.ಜಿ ಚಿನ್ನ ಧರಿಸಿ ಸುದ್ದಿಯಾಗಿದ್ದಾರೆ.

    ಹೌದು. ಮದುವೆಯಂದು ಚೀನಾದ ವಧು ಬರೋಬ್ಬರಿ 60 ಕೆಜಿ ಚಿನ್ನದ ಆಭರಣ ತೊಡುವ ಮೂಲಕ ಬಂದಂತಹ ಅತಿಥಿಗಳನ್ನು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡಿದ್ದಾರೆ. ಈಕೆಗೆ ಈ ಆಭರಣಗಳನ್ನು ವರನೇ ಉಡುಗೊರೆಯಾಗಿ ನೀಡಿದ್ದಾನೆ.

    ವಧು ಮೈತುಂಬಾ ಚಿನ್ನ ಧರಿಸಿ ಕಾರಿನಲ್ಲಿ ಕುಳಿತು ನಗು ಬೀರುತ್ತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ವಧು ಮದುವೆಯ ಧಿರಿಸು ತೊಟ್ಟು, ಚಿನ್ನಾಭರಣ ಧರಿಸಿ ಕಾರಿನಲ್ಲಿ ಕುಳಿತಿದ್ದಾಳೆ. ಅಲ್ಲದೆ ಕೈಯಲ್ಲಿ ಗುಲಾಬಿ ಹೂಗಳನ್ನು ಕೂಡ ಹಿಡಿದುಕೊಂಡಿರುವುದನ್ನು ಕಾಣಬಹುದಾಗಿದೆ. ಇದನ್ನೂ ಓದಿ: ಟಿಕೆಟ್ ಹಣ ನೀಡುತ್ತಿದ್ದಂತೆ ಥಿಯೇಟರ್‌ನಲ್ಲೇ ಕುಸಿದು ಬಿದ್ದ ಕಿಚ್ಚನ ಅಭಿಮಾನಿ

    ಒಟ್ಟಿನಲ್ಲಿ ವಧು ಇಷ್ಟೊಂದು ಆಭರಣ ಧರಿಸಿ ಕಲ್ಯಾಣ ಮಂಟಪಕ್ಕೆ ಕಾಲಿಡುತ್ತಿದ್ದಂತೆಯೇ ನೆರೆದಿದ್ದ ಅತಿಥಿಗಳು ಅಚ್ಚರಿಗೊಳಗಾಗಿದ್ದಾರೆ. ಅಷ್ಟೊಂದು ಭಾರವಾದ ಚಿನ್ನವನ್ನು ಧರಿಸಿಕೊಂಡು ನಡೆದು ಬರುತ್ತಿರುವುದನ್ನು ನೋಡಿ ಆಶ್ಚರ್ಯ ಪಟ್ಟಿದ್ದಾರೆ. ಈ ವೇಳೆ ವಧು, ಮದುವೆಯ ಸಮಾರಂಭವನ್ನು ಮುಂದುವರಿಸುವಂತೆ ಕೇಳಿಕೊಂಡಿದ್ದಾಳೆ.

    ವರ ಶ್ರೀಮಂತ ಕುಟುಂಬದಿಂದ ಬಂದವನಾಗಿದ್ದು, ವಧುವಿಗೆ 60 ಚಿನ್ನದ ನೆಕ್ಲೆಸ್ ನೀಡಲಾಯಿತು. ಜೊತೆಗೆ ಎರಡು ದೊಡ್ಡದಾದ ಬಳೆಗಳನ್ನು ವಧುವಿಗೆ ನೀಡಲಾಗಿದೆ ಎಂಬುದಾಗಿ ವರದಿಯಾಗಿದೆ.

  • ರಾಷ್ಟ್ರಪತಿಗಳಿಗೆ ಶ್ರೀ ರಾಮಾಯಣ ದರ್ಶನಂ, ಪರ್ವ ಕಾದಂಬರಿ ನೀಡಿದ ಸುನಿಲ್ ಕುಮಾರ್

    ರಾಷ್ಟ್ರಪತಿಗಳಿಗೆ ಶ್ರೀ ರಾಮಾಯಣ ದರ್ಶನಂ, ಪರ್ವ ಕಾದಂಬರಿ ನೀಡಿದ ಸುನಿಲ್ ಕುಮಾರ್

    ಬೆಂಗಳೂರು: ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ರಾಜ್ಯ ಪ್ರವಾಸದಲ್ಲಿದ್ದಾರೆ. ಇದೇ ವೇಳೆ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನಿಲ್ ಕುಮಾರ್ ಭೇಟಿ ಮಾಡಿ ಮಾತುಕತೆ ನಡೆಸಿದರು.

    ರಾಜಭವನದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಸುನಿಲ್ ಕುಮಾರ್ ಅವರು ಕುವೆಂಪು ಅವರ ಶ್ರೀ ರಾಮಾಯಣ ದರ್ಶನಂ ಇಂಗ್ಲಿಷ್ ಅನುವಾದಿತ ಪುಸ್ತಕ ಹಾಗೂ ಡಾ.ಎಸ್.ಎಲ್.ಭೈರಪ್ಪ ಅವರ ಪರ್ವ ಕಾದಂಬರಿಯ ಇಂಗ್ಲಿಷ್ ಅನುವಾದಿತ ಕೃತಿಯನ್ನು ರಾಷ್ಟ್ರಪತಿಯವರಿಗೆ ಕೊಡುಗೆಯಾಗಿ ನೀಡಿದರು. ಇದನ್ನೂ ಓದಿ: ವಿಕ್ರಮಾದಿತ್ಯ ನೌಕೆಯಲ್ಲಿ ನಾವ್‌-ಇಕ್ಯಾಶ್‌ ಕಾರ್ಡ್‌ ಸೇವೆಗೆ ಚಾಲನೆ

    ಇದೊಂದು ಸೌಹಾರ್ದಯುತ ಭೇಟಿಯಾಗಿತ್ತು. ಈ ವೇಳೆ ಪರಸ್ಪರ ಕುಶಲೋಪರಿ ಮಾತನಾಡಿ, ಸಚಿವರು ವಿಶೇಷ ಉಡುಗೊರೆಗಳನ್ನು ರಾಷ್ಟ್ರಪತಿಗಳಿಗೆ ನೀಡಿದ್ದಾರೆ. ರಾಷ್ಟ್ರಪತಿ ಕೋವಿಂದ್ ಅವರು ಸಹ ಅಷ್ಟೇ ಸಂತೋಷದಿಂದ ಸ್ವೀಕರಿಸಿದ್ದಾರೆ.

  • ವಧು, ವರರಿಗೆ ಪೆಟ್ರೋಲ್ ಗಿಫ್ಟ್ ಕೊಟ್ಟ ಹಾಸ್ಯ ನಟ

    ವಧು, ವರರಿಗೆ ಪೆಟ್ರೋಲ್ ಗಿಫ್ಟ್ ಕೊಟ್ಟ ಹಾಸ್ಯ ನಟ

    ಚೆನ್ನೈ: ತಮಿಳು ಹಾಸ್ಯ ಕಲಾವಿದ ಮಾಯಿಲ್ ಸಾಮಿ ಇತ್ತೀಚೆಗೆ ಮದುವೆಯೊಂದರಲ್ಲಿ ನವಜೋಡಿಗಳಿಗೆ ಪೇಟ್ರೋಲ್ ಉಡುಗೊರೆಯಾಗಿ ಕೋಡುವ ಮೂಲಕವಾಗಿ ಸಖತ್ ಸುದ್ದಿಯಲ್ಲಿದ್ದಾರೆ.

    ನವಜೋಡಿಗಳಿಗೆ ಶುಭ ಹಾರೈಸಲು ಬಂದ ಕಲಾವಿದ 2 ಕ್ಯಾನ್ ಪೆಟ್ರೋಲ್ ತಂದಿದ್ದರು. ಒಂದು ಕ್ಯಾನ್ ವಧುಗೆ ಹಾಗೂ ಇನ್ನೊಂದು ಕ್ಯಾನ್ ಪೆಟ್ರೋಲ್ ವರನಿಗೆ ನೀಡಿ ಶುಭ ಹಾರೈಸಿದ್ದಾರೆ. ಹಾಸ್ಯ ಕಲಾವಿದರು ಏನೇ ಮಾಡಿದರು ತಮಾಷೆಯಾಗೇ ನೋಡುವ ಈ ಸಂದರ್ಭದಲ್ಲಿ ಮದುವೆಗೆ ಬಂದವರೆಲ್ಲಾ ಬಿದ್ದು, ಬಿದ್ದು ನಕ್ಕಿದ್ದಾರೆ ಎಂದು ಸುದ್ದಿಯಾಗಿದೆ. ಈ ವೀಶೇಷವಾದ ಗಿಫ್ಟ್ ನೀಡುತ್ತೀರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಇದನ್ನೂ ಓದಿ:  48 ವರ್ಷಗಳಾದ್ರೂ ಲಕ ಲಕ ಹೊಳೆಯುತ್ತಿದೆ ದೇವರಾಜ ಅರಸು ಬಳಸಿದ ಬೆಂಜ್ ಕಾರು

    ಇತ್ತೀಚೆಗೆ ಪೆಟ್ರೋಲ್ ಬೆಲೆ 100ರ ಗಡಿ ದಾಟಿದೆ ಮುನ್ನುಗ್ಗುತ್ತಿದೆ. ಇದನ್ನು ಖಂಡಿಸುವ ಉದ್ದೇಶದಿಂದ ಮಾಯಿಲ್ ಸಾಮಿ ಈ ಗಿಫ್ಟ್ ನೀಡಿದ್ದಾರೆ. ಮಾಯಿಲ್ ಸಾಮಿ ಕಳೆದ ಬಾರಿಯ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ವಿರುಂಪಾಕ್ಕಂ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದರು. ಇವರು ತಮಿಳುನಾಡಿನ ಮಾಜಿ ಮುಖ್ಯಂತ್ರಿಗಳಾದ ಇಯಲಲಿತಾ ಹಾಗೂ ಎಂಜಿಆರ್ ಅವರ ಅಪ್ಪಟ ಅಭಿಮಾನಿಯಾಗಿದ್ದಾರೆ.

  • ಅಳಿಯನಿಗೆ ಎಕೆ 47 ರೈಫಲ್ ಗಿಫ್ಟ್ ನೀಡಿ ಚುಂಬಿಸಿದ ಅತ್ತೆ

    ಅಳಿಯನಿಗೆ ಎಕೆ 47 ರೈಫಲ್ ಗಿಫ್ಟ್ ನೀಡಿ ಚುಂಬಿಸಿದ ಅತ್ತೆ

    – ಸೋಷಿಯಲ್ ಮಿಡೀಯಾದಲ್ಲಿ ವಿಡಿಯೋ ವೈರಲ್

    ಇಸ್ಲಾಮಾಬಾದ್: ವರದಕ್ಷಿಣೆಯಾಗಿ ಕಾರು, ಬಂಗಲೆ, ಹಣ ನಮ್ಮಲ್ಲಿ ಕೊಟ್ಟರೆ, ಪಾಕಿಸ್ತಾನದಲ್ಲಿ ಮಹಿಳೆಯೊಬ್ಬಳು ತನ್ನ ಅಳಿಯನಿಗೆ ಎಕೆ47 ರೈಫಲ್ ಕೊಟ್ಟಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಅಗಿದೆ.

    ವಿಡಿಯೋದಲ್ಲಿ ಏನಿದೆ?
    ವಧು-ವರರಿಗೆ ಶುಭಕೋರಲು ವೇದಿಕೆ ಮೇಲೆ ಬಂದ ವಧುವಿನ ತಾಯಿ ವರನಿಗೆ ಎಕೆ47 ರೈಫಲ್ ಕೊಟ್ಟು ಚುಂಬಿಸಿದ್ದಾಳೆ. ಅಳಿಯನ ಕೈಯಲ್ಲಿ ರೈಫಲ್ ಹಿಡಿದು ಅತ್ತೆಯೊಂದಿಗೆ ನಿಂತು ಕೊಂಡಿದ್ದಾನೆ. ಈ ವಿಡಿಯೋ ಸಾಮಾಜಿ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.

    ಈ ವಿಡಿಯೋಗೆ ಪಾಕಿಸ್ತಾನಿಯರು ಇದು ಕಾಮನ್ ಎಂದು ಶೇರ್ ಮಾಡಿದ್ದಾರೆ. ಇಂತಹ ಅನಿಷ್ಟ ಪದ್ಧತಿಗಳಿಂದಲೇ ಪಾಕಿಸ್ತಾನ ಭಯೋತ್ಪಾದಕರ ನಾಡಗಿದೆ ಎಂದು ವಿರೋಧಿಸಿ ಕೆಲವರು ಟೀಕೆ ಮಾಡಿದ್ದಾರೆ.

    ಈ ಗಿಫ್ಟ್ ವಧುವಿಗೆ ಕೊಡಬೇಕಿತ್ತು. ಜಗಳವಾದಾಗ ಗಂಡನ ಮೇಲೆ ಗುಂಡು ಹಾರಿಸು ಎಂದು ತಾಯಿ ಹೇಳಬೇಕಿತ್ತು ಎಂದು ಹಲವು ಕಮೆಂಟ್‍ಗಳು ಈ ವಿಡಿಯೋಗೆ ಬಂದಿದೆ. ಪಾಕಿಸ್ತಾನದ ಮದುವೆ ಸಮಾರಂಭದ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಇದೀಗ ಸಖತ್ ಸುದ್ದಿಯಲ್ಲಿದೆ.

  • ಮೆಕಪ್‍ಮೆನ್ ಬಳಿಕ ಮತ್ತೊಬ್ಬ ಸಿಬ್ಬಂದಿಗೆ ಕಾರು ಗಿಫ್ಟ್ ಮಾಡಿದ ನಟಿ ಜಾಕ್ವೆಲಿನ್

    ಮೆಕಪ್‍ಮೆನ್ ಬಳಿಕ ಮತ್ತೊಬ್ಬ ಸಿಬ್ಬಂದಿಗೆ ಕಾರು ಗಿಫ್ಟ್ ಮಾಡಿದ ನಟಿ ಜಾಕ್ವೆಲಿನ್

    – ದಸರಾ ಪ್ರಯುಕ್ತ ವಿಶೇಷ ಉಡುಗೊರೆ
    – ಗಿಫ್ಟ್ ವೀಡಿಯೋ ಸಖತ್ ವೈರಲ್

    ನವದೆಹಲಿ: ಟಾಲಿವುಡ್ ನಟಿ ಅನುಷ್ಕಾ ಶೆಟ್ಟಿ, ಬಾಲಿವುಡ್ ನಟಿ ಅಲಿಯಾ ಭಟ್ ನಂತರ ಇದೀಗ ನಟಿ ಜಾಕ್ವೆಲಿನ್ ಫರ್ನಾಂಡಿಸ್ ತಮ್ಮ ಮನೆಯ ಸಿಬ್ಬಂದಿಯೊಬ್ಬರಿಗೆ ಕಾರು ಗಿಫ್ಟ್ ಮಾಡುವ ಮೂಲಕ ಸದ್ಯ ಸುದ್ದಿಯಲ್ಲಿದ್ದಾರೆ.

    ಹೌದು. ಜಾಕ್ವೆಲಿನ್ ಅವರು ಮುಂಬೈಗೆ ಭೇಟಿ ನೀಡಿ, ತಮ್ಮ ಸಿಬ್ಬಂದಿಗೆ ಕಾರು ಕೀ ನೀಡುವ ಮೂಲಕ ದಸರಾ ಹಬ್ಬಕ್ಕೆ ಸರ್ಪ್ರೈಸ್ ಆಗಿ ಉಡುಗೊರೆ ನೀಡಿದ್ದಾರೆ. ಅಲ್ಲದೆ ಇದೇ ವೇಳೆ ಸಿಬ್ಬಂದಿ ಜೊತೆ ಸೇರಿ ಕಾರಿಗೆ ಆಯುಧ ಪೂಜೆ ಕೂಡ ನೆರವೇರಿಸಿದ್ದಾರೆ.

    ಜಾಕ್ವೆಲಿನ್ ಕಾರಿನ ಕೀ ಕೊಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ದಸರಾ ಹಬ್ಬದ ಸಮಯದಲ್ಲಿ ವಿಶೇಷ ಉಡುಗೊರೆ ನೀಡಿ ಸಿಬ್ಬಂದಿಯ ಸಂತಸ, ಸಂಭ್ರಮ ಮತ್ತಷ್ಟು ಹೆಚ್ಚಿಸಿದ್ದಾರೆ. ವಿಶೇಷ ಅಂದರೆ ಇದೇ ಸಂದರ್ಭದಲ್ಲಿ ಜಾಕ್ವೆಲಿನ್ ಟ್ರಾಫಿಕ್ ಪೊಲೀಸ್ ಯೂನಿಫಾರ್ಮ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ: ತನ್ನ ಹುಟ್ಟುಹಬ್ಬದಂದು ಡ್ರೈವರ್ ಗೆ 12 ಲಕ್ಷದ ಕಾರನ್ನು ಉಡುಗೊರೆಯಾಗಿ ಕೊಟ್ಟ ಅನುಷ್ಕಾ ಶೆಟ್ಟಿ!

    ವೀಡಿಯೋದಲ್ಲಿ ಊದಿನ ಕಡ್ಡಿ ಹಾಗೂ ಸ್ವೀಟ್ ಹಿಡಿದುಕೊಂಡು ನಿಂತಿರುತ್ತಾರೆ. ಈ ವೇಳೆ ಸಿಬ್ಬಂದಿಗೆ ಒಡೆಯಲು ತೆಂಗಿನ ಕಾಯಿ ಹಿಡಿದುಕೊಂಡು ಬರುತ್ತಾರೆ. ಅಲ್ಲದೆ ನಟಿಯನ್ನು ಹಿಂದೆ ಸರಿಯುವಂತೆ ಹೇಳಿ ಕುಳಿತುಕೊಂಡು ತೆಂಗಿನ ಕಾಯಿ ಒಡೆಯುವ ಮೂಲಕ ಕಾರಿಗೆ ಆಯುಧ ಪೂಜೆ ಮಾಡಿರುವುದನ್ನು ಕಾಣಬಹುದಾಗಿದೆ. ಇಷ್ಟು ಮಾತ್ರವಲ್ಲದೆ ಜಾಕ್ವೆಲಿನ್ ಮೂವಿ ಸೆಟ್ ನಲ್ಲಿರುವ ಒಂದು ಫೋಟೋ ಕೂಡ ಇನ್‍ಸ್ಟಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಎಲ್ಲರ ಭಾನುವಾರ ಹೇಗಿತ್ತು? ಶೀಘ್ರವೇ ತಮಾಷೆಯ ಪ್ರಾಜೆಕ್ಟ್ ಒಂದು ಬರಲಿದೆ. ಮೈ ಹ್ಯಾಪಿ ಪ್ಲೇಸ್ ಎಂದು ಬರೆದುಕೊಂಡು ಹ್ಯಾಶ್ ಟ್ಯಾಗ್ ಬಳಸಿದ್ದಾರೆ.

    ಜಾಕ್ವೆಲಿನ್ ಅವರು ಸಿಬ್ಬಂದಿಗೆ ಗಿಫ್ಟ್ ಕೊಡುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ಜಾಕ್ವೆಲಿನ್ ತನ್ನ ಮೆಕಪ್‍ಮೆನ್ ಹುಟ್ಟುಹಬ್ಬಕ್ಕೆ ದುಬಾರಿ ಬೆಲೆಯ ಗಿಫ್ಟ್ ನೀಡಿದ್ದರು. ನಟಿ ತನ್ನ ಜೊತೆ ಕೆಲಸ ಮಾಡುವ ಸಿಬ್ಬಂದಿಯನ್ನು ಕುಟುಂಬದವರಂತೆ ನೋಡಿಕೊಳ್ಳುತ್ತಾರೆ ಎಂಬುದಕ್ಕೆ ಇದು ಪ್ರತ್ಯಕ್ಷ ಸಾಕ್ಷಿಯಾಗಿದೆ. ಜಾಕ್ವೆಲಿನ್ ಅವರು ಮೆಕಪ್‍ಮೆನ್ ಶಾನ್ ಮುತಾತಿಲ್‍ನ 34ನೇ ವರ್ಷದ ಹುಟ್ಟುಹಬ್ಬಕ್ಕೆ ಬ್ರ್ಯಾಂಡ್ ನ್ಯೂ ಕಾರನ್ನು ಉಡುಗೊರೆಯಾಗಿ ನೀಡಿದ್ದರು.

     

    View this post on Instagram

     

    How was everyone’s Sunday?? Fun project coming up soon! #myhappyplace❤️

    A post shared by Jacqueline Fernandez (@jacquelinef143) on

    ಜಾಕ್ವೆಲಿನ್ ಸಪ್ರ್ರೈಸ್ ನೀಡುತ್ತಿರುವ ವಿಡಿಯೋವನ್ನು ಶಾನ್ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. “ನನ್ನ ಹುಟ್ಟುಹಬ್ಬಕ್ಕೆ ಶುಭ ಕೋರಿದ ಎಲ್ಲರಿಗೂ ನನ್ನ ಧನ್ಯವಾದಗಳು. ಕೆಲಸದಿಂದಲ್ಲೇ ನನ್ನ ಹುಟ್ಟುಹಬ್ಬದ ದಿನ ಶುರುವಾಗಿದೆ. ಈ ವರ್ಷ ಜಾಕ್ವೆಲಿನ್ ನನಗೆ ಅದ್ಭುತವಾದ ಸರ್ಪ್ರೈಸ್ ನೀಡಿದ್ದಾರೆ. ಅಪಾರ್ಟ್ ಮೆಂಟ್ ಕೆಳಗೆ ಕಾರಿನವರೆಗೂ ಹೋಗುವುದನ್ನು ವಿಡಿಯೋ ಮಾಡು ಎಂದು ಹೇಳಿದ್ರಿ. ಆದರೆ ನನಗೆ ಈ ಸರ್ಪ್ರೈಸ್ ನೀಡುತ್ತೀರಿ ಎಂದು ಯಾವುದೇ ಸುಳಿವು ಸಹ ಇರಲಿಲ್ಲ. ನನಗೆ ತುಂಬಾ ಖುಷಿಯಾಗಿದೆ” ಎಂದು ಶಾನ್ ತಮ್ಮ ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿಕೊಂಡಿದ್ದರು.

  • ಕೊಡಗಿನಿಂದ ಮಹೇಶ್ ಬಾಬುಗೆ ಉಡುಗೊರೆ ಕಳುಹಿಸಿದ ರಶ್ಮಿಕಾ

    ಕೊಡಗಿನಿಂದ ಮಹೇಶ್ ಬಾಬುಗೆ ಉಡುಗೊರೆ ಕಳುಹಿಸಿದ ರಶ್ಮಿಕಾ

    ಹೈದರಾಬಾದ್: ಸ್ಯಾಂಡಲ್‍ವುಡ್ ನಟಿ ರಶ್ಮಿಕಾ ಮಂದಣ್ಣ ಕೊರೊನಾ ಲಾಕ್‍ಡೌನ್ ಹಿನ್ನೆಲೆಯಲ್ಲಿ ಕೊಡಗಿನ ಕೂರ್ಗ್‌ನಲ್ಲಿ ಕುಟುಂಬದವರ ಜೊತೆ ಕಾಲಕಳೆಯುತ್ತಿದ್ದಾರೆ. ಇದೀಗ ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಕುಟುಂಬಕ್ಕೆ ಕೊಡಗಿನಿಂದ ವಿಶೇಷವಾದ ಉಡುಗೊರೆಯನ್ನು ಕಳುಹಿಸಿಕೊಟ್ಟಿದ್ದಾರೆ.

    ನಟಿ ರಶ್ಮಿಕಾ ಮಾವಿನಕಾಯಿ, ಮಾವಿನಕಾಯಿ ಉಪ್ಪಿನಕಾಯಿ ಸೇರಿದಂತೆ ಆರ್ಗಾನಿಕ್ ಫುಡ್‍ಗಳನ್ನು ಉಡುಗೊರೆಯಾಗಿ ಮಹೇಶ್ ಬಾಬು ಮನೆಗೆ ಕಳುಹಿಸಿಕೊಟ್ಟಿದ್ದಾರೆ. ಲಾಕ್‍ಡೌನ್ ಸಂದರ್ಭದಲ್ಲಿ ಕೊಡಗಿನಿಂದ ಅದರಲ್ಲೂ ಮಳೆಗಾಲದಲ್ಲಿ ಉಡುಗೊರೆ ಕಳುಹಿಸಿಕೊಟ್ಟಿದ್ದಕ್ಕೆ ನಟ ಮಹೇಶ್ ಬಾಬು ಪತ್ನಿ ನಮ್ರತಾ ಅವರು ರಶ್ಮಿಕಾಗೆ ಧನ್ಯವಾದ ತಿಳಿಸಿದ್ದಾರೆ.

    ರಶ್ಮಿಕಾ ತಮ್ಮದೆ ತೋಟದಲ್ಲಿ ಬೆಳೆದ ಹಣ್ಣುಗಳನ್ನು ಗಿಫ್ಟಾಗಿ ನೀಡಿದ್ದಾರೆ. ರಶ್ಮಿಕಾ ಕಳುಹಿಸಿದ್ದ ಉಡುಗೊರೆಯ ಫೋಟೋವನ್ನು ನಮ್ರತಾ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಜೊತೆಗೆ “ಈ ಎಲ್ಲಾ ರುಚಿಕರವಾದ ತಿನಿಸುಗಳನ್ನು ಕಳುಹಿಸಿಕೊಟ್ಟ ರಶ್ಮಿಕಾಗೆ ಧನ್ಯವಾದಗಳು. ಇದೆಲ್ಲ ಕೂರ್ಗ್‌ನಿಂದ ಬಂದಿದೆ. ಕೊರೊನಾ ಸಮಯದಲ್ಲಿ ನಮ್ಮ ಮನೆಗೆ ಮೊದಲ ಉಡುಗೊರೆ ಇದಾಗಿದೆ. ಹ್ಯಾಪಿ ಮಳೆಗಾಲ” ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಉಡುಗೊರೆ ಜೊತೆ ರಶ್ಮಿಕಾ ಬರೆದಿರುವ ಪತ್ರ ಇರುವುದನ್ನು ಫೋಟೋದಲ್ಲಿ ಕಾಣಬಹುದಾಗಿದೆ.

    https://www.instagram.com/p/CB_FTvgD8Gh/?igshid=1biyck14z1pnh

    ನಟಿ ರಶ್ಮಿಕಾ ಮತ್ತು ಮಹೇಶ್ ಬಾಬು ‘ಸರಿಲೇರು ನಿಕೆವ್ವರು’ ಸಿನಿಮಾದಲ್ಲಿ ಒಟ್ಟಿಗೆ ಅಭಿನಯಿಸಿದ್ದಾರೆ. ಈ ಸಿನಿಮಾದ ಮೂಲಕ ಮಹೇಶ್ ಬಾಬು ಕುಟಂಬದ ಜೊತೆ ರಶ್ಮಿಕಾ ಉತ್ತಮ ಸ್ನೇಹ ಇಟ್ಟುಕೊಂಡಿದ್ದಾರೆ. ಸಿನಿಮಾ ನಂತರವೂ ಇದೇ ಬಾಂಧವ್ಯವನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ಹೀಗಾಗಿ ಕೊಡಗಿನಿಂದ ಹಣ್ಣುಗಳನ್ನು ಮಹೇಶ್ ಬಾಬು ಕುಟುಂಬಕ್ಕೆ ಕಳುಹಿಸಿಕೊಟ್ಟಿದ್ದಾರೆ.

    ಸದ್ಯಕ್ಕೆ ರಶ್ಮಿಕಾ ಸದ್ಯ ಪುಷ್ಪ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಅಲ್ಲು ಅರ್ಜುನ್ ಅಭಿನಯದ ‘ಪುಷ್ಪ’ ಸಿನಿಮಾದಲ್ಲಿ ರಶ್ಮಿಕಾ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾ ದಕ್ಷಿಣ ಭಾರತದ ಎಲ್ಲಾ ಭಾಷೆಯಲ್ಲಿಯೂ ತೆರೆಗೆ ಬರುತ್ತಿದೆ.

  • ಹುಟ್ಟುಹಬ್ಬಕ್ಕೆ ಪತ್ನಿ ಕೊಟ್ಟ ಪ್ರೀತಿಯ ಓಲೆ ನೆನಪು ತೆರೆದಿಟ್ಟ ಜಗ್ಗೇಶ್

    ಹುಟ್ಟುಹಬ್ಬಕ್ಕೆ ಪತ್ನಿ ಕೊಟ್ಟ ಪ್ರೀತಿಯ ಓಲೆ ನೆನಪು ತೆರೆದಿಟ್ಟ ಜಗ್ಗೇಶ್

    ಬೆಂಗಳೂರು: ಇಂದು ನವರಸ ನಾಯಕ ಜಗ್ಗೇಶ್ ಅವರು 57ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಇದೇ ಖುಷಿಯಲ್ಲಿ ತಮ್ಮ ಪತ್ನಿ ಪರಿಮಳಾ ಅವರು ಮದುವೆಯಾದ ಮೊದಲ ವರ್ಷ ಹೇಗೆ ತಮ್ಮ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ್ದರು ಎನ್ನುವ ಸವಿ ನೆನಪನ್ನು ಜಗ್ಗೇಶ್ ಅವರು ಹಂಚಿಕೊಂಡಿದ್ದಾರೆ.

    ಮದುವೆಯಾದ ಮೊದಲ ವರ್ಷ ಪರಿಮಳಾ ಅವರು ಹುಟ್ಟುಹಬ್ಬಕ್ಕೆ ಪ್ರೀತಿಯಿಂದ ಕೈಯಾರೆ ಮಾಡಿಕೊಟ್ಟಿದ್ದ ಗ್ರೀಟಿಂಗ್ ಕಾರ್ಡ್ ಫೋಟೋವನ್ನು ಜಗ್ಗೇಶ್ ರಿವೀಲ್ ಮಾಡಿದ್ದಾರೆ. ಈ ಪ್ರೀತಿಯ ಓಲೆಗೆ 34 ವರ್ಷ ವಯಸ್ಸು, ನಾವು ಮದುವೆಯಾದ ವರ್ಷ ನನ್ನ ಪತ್ನಿ ಮಾತ್ರ ನನ್ನ ಹುಟ್ಟುಹಬ್ಬಕ್ಕೆ ಶುಭಹಾರೈಸಿದ್ದಳು. ಆದ್ರೆ ಇಂದು ನನ್ನ ಪತ್ನಿ ಜೊತೆಗೆ ನನ್ನ ಅಭಿಮಾನಿಗಳು ಕೂಡ ನನ್ನ ಜನ್ಮದಿನಕ್ಕೆ ಶುಭಹಾರೈಸಿ ಆಶೀರ್ವದಿಸಿದ್ದಾರೆ ಎಂದು ಜಗ್ಗೇಶ್ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ.

    ಈ ಬಗ್ಗೆ ಟ್ವೀಟ್ ಮಾಡಿರುವ ನವರಸನಾಯಕ, ನಾನು ಮದುವೆಯಾದ ಮೊದಲ ವರ್ಷ ಪರಿಮಳ ಕೈಯಾರೆ ನನ್ನ ಆನಡಗು ಗ್ರಾಮದಲ್ಲಿ ಮಾಡಿ ಹರಸಿದ ಪ್ರಥಮ ಶುಭಹಾರೈಕೆಯ ಪ್ರೀತಿಯ ಓಲೆ. ಈ ಪ್ರೀತಿ ಸಂಕೇತಕ್ಕೆ 34 ವರ್ಷ ವಯಸ್ಸು. ಅಂದು ಅವಳೊಬ್ಬಳೇ ಹರಸಿದ್ದಳು. ಇಂದು ಅವಳ ಪ್ರೀತಿ ಕೋಟಿ ಆತ್ಮಗಳಲ್ಲಿ ವಿಸ್ತಾರ ಮಾಡಿಬಿಟ್ಟರು ರಾಯರು. ಧನ್ಯೋಸ್ಮಿ ರಾಯರೆ ಇಷ್ಟು ಆತ್ಮಗಳ ಪ್ರೀತಿಸಲು ದೇಣಿಗೆ ನೀಡಿದ್ದಕ್ಕೆ ಎಂದು ಬರೆದು, ಪತ್ನಿ ಪರಿಮಳಾ ಅವರು ಹುಟ್ಟುಹಬ್ಬಕ್ಕೆ ನೀಡಿದ್ದ ಗ್ರೀಟಿಂಗ್ ಕಾರ್ಡ್ ಫೋಟೋವನ್ನು ಜಗ್ಗೇಶ್ ಶೇರ್ ಮಾಡಿಕೊಂಡಿದ್ದಾರೆ.

    ಜಗ್ಗೇಶ್ ಅವರು ಪ್ರತಿ ವರ್ಷದಂತೆ ಈ ಬಾರಿ ಕೂಡ ಹುಟ್ಟುಹಬ್ಬದ ದಿನ ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ದರ್ಶನ ಮಾಡಿದರು. ಈ ವೇಳೆ ಮಾತನಾಡಿದ ಜಗ್ಗೇಶ್ ಕೊರೊನಾ ವೈರಸ್ ಬಗ್ಗೆ ಆತಂಕ ವ್ಯಕ್ತಪಡಿಸಿದರು. ಕೊರೊನಾ ಇದು ಮಾನವ ನಿರ್ಮಿತ ವೈರಾಣು. ಅಮೆರಿಕ, ರಷ್ಯಾ ಹಾಗೂ ಚೀನಾ ನಂಬರ್ ಒನ್ ಸ್ಥಾನಕ್ಕಾಗಿ ನಡೆದಿರುವ ಬಯೋಲಾಜಿಕಲ್ ವಾರ್ ಇದು. ಪ್ರಕೃತಿ ಆಗಾಗ ಇಂತಹ ರೋಗಗಳಿಂದ ಮಾನವನಿಗೆ ಎಚ್ಚರಿಸುತ್ತಿದೆ. ಈ ಹಿಂದಿನ ಶತಮಾನದಲ್ಲಿ ಪ್ಲೇಗ್ ಬಂದಿತ್ತು. ಈಗ ಕೊರೊನಾ ಬಂದಿದೆ. ಕೊರೊನಾ ಬಗ್ಗೆ ಭಯಬೇಡ ಜಾಗೃತಿಯಿಂದ ಇರಿ ಎಂದು ಹೇಳಿದರು.

    ಇದೇ ವೇಳೆ ಇಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ಶುಭಾಶಯ ಕೋರಿದರು. ಈ ನಾಡಿನ ಹೆಸರಾಂತ ನಟ, ಹಿರಿಯರ ಮಗ, ರಾಯರು ಪುನೀತ್‍ಗೆ ಆಯು, ಆರೋಗ್ಯ, ಭಾಗ್ಯ ನೀಡಲಿ ಎಂದರು.

    ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತ, ಹೋರಾಟಗಾರ ಪಾಟೀಲ್ ಪುಟ್ಟಪ್ಪ ನಿಧನಕ್ಕೆ ಜಗ್ಗೇಶ್ ಸಂತಾಪ ಸೂಚಿಸಿದರು. 102 ವರ್ಷ ಈ ನಾಡು ನುಡಿಗಾಗಿ ಹೋರಾಟ ಮಾಡಿದ ಜೀವ ಅದು. ಅವರು ವಿಶ್ವೇಶ್ವರಯ್ಯನಂತೆ ಈ ನಾಡಿಗೆ ಶ್ರಮಿಸಿದವರು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಹೇಳಿದರು.

  • ಹಣ, ಆಭರಣ ಬದ್ಲು ಪುಸ್ತಕ ಕೇಳಿದ ಮಗಳು- ಎತ್ತಿನಗಾಡಿ ತುಂಬಾ ತಂದೆಯಿಂದ ಬುಕ್ಸ್ ಗಿಫ್ಟ್

    ಹಣ, ಆಭರಣ ಬದ್ಲು ಪುಸ್ತಕ ಕೇಳಿದ ಮಗಳು- ಎತ್ತಿನಗಾಡಿ ತುಂಬಾ ತಂದೆಯಿಂದ ಬುಕ್ಸ್ ಗಿಫ್ಟ್

    – ಮಗಳ ಮದ್ವೆಗೆ 2,400 ಪುಸ್ತಕ ಗಿಫ್ಟ್ ಕೊಟ್ಟ ತಂದೆ
    – ವಿವಿಧ ದೇಶ ಸುತ್ತಾಡಿ ಪುಸ್ತಕ ಸಂಗ್ರಹಣೆ

    ಗಾಂಧಿನಗರ: ಸಾಮಾನ್ಯವಾಗಿ ಮಗಳು ಮದುವೆಯಾಗಿ ಗಂಡನ ಮನೆಗೆ ಹೋಗುವಾಗ ಪೋಷಕರು ಹಣ, ಆಭರಣ ಅಥವಾ ಮಗಳಿಗೆ ಇಷ್ಟವಾಗುವ ವಸ್ತುಗಳನ್ನು ಉಡುಗೊರೆಯಾಗಿ ನೀಡುತ್ತಾರೆ. ಆದರೆ ಗುಜರಾತ್‍ನಲ್ಲಿ ತಂದೆಯೊಬ್ಬರು ಮದುವೆಯಾದ ಮಗಳಿಗೆ ಎತ್ತಿನಗಾಡಿಯಲ್ಲಿ ಪುಸ್ತಕವನ್ನು ಉಡುಗೊರೆಯಾಗಿ ನೀಡಿದ್ದಾರೆ.

    ಈ ಅಪರೂಪದ ಘಟನೆ ರಾಜ್‍ಕೋಟ್‍ನಲ್ಲಿ ನಡೆದಿದೆ. ವಧು ಕಿನ್ನರಿ ತಮ್ಮ ತಂದೆ ಹರ್ದೇವ್ ಸಿಂಗ್ ಬಳಿ ನನ್ನ ಮದುವೆಗೆ ಹಣ, ಆಭರಣ ಕೊಡುವ ಬದಲಿಗೆ ಪುಸ್ತಕಗಳನ್ನು ಉಡುಗೊರೆಯಾಗಿ ಕೊಡಿ ಎಂದು ಕೇಳಿಕೊಂಡಿದ್ದಳು. ಮಗಳ ಇಷ್ಟದಂತೆ ತಂದೆ ದೇಶದ ವಿವಿಧ ನಗರಗಳಲ್ಲಿ ಸಂಚರಿಸಿ ಪುಸ್ತಕಗಳನ್ನು ಸಂಗ್ರಹಿಸಿ ಎತ್ತಿನಗಾಡಿಯಲ್ಲಿ ಉಡುಗೊರೆಯಾಗಿ ನೀಡಿದ್ದಾರೆ.

    ಹರ್ವೇದ್ ಸಿಂಗ್ ವೃತ್ತಿಯಿಂದ ಶಿಕ್ಷಕ. ಇವರು ದೆಹಲಿ, ಕಾಶಿ ಮತ್ತು ಬೆಂಗಳೂರಿನಂತಹ ನಗರಗಳಲ್ಲಿ ದೀರ್ಘಕಾಲ ಸುತ್ತಾಡಿ ತಮ್ಮ ಮಗಳಿಗೆ ಪುಸ್ತಕಗಳನ್ನು ಸಂಗ್ರಹಿಸಿದ್ದರು. ಒಟ್ಟಾರೆ ತಮ್ಮ ಮಗಳು ಕಿನ್ನರಿಗೆ 2400 ಪುಸ್ತಕಗಳನ್ನು ಮದುವೆಯ ದಿನ ಎತ್ತಿಗಾಡಿಯಲ್ಲಿ ತುಂಬಿ ಉಡುಗೊರೆಯಾಗಿ ನೀಡಿದ್ದಾರೆ. ಕಿನ್ನರಿ ಸ್ವಲ್ಪ ಪುಸ್ತಕಗಳನ್ನು ತನ್ನೊಂದಿಗೆ ಪತಿಯ ಮನೆಗೆ ತೆಗೆದುಕೊಂಡು ಹೋಗಲಿದ್ದಾಳೆ. ಇತರ ಪುಸ್ತಕಗಳನ್ನು ವಿವಿಧ ಶಾಲೆಗಳಿಗೆ ನೀಡಲಾಗುವುದು.

    ನನ್ನ ಮಗಳು ಬಾಲ್ಯದಿಂದ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಂಡಿದ್ದಳು. ಹೀಗಾಗಿ ಮದುವೆಗೆ ಪುಸ್ತಕಗಳನ್ನ ಉಡುಗೊರೆಯಾಗಿ ನೀಡಬೇಕೆಂದು ಕೇಳಿಕೊಂಡಿದ್ದಳು. ಅದರಂತೆಯೇ ಪುಸ್ತಕಗಳನ್ನು ಕೊಡಿಸಿದ್ದೇನೆ. ನಮ್ಮ ಮನೆಯಲ್ಲಿ ಒಂದು ಪ್ರತ್ಯೇಕ ಗ್ರಂಥಾಲಯ ನಿರ್ಮಾಣ ಮಾಡಿದ್ದಾಳೆ ಎಂದು ತಂದೆ ಸಂತಸದಿಂದ ಮಗಳ ಬಗ್ಗೆ ಹೇಳಿಕೊಂಡಿದ್ದಾರೆ.

    ಭಾರತದ ಇತಿಹಾಸ, ಮಹಾಭಾರತ, ವಿಷ್ಣುಪುರಾಣದ ಜೊತೆಗೆ ಗುಜರಾತಿ ಹಾಗೂ ಇಂಗ್ಲೀಷ್‍ನ ಪುಸ್ತಕಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಪ್ರಸ್ತುತ ಜನರು ಪುಸ್ತಕಗಳಿಂದ ದೂರವಾಗುತ್ತಿವಾಗ ಕಿನ್ನರಿ ತಮ್ಮ ಮದುವೆಯಲ್ಲಿ ವರದಕ್ಷಿಣೆ ಎಂದು ಚಿನ್ನ, ಬೆಳ್ಳಿ  ಮತ್ತು ಆಭರಣಗಳ ಬದಲು ಪೋಷಕರಿಂದ ಪುಸ್ತಕಗಳನ್ನು ತೆಗೆದುಕೊಂಡಿದ್ದಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

  • ಪತಿಯನ್ನು ಖುಷಿಪಡಿಸಲು ಪತ್ನಿಯಿಂದ ನಗ್ನ ಫೋಟೋಶೂಟ್

    ಪತಿಯನ್ನು ಖುಷಿಪಡಿಸಲು ಪತ್ನಿಯಿಂದ ನಗ್ನ ಫೋಟೋಶೂಟ್

    – ಫೋಟೋ ನೋಡಿ ಖುಷಿಯಾಗಿ ರೊಚ್ಚಿಗೆದ್ದ ಪತಿ

    ವಾಷಿಂಗ್ಟನ್: ಪತಿಯನ್ನು ಖುಷಿಪಡಿಸಲು ಪತ್ನಿ ನಗ್ನ ಫೋಟೋಶೂಟ್ ಮಾಡಿಸಿ ಅದನ್ನು ಉಡುಗೊರೆಯಾಗಿ ನೀಡಿದ ಘಟನೆ ಅಮೆರಿಕದಲ್ಲಿ ನಡೆದಿದೆ.

    ನನ್ನ ಪತ್ನಿ ನಗ್ನವಾಗಿ ಬೋಲ್ಡ್ ಫೋಟೋಶೂಟ್ ಮಾಡಿಸಿ ಅದನ್ನು ಆಲ್ಬಂ ಮಾಡಿ ನನಗೆ ಉಡುಗೊರೆಯಾಗಿ ನೀಡಿದ್ದಳು. ನನ್ನ ಪತ್ನಿಯ ಈ ಬೋಲ್ಡ್ ಅವತಾರ ನೋಡಿ ನನಗೆ ಖುಷಿಯಾಯಿತು ಎಂದು ಪತಿ ತನ್ನ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾನೆ.

    ಆಲ್ಬಂ ನೋಡಿ ನಾನು ನನ್ನ ಪತ್ನಿಯನ್ನು ಹೊಗಳಲು ಶುರು ಮಾಡಿದೆ. ಬಳಿಕ ಈ ಫೋಟೋಗಳನ್ನು ಸ್ವತಃ ನೀನೇ ಕ್ಲಿಕ್ಕಿಸಿದ್ದೀಯಾ ಎಂದು ನಾನು ಆಕೆಯನ್ನು ಆಶ್ಚರ್ಯದಿಂದ ಪ್ರಶ್ನಿಸಿದೆ. ಆಗ ಆಕೆ ಇಲ್ಲ ಎಂದು ಉತ್ತರಿಸಿದಳು. ಬಳಿಕ ಮಹಿಳಾ ಫೋಟೋಗ್ರಾಫರ್ ಈ ಫೋಟೋ ಕ್ಲಿಕ್ಕಿಸಿದ್ದಾರಾ ಎಂದು ಪ್ರಶ್ನಿಸಿದೆ. ಆಗಲೂ ಆಕೆ ಇಲ್ಲ ಎಂದಳು. ನನ್ನ ಪತ್ನಿಯ ಉತ್ತರ ಕೇಳಿ ನಾನು ಕೋಪಗೊಂಡೆ ಎಂದನು.

    ನನ್ನ ಪತ್ನಿ ಇನ್ನೊಬ್ಬ ಪುರುಷನ ಮುಂದೆ ಹೇಗೆ ನಗ್ನವಾಗಿ ಫೋಟೋಶೂಟ್ ಮಾಡಿಸಬಹುದು. ಆಕೆ ಈ ರೀತಿಯ ಫೋಟೋಶೂಟ್ ಮಾಡಿಸುವ ಮೊದಲು ನನಗೆ ಅನುಮತಿ ಪಡೆಯಬೇಕಿತ್ತು ಎಂದು ಪತಿ ಬೇಸರ ವ್ಯಕ್ತಪಡಿಸಿದನು. ಇನ್ನೊಬ್ಬ ಪುರುಷನ ಮುಂದೆ ನೀನು ನಗ್ನವಾಗಿ ಪೋಸ್ ಕೊಟ್ಟಿದ್ದು, ನನಗೆ ಸ್ವಲ್ಪವೂ ಇಷ್ಟವಿಲ್ಲ ಎಂದು ನಾನು ನನ್ನ ಪತ್ನಿಗೆ ಹೇಳಿದೆ. ಆಗ ಆಕೆ ಈ ಉಡುಗೊರೆಯಿಂದ ಖುಷಿ ಆಗಬೇಕು ಹೊರತು ಕೋಪ ಮಾಡಿಕೊಳ್ಳಬಾರದು ಎಂದಳು ಎಂದು ಪತಿ ತಿಳಿಸಿದ್ದಾನೆ.

    ನನಗೆ ನನ್ನ ಪತ್ನಿ ನೀಡಿದ ಉಡುಗೊರೆ ನೋಡಿ ತುಂಬಾ ಖುಷಿ ಆಯಿತು. ಆದರೆ ಬೇರೆ ಪುರುಷನ ಮುಂದೆ ನಗ್ನವಾಗಿ ಫೋಟೋಶೂಟ್ ಮಾಡಿಸಿ ತಪ್ಪು ಕೆಲಸ ಮಾಡಿದ್ದಾಳೆ. ನಾನು ಈ ಮಾತನ್ನು ಆಕೆಗೆ ಪದೇ ಪದೇ ಹೇಳುತ್ತಿದೆ. ಇದರಿಂದ ಕೋಪಗೊಂಡು ಆಕೆ ಮನೆ ಬಿಟ್ಟು ಹೋಗಿದ್ದಾಳೆ ಎಂದು ಬರೆದು ಪೋಸ್ಟ್ ಮಾಡಿದ್ದಾನೆ. ಈ ಪೋಸ್ಟ್ ಗೆ ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.