Tag: ಉಡುಗೊರೆ

  • ಪಾಕ್ ಮಾಜಿ ಪ್ರಧಾನಿ ಇಮ್ರಾನ್‌ಖಾನ್ ಚುನಾವಣೆಗೆ ಕೋರ್ಟ್ ಗ್ರೀನ್ ಸಿಗ್ನಲ್

    ಪಾಕ್ ಮಾಜಿ ಪ್ರಧಾನಿ ಇಮ್ರಾನ್‌ಖಾನ್ ಚುನಾವಣೆಗೆ ಕೋರ್ಟ್ ಗ್ರೀನ್ ಸಿಗ್ನಲ್

    ಇಸ್ಲಾಮಾಬಾದ್: ಪಾಕಿಸ್ತಾನದ (Pakistan) ಮಾಜಿ ಪ್ರಧಾನಿ ಇಮ್ರಾನ್ ಖಾನ್‌ಗೆ (Imrankhan) ಮತ್ತೆ ಚುನಾವಣೆಯಲ್ಲಿ (Elections) ಸ್ಪರ್ಧಿಸಲು ಯಾವುದೇ ನಿರ್ಬಂಧವಿಲ್ಲ ಎಂದು ಸ್ಥಳೀಯ ಕೋರ್ಟ್ (Court) ಗ್ರೀನ್‌ಸಿಗ್ನಲ್ ನೀಡಿದೆ.

    ಉಡುಗೊರೆ ದುರ್ಬಳಕೆ ಪ್ರಕರಣದಲ್ಲಿ ಇಮ್ರಾನ್‌ಖಾನ್ ಅವರನ್ನು ಮುಂದಿನ 5 ವರ್ಷ ಚುನಾವಣೆಯಲ್ಲಿ ಸ್ಪರ್ಧಿಸದಂತೆ ಕಳೆದವಾರ ಚುನಾವಣಾ ಆಯೋಗ ಆದೇಶಿಸಿತ್ತು. ಇದನ್ನು ಇಮ್ರಾನ್‌ಖಾನ್ ಪ್ರಶ್ನಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಇಮ್ರಾನ್‌ಖಾನ್ ಚುನಾವಣೆಗೆ ಸ್ಪರ್ಧಿಸದಂತೆ ಆಯೋಗ ನಿರ್ಬಂಧ ಹೇರಿಲ್ಲ ಎಂದು ಹೇಳಿತು. ಆದ್ದರಿಂದಾಗಿ ಇದೇ ಅಕ್ಟೋಬರ್ 30 ರಂದು ನಡೆಯುವ ಖೈಬರ್ ಪಖ್ತೂನ್‌ಕ್ವಾ ಪ್ರಾಂತ್ಯದ ಖರ‍್ರಂ ಜಿಲ್ಲೆಯ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಖಾನ್‌ಗೆ ಅವಕಾಶವಿದೆ ಎಂದು ಹೇಳಿತು. ಇದನ್ನೂ ಓದಿ: ಶಿವಮೊಗ್ಗ ಮತ್ತೆ ಉದ್ವಿಗ್ನ – ಹರ್ಷನ ಮನೆ ಮುಂದೆ ಲಾಂಗು, ಮಚ್ಚು ಹಿಡಿದು ಓಡಾಟ

    ಏನಿದು ಪ್ರಕರಣ?
    ಇಮ್ರಾನ್‌ಖಾನ್ ಉಡುಗೊರೆಯಾಗಿ (Gift) ನೆಕ್ಲೆಸ್‌ನ್ನು ರಾಜ್ಯದ ಉಡುಗೊರೆ ಭಂಡಾರಕ್ಕೆ ಠೇವಣಿ ಇಡುವ ಬದಲು ಆಭರಣ ವ್ಯಾಪಾರಿಯೊಬ್ಬರಿಗೆ 18 ಕೋಟಿ ರೂ.ಗಳಿಗೆ ಮಾರಾಟ ಮಾಡಿದ್ದಾರೆ ಎನ್ನುವ ಆರೋಪ ಕೇಳಿಬಂದಿತ್ತು. ಇದರಿಂದಾಗಿ ಇಮ್ರಾನ್ ಖಾನ್ ವಿರುದ್ಧ ಎಫ್‌ಐಆರ್ (FIR) ದಾಖಲಿಸಿ ಪಾಕಿಸ್ತಾನ (Pakistan) ಉನ್ನತ ತನಿಖಾ ಸಂಸ್ಥೆ ವಿಚಾರಣೆ ಆರಂಭಿಸಿತ್ತು. ಈ ಸಂಬಂಧ ಫೆಡರಲ್ ಇನ್ವೆಸ್ಟಿಗೇಷನ್ ಏಜೆನ್ಸಿ (FIA) ತನಿಖೆ ಕೈಗೊಂಡಿತ್ತು. ಇದನ್ನೂ ಓದಿ: ಭೀಕರ ರಸ್ತೆ ಅಪಘಾತ- ಡಿವೈಡರ್‌ಗೆ ಕಾರು ಡಿಕ್ಕಿಯಾಗಿ ಮೂವರ ದುರ್ಮರಣ

    ಕಾನೂನಿನ ಪ್ರಕಾರ (Law Of Pakistan), ರಾಜ್ಯದ ಅಧಿಕಾರಿಗಳು ಗಣ್ಯರಿಂದ ಸ್ವೀಕರಿಸುವ ಉಡುಗೊರೆಗಳನ್ನು ತೋಶಾ-ಖಾನಾಗೆ ಸಲ್ಲಿಸಬೇಕಾಗುತ್ತದೆ. ಅವರು ಉಡುಗೊರೆಯನ್ನು ಸಲ್ಲಿಸಲು ವಿಫಲರಾದರೆ ಅಥವಾ ಉಡುಗೊರೆ ಮೌಲ್ಯದ ಅರ್ಧದಷ್ಟು ಮೊತ್ತವನ್ನು ಸಲ್ಲಿಸಿದರೆ, ಅದು ಕಾನೂನುಬಾಹಿರ ಕೃತ್ಯವಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಉಡುಗೊರೆ ಮಾರಾಟ – ಪಾಕ್ ಚುನಾವಣಾ ಆಯೋಗದಿಂದ ಇಮ್ರಾನ್ ಖಾನ್ ಅನರ್ಹ

    ಉಡುಗೊರೆ ಮಾರಾಟ – ಪಾಕ್ ಚುನಾವಣಾ ಆಯೋಗದಿಂದ ಇಮ್ರಾನ್ ಖಾನ್ ಅನರ್ಹ

    ಇಸ್ಲಾಮಾಬಾದ್: ದೇಶ ವಿದೇಶಗಳ ಗಣ್ಯರಿಂದ ಪಡೆದ ಸರ್ಕಾರಿ ಉಡುಗೊರೆಗಳನ್ನು ಕಾನೂನು ಬಾಹಿರವಾಗಿ ಮಾರಾಟ ಮಾಡಿದ ಆರೋಪದ ಮೇಲೆ ಪಾಕಿಸ್ತಾನದ (Pakistan) ಚುನಾವಣಾ ಆಯೋಗ (ECP) ಮಾಜಿ ಪ್ರಧಾನಿ ಇಮ್ರಾನ್ ಖಾನ್ (Imran Khan) ಅವರನ್ನು ಅನರ್ಹಗೊಳಿಸಿದೆ. ಇನ್ನು ಮುಂದೆ ಪಿಟಿಐ (PTI) ಅಧ್ಯಕ್ಷ ರಾಷ್ಟ್ರೀಯ ಅಸೆಂಬ್ಲಿಯ ಸದಸ್ಯರಲ್ಲ ಎಂದು ತೀರ್ಪು ನೀಡಿದೆ.

    ತೋಷಾಖಾನಾ (Toshakhana) ಎಂದು ಕರೆಯಲಾಗುವ ರಾಜ್ಯ ಭಂಡಾರದಿಂದ ರಿಯಾಯಿತಿ ದರದಲ್ಲಿ ಖರೀದಿಸಿದ ಉಡುಗೊರೆಗಳನ್ನು ಮಾರಾಟ ಮಾಡಿ, ಅದರಿಂದ ಬಂದಿರುವ ಆದಾಯವನ್ನು ಬಹಿರಂಗಗೊಳಿಸದ ಕಾರಣ ಇಮ್ರಾನ್ ಖಾನ್ ವಿರುದ್ಧ ಆಡಳಿತಾರೂಢ ಸಮ್ಮಿಶ್ರ ಸರ್ಕಾರದ ಶಾಸಕರು ಆಗಸ್ಟ್‌ನಲ್ಲಿ ಆಯೋಗಕ್ಕೆ ದೂರು ನೀಡಿದ್ದರು.

    ಈ ಪ್ರಕರಣದ ವಿಚಾರಣೆ ನಡೆಸಿದ ಬಳಿಕ ಇಸಿಪಿ ಶುಕ್ರವಾರ ಇಮ್ರಾನ್ ಖಾನ್ ಇನ್ನು ಮುಂದೆ ರಾಷ್ಟ್ರೀಯ ಅಸೆಂಬ್ಲಿಯ ಸದಸ್ಯರಲ್ಲ, ಅವರ ಸ್ಥಾನ ಖಾಲಿ ಎಂದು ಘೋಷಿಸಿದೆ. ಇದರೊಂದಿಗೆ ಮಾಜಿ ಪ್ರಧಾನಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಆಯೋಗ ನಿರ್ಧರಿಸಿದೆ. ಇದನ್ನೂ ಓದಿ: ನಿಜವಾದ ಮುಸ್ಲಿಮರು ಎಂದಿಗೂ ಬಿಜೆಪಿಗೆ ವೋಟ್ ಹಾಕಲ್ಲ: ಇಕ್ಬಾಲ್ ಮೊಹಮೂದ್

    2018 ರಲ್ಲಿ ಅಧಿಕಾರಕ್ಕೆ ಬಂದ ಇಮ್ರಾನ್ ಖಾನ್ ಅವರು ಅಧಿಕೃತ ಭೇಟಿಗಳ ಸಮಯದಲ್ಲಿ ಶ್ರೀಮಂತ ಅರಬ್ ಆಡಳಿತಗಾರರಿಂದ ದುಬಾರಿ ಉಡುಗೊರೆಗಳನ್ನು ಪಡೆದಿದ್ದರು. ಅದನ್ನು ತೋಷಾಖಾನಾದಲ್ಲಿ ಠೇವಣಿ ಇಡಲಾಗುತ್ತಿದ್ದು, ನಂತರ ಅವರು ಸಂಬಂಧಿತ ಕಾನೂನುಗಳ ಪ್ರಕಾರ ರಿಯಾಯಿತಿ ದರದಲ್ಲಿ ಖರೀದಿಸಿದ್ದರು. ಬಳಿಕ ಅವರು ಭಾರೀ ಲಾಭದಲ್ಲಿ ಉಡುಗೊರೆಗಳನ್ನು ಮಾರಾಟ ಮಾಡಿದ್ದಾರೆ ಎಂಬ ಆರೋಪ ಬಂದಿದೆ.

    ಇಸಿಪಿ ಪ್ರಕಾರ ಇಮ್ರಾನ್ ಖಾನ್ ಅವರು 2 ಕೋಟಿ ರೂ. ಪಾವತಿಸಿ ರಾಜ್ಯದ ಖಜಾನೆಯಿಂದ ಉಡುಗೊರೆಗಳನ್ನು ಪಡೆದು, ಅವುಗಳನ್ನು ಸುಮಾರು 5.8 ಕೋಟಿ ರೂ.ಗೆ ಮಾರಾಟ ಮಾಡಿದ್ದಾರೆ. ಅವರು ಮಾರಾಟ ಮಾಡಿರುವ ಉಡುಗೊರೆಗಳಲ್ಲಿ ಗ್ರಾಫ್ ಕೈಗಡಿಯಾರ, ಒಂದು ಜೋಡಿ ಕಂಫ್ಲಿಕ್, ದುಬಾರಿ ಪೆನ್, ಉಂಗುರ ಹಾಗೂ 4 ರೋಲೆಕ್ಸ್ ವಾಚ್‌ಗಳು ಸೇರಿವೆ. ಇದನ್ನೂ ಓದಿ: ಮುಂದಿನ ವರ್ಷದಿಂದ ದೀಪಾವಳಿಗೆ ನ್ಯೂಯಾರ್ಕ್‌ ನಗರದ ಶಾಲೆಗಳಿಗೆ ರಜೆ

    Live Tv
    [brid partner=56869869 player=32851 video=960834 autoplay=true]

  • ರಾಖಿ ಕಟ್ಟಿದ ಸಹೋದರಿಗೆ ಎಲೆಕ್ಟ್ರಿಕ್‌ ಸ್ಕೂಟರ್‌ ಗಿಫ್ಟ್‌ ಕೊಡಲು ಕಳ್ಳತನ ಮಾಡುತ್ತಿದ್ದ ಯುವಕನ ಬಂಧನ

    ರಾಖಿ ಕಟ್ಟಿದ ಸಹೋದರಿಗೆ ಎಲೆಕ್ಟ್ರಿಕ್‌ ಸ್ಕೂಟರ್‌ ಗಿಫ್ಟ್‌ ಕೊಡಲು ಕಳ್ಳತನ ಮಾಡುತ್ತಿದ್ದ ಯುವಕನ ಬಂಧನ

    ನವದೆಹಲಿ: ರಕ್ಷಾ ಬಂಧನದ ದಿನ ರಾಖಿ ಕಟ್ಟಿದ ಸಹೋದರಿಗೆ ಎಲೆಕ್ಟ್ರಿಕ್‌ ಸ್ಕೂಟರ್‌ನ್ನು ಉಡುಗೊರೆ ನೀಡಲು ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿರುವ ಘಟನೆ ದೆಹಲಿಯಲ್ಲಿ ನಡೆದಿದೆ.

    ಕಳ್ಳನೊಬ್ಬ ತನ್ನನ್ನು ದರೋಡೆ ಮಾಡಲು ಪ್ರಯತ್ನಿಸಿ ವಿಫಲನಾಗಿದ್ದಾನೆ ಎಂದು ಸುರೇಂದ್ರ ಎಂಬವರು ದೂರು ಕೊಟ್ಟಿದ್ದರು. ತಪ್ಪಿಸಿಕೊಂಡ. ಆದರೆ ಈ ವೇಳೆ ಆತನ ಬಿದ್ದ ನನಗೆ ಸಿಕ್ತು ಎಂದು ಸುರೇಂದ್ರ ಅವರು ಸುಲ್ತಾನ್‌ಪುರಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು ಎಂದು ಹಿರಿಯ ಪೊಲೀಸ್‌ ಅಧಿಕಾರಿ ಸಮೀರ್‌ ಶರ್ಮಾ ತಿಳಿಸಿದ್ದಾರೆ. ಇದನ್ನೂ ಓದಿ: ಪೆನ್ಸಿಲ್ ಬೆಲೆ ಏರಿಕೆಯಿಂದ ನನಗೆ ಕಷ್ಟ ಆಗುತ್ತಿದೆ – ಮೋದಿಗೆ 6ರ ಬಾಲಕಿ ಪತ್ರ

    ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಪತ್ತೆಗೆ ಮೊಬೈಲ್ ಬಳಸಿದ್ದಾರೆ. ಆತನನ್ನು ರೋಹಿಣಿ ನಿವಾಸಿ 21 ವರ್ಷದ ತರುಣ್ ಎಂದು ಗುರುತಿಸಲಾಗಿದೆ. ಆತನನ್ನು ಬಂಧಿಸಲಾಗಿದ್ದು, ಆತನಿಂದ ಕದ್ದ ಬೈಕ್ ಹಾಗೂ ಮೂರು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

    ವಿಜಯ್ ವಿಹಾರ್‌ನಿಂದ ದ್ವಿಚಕ್ರ ವಾಹನವನ್ನು ಕದ್ದಿದ್ದೇನೆ. ರಾಖಿ ಕಟ್ಟಿದ ಸಹೋದರಿಗೆ ಉಡುಗೊರೆ ನೀಡಲು ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಲು ಕಳ್ಳತನ ಮಾಡುತ್ತಿದ್ದೆ ಎಂದು ಆರೋಪಿ ವಿಚಾರಣೆ ವೇಳೆ ತಿಳಿಸಿದ್ದಾನೆ. ಇದನ್ನೂ ಓದಿ: ಜ್ಞಾನವಾಪಿ ಪ್ರಕರಣದಲ್ಲಿ ಮಸೀದಿ ಪರ ವಾದ ಮಂಡಿಸಿದ್ದ ವಕೀಲ ಹೃದಯಾಘಾತದಿಂದ ಸಾವು

    ಆರೋಪಿ ವಿಚಾರಣೆಯು ಆರು ಕಳ್ಳತನ ಪ್ರಕರಣಗಳನ್ನು ಭೇದಿಸಲು ಸಹಾಯ ಮಾಡಿದೆ. ಆತ ವಿದ್ಯಾರ್ಥಿಯಾಗಿದ್ದಾಗಲೇ ಶಾಲೆ ಬಿಟ್ಟು, ವ್ಯಸನಿಯಾಗಿದ್ದ. ಈತನ ವಿರುದ್ಧ 10 ಪೊಲೀಸ್ ಪ್ರಕರಣಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ನವದಂಪತಿಗೆ ಉಡುಗೊರೆ ತಂದ ಆಪತ್ತು

    ನವದಂಪತಿಗೆ ಉಡುಗೊರೆ ತಂದ ಆಪತ್ತು

    ಗಾಂಧಿನಗರ: ಭಗ್ನ ಪ್ರೇಮಿಯೊಬ್ಬ ತಾನು ಪ್ರೇಮಿಸಿದ್ದ ಹುಡುಗಿಯು ಮೋಸ ಮಾಡಿದ್ದರಿಂದ ಆ ಸೇಡನ್ನು ಅವಳ ತಂಗಿಯ ಮದುವೆಯಲ್ಲಿ ಸೋಟಕದ ವಸ್ತುವನ್ನು ನೀಡಿ ದ್ವೇಷ ತೀರಿಸಿಕೊಂಡಿದ್ದಾನೆ. ಇದರಿಂದಾಗಿ ಇಬ್ಬರು ಗಂಭೀರವಾಗಿ ಗಾಯಗೊಂಡ ಪ್ರಕರಣ ಗುಜರಾತ್‍ನಲ್ಲಿ ನಡೆದಿದೆ.

    ದಕ್ಷಿಣ ಗುಜರಾತ್‍ನ ನವಸಾರಿ ಜಿಲ್ಲೆಯ ಮಿಂಧಬರಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಲತೇಶ್ ಮತ್ತು ಅವರ ಸೋದರಳಿಯ ಜಿಯಾನ್ ಗಂಭೀರವಾಗಿ ಗಾಯಗೊಂಡವರು. ಹಾಗೂ ಕೊಯಂಬಾ ನಿವಾಸಿ ರಾಜು ಪಟೇಲ್ ಆರೋಪಿ. ಈತ ವಧುವಿನ ಅಕ್ಕನ ಜೊತೆ ಅಕ್ರಮ ಸಂಬಂಧ ಹೊಂದಿದ್ದ. ಆದರೆ ಈತ ಕೆಲ ದಿನಗಳ ಹಿಂದೆ ಸಂಬಂಧ ಮುರಿದುಕೊಂಡಿದ್ದ. ಈ ದ್ವೇಷದ ಹಿನ್ನೆಲೆಯಲ್ಲಿ ತಾನು ಪ್ರೀತಿಸಿದ್ದ ತಂಗಿಯ ಮದುವೆಗೆ ಬಂದಿದ್ದ. ನವವಿವಾಹಿತರಿಗೆ ಉಡುಗೋರೆ ನೀಡಿ ಹೋಗಿದ್ದಾನೆ.

    MARRIAGE

    ಲತೇಶ್ ಮತ್ತು ಅವರ ಸೋದರಳಿಯ ಜಿಯಾನ್ ಅವರು ತಮ್ಮ ನಿವಾಸದಲ್ಲಿ ಇತರ ಕುಟುಂಬ ಸದಸ್ಯರ ಸಮ್ಮುಖದಲ್ಲಿ ಉಡುಗೊರೆಗಳನ್ನು ನೋಡುತ್ತಿದ್ದರು. ಆ ಉಡುಗೋರೆಗಳಲ್ಲಿ ಇದ್ದಿದ್ದ ರೀಚಾರ್ಜ್ ಮಾಡಬಹುದಾದ ಆಟಿಕೆ ಕಂಡುಬಂದಿದೆ. ಅದು ಸ್ಫೋಟಕ ವಸ್ತು ಎಂದು ತಿಳಿಯದೇ, ಆ ಉಡುಗೊರೆಯಲ್ಲಿ ಆಟಿಕೆ ಕಂಡು, ಲತೇಶ್ ಮತ್ತು ಜಿಯಾನ್ ಆಟಿಕೆಗೆ ರೀಚಾರ್ಜ್ ಮಾಡಲು ಪ್ರಯತ್ನಿಸಿದರು. ಆದರೆ ಆ ಆಟಿಕೆಯ ಸ್ಫೋಟ ಸಂಭವಿಸಿದೆ. ಇದರ ಪರಿಣಾಮವಾಗಿ ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದಾರೆ.

    ಲತೇಶ್ ಅವರ ಕೈಗಳು, ತಲೆ ಮತ್ತು ಕಣ್ಣುಗಳ ಮೇಲೆ ತೀವ್ರ ಗಾಯಗಳಾಗಿದ್ದು, ಜಿಯಾನ್ ಅವರ ತಲೆ ಮತ್ತು ಕಣ್ಣುಗಳಿಗೆ ಗಾಯಗಳಾಗಿವೆ. ಇಬ್ಬರನ್ನೂ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: ಭ್ರಷ್ಟ ಬಿಜೆಪಿ ನಾಯಕರ ಆಸ್ತಿ ಹರಾಜು ಹಾಕಿ ಮಳೆ ಸಂತ್ರಸ್ತರಿಗೆ ಪರಿಹಾರ ನೀಡಿ: ಮೋಹನ್ ದಾಸರಿ

    ಈ ಸಂಬಂಧ ಸಂತ್ರಸ್ತರ ಕುಟುಂಬದ ಸದಸ್ಯರು ವನ್ಸ್ಡಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಉಡುಗೋರೆ ನೀಡಿದ್ದ ಕೊಯಂಬಾ ನಿವಾಸಿ ರಾಜು ಪಟೇಲ್ ವಿರುದ್ಧ ದೂರು ದಾಖಲಾಗಿದೆ. ಇದನ್ನೂ ಓದಿ: ಗುರುವಾರ ಮಹತ್ವದ ಕೇಂದ್ರ ಬಿಜೆಪಿ ಚುನಾವಣಾ ಸಮಿತಿ ಸಭೆ – ಸಿಎಂ ದೆಹಲಿಗೆ

  • ಮರ್ಸಿಡಿಸ್ ಬೆಂಜ್ ಗಿಫ್ಟ್ ಕೊಟ್ಟ ಬಾಸ್ – ಕಾರ್ ನೋಡಿ ಸಿಬ್ಬಂದಿ ಖುಷ್

    ಮರ್ಸಿಡಿಸ್ ಬೆಂಜ್ ಗಿಫ್ಟ್ ಕೊಟ್ಟ ಬಾಸ್ – ಕಾರ್ ನೋಡಿ ಸಿಬ್ಬಂದಿ ಖುಷ್

    ತಿರುವನಂತಪುರಂ: ಖಾಸಗಿ ಕಂಪನಿಯ ಬಾಸ್ ತನ್ನ ನಿಷ್ಠಾವಂತ ಸಿಬ್ಬಂದಿಗೆ ಮರ್ಸಿಡಿಸ್ ಬೆಂಜ್ ಕಾರನ್ನು ಗಿಫ್ಟ್ ಮಾಡಿದ್ದು, ಕಾರು ನೋಡಿ ಉದ್ಯಮಿ ಫುಲ್ ಖುಷ್ ಆಗಿರುವ ಸುದ್ದಿ ಎಲ್ಲೆಡೆ ವೈರಲ್ ಆಗಿದೆ.

    ಕೇರಳದ ಸಿಆರ್ ಅನೀಶ್ ಅವರಿಗೆ ಖಾಸಗಿ ಕಂಪನಿ ಮಾಲೀಕ ಎಕೆ ಶಾಜಿ ಅವರು Mercedes-Benz GLA Class 220 d ಕಾರನ್ನು ಗಿಫ್ಟ್ ಆಗಿ ಕೊಟ್ಟಿದ್ದಾರೆ. ಈ ಗಿಫ್ಟ್ ನೋಡಿದ ಅನೀಶ್ ಆಶ್ಚರ್ಯಗೊಂಡಿದ್ದಾರೆ. ಈ ಕುರಿತು ಶಾಜಿ ಅವರು ಇನ್‍ಸ್ಟಾಗ್ರಾಮ್ ನಲ್ಲಿ, ಆತ್ಮೀಯ ಅನಿ, ಕಳೆದ 22 ವರ್ಷಗಳಿಂದ ನೀವು ನನಗೆ ಬಲವಾದ ಸ್ತಂಭವಾಗಿ ಇದ್ದೀರಿ. ನಿಮ್ಮ ನಾನು ಕೊಟ್ಟ ಈ ಉಡುಗೊರೆಯನ್ನು ಇಷ್ಟಪಡುತ್ತೀರಿ ಎಂದು ಭಾವಿಸುತ್ತೇವೆ ಎಂದು ಬರೆದು ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಬೈಪಾಸ್ ಶಸ್ತ್ರಚಿಕಿತ್ಸೆಯಿಂದ ಗುಣಮುಖ- ಹಿತೈಷಿಗಳಿಗೆ ಸುನಿಲ್ ಧನ್ಯವಾದ

     

    View this post on Instagram

     

    A post shared by Shaji Ak (@shaji_ak)

    ಅನೀಶ್ ಅವರು ಕಳೆದ 22 ವರ್ಷಗಳಿಂದ ಉದ್ಯಮಿ ಎಕೆ ಶಾಜಿ ಅವರೊಂದಿಗೆ ಕಂಪನಿಯ ಮುಖ್ಯ ವ್ಯವಹಾರ ಅಭಿವೃದ್ಧಿ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ. ಅವರ ನಿಷ್ಠೆಗೆ ಧನ್ಯವಾದ ಅರ್ಪಿಸಲು, ಶಾಜಿ ಅವರು ಕಪ್ಪು ಬಣ್ಣದ ಮರ್ಸಿಡಿಸ್ ಬೆಂಜ್ ಕಾರನ್ನು ಗಿಫ್ಟ್ ಕೊಟ್ಟಿದ್ದಾರೆ.

     

    View this post on Instagram

     

    A post shared by Shaji Ak (@shaji_ak)

    ನಾನು ಮಾಲೀಕನಲ್ಲ, ಅವನು ಉದ್ಯೋಗಿ ಅಲ್ಲ. ನಾನು ತುಂಬಾ ಸಂತೋಷವಾಗಿದ್ದೇನೆ. ಇದೊಂದು ಹೆಮ್ಮೆಯ ಕ್ಷಣ. ಕಳೆದ 22 ವರ್ಷಗಳಿಂದ ಅನಿ ನನ್ನೊಂದಿಗಿದ್ದಾರೆ. ಈ ವರ್ಷ ನಾವು ನಮ್ಮ ಪಾಲುದಾರರಿಗೆ ಕಾರುಗಳನ್ನು ನೀಡಬಹುದೆಂದು ಆಶಿಸೋಣ ಎಂದು ಹೇಳಿ ಈ ಕಾರನ್ನು ಗಿಫ್ಟ್ ಕೊಟ್ಟಿದ್ದಾರೆ. ಇದನ್ನು ನೋಡಿ ಅನೀಶ್ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಬೀದಿ ನಾಯಿಯನ್ನೂ ಬಿಡದ ಕಾಮುಕ – ಸಿಸಿಟಿವಿಯಲ್ಲಿ ರೆಕಾರ್ಡ್!

    ಉಡುಗೊರೆಯ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಅನೀಶ್, ಇದಕ್ಕೆಲ್ಲಾ ನಿಮ್ಮೆಲ್ಲರ ಬೆಂಬಲವೇ ಕಾರಣ. ಭವಿಷ್ಯದಲ್ಲಿಯೂ ನೀವು ನನ್ನೊಂದಿಗೆ ಇರುತ್ತೀರಿ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ. ಈ ಪೋಸ್ಟ್ ನೋಡಿದ ನೆಟ್ಟಿಗರು ಶಾಜಿ ಅವರ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದು, ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

  • ಕಪಲ್ ರಿಂಗ್ ಉಡುಗೊರೆ ನೀಡಿ ವ್ಯಾಲೆಂಟೈನ್ಸ್ ಡೇ ಆಚರಿಸಿ

    ಕಪಲ್ ರಿಂಗ್ ಉಡುಗೊರೆ ನೀಡಿ ವ್ಯಾಲೆಂಟೈನ್ಸ್ ಡೇ ಆಚರಿಸಿ

    ವ್ಯಾಲೆಂಟೈನ್ಸ್ ಡೇ ಗೆ ಹೆಚ್ಚು ದಿನ ಉಳಿದಿಲ್ಲ. ನಿಮ್ಮ ಪ್ರೀತಿ ಪಾತ್ರರಿಗೆ ಉಡುಗೊರೆ ನೀಡುವ ಯೋಚನೆ ನೀವು ಮಾಡಿಯೇ ಇರುತ್ತೀರಿ. ಆದರೆ ಏನು ನೀಡುವುದು ಎಂಬ ಗೊಂದಲ ನಿಮ್ಮಲ್ಲಿದ್ದರೆ ಇದಕ್ಕೆ ಇರುವ ಒಂದು ಬೆಸ್ಟ್ ಆಪ್ಶನ್ ಕಪಲ್ ರಿಂಗ್ಸ್.

    ಕೇವಲ ಯಾವುದೋ ಒಂದು ಸಾಮಾನ್ಯ ಉಂಗುರ ನಿಮ್ಮ ಹುಡುಗ ಅಥವಾ ಹುಡುಗಿಗೆ ನೀಡಿದರೆ ಚೆನ್ನಾಗಿರುತ್ತಾ? ಸ್ವಲ್ಪ ಯೋಚಿಸಿ. ನೀವು ನೀಡುವ ಉಡುಗೊರೆ ವಿಶೇಷವಾಗಿದ್ದರೆ ಮಾತ್ರವೇ ವಿಶೇಷ ದಿನವನ್ನು ವಿಶೇಷವಾಗಿ ಆಚರಿಸಬಹುದು ಅಲ್ಲವೇ?

    ಇತ್ತೀಚೆಗೆ ಕೆಲವು ಟ್ರೆಂಡ್‌ನಲ್ಲಿರುವ ಕಪಲ್ ರಿಂಗ್‌ಗಳ ಡಿಸೈನ್ ಹೀಗಿವೆ. ಇವುಗಳಲ್ಲಿ ನಿಮ್ಮ ಟೇಸ್ಟ್‌ಗೆ ತಕ್ಕಂತಹ ಉಂಗುರಗಳನ್ನು ಆಯ್ಕೆ ಮಾಡಿ ಅಂತಹುದನ್ನೇ ಕೊಂಡು ನಿಮ್ಮ ಪ್ರೀತಿ ಪಾತ್ರರಿಗೆ ನೀಡಿ ಅವರನ್ನು ಖುಷಿಪಡಿಸಬಹುದು. ಈಗಿನ ಟ್ರೆಂಡ್‌ನಲ್ಲಿರುವ ವಿವಿಧ ಡಿಸೈನ್‌ನ ಕಪಲ್ ರಿಂಗ್ಸ್ ಹೀಗಿವೆ:

    ಕಿಂಗ್ ಆಂಡ್ ಕ್ವೀನ್ ಕಪಲ್ ರಿಂಗ್ಸ್:
    ರಾಜ ಹಾಗೂ ರಾಣಿಯರ ಕಿರೀಟದ ವಿನ್ಯಾಸವಿರುವ ಉಂಗುರಗಳು ಇತ್ತೀಚಿನ ಟ್ರೆಂಡ್‌ಗಳಲ್ಲಿ ಒಂದು. ಪ್ರೇಮಿಗಳ ದಿನದಂದು ಇದನ್ನು ನಿಮ್ಮನ್ನು ಇಷ್ಟ ಪಡುವವರಿಗೆ ನೀಡಿದರೆ ಅವರು ಖಂಡಿತವಾಗಿಯೂ ವಿಶೇಷ ಅನುಭವ ಪಡೆಯುತ್ತಾರೆ. ನಿಜ ಜೀವನದಲ್ಲಿ ನಿಮ್ಮ ಪ್ರೀತಿ ಪಾತ್ರರನ್ನು ರಾಜ ಅಥವಾ ರಾಣಿಯಂತೆ ನೋಡುತ್ತೀರಿ ಎಂಬ ಅರ್ಥವನ್ನೂ ಇದು ನೀಡುತ್ತದೆ.

    ಮ್ಯಾಗ್ನೆಟಿಕ್ ಹಾಫ್ ಹಾರ್ಟ್ ಕಪಲ್ ರಿಂಗ್ಸ್:
    ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜೋಡಿಗಳು ಭಾರೀ ಮೆಚ್ಚುಗೆ ವ್ಯಕ್ತಪಡಿಸಿರುವ ಜೋಡಿ ಉಂಗುರಗಳೆಂದರೆ ಅದು ಮ್ಯಾಗ್ನೆಟಿಕ್ ಹಾಫ್ ಹಾರ್ಟ್ ಕಪಲ್ ರಿಂಗ್ಸ್. ಎರಡು ಉಂಗುರಗಳನ್ನು ಒಟ್ಟಿಗೆ ತಂದಾಗ ಅಯಸ್ಕಾಂತದ ಸಣ್ಣ ತುಂಣುಕಿನಿಂದಾಗಿ ಉಂಗುರಗಳು ಒಂದಕ್ಕೊಂದು ಅಂಟಿಕೊಳ್ಳುತ್ತವೆ. ಅದೊಂದು ಸಂಪೂರ್ಣ ಹೃದಯದ ಆಕಾರ ಪಡೆಯುತ್ತದೆ. ಉಂಗುರಗಳನ್ನು ಬಿಡಿಸಿದಾಗ ಸಂಪೂರ್ಣ ಹೃದಯವೂ ಬಿಡಿಸಿಕೊಳ್ಳುತ್ತದೆ. ಇದನ್ನೂ ಓದಿ: ವ್ಯಾಲೆಂಟೈನ್ಸ್ ಡೇ ಸ್ಪೆಷಲ್ – ಹುಡುಗಿಯರನ್ನ ಇಂಪ್ರೆಸ್ ಮಾಡಲು ಈ ಶೈಲಿಯ ಶರ್ಟ್, ಬ್ಲೇಜರ್‌ಗಳನ್ನು ಧರಿಸಿ

    ಪ್ರೀತಿಸುವವರು ಒಟ್ಟಾಗಿದ್ದಾಗ ಮಾತ್ರವೇ ಸಂಪೂರ್ಣವಾಗಲು ಸಾಧ್ಯ ಎಂಬ ವಿಶೇಷ ಸಂದೇಶ ಈ ಉಂಗುರಗಳು ನೀಡುತ್ತವೆ. ವಿಶೇಷ ಸಂದೇಶ ಸಾರುವ ಜೋಡಿ ಉಂಗುರಗಳನ್ನು ನಿಮ್ಮ ಗೆಳೆಯ ಅಥವಾ ಗೆಳತಿಗೆ ಉಡುಗೊರೆ ನೀಡುವುದರಿಂದ ಅವರೂ ಸಂತೋಷ ಪಡುತ್ತಾರೆ.

    ಹೆಸರು ಬರೆದ ಜೋಡಿ ಉಂಗುರಗಳು:
    ಉಂಗುರಗಳಲ್ಲಿ ಅಂದದ ಫಾಂಟ್‌ನಲ್ಲಿ ವೈಯಕ್ತಿಕ ಹೆಸರನ್ನು ಕೆತ್ತಿಸಿ, ಅದನ್ನು ಉಡುಗೊರೆ ನೀಡಿದರೆ ಸಂತೋಷ ಯಾರಿಗೆ ತಾನೇ ಆಗಲ್ಲ? ಉಡುಗೊರೆ ಪಡೆದುಕೊಂಡವರು ನೀಡಿದವರ ಹೃದಯದಲ್ಲಿ ಎಷ್ಟು ಮುಖ್ಯವಾದ ಸ್ಥಾನ ಕೊಟ್ಟಿದ್ದಾರೆ ಎಂಬುದು ಮನದಟ್ಟಾಗುವುದು ಖಂಡಿತಾ. ಇದನ್ನೂ ಓದಿ: ಮಹಿಳೆಯರಿಗಾಗಿ ಚೀಪ್ ಆ್ಯಂಡ್ ಬೆಸ್ಟ್ ರೇಟ್‍ನಲ್ಲಿ ಸ್ಪ್ಲೆಂಡಿಡ್ ನೆಕ್ಲೆಸ್

    ದೂರದ ಜೋಡಿಗಳ ಉಂಗುರ:
    ನಿಮ್ಮ ಪ್ರೀತಿ ಲಾಂಗ್ ಡಿಸ್ಟೆನ್ಸ್‌ನದ್ದಾ? ಹಾಗಿದ್ದರೆ ಈ ಉಂಗುರಗಳು ನಿಮಗಾಗಿಯೇ ಹೇಳಿ ಮಾಡಿಸಿರುವಂತಹವುಗಳು. ಜೋಡಿಗಳು ದೂರವಿದ್ದರೂ ಹೃದಯದಲ್ಲಿ ವಿಶೇಷ ಸ್ಥಾನ ನೀಡುವುದು ಸಾಮಾನ್ಯದ ಮಾತಲ್ಲ. ಅದನ್ನು ನಿಭಾಯಿಸುವುದು ಅಷ್ಟೇ ಕಷ್ಟಕರ. ಹೀಗಿರುವಾಗ ನೀವು ನಿಮ್ಮ ಪ್ರೀತಿ ಪಾತ್ರರಿಗೆ ಭೂಮಿಯ ನಕ್ಷೆಯ ಚಿತ್ರವಿರುವ ಉಂಗುರವನ್ನೇ ಉಡುಗೊರೆ ಕೊಡಿ. ಅದನ್ನು ತೊಟ್ಟುಕೊಂಡವರು ಪ್ರತಿಬಾರಿ ಉಂಗುರವನ್ನು ಗಮನಿಸಿದಾಗ ನಿಮ್ಮನ್ನು ಖಂಡಿತಾ ನೆನಪಿಸಿಕೊಳ್ಳುತ್ತಾರೆ.

    ಜೋಡಿಗಳಿಗೆ ಲವ್ ಬರ್ಡ್ಸ್ ಉಂಗುರಗಳು:
    ನೀವು ಪರಿಸರ ಪ್ರೇಮಿಯೇ? ಪ್ರಾಣಿ-ಪಕ್ಷಿಗಳೆಂದರೆ ನಿಮಗೆ ಹಾಗೂ ನಿಮ್ಮ ಪ್ರೇಮಿಗೆ ಇಷ್ಟವೇ? ಹಾಗಿದ್ದರೆ ಲವ್ ಬರ್ಡ್ಸ್ ಚಿತ್ರವಿರುವ ಉಂಗುರಗಳನ್ನು ನೀಡಿ. ನಿಮ್ಮ ಪ್ರೀತಿ ಪಾತ್ರರು ಇದನ್ನು ಜೀವನದ ಅಮೂಲ್ಯ ಆಭರಣವೆಂದುಪರಿಗಣಿಸುತ್ತಾರೆ.

    ಹೆಸರಿನ ಮೊದಲ ಅಕ್ಷರದ ಕಪಲ್ ರಿಂಗ್‌ಗಳು:
    ಹೆಸರಿನ ಮೊದಲ ಅಕ್ಷರ ಹೊಂದಿರುವ ಕಪಲ್ ರಿಂಗ್ಸ್ ಹಿಂದಿನಿಂದಲೂ ಟ್ರೆಂಡ್ ಹುಟ್ಟಿಸಿರುವ ಉಂಗುರಗಳೇ ಆಗಿವೆ. ಆದರೆ ಅವುಗಳ ವಿನ್ಯಾಸಗಳಲ್ಲಿ ಬದಲಾವಣೆಗಳು ಬಂದಿವೆ. ಹೆಸರಿನ ಮೊದಲ ಅಕ್ಷರದ ಉಂಗುರಗಳು ಟ್ರೆಂಡಿಯಾಗಿ ಕಾಣಿಸುತ್ತವೆ. ಫ್ಯಾಶನ್‌ಪ್ರೇಮಿಗಳು ಈ ವಿನ್ಯಾಸದ ಉಂಗುರಗಳ ಉಡುಗೊರೆ ನೀಡುವುದು ಬೆಸ್ಟ್ ಚಾಯ್ಸ್. ಇದನ್ನೂ ಓದಿ: ಮದುವೆ ಸಮಯದಲ್ಲಿ ವಧುವಿನಂತೆ ಕಂಗೊಳಿಸಲು ಧರಿಸಬೇಕಾದ ಮುಖ್ಯ ಆಭರಣಗಳು

    ಮ್ಯೂಜಿಕಲ್ ನೋಟ್‌ನ ಜೋಡಿ ಉಂಗುರಗಳು:
    ಸಂಗೀತವನ್ನು ಇಷ್ಟಪಡದವರು ಯಾರಿದ್ದಾರೆ? ಇಷ್ಟ ಇಲ್ಲ ಎನ್ನುವವರನ್ನು ಹುಡುಕುವುದೂ ಕಷ್ಟ. ಸಂಗೀತವನ್ನು ಇಷ್ಟ ಪಡುವ ಜೋಡಿಗಳು ತಮ್ಮ ಪ್ರೇಮಿಗಳಿಗೆ ಸಂಗೀತದ ಟಿಪ್ಪಣಿಗಳನ್ನು ನಮೂದಿಸಿರುವ ವಿನ್ಯಾಸದ ಉಂಗುರ ನೀಡಿದರೆ ಚೆನ್ನಾಗಿರುತ್ತದೆ.

    ನಿಮಗೂ ನಿಮ್ಮ ಪ್ರೇಮಿಗೂ ಈ ರೀತಿಯಾಗಿ ತಮ್ಮ ತಮ್ಮ ಟೇಸ್ಟ್‌ಗೆ ತಕ್ಕಂತಹ ಉಂಗುರಗಳನ್ನು ಉಡುಗೊರೆ ನೀಡಿ, ಈ ಮೂಲಕ ಪ್ರೇಮಿಗಳ ದಿನವನ್ನು ವಿಶೇಷವಾಗಿಸಿಕೊಳ್ಳಿ.

  • ಕೇಂದ್ರದಿಂದ ರಾಜ್ಯದ ರೈಲ್ವೆಗೆ ಬಂಪರ್ ಕೊಡುಗೆ: ಸಿ.ಸಿ. ಪಾಟೀಲ್ ಅಭಿನಂದನೆ

    ಕೇಂದ್ರದಿಂದ ರಾಜ್ಯದ ರೈಲ್ವೆಗೆ ಬಂಪರ್ ಕೊಡುಗೆ: ಸಿ.ಸಿ. ಪಾಟೀಲ್ ಅಭಿನಂದನೆ

    ಬೆಂಗಳೂರು: ನೈರುತ್ಯ ರೈಲ್ವೆ ವಲಯಕ್ಕೆ ಪ್ರಸಕ್ತ ಮುಂಗಡ ಪತ್ರದಲ್ಲಿ ಕೇಂದ್ರ ಸರ್ಕಾರವು ಅತೀ ಹೆಚ್ಚು ಅಂದರೆ 6,900 ಕೋಟಿ ರೂ.ಗಳ ಅನುದಾನವನ್ನು ಘೋಷಿಸಿ ಕರ್ನಾಟಕಕ್ಕೆ ಸಿಂಹಪಾಲು ನೀಡಿರುವುದರಿಂದ ನಮ್ಮ ರಾಜ್ಯದ ರೈಲ್ವೆ ಕ್ಷೇತ್ರಕ್ಕೆ ಕೇಂದ್ರ ಸರ್ಕಾರವು ಬಹುದೊಡ್ಡ ಉಡುಗೊರೆ ನೀಡಿದಂತಾಗಿದೆ ಎಂದು ಲೋಕೋಪಯೋಗಿ ಸಚಿವರಾದ ಸಿ.ಸಿ. ಪಾಟೀಲ್ ಹರ್ಷ ವ್ಯಕ್ತಪಡಿಸಿದ್ದಾರೆ.

    ಇಷ್ಟು ದೊಡ್ಡ ಪ್ರಮಾಣದ ಅನುದಾನ ದೊರೆತಿರುವುದು ನೈರುತ್ಯ ರೈಲ್ವೆಯ ಇತಿಹಾಸದಲ್ಲೇ ಹೊಸ ದಾಖಲೆಯಾಗಿದೆ. ಕಳೆದ ವರ್ಷಕ್ಕಿಂತ ಈ ಬಾರಿ ಶೇಕಡ 43ರಷ್ಟು ಹೆಚ್ಚಿನ ಅನುದಾನ ಘೋಷಣೆಯಾಗಿದ್ದು, ಈ ಬಗ್ಗೆ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ, ಕೇಂದ್ರ ರೈಲ್ವೆ ಸಚಿವರು ಹಾಗೂ ವಿಶೇಷ ಪರಿಶ್ರಮ ವಹಿಸಿರುವ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಅಭಿನಂದಿಸಿದ್ದಾರೆ. ಇದನ್ನೂ ಓದಿ: ನಕ್ಸಲ್ ನಿಗ್ರಹ ದಳ ಸಿಬ್ಬಂದಿಗೆ ವಿಶೇಷ ಆಹಾರ ಭತ್ಯೆ ಹೆಚ್ಚಿಸಿದ ಸರ್ಕಾರ

    ಈ ಹೆಚ್ಚಿನ ಅನುದಾನದಿಂದಾಗಿ ನೂತನ ರೈಲ್ವೆ ಮೂಲಭೂತ ಸೌಕರ್ಯಗಳ ನಿರ್ಮಾಣಕ್ಕೆ, ರೈಲ್ವೆ ಮಾರ್ಗಗಳ ಸಾಮರ್ಥ್ಯ ವೃದ್ಧಿಗೆ, ಹೊಸ ರೈಲುಗಳ ಸಂಚಾರಕ್ಕೆ ಮತ್ತು ಮಾರ್ಗಗಳ ವಿದ್ಯುದೀಕರಣಕ್ಕೆ ಅನುಕೂಲವಾಗಲಿದೆ. ಉತ್ತರ ಕರ್ನಾಟಕಕ್ಕೆ ಸೂಪರ್ ಕೊಡುಗೆ ಈ ಬಾರಿ ಉತ್ತರ ಕರ್ನಾಟಕ ಭಾಗದ ರೈಲ್ವೆ ಸಂಪರ್ಕವನ್ನು ಮತ್ತಷ್ಟು ಬಲಪಡಿಸಲು ಆದ್ಯತೆ ನೀಡಿರುವುದು ವಿಶೇಷವಾಗಿದೆ ಎಂದು ಪ್ರಶಂಸಿಸಿದ್ದಾರೆ.

    ಧಾರವಾಡ ಕಿತ್ತೂರು ಬೆಳಗಾವಿ ಹೊಸ ಮಾರ್ಗಕ್ಕೆ ರೂ. 20 ಕೋಟಿ, ಗದಗ – ವಾಡಿ ಹೊಸ ಮಾರ್ಗಕ್ಕೆ ರೂ.187 ಕೋಟಿ, ಬಾಗಲಕೋಟೆ – ಕುಡಚಿ, ತುಮಕೂರು-ದಾವಣಗೆರೆ, ಶಿವಮೊಗ್ಗ-ರಾಣೆಬೆನ್ನೂರು ಈ 3 ಹೊಸ ಮಾರ್ಗಗಳಿಗೆ ತಲಾ 50 ಕೋಟಿ ರೂ.ಗಳನ್ನು ಹಂಚಿಕೆ ಮಾಡಿರುವುದು, ಗದಗ್ – ಹೂಟಗಿ ಡಬ್ಲಿಂಗ್ ಲೈನ್‍ಗಾಗಿ 200 ಕೋಟಿ ರೂ. ಹಾಗೂ ಹುಬ್ಬಳ್ಳಿ- ಚಿಕ್ಕಜಾಜೂರು ಡಬ್ಲಿಂಗ್ ಲೈನ್‍ಗಾಗಿ 210 ಕೋಟಿ ರೂಪಾಯಿ ಅನುದಾನ ದೊರೆತಿರುವುದು ಸೇರಿದಂತೆ ಅನೇಕ ಯೋಜನೆಗಳಿಗೆ ಹಸಿರು ನಿಶಾನೆ ತೋರಿಸುವ ಮೂಲಕ ಕೇಂದ್ರ ಸರ್ಕಾರವು ಕರ್ನಾಟಕದ ಮೇಲಿನ ತನ್ನ ಮಮತೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ ಎಂದು ಶ್ಲಾಘಿಸಿದ್ದಾರೆ.

    train

    ಇದಲ್ಲದೇ ದೇಶಾದ್ಯಂತ 400 ವಂದೇ ಭಾರತ ರೈಲುಗಳ ಸಂಚಾರ ಪ್ರಾರಂಭವಾಗಲಿದ್ದು, ಇವುಗಳಲ್ಲಿ ಒಂದು ರೈಲನ್ನು ಧಾರವಾಡ ಮತ್ತು ಬೆಂಗಳೂರು ನಡುವೆ ಸಂಚರಿಸಲು ಅವಕಾಶ ಮಾಡಿಕೊಡಬೇಕೆಂದು ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಅವರು ಈಗಾಗಲೇ ಮನವಿ ಮಾಡಿಕೊಂಡಿದ್ದು, ಇದಕ್ಕೆ ಕೇಂದ್ರವು ಸಕಾರಾತ್ಮಕವಾಗಿ ಸ್ಪಂದಿಸಿರುವುದರಿಂದ ಇದು ನಮ್ಮ ರಾಜ್ಯಕ್ಕೆ ದೊಡ್ಡ ವರದಾನವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ನಾಳೆಯಿಂದ ಥಿಯೇಟರ್‌ ಹೌಸ್‌ ಫುಲ್‌- ಸರ್ಕಾರದಿಂದ ಅನುಮತಿ

  • ಕ್ರಿಸ್‌ಮಸ್‌ ಹಬ್ಬಕ್ಕೆ ನಿಮ್ಮ ಮಕ್ಕಳಿಗೆ ಇಂತಹ ಬಟ್ಟೆಗಳನ್ನು ಕೊಡಿಸಿ

    ಕ್ರಿಸ್‌ಮಸ್‌ ಹಬ್ಬಕ್ಕೆ ನಿಮ್ಮ ಮಕ್ಕಳಿಗೆ ಇಂತಹ ಬಟ್ಟೆಗಳನ್ನು ಕೊಡಿಸಿ

    ಬ್ಬ ಬಂದಾಗ ಮಕ್ಕಳು ಪ್ರತೀ ಸಲ ಬಯಸುವುದು ಏನು? ಇದರ ಬಗ್ಗೆ ಯೋಚನೆಯೇ ಬೇಡ. ಪ್ರತೀ ಮಕ್ಕಳು ಹಬ್ಬಗಳಲ್ಲಿ ಪೋಷಕರಿಂದ ನಿರೀಕ್ಷಿಸುವುದು ಮೊದಲಿಗೆ ಹೊಸ ಬಟ್ಟೆಗಳನ್ನು. ಇನ್ನೆನು ಕ್ರಿಸ್‌ಮಸ್‌ ಬಂದೇ ಬಿಟ್ಟಿತು. ಹೀಗಿರುವಾಗ ಮಕ್ಕಳಿಗೆ ಹೊಸ ಬಟ್ಟೆಗಳನ್ನು ಖರೀದಿಸುವ ಯೋಜನೆಯಂತೂ ನೀವು ಮಾಡೇ ಇರುತ್ತೀರಿ. ಆದರೆ ಮಕ್ಕಳಿಗೆ ಯಾವ ತರಹದ ಬಟ್ಟೆಯನ್ನು ಕೊಳ್ಳುವುದು ಎಂಬ ಗೊಂದಲ ನಿಮ್ಮಲ್ಲಿ ಇದ್ದರೆ, ಇಲ್ಲಿರುವ ಕೆಲವು ಟಿಪ್ಸ್ ಪುಟ್ಟ ಮಕ್ಕಳಿಗೆ ಹೊಸ ಬಟ್ಟೆ ಕೊಳ್ಳಲು ನಿಮಗೆ ಖಂಡಿತಾ ಸಹಾಯ ಮಾಡಬಲ್ಲದು.

    ಚಿಕ್ಕ ಚಿಕ್ಕ ಪ್ರಿಂಟ್‍ಗಳಿರುವ ಸ್ಲೀಪ್ ಸೂಟ್ ಸೆಟ್:
    ಹತ್ತಿಯ ಬಟ್ಟೆಯ ಸ್ಲೀಪ್ ಸೂಟ್‍ಗನ್ನು ಧರಿಸಲು ಕೇವಲ ಮಕ್ಕಳಿಗೆ ಮಾತ್ರವಲ್ಲದೇ ಎಲ್ಲಾ ವಯೋಮಾನದ ಜನರಿಗೂ ಸಜೆಸ್ಟ್ ಮಾಡಬಹುದು. ಮಕ್ಕಳಿಗೆ ಹತ್ತಿಯ ಬಟ್ಟೆಯ ಸ್ಲೀಪ್ ಸೂಟ್‍ನಲ್ಲಿ ಪುಟ್ಟ ಪುಟ್ಟ ಗಾತ್ರದ ಪ್ರಿಂಟ್ ಗಳಿದ್ದರೆ ಮಕ್ಕಳು ಎಷ್ಟು ಮುದ್ದಾಗಿ ಕಾಣಿಸುತ್ತಾರಲ್ಲಾ? ಇದನ್ನೂ ಓದಿ:  ನಾಲಿಗೆ ಚಪ್ಪರಿಸಿ ತಿನ್ನುವ ಶುಂಠಿ ಉಪ್ಪಿನಕಾಯಿ ಮಾಡುವ ವಿಧಾನ

    ಕ್ರಿಸ್‌ಮಸ್‌ ಹಬ್ಬಕ್ಕಾದರೆ ಪ್ರಿಂಟ್‍ಗಳಲ್ಲಿ ಕ್ರಿಸ್‌ಮಸ್‌ ಟ್ರೀ, ಸಾಂತಾ, ಉಡುಗೊರೆ ಇಂತಹ ಹಲವು ಚಿತ್ರಗಳಿದ್ದರೆ ಮಕ್ಕಳೂ ಅದನ್ನು ಇಷ್ಟ ಪಡುತ್ತಾರೆ ಜೊತೆಗೆ ಅವರ ನಿದ್ರೆಯೂ ಆರಾಮದಾಯಕವಾಗುತ್ತದೆ.

    ಸಾಂತಾ ಕ್ಲಾಸ್ ಬಟ್ಟೆ:
    ನಿಮ್ಮ ಮಕ್ಕಳನ್ನೇ ಸಾಂತಾ ಕ್ಲಾಸ್‍ನಂತೆ ಡ್ರೆಸ್‍ಅಪ್ ಮಾಡಿದರೆ ಹೇಗಿರುತ್ತೆ? ಕೆಂಪು ದಿರಸಿನ ಸಾಂತಾ ನಿಮ್ಮ ಮನೆಯಲ್ಲೇ ಪುಟ್ಟ ಪುಟ್ಟ ಹೆಜ್ಜೆನ್ನಿಡುತ್ತ ಓಡಾಡಿಕೊಂಡಂತೆ ಭಾಸವಾಗುವುದಿಲ್ಲವೇ? ಸಾಂತಾವನ್ನು ಇಷ್ಟ ಪಡುವ ಮಕ್ಕಳೂ ಖುಷ್, ಅವರನ್ನು ನೋಡಿ ಆನಂದಿಸುವ ಹಿರಿಯರೂ ಖುಷ್.

    ಹೆಣ್ಣು ಮಕ್ಕಳಿಗೆ ಸಾಂತಾ ಫ್ರಾಕ್:
    ಸಾಂತಾ ಕ್ಲಾಸ್ ಸೂಟ್ ಯಾವಗಾಲೂ ಗಂಡು ಮಕ್ಕಳಿಗೆ ಸರಿ ಹೊಂದುತ್ತದೆ. ಹಾಗಿದ್ದರೆ ಹೆಣ್ಣು ಮಕ್ಕಳಿಗೆ? ಅವರಿಗೂ ಮಿಸ್ ಸಾಂತಾ ಕಾಸ್ಟ್ಯೂಮ್ ಕೊಡಿಸಿ. ಇದರಲ್ಲಿ ಕೆಂಪು ಬಣ್ಣದ ಫ್ರಾಕ್, ಟೊಪ್ಪಿ ಕಪ್ಪು ಶೂ ಮತ್ತು ಬೆಲ್ಟ್ ಇದ್ದರೆ ಮುಗೀತು. ಹೆಣ್ಣು ಮಕ್ಕಳೂ ಜಿಂಗಲ್ ಬೆಲ್ ಕ್ಲಬ್‍ನ ಭಾಗವಾಗಬಹುದು. ಇದನ್ನೂ ಓದಿ: 30 ನಿಮಿಷದಲ್ಲಿ ಮಾಡಿ ಬಿಸಿ ಬಿಸಿಯಾದ ಪನೀರ್ ಬಿರಿಯಾನಿ

    ಬೇಬಿ ರೋಂಪರ್:
    ನಡೆದಾಡುವ, ಶಾಲೆಗೆ ಹೋಗುವ ಮಕ್ಕಳಿಗೆ ಫ್ಯಾನ್ಸಿ ಬಟ್ಟೆಗಳನ್ನು ಖರೀದಿಸಬಹುದು. ಆದರೆ ನವಜಾತ ಶಿಶುಗಳಿಗೆ ಹಬ್ಬಕ್ಕೆ ಏನು ಕೊಳ್ಳುವುದು? ಈ ಗೊಂದಲಕ್ಕೆ ಪರಿಹಾರ ಒಂದೇ. ಇನ್ನೂ ತೊಟ್ಟಿಲಿರುವ ಮಕ್ಕಳಿಗೆ ಮಾರುಕಟ್ಟೆಯಲ್ಲಿ ಬೇಬಿ ರೋಂಪರ್ ಲಭ್ಯವಿರುತ್ತದೆ. ಹಬ್ಬಕ್ಕೆ ಸರಿ ಹೊಂದುವ ವಿನ್ಯಾಸದ, ಹತ್ತಿ ಬಟ್ಟೆಯ ರೋಂಪರ್ ಪುಟ್ಟ ಮಕ್ಕಳಿಗೆ ಪರ್ಫೆಕ್ಟ್ ಮ್ಯಾಚ್.

  • ತಾಜ್‌ಮಹಲ್‌ನಂತಯೇ ಮನೆ ಕಟ್ಟಿ ಪತ್ನಿಗೆ ಗಿಫ್ಟ್ ಕೊಟ್ಟ ಪತಿ

    ತಾಜ್‌ಮಹಲ್‌ನಂತಯೇ ಮನೆ ಕಟ್ಟಿ ಪತ್ನಿಗೆ ಗಿಫ್ಟ್ ಕೊಟ್ಟ ಪತಿ

    ಭೋಪಾಲ್: ವ್ಯಕ್ತಿಯೊಬ್ಬರು ತನ್ನ ಪತ್ನಿ ಮೇಲಿನ ಪ್ರೀತಿಗೆ ತಾಜ್‍ಮಹಲ್ ರೀತಿಯ ಮನೆಯನ್ನು ಕಟ್ಟಿಸಿ ಗಿಫ್ಟ್ ನೀಡಿದ್ದಾರೆ.

    ಷಹಜಹಾನ್ ಮುಮ್ತಾಜ್ ನಿಧನದ ನಂತರ ಪತ್ನಿ ಮೇಲಿನ ಪ್ರೀತಿಯ ಸಂಕೇತವಾಗಿ ಆಗ್ರಾದಲ್ಲಿ ತಾಜ್‍ಮಹಲ್ ಕಟ್ಟಿಸಿ ಉಡುಗೊರೆಯಾಗಿ ನೀಡಿದ್ದ. ಇದೇ ರೀತಿ ಮಧ್ಯಪ್ರದೇಶದ ಬುರ್ಹಾನ್‌ಪುರದಲ್ಲಿ ಬೆಲೆಬಾಳುವ ಮನೆಯನ್ನು ನಿರ್ಮಿಸಿ ಆನಂದ್ ಚೋಕ್ಸೆ ಅವರು ತಮ್ಮ ಪತ್ನಿಗೆ ಉಡುಗೊರೆಯಾಗಿ ನೀಡಿದ್ದಾರೆ. ಇದನ್ನೂ ಓದಿ: ಶಾರ್ಟ್ಸ್ ಧರಿಸಿದ್ದಕ್ಕೆ ಬ್ಯಾಂಕ್ ಒಳಗೆ ಬಿಡದ SBI ಸಿಬ್ಬಂದಿ 

    ಆನಂದ್ ಚೋಕ್ಸೆ ಅವರು ತಾಜ್ ಮಹಲ್ ಪ್ರತಿರೂಪದಂತೆ 4 ಬೆಡ್ ರೂಮ್‍ಗಳಿರುವ ಮನೆ ನಿರ್ಮಿಸಲು ಮೂರು ವರ್ಷಗಳ ಸಮಯ ತೆಗೆದುಕೊಂಡಿದ್ದಾರೆ. ಮನೆ ಕಟ್ಟುವ ವೇಳೆ ಇಂಜಿನಿಯರ್ ಬಹಳ ಶ್ರಮಪಟ್ಟಿದ್ದು, ಅವರು ತಾಜ್‍ಮಹಲ್ ಕುರಿತಂತೆ ಕೂಲಂಕುಷವಾಗಿ ಅಧ್ಯಯನ ನಡೆಸಿ, ಮನೆಯೊಳಗೆ ಕೆತ್ತನೆ ಮಾಡಲು ಬಂಗಾಳ ಮತ್ತು ಇಂದೋರ್‌ನಿಂದ ಕಲಾವಿದರನ್ನು ಕರೆಸಿದ್ದರು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ತಿರುಪತಿಯಲ್ಲಿ ಆಣೆಕಟ್ಟು ಬಿರುಕು – ಜನರಲ್ಲಿ ಹೆಚ್ಚಿದ ಆತಂಕ

    ಈ ಮನೆಯ ಮೇಲಿರುವ ಗುಮ್ಮಟ 29 ಅಡಿ ಎತ್ತರವಿದ್ದು, ಇದು ತಾಜ್ ಮಹಲ್ ರೀತಿಯೇ ಗೋಪುರ ಹೊಂದಿದೆ ಮತ್ತು ಮನೆಯ ನೆಲವನ್ನು ರಾಜಸ್ಥಾನದ ಮಕ್ರಾನಾದಿಂದ ಮಾಡಲಾಗಿದ್ದು, ಪೀಠೋಪಕರಣಗಳನ್ನು ಮುಂಬೈನ ಕುಶಲಕರ್ಮಿಗಳು ಸಿದ್ಧಪಡಿಸಿದ್ದಾರೆ.

    ಈ ಮನೆಯಲ್ಲಿ ಒಂದು ದೊಡ್ಡ ಹಾಲ್, ಕೆಳಗೆ 2 ಬೆಡ್ ರೂಮ್, ಮೇಲಿನ ಮಹಡಿಯಲ್ಲಿ 2 ಬೆಡ್ ರೂಮ್, ಗ್ರಂಥಾಲಯ ಮತ್ತು ಧ್ಯಾನ ಕೊಠಡಿಯನ್ನು ನಿರ್ಮಿಸಲಾಗಿದೆ. ಅಷ್ಟೇ ಅಲ್ಲದೇ ಮನೆಯ ಒಳಗೂ, ಹೊರಗೂ ಲೈಟಿಂಗ್ಸ್ ಅಳವಡಿಸಲಾಗಿದ್ದು, ನಿಜವಾದ ತಾಜ್ ಮಹಲ್ ನಂತೆಯೇ ಈ ಮನೆಯೂ ಕತ್ತಲಲ್ಲಿ ಪಳ ಪಳ ಹೊಳೆಯುತ್ತದೆ.

  • ಸುಧಾ ಮೂರ್ತಿಯವರ ದೀಪಾವಳಿ ಗಿಫ್ಟ್- ಮಕ್ಕಳಿಗೆ ಹೊಸ ಪುಸ್ತಕ

    ಸುಧಾ ಮೂರ್ತಿಯವರ ದೀಪಾವಳಿ ಗಿಫ್ಟ್- ಮಕ್ಕಳಿಗೆ ಹೊಸ ಪುಸ್ತಕ

    ನವದೆಹಲಿ: ಇನ್ಪೋಸಿಸ್ ಫೌಂಡೇಶನ್ ಮುಖಸ್ಥೆ ಹಾಗೂ ಲೇಖಕಿ ಸುಧಾ ಮೂರ್ತಿ ಅವರು ಮಕ್ಕಳಿಗೆ ದೀಪಾವಳಿಗೆ ವಿಶೇಷ ಉಡುಗೊರೆಯೊಂದನ್ನು ನೀಡಿದ್ದಾರೆ. ಪುಸ್ತಕ ದಿ ಸೇಜ್ ವಿತ್ ಟು ಹಾನ್ರ್ಸ್ ಇದನ್ನು ಅವರು ಮಕ್ಕಳಿಗಾಗಿ ಬರೆದಿದ್ದು, ಅದನ್ನೇ ದೀಪಾವಳಿ ಗಿಫ್ಟ್ ಆಗಿ ನೀಡಿದ್ದಾರೆ.

    ಪುಸ್ತಕದ ವಿಶೇಷತೆ:
    ಈ ಪುಸ್ತಕವು ಭಾರತೀಯ ಪುರಾಣಗಳ ಪುಟಗಳಲ್ಲಿ ಕಳೆದುಹೋಗಿರುವ ಹಲವಾರು ಯಾರಿಗೂ ತಿಳಿಯದ ಮತ್ತು ಆಕರ್ಷಕ ಕಥೆಗಳನ್ನು ಒಳಗೊಂಡಿದೆ. ರಾಜರು, ರಾಣಿಯರು, ದೇವರು ಮತ್ತು ದೇವತೆಗಳು, ಋಷಿಗಳು, ಅಸಾಮಾನ್ಯ ಬುದ್ಧಿವಂತಿಕೆಯ ಪುರುಷರು ಮತ್ತು ಮಹಿಳೆಯರ ಕಥೆಗಳು ಈ ಪುಸ್ತಕದಲ್ಲಿ ಇವೆ.

    Sudha Murty

    ದಿ ಮ್ಯಾನ್ ಫ್ರಮ್ ದಿ ಎಗ್, ಸಪೆರ್ಂಟ್ಸ್ ರಿವೇಂಜ್, ದಿ ಅಪ್‍ಸೈಡ್-ಡೌನ್ ಕಿಂಗ್ ಮತ್ತು ದಿ ಡಾಟರ್ ಫ್ರಮ್ ದಿ ವಿಶಿಂಗ್ ಟ್ರೀ ಗಳ ಅನುಸರಣೆಯಾಗಿದೆ. ಅಲ್ಲದೇ ಅವರ  Unusual Tales from mythology ಸರಣಿಯ ಐದನೇ ಮತ್ತು ಕೊನೆಯ ಪುಸ್ತಕವಾಗಿದೆ. ಅವರ ಪುಸ್ತಕಗಳು ಹಲವು ವಿಧಗಳಲ್ಲಿ ಭಿನ್ನವಾಗಿರುವಂತೆ ತೋರಬಹುದು. ಆದರೆ ಎಲ್ಲಾ ಆವೃತ್ತಿಗಳಲ್ಲಿ ಥ್ರೆಡ್ ಒಂದೇ ಆಗಿರುತ್ತದೆ. ಪುರಾಣಗಳಲ್ಲಿ ಉಲ್ಲೇಖಿಸಲಾದ ಕೆಲವು ಪೋಷಕ ಪಾತ್ರಗಳು ತಮ್ಮದೇ ಆದ ಜೀವನದ ದೃಷ್ಟಿಕೋನಗಳೊಂದಿಗೆ ಹೇಳಲು ತಮ್ಮದೇ ಆದ ಕಥೆಗಳನ್ನು ಹೊಂದಿವೆ ಎಂದು ಅವರು ಹೇಳುತ್ತಾರೆ. ಪಫಿನ್ ಪ್ರಕಟಿಸಿದ ಈ ಪುಸ್ತಕವು ಪ್ರಿಯಾಂಕರ್ ಗುಪ್ತಾ ಅವರ ಚಿತ್ರಣಗಳನ್ನು ಹೊಂದಿದೆ. ಇದನ್ನೂ ಓದಿ: ಚಪ್ಪಲಿ ತೆಗೆದು ಅಭಿಮಾನಿಗಳಿಂದ ಅಪ್ಪುಗೆ ಅಂತಿಮ ನಮನ- ಬಿಬಿಎಂಪಿಯಿಂದ ರಾಶಿ ರಾಶಿ ಸ್ಲಿಪ್ಪರ್ಸ್ ತೆರವು

    ವಿಶ್ವದಲ್ಲಿ ಯಾವುದೇ ಹೆಸರಿನಿಂದ ಕರೆಯಬಹುದಾದ ಶಕ್ತಿಶಾಲಿ ಶಕ್ತಿಯಿದೆ. ಈ ಶಕ್ತಿಯು ನಮ್ಮ ಒಳ್ಳೆಯ ಮತ್ತು ಕೆಟ್ಟ ಕಾರ್ಯಗಳಿಗೆ ಸಾಕ್ಷಿಯಾಗಿದೆ ಹಾಗೂ ನಾವು ಅದನ್ನು ಗಮನದಲ್ಲಿಟ್ಟುಕೊಂಡು ಎಚ್ಚರಿಕೆಯಿಂದ ಕೆಲಸ ಮಾಡಿದ್ರೆ, ನಮಗೆ ಮಾರ್ಗದರ್ಶನ ನೀಡಲು ಯಾವಾಗಲೂ ಇರುತ್ತದೆ ಎಂದು ಸುಧಾ ಮೂರ್ತಿ ಹೇಳಿದ್ದಾರೆ. ಇವರು ಕಾದಂಬರಿಗಳು, ತಾಂತ್ರಿಕ ಪುಸ್ತಕಗಳು, ಪ್ರವಾಸ ಕಥನಗಳು, ಸಣ್ಣ ಕಥೆಗಳ ಸಂಗ್ರಹಗಳು ಮತ್ತು ಕಾಲ್ಪನಿಕವಲ್ಲದ ತುಣುಕುಗಳು ಹಾಗೂ ಮಕ್ಕಳಿಗಾಗಿ ಪುಸ್ತಕಗಳನ್ನು ಬರೆದಿದ್ದಾರೆ.ಇದನ್ನೂ ಓದಿ: ಅಪ್ಪು ಜೊತೆಗಿನ ಲಾಸ್ಟ್ ಸೆಲ್ಫಿ ಶೇರ್ ಮಾಡಿದ ರಾಘಣ್ಣ