Tag: ಉಡುಗೊರೆ

  • ಪ್ರಧಾನಿ ಮೋದಿಗೆ ದೇಶದಲ್ಲೇ ಸಿಗದಂತಹ ಗಿಫ್ಟ್ ಕೊಟ್ಟ ಕಾಫಿನಾಡ ಅಂಧ ಅಥ್ಲೀಟ್

    ಪ್ರಧಾನಿ ಮೋದಿಗೆ ದೇಶದಲ್ಲೇ ಸಿಗದಂತಹ ಗಿಫ್ಟ್ ಕೊಟ್ಟ ಕಾಫಿನಾಡ ಅಂಧ ಅಥ್ಲೀಟ್

    ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಾಳೂರು ಹೋಬಳಿ ಸಮೀಪದ ಕುಗ್ರಾಮ ಗುಡ್ನಳ್ಳಿ ಗ್ರಾಮದ ಅಂಧ ಯುವತಿ ಹಾಗೂ ಪ್ಯಾರಾ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನ ಗೆದ್ದ ರಕ್ಷಿತಾ ರಾಜು ಭಾರತದಲ್ಲೇ ಸಿಗದಂತಹಾ 5,500 ರೂ. ಮೌಲ್ಯದ ಅಪರೂಪದ ಉಡುಗೊರೆಯನ್ನು ಪ್ರಧಾನಿ ಮೋದಿಗೆ ನೀಡಿದ್ದಾರೆ. ಅಂಧ ಯುವತಿಯಿಂದ ಉಡುಗೊರೆ ಸ್ವೀಕರಿಸಿದ ಪ್ರಧಾನಿ ಮೋದಿ ಖುಷಿ ಪಟ್ಟು ಪ್ಯಾರಾ ಒಲಿಂಪಿಕ್ಸ್‌ನಲ್ಲೂ ಚಿನ್ನ ಗೆಲ್ಲುವಂತೆ ಹಾರೈಸಿದ್ದಾರೆ.

    ರಕ್ಷಿತಾ ರಾಜು ಅಂಧ ಯುವತಿ. ಕಣ್ಣು ಕಾಣೋದಿಲ್ಲ. ಮೋದಿ ಹೇಗಿದ್ದಾರೆಂದೂ ಗೊತ್ತಿಲ್ಲ. ಆದರೂ ಮೋದಿ ಅನ್ನೋ ಹೆಸರಿಗೆ ಅವರನ್ನು ಭೇಟಿ ಮಾಡಿ ಖುಷಿಪಟ್ಟಿದ್ದಾರೆ. ಕಳೆದ ತಿಂಗಳು ಚೀನಾದ ಹಾಂಗೌಜ್‌ನಲ್ಲಿ ನಡೆದ ಏಷ್ಯನ್ ಪ್ಯಾರಾ ಕ್ರೀಡಾಕೂಟದಲ್ಲಿ ರಕ್ಷಿತಾ ರಾಜು ಚಿನ್ನದ ಪದಕ ಗೆದ್ದು ದೇಶ ಹಾಗೂ ರಾಜ್ಯಕ್ಕೆ ಕೀರ್ತಿ ತಂದಿದ್ದರು. ಕ್ರೀಡಾಕೂಟ ಮುಗಿದು ದೇಶಕ್ಕೆ ವಾಪಸ್ ಬಂದ ಬಳಿಕ ಕೇಂದ್ರ ಸರ್ಕಾರ ಕ್ರೀಡಾಪಟುಗಳಿಗೆ ಅಭಿನಂದನೆ ಸಲ್ಲಿಸಲು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಕ್ಷಿತಾ ರಾಜು ಪ್ರಧಾನಿ ಮೋದಿಯನ್ನು ಭೇಟಿ ಮಾಡಿ ಉಡುಗೊರೆ ನೀಡಿ ಖುಷಿಪಟ್ಟಿದ್ದಾರೆ.

    ರಕ್ಷಿತಾ ನೀಡಿದ ಉಡುಗೊರೆ ಏನು?
    ಭಾರತದಲ್ಲೇ ಸಿಗದಂತಹ ಉಡುಗೊರೆ ಅಂದರೆ ಅದೆಂತಹಾ ಉಡುಗೊರೆ ಎಂದು ಅನುಮಾನ ಬರಬಹುದು. ಅದು ಅಂಧ ಕ್ರೀಡಾಪಟಗಳು ಓಡುವಾಗ ಹಾಕಿಕೊಳ್ಳುವ ಟಿಟ್ಟರ್. ಅದು ಭಾರತದಲ್ಲಿ ಸಿಗುವುದಿಲ್ಲ. ಅದನ್ನು ರಕ್ಷಿತಾ ರಾಜು ಚೀನಾದಿಂದ ತಂದಿದ್ದರು. ಅದನ್ನು ಅಂತಾರಾಷ್ಟ್ರೀಯ ಪ್ಯಾರಾ ಒಲಿಂಪಿಕ್ ಸಮಿತಿ ಸರ್ಟಿಫೈ ಮಾಡಿರುತ್ತದೆ. ಅದೇ ಟಿಟ್ಟರ್ ಧರಿಸಿ ರಕ್ಷಿತಾ ರಾಜು 2018ರಲ್ಲೂ ಚಿನ್ನದ ಪದಕ ಗೆದ್ದಿದರು. ಈಗಲೂ ಚಿನ್ನದ ಪದಕ ಗೆದ್ದಿದ್ದಾರೆ. ಇದರ ಬೆಲೆ 5,500 ರೂ. ತಾನು ಓಡಿ 2 ಚಿನ್ನದ ಪದಕ ಗೆದ್ದ ಅಪರೂಪದ ಟಿಟ್ಟರ್ ಅನ್ನು ರಕ್ಷಿತಾ ರಾಜು ಪ್ರಧಾನಿ ಭೇಟಿ ವೇಳೆ ಮೋದಿಗೆ ನೀಡಿ ಖುಷಿಪಟ್ಟಿದ್ದಾರೆ. ಮೋದಿ ಕೂಡ ಸಂತಸಗೊಂಡಿದ್ದಾರೆ.

    ಟಿಟ್ಟರ್ ಹೇಗೆ ಕೆಲಸ ಮಾಡುತ್ತೆ?
    ಟಿಟ್ಟರ್ ಅಂದ್ರೆ ಅದೊಂದು ಮಾದರಿ ಹಗ್ಗದಂತೆ. ಅಂಧ ಓಟಗಾರರಿಗೂ ಹಾಗೂ ಅವರ ಜೊತೆ ಓಡುವವರಿಗೂ ಈ ಟಿಟ್ಟರ್ ಸಹಾಯ ಮಾಡುತ್ತೆ. ಅದು ಇಷ್ಟೆ ಉದ್ದ, ಇಷ್ಟೆ ಅಗಲ. ಇಷ್ಟೆ ದಪ್ಪ ಇರಬೇಕೆಂಬ ಹತ್ತಾರು ನಿಯಮಗಳಿವೆ. ಅದೇ ರೀತಿ ಈ ಟಿಟ್ಟರ್ ಇರಬೇಕು. ಅಂಧರ ಜೊತೆ ಓಡುವವರು ತಮ್ಮ ಕೈಗೆ ಹಾಕಿಕೊಂಡು ಅವರು ಓಡುವಂತೆಯೇ ಇವರು ಓಡಬೇಕು. ಅವರನ್ನು ಮುಟ್ಟುವಂತಿಲ್ಲ. ಎಳೆದುಕೊಂಡು ಓಡುವಂತಿಲ್ಲ. ಅಂಧರಿಗಿಂತ ಇವರೇ ಮೊದಲು ಓಡುವಂತಿಲ್ಲ. ಹೀಗೆ ಹತ್ತಾರು ನಿಯಮಗಳ ಮಧ್ಯೆ ಅಂಧ ಓಟಗಾರರು ಹಾಗೂ ಜೊತೆ ಓಟಗಾರರ ಮಧ್ಯೆ ಸಮಯೋಚಿತವಾಗಿ ಓಡಲು ಈ ಟಿಟ್ಟರ್ ಸಹಾಯ ಮಾಡುತ್ತೆ. ಅದನ್ನು ಅಂತಾರಾಷ್ಟ್ರೀಯ ಪ್ಯಾರಾ ಒಲಿಂಪಿಕ್ಸ್ ಸಮಿತಿ ಸರ್ಟಿಫೈ ಮಾಡಿರುತ್ತೆ. ಅದನ್ನೇ ಧರಿಸಬೇಕು. ಅಂಧ ಓಟಗಾರರ ಓಟಕ್ಕೆ ಈ ಟಿಟ್ಟರ್ ಇಲ್ಲ ಅಂದ್ರೆ ಅವರಿಗೆ ಓಡಲು ಅವಕಾಶ ನೀಡುವುದಿಲ್ಲ. ಅಂತಹಾ ಟಿಟ್ಟರ್ ಅನ್ನು ರಕ್ಷಿತಾ ರಾಜು ಪ್ರಧಾನಿ ಮೋದಿಗೆ ಉಡುಗೊರೆ ನೀಡಿದ್ದಾರೆ. ಇದನ್ನೂ ಓದಿ: ಚಿಣ್ಣರ ಬಿಂಬ ಸಾಂಸ್ಕೃತಿಕ ಸಂಸ್ಥೆ ಮುಡಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ

    ರಕ್ಷಿತಾ ರಾಜು ಯಾರು? ಎಲ್ಲಿಯವರು?
    ಛಲಕ್ಕೆ ಮತ್ತೊಂದು ಹೆಸರೇ ರಕ್ಷಿತಾ ರಾಜು. ಸಾಧಿಸುವ ಛಲವೊಂದಿದ್ದರೆ ಅಂಗವಿಕಲತೆ ತೃಣಕ್ಕೆ ಸಮ ಅನ್ನೋದಕ್ಕೆ ಈ ರಕ್ಷಿತಾ ರಾಜು ಜೀವಂತ ಸಾಕ್ಷಿ. ಆತ್ಮ ವಿಶ್ವಾಸವೊಂದಿದ್ದರೆ ಸಾಧನೆಗೆ ಅಂಗವಿಕಲತೆ ಕಾರಣವಲ್ಲ ಅನ್ನೋದನ್ನು ಈಕೆ ಸಾಬೀತು ಮಾಡಿದ್ದಾರೆ. ರಕ್ಷಿತಾ ಮೂಲತಃ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಬಾಳೂರು ಹೋಬಳಿ ಸಮೀಪದ ಗುಡ್ನಳ್ಳಿಯವರು. ಹುಟ್ಟಿನಿಂದಲೇ ಕಣ್ಣು ಕಾಣಿಸದ ಈಕೆ ಅಂಗವಿಕಲತೆಯನ್ನು ಮೆಟ್ಟಿ ನಿಂತು ಸಾಧಿಸಬಲ್ಲೆ ಎಂಬ ಛಲದಿಂದ ಇಂದು ದೇಶ ಹಾಗೂ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ಕಳೆದ ತಿಂಗಳು ಚೀನಾದ ಹಾಂಗೌಜ್‌ನಲ್ಲಿ ನಡೆದ 4ನೇ ಏಷ್ಯನ್ ಪ್ಯಾರಾ ಒಲಿಂಪಿಕ್ ಕ್ರೀಡಾಕೂಟದಲ್ಲಿ 1,500 ಮೀ ಓಟವನ್ನು 5 ನಿಮಿಷ 21.45 ಸೆಕೆಂಡಿನಲ್ಲಿ ಓಡಿ ಚಿನ್ನ ಗೆದ್ದು ಕಾಡಂಚಿನ ಕುಗ್ರಾಮ ಗಡ್ನಳ್ಳಿಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿದ್ದಾರೆ. ಈ ಯುವತಿ ಗುಡ್ನಳ್ಳಿಯ ರಾಜು-ಗೀತಾ ಪುತ್ರಿ. ಬಾಲ್ಯದಲ್ಲಿಯೇ ಹೆತ್ತವರನ್ನು ಕಳೆದುಕೊಂಡ ಈಕೆ ಮಾತು ಬಾರದ ಅಜ್ಜಿ ಲಲಿತಮ್ಮಳ ಆಶ್ರಯದಲ್ಲಿ ಬೆಳೆದು ಅಂಗವಿಕಲತೆ ಮೆಟ್ಟಿ ನಿಂತರು. ಅಜ್ಜಿಯ ಸಹಕಾರದಲ್ಲಿ ಬೆಳೆದು ಇಂದು ದೇಶಕ್ಕೆ ಹೆಮ್ಮೆಯ ಯುವತಿಯಾಗಿದ್ದಾರೆ.

    ಶಾಲೆಯಲ್ಲಿ ಓದಿಸೋದು ಕಷ್ಟವಾಗಿತ್ತು:
    ಕಣ್ಣು ಕಾಣದ ರಕ್ಷಿತಾಗೆ ಅಜ್ಜಿ ಸಬಲೆಯಾಗಿಸಲು ಚಿಕ್ಕಂದಿನಿಂದಲೇ ಹೋರಾಡಿದ್ದಾರೆ. ಪ್ರಾಥಮಿಕ ಶಿಕ್ಷಣಕ್ಕೆ ಬಾಳೂರು ಸಮೀಪದ ವಾಟೇಕಾನ್ ಸರ್ಕಾರಿ ಪ್ರಾಥಮಿಕ ಶಾಲೆಗೆ ಸೇರಿಸಿದ್ದರು. ಆದರೆ ಆಕೆಗೆ ಕಣ್ಣು ಕಾಣದ ಕಾರಣ ಆ ಶಾಲೆಯಲ್ಲಿ ಅಂಧತ್ವದ ಮಕ್ಕಳಿಗೆ ಕಲಿಸುವುದು ಕಷ್ಟವಾಗಿತ್ತು. ಆಕೆಗೆ ಎರವಲು ಮಾರ್ಗದರ್ಶನದ ಅಗತ್ಯತೆಯನ್ನು ಮನಗಂಡ ಅದೇ ಶಾಲೆ ಶಿಕ್ಷಕಿ ಸಿಂತಿಯಾ ಪಾಯ್ಸ್ ರಕ್ಷಿತಾಳನ್ನು ಚಿಕ್ಕಮಗಳೂರಿನ ಕೆಂಪನಹಳ್ಳಿಯ ಅಂಧ ಮಕ್ಕಳ ಆಶಾಕಿರಣ ಶಾಲೆಗೆ ಸೇರಿಸಿದರು. ಅಲ್ಲಿಂದ ರಕ್ಷಿತಾಳ ಕತ್ತಲೆಯೊಳಗಿನ ಬೆಳಕಿನ ಬದುಕು ಆರಂಭವಾಗಿತ್ತು. ಪ್ರಾಥಮಿಕ ಶಿಕ್ಷಣ ಮುಗಿಸುವುದರ ಜೊತೆ ಕ್ರೀಡಾಸಕ್ತಿಯನ್ನೂ ಬೆಳೆಸಿಕೊಂಡ ರಕ್ಷಿತಾಗೆ ದೈಹಿಕ ಶಿಕ್ಷಕ ಪಿ ಮಂಜು ಆಕೆಯ ಆಸಕ್ತಿ ಹಾಗೂ ಸಾಧನೆಯ ಬೆನ್ನಿಗೆ ನಿಂತರು. ಆಕೆಯ ಸಾಧನೆ ಗುರುತಿಸಿದ ಶಿಕ್ಷಕರು ರಕ್ಷಿತಾಳನ್ನು ಬೆಂಗಳೂರಿನ ರೈಲ್ವೆ ಉದ್ಯೋಗಿ, ಕ್ರೀಡಾ ತರಬೇತುದಾರ ರಾಹುಲ್ ಬಾಲಕೃಷ್ಣ ಹಾಗೂ ಸಹಾಯಕ ಕೋಚ್ ಸೌಮ್ಯ ಮತ್ತು ಗೈಡ್ ರನ್ನರ್ಸ್ ಗೋವಿಂದ್, ತಬರೇಶ್ ಬಳಿ 2014 ರಲ್ಲಿ ತರಬೇತಿಗೆ ಕಳಿಸಿದ್ದರು.

    2017ರಿಂದ ಪದಕಗಳ ಬೇಟೆ ಆರಂಭ:
    ಬೆಂಗಳೂರಿನಲ್ಲಿ ತರಬೇತಿ ಬಳಿಕ 2017ರಲ್ಲಿ ಪ್ಯಾರಿಸ್‌ನಲ್ಲಿ ಟಿ11 ವಿಭಾಗದಲ್ಲಿ 1,500 ಮೀ. ಓಟವನ್ನು 5 ನಿಮಿಷ 26 ಸೆಕೆಂಡುಗಳಲ್ಲಿ ಕ್ರಮಿಸಿ ಭರವಸೆಯ ಓಟಗಾರ್ತಿಯಾಗಿದ್ದರು. 2018ರಲ್ಲಿ ಇಂಡೋನೇಷ್ಯಾದ ಜಕಾರ್ತದ ಪ್ಯಾರಾ ಒಲಿಂಪಿಕ್ ಕ್ರೀಡಾಕೂಟದಲ್ಲಿ 1,500 ಮೀ. ಓಟವನ್ನು 5 ನಿಮಿಷ 40 ಸೆಕೆಂಡುಗಳಲ್ಲಿ ಕ್ರಮಿಸಿ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದರು. ಈಕೆಯ ಓಟಕ್ಕೆ ಚಿನ್ನದ ಪದಕದ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ, ನಟ ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್ ಅವರು ಮೆಚ್ಚುಗೆ ಸೂಚಿಸಿದ್ದರು. 2022ರಲ್ಲಿ ನವದೆಹಲಿ ಹಾಗೂ ಪುಣೆಯಲ್ಲಿ ನಡೆದ ಕ್ರೀಡಾಕೂಟದಲ್ಲೂ ಚಿನ್ನದ ಪದಕ ಗೆದ್ದಿದ್ದರು. 2023ರ ಫೆಬ್ರವರಿಯಲ್ಲಿ ದುಬೈನಲ್ಲಿ ನಡೆದ ಶಾರ್ಜಾ ಅಂತಾರಾಷ್ಟ್ರೀಯ ಮುಕ್ತ ಪ್ಯಾರಾ ಒಲಿಂಪಿಕ್ಸ್‌ನಲ್ಲಿ 1,500 ಮೀ. ಓಟದಲ್ಲಿ ಬೆಳ್ಳಿ ಪದಕ ಪಡೆದಿದ್ದರು. ಬೆಂಗಳೂರಿನಲ್ಲಿ ನಡೆದ 400 ಮೀ., 1,500 ಮೀ. ಓಟದಲ್ಲೂ ಬೆಳ್ಳಿ ಪದಕ ಪಡೆದು, ಕಳೆದ ಜುಲೈನಲ್ಲಿ ಪ್ಯಾರಿಸ್‌ನಲ್ಲಿ ನಡೆದ ಪ್ಯಾರಾ ಅಥ್ಲೆಟಿಕ್ ವಿಶ್ವ ಚಾಂಪಿಯನ್ ಸ್ಪರ್ಧೆಯಲ್ಲಿ ರಕ್ಷಿತಾ ರಾಜು 5ನೇ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು. ಛಲ ಮುಂದುವರಿಸಿದ ರಕ್ಷಿತಾ ಮತ್ತೊಮ್ಮೆ ಚಿನ್ನದ ಬೇಟೆಗಾಗಿ ಕಾದಿದ್ದರು. ಇದೇ ಅಕ್ಟೋಬರ್‌ನಲ್ಲಿ ಚೀನಾದ ಹಾಂಗೌಜ್‌ನಲ್ಲಿ ನಡೆದ ಏಷ್ಯನ್ ಪ್ಯಾರಾ ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಪಡೆಯುವ ಕನಸು ನನಸಾಯಿತು. ಚಿನ್ನ ಗೆದ್ದ ರಕ್ಷಿತಾಗೆ ಬುಧವಾರದಂದು ಪ್ರಧಾನಿ ನರೇಂದ್ರ ಮೋದಿಯವರು ಅಭಿನಂದನೆ ಸಲ್ಲಿಸಿದ್ದಾರೆ. ರಕ್ಷಿತಾ ಪ್ರಸ್ತುತ ಕೆಆರ್ ಪುರಂ ಸರ್ಕಾರಿ ಪದವಿ ಕಾಲೇಜಿನಲ್ಲಿ ಪ್ರಥಮ ಬಿಎ ಓದುತ್ತಿದ್ದಾರೆ. ಅಂತಾರಾಷ್ಟೀಯ ಮಟ್ಟದ ಕ್ರೀಡೆಯಲ್ಲಿ ದೇಶದ ಹೆಸರನ್ನು ಮಾತ್ರವಲ್ಲ ರಾಜ್ಯಕ್ಕೂ ಅದರಲ್ಲೂ ಕಾಫಿನಾಡಿಗೂ ಹೆಮ್ಮೆ ತಂದ ಕೀರ್ತಿ ರಕ್ಷಿತಾ ರಾಜುಗೆ ಸಲ್ಲುತ್ತದೆ. ಇದನ್ನೂ ಓದಿ: ಕೊಡಗಿನ 19,000ಕ್ಕೂ ಅಧಿಕ ಮಹಿಳೆಯರಿಗೆ ʻಗೃಹಲಕ್ಷ್ಮಿʼ ಸಿಕ್ಕಿಲ್ಲ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಗೃಹ ಸಚಿವರ ಜನ್ಮದಿನಕ್ಕೆ ನಾಟಿ ಹಸುವಿನ ಉಡುಗೊರೆ

    ಗೃಹ ಸಚಿವರ ಜನ್ಮದಿನಕ್ಕೆ ನಾಟಿ ಹಸುವಿನ ಉಡುಗೊರೆ

    ತುಮಕೂರು: ಗೃಹ ಸಚಿವ ಜಿ.ಪರಮೇಶ್ವರ್ (G.Parameshwar) ಅವರ ಹುಟ್ಟುಹಬ್ಬಕ್ಕೆ (Birthday) ಅಭಿಮಾನಿಗಳೊಬ್ಬರು ನಾಟಿ ಹಸುವಿನ  ಕರುವನ್ನು (Calf) ಉಡುಗೊರೆ (Gift) ನೀಡಿ ಗಮನ ಸೆಳೆದಿದ್ದಾರೆ.

    ಕೊರಟಗೆರೆ (Koratagere) ತಾಲೂಕಿನ ತೋವಿನಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗಿರಿಜಮ್ಮ ರಾಮಕೃಷ್ಣ ದಂಪತಿ ಕರುವಿನ ಗಿಫ್ಟ್ ಕೊಟ್ಟಿದ್ದಾರೆ. ಕರು ಸ್ವೀಕರಿಸಿದ ಜಿ.ಪರಮೇಶ್ವರ್ ಪತ್ನಿ ಕನ್ನಿಕಾ, ಕರುವಿಗೆ ಹೂವಿನ ಹಾರ ಹಾಕಿ, ಧಾನ್ಯ ತಿನ್ನಿಸಿ, ಲಕ್ಷ್ಮಿ ಎಂದು ಸಂಬೋಧಿಸಿ ಮಂಗಳಾರತಿ ಬೆಳಗಿಸಿ ಪೂಜೆ ಮಾಡಿದ್ದಾರೆ. ಇದನ್ನೂ ಓದಿ: ಸೌಜನ್ಯ ಪ್ರಕರಣದ ರಹಸ್ಯಗಳನ್ನು ಬಿಚ್ಚಿಟ್ರೆ ನನ್ನನ್ನೂ ಸಾಯಿಸ್ಬೋದು: ವಸಂತ ಬಂಗೇರ

    ಪರಮೇಶ್ವರ್ ದಂಪತಿ ಗೋ ಪೂಜೆ ಮಾಡುವುದು ಇದೇ ಮೊದಲಲ್ಲ. ಕಳೆದ ಜನವರಿಯಲ್ಲಿ ಚಿಕ್ಕತೊಟ್ಟಲುಕೆರೆ ಮಠದಲ್ಲಿ ನಡೆದ ದನಗಳ ಜಾತ್ರೆಯಲ್ಲಿ ಗೋ ಪೂಜೆ ಮಾಡಿ ಗಮನ ಸೆಳೆದಿದ್ದರು. ರಾಜ್ಯ ಕಾಂಗ್ರೆಸ್ ಸರ್ಕಾರ ಗೋ ಹತ್ಯೆ ನಿಷೇಧ ಕಾನೂನು ರದ್ದು ಮಾಡಲು ಚಿಂತಿಸಿರುವ ಈ ವೇಳೆ ಪರಮೇಶ್ವರ್ ದಂಪತಿ ಗೋ ಪೂಜೆ ಮಾಡುವುದು ಚರ್ಚೆಗೆ ಕಾರಣವಾಗಿದೆ. ಇದನ್ನೂ ಓದಿ:ಸೊಂಟದ ನೋವು ಬಿಟ್ರೆ ಬೇರೆ ಏನೂ ಸಮಸ್ಯೆ ಆಗಿಲ್ಲ: ವೃಕ್ಷ ಮಾತೆಯ ಹೆಲ್ತ್ ಅಪ್ಡೇಟ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸಾಕುನಾಯಿ ಚಾರ್ಲಿ ಹುಟ್ಟುಹಬ್ಬಕ್ಕಾಗಿ ಬರೋಬ್ಬರಿ 16 ಲಕ್ಷ ರೂ. ಮೌಲ್ಯದ ಮನೆ ಉಡುಗೊರೆ ನೀಡಿದ ಮಾಲೀಕ

    ಸಾಕುನಾಯಿ ಚಾರ್ಲಿ ಹುಟ್ಟುಹಬ್ಬಕ್ಕಾಗಿ ಬರೋಬ್ಬರಿ 16 ಲಕ್ಷ ರೂ. ಮೌಲ್ಯದ ಮನೆ ಉಡುಗೊರೆ ನೀಡಿದ ಮಾಲೀಕ

    ನವದೆಹಲಿ: ಹೆಚ್ಚಿನವರು ತಮ್ಮ ಜನ್ಮದಿನವನ್ನು ಕೇಕ್ ಕತ್ತರಿಸುವ ಮೂಲಕ ಆಚರಿಸುವುದಲ್ಲದೇ ಆತ್ಮೀಯರಿಂದ ಉಡುಗೊರೆಗಳನ್ನು ಸ್ವೀಕರಿಸುತ್ತಾರೆ. ಆದರೆ ಅಚ್ಚರಿಯೆಂಬಂತೆ ತಮ್ಮ ಮನೆಯ ನಾಯಿಗೆ ಮಾಲೀಕನೊಬ್ಬ ಸುಮಾರು 16 ಲಕ್ಷ ರೂ. ಬೆಲೆಬಾಳುವ ಮನೆ ನಿರ್ಮಿಸುವ ಮೂಲಕ ಅದರ ಬರ್ತ್‌ಡೇಗೆ ವಿಶೇಷವಾದ ಉಡುಗೊರೆ ನೀಡಿದ್ದಾರೆ.

    ಮನೆಯಲ್ಲಿರುವ ನಾಯಿಗೆ 20,000 ಡಾಲರ್ (ಅಂದಾಜು 16.4 ಲಕ್ಷ ರೂ.) ಮೌಲ್ಯದ ಮನೆಯನ್ನು ಉಡುಗೊರೆ ನೀಡುವ ವಿಡಿಯೋ ಯೂಟ್ಯೂಬ್‌ನಲ್ಲಿ (Youtube) ವೈರಲ್ ಆಗಿದೆ. ಈ ವಿಡಿಯೋವನ್ನು ನೋಡಿದ ಅನೇಕ ವೀಕ್ಷಕರು ಮನೆಯ ಬಗ್ಗೆ ಅಸೂಯೆ ಪಟ್ಟಿದ್ದು, ಅನೇಕರ ಮನಗೆದ್ದಿದೆ. ಬ್ರೆಂಟ್ ರಿವೆರಾ ಎಂಬ ವ್ಯಕ್ತಿ ಈ ವಿಡಿಯೋವನ್ನು ಯೂಟ್ಯೂಬ್ ಅಲ್ಲಿ ಹಂಚಿಕೊಂಡಿದ್ದಾರೆ. ಕೆಲವೇ ದಿನಗಳಲ್ಲಿ ತಮ್ಮ ಸಾಕುನಾಯಿಯಾದ ಚಾರ್ಲಿಯ ಜನ್ಮದಿನ (Birthday) ಆಚರಿಸಲಿದ್ದು, ಅದಕ್ಕಾಗಿ ಏನಾದರೂ ವಿಶೇಷ ಉಡುಗೊರೆ (Gift) ನೀಡಬೇಕು ಎಂದು ರಿವೆರಾ ಯೋಚಿಸಿದ್ದಾರೆ. ಈ ಹಿನ್ನೆಲೆ ಚಾರ್ಲಿಗೆ ಸುಂದರ ಮನೆಯೊಂದನ್ನು ನಿರ್ಮಿಸಿದ್ದಾರೆ. ಇದನ್ನೂ ಓದಿ: ಒಡಿಶಾ ರೈಲು ದುರಂತಕ್ಕೆ ಕೋಮು ಬಣ್ಣ – ಪೊಲೀಸರಿಂದ ಖಡಕ್ ಎಚ್ಚರಿಕೆ

    ತನ್ನ ಸ್ನೇಹಿತನ ಸಹಾಯ ಪಡೆದು ಚಾರ್ಲಿಗೆ ಹೊಸದೊಂದು ಮನೆ ನಿರ್ಮಿಸಿದ್ದು, ಮನೆಯು ಪ್ರತ್ಯೇಕ ಮಲಗುವ ಕೋಣೆ, ವಾಸದ ಕೋಣೆ ಮತ್ತು ಹಿತ್ತಲನ್ನು ಒಳಗೊಂಡಿದೆ. ಅಷ್ಟೇ ಅಲ್ಲದೇ ಮನೆಯು ಟಿವಿಯನ್ನು ಒಳಗೊಂಡಿದ್ದು, ಅಳಿಲುಗಳ ಚಿತ್ರಣವನ್ನು ತೋರಿಸುತ್ತದೆ. ಅದರೊಂದಿಗೆ ಚಾರ್ಲಿಗೆ ಮಲಗಲು ಪ್ರತ್ಯೇಕ ಬೆಡ್‌ವೊಂದನ್ನು ಅಳವಡಿಸಲಾಗಿದೆ. ಚಾರ್ಲಿಗೆ ಬೇಜಾರಾಗದಂತೆ ಅದರೊಂದಿಗೆ ಆಡಲು ಮತ್ತು ಅದರ ಸೇವೆಯನ್ನು ಮಾಡಲು ಒಬ್ಬ ವ್ಯಕ್ತಿಯನ್ನು ನೇಮಿಸಲಾಗಿದೆ. ಇದನ್ನೂ ಓದಿ: ಮದುವೆಯಾಗಿ ಕೊಠಡಿ ಸೇರಿದ ನವದಂಪತಿ ಶವವಾಗಿ ಪತ್ತೆ – ಇಬ್ಬರಿಗೂ ಹೃದಯಾಘಾತ!

    ಚಾರ್ಲಿಯ ಹುಟ್ಟುಹಬ್ಬದ ಪಾರ್ಟಿಗೆ ಅದರ ಗೆಳೆಯರ ಬಳಗವನ್ನು ಕೂಡಾ ರಿವೆರಾ ಆಹ್ವಾನಿಸಿದ್ದಾರೆ. ಅಲ್ಲದೇ ಚಾರ್ಲಿಗೆ ಮತ್ತೊಂದು ಉಡುಗೊರೆ ಎಂಬಂತೆ ಪುಟ್ಟ ನಾಯಿಯನ್ನು ಕೂಡಾ ನೀಡಿದ್ದಾರೆ. 10 ನಿಮಿಷಗಳ ಈ ವಿಡಿಯೋ 70 ಲಕ್ಷ ವೀಕ್ಷಣೆ ಕಂಡಿದೆ. ಇದನ್ನೂ ಓದಿ: ಇಂಟರ್‌ಲಾಕ್ ಸಿಸ್ಟಮ್ ಸಮಸ್ಯೆಯಿಂದ ರೈಲು ಅಪಘಾತ ಸಂಭವಿಸಿದೆ – ರೈಲ್ವೇ ಸಚಿವ ಅಶ್ವಿನಿ ವೈಷ್ಣವ್

  • ‘ದಿ ಕೇರಳ ಸ್ಟೋರಿ’ ತಂಡಕ್ಕೆ ಭರ್ಜರಿ ಉಡುಗೊರೆ ನೀಡಿದ ಯೋಗಿ ಆದಿತ್ಯನಾಥ್

    ‘ದಿ ಕೇರಳ ಸ್ಟೋರಿ’ ತಂಡಕ್ಕೆ ಭರ್ಜರಿ ಉಡುಗೊರೆ ನೀಡಿದ ಯೋಗಿ ಆದಿತ್ಯನಾಥ್

    ದಾ ಶರ್ಮಾ ಮುಖ್ಯ ಭೂಮಿಕೆಯ ದಿ ಕೇರಳ ಸ್ಟೋರಿ (The Kerala Story) ಅಡೆತಡೆಗಳ ನಡುವೆಯೂ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ರಿಲೀಸ್ ಆದ ಐದೇ ದಿನಕ್ಕೆ 50 ಕೋಟಿ ರೂಪಾಯಿ ಬಾಚಿದೆ ಎಂದು ಹೇಳಲಾಗುತ್ತಿದೆ. ಈ ನಡುವೆಯೇ ಚಿತ್ರತಂಡವು ಉತ್ತರ ಪ್ರದೇಶದ (Uttar Pradesh) ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಅವರನ್ನು ಭೇಟಿ ಮಾಡಿ, ತಮ್ಮ ಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡಿದಕ್ಕೆ ಧನ್ಯವಾದಗಳನ್ನು ತಿಳಿಸಿದೆ.

    ಯೋಗಿ ಆದಿತ್ಯನಾಥ್ ಅವರನ್ನು ಭೇಟಿ ಮಾಡಿದ ನಿರ್ದೇಶಕ ಸುದಿಪ್ತೊ ಸೇನ್, ನಿರ್ಮಾಪಕ ವಿಫುಲ್ ಅಮೃತ್ ಲಾಲ್ ಶಾ ಹಾಗೂ ನಟಿ ಅದಾ ಶರ್ಮಾ (Adah Sharma) ಅವರಿಗೆ ಉತ್ತರ ಪ್ರದೇಶ ಸರಕಾರದಿಂದ ಸರ್ವ ರೀತಿಯ ಸಹಕಾರವನ್ನು ನೀಡಲಾಗುವುದು ಎಂದು ಇದೇ ಸಂದರ್ಭದಲ್ಲಿ ಆದಿತ್ಯನಾಥ್ ತಿಳಿಸಿದ್ದಾರೆ. ಹೀಗಾಗಿ ಚಿತ್ರತಂಡಕ್ಕೆ ಆನೆಬಲ ಬಂದಂತಾಗಿದೆ. ಈ ಖುಷಿಯನ್ನು ಚಿತ್ರತಂಡ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ.

    ಈ ಖುಷಿಯ ಬೆನ್ನಲ್ಲೇ ಸುಪ್ರೀಂ ಕೋರ್ಟ್ ಚಿತ್ರತಂಡಕ್ಕೆ ಶಾಕ್ ಕೂಡ ನೀಡಿದೆ. ಪಶ್ಚಿಮ ಬಂಗಾಳ (West Bengal) ನಿಷೇಧಿಸಿರುವುದು ಹಾಗೂ ತಮಿಳುನಾಡಿನಲ್ಲಿ (Tamil Nadu) ನಿಷೇಧಕ್ಕೆ ಮುಂದಾಗಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸುವುದಾಗಿ ಸುಪ್ರೀಂ ಕೋರ್ಟ್ (Supreme Court) ಹೇಳಿದೆ. ಇದನ್ನೂ ಓದಿ:ನಾನ್ ವೆಜ್ ತಿನ್ನಲ್ಲ ಅಂತಾ ಹೇಳಿ ತಗ್ಲಾಕೊಂಡ ರಶ್ಮಿಕಾ ಮಂದಣ್ಣಗೆ ನೆಟ್ಟಿಗರಿಂದ ತರಾಟೆ

    ಭಾರತದ ಮುಖ್ಯ ನ್ಯಾಯಮೂರ್ತಿ (CJI) ಡಿವೈ ಚಂದ್ರಚೂಡ್ (DY Chandrachud) ನೇತೃತ್ವದ ಪೀಠವು ಈ ವಿಷಯವನ್ನು ಬುಧವಾರ ತುರ್ತು ಪಟ್ಟಿಗೆ ಸೇರಿಸಿದ ನಂತರ ಮೇ 12 ರಂದು ವಿಚಾರಣೆಗೆ ಮುಂದೂಡಿತು. ಅಲ್ಲದೆ ನ್ಯಾಯಮೂರ್ತಿ ಪಿಎಸ್ ನರಸಿಂಹ ಅವರನ್ನೊಳಗೊಂಡ ಪೀಠವು ಚಿತ್ರದ ಬಿಡುಗಡೆಗೆ ತಡೆ ನೀಡಲು ನಿರಾಕರಿಸಿದ್ದ ಕೇರಳ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಲು ಸೋಮವಾರ ಒಪ್ಪಿಕೊಂಡಿತ್ತು.

    ಚಲನಚಿತ್ರ ನಿರ್ಮಾಪಕ ಸನ್‍ಶೈನ್ ಪಿಕ್ಚರ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ವಿಪುಲ್ ಅಮೃತಲಾಲ್ ಶಾ ಅವರ ಪರ ಹಿರಿಯ ವಕೀಲ ಹರೀಶ್ ಸಾಳ್ವೆ ವಾದ ಮಂಡಿಸಿದ್ದಾರೆ. ಅವರು ನ್ಯಾಯಾಲಯದ ಮುಂದೆ ಪಶ್ಚಿಮ ಬಂಗಾಳ ಚಿತ್ರವನ್ನು ನಿಷೇಧ ಮಾಡಿರುವುದರಿಂದ ಆರ್ಥಿಕವಾಗಿ ನಷ್ಟವಾಗುತ್ತಿದೆ. ಅಲ್ಲದೆ ತಮಿಳುನಾಡು ಸಹ ಚಿತ್ರ ನಿಷೇಧಕ್ಕೆ ಮುಂದಾಗಿದೆ. ಚಿತ್ರವನ್ನು ನಿಷೇಧ ಮಾಡುತ್ತಿರುವುದು ಸವಿಂಧಾನದ 19 (1) (ಎ) ವಾಕ್ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ಯತ್ನ ಎಂದು ನ್ಯಾಯಾಲಯದ ಮುಂದೆ ಹೇಳಿಕೊಂಡಿದ್ದಾರೆ.

    ಚಿತ್ರ ನಿಷೇಧವು ಚಲನಚಿತ್ರದಿಂದ ಬರುವ ಆದಾಯವನ್ನು ಕಡಿತಗೊಳಿಸುವ ಉದ್ದೇಶದಿಂದ ಮಾಡಲಾಗಿದೆ. ಅಲ್ಲದೆ ಇದು ಚಲನಚಿತ್ರದ ಪೈರೇಟೆಡ್ ಡಿವಿಡಿಗಳಿಗೆ ಪ್ರಚೋದನೆಯನ್ನು ನೀಡುತ್ತದೆ ಎಂದು ನಿರ್ಮಾಪಕರು ದೂರಿದ್ದಾರೆ. ಚಲನಚಿತ್ರಗಳ (ನಿಯಂತ್ರಣ) ಕಾಯಿದೆಯ ಸೆಕ್ಷನ್ 6 (1) ಅಡಿಯಲ್ಲಿ ಶಾಂತಿ ಭಂಗವನ್ನು ಉಂಟುಮಾಡುವ ಸಾಧ್ಯತೆ, ದ್ವೇಷ ಮತ್ತು ಹಿಂಸಾಚಾರ ಸಾಧ್ಯತೆ ಸಲುವಾಗಿ ಪಶ್ಚಿಮ ಬಂಗಾಳ ಈ ಚಿತ್ರಕ್ಕೆ ನಿಷೇಧ ಹೇರಿತ್ತು.

  • ಮದುವೆಗೆ ಗಿಫ್ಟ್ ಬಂದಿದ್ದ ಮ್ಯೂಸಿಕ್ ಸಿಸ್ಟಮ್ ಬ್ಲಾಸ್ಟ್ – ನವವಿವಾಹಿತ ಸೇರಿ ಇಬ್ಬರು ಸಾವು

    ಮದುವೆಗೆ ಗಿಫ್ಟ್ ಬಂದಿದ್ದ ಮ್ಯೂಸಿಕ್ ಸಿಸ್ಟಮ್ ಬ್ಲಾಸ್ಟ್ – ನವವಿವಾಹಿತ ಸೇರಿ ಇಬ್ಬರು ಸಾವು

    ರಾಯ್ಪುರ: ಮದುವೆಯಲ್ಲಿ ಉಡುಗೊರೆಯಾಗಿ (Wedding Gift) ಪಡೆದಿದ್ದ ಹೋಮ್ ಥಿಯೇಟರ್ ಮ್ಯೂಸಿಕ್ ಸಿಸ್ಟಮ್ (Music System) ಸ್ಫೋಟಗೊಂಡಿದ್ದು, ನವವಿವಾಹಿತ ಮತ್ತು ಆತನ ಹಿರಿಯ ಸಹೋದರ ಸಾವನ್ನಪ್ಪಿರುವ ಘಟನೆ ಛತ್ತೀಸ್‌ಗಢದ (Chhattisgarh) ಕಬೀರ್ಧಾಮ್ ಜಿಲ್ಲೆಯಲ್ಲಿ ನಡೆದಿದೆ.

    ಸೋಮವಾರ ಈ ಘಟನೆ ನಡೆದಿದ್ದು, ಸ್ಫೋಟಕ್ಕೆ (Blast) ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಸ್ಫೋಟದ ಪರಿಣಾಮ ಹೋಮ್ ಥಿಯೇಟರ್ ಸಿಸ್ಟಮ್ ಅನ್ನು ಇರಿಸಲಾಗಿದ್ದ ಕೋಣೆಯ ಮೇಲ್ಛಾವಣಿ ಹಾಗೂ ಗೋಡೆಗಳೇ ಕುಸಿದು ಹೋಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯಲ್ಲಿ ಇನ್ನೂ ನಾಲ್ವರು ಗಾಯಗೊಂಡಿದ್ದಾರೆ.

    ವರದಿಗಳ ಪ್ರಕಾರ ಮೃತ ನವವಿವಾಹಿತ ವ್ಯಕ್ತಿ ಹೇಮೇಂದ್ರ ಮೇರಾವಿ (22) ಏಪ್ರಿಲ್ 1 ರಂದು ವಿವಾಹವಾಗಿದ್ದರು. ಸೋಮವಾರ ಹೇಮೇಂದ್ರ ಹಾಗೂ ಕುಟುಂಬದ ಇತರ ಸದಸ್ಯರು ತಮ್ಮ ಮನೆ ಕೋಣೆಯೊಳಗೆ ಮದುವೆಗೆ ಬಂದಿದ್ದ ಉಡುಗೊರೆಗಳನ್ನು ಬಿಚ್ಚುತ್ತಿದ್ದರು ಎನ್ನಲಾಗಿದೆ.

    ಉಡುಗೊರೆಗಳ ಪೈಕಿ ಹೋಮ್ ಥಿಯೇಟರ್ ಮ್ಯೂಸಿಕ್ ಸಿಸ್ಟಮ್ ಕೂಡಾ ಒಂದಾಗಿತ್ತು. ಅದರ ತಂತಿಯನ್ನು ಎಲೆಕ್ಟ್ರಿಕ್ ಬೋರ್ಡ್‌ಗೆ ಜೋಡಿಸಿ ಬಳಿಕ ಅದನ್ನು ಆನ್ ಮಾಡಿದಾಗ ಭಾರೀ ಸ್ಫೋಟ ಉಂಟಾಗಿದೆ. ಘಟನೆಯಲ್ಲಿ ಮೇರಾವಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಬಾಯ್‍ಫ್ರೆಂಡ್ ಬಿಡುವಂತೆ ಹೇಳಿದ ತಾಯಿಯನ್ನು ಕೊಲೆಗೈದ 14ರ ಮಗಳು!

     

    ಮೇರಾವಿ ಸಹೋದರ ರಾಜ್‌ಕುಮಾರ್ (30) ಮತ್ತು ಒಂದೂವರೆ ವರ್ಷದ ಬಾಲಕ ಸೇರಿದಂತೆ ಇತರ ನಾಲ್ವರಿಗೆ ಗಾಯಗಳಾಗಿದ್ದು, ಅವರನ್ನು ಕೌರಾದ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಚಿಕಿತ್ಸೆ ವೇಳೆ ಮೆರಾವಿ ಅವರ ಸಹೋದರ ಸಾವನ್ನಪ್ಪಿದ್ದಾರೆ. ಪ್ರಸ್ತುತ ಉಳಿದವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ವಿಷಯ ತಿಳಿದ ತಕ್ಷಣ ವಿಧಿವಿಜ್ಞಾನ ತಜ್ಞರೊಂದಿಗೆ ಪೊಲೀಸ್ ತಂಡ ಸ್ಥಳಕ್ಕೆ ತೆರಳಿದೆ. ಕೊಠಡಿಯನ್ನು ಪರಿಶೀಲಿಸಿದಾಗ ಸ್ಫೋಟಕ್ಕೆ ಕಾರಣವಾಗಿರುವ ಯಾವುದೇ ವಸ್ತು ಪತ್ತೆಯಾಗಿಲ್ಲ. ಮ್ಯೂಸಿಕ್ ಸಿಸ್ಟಮ್ ಮಾತ್ರವೇ ಕೋಣೆಯಲ್ಲಿ ಸ್ಫೋಟಗೊಂಡಿದ್ದು ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ರೆಂಗಾಖರ್ ಪೊಲೀಸ್ ಠಾಣೆಯ ಠಾಣಾಧಿಕಾರಿ ದುರ್ಗೇಶ್ ರಾವ್ಟೆ ತಿಳಿಸಿದ್ದಾರೆ. ಇದನ್ನೂ ಓದಿ: ಕ್ರ್ಯಾಶ್ ಟೆಸ್ಟ್‌ನಲ್ಲಿ 5 ಸ್ಟಾರ್ ಪಡೆದ ಫೋಕ್ಸ್‌ವ್ಯಾಗನ್ ವರ್ಟಸ್, ಸ್ಕೋಡಾ ಸ್ಲಾವಿಯಾ

  • ಟ್ರ್ಯಾಕ್ಟರ್, ಬರೋಬ್ಬರಿ 3 ಕೋಟಿ ಹಣವನ್ನೇ ಗಿಫ್ಟ್ ಪಡೆದ ವಧು!

    ಟ್ರ್ಯಾಕ್ಟರ್, ಬರೋಬ್ಬರಿ 3 ಕೋಟಿ ಹಣವನ್ನೇ ಗಿಫ್ಟ್ ಪಡೆದ ವಧು!

    ಜೈಪುರ: ವಧು ಒಬ್ಬಳು ಬರೋಬ್ಬರಿ 3 ಕೋಟಿ ಹಣವನ್ನು ಉಡುಗೊರೆಯಾಗಿ ಪಡೆದ ಅಚ್ಚರಿಯ ಘಟನೆ ರಾಜಸ್ಥಾನ (Rajasthan) ದಲ್ಲಿ ನಡೆದಿದೆ.

    ರಾಜಸ್ಥಾನದ ನಾಗೌರು ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಮೂವರು ವಯಸ್ಸಾದವರು ಹಣವನ್ನು ತಟ್ಟೆಯಲ್ಲಿ ಹಾಕಿ ತಲೆಯಲ್ಲಿ ಹೊತ್ತುಕೊಂಡು ಹೋಗುತ್ತಿರುವ ಫೋಟೋ ಸಾಮಾಜಿಕ ಜಾಲತಾಣ (Social Media) ಗಳಲ್ಲಿ ವೈರಲ್ ಆಗಿದೆ. ಇದನ್ನೂ ಓದಿ: 4 ತಿಂಗಳ ಹಿಂದಷ್ಟೆ ವಿವಾಹವಾಗಿದ್ದ ಯುವತಿ ಆತ್ಮಹತ್ಯೆ!

    ಘೇವರಿ ದೇವಿ ಮತ್ತು ಭನ್ವರ್ ಲಾಲ್ ಪೊಟಾಲಿಯಾ ಅವರ ಮಗಳ ಅನುಷ್ಕಾ ವಿವಾಹವಾದರು. ಈ ಸಂದರ್ಭದಲ್ಲಿ ಬುರ್ಡಿ ಗ್ರಾಮದ ನಿವಾಸಿ ವಧುವಿನ ತಾಯಿಯ ಅಜ್ಜ ಭನ್ವರ್ ಲಾಲ್ ಗರ್ವಾ ಮತ್ತು ಅವರ ಮೂವರು ಮಕ್ಕಳಾದ ಹರೇಂದ್ರ, ರಾಮೇಶ್ವರ ಮತ್ತು ರಾಜೇಂದ್ರ ಅವರ ಉಡುಗೊರೆಗಳನ್ನು ನೀಡಿದರು. ಇದನ್ನೂ ಓದಿ: 25 ವರ್ಷಗಳಿಂದ ಸೋಲಿಲ್ಲದ ಸರದಾರ – ಕರಾವಳಿಯ ವಾಜಪೇಯಿ!

    ಅಜ್ಜ ಮತ್ತು ಚಿಕ್ಕಪ್ಪಂದಿರು 80 ಲಕ್ಷ ರೂ. ನಗದು, ಆಭರಣ, ಪ್ಲಾಟ್ ಪೇಪರ್ಸ್, ಟ್ರ್ಯಾಕ್ಟರ್‍ನೊಂದಿಗೆ ಸಾಂಪ್ರದಾಯಿಕ ಆಚರಣೆಯ ಸಲುವಾಗಿ ತೆರಳಿದರು. ಇವರನ್ನು ನೆರೆದಿದ್ದ ಜನ ನೋದಿ ಒಂದು ಬಾರಿ ದಂಗಾಗಿ ಹೋದರು. ಕುಟುಂಬದಲ್ಲಿ ಘೇವರಿ ಒಬ್ಬಳೇ ಮಗಳಾಗಿದ್ದು, ಆಕೆಯ ಅದೃಷ್ಟದಿಂದ ವರ ಮೂವರು ಪುತ್ರರು ಇಷ್ಟೊಂದು ಸಂಪತ್ತನ್ನು ಪಡೆದಿದ್ದಾರೆ ಎಂದು ಭನ್ವರ್ ಲಾಲ್‌ ಹೇಳಿದ್ದಾರೆ.

  • ಪ್ರೀತಂ ಗೌಡರಿಂದ ಭರಪೂರ ಕೊಡುಗೆ – ಬಾಗಿನ ಹೆಸರಲ್ಲಿ ಸೀರೆ, ಬೆಳ್ಳಿಯ ದೇವರ ಫೋಟೋ ಹಂಚಿಕೆ

    ಪ್ರೀತಂ ಗೌಡರಿಂದ ಭರಪೂರ ಕೊಡುಗೆ – ಬಾಗಿನ ಹೆಸರಲ್ಲಿ ಸೀರೆ, ಬೆಳ್ಳಿಯ ದೇವರ ಫೋಟೋ ಹಂಚಿಕೆ

    ಹಾಸನ: ಜಿಲ್ಲೆಯಲ್ಲಿ ಚುನಾವಣೆ ಕಾವು ರಂಗೇರುತ್ತಿದ್ದು ಹಾಸನ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಪ್ರೀತಂ ಗೌಡರಿಂದ (Preetham Gowda) ಮತದಾರರಿಗೆ ಭರಪೂರ ಉಡುಗೊರೆ (Gift) ನೀಡಲಾಗುತ್ತಿದೆ.

    ಅಷ್ಟಲಕ್ಷ್ಮಿ ಪೂಜೆ, ಬಾಗಿನ ಎಂಬ ಹೆಸರಿನಲ್ಲಿ ಕ್ಷೇತ್ರದ ಮಹಿಳೆಯರಿಗೆ (Women) ಸೀರೆ, ಬೆಳ್ಳಿಯ ದೇವರ ಫೋಟೋ ಹಂಚುತ್ತಿದ್ದಾರೆ. ಮಹಿಳೆಯರಿಗೆ ಉಡುಗೊರೆ ಹಂಚುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದಲ್ಲದೇ ಬಿಜೆಪಿ (BJP) ಕಚೇರಿ ಬಳಿ ಗಿಫ್ಟ್ ಪಡೆಯಲು ಜನರು ಮುಗಿಬಿದ್ದಿದ್ದು, ಗಿಫ್ಟ್ ಪಡೆದ ಕೆಲವರು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದ್ದಾರೆ.

    ಚುನಾವಣೆ ಘೋಷಣೆಯಾದರೆ ನೀತಿ ಸಂಹಿತೆ ಅಡ್ಡಿಯಾಗುವ ಕಾರಣಕ್ಕೆ ಪ್ರತಿದಿನ ಒಂದೊಂದು ಪಂಚಾಯಿತಿ ವ್ಯಾಪ್ತಿಯಲ್ಲಿ ಕಾರ್ಯಕ್ರಮ ಆಯೋಜಿಸಿ ಉಡುಗೊರೆ ನೀಡಲಾಗುತ್ತಿದೆ. ಈ ಹಿಂದೆಯೂ ಗೌರಿ ಹಬ್ಬದ ಸಂದರ್ಭದಲ್ಲಿ ಮಹಿಳೆಯರಿಗೆ ಸೀರೆ, ಬಳೆ, ಕುಂಕುಮ, ಪುರುಷರಿಗೆ ಪಂಚೆ, ಶರ್ಟ್ ಅನ್ನು ಶಾಸಕ ಪ್ರೀತಂ ಗೌಡ ಉಡುಗೊರೆಯಾಗಿ ನೀಡಿದ್ದರು. ಇದನ್ನೂ ಓದಿ: EXCLUSIVE: ದೇವರ ದುಡ್ಡನ್ನೂ ಬಿಡದ ನಾಯಕರು- ಮುಜರಾಯಿ ಹಣದ ಮೇಲೆ ಬಿಜೆಪಿ ಶಾಸಕನ ಕಣ್ಣು

    ಇದೀಗ ಚುನಾವಣೆ ಹೊಸ್ತಿಲಲ್ಲಿ ಮತದಾರರನ್ನು ಓಲೈಸಲು ಪ್ರೀತಂ ಗೌಡ ದುಬಾರಿ ಉಡುಗೊರೆಗಳನ್ನು ನೀಡುತ್ತಿದ್ದಾರೆ. ಇದನ್ನೂ ಓದಿ: ವಿಧಾನಸೌಧದಲ್ಲಿನ ಎಣ್ಣೆ ಬಾಟ್ಲಿ ಹಿಂದಿನ ಕಥೆ ರಿವೀಲ್

  • ಜನರಿಗೆ ಉಚಿತ ಉಡುಗೊರೆ, ಆಮಿಷ ಒಡ್ಡಿ ಕಾನೂನು ಉಲ್ಲಂಘಿಸಿದ್ರೆ ಕ್ರಮಕೈಗೊಳ್ಳಿ: ಮುಖ್ಯ ಚುನಾವಣಾಧಿಕಾರಿ ಸೂಚನೆ

    ಜನರಿಗೆ ಉಚಿತ ಉಡುಗೊರೆ, ಆಮಿಷ ಒಡ್ಡಿ ಕಾನೂನು ಉಲ್ಲಂಘಿಸಿದ್ರೆ ಕ್ರಮಕೈಗೊಳ್ಳಿ: ಮುಖ್ಯ ಚುನಾವಣಾಧಿಕಾರಿ ಸೂಚನೆ

    ಬೆಂಗಳೂರು: ಜನಸಾಮಾನ್ಯರಿಗೆ ವಿವಿಧ ರೀತಿಯ ಉಚಿತ ಉಡುಗೊರೆ, ಆಮಿಷಗಳನ್ನು ಒಡ್ಡುವ ಮೂಲಕ ಕಾನೂನು ಉಲ್ಲಂಘಿಸಿದವರ ವಿರುದ್ಧ ಸಂಬಂಧಪಟ್ಟ ಇಲಾಖೆಗಳು ಕ್ರಮ ಕೈಗೊಳ್ಳುವಂತೆ ಮುಖ್ಯ ಚುನಾವಣಾಧಿಕಾರಿ ಮನೋಜ್‌ ಕುಮಾರ್‌ ಮೀನಾ ಅವರು ರಾಜ್ಯದ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

    ವಿವಿಧ ರಾಜಕೀಯ ಪಕ್ಷಗಳು ಜನಸಾಮಾನ್ಯರಿಗೆ ವಿವಿಧ ರೀತಿಯ ಉಚಿತ ಉಡುಗೊರೆ, ಆಮಿಷಗಳನ್ನು ಒಡ್ಡುತ್ತಿರುವುದು ಮಾಧ್ಯಮಗಳ ಮೂಲಕ ತಿಳಿದುಬಂದಿದೆ. ಈ ಕುರಿತಂತೆ ಸಂಬಂಧಪಟ್ಟ ಇಲಾಖೆಯ ಕಾನೂನು/ನಿಯಮಗಳಂತೆ ಕ್ರಮವಹಿಸಿ, ಕಾನೂನು ಉಲ್ಲಂಘಿಸಿದವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ತೆಗದುಕೊಳ್ಳುವಂತೆ ತಿಳಿಸಿದ್ದಾರೆ. ಇದನ್ನೂ ಓದಿ: Union Budget 2023 – ಮಧ್ಯ ಕರ್ನಾಟಕ, ಮಲೆನಾಡು, ಹಳೇ ಮೈಸೂರು ಮತಗಳ ಮೇಲೆ ಬಿಜೆಪಿ ಕಣ್ಣು

    ಮುಂಬರುವ ಸಾರ್ವತ್ರಿಕ ವಿಧಾನಸಭಾ ಚುನಾವಣೆಯ ಪೂರ್ವಸಿದ್ಧತೆಯ ಕುರಿತು ಮುಖ್ಯ ಚುನಾವಣಾಧಿಕಾರಿಗಳ ಅಧ್ಯಕ್ಷತೆಯಲ್ಲಿ ರಾಜ್ಯಮಟ್ಟದ ಅಧಿಕಾರಿಗಳು ಮತ್ತು ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳ ಮುಖ್ಯಸ್ಥರ ಸಭೆಯನ್ನು ಬುಧವಾರ ಹಮ್ಮಿಕೊಳ್ಳಲಾಗಿತ್ತು. ಸದರಿ ಸಭೆಯಲ್ಲಿ ಮುಂಬರುವ ಸಾರ್ವತ್ರಿಕ ವಿಧಾನಸಭಾ ಚುನಾವಣೆಯ ಕುರಿತು ಪೂರ್ವಸಿದ್ಧತೆ ಮಾಡಿಕೊಳ್ಳುವಂತೆ ಸಭೆಯಲ್ಲಿ ಹಾಜರಿದ್ದ ಅಧಿಕಾರಿಗಳಿಗೆ ಮುಖ್ಯ ಚುನಾವಣಾಧಿಕಾರಿಗಳು ಸೂಚನೆ ನೀಡಿದ್ದಾರೆ.

    ಮತದಾರರಿಗೆ ಮದ್ಯಪಾನ ಸೇರಿದಂತೆ ವಿವಿಧ ರೀತಿಯ ಉಡುಗೂರೆಗಳ ಆಮಿಷಗಳನ್ನು ಕೂಪನ್‍ಗಳ ಮೂಲಕ ವಿತರಿಸುತ್ತಿರುವ ಬಗ್ಗೆ ಸಹ ಮಾಧ್ಯಮಗಳ ಮೂಲಕ ವರದಿಯಾಗುತ್ತಿದೆ. ಕಳೆದ ವರ್ಷದ ಈ ಸಮಯದಲ್ಲಿ ಮಾರಾಟವಾದ ಮದ್ಯ ಹಾಗೂ ಪ್ರಸ್ತುತ ಈಗ ಮಾರಾಟವಾಗುತ್ತಿರುವ ಮದ್ಯ ಕುರಿತಂತೆ ಅಬಕಾರಿ ಇಲಾಖೆ ಕಟ್ಟುನಿಟ್ಟಿನ ನಿಗಾವಹಿಸಬೇಕು. ಅಂತರರಾಜ್ಯ ಚೆಕ್ ಪೋಸ್ಟ್‌ಗಳನ್ನು ತೆರೆಯಲು ಹೇಳಿದ್ದಾರೆ. ಇದನ್ನೂ ಓದಿ: ಭದ್ರಾ ಮೇಲ್ದಂಡೆ ಯೋಜನೆಗೆ ಬಜೆಟ್‍ನಲ್ಲಿ ಬಂಪರ್ – ಏನಿದು ಯೋಜನೆ? ಯಾರಿಗೆಲ್ಲ ಲಾಭ?

    ಸಮಾಜದಲ್ಲಿ ನಡೆಯುತ್ತಿರುವ ಆಮಿಷಗಳ ಕುರಿತಂತೆ ಸಂಬಂಧಿತ ಇಲಾಖೆಗಳು ತಮ್ಮಲ್ಲಿರುವ ಮಾಹಿತಿಯನ್ನು ಅಂತರ ಇಲಾಖಾ ಮಟ್ಟದಲ್ಲಿ ಹಂಚಿಕೊಳ್ಳುವ ಮೂಲಕ ಸುಗಮ ಚುನಾವಣೆಗೆ ಎಲ್ಲರೂ ಕರ್ತವ್ಯ ನಿರ್ವಹಿಸಬೇಕು. ವಿವಿಧ ಇಲಾಖೆಗಳ ಮೂಲಕ ಸ್ವೀಕರಿಸಲಾಗುವ ನೋಂದಾಯಿತ ಪ್ರಕರಣಗಳ ಕುರಿತು ಜಾರಿ ನಿರ್ದೇಶನಾಲಯ ಕ್ರಮ ಕೈಗೊಳ್ಳಲಿದೆ. ಹಣ ಮತ್ತು ಬಂಗಾರದಂತಹ ಬೆಲೆ ಬಾಳುವ ವಸ್ತುಗಳ ಸಾಗಾಣಿಕೆ ಮೇಲೆ ನಿಗಾವಹಿಸಬೇಕು. ಮಾದಕ ವಸ್ತುಗಳ ಸಾಗಾಣಿಕೆ, ಮಾರಾಟದ ಮೇಲೆ ಕಣ್ಣಿಡಬೇಕು. ಇದಕ್ಕೆ ಸಂಬಂಧಿಸಿದಂತೆ ರೈಲು, ಬಂದರು ಹಾಗೂ ವಿಮಾನ ನಿಲ್ದಾಣಗಳಲ್ಲಿ ಇದಕ್ಕಾಗಿ ವಿಶೇಷ ನೂಡಲ್ ಅಧಿಕಾರಿಗಳನ್ನು ನಿಯೋಜಿಸಬೇಕು ಎಂದು ಖಡಕ್ ಸೂಚನೆ ಕೊಟ್ಟಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಪತ್ನಿಗೆ ಇಷ್ಟವೆಂದು ಕತ್ತೆಯನ್ನೇ ಗಿಫ್ಟ್ ಮಾಡಿದ ಪತಿ

    ಪತ್ನಿಗೆ ಇಷ್ಟವೆಂದು ಕತ್ತೆಯನ್ನೇ ಗಿಫ್ಟ್ ಮಾಡಿದ ಪತಿ

    ಇಸ್ಲಾಮಾಬಾದ್: ಪಾಕಿಸ್ತಾನದ ಯೂಟ್ಯೂಬರ್ (Pakistani Youtuber) ಒಬ್ಬರು ತಮ್ಮ ಮದುವೆಯ ದಿನದಂದು ತನ್ನ ಪತ್ನಿಗೆ (Wife) ಕತ್ತೆಯನ್ನು (Donkey) ಉಡುಗೊರೆಯಾಗಿ (Gift) ನೀಡಿದ್ದಾರೆ.

    ಕರಾಚಿಯ ಯೂಟ್ಯೂಬರ್ ಅಜ್ಲಾನ್ ಶಾ ಅವರು ಆರತಕ್ಷತೆಯಲ್ಲಿ ಕತ್ತೆ ಮರಿಯೊಂದನ್ನು ತಂದು, ತನ್ನ ಪತ್ನಿಗೆ ಉಡುಗೊರೆಯಾಗಿ ನೀಡಿದ್ದಾರೆ. ಇದನ್ನು ನೋಡಿದ ಪತ್ನಿ ವಾರಿಷಾ ಮೊದಲು ಆಶ್ಚರ್ಯ ಹಾಗೂ ಸಂತೋಷಗೊಂಡಿದ್ದಾರೆ.

     

    View this post on Instagram

     

    A post shared by Azlan Shah (@azlanshahofficial)

    ವಾರಿಷಾ ಕತ್ತೆ ಮರಿಗಳನ್ನು ಪ್ರೀತಿಸುತ್ತಾಳೆ ಎಂದು ನನಗೆ ತಿಳಿದಿತ್ತು. ಈ ಹಿನ್ನೆಲೆಯಲ್ಲಿ ಆಕೆಗೆ ಮದುವೆಯ ಉಡುಗೊರೆಯಾಗಿ ಕತ್ತೆ ಮರಿಯನ್ನು ತಂದಿದ್ದೇನೆ. ಜೊತೆಗೆ ಕತ್ತೆಯೂ ವಿಶ್ವದ ಅತ್ಯಂತ ಶ್ರಮಶೀಲ ಹಾಗೂ ಪ್ರೀತಿಯ ಪ್ರಾಣಿಯಾಗಿದೆ ಎಂದು ಅಜ್ಲಾನ್ ಶಾ ತಿಳಿಸಿದರು. ವಾರಿಷಾಗೆ ಕತ್ತೆ ಮರಿಯನ್ನು ಉಡುಗೊರೆಯಾಗಿ ನೀಡಿದ್ದ ವಿಡಿಯೋವನ್ನು ಶಾ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ರಾತ್ರಿ 11 ಗಂಟೆ ನಂತ್ರ ಓಡಾಡಿದ್ದಕ್ಕೆ ದಂಪತಿಗೆ ದಂಡ ಹಾಕಿದ್ದ ಪೊಲೀಸರು ಸಸ್ಪೆಂಡ್‌

    ಈ ವೀಡಿಯೋದಲ್ಲಿ ಕತ್ತೆಯನ್ನು ಅಜ್ಲಾನ್ ಶಾ ವರಿಷಾಗೆ ನೀಡುತ್ತಿದ್ದಾರೆ. ಇನ್‍ಸ್ಟಾಗ್ರಾಮ್‍ನಲ್ಲಿ ಹಾಕಿರುವ ಫೋಟೋಕ್ಕೆ ನೆಟ್ಟಿಗರು ವಿವಿಧ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. ಒಬ್ಬಾತ ಒಂದು ಕತ್ತೆಯ ಜೊತೆ ಇನ್ನೊಂದು ಕತ್ತೆ ಫ್ರೀ ಎಂದು ತಿಳಿಸಿದ್ದಾರೆ. ಕತ್ತೆ ಮುಗ್ಧ ಪ್ರಾಣಿ ಎಂದು ಇನ್ನೊಬ್ಬಾತ ಕಾಮೆಂಟ್ ಮಾಡಿದ್ದಾರೆ. ಇದನ್ನೂ ಓದಿ: ಅಂಬೇಡ್ಕರ್‌ಗೆ ಅಪಮಾನ – ಮಹಾರಾಷ್ಟ್ರ ಸಚಿವ ಚಂದ್ರಕಾಂತ್ ಪಾಟೀಲ ಮುಖಕ್ಕೆ ಮಸಿ ಬಳಿದು ಆಕ್ರೋಶ

    Live Tv
    [brid partner=56869869 player=32851 video=960834 autoplay=true]

  • ಪಂಚಾಯತ್ ಚುನಾವಣೆಯಲ್ಲಿ ಸೋತ ವ್ಯಕ್ತಿಗೆ ಗ್ರಾಮಸ್ಥರೇ 2 ಕೋಟಿ ನಗದು, ಕಾರು ಉಡುಗೊರೆ ಕೊಟ್ರು

    ಪಂಚಾಯತ್ ಚುನಾವಣೆಯಲ್ಲಿ ಸೋತ ವ್ಯಕ್ತಿಗೆ ಗ್ರಾಮಸ್ಥರೇ 2 ಕೋಟಿ ನಗದು, ಕಾರು ಉಡುಗೊರೆ ಕೊಟ್ರು

    ಚಂಡೀಗಢ: ಪಂಚಾಯತ್ ಚುನಾವಣೆಯಲ್ಲಿ (Panchayat Elections) ಸ್ಪರ್ಧಿಸಿ ಸೋತ ವ್ಯಕ್ತಿಗೆ ಗ್ರಾಮಸ್ಥರೇ ಸನ್ಮಾನ ಮಾಡಿ, 2.11 ಕೋಟಿ ರೂ. ನಗದು ಹಾಗೂ ಸ್ಕಾರ್ಪಿಯೋ ಕಾರನ್ನು ಉಡುಗೊರೆ (Gift) ನೀಡಿರುವ ಆಶ್ಚರ್ಯಕರ ಘಟನೆ ಹರಿಯಾಣದ (Haryana) ರೋಹ್ಟಕ್ ಜಿಲ್ಲೆಯಲ್ಲಿ ನಡೆದಿದೆ.

    ಚಿರಿ ಗ್ರಾಮದ ನಿವಾಸಿಗಳು ಇತ್ತೀಚೆಗೆ ನಡೆದ ಪಂಚಾಯತ್ ಚುನಾವಣೆಯಲ್ಲಿ ಸರಪಂಚ್ ಹುದ್ದೆಗೆ ಸ್ಪರ್ಧಿಸಿ ಸೋತ ಗ್ರಾಮಸ್ಥನಿಗೆ ಭಾರೀ ಬಹುಮಾನ ನೀಡಿದ್ದಾರೆ. ಚುನಾವಣೆಯಲ್ಲಿ ಧರಂಪಾಲ್ ಅವರು ಕೇವಲ 66 ಮತಗಳಿಂದ ಸೋತಿದ್ದರು.

    ಶುಕ್ರವಾರ ಧರಂಪಾಲ್ ಅವರನ್ನು ಸನ್ಮಾನಿಸಲು ಗ್ರಾಮಸ್ಥರು ಅದ್ದೂರಿ ಸಮಾರಂಭವನ್ನೇ ಆಯೋಜಿಸಿದ್ದರು. ಕಾರ್ಯಕ್ರಮದಲ್ಲಿ ಧರಂಪಾಲ್ ಅವರಿಗೆ ಪೇಟ ತೊಡಿಸಿ, ಹಾರ ಹಾಕಿ ಸನ್ಮಾನವನ್ನೂ ಮಾಡಿದ್ದಾರೆ. ಇದನ್ನೂ ಓದಿ: ಸಿಎಂ ಮಂಗಳೂರಿನಲ್ಲಿ ಇರುವಾಗಲೇ ಸ್ಕೆಚ್ – ಟೈಮರ್ ಕೈಕೊಟ್ಟು ದಾರಿ ಮಧ್ಯೆ ಬಾಂಬ್ ಸ್ಫೋಟ

    MONEY

    ಅಷ್ಟಕ್ಕೂ ಚುನಾವಣೆಯಲ್ಲಿ ಸೋತ ವ್ಯಕ್ತಿಗೆ ಗ್ರಾಮಸ್ಥರು ಭಾರೀ ಬಹುಮಾನ ನೀಡಿದ್ದು ಆಶ್ಚರ್ಯಕರವೇ ಸರಿ. ಗ್ರಾಮದಲ್ಲಿ ಭಾವೈಕ್ಯತೆ ಕಾಪಾಡಲು ಈ ರೀತಿ ಮಾಡಿದ್ದೇವೆ. ಅಭ್ಯರ್ಥಿಯ ನೈತಿಕ ಸ್ಥೈರ್ಯ ಒಡೆಯಬಾರದು. ಅವರನ್ನು ಗೌರವಿಸಲು ಖಾಪ್ ಪಂಚಾಯತ್‌ನಲ್ಲಿ ಪ್ರಮುಖ ಹುದ್ದೆಯನ್ನು ನೀಡಲು ನಿರ್ಧರಿಸಿದ್ದೇವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಇದನ್ನೂ ಓದಿ: ಮಸ್ಕ್ ಸಮೀಕ್ಷೆಯಲ್ಲಿ ಟ್ರಂಪ್ ಪಾಸ್ – ಮತ್ತೆ ಸ್ಥಾಪನೆಯಾಗಲಿದೆ ಟ್ವಿಟ್ಟರ್ ಖಾತೆ

    ಧರಂಪಾಲ್ ಅವರು ಲಖನ್ ಮಜ್ರಾ ಬ್ಲಾಕ್ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಅವರ ತಾಯಿ ಮತ್ತು ಅಜ್ಜ ಚಿರಿ ಗ್ರಾಮದ ಸರಪಂಚರಾಗಿ ಸೇವೆ ಸಲ್ಲಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]