Tag: ಉಡುಗೊರೆ

  • ಅನುಷ್ಕಾ ಹುಟ್ಟುಹಬ್ಬಕ್ಕೆ ಭರ್ಜರಿ ಉಡುಗೊರೆಯನ್ನ ಕೊಟ್ಟ ಪ್ರಭಾಸ್

    ಅನುಷ್ಕಾ ಹುಟ್ಟುಹಬ್ಬಕ್ಕೆ ಭರ್ಜರಿ ಉಡುಗೊರೆಯನ್ನ ಕೊಟ್ಟ ಪ್ರಭಾಸ್

    ಹೈದರಾಬಾದ್: ಸೌಥ್ ಸಿನಿ ಇಂಡಸ್ಟ್ರಿಯ ಪ್ರಸಿದ್ಧ ಜೋಡಿ, ಕ್ಯೂಟ್ ಹೀರೋ-ಹೀರೋಯಿನ್ ಅನುಷ್ಕಾ ಶೆಟ್ಟಿ ಹಾಗೂ ಪ್ರಭಾಸ್ ಯಾವಾಗಲು ಒಂದಲ್ಲಾ ಒಂದು ವಿಷಯಕ್ಕೆ ಸುದ್ದಿ ಆಗುತ್ತಿರುತ್ತಾರೆ. ಅದರಲ್ಲೂ ‘ಬಾಹುಬಲಿ 2’ ಚಿತ್ರ ತೆರೆಕಂಡ ನಂತರ ಇವರಿಬ್ಬರ ಆಫ್‍ಸ್ಕ್ರೀನ್ ಕೆಮಿಸ್ಟ್ರಿ ಬಗ್ಗೆ ಗಾಸಿಪ್‍ಗಳು ಹೆಚ್ಚಾಗುತ್ತಲೇ ಇವೆ. ಸದ್ಯಕ್ಕೆ ಇಬ್ಬರ ನಡುವಿನ ಹೊಸ ಸಮಾಚಾರವೊಂದು ಟಾಲಿವುಡ್ ನಲ್ಲಿ ಹರಿದಾಡುತ್ತಿದೆ.

    ಇತ್ತೀಚೆಗೆ ನಟ ಪ್ರಭಾಸ್ 38ನೇ ಜನ್ಮದಿನವನ್ನು ಆಚರಿಸಿಕೊಂಡಿದ್ದರು. ಅವರಿಗೆ ಅನುಷ್ಕಾ ಶೆಟ್ಟಿ ಅವರು ಡಿಸೈನರ್ ವಾಚ್ ನ್ನು ಉಡೂಗರೆಯನ್ನಾಗಿ ನೀಡಿದ್ದರು. ಪ್ರಭಾಸ್‍ಗೆ ಡಿಸೈನರ್ ವಾಚ್ ಇಷ್ಟವಂತೆ. ಹೀಗಾಗಿ ಅನುಷ್ಕಾ ಪ್ರಭಾಸ್‍ಗೆ ವಾಚನ್ನೇ ಗಿಫ್ಟ್ ನೀಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ಸದ್ಯಕ್ಕೆ ಈ ಜೋಡಿ ಏನೇ ಮಾಡಿದರೂ ಅದು ಸುದ್ದಿ ಆಗುತ್ತದೆ. ಇವರ ಮೇಲೆ ಒಂದು ಕಣ್ಣಿಟ್ಟಿರುವ ಗಾಸಿಪ್ ಪಂಡಿತರ ಬಾಯಿಗೆ ಅಗೆಯೋದಕ್ಕೆ ಹೊಸ ತಾಂಬೂಲ ಸಿಕ್ಕಂತ್ತಾಗಿದೆ.

    ನವೆಂಬರ್ 7 ರಂದು ಅನುಷ್ಕಾ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಉಡುಗೊರೆಯಾಗಿ ಅವರಿಗೆ ಏನು ಕೊಡಬಹುದು ಎಂದು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದರು. ಈಗ ಬಾಹುಬಲಿ ಪ್ರಭಾಸ್ ಬಿಎಂಡಬ್ಲ್ಯು ಕಾರನ್ನು ಉಡುಗೊರೆಯಾಗಿ ಅನುಷ್ಕಾ ಅವರಿಗೆ ನೀಡಿದ್ದಾರೆ ಎಂಬ ಮಾತು ಟಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ.

    ಈ ಹಿಂದೆ ಪ್ರಭಾಸ್-ಅನುಷ್ಕಾ ಮಧ್ಯೆ ರಿಯಲ್ ಲವ್ ಇದೆ ಎಂಬ ಮಾತುಗಳು ಕೇಳಿ ಬಂದಿದ್ದವು. ಇಬ್ಬರೂ ಮದುವೆ ಆಗಲಿದ್ದಾರೆ ಎಂಬ ಸುದ್ದಿ ಜೋರಾಗಿ ಹಬ್ಬಿತ್ತು. ಇಂತಹ ಗಾಸಿಪ್‍ಗಳನ್ನು ಪ್ರಭಾಸ್ ನೇರವಾಗಿ ತಳ್ಳಿ ಹಾಕಿದ್ದರು. ಆದರೆ ಅಭಿಮಾನಿಗಳು ಮಾತ್ರ ಇವರ ನಡುವಿನ ರಿಲೆಷನ್ ಶಿಪ್ ಬಗ್ಗೆ ತಿಳಿಯಲು ಕಾತುರದಿಂದ ಕಾಯುತ್ತಿದ್ದಾರೆ.

    ಪ್ರಭಾಸ್ ಹುಟ್ಟುಹಬ್ಬಕ್ಕೆ `ಸಾಹೋ’ ಸಿನಿಮಾದಿಂದ ಫಸ್ಟ್ ಲುಕ್ ಬಿಡುಗಡೆ ಮಾಡಿತ್ತು. ಅದೆ ರೀತಿ ಅನುಷ್ಕಾ ಶೆಟ್ಟಿ ಅವರ ಹುಟ್ಟುಹಬ್ಬಕ್ಕೆ ಭಾಗಮತಿಯ ಸಿನಿಮಾದಿಂದ ಫಸ್ಟ್ ಲುಕ್ ಬಿಡುಗಡೆಯಾಗಿತ್ತು. ಸಾಹೋ ಸಿನಿಮಾದಲ್ಲಿ ಪ್ರಭಾಸ್‍ಗೆ ಜೋಡಿಯಾಗಿ ಅನುಷ್ಕಾ ಅಭಿನಯಿಸಬೇಕಿತ್ತು. ಆದರೆ ಕಾರಣಾಂತಗಳಿಂದ ಶ್ರದ್ಧಾ ಕಪೂರ್ ಪ್ರಭಾಸ್‍ಗೆ ಜೋಡಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಎರಡು ಸಿನಿಮಾಗಳು ಮುಂದಿನ ವರ್ಷ ತೆರೆಗೆ ಬರುವ ನಿರೀಕ್ಷೆಯಲ್ಲಿವೆ.

    ಇದನ್ನು ಓದಿ: ಹುಟ್ಟು ಹಬ್ಬದ ಸಂಭ್ರಮದಲ್ಲಿರೋ ಪ್ರಭಾಸ್‍ಗೆ ಅನುಷ್ಕಾ ಗಿಫ್ಟ್ ಕೊಟ್ಟಿದ್ದು ಏನು ಗೊತ್ತಾ?

    ಇದನ್ನು ಓದಿ: ತನ್ನ ಹುಟ್ಟುಹಬ್ಬದಂದು ಡ್ರೈವರ್ ಗೆ 12 ಲಕ್ಷದ ಕಾರನ್ನು ಉಡುಗೊರೆಯಾಗಿ ಕೊಟ್ಟ ಅನುಷ್ಕಾ ಶೆಟ್ಟಿ!

  • ತನ್ನ ಹುಟ್ಟುಹಬ್ಬದಂದು ಡ್ರೈವರ್ ಗೆ 12 ಲಕ್ಷದ ಕಾರನ್ನು ಉಡುಗೊರೆಯಾಗಿ ಕೊಟ್ಟ ಅನುಷ್ಕಾ ಶೆಟ್ಟಿ!

    ತನ್ನ ಹುಟ್ಟುಹಬ್ಬದಂದು ಡ್ರೈವರ್ ಗೆ 12 ಲಕ್ಷದ ಕಾರನ್ನು ಉಡುಗೊರೆಯಾಗಿ ಕೊಟ್ಟ ಅನುಷ್ಕಾ ಶೆಟ್ಟಿ!

    ಹೈದರಾಬಾದ್: ಭಾರತೀಯ ಚಿತ್ರರಂಗದಲ್ಲಿ ಬಾಹುಬಲಿ ಸಿನಿಮಾ ಇತಿಹಾಸ ಬರೆದಿದೆ. ಚಿತ್ರದಲ್ಲಿ ದೇವಸೇನಾ ಪಾತ್ರಕ್ಕೆ ಜೀವ ತುಂಬಿದ್ದ ಅನುಷ್ಕಾ ಶೆಟ್ಟಿ ಇಂದು ತಮ್ಮ 36 ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಬಾಹುಬಲಿ ಚಿತ್ರದಲ್ಲಿ ಮಾತ್ರವಲ್ಲದೇ ನಿಜ ಜೀವನದಲ್ಲೂ ರಾಜಕುಮಾರಿ ಆಗಿರುವ ಅನುಷ್ಕಾ ತಮ್ಮ ಹುಟ್ಟುಹಬ್ಬದಂದು ತಮ್ಮ ಕಾರಿನ ಡ್ರೈವರ್ ಗೆ 12 ಲಕ್ಷ ರೂ. ಮೌಲ್ಯದ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ.

    ಅನುಷ್ಕಾ ಒಟ್ಟು 140 ಕೋಟಿ ಆಸ್ತಿಯ ಒಡತಿಯಾಗಿದ್ದಾರೆ. ಅನುಷ್ಕಾ ತಮ್ಮ ಸಿನಿಮಾಗಳಿಗೆ 4 ರಿಂದ 5 ಕೋಟಿ ಸಂಭಾವನೆ ಪಡೆಯುತ್ತಾರೆ. ಈ ಹಣದಿಂದ ತಮ್ಮ ಸೀನಿಯರ್ ಡ್ರೈವರ್ ಗೆ 12 ಲಕ್ಷದ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ.

    ಅನುಷ್ಕಾ ತಮ್ಮ ಕಾರ್ ಡೈವರ್ ಅವರ ಕೆಲಸದ ಬಗ್ಗೆಯಿರುವ ನಿಷ್ಠೆಯನ್ನು ಇಷ್ಟಪಟ್ಟಿದ್ದಾರೆ. ನನಗೆ ಅವರು ಕಷ್ಟಪಟ್ಟು ಮಾಡುವ ಕೆಲಸ ಹಾಗೂ ಅವರು ನನ್ನನ್ನು ನೋಡಿಕೊಳ್ಳುವಂತಹ ರೀತಿ ಇಷ್ಟವಾಗಿದೆ. ಹಾಗಾಗಿ ನಾನು ಅವರಿಗೆ 12 ಲಕ್ಷದ ಕಾರನ್ನು ಉಡುಗೊರೆಯಾಗಿ ನೀಡಿದ್ದರಿಂದ ನನಗೆ ಖುಷಿಯಾಗಿದೆ ಎಂದು ಅನುಷ್ಕಾ ಶೆಟ್ಟಿ ಹೇಳಿದ್ದಾರೆ.

    ಇದನ್ನೂ ಓದಿ: ಹುಟ್ಟು ಹಬ್ಬದ ಸಂಭ್ರಮದಲ್ಲಿರೋ ಪ್ರಭಾಸ್‍ಗೆ ಅನುಷ್ಕಾ ಗಿಫ್ಟ್ ಕೊಟ್ಟಿದ್ದು ಏನು ಗೊತ್ತಾ?

    ಅನುಷ್ಕಾ ಅವರ ನಿಜವಾದ ಹೆಸರು ಸ್ವೀಟಿ ಶೆಟ್ಟಿ. ಕಾರಿನ ಬಗ್ಗೆ ತುಂಬಾ ಕ್ರೇಜ್ ಇರುವ ಅನುಷ್ಕಾ ಬಳಿ ಬಿಎಂಡಬ್ಲೂ 6, ಆಡಿ ಎ6, ಆಡಿ ಕ್ಯೂ5 ಮತ್ತು ಟೊಯೆಟಾ ಕೊರಲಾ ನಂತಹ ವಿಲಾಸಿ ಕಾರುಗಳಿವೆ.

  • ಭೂತಾನ್ ಪುಟ್ಟ ಯುವರಾಜನಿಗೆ ಚನ್ನಪಟ್ಟಣ ಗೊಂಬೆ ಗಿಫ್ಟ್ ಕೊಟ್ಟ ರಕ್ಷಣಾ ಸಚಿವೆ

    ಭೂತಾನ್ ಪುಟ್ಟ ಯುವರಾಜನಿಗೆ ಚನ್ನಪಟ್ಟಣ ಗೊಂಬೆ ಗಿಫ್ಟ್ ಕೊಟ್ಟ ರಕ್ಷಣಾ ಸಚಿವೆ

    ನವದೆಹಲಿ: ಮೊದಲ ಬಾರಿಗೆ ಭಾರತ ಪ್ರವಾಸಕ್ಕೆ ಆಗಮಿಸಿದ್ದ ಭೂತಾನ್ ದೊರೆ ಜಿಗ್ಮೆ ನಾಮ್‍ಗೆಲ್ ವಾಗ್ಚುಕ್ ಅವರ ಒಂದೂವರೆ ವರ್ಷದ ಪುತ್ರನಿಗೆ ರಕ್ಷಣಾ ಸಚಿವೆ ನಿರ್ಮಲಾ ಸಿತಾರಾಮನ್ ಕರ್ನಾಟಕದ ವಿಶ್ವಪ್ರಸಿದ್ಧ ಚನ್ನಪಟ್ಟಣ ಗೊಂಬೆಗಳನ್ನು ಉಡುಗೊರೆಯಾಗಿ ನೀಡಿದ್ದಾರೆ.

    ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ನಿರ್ಮಲಾ ಸೀತಾರಾಮನ್ ಅವರು ಚನ್ನಪಟ್ಟಣದ ಗೊಂಬೆಗಳನ್ನು ಉಡುಗೊರೆಯಾಗಿ ನೀಡುವ ಮೂಲಕ ರಾಜ್ಯದ ಕೀರ್ತಿಯನ್ನು ಇನ್ನಷ್ಟು ಹೆಚ್ಚುವಂತೆ ಮಾಡಿದ್ದಾರೆ.

    ಮಹಾರಾಜ, ರಾಣಿ ಮತ್ತು ಯುವ ರಾಜಕುಮಾರನ ಬಳಿ ಇದ್ದ ಚನ್ನಪಟ್ಟಣದ ಗೊಂಬೆಯನ್ನು ನೋಡಿದ್ದಾರೆ. ಚನ್ನಪಟ್ಟಣದ ಗೊಂಬೆಯಂತೆಯೇ ಇರುವ ಯುವರಾಜನನ್ನು ನೋಡಲು ಸಂತೋಷವಾಗುತ್ತದೆಂದು ಹರ್ಷ ವ್ಯಕ್ತಪಡಿಸಿ ನಿರ್ಮಾಲಾ ಸೀತಾರಾಮನ್ ಟ್ವೀಟ್ ಮಾಡಿದ್ದಾರೆ.

    ಬುಧವಾರ ರಾಜ ಪರಿವಾರದ ಗೌರವಾರ್ಥ ಪ್ರಧಾನಿ ನರೇಂದ್ರ ಮೋದಿ ಅವರು ಏರ್ಪಡಿಸಿದ್ದ ಓತಣಕೂಟದಲ್ಲಿ ಇತ್ತೀಚೆಗಷ್ಟೆ ಮುಕ್ತಾಯವಾದ 17 ವರ್ಷದೊಳಗಿನವರ ಫುಟ್ಬಾಲ್ ಪಂದ್ಯಾವಳಿಯ ಚೆಂಡೊಂದನ್ನು ಉಡುಗೊರೆಯನ್ನು ನೀಡಿದ್ದರು. ಈ ಓತಣ ಕೂಟದಲ್ಲೇ ಸಚಿವೆ ನಿರ್ಮಲಾ ಚನ್ನಪಟ್ಟಣದ ಗೊಂಬೆಯನ್ನು ಉಡುಗೊರೆಯಾಗಿ ನೀಡಿದ್ದಾರೆ.

    ಮೊದಲ ಬಾರಿಗೆ ಭಾರತಕ್ಕೆ ಬಂದ ಪುಟ್ಟ ಯುವರಾಜಕುಮಾರ ಎಲ್ಲರ ಗಮನ ಕೇಂದ್ರಿಕರಿಸಿದ್ದರು. ವಿಶೇಷವಾಗಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಭೂತಾನ್ ರಾಜನ ಪರಿವಾರವನ್ನು ಬರಮಾಡಿಕೊಳ್ಳಲು ವಿಮಾನ ನಿಲ್ದಾಣಕ್ಕೆ ಹೋಗಿ ಯುವರಾಜನ ಕೈಹಿಡಿದು ನಿಂತಿದ್ದ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

     

  • ಅರ್ಚಕ ಯುವಕರನನ್ನು ಮದ್ವೆಯಾದ್ರೆ ಸರ್ಕಾರದಿಂದ 3 ಲಕ್ಷ ರೂ. ಗಿಫ್ಟ್

    ಅರ್ಚಕ ಯುವಕರನನ್ನು ಮದ್ವೆಯಾದ್ರೆ ಸರ್ಕಾರದಿಂದ 3 ಲಕ್ಷ ರೂ. ಗಿಫ್ಟ್

    ಹೈದರಾಬಾದ್: ತೆಲಂಗಾಣ ರಾಜ್ಯ ಸರ್ಕಾರವು ದೇವಾಲಯಗಳಲ್ಲಿ ಅರ್ಚಕರಾಗಿ ಸೇವೆ ಸಲ್ಲಿಸುತ್ತಿರವ ಯುವಕರನ್ನು ಮದುವೆಯಾದರೆ ಮೂರು ಲಕ್ಷ ರೂ. ಹಣವನ್ನು ನೀಡುವ ಹೊಸ ಯೋಜನೆಯನ್ನು ಜಾರಿಗೊಳಿಸಿದೆ.

    ದೇವಾಲಯಗಳಲ್ಲಿ ಅರ್ಚರಕಾಗಿ ಸೇವೆ ಸಲ್ಲಿಸುತ್ತಿರುವ ಯುವಕರ ಆದಾಯ ಅತ್ಯಂತ ಕಡಿಮೆ ಎಂಬ ಕಾರಣದಿಂದ ಅವರನ್ನು ಮದುವೆಯಾಗಲು ಯಾರು ಒಪ್ಪುತ್ತಿಲ್ಲ ಎಂಬ ಕಾರಣಕ್ಕೆ `ಕಲ್ಯಾಣ ಮಸ್ತು’ ಯೋಜನೆಯನ್ನು ಮುಂದಿನ ತಿಂಗಳಿಂನಿಂದ ಆರಂಭಿಸುವುದಾಗಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಸರ್ಕಾರ ಮೊದಲು ಒಂದು ಲಕ್ಷ ರೂ.ಯನ್ನು ಮದುವೆಯ ಖರ್ಚಿಗಾಗಿ ನೀಡುತ್ತದೆ. ಮದುವೆ ಬಳಿಕ  ಉಳಿದ ಹಣವನ್ನು ದಂಪತಿಯ ಹೆಸರಿನಲ್ಲಿ ಜಂಟಿಯಾಗಿ ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ಸ್ಥಿರ ಠೇವಣಿಯನ್ನು ಇಡುತ್ತದೆ. ಈ ಹಣವು ಮೂರು ವರ್ಷಗಳ ನಂತರ ದಂಪತಿಗಳಿಗೆ ಕೈಸೇರುತ್ತದೆ.

    ಪ್ರಸ್ತುತ ದಿನಗಳಲ್ಲಿ ಹೆಣ್ಣು ಮಕ್ಕಳು ತಮ್ಮ ಮದುವೆಯ ವಿಚಾರದಲ್ಲಿ ಸ್ವತಂತ್ರರಾಗಿದ್ದು ತಮ್ಮ ಸಂಗತಿಯ ಆಯ್ಕೆಯಲ್ಲಿ ಹೆಚ್ಚು ಜಾಗೃತರಾಗಿದ್ದಾರೆ. ಸಾಪ್ಟ್ವೇರ್ ಇಂಜಿನಿಯರ್ ಯುವಕರ ಉದ್ಯೋಗದಲ್ಲೂ ಸ್ಥಿರತೆ ಇಲ್ಲದ ಕಾರಣ ಅವರ ಮದುವೆಯಾಗಲು ಕಷ್ಟವಾಗುತ್ತಿದೆ. ಇನ್ನೂ ದೇವಾಲಯಗಳಲ್ಲಿ ಅರ್ಚಕರಾಗಿ ಸೇವೆ ಸಲ್ಲಿಸುವ ಯುವಕರ ಆದಾಯ ಕಡಿಮೆ ಇರುವುದರಿಂದ ಸಮಾಜದಲ್ಲಿ ಗೌರವ ಸಿಗುತ್ತಿಲ್ಲ ಎಂದು ಸಿಎಂ ಸಲಹೆಗಾರರಾದ ಕೆ.ವಿ ರಮಣಚಾರಿ ಹೇಳಿದ್ದಾರೆ.

    ಹೆಣ್ಣು ಮಕ್ಕಳ ಪೋಷಕರು ಸಹ ಇಂತಹ ಯುವಕರಿಗೆ ತಮ್ಮ ಮಗಳನ್ನು ಕೊಟ್ಟು ಮದುವೆ ಮಾಡಲು ಇಷ್ಟಪಡುವುದಿಲ್ಲ, ಇದರಿಂದ ಹಲವು ಯುವಕರು ಮದುವೆಯಾಗದೆ ಉಳಿಯುತ್ತಿದ್ದಾರೆ. ಸರ್ಕಾರದ ಯೋಜನೆಯಿಂದ ಇಂತಹ ಯುವಕರ ಆರ್ಥಿಕ ಜೀವನ ಉತ್ತಮಗೊಳ್ಳಲಿದೆ. ಅಲ್ಲದೇ ಹೆಣ್ಣು ಮಕ್ಕಳ ಪೋಷಕರಿಗೆ ಉತ್ತಮ ಭಾವನೆ ಮೂಡಲಿದೆ ಎಂದು ತಿಳಿಸಿದರು.

    ತೆಲಂಗಾಣ ಸರ್ಕಾರವು ಈ ಯೋಜನೆಗೆ `ಕಲ್ಯಾಣ ಮಸ್ತು’ ಎಂಬ ಹೆಸರನ್ನು ಇಟ್ಟಿದ್ದು, ನವೆಂಬರ್ ತಿಂಗಳಿನಿಂದ ಅನುಷ್ಠಾನಗೊಳಿಸುತ್ತಿದೆ. ದಂಪತಿಯ ಮದುವೆಯಾದ ಮೂರು ವರ್ಷಗಳ ನಂತರ ಸ್ಥಿರ ಠೇವಣಿ ಹಣವು ಅವರ ಕೈಸೇರಲಿದ್ದು, ಅವರ ಮಕ್ಕಳ ಉತ್ತಮ ಜೀವನಕ್ಕೆ ಸಹಾಯಕವಾಗಲಿದೆ ಎಂಬುವುದೇ ಸರ್ಕಾರ ಉದ್ದೇಶವಾಗಿದೆ ಎಂದರು.

    ಅರ್ಚಕ ಯುವಕರಿಗೆ ತಮ್ಮ ಮಗಳನ್ನು ಕೊಟ್ಟು ಮದುವೆ ಮಾಡವು ಪೋಷಕರು ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದ್ದು, ವಧು-ವರರ ಸ್ವ ವಿವರಗಳನ್ನು ಅರ್ಜಿಯೊಂದಿಗೆ ನೀಡಬೇಕಿದೆ. ಸರ್ಕಾರವು ಈ ಯೋಜನೆಗೆ ವಾರ್ಷಿಕವಾಗಿ ಇಷ್ಟೇ ದಂಪತಿಗಳನ್ನು ಆಯ್ಕೆ ಮಾಡಲಾಗುತ್ತದೆ ಎಂಬ ಯಾವುದೇ ನಿಯಮವನ್ನು ವಿಧಿಸಿಲ್ಲ. ಅರ್ಹ ಎಲ್ಲಾ ದಂಪತಿಗಳೂ ಈ ಯೋಜನೆಯ ಸೌಲಭ್ಯವನ್ನು ಪಡೆಯಬಹುದಾಗಿದೆ.

  • ಮೋದಿಗೆ ನೆದರ್ಲ್ಯಾಂಡ್ಸ್ ಪ್ರಧಾನಿ ಕೊಟ್ಟ ಗಿಫ್ಟ್ ಏನು ಗೊತ್ತಾ?

    ಮೋದಿಗೆ ನೆದರ್ಲ್ಯಾಂಡ್ಸ್ ಪ್ರಧಾನಿ ಕೊಟ್ಟ ಗಿಫ್ಟ್ ಏನು ಗೊತ್ತಾ?

    ನವದೆಹಲಿ: ಪ್ರಧಾನಿ ಮೋದಿ ಮೂರು ದೇಶಗಳ ಪ್ರವಾಸ ಮುಗಿಸಿ ಬುಧವಾರದಂದು ಭಾರತಕ್ಕೆ ವಾಪಸ್ಸಾಗಿದ್ದಾರೆ.

    ಮೋದಿ ಭಾರತಕ್ಕೆ ಮರಳುವಾಗ ಒಂದು ಸೈಕಲ್ ಕೂಡ ಜೊತೆಯಲ್ಲಿ ತಂದಿದ್ದಾರೆ. ನೆದರ್ಲ್ಯಾಂಡ್ಸ್ ಪ್ರಧಾನಿ ಮಾರ್ಕ್ ರುಟ್ಟೆ ಮೋದಿಗೆ ಈ ಸೈಕಲ್ ಉಡುಗೊರೆಯಾಗಿ ನೀಡಿದ್ದಾರೆ. ಹೊಸ ಸೈಕಲ್‍ನೊಂದಿಗೆ ತೆಗೆಸಿಕೊಂಡಿರೋ ಫೋಟೋವನ್ನ ಮೋದಿ ಟ್ವಿಟ್ಟರ್‍ನಲ್ಲಿ ಹಂಚಿಕೊಂಡಿದ್ದು ಮಾರ್ಕ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ.

    ತಿಳಿ ನೀಲಿ ಬಣ್ಣದ ಈ ಬಟಾವಸ್ ಸೈಕಲ್‍ನಲ್ಲಿ ಮುಂಭಾಗದಲ್ಲಿರುವ ಎಲ್‍ಇಡಿ ದೀಪವಿದ್ದು, ಇದನ್ನು ಬೆಳಗಿಸಲು ನೆರವಾಗುವಂತೆ ಡೈನಮೋ ಅಳವಡಿಸಲಾಗಿದೆ.

    ನೆದರ್ಲ್ಯಾಂಡ್ಸ್ ನಲ್ಲಿ ಹೆಚ್ಚಾಗಿ ಜನ ಸಾರಿಗೆಗೆ ಸೈಕಲ್ ಬಳಸುತ್ತಾರೆ. ಅಂಕಿ ಅಂಶದ ಪ್ರಕಾರ ಶೇ. 36ರಷ್ಟು ಜನ ಸೈಕಲ್ ಬಳಸಲು ಇಷ್ಟಪಡುತ್ತಾರೆ ಎಂದು ವರದಿಯಾಗಿದೆ. ಅಲ್ಲದೆ ಸ್ವತಃ ಅಲ್ಲಿನ ಪ್ರಧಾನಿ ಮಾರ್ಕ್ ಕೂಡ ಕಚೇರಿಗೆ ಹೋಗಲು ಸೈಕಲ್ ಬಳಸುತ್ತಾರೆಂದು ವರದಿಯಾಗಿದೆ.

    ಮೋದಿ ಪೋರ್ಚುಗಲ್, ಅಮೆರಿಕ ಹಾಗೂ ನೆದರ್ಲ್ಯಾಂಡ್ಸ್ ಗೆ ಭೇಟಿ ನೀಡಿ ಇಂದು ವಾಪಸ್ಸಾಗಿದ್ದಾರೆ. ಇದೇ ಮೊದಲ ಬಾರಿಗೆ ವೈಟ್‍ಹೌಸ್‍ಗೆ ಭೇಟಿ ನೀಡಿದ ಮೋದಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್‍ಗಾಗಿ ಸುಂದರ ಕೆತ್ತನೆಯುಳ್ಳ ಮರದ ಪೆಟ್ಟಿಗೆಯನ್ನ ಉಡುಗೊರೆಯಾಗಿ ನೀಡಿದ್ರು. ಹಾಗೆ ಮೆಲಾನಿಯಾ ಟ್ರಂಪ್‍ಗಾಗಿ ಕಾಶ್ಮೀರಿ ಶಾಲ್, ಹಿಮಾಚಲ ಪ್ರದೇಶದ ಬೆಳ್ಳಿ ಬ್ರೇಸ್‍ಲೆಟ್, ಟೀ ಹಾಗೂ ಜೇನುತುಪ್ಪವನ್ನ ಉಡುಗೊರೆಯಗಿ ನೀಡಿದ್ದಾರೆ.