Tag: ಉಡ

  • ಸಾಕು ನಾಯಿ ಬಿಟ್ಟು ಉಡ ಬೇಟೆಯಾಡ್ತಿದ್ದವನ ಬಂಧನ

    ಸಾಕು ನಾಯಿ ಬಿಟ್ಟು ಉಡ ಬೇಟೆಯಾಡ್ತಿದ್ದವನ ಬಂಧನ

    ಚಾಮರಾಜನಗರ: ಸಾಕು ನಾಯಿಗಳ ಸಹಾಯದಿಂದ ಉಡ ಬೇಟೆಯಾಡುತ್ತಿದ್ದ ಇಬ್ಬರು ಆರೋಪಿಗಳ ಪೈಕಿ, ಒರ್ವನನ್ನು ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದ್ದಾರೆ.

    ಕೊಳ್ಳೇಗಾಲ ತಾಲ್ಲೂಕಿನ ಸತ್ತೇಗಾಲ ಸಮೀಪದ ಜಾಗೇರಿಯ ರಾಶಿಬೋಳನದೊಡ್ಡಿ ಗ್ರಾಮದ ಪ್ರವೀಣ್ ಬಂಧಿತ ಆರೋಪಿ. ಮತ್ತೋರ್ವ ಆರೋಪಿಯಾದ ರಮೇಶ್ ಪರಾರಿಯಾಗಿದ್ದಾನೆ. ಮಹದೇಶ್ವರ ವನ್ಯಧಾಮ ಜಾಗೇರಿ ಅರಣ್ಯ ಪ್ರದೇಶದಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮರವನ್ನು ಅರಣ್ಯಾಧಿಕಾರಿಗಳು ಪರಿಶೀಲಿಸಿದಾಗ ಆರೋಪಿಗಳ ಕೃತ್ಯ ಬೆಳಕಿಗೆ ಬಂದಿದೆ.

    ಮೇ 20 ರಂದು ಆರೋಪಿಗಳಾದ ಪ್ರವೀಣ್ ಹಾಗೂ ರಮೇಶ್ ಅಕ್ರಮವಾಗಿ ಅರಣ್ಯದೊಳಗೆ ಪ್ರವೇಶ ಮಾಡಿ ಸಾಕು ನಾಯಿಗಳ ಮೂಲಕ ಉಡವನ್ನು ಭೇಟೆಯಾಡಿ ಸ್ಥಳದಿಂದ ಪರಾರಿಯಾಗಿದ್ದರು. ಈ ದೃಶ್ಯಗಳು ಅರಣ್ಯ ಇಲಾಖೆ ಅಧಿಕಾರಿಗಲು ಅಳವಡಿಸಿದ್ದ ಕ್ಯಾಮರದಲ್ಲಿ ಸೆರೆಯಾಗಿತ್ತು. ದೃಶ್ಯಗಳನ್ನು ಪರಿಶೀಲನೆ ನಡೆಸಿದ ಬಳಿಕ ಎಚ್ಚೆತ್ತ ಅರಣ್ಯ ಇಲಾಖೆ ಅಧಿಕಾರಿಗಳು ಆರೋಪಿಗಳಿದ್ದ ಸತ್ತೇಗಾಲ ಸಮೀಪದ ಜಾಗೇರಿಯ ರಾಶಿಬೋಳನದೊಡ್ಡಿ ತೆರಳಿ ದಾಳಿ ನಡೆಸಿದಾಗ ಪ್ರವೀಣ್ ಸಿಕ್ಕಿಬಿದಿದ್ದಾನೆ. ಆದರೆ ಈ ವೇಳೆ ರಮೇಶ್ ಪರಾರಿಯಾಗಿದ್ದಾನೆ. ಘಟನೆ ಸಂಬಂಧ ಅರಣ್ಯ ಇಲಾಖೆ ಪ್ರಕರಣ ದಾಖಲಿಸಿಕೊಂಡಿದ್ದು, ಪರಾರಿಯಾಗಿರುವ ಆರೋಪಿ ರಮೇಶ್ ಬಂಧನಕ್ಕಾಗಿ ಕ್ರಮಕೈಗೊಂಡಿದ್ದಾರೆ.

  • ಬೆಂಗ್ಳೂರಿನಲ್ಲಿ ಉಡಕ್ಕೆ ಫುಲ್ ಡಿಮ್ಯಾಂಡ್ – ರಾಜಸ್ಥಾನದಿಂದ ರಾಜಧಾನಿಗೆ ಅಕ್ರಮ ಸಾಗಾಟ

    ಬೆಂಗ್ಳೂರಿನಲ್ಲಿ ಉಡಕ್ಕೆ ಫುಲ್ ಡಿಮ್ಯಾಂಡ್ – ರಾಜಸ್ಥಾನದಿಂದ ರಾಜಧಾನಿಗೆ ಅಕ್ರಮ ಸಾಗಾಟ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಉಡಕ್ಕೆ ಫುಲ್ ಡಿಮ್ಯಾಂಡ್ ಇದ್ದು, ರಾಜಸ್ಥಾನದಿಂದ ಬೆಂಗಳೂರಿಗೆ ಉಡಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿರುವುದು ಅರಣ್ಯಾಧಿಕಾರಿಗಳ ಗಮನಕ್ಕೆ ಬಂದಿದೆ.

    ನಗರದ ಕೋರಮಂಗಲದಲ್ಲಿ ಅಕ್ರಮವಾಗಿ ಉಡ ಸಾಗಾಣೆ ಮಾಡುವವರನ್ನು ಬಂಧಿಸಿ ಸುಮಾರು ಹತ್ತು ಉಡಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ರಿಯಲ್ ಎಸ್ಟೇಟ್ ಉದ್ಯಮಿಗಳಿಂದ ಈ ಜೀವಿಗೆ ಭರ್ಜರಿ ಡಿಮ್ಯಾಂಡ್ ಶುರುವಾಗಿದ್ದು, ಅದೃಷ್ಟದ ಸಂಕೇತವಾಗಿ ಉದ್ಯಮಿಗಳು ಉಡಗಳಿಗಾಗಿ ಬೇಡಿಕೆ ಇಡುತ್ತಿದ್ದಾರೆ. ಅಷ್ಟೇ ಅಲ್ಲದೆ ಲೈಂಗಿಕ ಶಕ್ತಿ ವೃದ್ಧಿಸುವ ಔಷಧದಲ್ಲಿ ಈ ಉಡದ ರಕ್ತವನ್ನು ಬಳಕೆ ಮಾಡಲಾಗುತ್ತಿದೆ ಎಂಬ ಮಾಹಿತಿ ಕೂಡ ಲಭ್ಯವಾಗಿದೆ.

    ಉದ್ಯಮಿಗಳು ಮಾತ್ರವಲ್ಲ ಕೆಲ ಹೋಟೆಲ್‍ನವರು ಕೂಡ ಉಡದ ಮಾಂಸಕ್ಕೆ ಬೇಡಿಕೆ ಇಡುತ್ತಿದ್ದು, ಅಪರೂಪದ ಉಡ ಜನರ ದುರಾಸೆಗೆ ಪ್ರಾಣ ಕಳೆದುಕೊಳ್ಳುತ್ತಿದೆ ಅಂತಾ ಅರಣ್ಯಾಧಿಕಾರಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ.