Tag: ಉಜಿರೆ

  • ವೀಡಿಯೋ ಮಾಡಲು ಹೋಗಿ ಎಡವಟ್ಟು- ಭಾರೀ ಅನಾಹುತದಿಂದ ಪೊಲೀಸ್ ಪಾರು

    ವೀಡಿಯೋ ಮಾಡಲು ಹೋಗಿ ಎಡವಟ್ಟು- ಭಾರೀ ಅನಾಹುತದಿಂದ ಪೊಲೀಸ್ ಪಾರು

    ಮಂಗಳೂರು: ಅಜಾಗರೂಕತೆಯಿಂದ ವೀಡಿಯೋ ಮಾಡಲು ಹೋದ ಟ್ರಾಫಿಕ್ ಪೊಲೀಸ್ ಅಪಾಯದಿಂದ ಗ್ರೇಟ್ ಎಸ್ಕೇಪ್ ಆದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ-ಉಜಿರೆ ರಸ್ತೆಯಲ್ಲಿ ನಡೆದಿದೆ.

    ಸದ್ಯ ಇದರ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಅಟೋ ಚಾಲಕನಿಗೆ ಫೈನ್ ಹಾಕುವಾಗ ಪೊಲೀಸರು ಏಕವಚನದಲ್ಲಿ ಮಾತನಾಡಿದ್ದಾರೆ. ಈ ವೇಳೆ ಆಟೋ ಚಾಲಕ ಏಕವಚನದಲ್ಲಿ ಮಾತನಾಡಬೇಡಿ, ಬೇಕಿದ್ರೆ ಫೈನ್ ಹಾಕಿ ಎಂದಿದ್ದಾರೆ. ಅಲ್ಲದೆ ಪೊಲೀಸರನ್ನ ಪ್ರಶ್ನಿಸಿ ಅಟೋ ಪ್ರಯಾಣಿಕರು ವೀಡಿಯೋ ಮಾಡಿದ್ದಾರೆ. ಈ ವೇಳೆ ಪೊಲೀಸ್ ಕಾನ್ಸ್ ಸ್ಟೇಬಲ್ ಕೂಡ ವೀಡಿಯೋ ಮಾಡಿದ್ದಾರೆ.

    ವೀಡಿಯೋ ಮಾಡುತ್ತಾ ಪೊಲೀಸ್ ರಸ್ತೆ ಮಧ್ಯೆ ಹೋಗಿದ್ದಾರೆ. ಈ ವೇಳೆ ಪೊಲೀಸ್ ಕಾರಿನ ಹಿಂಬದಿ ಚಕ್ರಕ್ಕೆ ಕಾಲು ಸಿಲುಕಿ ಬಿದ್ದಿದ್ದು, ಭಾರೀ ಅನಾಹುತದಿಂದ ಪಾರಾಗಿದ್ದಾರೆ.

  • 9 ದಿನದ ಹಿಂದೆ ನಾಪತ್ತೆ – ಉಜಿರೆ ಯುವತಿಯ ಶವ ಕಾಡಿನಲ್ಲಿ ಪತ್ತೆ

    9 ದಿನದ ಹಿಂದೆ ನಾಪತ್ತೆ – ಉಜಿರೆ ಯುವತಿಯ ಶವ ಕಾಡಿನಲ್ಲಿ ಪತ್ತೆ

    ಮಂಗಳೂರು: ಕಳೆದ ಒಂಬತ್ತು ದಿನದ ಹಿಂದೆ ನಾಪತ್ತೆಯಾಗಿದ್ದ ಬೆಳ್ತಂಗಡಿ ತಾಲೂಕಿನ ಉಜಿರೆ ಯುವತಿಯ ಮೃತದೇಹ ಇಂದು ಕಾಡಿನಲ್ಲಿ‌ ಪತ್ತೆಯಾಗಿದೆ.

    ಉಜಿರೆ‌ ಮನೆಯೊಂದರಲ್ಲಿ ಕೆಲಸ‌ ಮಾಡಿಕೊಂಡು ಕಂಪ್ಯೂಟರ್‌ ಶಿಕ್ಷಣ ಪಡೆಯುತ್ತಿದ್ದ 23 ವರ್ಷದ ತೇಜಸ್ವಿನಿ ಕಳೆದ ಒಂಬತ್ತು ದಿನದಿಂದ ನಾಪತ್ತೆಯಾಗಿದ್ದಳು. ತಾಯಿ‌ ಮನೆಗೆ ಹೋಗಿ ಬರುವುದಾಗಿ  ಹೇಳಿದ್ದ ತೇಜಸ್ವಿನಿ ಆ ಬಳಿಕ ನಾಪತ್ತೆಯಾಗಿದ್ದಳು.

    ಇಂದು ಬೆಳ್ತಂಗಡಿಯ ಕೊಲೋಡಿ ಕಾಡಿನಲ್ಲಿ ತೇಜಸ್ವಿನಿಯ ಮೃತದೇಹ ಪತ್ತೆಯಾಗಿದ್ದು,ಈಕೆ ರಾಸಾಯನಿಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಒಂದು ಫೋನ್ ಕರೆಯಿಂದ ಉಜಿರೆ ಕಿಡ್ನಾಪರ್ಸ್ ಅರೆಸ್ಟ್

    ಒಂದು ಫೋನ್ ಕರೆಯಿಂದ ಉಜಿರೆ ಕಿಡ್ನಾಪರ್ಸ್ ಅರೆಸ್ಟ್

    – ಆರು ಆರೋಪಿಗಳ ಬಂಧನ
    – ಪೊಲೀಸರ ಕಾರ್ಯಾಚರಣೆಗೆ ವ್ಯಾಪಕ ಪ್ರಶಂಸೆ

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತಲ್ಲಣ ಮೂಡಿಸಿದ್ದ ಉಜಿರೆಯ ಬಾಲಕನ ಕಿಡ್ನಾಪ್ ಪ್ರಕರಣ ಸುಖಾಂತ್ಯ ಕಂಡಿದೆ.

    ಡಿ.17ರ ಸಂಜೆ 6.15ರ ಹೊತ್ತಿಗೆ ಉಜಿರೆಯ ರಥಬೀದಿಯಲ್ಲಿರುವ ತನ್ನ ಮನೆಯ ಮುಂಭಾಗದಿಂದ ಕಿಡ್ನಾಪ್ ಆಗಿದ್ದ ಎಂಟು ವರ್ಷದ ಬಾಲಕ ಅನುಭವ್ ಸುರಕ್ಷಿತವಾಗಿ ತಾಯಿ ಮಡಿಲು ಸೇರಿದ್ದಾನೆ. ಆರೋಪಿಗಳ ಸುಳಿವು ಸಿಗದೆ 30 ಗಂಟೆಗಳ ಕಾಲ ತಲೆಕೆಡಿಸಿಕೊಂಡಿದ್ದ ಪೊಲೀಸ್ ತಂಡಗಳಿಗೆ ಆ ಒಂದು ಫೋನ್ ಕಾಲ್ ಆರೋಪಿಗಳನ್ನು ಪತ್ತೆ ಹಚ್ಚೋಕೆ ನೆರವಾಗಿತ್ತು. ಇಂದು ಮುಂಜಾನೆ 3 ರಿಂದ 4 ಗಂಟೆಯ ಒಳಗಡೆ ದಾಳಿ ಮಾಡಿದ ಪೊಲೀಸ್ ತಂಡ 6 ಮಂದಿ ಆರೋಪಿಗಳ ಹೆಡೆಮುರಿ ಕಟ್ಟಿ ಬಾಲಕ ಅನುಭವ್ ನನ್ನು ರಕ್ಷಣೆ ಮಾಡಿದೆ.

    ಆ ಒಂದು ಫೋನ್ ಕರೆ ಕೊಟ್ಟಿತ್ತು ಸುಳಿವು:
    ಆರೋಪಿಗಳ ಸುಳಿವು ಸಿಗದೆ ನಿನ್ನೆ ರಾತ್ರಿವರೆಗೂ ತಲೆಕೆಡಿಸಿಕೊಂಡಿದ್ದ ಬೆಳ್ತಂಗಡಿ ಪೊಲೀಸರು, ಮುಂಜಾನೆ ವೇಳೆಗೆ ಆರೋಪಿಗಳನ್ನು ಬಂಧಿಸಿ ಬಾಲಕನನ್ನು ರಕ್ಷಣೆ ಮಾಡಲು ಯಶಸ್ವಿಯಾಗಿದ್ದಾರೆ. ಡಿ.17ರ ಸಂಜೆ ಬಾಲಕ ಅನುಭವ್ ಕಿಡ್ನಾಪ್ ಆದ ಬಳಿಕ ಅನುಭವ್ ತಾಯಿಗೆ ಅನಾಮಧೇಯ ವ್ಯಕ್ತಿಯಿಂದ ಕಾಲ್ ಬಂದಿತ್ತು. ಈ ವೇಳೆ ವ್ಯಕ್ತಿ 100 ಬಿಟ್ ಕಾಯಿನ್ ಅಂದ್ರೆ 17 ಕೋಟಿ ರೂಪಾಯಿಗೆ ಬೇಡಿಕೆ ಇಟ್ಟಿದ್ದ. ಆ ನಂತರ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಬಳಿಕ ಬಾಲಕನ ತಂದೆ ಬಿಜೋಯ್‍ಗೆ ವ್ಯಕ್ತಿ ವಾಟ್ಸಪ್ ಚಾಟ್ ಮಾಡುತ್ತಿದ್ದ.

    ಹಣದ ಬೇಡಿಕೆಯನ್ನು ಹತ್ತು ಕೋಟಿಗಿಳಿಸಿ, ಮಾಧ್ಯಮ ಮತ್ತು ಪೊಲೀಸ್ ದೂರಿನ ಬಗ್ಗೆ ಅಸಮಾಧಾನವನ್ನೂ ವ್ಯಕ್ತಪಡಿಸಿದ್ದ. ಬಳಿಕ ಪೊಲೀಸರು ಆ ನಂಬರ್ ನ್ನು ಟ್ರೇಸ್ ಮಾಡಿದ್ದರು. ಮೊದಲು ಹಾಸನ, ಸಂಜೆ ಬೆಂಗಳೂರು ಭಾಗದ ನೆಟ್ವರ್ಕ್ ಲೊಕೇಶನ್ ನಲ್ಲಿ ಆಕ್ಟೀವ್ ಆಗಿದ್ದನ್ನು ನೋಟ್ ಮಾಡಿದ್ದರು. ನಿನ್ನೆ ರಾತ್ರಿ 9 ಗಂಟೆಯ ವೇಳೆ ಆ ನಂಬರ್ ಗೆ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಕೂರ್ನಹಳ್ಳಿ ಎಂಬಲ್ಲಿಂದ ಕಾಲ್ ಹೋಗಿದ್ದನ್ನು ಟ್ರ್ಯಾಕ್ ಮಾಡಿದ ಪೊಲೀಸರು ಇಂದು ಬೆಳಗ್ಗಿನ ಜಾವ ಕಾರ್ಯಾಚರಣೆ ಮಾಡಿ ಆರೋಪಿಗಳನ್ನು ಬಂಧಿಸಿದ್ದಾರೆ.

    ಅಪಹರಿಸಿದ್ದು ಹೇಗೆ?
    ಉಜಿರೆಯಿಂದ ಇಂಡಿಕಾ ಕಾರ್ ನಲ್ಲಿ ಬಾಲಕನನ್ನು ನಾಲ್ಕು ಮಂದಿ ಕಿಡ್ನಾಪ್ ಮಾಡಿದ್ದರು. ಉಜಿರೆಯಿಂದ ಕೋಲಾರದವರೆಗೆ ಸುಮಾರು 400 ಕಿ.ಮೀ. ದೂರವನ್ನು ಪೊಲೀಸರ ಕಣ್ಣುತಪ್ಪಿಸಿ ಪರಾರಿಯಾಗಿದ್ದರು. ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಕಮಲ್, ಮೈಸೂರಿನ ಗಂಗಾಧರ್, ಮಂಡ್ಯದ ರಂಜಿತ್ ಮತ್ತು ಹನುಮಂತ್ ನಿನ್ನೆ ಸಂಜೆ 7.30ರ ವೇಳೆಗೆ ಕೋಲಾರದ ಕೂರ್ನಹೊಸಳ್ಳಿ ಗ್ರಾಮದ ಮಂಜುನಾಥ ಎಂಬುವವರ ಮನೆಗೆ ತೆರಳಿ ಅಲ್ಲೇ ತಂಗಿದ್ದಾರೆ.

    ರಾತ್ರಿ ಮಂಜುನಾಥ್ ಮೊಬೈಲ್‍ನಿಂದ ಕಿಡ್ನಾಪರ್ಸ್ ಗ್ಯಾಂಗ್ ಬೆದರಿಕೆ ಬಂದ ನಂಬರ್ ಗೆ ಕಾಲ್ ಮಾಡಿದ್ದಾರೆ. ಬೆದರಿಕೆ ಕರೆ ಬಂದ ನಂಬರ್ ಗೆ ಕೂರ್ನಹೊಸಳ್ಳಿ ಗ್ರಾಮದಿಂದ ಕಾಲ್ ಬಂದಿದ್ದನ್ನು ಗಮನಿಸಿದ ಬೆಳ್ತಂಗಡಿ ಸರ್ಕಲ್ ಇನ್ಸ್‍ಪೆಕ್ಟರ್ ಸಂದೇಶ್ ಪಿಜಿ ನೇತೃತ್ವದ ತಂಡ, ಕೋಲಾರ ಎಸ್‍ಪಿ ಕಾರ್ತಿಕ್ ರೆಡ್ಡಿ ನೆರವಿನೊಂದಿಗೆ ಮುಂಜಾನೆ ಕಾರ್ಯಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಕಿಡ್ನಾಪ್ ಗ್ಯಾಂಗ್ ನ ಕಮಲ್ ಮತ್ತು ಗಂಗಾಧರ್ ಜೊತೆಗೆ ಕೂರ್ನಹೊಸಳ್ಳಿ ಗ್ರಾಮದಲ್ಲಿ ಆರೋಪಿಗಳಿಗೆ ಸಹಾಯ ಮಾಡಿದ ಮಂಜುನಾಥ್ ಮತ್ತು ಮಹೇಶ್ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಕಿಡ್ನಾಪ್ ಮಾಡಿದ ಕಮಲ್ ಮತ್ತು ಕೂರ್ನಹೊಸಳ್ಳಿ ಗ್ರಾಮದ ಮಹೇಶ್ ಸ್ನೇಹಿತರಾಗಿದ್ದು, ಪ್ರಕರಣದಲ್ಲಿ ಕೈ ಜೋಡಿಸಿರೋದು ಬೆಳಕಿಗೆ ಬಂದಿದೆ.

    ಬಿಟ್ ಕಾಯಿನ್ ಕಿಡ್ನಾಪ್
    ಈ ಅಪಹರಣ ಪ್ರಕರಣದ ಹಿಂದೆ ಬಿಟ್ ಕಾಯಿನ್ ಸೇರಿದಂತೆ ಅನಧಿಕೃತ ದಂಧೆಯ ಜಾಲ ಇರೋದು ಗೊತ್ತಾಗಿದೆ. ಬಾಲಕ ಅನುಭವ್ ನ ತಂದೆ ಬಿಜೋಯ್ ಈ ಹಿಂದೆ ಬಿಟ್ ಕಾಯಿನ್ ವ್ಯವಹಾರ ನಡೆಸುತ್ತಿದ್ದರು. ಇದರ ಹಿನ್ನಲೆಯಲ್ಲೇ ಆರೋಪಿಗಳು ಬಿಟ್ ಕಾಯಿನ್ ಗೆ ಬೇಡಿಕೆ ಇಟ್ಟಿರುವ ಬಗ್ಗೆ ಶಂಕೆ ಪೊಲೀಸರಿಗಿದೆ.

    ಈ ಪ್ರಕರಣಕ್ಕೆ ಸ್ಥಳೀಯರೂ ಶಾಮೀಲಾಗಿರುವ ಬಗ್ಗೆಯೂ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ. ಆರೋಪಿಗಳನ್ನು ಮತ್ತು ಬಾಲಕನನ್ನು ಬೆಳ್ತಂಗಡಿ ಪೊಲೀಸರು ಕೋರ್ಟ್ ಗೆ ಹಸ್ತಾಂತರಿಸಿದ್ದಾರೆ. ಹೆಚ್ಚಿನ ತನಿಖೆಗೆ ಬೆಳ್ತಂಗಡಿಗೆ ಕರೆ ತಂದಿದ್ದಾರೆ. ಒಟ್ಟಿನಲ್ಲಿ ಭಾರೀ ಆತಂಕ ಮೂಡಿಸಿದ್ದ ಅಪಹರಣ ಪ್ರಕರಣ 34 ಗಂಟೆಗಳ ಬಳಿಕ ಸಮಾಧಾನದ ಅಂತ್ಯ ಕಂಡಿದೆ. ಆದರೆ ಈ ಪ್ರಕರಣ ಹಲವು ಆಯಾಮಗಳನ್ನು ಪಡೆದಿದ್ದು, ಪೊಲೀಸ್ ತನಿಖೆ ಮತ್ತಷ್ಟು ಜನರಿಗೆ ಕಂಟಕವಾಗುವುದರಲ್ಲಿ ಸಂಶಯವಿಲ್ಲ.

  • ಬಾಲಕನ ಅಪಹರಣ ಪ್ರಕರಣ- ಕಂಪ್ಲೈಂಟ್ ಕೊಟ್ಟಿದ್ದಕ್ಕೆ ಕಿಡ್ನಾಪರ್ಸ್ ಗರಂ

    ಬಾಲಕನ ಅಪಹರಣ ಪ್ರಕರಣ- ಕಂಪ್ಲೈಂಟ್ ಕೊಟ್ಟಿದ್ದಕ್ಕೆ ಕಿಡ್ನಾಪರ್ಸ್ ಗರಂ

    – 100ರ ಬದಲು 60 ಬಿಟ್ ಕಾಯಿನ್ ನೀಡುವಂತೆ ಒತ್ತಡ

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆಯ ಬಾಲಕನ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪೊಲೀಸ್ ಕಂಪ್ಲೈಂಟ್ ಕೊಟ್ಟಿದ್ದಕ್ಕೆ ಕಿಡ್ನಾಪರ್ಸ್ ಗರಂ ಆಗಿದ್ದಾರೆ.

    ಬಾಲಕನ ಕಿಡ್ನಾಪ್ ಕುರಿತಂತೆ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. ಈ ವಿಚಾರ ಅಪಹರಣಕಾರರಿಗೆ ಗೊತ್ತಾಗಿದ್ದು, ಇದೀಗ ಬಾಲಕನ ತಂದೆಗೆ ಮೆಸೇಜ್ ಮಾಡಿದ್ದಾರೆ. ಅಲ್ಲದೆ ಪೊಲೀಸರಿಗೆ ದೂರು ನಿಡಿದ್ದಕ್ಕೆ ಕಿಡ್ನಾಪರ್ಸ್ ಗರಂ ಆಗಿದ್ದಾರೆ.

    ಸದ್ಯ ಕಿಡ್ನಾಪರ್ಸ್ ಹಾಸನ ಭಾಗದ ನೆಟ್ ವರ್ಕ್ ಲೊಕೇಶನ್ ನಲ್ಲಿದ್ದಾರೆ. ಬಾಲಕ ಅನುಭವ್ ತಂದೆ ಬಿಜೋಯ್ ಗೆ ಮೆಸೇಜ್ ಮಾಡಿದ್ದಾರೆ. ಇದರಲ್ಲಿ 60 ಬಿಟ್ ಕಾಯಿನ್ ನೀಡಲು ಒತ್ತಡ ಹೇರುತ್ತಿದ್ದಾರೆ. ನಿನ್ನೆ 100 ಬಿಟ್ ಕಾಯಿನ್ ಗೆ ಬೇಡಿಕೆ ಇಟ್ಟಿದ್ದು, ಇದೀಗ 60 ಬಿಟ್ ಕಾಯಿನ್ ನೀಡುವಂತೆ ತಿಳಿಸಿದ್ದಾರೆ. 60 ಬಿಟ್ ಕಾಯಿನ್ ಮೌಲ್ಯ 10 ಕೋಟಿ ರೂಪಾಯಿ ಆಗಿರುತ್ತದೆ.

    ಸಾರ್ವಜನಿಕರ ಎದುರೇ ದುಷ್ಕರ್ಮಿಗಳು ಉಜಿರೆಯಿಂದ ಬಿಳಿ ಬಣ್ಣದ ಹಾಗೂ ಯಲ್ಲೋ ಬೋರ್ಡ್ ಇದ್ದ ಇಂಡಿಕಾ ಕಾರಿನಲ್ಲಿ ನಿನ್ನೆ ನಿನ್ನೆ ಸಂಜೆ 6.30ರ ಸುಮಾರಿಗೆ ಕಿಡ್ನಾಪ್ ಮಾಡಿದ್ದಾರೆ. ಕಾರು ಉಜಿರೆಯಿಂದ ಚಾರ್ಮಾಡಿ ಕಡೆ ಹೋಗಿತ್ತು. ಕಿಡ್ನಾಪ್ ಬಳಿಕ ಬಾಲಕನ ತಂದೆ ಬಿಜೋಯ್ ಗೆ ಕರೆ ಮಾಡಿದ ದುಷ್ಕರ್ಮಿಗಳು ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ. ಕರೆ ಮಾಡಿದ ವ್ಯಕ್ತಿ ಹಿಂದಿಯಲ್ಲಿ ಮಾತನಾಡಿದ್ದಾನೆ. ಬಾಲಕನ ತಂದೆಯ ಹಣಕಾಸು ವ್ಯವಹಾರ ಸಂಬಂಧ ಅಪಹರಣ ಮಾಡಿರುವ ಶಂಕೆ ವ್ಯಕ್ತವಾಗಿದೆ.

    ಯಾರದ್ದೋ ಜೊತೆಗಿನ ವ್ಯವಹಾರದ ಹಿನ್ನೆಲೆಯಲ್ಲಿ ಪೂರ್ವಯೋಜಿತ ಅಪಹರಣ ಮಾಡಿರಬಹುದು ಎಂಬ ಶಂಕೆ ಕೂಡ ವ್ಯಕ್ತವಾಗಿದ್ದು, ಸದ್ಯ ಚಾರ್ಮಾಡಿ ದಾಟಿ ಕಾರು ಸಾಗಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ಈ ಕಾರಿನ ಬಗ್ಗೆ ಮಾಹಿತಿ ಕೊಡಲು ಸ್ಥಳೀಯರು ಕೋರಿಕೊಂಡಿದ್ದು, ಧರ್ಮಸ್ಥಳ ಮತ್ತು ಬೆಳ್ತಂಗಡಿ ಪೊಲೀಸರಿಂದ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ.

  • ಸಾರ್ವಜನಿಕರ ಎದುರೇ ಉಜಿರೆಯ ಬಾಲಕನ ಕಿಡ್ನಾಪ್- ಮಾಹಿತಿ ಕೊಡಲು ಸ್ಥಳೀಯರು ಕೋರಿಕೆ

    ಸಾರ್ವಜನಿಕರ ಎದುರೇ ಉಜಿರೆಯ ಬಾಲಕನ ಕಿಡ್ನಾಪ್- ಮಾಹಿತಿ ಕೊಡಲು ಸ್ಥಳೀಯರು ಕೋರಿಕೆ

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ 8 ವರ್ಷದ ಬಾಲಕನನ್ನು ದುಷ್ಕರ್ಮಿಗಳು ಅಪಹರಿಸಿದ್ದಾರೆ.

    ಸಾರ್ವಜನಿಕರ ಎದುರೇ ದುಷ್ಕರ್ಮಿಗಳು ಉಜಿರೆಯಿಂದ ಬಿಳಿ ಬಣ್ಣದ ಹಾಗೂ ಯಲ್ಲೋ ಬೋರ್ಡ್ ಇದ್ದ ಇಂಡಿಕಾ ಕಾರಿನಲ್ಲಿ ಕಿಡ್ನಾಪ್ ಮಾಡಿದ್ದಾರೆ. ಈ ಘಟನೆ ನಿನ್ನೆ ಸಂಜೆ 6.30ರ ಸುಮಾರಿಗೆ ನಡೆದಿದೆ. ಕಾರು ಉಜಿರೆಯಿಂದ ಚಾರ್ಮಾಡಿ ಕಡೆ ಹೋಗಿದೆ.

    ಕಿಡ್ನಾಪ್ ಬಳಿಕ ಬಾಲಕನ ತಂದೆ ಬಿಜೋಯ್ ಗೆ ಕರೆ ಮಾಡಿದ ದುಷ್ಕರ್ಮಿಗಳು ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ. ಕರೆ ಮಾಡಿದ ವ್ಯಕ್ತಿ ಹಿಂದಿಯಲ್ಲಿ ಮಾತನಾಡಿದ್ದಾನೆ. ಬಾಲಕನ ತಂದೆಯ ಹಣಕಾಸು ವ್ಯವಹಾರ ಸಂಬಂಧ ಅಪಹರಣ ಮಾಡಿರುವ ಶಂಕೆ ವ್ಯಕ್ತವಾಗಿದೆ.

    ಯಾರದ್ದೋ ಜೊತೆಗಿನ ವ್ಯವಹಾರದ ಹಿನ್ನೆಲೆಯಲ್ಲಿ ಪೂರ್ವಯೋಜಿತ ಅಪಹರಣ ಮಾಡಿರಬಹುದು ಎಂಬ ಶಂಕೆ ಕೂಡ ವ್ಯಕ್ತವಾಗಿದ್ದು, ಸದ್ಯ ಚಾರ್ಮಾಡಿ ದಾಟಿ ಕಾರು ಸಾಗಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ಈ ಕಾರಿನ ಬಗ್ಗೆ ಮಾಹಿತಿ ಕೊಡಲು ಸ್ಥಳೀಯರು ಕೋರಿಕೊಂಡಿದ್ದು, ಧರ್ಮಸ್ಥಳ ಮತ್ತು ಬೆಳ್ತಂಗಡಿ ಪೊಲೀಸರಿಂದ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ.

    ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

  • 1 ವರ್ಷ ಸಂಪೂರ್ಣ ಬಂದ್‌ – ಬೆಳ್ತಂಗಡಿ ಶಾಲೆಯಿಂದ ಮಹತ್ವದ ನಿರ್ಧಾರ

    1 ವರ್ಷ ಸಂಪೂರ್ಣ ಬಂದ್‌ – ಬೆಳ್ತಂಗಡಿ ಶಾಲೆಯಿಂದ ಮಹತ್ವದ ನಿರ್ಧಾರ

    ಮಂಗಳೂರು: ಕೋವಿಡ್‌ 19 ಹಿನ್ನೆಲೆಯಲ್ಲಿ ಒಂದು ವರ್ಷ ವಿದ್ಯಾಸಂಸ್ಥೆಯನ್ನು ಸಂಪೂರ್ಣ ಬಂದ್ ಮಾಡಲು ಬೆಳ್ತಂಗಡಿ ತಾಲೂಕಿನ ಕನ್ಯಾಡಿ ಶ್ರೀ ಆತ್ಮಾನಂದ ಸರಸ್ವತಿ ಆಂಗ್ಲ ಮಾಧ್ಯಮ ವಿದ್ಯಾಲಯ ಮಹತ್ವದ ನಿರ್ಧಾರ ಕೈಗೊಂಡಿದೆ.

    ಧರ್ಮಸ್ಥಳ – ಉಜಿರೆ ಮಧ್ಯೆ ಇರುವ ಕನ್ಯಾಡಿಯ ಈ ಶಾಲೆಯಲ್ಲಿ ಸುಮಾರು 350ಕ್ಕೂ ಹೆಚ್ಚು ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

    ಎಲ್ ಕೆಜಿಯಿಂದ ಹತ್ತನೇ ತರಗತಿವರೆಗೆ ಶಾಲೆ ನಡೆಯುತ್ತಿದ್ದು ಮಕ್ಕಳ ಆರೋಗ್ಯದ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಶಿಕ್ಷಣ ಸಂಸ್ಥೆ ಅಧ್ಯಕ್ಷ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಹೇಳಿದ್ದಾರೆ.

    350 ಮಕ್ಕಳ ಪೈಕಿ 250ರಷ್ಟು ಮಕ್ಕಳು 12ವರ್ಷದೊಳಗಿನವರು. ಹೀಗಾಗಿ ಮಕ್ಕಳ ಪೋಷಕರ ಅಭಿಪ್ರಾಯ ಪಡೆದು ಶಾಲಾ ಆಡಳಿತ ನಿರ್ಧಾರ ಕೈಗೊಂಡಿದೆ. ಪೋಷಕರು ಬೇರೆ ಶಾಲೆಗೆ ಸೇರಲು ಇಚ್ಛಿಸಿದರೆ ವರ್ಗಾವಣೆ ಪತ್ರ ನೀಡಲು ನಿರ್ಧರಿಸಿದ್ದೇವೆ. ಶಾಲೆಯ ಈ ನಿರ್ಧಾರದ ಬಗ್ಗೆ ಶಿಕ್ಷಣ ಸಚಿವರಿಗೆ, ಶಿಕ್ಷಣ ಇಲಾಖೆಗೆ ಮಾಹಿತಿ ನೀಡಿದ್ದೇವೆ ಎಂದು ಬ್ರಹ್ಮಾನಂದ ಸರಸ್ವತಿ ತಿಳಿಸಿದ್ದಾರೆ.

  • ಧರ್ಮಸ್ಥಳದ ನೇತ್ರಾವತಿ ನದಿಯಲ್ಲಿ ಸ್ವಚ್ಛತಾ ಕಾರ್ಯ

    ಧರ್ಮಸ್ಥಳದ ನೇತ್ರಾವತಿ ನದಿಯಲ್ಲಿ ಸ್ವಚ್ಛತಾ ಕಾರ್ಯ

    – 6 ಲಾರಿ ಬಟ್ಟೆ, 8 ಲಾರಿ ತ್ಯಾಜ್ಯ ನದಿಯಿಂದ ಹೊರಕ್ಕೆ

    ಮಂಗಳೂರು: ಉಜಿರೆಯ ಶ್ರೀ ಜನಾರ್ದನ ಸೇವಾ ಸಮಿತಿಯು ಕಳೆದ ಕೆಲ ತಿಂಗಳ ಹಿಂದೆ ಆರಂಭಗೊಂಡಿದ್ದು, ಇದರ ಪ್ರಥಮ ಸೇವೆಯಾಗಿ ಧರ್ಮಸ್ಥಳದಲ್ಲಿ ಜೀವನದಿ ನೇತ್ರಾವತಿಯ ಸ್ವಚ್ಛತಾ ಕಾರ್ಯವನ್ನು 500 ಮಂದಿ ಸ್ವಯಂ ಸೇವಕರ ತಂಡದವರು ಸೇವೆಯಾಗಿ ಮಾಡಿದರು.

    ಸೋಮವಾರ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಸ್ವಚ್ಛತೆ ನಡೆಸಿ 6 ಲಾರಿ ಲೋಡ್ ಬಟ್ಟೆ ತ್ಯಾಜ್ಯ 2 ಲೋಡ್ ಕಟ್ಟಿಗೆ ಹಾಗೂ 8 ಲೋಡ್ ತ್ಯಾಜ್ಯವನ್ನು ನದಿಯಿಂದ ತೆಗೆದು ಸ್ವಚ್ಛಗೊಳಿಸಲಾಯಿತು. ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು, ಹೇಮಾವತಿ ವಿ. ಹೆಗ್ಗಡೆ, ಡಿ. ಹರ್ಷೇಂದ್ರ ಕುಮಾರ್, ಡಾ. ಬಿ. ಯಶೋವರ್ಮ ಭೇಟಿ ನೀಡಿ ಸೇವಾ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

    ಉಜಿರೆಯ ಹಿರಿಯ ಸಮಾಜ ಸೇವಾಕರ್ತ ರಾಮಚಂದ್ರ ಶೆಟ್ಟಿ ಸ್ವಚ್ಛತಾ ಕಾರ್ಯವನ್ನು ಉದ್ಘಾಟಿಸಿದರು. ಶರತ್‍ಕೃಷ್ಣ ಪಡ್ವೆಟ್ನಾಯ, ಅನ್ನಪೂರ್ಣ ಛತ್ರದ ಮ್ಯಾನೇಜರ್ ಸುಬ್ರಹ್ಮಣ್ಯ ಪ್ರಸಾದ್, ಉಜಿರೆಯ ಉದ್ಯಮಿ ರಾಜೇಶ್ ಪೈ ಹಾಗೂ ಮೋಹನ ಕುಮಾರ್ ನೇತೃತ್ವದಲ್ಲಿ ಸ್ವಚ್ಛತಾ ಸೇವೆ ನಡೆಯಿತು.

    ಆರು ನೂರು ಮಂದಿ ಸಕ್ರಿಯ ಸ್ವಯಂ ಸೇವಕರ ತಂಡ ಶ್ರೀ ಜನಾರ್ದನ ಸ್ವಾಮಿ ಸೇವಾ ಸಮಿತಿ ಉಜಿರೆಯಲ್ಲಿ ಕಳೆದ ಜನವರಿ 21 ರಂದು ಉಜಿರೆ ಜಾತ್ರೆ ಸಂದರ್ಭದಲ್ಲಿ ಶಾಸಕ ಹರೀಶ್ ಪೂಂಜರಿಂದ ಉದ್ಘಾಟನೆಗೊಂಡಿತ್ತು. ಕಳೆದ ಜೂನ್ ತಿಂಗಳಿನಲ್ಲಿ ಮುಂಡಾಜೆ, ಚಾರ್ಮಾಡಿ ಪರಿಸರದಲ್ಲಿ ನೆರೆ ಪೀಡಿತರಿಗೆ ಸಂಕಷ್ಟದ ಸಂದರ್ಭ ಅಭಯಹಸ್ತ ನೀಡಿ ಸಹಕರಿಸಿತ್ತು. ಪ್ರಾಕೃತಿಕ ವಿಕೋಪಗಳು ಮುಂದೆ ಸಂಭವಿಸಿದಾಗ ನೆರವು ನೀಡಲು ಹಾಗೂ ಸೇವೆ ನೀಡಲು 600 ಜನರ ವ್ಯವಸ್ಥಿತ ಸ್ವಯಂ ಸೇವಕರ ತಂಡವನ್ನು ರಚಿಸಿದೆ.

    ಈ ತಂಡ ಇನ್ನೂ ಸಾಕಷ್ಟು ಸೇವಾ ಕಾರ್ಯಗಳನ್ನು ಮಾಡಲು ತಯಾರಿ ನಡೆಸಿದ್ದು, ಈಗಾಗಲೇ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ.

  • ದೂರು ನೀಡಿದ್ದಕ್ಕೆ ಯುವತಿಯರಿಬ್ಬರ ಅತ್ಯಾಚಾರಕ್ಕೆ ಯತ್ನಿಸಿದ ಕಾಮುಕ

    ದೂರು ನೀಡಿದ್ದಕ್ಕೆ ಯುವತಿಯರಿಬ್ಬರ ಅತ್ಯಾಚಾರಕ್ಕೆ ಯತ್ನಿಸಿದ ಕಾಮುಕ

    ಮಂಗಳೂರು: ಪೊಲೀಸ್ ಠಾಣೆಯಲ್ಲಿ ತನ್ನ ವಿರುದ್ಧ ದೂರು ನೀಡಿದ್ರು ಎಂದು ಕಾಮುಕನೊರ್ವ ಯುವತಿಯರಿಬ್ಬರ ಅತ್ಯಾಚಾರ ಮಾಡಿ ಕೊಲೆಗೆ ಯತ್ನಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಯಲ್ಲಿ ನಡೆದಿದೆ. ಈ ಮೊದಲು ಸಹ ಆರೋಪಿ ಯುವತಿಯರೊಂದಿಗೆ ಅಸಭ್ಯವಾಗಿ ವರ್ತಿಸಿದ್ದನು. ಈ ಹಿನ್ನೆಲೆಯಲ್ಲಿ ಬೆಳ್ತಂಗಡಿಯ ಗಂಡಿಬಾಗಿಲು ನಿವಾಸಿ ಥಾಮಸ್ ವಿರುದ್ಧ ಕೆಲ ದಿನಗಳ ಹಿಂದೆ ಅಕ್ಕ-ತಂಗಿಯರಿಬ್ಬರು ಧರ್ಮಸ್ಥಳ ಠಾಣೆಯಲ್ಲಿ ದೂರು ನೀಡಿದ್ದರು. ಇದರಿಂದ ಕೋಪಗೊಂಡಿದ್ದ ಥಾಮಸ್ ಸೇಡು ತೀರಿಸಿಕೊಳ್ಳಲು ಯತ್ನಿಸಿದ್ದಾನೆ.

    ಉಜಿರೆ ಪಟ್ಟಣದಿಂದ ಕೆಲಸ ಮುಗಿಸಿ ಯುವತಿಯರು ಮನೆ ಕಡೆಗೆ ಆಟೋ ಹತ್ತಿದ್ದಾರೆ. ಆರೋಪಿ ಥಾಮಸ್ ಪಿಕ್ ಅಪ್ ವಾಹನ ಮೂಲಕ ಯುವತಿಯರಿದ್ದ ಆಟೋ ವನ್ನು ಹಿಂಬಾಲಿಸಿಕೊಂಡು ಬಂದಿದ್ದಾನೆ. ಆಟೋ ಗಂಡಿಬಾಗಿಲು ಬಳಿ ಬರುತ್ತಿದ್ದಂತೆಯೇ ಥಾಮಸ್ ಪಿಕ್ ಅಪ್ ವಾಹನವನ್ನು ಆಟೋಗೆ ಡಿಕ್ಕಿ ಹೊಡೆಸಿದ್ದಾನೆ. ಡಿಕ್ಕಿಯಾದ ರಭಸಕ್ಕೆ ಯುವತಿಯರಿಬ್ಬರೂ ಆಟೋದಿಂದ ಹೊರಗೆ ಬಿದ್ದಿದ್ದು, ಥಾಮಸ್ ಹುಡುಗಿಯರಿಗೆ ಮನಬಂದಂತೆ ಕಚ್ಚಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಆಟೋ ಚಾಲಕ ಪೊಲೀಸರಿಗೆ ಕರೆ ಮಾಡುತ್ತಿದ್ದಂತೆಯೇ ಥಾಮಸ್ ಪರಾರಿಯಾಗಿದ್ದಾನೆ.

    ಸಂತ್ರಸ್ತ ಯುವತಿಯರಿಬ್ಬರು ಧರ್ಮಸ್ಥಳ ಠಾಣೆಯಲ್ಲಿ ಅತ್ಯಾಚಾರ ಯತ್ನ ಮತ್ತು ಕೊಲೆ ಯತ್ನ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಥಾಮಸ್ ಗಾಗಿ ಹುಡುಕಾಟ ಆರಂಭಿಸಿದ್ದಾರೆ. ಆಟೋ ಚಾಲಕನಿಗೆ ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆ ಯಲ್ಲಿ ಚಿಕಿತ್ಸೆ ನೀಡುತ್ತಿದ್ದು, ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಆಸ್ಪತ್ರೆಗೆ ಭೇಟಿ ನೀಡಿ ಪ್ರಕರಣದ ಬಗ್ಗೆ ಆಟೋ ಚಾಲಕನ ಬಳಿ ವಿಚಾರಿಸಿಕೊಂಡಿದ್ದಾರೆ.

  • ತುಳು ಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರಿಸಲು ಪ್ರಧಾನಿಗೆ ಧರ್ಮಾಧಿಕಾರಿ ಮನವಿ

    ತುಳು ಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರಿಸಲು ಪ್ರಧಾನಿಗೆ ಧರ್ಮಾಧಿಕಾರಿ ಮನವಿ

    ಮಂಗಳೂರು: ತುಳುವನ್ನು 8 ನೇ ಪರಿಚ್ಚೇದಕ್ಕೆ ಸೇರ್ಪಡೆ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಮನವಿ ಮಾಡಿದ್ದಾರೆ.

    ಉಜಿರೆಯ ರತ್ನವರ್ಮ ಕ್ರೀಡಾಂಗಣದಲ್ಲಿ ನಡೆಯುತ್ತಿರೋ ಸಮಾವೇಶಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಭಾಗವಹಿಸಿದ್ದು, ಈ ವೇಳೆ ತುಳು ಭಾಷೆಯಲ್ಲಿಯೇ ಪ್ರಧಾನಿಯವರನ್ನು ಸ್ವಾಗತಿಸಿದ ವೀರೇಂದ್ರ ಹೆಗ್ಗಡೆಯವರು ತುಳುವನ್ನು 8ನೇ ಪರಿಚ್ಛೇದಕ್ಕೆ ಸೇರಿಸಬೇಕೆಂದು ಮನವಿ ಮಾಡಿಕೊಂಡಿದ್ದಾರೆ.

    ಬಳಿಕ ಸಂಸದ ನಳೀನ್ ಕುಮಾರ್ ಕಟೀಲ್ ಹಾಗೂ ಕೇಂದ್ರ ಸಚಿವ ಡಿವಿ ಸದಾನಂದ ಗೌಡ ಅವರು ಮೈಸೂರು ಪೇಟ ತೊಡಿಸಿ, ಧರ್ಮಾಧಿಕಾರಿಯ ಪರವಾಗಿ ಪ್ರಾದೇಶಿಕ ಕ್ರೀಡೆ ಕಂಬಳದ ನೊಗದ ಮಾದರಿಯನ್ನು ಸಮರ್ಪಣೆ ಮಾಡಿದ್ರು. ವೀರೇಂದ್ರ ಹೆಗಡೆ ಅವರು ಪ್ರಧಾನಿಯನ್ನು ಶಾಲು ಹೊದಿಸಿ ಸನ್ಮಾನಿಸಿ, ಓಂ ನಮೋ ಶ್ರೀ ಮಂಜುನಾಥಃ ನಮೋ ನಮಃ ಎಂದು ಹೇಳುವ ಮೂಲಕ ಸ್ವಾಗತ ಕೋರಿದ್ರು.

    ಉಜಿರೆಯ ಜನ್ ಧನ್ ಕಾರ್ಯಕ್ರಮದಲ್ಲಿ ಮೋದಿ ಭಾಗಿಯಾಗಿದ್ದು, ಡಾ. ವಿರೇಂದ್ರ ಹೆಗಡೆ ಅವರ 50 ನೇ ವರ್ಷದ ಧರ್ಮಾಧಿಕಾರಿ ಪೂರೈಸಿದ ಅವಧಿಯಲ್ಲಿ ಆಗಮಿಸಿರುವ ಮೋದಿ ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗಡೆಯವರಿಗೆ ಶಾಲು ಹೊದಿಸಿ ಗೌರವ ಸಲ್ಲಿಸಿದ್ರು.

    ಇಂದು ಬೆಳಗ್ಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಧಾನಿಯವರು ಬಳಿಕ ಅಲ್ಲಿಂದ ನೇರವಾಗಿ ಧರ್ಮಸ್ಥಳಕ್ಕೆ ಬಂದು ಅಲ್ಲಿ ಶ್ರೀ ದೇವರ ದರ್ಶನ ಪಡೆದು, ಪೂಜೆಯಲ್ಲಿ ಭಾಗವಹಿಸಿ ಪ್ರಸಾದ ಸೇವಿಸಿದ್ದಾರೆ. ಈ ವೇಳೆ ಪ್ರಧಾನಿ ಜೊತೆ ವೀರೇಂದ್ರ ಹೆಗ್ಗಡೆಯವರು ಮಾತನಾಡುತ್ತಾ ಆರೋಗ್ಯದ ಬಗ್ಗೆ ಗಮನಹರಿಸುವಂತೆ ಕೇಳಿಕೊಂಡ್ರು. ಇದಕ್ಕುತ್ತರಿಸಿದ ಪ್ರಧಾನಿ ನನಗೆ ಕೆಲಸ ಮಾಡುವುದು ಅಭ್ಯಾಸವಾಗಿದೆ ಅಂತ ಹೇಳಿದ್ರು.

    ನಂತರ ಪ್ರಧಾನಿಯವರು ಅಲ್ಲಿಂದ ಉಜಿರೆಯ ಕಾರ್ಯಕ್ರಮಕ್ಕೆ ತೆರಳಿದ್ದಾರೆ. ಪ್ರಧಾನಿ ಮೋದಿ ಕಾರ್ಯಕ್ರಮದತ್ತ ಆಗಮಿಸುತ್ತಿದ್ದಂತೆ ನೆರೆದಿದ್ದ ಜನರ ಮೋದಿ…ಮೋದಿ… ಎಂದು ಹರ್ಷದ್ಗೊರ ಎಲ್ಲಡೆಯಿಂದ ಕೇಳಿ ಬಂತು.