Tag: ಉಚ್ಛಾಟನೆ

  • ಕಾಂಗ್ರೆಸ್‌ನಿಂದ ಆಚಾರ್ಯ ಪ್ರಮೋದ್ ಕೃಷ್ಣಂ ಉಚ್ಛಾಟನೆ- ಕೈ ನಾಯಕ ಹೇಳಿದ್ದೇನು?

    ಕಾಂಗ್ರೆಸ್‌ನಿಂದ ಆಚಾರ್ಯ ಪ್ರಮೋದ್ ಕೃಷ್ಣಂ ಉಚ್ಛಾಟನೆ- ಕೈ ನಾಯಕ ಹೇಳಿದ್ದೇನು?

    ನವದೆಹಲಿ: ಪಕ್ಷ ವಿರೋಧ ಹೇಳಿಕೆ ನೀಡಿರುವುದಕ್ಕಾಗಿ ಆಚಾರ್ಯ ಪ್ರಮೋದ್ ಕೃಷ್ಣಂ (Acharya Pramod Krishnam) ಅವರನ್ನು ಕಾಂಗ್ರೆಸ್‌ 6 ವರ್ಷಗಳ ಅವಧಿಗೆ ಉಚ್ಛಾಟನೆ ಮಾಡಿದೆ.

    ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾದ ಮರುದಿನವೇ ಕಾಂಗ್ರೆಸ್‌ ಹೈಕಮಾಂಡ್‌ (Congress Highcommand) ಆಚಾರ್ಯ ವಿರುದ್ಧ ಈ ಕ್ರಮ ಕೈಗೊಂಡಿದೆ. ಉಚ್ಛಾಟನೆಯ ಬೆನ್ನಲ್ಲೇ ಆಚಾರ್ಯ ಅವರು ಎಮ್ಮ ಎಕ್ಸ್‌ ಖಾತೆಯಲ್ಲಿ ಪ್ರತಿಕ್ರಿಯಿಸಿದ್ದಾರೆ, ರಾಮ ಮತ್ತು ರಾಷ್ಟ್ರ… ಯಾವುದೇ ರಾಜಿ ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

    ಅಶಿಸ್ತು ಮತ್ತು ಪಕ್ಷದ ವಿರುದ್ಧ ಪದೇ ಪದೇ ಹೇಳಿಕೆ ನೀಡುತ್ತಿರುವ ದೂರುಗಳನ್ನು ಗಮನದಲ್ಲಿಟ್ಟುಕೊಂಡು, ಪ್ರಮೋದ್ ಕೃಷ್ಣಂ ಅವರನ್ನು ಆರು ವರ್ಷಗಳ ಕಾಲ ಉಚ್ಚಾಟಿಸುವ ಉತ್ತರ ಪ್ರದೇಶ ಕಾಂಗ್ರೆಸ್ ಸಮಿತಿಯ ಪ್ರಸ್ತಾವನೆಗೆ ಕಾಂಗ್ರೆಸ್ ಅಧ್ಯಕ್ಷರು ಅನುಮೋದನೆ ನೀಡಿದ್ದಾರೆ ಎಂದು ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ತಿಳಿಸಿದ್ದಾರೆ.

    ಅಯೋಧ್ಯೆ ರಾಮಮಂದಿರ ಪ್ರಾಣ ಪ್ರತಿಷ್ಠಾ ಸಮಾರಂಭದಲ್ಲಿ ಕಾಂಗ್ರೆಸ್ ಭಾಗವಹಿಸದಿರುವುದನ್ನು ಆಚಾರ್ಯ ಪ್ರಮೋದ್ ಕೃಷ್ಣಂ ಟೀಕಿಸಿದ್ದರು. ಅಲ್ಲದೆ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ (Rahul Gandhi) ನೇತೃತ್ವದ ಭಾರತ್ ಜೋಡೋ ನ್ಯಾಯ್ ಯಾತ್ರೆಯನ್ನು (Bhart Jodo Nyay Yatre) ರಾಜಕೀಯ ಪ್ರವಾಸೋದ್ಯಮ ಎಂದು ಕರೆದಿದ್ದರು. ಕಾಂಗ್ರೆಸ್ ಇನ್ನೂ ಟ್ರಾವೆಲಿಂಗ್ ಮಾಡುತ್ತಿದೆ, ಆದರೆ ಇತರ ಪಕ್ಷಗಳು ಮುಂಬರುವ 2024 ರ ಲೋಕಸಭೆ ಚುನಾವಣೆಗೆ ಸಜ್ಜಾಗುತ್ತಿವೆ ಎಂದು ಪಕ್ಷ ವಿರುದ್ಧವೇ ಹೇಳಿಕೆ ನೀಡಿದ್ದರು. ಇದನ್ನೂ ಓದಿ: ಈಶ್ವರಪ್ಪ ಸ್ವಲ್ಪ ಉಗ್ರವಾದಿ, ಆದ್ರೆ ಗುಂಡು ಹಾರಿಸುವಷ್ಟು ಉಗ್ರರಲ್ಲ: ಸದಾನಂದ ಗೌಡ

    ಆಚಾರ್ಯ ಪ್ರಮೋದ್ ಕೃಷ್ಣಂ ಯಾರು?: 2019 ರ ಲೋಕಸಭಾ ಚುನಾವಣೆಯಲ್ಲಿ ಲಕ್ನೋದಿಂದ ಸ್ಪರ್ಧಿಸಿ ಸೋಲು ಕಂಡಿದ್ದರು. ಆದರೂ ಅವರು 1.8 ಲಕ್ಷ ಮತಗಳನ್ನು ಗಳಿಸುವ ಮೂಲಕ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದರು. 2014 ರಲ್ಲಿ ಯುಪಿಯ ಸಂಭಾಲ್‌ ಕ್ಷೇತ್ರದಿಂದ ಲೋಕಸಭಾ ಚುನಾವಣೆಗೆ (Loksabha Election) ಸ್ಪರ್ಧಿಸಿ ವಿಫಲರಾಗಿದ್ದರು.

    ಆಚಾರ್ಯ ಪ್ರಮೋದ್ ಅವರು ಈ ಹಿಂದೆ ಉತ್ತರ ಪ್ರದೇಶ ಉಸ್ತುವಾರಿ ಹೊಂದಿದ ಪ್ರಿಯಾಂಕಾ ಗಾಂಧಿಯವರಿಗೆ ಸಲಹೆ ನೀಡಲು ರಚಿಸಿದ್ದ ಕಾಂಗ್ರೆಸ್ ನ ಉತ್ತರ ಪ್ರದೇಶ ಸಲಹಾ ಮಂಡಳಿಯ ಭಾಗವಾಗಿದ್ದರು. ತಾವು ಕಣ್ಣಿಟ್ಟಿದ್ದ ಸಂಭಾಲ್ ಮತ್ತು ಲಕ್ನೋ ಕ್ಷೇತ್ರಗಳಿಗೆ ಸಮಾಜವಾದಿ ಪಕ್ಷ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲು ತಯಾರಿ ನಡೆಸುತ್ತಿದ್ದ ಹಿನ್ನೆಲೆಯಲ್ಲಿ ಈ ಉಚ್ಚಾಟನೆ ವಿಶೇಷ ಮಹತ್ವ ಪಡೆದಿದೆ.

  • 30 ದಿನಗಳ ಒಳಗಡೆ ಮನೆ ಖಾಲಿ ಮಾಡಿ: ಮೊಯಿತ್ರಾಗೆ ನೋಟಿಸ್‌

    30 ದಿನಗಳ ಒಳಗಡೆ ಮನೆ ಖಾಲಿ ಮಾಡಿ: ಮೊಯಿತ್ರಾಗೆ ನೋಟಿಸ್‌

    ನವದೆಹಲಿ: ಪ್ರಶ್ನೆ ಕೇಳಲು (Cash for Query) ಲಂಚ ಪಡೆದ ಆರೋಪದ ಹಿನ್ನೆಲೆಯಲ್ಲಿ ಲೋಕಸಭೆಯಿಂದ ಉಚ್ಛಾಟನೆಯಾಗಿರುವ ಟಿಎಂಸಿ (TMC) ಸಂಸದೆ ಮಹುವಾ ಮೊಯಿತ್ರಾ (Mahua Moitra) ಶ್ರೀಘ್ರವೇ ತಮ್ಮ ಅಧಿಕೃತ ನಿವಾಸವನ್ನು ತೊರೆಯಲಿದ್ದಾರೆ.

    ಲೋಕಸಭೆಯ (Lok Sabha) ವಸತಿ ಸಮಿತಿಯು ನಗರಾಭಿವೃದ್ಧಿ ಸಚಿವಾಲಯಕ್ಕೆ ಪತ್ರ ಬರೆದಿದ್ದು 30 ದಿನಗಳ ಒಳಗಡೆ ತನ್ನ ಅಧಿಕೃತ ನಿವಾಸವನ್ನು ಖಾಲಿ ಮಾಡುವಂತೆ ಕೇಳಿಕೊಳ್ಳುವಂತೆ ಸೂಚಿಸಿದೆ.

    ಮೊಯಿತ್ರಾ ಅವರಿಗೆ ವಿಶೇಷ ಕೋಟಾದ ಅಡಿಯಲ್ಲಿ ಸಚಿವಾಲಯವು ಮನೆಯನ್ನು ಮಂಜೂರು ಮಾಡಿದೆ. ಲೋಕಸಭೆಯಿಂದ ಉಚ್ಛಾಟನೆ ಮಾಡಿದ್ದನ್ನು ಪ್ರಶ್ನಿಸಿ ಮೊಯಿತ್ರಾ ಸುಪ್ರೀಂ ಕೋರ್ಟ್‌ನಲ್ಲಿ (Suprme Court) ಅರ್ಜಿ ಸಲ್ಲಿಸಿದ್ದಾರೆ. ಇದನ್ನೂ ಓದಿ: ಹೊಸ ಟ್ರಕ್‌ಗಳಲ್ಲಿ ಚಾಲಕರಿಗೆ ಎಸಿ ಕ್ಯಾಬಿನ್‌ ಕಡ್ಡಾಯ – ಅಧಿಸೂಚನೆ ಪ್ರಕಟ

    ನೀತಿ ಸಮಿತಿ ನೀಡಿದ ವರದಿಯ ಆಧಾರದ ಮೇಲೆ ಲೋಕಸಭೆಯಿಂದ ಮಹುವಾ ಮೊಯಿತ್ರಾ ಅವರನ್ನು ಉಚ್ಛಾಟನೆ ಮಾಡಲಾಗಿದೆ.

    ಮೊಯಿತ್ರಾ ಅವರು ಸಂಸತ್ತಿನಲ್ಲಿ ನರೇಂದ್ರ ಮೋದಿ ಸರ್ಕಾರವನ್ನು ಟೀಕಿಸುವ ಪ್ರಶ್ನೆಗಳನ್ನು ಕೇಳುವ ಸಲುವಾಗಿ ಉದ್ಯಮಿ ದರ್ಶನ್ ಹಿರಾನಂದನಿ ಅವರಿಂದ 2 ಕೋಟಿ ರೂ. ನಗದು ಮತ್ತು ಐಷಾರಾಮಿ ಉಡುಗೊರೆ ವಸ್ತುಗಳು ಸೇರಿದಂತೆ ಲಂಚ ಪಡೆದ ಆರೋಪ ಹೊತ್ತಿದ್ದರು.

    ಮಹುವಾ ಅವರನ್ನು ಲೋಕಸಭೆಯಿಂದ ಉಚ್ಚಾಟಿಸುವಂತೆ ಶಿಫಾರಸು ಮಾಡಿರುವ ವರದಿಯನ್ನು ಬಿಜೆಪಿ ಸಂಸದ ವಿನೋದ್‌ ಕುಮಾರ್‌ ಸೋನಕರ್‌ ನೇತೃತ್ವದ ನೀತಿ ಸಮಿತಿಯು ನ.9 ರಂದು ಅಂಗೀಕರಿಸಿತ್ತು

    ದರ್ಶನ್ ಹಿರಾನಂದಾನಿ (Darshan Hiranandani) ಅವರು ಸಂಸತ್ತಿನ ನೈತಿಕ ಸಮಿತಿಗೆ ಅಫಿಡವಿಟ್‌ ಸಲ್ಲಿಸಿ ಟಿಎಂಸಿ ಲೋಕಸಭೆ ಸಂಸದೆ ಮಹುವಾ ಮೊಯಿತ್ರಾ ಅವರು ಸಂಸತ್ತಿನ ಲಾಗಿನ್ ಐಡಿ ಮತ್ತು ಪಾಸ್‌ವರ್ಡ್ ಅನ್ನು ಹಂಚಿಕೊಂಡಿದ್ದರು ಎಂದು ಹೇಳಿದ್ದರು.

     

  • ಬೆಳಗಾವಿ ಮೂವರು ನಾಯಕರನ್ನ ಪಕ್ಷದಿಂದ ಉಚ್ಛಾಟಿಸಿದ ಬಿಜೆಪಿ

    ಬೆಳಗಾವಿ ಮೂವರು ನಾಯಕರನ್ನ ಪಕ್ಷದಿಂದ ಉಚ್ಛಾಟಿಸಿದ ಬಿಜೆಪಿ

    ಬೆಳಗಾವಿ: ಬಿಜೆಪಿ ಬೆಳಗಾವಿ ಜಿಲ್ಲೆಯ ಮೂವರು ನಾಯಕರನ್ನು ತಮ್ಮ ಪಕ್ಷದಿಂದ ಉಚ್ಛಾಟನೆ ಮಾಡಿದೆ.

    ಬೆಳಗಾವಿ ಜಿಲ್ಲೆಯ ಮಾಜಿ ಎಂಇಎಸ್ ಲೀಡರ್ ಶಿವಾಜಿ ಸುಂಠಕರ್ ಅವರನ್ನು ಬಿಜೆಪಿಯಿಂದ ಉಚ್ಛಾಟನೆ ಮಾಡಲಾಗಿದೆ. ಎಂಇಎಸ್ ಬಿಟ್ಟು ಬಿಜೆಪಿ ಸೇರಿದ್ದ ಮಾಜಿ ಮೇಯರ್ ಶಿವಾಜಿ ಸುಂಠಕರ್ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಿ ಎಂದು ಮಹಾನಗರ ಅಧ್ಯಕ್ಷ ಶಶಿಕಾಂತ್ ಪಾಟೀಲ್ ಆದೇಶ ಹೊರಡಿಸಿದ್ದಾರೆ.

    ಮಹಾನಗರ ಪಾಲಿಕೆ ಚುನಾವಣೆಯಲ್ಲಿ ವಾರ್ಡ್ 47ರಲ್ಲಿ ಬಂಡಾಯ ಅಭ್ಯರ್ಥಿಯಾಗಿ ಶಿವಾಜಿ ಸುಂಠಕರ್ ಅವರ ಪತ್ನಿ ಸುಲೋಚನಾ ಸುಂಠಕರ್ ಸ್ಪರ್ಧೆ ಮಾಡಿರುವ ಹಿನ್ನೆಲೆ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಸೂಚನೆ ಮೇರೆಗೆ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ.ಇದನ್ನೂ ಓದಿ:ತಂದಿಟ್ಟು ತಮಾಷೆ ನೋಡೋದಕ್ಕೆ ಹೇಳಿರ್ತಾರೆ – ಉಮಾಪತಿ ಬಳಿ ಕ್ಷಮೆ ಕೇಳಿದ್ದ ಭೂಗತ ಪಾತಕಿ ರವಿ

    nalin kumar kateel

    ಅದೇ ರೀತಿ ವಾರ್ಡ್ 46ರಲ್ಲಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿರುವ ಸುರೇಶ್ ಯಾದವ್ ಅವರನ್ನು ಉಚ್ಛಾಟನೆ ಮಾಡಲಾಗಿದೆ. ಮೊದಲು ಏಳು ಜನರನ್ನು ಉಚ್ಛಾಟನೆ ಮಾಡಿದ್ದ ಬಿಜೆಪಿ ಇದೀಗ ಮೂವರನ್ನು ಮಾಡುವ ಮೂಲಕ ಒಟ್ಟು 10 ಮಂದಿಯನ್ನು ಉಚ್ಛಾಟನೆ ಮಾಡಿದಂತೆ ಆಗಿದೆ.ಇದನ್ನೂ ಓದಿ:ವಿಜಯಪುರ ವಿಮಾನ ನಿಲ್ದಾಣಕ್ಕೆ 125 ಕೋಟಿ: ಗೋವಿಂದ ಕಾರಜೋಳ

  • ನಿಷ್ಠಾವಂತ ಕಾರ್ಯಕರ್ತರಿಗೆ ಅನ್ಯಾಯ ಮಾಡಿದ್ರೆ ಏನಾಗುತ್ತೆ ತಿಳಿಯಬೇಕು: ಮಲ್ಲಿಕಾರ್ಜುನ್ ಖೂಬಾ

    ನಿಷ್ಠಾವಂತ ಕಾರ್ಯಕರ್ತರಿಗೆ ಅನ್ಯಾಯ ಮಾಡಿದ್ರೆ ಏನಾಗುತ್ತೆ ತಿಳಿಯಬೇಕು: ಮಲ್ಲಿಕಾರ್ಜುನ್ ಖೂಬಾ

    – ದುಡ್ಡಿಗಾಗಿ ಬಸಕಲ್ಯಾಣದ ಬಿಜೆಪಿ ಟಿಕೆಟ್ ಸೇಲ್ ಮಾಡಿದ್ದಾರೆ

    ಬೀದರ್: ನಿಷ್ಠಾವಂತ ಕಾರ್ಯಕರ್ತರಿಗೆ ಅನ್ಯಾಯ ಮಾಡಿದರೆ ಏನಾಗುತ್ತದೆ ಎಂಬುದನ್ನು ಪಕ್ಷದ ಹಿರಿಯ ನಾಯಕರು ತಿಳಿಯಬೇಕು ಎಂದು ಬಸವಕಲ್ಯಾಣ ಬಿಜೆಪಿ ಬಂಡಾಯ ಅಭ್ಯರ್ಥಿ ಮಲ್ಲಿಕಾರ್ಜುನ್ ಖೂಬಾ ಬೇಸರ ವ್ಯಕ್ತಪಡಿಸಿದ್ದಾರೆ.

    ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಷ್ಠಾವಂತರಿಗೆ ಪಕ್ಷ ಅನ್ಯಾಯ ಮಾಡಿದೆ. ಉಚ್ಛಾಟನೆ ಮಾಡಿದ್ದನ್ನು ಸ್ವಾಗತಿಸುತ್ತೇನೆ. ಅವರು ಏನೇ ಮಾಡಿದರೂ ಸಂತೋಷದಿಂದ ಸ್ವಾಭಿಮಾನದಿಂದ ಬದುಕುತ್ತೆನೆ. ಪಕ್ಷದಿಂದ ನನಗೆ ಏನು ಅನ್ಯಾಯ ಆಗಿದೆ ಎಂದು ಅದು ಪಕ್ಷದ ಹಿರಿಯರಿಗೆ ಗೋತ್ತಿದೆ. ಕಾರ್ಯಕರ್ತರಿಗೆ ಅನ್ಯಾಯ ಮಾಡಿದರೆ ಮುಂದಿನ ದಿನಗಳಲ್ಲಿ ಪಕ್ಷಕ್ಕೆ ಏನಾಗುತ್ತೆ ಎಂದು ಅವರು ತಿಳಿದುಕೊಳ್ಳಬೇಕು. ನಾನು ತನು, ಮನ, ಧನ ಹಾಗೂ ಶ್ರಮದಿಂದ ಪಕ್ಷಕ್ಕಾಗಿ ಕೆಲಸ ಮಾದ್ದೇನೆ. ಇದರಿಂದ ನನಗೆ ಏನೂ ಆಗುವುದಿಲ್ಲ. ಪಕ್ಷಗಳು ಬರುತ್ತವೆ, ಹೋಗತ್ತವೆ ಆದರೆ ನಮ್ಮ ನಿಷ್ಠೆ ಜನರ ಪರವಾಗಿ ಇರುತ್ತದೆ ಎಂದು ಟಾಂಗ್ ನೀಡಿದರು.

    ಪಕ್ಷದಲ್ಲಿ ಯಾರು ದುಡಿಯುತ್ತಾರೋ ಅವರಿಗೆ ಟಿಕೆಟ್ ನೀಡಬೇಕು. ಐಡಿ ಕ್ರಿಯೇಟ್ ಮಾಡಿ, ದುಡ್ಡಿಗೋಸ್ಕರ ಟಿಕೆಟ್ ಸೇಲ್ ಮಾಡಿದ್ದಾರೆ. ಇಂತಹ ಕೆಲಸದಿಂದ ನಿಷ್ಠಾವಂತ ಕಾರ್ಯಕರ್ತರಿಗೆ ಅನ್ಯಾಯವಾಗುತ್ತದೆ. ಹೀಗಾಗಿ ಬಸವಕಲ್ಯಾಣದ ನ್ಯಾಯಕ್ಕಾಗಿ ಹೋರಾಟ ನಡೆಸಿದ್ದೇನೆ, ಯಾವುದೇ ಪಕ್ಷದಲ್ಲಿ ಮುಂದೆ ಈ ರೀತಿ ಆಗಬಾರದು ಎಂದರು.

    ಬಿಜೆಪಿಯವರು ಒಂದು ಕುಟುಂಬಕ್ಕೆ 3 ಸಾವಿರ ರೂ. ಹಣ ನೀಡಿದ್ದಾರೆ. ಈ ಮೂಲಕ ಚುನಾವಣೆ ಪ್ರಚಾರ ಮಾಡಿದ್ದಾರೆ. ಸರ್ಕಾರ ಪಾರದರ್ಶಕವಾಗಿ ಚುನಾವಣೆ ಮಾಡಬೇಕಿತ್ತು. ಆದರೆ ಶರಣರ ನಾಡಿನಲ್ಲಿ ದುಡ್ಡಿನ ಹೊಳೆ ಹರಿಸಿ ಚುನಾವಣೆ ನಡೆಸಿದ್ದಾರೆ. ಒಂದು ಕಾರಿನಲ್ಲಿ ಕೋಟಿಗಟ್ಟಲೇ ಹಣ ಕೊಂಡೊಯ್ದು, ಹಂಚಿದ್ದಾರೆ. ಹಲವು ಕಡೆ ವಾಹನಗಳನ್ನು ಸೀಜ್ ಮಾಡಿದ್ದಾರೆ. ದುಡ್ಡು ಹಂಚಿ ಚುನಾವಣೆ ಮಾಡುವ ಮೂಲಕ ಬಸವಣ್ಣನವರಿಗೆ ಹಾಗೂ ಪ್ರಧಾನಿ ನರೇಂದ್ರ ಮೋದಿಯವರಿಗೆ ಅವಮಾನ ಮಾಡಿದ್ದಾರೆ ಎಂದರು.

    ನಮಗೆ ಜನರ ಬೆಂಬಲವಿದೆ, ಸ್ವಾಭಿಮಾನಿ ಬಸವಕಲ್ಯಾಣ ಜನ ನನ್ನನ್ನು ಕೈ ಬಿಡುವುದಿಲ್ಲ. ನ್ಯಾಯಕ್ಕಾಗಿ ಒಳ್ಳೆಯ ರೀತಿಯಲ್ಲಿ ಸಪೋರ್ಟ್ ಮಾಡುತ್ತಿದ್ದಾರೆ, ಎಲ್ಲ ಕಡೆ ವಾತಾವರಣ ಚೆನ್ನಾಗಿದೆ ಎಂದರು.

  • ಬಿಜೆಪಿ ಬಂಡಾಯ ಅಭ್ಯರ್ಥಿ ಮಲ್ಲಿಕಾರ್ಜುನ್ ಖೂಬಾ ಪಕ್ಷದಿಂದ ಉಚ್ಛಾಟನೆ

    ಬಿಜೆಪಿ ಬಂಡಾಯ ಅಭ್ಯರ್ಥಿ ಮಲ್ಲಿಕಾರ್ಜುನ್ ಖೂಬಾ ಪಕ್ಷದಿಂದ ಉಚ್ಛಾಟನೆ

    ಬೆಂಗಳೂರು: ಬಸವಕಲ್ಯಾಣ ಬಿಜೆಪಿ ಬಂಡಾಯ ಅಭ್ಯರ್ಥಿ ಮಲ್ಲಿಕಾರ್ಜುನ ಖೂಬಾ ಅವರನ್ನು 6 ವರ್ಷಗಳ ಕಾಲ ಪಕ್ಷದಿಂದ ಉಚ್ಛಾಟನೆ ಮಾಡಿ ಆದೇಶ ಹೊರಡಿಸಲಾಗಿದೆ.

    ಪಕ್ಷದಿಂದ ಉಚ್ಛಾಟನೆ ಮಾಡಿ ರಾಜ್ಯ ಬಿಜೆಪಿ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ್ ಪಾಟೀಲ್ ಆದೇಶ ಹೊರಡಿಸಿದ್ದಾರೆ. ಬಿಜೆಪಿಯಿಂದ ಟಿಕೆಟ್ ಸಿಗದ ಹಿನ್ನೆಲೆ ಮಲ್ಲಿಕಾರ್ಜುನ್ ಖೂಬಾ ಬಂಡಾಯ ಅಭ್ಯರ್ಥಿಯಾಗಿ ಬಸವಕಲ್ಯಾಣ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಇಂದು ಮತದಾನ ಅರ್ಧ ಮುಗಿದ ನಂತರ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ 6 ವರ್ಷಗಳ ಕಾಲ ಉಚ್ಛಾಟನೆ ಮಾಡಲಾಗಿದೆ.

    ಪಕ್ಷದಿಂದ ಖೂಬಾ ಅವರಿಗೆ ಟಿಕೆಟ್ ನೀಡಲು ನಿರಾಕರಿಸಲಾಗಿತ್ತು. ಇವರ ಬದಲಿಗೆ ಶರಣು ಸಲಗರ್ ಅವರಿಗೆ ಬಿಜೆಪಿಯಿಂದ ಟಿಕೆಟ್ ನೀಡಲಾಗಿತ್ತು. ಇದರಿಂದ ಬೇಸರಗೊಂಡಿದ್ದ ಖೂಬಾ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಇಂದು ಉಪಚುನಾವಣೆಯ ಕ್ಷೇತ್ರಗಳಲ್ಲಿ ಮತದಾನ ನಡೆದಿದ್ದು, ಬಸವಕಲ್ಯಾಣದಲ್ಲಿ ಸಹ ಅರ್ಧ ಮತದಾನ ನಡೆದ ಬಳಿಕ ಖೂಬಾ ಅವರನ್ನು ಉಚ್ಛಾಟನೆ ಮಾಡಿ ಆದೇಶಿಸಲಾಗಿದೆ.

  • ಶರತ್ ಬಚ್ಚೇಗೌಡ ಮನವೊಲಿಕೆ ಫೇಲ್- ಬಿಜೆಪಿಯಿಂದ ಉಚ್ಛಾಟಿಸಲು ಮುಂದಾದ ಸಿಎಂ

    ಶರತ್ ಬಚ್ಚೇಗೌಡ ಮನವೊಲಿಕೆ ಫೇಲ್- ಬಿಜೆಪಿಯಿಂದ ಉಚ್ಛಾಟಿಸಲು ಮುಂದಾದ ಸಿಎಂ

    – ಸಂಜೆಯೊಳಗೆ ನಿಗಮ ಮಂಡಳಿ ತ್ಯಜಿಸಲು ಡೆಡ್‍ಲೈನ್

    ಬೆಂಗಳೂರು: ಹೊಸಕೋಟೆಯಲ್ಲಿ ರಾಜಕೀಯ ರಣಕಣ ರಂಗೇರುತ್ತಿದೆ. ಬಂಡಾಯ ಅಭ್ಯರ್ಥಿ ಶರತ್ ಬಚ್ಚೇಗೌಡ ಮನವೊಲಿಕೆಗೆ ಸಿಎಂ ಯಡಿಯೂರಪ್ಪ ಯತ್ನಿಸಿದರೂ ವಿಫಲವಾಗಿದ್ದು, ಬಿಜೆಪಿಯಿಂದ ಶರತ್ ಉಚ್ಛಾಟನೆ ಫಿಕ್ಸ್ ಎನ್ನುವಂತೆ ಸಿಎಂ ಮಾತನಾಡಿದ್ದಾರೆ.

    ಶರತ್ ಬಚ್ಚೇಗೌಡ ಸೋಲುತ್ತಾರೆ, ಎಂಟಿಬಿ ನಾಗರಾಜ್ ಗೆದ್ದೇ ಗೆಲ್ಲುತ್ತಾರೆ ಎನ್ನುವ ವಿಶ್ವಾಸದಲ್ಲಿ ಸಿಎಂ ಇದ್ದು, ಶರತ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇಂದು ಸಂಜೆಯೊಳಗೆ ಶರತ್ ನಿಗಮ ಮಂಡಳಿ ತ್ಯಜಿಸಬೇಕು ಎಂದು ಸಿಎಂ ಆದೇಶಿಸಿದ್ದಾರೆ. ಈ ನಡುವೆ ಶರತ್ ಬಚ್ಚೇಗೌಡ ವಿರುದ್ಧ ಕ್ರಮಕ್ಕೆ ಮುಂದಾಗಿದ್ದು, ಪಕ್ಷದಿಂದ ಶರತ್ ಅವರ ಉಚ್ಛಾಟನೆ ಮಾಡಲಾಗುತ್ತದೆ ಎನ್ನುವಂತೆ ಸಿಎಂ ಹೇಳಿಕೆ ಕೊಟ್ಟಿದ್ದಾರೆ.

    ಹೊಸಕೋಟೆ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿರುವ ಶರತ್ ಬಚ್ಚೇಗೌಡ ಅವರು ಇಂದು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಆದಿಚುಂಚನಗಿರಿ ಕ್ಷೇತ್ರಕ್ಕೆ ಭೇಟಿಕೊಟ್ಟಿದ್ದಾರೆ. ಕಾಲಭೈರವೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಶರತ್ ಅವರು ನಿರ್ಮಲಾನಂದನಾಥ ಸ್ವಾಮೀಜಿ ಆಶೀರ್ವಾದ ಪಡೆದಿದ್ದಾರೆ. ಹಾಗೆಯೇ ಕೆಲ ಕಾಲ ಸ್ವಾಮೀಜಿಯೊಂದಿಗೆ ಮಾತುಕತೆಯನ್ನು ಕೂಡ ನಡೆಸಿದ್ದಾರೆ.

    ಉಪಚುನಾವಣೆಯ ಹಿನ್ನೆಲೆಯಲ್ಲಿ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರವನ್ನು ಸೋಮವಾರದಿಂದ ಆರಂಭ ಮಾಡಲಿರುವ ಸಿಎಂ ಬಿಎಸ್‍ವೈ, ಮೊದಲು ಅನರ್ಹ ಶಾಸಕ ಎಂಟಿಬಿ ನಾಗರಾಜ್‍ರ ಹೊಸಕೋಟೆಯಿಂದಲೇ ಚುನಾವಣಾ ಪ್ರಚಾರವನ್ನು ಆರಂಭಿಸಲಿದ್ದಾರೆ. ಅಲ್ಲದೇ ಎಲ್ಲಾ ಅನರ್ಹ ಶಾಸಕರ ಕ್ಷೇತ್ರಗಳಲ್ಲಿ 1 ದಿನ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಲಿದ್ದಾರೆ.

    ಅನರ್ಹ ಶಾಸಕರಿಗೆ ನೀಡಿರೋ ಭರವಸೆಯಂತೆ ಸಿಎಂ ಪ್ರಚಾರದಲ್ಲಿ ಭಾಗಿಯಾಗಲಿದ್ದಾರೆ. ಅಲ್ಲದೇ ಅನರ್ಹರನ್ನು ಮತ್ತೆ ಶಾಸಕರನ್ನು ಮಾಡುತ್ತೇನೆ ಎಂಬ ಶಪಥವನ್ನು ಬಿಎಸ್‍ವೈ ಮಾಡಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಈ ಹಿನ್ನೆಲೆಯಲ್ಲಿ 14 ಕ್ಷೇತ್ರಗಳಿಗೆ ಸಿಎಂ ಭೇಟಿ ನೀಡಲಿದ್ದು, ಚುನಾವಣಾ ಪ್ರಚಾರಕ್ಕಾಗಿ ಮಾಸ್ಟರ್ ಪ್ಲಾನ್ ಕೂಡ ಸಿದ್ಧವಾಗಿದೆ.

    ಸಿಎಂ ಬಿಎಸ್‍ವೈ ಅವರು ಪ್ರಚಾರ ನಡೆಸುವ ಸಂದರ್ಭದಲ್ಲಿ ಪಕ್ಷದ ಬೂತ್ ಮಟ್ಟದ ನಾಯಕರು, ಕಾರ್ಯಕರ್ತರು, ಮುಖಂಡರು ತಪ್ಪದೇ ಸಭೆಯಲ್ಲಿ ಭಾಗಿಯಾಗುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಸ್ವತಃ ಸಿಎಂ ಅವರೇ ಪ್ರಚಾರ ಕಾರ್ಯಕ್ಕೆ ಆಗಮಿಸುವುದರಿಂದ ಪಕ್ಷದಲ್ಲಿ ಉಂಟಾಗಿರುವ ಅಸಮಾಧಾನ ಶಮನವಾಗುತ್ತದೆ ಎಂಬುವುದು ಇದರ ಹಿಂದಿನ ಉದ್ದೇಶವಾಗಿದೆ ಎನ್ನಲಾಗಿದೆ.

  • ಎಂಬಿಪಿಗೆ ಆಶೀರ್ವಾದ ಮಾಡಿದ್ದಕ್ಕೆ ರೇವಣಸಿದ್ದ ಶಿವಾಚಾರ್ಯ ಸ್ವಾಮೀಜಿ ಉಚ್ಛಾಟನೆ!

    ಎಂಬಿಪಿಗೆ ಆಶೀರ್ವಾದ ಮಾಡಿದ್ದಕ್ಕೆ ರೇವಣಸಿದ್ದ ಶಿವಾಚಾರ್ಯ ಸ್ವಾಮೀಜಿ ಉಚ್ಛಾಟನೆ!

    ಕಲಬುರಗಿ: ಗೃಹ ಸಚಿವ ಎಂಬಿ ಪಾಟೀಲ್‍ಗೆ ರುದ್ರಾಕ್ಷಿ ಕೀರಿಟ ನೀಡಿ ಸಿಎಂ ಆಗಲಿ ಎಂದು ಆಶೀರ್ವಾದ ಮಾಡಿದ್ದಕ್ಕೆ ಕಲಬುರಗಿಯ ಸರಡಗಿ ಮಠದ ಶ್ರೀ ರೇವಣಸಿದ್ದ ಶಿವಾಚಾರ್ಯ ಸ್ವಾಮೀಜಿಯವರನ್ನು ಶಿವಾಚಾರ್ಯ ಸಂಸ್ಥೆಯಿಂದ ಉಚ್ಛಾಟನೆ ಮಾಡಲಾಗಿದೆ.

    ಶ್ರೀ ರೇವಣಸಿದ್ದ ಸ್ವಾಮೀಜಿಗಳು ಕಲಬುರಗಿ ತಾಲೂಕಿನ ಸರಡಗಿ ಮಠದವರು. ಕಳೆದ ಕೆಲವು ದಿನಗಳ ಹಿಂದೆ ಸರಡಗಿ ಮಠಕ್ಕೆ ಎಂ.ಬಿ ಪಾಟೀಲ್ ಭೇಟಿ ನೀಡಿದ್ದರು. ಈ ವೇಳೆ ರೇವಣಸಿದ್ದ ಸ್ವಾಮೀಜಿಗಳು ಸಚಿವರಿಗೆ ಆಶೀರ್ವಾದ ಮಾಡಿದ್ದರು. ಆದರೆ ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಕೈ ಹಾಕಿದ ಎಂ.ಬಿ.ಪಾಟೀಲ್ ಅವರಿಗೆ ಸಿಎಂ ಆಗಲಿ ಎಂದು ಆಶೀರ್ವಾದ ಮಾಡಿದಕ್ಕೆ ರೇವಣಸಿದ್ದ ಸ್ವಾಮೀಜಿಗಳನ್ನು ಉಚ್ಛಾಟನೆಗೊಳಿಸಿ ಎಂದು ವಿಮಲಮಠದ ವಿರಕ್ತ ಶಿವಾಚಾರ್ಯ ಸ್ವಾಮೀಜಿ ಆದೇಶ ನೀಡಿದ್ದಾರೆ.

    ಈ ಬಗ್ಗೆ ಶ್ರೀ ರೇವಣಸಿದ್ದ ಶಿವಚಾರ್ಯ ಸ್ವಾಮೀಜಿ ಮಾತನಾಡಿ, ಮದ್ಯ ಮುಕ್ತ ಗ್ರಾಮ ಮಾಡಲು ಅಭಿಯಾನ ಹಮ್ಮಿಕೊಂಡಿದ್ದೇವು. ಆ ಒಂದು ಅಭಿಯಾನಕ್ಕೆ ಗೃಹ ಸಚಿವರನ್ನ ಉದ್ಘಾಟನೆಗೆ ಕರೆಸಿದ್ದೇವು. ಈ ವೇಳೆ ಎಂ.ಬಿ ಪಾಟೀಲ್‍ರಿಗೆ ನೀವು ಸಿಎಂ ಆಗುತ್ತೀರಾ ಎಂದು ಆಶೀರ್ವಾದ ಮಾಡಿದ್ದು ನಿಜ. ಮಠಕ್ಕೆ ಬರೋ ಪ್ರತಿಯೊಬ್ಬರನ್ನ ಆಶಿರ್ವಾದ ಮಾಡೋದು ನಮ್ಮ ಕರ್ತವ್ಯ ಎಂದರು.

    ಆದರೆ ಇದೇ ವಿಚಾರದಿಂದ ನನ್ನ ಶಿವಾಚಾರ್ಯ ಸಂಸ್ಥೆಯಿಂದ ಉಚ್ಛಾಟಿಸಲಾಗಿದೆ. ನನ್ನ ಕರ್ತವ್ಯ ನಾನು ಪಾಲನೆ ಮಾಡಿದ್ದೀನಿ, ಉಚ್ಛಾಟನೆ ಮಾಡಿದರೆ ಮಾಡಲಿ ಎಂದು ವಿಮಲ ಮಠದ ವೀರಕ್ತ ಶಿವಾಚಾರ್ಯ ಸ್ವಾಮೀಜಿಗೆ ರೇವಣಸಿದ್ದ ಶಿವಚಾರ್ಯ ಸ್ವಾಮೀಜಿ ತಿರುಗೇಟು ನೀಡಿದರು.

  • ಹೆಗಡೆ, ನಳಿನ್ ವಿರುದ್ಧ ಕ್ರಮ ಯಾಕಿಲ್ಲ – ಬಿಜೆಪಿ ವಿರುದ್ಧವೇ ತಿರುಗಿಬಿದ್ದ ಕಾರ್ಯಕರ್ತರು

    ಹೆಗಡೆ, ನಳಿನ್ ವಿರುದ್ಧ ಕ್ರಮ ಯಾಕಿಲ್ಲ – ಬಿಜೆಪಿ ವಿರುದ್ಧವೇ ತಿರುಗಿಬಿದ್ದ ಕಾರ್ಯಕರ್ತರು

    ತುಮಕೂರು: ನಾಥುರಾಮ್ ಗೋಡ್ಸೆ ದೇಶಭಕ್ತ ಎಂದು ವಿವಾದಾತ್ಮಕ ಪೋಸ್ಟ್ ಹಾಕಿದ್ದ ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಹನುಮಂತರಾಜು ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಿದಕ್ಕೆ ಬಿಜೆಪಿ ನಾಯಕರ ವಿರುದ್ಧ ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ದಾರೆ.

    ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನ ಕ್ರಮವನ್ನು ಖಂಡಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಕಾರ್ಯಕರ್ತರು, ನಳಿನ್ ಕುಮಾರ್ ಕಟೀಲ್, ಅನಂತಕುಮಾರ್ ಹೆಗಡೆಯಂತವರ ವಿರುದ್ಧ ಕ್ರಮ ಕೈಗೊಳ್ಳಲಾಗದ ನಾಯಕರು ನಿಷ್ಠಾವಂತ ಕಾರ್ಯಕರ್ತನ ಮೇಲೆ ಕ್ರಮ ಕೈಗೊಂಡಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.

    ಪಕ್ಷಕ್ಕಾಗಿ ಪ್ರಾಮಾಣಿಕವಾಗಿ ದುಡಿದವರನ್ನು ಉಚ್ಚಾಟನೆ ಮಾಡಿದ್ದೀರಾ? ತಾಕತ್ತಿದ್ದರೆ ಅಂದಿನಿಂದಲೂ ವಿವಾದಾತ್ಮಕ ಹೇಳಿಕೆ ನೀಡುತ್ತಿರುವ ಶಾಸಕರು, ಸಂಸದರ ವಿರುದ್ಧ ಕ್ರಮಕೈಗೊಳ್ಳಿ. ಬಿಜೆಪಿಯ ಷಂಡ ನಾಯಕರೇ ನಿಮ್ಮ ಬೊಗಳೆ ಹಿಂದುತ್ವ ಎಷ್ಟು ಸಾರಿ ಸಾಬೀತು ಮಾಡುತ್ತೀರಿ. ಹನುಮಂತರಾಜು ಹೇಳಿಕೆಗೆ ನಾವೆಲ್ಲ ಬದ್ಧ ಎಂದು ರಾಜ್ಯ ಬಿಜೆಪಿ ನಾಯಕರನ್ನು ತೆಗಳಿ ಪೋಸ್ಟ್ ಮಾಡಿದ್ದಾರೆ.

    ತುಮಕೂರು ಜಿಲ್ಲೆಯ ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಹನುಮಂತರಾಜು ಅವರು ತನ್ನ ಫೇಸ್‍ಬುಕ್‍ನಲ್ಲಿ ಮಹಾತ್ಮ ಗಾಂಧೀಜಿ ಅವರನ್ನು ಕೊಂದ ನಾಥೂರಾಮ್ ಗೋಡ್ಸೆ ಅವರು ಅಪ್ರತಿಮ ದೇಶಭಕ್ತ ಎಂದು ಶುಕ್ರವಾರ ಪೋಸ್ಟ್ ಹಾಕಿದ್ದಾರು. ಅಷ್ಟೇ ಅಲ್ಲದೆ, ತನ್ನ ಅಸ್ಥಿಯನ್ನು ಸಿಂಧೂ ನದಿಯಲ್ಲಿ ವಿಸರ್ಜನೆ ಮಾಡಬೇಕು ಎಂದು ಮಹಾನ್ ರಾಷ್ಟ್ರಭಕ್ತ ಗೋಡ್ಸೆ ನೇಣಿನ ಕುಣಿಕೆಗೆ ತಲೆ ಕೊಟ್ಟ ಎಂದು ಮತ್ತೊಂದು ಪೋಸ್ಟ್ ಮಾಡಿದ್ದರು. ಈ ವಿಚಾರವಾಗಿ ಹನುಮಂತರಾಜು ಅವರನ್ನು ಬಿಜೆಪಿ ತನ್ನ ಪಕ್ಷದಿಂದ ವಜಾ ಮಾಡಿತ್ತು.