Tag: ಉಚಿತ ಬಸ್ ಪ್ರಯಾಣ

  • ಉಚಿತ ಬಸ್‌ ಪ್ರಯಾಣದ ಮೊದಲ ಟಿಕೆಟ್‌ ಪಡೆದ ಅದೃಷ್ಟಶಾಲಿ ಮಹಿಳೆ ಇವರೇ..!

    ಉಚಿತ ಬಸ್‌ ಪ್ರಯಾಣದ ಮೊದಲ ಟಿಕೆಟ್‌ ಪಡೆದ ಅದೃಷ್ಟಶಾಲಿ ಮಹಿಳೆ ಇವರೇ..!

    ಬೆಂಗಳೂರು: ಸರ್ಕಾರಿ ಬಸ್‌ನಲ್ಲಿ ಉಚಿತ ಪ್ರಯಾಣ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರಿಂದ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ (Vandita Sharma) ಅವರು ಮೊದಲ ಟಿಕೆಟ್‌ ಪಡೆದು ಗಮನ ಸೆಳೆದರು.

    ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಯೋಜನೆ ‘ಶಕ್ತಿ’ಗೆ ಭಾನುವಾರ ಚಾಲನೆ ದೊರೆಯಿತು. ಆಯ್ದ ಮಹಿಳೆಯರಿಗೆ ಟಿಕೆಟ್‌ ನೀಡುವ ಮೂಲಕ ಯೋಜನೆಗೆ ಸಿದ್ದರಾಮಯ್ಯ ಅವರು ಅಧಿಕೃತ ಚಾಲನೆ ನೀಡಿದರು. ಇದನ್ನೂ ಓದಿ: ನಮಗೆ ಎಷ್ಟೇ ಕಷ್ಟ ಬರಲಿ 5 ಗ್ಯಾರಂಟಿ ಈಡೇರಿಸುತ್ತೇವೆ: ಸಿದ್ದರಾಮಯ್ಯ ಶಪಥ

    ಯೋಜನೆ ಭಾಗವಾಗಿ ಸಿದ್ದರಾಮಯ್ಯ ಅವರಿಂದ ವಂದಿತಾ ಶರ್ಮಾ ಅವರು ಮೊದಲ ಟಿಕೆಟ್‌ ಪಡೆದರು. ಟಿಕೆಟ್‌ ಪ್ರದರ್ಶಿಸಿ ಖುಷಿ ವ್ಯಕ್ತಪಡಿಸಿದರು. ನಂತರ ಎರಡನೇ ಟಿಕೆಟ್‌ನ್ನು ಕಾಂಗ್ರೆಸ್‌ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್‌ ಪಡೆದುಕೊಂಡರು.

    ವಿಧಾನಸೌಧದ ಮುಂಭಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಕ್ತಿ ಯೋಜನೆಯನ್ನು ಉದ್ಘಾಟಿಸಿದರು. ಮಧ್ಯಾಹ್ನ 1 ಗಂಟೆಯ ನಂತರ ಎಲ್ಲ ಮಹಿಳೆಯರು, ವಿದ್ಯಾರ್ಥಿನಿಯರಿಗೆ ಈ ಸೌಲಭ್ಯ ಕಲ್ಪಿಸಲಾಯಿತು. 18,609 ಬಸ್‌ಗಳು ಉಚಿತ ಪ್ರಯಾಣಕ್ಕೆ ಲಭ್ಯ ಇವೆ. 41.80 ಲಕ್ಷ ಮಹಿಳೆಯರು ಈ ಸೌಲಭ್ಯದ ಫಲಾನುಭವಿಗಳು ಎಂದು ಅಂದಾಜಿಸಲಾಗಿದೆ. ಇದನ್ನೂ ಓದಿ: ‘ಶಕ್ತಿ’ ಯೋಜನೆ ಹೆಸರಿನ ಹಿಂದಿನ ಸೀಕ್ರೆಟ್ ರಿವೀಲ್ ಮಾಡಿದ ಸಿಎಂ!

  • ʼಶಕ್ತಿʼ ಯೋಜನೆಯನ್ನ 10 ವರ್ಷವೂ ಉಚಿತ ಕೊಡ್ತೀವಿ: ರಾಮಲಿಂಗಾ ರೆಡ್ಡಿ

    ʼಶಕ್ತಿʼ ಯೋಜನೆಯನ್ನ 10 ವರ್ಷವೂ ಉಚಿತ ಕೊಡ್ತೀವಿ: ರಾಮಲಿಂಗಾ ರೆಡ್ಡಿ

    ಬೆಂಗಳೂರು: ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣ ಯೋಜನೆ (Free Bus Travel) ಒಂದೇ ವರ್ಷ ಇರೋದು ಅಂತ ಬಿಜೆಪಿಯವರು ಹೇಳ್ತಾರೆ. ಆದರೆ ಈ ಯೋಜನೆ 5 ವರ್ಷ ಪೂರ್ತಿ ಇರುತ್ತೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ (Ramalinga Reddy) ಹೇಳಿದರು.

    ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಯೋಜನೆ ‘ಶಕ್ತಿ’ಗೆ ವಿಧಾನಸೌಧದಲ್ಲಿ ಚಾಲನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮತ್ತೆ ಚುನಾವಣೆ ಆಗಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ. ಆಮೇಲೂ ಉಚಿತ ಕೊಡ್ತೀವಿ. 10 ವರ್ಷವೂ ಉಚಿತ ಕೊಡ್ತೀವಿ ಎಂದು ಭರವಸೆ ನೀಡಿದರು. ಇದನ್ನೂ ಓದಿ: ಕಪ್ಪು ಹಣ ತಂದು ನಮ್ಮ ಅಕೌಂಟ್‌ಗೆ ಹಾಕ್ಲಿಲ್ಲ; ಬಿಜೆಪಿ ವಿರುದ್ಧ ನಾವು ಅಭಿಯಾನ ಮಾಡ್ಬೇಕಾಗುತ್ತೆ – ಡಿಕೆಶಿ

    ಬಸ್ ಸ್ಟಾಪ್ ಇರೋ ಕಡೆ ಬಸ್ ಕಡ್ಡಾಯವಾಗಿ ನಿಲ್ಲಿಸಬೇಕು. ನಮ್ಮ ಇಲಾಖೆಗೆ ಒಳ್ಳೆ ಹೆಸರು ತರಬೇಕು. ನನ್ನ ಅವಧಿಯಲ್ಲಿ 203 ಪ್ರಶಸ್ತಿ ಇಲಾಖೆಗೆ ಬಂದಿತ್ತು. ಬಿಜೆಪಿ ಅವಧಿಯಲ್ಲಿ 50 ಪ್ರಶಸ್ತಿ ಮಾತ್ರ ಬಂದಿದೆ. ಕಾರ್ಪೋರೇಷನ್ ನಷ್ಟದಲ್ಲಿ ಇದೆ, ಹೇಗೆ ನಡೆಸುತ್ತಾರೆ ಅಂತ ಹೇಳ್ತಾರೆ. ಪ್ರತಿ ತಿಂಗಳು ಲೆಕ್ಕ ಕೊಡ್ತೀವಿ. ಎಷ್ಟು ಜನ ಓಡಾಡುತ್ತಾರೆ ಅಂತ ಲೆಕ್ಕ ಕೊಡ್ತೀವಿ. ಮಹಿಳೆಯರ ಸಬಲೀಕರಣಕ್ಕೆ ಈ ಯೋಜನೆ ಜಾರಿ ಮಾಡಿದ್ದೇವೆ ಎಂದು ಬಿಜೆಪಿಗೆ ತಿರುಗೇಟು ನೀಡಿದರು.

    ನಮ್ಮ ಸರ್ಕಾರ ಅಧಿಕಾರಕ್ಕೆ ಬಂದು 20 ದಿನ ಆಗಿದೆ‌. ನುಡಿದಂತೆ ನಡೆಯುವ ಸರ್ಕಾರ ಇದ್ದರೆ ದೇಶದಲ್ಲಿ ಅದು ಕಾಂಗ್ರೆಸ್ ಸರ್ಕಾರ. ನುಡಿದಂತೆ ನಡೆಯೋದು ನಮಗೆ ಹೊಸದಲ್ಲ. 2013 ರಲ್ಲಿ 165 ಭರವಸೆಗಳಲ್ಲಿ ಪೈಕಿ 158 ಭರವಸೆ ಈಡೇರಿಸಿದ್ದೇವೆ. 2018 ರಲ್ಲಿ ಸೋತೆವು. ಬಿಜೆಪಿ 600 ಆಶ್ವಾಸನೆ ಕೊಟ್ಟಿದ್ರು. ಆದರೆ 60 ಮಾತ್ರ ಈಡೇರಿಕೆ ಮಾಡಿದ್ರು. ಬಿಜೆಪಿಗೂ ನಮಗೂ ಅಜಗಜಾಂತರ ವ್ಯತ್ಯಾಸ ಇದೆ. ನಾವು ನುಡಿದಂತೆ ನಡೆಯುತ್ತೇವೆ‌ ಎಂದು ಬಿಜೆಪಿ ವಿರುದ್ಧ ಗುಡುಗಿದರು. ಇದನ್ನೂ ಓದಿ: ‘ಶಕ್ತಿ’ ಯೋಜನೆಗೆ ಸಿಎಂ ಸಿದ್ದರಾಮಯ್ಯ ಚಾಲನೆ

    ಇಂದಿನಿಂದ ಶಕ್ತಿ ಯೋಜನೆ ಪ್ರಾರಂಭ ಆಗುತ್ತೆ‌. ಎಲ್ಲಾ ಮಹಿಳೆಯರಿಗೆ ಉಚಿತ ಪ್ರಯಾಣ ಇರುತ್ತದೆ. ರಾಹುಲ್ ಗಾಂಧಿ ಘೋಷಣೆ ಮಾಡಿದ್ರು. ಇಂದು ಜಾರಿ ಮಾಡ್ತಿದ್ದೇವೆ. ಎಲ್ಲಾ ಹೆಣ್ಣುಮಕ್ಕಳು ಉಪಯೋಗ ಮಾಡಿಕೊಳ್ಳಬಹುದು. ರಾಜ್ಯದ ಯಾವುದೇ ಮೂಲೆಗೆ ಹೋಗಬಹುದು. 3 ತಿಂಗಳಲ್ಲಿ ಸ್ಮಾರ್ಟ್ ಕಾರ್ಡ್ ಕೊಡ್ತೀವಿ. ಅಲ್ಲಿವರೆಗೂ ಒಂದು ಗುರುತಿನ ಚೀಟಿ ಇಟ್ಟುಕೊಂಡು ಓಡಾಡಿ. ಸ್ಮಾರ್ಟ್ ಕಾರ್ಡ್ ಕೂಡಾ ನಾವೇ ಉಚಿತವಾಗಿ ಕೊಡ್ತೀವಿ. ಅದಕ್ಕೂ ನಾವೇ ಹಣ ಭರಿಸುತ್ತೇವೆ ಎಂದು ತಿಳಿಸಿದರು.

  • ಕಪ್ಪು ಹಣ ತಂದು ನಮ್ಮ ಅಕೌಂಟ್‌ಗೆ ಹಾಕ್ಲಿಲ್ಲ; ಬಿಜೆಪಿ ವಿರುದ್ಧ ನಾವು ಅಭಿಯಾನ ಮಾಡ್ಬೇಕಾಗುತ್ತೆ – ಡಿಕೆಶಿ

    ಕಪ್ಪು ಹಣ ತಂದು ನಮ್ಮ ಅಕೌಂಟ್‌ಗೆ ಹಾಕ್ಲಿಲ್ಲ; ಬಿಜೆಪಿ ವಿರುದ್ಧ ನಾವು ಅಭಿಯಾನ ಮಾಡ್ಬೇಕಾಗುತ್ತೆ – ಡಿಕೆಶಿ

    ಬೆಂಗಳೂರು: ಕಪ್ಪು ಹಣ ತಂದು ನಮ್ಮ ಅಕೌಂಟ್‌ಗೆ ಹಾಕಲೇ ಇಲ್ಲ. ಈಗ ನಾವು ಅವರ ಮೇಲೆ ಅಭಿಯಾನ ಶುರು ಮಾಡಬೇಕಾಗುತ್ತದೆ ಎಂದು ಬಿಜೆಪಿ ವಿರುದ್ಧ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ (DK Shivakumar) ಕಿಡಿಕಾರಿದರು.

    ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಯೋಜನೆ ‘ಶಕ್ತಿ’ಗೆ ವಿಧಾನಸೌಧದಲ್ಲಿ ಇಂದು ಚಾಲನೆ ಕಾರ್ಯಕ್ರಮದಲ್ಲಿ ಭಾಗವಹಿಸುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಬಸವಣ್ಣನ ನಾಡಿನಲ್ಲಿದ್ದೇವೆ. ನುಡಿದಂತೆ ನಡೆಯೋದು ಕಾಂಗ್ರೆಸ್ ಶಕ್ತಿ. ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ. ಟೀಕೆ ಮಾಡೋದ್ರಿಂದ ವಿರೋಧ ಪಕ್ಷಗಳನ್ನು ತಿದ್ದೋ ಕೆಲಸ ಮಾಡ್ತೀವಿ ಎಂದು ತಿಳಿಸಿದರು. ಇದನ್ನೂ ಓದಿ: ನಮ್ಗೆ ಫ್ರೀ ಟಿಕೆಟ್ ಬೇಡ್ವೇಬೇಡ, ದಯವಿಟ್ಟು ಎಣ್ಣೆ ರೇಟು ಇಳಿಸಿ: ಯುವಕ ಮನವಿ

    ಬಿಜೆಪಿಯವರು ಕಪ್ಪು ಹಣ ತಂದು ಅಕೌಂಟ್‌ಗೆ ಹಾಕಲಿಲ್ಲ. ಆದಾಯ ಡಬಲ್‌ ಮಾಡಲಿಲ್ಲ. ಯುವಕರಿಗೆ ಉದ್ಯೋಗಗಳನ್ನು ಕೊಡಲಿಲ್ಲ. ನಾವು ಬಿಜೆಪಿ ವಿರುದ್ದ ಅಭಿಯಾನ ಆರಂಭಿಸಬೇಕಾಗುತ್ತದೆ ಎಂದು ಲೇವಡಿ ಮಾಡಿದರು.

    ಇವತ್ತು ಪವಿತ್ರವಾದ ದಿನ. ಜನರನ್ನು ಸಂತೋಷ ಪಡಿಸುವುದೇ ನಿಜವಾದ ಈಶ್ವರನ ಪೂಜೆ. ನಾನು ಈಗ ಈಶ್ವರನ ಪೂಜೆ ಮಾಡಿ ಬಂದಿದ್ದೇನೆ. ಜನರಲ್ಲಿ ಈಶ್ವರನನ್ನ ನೋಡುತ್ತಿದ್ದೇನೆ ಎಂದು ಹೇಳಿದರು. ಇದನ್ನೂ ಓದಿ: ‘ಶಕ್ತಿ’ ಯೋಜನೆಯ ಮಹಿಳೆಯರ ಉಚಿತ ಟಿಕೆಟ್‌ ಹೇಗಿರುತ್ತೆ ಗೊತ್ತಾ?

    ವಿಧಾನಸೌಧದ ಮುಂಭಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಕ್ತಿ ಯೋಜನೆಯನ್ನು ಉದ್ಘಾಟಿಸಿದರು. ಮಧ್ಯಾಹ್ನ 1 ಗಂಟೆಯ ನಂತರ ಎಲ್ಲ ಮಹಿಳೆಯರು, ವಿದ್ಯಾರ್ಥಿನಿಯರಿಗೆ ಈ ಸೌಲಭ್ಯ ಸಿಗಲಿದೆ. 18,609 ಬಸ್‌ಗಳು ಉಚಿತ ಪ್ರಯಾಣಕ್ಕೆ ಲಭ್ಯ ಇವೆ. 41.80 ಲಕ್ಷ ಮಹಿಳೆಯರು ಈ ಸೌಲಭ್ಯದ ಫಲಾನುಭವಿಗಳು ಎಂದು ಅಂದಾಜಿಸಲಾಗಿದೆ.

  • ಟಿಕೆಟ್.. ಟಿಕೆಟ್.. ಟಿಕೆಟ್.. – ಸರ್ಕಾರಿ ಬಸ್ ಕಂಡಕ್ಟರ್ ಆಗಲಿದ್ದಾರೆ ಸಿಎಂ ಸಿದ್ದು!

    ಟಿಕೆಟ್.. ಟಿಕೆಟ್.. ಟಿಕೆಟ್.. – ಸರ್ಕಾರಿ ಬಸ್ ಕಂಡಕ್ಟರ್ ಆಗಲಿದ್ದಾರೆ ಸಿಎಂ ಸಿದ್ದು!

    ಬೆಂಗಳೂರು: ಕರ್ನಾಟಕದ ಕಾಂಗ್ರೆಸ್ ಗ್ಯಾರಂಟಿ (Congress Guarantee) ಯೋಜನೆಗಳು ಇಡಿ ದೇಶದ ಗಮನವನ್ನೇ ಸೆಳೆದಿದೆ. ಅದರಲ್ಲೂ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ (Free Bus Travel for Women) ಯೋಜನೆಯಾಗಿರುವ ಶಕ್ತಿ (Shakti Scheme) ಅತ್ಯಂತ ನಿರೀಕ್ಷಿತ ಯೋಜನೆಗಳಲ್ಲಿ ಒಂದಾಗಿದೆ. ಇದೇ ಭಾನುವಾರದಂದು ಈ ಯೋಜನೆಗೆ ಚಾಲನೆ ಸಿಗಲಿದೆ. ಕಾಂಗ್ರೆಸ್ ಗ್ಯಾರಂಟಿಗಳಿಗೆ ಇದೀಗ ವಿಭಿನ್ನವಾಗಿ ಚಾಲನೆ ನೀಡಲು ಸಿಎಂ ಸಿದ್ದರಾಮಯ್ಯ (Siddaramaiah) ಸ್ವತಃ ಬಸ್‌ನ ಕಂಡಕ್ಟರ್ (Bus Conductor) ಆಗಲಿದ್ದಾರೆ.

    ಜೂನ್ 11 ರಂದು ಶಕ್ತಿ ಯೋಜನೆಗೆ ವಿಶೇಷ ರೂಪದಲ್ಲಿ ಚಾಲನೆ ನೀಡಲು ಸಿದ್ದರಾಮಯ್ಯ ಮುಂದಾಗಿದ್ದಾರೆ. ತಾವೇ ಬಸ್ ಕಂಡಕ್ಟರ್ ಆಗಿ ಮಹಿಳೆಯರಿಗೆ ಉಚಿತ ಟಿಕೆಟ್ ವಿತರಿಸಲಿದ್ದಾರೆ. ಬಿಎಂಟಿಸಿ ಬಸ್‌ನಲ್ಲಿ ಟಿಕೆಟ್ ವಿತರಿಸಿ ಶಕ್ತಿ ಯೋಜನೆಗೆ ಸಿಎಂ ಚಾಲನೆ ನೀಡಲಿದ್ದಾರೆ. ಇದನ್ನೂ ಓದಿ: ಕೋಪದಲ್ಲಿ ಅಜ್ಜಿ ಕೊಂದು, ಕೊರಿಯನ್ ವೆಬ್ ಸೀರಿಸ್‌ನಂತೆ ಹೆಣ ಸುಡಲು ಹೋಗಿ ಪೊಲೀಸರಿಗೆ ಸಿಕ್ಕಿಬಿದ್ದ

    ಮೆಜೆಸ್ಟಿಕ್‌ನಿಂದ ವಿಧಾನಸೌಧ ಮಾರ್ಗದ ಬಿಎಂಟಿಸಿ ಬಸ್‌ನಲ್ಲೇ ಸಿದ್ದರಾಮಯ್ಯ ಕಂಡಕ್ಟರ್ ಆಗಲಿದ್ದಾರೆ. ರೂಟ್ ನಂ.43 ಬಸ್‌ನಲ್ಲಿ ಕಂಡಕ್ಟರ್ ರೀತಿ ಮಹಿಳೆಯರಿಗೆ ಉಚಿತ ಟಿಕೆಟ್ ವಿತರಿಸಲಿದ್ದಾರೆ. ನಂತರ ವಿಧಾನಸೌಧದಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಶಕ್ತಿ ಯೋಜನೆಗೆ ಸಿಎಂ ಚಾಲನೆ ನೀಡಲಿದ್ದಾರೆ. ಅಂದೇ ಜಿಲ್ಲೆಗಳಲ್ಲಿ ಸಚಿವರಿಂದ ಏಕಕಾಲದಲ್ಲಿ ಯೋಜನೆಗೆ ಚಾಲನೆ ಸಿಗಲಿದೆ. ಇದನ್ನೂ ಓದಿ: ಕಾಂಗ್ರೆಸ್ ಗ್ಯಾರಂಟಿಗಳಿಂದಲೇ ನಮಗೆ ಸೋಲು – ಬಿಜೆಪಿ ಆತ್ಮಾವಲೋಕನ ಸಭೆಯಲ್ಲಿ ಏನಾಯ್ತು?

  • ಜೂನ್‌ 11ರಿಂದ ಎಕ್ಸ್‌ಪ್ರೆಸ್‌ ಬಸ್ಸಿನಲ್ಲೂ ಮಹಿಳೆಯರಿಗೆ ಫ್ರೀ.. ಫ್ರೀ.. ಫ್ರೀ.

    ಜೂನ್‌ 11ರಿಂದ ಎಕ್ಸ್‌ಪ್ರೆಸ್‌ ಬಸ್ಸಿನಲ್ಲೂ ಮಹಿಳೆಯರಿಗೆ ಫ್ರೀ.. ಫ್ರೀ.. ಫ್ರೀ.

    – ನನ್ನ ಹೆಂಡತಿಗೂ ಅನ್ವಯ ಆಗುತ್ತೆ ಎಂದ ಸಿಎಂ

    – BMTCಯಲ್ಲಿ ಇನ್ನು ಮುಂದೆ ಮಹಿಳೆಯರಿಗೆ ಪ್ರತ್ಯೇಕ ಸೀಟು ಮೀಸಲಾತಿ ಇರೋದಿಲ್ಲ

    ಬೆಂಗಳೂರು: 5 ಗ್ಯಾರಂಟಿಗಳನ್ನ ಪ್ರಸ್ತುತ ಆರ್ಥಿಕ ವರ್ಷದಲ್ಲೇ ಜಾರಿಗೊಳಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ನೇತೃತ್ವದ ಸರ್ಕಾರ ಕೊನೆಗೂ ಒಪ್ಪಿಗೆ ಸೂಚಿಸಿದೆ.

    ಶುಕ್ರವಾರ ಕ್ಯಾಬಿನೆಟ್‌ ಸಭೆಯ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಗೃಹಜ್ಯೋತಿ ಯೋಜನೆ, ಗೃಹಲಕ್ಷ್ಮಿ ಯೋಜನೆ, ಅನ್ನಭಾಗ್ಯ ಯೋಜನೆ ಹಾಗೂ ಯುವನಿಧಿ ಯೋಜನೆ ಹಾಗೂ ಶಕ್ತಿ ಯೋಜನೆಗಳಿಗೆ ಒಪ್ಪಿಗೆ ಸೂಚಿಸಿದೆ. ಅದರಲ್ಲೂ ತೀವ್ರ ಕುತೂಹಲ ಕೆರಳಿಸಿದ್ದ ಶಕ್ತಿ ಯೋಜನೆ (ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣ) ಜೂನ್‌ 11 ರಿಂದ ಜಾರಿಗೆ ಬರಲಿದೆ.

    ಸಮಾಜದಲ್ಲಿ 50%ರಷ್ಟು ಮಹಿಳೆಯರಿದ್ದು, ಸ್ಥಾನಮಾನ ಪರಿಗಣಿಸದೇ ವಿದ್ಯಾರ್ಥಿನಿಯರನ್ನೂ ಒಳಗೊಂಡಂತೆ ಕರ್ನಾಟಕದ ಎಲ್ಲ ಮಹಿಳೆಯರಿಗೆ ಜೂನ್‌ 11 ರಿಂದ ರಾಜ್ಯದೊಳಗೆ ಸರ್ಕಾರದ ಸಾಮಾನ್ಯ ಬಸ್, ಎಕ್ಸ್‌ಪ್ರೆಸ್, ರಾಜಹಂಸ, ಬಿಎಂಟಿಸಿ, ಕೆಎಸ್‌ಆರ್‌ಟಿಸಿ (ಎಸಿ ಬಸ್,ಐಶಾರಾಮಿ ಬಸ್,ಎಸಿ ಸ್ಲೀಪರ್,ರಾಜಹಂಸ ಬಸ್ ಗೆ ಉಚಿತ ಪ್ರಯಾಣ ಅನ್ವಯ ಇಲ್ಲ) ಬಸ್‌ಗಳಲ್ಲಿ ಉಚಿತ ಪ್ರಯಾಣ (Free Bus For Women) ಇರಲಿದೆ. KSRTC ಬಸ್‌ನಲ್ಲಿ 50% ರಷ್ಟು ಆಸನ ಪುರುಷರಿಗೆ ಮೀಸಲಾಗಿರುತ್ತೆ. ಇಡೀ ಬಸ್‌ನಲ್ಲಿ ಪೂರ್ಣ ಮಹಿಳೆಯರೇ ಹೋಗುವಂತಿಲ್ಲ, ಜೊತೆಗೆ BMTCಯಲ್ಲಿ ಇನ್ನು ಮುಂದೆ ಮಹಿಳೆಯರಿಗೆ ಪ್ರತ್ಯೇಕ ಸೀಟು ಮೀಸಲಾತಿ ಇರೋದಿಲ್ಲ ಎಂದು ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.

    ಶಕ್ತಿ ಯೋಜನೆ ರಾಜ್ಯದೊಳಗೆ ಮಾತ್ರ ಅನ್ವಯವಾಗಲಿದೆ. ಬೆಂಗಳೂರಿನಿಂದ ಬೆಳಗಾವಿಗೂ ಹೋಗಬಹುದು. ಆದ್ರೆ ಬೆಂಗಳೂರಿನಿಂದ ಹೈದರಾಬಾದ್‌ ಅಥವಾ ತಿರುಪತಿಗೆ ಹೋಗ್ತೀನಿ ಅಂದ್ರೆ ಅನ್ವಯವಾಗಲ್ಲ. ಇದರಿಂದ ಶೇ.94% ರಷ್ಟು ಪ್ರಯಾಣಿಕರನ್ನು ಒಳಗೊಳ್ಳಲಿದೆ ಎಂದು ತಿಳಿಸಿದ್ದಾರೆ.

  • ಉಡುಪಿ, ದ.ಕ, ಶಿವಮೊಗ್ಗದಲ್ಲಿ ಖಾಸಗಿ ಬಸ್‌ಗಳಲ್ಲೂ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ಕಲ್ಪಿಸಿ: ಸುನಿಲ್ ಕುಮಾರ್

    ಉಡುಪಿ, ದ.ಕ, ಶಿವಮೊಗ್ಗದಲ್ಲಿ ಖಾಸಗಿ ಬಸ್‌ಗಳಲ್ಲೂ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ಕಲ್ಪಿಸಿ: ಸುನಿಲ್ ಕುಮಾರ್

    ಉಡುಪಿ: ಸರ್ಕಾರಿ ಬಸ್‌ಗಳೊಂದಿಗೆ (Govt Bus) ಖಾಸಗಿ ಬಸ್‌ಗಳಲ್ಲಿಯೂ (Private Bus) ಮಹಿಳೆಯರಿಗೆ ಉಚಿತ ಪ್ರಯಾಣದ ಸೌಲಭ್ಯವನ್ನು (Free Travel Facility) ಕಲ್ಪಿಸಬೇಕೆಂದು ಶಾಸಕ ಸುನಿಲ್ ಕುಮಾರ್ (Sunil Kumar) ಆಗ್ರಹಿಸಿದ್ದಾರೆ.

    ಕಾಂಗ್ರೆಸ್ ಗ್ಯಾರಂಟಿಗಳಲ್ಲಿ (Congress Guarantee) ಒಂದಾದ ರಾಜ್ಯದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಅನುಷ್ಠಾನಕ್ಕೆ ಬರುವುದಾಗಿ ನೂತನ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಭರವಸೆ ನೀಡಿದ್ದಾರೆ. ಇದರ ಬೆನ್ನಲ್ಲೇ ಟ್ವೀಟ್ ಮಾಡಿರುವ ಸುನಿಲ್ ಕುಮಾರ್ ಉಡುಪಿ, ದಕ್ಷಿಣ ಕನ್ನಡ ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿನ ಜನರಿಗೆ ಇರಿಂದ ಅನ್ಯಾಯವಾಗಲಿದೆ ಎಂದು ಹೇಳಿದ್ದಾರೆ.

    ಟ್ವೀಟ್‌ನಲ್ಲೇನಿದೆ?
    ಉಡುಪಿ, ದಕ್ಷಿಣ ಕನ್ನಡ ಹಾಗೂ ಶಿವಮೊಗ್ಗ ಜಿಲ್ಲೆಯ ಬಹುತೇಕ ಭಾಗಗಳಿಗೆ ಸಾರಿಗೆ ಸಂಪರ್ಕ ಲಭ್ಯವಾಗುವುದು ಖಾಸಗಿ ಬಸ್‌ಗಳ ಮೂಲಕ. ಇಲ್ಲಿ ಸರ್ಕಾರಿ ಬಸ್ ಸೇವೆ ಲಭ್ಯವಿಲ್ಲ. ಆದರೆ ಕಾಂಗ್ರೆಸ್ ಸರ್ಕಾರ ಮಹಿಳೆಯರಿಗೆ ನೀಡುವ ಉಚಿತ ಬಸ್ ಸೇವೆಯನ್ನು ಸರ್ಕಾರಿ ಸಾರಿಗೆ ಸಂಸ್ಥೆಗೆ ಮಾತ್ರ ಸೀಮಿತಗೊಳಿಸಲು ನಿರ್ಧರಿಸಿದೆ. ಇದರಿಂದ ಈ ಭಾಗದ ಜನರಿಗೆ ಅನ್ಯಾಯವಾಗಲಿದ್ದು, ಸರ್ಕಾರ ಈ ಮೂರು ಜಿಲ್ಲೆಗಳಲ್ಲಿ ಖಾಸಗಿ ಬಸ್‌ಗಳಲ್ಲೂ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ಕಲ್ಪಿಸಬೇಕು ಎಂದು ಬರೆದಿದ್ದಾರೆ. ಇದನ್ನೂ ಓದಿ: ರಾಜ್ಯದ ಎಲ್ಲ ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣ – ರಾಮಲಿಂಗಾರೆಡ್ಡಿ ಭರವಸೆ

    ಎಲ್ಲಾ ಮಹಿಳೆಯರಿಗೆ ಬಸ್‌ನಲ್ಲಿ ಉಚಿತ ಪ್ರಯಾಣ ಎನ್ನುವುದು ಕಾಂಗ್ರೆಸ್ ಸರ್ಕಾರದ ಪ್ರಣಾಳಿಕೆಯಾಗಿತ್ತು. ಉಚಿತ ಬಸ್ ಪ್ರಯಾಣ ಗ್ಯಾರಂಟಿ ಜಾರಿಗೆ ಬರುವುದರಲ್ಲಿ ಅನುಮಾನವೇ ಇಲ್ಲ. ಜೂನ್ 1 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ ಎಂದು ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ. ಇದನ್ನೂ ಓದಿ: ಆರನೆಯ ಗ್ಯಾರಂಟಿ ಪಕ್ಕಾ: ಪ್ರಿಯಾಂಕ್ ಖರ್ಗೆ