Tag: ಉಚಿತ ಬಸ್ ಪ್ರಯಾಣ

  • ಬೆಂಗ್ಳೂರು ಬಂದ್‌ಗೆ ಕರೆ; ಸರ್ಕಾರಿ ಶಾಲಾ-ಕಾಲೇಜುಗಳಿಗೆ ರಜೆ ಇಲ್ಲ: ಶಿಕ್ಷಣ ಇಲಾಖೆ

    ಬೆಂಗ್ಳೂರು ಬಂದ್‌ಗೆ ಕರೆ; ಸರ್ಕಾರಿ ಶಾಲಾ-ಕಾಲೇಜುಗಳಿಗೆ ರಜೆ ಇಲ್ಲ: ಶಿಕ್ಷಣ ಇಲಾಖೆ

    ಬೆಂಗಳೂರು: ಖಾಸಗಿ ಸಾರಿಗೆ ಒಕ್ಕೂಟ ಸೋಮವಾರ (ಸೆ.11) ಬೆಂಗಳೂರು ಬಂದ್‌ಗೆ (Bengaluru Bandh) ಕರೆ ನೀಡಿವೆ. ಆದರೆ ಸರ್ಕಾರಿ ಶಾಲಾ-ಕಾಲೇಜುಗಳಿಗೆ ರಜೆ ಇಲ್ಲ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.

    ಪರಿಸ್ಥಿತಿಗೆ ಅನುಗುಣವಾಗಿ ರಜೆ ಘೋಷಣೆ ಮಾಡುವ ಅಧಿಕಾರವನ್ನು ಡಿಸಿಗಳಿಗೆ ಸರ್ಕಾರ ನೀಡಿದೆ. ವಿದ್ಯಾರ್ಥಿಗಳಿಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲು ಡಿಸಿಗಳಿಗೆ ಸೂಚನೆ ನೀಡಿದೆ. ಇದನ್ನೂ ಓದಿ: ನಾಳೆ ಬೆಂಗಳೂರು ಬಂದ್; 500 ಹೆಚ್ಚುವರಿ ಬಸ್ ರಸ್ತೆಗಿಳಿಸಲು ಬಿಎಂಟಿಸಿ ನಿರ್ಧಾರ

    ನಾಳೆ ಸಾರಿಗೆ ಒಕ್ಕೂಟಗಳು ಕರೆ ನೀಡಿರುವ ಬೆಂಗಳೂರು ಬಂದ್‌ಗೆ ಖಾಸಗಿ ಶಾಲೆಗಳು ನೈತಿಕ ಬೆಂಬಲ ವ್ಯಕ್ತಪಡಿಸಿವೆ. ಬಂದ್‌ಗೆ ಬೆಂಬಲ ಸೂಚಿಸಿ ಕೆಲವು ಶಾಲೆಗಳು ರಜೆ ಘೋಷಣೆ ಮಾಡಿವೆ. ಈಗಾಗಲೇ ಹೆಬ್ಬಾಳದ ವಿದ್ಯಾನಿಕೇತನ ಶಾಲೆ, ಆರ್ಕಿಡ್ ಆಡಳಿತ ಮಂಡಳಿಯವರು ರಜೆ ಘೋಷಿಸಿದ್ದಾರೆ.

    ಆದರೆ ಖಾಸಗಿ ಶಾಲೆಗಳಿಗೆ ರಜೆ ಘೋಷಣೆ ಇಲ್ಲ. ಕ್ಯಾಮ್ಸ್, ಕುಸ್ಮಾ ಸೇರಿ ಹಲವು ಸಂಘಟನೆಗಳಿಂದ ರಜೆ ಘೋಷಣೆ ಮಾಡಿಲ್ಲ. ರಜೆ ಕೊಡುವ ಬಗ್ಗೆ ಆಯಾ ಶಾಲಾ ಆಡಳಿತ ಮಂಡಳಿಗಳು ನಿರ್ಧಾರ ಮಾಡಬಹುದು. ಆದರೆ ಯಾವುದೇ ಸಂಘಟನೆಯಿಂದ ಅಧಿಕೃತ ರಜೆ ಕೊಡೋದಿಲ್ಲ ಎಂದು ಕ್ಯಾಮ್ಸ್, ಕುಸ್ಮಾ ಸಂಘಟನೆಗಳು ಮಾಹಿತಿ ನೀಡಿವೆ. ಇದನ್ನೂ ಓದಿ: ಹುಡ್ಗಿ ಚೆನ್ನಾಗಿದ್ದರೆ ಎಲ್ಲರೂ ಇಷ್ಟಪಡ್ತಾರೆ, ಹಾಗೇ ಬಿಜೆಪಿ ಕೂಡ ಬರ್ತಾ ಇದೆ: ಸಿ.ಎಂ ಇಬ್ರಾಹಿಂ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಶಕ್ತಿ ಯೋಜನೆಯಿಂದ ಆಟೋದವರಿಗೆ ಸಮಸ್ಯೆಯಾದ್ರೆ ಸರ್ಕಾರ ಪರಿಹಾರ ನೀಡಲಿದೆ – ರಾಮಲಿಂಗಾರೆಡ್ಡಿ

    ಶಕ್ತಿ ಯೋಜನೆಯಿಂದ ಆಟೋದವರಿಗೆ ಸಮಸ್ಯೆಯಾದ್ರೆ ಸರ್ಕಾರ ಪರಿಹಾರ ನೀಡಲಿದೆ – ರಾಮಲಿಂಗಾರೆಡ್ಡಿ

    ಬೆಂಗಳೂರು: ಶಕ್ತಿ ಯೋಜನೆಯಿಂದ (Shakti Scheme) ಆಟೋ ಚಾಲಕರಿಗೆ (Auto Drivers) ಸಮಸ್ಯೆಯಾದರೆ, ಸರ್ಕಾರ ಅವರ ನೆರವಿಗೆ ಧಾವಿಸೋ ಬಗ್ಗೆ ಸರ್ಕಾರ ನಿರ್ಧಾರ ಮಾಡಲಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ (Ramalinga Reddy) ತಿಳಿಸಿದರು.

    ವಿಧಾನ ಪರಿಷತ್ ಪ್ರಶ್ನೋತ್ತರ ಅವಧಿಯಲ್ಲಿ ಜೆಡಿಎಸ್‌ನ ಭೋಜೇಗೌಡ ಪ್ರಶ್ನೆ ಕೇಳಿದರು. ಶಕ್ತಿ ಯೋಜನೆ ಪರಿಣಾಮ ಆಟೋ ರಿಕ್ಷಾಗಳ ಮೇಲೆ ಬಿದ್ದಿದೆ. ಉಚಿತ ಬಸ್ ಪ್ರಯಾಣದಿಂದ ಆಟೋದವರು ಜೀವನ ಮಾಡಲು ಆಗುತ್ತಿಲ್ಲ. ರಾಜ್ಯದಲ್ಲಿ ಸುಮಾರು 5 ಲಕ್ಷ ಆಟೋ ಚಾಲಕರು ಇದ್ದಾರೆ. ಅವರಿಗೆ ಜೀವನ ಮಾಡಲು ಆಗುತ್ತಿಲ್ಲ. ಇವರ ನೆರವಿಗೆ ಸರ್ಕಾರ ಬರಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ಲೋಕಸಭೆಯಲ್ಲಿ ಸ್ಪರ್ಧಿಸಲು ಪಕ್ಷ ಸೂಚನೆ ನೀಡಿದ್ರೆ ಆದೇಶ ಪಾಲಿಸಲು ಸಿದ್ಧ: ಯತೀಂದ್ರ ಸಿದ್ದರಾಮಯ್ಯ

    ಇದಕ್ಕೆ ಉತ್ತರ ನೀಡಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಜೂನ್ 11ಕ್ಕೆ ಶಕ್ತಿ ಯೋಜನೆ ಪ್ರಾರಂಭ ಆಯ್ತು. ಉತ್ತಮವಾಗಿ ಯೋಜನೆ ನಡೆಯುತ್ತಿದೆ. ಯೋಜನೆ ಜಾರಿ ಆಗಿ ಒಂದು ತಿಂಗಳು ಆಗಲಿ. ಆಟೋದವರಿಗೆ ಏನ್ ಸಮಸ್ಯೆ ಆಗಿದೆ ಅಂತ ನೋಡೋಣ ಎಂದು ಹೇಳಿದರು.

    ಈವರೆಗೂ ಯಾವ ಆಟೋ ಚಾಲಕರ ಸಂಘದವರು ನನ್ನ ಬಳಿ ಬಂದು ಕಷ್ಟ ಅಂತ ಹೇಳಿಲ್ಲ. ಯಾವುದೇ ಆಟೋ ಚಾಲಕರು ನನಗೆ ಮನವಿ ಮಾಡಿಲ್ಲ. ಒಂದು ತಿಂಗಳು ಆಗಲಿ, ಬಳಿಕ ಪರಿಶೀಲನೆ ಮಾಡಿ ಆಟೋದವರಿಗೆ ಸಮಸ್ಯೆಯಾದರೆ ಸರ್ಕಾರ ಪರಿಹಾರ ಕೊಡಲಿದೆ ಎಂದು ಭರವಸೆ ನೀಡಿದರು. ಇದನ್ನೂ ಓದಿ: 40% ಕಮಿಷನ್ ಸೇರಿ ಎಲ್ಲದರ ತನಿಖೆಯಾಗ್ಲಿ- ಸಿದ್ದರಾಮಯ್ಯಗೆ ಬೊಮ್ಮಾಯಿ ಸವಾಲ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • 2ನೇ ವೀಕೆಂಡ್‌ನಲ್ಲೂ ಮಹಿಳೆಯರ ‘ಶಕ್ತಿ’ ಪ್ರದರ್ಶನ – ಯಾವ ಬಸ್‌ನಲ್ಲಿ ಎಷ್ಟು ಮಂದಿ ಪ್ರಯಾಣ?

    2ನೇ ವೀಕೆಂಡ್‌ನಲ್ಲೂ ಮಹಿಳೆಯರ ‘ಶಕ್ತಿ’ ಪ್ರದರ್ಶನ – ಯಾವ ಬಸ್‌ನಲ್ಲಿ ಎಷ್ಟು ಮಂದಿ ಪ್ರಯಾಣ?

    ಬೆಂಗಳೂರು: ಕಾಂಗ್ರೆಸ್‌ (Congress) ಸರ್ಕಾರದ ಶಕ್ತಿ ಯೋಜನೆ (Shakti Scheme) ಜಾರಿಯಾದ ಎರಡನೇ ವಿಕೇಂಡ್‌ನಲ್ಲೂ ಮಹಿಳೆಯರ ಪ್ರಯಾಣ ಮತ್ತಷ್ಟು ಹೆಚ್ಚಾಗಿದೆ. ವೀಕೆಂಡ್‌ ಸಂದರ್ಭದಲ್ಲಿ ಮಹಿಳೆಯರು ಧಾರ್ಮಿಕ ಹಾಗೂ ಪ್ರವಾಸಿ ತಾಣಗಳಿಗೆ ಹೆಚ್ಚೆಚ್ಚು ಪ್ರಯಾಣ ಮಾಡುತ್ತಿದ್ದಾರೆ.

    ಶನಿವಾರ ಕೂಡ 58,14,524 ಮಹಿಳೆಯರು ಸರ್ಕಾರಿ ಬಸ್‌ಗಳಲ್ಲಿ ಪ್ರಯಾಣ ಮಾಡಿದ್ದರು. ಕಳೆದ ವಾರಕ್ಕೆ ಹೋಲಿಕೆ ಮಾಡಿದರೆ, ಈ ವಾರ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಿದೆ. ಕಳೆದ ಶನಿವಾರ 54,30,150 ಮಹಿಳೆಯರು ಪ್ರಯಾಣ ಮಾಡಿದ್ದರು. ಇದನ್ನೂ ಓದಿ: ವೋಲ್ವೋ ಬಸ್‌ಗಳಿಗೆ ‘ಶಕ್ತಿ’ ತುಂಬಿದ ಪುರುಷರು

    ನಿನ್ನೆ ಮಹಿಳಾ ಪ್ರಯಾಣಿಕರ ಸಂಖ್ಯೆ 58 ಲಕ್ಷ ದಾಟಿದೆ. ಯಾವ ಬಸ್‌ಗಳಲ್ಲಿ ಎಷ್ಟು ಮಹಿಳೆಯರು ಪ್ರಯಾಣ ಮಾಡಿದ್ದಾರೆ ಎಂಬ ಬಗ್ಗೆ ವಿವರ ಇಲ್ಲಿದೆ.

    KSRTC ಬಸ್‌ಗಳಲ್ಲಿ ಒಟ್ಟು 17,29,314 ಮಹಿಳೆಯರು ಪ್ರಯಾಣ ಮಾಡಿದ್ದಾರೆ. ಪ್ರಯಾಣಿಕರ ಟಿಕೆಟ್‌ ಮೌಲ್ಯ 4,92,92,066 ರೂ. ಆಗಿದೆ. ಹಾಗೆಯೇ BMTC ಬಸ್‌ಗಳಲ್ಲಿ 18,95,144 ಮಹಿಳೆಯರು ಪ್ರಯಾಣಿಸಿದ್ದಾರೆ. ಇವರ ಪ್ರಯಾಣದ ಟಿಕೆಟ್‌ ಮೌಲ್ಯ 2,41,94,354 ರೂ. ಆಗಿದೆ. ಇದನ್ನೂ ಓದಿ: 2ನೇ ವೀಕೆಂಡ್ – ಮೆಜೆಸ್ಟಿಕ್‌, ಸ್ಯಾಟಲೈಟ್ ಬಸ್ ನಿಲ್ದಾಣ ಖಾಲಿ, ಖಾಲಿ

    NWRTC ಬಸ್‌ಗಳಲ್ಲಿ 14,01,910 ಮಹಿಳೆಯರು ಪ್ರಯಾಣ ಮಾಡಿದ್ದಾರೆ. ಈ ಪ್ರಯಾಣಿಕರ ಟಿಕೆಟ್‌ ಮೌಲ್ಯ 3,50,40,233 ರೂ. ಆಗಿದೆ. ಅಂತೆಯೇ KKRTC ಬಸ್‌ಗಳಲ್ಲಿ ಒಟ್ಟು 7,88,156 ಮಹಿಳೆಯರು ಪ್ರಯಾಣ ಮಾಡಿದ್ದು, ಟಿಕೆಟ್‌ ಮೌಲ್ಯ 2,55,94,985 ಆಗಿದೆ.

    ಶಕ್ತಿ ಯೋಜನೆ ಜಾರಿಯಾದಾಗಿನಿಂದ ಅಂದರೆ, ಜೂನ್ 11 ರಿಂದ ಜೂನ್ 24 ರವರೆಗೆ ನಾಲ್ಕು ನಿಗಮದ ಬಸ್‌ಗಳಲ್ಲಿ ಓಡಾಟ ನಡೆಸಿದ ಮಹಿಳೆಯರ ಸಂಖ್ಯೆ 7,15,58,775 ಮಹಿಳೆಯರು ಪ್ರಯಾಣ ಬೆಳೆಸಿದ್ದಾರೆ. ಈ ಮಹಿಳಾ ಪ್ರಯಾಣಿಕರ ಟಿಕೆಟ್‌ ಮೌಲ್ಯ 166,09,27,526 ರೂ. ತಲುಪಿದೆ. ಇದನ್ನೂ ಓದಿ: ಗೃಹಲಕ್ಷ್ಮಿಯನ್ನ ನಾನೇ ಹೋಲ್ಡ್ ಮಾಡಿಸಿದ್ದೇನೆ – ಡಿಸಿಎಂ ಡಿಕೆಶಿ

  • ಎಲ್ಲಾದರೂ ಇರು.. ಎಂತಾದರೂ ಇರು.. ಎಂದೆಂದಿಗೂ ಬಸಲ್ಲಿ ಫ್ರೀ ಆಗಿ ಪ್ರಯಾಣಿಸ್ತಿರು – ಸಿಂಗರ್‌ ಆದ ಕಂಡಕ್ಟರ್

    ಎಲ್ಲಾದರೂ ಇರು.. ಎಂತಾದರೂ ಇರು.. ಎಂದೆಂದಿಗೂ ಬಸಲ್ಲಿ ಫ್ರೀ ಆಗಿ ಪ್ರಯಾಣಿಸ್ತಿರು – ಸಿಂಗರ್‌ ಆದ ಕಂಡಕ್ಟರ್

    – ಅಣ್ಣಾವ್ರ ಸಿನಿಮಾ ಸ್ಟೈಲ್‌ನಲ್ಲಿ ಸಾಂಗ್‌ ಹಾಡಿ ಪ್ರಯಾಣಿಕರ ಮನಗೆದ್ದ ನಿರ್ವಾಹಕ
    – ಬಸ್ಸಿನಲ್ಲಿ ಮಹಿಳೆಯರಿಗೆ ಫ್ರೀ ಎಂಟರ್‌ಟೈನ್ಮೆಂಟ್‌

    ರಾಯಚೂರು: ʻಯಾರಿಗುಂಟು ಯಾರಿಗಿಲ್ಲ, ಇದು ಸಿದ್ದರಾಮಯ್ಯ ಸರ್ಕಾರದ ಶಕ್ತಿ ಯೋಜನೆ, ಎಲ್ಲಾದರೂ ಇರು.. ಎಂತಾದರೂ ಇರು.. ಎಂದೆಂದಿಗೂ ಬಸ್ಸಿನಲ್ಲಿ ಫ್ರೀ ಆಗಿ ಪ್ರಯಾಣಿಸ್ತಿರು.., ಅಕ್ಕಾ ನೀ, ತಂಗೀ.. ನೀ ಆಧಾರ್‌ ತೋರಿಸಿದ್ರೆ ಮಾತ್ರ ಉಚಿತ ಟಿಕೆಟ್‌ ಕೊಡ್ತೀನಿ ನಾನು, ಇದು ಪಕ್ಕಾ ಅಕ್ಕಾ, ನಿಜ ತಾನೆ, ಹೇಳಕ್ಕ…ʼ ಇದು ಆಕಾಶವಾಣಿಯಲ್ಲಿ ಕೇಳಿಬಂದ ಗೀತೆಯಲ್ಲ… ರಾಯಚೂರಿನ ಬಸ್‌ ಕಂಡಕ್ಟರ್‌ ಒಬ್ಬರು ಶಕ್ತಿ ಯೋಜನೆ ಬಗ್ಗೆ ಜಾಗೃತಿ ಮೂಡಿಸುತ್ತಿದ್ದ ಪರಿ ಹೀಗಿತ್ತು.

    ರಾಜ್ಯ ಸರ್ಕಾರದ ಶಕ್ತಿ ಯೋಜನೆ (Shakti Scheme) ಎಫೆಕ್ಟ್ ನಿಂದ ರಾಯಚೂರಿನ ಬಸ್ ಕಂಡಕ್ಟರ್ (Bus Conductor) ಒಬ್ಬರು ಸಿಂಗರ್ ಆಗಿದ್ದಾರೆ. ನೂಕು ನುಗ್ಗಲು ಇರುವ ಬಸ್‌ನಲ್ಲೂ ಕೂಲ್ ಆಗಿ ಡಾ.ರಾಜಕುಮಾರ್ ಸಿನಿಮಾಗಳ (Cinema Songs) ಹಾಡು ಹೇಳುತ್ತಾ‌ ಟೆನ್ಷನ್ ರಿಲೀಫ್ ಮಾಡಿಕೊಂಡು ಪ್ರಯಾಣಿಕರಿಗೆ ಟಿಕೆಟ್ ಕೊಡುತ್ತಿದ್ದಾರೆ.

    ರಾಯಚೂರು ಡಿಪೋ ಬಸ್ ಕಂಡಕ್ಟರ್ ಗುರುಲಿಂಗಪ್ಪನಿಂದ ಪ್ರಯಾಣಿಕರಿಗೂ ಮನರಂಜನೆ ಸಿಗುತ್ತಿದೆ. ಡಾ.ರಾಜ್ ಅಪ್ಪಟ ಅಭಿಮಾನಿಯಾಗಿರುವ ಗುರುಲಿಂಗಪ್ಪ ಜನರ ನೂಕುನುಗ್ಗಲು, ಒತ್ತಡದಿಂದ ಹೊರಬರಲು ಅಣ್ಣಾವ್ರ ಹಾಡುಗಳ ಮೊರೆ ಹೋಗಿದ್ದಾರೆ. ಜೊತೆಗೆ ಹಾಡು ಹೇಳಿಕೊಂಡೇ ಶಕ್ತಿ ಯೋಜನೆ ಬಗ್ಗೆಯೂ ಪ್ರಯಾಣಿಕರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಇದನ್ನೂ ಓದಿ: ಬಿಲ್ ಬಾಕಿ ಉಳಿಸಿಕೊಂಡಿದ್ದಕ್ಕೆ ಕರೆಂಟ್ ಕಟ್ – ಬೆಸ್ಕಾಂನಿಂದಲೇ ದಂಡ ವಸೂಲಿ ಮಾಡಿದ ಯುವಕ

    ʻಮಹಿಳೆಯರಿಗಾಗಿ ಇರುವ ಉಚಿತ ಯೋಜನೆ ಅವಸರ ಬೇಡʼ ಅಂತಾ ತನ್ನದೇ ಸಾಹಿತ್ಯ ರಚಿಸಿ ರಾಜಕುಮಾರ್‌ ಸಿನಿಮಾ ಹಾಡುಗಳ ಶೈಲಿಯಲ್ಲೇ ಹಾಡುತ್ತಾ ತನ್ನ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಂಡಕ್ಟರ್ ತಾಳ್ಮೆ ಹಾಗೂ ಕಲೆಗೆ ಪ್ರಯಾಣಿಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇದನ್ನೂ ಓದಿ: ಲೇಡಿಸ್ ಪಿಜಿಗಳೇ ಟಾರ್ಗೆಟ್ – ಸ್ನಾನ ಮಾಡುವುದನ್ನು ಕದ್ದುಮುಚ್ಚಿ ವೀಡಿಯೋ ಮಾಡುತ್ತಿದ್ದಾಗಲೇ ಕಿರಾತಕ ಲಾಕ್ 

  • ಭರ್ಜರಿ ‘ಶಕ್ತಿ’ ಪ್ರದರ್ಶನ – 126 ಕೋಟಿ ರೂ. ದಾಟಿತು ಟಿಕೆಟ್ ಮೌಲ್ಯ

    ಭರ್ಜರಿ ‘ಶಕ್ತಿ’ ಪ್ರದರ್ಶನ – 126 ಕೋಟಿ ರೂ. ದಾಟಿತು ಟಿಕೆಟ್ ಮೌಲ್ಯ

    ಬೆಂಗಳೂರು: ಕಾಂಗ್ರೆಸ್ (Congress) ಸರ್ಕಾರ ನೀಡಿರುವ ಐದು ಭರವಸೆಗಳಲ್ಲಿ ಶಕ್ತಿ ಯೋಜನೆ (Shakti Scheme) ಜಾರಿಗೆ ಬಂದಿದ್ದು, ಸರ್ಕಾರಿ ಬಸ್‌ಗಳಲ್ಲಿ ಮಹಿಳಾ (Women) ಪ್ರಯಾಣಿಕರ ಸಂಖ್ಯೆ ದಾಖಲೆ ಬರೆದಿದೆ.

    ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಷ ಐದು ಗ್ಯಾರಂಟಿಗಳನ್ನು ಜಾರಿ ಮಾಡುವುದಾಗಿ ಘೋಷಿಸಿತ್ತು. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಮಹಿಳಾ ಮಣಿಗಳಿಗಾಗಿ ಉಚಿತ ಬಸ್ ಪ್ರಯಾಣವನ್ನು ಜಾರಿ ಮಾಡಿದ್ದು, ರಾಜ್ಯದ ಎಲ್ಲಾ ಮಹಿಳೆಯರು ನಾ ಮುಂದು ತಾ ಮುಂದು ಎಂದು ಸರ್ಕಾರಿ ಬಸ್ಸಿನತ್ತ ಮುನ್ನುಗುತ್ತಿದ್ದಾರೆ. ಮಹಿಳೆಯರು ಉಚಿತವಾಗಿ ಸರ್ಕಾರಿ ಬಸ್ಸಿನಲ್ಲಿ ಪ್ರಯಾಣ ಬೆಳೆಸುತ್ತಿರುವ ಹಿನ್ನೆಲೆ ಸರ್ಕಾರಿ ಬಸ್‌ನಲ್ಲಿ ಮಹಿಳಾ ಪ್ರಯಾಣಿಕರ ಟಿಕೆಟ್‌ ಮೌಲ್ಯ  100 ಕೋಟಿ ದಾಟಿತು. ಇದನ್ನೂ ಓದಿ: ನಾವು ದರ ಏರಿಸುತ್ತೇವೆ – ರಾಜ್ಯ ಸರ್ಕಾರಕ್ಕೆ ಹೋಟೆಲ್‌ ಮಾಲೀಕರ ಸಂಘ ಎಚ್ಚರಿಕೆ

    ಶಕ್ತಿ ಯೋಜನೆಯಡಿಯಲ್ಲಿ 10 ದಿನಕ್ಕೆ 5 ಕೋಟಿಗೂ ಅಧಿಕ ಮಹಿಳೆಯರು ಸರ್ಕಾರಿ ಬಸ್ಸಿನಲ್ಲಿ ಉಚಿತ ಪ್ರಯಾಣ ಮಾಡುತ್ತಿದ್ದು, ಮಹಿಳಾ ಪ್ರಯಾಣಿಕರ ಟಿಕೆಟ್ ಮೌಲ್ಯ ಒಟ್ಟು 126 ಕೋಟಿ ರೂ. ದಾಟಿದೆ. ಅದರಲ್ಲೂ ಬಿಎಂಟಿಸಿ (BMTC) ಬಸ್‌ನಲ್ಲಿ ಅತಿ ಹೆಚ್ಚು ಮಹಿಳೆಯರು ಪ್ರಯಾಣಿಸುತ್ತಿದ್ದು, ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ (KSRTC) ಬಸ್‌ಗಳಲ್ಲಿ ತಲಾ ಒಂದೂವರೆ ಕೋಟಿ ಮಹಿಳೆಯರು ಉಚಿತವಾಗಿ ಪ್ರಯಾಣಿಸುತ್ತಿದ್ದಾರೆ. ಇದನ್ನೂ ಓದಿ: 10 ಕೆಜಿ ಅಕ್ಕಿಗೆ ದೇವರ ಮೇಲೆ ಭಾರ ಹಾಕಿದ ಮುನಿಯಪ್ಪ

    ಕಳೆದ 10 ದಿನದಲ್ಲಿ ಯಾವ ನಿಗಮದಿಂದ ಎಷ್ಟು ಮಹಿಳೆಯರ ಉಚಿತ ಸಂಚಾರ?
    ಕೆಎಸ್‌ಆರ್‌ಟಿಸಿ – 1,57,48,205
    ಬಿಎಂಟಿಸಿ – 1,80,81,216
    ವಾಕರಸಾ – 1,30,97,057
    ಕಕರಸಾ – 70,80,646

  • ಬಸ್ ಸೀಟಿಗಾಗಿ ಕೈಕೈ ಮಿಲಾಯಿಸಿದ ಮೈಸೂರು ಮಹಿಳೆಯರು – ನಾರಿ ʻಶಕ್ತಿʼ ಪ್ರದರ್ಶನ

    ಬಸ್ ಸೀಟಿಗಾಗಿ ಕೈಕೈ ಮಿಲಾಯಿಸಿದ ಮೈಸೂರು ಮಹಿಳೆಯರು – ನಾರಿ ʻಶಕ್ತಿʼ ಪ್ರದರ್ಶನ

    ಮೈಸೂರು: ಸರ್ಕಾರದ ಪ್ರಮುಖ ಗ್ಯಾರಂಟಿಯಾದ ಶಕ್ತಿ ಯೋಜನೆ ಜಾರಿಯಾದ ದಿನದಿಂದಲೇ ಮಹಿಳೆಯರು ನಾ ಮುಂದು ತಾ ಮುಂದು ಅಂತಾ ಬಸ್ ಗಳಲ್ಲಿ ನುಗ್ಗುತ್ತಿದ್ದಾರೆ. ಬಸ್ ನ ಕಿಟಿಕಿಗಳು,ಬಾಗಿಲುಗಳು ಸಹ ಪೀಸ್ ಪೀಸ್ ಆಗ್ತಿವೆ. ದೇವಸ್ಥಾನಗಳಂತೂ ಪುಲ್ ರೇಶ್ ಆಗುತ್ತಿದ್ದು, ಅವಾಂತರಗಳು ಮುಂದುವರಿದಿವೆ.

    ಮೈಸೂರಿನಲ್ಲಿ ಚಾಮುಂಡಿಬೆಟ್ಟಕ್ಕೆ ತೆರಳುವ ನಗರ ಸಾರಿಗೆ ಬಸ್‌ನಲ್ಲಿ ಮಹಿಳೆಯರ ಗಲಾಟೆ ಮಾಡಿ ಕೊಂಡಿರುವ ದೃಶ್ಯ ಕಂಡುಬಂದಿದೆ. ಮಹಿಳೆಯರು ಸೀಟಿಗಾಗಿ ಕೈಕೈ ಮಿಲಾಯಿಸಿದ್ದಾರೆ. ಬಸ್‌ನೊಳಗೆ ಕಿತ್ತಾಡಿಕೊಂಡ ವೀಡಿಯೋ ಸದ್ಯ ಜಾಲತಾಣದಲ್ಲಿ ಸದ್ದು ಮಾಡ್ತಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಜಿಟಿಜಿಟಿ ಮಳೆ- ಬೆಳ್ಳಂಬೆಳಗ್ಗೆ ಕೊಡೆ ಹಿಡಿದ ಜನ

    ಒಂದೆರಡು ದಿನಗಳಲ್ಲೇ ಮಾರ್ಗಸೂಚಿ:
    ಉಚಿತ ಪ್ರಯಾಣ ಹಿನ್ನೆಲೆಯಲ್ಲಿ ಸಾಗರೋಪಾದಿಯಲ್ಲಿ ಹರಿದು ಬರುತ್ತಿರುವ ಮಹಿಳೆಯರ ದಂಡನ್ನು ಕಂಟ್ರೋಲ್ ಮಾಡೋಕೆ ಸಾರಿಗೆ ಇಲಾಖೆ ಮುಂದಾಗ್ತಿದೆ. ಈ ಬಗ್ಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಸಾರಿಗೆ ಇಲಾಖೆಯ ಅಧಿಕಾರಿಗಳ ಜೊತೆ ನಿನ್ನೆ ಸಭೆ ನಡೆಸಿದ್ದಾರೆ. ಕಿಟಕಿ ಹೊಡೆಯೋದು, ಡೋರ್ ಒಡೆಯೋದು ಆದ್ರೇ ಕಷ್ಟ. ಶಿಸ್ತಿನಲ್ಲಿ ಬರಬೇಕು. ಸಪರೇಟ್ ಗೈಡ್ ಲೈನ್ಸ್ ತನ್ನಿ ಅಂತಾ ಸೂಚನೆ ನೀಡಿದ್ದಾರೆ. ಇದನ್ನೂ ಓದಿ: ಮಹಿಳೆಯರ `ಶಕ್ತಿ’ಗೆ ಶೀಘ್ರವೇ ಹೊಸ ಮಾರ್ಗಸೂಚಿ – ವಾರಕ್ಕೆ ಮುಂಚೆ ಬುಕ್ಕಿಂಗ್ ಕಡ್ಡಾಯ ಸಾಧ್ಯತೆ

    ಈ ಬಗ್ಗೆ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ್ದ ಸಚಿವ ರಾಮಲಿಂಗ ರೆಡ್ಡಿ, ಉಚಿತ ಪ್ರಯಾಣ ನಿಭಾಯಿಸೋದು ಕಷ್ಟವಾಗೋದ್ರಿಂದ ಈಗ ನಾವು ಹೊಸ ಮಾರ್ಗಸೂಚಿ ಅನಿವಾರ್ಯ. ಬುಕ್ಕಿಂಗ್‌ ಮೂಲಕವೇ ಪ್ರಯಾಣಕ್ಕೆ ಅಧಿಕಾರಿಗಳಿಗೆ ತಿಳಿಸಿದ್ದೇನೆ. ಇನ್ನೆರಡು ದಿನಗಳಲ್ಲಿ ನಿರ್ಧಾರ ಮಾರ್ಗಸೂಚಿ ಹೊರಡಿಸುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: ಹೆಂಡತಿ ನನ್ನ ಮಾತು ಕೇಳುತ್ತಿಲ್ಲ, ದಯಮಾಡಿ ಪರಿಹರಿಸಿ- ಶಾಸಕರಿಗೆ ವ್ಯಕ್ತಿ ದೂರು

    ಈ ವೀಕೆಂಡ್ ನಿಂದ ಮಹಿಳಾ ಪ್ರಯಾಣಿಕರ ಪ್ರಯಾಣದ ರೂಲ್ಸ್ ಬದಲಾಗುವ ಸಾಧ್ಯತೆಯಿದೆ. ಸಿಕ್ಕ ಸಿಕ್ಕ ಬಸ್ ಹತ್ತುವಂತಿಲ್ಲ, ಪ್ರಯಾಣ ಮಾಡಬೇಕಾದ್ರೇ ಮುಂಗಡ ಬುಕ್ಕಿಂಗ್ ಕಡ್ಡಾಯವಾಗಿ ಮಾಡಿಕೊಂಡಿರಬೇಕಾಗುತ್ತದೆ. ಒಟ್ಟಿನಲ್ಲಿ ಸಾರಿಗೆ ಇಲಾಖೆ ಏನು ನಿರ್ಧಾರ ಕೈಗೊಳ್ಳುತ್ತದೆ ಎಂಬುದನ್ನ ಕಾದು ನೋಡಬೇಕಿದೆ.

  • ಗಂಡ ಜೊತೆಗೆ ಬಾರದೇ ನಮಗೆ ಭದ್ರತೆ ಇಲ್ಲ; ಫ್ರೀ ಬಸ್ ಪ್ರಯಾಣ ಯೋಜನೆಗೆ ಮಹಿಳೆ ವಿರೋಧ

    ಗಂಡ ಜೊತೆಗೆ ಬಾರದೇ ನಮಗೆ ಭದ್ರತೆ ಇಲ್ಲ; ಫ್ರೀ ಬಸ್ ಪ್ರಯಾಣ ಯೋಜನೆಗೆ ಮಹಿಳೆ ವಿರೋಧ

    – ಅವರಿಲ್ಲದೇ ಮಕ್ಕಳು ಬಂದ್ರಾ? ಗಂಡನೂ ಜೊತೆಯೇ ಇರಬೇಕು ಎಂದ ಮಹಿಳೆ

    ಚಿಕ್ಕಮಗಳೂರು: ಸರ್ಕಾರದ ಫ್ರೀ ಬಸ್ (Free Bus Travel) ಪ್ರಯಾಣದ ಶಕ್ತಿ ಯೋಜನೆ ಸರಿ ಇಲ್ಲ. ಗಂಡ ಜೊತೆಗೆ ಬಾರದೇ ನಮ್ಮ ಭದ್ರತೆ ಇಲ್ಲದಂತಾಗಿದೆ ಎಂದು ಕಾಂಗ್ರೆಸ್ ಸರ್ಕಾರದ ಶಕ್ತಿ ಯೋಜನೆ (Shakti Scheme) ವಿರುದ್ಧ ಮಹಿಳೆಯೊಬ್ಬರು ಅಸಮಾಧಾನ ಹೊರಹಾಕಿದ್ದಾರೆ.

    ಮತ ಹಾಕುವಾಗ ಮಹಿಳೆಯರು ಮಾತ್ರ ಹಾಕಿ ಎಂದಿದ್ರಾ? ನಾವ್ ಇಲ್ದೆ ನೀವ್ ಬಂದ್ರಾ ಅಂತಿದ್ದಾರೆ ಯಜಮಾನರು. ಅವರಿಲ್ಲದೆ ಮಕ್ಕಳು ಬಂದ್ರಾ? ಗಂಡ ಬೇಕು. ಗಂಡನ ಜೊತೆಯೇ ಇರಬೇಕು. ಈ ಕಾನೂನು ಬೇಡ ಎಂದು ಮಹಿಳೆಯರಿಗೆ ಬಸ್ ಉಚಿತ ಪ್ರಯಾಣಕ್ಕೆ ಪಿರಿಯಾಪಟ್ಟಣದ ಮಮತಾ ಎಂಬವರು ವಿರೋಧ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಅವರಿಗೆ ಸಚಿವರಾಗಿ ಕೆಲಸ ಮಾಡೋದಕ್ಕಿಂತ ಬೇರೆಯದ್ದರ ಬಗ್ಗೆಯೇ ಆಸಕ್ತಿ ಜಾಸ್ತಿ: ಮಹದೇವಪ್ಪಗೆ ಸುರೇಶ್ ಟಾಂಗ್

    ದುಡ್ಡು ಕೊಟ್ಟು ಬಂದರೂ ಈ ರೀತಿ ನೂಕು ನುಗ್ಗಲು ಇರುವಂತೆ ಮಾಡಬೇಡಿ. ಹೊರನಾಡಿನಿಂದ ಮಂಗಳೂರಿಗೆ ಹೋಗುವವರನ್ನು ಮಾತ್ರ ಬಸ್ಸಿಗೆ ಹತ್ತಿಸಿದ್ದಾರೆ. ಮಧ್ಯ ಇಳಿಯುವವರನ್ನ ಖಾಸಗಿ ಬಸ್ಸಿನಲ್ಲಿ ಹತ್ತಿಸುತ್ತಿಲ್ಲ. ದೊಡ್ಡವರು, ಚಿಕ್ಕವರು ಬರುತ್ತಾರೆ, ಕೈಮುಗಿದು ಕೇಳಿಕೊಳ್ಳುತ್ತೇವೆ. ಎದ್ದು ಬಿದ್ದು ಬರುವಂತೆ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ.

    ಸರ್ಕಾರದ ಯೋಜನೆ ಕಾಲು ಭಾಗ ಖುಷಿ ನೀಡಿದೆ. ಗಂಡ-ಮಕ್ಕಳು, ಅತ್ತೆ-ಮಾವ ಎಲ್ಲ ಮನೆಯಲ್ಲೇ ಇದ್ದಾರೆ. ಹೆಂಡ್ತಿ ಮಾತ್ರ ಎಲ್ಲಾ ಕಡೆ ಓಡಾಡಿಕೊಂಡು ಇರೋದಕ್ಕೆ ಆಗುವುದಿಲ್ಲ. ಒಂದು ಬಸ್ಸಿಗೆ ಇಷ್ಟೇ ಮಹಿಳೆಯರು ಎಂಬ ಕಾನೂನು ಬಲವಾಗಬೇಕು. ಈ ನೂಕು ನುಗ್ಗಲಿನ ಬಸ್ಸಿನಲ್ಲಿ ಮಹಿಳೆಯರು ಹತ್ತುವುದು ಅಸಾಧ್ಯ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಅಕ್ಕಿ ವಿತರಣೆ ರಾಜ್ಯ ಸರ್ಕಾರದ ಜವಾಬ್ದಾರಿ, ಎಲ್ಲಿಯಾದ್ರೂ ಖರೀದಿ ಮಾಡಿ ಕೊಡಲಿ: ಯಡಿಯೂರಪ್ಪ

    ಗಂಡನನ್ನ ಮನೆಯಲ್ಲಿ ಬಿಟ್ಟು ಬಂದಿದ್ದೇವೆ. ನಮಗೆ ಸೂಕ್ತ ಭದ್ರತೆ ಇಲ್ಲ. ವಿದ್ಯೆ ಹಾಗೂ ಆಸ್ಪತ್ರೆ ಕಡೆಯೂ ಸ್ವಲ್ಪ ಗಮನಹರಿಸಿ ಎಂದು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

  • ಫ್ರೀ ಬಸ್ ಎಫೆಕ್ಟ್: ಮಹಿಳೆಯರ ಮೇಲೆಯೇ ಬಸ್ ಹತ್ತಿಸಲು ಮುಂದಾದ ಚಾಲಕ

    ಫ್ರೀ ಬಸ್ ಎಫೆಕ್ಟ್: ಮಹಿಳೆಯರ ಮೇಲೆಯೇ ಬಸ್ ಹತ್ತಿಸಲು ಮುಂದಾದ ಚಾಲಕ

    – ದೇವರ ದರ್ಶನ ಮುಗಿಸಿ ಬಂದಿದ್ದ ಮಹಿಳೆಯರಿಗೆ ಶಾಕ್

    ತುಮಕೂರು: ಕಾಂಗ್ರೆಸ್ ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ `ಶಕ್ತಿಯೋಜನೆ’ (Shakti Scheme) ಜಾರಿಯಾಗಿದ್ದು, ಮಹಿಳೆಯರು (Womens) ರಾಜ್ಯದ್ಯಾಂತ ಉಚಿತ ಪ್ರಯಾಣ ನಡೆಸುತ್ತಿದ್ದಾರೆ. ಪ್ರತಿದಿನ ಲಕ್ಷಾಂತರ ಮಹಿಳೆಯರು ಅಗತ್ಯ ದಾಖಲೆಗಳನ್ನ ತೋರಿಸಿ ಉಚಿತ ಟಿಕೆಟ್ ಪಡೆದು ಪ್ರಯಾಣಿಸುತ್ತಿದ್ದಾರೆ. ಈ ನಡುವೆ ಟಿಕೆಟ್ ಕಲೆಕ್ಷನ್ ಆಗಿಲ್ಲ ಅಂತಾ ಚಾಲಕನೊಬನ್ಬ ಮಹಿಳೆಯರ ಮೇಲೆಯೇ ಬಸ್ ಹತ್ತಿಸಲು ಮುಂದಾಗಿದ್ದ ಪ್ರಸಂಗವೊಂದು ತುಮಕೂರು ಜಿಲ್ಲೆಯ ಕೊರಟಗೆರೆಯ ನಾಗೇನಹಳ್ಳಿ ಗೇಟ್ ಬಳಿ ನಡೆದಿದೆ.

    ಹೌದು. ಉಚಿತ ಪ್ರಯಾಣದಿಂದ ಟಿಕೆಟ್ ಕಲೆಕ್ಷನ್ ಆಗದೇ ಬೇಸತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಚಾಲಕ, ರಸ್ತೆ ಬದಿಯಲ್ಲಿ ನಿಂತು ಬಸ್ ನಿಲ್ಲಿಸುವಂತೆ ಕೈತೋರಿಸಿದ ಮಹಿಳೆಯರ ಮೇಲೆ ಬಸ್ ಹತ್ತಿಸಲು ಮುಂದಾಗಿದ್ದಾನೆ. ಉಚಿತ ಪ್ರಯಾಣ ಅಂತಾ ದೇವರ ದರ್ಶನಕ್ಕೆ ಬಂದ ಮಹಿಳೆಯರಿಗೆ ಬಸ್ ಚಾಲಕ ಬಿಗ್ ಶಾಕ್ ಕೊಟ್ಟಿದ್ದಾನೆ. ಇದನ್ನೂ ಓದಿ: ರಾಜ್ಯದಲ್ಲಿ ಮೇಘಸ್ಫೋಟದ ಆತಂಕ – ಜೂ.18, 19ರಂದು ಬೆಂಗ್ಳೂರಲ್ಲಿ ಭಾರೀ ಮಳೆಯ ಮುನ್ಸೂಚನೆ

    ನಡೆದಿದ್ದು ಏನು?
    ಕೆಲ ಮಹಿಳೆಯರು ಚಾಮರಾಜನಗರ (Chamarajanagar) ಜಿಲ್ಲೆಯ ಕೊಳ್ಳೇಗಾಲದಿಂದ ಗೊರವನಹಳ್ಳಿ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಬಂದಿದ್ದರು. ಪುಟ ಪುಟ್ಟ ಕಂದಮ್ಮಗಳನ್ನ ಕಂಕುಳಲ್ಲಿ ಹೊತ್ತು ದೇವರ ದರ್ಶನ ಮುಗಿಸಿದ ಮಹಿಳೆಯರು ಸಂಜೆ ವೇಳೆಗೆ ಮನೆಗೆ ಹಿಂದಿರುಗಲು ಬಸ್ಸಿಗಾಗಿ ಕಾಯುತ್ತಿದ್ದರು. ಸುಮಾರು 2 ಗಂಟೆ ಕಾದರೂ ಬಸ್ ಸಿಗದಿದ್ದ ಕಾರಣ, ಬರುವ ಬಸ್ ತಡೆಯಲು ಮುಂದಾದರು. ಇತ್ತ ಕಲೆಕ್ಷನ್ ಆಗಿಲ್ಲ ಅಂತಾ ಬೇಸತ್ತಿದ್ದ ಚಾಲಕ ಬಸ್ ತಮ್ಮ ಮೇಲೆಯೇ ಹತ್ತಿಸಿಬಿಡುವಂತೆ ಶಾಕ್ ಕೊಟ್ಟಿದ್ದಾನೆ.

    ಚಾಲಕನ ವರ್ತನೆ ಬಗ್ಗೆ ಸ್ಥಳೀಯ ತಹಶಿಲ್ದಾರ್‌ಗೆ ಮಹಿಳೆಯರು ತಿಳಿಸಿದ್ದಾರೆ. ನಂತರ ತಹಶೀಲ್ದಾರ್ ಮುನಿಶಾಮಿ ರೆಡ್ಡಿ ಮಹಿಳೆಯರಿಗೆ ಬೇರೆ ಬಸ್ ಹತ್ತಿಸಿದ್ದಾರೆ, ಬಸ್ ಚಾಲಕನ ವಿರುದ್ಧ ಕ್ರಮ ಕೈಗೊಳ್ಳುವುದಾಗಿಯೂ ಭರವಸೆ ನೀಡಿದ್ದಾರೆ. ಇದನ್ನೂ ಓದಿ: ಉಳ್ಳಾಲ ನಿವಾಸಿಗೆ ಬರೋಬ್ಬರಿ 7,71,000 ರೂ. ವಿದ್ಯುತ್ ಬಿಲ್ – ನಿಜವಾಗಿ ನಡೆದಿದ್ದು ಏನು? 

  • ‘ಶಕ್ತಿ’ ಯೋಜನೆಗೆ ಭರ್ಜರಿ ರೆಸ್ಪಾನ್ಸ್- ಮೊದಲ ದಿನವೇ 5.71 ಲಕ್ಷ ಮಹಿಳೆಯರ ಸಂಚಾರ

    ‘ಶಕ್ತಿ’ ಯೋಜನೆಗೆ ಭರ್ಜರಿ ರೆಸ್ಪಾನ್ಸ್- ಮೊದಲ ದಿನವೇ 5.71 ಲಕ್ಷ ಮಹಿಳೆಯರ ಸಂಚಾರ

    ಬೆಂಗಳೂರು: ರಾಜ್ಯ ಸರ್ಕಾರ ಭಾನುವಾರ ಜಾರಿ ಮಾಡಿದ ‘ಶಕ್ತಿ’ ಯೋಜನೆ (Shakti Scheme) ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ನಾರಿಮಣಿಯರು ದೊಡ್ಡ ಮಟ್ಟದಲ್ಲಿಯೇ ಉಚಿತ ಸಂಚಾರ ಯೋಜನೆಯನ್ನು ಸದುಪಯೋಗ ಮಾಡಿಕೊಳ್ತಿದ್ದಾರೆ.

    ಮೆಜೆಸ್ಟಿಕ್, ಯಶವಂತಪುರ, ಶಾಂತಿನಗರ, ಯಲಹಂಕ, ಸ್ಯಾಟಲೈಟ್ ಬಸ್ ನಿಲ್ದಾಣ ಸೇರಿದಂತೆ ಬೆಂಗಳೂರಿನ ಪ್ರಮುಖ ಬಸ್ ನಿಲ್ದಾಣಗಳಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಿತ್ತು. ವಾರದ ಮೊದಲ ದಿನವಾಗಿದ್ರಿಂದ ಇಂದು ಕೆಲಸಕ್ಕೆ ಹೋಗುವ ಮಹಿಳೆಯರು, ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿತ್ತು. ಸೀಟ್ ಸಿಗದಿದ್ರೂ ಕೆಲವರು ನಿಂತೇ ಪ್ರಯಾಣಿಸಿದ್ರು.

    ಜಿಲ್ಲಾ ಕೇಂದ್ರಗಳಲ್ಲೂ ಉಚಿತ ಸಂಚಾರ ಭರಾಟೆ ಜೋರಾಗಿತ್ತು. ಮಹಿಳೆಯರಿಂದ ಮಿಶ್ರ ಪ್ರತಿಕ್ರಿಯೆ ಬಂತು. ಫ್ರೀ ಪ್ರಯಾಣ ಒಳ್ಳೆಯದೇ ಆದರೆ ಮುಂದಿನ ದಿನಗಳಲ್ಲಿ ಇದರ ಎಫೆಕ್ಟ್ ನಮ್ಮ ಮೇಲೆ ಬೀಳಬಾರದು ಅಂತೇಳಿದ್ರು. ಸಹಜವಾಗಿ ಸಾಮಾನ್ಯ ಬಸ್ ಹೊರತುಪಡಿಸಿ ಎಸಿ ಬಸ್, ಐಷಾರಾಮಿ ಬಸ್‍ಗಳಾದ ಪವರ್ ಪ್ಲಸ್, ರಾಜಹಂಸ, ಐರಾವತ ಬಸ್‍ಗಳು ಮತ್ತು ಕೆಲವಡೆ ರೈಲುಗಳು ಖಾಲಿ ಹೊಡಿತಿದ್ವು.

    ಆನ್‍ಲೈನ್ ರಿಸರ್ವೇಷನ್ ಇಳಿಮುಖವಾಗಿತ್ತು. ಈ ಮಧ್ಯೆ ಸಚಿವರಾದ ರಾಮಲಿಂಗಾರೆಡ್ಡಿ, ಮಹದೇವಪ್ಪ ಶಕ್ತಿಯೋಜನೆಯನ್ನು ಸಮರ್ಥಿಸಿಕೊಂಡ್ರು. ಅಂದ ಹಾಗೆ, ಮೊದಲ ದಿನವಾದ ಭಾನುವಾರ ಮಧ್ಯಾಹ್ನ 1 ಗಂಟೆಯಿಂದ 5 ಲಕ್ಷಕ್ಕೂ ಅಧಿಕ ಮಹಿಳೆಯರು ಉಚಿತ ಸಂಚಾರ ಮಾಡಿದ್ದಾರೆ. ಇದನ್ನೂ ಓದಿ: ಬೆಂ-ಮೈ ದಶಪಥ ಹೆದ್ದಾರಿ ಟೋಲ್ ಮತ್ತಷ್ಟು ದುಬಾರಿ- ಜೂನ್ 1ರಿಂದಲೇ ಪ್ರಯಾಣಿಕರ ಜೇಬಿಗೆ ಕತ್ತರಿ

    ದಾಖಲೆ ಬರೆದ ಉಚಿತ ಸಂಚಾರ:
    * ಕೆಎಸ್‍ಆರ್ ಟಿಸಿಯಲ್ಲಿ ಮಹಿಳೆಯರ ಪ್ರಯಾಣ -1,93,831, ಪ್ರಯಾಣ ಮೌಲ್ಯ- 58,16,178 (ಕೆಎಸ್‍ಆರ್ ಟಿಸಿಯಲ್ಲಿ ನಿತ್ಯ ಅಂದಾಜು 14.43 ಲಕ್ಷ ಮಹಿಳೆಯರು ಸಂಚರಿಸ್ತಾರೆ.)
    * ಬಿಎಂಟಿಸಿಯಲ್ಲಿ ಮಹಿಳೆಯರ ಪ್ರಯಾಣ 2,01,215, ಪ್ರಯಾಣ ಮೌಲ್ಯ- 26,19,604 (ಬಿಎಂಟಿಸಿಯಲ್ಲಿ ನಿತ್ಯ ಅಂದಾಜು 10.86 ಲಕ್ಷ ಮಹಿಳೆಯರು ಸಂಚರಿಸ್ತಾರೆ.)
    * ವಾಯುವ್ಯ ಸಾರಿಗೆಯಲ್ಲಿ ಮಹಿಳೆಯರ ಪ್ರಯಾಣ 1,22,354, ಪ್ರಯಾಣ ಮೌಲ್ಯ- 36,17,096 (ವಾಯುವ್ಯ ಸಾರಿಗೆಯಲ್ಲಿ ನಿತ್ಯ ಅಂದಾಜು 09.12 ಲಕ್ಷ ಮಹಿಳೆಯರು ಸಂಚರಿಸ್ತಾರೆ.)
    * ಕಲ್ಯಾಣ ಸಾರಿಗೆಯಲ್ಲಿ ಮಹಿಳೆಯರ ಪ್ರಯಾಣ 53,623, ಪ್ರಯಾಣ ಮೌಲ್ಯ 19,70,000 (ಕಲ್ಯಾಣ ಸಾರಿಗೆಯಲ್ಲಿ ನಿತ್ಯ ಅಂದಾಜು 07.41 ಲಕ್ಷ ಮಹಿಳೆಯರು ಸಂಚರಿಸ್ತಾರೆ.)
    * 4 ಸಾರಿಗೆ ನಿಗಮದಲ್ಲಿ ಮಹಿಳೆಯರ ಪ್ರಯಾಣ 5,71,023, ಪ್ರಯಾಣ ಮೌಲ್ಯ- 1,40,22,878 (ನಾಲ್ಕು ನಿಗಮಗಳ ಬಸ್‍ಗಳಲ್ಲಿ ನಿತ್ಯ ಅಂದಾಜು 41.81 ಲಕ್ಷ ಮಹಿಳೆಯರು ಸಂಚರಿಸ್ತಾರೆ.)