Tag: ಉಚಿತ ಬಸ್ ಟಿಕೆಟ್

  • ಫ್ರೀ ಬಸ್ ಟಿಕೆಟ್ ಪಡೆಯುವ ಮಹಿಳೆಯರಿಗೆ ಗುಡ್‍ನ್ಯೂಸ್

    ಫ್ರೀ ಬಸ್ ಟಿಕೆಟ್ ಪಡೆಯುವ ಮಹಿಳೆಯರಿಗೆ ಗುಡ್‍ನ್ಯೂಸ್

    ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ನೇತೃತ್ವದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆಗೆ ಭಾನುವಾರವಷ್ಟೇ ಚಾಲನೆ ದೊರಕಿದೆ. ಈ ಮಧ್ಯೆ ಕೆಲ ಮಹಿಳೆಯರು ದಾಖಲೆ ತರದೇ ಪರದಾಡಿದ ಪ್ರಸಂಗ ಇಂದು ನಡೆದಿದೆ. ಹೀಗಾಗಿ ಸರ್ಕಾರ ಮತ್ತೆ ಮಹಿಳೆಯರಿಗೆ ಗುಡ್ ನ್ಯೂಸ್ ಕೊಟ್ಟಿದೆ.

    ಸಾರಿಗೆ ಬಸ್‍ನಲ್ಲಿ ಉಚಿತ ಪ್ರಯಾಣ (Free Bus Ticket For Women) ಮಾಡುವಾಗ ಮೂಲ ದಾಖಲೆಯನ್ನೇ ಕೈಯಲ್ಲಿ ಹಿಡಿದು ಓಡಾಡಬೇಕಾಗಿಲ್ಲ. ಡಿಜಿಲಾಕರ್, ಝೆರಾಕ್ಸ್, ಪ್ರತಿಯನ್ನು ತೋರಿಸಬಹುದು ಎಂಬ ಮಾಹಿತಿ ಲಭ್ಯವಾಗಿದೆ.

    ಮೂಲ ದಾಖಲೆಯ ಮಾರ್ಗಸೂಚಿಗೆ ಮಾರ್ಪಾಡು ಮಾಡಿ ನಕಲು ಪ್ರತಿ ಹಾಗೂ ಮೊಬೈಲ್‍ನಲ್ಲಿ ಡಿಜಿಲಾಕರ್ ಹಾರ್ಡ್ ಅಥವಾ ಸಾಪ್ಟ್ ಕಾಫಿ ತೋರಿಸಿಯೂ ಬಸ್‍ನಲ್ಲಿ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ. ಇದನ್ನೂ ಓದಿ: ನಮಗೆ ಎಷ್ಟೇ ಕಷ್ಟ ಬರಲಿ 5 ಗ್ಯಾರಂಟಿ ಈಡೇರಿಸುತ್ತೇವೆ: ಸಿದ್ದರಾಮಯ್ಯ ಶಪಥ

    ದಾಖಲೆ ತರದೆ ಗೊಂದಲಕ್ಕೀಡಾಗಿ ಅಜ್ಜಿಯೊಬ್ಬರು ಕಣ್ಣೀರು ಹಾಕಿದ ಘಟನೆ ಇಂದು ಉಡುಪಿ ಕೆಎಸ್‍ಆರ್ ಟಿಸಿ ಬಸ್ ನಿಲ್ದಾಣದಲ್ಲಿ ನಡೆದಿದೆ. ಮಹಿಳೆ ಉಡುಪಿಯಿಂದ ಶಿವಮೊಗ್ಗ ತೆರಳಬೇಕಾಗಿತ್ತು. ಆದರೆ ದಾಖಲೆ ಇಲ್ಲದೆ ಬಸ್ ಪ್ರಯಾಣ ಅಸಾಧ್ಯ ಎಂದ ಬಸ್ ಕಂಡಕ್ಟರ್ ಹೇಳಿದ್ದಾರೆ. ಹೀಗಾಗಿ ಇತ್ತ ದಾಖಲೆಯೂ ತರದೆ, ಹಣವು ಇಲ್ಲದೇ ಕಣ್ಣೀರು ಹಾಕಿದ್ದಾರೆ. ಬಳಿಕ ಮಾನವೀಯತೆ ದೃಷ್ಟಿಯಿಂದ ಸಹ ಪ್ರಯಾಣಿಕ ಶಿವಮೊಗ್ಗ ಟಿಕೆಟ್ ಮಾಡಿಕೊಟ್ಟರು.

  • ಶಕ್ತಿ ಯೋಜನೆ- ಮಂಜುನಾಥನ ಸನ್ನಿಧಿಗೆ ಮೊದಲ ಬಸ್ ಪ್ರಯಾಣ

    ಶಕ್ತಿ ಯೋಜನೆ- ಮಂಜುನಾಥನ ಸನ್ನಿಧಿಗೆ ಮೊದಲ ಬಸ್ ಪ್ರಯಾಣ

    ಬೆಂಗಳೂರು: ಕಾಂಗ್ರೆಸ್ ಸರ್ಕಾರ (Congress Guarantee) ದ ಗ್ಯಾರಂಟಿಗಳಲ್ಲಿ ಒಂದಾದ ‘ಶಕ್ತಿ’ ಯೋಜನೆಗೆ ಇಂದು ಚಾಲನೆ ದೊರಕಿದ್ದು, ಮೊದಲ ಬಸ್ ಮಂಜುನಾಥನ ಸನ್ನಿಧಿ ಧರ್ಮಸ್ಥಳ (First Bus To Dharmasthala) ಕ್ಕೆ ತೆರಳಿದೆ.

    ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಧರ್ಮಸ್ಥಳಕ್ಕೆ ಹೊರಡುವ ಬಸ್ಸಿಗೆ ಮೆಜೆಸ್ಟಿಕ್ ಕೆಎಸ್‍ಆರ್ ಟಿಸಿಯಲ್ಲಿ ಚಾಲನೆ ನೀಡುವ ಮೂಲಕ ‘ಶಕ್ತಿ’ ಯೋಜನೆಯನ್ನು ರಾಜ್ಯದಲ್ಲಿ ಪ್ರಾರಂಭಿಸಿದರು. ಎರಡನೇ ಬಸ್ ಮೈಸೂರು ಕಡೆಗೆ ತೆರಳಿದ್ದು, ಮೂರನೇ ಬಸ್ ಕಲಬುರುಗಿ ಹಾಗೂ ನಾಲ್ಕನೇ ಬಸ್ ಬೆಳಗಾವಿ ಕಡೆಗೆ ಹೊರಟಿದೆ. ಇದನ್ನೂ ಓದಿ: ನಮಗೆ ಎಷ್ಟೇ ಕಷ್ಟ ಬರಲಿ 5 ಗ್ಯಾರಂಟಿ ಈಡೇರಿಸುತ್ತೇವೆ: ಸಿದ್ದರಾಮಯ್ಯ ಶಪಥ

    ಎಲ್ಲರ ಪ್ರಯಾಣ ಸುಖವಾಗಿರಲಿ ಎಂದು ವಿಷ್ ಮಾಡಿ ಸ್ವೀಟ್ ಹಂಚಿಕೆ ಮಾಡಲಾಯಿತು. ಇತ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರು ಕೂಡ ಮೆಜೆಸ್ಟಿಕ್ ನತ್ತ ಪ್ರಯಾಣ ಬೆಳೆಸಿದರು. ಇಂದು ಮಧ್ಯಾಹ್ನ 1 ಗಂಟೆಯ ನಂತರ ಎಲ್ಲ ಮಹಿಳೆಯರು, ವಿದ್ಯಾರ್ಥಿನಿಯರಿಗೆ ಈ ಸೌಲಭ್ಯ ಸಿಕ್ಕಿದೆ. 18,609 ಬಸ್‍ಗಳು ಉಚಿತ ಪ್ರಯಾಣಕ್ಕೆ ಲಭ್ಯ ಇವೆ. 41.80 ಲಕ್ಷ ಮಹಿಳೆಯರು ಈ ಸೌಲಭ್ಯದ ಫಲಾನುಭವಿಗಳು ಎಂದು ಅಂದಾಜಿಸಲಾಗಿದೆ.