Tag: ಉಚಿತ ಟ್ಯಾಬ್

  • ರಾಷ್ಟ್ರೀಯ ಯುವ ಪ್ರತಿಷ್ಠಾನದ ಪ್ರಮೋದ್ ಶ್ರೀನಿವಾಸ್‍ರಿಂದ ಮಕ್ಕಳಿಗೆ ಉಚಿತ ಟ್ಯಾಬ್‍ಗಳ ವಿತರಣೆ

    ರಾಷ್ಟ್ರೀಯ ಯುವ ಪ್ರತಿಷ್ಠಾನದ ಪ್ರಮೋದ್ ಶ್ರೀನಿವಾಸ್‍ರಿಂದ ಮಕ್ಕಳಿಗೆ ಉಚಿತ ಟ್ಯಾಬ್‍ಗಳ ವಿತರಣೆ

    ಬೆಂಗಳೂರು: ರಾಷ್ಟ್ರೀಯ ಯುವ ಪ್ರತಿಷ್ಠಾನದ ಪ್ರಮೋದ್ ಶ್ರೀನಿವಾಸ್ ರಿಂದ ಆನ್ ಲೈನ್ ಕಲಿಕೆಗೆ ಸಮಸ್ಯೆಯಾಗ್ತಿದ್ದ ಮಕ್ಕಳಿಗೆ ಉಚಿತ ಟ್ಯಾಬ್‍ಗಳ ವಿತರಣೆ ಮಾಡಿದ್ರು. ಮೊಬೈಲ್ ಖರೀದಿಸಲಾಗದೇ ಆರ್ಥಿಕವಾಗಿ ಹಿಂದುಳಿದ ಮಕ್ಕಳನ್ನ, ಶಿಕ್ಷಣದಿಂದ ವಂಚಿತರಾಗ್ತಿದ್ದ ಬಡ ಮಕ್ಕಳಿಗೆ ಟ್ಯಾಬ್ ನೀಡುವ ಮೂಲಕ ಬಡ ಮಕ್ಕಳ ಪಾಲಿಗೆ ನೆರವಾಗಿದ್ದಾರೆ.

    ರಾಷ್ಟ್ರೀಯ ಯುವ ಪ್ರತಿಷ್ಠಾನದ ಸಂಸ್ಥಾಪಕ, 29ರ ಹರೆಯದ ಪ್ರಮೋದ್ ಶ್ರೀನಿವಾಸ್, ಬಡ ಮಕ್ಕಳ ಜೀವನದಲ್ಲಿ ಹೊಸ ಭರವಸೆಯನ್ನು ತುಂಬಿದ್ದು, ಬೆಂಗಳೂರಿನ ಪದ್ಮನಾಭ ನಗರದಲ್ಲಿರುವ ಧೋಬಿ ಘಾಟ್‍ನಲ್ಲಿ ಮಕ್ಕಳ ಕಲಿಕಗಾಗಿ ಹಾಲ್ ವ್ಯವಸ್ಥೆ ಮಾಡಲು ಮುಂದಾಗಿದ್ದಾರೆ.

    ಈ ಹಿಂದುಳಿದ ಪ್ರದೇಶದಲ್ಲಿ ಮಕ್ಕಳ ದುಃಸ್ಥಿತಿಯನ್ನು ನೋಡಿ ಸಂಕಟವಾಯಿತು. ಅಲ್ಲಿ ಪೋಷಕರು ದೈನಂದಿನ ಅಗತ್ಯಗಳನ್ನು ಪೂರೈಸಲು ಹೆಣಗಾಡುತ್ತಿದ್ದಾರೆ. ಹಾಗಾಗಿ ಕಲಿಕೆಗೆ ಅನುಕೂಲವಾಗುವಂತೆ ಅಂತರ್ಜಾಲ ಸಂಪರ್ಕದೊಂದಿಗೆ ಒಂದನೇ ತರಗತಿಯಿಂದ ಹತ್ತನೇ ತರಗತಿಯವರೆಗೆ ಸುಮಾರು 20 ಮಕ್ಕಳಿಗೆ ಶಿಕ್ಷಣ ದೊರೆಯುವಂತೆ ಮಾಡಲು ನಿರ್ಧರಿಸಿದೆ. ಈ ಸಭಾಂಗಣವನ್ನು ಬಳಸಲು ನಾನು ಸಂಬಂಧಪಟ್ಟ ಅಧಿಕಾರಿಗಳಿಂದ ಅಗತ್ಯ ಅನುಮತಿಗಳನ್ನು ಪಡೆದುಕೊಂಡೆ ಎಂದು ಇಂದಿನ ಆನ್‍ಲೈನ್ ತರಗತಿಗಳ ಉದ್ಘಾಟನೆಯಲ್ಲಿ ಪ್ರಮೋದ್ ತಿಳಿಸಿದರು.

    ಆನ್‍ಲೈನ್ ತರಗತಿಗಳನ್ನು ಕರ್ನಾಟಕದ ಕಂದಾಯ ಸಚಿವರಾದ ಶ್ರೀ ಆರ್. ಅಶೋಕ್ ಉದ್ಘಾಟಿಸಿದರು. ವಾಸ್ತವವಾಗಿ, ಪ್ರಮೋದ್ ಇನ್ನೂ ಒಂದು ಹೆಜ್ಜೆ ಮುಂದಿಟ್ಟಿದ್ದಾರೆ. ಶಿಕ್ಷಕರು ತರಗತಿಗಳನ್ನು ದಿನನಿತ್ಯವೂ ಪೋಸ್ಟ್ ಮಾಡಿದ ಬಳಿಕ ಅನುಮಾನಗಳನ್ನು ಬಗೆಹರಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ವ್ಯವಸ್ಥೆ ಮಾಡಿದ್ದಾರೆ. ಶಿಕ್ಷಕರು ತಮ್ಮ ಶಾಲಾ ಪಠ್ಯಕ್ರಮವನ್ನು ಅವಲಂಬಿಸಿ ಎಲ್ಲಾ ವಿಷಯಗಳಲ್ಲಿ ಮಕ್ಕಳಿಗೆ ಉಚಿತ ಬೋಧನೆಯನ್ನು ನೀಡುತ್ತಾರೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ದೇವರ ಪೂಜೆ ಬಿಟ್ಟು ಹೋಗಲ್ಲ, ತಾಲಿಬಾನ್ ಉಗ್ರರು ಕೊಂದ್ರೂ ಪರ್ವಾಗಿಲ್ಲ: ಅರ್ಚಕ

    ಅನೇಕ ಬಡ ಸಾಮಾಜಿಕ ಆರ್ಥಿಕ ಹಿನ್ನೆಲೆಯಿರುವ ಮಕ್ಕಳಿಗೆ ಸ್ಮಾರ್ಟ್ ಫೋನ್ ಮತ್ತು ಇಂಟರ್ನೆಟ್ ದೊರೆಯುವಂತೆ ಮಾಡುವುದು. ಇನ್ನೂ ಒಂದು ಸವಾಲಾಗಿದೆ. ಇದರ ಯಶಸ್ಸನ್ನು ನೋಡಿದ ನಂತರ, ಪ್ರಮೋದ್ ಇದನ್ನು ಇತರ ಕೆಲವು ಪ್ರದೇಶಗಳಿಗೂ ವಿಸ್ತರಿಸಲು ನಿರ್ಧರಿಸಿದ್ದಾರೆ.

  • ರಾಯಚೂರಿನ SSLC ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್ ವಿತರಣೆ

    ರಾಯಚೂರಿನ SSLC ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್ ವಿತರಣೆ

    ರಾಯಚೂರು: ಪಬ್ಲಿಕ್ ಟಿವಿ, ರೋಟರಿ ಕ್ಲಬ್ ಸಹಯೋಗದ ಅಡಿ ನಡೆಯುತ್ತಿರುವ ಜ್ಞಾನದೀವಿಗೆ ಅಡಿ ಇಂದು ನಗರದ ಎಸ್‍ಎಸ್‍ಎಲ್‍ಸಿ ಮಕ್ಕಳಿಗೆ ಉಚಿತ ಟ್ಯಾಬ್‍ಗಳನ್ನು ವಿತರಿಸಲಾಯಿತು.

    ಶಾಸಕ ಡಾ.ಶಿವರಾಜ್ ಪಾಟೀಲ್ ನೀಡಿರುವ ಟ್ಯಾಬ್‍ಗಳ ನೀಡಿದ್ದು, ಹಿಂದುಳಿದ ಪ್ರದೇಶಗಳಲ್ಲಿರುವ ಸಿಯತಲಾಬ್ ಸರ್ಕಾರಿ ಪ್ರೌಢಶಾಲೆ, ಎಲ್‍ಬಿಎಸ್ ನಗರ ಸರ್ಕಾರಿ ಪ್ರೌಢಶಾಲೆ ಹಾಗೂ ಗಾಜಗಾರಪೇಟೆ ಸರ್ಕಾರಿ ಪ್ರೌಢಶಾಲೆ ಸೇರಿ ಒಟ್ಟು ಮೂರು ಶಾಲೆಯ 185 ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ 93 ಉಚಿತ ಟ್ಯಾಬ್‍ಗಳನ್ನು ವಿತರಿಸಲಾಯಿತು.

    ಕಾರ್ಯಕ್ರಮದಲ್ಲಿ ರಾಯಚೂರು ಕ್ಷೇತ್ರದ ಶಿಕ್ಷಣಾಧಿಕಾರಿ ಚಂದ್ರಶೇಖರ್ ದೊಡ್ಡಮನಿ, ರಾಯಚೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಗೋಪಾಲ ರೆಡ್ಡಿ, ರೋಟರಿ ಕ್ಲಬ್ ರಾಯಚೂರು ಸೆಂಟ್ರಲ್ ಅಧ್ಯಕ್ಷ ವಿಜಯ ಮಹಾಂತೇಶ್, ರೋಟರಿ ಇನ್ನರ್‍ವೀಲ್‍ನ ಅರುಣಾ ಹಿರೇಮಠ್, ಎಪಿಎಂಸಿ ಸದಸ್ಯ ಜನಾರ್ದನರೆಡ್ಡಿ ಸೇರಿದಂತೆ ಹಲವರು ಭಾಗವಹಿಸಿದ್ದರು.

  • ಜ್ಞಾನದೀವಿಗೆ – ಯಾದಗಿರಿಯ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್ ಹಂಚಿಕೆ

    ಜ್ಞಾನದೀವಿಗೆ – ಯಾದಗಿರಿಯ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್ ಹಂಚಿಕೆ

    ಯಾದಗಿರಿ: ಪಬ್ಲಿಕ್ ಟಿವಿ ಮತ್ತು ರೋಟರಿ ಕ್ಲಬ್ ಸಂಯೋಗದಲ್ಲಿ ರಾಜ್ಯದ ಸರ್ಕಾರಿ ಶಾಲೆಯ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಟ್ಯಾಬ್ ವಿತರಣೆಯ, ಜ್ಞಾನದೀವಿಗೆ ಕಾರ್ಯಕ್ರಮ ಇಂದು ಯಾದಗಿರಿ ಜಿಲ್ಲೆಯಲ್ಲಿ ನಡೆಯಿತು.

    ಜಿಲ್ಲೆಯ ಶಹಪುರ ತಾಲೂಕಿನ ಚಾಮನಾಳ ಪ್ರೌಢಶಾಲೆಯ ಹತ್ತನೇ ತರಗತಿಯ 94 ವಿದ್ಯಾರ್ಥಿಗಳಿಗೆ 48 ಟ್ಯಾಬ್ ಗಳನ್ನು ಹಂಚಿಕೆ ಮಾಡಲಾಯಿತು. ಶಹಪುರ ಕಾಂಗ್ರೆಸ್ ಶಾಸಕ ಶರಣಬಸಪ್ಪ ದರ್ಶನಾಪುರ ಪಬ್ಲಿಕ್ ಟಿವಿಯ ಜ್ಞಾನ ದೀವಿಗೆ ಅಭಿಯಾನಕ್ಕೆ ದೇಣಿಗೆ ನೀಡಿ ಕೈ ಜೋಡಿಸುವ ಮೂಲಕ ಗಿಡಕ್ಕೆ ನೀರು ಹಾಕಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ತಮ್ಮ ಟ್ಯಾಬ್ ವಿತರಣೆ ಮಾಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರೌಢಶಾಲಾ ಶಿಕ್ಷಣ ಇಲಾಖೆ ವತಿಯಿಂದ ವಿಷಯ ನಿರೀಕ್ಷ ಚಂದ್ರಕಾಂತ್ ಎಸ್‍ಡಿಎಂಸಿ ಅಧ್ಯಕ್ಷ, ರೇವಣ ಸಿದ್ದಪ್ಪ, ಮುಖ್ಯ ಶಿಕ್ಷಕ ಬಸವರಾಜ್ ಭಾಗಿಯಾಗಿದ್ದರು.

    ಚಾಮನಾಳ ಗ್ರಾಮದ ಪ್ರೌಢಶಾಲೆಯಲ್ಲಿ ಅಕ್ಕಪಕ್ಕದ ಸುಮಾರು 8 ಹಳ್ಳಿಗಳ ವಿದ್ಯಾರ್ಥಿಗಳು ಶಿಕ್ಷಣ ಕಲಿಯುತ್ತಿದ್ದಾರೆ. ಇದರಲ್ಲಿ ಅತೀ ಹೆಚ್ಚು ತಾಂಡಗಳಿಂದ ಬರುವ ಮಕ್ಕಳಿದ್ದು, ಆನ್ ಲೈನ್ ಶಿಕ್ಷಣ ಎಂಬುವುದು ಈ ಶಾಲೆಯ ಮಕ್ಕಳಿಗೆ ಗಗನ ಕುಸುಮವಾಗಿತ್ತು. ಮನೆಯಲ್ಲಿನ ಬಡತನ ಎಸ್‍ಎಸ್‍ಎಲ್‍ಸಿ ಉತ್ತಮ ಫಲಿತಾಂಶದ ಕನಸಿಗೆ ನೀರು ಎರಚುತ್ತಿತ್ತು. ಆದರೆ ಪಬ್ಲಿಕ್ ಟಿವಿ ಈ ಮಕ್ಕಳ ಭವಿಷ್ಯಕ್ಕೆ ಈಗ ಆಸರೆಯಾಗಿದೆ. ಪಬ್ಲಿಕ್ ಟಿವಿಯ ಸಣ್ಣ ಪ್ರಯತ್ನ ನೂರಾರು ವಿದ್ಯಾರ್ಥಿಗಳ ಸುಂದರ ನಾಳೆಗಳನ್ನು ಬರೆಯುತ್ತಿದೆ.

    ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಶಾಸಕ ದರ್ಶನಾಪುರ, ಕೊರೊನಾದಂತ ಕಷ್ಟದ ಸಮಯದಲ್ಲಿ ಪಬ್ಲಿಕ್ ಟಿವಿ ಬಡ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಒಂದು ಸರ್ಕಾರ ಮಾಡುವ ಕಾರ್ಯ ಮಾಡುತ್ತಿದೆ. ಇದರ ಜೊತೆಗೆ ಸರ್ಕಾರ ಸಾಕಷ್ಟು ಸೌಲಭ್ಯ ನಿಮಗೆ ನೀಡುತ್ತಿದೆ. ಇದರ ಪ್ರಯೋಜನ ಪಡೆದು ನಿಮ್ಮ ಸುಂದರ ಜೀವನ ರೂಪಿಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.