Tag: ಉಚಿತ ಕ್ಲಿನಿಕ್

  • ಪಬ್ಲಿಕ್ ಟಿವಿ ಸಿಬ್ಬಂದಿಗಾಗಿ ಉಚಿತ ಕ್ಲಿನಿಕ್‍ಗೆ ಚಾಲನೆ

    ಪಬ್ಲಿಕ್ ಟಿವಿ ಸಿಬ್ಬಂದಿಗಾಗಿ ಉಚಿತ ಕ್ಲಿನಿಕ್‍ಗೆ ಚಾಲನೆ

    ಬೆಂಗಳೂರು: ಪಬ್ಲಿಕ್ ಟಿವಿ ಕಚೇರಿಯಲ್ಲಿ ಉಚಿತ ಆರೋಗ್ಯ ಕ್ಲಿನಿಕ್‍ಗೆ ಇಂದು ಚಾಲನೆ ದೊರೆತಿದೆ. ಪಬ್ಲಿಕ್ ಟಿವಿ, ಪಬ್ಲಿಕ್ ಮ್ಯೂಸಿಕ್, ಪಬ್ಲಿಕ್ ಮೂವೀಸ್ ಹಾಗೂ ಪಬ್ಲಿಕ್ ಡಿಜಿಟಲ್ ಸಿಬ್ಬಂದಿಗೆ ಉಚಿತ ಆರೋಗ್ಯ ತಪಾಸಣೆ ಪ್ರತಿ ಎರಡು ವಾರಗಳಿಗೊಮ್ಮೆ ನಡೆಯಲಿದೆ.

    ಪಬ್ಲಿಕ್ ಟಿವಿ ಕಚೇರಿಯಲ್ಲೇ ಇದಕ್ಕಾಗಿ ಪ್ರತ್ಯೇಕ ವೈದ್ಯಕೀಯ ಕೊಠಡಿ ಸಿದ್ಧವಾಗಿದ್ದು, ಖ್ಯಾತ ವೈದ್ಯರು ಸಿಬ್ಬಂದಿಯ ಆರೋಗ್ಯ ತಪಾಸಣೆ ನಡೆಸಲಿದ್ದಾರೆ. ಪ್ರತಿ 2 ವಾರಗಳಿಗೊಮ್ಮೆ ಮಧ್ಯಾಹ್ನ 2 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ತಪಾಸಣೆ ನಡೆಯಲಿದೆ.

    ಕ್ಲಿನಿಕ್‍ಗೆ ಚಾಲನೆ ನೀಡಿದ ಸಂದರ್ಭ ಪಬ್ಲಿಕ್ ಟಿವಿ ಸಿಇಒ ಅರುಣ್ ಕುಮಾರ್ ಆರ್, ಸಿಒಒ ಸಿ.ಕೆ.ಹರೀಶ್ ಕುಮಾರ್, ಸಂಪಾದಕ ದಿವಾಕರ್ ಹಾಗೂ ಎಲ್ಲಾ ವಿಭಾಗಗಳ ಸಿಬ್ಬಂದಿ ಉಪಸ್ಥಿತರಿದ್ದರು.