Tag: ಉಚಿತ ಅಕ್ಕಿ

  • ಖಾಸಗಿಯಿಂದ ತಂದ್ರೆ ದುಬಾರಿ – ಅನ್ನಭಾಗ್ಯ ಅಕ್ಕಿ ಹೊಂದಿಸಲು ಸೀಕ್ರೆಟ್ ಪ್ಲ್ಯಾನ್ ಇದೆಯಾ..?

    ಖಾಸಗಿಯಿಂದ ತಂದ್ರೆ ದುಬಾರಿ – ಅನ್ನಭಾಗ್ಯ ಅಕ್ಕಿ ಹೊಂದಿಸಲು ಸೀಕ್ರೆಟ್ ಪ್ಲ್ಯಾನ್ ಇದೆಯಾ..?

    ಬೆಂಗಳೂರು: ಸದ್ಯ ರಾಜ್ಯ ಸರ್ಕಾರಕ್ಕೆ ಅನ್ನಭಾಗ್ಯ ಯೋಜನೆ (Anna Bhagya Scheme) ದುಬಾರಿಯಾಗಿದೆ. FCI ಅಕ್ಕಿ ಕೊಡಲು ಒಪ್ಪದ ಕಾರಣ ಅನ್ಯರಾಜ್ಯಗಳ ಮೊರೆ ಹೋಗಿರುವ ಸಿದ್ದರಾಮಯ್ಯ (Siddaramaiah) ಸರ್ಕಾರ ಹೇಗಾದರೂ ಅಕ್ಕಿ ತರಿಸಿಕೊಳ್ಳುವ ಪ್ರಯತ್ನ ಮಾಡುತ್ತಲೇ ಇದೆ.

    ಪಕ್ಕದ ತೆಲಂಗಾಣದಿಂದಲೂ ರಾಜ್ಯದ ಅಕ್ಕಿ ಬೇಡಿಕೆಗೆ ಪೂರಕ ಸ್ಪಂದನೆ ಸಿಕ್ಕಿಲ್ಲ. ಛತ್ತಿಸ್‌ಗಢದಲ್ಲಿ 1.5 ಲಕ್ಷ ಮೆಟ್ರಿಕ್ ಟನ್ ಅಕ್ಕಿ ನೀಡುವ ಭರವಸೆಯಷ್ಟೆ ಸಿಕ್ಕಿದೆ. ಆದರೆ ರಾಜ್ಯ ಸರ್ಕಾರಕ್ಕೆ ಪ್ರತಿ ತಿಂಗಳಿಗೆ 2.28 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಬೇಕಿದೆ. ಇತ್ತ, ಆಂಧ್ರಪ್ರದೇಶ ಅಕ್ಕಿ ನೀಡುವ ಬಗ್ಗೆ ಪರಿಶೀಲಿಸುವ ಭರವಸೆ ನೀಡಿದೆ. ಅಕ್ಕಿ ಸಿಗುವ ಭರವಸೆ ನೀಡಿದ ರಾಜ್ಯಗಳಲ್ಲೇ ನಿಗದಿತ ಪ್ರಮಾಣದ ಅಕ್ಕಿ ಸಿಗುವುದು ಡೌಟ್ ಆಗಿದೆ.

    ಎಲ್ಲಾ ಗೊಂದಲಗಳ ನಡುವೆ ಸೋಮವಾರ ಅಕ್ಕಿ ಪಡೆಯಲು ಮಹತ್ವದ ಮಾತುಕತೆ ನಡೆಯುವ ಸಾಧ್ಯತೆ ಇದೆ. ಯಾವ ರಾಜ್ಯಗಳು ಕರ್ನಾಟಕದ ಅಕ್ಕಿ ಸಮಸ್ಯೆಗೆ ಸ್ಪಂದಿಸಬಹುದು..? ಎಂಬುದು ಸದ್ಯದ ಕುತೂಹಲವಾಗಿದೆ. ಇದನ್ನೂ ಓದಿ: ಅಕ್ಕಿ ನೀಡಲು ಸಾಧ್ಯವಿಲ್ಲ ಎಂದ 2 ರಾಜ್ಯಗಳು – ಸರ್ಕಾರಕ್ಕೆ ಮತ್ತಷ್ಟು ತಲೆನೋವು

    ರಾಜ್ಯ ಸರ್ಕಾರ ಪ್ರತಿ ಕೆಜಿ ಅಕ್ಕಿಯನ್ನು 36.60 ರೂ.ಗೆ ಪಡೆದು ನಾಡಿನ ಜನರಿಗೆ ನೀಡಲು ಯೋಜನೆ ರೂಪಿಸಿತ್ತು. ಆದ್ರೆ ಕೇಂದ್ರ ಸರ್ಕಾರ ಅಕ್ಕಿ ವಿತರಣೆಗೆ ಬ್ರೇಕ್ ಹಾಕಿದ ನಂತರ ಸರ್ಕಾರಕ್ಕೆ ಈಗ ಖಾಸಗಿ ಮಾರ್ಗವೊಂದೇ ಹಾದಿ ಎಂಬಂತಾಗಿದೆ. 2.28 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಪೂರೈಸಲು ಸರ್ಕಾರಕ್ಕೆ ವಾರ್ಷಿಕ 10 ಸಾವಿರದ 92 ಕೋಟಿ ವೆಚ್ಚ ತಗುಲಲಿದೆ. ಖಾಸಗಿಯಾಗಿ ಕೊಳ್ಳುವುದಾದರೆ ಸರ್ಕಾರದ ಬೊಕ್ಕಸಕ್ಕೆ ಮತ್ತಷ್ಟು ಪೆಟ್ಟು ಬೀಳಲಿದೆ. ಖಾಸಗಿ ಅಕ್ಕಿ ಕೊಳ್ಳಬೇಕಾದರೆ 2 ರಿಂದ 3 ಸಾವಿರ ಕೋಟಿ ಹೆಚ್ಚುವರಿ ಬಾರ ವಾರ್ಷಿಕವಾಗಿ ಸರ್ಕಾರ ಮೇಲೆ ಹೊರೆ ಬೀಳಲಿದೆ ಎಂದು ಅಂದಾಜಿಸಲಾಗಿದೆ.

    ಕರ್ನಾಟಕದಲ್ಲಿ ಸೋನಾ ಮಸೂರಿ ಅಕ್ಕಿ ಇದ್ದರೂ ಅದರ ವೆಚ್ಚ ಕೆಜಿಗೆ 55 ರೂ ಆಗಲಿದೆ. ಅದನ್ನ ಕೊಂಡು ಅನ್ನ ಭಾಗ್ಯದ ಸ್ಕೀಮ್ ನಲ್ಲಿ ಹಂಚುವುದು ಸರ್ಕಾರದ ಪಾಲಿಗೆ ದುಬಾರಿಯಾಗಲಿದೆ. ಒಟ್ಟಿನಲ್ಲಿ ಸರ್ಕಾರ ಈ ಸಮಸ್ಯೆಯನ್ನು ಹೇಗೆ ಬಗೆಹರಿಸುತ್ತೆ ಎಂಬುದನ್ನ ಕಾದು ನೋಡಬೇಕಿದೆ. ಇದನ್ನೂ ಓದಿ:ಮಾವಿನ ಹಣ್ಣಿಗಾಗಿ ನಡೆದ ಗಲಾಟೆ- ಸಹೋದರರನ್ನು ಬಡಿದು ಕೊಂದ ದುಷ್ಕರ್ಮಿಗಳು 

  • ಅಕ್ಕಿ ನೀಡಲು ಸಾಧ್ಯವಿಲ್ಲ ಎಂದ 2 ರಾಜ್ಯಗಳು – ಸರ್ಕಾರಕ್ಕೆ ಮತ್ತಷ್ಟು ತಲೆನೋವು

    ಅಕ್ಕಿ ನೀಡಲು ಸಾಧ್ಯವಿಲ್ಲ ಎಂದ 2 ರಾಜ್ಯಗಳು – ಸರ್ಕಾರಕ್ಕೆ ಮತ್ತಷ್ಟು ತಲೆನೋವು

    ಬೆಂಗಳೂರು: ಅನ್ನಭಾಗ್ಯ (Anna Bhagya) ಯೋಜನೆಯನ್ನು ಜಾರಿ ಮಾಡಿದ ರಾಜ್ಯ ಸರ್ಕಾರ (State Government) ಈಗ ಸಂಕಷ್ಟಕ್ಕೆ ಸಿಲುಕಿದೆ. ಅಕ್ಕಿ (Rice) ಉತ್ಪಾದಿಸುವ ರಾಜ್ಯಗಳ ಪರ ಹೋದರೂ ಸಹಕಾರ ಸಿಗುವುದು ಅನುಮಾನ ಎನ್ನುವ ಮಾತುಗಳು ವ್ಯಕ್ತವಾಗುತ್ತಿದೆ.

    ಸದ್ಯ 4 ರಾಜ್ಯಗಳ ಜತೆ ಸರ್ಕಾರ ಅಕ್ಕಿ ಖರೀದಿ ಮಾತುಕತೆ ನಡೆಸಿದೆ. ಈ ಪೈಕಿ ರಾಜ್ಯಕ್ಕೆ ಅಕ್ಕಿ ನೀಡಲು ಸಾಧ್ಯವಿಲ್ಲ ಎಂದು ಪಂಜಾಬ್, ತೆಲಂಗಾಣ ರಾಜ್ಯಗಳು ಈಗಾಗಲೇ ತಿಳಿಸಿದೆ. ಛತ್ತೀಸ್‍ಗಢ (Chhattisgarh) ರಾಜ್ಯದಿಂದ 1.5 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಸಿಗುವ ಭರವಸೆ ನೀಡಿದರೂ ಅಂದುಕೊಂಡಷ್ಟು ಪೂರೈಕೆ ಮಾಡುವುದು ಅನುಮಾನ ಎನ್ನಲಾಗುತ್ತಿದೆ.

    ಸದ್ಯ ನಮ್ಮ ರಾಜ್ಯಕ್ಕೆ ಮಾಸಿಕ 2.28 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಬೇಕಾಗಿದೆ. ಛತ್ತೀಸ್‌ಗಢ ಕೊಡುತ್ತೇವೆ ಎಂದು ಹೇಳಿರುವುದು 1.5 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಮಾತ್ರ. ಆದರೆ ಉಳಿದ 1 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಕೊರತೆ ಎದುರಾಗಲಿದೆ. ಅಕ್ಕಿ ಖರೀದಿ ಸಂಬಂಧ  ಆಂಧ್ರಪ್ರದೇಶ (Andhra Pradesh) ಸರ್ಕಾರದ ಜೊತೆಯೂ ಮಾತುಕತೆ ನಡೆಸಿದ್ದು, ಇಂದು ಅಥವಾ ನಾಳೆ ಉತ್ತರ ಬರಲಿದೆ. ಇದನ್ನೂ ಓದಿ: ಮೆಜೆಸ್ಟಿಕ್‌ನಲ್ಲಿ ಮಹಿಳೆಯರ ʼಶಕ್ತಿʼ ಪ್ರದರ್ಶನ – ಮಧ್ಯರಾತ್ರಿಯೂ ಇತ್ತು ಬುಕ್ಕಿಂಗ್‌ ಸಾಲು!

    ಛತ್ತೀಸ್‍ಗಡ ರಾಜ್ಯದ ಅಕ್ಕಿಯೂ ಸ್ವಲ್ಪ ದುಬಾರಿ ಮತ್ತು ಸಾಗಣೆ ವೆಚ್ಚವೂ ಹೆಚ್ಚಾಗುತ್ತದೆ. ಇದು ರಾಜ್ಯ ಸರ್ಕಾರಕ್ಕೆ ಇನ್ನಿಲ್ಲದ ತಲೆಬಿಸಿಗೆ ಕಾರಣವಾಗಿದೆ.

     

    ಚುನಾವಣಾ ಸಮಯದಲ್ಲಿ ಸಿದ್ದರಾಮಯ್ಯ (Siddaramaiah) ಸೇರಿದಂತೆ ಕಾಂಗ್ರೆಸ್‌ ನಾಯಕರು ನಾವು 10 ಕೆಜಿ ಅಕ್ಕಿ ನೀಡುತ್ತೇವೆ ಎಂದು ಗ್ಯಾರಂಟಿ ಭರವಸೆ ನೀಡಿದ್ದರು.

    ಕಳೆದ ವರ್ಷದವರೆಗೆ 1 ಕೆಜಿ ಅಕ್ಕಿಗೆ ಕೇಂದ್ರ ಸರ್ಕಾರ 34.28 ರೂ. ಸಬ್ಸಿಡಿ ನೀಡಿದ್ದರೆ, ರಾಜ್ಯ ಸರ್ಕಾರಗಳು 2 ಕೆಜಿ ನೀಡುತ್ತಿತ್ತು. ಈ ವರ್ಷದ ಜನವರಿಯಿಂದ ರಾಜ್ಯ ಸರ್ಕಾರದ ಯಾವುದೇ ಸಬ್ಸಿಡಿ ಇಲ್ಲದೇ ಕೇಂದ್ರ ಸರ್ಕಾರ ಪೂರ್ಣ ಪ್ರಮಾಣದಲ್ಲಿ 1 ಕೆಜಿ ಅಕ್ಕಿಯನ್ನು ಬಡವರಿಗೆ ಉಚಿತವಾಗಿ ನೀಡಲು ಆರಂಭಿಸಿದೆ.

  • 10 ಕೆಜಿ ಉಚಿತ ಅಕ್ಕಿ – ಸರ್ಕಾರದ ಲೆಕ್ಕಾಚಾರ ಏನು?

    10 ಕೆಜಿ ಉಚಿತ ಅಕ್ಕಿ – ಸರ್ಕಾರದ ಲೆಕ್ಕಾಚಾರ ಏನು?

    ಬೆಂಗಳೂರು: ಗ್ಯಾರಂಟಿ ಭರವಸೆಗಳಲ್ಲಿ ಒಂದಾದ 10 ಕೆಜಿ ಉಚಿತ ಅಕ್ಕಿ (Free Rice for BPL) ಕೊಡುವ ಬಗ್ಗೆ ಆಹಾರ ಇಲಾಖೆ ಈಗ ತಲೆಕೆಡಿಸಿಕೊಂಡಿದೆ. ಇಂದು ಇಲಾಖೆ ಅಧಿಕಾರಿಗಳ ಜೊತೆ ಸಚಿವ ಕೆಹೆಚ್ ಮುನಿಯಪ್ಪ (KH Muniyappa) ಸಭೆ ನಡೆಸಿ ಅನುದಾನ, ಅಕ್ಕಿ ಸಂಗ್ರಹ, ಖರೀದಿ ಸೇರಿ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಿದರು.

    ಕೇಂದ್ರ ಸರ್ಕಾರ ಐದು ಕೆಜಿ ಅಕ್ಕಿ ನೀಡುತ್ತಿದೆ. ಇದನ್ನು ಸೇರಿಸಿಕೊಂಡೇ ನಾವು ಹತ್ತು ಕೆಜಿ ಅಕ್ಕಿ ಕೊಡುತ್ತೇವೆ. ಈಗಿನ ಬೆಲೆಯಲ್ಲೇ ಅಕ್ಕಿಯನ್ನು ಪೂರೈಸುವಂತೆ ಕೇಂದ್ರವನ್ನು ಕೇಳುತ್ತೇವೆ. ಅವರು ಒಪ್ಪದೇ ಇದ್ದರೆ ನಾವೇ ಟೆಂಡರ್ ಕರೆದು ಅಕ್ಕಿ ಖರೀದಿ ಮಾಡುತ್ತೇವೆ ಎಂದು ಸಚಿವ ಮುನಿಯಪ್ಪ ಹೇಳಿದರು. ಇದನ್ನೂ ಓದಿ: ಸಿದ್ದರಾಮಯ್ಯ ಸಿಎಂ ಆದ ಬಳಿಕ ಅರ್ಬನ್ ನಕ್ಸಲರು ಹೊರಗೆ ಬಂದಿದ್ದಾರೆ: ಸಿಟಿ ರವಿ

    ಕೇಂದ್ರ ಸರ್ಕಾರ ನೀಡದೇ ಇದ್ದರೂ ನಾವು 10 ಕೆಜಿ ಅಕ್ಕಿಯನ್ನು ಕೊಡುತ್ತೇವೆ. ಆದರೆ ಯಾವಾಗಿನಿಂದ ಎನ್ನುವುದನ್ನು ಸಿಎಂ ತೀರ್ಮಾನ ಮಾಡ್ತಾರೆ ಎಂದು ಮುನಿಯಪ್ಪ ತಿಳಿಸಿದರು.

    ಆಯಾ ಭಾಗಕ್ಕೆ ಹೊಂದುವಂತೆ ಪಡಿತರ ಕೊಡುತ್ತೇವೆ. ದಕ್ಷಿಣ ಕರ್ನಾಟಕದಲ್ಲಿ ಅಕ್ಕಿ ಜೊತೆ ರಾಗಿ ಕೊಡುತ್ತೇವೆ. ಉತ್ತರ ಕರ್ನಾಟಕದ ಭಾಗದಲ್ಲಿ 6 ಕೆಜಿ ಅಕ್ಕಿ ಕೊಟ್ಟರೆ 4 ಕೆಜಿ ಜೋಳ ಕೊಡುತ್ತೇವೆ ಎಂಬ ಮಾಹಿತಿಯನ್ನು ಕೆಹೆಚ್ ಮುನಿಯಪ್ಪ ನೀಡಿದರು.


    ರಾಜ್ಯದಲ್ಲಿ ಅಂತ್ಯೋದಯ, ಬಿಪಿಎಲ್, ಎಪಿಎಲ್ ಸೇರಿ ಒಟ್ಟು 1,31,70,600 ಪಡಿತರ ಚೀಟಿಯಿದೆ. ಒಟ್ಟು 4,36,97,568 ಫಲಾನುಭವಿಗಳಿದ್ದು ಈಗ ಒಟ್ಟು 2,18,487.84 ಮೆಟ್ರಿಕ್‌ ಟನ್‌ ಅಕ್ಕಿ ನೀಡಲಾಗುತ್ತಿದೆ.

    ಸದ್ಯ ಈಗ ಅಂತ್ಯೋದಯ ಕಾರ್ಡ್‍ನಲ್ಲಿ ಗರಿಷ್ಠ 35 ಕೆಜಿ, ಬಿಪಿಎಲ್‍ ಕಾರ್ಡ್‌ ಹೊಂದಿದ ಕುಟುಂಬದ ಪ್ರತಿ ವ್ಯಕ್ತಿಗೆ 6 ಕೆಜಿ,ಎಪಿಎಲ್‍ಗೆ ಗರಿಷ್ಠ 10 ಕೆಜಿ ನೀಡಲಾಗುತ್ತದೆ. ಉಚಿತ ಅಕ್ಕಿಗಾಗಿ ಒಟ್ಟು ತಿಂಗಳಿಗೆ 742.86 ಕೋಟಿ ರೂ. ವೆಚ್ಚವಾಗುತ್ತದೆ. 10 ಕೆಜಿ ಕೊಡಲು ಶುರು ಮಾಡಿದರೆ ವೆಚ್ಚ ಡಬಲ್ ಆಗುತ್ತದೆ.