Tag: ಉಗ್ರ

  • ಮಂಗಳೂರು, ಕೊಯಮತ್ತೂರಲ್ಲಿ ಸ್ಫೋಟ ಮಾಡಿದ್ದು ನಾವೇ- ಹೊಣೆ ಹೊತ್ತ ಐಎಸ್‍ಕೆಪಿ

    ಮಂಗಳೂರು, ಕೊಯಮತ್ತೂರಲ್ಲಿ ಸ್ಫೋಟ ಮಾಡಿದ್ದು ನಾವೇ- ಹೊಣೆ ಹೊತ್ತ ಐಎಸ್‍ಕೆಪಿ

    ನವದೆಹಲಿ: ಕೊಯಮತ್ತೂರು (Coimbatore) ಹಾಗೂ ಮಂಗಳೂರು (Mangaluru) ಸ್ಫೋಟದಲ್ಲಿ ನಮ್ಮ ಉಗ್ರರೇ ಭಾಗಿಯಾಗಿದ್ದು, ದಕ್ಷಿಣ ಭಾರತದಲ್ಲೂ (South India) ನಮ್ಮವರು ನೆಲೆಸಿದ್ದಾರೆ ಎಂಬ ಸ್ಫೋಟಕ ವಿಷಯವನ್ನು ಐಎಸ್‍ಕೆಪಿ ಒಪ್ಪಿಕೊಂಡಿದೆ.

    ಖೊರಾಸನ್ ಪ್ರಾಂತ್ಯದ ಇಸ್ಲಾಮಿಕ್ ಸ್ಟೇಟ್ (ISKP) ಎಂಬ ಉಗ್ರ ಸಂಘಟನೆ ತನ್ನ ವಾಯ್ಸ್‌ ಆಫ್ ಖುರಾಸನ್ ನಿಯತಕಾಲಿಕೆಯಲ್ಲಿ ಈ ಹೇಳಿಕೆಯನ್ನು ಬಿಡುಗಡೆ ಮಾಡಿದೆ. ಅಲ್ ಅಜೈಮ್ ಮೀಡಿಯಾ ಫೌಂಡೇಶನ್‍ನ ಇಂಗ್ಲೀಷ್‍ನಲ್ಲಿರುವ 68 ಪುಟಗಳ ವಾಯ್ಸ್‌ ಆಫ್ ಖುರಾಸನ್‌ ಪ್ರಚಾರದ ನಿಯತಕಾಲಿಕವನ್ನು ಬಿಡುಗಡೆ ಮಾಡಿದೆ.

    ನಿಯತಕಾಲಿಕೆಯಲ್ಲಿ ಏನಿದೆ?: ಕಳೆದ ವರ್ಷ ಅ. 23ರಂದು ಕೊಯಮತ್ತೂರಿನಲ್ಲಿ ನಡೆದ ಕಾರು ಸ್ಫೋಟ ಮತ್ತು ನ. 19ರಂದು ಮಂಗಳೂರಿನ ಆಟೋ ರಿಕ್ಷಾದಲ್ಲಿ ನಡೆದ ಕುಕ್ಕರ್ ಸ್ಫೋಟವನ್ನು ಐಎಸ್-ಸಂಯೋಜಿತ ಉಗ್ರರು ನಡೆಸಿದ್ದರು ಎಂದು ಉಲ್ಲೇಖಿಸಿದೆ.

    ತಮಿಳುನಾಡಿನ ಕೊಯಮತ್ತೂರು ಹಾಗೂ ಕರ್ನಾಟಕದ ಮಂಗಳೂರಿನಲ್ಲಿ ನಮ್ಮ ದಾಳಿಯಾಗಿದ್ದು, ಅಲ್ಲಿ ನಮ್ಮ ಸಹೋದರರು ನಮ್ಮ ಧರ್ಮದ ಗೌರವಕ್ಕಾಗಿ ಸೇಡು ತೀರಿಸಿಕೊಂಡರು ಎಂದು ಹೇಳಿದೆ. (ನಿಯತಕಾಲಿಕೆಯಲ್ಲಿ ಮಂಗಳೂರು ಬದಲಿಗೆ ಬೆಂಗಳೂರು ಎಂದು ಬರೆಯಲಾಗಿದೆ)

    ಹಿಂದೂಗಳು, ಬಿಜೆಪಿ ಹಾಗೂ ಭಾರತೀಯ ಸೇನೆ ವಿರುದ್ಧ ಕಿಡಿಕಾರಿದೆ. ದಕ್ಷಿಣ ಭಾರತದಲ್ಲಿ ತನ್ನ ಮುಜಾಹಿದ್ದೀನ್‍ಗಳನ್ನು ಅವರ ವಿರುದ್ಧ ಯುದ್ಧ ಮಾಡಲು ಪ್ರಚೋದಿಸುತ್ತದೆ ಎಂದು ತಿಳಿಸಿದೆ. ಆದರೆ ಇದರಲ್ಲಿ ದಕ್ಷಿಣ ಭಾರತದಲ್ಲಿ ಯಾವ ರಾಜ್ಯದಲ್ಲಿ ಮುಜಾಹಿದ್ದೀನ್‍ಗಳು ಸಕ್ರಿಯರಾಗಿದ್ದಾರೆ ಎನ್ನುವುದನ್ನು ಇನ್ನೂ ಸ್ಪಷ್ಟಪಡಿಸಿಲ್ಲ. ಆದರೆ ಕೇರಳ, ತಮಿಳುನಾಡು, ಕರ್ನಾಟಕದಲ್ಲಿ ಹೆಚ್ಚಿದ್ದಾರೆ ಎಂದು ಕೆಲವು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಮಾ.9 ರಂದು ಕರ್ನಾಟಕ ಬಂದ್‌ಗೆ ಕರೆ ಕೊಟ್ಟ ಡಿಕೆಶಿ

    ಏನಿದು ವಾಯ್ಸ್‌ ಆಫ್ ಖುರಾಸನ್?: ಇದು ಮಧ್ಯ ಹಾಗೂ ದಕ್ಷಿಣ ಏಷ್ಯಾದಲ್ಲಿ ಐಸಿಸ್ ಚಟುವಟಿಕೆಯನ್ನು ಉತ್ತೇಜಿಸುವ ನಿಯತಕಾಲಿಕೆಯಾಗಿದೆ. ಇದು ದಾಳಿ ನಡೆಸಲು ಪ್ರಪಂಚದಾದ್ಯಂತ ಉಗ್ರರನ್ನು ಪ್ರಚೋದಿಸುತ್ತದೆ. ಇದನ್ನೂ ಓದಿ: ನಿಯಂತ್ರಣ ತಪ್ಪಿ ಕಾರು ಪಲ್ಟಿ – ಚಾಲಕನಿಗೆ ಗಾಯ

  • ಕಾಶ್ಮೀರಿ ಪಂಡಿತನನ್ನು ಹತ್ಯೆಗೈದ  ಉಗ್ರ ಎನ್‌ಕೌಂಟರ್‌ಗೆ ಬಲಿ

    ಕಾಶ್ಮೀರಿ ಪಂಡಿತನನ್ನು ಹತ್ಯೆಗೈದ ಉಗ್ರ ಎನ್‌ಕೌಂಟರ್‌ಗೆ ಬಲಿ

    ಶ್ರೀನಗರ: ಅವಂತಿಪೋರಾ ಪ್ರದೇಶದಲ್ಲಿ (Awantipora Area) ನಡೆದ ಎನ್‍ಕೌಂಟರ್‌ನಲ್ಲಿ ಭದ್ರತಾ ಪಡೆಗಳು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಕಾಶ್ಮೀರಿ ಪಂಡಿತನ ಹತ್ಯೆಯಲ್ಲಿ ಭಾಗಿಯಾಗಿದ್ದ ಓರ್ವ ಉಗ್ರನನ್ನು (Terrorists) ಹತ್ಯೆಗೈದಿದ್ದಾರೆ.

    ಹತ್ಯೆಗೀಡಾದವನನ್ನು ಅಕಿಬ್ ಮುಷ್ತಾಕ್ ಭಟ್‌ ಎಂದು ಗುರುತಿಸಲಾಗಿದೆ. ಪುಲ್ವಾಮಾದಲ್ಲಿ ಕಾಶ್ಮೀರಿ ಪಂಡಿತನೊಬ್ಬನನ್ನು (Kashmiri Pandit) ಉಗ್ರರು ಹೊಡೆದುರುಳಿಸಿದ ಕೆಲವೇ ದಿನಗಳ ನಂತರ ಈ ಘಟನೆ ನಡೆದಿದೆ. ಅಕಿಬ್ ಮುಷ್ತಾಕ್ ಭಟ್‌ ಆರಂಭದಲ್ಲಿ ಹೆಚ್‌ಎಂ ಉಗ್ರ ಸಂಘಟನೆಯಲ್ಲಿ ಕೆಲಸ ಮಾಡುತ್ತಿದ್ದ. ಈಗ ಟಿಆರ್‌ಎಫ್‌ನೊಂದಿಗೆ ಕೆಲಸ ಮಾಡುತ್ತಿದ್ದ. ಈ ಬಗ್ಗೆ ಕಾಶ್ಮೀರ (Kashmir) ವಲಯ ಪೊಲೀಸರು ಟ್ವೀಟ್ ಮಾಡಿದ್ದಾರೆ.

    ಟ್ವೀಟ್‍ನಲ್ಲಿ ಏನಿದೆ?: ಪುಲ್ವಾಮಾ ಜಿಲ್ಲೆಯ ಪಡಗಂಪೋರಾ ಅವಂತಿಪೋರಾದಲ್ಲಿ ಎನ್‍ಕೌಂಟರ್ ನಡೆದಿದೆ. ಪೊಲೀಸರು ಮತ್ತು ಭದ್ರತಾ ಪಡೆಗಳು ಕಾರ್ಯದಲ್ಲಿವೆ. ಎನ್‍ಕೌಂಟರ್‌ನಲ್ಲಿ ಒಬ್ಬ ಉಗ್ರನನ್ನು ಕೊಲ್ಲಲಾಗಿದೆ ಎಂದು ತಿಳಿಸಿದೆ. ಇದನ್ನೂ ಓದಿ: ಫಾರ್ಮಾ ಕಂಪನಿಯಲ್ಲಿ ಸ್ಫೋಟ – ಇಬ್ಬರು ಸಾವು

    ಭಾನುವಾರ ಮತ್ತೊಂದು ಉದ್ದೇಶಿತ ಹತ್ಯೆಯಲ್ಲಿ ಕಾಶ್ಮೀರಿ ಪಂಡಿತ್ ಬಲಿಯಾಗಿದ್ದರು. ಸಂಜಯ್ ಶರ್ಮಾ ಅವರು ಪುಲ್ವಾಮಾ ಜಿಲ್ಲೆಯ ಸ್ಥಳೀಯ ಮಾರುಕಟ್ಟೆಗೆ ಹೋಗುತ್ತಿದ್ದರು. ಈ ವೇಳೆ ಉಗ್ರರು ಅವರ ಮೇಲೆ ಗುಂಡಿನ ದಾಳಿ ನಡೆಸಿದರು. ಅವರನ್ನು ಹೆಚ್ಚಿನ ಚಿಕಿತ್ಸೆಗೆ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಇದನ್ನೂ ಓದಿ: ಪಾಕ್, ಚೀನಾದಲ್ಲಿ ತರಬೇತಿ ಪಡೆದ ಡೇಂಜರಸ್ ವ್ಯಕ್ತಿ ಭಾರತಕ್ಕೆ ಎಂಟ್ರಿ – NIA ಅಲರ್ಟ್

  • ಉಗ್ರರ ಗುಂಡಿನ ದಾಳಿಗೆ ಕಾಶ್ಮೀರಿ ಪಂಡಿತ್ ಸಾವು

    ಉಗ್ರರ ಗುಂಡಿನ ದಾಳಿಗೆ ಕಾಶ್ಮೀರಿ ಪಂಡಿತ್ ಸಾವು

    ಶ್ರೀನಗರ: ಉಗ್ರರ (Terrorists) ಗುಂಡಿನ ದಾಳಿಗೆ ಕಾಶ್ಮೀರಿ ಪಂಡಿತ್ ಸಾವನ್ನಪ್ಪಿದ ಘಟನೆ ಜಮ್ಮು ಮತ್ತು ಕಾಶ್ಮೀರದ (Jammu and Kashmir) ಪುಲ್ವಾಮಾದಲ್ಲಿ (Pulwama) ನಡೆದಿದೆ.

    ಸಂಜಯ್ ಶರ್ಮಾ (40) ಮಾರುಕಟ್ಟೆಗೆ ತೆರಳುತ್ತಿದ್ದಾಗ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದರು. ಸಂಜಯ್ ಶರ್ಮಾ ಅವರು ಜಮ್ಮು ಮತ್ತು ಕಾಶ್ಮೀರದ ಬ್ಯಾಂಕ್‍ನಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು.

    ಈ ಬಗ್ಗೆ ಕಾಶ್ಮೀರ ವಲಯ ಪೊಲೀಸರು ಟ್ವೀಟ್ ಮಾಡಿದ್ದು, ಉಗ್ರರ ದಾಳಿಯಲ್ಲಿ ಹಿಂದೂ ವ್ಯಕ್ತಿಯೊಬ್ಬ ಸಾವನ್ನಪ್ಪಿರುವುದನ್ನು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಕೆಲ ತಿಂಗಳು ಜೈಲಲ್ಲಿದ್ರೂ I Don’t Care- ವಿಚಾರಣೆಗೆ ಸಿಬಿಐ ಕಚೇರಿ ತಲುಪಿದ ಸಿಸೋಡಿಯಾ

    ಟ್ವೀಟ್‍ನಲ್ಲಿ ಏನಿದೆ?: ಸ್ಥಳೀಯ ಮಾರುಕಟ್ಟೆಗೆ ತೆರಳುತ್ತಿದ್ದಾಗ ಸಂಜಯ್ ಶರ್ಮಾ ಮೇಲೆ ಉಗ್ರರು ಗುಂಡು ಹಾರಿಸಿದ್ದಾರೆ. ಅವರನ್ನು ಕೂಡಲೇ ಸ್ಥಳೀಯರು ಆಸ್ಪತ್ರೆಗೆ ಸಾಗಲಿಸಲಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.

    ಕಳೆದ ನಾಲ್ಕು ತಿಂಗಳಲ್ಲಿ ಹಿಂದೂ ನಾಗರಿಕರ ಮೇಲೆ ನಡೆದ ಮೊದಲ ದಾಳಿ ಇದಾಗಿದೆ. ಕಳೆದ ವರ್ಷ ಕಾಶ್ಮೀರಿ ಪಂಡಿತರು ಮತ್ತು ಸ್ಥಳೀಯರಲ್ಲದವರ ಮೇಲೆ ಸರಣಿ ಉದ್ದೇಶಿತ ದಾಳಿಗಳು ನಡೆದಿವೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ವಂದೇ ಭಾರತ್ ರೈಲಿಗೆ ಕಲ್ಲು ತೂರಿದ ಕಿಡಿಗೇಡಿಗಳು

  • ಅಮೆರಿಕ ಮಿಲಿಟರಿ ಪಡೆಯಿಂದ ವೈಮಾನಿಕ ದಾಳಿ – 30 ಉಗ್ರರ ಹತ್ಯೆ

    ಅಮೆರಿಕ ಮಿಲಿಟರಿ ಪಡೆಯಿಂದ ವೈಮಾನಿಕ ದಾಳಿ – 30 ಉಗ್ರರ ಹತ್ಯೆ

    ವಾಷಿಂಗ್ಟನ್: ಅಮೆರಿಕ (America) ಮಿಲಿಟರಿಯು ಶುಕ್ರವಾರ ವೈಮಾನಿಕ ದಾಳಿ ನಡೆಸಿದ್ದು, ಈ ವೇಳೆ 30 ಉಗ್ರರನ್ನು ಹತ್ಯೆಗೈದ ಘಟನೆ ಸೆಂಟ್ರಲ್ ಸೊಮಾಲಿಯಾದ (Somalia) ಗಾಲ್ಕಾಡ್ ಪಟ್ಟಣದ ಬಳಿ ನಡೆದಿದೆ.

    ಈ ಘಟನೆಯು ಸೊಮಾಲಿಯಾ ರಾಜಧಾನಿ ಮೊಗಾದಿಶುವಿನಿಂದ 260 ಕಿ.ಮೀ ದೂರದಲ್ಲಿರುವ ಗಾಲ್ಕಾಡ್ ಬಳಿ ಸಂಭವಿಸಿದೆ. ಹತ್ಯೆಯಾದವರೆಲ್ಲರೂ ಇಸ್ಲಾಮಿಸ್ಟ್ ಅಲ್ ಶಬಾಬ್ (Al Shabaab) ಗುಂಪಿಗೆ ಸೇರಿದವರೆಂದು ಗುರುತಿಸಲಾಗಿದೆ.

    ಅಲ್- ಶಬಾಬ್ ಗುಂಪು ಅಲ್ ಖೈದಾದೊಂದಿಗೆ ಸಂಪರ್ಕ ಹೊಂದಿದೆ. ಈ ಹಿನ್ನೆಲೆಯಲ್ಲಿ 100ಕ್ಕೂ ಅಧಿಕ ಅಲ್- ಶಬಾಬ್ ಹೋರಾಟಗಾರರು ಇದ್ದ ಗುಂಪಿನ ಮೇಲೆ ಅಮೆರಿಕ ಮಿಲಿಟರಿ ಪಡೆಗಳು ದಾಳಿಯನ್ನು ನಡೆಸಿದೆ.

    2022ರ ಮೇನಲ್ಲಿ ಉಗ್ರರ ಗುಂಪನ್ನು ಎದುರಿಸುವ ಪ್ರಯತ್ನದಲ್ಲಿ ಈ ಪ್ರದೇಶಕ್ಕೆ ಅಮೆರಿಕ ಪಡೆಗಳನ್ನು ಮರು ನಿಯೋಜಿಸಲು ಪೆಂಟಗನ್ ವಿನಂತಿಗೆ ಅಧ್ಯಕ್ಷ ಜೋ ಬೈಡನ್ ಅನುಮೋದನೆ ನೀಡಿದ್ದರು. ಅಂದಿನಿಂದಲೂ ಸೋಮಾಲಿಯಾ ಸರ್ಕಾರಕ್ಕೆ ಅಮೆರಿಕ ನಿರಂತರ ಬೆಂಬಲವನ್ನು ಒದಗಿಸುತ್ತಿದೆ. ಇದನ್ನೂ ಓದಿ: ಮತ್ತೆ ಪ್ರತಿಭಟನೆಗೆ ಮುಂದಾದ ಸಾರಿಗೆ ನೌಕರರು – ಮಂಗಳವಾರ ಬಸ್ ಸಂಚಾರದಲ್ಲಿ ವ್ಯತ್ಯಯ

    ಸೋಮಾಲಿಯಾವು ಎಲ್ಲಾ ಪೂರ್ವ ಆಫ್ರಿಕಾದಲ್ಲಿ ಸ್ಥಿರತೆ ಮತ್ತು ಭದ್ರತೆಗೆ ಕೇಂದ್ರವಾಗಿದೆ. ಅಮೆರಿಕ ಆಫ್ರಿಕಾ ಕಮಾಂಡ್‍ನ ಪಡೆಗಳು ಅಲ್-ಶಬಾಬ್ ಅನ್ನು ಸೋಲಿಸಲು ಅಗತ್ಯವಾದ ಯುದ್ಧ ಸಾಮಾಗ್ರಿಗಳನ್ನು ನೀಡಿ ಆ ಪಡೆಗಳಿಗೆ ತರಬೇತಿ, ಸಲಹೆ ನೀಡುತ್ತಿದೆ. ಇತ್ತೀಚಿನ ತಿಂಗಳಲ್ಲಿ ಅಮೆರಿಕ ಉಗ್ರರ ತಾಣದ ಹಲವು ಕಡೆ ದಾಳಿಯನ್ನು ನಡೆಸಿದೆ. ಈ ವೇಳೆ ಅನೇಕ ಉಗ್ರರು ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಮೂತ್ರ ವಿಸರ್ಜನೆ ಕೇಸ್‌ನಲ್ಲಿ ಪೈಲಟ್‌ ಬಲಿಪಶು – ಏರ್‌ ಇಂಡಿಯಾ ಪೈಲಟ್‌ ಒಕ್ಕೂಟ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ‘ಪಠಾಣ್’ ಸಿನಿಮಾದಲ್ಲಿ ಉಗ್ರನಾಗಿ ಕಾಣಿಸಿಕೊಂಡ ಬಾಲಿವುಡ್ ನಟ ಜಾನ್ ಅಬ್ರಾಹಂ

    ‘ಪಠಾಣ್’ ಸಿನಿಮಾದಲ್ಲಿ ಉಗ್ರನಾಗಿ ಕಾಣಿಸಿಕೊಂಡ ಬಾಲಿವುಡ್ ನಟ ಜಾನ್ ಅಬ್ರಾಹಂ

    ಬಾಲಿವುಡ್ ನಟ ಶಾರುಖ್ ಖಾನ್ ನಟನೆಯ ‘ಪಠಾಣ್’ ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು, ಅನೇಕ ಅಚ್ಚರಿ ಸಂಗತಿಗಳೊಂದಿಗೆ ಈ ಟ್ರೈಲರ್ ಗಮನ ಸೆಳೆಯುತ್ತಿದೆ. ಅಲ್ಲದೇ, ಕೆಲವು ಪಾತ್ರಗಳ ಹಿನ್ನೆಲೆಯನ್ನೂ ಅದು ರಿವಿಲ್ ಮಾಡಿದೆ. ಈ ಸಿನಿಮಾದಲ್ಲಿ ಖ್ಯಾತ ಬಾಲಿವುಡ್ ನಟ ಜಾನ್ ಅಬ್ರಾಹಂ ಉಗ್ರ ಸಂಘಟನೆಯ ಮುಖ್ಯಸ್ಥನಾಗಿ ಕಾಣಸಿಕೊಂಡಿದ್ದರೆ, ಶಾರುಖ್ ರಾ ಏಜೆಂಟ್ ಪಾತ್ರವನ್ನು ಮಾಡಿದ್ದಾರೆ.

    ಔಟ್ ಫುಟ್ ಎಕ್ಸ್ ಎನ್ನುವ ಉಗ್ರ ಸಂಘಟನೆಯೊಂದಿಗೆ ಗುರುತಿಸಿಕೊಂಡಿರುವ ಜಾನ್ ಅಬ್ರಾಹಂ, ಈ ಸಂಘಟನೆಯ ಮೂಲಕ ಭಾರತದ ಮೇಲೆ ದಾಳಿ ಮಾಡಲು ಸಂಚು ರೂಪಿಸುತ್ತಾರೆ. ಈ ದಾಳಿಯನ್ನು ಭಾರತ ರಾ ಏಜೆಂಟ್ ಆಗಿರುವ ಶಾರುಖ್ ಖಾನ್ ಹೇಗೆ ತಡೆಯುತ್ತಾರೆ ಎನ್ನುವುದೇ ಪಠಾಣ್ ಸಿನಿಮಾದ ಕಥಾ ಹಂದರ. ಟ್ರೈಲರ್ ನಲ್ಲಿ ಶಾರುಖ್ ಸಖತ್ತಾಗಿ ಕಾಣಿಸಿಕೊಂಡಿದ್ದಾರೆ. ಅನೇಕ ಸಾಹಸಮಯ ದೃಶ್ಯಗಳಲ್ಲಿ ಅವರು ವಯಸ್ಸಿಗೂ ಮೀರಿದ ಆ್ಯಕ್ಷನ್ ಮಾಡಿದ್ದಾರೆ. ಇಡೀ ಟ್ರೈಲರ್ ಆ್ಯಕ್ಷನ್ ದೃಶ್ಯಗಳಿಂದಲೇ ತುಂಬಿದೆ. ಇದನ್ನೂ ಓದಿ:ಎಷ್ಟೇ ಕಷ್ಟ ಬಂದರೂ ಸಿನಿಮಾ ಮೇಲಿನ ಪ್ರೀತಿ ಕಳೆದುಕೊಂಡಿಲ್ಲ: ಗಳಗಳನೇ ಅತ್ತ ಸಮಂತಾ

    ನಾನಾ ಕಾರಣಗಳಿಂದಾಗಿ ವಿವಾದಕ್ಕೆ ಕಾರಣವಾಗಿರುವ ಈ ಸಿನಿಮಾ, ದೇಶಪ್ರೇಮವನ್ನು ಸಾರಲಿದೆ ಎಂದು ಈ ಹಿಂದೆಯೇ ಶಾರುಖ್ ಹೇಳಿದ್ದರು. ಸಿನಿಮಾ ನೋಡಿದ ನಂತರ ಮಾತನಾಡಿ ಎಂದೂ ಅವರು ವಿರೋಧಿಗಳಿಗೆ ಪ್ರತಿಕ್ರಿಯಿಸಿದ್ದರು. ಕಥಾ ಹಂದರ ಮತ್ತು ಶಾರುಖ್ ಮಾಡಿರುವ ಪಾತ್ರವನ್ನು ಗಮನಿಸಿದರೆ, ಉಗ್ರರಿಂದ ಭಾರತವನ್ನು ತಪ್ಪಿಸುವಂತಹ ಕಥಾಹಂದರ ಇರು ಹೊಂದಿದೆ ಎಂದು ಮೇಲ್ನೋಟಕ್ಕೆ ತಿಳಿಯುತ್ತದೆ.

    ಪಠಾಣ್ ಸಿನಿಮಾದ ಹಾಡಿನಲ್ಲಿ ಹಿಂದೂಗಳ ಭಾವನೆ ಧಕ್ಕೆ ಮಾಡಿದ್ದಾರೆ ಎನ್ನುವ ಕಾರಣಕ್ಕಾಗಿ ಈ ಸಿನಿಮಾವನ್ನು ಬಾಯ್ಕಾಟ್ ಮಾಡಿ ಎನ್ನುವ ಅಭಿಯಾನ ಶುರುವಾಗಿದೆ. ಈಗಾಗಲೇ ಹಲವು ಕಡೆಗಳಲ್ಲಿ ಚಿತ್ರವನ್ನು ನಿಷೇಧಿಸಬೇಕು ಎಂದು ಹೋರಾಟಗಳು ನಡೆದಿವೆ. ಈ ಸಂದರ್ಭದಲ್ಲಿ ಟ್ರೈಲರ್ ಬಿಡುಗಡೆ ಆಗಿದ್ದು, ಅದ್ಭುತ ರೆಸ್ಪಾನ್ಸ್ ಸಿಗುತ್ತಿದೆ. ಸಿನಿಮಾದ ಕಥೆಯಿಂದಾಗಿ ಚಿತ್ರವನ್ನು ಪ್ರೇಕ್ಷಕರು ಒಪ್ಪಿಕೊಳ್ಳುತ್ತಾರಾ ಕಾದು ನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಜಮ್ಮು ಕಾಶ್ಮೀರದಲ್ಲಿ ಶಂಕಿತ ಉಗ್ರರ ದಾಳಿ- ಮೂವರು ನಾಗರಿಕರು ಸಾವು

    ಜಮ್ಮು ಕಾಶ್ಮೀರದಲ್ಲಿ ಶಂಕಿತ ಉಗ್ರರ ದಾಳಿ- ಮೂವರು ನಾಗರಿಕರು ಸಾವು

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu And Kashmir) ಗ್ರಾಮವೊಂದಕ್ಕೆ ನುಗ್ಗಿದ ಶಂಕಿತ ಉಗ್ರರು ದಾಳಿ ನಡೆಸಿದ ಪರಿಣಾಮ ಮೂವರು ನಾಗರಿಕರು (Civilians) ಸಾವನ್ನಪ್ಪಿದ್ದು, 8 ಮಂದಿ ಗಾಯಗೊಂಡಿದ್ದಾರೆ.

    ಇಂದು ಸಂಜೆ ಡ್ಯಾಂಗ್ರಿ ಗ್ರಾಮದಲ್ಲಿ ಶಂಕಿತ ಉಗ್ರರು (Suspected Terror) ಗ್ರಾಮಸ್ಥರ ಮೇಲೆ ಮನಬಂದಂತೆ ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ 3 ಮನೆಗಳ ಮೇಲೆ ದಾಳಿ ನಡೆದಿದೆ. ಪರಿಣಾಮ ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದಾರೆ.

    ಘಟನೆಗೆ ಸಂಬಂಧಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಶೋಧ ಕಾರ್ಯಾಚರಣೆಯನ್ನು ಆರಂಭಿಸಿದ್ದಾರೆ. ಸ್ಥಳೀಯ ವರದಿ ಪ್ರಕಾರ ಗಾಯಗೊಂಡ 8 ಜನರು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದನ್ನೂ ಓದಿ: ಭೀಕರ ಅಪಘಾತ- ಡಿಕ್ಕಿ ಹೊಡೆದು 12 ಕಿ.ಮೀ ಎಳೆದೊಯ್ದ ಕಾರು, ಯುವತಿ ದುರ್ಮರಣ

    ಕಳೆದ ಎರಡು ವಾರಗಳಲ್ಲಿ ಜಿಲ್ಲೆಯಲ್ಲಿ ನಾಗರಿಕರ ಹತ್ಯೆಯ ಎರಡನೇ ಘಟನೆ ಇದಾಗಿದೆ. ಡಿ. 16ರಂದು ರಾಜೌರಿಯ ಸೇನಾ ಶಿಬಿರದ ಹೊರಗೆ ಇಬ್ಬರು ನಾಗರಿಕರು ಕೊಲ್ಲಲ್ಪಟ್ಟರು. ಇದನ್ನೂ ಓದಿ: ಮಹದಾಯಿ ಯೋಜನೆಗೆ ಡಿಪಿಆರ್‌ ಆಗಿದೆ; ಕಾಂಗ್ರೆಸ್‌ ಟೀಕೆಗೆ ತಲೆಕೆಡಿಸಿಕೊಳ್ಳಲ್ಲ – ಸಿಎಂ

    Live Tv
    [brid partner=56869869 player=32851 video=960834 autoplay=true]

  • ಟ್ರಕ್‍ನಲ್ಲಿ ಅಡಗಿದ್ದ ಮೂವರು ಉಗ್ರರನ್ನು ಹೊಡೆದುರುಳಿಸಿದ ಭದ್ರತಾ ಪಡೆ

    ಟ್ರಕ್‍ನಲ್ಲಿ ಅಡಗಿದ್ದ ಮೂವರು ಉಗ್ರರನ್ನು ಹೊಡೆದುರುಳಿಸಿದ ಭದ್ರತಾ ಪಡೆ

    ಶ್ರೀನಗರ: ಭದ್ರತಾ ಪಡೆಗಳಿಗೂ (Security Forces) ಉಗ್ರರಿಗೂ (Terrorists) ನಡೆದ ಗುಂಡಿನ ಚಕಾಮಕಿಯಲ್ಲಿ ಮೂವರು ಉಗ್ರರು ಹತರಾದ ಘಟನೆ ಜಮ್ಮುವಿನ (Jammu) ಹೊರವಲಯದಲ್ಲಿ ನಡೆದಿದೆ.

    ಜಮ್ಮುವಿನ ಹೊರವಲಯದಲ್ಲಿ ಟ್ರಕ್‍ವೊಂದು (Truck) ಅನುಮಾನಾಸ್ಪದವಾಗಿ ಓಡಾಡುತ್ತಿತ್ತು. ಇದರಿಂದಾಗಿ ಅನುಮಾನಗೊಂಡ ಪೊಲೀಸರು ಚೆಕ್‍ಪೋಸ್ಟ್‍ನಲ್ಲಿ ಟ್ರಕ್ ಅನ್ನು ತಡೆದಿದ್ದಾರೆ. ಅದಾದ ಬಳಿಕ ಭದ್ರತಾ ಪಡೆಗಳು ಟ್ರಕ್‍ನಲ್ಲಿ ಶೋಧ ಕಾರ್ಯ ನಡೆಸುವಾಗ ಟ್ರಕ್‍ನೊಳಗೆ ಅಡಗಿದ್ದ ಉಗ್ರರು ಭದ್ರತಾ ಪಡೆಗಳ ಮೇಲೆ ಗುಂಡು ಹಾರಿಸಿದರು. ಈ ವೇಳೆ ಭದ್ರತಾ ಪಡೆಗಳು ಎನ್‍ಕೌಂಟರ್ (Encounter) ಪ್ರಾರಂಭಿಸಿದ್ದು, ಮೂವರು ಉಗ್ರರನ್ನು ಹತ್ಯೆಗೈದಿದ್ದಾರೆ.

    ಗುಂಡಿನ ಕಾಳಗದಲ್ಲಿ ಟ್ರಕ್‍ಗೆ ಬೆಂಕಿ ಹತ್ತಿಕೊಂಡಿದ್ದು, ಬೆಂಕಿಯನ್ನು ನಂದಿಸಲು ಅಗ್ನಿಶಾಮಕ ದಳದವರನ್ನು ಕರೆಸಲಾಯಿತು. ಈ ವೇಳೆ ಟ್ರಕ್ ಚಾಲಕ ಪರಾರಿಯಾಗಿದ್ದಾನೆ. ಆತನನ್ನು ಪತ್ತೆ ಹಚ್ಚಲು ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ಇನ್ನೂ ಎನ್‍ಕೌಂಟರ್‌  ನಂತರ ಹೆದ್ದಾರಿಯಲ್ಲಿ ಸಂಚಾರವನ್ನು ನಿಲ್ಲಿಸಲಾಗಿದೆ. ಇದನ್ನೂ ಓದಿ: ಮಿನಿ ಬಸ್, ಸಾರಿಗೆ ಬಸ್ ಮುಖಾಮುಖಿ ಡಿಕ್ಕಿ – 12 ವಿದ್ಯಾರ್ಥಿಗಳಿಗೆ ಗಾಯ

    ನಿನ್ನೆ 15 ಕೆ.ಜಿ ಐಇಡಿಯನ್ನು ಪೊಲೀಸರು ನಿಷ್ಕ್ರಿಯಗೊಳಿಸಿದ್ದರು. ಇದರಿಂದಾಗಿ ಜಮ್ಮು ಬಳಿಯ ಉಧಂಪುರದಲ್ಲಿ ನಡೆಯಲ್ಲಿ ಉಗ್ರರ ದಾಳಿಯನ್ನು ತಪ್ಪಿಸಲಾಯಿತು. ಇದನ್ನೂ ಓದಿ: ಗುಡಿಸಲಿಗೆ ಬೆಂಕಿ – ತಾಯಿ, 4 ಮಕ್ಕಳು ದಾರುಣ ಸಾವು

    Live Tv
    [brid partner=56869869 player=32851 video=960834 autoplay=true]

  • ತನಿಖೆ ಮಾಡದೇ ಉಗ್ರ ಅಂತ ಹೇಗೆ ಘೋಷಣೆ ಮಾಡಿದ್ರಿ: ಡಿಕೆಶಿ ಪ್ರಶ್ನೆ

    ತನಿಖೆ ಮಾಡದೇ ಉಗ್ರ ಅಂತ ಹೇಗೆ ಘೋಷಣೆ ಮಾಡಿದ್ರಿ: ಡಿಕೆಶಿ ಪ್ರಶ್ನೆ

    ಬೆಂಗಳೂರು: ಮಂಗಳೂರಿನಲ್ಲಿ (Mangaluru) ನಡೆದ ಕುಕ್ಕರ್ ಸ್ಫೋಟ (Cooker Blast) ಪ್ರಕರಣದ ಆರೋಪಿ ಶಾರೀಕ್‌ನನ್ನು (Shariq) ಟೆರರಿಸ್ಟ್ (Terrorist) ಎಂದು ಯಾವ ತನಿಖೆಯನ್ನೂ ನಡೆಸದೇ ಹೇಗೆ ಘೋಷಣೆ ಮಾಡಿದ್ದೀರಿ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಪ್ರಶ್ನಿಸಿದ್ದಾರೆ.

    ಪ್ರೆಸ್‌ ಕ್ಲಬ್‌ನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮಂಗಳೂರಿನಲ್ಲಿ ನಡೆದ ಸ್ಫೋಟ ಮುಂಬೈ ದಾಳಿ  ಅಥವಾ ಪುಲ್ವಾಮಾ, ಕಾಶ್ಮೀರದಲ್ಲಿ ಆದಂತೆ ಆಗಲಿಲ್ಲ. ಅದೇನೋ ಕುಕ್ಕರ್ ಟೆರರಿಸ್ಟ್ ಎಂದುಕೊಂಡು ವೋಟರ್ ಐಡಿ ಹಗರಣವನ್ನು ಮುಚ್ಚಿ ಹಾಕಿದರು. ತನಿಖೆ ನಡೆಸದೇ ಇದು ಉಗ್ರ ಕೃತ್ಯ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕರು ಅಷ್ಟು ಸ್ಪೀಡ್ ಆಗಿ ಹೇಗೆ ಟ್ವೀಟ್ ಮಾಡಿದ್ರು ಎಂದು ಪ್ರಶ್ನಿಸಿದ್ದಾರೆ.

    ಬೆಂಗಳೂರಿನ ವೋಟರ್ ಐಡಿ ಹಗರಣದ ವಿಷಯನ್ನು ಬಿಜೆಪಿ ಡೈವರ್ಟ್ ಮಾಡಿದೆ. ಶಿವಮೊಗ್ಗಕ್ಕೆ, ಮಂಗಳೂರು, ಮಲೆನಾಡು ಭಾಗಕ್ಕೆ ಯಾಕೆ ತನಿಖೆ ಹೋಗಲ್ಲ. ಎಲ್ಲಾ ಬೆಂಗಳೂರಿನಲ್ಲೇ ತನಿಖೆ ಆಗುತ್ತಿದೆ. ಜನರು ದಡ್ಡರಾ? ಜನರ ಭಾವನೆಗಳ ಮೇಲೆ ಸರ್ಕಾರ ಆಟ ಆಡುತ್ತಿದೆ ಎಂದು ಸಿಟ್ಟು ಹೊರ ಹಾಕಿದರು. ಇದನ್ನೂ ಓದಿ: ಬೆಳಗಾವಿಯಲ್ಲಿ ಮರಾಠಿ ಭಾಷಿಕ ಪುಂಡರ ಪುಂಡಾಟ- ಸರ್ಕಾರಿ ವಾಹನದ ಮೇಲೆ ಕಲ್ಲು ತೂರಾಟ

    ಬಿಜೆಪಿ ಸರ್ಕಾರದ ಕೊನೆ ದಿನಗಳು ಬಂದಿದೆ. ಇನ್ನೇನು 100 ದಿನ ಇದೆ. ಜಾಗತಿಕ ಬಂಡವಾಳ ಹೂಡಿಕೆದಾರರ ಸಭೆ ಮಾಡುತ್ತೀರಿ. ಶಿವಮೊಗ್ಗ, ಮಂಗಳೂರು, ಉಡುಪಿ ಕಡೆ ಯಾಕೆ ಯಾರೂ ಬಂಡವಾಳ ಹೂಡಿಕೆ ಮಾಡುತ್ತಿಲ್ಲ. ಶಿವಮೊಗ್ಗದಲ್ಲಿ ಕಮಲದ ರೂಪದಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಆಗುತ್ತಿದೆ. ಯಾಕೆ ಆ ಭಾಗದಲ್ಲಿ ಹೂಡಿಕೆ ಆಗುತ್ತಿಲ್ಲ. ಯಾರು ಎಲ್ಲಿ ಹೂಡಿಕೆ ಮಾಡಿದ್ದಾರೆ? ಪಟ್ಟಿಯನ್ನು ಬಿಡುಗಡೆ ಮಾಡಲಿ ಎಂದು ಡಿಕೆಶಿ ಸರ್ಕಾರಕ್ಕೆ ಸವಾಲು ಎಸೆದರು. ಇದನ್ನೂ ಓದಿ: ಬಿಜೆಪಿಗೆ 66-70 ಸ್ಥಾನ ಸಿಗುತ್ತೆ, ನಾವು ಗೆಲ್ತೀವಿ – ಡಿಕೆಶಿಯಿಂದ ಕಾಂಗ್ರೆಸ್‌ ಸಮೀಕ್ಷೆ ರಿಸಲ್ಟ್‌ ಔಟ್‌

    Live Tv
    [brid partner=56869869 player=32851 video=960834 autoplay=true]

  • ಮೈಸೂರು, ಮಂಗಳೂರಷ್ಟೇ ಅಲ್ಲ ಉಡುಪಿ ಕೃಷ್ಣಮಠದ ಬಳಿಯೂ ಶಾರೀಕ್ ಓಡಾಟ!

    ಮೈಸೂರು, ಮಂಗಳೂರಷ್ಟೇ ಅಲ್ಲ ಉಡುಪಿ ಕೃಷ್ಣಮಠದ ಬಳಿಯೂ ಶಾರೀಕ್ ಓಡಾಟ!

    ಉಡುಪಿ: ಮಂಗಳೂರಿನ ಕುಕ್ಕರ್ (Mangaluru Cooker Bomb Blast) ಬಾಂಬರ್ ಶಾರೀಕ್‍ನ ಹೆಜ್ಜೆ ಗುರುತು ಕೃಷ್ಣ ನಗರಿಯಲ್ಲೂ ಕಂಡುಬಂದಿದೆ. ಉಡುಪಿಯ ಶ್ರೀಕೃಷ್ಣ ಮಠ (Udupi Sri Krishna Matha) ದ ಆಸು-ಪಾಸು ಓಡಾಡಿದ್ದ ಶಾರೀಕ್, ರಥಬೀದಿಯಲ್ಲಿ, ನಗರದ ಬಸ್ ನಿಲ್ದಾಣದಲ್ಲೆಲ್ಲಾ ಅಡ್ಡಾಡಿದ್ದ. ಅಷ್ಟಕ್ಕೂ ದುಷ್ಕರ್ಮಿ ಶಾರೀಕ್ ಉಡುಪಿಗೆ ಬಂದಿದ್ಯಾಕೆ..? ಕೃಷ್ಣನಗರಿಯಲ್ಲೂ ಶಾರೀಕ್ ಬಾಂಬ್ ಸ್ಕೆಚ್ ಹಾಕಿದ್ನಾ.. ಅನ್ನೋ ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ.

    ಹೌದು. ಶಂಕಿತ ಉಗ್ರ ಶಾರೀಕ್‍ (Shariq) ನ ಬಂಡವಾಳ ಬಗೆದಷ್ಟು ಬಯಲಾಗ್ತಿದೆ. ಸದ್ಯ ಆಸ್ಪತ್ರೆ ಬೆಡ್ ಮೇಲೆ ಬಿದ್ದಿರೋ ಪಾಪಿ ವಿಚಾರಣೆಗೆ ಸಹಕರಿಸೋ ಸ್ಥಿತಿಯಲ್ಲಂತೂ ಇಲ್ಲ. ಹೀಗಾಗಿ ಖಾಕಿ ಪಡೆ ಸಿಕ್ಕ ಸಾಕ್ಷ್ಯಗಳ ಭೇದಿಸಿ ಕುಕ್ಕರ್ ಬಾಂಬರ್ ನ ಹಿಸ್ಟರಿ ಹೊರತೆಗೆಯುತ್ತಿದೆ. ಅದರಂತೆ ಶಾರೀಕ್‍ನ ಮೊಬೈಲ್ ಹಿಡಿದು ಹೊರಟ ಪೊಲೀಸರಿಗೆ ಕೃಷ್ಣ ನಗರಿಯ ಅಡ್ರೆಸ್ ಸಿಕ್ಕಿದೆ. ಇದನ್ನೂ ಓದಿ: ಬಾಂಬ್ ತಂದಿದ್ದು ಒಬ್ಬನ್ನಲ್ಲ, ಇಬ್ಬರು- ತನಿಖೆ ವೇಳೆ ಸ್ಫೋಟಕ ಮಾಹಿತಿ ಬಯಲು

    ಮಂಗಳೂರು ಸ್ಪೋಟದ ರೂವಾರಿ ಶಾರೀಕ್, 2022ರ ಅಕ್ಟೋಬರ್ 11ರಂದು ಶ್ರೀಕೃಷ್ಣ ಮಠ ಹಾಗೂ ಉಡುಪಿಯ ರಥಬೀದಿಯಲ್ಲಿ ಸುತ್ತಾಡಿರೋ ಬಗ್ಗೆ ಬಗ್ಗೆ ಮಾಹಿತಿ ಸಿಕ್ಕಿದೆ. ಈ ಆಧಾರದಲ್ಲಿ ಮಂಗಳೂರು ಪೋಲಿಸರ ತಂಡ ಉಡುಪಿ ಶ್ರೀ ಕೃಷ್ಣ ಮಠ, ರಥಬೀದಿ ಪರಿಸರದಲ್ಲಿ ತಪಾಸಣೆ ನಡೆಸಿದ್ದಾರೆ. ಉಡುಪಿ ರಥಬೀದಿಯಲ್ಲಿ ಶಾರೀಕ್ ಸುತ್ತಾಡುತ್ತಿದ್ದ ವೇಳೆ ಇಲ್ಲಿಂದಲೇ ಕೆಲವರಿಗೆ ಫೋನ್ ಮಾಡಿದ್ದಾನೆ ಅನ್ನೋದು ಗೊತ್ತಾಗಿದೆ.

    ಅದ್ಯಾವಾಗ ಶ್ರೀಕೃಷ್ಣ ಮಠಕ್ಕೂ ಉಗ್ರ ಶಾರೀಕ್ ಭೇಟಿ ನೀಡಿದ್ದ ಎಂಬ ವಿಚಾರ ತಿಳಿಯಿತೋ ಉಡುಪಿಯ ರಥಬೀದಿ ಹಾಗೂ ಉಡುಪಿ ನಾಗರಿಕರಲ್ಲಿ ಆತಂಕ ಮೂಡಿದೆ. ಹಾಗೆ ಶ್ರೀಕೃಷ್ಣ ಮಠಕ್ಕೆ ಭದ್ರತೆಯನ್ನು ಹೆಚ್ಚಿಸಬೇಕು, ಸರ್ಕಾರವೂ ಉನ್ನತ ತಂಡದಿಂದ ಭದ್ರತಾ ಸರ್ವೆ ನಡೆಸಿ ಸೂಕ್ತ ಭದ್ರತೆ ಒದಗಿಸಬೇಕೆಂದು ಉಡುಪಿ ಮಂದಿ ಆಗ್ರಹಿಸಿದ್ದಾರೆ.

    ಶಾರೀಕ್ ಉಡುಪಿಗೆ ಬಂದಿದ್ದರ ಜಾಡು ಹಿಡಿದು ಹೊರಟಿರೋ ಪೊಲೀಸರಿಗೆ ಶ್ರೀಕೃಷ್ಣ ಮಠದಲ್ಲಿ ತಿಂಗಳ ಹಿಂದಿನ ಸಿಸಿಟಿವಿ ದೃಶ್ಯಗಳು ಲಭಿಸಿಲ್ಲ. ಹೀಗಾಗಿ ರಥಬೀದಿ ಸುತ್ತಲಿನ, ಅಂಗಡಿ, ಹೊಟೇಲ್ ಲಾಡ್ಜ್ ಗಳ ಸಿಸಿಟಿವಿ ದೃಶ್ಯವಳಿಗಳನ್ನು ಪರಿಶೀಲನೆ ನಡೆಸುತ್ತಿದ್ದು, ಶಾರೀಕ್‍ಗೂ ಉಡುಪಿಗೂ ಲಿಂಕ್ ಏನು ಅನ್ನೋದರ ಬಗ್ಗೆ ವಿಚಾರಣೆ ಮಾಡ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕರ್ನಾಟಕದ ಉದ್ಯಮಿಗಳು ಪುದುಚೇರಿಯಲ್ಲಿ ಉದ್ಯಮ ಮಾಡಲು ಸಕಲ ನೆರವು: ಪುದುಚೇರಿ ಗೃಹಸಚಿವ

    ಕರ್ನಾಟಕದ ಉದ್ಯಮಿಗಳು ಪುದುಚೇರಿಯಲ್ಲಿ ಉದ್ಯಮ ಮಾಡಲು ಸಕಲ ನೆರವು: ಪುದುಚೇರಿ ಗೃಹಸಚಿವ

    ಮಂಗಳೂರು: ಕರ್ನಾಟಕದ (Karnataka) ಯುವ ಉದ್ಯಮಿಗಳು ಪುದುಚೇರಿಗೆ (Puducherry) ಬಂದು ಪ್ರವಾಸೋದ್ಯಮ, ಐಟಿ, ಎಲೆಕ್ಟ್ರಿಕ್ ವೆಹಿಕಲ್ ಮತ್ತಿತರ ಉದ್ಯಮವನ್ನು ಸ್ಥಾಪಿಸುವುದಾದರೆ ಸರ್ಕಾರ ಎಲ್ಲಾ ರೀತಿಯ ನೆರವು ಕಲ್ಪಿಸಲಾಗುವುದು ಎಂದು ಪುದುಚೇರಿ ಗೃಹಸಚಿವ ಎ. ನಮಸ್ಸಿವಾಯಂ (A. Namassivayam) ಹೇಳಿದರು.

    ಮಂಗಳೂರಿನ ಬೈಕಂಪಾಡಿ ಕೈಗಾರಿಕಾ ವಲಯದಲ್ಲಿರುವ ಶ್ರೀ ಕಟೀಲೇಶ್ವರಿ ಕಲ್ಲಿದ್ದಲು ನಿರ್ವಹಣಾ ಘಟಕಕ್ಕೆ ಭೇಟಿ ನೀಡಿದ ಅವರು, ಕಲ್ಲಿದ್ದಲು ಉದ್ಯಮದ ಕುರಿತು ಮಾಹಿತಿ ಪಡೆದುಕೊಂಡರು.

    ಈ ವೇಳೆ ಮಾತನಾಡಿದ ಅವರು, ಪುದುಚೇರಿ ಸಣ್ಣ ರಾಜ್ಯವಾಗಿದ್ದು, ಅಂತಾರಾಷ್ಟ್ರೀಯ ಪ್ರವಾಸಿಗರನ್ನು ಹೆಚ್ಚೆಚ್ಚು ಆಕರ್ಷಿಸುತ್ತಿದೆ. ಪುದುಚೇರಿ ಸರ್ಕಾರ ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದು, ವಿದೇಶಿಗರೂ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿರುವುದರಿಂದ ಉಗ್ರ ಚಟುವಟಿಕೆಯ ಮೇಲೆ ಹದ್ದಿನ ಕಣ್ಣಿರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸುರಕ್ಷತಾ ಕ್ರಮಕ್ಕೆ ಒತ್ತು, ಕಾನೂನು ಸುವ್ಯವಸ್ಥೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ಹೇಳಿದರು.

    ಪ್ರಧಾನಿ ನರೇಂದ್ರ ಮೋದಿ ಅವರ ಮೇಕ್ ಇನ್ ಇಂಡಿಯಾಗೆ ಹೆಚ್ಚಿನ ಗಮನ ನೀಡಿದ್ದೇವೆ. ಅವರ ನಾಯಕತ್ವದಲ್ಲಿ ದೇಶವು ಉತ್ತಮ ಅಭಿವೃದ್ಧಿ ಹೊಂದುತ್ತಿದೆ ಎಂದು ನುಡಿದರು. ಇದನ್ನೂ ಓದಿ: ದಿಢೀರ್ ಕಾಂಗ್ರೆಸ್‌ಗೆ ಗುಡ್‌ಬೈ – 300ಕ್ಕೂ ಹೆಚ್ಚು ಕಾರ್ಯಕರ್ತರು BJP ಸೇರ್ಪಡೆ

    ಕಟೀಲೇಶ್ವರಿ ಕೋಲ್ ಕಾರ್ಪೋರೇಷನ್ ಪಾಲುದಾರರಾದ ನಾಗರಾಜ್ ಅಮೀನ್, ಮಂಜುನಾಥ್ ನೋಟಗಾರ್, ಬಾಲಮುರಳಿ, ಗಣೇಶ್, ಅಶ್ರಫ್ ಸಿಬ್ಬಂದಿಯಾದ ಶಿವು, ಮುಹಮ್ಮದ್ ರಿಲ್ವಾನ್, ಶಿವಕುಮಾರ್ ನೋಟಗಾರ್, ಶ್ರುತಿ, ಶಬೀರ್, ದೇವು ಮತ್ತಿತರರು ಉಪಸ್ಥಿತರಿದ್ದರು. ಇದನ್ನೂ ಓದಿ: ಜಿಲ್ಲೆಗಳಲ್ಲಿ ಸರ್ಕಾರಿ ಗೋಶಾಲೆ ಆರಂಭಕ್ಕೆ ಡಿಸೆಂಬರ್ ಡೆಡ್‌ಲೈನ್: ಪ್ರಭು ಚೌಹಾಣ್

    Live Tv
    [brid partner=56869869 player=32851 video=960834 autoplay=true]