Tag: ಉಗ್ರ ಚಟುವಟಿಕೆ

  • ಭಯೋತ್ಪಾದಕ ಚಟುವಟಿಕೆಯಲ್ಲಿ ಭಾಗಿ; ನಾಲ್ವರು ಸರ್ಕಾರಿ ಅಧಿಕಾರಿಗಳು ಸೇವೆಯಿಂದ ವಜಾ

    ಭಯೋತ್ಪಾದಕ ಚಟುವಟಿಕೆಯಲ್ಲಿ ಭಾಗಿ; ನಾಲ್ವರು ಸರ್ಕಾರಿ ಅಧಿಕಾರಿಗಳು ಸೇವೆಯಿಂದ ವಜಾ

    ಶ್ರೀನಗರ: ಭಯೋತ್ಪಾದಕ (Terrorists) ಸಂಬಂಧದ ಆರೋಪದ ಮೇಲೆ ಜಮ್ಮು ಮತ್ತು ಕಾಶ್ಮೀರ (Jammu Kashmir) ಆಡಳಿತವು ನಾಲ್ವರು ಸರ್ಕಾರಿ ಉದ್ಯೋಗಿಗಳನ್ನು ವಜಾಗೊಳಿಸಿದೆ. ಪ್ರಯೋಗಾಲಯ ಸಹಾಯಕ, SMHS ಆಸ್ಪತ್ರೆಯಲ್ಲಿ ವೈದ್ಯಕೀಯ ಸಹಾಯಕ ಪ್ರಾಧ್ಯಾಪಕ, ಪೊಲೀಸ್ ಪೇದೆ ಮತ್ತು ಶಿಕ್ಷಕ ಬಂಧಿತರು.

    ಜಮ್ಮು ಮತ್ತು ಕಾಶ್ಮೀರ ಸರ್ಕಾರವು ಭಾರತದ ಸಂವಿಧಾನದ 311 ನೇ ವಿಧಿಯ ಷರತ್ತು (2) ರ ನಿಬಂಧನೆಯ ಉಪ-ಕಲಂ (ಸಿ) ಪ್ರಕಾರ ನಾಲ್ಕು ಸರ್ಕಾರಿ ನೌಕರರನ್ನು ಸೇವೆಯಿಂದ ವಜಾಗೊಳಿಸಿದೆ. ಇದನ್ನೂ ಓದಿ: ಸುಳ್ಳು ಜಾಹೀರಾತು ನೀಡಿದರೆ ಪತಂಜಲಿ ಉತ್ಪನ್ನಕ್ಕೆ 1 ಕೋಟಿ ದಂಡ ಹಾಕಬೇಕಾಗುತ್ತೆ: ಸುಪ್ರೀಂ ಎಚ್ಚರಿಕೆ

    ವಜಾಗೊಂಡ ನೌಕರರು ಅಬ್. ಸಲಾಮ್ ರಾಥರ್, ಉನ್ನತ ಶಿಕ್ಷಣ ಇಲಾಖೆಯಲ್ಲಿ ಪ್ರಯೋಗಾಲಯ ಬೇರರ್, ಶಿಕ್ಷಣ ಇಲಾಖೆಯಲ್ಲಿ ಶಿಕ್ಷಕ ಫಾರೂಕ್ ಅಹ್ಮದ್ ಮಿರ್, ಸಹಾಯಕ ಪ್ರಾಧ್ಯಾಪಕ (ವೈದ್ಯಕೀಯ) ಡಾ. ನಿಸಾರ್-ಉಲ್-ಹಸನ್, J&K ಪೊಲೀಸ್ ಕಾನ್ಸ್‌ಟೇಬಲ್ ಅಬ್ದುಲ್ ಮಜೀದ್ ಭಟ್ ವಜಾಗೊಂಡವರು.

    ಜಮ್ಮು ಮತ್ತು ಕಾಶ್ಮೀರ ಸರ್ಕಾರವು ಭಯೋತ್ಪಾದನೆಯ ಆರೋಪದ ಮೇಲೆ ಭಾರತೀಯ ಸಂವಿಧಾನದ 311 ನೇ ವಿಧಿಯ ಅಡಿಯಲ್ಲಿ ಸುಮಾರು 60 ಉದ್ಯೋಗಿಗಳನ್ನು ವಜಾಗೊಳಿಸಿದೆ. ಎಲ್‌ಜಿ ಸಿನ್ಹಾ ನೇತೃತ್ವದ ಜಮ್ಮು ಮತ್ತು ಕಾಶ್ಮೀರ ಆಡಳಿತವು ಈ ವರ್ಷದ ಜುಲೈನಲ್ಲಿ ಕಾಶ್ಮೀರ ವಿಶ್ವವಿದ್ಯಾಲಯದ ಸಾರ್ವಜನಿಕ ಸಂಪರ್ಕ ಅಧಿಕಾರಿ ಸೇರಿದಂತೆ ನಾಲ್ವರು ಉದ್ಯೋಗಿಗಳನ್ನು ಇದೇ ರೀತಿ ಕೆಲಸದಿಂದ ತೆಗೆದುಹಾಕಲಾಗಿತ್ತು. ಇದನ್ನೂ ಓದಿ: ಪಾಕ್ ಉಗ್ರ ಸಂಘಟನೆಯೊಂದಿಗೆ ನಂಟು – ಮೂವರ ಬಂಧನ

  • ಉಗ್ರ ಚಟುವಟಿಕೆಯಲ್ಲಿ ತೊಡಗಿದ್ದ ಬಂಡೀಪುರದ ವ್ಯಕ್ತಿ ಕೋಲಾರದಲ್ಲಿ ಅರೆಸ್ಟ್!

    ಉಗ್ರ ಚಟುವಟಿಕೆಯಲ್ಲಿ ತೊಡಗಿದ್ದ ಬಂಡೀಪುರದ ವ್ಯಕ್ತಿ ಕೋಲಾರದಲ್ಲಿ ಅರೆಸ್ಟ್!

    ಕೋಲಾರ: ಭಯೋತ್ಪಾದನಾ ಚಟುವಟಿಕೆಯಲ್ಲಿ ಭಾಗಿಯಾಗಿರುವ ಆರೋಪದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬನನ್ನು ಜಿಲ್ಲೆಯ ಸೈಬರ್ ಕ್ರೈಂ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

    ಶೇಖರ್ ಬಂಧಿತ ಆರೋಪಿಯಾಗಿದ್ದಾನೆ. ಇವನು ಮೂಲತಃ ಚಾಮರಾಜನಗರ ಜಿಲ್ಲೆಯ ಬಂಡೀಪುರದ ನಿವಾಸಿ ಎಂದು ತಿಳಿದು ಬಂದಿದೆ. ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಹುಣಸಹಳ್ಳಿ ಗ್ರಾಮದ ಅಂಬರೀಶ್ ಎಂಬುವರ ಬಾಡಿಗೆ ಮನೆಯಲ್ಲಿ ಕಳೆದ 4 ತಿಂಗಳಿಂದ ವಾಸವಾಗಿದ್ದಾನೆ.

    ನೂರಕ್ಕು ಹೆಚ್ಚು ಸಿಮ್ ಕಾರ್ಡ್‍ಗಳನ್ನು ಖರೀದಿಸಿ, ಹಲವು ಜನರಿಗೆ ಭಯೋತ್ಪಾದನೆಗೆ ಕೈ ಜೋಡಿಸುವಂತೆ ಸಂದೇಶಗಳನ್ನು ರವಾನಿಸಿದ್ದ ಹಿನ್ನೆಲೆಯಲ್ಲಿ ಅನುಮಾನಗೊಂಡು ಸೈಬರ್ ಕ್ರೈಂ ಹಾಗೂ ಆರ್ಥಿಕ ಮಾದಕ ದ್ರವ್ಯ ವಿಭಾಗದ ಪೊಲೀಸರು ಆರೋಪಿಯ ಮನೆಯ ಮೇಲೆ ದಾಳಿ ನಡೆಸಿ ಬಂಧಿಸಿದ್ದಾರೆ.

    ದಾಳಿ ವೇಳೆ ಆರೋಪಿ ಮನೆಯಲ್ಲಿ ನೂರಕ್ಕೂ ಹೆಚ್ಚು ಸಿಮ್ ಕಾರ್ಡ್, ಮೊಬೈಲ್ ಫೋನ್ ಹಾಗೂ ಇನ್ನಿತರೆ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಮೇಲ್ನೋಟಕ್ಕೆ ಆರೋಪಿಯು ಮುಸ್ಲಿಂ ಸಮುದಾಯಕ್ಕೆ ಸೇರಿದವನಾಗಿದ್ದಾನೆ ಎಂದು ತಿಳಿದು ಬಂದಿದೆ.

    ಹುಣಸೇಹಳ್ಳಿ ಗ್ರಾಮದಲ್ಲಿ ಶೇಖರ್ ಎಂದು ಹೆಸರು ಹೇಳಿ ಮನೆ ಪಡೆದಿದ್ದಾನೆ. ಹಲವು ವ್ಯಕ್ತಿಗಳಿಗೆ ಕಳುಹಿಸಿರುವ ಸಂದೇಶಗಳಲ್ಲಿ “ಒಸಾಮಾ ಬಿನ್ ಲಾಡೆನ್ ಮೈ ಗಾಡ್”, ಭಯೋತ್ಪಾದನೆಗೆ ಕೈ ಜೋಡಿಸುವಂತೆ ಪ್ರಚೋದನೆ ನೀಡಿದ್ದಾನೆ. ಈ ಹಿನ್ನೆಲೆಯಲ್ಲಿ ಆರೋಪಿಯನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.