Tag: ಉಗ್ರರ ನೆಲೆಗಳು

  • ನಾವು ಭಾರತದ ಸೈನಿಕರನ್ನು ಸೆರೆ ಹಿಡಿದಿಲ್ಲ: ಬುರುಡೆ ಬಿಟ್ಟು ಸತ್ಯ ಒಪ್ಪಿಕೊಂಡ ಪಾಕ್‌ ಸಚಿವ

    ನಾವು ಭಾರತದ ಸೈನಿಕರನ್ನು ಸೆರೆ ಹಿಡಿದಿಲ್ಲ: ಬುರುಡೆ ಬಿಟ್ಟು ಸತ್ಯ ಒಪ್ಪಿಕೊಂಡ ಪಾಕ್‌ ಸಚಿವ

    ಇಸ್ಲಾಮಾಬಾದ್‌: ಬಾಯಿಗೆ ಬಂದಂತೆ ಹೇಳಿಕೆ ನೀಡುತ್ತಿರುವ ಪಾಕಿಸ್ತಾನದ (Pakistan) ರಕ್ಷಣಾ ಸಚಿವ ಖವಾಜಾ ಆಸಿಫ್‌ (Khawaja Asif) ಬಂಡವಾಳ ಮತ್ತೆ ಬಯಲಾಗಿದೆ.

    ಭಾರತ ನಡೆಸಿದ ದಾಳಿ ಪಾಕಿಸ್ತಾನ (Pakistan) ಪ್ರತಿ ದಾಳಿ ನಡೆಸಿ ಮೂವರನ್ನುಸೆರೆ ಹಿಡಿದಿದ್ದೇವೆ ಎಂದು ಖವಾಜಾ ಆಸಿಫ್‌ ಹೇಳಿದ್ದರು. ಆದರೆ ಈಗ ತನ್ನ ಹೇಳಿಕೆಯನ್ನು ಹಿಂದಕ್ಕೆ ಪಡೆದಿದ್ದು ಪಾಕಿಸ್ತಾನ ಭಾರತದ ಸೈನಿಕರನ್ನು ಸೆರೆ ಹಿಡಿದಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ:9 ಉಗ್ರರ ನೆಲೆಗಳು ಉಡೀಸ್‌- ಗಡಿಯಿಂದ ಎಷ್ಟು ದೂರ ಇದೆ? ಎಲ್ಲೆಲ್ಲಿ ದಾಳಿ?

    ಪದೇ ಪದೇ ಭಾರತವನ್ನು ಕೆಣಕಿದ್ದ ಆಸಿಫ್‌, ಒಂದು ವೇಳೆ ಭಾರತವು ಪಾಕಿಸ್ತಾನದ ಮೇಲೆ ದಾಳಿ ನಡೆಸುವ ಧೈರ್ಯ ಮಾಡಿದರೆ ಮತ್ತು ಪಾಕಿಸ್ತಾನದ ಅಸ್ತಿತ್ವಕ್ಕೆ ಬೆದರಿಕೆ ಎದುರಾದರೆ ಈ ಜಗತ್ತಿನಲ್ಲಿ ಯಾರೂ ಉಳಿಯುವುದಿಲ್ಲ ಎಂದಿದ್ದರು.

    ಭಾರತ ಸಿಂಧೂ ಜಲ ಒಪ್ಪಂದವನ್ನು ಉಲ್ಲಂಘಿಸಿ ಯಾವುದೇ ಡ್ಯಾಮ್ ನಿರ್ಮಿಸಿದರೆ ಇಸ್ಲಾಮಾಬಾದ್ ಅದನ್ನು ಧ್ವಂಸಗೊಳಿಸಲಿದೆ ಎಂದು ಹೇಳಿದ್ದರು.

    ಭಾರತ ತಡ ರಾತ್ರಿ ಪಾಕಿಸ್ತಾನ ಮತ್ತು ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿರುವ 9 ಉಗ್ರರ ನೆಲೆಗಳನ್ನು ಧ್ವಂಸ ಮಾಡಿದೆ.

  • 9 ಉಗ್ರರ ನೆಲೆಗಳು ಉಡೀಸ್‌-  ಗಡಿಯಿಂದ ಎಷ್ಟು ದೂರ ಇದೆ? ಎಲ್ಲೆಲ್ಲಿ ದಾಳಿ?

    9 ಉಗ್ರರ ನೆಲೆಗಳು ಉಡೀಸ್‌- ಗಡಿಯಿಂದ ಎಷ್ಟು ದೂರ ಇದೆ? ಎಲ್ಲೆಲ್ಲಿ ದಾಳಿ?

    ನವದೆಹಲಿ: ತಡರಾತ್ರಿ ಭಾರತ (India) ಪಾಕಿಸ್ತಾನದಲ್ಲಿರುವ (Pakistan) ಉಗ್ರರ ನೆಲೆಗಳ ಮೇಲೆ ದಾಳಿ ನಡೆಸುವ ಮೂಲಕ ಪಹಲ್ಗಾಮ್‌ ನರಮೇಧಕ್ಕೆ (Pahalgam Terror Attack) ಪ್ರತೀಕಾರ ತೀರಿಸಿದೆ.

    ಉಗ್ರರ 9 ನೆಲೆಗಳ ಮೇಲೆ ಆಪರೇಷನ್‌ ಸಿಂಧೂರ (Operation Sindoor) ಹೆಸರಿನಲ್ಲಿ ಪಾಕಿಸ್ತಾನ ಮತ್ತು ಪಾಕ್‌ ಆಕ್ರಮಿತ ಕಾಶ್ಮೀರದ ಒಳಗಡೆ ನುಗ್ಗಿ ಏರ್‌ಸ್ಟ್ರೈಕ್‌ (Air Strike) ಮಾಡಿ ಧ್ವಂಸ ಮಾಡಿದೆ. ಭಾರತ ಪಾಕಿಸ್ತಾನದ ಯಾವುದೇ ಮಿಲಿಟರಿ ನೆಲೆಗಳನ್ನು ಗುರಿಯಾಗಿಸದೇ ಕೇವಲ ಉಗ್ರರ ನೆಲೆಗಳನ್ನು ಮಾತ್ರ ಗುರಿಯಾಗಿಸಿ ದಾಳಿ ನಡೆಸಿದ್ದು ವಿಶೇಷ.

    9 ಉಗ್ರರ ನೆಲೆಗಳ ಪೈಕಿ ಕೆಲವು 100 ಕಿ.ಮೀ ದೂರದಲ್ಲಿ ಇದ್ದವು. ದಾಳಿಗೊಳಗಾದ ಶಿಬಿರಗಳು ಭಾರತದ ವಿರುದ್ಧದ ಹಿಂದಿನ ಅನೇಕ ದಾಳಿಗಳಿಗೆ ನೇರವಾಗಿ ಸಂಬಂಧಿಸಿವೆ. ದಾಳಿಯಲ್ಲಿ 100ಕ್ಕೂ ಹೆಚ್ಚು ಉಗ್ರರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: Operation Sindoor | ಭಾರತದ ಪ್ರತೀಕಾರ ದಾಳಿಗೆ ಉಗ್ರ ಹಫೀಜ್ ಸಯೀದ್‌ಗೆ ಸಂಬಂಧಿಸಿದ ಮಸೀದಿ ಧ್ವಂಸ

    ಎಲ್ಲೆಲ್ಲಿ ದಾಳಿ ನಡೆದಿದೆ?
    1) ಬಹವಾಲ್ಪುರ್: ಅಂತರರಾಷ್ಟ್ರೀಯ ಗಡಿಯಿಂದ ಸುಮಾರು 100 ಕಿ.ಮೀ ದೂರದಲ್ಲಿರುವ ಬಹವಾಲ್ಪುರ್ ಮೇಲೆ ದಾಳಿ ನಡೆದಿದೆ. ಇದು ಜೈಷ್‌ ಉಗ್ರ ಸಂಘಟನೆಯ ಪ್ರಧಾನ ಕಚೇರಿಯಾಗಿತ್ತು.

    2) ಮುರಿಡ್ಕೆ: ಸಾಂಬಾ ಎದುರಿನ ಗಡಿಯಿಂದ 30 ಕಿ.ಮೀ ದೂರದಲ್ಲಿದ್ದು ಇದು ಲಷ್ಕರ್-ಎ-ತೈಬಾ ಸಂಘಟನೆ ಉಗ್ರರ ಶಿಬಿರ ನಡೆಸುತ್ತಿತ್ತು. ಮುಂಬೈ ದಾಳಿ ನಡೆಸಿದ ಉಗ್ರರಿಗೆ ಇಲ್ಲಿ ತರಬೇತಿ ನೀಡಲಾಗಿತ್ತು.

    3) ಗುಲ್ಪುರ್ : ಗಡಿ ನಿಯಂತ್ರಣ ರೇಖೆ ಪೂಂಚ್-ರಾಜೌರಿಯಿಂದ 35 ಕಿ.ಮೀ ದೂರದಲ್ಲಿದೆ. ಪೂಂಚ್‌ನಲ್ಲಿ ಏಪ್ರಿಲ್ 20, 2023 ರಂದು ನಡೆದ ದಾಳಿ ಮತ್ತು ಜೂನ್ 24 ರಂದು ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಅಮಾಯಕ ಯಾತ್ರಿಕರ ಮೇಲೆ ಇಲ್ಲಿ ತರಬೇತಿ ಪಡೆದ ಉಗ್ರರು ದಾಳಿ ನಡೆಸಿದ್ದರು.

    4) ಸವಾಯಿ: ಲಷ್ಕರ್‌ ಉಗ್ರರ ಕ್ಯಾಂಪ್‌ ಇದಾಗಿದ್ದು ಗಡಿ ನಿಯಂತ್ರಣ ರೇಖೆಯಿಂದ 30 ಕಿ.ಮೀ ದೂರದಲ್ಲಿದೆ. ಕಳೆದ ವರ್ಷ ಅಕ್ಟೋಬರ್ 20, 24 ರಂದು ಸೋನ್‌ಮಾರ್ಗ್, ಅಕ್ಟೋಬರ್ 24 ರಂದು ಗುಲ್ಮಾರ್ಗ್ ಮತ್ತು ಏಪ್ರಿಲ್ 22 ರಂದು ಪಹಲ್ಗಾಮ್ ಮೇಲೆ ದಾಳಿ ನಡೆಸಿದ ಉಗ್ರರು ಇಲ್ಲಿ ತರಬೇತಿ ಪಡೆದಿದ್ದರು.


    5) ಬಿಲಾಲ್: ಉಗ್ರ ಸಂಘಟನೆ ಜೈಷ್–ಎ–ಮೊಹಮದ್ ಲಾಂಚ್‌ ಪ್ಯಾಡ್‌ ಇದಾಗಿದ್ದು ಉಗ್ರರು ಇಲ್ಲಿ ಕೊನೆಯ ಹಂತದ ತರಬೇತಿ ಪಡೆದು ಭಾರತಕ್ಕೆ ನುಗ್ಗುತ್ತಿದ್ದರು.

    6) ಕೋಟ್ಲಿ: ಗಡಿ ನಿಯಂತ್ರಣ ರೇಖೆಯಿಂದ 15 ಕಿ.ಮೀ ದೂರದಲ್ಲಿದೆ. ಲಷ್ಕರ್‌ ಉಗ್ರರ ಕ್ಯಾಂಪ್‌ ಇದಾಗಿದ್ದು 50 ಉಗ್ರರಿಗೆ ತರಬೇತಿ ನೀಡುವ ಸಾಮರ್ಥ್ಯ ಹೊಂದಿತ್ತು.

    7) ಬರ್ನಾಲಾ: ಭಾರತ ಗಡಿಯಿಂದ 10 ಕಿ.ಮೀ ದೂರದಲ್ಲಿದೆ. ಇಲ್ಲೂ ಲಷ್ಕರ್‌ ಉಗ್ರರಿಗೆ ತರಬೇತಿ ನೀಡಲಾಗುತ್ತಿತ್ತು.

    8) ಸರ್ಜಲ್: ಸಾಂಬಾ ಕಟುವಾ ಬಳಿ ಅಂತಾರಾಷ್ಟ್ರೀಯ ಗಡಿಯಿಂದ 8 ಕಿಲೋಮೀಟರ್ ದೂರದಲ್ಲಿ ಜೈಶ್ ಎ ಮೊಹಮದ್ ಕ್ಯಾಂಪ್.

    9) ಮಹಮೂನಾ: ಸಿಯಾಲ್ ಕೋಟ್ ಬಳಿಯ ಅಂತಾರಾಷ್ಟ್ರೀಯ ಗಡಿಯಿಂದ 15 ಕಿಲೋಮೀಟರ್ ದೂರದಲ್ಲಿ ಹಿಜ್ಬುಲ್ಲಾ ಟ್ರೈನಿಂಗ್ ಸೆಂಟರ್.

  • ಇರಾನ್ ಮೇಲೆ ಪಾಕ್ ಪ್ರತಿದಾಳಿ – ನಾಲ್ಕು ಮಕ್ಕಳು ಸೇರಿ 7 ಮಂದಿ ಹತ್ಯೆ

    ಇರಾನ್ ಮೇಲೆ ಪಾಕ್ ಪ್ರತಿದಾಳಿ – ನಾಲ್ಕು ಮಕ್ಕಳು ಸೇರಿ 7 ಮಂದಿ ಹತ್ಯೆ

    ಇಸ್ಲಾಮಾಬಾದ್: ಇರಾನ್‌ನ ಉಗ್ರರ ನೆಲೆಗಳ ಮೇಲೆ ಪಾಕಿಸ್ತಾನ (Pakistan) ಪ್ರತಿದಾಳಿ ನಡೆಸಿದ್ದು, 7 ಮಂದಿ ಇರಾನಿಯನ್ನರನ್ನು ಹತ್ಯೆಗೈದಿದೆ. ಈ ಮೂಲಕ ತನ್ನ ವಿರುದ್ಧದ ದಾಳಿಗೆ ಸೇಡು ತೀರಿಸಿಕೊಂಡಿದೆ.

    ಪಾಕಿಸ್ತಾನದ ಬಲೂಚಿಸ್ತಾನ (Balochistan) ಪ್ರಾಂತ್ಯದಲ್ಲಿರುವ `ಜೈಷ್ ಎ ಅದ್ಲ್’ ಎಂಬ ಉಗ್ರ ಸಂಘಟನೆಯ 2 ನೆಲೆಗಳ ಮೇಲೆ ಇರಾನ್ ಮಾರಣಾಂತಿಕ ಕ್ಷಿಪಣಿ ಹಾಗೂ ಡ್ರೋನ್‌ಗಳಿಂದ ದಾಳಿ (Iran Missile Attack) ನಡೆಸಿತ್ತು. ಇದಾದ ಒಂದು ದಿನದ ನಂತರ ಪಾಕಿಸ್ತಾನ ಸಹ ಪ್ರತೀಕಾರದ ದಾಳಿ ನಡೆಸಿದೆ. ಇದನ್ನೂ ಓದಿ: ಅಮೆರಿಕ ಅಧ್ಯಕ್ಷೀಯ ರೇಸ್‌ನಿಂದ ಹೊರಗುಳಿದ ಭಾರತೀಯ ಮೂಲದ ವಿವೇಕ್‌ – ಟ್ರಂಪ್‌ಗೆ ಬೆಂಬಲ

    ಪಾಕಿಸ್ತಾನವು ಗುರುವಾರ ಇರಾನ್ ಪ್ರದೇಶದೊಳಗಿನ ಉಗ್ರಗಾಮಿ ನೆಲೆಗಳ ಮೇಲೆ ವೈಮಾನಿಕ ದಾಳಿ ನಡೆಸಿ, 7 ಮಂದಿಯನ್ನ ಹತ್ಯೆಗೈದಿದೆ. ಇರಾನ್ ಪಾಕ್ ಮೇಲಿನ ಆಕ್ರಮಣವನ್ನು ಒಪ್ಪಿಕೊಂಡ ನಂತರ ಪಾಕಿಸ್ತಾನ ದಾಳಿ ನಡೆಸಿದೆ.

    ಗುರುವಾರ ಬೆಳಗ್ಗೆ ಪಾಕಿಸ್ತಾನವು ಬಲೂಚಿಸ್ತಾನ ಪ್ರತ್ಯೇಕತಾವಾದಿ ಸಂಘಟನೆಗಳಾದ ಬಲೂಚಿಸ್ತಾನ್ ಲಿಬರೇಷನ್ ಫ್ರಂಟ್ ಹಾಗೂ ಬಲೂಚಿಸ್ತಾನ್ ಲಿಬರೇಷನ್ ಆರ್ಮಿ ಸಂಘಟನೆಯ ನೆಲೆಗಳ ಮೇಲೆ ದಾಳಿ ನಡೆಸಿದೆ. ಪಾಕ್ ದಾಳಿ ವೇಳೆ ಹಲವು ಭಯೋತ್ಪಾದಕರು ಹತ್ಯೆಗೀಡಾಗಿರುವುದು ಕಂಡುಬಂದಿದೆ. ಈ ನಡುವೆ ಪಾಕಿಸ್ತಾನಿ ವಿರೋಧಿ ಉಗ್ರಗಾಮಿ ಸಂಘಟನೆ ಮೇಲೆ ದಾಳಿ ನಡೆಸಲಾಗಿದೆ ಎಂದಷ್ಟೇ ನಾನು ಹೇಳಬಲ್ಲೆ ಎಂದು ಪಾಕಿಸ್ತಾನದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ದಾಳಿ ನಡೆದ ಕೆಲಸ ಸಮಯದ ಬಳಿಕ ಸಿಯೆಸ್ತಾನ್-ಒ-ಬಲೂಚಿಸ್ತಾನ್ ಪ್ರಾಂತ್ಯದಲ್ಲಿರುವ ಅಡಗು ತಾಣಗಳ (Terrorist Hideouts) ಮೇಲೆ ಮಿಸೈಲ್ ದಾಳಿ ನಡೆದಿರುವುದಾಗಿ ಇರಾನ್ ಮಾಧ್ಯಮಗಳು ವರದಿ ಮಾಡಿವೆ.

    ಪಾಕಿಸ್ತಾನದ ಅಧಿಕಾರಿಯೊಬ್ಬರ ಪ್ರಕಾರ, ಆಗ್ನೇಯ ಇರಾನ್ ನಗರವಾದ ಸರವನ್‌ನಲ್ಲಿ ಸರಣಿ ಸ್ಫೋಟಗಳು ಸಂಭವಿಸಿವೆ. ಈ ಸ್ಫೋಟದಲ್ಲಿ 7 ಇರಾನಿಯನ್ನರು ಸಾವನ್ನಪ್ಪಿದ್ದಾರೆ. ಇದರಲ್ಲಿ ಮೂವರು ಮಹಿಳೆಯರು, ನಾಲ್ವರು ಮಕ್ಕಳು ಸೇರಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಮೇಯರ್‌ ಚುನಾವಣೆ : ಮಾಲ್ಡೀವ್ಸ್‌ ಆಡಳಿತ ಪಕ್ಷಕ್ಕೆ ಹೀನಾಯ ಸೋಲು – ಭಾರತದ ಪರ ಪಕ್ಷಕ್ಕೆ ಭರ್ಜರಿ ಜಯ

    ಒಂದು ದಿನದ ಹಿಂದೆಯಷ್ಟೇ ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದ ಮೇಲೆ ಜೈಷ್-ಅಲ್-ಅದ್ ಉಗ್ರ ಸಂಘಟನೆಯ ಎರಡು ನೆಲೆಗಳ ಮೇಲೆ ಇರಾನ್ ದಾಳಿ ನಡೆಸಿತ್ತು. ಈ ಘಟನೆಯಲ್ಲಿ ಇಬ್ಬರು ಮಕ್ಕಳು ಸಾವಿಗೀಡಾಗಿದ್ದರು. ಮೂವರು ಗಾಯಗೊಂಡಿದ್ದರು. ಈ ದಾಳಿ ತನ್ನ ವಾಯುಸೀಮೆ ಹಾಗೂ ಸಾರ್ವಭೌಮತೆಯ ಉಲ್ಲಂಘನೆ ಎಂದು ಪಾಕಿಸ್ತಾನ ಹೇಳಿತ್ತು. ಈ ಕಾನೂನುಬಾಹಿರ ಕೃತ್ಯಕ್ಕೆ ತಿರುಗೇಟು ನೀಡುವ ಅಧಿಕಾರವೂ ತನಗಿದೆ ಎಂದು ಹೇಳಿಕೊಂಡಿತ್ತು. ಈ ಬೆನ್ನಲ್ಲೇ ಇರಾನ್ ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಿದೆ. ಇದನ್ನೂ ಓದಿ: ಆರ್ಥಿಕ ಬಿಕ್ಕಟ್ಟು – ಪಾಕಿಸ್ತಾನದಲ್ಲಿ 1 ಮೊಟ್ಟೆಯ ಬೆಲೆ 33 ರೂ. – ಈರುಳ್ಳಿ ಪ್ರತಿ ಕೆಜಿಗೆ 250 ರೂ.