Tag: ಉಗ್ರರ ದಾಳಿ

  • ಜಮ್ಮು-ಕಾಶ್ಮೀರದ ಕಥುವಾದಲ್ಲಿ ಎನ್‌ಕೌಂಟರ್‌ – ನಾಲ್ವರು ಪೊಲೀಸರು ಹುತಾತ್ಮ, ಇಬ್ಬರು ಉಗ್ರರ ಹತ್ಯೆ

    ಜಮ್ಮು-ಕಾಶ್ಮೀರದ ಕಥುವಾದಲ್ಲಿ ಎನ್‌ಕೌಂಟರ್‌ – ನಾಲ್ವರು ಪೊಲೀಸರು ಹುತಾತ್ಮ, ಇಬ್ಬರು ಉಗ್ರರ ಹತ್ಯೆ

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu And Kashmir) ಕಥುವಾ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಭಯೋತ್ಪಾದಕರೊಂದಿಗೆ (Terrorists) ನಡೆದ ಗುಂಡಿನ ಚಕಮಕಿಯಲ್ಲಿ ನಾಲ್ವರು ಪೊಲೀಸರು ಹುತಾತ್ಮರಾಗಿದ್ದು, ಇಬ್ಬರು ಉಗ್ರರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

    ಭದ್ರತಾ ಪಡೆಗಳು ಶೋಧ ನಡೆಸುತ್ತಿದ್ದಾಗ ಉಗ್ರರು ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ DSP ಧೀರಜ್ ಕಟೋಚ್, 1 PARA (Special Forces) ಯೋಧ ಸೇರಿ ಐವರು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೂರರಿಂದ ನಾಲ್ಕು ಭಯೋತ್ಪಾದಕರು ಇನ್ನೂ ಅವಿತುಕೊಂಡಿದ್ದಾರೆ ಎಂದು ಶಂಕಿಸಲಾಗಿದೆ. ಸದ್ಯ ಸ್ಥಳದಲ್ಲಿ ಭದ್ರತೆ ಹೆಚ್ಚಿಸಲಾಗಿದ್ದು, ಶೋಧಕಾರ್ಯ ಮುಂದುವರಿದಿದೆ. ಇದನ್ನೂ ಓದಿ: Jammu Terrorist Attack: ಜಮ್ಮುವಿನಲ್ಲಿ ದಿಢೀರ್‌ ಭಯೋತ್ಪಾದಕ ದಾಳಿ ಹೆಚ್ಚಾಗುತ್ತಿರುವುದು ಏಕೆ?

    Jammui 3

    ಕಥುವಾ ಜಿಲ್ಲೆಯ ಸುಫೈನ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಕಾಡಿನಲ್ಲಿ ಅಡಗಿದ್ದ ಉಗ್ರರು ಗುಂಡಿನ ದಾಳಿ ನಡೆಸಿದರು. ಮೃತಪಟ್ಟ ಪೊಲೀಸರಲ್ಲಿ ಹೆಡ್ ಕಾನ್ಸ್‌ಟೇಬಲ್‌ ಮತ್ತು ಇಬ್ಬರು ಕಾನ್ಸ್‌ಟೇಬಲ್‌ ಇದ್ದಾರೆ. ಗುಂಡಿನ ದಾಳಿ ತೀವ್ರವಾಗಿದ್ದರಿಂದ ಮೃತದೇಹಗಳನ್ನು ಸ್ಥಳದಿಂದ ಸಾಗಿಸಲು ಸಾಧ್ಯವಾಗಿಲ್ಲ. ಗ್ರೆನೇಡ್ ಮತ್ತು ರಾಕೆಟ್ ದಾಳಿಯಿಂದ ಪ್ರದೇಶವು ತತ್ತರಿಸಿದೆ. ಇದನ್ನೂ ಓದಿ: Jammu & Kashmir | 40 ಅಡಿ ಆಳದ ಕಂದಕಕ್ಕೆ ಉರುಳಿದ ಸೇನೆಯ ಬಸ್‌ – ಮೂವರು ಯೋಧರು ದುರ್ಮರಣ

    ಪ್ರತಿಕೂಲ ಭೂಪ್ರದೇಶದಲ್ಲಿ ಹೆಚ್ಚಿನ ಭಯೋತ್ಪಾದಕರು ಇರುವ ಕಾರಣ ಈವರೆಗೆ ಸಾವನ್ನಪ್ಪಿದ್ದ ಪೊಲೀಸರ ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಆನೇಕಲ್‌ | ಪತ್ನಿ ತುಂಡರಿಸಿ ಸೂಟ್‌ಕೇಸ್‌ಗೆ ತುಂಬಿದ್ದ ಟೆಕ್ಕಿ ಪತಿ – ಮಹಾರಾಷ್ಟ್ರದಲ್ಲಿ ಹಂತಕ ಅರೆಸ್ಟ್

    ಕಥುವಾ ಉಗ್ರರ ಸ್ವರ್ಗವಾಗುತ್ತಿದೆಯೇ?
    1990ರ ದಶಕದಲ್ಲಿ ಕಥುವಾ (Kathua) ಭಯೋತ್ಪಾದಕರ ದೊಡ್ಡ ನೆಲೆಯಾಗಿ ಗುರುತಿಸಿಕೊಂಡಿತ್ತು. ಇಡೀ ಜಮ್ಮು ಮತ್ತು ಕಾಶ್ಮೀರದಾದ್ಯಂತ ದಾಳಿ ನಡೆಸಲು ಇಲ್ಲಿಯೇ ಉಗ್ರರು ಪ್ಲ್ಯಾನ್‌ ರೂಪಿಸುತ್ತಿದ್ದರು. ಸೇನೆ ವಿರುದ್ಧ ಯುದ್ಧಗಳ ತಯಾರಿಯೂ ಇಲ್ಲಿಯೇ ನಡೆಸುತ್ತಿದ್ದರು. ಕಥುವಾ ಉಧಂಪುರ, ಸಾಂಬಾ ಮತ್ತು ದೋಡಾ ಜಿಲ್ಲೆಗಳ ಪಕ್ಕದಲ್ಲಿದ್ದ ಕಾರಣ ಭದ್ರತಾ ಪಡೆಗಳು ಉಗ್ರರ ಹೆಡೆಮುರಿ ಕಟ್ಟಲು ಇಲ್ಲಿಯೇ ಬೀಡುಬಿಟ್ಟಿರುತ್ತಿದ್ದವು ಎಂದು ಅಲ್ಲಿನ ಪ್ರಾಥಮಿಕ ಮೂಲಗಳು ತಿಳಿಸಿವೆ. ಈಗ ಮತ್ತೆ ಕಥುವಾ ಉಗ್ರರ ನೆಲೆಯಾಗುತ್ತಿದೆಯೇ ಎಂಬ ಸಂಶಯ ಹುಟ್ಟಿಕೊಂಡಿದೆ. ಏಕೆಂದರೆ ಇಲ್ಲಿನ ಭೌಗೋಳಿಕತೆ ವಿಶೇಷವಾಗಿದೆ. ಒಂದು ಬದಿಯಲ್ಲಿ ಪಾಕಿಸ್ತಾನ ಗಡಿ ಇದ್ದರೆ, ಮತ್ತೊಂದು ಬದಿಯಲ್ಲಿ ಹಿಮಾಚಲ ಪ್ರದೇಶ ಇದೆ. ಮುಖ್ಯವಾಗಿ ಅರಣ್ಯ ಪ್ರದೇಶ ದಟ್ಟವಾಗಿರುವುದರಿಂದ ಉಗ್ರರು ತಪ್ಪಿಸಿಕೊಳ್ಳಲು ಅನುಕೂಲಕರ ವಾತಾವರಣ ಇದೆ ಎನ್ನಲಾಗಿದೆ. ಇದೇ ಕಾರಣಕ್ಕೆ ಉಗ್ರರು ಈ ಭಾಗದ ನೆಲೆಯನ್ನು ಗುರಿಯಾಗಿದ್ದಾರೆ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ.

  • ICC Champions Trophy 2025 | ಈ ವಾರವೇ ವೇಳಾಪಟ್ಟಿ ಬಿಡುಗಡೆ ಸಾಧ್ಯತೆ

    ICC Champions Trophy 2025 | ಈ ವಾರವೇ ವೇಳಾಪಟ್ಟಿ ಬಿಡುಗಡೆ ಸಾಧ್ಯತೆ

    – ಹೈಬ್ರಿಡ್‌ ಮಾದರಿ ಒಪ್ಪಿಕೊಳ್ಳುವಂತೆ ಪಿಸಿಬಿ ಮೇಲೆ ಐಸಿಸಿ ಒತ್ತಡ
    – ಭಾರತಕ್ಕೆ ಸಮಸ್ಯೆಯಿದ್ದರೆ ಮಾತನಾಡಿ ಬಗೆಹರಿಸೋಣ ಎಂದ ಪಿಸಿಬಿ

    ಇಸ್ಲಾಮಾಬಾದ್‌/ಅಬುದಾಬಿ: 2025ರ ಫೆಬ್ರವರಿ 19 ರಿಂದ ಮಾರ್ಚ್‌ 9ರ ವರೆಗೆ ನಡೆಯಲಿರುವ ಚಾಂಪಿಯನ್ಸ್‌ ಟ್ರೋಫಿ (Champions Trophy 2025) ಟೂರ್ನಿಯ ವೇಳಾಪಟ್ಟಿಯು ಇದೇ ವಾರದಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

    50 ಓವರ್‌ಗಳ ಏಕದಿನ ಮಾದರಿಯ ಪಂದ್ಯ ಇದಾಗಿದೆ. ಈಗಾಗಲೇ ಪಾಕಿಸ್ತಾನ ಐಸಿಸಿ ಅನುಮತಿಗಾಗಿ ತಾತ್ಕಾಲಿಕ ವೇಳಾಪಟ್ಟಿ ಸಲ್ಲಿಸಿದ್ದು, ಅಂತಿಮ ವೇಳಾಪಟ್ಟಿ ಇದೇ ವಾರ ಬಿಡುಗಡೆಯಾಗುವ ಸಾಧ್ಯತೆಯಿದೆ. ಪ್ರಸಕ್ತ ಟೂರ್ನಿಗೆ ಪಾಕಿಸ್ತಾನದ (Pakistan) ಮುಲ್ತಾನ್‌, ರಾವಲ್ಪಿಂಡಿ ಹಾಗೂ ಲಾಹೋರ್‌ ಕ್ರೀಡಾಂಗಣಗಳು ಆತಿಥ್ಯ ವಹಿಸಲಿವೆ. ತಾತ್ಕಾಲಿಕ ವೇಳಾಪಟ್ಟಿಯಲ್ಲಿ ಪಾಕ್‌, ಭಾರತದ ಎಲ್ಲ ಪಂದ್ಯಗಳನ್ನು ಲಾಹೋರ್‌ ಕ್ರೀಡಾಂಗಣದಲ್ಲಿ ನಿಗದಿಪಡಿಸಿದೆ.

    ಹೈಬ್ರಿಡ್‌ ಮಾದರಿಗೆ ಒಪ್ಪಲು ಒತ್ತಡ:
    2025ರ ಚಾಂಪಿಯನ್ಸ್‌ ಟ್ರೋಫಿಗಾಗಿ ಟೀಂ ಇಂಡಿಯಾ (Team India) ಪಾಕಿಸ್ತಾನಕ್ಕೆ ಪ್ರಯಾಣಿಸುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ. ಹಾಗಾಗಿ ಹೈಬ್ರಿಡ್‌ ಮಾದರಿಗೆ ಒಪ್ಪಿಕೊಳ್ಳುವಂತೆ ಐಸಿಸಿಯ (ICC) ಉನ್ನತ ಅಧಿಕಾರಿಗಳು ಪಾಕಿಸ್ತಾನ ಕ್ರಿಕೆಟ್‌ ಮಂಡಳಿ (PCB) ಮೇಲೆ ಒತ್ತಡ ಹೇರುತ್ತಿದ್ದಾರೆ ಎನ್ನಲಾಗಿದೆ. ಆದ್ರೆ ಇದ್ಯಾವುದಕ್ಕೂ ಕಿವಿಗೊಡದ ಪಿಸಿಬಿ ಈ ಬಾರಿ ಭಾರತ, ಬರಲಿ ಬರದೇ ಇರಲಿ, ಪಾಕ್‌ ನಲ್ಲೇ ಟೂರ್ನಿ ನಡೆಯಲಿದೆ ಎಂದು ಹೇಳಿದೆ. ಇದನ್ನೂ ಓದಿ: ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗೆ ಶಫಾಲಿ ವರ್ಮಾ, ಶ್ರೇಯಾಂಕಾ ಪಾಟೀಲ್ ಕೈಬಿಟ್ಟ ಭಾರತ

    ಸಮಸ್ಯೆಯಿದ್ದರೆ ಮಾತನಾಡಿ ಬಗೆಹರಿಸೋಣ:
    ಇನ್ನೂ ಪಾಕ್‌ಗೆ ಬರಲು ಒಪ್ಪದ ಬಿಸಿಸಿಐ ನಿರ್ಧಾರಕ್ಕೆ ಪ್ರತಿಕ್ರಿಯೆ ನೀಡಿರುವ ಪಿಸಿಬಿ ಮುಖ್ಯಸ್ಥ ಮೊಹ್ಸಿನ್ (Mohsin Naqvi), ಪಾಕಿಸ್ತಾನಕ್ಕೆ ಬರಲು ಸಮಸ್ಯೆಯಿದ್ದರೆ ಮಾತನಾಡಿ ಬಗೆಹರಿಸೋಣ ಎಂದು ಹೇಳಿದ್ದಾರೆ. ಇದನ್ನೂ ಓದಿ: ಇದು ಪಾಕಿಸ್ತಾನದ ಪ್ರತಿಷ್ಠೆ, ಭಾರತದ ಷರತ್ತಿಗೆ ನಮ್ಮ ಸಮ್ಮತಿಯಿಲ್ಲ: ಪಿಸಿಬಿ ಮೊಂಡಾಟ

    ಪಿಸಿಬಿ ಹೈಬ್ರಿಡ್‌ ಮಾದರಿಯಲ್ಲಿ ಟೂರ್ನಿ ಆಯೋಜಿಸಲು ಉತ್ಸುಕವಾಗಿಲ್ಲ. ಚಾಂಪಿಯನ್ಸ್‌ ಟ್ರೋಫಿ ವಿಚಾರದಲ್ಲಿ ಐಸಿಸಿ ನಿರ್ಧಾರಕ್ಕಾಗಿ ಕಾಯುತ್ತಿದ್ದೇವೆ. ಈಗಾಗಲೇ ಟ್ರೋಫಿ ಆಯೋಜಿಸುವ ಸಲುವಾಗಿ ಕರಾಚಿ, ಲಾಹೋರ್ ಮತ್ತು ರಾವಲ್ಪಿಂಡಿ ಕ್ರೀಡಾಂಗಣಗಳನ್ನು ನವೀಕರಿಸಲು ಪಾಕಿಸ್ತಾನವು 17 ಶತಕೋಟಿ ರೂ.ಗಳನ್ನ (ಪಾಕಿಸ್ತಾನ ರೂಪಾಯಿ) ವಿನಿಯೋಗಿಸಿದೆ. ಅಲ್ಲದೇ ಇದು ಪಾಕಿಸ್ತಾನದ ಪ್ರತಿಷ್ಠೆಯಾಗಿದ್ದು, ಭಾರತ ತಂಡಕ್ಕಾಗಿ ಎದುರು ನೋಡುತ್ತಿದ್ದೇವೆ. ಕ್ರೀಡೆ ಮತ್ತು ರಾಜಕೀಯ ಪ್ರತ್ಯೇಕ ವಿಷಯಗಳು, ನಾವು ಎರಡನ್ನು ಒಟ್ಟಿಗೆ ಸೇರಿಸುವುದಿಲ್ಲ. ಚಾಂಪಿಯನ್ಸ್ ಟ್ರೋಫಿಗೆ ಅರ್ಹತೆ ಪಡೆದಿರುವ ಎಲ್ಲಾ ತಂಡಗಳು ಬರಲು ಸಿದ್ಧವಾಗಿವೆ. ಭಾರತಕ್ಕೆ ಕಾಳಜಿ ಇದ್ದರೆ ಬರಲಿ ಎಂದು ತಿಳಿಸಿದ್ದಾರೆ.

    ಬಿಸಿಸಿಐ ಷರತ್ತು ಏನು?
    ಚಾಂಪಿಯನ್ಸ್‌ ಟ್ರೋಫಿಗಾಗಿ ಭಾರತ ತಂಡವು ಪಾಕಿಸ್ತಾನಕ್ಕೆ (Pakistan) ಬರುವುದಿಲ್ಲ ಎಂದು ಬಿಸಿಸಿಐ ಹೇಳಿದೆ. ಜೊತೆಗೆ ಭಾರತದ ಎಲ್ಲಾ ಪಂದ್ಯಗಳನ್ನು ದುಬೈಗೆ ಸ್ಥಳಾಂತರಿಸುವಂತೆ ಬೇಡಿಕೆಯಿಟ್ಟಿದೆ. ಇದನ್ನೂ ಓದಿ: 20 ವರ್ಷಗಳ ಬಳಿಕ ರಿಂಗ್‌ನಲ್ಲಿ ಘರ್ಜಿಸಿದ ಮೈಕ್‌ ಟೈಸನ್‌ – ಜೇಕ್ ಪಾಲ್ ವಿರುದ್ಧ ಸೋಲು

    ಐಸಿಸಿ ಮುಂದಿರುವ ಆಯ್ಕೆಗಳೇನು?
    ಆಯ್ಕೆ – 1
    ಬಿಸಿಸಿಐಯ ಹೈಬ್ರಿಡ್ ಮಾದರಿಯ ಪ್ರಸ್ತಾಪ ಒಪ್ಪಿಕೊಳ್ಳಲು ಪಾಕಿಸ್ತಾನ ಕ್ರಿಕೆಟ್‌ ಮಂಡಳಿಗೆ ಮನವರಿಕೆ ಮಾಡಿ, 15 ಪಂದ್ಯಗಳಲ್ಲಿ ಐದು ಪಂದ್ಯಗಳನ್ನು ಯುಎಇಗೆ ಸ್ಥಳಾಂತರಿಸುವುದು.
    ಆಯ್ಕೆ – 2
    ಚಾಂಪಿಯನ್ಸ್ ಟ್ರೋಫಿ ಟೂರ್ನಿಯನ್ನು ಸಂಪೂರ್ಣವಾಗಿ ಪಾಕಿಸ್ತಾನದಿಂದ ತೆಗೆದುಹಾಕುವುದು. ಇದರಿಂದ ಟ್ರೋಫಿಯಿಂದ ಪಾಕ್‌ ತಂಡ ದೂರ ಉಳಿಯಲಿದೆ.
    ಆಯ್ಕೆ – 3
    ಅನಿರ್ದಿಷ್ಟಾವಧಿವರೆಗೆ ಚಾಂಪಿಯನ್ಸ್ ಟ್ರೋಫಿ ಮುಂದೂಡುವುದು. ಈ ನಿರ್ಧಾರವು ICC ಮತ್ತು PCB ಎರಡರ ಆದಾಯದ ಮೇಲೆ ಭಾರಿ ಪರಿಣಾಮ ಬೀರಬಹುದು ಎಂದು ಹೇಳಲಾಗಿದೆ. ಇದನ್ನೂ ಓದಿ: Champions Trophy | ಪಾಕ್‌ ಆಕ್ರಮಿತ ಕಾಶ್ಮೀರ ಪ್ರವಾಸಕ್ಕೆ ಬಿಸಿಸಿಐ ಆಕ್ಷೇಪ, ನೋ ಎಂದ ಐಸಿಸಿ

  • ಇದು ಪಾಕಿಸ್ತಾನದ ಪ್ರತಿಷ್ಠೆ, ಭಾರತದ ಷರತ್ತಿಗೆ ನಮ್ಮ ಸಮ್ಮತಿಯಿಲ್ಲ: ಪಿಸಿಬಿ ಮೊಂಡಾಟ

    ಇದು ಪಾಕಿಸ್ತಾನದ ಪ್ರತಿಷ್ಠೆ, ಭಾರತದ ಷರತ್ತಿಗೆ ನಮ್ಮ ಸಮ್ಮತಿಯಿಲ್ಲ: ಪಿಸಿಬಿ ಮೊಂಡಾಟ

    – ಕ್ರೀಡಾಂಗಣ ನವೀಕರಣಕ್ಕೆ 17 ಶತಕೋಟಿ ಖರ್ಚು

    ಇಸ್ಲಾಮಾಬಾದ್‌: ಹೈಬ್ರಿಡ್‌ ಮಾದರಿಯಲ್ಲಿ ಚಾಂಪಿಯನ್ಸ್‌ ಟ್ರೋಫಿ ಆಯೋಜಿಸುವ ವಿಚಾರದಲ್ಲಿ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ಮತ್ತೆ ಕ್ಯಾತೆ ತೆಗೆದಿದೆ. ಇದು ಪಾಕಿಸ್ತಾನದ ಗೌರವ, ಪ್ರತಿಷ್ಠೆ. ಬಿಸಿಸಿಐ ಷರತ್ತಿನಂತೆ ಹೈಬ್ರಿಡ್‌ ಮಾದರಿಯಲ್ಲಿ ಆಯೋಜಿಸಲಾಗುವುದಿಲ್ಲ ಎಂದು ಪಿಸಿಬಿ ಮುಖ್ಯಸ್ಥ ಮೊಹ್ಸಿನ್ ನಖ್ವಿ ಹೇಳಿದ್ದಾರೆ.

    ಸೋಮವಾರ ಲಾಹೋರ್‌ನ ಗಡಾಫಿ ಸ್ಟೇಡಿಯಂನಲ್ಲಿ ನವೀಕರಣ ಕಾಮಗಾರಿ ವೀಕ್ಷಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಿಸಿಬಿ ಹೈಬ್ರಿಡ್‌ ಮಾದರಿಯಲ್ಲಿ ಟೂರ್ನಿ ಆಯೋಜಿಸಲು ಉತ್ಸುಕವಾಗಿಲ್ಲ. ಚಾಂಪಿಯನ್ಸ್‌ ಟ್ರೋಫಿ ವಿಚಾರದಲ್ಲಿ ಐಸಿಸಿ ನಿರ್ಧಾರಕ್ಕಾಗಿ ಕಾಯುತ್ತಿದ್ದೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಟೀಂ ಇಂಡಿಯಾಕ್ಕೆ ಉಗ್ರರ ದಾಳಿಯದ್ದೇ ಭೀತಿ – ಐಸಿಸಿ ಬಳಿ ಇರೋದು ಮೂರೇ ಆಯ್ಕೆ

    ಈಗಾಗಲೇ ಟ್ರೋಫಿ ಆಯೋಜಿಸುವ ಸಲುವಾಗಿ ಕರಾಚಿ, ಲಾಹೋರ್ ಮತ್ತು ರಾವಲ್ಪಿಂಡಿ ಕ್ರೀಡಾಂಗಣಗಳನ್ನು ನವೀಕರಿಸಲು ಪಾಕಿಸ್ತಾನವು 17 ಶತಕೋಟಿ ರೂ.ಗಳನ್ನ ವಿನಿಯೋಗಿಸಿದೆ. ಅಲ್ಲದೇ ಇದು ಪಾಕಿಸ್ತಾನದ ಪ್ರತಿಷ್ಠೆಯಾಗಿದ್ದು, ಭಾರತ ತಂಡಕ್ಕಾಗಿ ಎದುರು ನೋಡುತ್ತಿದ್ದೇವೆ. ಕ್ರೀಡೆ ಮತ್ತು ರಾಜಕೀಯ ಪ್ರತ್ಯೇಕ ವಿಷಯಗಳು, ನಾವು ಎರಡನ್ನು ಒಟ್ಟಿಗೆ ಸೇರಿಸುವುದಿಲ್ಲ. ಚಾಂಪಿಯನ್ಸ್ ಟ್ರೋಫಿಗೆ ಅರ್ಹತೆ ಪಡೆದಿರುವ ಎಲ್ಲಾ ತಂಡಗಳು ಬರಲು ಸಿದ್ಧವಾಗಿವೆ. ಭಾರತಕ್ಕೆ ಕಾಳಜಿ ಇದ್ದರೆ ಬರಲಿ. ನಾವು ಕಾಳಜಿಯಿಂದ ನೋಡಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ.

    ಈಗಾಗಲೇ ಐಸಿಸಿಗೆ ವೇಳಾಪಟ್ಟಿಯನ್ನು ಕಳಿಸಿದ್ದೇವೆ. ಮುಲ್ತಾನ್‌, ರಾವಲ್ಪಿಂಡಿ ಹಾಗೂ ಲಾಹೋರ್‌ ಕ್ರೀಡಾಂಗಣಗಳು ಟ್ರೋಫಿ ಆತಿಥ್ಯ ವಹಿಸುತ್ತಿವೆ. ಭಾರತದ ಎಲ್ಲ ಪಂದ್ಯಗಳೂ ಲಾಹೋರ್‌ ಕ್ರೀಡಾಂಗಣದಲ್ಲಿ ನಿಗದಿಯಾಗಿವೆ. ಶೀಘ್ರದಲ್ಲೇ ಐಸಿಸಿ ಅಂತಿಮ ವೇಳಾಪಟ್ಟಿ ಪ್ರಕಟಿಸುವ ನಿರೀಕ್ಷೆಯಿದೆ. ಹಾಗಾಗಿ ಪಾಕ್‌ ತನ್ನ ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: 46 ಬೌಂಡರಿ, 12 ಸಿಕ್ಸರ್‌ – ಒಂದೇ ಇನ್ನಿಂಗ್ಸ್‌ನಲ್ಲಿ ಅಜೇಯ 426 ರನ್‌ ಚಚ್ಚಿ ಹೊಸ ದಾಖಲೆ ಸೃಷ್ಟಿ!

    ಬಿಸಿಸಿಐ ಷರತ್ತು ಏನು?
    ಚಾಂಪಿಯನ್ಸ್‌ ಟ್ರೋಫಿಗಾಗಿ ಭಾರತ ತಂಡವು ಪಾಕಿಸ್ತಾನಕ್ಕೆ (Pakistan) ಬರುವುದಿಲ್ಲ ಎಂದು ಬಿಸಿಸಿಐ ಹೇಳಿದೆ. ಜೊತೆಗೆ ಭಾರತದ ಎಲ್ಲಾ ಪಂದ್ಯಗಳನ್ನು ದುಬೈಗೆ ಸ್ಥಳಾಂತರಿಸುವಂತೆ ಬೇಡಿಕೆಯಿಟ್ಟಿದೆ. ಇದನ್ನೂ ಓದಿ: Champions Trophy | ಪಾಕ್‌ ಆಕ್ರಮಿತ ಕಾಶ್ಮೀರ ಪ್ರವಾಸಕ್ಕೆ ಬಿಸಿಸಿಐ ಆಕ್ಷೇಪ, ನೋ ಎಂದ ಐಸಿಸಿ

    ಐಸಿಸಿ ಮುಂದಿರುವ ಆಯ್ಕೆಗಳೇನು?
    ಆಯ್ಕೆ – 1
    ಬಿಸಿಸಿಐಯ ಹೈಬ್ರಿಡ್ ಮಾದರಿಯ ಪ್ರಸ್ತಾಪ ಒಪ್ಪಿಕೊಳ್ಳಲು ಪಾಕಿಸ್ತಾನ ಕ್ರಿಕೆಟ್‌ ಮಂಡಳಿಗೆ ಮನವರಿಕೆ ಮಾಡಿ, ಇದು ಪಂದ್ಯಾವಳಿಯ 15 ಪಂದ್ಯಗಳಲ್ಲಿ ಐದು ಪಂದ್ಯಗಳನ್ನು ಯುಎಇಗೆ ಸ್ಥಳಾಂತರಿಸುವುದು.
    ಆಯ್ಕೆ – 2
    ಚಾಂಪಿಯನ್ಸ್ ಟ್ರೋಫಿ ಟೂರ್ನಿಯನ್ನು ಸಂಪೂರ್ಣವಾಗಿ ಪಾಕಿಸ್ತಾನದಿಂದ ತೆಗೆದುಹಾಕುವುದು. ಇದರಿಂದ ಟ್ರೋಫಿಯಿಂದ ಪಾಕ್‌ ತಂಡ ದೂರ ಉಳಿಯಲಿದೆ.
    ಆಯ್ಕೆ – 3
    ಅನಿರ್ದಿಷ್ಟಾವಧಿವರೆಗೆ ಚಾಂಪಿಯನ್ಸ್ ಟ್ರೋಫಿ ಮುಂದೂಡುವುದು. ಈ ನಿರ್ಧಾರವು ICC ಮತ್ತು PCB ಎರಡರ ಆದಾಯದ ಮೇಲೆ ಭಾರಿ ಪರಿಣಾಮ ಬೀರಬಹುದು.

  • Champions Trophy | ಪಾಕ್‌ ಆಕ್ರಮಿತ ಕಾಶ್ಮೀರ ಪ್ರವಾಸಕ್ಕೆ ಬಿಸಿಸಿಐ ಆಕ್ಷೇಪ, ನೋ ಎಂದ ಐಸಿಸಿ

    Champions Trophy | ಪಾಕ್‌ ಆಕ್ರಮಿತ ಕಾಶ್ಮೀರ ಪ್ರವಾಸಕ್ಕೆ ಬಿಸಿಸಿಐ ಆಕ್ಷೇಪ, ನೋ ಎಂದ ಐಸಿಸಿ

    ಇಸ್ಲಾಮಾಬಾದ್‌/ಶ್ರೀನಗರ: ಭಾರತ ಮತ್ತು ಪಾಕಿಸ್ತಾನದ (Ind vs Pak) ನಡುವೆ ಚಾಂಪಿಯನ್ಸ್‌ ಟ್ರೋಫಿ-2025 (Champions Trophy 2025) ಆಯೋಜನೆ ಕುರಿತು ಹಗ್ಗಜಗ್ಗಾಟ ನಡೆಯುತ್ತಿದೆ. ಈ ಬಾರಿಯ ಆತಿಥ್ಯ ಪಾಕ್‌ ಕೈಯಲ್ಲೇ ಇದ್ದರೂ ಐಸಿಸಿ ಪಾಲಿಗೆ ಚಿನ್ನದ ಮೊಟ್ಟೆಯಾಗಿರುವ ಬಿಸಿಸಿಐ ನಿರ್ಧಾರದ ಮೇಲೆ ಐಸಿಸಿ (ICC) ಸ್ಥಳ ನಿಗದಿ ಮಾಡುವ ಬಗ್ಗೆ‌ ನಿರ್ಧಾರಕ್ಕೆ ಮುಂದಾಗಿದೆ. ಈ ನಡುವೆ ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ (POK) ಟ್ರೋಫಿ ಪ್ರವಾಸವನ್ನು ರದ್ದುಗೊಳಿಸಲು ಐಸಿಸಿ ನಿರ್ಧರಿಸಿದೆ.

    ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ (Jay Shah), ಪಾಕಿಸ್ತಾನ ಕ್ರಿಕೆಟ್‌ ಮಂಡಳಿಯ ನಿರ್ಧಾರದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ನಂತರ ಪಿಒಕೆ ವ್ಯಾಪ್ತಿಯಲ್ಲಿರುವ ಸ್ಕರ್ದು, ಮುರ್ರೆ ಮತ್ತು ಮುಜಫರಾಬಾದ್‌ಗೆ ಚಾಂಪಿಯನ್ಸ್‌ ಟ್ರೋಫಿಯನ್ನು ಸ್ಥಳಾಂತರಿಸಲಾಗುವುದಿಲ್ಲ ಎಂದು ಐಸಿಸಿ ಹೇಳಿದೆ. ಅಲ್ಲದೇ ಟ್ರೋಫಿ ಪ್ರವಾಸದ ಕುರಿತು ಅಂತಿಮಗೊಳಿಸುವ ಬಗ್ಗೆ ಚರ್ಚೆಯಲ್ಲಿದ್ದೇವೆ. ಯಾವುದೇ ತೀರ್ಮಾನವನ್ನು ಐಸಿಸಿಯೇ ಪ್ರಕಟಿಸಲಿದೆ. ವದಂತಿಗಳಿಗೆ ಕಿವಿಗೊಡಬೇಡಿ ಎಂದು ಹೇಳಿದೆ.

    ಮುಂದಿನ ವರ್ಷ 2025ರ ಫೆಬ್ರವರಿ 19 ರಿಂದ ಮಾರ್ಚ್ 9ರ ವರೆಗೆ ಐಸಿಸಿ ಚಾಂಪಿಯನ್‌ಶಿಪ್ ಟ್ರೋಫಿ ಪಂದ್ಯಗಳು ನಡೆಯಲಿವೆ. ಪಾಕಿಸ್ತಾನದ ರಾವಲ್ಪಿಂಡಿ, ಮುಲ್ತಾನ್‌ ಹಾಗೂ ಲಾಹೋರ್‌ ಕ್ರೀಡಾಂಗಣಗಳು ಟೂರ್ನಿಗೆ ಆತಿಥ್ಯ ವಹಿಸಿವೆ. ಭಾರತದ ಎಲ್ಲಾ ಪಂದ್ಯಗಳು ಲಾಹೋರ್‌ನಲ್ಲಿ ನಿಗದಿಯಾಗಿವರೆ. ಬಿಸಿಸಿಐ ಈಗಾಗಲೇ ಟೀಂ ಇಂಡಿಯಾ ಪಾಕಿಸ್ತಾನಕ್ಕೆ ಪ್ರಯಾಣ ಮಾಡಲು ನಿರಾಕರಿಸಿರೋದ್ರಿಂದ ಭಾರತದ ಪಂದ್ಯಗಳು ದುಬೈನಲ್ಲಿ ನಡೆಯಲಿವೆ ಎಂದು ಹೇಳಲಾಗುತ್ತಿದೆ. ಆದ್ರೆ ಪಿಸಿಬಿ ಈ ಹೇಳಿಕೆಗಳನ್ನು ತಳ್ಳಿಹಾಕಿದೆ.

    ಐಸಿಸಿ ಮುಂದಿರುವ ಆಯ್ಕೆಗಳೇನು?
    ಆಯ್ಕೆ – 1
    ಬಿಸಿಸಿಐಯ ಹೈಬ್ರಿಡ್ ಮಾದರಿಯ ಪ್ರಸ್ತಾಪ ಒಪ್ಪಿಕೊಳ್ಳಲು ಪಾಕಿಸ್ತಾನ ಕ್ರಿಕೆಟ್‌ ಮಂಡಳಿಗೆ ಮನವರಿಕೆ ಮಾಡಿ, ಇದು ಪಂದ್ಯಾವಳಿಯ 15 ಪಂದ್ಯಗಳಲ್ಲಿ ಐದು ಪಂದ್ಯಗಳನ್ನು ಯುಎಇಗೆ ಸ್ಥಳಾಂತರಿಸುವುದು.
    ಆಯ್ಕೆ – 2
    ಚಾಂಪಿಯನ್ಸ್ ಟ್ರೋಫಿ ಟೂರ್ನಿಯನ್ನು ಸಂಪೂರ್ಣವಾಗಿ ಪಾಕಿಸ್ತಾನದಿಂದ ತೆಗೆದುಹಾಕುವುದು. ಇದರಿಂದ ಟ್ರೋಫಿಯಿಂದ ಪಾಕ್‌ ತಂಡ ದೂರ ಉಳಿಯಲಿದೆ.
    ಆಯ್ಕೆ – 3
    ಅನಿರ್ದಿಷ್ಟಾವಧಿವರೆಗೆ ಚಾಂಪಿಯನ್ಸ್ ಟ್ರೋಫಿ ಮುಂದೂಡುವುದು. ಈ ನಿರ್ಧಾರವು ICC ಮತ್ತು PCB ಎರಡರ ಆದಾಯದ ಮೇಲೆ ಭಾರಿ ಪರಿಣಾಮ ಬೀರಬಹುದು.

    ಒಂದು ವೇಳೆ, ಭಾರತ ತಂಡವು ಚಾಂಪಿಯನ್ಸ್ ಟ್ರೋಫಿ ಪಾಲ್ಗೊಳ್ಳುವಿಕೆಯಿಂದ ಹಿಂದಕ್ಕೆ ಸರಿದರೆ ಐಸಿಸಿಗೆ ನೂರಾರು ಕೋಟಿ ಮತ್ತು ಪಾಕಿಸ್ತಾನಕ್ಕೆ ಸುಮಾರು 1,800 ಕೋಟಿ ನಷ್ಟವಾಗಲಿದೆ ಎಂದು ಅಂದಾಜಿಸಲಾಗಿದೆ. ಬಿಸಿಸಿಐ, ಈಗಾಗಲೇ ಹೈಬ್ರಿಡ್ ಮಾದರಿಗೆ ಒತ್ತಡ ಹೇರುತ್ತಿದೆ. ಐಸಿಸಿ ಕೂಡ ಈ ಬಗ್ಗೆ ಚಿಂತನೆ ನಡೆಸಿದೆ. ಒಂದು ವೇಳೆ ಪಾಕ್‌ ಟೂರ್ನಿ ಆಯೋಜನೆಯಿಂದ ಹಿಂದೆ ಸರಿದರೆ, ಇಡೀ ಟೂರ್ನಿಯನ್ನೇ ದಕ್ಷಿಣ ಆಫ್ರಿಕಾದಲ್ಲಿ ಆಯೋಜನೆ ಮಾಡುವ ಬಗ್ಗೆಯೂ ಮಾತುಕತೆ ನಡೆಯುತ್ತಿದೆ ಎಂದು ವರದಿಗಳು ತಿಳಿಸಿವೆ.

  • ಟೀಂ ಇಂಡಿಯಾಕ್ಕೆ ಉಗ್ರರ ದಾಳಿಯದ್ದೇ ಭೀತಿ – ಐಸಿಸಿ ಬಳಿ ಇರೋದು ಮೂರೇ ಆಯ್ಕೆ

    ಟೀಂ ಇಂಡಿಯಾಕ್ಕೆ ಉಗ್ರರ ದಾಳಿಯದ್ದೇ ಭೀತಿ – ಐಸಿಸಿ ಬಳಿ ಇರೋದು ಮೂರೇ ಆಯ್ಕೆ

    ಮುಂಬೈ/ಅಬುದಾಬಿ: 2025ರ ಚಾಂಪಿಯನ್ಸ್‌ ಟ್ರೋಫಿ (Champions Trophy 2025) ಎಲ್ಲಿ, ಯಾವಾಗ ನಡೆಯುತ್ತದೆ? ಎಂಬುದು ವಿಶ್ವ ಕ್ರಿಕೆಟ್‌ನಲ್ಲಿ ದೊಡ್ಡ ಪ್ರಶ್ನೆಯಾಗಿದೆ. ಈ ನಡುವೆ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ ಐಸಿಸಿಗೆ ಬರೆದ ಪತ್ರದಲ್ಲಿ ಉಗ್ರರ ದಾಳಿಯ (Terrorists Attack) ಭೀತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದೆ ಎಂದು ವರದಿಯಾಗಿದೆ.

    ಈ ಬಾರಿ ʻಚಾಂಪಿಯನ್ಸ್‌ ಟ್ರೋಫಿʼಯ ಆತಿಥ್ಯ ಪಾಕ್‌ ಬಳಿಯೇ ಇದ್ದರೂ, ವಿಶ್ವದ ಪವರ್‌ಫುಲ್‌ ಕ್ರಿಕೆಟ್‌ ಸಂಸ್ಥೆ ಬಿಸಿಸಿಐ (BCCI) ನಿರ್ಧಾರದ ಮೇಲೆ ನಿಂತಿದೆ. ಬಿಸಿಸಿಐ ಬಿಲ್‌ಕುಲ್‌ ಬರಲ್ಲ ಎಂದು ಹೇಳಿದ್ದರೂ, ಪಾಕ್‌ ತನ್ನ ನಿಲುವಿನಿಂದ ಹಿಂದೆ ಸರಿದಿಲ್ಲ. ಭಾರತ ಬಾರದಿದ್ದರೂ ಚಾಂಪಿಯನ್ಸ್‌ ಟ್ರೋಫಿ ಪಾಕ್‌ನಲ್ಲಿ (Pakistan) ನಡೆಸುವುದಾಗಿ ಪಟ್ಟು ಹಿಡಿದಿದೆ. ಅಲ್ಲದೇ ಟೀಂ ಇಂಡಿಯಾ ಪಾಕ್‌ಗೆ ಪ್ರಯಾಣಿಸದಿರಲು ಲಿಖಿತ ರೂಪದಲ್ಲಿ ಐಸಿಸಿಗೆ ಕಾರಣ ತಿಳಿಸುವಂತೆ ಹೇಳಿತ್ತು. ಅದರಂತೆ ಬಿಸಿಸಿಐ ಐಸಿಸಿಗೆ (ICC) ಕಾರಣ ತಿಳಿಸಿದೆ.

    ಬಿಸಿಸಿಐ, ಐಸಿಸಿಗೆ ಬರೆದ ಪತ್ರದಲ್ಲಿ, ಟೀಂ ಇಂಡಿಯಾ (Team India) ಕ್ರಿಕೆಟ್‌ ಆಟಗಾರ ಸುರಕ್ಷತೆಯ ಬಗ್ಗೆ ಬಿಸಿಸಿಐ ಉಲ್ಲೇಖಿಸಿರುವುದಾಗಿ ʻಸ್ಪೋರ್ಟ್ಸ್‌ ಟಾಕ್‌ʼ ವರದಿ ಮಾಡಿದೆ. ಇದನ್ನೂ ಓದಿ: Ranji Trophy: ಇನ್ನಿಂಗ್ಸ್‌ನ ಎಲ್ಲಾ 10 ವಿಕೆಟ್‌ ಕಿತ್ತು ದಾಖಲೆ ಬರೆದ ಅಂಶುಲ್‌ ಕಾಂಬೋಜ್‌

    ಹೌದು. ಪಾಕಿಸ್ತಾನದಲ್ಲಿ ನಡೆಯುತ್ತಿರುವ ಭಯೋತ್ಪಾದಕ ಕೃತ್ಯಗಳ ಬಗ್ಗೆ ಬಿಸಿಸಿಐಗೆ ಕಳವಳವಿದೆ. ಈಗ ಗಡಿಯಾಚೆಗೆ ಭಯೋತ್ಪಾದನೆ ನಡೆಯುತ್ತಿದೆ. ಭಾರತೀಯ ಕ್ರಿಕೆಟ್‌ ತಂಡ ಸಾಮಾನ್ಯರಿಂದ ಪ್ರೀತಿ ಗಳಿಸಬಹುದಾದರೂ ಉಗ್ರರಿಂದ ದಾಳಿಗೆ ಗುರಿಯಾಗುವ ಸಾಧ್ಯತೆ ಹೆಚ್ಚಾಗಿದೆ. 2009ರ ಟಿ20 ವಿಶ್ವಕಪ್‌ ವೇಳೆ ಶ್ರೀಲಂಕಾ ತಂಡದ ಮೇಲೆ ಆಗಿದ್ದ ದಾಳಿಯೇ ಇದಕ್ಕೆ ಉದಾಹರಣೆ ಎಂದು ಬಿಸಿಸಿಐ, ಐಸಿಸಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಚಾಂಪಿಯನ್ಸ್ ಟ್ರೋಫಿಗಾಗಿ ಟೀಂ ಇಂಡಿಯಾ ಪಾಕಿಸ್ತಾನಕ್ಕೆ ಬರಲ್ಲ; ಹೊಸ ಷರತ್ತು ಮುಂದಿಟ್ಟ ಬಿಸಿಸಿಐ

    ಸದ್ಯ ಬಿಸಿಸಿಐ ಮತ್ತು ಪಿಸಿಬಿ ತಮ್ಮ ನಿಲುವುಗಳಿಂದ ಹಿಂದೆ ಸರಿಯಲು ಸಿದ್ಧರಿಲ್ಲ. ಆದರೂ ಸಮಸ್ಯೆ ಬಗೆಹರಿಸುವ ಜವಾಬ್ದಾರಿ ಐಸಿಸಿ ಮೇಲಿದ್ದು, ಟೂರ್ನಿ ನಡೆಸಲು ಮೂರು ಆಯ್ಕೆಗಳು ಮಾತ್ರ ಇವೆ ಎಂದು ಹೇಳಲಾಗಿದೆ. ಇದನ್ನೂ ಓದಿ: ಭಾರತ ಬರಲಿ, ಬಾರದೇ ಇರಲಿ ನಾವು ಚಾಂಪಿಯನ್ಸ್‌ ಟ್ರೋಫಿ ಆಯೋಜಿಸುತ್ತೇವೆ: ಪಾಕಿಸ್ತಾನ

    ಆಯ್ಕೆ – 1
    ಬಿಸಿಸಿಐಯ ಹೈಬ್ರಿಡ್ ಮಾದರಿಯ ಪ್ರಸ್ತಾಪ ಒಪ್ಪಿಕೊಳ್ಳಲು ಪಾಕಿಸ್ತಾನ ಕ್ರಿಕೆಟ್‌ ಮಂಡಳಿಗೆ ಮನವರಿಕೆ ಮಾಡಿ, ಇದು ಪಂದ್ಯಾವಳಿಯ 15 ಪಂದ್ಯಗಳಲ್ಲಿ ಐದು ಪಂದ್ಯಗಳನ್ನು ಯುಎಇಗೆ ಸ್ಥಳಾಂತರಿಸುವುದು.

    ಆಯ್ಕೆ – 2
    ಚಾಂಪಿಯನ್ಸ್ ಟ್ರೋಫಿ ಟೂರ್ನಿಯನ್ನು ಸಂಪೂರ್ಣವಾಗಿ ಪಾಕಿಸ್ತಾನದಿಂದ ತೆಗೆದುಹಾಕುವುದು. ಇದರಿಂದ ಟ್ರೋಫಿಯಿಂದ ಪಾಕ್‌ ತಂಡ ದೂರ ಉಳಿಯಲಿದೆ.

    ಆಯ್ಕೆ – 3
    ಅನಿರ್ದಿಷ್ಟಾವಧಿವರೆಗೆ ಚಾಂಪಿಯನ್ಸ್ ಟ್ರೋಫಿ ಮುಂದೂಡುವುದು. ಈ ನಿರ್ಧಾರವು ICC ಮತ್ತು PCB ಎರಡರ ಆದಾಯದ ಮೇಲೆ ಭಾರಿ ಪರಿಣಾಮ ಬೀರಬಹುದು.

    2006ರಲ್ಲಿ ಭಾರತ ಕೊನೆಯ ಬಾರಿಗೆ ಪಾಕಿಸ್ತಾನ ಪ್ರವಾಸ ಕೈಗೊಂಡಿತ್ತು. ನಂತರ ಉಭಯ ರಾಷ್ಟ್ರಗಳ ನಡುವೆ ದ್ವಿಪಕ್ಷೀಯ ಸರಣಿ ನಡೆದಿಲ್ಲ. ಐಸಿಸಿ ಟೂರ್ನಿಗಳಲ್ಲಿ ಮಾತ್ರವೇ ಪಾಲ್ಗೊಳ್ಳುತ್ತಿವೆ.

  • ನಾವು ಪಾಕಿಸ್ತಾನದ ಭಾಗವಾಗಲ್ಲ: ಉಗ್ರರ ದಾಳಿಗೆ ಫಾರೂಕ್‌ ಅಬ್ದುಲ್ಲಾ ಕೆಂಡ

    ನಾವು ಪಾಕಿಸ್ತಾನದ ಭಾಗವಾಗಲ್ಲ: ಉಗ್ರರ ದಾಳಿಗೆ ಫಾರೂಕ್‌ ಅಬ್ದುಲ್ಲಾ ಕೆಂಡ

    ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಉಗ್ರರ ದಾಳಿ ವಿರುದ್ಧ ನ್ಯಾಷನಲ್‌ ಕಾನ್ಫರೆನ್ಸ್‌ ನಾಯಕ ಫಾರೂಕ್‌ ಅಬ್ದುಲ್ಲಾ ಗರಂ ಆಗಿದ್ದಾರೆ. ನಾವು ಪಾಕಿಸ್ತಾನದ ಭಾಗವಾಗುವುದಿಲ್ಲ ಎಂದು ತಿಳಿಸಿದ್ದಾರೆ.

    ಅವರ ಕಾಮೆಂಟ್ ಹಿಂದಿನ ರಾಜ್ಯದಲ್ಲಿ ನಡೆದ ಆತಂಕಕಾರಿ ಸರಣಿಯ ಭಯೋತ್ಪಾದಕ ದಾಳಿಯನ್ನು ಅನುಸರಿಸುತ್ತದೆ, ಇದರಲ್ಲಿ ಗುರುವಾರ ತಡರಾತ್ರಿ ಬಾರಾಮುಲ್ಲಾದಲ್ಲಿ ಸೇನಾ ವಾಹನವನ್ನು ಗುರಿಯಾಗಿಸಿಕೊಂಡು ನಾಲ್ಕು ಜನರು – ಇಬ್ಬರು ಸೈನಿಕರು ಮತ್ತು ಇಬ್ಬರು ನಾಗರಿಕರು ಕೊಲ್ಲಲ್ಪಟ್ಟರು. ಮೂರು ದಿನಗಳ ಹಿಂದೆ ಆರು ಕಟ್ಟಡ ಕಾರ್ಮಿಕರು ಮತ್ತು ಒಬ್ಬ ವೈದ್ಯರನ್ನು ಗುಂಡಿಕ್ಕಿ ಕೊಲ್ಲಲಾಯಿತು.

    ನಮಗೆ ಸೂಕ್ತ ಪರಿಹಾರ ಸಿಗುವವರೆಗೆ ರಾಜ್ಯದಲ್ಲಿ ಈ (ಭಯೋತ್ಪಾದನಾ ದಾಳಿ) ಮುಂದುವರಿಯುತ್ತದೆ… ನಮಗೆಲ್ಲ ಮೂಲ ಅರಿವಿದೆ. 30 ವರ್ಷಗಳಿಂದ ಅಮಾಯಕರ ಹತ್ಯೆಯನ್ನು ನಾನು ಕಣ್ಣಾರೆ ಕಂಡಿದ್ದೇನೆ. ಅವರು (ಪಾಕಿಸ್ತಾನ) ಏಕೆ ಹೀಗೆ ಮಾಡುತ್ತಿದ್ದಾರೆ. ವಿಧ್ವಂಸಕ ಕೃತ್ಯಗಳನ್ನು ಎಸಗುತ್ತಿದ್ದಾರೆ. ನಾವು ಯಾವಾಗಲೂ ಪಾಕಿಸ್ತಾನದ ಭಾಗವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

    ನಮ್ಮ ಅನೇಕ ಸಹೋದ್ಯೋಗಿಗಳು ಹುತಾತ್ಮರಾಗಿದ್ದಾರೆ. ಆದರೆ ಇದು ಪ್ರತಿ ವರ್ಷವೂ ಮುಂದುವರಿಯುತ್ತದೆ ಇದಕ್ಕೆ ಕಾರಣ ಯಾರು ಎಂದು ನಿಮಗೆ ತಿಳಿದಿದೆ. ಇಂತಹ ಕೃತ್ಯಗಳಿಂದ ಕಾಶ್ಮೀರವು ಪಾಕಿಸ್ತಾನದೊಂದಿಗೆ ಸೇರಿಸಬಹುದು ಎಂದು ಅವರು ತಪ್ಪಾಗಿ ಭಾವಿಸಿದ್ದಾರೆಂದು ಟೀಕಿಸಿಸಿದ್ದಾರೆ.

    ಅವರು ತಮ್ಮ ರಾಷ್ಟ್ರ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಗಮನಹರಿಸಬೇಕು. ಇದನ್ನು ಕೊನೆಗಾಣಿಸಲು ಮತ್ತು ಸ್ನೇಹದಿಂದಿರಲು ಒಂದು ಮಾರ್ಗವನ್ನು ಕಂಡುಕೊಳ್ಳಲು ನಾನು ಅವರನ್ನು ಒತ್ತಾಯಿಸುತ್ತೇನೆ. ಇಲ್ಲದಿದ್ದರೆ, ಸಮಸ್ಯೆಗಳು ಉದ್ಭವಿಸುತ್ತವೆ ಎಂದು ಪಾಕಿಸ್ತಾನಕ್ಕೆ ಎಚ್ಚರಿಸಿದ್ದಾರೆ.

  • ಜಮ್ಮು-ಕಾಶ್ಮೀರದಲ್ಲಿ ಉಗ್ರರ ದಾಳಿ – ಭಾರತೀಯ ಸೇನೆಯ ಇಬ್ಬರು ಯೋಧರು ಹುತಾತ್ಮ

    ಜಮ್ಮು-ಕಾಶ್ಮೀರದಲ್ಲಿ ಉಗ್ರರ ದಾಳಿ – ಭಾರತೀಯ ಸೇನೆಯ ಇಬ್ಬರು ಯೋಧರು ಹುತಾತ್ಮ

    – ಭಯೋತ್ಪಾದರ ದಾಳಿಗೆ ಇಬ್ಬರು ವಲಸೆ ಕಾರ್ಮಿಕರು ಬಲಿ

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu And Kashmir) ಬಾರಾಮುಲ್ಲಾದಲ್ಲಿ ಗುರುವಾರ ನಡೆದ ಉಗ್ರರ ದಾಳಿಯಲ್ಲಿ ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ದಾಳಿಯಲ್ಲಿ ಇಬ್ಬರು ಹಮಾಲರು ಕೂಡ ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿದ್ದಾರೆ. ಭಾರತೀಯ ಸೇನೆಯ ಚಿನಾರ್ ಕಾರ್ಪ್ಸ್ ಎಕ್ಸ್‌ನಲ್ಲಿ ಪೋಸ್ಟ್‌ ಹಾಕಿದ್ದು, ಬಾರಾಮುಲ್ಲಾದ ಬುತಪತ್ರಿಯ ಸಾಮಾನ್ಯ ಪ್ರದೇಶದಲ್ಲಿ ಸೈನಿಕರು ಮತ್ತು ಭಯೋತ್ಪಾದಕರ ನಡುವೆ ಗುಂಡಿನ ಚಕಮಕಿ ನಡೆದಿದೆ ಎಂದು ಖಚಿತಪಡಿಸಿದೆ. ಇದನ್ನೂ ಓದಿ: ಸುಪ್ರೀಂ ಕೋರ್ಟ್‌ನ ನೂತನ ಸಿಜೆಐ ಆಗಿ ಸಂಜೀವ್‌ ಖನ್ನಾ ನೇಮಕ – ನ.11ರಂದು ಪ್ರಮಾಣ ವಚನ

    ಇಂದು ಸಂಜೆ ಬೂತಪತ್ರಿಯಲ್ಲಿ ಸೇನಾ ವಾಹನದ ಮೇಲೆ ಉಗ್ರರು ಮೊದಲು ದಾಳಿ ನಡೆಸಿದ್ದರು. ಜಮ್ಮು ಮತ್ತು ಕಾಶ್ಮೀರದಲ್ಲಿ ಕಾರ್ಮಿಕನೊಬ್ಬನ ಮೇಲೆ ಗುಂಡು ಹಾರಿಸಲಾಗಿತ್ತು. ಇದಾದ ಕೆಲವೇ ಗಂಟೆಗಳ ನಂತರ ಈ ದಾಳಿ ನಡೆದಿದೆ. ಗಾಯಗೊಂಡ ವ್ಯಕ್ತಿಯು ಉತ್ತರ ಪ್ರದೇಶದ ನಿವಾಸಿ ಪ್ರೀತಮ್ ಸಿಂಗ್ ಎಂದು ಗುರುತಿಸಲಾಗಿದೆ.

    ಸೇನಾ ವಾಹನದ ಮೇಲೆ ಇಂದು ನಡೆದ ದಾಳಿಯು ಕೇಂದ್ರಾಡಳಿತ ಪ್ರದೇಶದಲ್ಲಿ ಕಳೆದ 72 ಗಂಟೆಗಳಲ್ಲಿ ನಡೆದ ಎರಡನೇ ದಾಳಿಯಾಗಿದೆ. ಮೂರು ದಿನಗಳ ಹಿಂದೆ ಇಬ್ಬರು ಭಯೋತ್ಪಾದಕರು ಸುರಂಗವನ್ನು ನಿರ್ಮಿಸುವ ಕಾರ್ಮಿಕರ ವಸತಿ ಶಿಬಿರದ ಮೇಲೆ ದಾಳಿ ಮಾಡಿದ್ದರು. ದಾಳಿಯಲ್ಲಿ ಆರು ಮಂದಿ ಕಾರ್ಮಿಕರು ಮತ್ತು ಒಬ್ಬ ವೈದ್ಯ ಹತ್ಯೆಯಾಗಿದ್ದರು. ಹತ್ಯೆಯಾದವರು ಕಾಶ್ಮೀರದ ನಾಯೀದ್ಗಾಮ್‌ನ ಬದ್ಗಾಮ್‌ನ ಡಾ.ಶಹನವಾಜ್ ಮತ್ತು ಪಂಜಾಬ್‌ನ ಗುರುದಾಸ್‌ಪುರದ ಗುರ್ಮೀತ್ ಸಿಂಗ್ ಹಾಗೂ ಬಿಹಾರದ ಮೊಹಮ್ಮದ್ ಹನೀಫ್, ಫಹೀಮ್ ನಾಸಿರ್ ಮತ್ತು ಕಲೀಂ ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಬಿಹಾರ, ಆಂಧ್ರಕ್ಕೆ ಬಂಪರ್‌ ಗಿಫ್ಟ್‌ – 6,798 ಕೋಟಿ ಮೊತ್ತದ 2 ರೈಲ್ವೇ ಯೋಜನೆಗಳಿಗೆ ಕೇಂದ್ರ ಕ್ಯಾಬಿನೆಟ್ ಅಸ್ತು

  • ಗೌರವದಿಂದ ಬಾಳಿ ಬದುಕೋಣ, ದಾಳಿ ನಿಲ್ಲಿಸಿ – ಪಾಕಿಸ್ತಾನಕ್ಕೆ ಫಾರೂಕ್‌ ಅಬ್ದುಲ್ಲಾ ಮನವಿ

    ಗೌರವದಿಂದ ಬಾಳಿ ಬದುಕೋಣ, ದಾಳಿ ನಿಲ್ಲಿಸಿ – ಪಾಕಿಸ್ತಾನಕ್ಕೆ ಫಾರೂಕ್‌ ಅಬ್ದುಲ್ಲಾ ಮನವಿ

    – ಬುದ್ಗಾಮ್‌ ಕ್ಷೇತ್ರ ತ್ಯಜಿಸಿದ ಜಮ್ಮು & ಕಾಶ್ಮೀರ ಸಿಎಂ ಒಮರ್ ಅಬ್ದುಲ್ಲಾ

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu-Kashmir) ಗಂದರ್‌ಬಾಲ್ ಜಿಲ್ಲೆಯ ಸೋನಾಮಾರ್ಗ್ ಪ್ರದೇಶದಲ್ಲಿ 6 ಮಂದಿ ವಲಸೆ ಕಾರ್ಮಿಕರು ಮತ್ತು ವೈದ್ಯರೊಬ್ಬರನ್ನು ಭಯೋತ್ಪಾದಕರು ಗುಂಡಿಕ್ಕಿ ಕೊಂದಿರುವ ಘಟನೆ ಒಂದು ದಿನದ ಹಿಂದೆಯಷ್ಟೇ ನಡೆದಿದೆ. ಈ ಘಟನೆಯನ್ನು ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್‌ ಅಬ್ದುಲ್ಲಾ (Farooq Abdullah) ತೀವ್ರವಾಗಿ ಖಂಡಿಸಿದ್ದಾರೆ.

    ಈ ಕುರಿತು ಮಾತನಾಡಿರುವ ಅವರು, ಜೀವನಕ್ಕಾಗಿ ಕಷ್ಟಪಟ್ಟು ದುಡಿಯುವ ಬಡ ಕಾರ್ಮಿಕರು ಮತ್ತು ಒಬ್ಬ ವೈದ್ಯರು ದಾಳಿಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಇಂತಹ ದಾಳಿಯಿಂದ ಭಯೋತ್ಪಾದಕರು (Terror Attack) ಏನನ್ನು ಸಾಧಿಸುತ್ತಾರೆ? ಇಂತಹ ದಾಳಿಗಳಿಂದ ಪಾಕಿಸ್ತಾನವನ್ನು ಇಲ್ಲಿ ಸೃಷ್ಟಿಸಬಹುದು ಎಂದು ಭಾವಿಸುತ್ತಾರೆಯೇ? ದಾಳಿಗಳು ನಡೆದ ಮಾತ್ರಕ್ಕೆ ಕಾಶ್ಮೀರ ಪಾಕಿಸ್ತಾನ ಆಗುವುದಿಲ್ಲ ಎಂದು ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ನ.19ರ ವರೆಗೆ ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸಬೇಡಿ: ಉಗ್ರ ಪನ್ನುನ್ ಬೆದರಿಕೆ

    ಜಮ್ಮು ಮತ್ತು ಕಾಶ್ಮೀರ (Jammu and Kashmir) ಹಲವು ವರ್ಷಗಳಿಂದ ಉಗ್ರರ ದಾಳಿಗೆ ಸಾಕ್ಷಿಯಾಗಿದೆ. ಇದನ್ನು ಯಾವಾಗ ಕೊನೆಗೊಳಿಸಬಹುದು ಎಂಬುದರ ಕುರಿತು ಅನೇಕ ಪ್ರಯತ್ನಗಳನ್ನು ನಾವು ಮಾಡುತ್ತಿದ್ದೇವೆ. ಪಾಕಿಸ್ತಾನ ಭಾರತದೊಂದಿಗೆ ಸೌಹಾರ್ದಯುತ ಸಂಬಂಧ ಬೆಳೆಸಲು ಉತ್ಸುಕವಾಗಿದ್ದರೆ, ಇಂತಹ ದಾಳಿಗಳನ್ನು ನಿಲ್ಲಿಸಬೇಕು. ಏಕೆಂದರೆ ಇದು ಭಯೋತ್ಪಾದನೆಯನ್ನು ಕೊನೆಗೊಳಿಸುವ ಸಮಯ. ಅಮಾಯಕರ ಹತ್ಯೆಯಿಂದ ಮಾತುಕತೆ ಹೇಗೆ ಸಾಧ್ಯ? ಇಂತಹ ಭಯೋತ್ಪಾದಕ ದಾಳಿಗಳು ನಮ್ಮೆಲರ ಮೇಲೆ ಪರಿಣಾಮ ಬೀರುತ್ತದೆ. ಪಾಕಿಸ್ತಾನಕ್ಕೆ ಈಗಲೂ ಹೇಳುತ್ತಿದ್ದೇನೆ ಇಂತಹ ದಾಳಿಗಳನ್ನು ನಿಲ್ಲಿಸಿ, ಗೌರವದಿಂದ ಬಾಳಿ ಬದುಕೋಣ ಎಂದು ಮನವಿ ಮಾಡಿದ್ದಾರೆ.

    ವಲಸೆ ಕಾರ್ಮಿಕರ ಹತ್ಯೆಯನ್ನು ಉಗ್ರರ ದಾಳಿ ಎಂದ ಸಿಎಂ:
    ಈ ಘಟನೆಯನ್ನು ಜಮ್ಮು ಮತ್ತು ಕಾಶ್ಮೀರದ ಸಿಎಂ ಒಮರ್‌ ಅಬ್ದುಲ್ಲಾ (Omar Abdullah)  ʻಉಗ್ರರ ದಾಳಿʼ ಕರೆದಿದ್ದಾರೆ. ಈ ಕುರಿತು ಎಕ್ಸ್‌ನಲ್ಲಿ ಪ್ರತಿಕ್ರಿಯೆ ನೀಡಿರುವ J&K ಸಿಎಂ, ಸೋನಾಮಾರ್ಗ್ ಪ್ರದೇಶದ ಗಗಾನ್‌ಗೀರ್‌ನಲ್ಲಿ ಸ್ಥಳೀಯರಲ್ಲದ ವಲಸೆ ಕಾರ್ಮಿಕರ ಮೇಲೆ ಉಗ್ರರ ಭೀಕರ ಮತ್ತು ಹೇಡಿತನದ ದಾಳಿಯ ಅತ್ಯಂತ ದುಃಖದ ಸುದ್ದಿ. ಉಗ್ರರ ದಾಳಿಯಲ್ಲಿ ಕೆಲವರು ಸಾವನ್ನಪ್ಪಿದ್ದಾರೆ. ಇನ್ನೂ ಕೆಲವರು ಗಾಯಗೊಂಡಿದ್ದಾರೆ. ನಿರಾಯುಧ ಮುಗ್ಧ ಜನರ ಮೇಲಿನ ದಾಳಿಉನ್ನು ನಾನು ಬಲವಾಗಿ ಖಂಡಿಸುತ್ತೇನೆ. ಅವರ ಕುಟುಂಬಕ್ಕೆ ನನ್ನ ಸಂತಾಪ ತಿಳಿಸುತ್ತೇನೆ. ಇನ್ನೂ ಗಂಭೀರವಾಗಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಶೀಘ್ರವೇ ಅವರು ಚೇತರಿಸಿಕೊಳ್ಳಲೆಂದು ಪ್ರಾರ್ಥಿಸುವುದಾಗಿ ಬರೆದುಕೊಂಡಿದ್ದಾರೆ.

    ಒಮಾರ್‌ ಅಬ್ದುಲ್ಲಾ ಅವರ ಹೇಳಿಕೆಗೆ ಸೋಶಿಯಲ್‌ ಮೀಡಿಯಾದಲ್ಲಿ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅವರು ʻಭಯೋತ್ಪಾದಕರುʼ ಅನ್ನುವ ಬದಲಿಗೆ, ಉಗ್ರರು ಎಂಬ ಪದವನ್ನು ಏಕೆ ಆಯ್ಕೆ ಮಾಡಕೊಂಡಿದ್ದಾರೆ ಎಂದು ಪ್ರಶ್ನಿಸಿದ್ದಾರೆ. ಪಿಡಿಪಿ ಮುಖ್ಯಸ್ಥೆ ಮಹಬೂಬಾ ಮುಫ್ತಿ ಸಹ ಇದಕ್ಕೆ ಆಕ್ಷೇಪ ವ್ಯಕ್ತಪಸಿದ್ದಾರೆ. ಇದನ್ನೂ ಓದಿ: ವಿಮಾನಗಳಿಗೆ ಬಾಂಬ್ ಬೆದರಿಕೆ ಕರೆ | ಕಾಯ್ದೆ ತಿದ್ದುಪಡಿ ಮಾಡಿ ಕಠಿಣ ಕ್ರಮಕ್ಕೆ ಚಿಂತನೆ : ರಾಮ್ ಮೋಹನ್ ನಾಯ್ಡು

    ಬಡ್‌ಗಾಂವ್ ಕ್ಷೇತ್ರಕ್ಕೆ ಒಮರ್ ಅಬ್ದುಲ್ಲಾ ಗುಡ್‌ಬೈ:
    ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಒಮರ್‌ ಅಬ್ದುಲ್ಲಾ ಅವರು ಸೋಮವಾರ ಬುದ್ಗಾಮ್ ವಿಧಾನಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಭದ್ರಕೋಟೆಯಾಗಿರುವ ಗಂದರ್‌ಬಾಲ್ ಸ್ಥಾನವನ್ನು ಉಳಿಸಿಕೊಂಡಿದ್ದಾರೆ.

    Omar Abdullah

    ದಶಕದ ನಂತರ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಒಮರ್‌ ಅಬ್ದುಲ್ಲಾ, ಗಂದರ್‌ಬಲ್ ಮತ್ತು ಬುದ್ಗಾಮ್ ಎರಡೂ ಕ್ಷೇತ್ರಗಳಲ್ಲೂ ಪ್ರತಿನಿಧಿಸಿ ಗೆದ್ದಿದ್ದರು. ಗಂದರ್‌ಬಲ್‌ನಲ್ಲಿ ಪಿಡಿಪಿಯ ಬಶೀರ್ ಅಹ್ಮದ್ ಮಿರ್ ಅವರನ್ನು 10,000ಕ್ಕೂ ಹೆಚ್ಚು ಮತಗಳಿಂದ ಸೋಲಿಸಿದ್ದರು. ಬುದ್ಗಾಮ್‌ ಕ್ಷೇತ್ರದಲ್ಲಿ ಪ್ರತಿಸ್ಪರ್ಧಿ ಮೀರ್ ವಿರುದ್ಧ 10,574 ಮತಗಳ ಅಂತರದಿಂದ ಗೆದ್ದಿದ್ದರು. ಇದೀಗ ಭದ್ರಕೋಟೆಯನ್ನು ಉಳಿಸಿಕೊಂಡು ಬುದ್ಗಾಮ್‌ ಕ್ಷೇತ್ರಕ್ಕೆ ಗುಡ್‌ಬೈ ಹೇಳಿದ್ದಾರೆ. ಇದನ್ನೂ ಓದಿ: ಕೌರವರನ್ನು ಶಕುನಿ ಮುಗಿಸಿದಂತೆ ಸಿದ್ದರಾಮಯ್ಯರನ್ನು ಬೈರತಿ ಸುರೇಶ್‌ ಮುಗಿಸುತ್ತಿದ್ದಾರೆ: ಕರಂದ್ಲಾಜೆ

  • ಜಮ್ಮು-ಕಾಶ್ಮೀರದಲ್ಲಿ ನಡೆದ ಉಗ್ರರ ದಾಳಿ ಹಿಂದೆ ಪಾಕ್‌ ಕೈವಾಡ – ರಹಸ್ಯ ಬಯಲು!

    ಜಮ್ಮು-ಕಾಶ್ಮೀರದಲ್ಲಿ ನಡೆದ ಉಗ್ರರ ದಾಳಿ ಹಿಂದೆ ಪಾಕ್‌ ಕೈವಾಡ – ರಹಸ್ಯ ಬಯಲು!

    – ಪೂಂಚ್, ರಜೌರಿಯಲ್ಲೂ ಉಗ್ರರ ದಾಳಿಗೆ ಪಾಕ್‌ ಸಂಚು – ಗುಪ್ತಚರ ಇಲಾಖೆ ಮಾಹಿತಿ

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu And Kashmir) ಕಥುವಾ ಜಿಲ್ಲೆಯ ಅಂತಾರಾಷ್ಟ್ರೀಯ ಗಡಿ (IB) ಬಳಿ ಹಳ್ಳಿಯೊಂದರಲ್ಲಿ ಇತ್ತೀಚೆಗೆ ನಡೆದ ಎನ್‌ಕೌಂಟರ್‌ನಲ್ಲಿ (Kathua Encounter) ಭದ್ರತಾಪಡೆಗಳು ಹತ್ಯೆಗೈದ ಇಬ್ಬರು ಭಯೋತ್ಪಾದಕರಲ್ಲಿ ಓರ್ವ ಜೈಶ್‌ ಎ ಮೊಹಮ್ಮದ್‌ ಉಗ್ರ ಸಂಘಟನೆಯ ಕಮಾಂಡರ್‌ ಎಂದು ಮೂಲಗಳಿಂದ ತಿಳಿದುಬಂದಿದೆ.

    ಮೂಲಗಳ ಪ್ರಕಾರ, ಹತ್ಯೆಗೀಡಾದ ಇಬ್ಬರಲ್ಲಿ ಓರ್ವ ಜೈಶ್‌ ಎ ಮೊಹಮ್ಮದ್‌ ಉಗ್ರ ಸಂಘಟನೆಯ ಕಮಾಂಡರ್ ರಿಹಾನ್ ಎಂದು ಗುರುತಿಸಲಾಗಿದೆ. ಅಲ್ಲದೇ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಉಗ್ರರ ದಾಳಿಯ ಹಿಂದೆ ಪಾಕ್‌ (Pakistan) ಕೈವಾಡವಿದೆ ಎಂದು ಶಂಕಿಸಲಾಗಿದೆ. ಇದನ್ನೂ ಓದಿ: ದೆಹಲಿಯ ಯಮುನಾ ಬಳಿಯ ಪ್ರಾಚೀನ ಶಿವಮಂದಿರ ಕೆಡವಲು ನೀಡಿದ ಆದೇಶ ಎತ್ತಿಹಿಡಿದ ಸುಪ್ರೀಂ

    ಹತ್ಯೆಗೀಡಾದ ರಿಹಾನ್‌, ಉಪಗ್ರಹ ಸಂವಹನ ಸಾಧನ‌ (ಸ್ಯಾಟಲೈಟ್‌ ಫೋನ್‌) ಹಾಗೂ ಅತ್ಯಾಧುನಿಕ M4 ರೈಫಲ್‌ ಅನ್ನು ಹೊತ್ತೊಯ್ಯುತ್ತಿದ್ದ. ಪಾಕಿಸ್ತಾನ ಸೇನೆ, ನೌಕಾಪಡೆ ಹಾಗೂ ವಾಯುಸೇನೆಗಾಗಿ ಈ ಮೈಕ್ರೋ ಸ್ಯಾಟಲೈಟ್‌ ಫೋನ್‌ ಅನ್ನು ಖರೀದಿಸಲಾಗಿತ್ತು ಎಂದು ಉನ್ನ ಮೂಲಗಳಿಂದ ತಿಳಿದುಬಂದಿದೆ.

    ಈ ಉಗ್ರರ ಹತ್ಯೆ ನಡೆಯುವುದಕ್ಕೂ ಮುನ್ನ ಜಮ್ಮು ಮತ್ತು ಕಾಶ್ಮೀರದ ರಿಯಾಸಿಯಲ್ಲಿ ಯಾತ್ರಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ವೇಳೆ ಭಯೋತ್ಪಾದಕ ದಾಳಿ ನಡೆದಿತ್ತು. ಬಸ್‌ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ ಪರಿಣಾಮ ಬಸ್‌ ಕಮರಿಗೆ ಉರುಳಿ ಬಿದ್ದಿತ್ತು. ಈ ವೇಳೆ 9 ಪ್ರಯಾಣಿಕರು ಹತರಾಗಿದ್ದರು. ಇದಾದ ಬಳಿಕ ದೋಡಾ ಜಿಲ್ಲೆಯಲ್ಲಿ 4 ಭಯೋತ್ಪಾದಕ ದಾಳಿ ನಡೆದಿತ್ತು. ಉಗ್ರರು ಮತ್ತು ಸೇನೆ ನಡುವಿನ ಗುಂಡಿನ ಚಕಮಕಿಯಲ್ಲಿ ಸಿಆರ್‌ಪಿಎಫ್‌ ಯೋಧ ಮತ್ತು ಇಬ್ಬರು ಭಯೋತ್ಪಾದಕರು ಸೇರಿ 11 ಮಂದಿ ಹತರಾಗಿದ್ದರು.

    ಉಗ್ರರ ಮಹತ್ವದ ಸಭೆ:
    ಜೂನ್‌ 9ರಂದು ರಿಯಾಸಿಯಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಜೈಶ್‌ ಎ ಮೊಹಮ್ಮದ್‌ ಮತ್ತು ಹಿಜ್ಬ್‌-ಉಲ್‌ ಮುಜಾಹಿದ್ದೀನ್‌ ಭಯೋತ್ಪಾದಕ ಸಂಘಟನೆಗಳು ಪಾಕಿಸ್ತಾನದ ರಾವಲಕೋಟ್‌ನಲ್ಲಿ ಉನ್ನತ ಮಟ್ಟದ ಸಭೆ ನಡೆಸಿದ್ದವು. ಈ ವೇಳೆ ಭಾರತದ ಮೇಲಿನ ದಾಳಿಗೆ ಯೋಜಿಸಿದ್ದವು ಎಂದು ತಿಳಿದುಬಂದಿದೆ.

    ಇದೀಗ ಕಳೆದ 2 ವರ್ಷಗಳಿಂದ ಭಯೋತ್ಪಾದಕ ಚಟುವಟಿಕೆಗಳು ಹೆಚ್ಚುತ್ತಿರುವ ಪೂಂಚ್ ಮತ್ತು ರಜೌರಿ ಜಿಲ್ಲೆಗಳಲ್ಲಿ ಭಯೋತ್ಪಾದಕ ದಾಳಿ ನಡೆಸಲು ಪ್ಲ್ಯಾನ್‌ ಮಾಡಿರುವ ಬಗ್ಗೆ ಗುಪ್ತಚರ ಇಲಾಖೆ ವರದಿ ನೀಡಿದ್ದು, ಭದ್ರತಾ ಪಡೆಗಳು ಹದ್ದಿನಕಣ್ಣಿಟ್ಟಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ದುರಹಂಕಾರಿಗಳಾಗಿ ಬದಲಾಗಿದ್ದಕ್ಕೆ ರಾಮನೇ 241 ಸ್ಥಾನಕ್ಕೆ ನಿಲ್ಲಿಸಿದ: ಬಿಜೆಪಿ ವಿರುದ್ಧ ಆರ್‌ಎಸ್‌ಎಸ್ ಮುಖಂಡ ವಾಗ್ದಾಳಿ

  • ಜಮ್ಮು ಕಾಶ್ಮೀರದ ದೋಡಾದ ಸೇನಾ ಪೋಸ್ಟ್‌ ಮೇಲೆ ಉಗ್ರರ ದಾಳಿ

    ಜಮ್ಮು ಕಾಶ್ಮೀರದ ದೋಡಾದ ಸೇನಾ ಪೋಸ್ಟ್‌ ಮೇಲೆ ಉಗ್ರರ ದಾಳಿ

    ಶ್ರೀನಗರ: ಜಮ್ಮು ಕಾಶ್ಮೀರದ (Jammu Kashmir) ದೋಡಾದಲ್ಲಿ (Doda) ಮಂಗಳವಾರ ರಾತ್ರಿ ಸೇನಾ ಪೋಸ್ಟ್‌ ಮೇಲೆ ದಾಳಿ (Terrorists Attack ) ನಡೆಸಿದ ನಂತರ ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ದಾಳಿ ನಡೆಯುತ್ತಿದೆ ಎಂದು ವರದಿಯಾಗಿದೆ.

    ರಿಯಾಸಿಯಲ್ಲಿ (Reasi Attack) ಯಾತ್ರಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ಬಸ್‌ ಮೇಲೆ ದಾಳಿ, ಕಥುವಾದಲ್ಲಿ (Kathua) ಭಯೋತ್ಪಾದಕರು ಗುಂಡಿನ ದಾಳಿ ನಡೆಸಿ ಒಬ್ಬ ನಾಗರಿಕ ಗಾಯಗೊಂಡ ನಂತರ ನಡೆದ ಮೂರನೇ ಘಟನೆ ಇದಾಗಿದೆ.


    ರಾತ್ರಿ ಕಥುವಾದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಓರ್ವ ಉಗ್ರನನ್ನು ಹತ್ಯೆ ಮಾಡಲಾಗಿದೆ ಎಂದು ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸುತ್ತಿರುವ ಜಮ್ಮು ವಲಯದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಆನಂದ್ ಜೈನ್ ಹೇಳಿದ್ದಾರೆ. ಇದನ್ನೂ ಓದಿ: 30 ಲಕ್ಷಕ್ಕೆ ಡೀಲ್‌ – ಕೊಲೆ ಮಾಡಿ ದರ್ಶನ್ ಟೀಂ ಸಿಕ್ಕಿಬಿದ್ದಿದ್ದೇ ರೋಚಕ!

    ದೋಡಾ ಘಟನೆಯ ಬಗ್ಗೆ ಮಾತನಾಡಿದ ಅವರು, ತಡರಾತ್ರಿ ಚಟರ್ಗಾಲಾ ಪ್ರದೇಶದ ಸೇನಾ ನೆಲೆಯಲ್ಲಿ ಪೊಲೀಸರು ಮತ್ತು ರಾಷ್ಟ್ರೀಯ ರೈಫಲ್ಸ್ ಮೇಲೆ ಭಯೋತ್ಪಾದಕರು ಗುಂಡು ಹಾರಿಸಿದ್ದಾರೆ ಎಂದು ತಿಳಿಸಿದರು.

    ಭದ್ರತಾ ಪಡೆಗಳು ಈಗ ಕಥುವಾದ ಹೀರಾನಗರ ಪ್ರದೇಶದಲ್ಲಿ ಡ್ರೋನ್‌ ಬಳಸಿಕೊಂಡು ಉಳಿದಿರುವ ಭಯೋತ್ಪಾದಕನನ್ನು ಹುಡುಕುತ್ತಿವೆ.