Tag: ಉಗ್ರರ ದಾಳಿ

  • ‌ಬೆಂಗಳೂರಿನ IISc ದಾಳಿಯ ಪ್ರಮುಖ ಸಂಚುಕೋರ, ಲಷ್ಕರ್ ಉಗ್ರ ಪಾಕ್‌ನಲ್ಲಿ ಹತ್ಯೆ

    ‌ಬೆಂಗಳೂರಿನ IISc ದಾಳಿಯ ಪ್ರಮುಖ ಸಂಚುಕೋರ, ಲಷ್ಕರ್ ಉಗ್ರ ಪಾಕ್‌ನಲ್ಲಿ ಹತ್ಯೆ

    ಇಸ್ಲಾಮಾಬಾದ್‌: ಭಾರತದಲ್ಲಿ ನಡೆದ ಮೂರು ಪ್ರಮುಖ ಭಯೋತ್ಪಾದಕ ದಾಳಿಯ (Terrorist Attack) ಪ್ರಮುಖ ಸಂಚುಕೋರನಾಗಿದ್ದ ಲಷ್ಕರ್-ಎ-ತೈಬಾ (LET) ಸಂಘಟನೆಯ ಟಾಪ್‌ ಉಗ್ರನನ್ನು ಪಾಕಿಸ್ತಾನದ (Pakistan) ಸಿಂಧ್ ಪ್ರಾಂತ್ಯದಲ್ಲಿ ಭಾನುವಾರ ಹತ್ಯೆ ಮಾಡಲಾಗಿದೆ ಎಂದು ವರದಿಗಳು ತಿಳಿಸಿವೆ.

    ಸೈಫುಲ್ಲಾ ಅಲಿಯಾಸ್ ವಿನೋದ್ ಕುಮಾರ್ ಅಲಿಯಾಸ್ ಮೊಹಮ್ಮದ್ ಸಲೀಮ್ ಅಲಿಯಾಸ್ ಖಾಲಿದ್ ಅಲಿಯಾಸ್ ವನಿಯಾಲ್ ಅಲಿಯಾಸ್ ವಾಜಿದ್ ಅಲಿಯಾಸ್ ಸಲೀಂ ಭಾಯ್ ಹೆಸರುಗಳಿಂದ ಮೋಸ್ಟ್‌ ವಾಂಟೆಡ್‌ ಆಗಿದ್ದ ಲಷ್ಕರ್‌ ಉಗ್ರರನನ್ನು ಸಿಂಧ್ ಪ್ರಾಂತ್ಯದ ಬಾದಿನ್ ಜಿಲ್ಲೆಯ ಮಟ್ಲಿ ತಾಲೂಕಿನಲ್ಲಿ ಅಪರಿಚಿತ ಗುಂಪೊಂದು ಹತ್ಯೆ ಮಾಡಿದೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಮುಜೀಬ್ ಬಯೋಪಿಕ್‌ನಲ್ಲಿ ಶೇಖ್ ಹಸೀನಾ ಪಾತ್ರದಲ್ಲಿ ನಟಿಸಿದ್ದ ಬಾಂಗ್ಲಾ ನಟಿ ಅರೆಸ್ಟ್

    2001 ರಲ್ಲಿ ರಾಂಪುರದಲ್ಲಿ ನಡೆದ ಸಿಆರ್‌ಪಿಎಫ್ ಶಿಬಿರದ ಮೇಲಿನ ದಾಳಿ, 2005 ರಲ್ಲಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ (IISc) ನಡೆದಿದ್ದ ಗುಂಡಿನ ದಾಳಿ ಹಾಗೂ 2006 ರಲ್ಲಿ ನಾಗ್ಪುರದ ಆರ್‌ಎಸ್‌ಎಸ್ ಪ್ರಧಾನ ಕಚೇರಿ ಮೇಲೆ ನಡೆದಿದ್ದ ದಾಳಿಗಳಿಗೆ ಖಾಲಿದ್‌ ಪ್ರಮುಖ ಸಂಚುಕೋರನಾಗಿದ್ದ. ಇದನ್ನೂ ಓದಿ: ಅಸಲಿ ಆಟ ಈಗ ಶುರು – ಸಾಲದ ಹಣ ಬಿಡುಗಡೆಗೆ ಪಾಕ್‌ಗೆ 11 ಷರತ್ತು ವಿಧಿಸಿದ IMF

    5 ವರ್ಷಗಳ ಅವಧಿಯಲ್ಲಿ ನಡೆದಿದ್ದ ಈ ಮೂರು ದಾಳಿಗಳು ಹಲವಾರು ಜೀವಗಳನ್ನು ಬಲಿ ಪಡೆದಿದ್ದವು. ಇದಾದ ಬಳಿಕ ʻವಿನೋದ್‌ ಕುಮಾರ್‌ʼ ಹೆಸರಿನಲ್ಲಿ ಖಾಲಿದ್‌ ಹಲವು ವರ್ಷಗಳ ಕಾಲ ನೇಪಾಳದಲ್ಲಿ ತಲೆ ಮರೆಸಿಕೊಂಡಿದ್ದ. ಅಲ್ಲಿಯೇ ನಗ್ಮಾ ಬಾನು ಎಂಬ ಮಹಿಳೆಯನ್ನ ವಿವಾಹವಾಗಿದ್ದ. ನಕಲಿ ಗುರುತು ಹೊಂದಿದ್ದ ಖಾಲಿದ್‌ ಆಗಾಗ್ಗೆ ಭಾರತಕ್ಕೆ ಬಂದು ಲಷ್ಕರ್‌ ಸಂಘಟನೆಯ ಉಗ್ರ ಚಟುವಟಿಕೆಗಳನ್ನು ಸಂಘಟಿಸುತ್ತಿದ್ದ ನೇಮಕಾತಿ ಮತ್ತು ಲಾಜಿಸ್ಟಿಕ್ಸ್‌ನಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ ಎಂದು ವರದಿಗಳಿಂದ ತಿಳಿದುಬಂದಿದೆ. ಇದನ್ನೂ ಓದಿ: ಪಾಕ್‌ ಪ್ರಧಾನಿ ನಿದ್ದೆಗೆಡಿಸಿದ ʻಆಪರೇಷನ್‌ ಸಿಂಧೂರʼ – ಶೆಹಬಾಜ್‌ಗೆ ಮಧ್ಯರಾತ್ರಿ ಕರೆ ಮಾಡಿದ್ಯಾರು?

    ಇತ್ತೀಚೆಗೆ ಖಾಲಿದ್‌ ನೇಪಾಳ ಬಿಟ್ಟು ಸಿಂಧ್‌ ಪ್ರಾಂತ್ಯದ ಬಾದಿನ್ ಜಿಲ್ಲೆಯ ಮತ್ಲಿಗೆ ಗ್ರಾಮದಲ್ಲಿ ನೆಲೆಸಿದ್ದ. ಅಲ್ಲಿ ನಿಷೇಧಿತ ಜಮಾತ್-ಉದ್-ದವಾ ಉಗ್ರ ಸಂಘಟನೆಯಲ್ಲಿ ಕೆಲಸ ಮಾಡುತ್ತಿದ್ದ. ಭಯೋತ್ಪಾದಕ ಚಟುವಟಿಕೆಗೆ ಯುವಕರನ್ನ ನೇಮಿಸಿಕೊಳ್ಳುವುದು ಮತ್ತು ನಿಧಿ ಸಂಗ್ರಹಿಸುವ ಕೆಲಸದಲ್ಲಿ ತೊಡಗಿದ್ದ ಎನ್ನಲಾಗಿದೆ. ಇದನ್ನೂ ಓದಿ: ಭಾರತ, ಚೀನಾವನ್ನು ಪಾಶ್ಚಿಮಾತ್ಯ ರಾಷ್ಟ್ರಗಳು ಎತ್ತಿಕಟ್ಟುತ್ತಿವೆ: ರಷ್ಯಾ ವಿದೇಶಾಂಗ ಸಚಿವ

  • ನಾಗ್ರೋಟಾದಲ್ಲಿ ಭಾರತೀಯ ಸೇನೆ & ಶಂಕಿತ ಉಗ್ರರ ನಡುವೆ ಗುಂಡಿನ ಚಕಮಕಿ

    ನಾಗ್ರೋಟಾದಲ್ಲಿ ಭಾರತೀಯ ಸೇನೆ & ಶಂಕಿತ ಉಗ್ರರ ನಡುವೆ ಗುಂಡಿನ ಚಕಮಕಿ

    ಶ್ರೀನಗರ: ಜಮ್ಮು & ಕಾಶ್ಮೀರದ ನಾಗ್ರೋಟಾದಲ್ಲಿ (Nagrota) ಭಾರತೀಯ ಸೇನೆ ಮತ್ತು ಶಂಕಿತ ಉಗ್ರರ ನಡುವೆ ಗುಂಡಿನ ಚಕಮಕಿ ನಡೆದಿದೆ ಎಂದು ವರದಿಯಾಗಿದೆ.

    ನಾಗ್ರೋಟಾದ ಸೇನಾ ಘಟಕದಲ್ಲಿ ಗುಂಡಿನ ದಾಳಿ ನಡೆದಿದೆ. ಸ್ಥಳದಲ್ಲಿ ಅನುಮಾನಾಸ್ಪದ ಚಲನವಲನ ಕಂಡುಬಂದಿದೆ. ಆದರೆ ಆರಂಭಿಕ ಕಾರ್ಯಾಚರಣೆಯ ನಂತರ ಯಾವುದೇ ಸಂಪರ್ಕ ಕಂಡುಬಂದಿಲ್ಲ. ಘಟನೆಯ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ. ಭದ್ರತಾ ಪಡೆಗಳಿಂದ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಇದನ್ನೂ ಓದಿ: ಪಾಕಿಸ್ತಾನ ಕದನ ವಿರಾಮ ಉಲ್ಲಂಘನೆ ಮಾಡಿದೆ: ವಿಕ್ರಂ ಮಿಸ್ರಿ

    ಪರಿಧಿಯ ಬಳಿ ಅನುಮಾನಾಸ್ಪದ ಚಲನವಲನಗಳನ್ನು ಗಮನಿಸಿದ ನಗ್ರೋಟಾ ಮಿಲಿಟರಿ ಠಾಣೆಯ ಕಾವಲುಗಾರ ಗುಂಡು ಹಾರಿಸಿದ್ದಾರೆ. ಇದರಿಂದಾಗಿ ಶಂಕಿತ ವ್ಯಕ್ತಿಯೊಂದಿಗೆ ಸ್ವಲ್ಪ ಸಮಯದವರೆಗೆ ಗುಂಡಿನ ಚಕಮಕಿ ನಡೆದಿದೆ. ಕಾವಲುಗಾರರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ನುಸುಳುಕೋರರನ್ನು ಪತ್ತೆಹಚ್ಚಲು ಶೋಧ ಕಾರ್ಯಾಚರಣೆಗಳು ನಡೆಯುತ್ತಿವೆ ಎಂದು ಎಕ್ಸ್‌ ಪೋಸ್ಟ್‌ನಲ್ಲಿ ಭಾರತೀಯ ಸೇನೆಯ ವೈಟ್ ನೈಟ್ ಕಾರ್ಪ್ಸ್ ತಿಳಿಸಿದೆ.

    ಅಮೆರಿಕ ಮಧ್ಯಸ್ಥಿಕೆಯಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಶನಿವಾರ ಕದನ ವಿರಾಮ ಒಪ್ಪಂದ ಆಯಿತು. ಇದಾದ ಕೆಲವೇ ಗಂಟೆಗಳಲ್ಲಿ ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿದೆ. ಗಡಿ ಭಾಗದಲ್ಲಿ ಪಾಕ್‌ ಡ್ರೋನ್‌ ದಾಳಿ ನಡೆಸಿದೆ. ಪಾಕ್‌ ಡ್ರೋನ್‌ಗಳನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ. ಇದನ್ನೂ ಓದಿ: ಜಮ್ಮು ಗಡಿಯಲ್ಲಿ ಪಾಕ್ ಶೆಲ್ ದಾಳಿ – BSF ಯೋಧ ಹುತಾತ್ಮ

  • ಉಗ್ರರ ದಾಳಿ ನಡೆದ ಪಹಲ್ಗಾಮ್‌ನಲ್ಲಿ ನಿಮ್ಮ ʻPublic TVʼ; ಬೈಸರನ್ ವ್ಯಾಲಿಯಿಂದ ಕನ್ನಡದ ಏಕೈಕ ಚಾನಲ್ ಪ್ರತ್ಯಕ್ಷ ವರದಿ..!

    ಉಗ್ರರ ದಾಳಿ ನಡೆದ ಪಹಲ್ಗಾಮ್‌ನಲ್ಲಿ ನಿಮ್ಮ ʻPublic TVʼ; ಬೈಸರನ್ ವ್ಯಾಲಿಯಿಂದ ಕನ್ನಡದ ಏಕೈಕ ಚಾನಲ್ ಪ್ರತ್ಯಕ್ಷ ವರದಿ..!

    – ಉಗ್ರರಿಗೆ ತಕ್ಕ ಶಿಕ್ಷೆಯಾಗಲಿ; ʻಪಬ್ಲಿಕ್‌ ಟಿವಿʼ ಮೂಲಕ ಮೋದಿಗೆ ಮನವಿ
    – ದುರ್ಗಮ ಹಾದಿಯಲ್ಲಿ ಕಂಡ ಕರಾಳ ಸತ್ಯಗಳು

    ಮೂರು ದಿನಗಳ ಹಿಂದೆಯಷ್ಟೇ ಕಾಶ್ಮೀರದ ಪಹಲ್ಗಾಮ್‌ನಲ್ಲಿ (Pahalgam) ಉಗ್ರರ ಅಟ್ಟಹಾಸ ಮೆರೆದಿದ್ದರು, ಓರ್ವ ವಿದೇಶಿ ಪ್ರಜೆ ಸೇರಿದಂತೆ 26 ಮಂದಿಯನ್ನ ಹತ್ಯೆಗೈಯ್ದಿದ್ದರು. ಈ ದಾಳಿ ನಡೆದ ಸ್ಥಳದಿಂದ ಕನ್ನಡದ ಏಕೈಕ ಚಾನಲ್ ನಿಮ್ಮ ʻಪಬ್ಲಿಕ್ ಟಿವಿʼ (Public TV) ಪ್ರತ್ಯಕ್ಷ ವರದಿ ಮಾಡ್ತಿದೆ. ಭಾರತದ ಮಿನಿ ಸ್ವಿಟ್ಜರ್ಲೆಂಡ್ ಬೈಸರನ್ ತಲುಪುದು ಸುಲಭದ ಕೆಲಸ ಅಲ್ಲವೇ ಅಲ್ಲ. ಕಾರಿಲ್ಲ, ಕುದುರೆ ಇಲ್ಲ, ಕಾಲ್ನಡಿಗೆಯಲ್ಲಿ ಕಲ್ಲು ಮುಳ್ಳಿನ ಹಾದಿ.. ಗುಡ್ಡಗಾಡು ದಾಟಿ ಬೈಸರನ್ ತಲುಪಿದ ʻಪಬ್ಲಿಕ್ ಟಿವಿʼ ಸ್ಥಳದಿಂದಲೇ ಪ್ರತ್ಯಕ್ಷ ವರದಿ ಮಾಡುತ್ತಿದೆ.

    ದುರ್ಗಮ ಹಾದಿ ಕ್ರಮಿಸಿ ಬೈಸರನ್ ತಲುಪಿದ ʻಪಬ್ಲಿಕ್ ಟಿವಿʼಗೆ ಮೊದಲು ಕಂಡಿದ್ದು ದಾಳಿಯ ಕುರುಹುಗಳು.. ಕೆಸರಿನಲ್ಲಿ ಹೂತಿ ಹೋದ ಬಟ್ಟೆಗಳು, ಶೂಗಳು.. ರಕ್ತದ ಕಲೆಗಳು.. ಉಗ್ರರ ದಾಳಿಯ ಕರಾಳತೆಯನ್ನು ಬಿಚ್ಚಿಡುತ್ತಿವೆ. ಜೀವ ಉಳಿಸಿಕೊಳ್ಳುವ ಭರದಲ್ಲಿ ಜನರು ಓಡಿದ ಪರಿಯನ್ನು ಈ ಗುರುತುಗಳು ಸಾರಿ ಸಾರಿ ಹೇಳ್ತಿವೆ. ಇದನ್ನೂ ಓದಿ: ಭಾರತ Vs ಪಾಕಿಸ್ತಾನ – ಭೂಸೇನೆ, ನೌಕಾಸೇನೆ, ವಾಯು ಸೇನೆಯ ಸಾಮರ್ಥ್ಯಗಳ ಬಲಾಬಲ ಎಷ್ಟಿದೆ?

    ಸದ್ಯ ಉಗ್ರರ ದಾಳಿ ನಡೆದ ಬೈಸರನ್ ವ್ಯಾಲಿಯನ್ನು ಭದ್ರತಾ ಪಡೆ ಸುತ್ತುವರೆದಿದ್ದು.. ಘಟನಾ ಸ್ಥಳದಲ್ಲಿ ಭದ್ರತಾ ಪಡೆ ಗಸ್ತು ತಿರುಗುತ್ತಿದೆ. ದುರ್ಗಮ ಸ್ಥಳ ತಲುಪಿದ ʻಪಬ್ಲಿಕ್ ಟಿವಿʼ ಪ್ರತ್ಯಕ್ಷ ಚಿತ್ರಣವನ್ನು ಕಟ್ಟಿಕೊಡ್ತಿದೆ. ಇದನ್ನೂ ಓದಿ: ನಾವು ಭಯೋತ್ಪಾದನೆಯನ್ನು ಬೆಂಬಲಿಸಿದ್ದೇವೆ – ಒಪ್ಪಿಕೊಂಡ ಪಾಕಿಸ್ತಾನ

    ಉಗ್ರರ ಭೀಭತ್ಸ ದಾಳಿ ದಿನ ಆಗಿದ್ದೇನು?
    ಭಯೋತ್ಪಾದಕ ದಾಳಿ ನಡೆದ ದಿನ ಸ್ಥಳದಲ್ಲಿದ್ದ ಪಹಲ್ಗಾಮ್ ಸ್ಥಳೀಯರು ಘಟನಾ ದಿನ ಏನೇನಾಯ್ತು ಎಂದು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಘಟನೆ ನಡೆದ ದಿನ ನಾನು ಇಲ್ಲೇ ಇದ್ದೆ.. ಘಟನೆ ನೋಡಿ ಬಹಳ ದುಃಖ ಆಯ್ತು.. ಕಾಶ್ಮೀರಿ ಜನರನ್ನು ಒಟ್ಟುಗೂಡಿಸಿ ಅವರ ಮೇಲೆ ಗುಂಡಿನ ಮಳೆಗೈಯ್ದಿದ್ದರು ನಮಗೆ ಬೇಸರ ಇರಲಿ.. ಪ್ರವಾಸಿಗರ ಮೇಲೆ ದಾಳಿಯಾಗಿರುವುದು ದುಃಖ ತಂದಿದೆ ಎನ್ನುತ್ತಾರೆ ಪಹಲ್ಗಾಮ್ ನಿವಾಸಿ ಮೊಹ್ಮದ್ ಜಬ್ಬಾರ್. ಇದನ್ನೂ ಓದಿ: Pahalgam Terror Attack – ಅಗತ್ಯ ಬಿದ್ರೆ ಭಾರತದೊಂದಿಗೆ ನಿಲ್ಲುತ್ತೇವೆ: ಇಸ್ರೇಲ್

    ʻಪಬ್ಲಿಕ್‌ ಟಿವಿʼ ಮೂಲಕ ಮೋದಿಗೆ ಮನವಿ
    ಇನ್ನೂ ʻಪಬ್ಲಿಕ್‌ ಟಿವಿʼ ಜೊತೆಗೆ ಮಾತನಾಡಿದ ಸ್ಥಳೀಯ ಟ್ಯಾಕ್ಸಿ ಚಾಲಕ ಗುಜರ್ ಅಹ್ಮದ್ ಭಯೋತ್ಪಾದಕರು ಮನಷ್ಯತ್ವವನ್ನು ಕೊಂದು ಹಾಕಿದ್ದಾರೆ. ಇದು ನಮ್ಮ ಕುಟುಂಬವನ್ನು ಕೊಂದಂತೆ.. ಪ್ರವಾಸಿಗರು ನಮ್ಮ ಅತಿಥಿಗಳು, ನಮ್ಮ ದೇವರು.. ನಾವು ಅವರಿಂದ ದುಡಿದು ಕುಟುಂಬ ನಡೆಸುತ್ತೇವೆ.. ಇಂತಹ ಕೃತ್ಯ ಮಾಡಿದವರಿಗೆ ಕಠಿಣ ಶಿಕ್ಷೆ ಕೊಡಬೇಕು ಅಂತಾ ಮೋದಿ ಅವರಿಗೆ ಮನವಿ ಮಾಡುತ್ತೇನೆ. ಅಂದು ಬಂದ ಜನರು ಸಾಕಷ್ಟು ಎಂಜಾಯ್ ಮಾಡುತ್ತಿದ್ದರು. ಕೆಲವರು ಬಂದು ಫೈರಿಂಗ್ ಆರಂಭಿಸಿದರು. ನಾವು ಭಾರತೀಯರು. ನಮ್ಮ ಹೃದಯದಲ್ಲಿ ಭಾರತೀಯತೆ ಇದೆ. ಇದನ್ನು ಮಾಡಿದವರನ್ನು ಸುಮ್ನೆ ಬಿಡಬಾರದು ಅಂತ ಆಗ್ರಹಿಸಿದರು. ಇದನ್ನೂ ಓದಿ: ಸ್ವಾತಂತ್ರ್ಯ ಹೋರಾಟಗಾರರನ್ನು ನೀವು ಹೀಗೆ ನಡೆಸಿಕೊಳ್ಳುತ್ತೀರಾ ? – ರಾಹುಲ್‌ಗೆ ಸುಪ್ರೀಂ ತರಾಟೆ

    ಬಳಿ ಸ್ಥಳೀಯ ಕುದುರೆ ಸವಾರ ಮಾತನಾಡುತ್ತಾ, ನಾನು ಕೆಲವು ಪ್ರವಾಸಿಗರನ್ನು ಬಿಟ್ಟು ಕೂತಿದೆ, ಕೆಲವರು ಮೇಲೆ ಏನೋ ಸಮಸ್ಯೆ ಆಗಿದೆ ಎಂದರು.. ನಾನು ಕೆಲವರಿಗೆ ಮಾತನಾಡಿದೆ ಆಮೇಲೆ ಮೇಲೆ ಹೋಗುವಾಗ ಕೆಲವರು ಎದುರಿಗೆ ಓಡಿ ಬಂದರು… ನೀರು ಕುಡಿಸಿ ಎನ್ನುತ್ತಿದ್ದರು ಅವರಿಗಾಗಿ ನೀರಿನ ವ್ಯವಸ್ಥೆ ಮಾಡಲು ನೀರಿನ ಪೈಪ್ ಒಡೆದೆವು ನಾವೇ ನಮ್ಮ ಕೈಯಾರೆ ನೀರು ಕುಡಿಸಿದೆವು. ರಕ್ತಪಾತ ಮಾಡುವವರು ದುಷ್ಟರು.. ಪಾಕಿಸ್ತಾನದ್ದೇ ಪಾತ್ರ ಇದ್ದರೂ ಕಠಿಣ ಉತ್ತರ ಕೊಡಬೇಕು. ಇಲ್ಲ ನಮ್ಮನ್ನು ಗಡಿಗೆ ಕರೆದೊಯ್ಯಿರಿ ನಾವು ಉತ್ತರ ಕೊಡುತ್ತೇವೆ ಎಂದು ಆಕ್ರೋಶ ಹೊರಹಾಕಿದರು.

  • ನಾಳೆ ಅರ್ಧ ದಿನ ಶಿವಮೊಗ್ಗ ಬಂದ್

    ನಾಳೆ ಅರ್ಧ ದಿನ ಶಿವಮೊಗ್ಗ ಬಂದ್

    ಶಿವಮೊಗ್ಗ: ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರ ಗುಂಡಿನ ದಾಳಿಗೆ (Kashmir Pahalgam Terror Attack) ಬಲಿಯಾದ ಮಂಜುನಾಥ್‌ ರಾವ್‌ ಅವರ ಪಾರ್ಥೀವ ಶರೀರ ನಾಳೆ (ಏ.23) ಎಂದು ಬೆಳಗ್ಗೆ ಶಿವಮೊಗ್ಗ ನಗರಕ್ಕೆ ಆಗಮಿಸಿಲಿದೆ. ಹೀಗಾಗಿ ಅಂತ್ಯಸಂಸ್ಕಾರ ನೆರವೇರಿಸುವ ಹಿನ್ನೆಲೆ ಅರ್ಧದಿನ ಶಿವಮೊಗ್ಗ ನಗರದಲ್ಲಿ ಅಂಗಡಿ ಮುಂಗಟ್ಟುಗಳನ್ನು ಬಂದ್‌ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಶಾಸಕ ಎಸ್‌.ಎನ್‌ ಚನ್ನಬಸಪ್ಪ (SN Channabasappa) ತಿಳಿಸಿದರು.

    ಗುಂಡಿನ ದಾಳಿಯಲ್ಲಿ ಮೃತಪಟ್ಟ ಮಂಜುನಾಥ್‌ ರಾವ್‌ ಅವರ ಮನೆ ಮುಂದೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಗುರುವಾರ ಬೆಳಗ್ಗೆ 9 ಗಂಟೆ ಹೊತ್ತಿಗೆ ಮೃತದೇಹ ನಗರಕ್ಕೆ ರಲಿದೆ. ಮಧ್ಯಾಹ್ನ 12.30ರ ವರೆಗೆ ಮನೆಯ ಬಳಿ ಅಂತಿಮ ವಿಧಿವಿಧಾನ ನೆರವೇರಲಿದ್ದು, ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಇರಲಿದೆ. ಆ ಬಳಿಕ ನಗರದಲ್ಲಿ ಮೆರವಣಿಗೆ ನಡೆಯಲಿದ ಎಂದು ವಿವರಿಸಿದರು. ಇದನ್ನೂ ಓದಿ: ಸಾಲಾಗಿ ನಿಲ್ಲಿಸಿ ಹಿಂದೂನಾ ಅಂತ ಕೇಳಿ ಗುಂಡಿಟ್ಟು ಕೊಂದಿದ್ದಾರೆ – ಮೃತ ಭರತ್ ಭೂಷಣ್ ಸಂಬಂಧಿ

    ಸಾಗರ ರಸ್ತೆ, ಐಬಿ ಸರ್ಕಲ್, ಕುವೆಂಪು ರಸ್ತೆ, ಜೈಲ್ ವೃತ್ತ, ನೆಹರೂ ರಸ್ತೆ, ಬಿ.ಹೆಚ್‌.ರಸ್ತೆ, ಶಂಕರಮಠ ಸರ್ಕಲ್‌ನಲ್ಲಿ ಮೆರವಣಿಗೆ ಮೂಲಕ ರೋಟರಿ ಚಿತಾಗಾರಕ್ಕೆ ತಲುಪಲಿದೆ. ಸೂರ್ಯ ಭಟ್ಟರ ಪುತ್ರ ಗುಂಡಾ ಭಟ್ಟರಿಂದ ಅಂತಿಮ ವಿಧಿವಿಧಾನ ನೆರವೇರಿಸಲಾಗುತ್ತದೆ. ಡಿಸಿ-ಎಸ್ಪಿ ಎಲ್ಲಾ ಸಿದ್ಧತೆ ಮಾಡಿದ್ದಾರೆ, ಯಾವುದೇ ಅಡ್ಡಿ ಆತಂಕ ಇಲ್ಲದೇ ಕಾರ್ಯಕ್ರಮ ನಡೆಯಬೇಕು. ಪ್ರಹ್ಲಾದ್ ಜೋಶಿ ಬರುತ್ತಾರೆ ಅಂತಿಮ ವಿಧಿವಿಧಾನಕ್ಕೆ ಬರುತ್ತಾರೆ ಅನ್ನೋ ಮಾಹಿತಿ ಇದೆ ಎಂದು ತಿಳಿಸಿದರು. ಇದನ್ನೂ ಓದಿ: ಮುಸ್ಲಿಮರು ದುರ್ಬಲರಾಗ್ತಿದ್ದಾರೆ ಅಂತ ಉಗ್ರರಿಗೆ ಅನ್ನಿಸಿದೆ – ಪಹಲ್ಗಾಮ್ ದಾಳಿಗೆ ಹಿಂದುತ್ವವೇ ಕಾರಣವಂತೆ: ರಾಬರ್ಟ್

    ಇದೇ ಏಪ್ರಿಲ್‌ 22ರಂದು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ಗರ ಗುಂಡಿನ ದಾಳಿಯಲ್ಲಿ ಶಿವಮೊಗ್ಗದ ಮಂಜುನಾಥ್‌ ರಾವ್‌ ಮೃತಪಟ್ಟಿದ್ದರು. ಇದನ್ನೂ ಓದಿ: Pahalgam Terror Attack | ಭಾರತ ಶೀಘ್ರದಲ್ಲೇ ಪ್ರತೀಕಾರ ತೀರಿಸಿಕೊಳ್ಳಲಿದೆ – ಉಗ್ರರಿಗೆ ರಾಜನಾಥ್‌ ಸಿಂಗ್‌ ಎಚ್ಚರಿಕೆ

  • Pahalgam Terror Attack | ಭಾರತ ಶೀಘ್ರದಲ್ಲೇ ಪ್ರತೀಕಾರ ತೀರಿಸಿಕೊಳ್ಳಲಿದೆ – ಉಗ್ರರಿಗೆ ರಾಜನಾಥ್‌ ಸಿಂಗ್‌ ಎಚ್ಚರಿಕೆ

    Pahalgam Terror Attack | ಭಾರತ ಶೀಘ್ರದಲ್ಲೇ ಪ್ರತೀಕಾರ ತೀರಿಸಿಕೊಳ್ಳಲಿದೆ – ಉಗ್ರರಿಗೆ ರಾಜನಾಥ್‌ ಸಿಂಗ್‌ ಎಚ್ಚರಿಕೆ

    – ದಾಳಿಕೋರರನ್ನ ಸದೆಬಡಿಯಲು ಹೆಚ್ಚುವರಿ ಸೈನಿಕರ ನಿಯೋಜನೆ

    ನವದೆಹಲಿ/ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu and Kashmir) ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ, ಸೇನಾ ಪಡೆಗಳ ಮುಖ್ಯಸ್ಥರ ಜೊತೆ ತುರ್ತು ಸಭೆ ನಡೆದಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh), ಕೃತ್ಯ ಎಸಗಿದ ಉಗ್ರರಿಗೆ ಕಠಿಣ ಸಂದೇಶ ರವಾನಿಸಿದ್ದಾರೆ. ಭಾರತವು ಶೀಘ್ರದಲ್ಲೇ ಪ್ರತೀಕಾರ ತೀರಿಸಿಕೊಳ್ಳಲಿದೆ. ತೆರೆಮರೆಯಲ್ಲಿ ಪಿತೂರಿ ನಡೆಸಿದವರನ್ನೂ ಸಹ ಬಿಡುವ ಮಾತೇ ಇಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

    ಭಾರತದ ಪ್ರತಿಯೊಬ್ಬ ನಾಗರಿಕನೂ ಈ ಹೇಡಿತನದ ಕೃತ್ಯದ ವಿರುದ್ಧ ಒಗ್ಗಟ್ಟಾಗಿದ್ದಾನೆ. ಹಾಗಾಗಿ ಇಂತಹ ಕೃತ್ಯಗಳಿಗೆ ಕಾರಣರಾದವರಿಗೆ ಸೂಕ್ತ ಉತ್ತರ ಕೊಡುತ್ತೇವೆ. ತೆರೆಮರೆಯಲ್ಲಿದ್ದುಕೊಂಡು ಪಿತೂರಿ ನಡೆಸಿದವರನ್ನೂ ನಾವು ಬಿಡೋದಿಲ್ಲ. ಭಾರತ ಸರ್ಕಾರ ಉಗ್ರರನ್ನು ಸದೆಬಡಿಯಲು ಅಗ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ಭರವಸೆ ನೀಡಿದ್ದಾರೆ.

    ಭಾರತವು ಪ್ರಾಚೀನ ನಾಗರಿಕತೆ ಮತ್ತು ದೊಡ್ಡ ಜನಸಂಖ್ಯೆಯುಳ್ಳ ದೇಶವಾಗಿದೆ. ಇಂತಹ ಭಯೋತ್ಪಾದಕ ಚಟುವಟಿಕೆಗಳಿಂದ ನಮ್ಮನ್ನು ಬೆದರಿಸಲು ಸಾಧ್ಯವಿಲ್ಲ. ಇಂತಹ ಕೃತ್ಯಗಳಿಗೆ ಕಾರಣರಾದವರಿಗೆ ತಕ್ಕ ಉತ್ತರ ಕೊಟ್ಟೇ ಕೊಡುತ್ತೇವೆ ಎಂದು ಎಚ್ಚರಿಸಿದ್ದಾರೆ.

    2 ಗಂಟೆಗೂ ಅಧಿಕ ಕಾಲ ಉನ್ನತಮಟ್ಟದ ಸಭೆ
    ಭಯೋತ್ಪಾದಕ ದಾಳಿಯ ನಂತರ ಸುಮಾರು ಎರಡೂವರೆ ಗಂಟೆಗಳ ಕಾಲ ನಡೆದ ಉನ್ನತಮಟ್ಟದ ಸಭೆಯಲ್ಲಿ ಎರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಅನಿಲ್ ಚೌಹಾಣ್, ಸೇನಾ ಮುಖ್ಯಸ್ಥ ಜನರಲ್ ದ್ವಿವೇದಿ, ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ದಿನೇಶ್ ಕೆ ತ್ರಿಪಾಠಿ ಮತ್ತು ವಾಯುಪಡೆಯ ಮುಖ್ಯಸ್ಥ ಮಾರ್ಷಲ್ ಎಕೆ ಸಿಂಗ್ ಭಾಗವಹಿಸಿದ್ದರು. ಸಭೆಯಲ್ಲಿ ಪಹಲ್ಗಾಂನಲ್ಲಾದ ಘಟನೆಯ ವಿವರಗಳನ್ನು ಸೇನಾ ಮುಖ್ಯಸ್ಥರು, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ನೀಡಿದರು.

    ಮಹತ್ವದ ವಿಷಯಗಳ ಕುರಿತು ಚರ್ಚೆ
    ಜಮ್ಮು ಕಾಶ್ಮೀರದ ಭದ್ರತಾ ಪರಿಸ್ಥಿತಿಯನ್ನು ಸಭೆಯಲ್ಲಿ ಚರ್ಚಿಸಲಾಯಿತು. ಜೊತೆಗೆ ದಾಳಿಯ ನಂತರ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು. ಇದರ ಜೊತೆಗೆ, ಭದ್ರತಾ ಸಮಿತಿಯ ಸಭೆಯು ಕೂಡ ನಡೆಯುವ ಸಾಧ್ಯತೆಯಿದೆ. ಮುಂದೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಸಭೆಯಲ್ಲಿ ವಿಸ್ಕೃತ ಚರ್ಚೆಯನ್ನು ನಡೆಸಲಾಗಿದೆ ಎಂದು ಸುದ್ದಿಸಂಸ್ಥೆಗಳು ವರದಿ ಮಾಡಿವೆ.

    ಇನ್ನೂ ಅಜಿತ್ ದೋವಲ್ ಜೊತೆಗೆ, ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ. ಚೀಫ್ ಆಫ್ ಡಿಫೆನ್ಸ್ ಜನರಲ್ ಅನಿಲ್ ಚೌಹಾಣ್, ಭೂಸೇನೆಯ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ, ನೌಕಾಪಡೆಯ ಮುಖ್ಯಸ್ಥ ದಿನೇಶ್ ತ್ರಿಪಾಠಿ, ವಾಯುಪಡೆಯ ಮುಖ್ಯಸ್ಥ ಎ.ಪಿ ಸಿಂಗ್ ಈ ತುರ್ತು ಸಭೆಯಲ್ಲಿ ಭಾಗವಹಿಸಿದ್ದರು.

    ಉನ್ನತ ಮಿಲಿಟರಿ ಅಧಿಕಾರಿಗಳು ಈಗಾಗಲೇ ದಾಳಿ ನಡೆದ ಪ್ರದೇಶದಲ್ಲಿ ಹಾಜರಿದ್ದಾರೆ. ದಾಳಿಕೋರರನ್ನು ಸದೆಬಡಿಯಲು ಹೆಚ್ಚಿನ ಸೈನಿಕರನ್ನು ನಿಯೋಜಿಸಲಾಗಿದೆ. ಶೋಧ ಕಾರ್ಯಾಚರಣೆಯನ್ನು ತೀವ್ರಗೊಳಿಸಲಾಗಿದೆ. ಇದೊಂದು ಅತ್ಯಂತ ಹೇಡಿತನದ ಮತ್ತು ಖಂಡನೀಯ ಕೃತ್ಯ. ಮೃತ ಪಟ್ಟ ಕುಟುಂಬಕ್ಕೆ ಸಾಂತ್ವನಗಳು ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

  • ಇಂದು ಮನೆಗೆ ಮರಳಬೇಕಿದ್ದ ಉದ್ಯಮಿ ಉಗ್ರರ ಗುಂಡಿಗೆ ಬಲಿ – ಇಡೀ ಗ್ರಾಮದಲ್ಲಿ ಮಡುಗಟ್ಟಿದ ಮೌನ

    ಇಂದು ಮನೆಗೆ ಮರಳಬೇಕಿದ್ದ ಉದ್ಯಮಿ ಉಗ್ರರ ಗುಂಡಿಗೆ ಬಲಿ – ಇಡೀ ಗ್ರಾಮದಲ್ಲಿ ಮಡುಗಟ್ಟಿದ ಮೌನ

    – 3 ತಿಂಗಳ ಹಿಂದಷ್ಟೇ ಮದ್ವೆಯಾಗಿದ್ದ ಉದ್ಯಮಿ

    ಶ್ರೀನಗರ: ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಕಾನ್ಪುರ (Kanpur) ಜಿಲ್ಲೆಯ ಉದ್ಯಮಿ (Businessman)  ಉಗ್ರರ ಗುಂಡಿಗೆ ಬಲಿಯಾಯಾಗಿದ್ದಾರೆ.

    ಕಳೆದ ಫೆಬ್ರವರಿಯಲ್ಲಿ ಮದುವೆಯಾಗಿದ್ದವ (Marriage) ಉದ್ಯಮಿ ಶಂಭು ದ್ವಿವೇದಿ (31) ಪತ್ನಿಯೊಂದಿಗೆ ಕಾಶ್ಮೀರ ಪ್ರವಾಸಕ್ಕೆ ತೆರಳಿದ್ದರು. ಇಂದು (ಬುಧವಾರ) ಕಾನ್ಪುರದಲ್ಲಿರುವ ತಮ್ಮ ಮನೆಗೆ ಹಿಂದಿರುಗಬೇಕಿತ್ತು. ದುರದೃಷ್ಟವಶಾತ್‌ ಉಗ್ರರ ಗುಂಡಿಗೆ ಬಲಿಯಾಗಿ ಶಂಭು ದ್ವಿವೇದಿ ಅವರ ಶವ ಮನೆಗೆ ಹಿಂದಿರುಗುತ್ತಿದೆ. ಹೀಗಾಗಿ ಕಾನ್ಪುರ ಜಿಲ್ಲೆಯ ಮಹಾರಾಜಪುರ ಪ್ರದೇಶದಲ್ಲಿರುವ ಹಾಥಿಪುರ ಗ್ರಾಮವೇ ಶೋಕಸಾಗರದಲ್ಲಿ ಮುಳುಗಿದೆ. ಇದನ್ನೂ ಓದಿ: ಇದು ರಾಜಕೀಯ ಮಾಡುವ ಸಮಯವಲ್ಲ, ಅಮಾಯಕರಿಗೆ ನ್ಯಾಯ ಕೊಡಿಸುವ ಸಮಯ: ಮಲ್ಲಿಕಾರ್ಜುನ ಖರ್ಗೆ

    ಕಾನ್ಪುರ ಪೊಲೀಸ್ ಆಯುಕ್ತರಾದ ಜಿತೇಂದ್ರ ಪ್ರತಾಪ್ ಸಿಂಗ್, ಗ್ರಾಮಕ್ಕೆ ತಲುಪಿ, ದ್ವಿವೇದಿ ಅವರ ಕುಟುಂಬವನ್ನು ಭೇಟಿ ಮಾಡಿ ವಿಷಯ ತಿಳಿಸಿದ್ದಾರೆ. ಉತ್ತರ ಪ್ರದೇಶ ಸರ್ಕಾರವು ಅವರಿಗೆ ಸಾಧ್ಯವಿರುವ ಎಲ್ಲ ರೀತಿಯಲ್ಲಿ ಸಹಾಯ ಮಾಡಲಿದೆ ಎಂದು ಭರವಸೆಯನ್ನೂ ನೀಡಿದ್ದಾರೆ. ಸಿಎಂ ಗ್ರಾಮಕ್ಕೆ ಭೇಟಿ ನೀಡುವಂತೆ ಸೂಚನೆ ನೀಡಿದ್ದರು. ಅಲ್ಲದೇ ಕುಟುಂಬಕ್ಕೆ ಅಗತ್ಯವಿರುವ ಎಲ್ಲ ಬೆಂಬಲ ಸಿಗುವಂತೆ ನೋಡಿಕೊಳ್ಳಲು ನಮಗೆ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದ್ದಾರೆ. ಘಟನೆ ನೆನೆದು ಸಿಎಂ ಯೋಗಿ ಆದಿತ್ಯನಾಥ್‌ ಸಹ ಸಂತಾಪ ಸೂಚಿಸಿದ್ದಾರೆ. ಇದನ್ನೂ ಓದಿ: ಪಹಲ್ಗಾಮ್ ಉಗ್ರರ ದಾಳಿ ಪ್ರಪಂಚಕ್ಕೇ ದೊಡ್ಡ ಆಘಾತ, ಇಂತಹ ಉಗ್ರ ಸಂಘಟನೆಗಳನ್ನು ಸದೆಬಡೆಯಬೇಕು – ಡಿಕೆಶಿ

    ಕಳೆದ ವಾರವಷ್ಟೇ ದ್ವಿವೇದಿ ತಮ್ಮ ಪತ್ನಿ ಹಾಗೂ ಇತರ 9 ಮಂದಿ ಕುಟುಂಬ ಸದಸ್ಯರೊಂದಿಗೆ ಕಾಶ್ಮೀರಕ್ಕೆ ಪ್ರವಾಸ ಹೊರಟಿದ್ದರು. ಬುಧವಾರ (ಇಂದು) ಹಿಂದಿರುಗಬೇಕಿತ್ತು. ಮಂಗಳವಾರ ಮಧ್ಯಾಹ್ನದ ವೇಳೆಗೆ ಕುದುರೆ ಸವಾರಿ ಮಾಡಲು ಮುಂದಾಗಿದ್ದರು, ಅಷ್ಟರಲ್ಲೇ ಅಲ್ಲಿಗೆ ಬಂದ ಉಗ್ರರು ಪತ್ನಿಯ ಮುಂದೆಯೇ ದ್ವಿವೇದಿ ತಲೆಗೆ ಗುಂಡು ಹಾರಿಸಿ ಕೊಂದಿದ್ದಾರೆ ಎಂದು ಶುಭಂ ಚಿಕ್ಕಪ್ಪ ಮನೋಜ್ ದ್ವಿವೇದಿ ತಿಳಿಸಿದ್ದಾರೆ. ಇದನ್ನೂ ಓದಿ: ಗುಡ್ಡಕುಸಿತವಾಗಿದ್ದಕ್ಕೆ ಬಚಾವ್ – ಪಹಲ್ಗಾಮ್‌ಗೆ ಹೋಗಬೇಕಿದ್ದ 13 ಕನ್ನಡಿಗರು ಅದೃಷ್ಟವಶಾತ್ ಪಾರು

  • ಪಹಲ್ಗಾಮ್ ಉಗ್ರರ ದಾಳಿ ಪ್ರಪಂಚಕ್ಕೇ ದೊಡ್ಡ ಆಘಾತ, ಇಂತಹ ಉಗ್ರ ಸಂಘಟನೆಗಳನ್ನು ಸದೆಬಡೆಯಬೇಕು – ಡಿಕೆಶಿ

    ಪಹಲ್ಗಾಮ್ ಉಗ್ರರ ದಾಳಿ ಪ್ರಪಂಚಕ್ಕೇ ದೊಡ್ಡ ಆಘಾತ, ಇಂತಹ ಉಗ್ರ ಸಂಘಟನೆಗಳನ್ನು ಸದೆಬಡೆಯಬೇಕು – ಡಿಕೆಶಿ

    – ಕೇಂದ್ರದಿಂದ ಸರ್ವಪಕ್ಷ ಸಭೆ ಕರೆಯಲಿ ಎಂದ ಡಿಸಿಎಂ

    ಬೆಂಗಳೂರು: ಪಹಲ್ಗಾಮ್ (Pahalgam) ಉಗ್ರರ ದಾಳಿ (Terrorist Attack) ವಿಚಾರದಲ್ಲಿ ಕೇಂದ್ರ ಸರ್ಕಾರದ ಜೊತೆಗೆ ನಿಲ್ಲುತ್ತೇವೆ, ರಾಜಕೀಯ ಮಾಡುವುದಿಲ್ಲ, ಕಾಶ್ಮೀರದಲ್ಲಿನ ಉಗ್ರರ ದಾಳಿ ಇಡೀ ಪ್ರಪಂಚಕ್ಕೆ ದೊಡ್ಡ ಆಘಾತ. ಈ ಭಯೋತ್ಪಾದಕ ದಾಳಿಯನ್ನು ನಾವು ಖಂಡಿಸುತ್ತೇವೆ. ಈ ಉಗ್ರರು ಹಾಗೂ ಭಯೋತ್ಪಾದಕ ಸಂಘಟನೆಗಳನ್ನು ಸದೆಬಡಿಯಬೇಕು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಹೇಳಿದ್ದಾರೆ.

    ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ (KPCC) ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾವು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಕೇಂದ್ರ ಸರ್ಕಾರ ಈ ವಿಚಾರದಲ್ಲಿ ಜಾಗೃತವಾಗಿ ಕೆಲಸ ಮಾಡಬೇಕಿದೆ. ಮುಖ್ಯಮಂತ್ರಿಗಳು ಈ ವಿಚಾರ ತಿಳಿದ ಕೂಡಲೇ ತಕ್ಷಣವೇ ರಾಜ್ಯ ಸರ್ಕಾರದ ಪರವಾಗಿ ಸಚಿವ ಸಂತೋಷ ಲಾಡ್ ಅವರ ಮುಖಂಡತ್ವದಲ್ಲಿ ಒಂದು ತಂಡವನ್ನು ಕಳುಹಿಸಿದ್ದಾರೆ ಎಂದು ತಿಳಿಸಿದರು.ಇದನ್ನೂ ಓದಿ: ಗುಡ್ಡಕುಸಿತವಾಗಿದ್ದಕ್ಕೆ ಬಚಾವ್ – ಪಹಲ್ಗಾಮ್‌ಗೆ ಹೋಗಬೇಕಿದ್ದ 13 ಕನ್ನಡಿಗರು ಅದೃಷ್ಟವಶಾತ್ ಪಾರು

    ಧರ್ಮದ ಹೆಸರಿನಲ್ಲಿ ಭಯೋತ್ಪಾದಕ ದಾಳಿ ನಡೆದಿರುವುದು ನಿಜಕ್ಕೂ ಕೆಟ್ಟ ಬೆಳವಣಿಗೆ. ಕಾಂಗ್ರೆಸ್ (Congress) ಪಕ್ಷ ಇದನ್ನು ಖಂಡಿಸುತ್ತದೆ. ಈ ವಿಚಾರದಲ್ಲಿ ನಮ್ಮ ಪಕ್ಷ ಕೇಂದ್ರ ಸರ್ಕಾರದ ಪರ ನಿಲ್ಲುವುದಾಗಿ ತಿಳಿಸಿದೆ. ಕೇಂದ್ರ ಸರ್ಕಾರ ಈ ಭಯೋತ್ಪಾದಕರನ್ನು ಸದೆಬಡಿಯಬೇಕು. ಇಂತಹ ಭಯೋತ್ಪಾದಕ ಸಂಘಟನೆಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಇಂತಹ ಸಂಘಟನೆಗಳು ಯಾವುದೇ ದೇಶಕ್ಕೆ ಸಂಬಂಧಿಸಿದರೂ ಇವುಗಳನ್ನು ಬುಡಸಮೇತ ಕಿತ್ತೊಗೆಯಬೇಕು. ಕಾಶ್ಮೀರದಲ್ಲಿ ಶಾಂತಿ ನೆಲೆಸುವಂತೆ ಮಾಡಬೇಕು ಎಂದು ಹೇಳಿದರು.

    ಈ ಘಟನೆ ವಿದೇಶಾಂಗ ನೀತಿ, ಪ್ರವಾಸಿಗರು ಹಾಗೂ ದೇಶದ ಜನರ ಮೇಲೆ ಪ್ರಭಾವ ಬೀರುವುದರಿಂದ ಕೇಂದ್ರ ಸರ್ಕಾರ ಈ ವಿಚಾರವಾಗಿ ಸರ್ವಪಕ್ಷ ಸಭೆ ಕರೆಯಬೇಕು. ನಾನು ಈಗಷ್ಟೇ ದಾಳಿಯಲ್ಲಿ ಮೃತರ ಕುಟುಂಬದವರ ಜೊತೆ ಚರ್ಚೆ ಮಾಡಿದೆ. ಶಿವಮೊಗ್ಗ ಜಿಲ್ಲಾ ಸಚಿವರು ಹಾಗೂ ಪೊಲೀಸ್ ಅಧಿಕಾರಿಗಳ ಜೊತೆ ಮಾತನಾಡಿದ್ದು, ಮೃತರ ಕುಟುಂಬಸ್ಥರನ್ನು ಭೇಟಿ ಮಾಡುವಂತೆ ತಿಳಿಸಿದ್ದೇನೆ ಎಂದರು.

    ಧರ್ಮದ ಆಧಾರದ ಮೇಲೆ ಹತ್ಯೆ ನಡೆಸಿರುವ ದಾಳಿಯನ್ನು ಇದೇ ಮೊದಲ ಬಾರಿಗೆ ನೋಡಿದ್ದೇನೆ. ನಮ್ಮ ಸಮಾಜ ಎತ್ತ ಸಾಗುತ್ತಿದೆ ಎಂದು ಆಘಾತವಾಗಿದೆ. ಇದನ್ನು ಸಹಿಸಲು ಸಾಧ್ಯವಿಲ್ಲ. ಈ ಸಂದರ್ಭದಲ್ಲಿ ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಈ ದುಃಖವನ್ನು ಭರಿಸುವ ಶಕ್ತಿ ಅವರ ಕುಟುಂಬದವರಿಗೆ ಸಿಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಹೇಳಿದರು.

    ಗುಪ್ತಚರ ಇಲಾಖೆ ವೈಫಲ್ಯ ಇದೆ ಎಂದು ಭಾವಿಸುತ್ತೀರಾ ಎಂದು ಕೇಳಿದಾಗ, ಈ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಈ ವಿಚಾರದಲ್ಲಿ ನಾವು ರಾಜಕೀಯ ಮಾಡುವುದಿಲ್ಲ. ಕೇಂದ್ರ ಸರ್ಕಾರ ಸರ್ವಪಕ್ಷ ಸಭೆ ಕರೆದು ಈ ವಿಚಾರವನ್ನು ಚರ್ಚಿಸಬೇಕು. ದೇಶವನ್ನು ರಕ್ಷಣೆ ಮಾಡುವುದು ನಮ್ಮ ಮೊದಲ ಆದ್ಯತೆ ಎಂದು ತಿಳಿಸಿದರು.ಇದನ್ನೂ ಓದಿ: ಪಹಲ್ಗಾಮ್ ಉಗ್ರರ ದಾಳಿ; ಮಾಹಿತಿ ಕೊರತೆ, ಕೇಂದ್ರದ ಗುಪ್ತಚರ ಇಲಾಖೆಯ ವೈಫಲ್ಯ: ಸಿಎಂ

  • ʻನಿನ್ನನ್ನು ಕೊಲ್ಲುವುದಿಲ್ಲ, ಹೋಗಿ ಮೋದಿಗೆ ಇದನ್ನ ಹೇಳುʼ – ಶಿವಮೊಗ್ಗದ ಉದ್ಯಮಿ ಪತ್ನಿಗೆ ಉಗ್ರ ಹೇಳಿದ ಮಾತು

    ʻನಿನ್ನನ್ನು ಕೊಲ್ಲುವುದಿಲ್ಲ, ಹೋಗಿ ಮೋದಿಗೆ ಇದನ್ನ ಹೇಳುʼ – ಶಿವಮೊಗ್ಗದ ಉದ್ಯಮಿ ಪತ್ನಿಗೆ ಉಗ್ರ ಹೇಳಿದ ಮಾತು

    – ಆ ಉಗ್ರರು ಹಿಂದೂಗಳನ್ನ ಗುರಿಯಾಗಿಸಿಕೊಂಡೇ ಬಂದಂತೆ ತೋರ್ತಿತ್ತು; ಪಲ್ಲವಿ

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದಿರುವ ಭಯೋತ್ಪಾದಕ ದಾಳಿಗೆ (Terrorist Attack) ಇಡೀ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ, ಅಮಿತ್‌ ಶಾ ಸೇರಿದಂತೆ ಪ್ರಮುಖರು ತಮ್ಮ ಎಕ್ಸ್‌ ಖಾತೆಗಳಲ್ಲಿ ಪೋಸ್ಟ್‌ ಹಂಚಿಕೊಳ್ಳುವ ಮೂಲಕ ಖಂಡಿಸಿದ್ದಾರೆ. ಈ ನಡುವೆ ದಾಳಿಯಲ್ಲಿ ತನ್ನನ ಗಂಡನನ್ನು ಕಳೆದುಕೊಂಡ ಶಿವಮೊಗ್ಗ (Shivamogga) ಮೂಲದ ರಿಯಲ್‌ ಎಸ್ಟೇಟ್ ಉದ್ಯಮಿಯ‌ ಪತ್ನಿ ಪಲ್ಲವಿ, ತಮ್ಮ ದುಃಖವನ್ನು ಹಂಚಿಕೊಂಡಿದ್ದಾರೆ.

    ಮಗನಿಗೆ ಬೇಸಿಗೆ ರಜೆ ಸಿಕ್ಕ ಹಿನ್ನೆಲೆಯಲ್ಲಿ ಕಾಶ್ಮೀರಕ್ಕೆ ತೆರಳಿದ್ದ ವೇಳೆ ದಾಳಿ ನಡೆದಿದೆ. ದಾಳಿಯಿಂದ ಬದುಕುಳಿದಿರುವ ಪಲ್ಲವಿ, ಮನಕಲುಕುವ ಕ್ಷಣಗಳನ್ನು ವಿವರಿಸಿದ್ದಾರೆ. ನಾನು, ನನ್ನ ಪತ್ನಿ, ಮಗ ಕಾಶ್ಮೀರಕ್ಕೆ ಹೋಗಿದ್ದೆವು. ನಾವು ಪಹಲ್ಗಾಮ್‌ನಲ್ಲಿದ್ದಾಗ ಮಧ್ಯಾಹ್ನ 1:30ರ ವೇಳೆಗೆ ದಾಳಿ ನಡೆಯಿತು. ನನ್ನ ಪತಿಯನ್ನ ಕಣ್ಣಮುಂದೆಯೇ ಕೊಂದುಬಿಟ್ಟರು. ಅದನ್ನ ನೆನೆಸಿಕೊಂಡ್ರೆ ಈಗಲೂ ಕೆಟ್ಟ ಕನಸಿನಂತೆ ಭಾಸವಾಗ್ತಿದೆ ಎಂಧು ಭಾವುಕರಾದರು. ಇದನ್ನೂ ಓದಿ: ಪತಿಯನ್ನು ಕೊಂದಿದ್ದೀರಿ, ನನ್ನನ್ನೂ ಕೊಂದುಬಿಡಿ – ಉಗ್ರರಿಂದ ಹತ್ಯೆಗೀಡಾದ ಉದ್ಯಮಿ ಪತ್ನಿಯ ಕಣ್ಣೀರು

    ಅವರು ದಾಳಿ ಮಾಡಿದ್ದು ನೋಡಿದ್ರೆ, ಹಿಂದೂಗಳನ್ನ ಗುರಿಯಾಗಿಸಿಕೊಂಡೇ ಬಂದಂತೆ ತೋರ್ತಿತ್ತು. ಮೂರರಿಂದ ನಾಲ್ಕು ಜನ ನಮ್ಮ ಮೇಲೆ ದಾಳಿ ಮಾಡಿದ್ರು. ನಾನು ಅವರಿಗೆ ಹೇಈದೆ. ನನ್ನ ಪತಿಯನ್ನ ಕೊಂದಿದ್ದೀರಿ, ನನ್ನನ್ನೂ ಕೊಂದುಬಿಡಿ ಎಂದು ಹೇಳಿದೆ. ಆಗ ಅವರಲ್ಲಿದ್ದ ಒಬ್ಬ ʻನಾನು ನಿನ್ನನ್ನ ಕೊಲ್ಲುವುದಿಲ್ಲ, ಹೋಗಿ ಮೋದಿಗೆ ಇದನ್ನ ಹೇಳುʼ ಅಂತ ಹೇಳಿದ ಎಂದು ಹೇಳಿದರು.  ಇದನ್ನೂ ಓದಿ: ದುಷ್ಟ ಅಜೆಂಡಾ ಎಂದಿಗೂ ಯಶಸ್ವಿಯಾಗಲ್ಲ, ದಾಳಿಕೋರರನ್ನು ಸುಮ್ಮನೆ ಬಿಡಲ್ಲ: ಗುಡುಗಿದ ಮೋದಿ

    ಇನ್ನೂ ʻಪಬ್ಲಿಕ್‌ ಟಿವಿʼ ಜೊತೆ ಮಾತನಾಡಿದ ಪಲ್ಲವಿ ಅವರು, ನಾವು ಒಂದು 500 ಜನ ಇದ್ವಿ. ಮಿನಿ ಸ್ವಿಡ್ಜರ್‌ಲ್ಯಾಂಡ್ ಅಂತಾ ಒಂದು ಪಾಯಿಂಟ್ ಅದು.‌ ಆಗಷ್ಟೇ ಹೋಗಿ ಕುದುರೆ ಇಳಿದಿದ್ವಿ. ನನ್ನ ಮಗ ಬೆಳಗ್ಗೆಯಿಂದ ಏನೂ ತಿಂದಿರಲಿಲ್ಲ. ಅಲ್ಲೇನಾದ್ರೂ ತಗೊಳೋಕೆ ಅಂತಾ ನಮ್ಮ ಮನೆಯವರು, ಅಂಗಡಿಯವರ ಬಳಿ ವಿಚಾರಿಸಲು ಹೋದರು. ನನ್ನ ಮಗನ ಕರೆಯಲು ನಾನು ಹೋದೆ. ಗುಂಡಿನ ತರ ಸೌಂಡ್ ಬಂತು. ನಾವೆಲ್ಲಾ ಆರ್ಮಿಯವರು ಇರಬೇಕು ಅಂನ್ಕೊಂಡ್ವಿ. ನಾನು ಈ ಕಡೆ ತಿರುಗಿ ನೋಡೋ ಅಷ್ಟರಲ್ಲಿ ಬೇರೆಯವರೆಲ್ಲಾ ಓಡುತ್ತಿದ್ದರು. ನನ್ನ ಮಗನ ಕರೆದುಕೊಳ್ಳೋಕೆ ಅಂತಾ ನೋಡ್ತಿನಿ, ಅಷ್ಟರಲ್ಲಿ ನಮ್ಮ ಮನೆಯವರು ರಕ್ತದ ಮಡುವಿನಲ್ಲಿ ಇದ್ದರು. ಅವರು ತಲೆಗೆ ಹೊಡೆದಿದ್ದಾರೆ ಎಂದು ತಿಳಿಸಿದ್ದಾರೆ.  ಇದನ್ನೂ ಓದಿ: Pahalgam Terrorist Attack – ಉಗ್ರರ ದಾಳಿಗೆ ಮತ್ತೊಬ್ಬ ಕನ್ನಡಿಗ ಬಲಿ

    ನಾನು ಅಲ್ಲೇ ಇದ್ದ ಭಯೋತ್ಪಾದಕನ ಬಳಿ ನನ್ನ ಪತಿಯನ್ನು ಸಾಯಿಸಿದ್ದೀರಾ, ನನ್ನನ್ನು ಸಾಯಿಸಿ ಎಂದು ನಾನು ಕೇಳಿದೆ. ನನ್ನ ಮಗ ಏ ನಾಯಿ… ನನ್ನ ತಂದೆಯನ್ನು ಕೊಂದೆಯಲ್ಲಾ, ನಮ್ಮನ್ನು ಕೊಂದುಬಿಡು ಎಂದ.. ಇಲ್ಲ ನಿಮ್ಮನ್ನು ಸಾಯಿಸಲ್ಲ. ಮೋದಿಗೆ ಹೋಗಿ ಹೇಳು ಎಂದು ಹೋದ. ನಮ್ಮ ಎದುರಿಗೆ ಓಡಾಡುತ್ತಿದ್ದರು. ಯಾರೂ ಇರಲಿಲ್ಲ.. ಸೈನಿಕರೂ ಯಾರೂ ಇರಲಿಲ್ಲ. ಮಾಮೂಲಿ ಬಟ್ಟೆಯಲ್ಲಿ ಇದ್ದರು. ನವ ದಂಪತಿ ಒಬ್ಬರು ಬಂದಿದ್ದರು. ಗಂಡಸರಿಗೆ ಮಾತ್ರ ಹೊಡೆದರು. ಹೆಂಗಸರು, ಮಕ್ಕಳಿಗೆ ಏನೂ ಆಗಿಲ್ಲ. ನಮಗೆ ನಮ್ಮ ಮನೆಯವರ ಮೃತದೇಹ ಬೇಗ ಸಿಗಬೇಕು, ಫ್ಲೈಟ್ ಅರೆಂಜ್ ಮಾಡಿ, ಕಳಿಸಿ ಎಂದು ಒತ್ತಾಯಿಸಿದ್ದಾರೆ.

  • ಗುಂಡು ಹಾರಿಸುವ ಮುನ್ನ ಪುರುಷರಿಗೆ ಇಸ್ಲಾಂನ ʻಕಲಿಮಾʼ ಪಠಿಸುವಂತೆ ಬೆದರಿಸಿದ್ದ ಉಗ್ರರು!

    ಗುಂಡು ಹಾರಿಸುವ ಮುನ್ನ ಪುರುಷರಿಗೆ ಇಸ್ಲಾಂನ ʻಕಲಿಮಾʼ ಪಠಿಸುವಂತೆ ಬೆದರಿಸಿದ್ದ ಉಗ್ರರು!

    ಶ್ರೀನಗರ: ಲಷ್ಕರ್‌ ಶಾಖೆಯ ಟಿಆರ್‌ಎಫ್‌ (TRF) ಭಯೋತ್ಪಾದಕ ಗುಂಪು ಪ್ರವಾಸಿಗರ ಮೇಲೆ ನಡೆಸಿದ ಗುಂಡಿನ ದಾಳಿಯಲ್ಲಿ ಕನಿಷ್ಠ 30 ಮಂದಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಸೇನಾ ಸಮವಸ್ತ್ರ ಧರಿಸಿ ಬಂದ ಉಗ್ರರು ಮಾತನಾಡಿರುವ ನೆಪದಲ್ಲಿ ಬಂದು ಗುಂಡು ಹಾರಿಸಿದ್ದಾರೆ.

    ಮೊದಲು ನೀವು ಮುಸಲ್ಮಾನರಾ? (Muslims) ಎಂದು ಕೇಳಿದ ಉಗ್ರರು, ಗುಂಡು ಹಾರಿಸುವುದಕ್ಕೂ ಮುನ್ನ ಪುರುಷರಿಗೆ ಇಸ್ಲಾಂನ ʻಕಲಿಮಾʼ (Kalima) ಪಠಿಸುವಂತೆ ಬೆದರಿಸಿದ್ದಾರೆ ಎಂದು ವರದಿಗಳಿಂದ ತಿಳಿದುಬಂದಿದೆ. ಇದನ್ನೂ ಓದಿ: ಬೇಲ್ಪುರಿ ತಿನ್ನುವಾಗ ನೀನು ಮುಸಲ್ಮಾನನಾ ಅಂತ ಕೇಳಿ ಗುಂಡು ಹಾರಿಸಿದ ಉಗ್ರ – ದಾಳಿ ಭೀಕರತೆ ಬಿಚ್ಚಿಟ್ಟ ಪ್ರತ್ಯಕ್ಷದರ್ಶಿ

    ʻಕಲಿಮಾʼ ಅಥವಾ ಶಹದಾ ಅಂದ್ರೆ ಏನು?
    ಕಲಿಮಾ ಅಥವಾ ಶಹದಾ ಅನ್ನೋದು ನಂಬಿಕೆಯ ಇಸ್ಲಾಮಿಕ್ (Islamic) ಘೋಷಣೆ. ಇದು ಇಸ್ಲಾಂ ನಂಬಿಕೆಯ ಐದು ಸ್ತಂಭಗಳಲ್ಲಿ ಒಂದೆಂದು ನಂಬುತ್ತಾರೆ. ಅರೇಬಿಕ್‌ನಲ್ಲಿ ‘ಅಶ್ಹದು ಆನ್ ಲಾ ಇಲಾಹ ಇಲ್ಲಲ್ಲಾಹ್, ವ ಅಶ್ಹದು ಅನ್ನ ಮುಹಮ್ಮದುರ್ ರಸುಲುಲ್ಲಾಹ್’ ಎಂದು ಬಣ್ಣಿಸುತ್ತಾರೆ. ಇದನ್ನು ಪ್ರಾಮಾಣಿಕವಾಗಿ ಪಠಿಸಿದವರು ಮುಸ್ಲಿಂ ಅನುಯಾಯಿಗಳಾಗುತ್ತಾರೆ, ಅವರು ಇಸ್ಲಾಂ ಧರ್ಮದ ಮಡಿಲಿಗೆ ಬರುತ್ತಾರೆ ಅನ್ನೋದು ನಂಬಿಕೆ. ಆದ್ದರಿಂದಲೇ ಪ್ರವಾಸಿಗರಿಗೆ ಗುಂಡು ಹಾರಿಸುವುದಕ್ಕೂ ಮುನ್ನ ಕಲಿಮಾ ಪಠಿಸುವಂತೆ ಒತ್ತಾಯಿಸಿದ್ದಾರೆ ಎಂದು ಹೇಳಲಾಗಿದೆ.  ಇದನ್ನೂ ಓದಿ: ಕಾಶ್ಮೀರದಲ್ಲಿ ಉಗ್ರರ ಗುಂಡಿಗೆ ಬಲಿಯಾದ ಕನ್ನಡಿಗ ಮಂಜುನಾಥ್‌ ರಾವ್‌ ಯಾರು?

    ಸೂಕ್ತ ಕ್ರಮಕ್ಕೆ ಅಮಿತ್‌ ಶಾಗೆ ಸೂಚಿಸಿದ ಮೋದಿ:
    ಭಯೋತ್ಪಾದಕ ದಾಳಿಯ ನಂತರ, ಪ್ರಧಾನಿ ನರೇಂದ್ರ ಮೋದಿ ಅವರು ಸೌದಿ ಅರೇಬಿಯಾದಿಂದಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಈ ಹಿನ್ನೆಲೆ ಅಮಿತ್ ಶಾ ತುರ್ತು ಸಭೆ ಕರೆದಿದ್ದಾರೆ. ಸಭೆಯಲ್ಲಿ ಐಬಿ ಗೃಹ ಕಾರ್ಯದರ್ಶಿ ಮತ್ತು ಗೃಹ ಸಚಿವಾಲಯದ ಇತರ ಅಧಿಕಾರಿಗಳು ಉಪಸ್ಥಿತರಿದ್ದರು. ಜಮ್ಮು ಮತ್ತು ಕಾಶ್ಮೀರ ಡಿಜಿಪಿ ಈ ಸಭೆಯಲ್ಲಿ ವರ್ಚುವಲ್ ಆಗಿ ಭಾಗವಹಿಸಿದ್ದಾರೆ.  ಇದನ್ನೂ ಓದಿ: ಕಾಶ್ಮೀರದಲ್ಲಿ ಉಗ್ರರ ಪೈಶಾಚಿಕ ಕೃತ್ಯ | ಸೌದಿಯಿಂದಲೇ ಮೋದಿ ಕರೆ, ಸ್ಥಳಕ್ಕೆ ಹೊರಟ ಅಮಿತ್‌ ಶಾ

    ಸದ್ಯ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಸಹ ದಾಳಿಯನ್ನು ಖಂಡಿಸಿದ್ದು, ಪ್ರವಾಸಿಗರ ಮೇಲೆ ದಾಳಿ ನಡೆಸುವುದು ಅತ್ಯಂತ ಹೇಯ ಕೃತ್ಯ ಎಂದು ಎಂದು ಕಿಡಿ ಕಾರಿದ್ದಾರೆ. ಈ ನಡುವೆ ಭಯೋತ್ಪಾದಕರನ್ನು ಹಿಡಿಯಲು ಭದ್ರತಾ ಪಡೆಗಳು ಶೋಧ ಕಾರ್ಯ ಆರಂಭಿಸಿವೆ.  ಇದನ್ನೂ ಓದಿ: ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರ ದಾಳಿ – ಶಿವಮೊಗ್ಗದ ಉದ್ಯಮಿ ಸಾವು, 12 ಮಂದಿಗೆ ಗಾಯ

  • ಬೇಲ್ಪುರಿ ತಿನ್ನುವಾಗ ನೀನು ಮುಸಲ್ಮಾನನಾ ಅಂತ ಕೇಳಿ ಗುಂಡು ಹಾರಿಸಿದ ಉಗ್ರ – ದಾಳಿ ಭೀಕರತೆ ಬಿಚ್ಚಿಟ್ಟ ಪ್ರತ್ಯಕ್ಷದರ್ಶಿ

    ಬೇಲ್ಪುರಿ ತಿನ್ನುವಾಗ ನೀನು ಮುಸಲ್ಮಾನನಾ ಅಂತ ಕೇಳಿ ಗುಂಡು ಹಾರಿಸಿದ ಉಗ್ರ – ದಾಳಿ ಭೀಕರತೆ ಬಿಚ್ಚಿಟ್ಟ ಪ್ರತ್ಯಕ್ಷದರ್ಶಿ

    – ಇದು ಹೇಡಿತನದ ಕೃತ್ಯ; ರಾಜನಾಥ್‌ ಸಿಂಗ್‌ ತೀವ್ರ ಖಂಡನೆ

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ (Pahalgam) ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ದಾಳಿಯಲ್ಲಿ ಶಿವಮೊಗ್ಗ ಮೂಲದ ರಿಯಲ್‌ ಎಸ್ಟೇಟ್‌ ಉದ್ಯಮಿ ಸಾವನ್ನಪ್ಪಿದ್ದು, ಸುಮಾರು 12 ಮಂದಿ ಗಾಯಗೊಂಡಿದ್ದಾರೆ. ಈ ದಾಳಿಯ ಹೊಣೆಯನ್ನು ಭಯೋತ್ಪಾದಕ ಸಂಘಟನೆ ಟಿಆರ್‌ಎಫ್ (TRF) ಹೊತ್ತುಕೊಂಡಿದೆ.

    ಅಮರನಾಥ ಯಾತ್ರೆ ಆರಂಭವಾಗುವ ಕೆಲವೇ ದಿನಗಳ ಮೊದಲು ದಾಳಿ ನಡೆದಿದ್ದು. ಭದ್ರತೆಯ ಬಗ್ಗೆ ಕಳವಳ ಹೆಚ್ಚಿಸಿದೆ. ಇನ್ನೂ ದಾಳಿಯನ್ನು ಕಣ್ಣಾರೆ ಕಂಡ ಪ್ರತ್ಯಕ್ಷದರ್ಶಿಗಳು ಭೀಕರತೆಯನ್ನು ವಿವರಿಸಿದ್ದಾರೆ.

    ಭಯೋತ್ಪಾದಕರು (Terrorists) ಗುಂಡಿನ ಮಳೆಗರೆಯುತ್ತಿದ್ದಂತೆ ಪ್ರವಾಸಿಗರು ಹಾಗೂ ಸ್ಥಳೀಯರು ದಿಕ್ಕಾಪಾಲಾಗಿ ಓಡಿದ್ದಾರೆ. ಈ ಕುರಿತ ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿವೆ. ದಾಳಿ ಸಂದರ್ಭದಲ್ಲಿ ಭಯೋತ್ಪಾದಕ ಮೊದಲು ನನ್ನ ಪತಿಯ ಬಳಿಗೆ ಬಂದು ನೀನು ಮುಸಲ್ಮಾನನಾ? ಅಂತ ಕೇಳಿದ, ಬಳಿಕ ಗುಂಡು ಹಾರಿಸಿದ. ಅದೇ ರೀತಿ ಪ್ರವಾಸಿಗರ ಮೇಲೆ ಗುಂಡು ಹಾರಿಸಿರುವುದಾಗಿ ಪ್ರತ್ಯಕ್ಷದರ್ಶಿ ಮಹಿಳೆ ಹೇಳಿದ್ದಾರೆ.

    ಉಗ್ರ ಗುಂಡು ಹಾರಿಸುತ್ತಿದ್ದಂತೆ ಮಹಿಳೆ ಚೀರಾಡಿದ್ದಾರೆ. ಅಲ್ಲದೇ ಪತಿಯನ್ನು ಕೊಂದಾಯ್ತು ನನ್ನನ್ನೂ ಕೊಂದುಬಿಡಿ ಅಂತಾ ಗೋಳಾಡಿದ್ದಾರೆ. ಬಳಿಕ ಅಲ್ಲಿನ ಸ್ಥಳೀಯರು ನೆರವಿಗೆ ಧಾವಿಸಿದ್ದಾರೆ.

    ರಾಜನಾಥ್‌ ಸಿಂಗ್‌ ಖಂಡನೆ:
    ಇನ್ನೂ ಭಯೋತ್ಪಾದಕ ದಾಳಿಯನ್ನು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಖಂಡಿಸಿದ್ದಾರೆ. ಪಹಲ್ಗಾಮ್ (ಜಮ್ಮು ಮತ್ತು ಕಾಶ್ಮೀರ) ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಸುದ್ದಿಯಿಂದ ತೀವ್ರ ದುಃಖಿತನಾಗಿದ್ದೇನೆ. ಮುಗ್ಧ ನಾಗರಿಕರ ಮೇಲೆ ನಡೆದ ಈ ಹೇಡಿತನದ ದಾಳಿ ಹೇಡಿತನದ ಕೃತ್ಯ ಮತ್ತು ಅತ್ಯಂತ ಖಂಡನೀಯ. ನನ್ನ ಆಲೋಚನೆಗಳು ಮತ್ತು ಪ್ರಾರ್ಥನೆಗಳು ಮುಗ್ಧ ಬಲಿಪಶುಗಳು ಮತ್ತು ಅವರ ಕುಟುಂಬಗಳೊಂದಿಗೆ ಇವೆ ಎಂದು ಭಾವುಕ ಪೋಸ್ಟ್‌ವೊಂದನ್ನ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.