Tag: ಉಗುಳುವುದು

  • ಇನ್ಮುಂದೆ ಸಾರ್ವಜನಿಕ ಸ್ಥಳದಲ್ಲಿ ಉಗುಳಿದ್ರೆ, ಕಸ ಹಾಕಿದ್ರೆ 1,000 ರೂ. ದಂಡ

    ಇನ್ಮುಂದೆ ಸಾರ್ವಜನಿಕ ಸ್ಥಳದಲ್ಲಿ ಉಗುಳಿದ್ರೆ, ಕಸ ಹಾಕಿದ್ರೆ 1,000 ರೂ. ದಂಡ

    ಬೆಂಗಳೂರು: ಸಾರ್ವಜನಿಕ ಸ್ಥಳಗಳಲ್ಲಿ ಉಗುಳಿದರೆ ಮತ್ತು ಕಸ ಎಸೆದರೆ 1,000 ರೂಪಾಯಿ ದಂಡ ವಿಧಿಸಲಾಗುವುದು ಎಂದು ಬಿಬಿಎಂಪಿ ಆದೇಶ ಹೊರಡಿಸಿದೆ.

    ರಾಜ್ಯದಲ್ಲಿ ದಿನೇ ದಿನೇ ಕೊರೊನಾ ವೈರಸ್ ಸೋಂಕು ಹರಡುತ್ತಿರುವುದು ಹೆಚ್ಚಾಗುತ್ತಿದೆ. ಈ ಹಿನ್ನೆಲೆ ಸಾರ್ವಜನಿಕ ಸ್ಥಳಗಳಲ್ಲಿ ಉಗುಳಿದರೆ ಹಾಗೂ ಕಸ ಎಸದರೆ ಅವರಿಗೆ ದಂಡ ಹಾಕುತ್ತೇವೆ ಎಂದು ಬಿಬಿಎಂಪಿ ತಿಳಿಸಿದೆ. ಮೊದಲ ಬಾರಿಗೆ ಸಾರ್ವಜನಿಕ ಸ್ಥಳದಲ್ಲಿ ಉಗುಳಿದರೆ ಅಥವಾ ಕಸ ಹಾಕಿದರೆ 1,000 ರೂಪಾಯಿ ದಂಡ ಹಾಕಲಾಗುತ್ತದೆ. ಆದರೆ ಪುನಃ ಎರಡನೇ ಬಾರಿಗೆ ಇದೇ ತಪ್ಪು ಮುಂದುವರೆಸಿದರೆ ದಂಡದ ಮೊತ್ತ ಡಬಲ್ ಆಗಲಿದೆ. ಅಂದರೆ 2,000 ರೂಪಾಯಿ ದಂಡವನ್ನು ವಿಧಿಸಲಾಗುತ್ತದೆ ಎಂದು ಬಿಬಿಎಂಪಿ ಖಡಕ್ ಎಚ್ಚರಿಕೆ ನೀಡಿದೆ.

    ಈ ಬಗ್ಗೆ ಬಿಬಿಎಂಪಿ ಘನತ್ಯಾಜ್ಯ ನಿರ್ವಹಣಾ ವಿಶೇಷ ಆಯುಕ್ತರು ಟ್ವೀಟ್ ಮಾಡಿ ತಿಳಿಸಿದ್ದಾರೆ. ಅಲ್ಲದೇ ವಾರ್ಡ್ ಸಂಖ್ಯೆ 157ರ ನ್ಯೂ ಟಿಂಬರ್ ಲೇಔಟ್‍ನ ಸಾರ್ವಜನಿಕ ಸ್ಥಳದಲ್ಲಿ ಮಾಂಸ ತ್ಯಾಜ್ಯವನ್ನು ಮದ್ದೂರಮ್ಮ ಚಿಕನ್ ಸೆಂಟರ್ ನವರು ಅತಿಕ್ರವಾಗಿ ಎಸೆದಿದ್ದರು. ಇದನ್ನು ಪತ್ತೆ ಹೆಚ್ಚಿದ ಮಾರ್ಷಲ್ಸ್ ಗಳು ಮಾಂಸದ ಅಂಗಡಿ ಮಾಲೀಕನಿಗೆ ದಂಡ ವಿಧಿಸಿರುವುದನ್ನು ಕೂಡ ಟ್ವಿಟ್ ಮಾಡಿದ್ದಾರೆ.

    ಸದ್ಯ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 315ಕ್ಕೆ ಏರಿದ್ದು, ಇಂದು ಒಂದೇ ದಿನ 36 ಮಂದಿಗೆ ಸೋಂಕಿ ತಗುಲಿರುವುದು ವರದಿಯಾಗಿದೆ. ಬೆಳಗ್ಗೆ ಒಟ್ಟು 34 ಜನರಿಗೆ ಸೋಂಕು ತಗುಲಿರೋದು ದೃಢ ಪಟ್ಟಿತ್ತು. ಆ ಸಂಖ್ಯೆ ಮತ್ತಿಬ್ಬರು ಸೇರಿದ್ದು 36 ಆಗಿದೆ. ಕಲಬುರಗಿಯ 5 ವರ್ಷದ ಬಾಲಕ ಮತ್ತು 32 ವರ್ಷದ ವ್ಯಕ್ತಿಗೆ ಕೊರೊನಾ ಸೋಂಕು ತಗುಲಿದೆ. ಇಬ್ಬರನ್ನು ಐಸಿಯುನಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. 5 ವರ್ಷದ ಬಾಲಕನಿಗೆ ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲದಿರೋದು ಆತಂಕಕ್ಕೆ ಕಾರಣವಾಗಿದೆ. ಇನ್ನು 32 ವರ್ಷ ವ್ಯಕ್ತಿ ಬೆಂಗಳೂರಿನಿಂದ ಕಲಬುರಗಿಗೆ ಪ್ರಯಾಣ ಬೆಳೆಸಿದ್ದರು.

  • ಮುಖದ ಮೇಲೆ ಉಗುಳಿದ್ದಕ್ಕೆ ಮಹಿಳೆಯ ಮೇಲೆ ಅತ್ಯಾಚಾರವೆಸಗಿ ಕೊಲೆ

    ಮುಖದ ಮೇಲೆ ಉಗುಳಿದ್ದಕ್ಕೆ ಮಹಿಳೆಯ ಮೇಲೆ ಅತ್ಯಾಚಾರವೆಸಗಿ ಕೊಲೆ

    ನವದೆಹಲಿ: ತನ್ನ ಮೇಲೆ ಉಗುಳಿದಳೆಂದು ಮಹಿಳೆ ಮೇಲೆ ಯುವಕನೋರ್ವ ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ನಡೆದಿದೆ.

    ಉತ್ತರ ದೆಹಲಿಯ ಗುಲಾಬಿ ಬಾಘ್ ಪ್ರದೇಶದಲ್ಲಿನ ಮಹಿಳೆ ಮನೆಯಕಲ್ಲಿಯೇ 22 ವರ್ಷದ ಯುವಕ 55ರ ಮಹಿಳೆ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದಾನೆ. ಆರೋಪಿಯನ್ನು ಧರ್ಮರಾಜ್ ಎಂದು ಗುರುತಿಸಲಾಗಿದ್ದು, ಕೃಷ್ಣಗಂಜ್ ಕಾಲೋನಿಯ ನಿವಾಸಿಯಾಗಿದ್ದಾನೆ.

    ಘಟನೆ ನಡೆದ ಮರುದಿನ ಪ್ರಕರಣ ಬೆಳಕಿಗೆ ಬಂದಿದ್ದು, ನೆಲದ ಮೇಲಿದ್ದ ಮಹಿಳೆಯ ಅರೆಬೆತ್ತಲೆ ದೇಹವನ್ನು ನೋಡಿ ಪೊಲೀಸರು ದಂಗಾಗಿದ್ದಾರೆ. ಮಹಿಳೆ ಮೇಲೆ ಅತ್ಯಾಚಾರ ಎಸಗಿರುವುದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ. ಆರೋಪಿಯು ರಾತ್ರಿ ವೇಳೆ ಸಂತ್ರಸ್ತೆಯ ಮನೆಗೆ ನುಗ್ಗಿದ್ದು, ಅತ್ಯಾಚಾರ ಎಸಗಿದ್ದಾನೆ. ನಂತರ ಕತ್ತು ಹಿಸುಕಿ ಕೊಲೆ ಮಾಡಿದ್ದನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ತನಿಖೆ ವೇಳೆ ಪೊಲೀಸರು ಸಂತ್ರಸ್ತೆಯ ಮನೆ ಭಾಗದ ಸಿಸಿಟಿವಿ ವಿಡಿಯೋಗಳನ್ನು ಪರಿಶೀಲಿಸಿದ್ದು, ಆರೋಪಿಯು ಸಂತ್ರಸ್ತೆ ಮನೆಯಿಂದ ಹೊರಡುವ ದೃಶ್ಯ ಸೆರೆಯಾಗಿದೆ. ಆಗ ಪೊಲೀಸರು ಸ್ಥಳೀಯರಿಗೆ ಸಿಸಿಟಿವಿ ವಿಡಿಯೋ ತೋರಿಸಿದ್ದು, ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ.

    ಮಹಿಳೆ ನನ್ನ ಮುಖದ ಮೇಲೆ ಉಗುಳಿದ್ದಕ್ಕೆ ಅವಳನ್ನು ಕತ್ತು ಹಿಸುಕಿ ಕೊಲೆ ಮಾಡಿದೆ ಎಂದು ಆರೋಪಿ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಬಹು ಚರ್ಚೆಗೆ ಹಾಗೂ ಹೋರಾಟಕ್ಕೆ ಕಾರಣವಾಗಿರುವ ಹೈದರಾಬಾದ್‍ನ ಪಶು ವೈದ್ಯೆ ಮೇಲೆ ನಡೆದ ಅತ್ಯಾಚಾರ ಪ್ರಕರಣದ ಬೆನ್ನಲ್ಲೇ ಇದು ಬೆಳಕಿಗೆ ಬಂದಿದೆ.