Tag: ಉಗುಳು

  • ತನ್ನ ಉಗುಳಿನಿಂದ ಗ್ರಾಹಕನ ಮುಖಕ್ಕೆ ಮಸಾಜ್‌ ಮಾಡಿದ ಕ್ಷೌರಿಕ!

    ತನ್ನ ಉಗುಳಿನಿಂದ ಗ್ರಾಹಕನ ಮುಖಕ್ಕೆ ಮಸಾಜ್‌ ಮಾಡಿದ ಕ್ಷೌರಿಕ!

    ಲಕ್ನೋ: ಆಘಾತಕಾರಿ ಘಟನೆಯೊಂದರಲ್ಲಿ ಲಕ್ನೋದ ಸಲೂನ್‌ನಲ್ಲಿ (Lucknow salon) ಕ್ಷೌರಿಕನೊಬ್ಬ ಗ್ರಾಹಕನ ಮುಖಕ್ಕೆ ತನ್ನದೇ ಆದ ಉಗುಳಿನಿಂದ ಮಸಾಜ್ (Spit Massage) ಮಾಡಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

    ಆರೋಪಿ ಝೈದ್ ತನ್ನ ಕೈ ಮೇಲೆ ಉಗುಳುವುದು ಮತ್ತು ಗ್ರಾಹಕರ ಮುಖವನ್ನು ಉಜ್ಜಲು ಬಳಸಿರುವ ದೃಶ್ಯ ಸಲೂನ್‌ನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನೆ ಸಂಬಂಧ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಮಣಿಪುರ ಸಿಎಂ ನಿವಾಸದ ಬಳಿಯ ಕಾಂಪ್ಲೆಕ್ಸ್‌ನಲ್ಲಿ ಭಾರೀ ಅಗ್ನಿ ದುರಂತ

    ಆರೋಪಿ ಝೈದ್ ನ ಕೃತ್ಯದಿಂದ ಗ್ರಾಹಕನಿಗೆ ಅನುಮಾನ ಬಂದಿದೆ. ಕೂಡಲೇ ಅವರು ಸಲೂನ್ ನಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಪರಿಶೀಲಿಸಿದ್ದಾರೆ. ಕ್ಷೌರಿಕ ತನ್ನ ಕೈಗೆ ಉಗುಳುವುದು ಮತ್ತು ಮುಖಕ್ಕೆ ಮಸಾಜ್ ಮಾಡಲು ಉಗುಳನ್ನು ಬಳಸುವುದನ್ನು ಕಂಡು ಗಾಬರಿಗೊಂಡು ಪೊಲೀಸರಿಗೆ ದೂರು ನೀಡಿದ್ದಾರೆ.

    ಗ್ರಾಹಕನ ದೂರಿನ ಆಧಾರದ ಮೇಲೆ ಲಕ್ನೋ ಪೊಲೀಸರು ಝೈದ್‌ನನ್ನು ಬಂಧಿಸಿದ್ದಾರೆ. ಸದ್ಯ ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ. ಘಟನೆ ನಡೆದು ಕೆಲ ದಿನಗಳಾದರೂ ವೀಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್‌ ವೈರಲ್‌ ಆಗುತ್ತಿದೆ. ಕ್ಷೌರಿಕನ ನಡೆಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.

  • ಇನ್ಮುಂದೆ ಸಾರ್ವಜನಿಕ ಸ್ಥಳಗಳಲ್ಲಿ ಉಗುಳಿದ್ರೆ ದಂಡದ ಜೊತೆಗೆ ಕೇಸ್ ದಾಖಲು

    ಇನ್ಮುಂದೆ ಸಾರ್ವಜನಿಕ ಸ್ಥಳಗಳಲ್ಲಿ ಉಗುಳಿದ್ರೆ ದಂಡದ ಜೊತೆಗೆ ಕೇಸ್ ದಾಖಲು

    ಬೆಂಗಳೂರು: ಇನ್ನು ಮುಂದೆ ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಸೇವನೆ ಹಾಗೂ ಉಗುಳುವುದು ಕಾನೂನು ರೀತಿ ಅಪರಾಧವಾಗಿದೆ. ಒಂದು ವೇಳೆ ಉಗುಳಿದ್ದು ಕಂಡು ಬಂದರೆ ಅಂತವರಿಗೆ ದಂಡದ ಜೊತೆ ಐಪಿಸಿ ಸೆಕ್ಷನ್ ಅಡಿ ಕೇಸ್ ದಾಖಲು ಮಾಡಿಕೊಳ್ಳಲಾಗುತ್ತದೆ ಎಂದು ಸರ್ಕಾರ ಆದೇಶಿಸಿದೆ.

    ಈ ಸಂಬಂಧ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಶ್ರೀರಾಮುಲು, ರಾಜ್ಯದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಸೇವನೆ ಇಂದಿನಿಂದಲೇ ನಿಷೇಧವಾಗಲಿದೆ. ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಸೇವನೆ ಮಾಡಿದ್ರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದ್ದು, ಐಪಿಸಿ ಸೆಕ್ಷನ್ 188, 268, 269, 270 ರ ಅಡಿ ಕೇಸ್ ದಾಖಲು ಮಾಡಿಕೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.

    ಪ್ರತೀ ವರ್ಷ ಮೇ 31 ವಿಶ್ವ ತಂಬಾಕು ರಹಿತ ದಿನಾಚರಣೆಯಾಗಿರುತ್ತದೆ. ಈ ದಿನವಾದ ಇಂದು ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ರಾಜ್ಯದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಜಗಿಯುವುದು, ಉಗುಳುವುದನು ನಿಷೇಧಗೊಳಿಸಿ ಆದೇಶ ಮಾಡಲಾಗಿದೆ ಎಂದು ಸಚಿವರು ಘೋಷಣೆ ಮಾಡಿದ್ದಾರೆ.