ಮುಂಬೈ: ಪತಿಯೇ ಪತ್ನಿಯನ್ನು ಕೊಲೆ ಮಾಡಿದ್ದ ಘಟನೆ ಮುಂಬೈನಲ್ಲಿ ನಡೆದಿದ್ದು, ಆತನ ಉಗುರುಗಳ ಮೇಲೆ ಇದ್ದ ರಕ್ತದ ಕಲೆಯಿಂದ ಸಿಕ್ಕಿಬಿದ್ದಿದ್ದಾನೆ.
ಮುಂಬೈನ ಸಕಿನಾಕಾ ಪ್ರದೇಶದಲ್ಲಿ ರೀಮಾ ಭೋಲಾ ಯಾದವ್ ಹತ್ಯೆಯಾದ ದುರ್ದೈವಿ ಹಾಗೂ ಮನೋಜ್ ಪ್ರಜಾಪತಿ (22) ಆರೋಪಿ. ಕೌಟುಂಬಿಕ ಜಗಳದ ಹಿನ್ನೆಲೆಯಲ್ಲಿ ರೀಮಾ ಭೋಲಾ ಹಾಗೂ ಮನೋಜ್ ಪ್ರಜಾಪತಿ ಕಳೆದ ಎರಡು ದಿನಗಳಿಂದ ಪ್ರತ್ಯೆಕ ಮನೆಯಲ್ಲಿ ವಾಸಿಸುತ್ತಿದ್ದರು. ರೀಮಾ ಭೋಲಾ ಮನೆಗೆ ಸ್ನೇಹಿತರೊಬ್ಬರು ಬಂದಾಗ ಆಕೆ ಶವವಾಗಿ ಬಿದ್ದಿದ್ದರು. ಈ ಹಿನ್ನೆಲೆಯಲ್ಲಿ ರೀಮಾ ಭೋಲಾ ಅವರ ಸ್ನೇಹಿತೆ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಸ್ಥಳಕ್ಕಾಗಮಿಸಿದ ಪೊಲೀಸರಿಗೆ ರೀಮಾ ಯಾದವ್ ಅವರ ಶವವು ಕತ್ತು ಸೀಳಿದ ರೀತಿಯಲ್ಲಿ ಕಂಡು ಬಂದಿತ್ತು. ಅದೇ ಸಂದರ್ಭದಲ್ಲಿ ಆಮಿಸಿದ್ದ ಪ್ರಜಾಪತಿಯ ಉಗುರಿನಲ್ಲಿದ್ದ ರಕ್ತದ ಕಲೆಯನ್ನು ನೋಡಿ ಪೊಲೀಸರು ಅನುಮಾನಗೊಂಡಿದ್ದರು. ಇದರಿಂದ ಪ್ರಜಾಪತಿಯನ್ನು ವಿಚಾರಣೆಗೆ ಒಳಪಡಿಸಿದ್ದರು. ಇದನ್ನೂ ಓದಿ: ಕುತುಬ್ ಮಿನಾರ್‌ಗೆ ವಿಷ್ಣು ಸ್ತಂಭ ಎಂದು ಮರುನಾಮಕರಣ ಮಾಡಲು ಆಗ್ರಹಿಸಿ ಪ್ರತಿಭಟನೆ
ಮೊದಲಿಗೆ ಪ್ರಜಾಪತಿಯು ಪೊಲೀಸರ ದಾರಿ ತಪ್ಪಿಸಲು ಪ್ರಯತ್ನಿಸಿದ್ದ. ಪೊಲೀಸರ ನಿರಂತರ ವಿಚಾರಣೆಯಿಂದಾಗಿ ಪ್ರಜಾಪತಿ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ. ಈ ಹಿನ್ನೆಲೆಯಲ್ಲಿ ಕೊಲೆಗೆ ಬಳಸಿದ್ದ ಆಯುಧವನ್ನು ವಶಪಡಿಸಿಕೊಂಡು ಆರೋಪಿ ಪ್ರಜಾಪತಿಯನ್ನು ಬಂಧಿಸಲಾಗಿದೆ. ಇದನ್ನೂ ಓದಿ: ದೆಹಲಿಯಲ್ಲಿ ಸಿಎಂ ಬೊಮ್ಮಾಯಿ – ಇಂದು ಹೈಕಮಾಂಡ್‍ನಿಂದ ಬಿಗ್ ಸಂದೇಶ ನಿರೀಕ್ಷೆ
ಮಡಿಕೇರಿ: ವರ್ಷದ ಹಿಂದೆ ವಿದ್ಯುತ್ ಶಾಕ್‍ನಿಂದ ಮೃತಪಟ್ಟಿದ್ದ ಹುಲಿಯ ಕಲ್ಬೇರಳಿನ ಉಗುರುಗಳನ್ನು ಮಾರಾಟ ಮಾಡಲು ಯತ್ನಿಸಿದ ಏಳು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿರುವ ಘಟನೆ ಕೊಡಗು ಜಿಲ್ಲೆಯ ಮರೂರು ಗ್ರಾಮದಲ್ಲಿ ನಡೆದಿದೆ.
ಜಿಲ್ಲೆಯ ಕುಶಾಲನಗರ ತಾಲೂಕಿನ ಮರೂರು ಗ್ರಾಮದ ಗಣೇಶ್, ಯೋಗೇಶ್, ರಮೇಶ್, ನಟೇಶ್ ದೊರೇಶ್, ನವೀನ್, ಶೇಖರ್ ಮತ್ತು ರಮೇಶ್ ಬಂಧಿತ ಆರೋಪಿಗಳು. ವರ್ಷದ ಹಿಂದೆ ಕಾಡು ಹಂದಿಗಳಿಂದ ಬೆಳೆ ರಕ್ಷಿಸಲು ತಂತಿ ಬೇಲಿಗೆ ಗಣೇಶ್ ಮತ್ತು ಯೋಗೇಶ್ ವಿದ್ಯುತ್ ಹರಿಸಿದ್ದರು. ಆದರೆ ಕಾಡು ಹಂದಿಗೆ ಇಟ್ಟಿದ್ದ ವಿದ್ಯುತ್ ಹುಲಿಗೆ ತಗುಲಿ ಸ್ಥಳದಲ್ಲಿಯೇ ಹುಲಿ ಮೃತಪಟ್ಟಿದೆ. ಇದನ್ನೂ ಓದಿ: ಇದು ನನ್ನ ರಾಜಕೀಯ ಜೀವನಕ್ಕೆ ಅನಿವಾರ್ಯ : ಬಿಜೆಪಿ ಸೇರ್ಪಡೆ ಖಚಿತ ಪಡಿಸಿದ ಹೊರಟ್ಟಿ
ಹುಲಿ ಮೃತಪಟ್ಟಿರುವುದರ ಬಗ್ಗೆ ಯಾರಿಗೂ ಮಾಹಿತಿ ನೀಡದೇ, ಹುಲಿ ಉಗುರು ತೆಗೆದುಕೊಂಡು ಹುಲಿ ಕಲ್ಬೇರಳನ್ನು ಹೂತಿ ಹಾಕಿದ್ದರು. ಅಲ್ಲದೇ ವರ್ಷದ ಬಳಿಕ ಹುಲಿ ಉಗುರು ಮಾರಾಟಕ್ಕೆ ಯತ್ನಿಸಿದ್ದಾರೆ. ಈ ಹಿನ್ನೆಲೆ ಖಚಿತ ಮಾಹಿತಿ ಮೇರೆಗೆ ಸಂಚಾರಿ ಅರಣ್ಯ ದಳ ಪೊಲೀಸರು ದಾಳಿ ನಡೆಸುವ ಸಂದರ್ಭದಲ್ಲಿ 17 ಹುಲಿ ಉಗುರು, ಒಂದು ಕೋರೆ ಹಲ್ಲು, ಚರ್ಮದ ಚೂರುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ವಿಚಾರಣೆ ವೇಳೆ ಹುಲಿಯ ಹೂತ್ತಿರುವ ಬಗ್ಗೆಯೂ ಆರೋಪಿಗಳು ಬಾಯ್ಬಿಟ್ಟಿದ್ದಾರೆ. ಇದನ್ನೂ ಓದಿ: ಯುಗಾದಿ ಹಬ್ಬಕ್ಕೆಂದು ಬಂದಿದ್ದ ಲೈಟ್ ಬಾಯ್, ಹುಡುಗಿ ವಿಚಾರಕ್ಕೆ ಹತ್ಯೆ
ನೀವು ನೈಲ್ ಆರ್ಟ್ ಪ್ರಿಯರಾ? ಹೊಸ ಹೊಸ ವಿನ್ಯಾಸಗಳನ್ನು ನಿಮ್ಮ ಉಗುರುಗಳಲ್ಲಿ ಚಿತ್ರಿಸಲು ನೀವು ಇಷ್ಟ ಪಡುತ್ತೀರಾ? ಪ್ರತಿ ಮಹಿಳೆ ತನ್ನ ಉಗುರುಗಳನ್ನು ಅಂದವಾಗಿ ಕಾಣಿಸಲು ವಿಭಿನ್ನ ವಿನ್ಯಾಸಗಳಿಗೆ ಮಾರು ಹೋಗುತ್ತಾರೆ. ಕೆಲವರು ತಮ್ಮ ಉಗುರುಗಳಿಗೆ ಗಾಢ ಬಣ್ಣಗಳನ್ನು ಹಚ್ಚಲು ಇಷ್ಟಪಟ್ಟರೆ ಇನ್ನೂ ಕೆಲವರು ಸರಳ ಹಾಗೂ ತಿಳಿ ಬಣ್ಣಗಳನ್ನು ಇಷ್ಟ ಪಡುತ್ತಾರೆ. ಉಗುರುಗಳಲ್ಲಿ ಮೂಡಿಸಬಹುದಾದ ಹೊಸ ಹೊಸ ವಿನ್ಯಾಸಗಳ ಹುಡುಕಾಟದಲ್ಲಿ ನೀವಿದ್ದರೆ, ಇಲ್ಲಿವೆ ಕೆಲವು ಸಿಂಪಲ್ ಹಾಗೂ ಬೇಗನೇ ಉಗುರುಗಳಲ್ಲಿ ಮೂಡಿಸಬಹುದಾದ ನೈಲ್ ಆರ್ಟ್ ಡಿಸೈನ್‌ಗಳು.
ಲವ್ ಹಾರ್ಟ್ ನೈಲ್ ಆರ್ಟ್:
ನಿಮ್ಮ ಉಗುರುಗಳಿಗೆ ಲವ್ ಹಾರ್ಟ್ ನೇಲ್ ಆರ್ಟ್ ವಿನ್ಯಾಸಗನ್ನು ಮೂಡಿಸುವ ಮೂಲಕ ರೋಮ್ಯಾಂಟಿಕ್ ಲುಕ್ ಪಡೆಯಬಹುದು. ಗುಲಾಬಿ, ಕೆಂಪು, ಅಥವಾ ಯಾವುದೇ ತಿಳಿ ಬಣ್ಣಗಳಿಂದ ನೀವು ನಿಮ್ಮ ಉಗುರುಗಳಲ್ಲಿ ಪುಟ್ಟದಾದ ಹೃದಯದ ವಿನ್ಯಾಸ ಮೂಡಿಸಿದರೆ ತುಂಬಾ ಆಕರ್ಷಕವಾಗಿ ಕಾಣಿಸುತ್ತದೆ. ನೀವು ಈ ವಿನ್ಯಾಸಗಳಲ್ಲಿ ವಿವಿಧ ಬಣ್ಣಗಳನ್ನು ಬಳಸಿ ಒಂದರ ಮೇಲೊಂದು ಹೃದಯಗಳನ್ನು ಬಿಡಿಸಿದರೆ ಹೃದಯದ ಆಕೃತಿ ಪಾಪ್ ಅಪ್ ಆದಂತೆ ಭಾಸವಾಗುತ್ತದೆ. ಇದನ್ನೂ ಓದಿ: ನಿಮ್ಮ ಎವ್ರಿಡೇ ಮೇಕಪ್ ಕಿಟ್‌ನಲ್ಲಿರಲಿ ಈ ವಸ್ತುಗಳು
ಒಂಬ್ರೆ ನೇಲ್ ಆರ್ಟ್ ವಿನ್ಯಾಸ:
ಎರಡು ಬಣ್ಣಗಳನ್ನು ಗ್ರೇಡಿಯಂಟ್ ವಿನ್ಯಾಸವನ್ನಾಗಿ ಮಾರ್ಪಡಿಸುವುದನ್ನು ಒಂಬ್ರೆಲ್ ನೇಲ್ ಆರ್ಟ್ ಎನ್ನಲಾಗುತ್ತದೆ. ಈ ವಿನ್ಯಾಸವನ್ನು ನಿಮ್ಮ ಉಗುರುಗಳಲ್ಲಿ ಮೂಡಿಸಲು ಬೇಕಾಗಿರುವುದು ಕೇವಲ ಎರಡು ಬಣ್ಣಗಳ ನೈಪ್ ಪಾಲಿಶ್ ಹಾಗೂ ಒಂದು ಪುಟ್ಟ ಸ್ಪಂಜ್.
ನಿಮ್ಮ ಇಷ್ಟದ ಒಂದು ಬಣ್ಣವನ್ನು ನಿಮ್ಮ ಉಗುರಿನಲ್ಲಿ ಬೇಸ್ ಆಗಿ ಹಚ್ಚಿ ಬಳಿಕ ಇನ್ನೊಂದು ಬಣ್ಣದ ನೈಲ್ ಪಾಲಿಶ್ ಅನ್ನು ಇನ್ನೊಂದು ಲೇಯರ್ ಆಗಿ ಅರ್ಧ ಉಗುರಿಗೆ ಹಚ್ಚಿ. ಎರಡನೇ ಬಣ್ಣ ಒಣಗುವ ಮೊದಲು ಸ್ಪಂಜ್ ಸಹಾಯದಿಂದ ಮೆತ್ತಗೆ ಉಗುರುಗಳ ಮೇಲೆ ಒತ್ತಿದರೆ ಗ್ರೇಡಿಯಂಟ್ ವಿನ್ಯಾಸ ಮೂಡುತ್ತದೆ. ಉಗುರುಗಳಿಗೆ ಫಿನಿಶಿಂಗ್ ಟಚ್ ನೀಡಲು ಕೊನೆಯದಾಗಿ ವಾಟರ್ ಕಲರ್ ನೈಲ್ ಪಾಲಿಷ್ ಅಥವಾ ಕಲ್ಲರ್ ಲೆಸ್ ನೈಲ್ ಪೈಂಟ್ ಹಚ್ಚಿದರೆ ನಿಮ್ಮ ಉಗುರುಗಳು ಆಕರ್ಷಕವಾಗಿ ಹೊಳೆಯುವುದರಲ್ಲಿ ಸಂಶಯವಿಲ್ಲ. ಇದನ್ನೂ ಓದಿ: ನಿಮ್ಮ ಬಜೆಟ್‌ನಲ್ಲಿ ಚಂದಕಾಣಿಸುವ ಟಿಪ್ಸ್
ವರ್ಣರಂಜಿತ ನೈಲ್ ಆರ್ಟ್:
ಉಗುರುಗಳಲ್ಲಿ ಒಂದಕ್ಕಿಂತ ಹೆಚ್ಚು ಬಣ್ಣಗಳನ್ನು ಬಳಸಲು ಹಲವರು ಇಷ್ಟಪಡುತ್ತಾರೆ. ಕಾಮನಬಿಲ್ಲಿನಂತೆ ಹಲವು ಬಣ್ಣಗಳ ಚಿತ್ತಾರವನ್ನು ಉಗುರಿನಲ್ಲಿ ಬಿಡಿಸುವಾಗ ನಿಮ್ಮ ಶಾಲಾ ದಿನಗಳನ್ನು ನೆನಪಿಸುತ್ತದೆ.
ನೀವು ಹಲವು ಬಣ್ಣಗಳನ್ನು ಒಂದೇ ಉಗುರಿನಲ್ಲಿ ವಿವಿಧ ವಿನ್ಯಾಸಗಳನ್ನು ಮೂಡಿಸುವ ಮೂಲಕ ಆಕರ್ಷಕವನ್ನಾಗಿ ಮಾಡಬಹುದು. ಇಲ್ಲವೇ ಒಂದೊಂದು ಬೆರಳಿಗೆ ಒಂದೊಂದು ಬಣ್ಣಗಳನ್ನು ಬಳಸಿ ಇನ್ನೂ ಚೆನ್ನಾಗಿ ಕಾಣುವಂತೆ ಮಾಡಬಹುದು.
ಈ ವಿನ್ಯಾಸಗಳನ್ನು ರಚಿಸುವಾಗ ಒಂದೇ ಉಗುರಿನಲ್ಲಿ ಹಲವು ಬಣ್ಣ ಬಳಸುತ್ತಿರಾದರೆ ಯಾವ ಬಣ್ಣಗಳನ್ನೂ ಬಳಸಬಹುದು. ಆದರೆ ಗಮನದಲ್ಲಿಟ್ಟುಕೊಳ್ಳಬೇಕಾದ ವಿಷಯವೆಂದರೆ ಒಂದೊಂದು ಉಗುರಿಗೆ ಒಂದೊಂದು ಬಣ್ಣಗಳನ್ನು ಬಳಸುತ್ತೀರಾದರೆ ಒಂದು ಬಾರಿಗೆ ತಿಳಿ ಬಣ್ಣಗಳನ್ನು ಆಯ್ದುಕೊಳ್ಳಿ ಇಲ್ಲವೇ ಗಾಢ ಬಣ್ಣಗಳನ್ನೇ ಆಯ್ದುಕೊಳ್ಳಿ.
ಲೈನ್ ಆರ್ಟ್ ಉಗುರು ವಿನ್ಯಾಸ:
ಉಗುರುಗಳಲ್ಲಿ ರೇಖೆಗಳನ್ನು ಮೂಡಿಸುವುದು ಇತ್ತೀಚಿನ ಟ್ರೆಂಡ್. ಒಂದು ನಿಮ್ಮ ಇಷ್ಟದ ಬಣ್ಣವನ್ನು ಬೇಸ್ ಆಗಿ ಬಳಸಿ ಬಳಿಕ ತೆಳುವಾದ ರೇಖೆಗಳನ್ನು ಉಗುರುಗಳಲ್ಲಿ ಮೂಡಿಸಿದರೆ ಟ್ರೆಂಡಿಯಾಗಿ ಕಾಣಿಸುವುದಲ್ಲದೇ ಡೀಸೆಂಟ್ ಲುಕ್ ನಿಮ್ಮದಾಗುತ್ತದೆ. ಉಗುರುಗಳಲ್ಲಿ ಪುಟ್ಟ ರೇಖೆಗಳನ್ನು ಮೂಡಿಸಲು ನಿಮ್ಮ ನೈಲ್ ಆರ್ಟ್ ಕಿಟ್‌ನಲ್ಲಿ ಪುಟ್ಟದಾದ ಬ್ರಷ್‌ಗಳಿದ್ದರೆ ಒಳಿತು. ಇಲ್ಲವೆಂದರೆ ಚಿಕ್ಕ ಕಡ್ಡಿ ಅಥವಾ ಟೂತ್ ಪಿಕ್‌ಗಳನ್ನೂ ಬಳಸಬಹುದು. ಇದನ್ನೂ ಓದಿ: ಮಹಿಳೆಯರಿಗಾಗಿ ಚೀಪ್ ಆ್ಯಂಡ್ ಬೆಸ್ಟ್ ರೇಟ್‍ನಲ್ಲಿ ಸ್ಪ್ಲೆಂಡಿಡ್ ನೆಕ್ಲೆಸ್
ಪ್ರಕೃತಿ ಪ್ರೇರಿತ ನೇಲ್ ಆರ್ಟ್ ವಿನ್ಯಾಸ:
ನಿಮ್ಮ ಉಗುರುಗಳಲ್ಲಿ ಪ್ರಕೃತಿಯ ಚಿತ್ರಗಳನ್ನು ಮೂಡಿಸಿದರೆ ಅದರ ಮೇಲೆ ಗಮನಹರಿಸುವವರು ನೀವೊಬ್ಬ ಪ್ರಕೃತಿ ಪ್ರೇಮಿ ಎಂಬುದನ್ನು ಮನದಟ್ಟು ಮಾಡಿಕೊಳ್ಳುತ್ತಾರೆ. ಉಗುರುಗಳಲ್ಲಿ ಹೂವು, ಎಲೆ, ಬಳ್ಳಿ ಹೀಗೆ ಹಲವು ವಿನ್ಯಾಸಗಳನ್ನು ಮೂಡಿಸಿ ಆಕರ್ಷಕವಾಗಿಸಿ.
ಪ್ರಕೃತಿಯ ಚಿತ್ರಗಳನ್ನು ಉಗುರಿನಲ್ಲಿ ಮೂಡಿಸುವುದು ಸ್ವಲ್ಪ ಕಷ್ಟವೆನಿಸಬಹುದು. ಆದರೆ ಇದನ್ನು ಸುಲಭವಾಗಿಸಲು ಮಾರುಕಟ್ಟೆಯಲ್ಲಿ ವಿವಿಧ ರೀತಿಯ ನೈಲ್ ಸ್ಟಿಕ್ಕರ್‌ಗಳು ಲಭ್ಯವಿದೆ. ನೀವು ಉಗುರುಗಳಲ್ಲಿ ಮೂಡಿಸುವ ವಿನ್ಯಾಸಗಳು ಕೇವಲ ಹೂವು-ಹಣ್ಣು, ಎಲೆ-ಬಳ್ಳಿಗಳಿಗೆ ಮಾತ್ರ ಸೀಮಿತವಾಗಿಸದೇ ಸಮುದ್ರ, ಸೂರ್ಯ, ಬೆಟ್ಟ ಗುಡ್ಡಗಳಿಗೂ ವಿಸ್ತರಿಸಬಹುದು.
ಚಾಮರಾಜನಗರ: ಹುಲಿ ಉಗುರುಗಳನ್ನು ಮಾರಾಟ ಮಾಡಲು ತೆಗೆದುಕೊಂಡು ಹೋಗುತ್ತಿದ್ದ ಇಬ್ಬರು ಖದೀಮರನ್ನು ಬಂಧಿಸಿರುವ ಸಿಐಡಿ ಅರಣ್ಯ ಸಂಚಾರಿ ದಳ ಪೊಲೀಸರು, ಎರಡು ಹುಲಿ ಉಗುರುಗಳನ್ನು ವಶಪಡಿಸಿಕೊಂಡಿದ್ದಾರೆ.
ಕೊಳ್ಳೇಗಾಲದ ನಾರಾಯಣಿ ಹಾಗೂ ನಯೀಮ್ ಪಾಷಾ ಎಂಬುವರು ಹುಲಿ ಉಗುರು ಮಾರಾಟ ಮಾಡಲು ಆಟೋದಲ್ಲಿ ತೆರಳುತ್ತಿದ್ದರು. ಆದರೆ ಅಣಗಳ್ಳಿ ಬಳಿ ಎದುರಿನಿಂದ ಬರುತ್ತಿದ್ದ ಸಿಐಡಿ ಅರಣ್ಯ ಸಂಚಾರಿ ದಳದ ಜೀಪ್ ಕಂಡೊಡನೆ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಇದರಿಂದ ಅನುಮಾನಗೊಂಡ ಪೊಲೀಸರು ಆಟೋ ನಿಲ್ಲಿಸಿ ವಿಚಾರಣೆ ನಡೆಸಿದಾಗ ಹುಲಿ ಉಗುರು ಮಾರಾಟ ಮಾಡಲು ಕೊಂಡೊಯ್ಯುತ್ತಿರುವುದಾಗಿ ಆರೋಪಿಗಳು ಹೇಳಿಕೆ ನೀಡಿದ್ದಾರೆ.
ಆರೋಪಿಗಳನ್ನು ಮತ್ತಷ್ಟು ವಿಚಾರಣೆಗೆ ಗುರಿಪಡಿಸಿದಾಗ, ಕೊರಳಿಗೆ ಹಾಕಿಕೊಳ್ಳುವ ಡಾಲರ್ ಮಾಡಿಸಿಕೊಳ್ಳಲು ಮೂರು ತಿಂಗಳ ಹಿಂದೆ ವ್ಯಕ್ತಿಯೊಬ್ಬನಿಂದ ಎರಡು ಹುಲಿ ಉಗುರುಗಳನ್ನು 20 ಸಾವಿರ ರೂಪಾಯಿಗೆ ಖರೀದಿಸಿದ್ದಾಗಿ ನಾರಾಯಣಿ ತಿಳಿಸಿದ್ದಾನೆ. ಆದರೆ ಈಗ ಹಣಕಾಸಿನ ತೊಂದರೆ ಇದ್ದುದ್ದರಿಂದ ಅವುಗಳನ್ನು ಮಾರಾಟ ಮಾಡಲು ತೆಗೆದುಕೊಂಡು ಹೋಗುತ್ತಿದ್ದಾನೆ ಎಂದು ತಿಳಿಸಿದ್ದಾನೆ.
ನ್ಯೂಯಾರ್ಕ್: 66 ವರ್ಷಗಳ ಬಳಿಕ ಪುಣೆಯ ನಿವಾಸಿ ತನ್ನ ವಿಶ್ವದ ಅತ್ಯಂತ ಉದ್ದದ ಉಗುರನ್ನು ಕತ್ತರಿಸಿಕೊಂಡಿದ್ದಾರೆ.
ಶ್ರೀಧರ್ ಚಿಲ್ಲಾಲ್ ತಮ್ಮ ಎಡಗೈ ಬೆರಳುಗಳಲ್ಲಿ ಉದ್ದನೆಯ ಉಗುರನ್ನು ಬೆಳಸಿ ವಿಶ್ವ ಗಿನ್ನಿಸ್ ದಾಖಲೆ ಮಾಡಿದ್ದರು. ಶ್ರೀಧರ್ 1952ರಿಂದ ತಮ್ಮ ಉಗುರುಗಳನ್ನು ಬೆಳಸಿಕೊಂಡಿದ್ದರು. ಈಗ ಅವರಿಗೆ 82 ವರ್ಷವಾಗಿದ್ದು, ಈಗ ತಮ್ಮ ಉದ್ದನೆಯ ಉಗುರುಗಳನ್ನು ಕತ್ತರಿಸಿದ್ದಾರೆ.
ಶ್ರೀಧರ್ ಮೂಲತಃ ಪುಣೆಯವರಾಗಿದ್ದು, ತನ್ನ ಬೆರಳ ಉಗುರುಗಳನ್ನು ಕತ್ತರಿಸೋಕೆ ನ್ಯೂಯಾರ್ಕ್ ಗೆ ಹೋಗಿದ್ದರು. ನ್ಯೂಯಾರ್ಕ್ ನ ರಿಪ್ಲೆ ಬಿಲಿವ್ ಇಟ್ ಆರ್ ನಾಟ್ ಮ್ಯೂಸಿಯಂನಲ್ಲಿ ಶ್ರೀಧರ್ ತಮ್ಮ ಉಗುರನ್ನು ಕತ್ತರಿಸಿಕೊಂಡಿದ್ದಾರೆ.
ಶ್ರೀಧರ್ ಅವರ ಐದು ಬೆರಳಿನ ಉಗುರುಗಳು ಒಟ್ಟು 909.6 ಸೆ.ಮೀ ಉದ್ದವಿದ್ದು, ಅದರಲ್ಲೂ ಅವರ ಹೆಬ್ಬೆಟ್ಟಿನ ಉಗುರು 197.8 ಸೆ.ಮೀ ಉದ್ದವಿತ್ತು. ಒಂದೇ ಕೈಯಲ್ಲಿ ವಿಶ್ವದ ಅತ್ಯಂತ ಉದ್ದದ ಉಗುರು ಹೊಂದಿದ್ದರಿಂದ 2016ರಲ್ಲಿ ಗಿನ್ನಿಸ್ ದಾಖಲೆ ಬರೆದಿದ್ದರು.
ಸದ್ಯ ಶ್ರೀಧರ್ ಅವರ ಕತ್ತರಿಸಿದ ಉಗುರುಗಳನ್ನು ನ್ಯೂಯಾರ್ಕ್‍ನ ಟೈಮ್ಸ್ ಸ್ಕ್ವೇರ್ ನಲ್ಲಿರುವ ರಿಪ್ಲೆ ಬಿಲಿವ್ ಇಟ್ ಆರ್ ನಾಟ್ ಮ್ಯೂಸಿಯಂನಲ್ಲಿ ಪ್ರದರ್ಶನಕ್ಕೆ ಇಡಲಾಗುತ್ತಿದೆ. ಶ್ರೀಧರ್ ತನ್ನ ಉಗುರುಗಳನ್ನು ಕತ್ತರಿಸಿಕೊಳ್ಳುತ್ತಿರುವ ವಿಡಿಯೋ ಬುಧವಾರ ಸಾಮಾಜಿಕ ಜಾಲತಾಣದಲ್ಲಿ ಹಾಕಲಾಗಿದ್ದು, ಇದೂವರೆಗೂ 1.3 ಲಕ್ಷಕ್ಕೂ ಹೆಚ್ಚು ವ್ಯೂ ಕಂಡಿದೆ.