Tag: ಉಗಾಂಡ

  • ಉಗಾಂಡದಲ್ಲಿ ಉಗ್ರರ ದಾಳಿ 37 ವಿದ್ಯಾರ್ಥಿಗಳ ಸಜೀವ ದಹನ

    ಉಗಾಂಡದಲ್ಲಿ ಉಗ್ರರ ದಾಳಿ 37 ವಿದ್ಯಾರ್ಥಿಗಳ ಸಜೀವ ದಹನ

    ಕಂಪಾಲ: ಇಸ್ಲಾಮಿಕ್ ಸ್ಟೇಟ್ ಉಗ್ರರು (Islamic State Militants) ಹಾಸ್ಟೆಲ್ (Hostel) ಒಂದರ ಮೇಲೆ ದಾಳಿ ನಡೆಸಿ 37 ವಿದ್ಯಾರ್ಥಿಗಳನ್ನು ಬೆಂಕಿ ಹಾಕಿ ಸಾಯಿಸಿರುವ ಭೀಕರ ಘಟನೆ ಪಶ್ಚಿಮ ಉಗಾಂಡಾದಲ್ಲಿ (Uganda) ನಡೆದಿದೆ. ಕಳೆದ ಹತ್ತು ವರ್ಷಗಳಲ್ಲಿ ನಡೆದ ಭೀಕರ ಘಟನೆ ಇದಾಗಿದೆ ಎಂದು ಸೇನೆಯ ಅಧಿಕಾರಿಗಳು ತಿಳಿಸಿದ್ದಾರೆ.

    ಎಂಪಾಂಡ್ವೆಯ ಡೆಮಾಕ್ರೆಟಿಕ್ ರಿಪಬ್ಲಿಕ್ ಆಫ್ ಕಾಂಗೋ ಮಾಧ್ಯಮಿಕ ಶಾಲೆಯ ಮೇಲೆ ಈ ದಾಳಿ ನಡೆದಿದೆ. ಸೇನೆಯಿಂದ ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಪಠ್ಯಪುಸ್ತಕದಲ್ಲಿ ಸಾವರ್ಕರ್ ವಿಚಾರ ಕಡಿತದಿಂದ ವಿದ್ಯಾರ್ಥಿಗಳಿಗೆ ವಂಚನೆ: ರಂಜಿತ್ ಸಾವರ್ಕರ್

    37 ಶವಗಳು ಪತ್ತೆಯಾಗಿದ್ದು ಅವುಗಳನ್ನು ಗುರುತಿಸಲಾರದಷ್ಟು ಸುಟ್ಟು ಕರಕಲಾಗಿವೆ. ಅಲ್ಲದೇ ಕೆಲವು ಮೃತ ದೇಹಗಳ ಮೇಲೆ ಚಾಕುವಿನಿಂದ ಇರಿಯಲಾಗಿದೆ. ಶವಗಳನ್ನು ಸ್ಥಳೀಯ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಗುರುತು ಪತ್ತೆಗೆ ಡಿಎನ್‍ಎ ಪರೀಕ್ಷೆ ಅಗತ್ಯ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ದಾಳಿಯಲ್ಲಿ 8 ಮಂದಿ ಗಾಯಗೊಂಡಿದ್ದು, 6 ಇತರರನ್ನು ದಾಳಿಕೋರರು ಅಪಹರಿಸಿದ್ದಾರೆ. ಸೇನೆ ಉಗ್ರರನ್ನು ಹಿಂಬಾಲಿಸಿ ಕಾರ್ಯಾಚರಣೆಯಲ್ಲಿ ತೊಡಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ವಿಜಯೇಂದ್ರ ಮಿಲ್‌ನಲ್ಲಿ ಇದೆಯಾ ಅಷ್ಟು ಅಕ್ಕಿ?: ಸಿಎಂ ಸಿದ್ದರಾಮಯ್ಯ ತಿರುಗೇಟು

  • ಆರ್ಥಿಕ ಸಮಸ್ಯೆ ಇದ್ದು, ಇನ್ಮುಂದೆ ಮಕ್ಕಳು ಮಾಡಲ್ಲ ಎಂದ 12 ಪತ್ನಿ, 102 ಮಕ್ಕಳನ್ನು ಹೊಂದಿದ ವ್ಯಕ್ತಿ!

    ಆರ್ಥಿಕ ಸಮಸ್ಯೆ ಇದ್ದು, ಇನ್ಮುಂದೆ ಮಕ್ಕಳು ಮಾಡಲ್ಲ ಎಂದ 12 ಪತ್ನಿ, 102 ಮಕ್ಕಳನ್ನು ಹೊಂದಿದ ವ್ಯಕ್ತಿ!

    ಕಂಪಾಲಾ: ವಯಸ್ಸಾದರೂ ಮದುವೆ ಆಗುತ್ತಿಲ್ಲ ಎಂಬ ಯೋಚನೆ ಅನೇಕರಿಗೆ ಇರುತ್ತದೆ. ಇನ್ನೂ ಕೆಲವರಿಗೆ ಮದುವೆಯಾದರೂ ಮಕ್ಕಳಿಲ್ಲ ಎಂಬ ಕೊರಗಿರುತ್ತದೆ. ಆದರೆ ಇಲ್ಲೊಬ್ಬ ವ್ಯಕ್ತಿ 12 ಹೆಂಡತಿ (Wives) ಹಾಗೂ 102 ಮಕ್ಕಳನ್ನು (Kids) ಹೊಂದಿದ್ದು, ಇನ್ನು ಮುಂದೆ ಮಕ್ಕಳನ್ನು ಮಾಡುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದಾನೆ.

    ಉಗಾಂಡಾದ (Uganda) ಲುಸಾಕಾದ ಮೂಸಾ ಹಸಾಹ್ಯ (67) ಪ್ರತಿಜ್ಞೆ ಮಾಡಿದ ವ್ಯಕ್ತಿ. ಉಗಾಂಡದಲ್ಲಿ ಬಹುಪತ್ನಿತ್ವ ಜಾರಿಯಲ್ಲಿದೆ. ಮೂಸಾ 16ನೇ ವಯಸ್ಸಿನಲ್ಲಿದ್ದಾಗ ತನ್ನ ಮೊದಲ ಪತ್ನಿ ಹನೀಫಾ ಅವರನ್ನು 1971ರಲ್ಲಿ ಮದುವೆಯಾಗಿದ್ದ. ಆ ಸಂದರ್ಭದಲ್ಲಿ ಶಾಲೆಯನ್ನು ತೊರೆದಿದ್ದ. 2 ವರ್ಷಗಳ ನಂತರ ಹನೀಫಾ ಮೊದಲ ಮಗುವಿಗೆ ಜನ್ಮ ನೀಡಿದ್ದಾಗ ಮೂಸಾ ಅನೇಕ ಮಹಿಳೆಯರನ್ನು ಮದುವೆ ಆಗಿದ್ದ.

    ಹೀಗೆ ಮದುವೆ ಆಗುತ್ತಾ ಆಗುತ್ತಾ ಈತ ಬರೊಬ್ಬರಿ 12 ಮದುವೆಯನ್ನು ಆಗಿದ್ದು, 102 ಮಕ್ಕಳನ್ನು ಹೊಂದಿದ್ದಾನೆ. ವಿಚಿತ್ರವೆಂದರೆ ಮೂಸಾಗೆ ತನ್ನ ಕೆಲವು ಮಕ್ಕಳ ಹಾಗೂ ಮೊಮ್ಮಕ್ಕಳ ಹೆಸರುಗಳೇ ತಿಳಿದಿಲ್ಲ. ಆದರೆ ಈ ಎಲ್ಲ ಪತ್ನಿಯರಿಗೆ ಹಾಗೂ ಮಕ್ಕಳಿಗೆ ಒಂದು ಹೊತ್ತಿನ ಊಟ ಹಾಕಲು ಈತ ಹೆಣಗಾಡುತ್ತಿದ್ದಾನೆ.

    ಅಷ್ಟೇ ಅಲ್ಲದೇ ಇವರೆಲ್ಲರೂ ಒಂದೇ ಮನೆಯಲ್ಲೇ ವಾಸಿಸುತ್ತಿದ್ದು, 12 ಕೊಣೆ ಮನೆಯಲ್ಲೇ 12 ಹೆಂಡತಿಯರು 102 ಮಕ್ಕಳು, 568 ಮೊಮ್ಮಕ್ಕಳ ಜೊತೆಗೆ ವಾಸಿಸುತ್ತಿದ್ದಾರೆ. ಆದರೆ ಇಡೀ ಮನೆಯನ್ನು ನಿರ್ವಹಿಸಲು ಆರ್ಥಿಕ ಸಮಸ್ಯೆಯನ್ನು ಹೊಂದಿದ್ದು, ಈ ಸಮಸ್ಯೆಯನ್ನು ನಿರ್ವಹಿಸಲು ಒಂದು ಪರಿಹಾರವನ್ನು ಹುಡುಕಿದ್ದಾನೆ. ಇದನ್ನೂ ಓದಿ: ಚಾರ್ಮಾಡಿ ಘಾಟ್‌ನಲ್ಲಿ ಕಾಡ್ಗಿಚ್ಚು- ನೂರಾರು ಎಕರೆ ಅರಣ್ಯ ಬೆಂಕಿಗಾಹುತಿ

    ಈತ ಇನ್ನು ಮುಂದೆ ಮಕ್ಕಳನ್ನು ಮಾಡಬಾರದು ಎಂದು ನಿರ್ಧರಿಸಿ, ಮಕ್ಕಳನ್ನು ಹೆರುವ ವಯಸ್ಸಿನ ತನ್ನ ಎಲ್ಲಾ ಪತ್ನಿಯರಿಗೆ ಗರ್ಭ ನಿರೋಧಕ ಮಾತ್ರೆಗಳನ್ನು ತೆಗೆದುಕೊಳ್ಳಲು ಆದೇಶಿಸಿದ್ದಾನೆ. ಅಷ್ಟೇ ಅಲ್ಲದೇ ಇತ್ತೀಚೆಗೆ ತನ್ನ ಆರ್ಥಿಕ ಸಮಸ್ಯೆಯಿಂದಾಗಿ ಆತ ಇಬ್ಬರು ಪತ್ನಿಯನ್ನು ತೊರೆದಿದ್ದಾನೆ. ಇದನ್ನೂ ಓದಿ: ವಸ್ತ್ರಸಂಹಿತೆ ವಾರ್ ಮತ್ತೆ ಮುನ್ನೆಲೆಗೆ- ಚಾಮುಂಡಿ ದೇವಿ ದರ್ಶನಕ್ಕೆ ಡ್ರೆಸ್‍ಕೋಡ್‍ಗೆ ಆರ್ಡರ್

    Live Tv
    [brid partner=56869869 player=32851 video=960834 autoplay=true]

  • ಹೊಟ್ಟೆಯಲ್ಲಿ 1 ಕೆ.ಜಿ ಕೊಕೇನ್ ಬಚ್ಚಿಟ್ಟು ಪ್ರಯಾಣ – ವಿದೇಶಿ ಮಹಿಳೆ ಅರೆಸ್ಟ್

    ನವದೆಹಲಿ: ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ(ಐಜಿಐ)ದಲ್ಲಿ ಉಗಾಂಡಾ ಮೂಲದ ಮಹಿಳೆಯನ್ನು ಬಂಧಿಸಲಾಗಿದೆ. ಆಕೆ ತನ್ನ ಹೊಟ್ಟೆಯಲ್ಲಿ 1ಕೆಜಿ ಕೊಕೇನ್ ತುಂಬಿದ ಮಾತ್ರೆಗಳನ್ನು ಬಚ್ಚಿಟ್ಟು, ಕಳ್ಳಸಾಗಣೆ ಮಾಡುತ್ತಿದ್ದಳು.

    ಉಗಾಂಡಾ ಮೂಲದ ಮಹಿಳೆ ಕೆಲವು ದಿನಗಳ ಹಿಂದೆ ಐಜಿಐ ವಿಮಾನ ನಿಲ್ದಾಣಕ್ಕೆ ಬಂದಿದ್ದು, ಆಕೆಯ ಚಲನವಲನಗಳು ಅಸಾಮಾನ್ಯವಾಗಿದ್ದವು. ಆಕೆಯನ್ನು ಗುರುತಿಸಿದ ಕಸ್ಟಮ್ಸ್ ಅಧಿಕಾರಿಗಳು ಮಾತಾಡಿಸಿದಾಗ ಆಕೆ ವಿಚಿತ್ರವಾಗಿ ನಡೆದುಕೊಂಡಿದ್ದಳು. ಆಕೆಯನ್ನು ಪ್ರಶ್ನಿಸಿದಾಗ ಕೊಕೇನ್ ಮಾತ್ರೆಗಳನ್ನು ನುಂಗಿರುವ ವಿಚಾರವನ್ನು ತಿಳಿಸಿದ್ದಾಳೆ. ಇದನ್ನೂ ಓದಿ: ತಮಿಳುನಾಡಿನಲ್ಲಿ ನ್ಯೂ ಇಯರ್‌ಗೆ ಹೊಸ ಮಾರ್ಗಸೂಚಿ ಬಿಡುಗಡೆ

    ಮಹಿಳೆ ಹೊಟ್ಟೆಯಲ್ಲಿ ಕೊಕೇನ್ ಬಚ್ಚಿಟ್ಟಿದ್ದ ವಿಚಾರ ತಿಳಿಯುತ್ತಿದ್ದಂತೆ ಆಕೆಯನ್ನು ಆರ್‍ಎಂಎಲ್ ಆಸ್ಪತ್ರೆಗೆ ಕರೆದೊಯ್ದು, 91 ಕೊಕೇನ್ ತುಂಬಿದ ಮಾತ್ರೆಗಳನ್ನು ಆಕೆಯ ದೇಹದಿಂದ ತೆಗೆಯಲಾಯಿತು. ಒಟ್ಟು 996 ಗ್ರಾಂ ಕೊಕೇನ್ ಅನ್ನು ಆಕೆಯ ದೇಹದಿಂದ ತೆಗೆಯಲು 4 ದಿನಗಳು ಬೇಕಾಯಿತು ಎಂದು ಹಿರಿಯ ಕಸ್ಟಮ್ಸ್ ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.

    ಸಾಮಾನ್ಯವಾಗಿ ವ್ಯಕ್ತಿ ತನ್ನ ಹೊಟ್ಟೆಯಲ್ಲಿ 400 ರಿಂದ 500 ಗ್ರಾಂ ವರೆಗಿನ ಬಾಹ್ಯ ವಸ್ತುಗಳನ್ನು ಹೊಟ್ಟೆಯೊಳಗೆ ಬಚ್ಚಿಡಲು ಸಾಧ್ಯವಿರುತ್ತದೆ. ಆದರೆ ಈ ಮಹಿಳೆ 1 ಕೆಜಿ ಕೊಕೇನ್ ತುಂಬಿದ ಮಾತ್ರೆಗಳನ್ನು ಬಚ್ಚಿಟ್ಟಿರುವುದು ಅಪರೂಪ ಹಾಗೂ ಆಘಾತ ಮೂಡಿಸಿರುವ ವಿಷಯ ಎಂದು ಹೇಳಿದರು. ಇದನ್ನೂ ಓದಿ: ಪುನೀತ್ ಪ್ರೇರಣೆ – ಚಾಮರಾಜನಗರದಲ್ಲಿ ಇದುವರೆಗೆ 9,500 ಮಂದಿ ನೇತ್ರದಾನಕ್ಕೆ ನೋಂದಣಿ

    ಈ ಕೊಕೇನ್ ಗುಳಿಗೆಯನ್ನು ಹೊಟ್ಟೆಯಲ್ಲಿ ಬಚ್ಚಿಡಲು ಸಾಧ್ಯವಾಗುವಂತೆ ವಿನ್ಯಾಸಗೊಳಿಸಿದ್ದಾರೆ. ಒಂದುವೇಳೆ ಗುಳಿಗೆಗಳು ಹೊಟ್ಟೆಯ ಒಳಗೆ ಸಿಡಿದಿದ್ದರೆ ಮಹಿಳೆಯ ಜೀವಕ್ಕೆ ಅಪಾಯವಿತ್ತು ಎಂದು ತಿಳಿಸಿದರು.

  • 100 ರೂ.ಗೆ ಉಗಾಂಡ ಪ್ರಜೆಗಳ ಕಿರಿಕ್ – ಕ್ಯಾಬ್ ಚಾಲಕನಿಗೆ ಅಂಗಾಂಗ ತೋರಿಸಿ ಯುವತಿಯರ ವಿಕೃತಿ

    100 ರೂ.ಗೆ ಉಗಾಂಡ ಪ್ರಜೆಗಳ ಕಿರಿಕ್ – ಕ್ಯಾಬ್ ಚಾಲಕನಿಗೆ ಅಂಗಾಂಗ ತೋರಿಸಿ ಯುವತಿಯರ ವಿಕೃತಿ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಉಗಾಂಡ ಪ್ರಜೆಗಳ ಅಟ್ಟಹಾಸ ಇನ್ನೂ ನಿಂತಿಲ್ಲ. ಜಿಸಿ ನಗರದಲ್ಲಿ ಪೊಲೀಸರ ಮೇಲೆ ಹಲ್ಲೆ ಮಾಡಿದ ಬಳಿಕ ಸೈಲೆಂಟ್ ಆಗಿದ್ದ ಉಗಾಂಡ ಪ್ರಜೆಗಳು ಶನಿವಾರ ಕ್ಯಾಬ್ ಚಾಲಕನಿಗೆ ಚಪ್ಪಲಿ ತೋರಿಸಿ ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ. ಮಹಿಳೆಯರು ಖಾಸಗಿ ಅಂಗಾಂಗ ತೋರಿಸಿ ವಿಕೃತಿ ಮೆರೆದಿದ್ದಾರೆ.

    ರಾತ್ರಿ ಕಾಲೇಜು ಒಂದರ ಕಾರ್ಯಕ್ರಮದ ನಿಮಿತ್ತ ರಾಜಾಜಿನಗರದ ಪ್ರತಿಷ್ಠಿತ ಹೋಟೆಲ್‍ನಲ್ಲಿ ಉಗಾಂಡ ಪ್ರಜೆಗಳು ಸೇರಿದ್ದರು. 10 ಗಂಟೆಗೆ ಕಾರ್ಯಕ್ರಮ ಮುಗಿಯುತ್ತಿದ್ದಂತೆ ಓಲಾ ಕ್ಯಾಬ್ ಬುಕ್ ಮಾಡಿದ್ದಾರೆ. ಸ್ಥಳಕ್ಕೆ ಬಂದ ಕ್ಯಾಬ್ ಚಾಲಕ ಶ್ರೀಕಾಂತ್ ಅವರು ಪ್ಯಾಸೆಂಜರ್ ಬಳಿ ಓಟಿಪಿ ಪಡೆದು ಓಕೆ ಮಾಡಿದ್ದಾರೆ.

    ಕ್ಯಾಬ್ ಬುಕ್ ಮಾಡುವಾಗ 4 ಮಂದಿ ಮಾತ್ರ ಸ್ಥಳದಲ್ಲಿ ಇದ್ದರು. ಕಾರು ಬಂದ ಬಳಿಕ ಮತ್ತೊಬ್ಬ ಬಂದಿದ್ದಾನೆ. ಐವರು ಇರುವುದನ್ನು ನೋಡಿ ಕಾರಿನಲ್ಲಿ 5 ಮಂದಿಯನ್ನು ಕರೆದುಕೊಂಡು ಹೋಗಲು ಸಾಧ್ಯವಿಲ್ಲ ಎಂದು ಶ್ರೀಕಾಂತ್ ಹೇಳಿದ್ದಾರೆ.

    4 ಮಂದಿ ಬರುವುದಿದ್ದರೆ ಮಾತ್ರ ನಾನು ಕಾರಿನಲ್ಲಿ ಕರೆದುಕೊಂಡು ಹೋಗುತ್ತೇನೆ ಎಂದಿದ್ದಾರೆ. ಇದಕ್ಕೆ ಅವರು ಒಪ್ಪದೇ ಟ್ರಿಪ್ ಕ್ಯಾನ್ಸಲ್ ಮಾಡಿದ್ದಾರೆ. ಇದನ್ನು ಕಂಡು ಟ್ರಿಪ್ ರದ್ದು ಮಾಡಿದ್ದಕ್ಕೆ 100 ರೂ. ಚಾರ್ಜ್ ಕೇಳಿದ್ದಾರೆ. ಇದಕ್ಕೆ ರಾದ್ಧಾಂತವೇ ನಡೆದಿದ್ದು, ಕೆರಳಿ ನಿಂತ ಉಗಾಂಡ ಯುವತಿಯರು ಮನಬಂದಂತೆ ಅಸಭ್ಯವಾಗಿ ವರ್ತಿಸಿದ್ದಾರೆ. ಅಂಗಾಂಗ ತೋರಿಸಿ ವಿಕೃತಿ ಮರೆದಿದ್ದಾರೆ.

    ಹೋಟೆಲ್ ಆವರಣದಲ್ಲಿ ಮತ್ತಷ್ಟು ಉಗಾಂಡ ಪ್ರಜೆಗಳು ಜಮಾಯಿಸಿದ್ದಾರೆ. ಕ್ಯಾಬ್ ಚಾಲಕ ಶ್ರೀಕಾಂತ್ ಅವರನ್ನು ಹಿಗ್ಗಾಮುಗ್ಗ ಎಳೆದಾಡಿದ್ದಾರೆ. ಮಹಿಳೆಯರು ಚಪ್ಪಲಿಯಿಂದ ಥಳಿಸಿದ್ದಾರೆಂದು ಶ್ರೀಕಾಂತ್ ಆರೋಪಿಸಿದ್ದಾರೆ. ಈ ವೇಳೆ ಸ್ಥಳಕ್ಕೆ ಕ್ಯಾಬ್ ಚಾಲಕ ಶ್ರೀಕಾಂತ್ ಅವರ ಸ್ನೇಹಿತರು ಕೂಡ ಅಲ್ಲಿಗೆ ಬಂದಿದ್ದಾರೆ. ಇದನ್ನೂ ಓದಿ: ಬೆಂಗಳೂರು ಹೊರವಲಯದಲ್ಲಿ ರೇವ್ ಪಾರ್ಟಿ- ಅರೆನಗ್ನ ಸ್ಥಿತಿಯಲ್ಲಿ ಯುವತಿಯರ ಡ್ಯಾನ್ಸ್ 

    ಘಟನೆಗೆ ಸಂಬಂಧ ಪಟ್ಟಂತೆ ಸುಬ್ರಹ್ಮಣ್ಯನಗರ ಠಾಣೆಯಲ್ಲಿ ದೂರು ದಾಖಲಿಸಿದ್ದು, ಕಿರಿಕ್ ಮಾಡಿದ್ದ ಉಗಾಂಡ ಪ್ರಜೆ ಲುಬೆಗಾ ರೇಮಂಡ್ ನನ್ನು ವಶಕ್ಕೆ ಪಡೆಯಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಲುಬೆಗಾ ರೇಮಂಡ್ ನನ್ನು  ವಶಕ್ಕೆ ಪಡೆದ ವಿಚಾರ ತಿಳಿದ ಆಫ್ರಿಕನ್ ವಿದ್ಯಾರ್ಥಿಗಳ ಮುಖಂಡ ಪೊಲೀಸ್ ಠಾಣೆಗೆ ಆಗಮಿಸಿದ್ದ. ಇದನ್ನೂ ಓದಿ: ಪಂಜಾಬ್ ಸಿಎಂ ರೇಸ್‍ನಲ್ಲಿ ಅಚ್ಚರಿಯ ಹೆಸರು?

    ಘಟನೆಯಲ್ಲಿ ಭಾಗಿಯಾಗಿದ್ದ ಯುವತಿಯರನ್ನ ಇಂದು 10 ಗಂಟೆಗೆ ಠಾಣೆಗೆ ವಿಚಾರಣೆಗೆ ಕರೆತರುವಂತೆ ಉಗಾಂಡ ವಿದ್ಯಾರ್ಥಿಗಳ ಮುಖಂಡನಿಗೆ ಪೊಲೀಸರು ನೋಟಿಸ್ ಕೊಟ್ಟು ಕಳಿಸಿದ್ದಾರೆ.

  • ವರನಿಲ್ಲದೇ ತನ್ನನ್ನು ತಾನೇ ಮದುವೆ ಮಾಡಿಕೊಂಡ್ಳು!

    ವರನಿಲ್ಲದೇ ತನ್ನನ್ನು ತಾನೇ ಮದುವೆ ಮಾಡಿಕೊಂಡ್ಳು!

    ಉಗಾಂಡ: ಆಕ್ಸ್‌ಫರ್ಡ್ ವಿದ್ಯಾರ್ಥಿನಿಯೊಬ್ಬಳು ವರನಿಲ್ಲದೇ ತನ್ನನ್ನು ತಾನೇ ಮದ್ವೆ ಮಾಡಿಕೊಂಡಿರುವ ಅಚ್ಚರಿಯ ಘಟನೆ ಉಗಾಂಡದಲ್ಲಿ ನಡೆದಿದೆ.

    32 ವರ್ಷದ ಲುಲು ಜೆಮಿಮಾ ತನ್ನನ್ನು ತಾನೇ ವರಿಸಿಕೊಂಡ ವಧು. ಜೆಮಿಮಾ ಅಂತಿಮವಾಗಿ ಪೋಷಕರ ಒತ್ತಡದಿಂದ ಮದುವೆಯಾಗಲು ಒಪ್ಪಿಕೊಂಡರು. ಹಾಗಾಗಿ, ಆಗಸ್ಟ್ 27 ರಂದು ಉಗಾಂಡಾದ  ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದಲ್ಲಿ ಮದುವೆ ಮಾಡಿಕೊಂಡಿದ್ದಾರೆ.

    ಲುಲು ಮದುವೆಯಲ್ಲಿ ಗೌನ್ ಧರಿಸಿದ್ದು, ಸಾಂಪ್ರದಾಯಿಕ ವಿವಾಹ ಸಮಾರಂಭದಂತೆ ಮದುವೆಯಾದರು. ಮದುವೆಗೆ ಇಷ್ಟವಿಲ್ಲದಿದ್ದರೂ ಪೋಷಕರು ಮದುವೆಯಾಗುವಂತೆ ಒತ್ತಡ ಹೇರಿದ್ದರಿಂದ, ತನ್ನೊಂದಿಗೆ ತಾನು ಮದುವೆಯಾಗಲು ನಿಶ್ಚಯಿಸಿದ್ದಾರೆ.

    ಈ ಬಗ್ಗೆ ಮಾತನಾಡಿದ ಲುಲು ಜೆಮಿಯಾ, 16 ವರ್ಷದಿಂದಲೇ ಪೋಷಕರು ಮದುವೆಯಾಗುವಂತೆ ಒತ್ತಡ ಹೇರಿದ್ದರು. ಆದರೆ ನನಗೆ ಇಷ್ಟವಿಲ್ಲದೇ ಇರುವುದರಿಂದ, ಮುಂದೂಡುತ್ತಾ ಬಂದಿದ್ದೆ. ಆದರೆ ಈಗ ಒತ್ತಡ ಹೆಚ್ಚಾಗಿದ್ದರಿಂದ, ನನ್ನ ಮದುವೆಯನ್ನು ನನ್ನೊಂದಿಗೆ ನಿಶ್ಚಯಿಸಿಕೊಂಡು ತಾನೇ ಮದುವೆ ಮಾಡಿಕೊಂಡಿದ್ದೇನೆ. ಈ ಬಗ್ಗೆ ಪೋಷಕರಿಬ್ಬರಿಗೂ ಬೇಸರವಿದ್ದು, ಅವರೊಂದಿಗೆ ಮಾತನಾಡಿ ಅವರನ್ನು ಸಮಾಧಾನ ಮಾಡುತ್ತೇನೆ ಎಂದು ಖಾಸಗಿ ಪತ್ರಿಕೆಯೊಂದಕ್ಕೆ ಹೇಳಿದ್ದಾರೆ.

    ಮದುವೆಗೆ ಲುಲು ಜೆಮಿಯಾ ಕೇವಲ 2.62 ಡಾಲರ್(194.97 ರೂ.) ಖರ್ಚು ಮಾಡಿದ್ದಾಳೆ. ಜೆಮಿಯಾ ಸಹೋದರ ಮದುವೆಯ ಕೇಕ್ ನೀಡಿದ್ದು, ಸ್ನೇಹಿತೆ ವಧುವಿನ ಡ್ರೆಸ್‍ನ್ನು ಬಾಡಿಗೆಗೆ ನೀಡಿದ್ದಾರೆ. ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರು ತಮ್ಮ ಖರ್ಚನ್ನು ತಾವೇ ನೀಡಿದ್ದಾರೆ ಎಂದು ಜೆಮಿಯಾ ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಭಾರತವನ್ನು ಬಿಟ್ಟು ಜಗತ್ತನ್ನು ವರ್ಣಿಸಲು ಸಾಧ್ಯವಿಲ್ಲ: ಉಗಾಂಡ ಉಪ ಪ್ರಧಾನಿ

    ಭಾರತವನ್ನು ಬಿಟ್ಟು ಜಗತ್ತನ್ನು ವರ್ಣಿಸಲು ಸಾಧ್ಯವಿಲ್ಲ: ಉಗಾಂಡ ಉಪ ಪ್ರಧಾನಿ

    ಬಾಗಲಕೋಟೆ: ಭಾರತವನ್ನು ಬಿಟ್ಟು ಜಗತ್ತನ್ನು ವರ್ಣಿಸಲು ಸಾಧ್ಯವಿಲ್ಲವೆಂದು ಉಗಾಂಡ ದೇಶದ ಎರಡನೇ ಉಪ ಪ್ರಧಾನಿ ಡಾ. ಅಲಿ ಕಿರುಂದಾ ಕಿವಿಜೆಂಜಾರವರು ಅಭಿಪ್ರಾಯಪಟ್ಟಿದ್ದಾರೆ.

    ನಗರದ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದ ಪಾಲಿಟೆಕ್ನಿಕ್ ಕಾಲೇಜಿಗೆ ಉಗಾಂಡ ದೇಶದ ಎರಡನೇ ಉಪ ಪ್ರಧಾನಿ ಡಾ. ಅಲಿ ಕಿರುಂದಾ ಕಿವಿಜೆಂಜಾರವರು ತಮ್ಮ ದೇಶದ ಅಧಿಕಾರಿಗಳ ತಂಡದೊಂದಿಗೆ ಭೇಟಿ ನೀಡಿದ್ದರು. ಈ ವೇಳೆ ಮಾಧ್ಯಮದವರು ಜಗತ್ತಿನಲ್ಲಿನ ಭಯೋತ್ಪಾದನೆ ನಿರ್ಮೂಲನೆ ಕುರಿತು ಅವರನ್ನು ಪ್ರಶ್ನಿಸಿದಾಗ, ಭಾರತ ಜಗತ್ತಿನಲ್ಲೇ ದೊಡ್ಡ ದೇಶವಾಗಿದೆ. ಅಲ್ಲದೇ ಎರಡನೇ ಅತೀ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ದೇಶವಾಗಿದ್ದು, ಆರ್ಥಿಕವಾಗಿ ಐದನೇ ಸ್ಥಾನದಲ್ಲಿದೆ. ಹೀಗಾಗಿ ಭಾರತವನ್ನು ಬಿಟ್ಟು ಇಡೀ ಜಗತ್ತನ್ನು ವರ್ಣಿಸಲು ಅಸಾಧ್ಯ. ಅಲ್ಲದೇ ಭಯೋತ್ಪಾದನೆ ನಿರ್ಮೂಲನೆಗೆ ಕುರಿತು ಭಾರತ ಮಹತ್ವದ ಸ್ಥಾನದಲ್ಲಿದೆ ಎಂದರು.

    ಪ್ರಧಾನಿ ಮೋದಿಯವರು ಇತ್ತೀಚೆಗೆ ಉಗಾಂಡಾ ದೇಶಕ್ಕೆ ಭೇಟಿ ನೀಡಿದ ಬಗ್ಗೆ ಸಂತಸ ವ್ಯಕ್ತಪಡಿಸಿದ ಅವರು, ಪ್ರಧಾನಿ ನರೇಂದ್ರ ಮೋದಿ ಭೇಟಿಯಿಂದ ಎರಡೂ ದೇಶಗಳ ನಡುವೆ ಭವಿಷ್ಯದಲ್ಲಿ ಉತ್ತಮ ಬಾಂಧವ್ಯ ನಿರ್ಮಿಸುವ ದೃಷ್ಟಿಯಿಂದ ಎರಡೂ ದೇಶದ ಪ್ರತಿನಿಧಿಗಳೊಂದಿಗೆ ಸಾಕಷ್ಟು ವಿಷಯಗಳು ಚರ್ಚೆಯಾಗಿದ್ದು, ಭಾರತದೊಂದಿಗಿನ ಉತ್ತಮ ಬಾಂಧವ್ಯಕ್ಕೆ ಪ್ರಧಾನಿ ಭೇಟಿ ಒಂದು ಉತ್ತಮ ವೇದಿಕೆಯಾಗಿತ್ತು ಎಂದು ತಿಳಿಸಿದರು.

    ಬಸವೇಶ್ವರ ವಿದ್ಯಾವರ್ಧಕ ಸಂಘದ ಪಾಲಿಟೆಕ್ನಿಕ್ ವಿಭಾಗದ ಮುಖ್ಯಸ್ಥರೊಂದಿಗೆ ಇಲ್ಲಿನ ಶಿಕ್ಷಣದ ಕೌಶಲ್ಯಗಳು, ಶಿಕ್ಷಣದ ಗುಣಮಟ್ಟ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಅಲಿ ಕಿರುಂದಾ ಕಿವಿಜೆಂಜಾ ಚರ್ಚೆ ನಡೆಸಿದರು.

  • ಸಂಸತ್ತಿನಲ್ಲಿ ಫೈಟಿಂಗ್: ಮೈಕ್ ಹಿಡಿದು, ಚೇರ್ ಎಸೆದು ಉಗಾಂಡ ಎಂಪಿಗಳ ಕಿತ್ತಾಟ

    ಸಂಸತ್ತಿನಲ್ಲಿ ಫೈಟಿಂಗ್: ಮೈಕ್ ಹಿಡಿದು, ಚೇರ್ ಎಸೆದು ಉಗಾಂಡ ಎಂಪಿಗಳ ಕಿತ್ತಾಟ

    ಕ್ಯಾಂಪಲ: ಉಗಾಂಡದ ಸಂಸತ್ ಅಧಿವೇಶನದ ವೇಳೆ ಸದಸ್ಯರು ಚರ್ಚೆಯೊಂದರಲ್ಲಿ ಆಕ್ರೋಶ ಭರಿತರಾಗಿ ಪರಸ್ಪರ ಹೊಡೆದಾಡಿಕೊಂಡಿದ್ದಾರೆ.

    ಉಂಗಾಡ ಅಧ್ಯಕ್ಷರಾಗಲು ಗರಿಷ್ಟ ವಯಸ್ಸಿನ ಮಿತಿಯನ್ನು ವಿಸ್ತರಿಸಬೇಕು ಎನ್ನುವ ವಿಚಾರದ ಬಗ್ಗೆ ಚರ್ಚೆ ನಡೆಯುತಿತ್ತು. ಈ ವೇಳೆ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ನಡುವೆ ಮಾರಾಮಾರಿ ನಡೆದು ತಳ್ಳಾಟ ನೂಕಾಟ ನಡೆದಿದೆ.

    ಉಗಾಂಡದ ಕಾನೂನಿನ ಪ್ರಕಾರ 75 ವರ್ಷ ಮೀರಿದವರು ಅಧ್ಯಕ್ಷರಾಗಲು ಅರ್ಹತೆಯನ್ನು ಕಳೆದುಕೊಳ್ಳುತ್ತಾರೆ. ಈಗಿನ ಅಧ್ಯಕ್ಷ ಯೊವೆರೆ ಮ್ಯೂಸೆವೆನಿ ಅವರಿಗೆ 73 ವರ್ಷವಾಗಿದ್ದು ಮತ್ತೆ ಅಧ್ಯಕ್ಷರಾಗಲು ಬಯಸಿದ್ದಾರೆ. ಹೀಗಾಗಿ ಕಾನೂನು ತಿದ್ದುಪಡಿ ಮಾಡಲು ಆಡಳಿತ ಪಕ್ಷದವರು ಪಟ್ಟು ಹಿಡಿದರೆ ವಿರೋಧ ಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿವೆ.

    ಚರ್ಚೆ ವಿಕೋಪಕ್ಕೆ ತಿರುಗಿ ಮೈಕ್ ಹಿಡಿದು ಟೇಬಲ್ ಮೇಲೆ ನಿಂತು ಸದಸ್ಯರು ರಂಪಾಟ ಮಾಡಿದ್ದಾರೆ. ಪುರುಷ ಸದಸ್ಯರು ಮಹಿಳಾ ಸದಸ್ಯೆಯ ಮೇಲೆ ಹಲ್ಲೆ ನಡೆಸಿರುವುದು ವಿಡಿಯೋದಲ್ಲಿ ನೋಡಬಹುದಾಗಿದೆ.

  • ತನ್ನದಲ್ಲದ ತಪ್ಪಿಗೆ ಉಗಾಂಡದಲ್ಲಿ ಕನ್ನಡಿಗ ಜೈಲುಪಾಲು

    ತನ್ನದಲ್ಲದ ತಪ್ಪಿಗೆ ಉಗಾಂಡದಲ್ಲಿ ಕನ್ನಡಿಗ ಜೈಲುಪಾಲು

    -ಮಂಗ್ಳೂರಿನ ವಾಟ್ಸಪ್ ಗ್ರೂಪ್ ಸದಸ್ಯರ ಸಹಾಯದಿಂದ ಹೆಂಡತಿ, ಮಕ್ಕಳು ಭಾರತಕ್ಕೆ ವಾಪಸ್

    ಮಂಗಳೂರು: ಕರಾವಳಿಯ ಯುವಕನೊಬ್ಬ ದೂರದ ಉಗಾಂಡ ದೇಶಕ್ಕೆ ದುಡಿಯಲು ಹೋಗಿದ್ರು. ಆದ್ರೆ ತನ್ನದಲ್ಲದ ತಪ್ಪಿಗೆ ಆ ದೇಶದಲ್ಲೀಗ ಜೈಲು ಶಿಕ್ಷೆ ಅನುಭವಿಸ್ತಿದ್ದಾರೆ. ಹೀಗಾಗಿ ಆತನ ಕುಟುಂಬ ದಿಕ್ಕಿಲ್ಲದೇ ಕಂಗಾಲಾಗಿದೆ.

    ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಮಾಲಾಡಿ ಗ್ರಾಮದ ರಶೀದ್ ಶಾಫಿ ಉಗಾಂಡದ ಗುಜರಾತಿ ಕಂಪೆನಿಯೊಂದರಲ್ಲಿ ಕೆಲಸ ಮಾಡ್ತಿದ್ರು. ಸೋಮಾಲಿಯಾ ದೇಶದ ಪ್ರಜೆಯೊಂದಿಗೆ ಮದುವೆಯಾಗಿರೋ ರಶೀದ್, ಮೂವರು ಮಕ್ಕಳ ಜೊತೆ ಸುಂದರ ಸಂಸಾರ ನಡೆಸ್ತಿದ್ರು. ಹೀಗಿರುವಾಗ ಕಳೆದ 10 ತಿಂಗಳ ಹಿಂದೆ ಕೆಲಸ ಮುಗಿಸಿ ಮನೆಗೆ ಬರುತ್ತಿದ್ದ ರಶೀದ್ ಕೈಯ್ಯಲ್ಲಿದ್ದ ಕಂಪೆನಿಯ 12 ಲಕ್ಷ ರೂಪಾಯಿ ಹಣವನ್ನ ದರೋಡೆಕೋರರು ದೊಚಿದ್ದರು. ಆದ್ರೆ ಕಂಪೆನಿ ಮಾತ್ರ ರಶೀದ್ ಹಣವನ್ನ ದುರ್ಬಳಕೆ ಮಾಡಿದ್ದಾರೆಂದು ಆರೋಪ ಮಾಡಿ ಜೈಲಿಗೆ ಕಳುಹಿಸಿದೆ. ತಮ್ಮ ಮಗನನ್ನ ಬಿಡುಗಡೆ ಮಾಡಲು ಸಹಾಯ ಮಾಡಿ ಅಂತ ರಶೀದ್ ತಂದೆ ಕೇಂದ್ರ ಸರ್ಕಾರಕ್ಕೆ ಅಂಗಲಾಚುತ್ತಿದ್ದಾರೆ.

    ಕಳೆದ 10 ತಿಂಗಳಿನಿಂದ ರಶೀದ್ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಯಜಮಾನನಿಲ್ಲದ ಮನೆಯಲ್ಲಿ ರಶೀದ್ ಅವರ ಪತ್ನಿ ಹಾಗೂ ಮಕ್ಕಳು ಸಂಕಷ್ಟದಲ್ಲಿದ್ದಾರೆ. ಇದನ್ನ ಅರಿತ ಮಂಗಳೂರಿನ ಎಂ.ಫ್ರೆಂಡ್ಸ್ ವಾಟ್ಸಪ್ ಗ್ರೂಪ್‍ನ ಗೆಳೆಯರು ರಶೀದ್ ಪತ್ನಿ ಹಾಗೂ ಮಕ್ಕಳನ್ನ ಭಾರತಕ್ಕೆ ಕರೆತಂದಿದ್ದಾರೆ. ನಿರಪರಾಧಿಯಾದ ರಶೀದ್ ಬಿಡುಗಡೆಗೂ ಹಣ ಹೊಂದಿಸಲು ಎಂ.ಫ್ರೆಂಡ್ಸ್ ಸದಸ್ಯರು ಪ್ರಯತ್ನ ಮಾಡ್ತಿದ್ದು, ದಾನಿಗಳ ಮೂಲಕ ಹಣ ಸಂಗ್ರಹಿಸಲು ಮುಂದಾಗಿದ್ದಾರೆ.

    ಒಟ್ನಲ್ಲಿ ಅನಿವಾಸಿ ಭಾರತೀಯ ತನ್ನದಲ್ಲದ ತಪ್ಪಿಗೆ ಉಗಾಂಡದಲ್ಲಿ ಶಿಕ್ಷೆ ಅನುಭವಿಸ್ತಿದ್ದಾರೆ.