Tag: ಉಕ್ರೇನ್‌ ರಷ್ಯಾ ಯುದ್ಧ

  • ರಷ್ಯಾ ವಿರುದ್ಧ ಉಕ್ರೇನ್‌ ಪ್ರತೀಕಾರದ ದಾಳಿ – ಬೆಂಕಿ ಉಂಡೆ ಉಗುಳುವ ʻಡ್ರ್ಯಾಗನ್‌ ಡ್ರೋನ್‌ʼ ಅಸ್ತ್ರ ಪ್ರಯೋಗ

    ರಷ್ಯಾ ವಿರುದ್ಧ ಉಕ್ರೇನ್‌ ಪ್ರತೀಕಾರದ ದಾಳಿ – ಬೆಂಕಿ ಉಂಡೆ ಉಗುಳುವ ʻಡ್ರ್ಯಾಗನ್‌ ಡ್ರೋನ್‌ʼ ಅಸ್ತ್ರ ಪ್ರಯೋಗ

    ಕೈವ್‌: ಇತ್ತೀಚೆಗಷ್ಟೇ ಭಾರತದ ಮಧ್ಯಸ್ಥಿಕೆಯಲ್ಲಿ ಶಾಂತಿ ಒಪ್ಪಂದದ ಕುರಿತು ರಷ್ಯಾ (Russia) ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಮಾತನಾಡಿದ್ದರು. ಈ ಬೆನ್ನಲ್ಲೇ ಉಕ್ರೇನ್‌ (Ukraine), ರಷ್ಯಾ ವಿರುದ್ಧ ಹೊಸ ಅಸ್ತ್ರ ಪ್ರಯೋಗಿಸಿದೆ. ಉಕ್ರೇನ್, ರಷ್ಯಾದ‌ ಸೇನಾ ನೆಲೆಗಳ ಮೇಲೆ ʻಡ್ರ್ಯಾಗನ್​ ಡ್ರೋನ್ʼ (Dragon Drone) ಎಂಬ ಹೊಸ ಅಸ್ತ್ರವನ್ನು ಪ್ರಯೋಗಿಸಿದೆ ಎಂದು ವರದಿಯಾಗಿದೆ.

    ಆಕ್ರಮಿತ ಖಾರ್ಕಿವ್ (ಕೈವ್‌) ಪ್ರದೇಶದಲ್ಲಿರುವ ರಷ್ಯಾದ ಸ್ಥಾನಗಳ ಮೇಲೆ ಬೆಂಕಿ ಉಗುಳುವ ʻಡ್ರ್ಯಾಗನ್ ಡ್ರೋನ್ʼ ಅಸ್ತ್ರವನ್ನು ಪ್ರಯೋಗಿಸಿದೆ. ಈ ಅಸ್ತ್ರದ ಬಳಕೆಯ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ (Social Media) ವೈರಲ್ ಆಗುತ್ತಿದೆ. ಅದೇ ರೀತಿ ಅರಣ್ಯದಲ್ಲಿರುವ ರಷ್ಯಾದ ಸೈನಿಕರ ಮೇಲೆಯೂ ಈ ಅಸ್ತ್ರವನ್ನು ಹೆಚ್ಚು ಪ್ರಯೋಗಿಸುತ್ತಿದೆ. ಇದರಿಂದ ಮರಗಳು ಮಾತ್ರವಲ್ಲದೇ ರಷ್ಯಾದ ಅನೇಕ ಸೈನಿಕ ಪ್ರಾಣಹಾನಿಯಾಗಿರುವುದಾಗಿ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಪ್ರಧಾನಿ ಮೋದಿ ಸಿಂಗಾಪುರ ಭೇಟಿ – ಮಹತ್ವದ 4 ಒಪ್ಪಂದಗಳಿಗೆ ಸಹಿ

    ಇದು ರಷ್ಯಾದ ವಿರುದ್ಧ ಉಕ್ರೇನಿನ ಪ್ರತಿದಾಳಿಯಾಗಿದೆ ಎನ್ನಲಾಗಿದೆ. ಅದಕ್ಕಾಗಿ ಎರಡು ವಿಶ್ವ ಮಹಾಯುದ್ಧಗಳಲ್ಲಿ ಬಳಸಿದ್ದ ಹಳೆಯ ಅಸ್ತ್ರಕ್ಕೆ ಉಕ್ರೇನ್‌ ಮರುಜೀವ ನೀಡಿದೆ. ವಿಶ್ವಯುದ್ಧದ (World War) ಸಂದರ್ಭಗಳಲ್ಲಿ ಬಳಸಿದ್ದ ಅಸ್ತ್ರವನ್ನೇ ಉಕ್ರೇನ್‌ ನವೀಕರಿಸಿದ್ದು, ರಷ್ಯಾ ಸೇನಾನೆಲೆಗಳ ಮೇಲೆ ದಾಳಿ ನಡೆಸಿದೆ ಎಂದು ಹೇಳಲಾಗಿದೆ. ಇದನ್ನೂ ಓದಿ: ಕೀನ್ಯಾ ಶಾಲೆಯಲ್ಲಿ ಅಗ್ನಿ ಅವಘಡ – 17 ಮಕ್ಕಳು ದಾರುಣ ಸಾವು 

    ಖೋರ್ನೆ ಗ್ರೂಪ್ ಎಂಬ ಟೆಲಿಗ್ರಾಮ್ ಚಾನೆಲ್, ಡ್ರ್ಯಾಗನ್‌ ಡ್ರೋನ್‌ ಬೆಂಕಿ ಉಂಡೆ ಉಗುಳುತ್ತಿರುವ ವೀಡಿಯೋವೊಂದನ್ನು ಹಂಚಿಕೊಂಡಿದೆ. ರಷ್ಯಾ ಸೇನೆಗಳು ನೆಲೆಸಿವೆ ಎನ್ನಲಾದ ಅರಣ್ಯ ಪ್ರದೇಶದ ಮೇಲೆ ಉಕ್ರೇನ್‌ ಡ್ರ್ಯಾಗನ್‌ ಡ್ರೋನ್‌ ಬಳಸಿ ದಾಳಿ ನಡೆಸಿದೆ ಎಂದೂ ಖೋರ್ನೆ ಉಲ್ಲೇಖಿಸಿದೆ. ಇದಕ್ಕೆ ಐರನ್‌ ಆಕ್ಸೈಡ್‌ ಮತ್ತು ಅಲ್ಯೂಮೀನಿಯಂ ಪೌಡರ್‌ ಮಿಶ್ರಣ ಮಾಡಿರುವುದರಿಂದ ಬೆಂಕಿ ಉಂಡೆ ಉಗುಳುತ್ತಿದ್ದಂತೆ ಸಾಕಷ್ಟು ಮರಗಳು ಆಹುತಿಯಾಗಿವೆ. ಅಲ್ಲದೇ ಈ ಪ್ರದೇಶದಲ್ಲಿದ್ದ ರಷ್ಯಾ ಸೇನೆಯ ರಕ್ಷಾಕವಚ ಹಾಗೂ ಮಿಲಟರಿ ವಾಹನಗಳನ್ನು ನಿಷ್ಕ್ರಿಯಗೊಳಿಸಿವೆ ಎಂದು ಉಲ್ಲೇಖಿಸಿದೆ. ಇದನ್ನೂ ಓದಿ: ಅಮೆರಿಕದ ಶಾಲೆಯಲ್ಲಿ ವಿದ್ಯಾರ್ಥಿಯಿಂದ ಗುಂಡಿನ ದಾಳಿ – ಇಬ್ಬರು ಶಿಕ್ಷಕರು ಸೇರಿ ನಾಲ್ವರು ಸಾವು

    ʻಡ್ರ್ಯಾಗನ್‌ ಡ್ರೋನ್‌ʼ ಹಿನ್ನೆಲೆ ರೋಚಕ:
    ಮೊದಲ ವಿಶ್ವ ಮಹಾಯುದ್ಧದ ಸಂದರ್ಭದಲ್ಲಿ ಜರ್ಮನ್ನರು ಈ ಬೆಂಕಿ ಉಗುಳುವ ಬಾಂಬ್‌ಗಳನ್ನು ಬಳಸಿದ್ದರು. ಜರ್ಮನ್ನರು B1.3E, 1938, ಬೆಂಕಿಯಿಡುವ ಬಾಂಬುಗಳನ್ನು ಅಭಿವೃದ್ಧಿಪಡಿಸಿದರು. ಆಗಿನ-ಜರ್ಮನ್ ಏರ್ ಫೋರ್ಸ್ (ಲುಫ್ಟ್‌ವಾಫೆ) ಬ್ರಿಟಿಷ್ ಪ್ರದೇಶಗಳ ಮೇಲೆ ಬಾಂಬ್ ದಾಳಿ ಮಾಡಲು ಇದನ್ನು ತೀವ್ರವಾಗಿ ಬಳಸಿದ್ದರು ಎಂದು ಹೇಳಲಾಗಿದೆ.

    ಕೆಲ ದಿನಗಳ ಹಿಂದೆಯಷ್ಟೇ ರಷ್ಯಾ ಉಕ್ರೇನ್‌ ವಿರುದ್ಧ 100 ಅಟ್ಯಾಕಿಂಗ್‌ ಡ್ರೋನ್‌ಗಳಿಂದ ದಾಳಿ ನಡೆಸಿತ್ತು. ಇದಕ್ಕೆ ಪ್ರತಿಕಾರವಾಗಿ ಉಕ್ರೇನ್‌ ದಾಳಿ ನಡೆಸಿದೆ ಎಂದು ಸೇನಾಧಿಕಾರಿಗಳು ಹೇಳಿರುವುದಾಗಿ ವರದಿಯಾಗಿದೆ. ಇದನ್ನೂ ಓದಿ: ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದಾಳಿ ರಾಜಕೀಯ ಪ್ರೇರಿತ: ಭಾರತದ ವಿರುದ್ಧವೇ ಪ್ರಶ್ನೆ ಎತ್ತಿದ ಯೂನಸ್ 

  • ಪುಟಿನ್‌ಗೆ ಏನೂ ಆಗಿಲ್ಲ, ಆರೋಗ್ಯವಾಗಿದ್ದಾರೆ – ಕ್ರೆಮ್ಲಿನ್‌ ಸ್ಪಷ್ಟನೆ

    ಪುಟಿನ್‌ಗೆ ಏನೂ ಆಗಿಲ್ಲ, ಆರೋಗ್ಯವಾಗಿದ್ದಾರೆ – ಕ್ರೆಮ್ಲಿನ್‌ ಸ್ಪಷ್ಟನೆ

    ಮಾಸ್ಕೋ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ (Vladimir Putin) ಅನಾರೋಗ್ಯದಿಂದ ಬಳಲುತ್ತಿದ್ದಾರೆ, ಪುಟಿನ್‌ ದೇಹವನ್ನು ಡಬಲ್‌ ಮಾಡಲಾಗಿದೆ ಎಂಬ ಆರೋಪಗಳನ್ನು ಕ್ರೆಮ್ಲಿನ್‌ (Kremlin) ತಳ್ಳಿಹಾಕಿದ್ದು, ಪುಟಿನ್‌ ಆರೋಗ್ಯವಾಗಿದ್ದಾರೆ ಎಂದು ಹೇಳಿದೆ.

    ಭಾನುವಾರ ಸಂಜೆ ಪುಟಿನ್‌ ಹೃದಯ ಸ್ತಂಭನಕ್ಕೆ (Cardiac Arrest) ಒಳಗಾಗಿರುವುದಾಗಿ SVR ಟೆಲಿಗ್ರಾಮ್ ಚಾನೆಲ್‌ ವರದಿ ಮಾಡಿತ್ತು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಕ್ರೆಮ್ಲಿನ್‌ ವಕ್ತಾರ ಪೆಸ್ಕೋವ್‌, ಪುಟಿನ್‌ ಆರೋಗ್ಯವಾಗಿದ್ದಾರೆ, ಬಾಡಿ ಡಬಲ್‌ ಮಾಡಲಾಗಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಮೈಸೂರು ದಸರಾ ಜಂಬೂಸವಾರಿಗೆ ಚಾಲನೆ – ಚಿನ್ನದ ಅಂಬಾರಿ ಹೊತ್ತು ರಾಜಗಾಂಭೀರ್ಯದಿಂದ ಸಾಗಿದ ಅಭಿಮನ್ಯು

    ಪುಟಿನ್‌ ಹೃದಯ ಸ್ತಂಭನಕ್ಕೆ ಒಳಗಾಗಿದ್ದಾರೆ ಎನ್ನುತ್ತಿರುವುದು ಶುದ್ಧ ಸುಳ್ಳು. ಇದಕ್ಕೆ ನಗಬೇಕೋ ಅಳಬೇಕೋ ಎಂಬುದೇ ತಿಳಿಯುತ್ತಿಲ್ಲ. ಬೇರೆ ಯಾವುದೇ ಪ್ರತಿಕ್ರಿಯೆ ಕೊಡಲು ನನ್ನಿಂದ ಸಾಧ್ಯವಿಲ್ಲ ಎಂದು ಕ್ರೆಮ್ಲಿನ್‌ ವಕ್ತಾರ ಪೆಸ್ಕೋವ್‌ ಹೇಳಿದ್ದಾರೆ. ಇದನ್ನೂ ಓದಿ: ಕಾಗೇರಿಗೊಂದು ನ್ಯಾಯ ಹೆಬ್ಬಾರ್‌ಗೊಂದು ನ್ಯಾಯ- ಸಿಡಿದೆದ್ದ ಹೆಬ್ಬಾರ್ ಅಭಿಮಾನಿಗಳು?

    ಪುಟಿನ್‌ ಅಕ್ಟೋಬರ್‌ 7ರಂದು 71ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ನಿರಂತರವಾಗಿ ಸಾರ್ವಜನಿಕ ಸಭೆಗಳು ಹಾಗೂ ನಿಗದಿತ ವೇಳಾಪಟ್ಟಿಯಂತೆ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಅವುಗಳಲ್ಲಿ ಹಲವು ಕಾರ್ಯಕ್ರಮಗಳು ಟಿವಿಗಳಲ್ಲಿ ಪ್ರಸಾರವಾಗುತ್ತಿವೆ. ಇತ್ತೀಚೆಗೆ ಚೀನಾಗೆ ಭೇಟಿ ನೀಡಿ ಬರುತ್ತಿದ್ದಾಗಲೂ ರಷ್ಯಾದ ಎರಡು ನಗರಗಳಲ್ಲಿ ನಿಲ್ಲಿಸಲಾಗಿತ್ತು. ಅಲ್ಲಿಯೂ ನಡೆದ ಸ್ಥಳೀಯ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು ಎಂದು ಪುಟಿನ್‌ ಆರೋಗ್ಯದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ಗೆ ಹೃದಯ ಸ್ತಂಭನ – ಭದ್ರತಾ ಸಿಬ್ಬಂದಿ ಹೇಳಿದ್ದೇನು?

    ಎಸ್‌ವಿಆರ್ ವರದಿ ಮಾಡಿದ್ದೇನು?
    ಭಾನುವಾರ ಸಂಜೆ ವ್ಲಾಡಿಮಿರ್‌ ಪುಟಿನ್‌ ಹೃದಯ ಸ್ತಂಭನಕ್ಕೆ ಒಳಗಾಗಿದ್ದರು. ವ್ಲಾಡಿಮಿರ್ ಪುಟಿನ್ ಭಾನುವಾರ ರಾತ್ರಿ 9 ಗಂಟೆಯ ಸುಮಾರಿಗೆ ತನ್ನ ಮಲಗುವ ಕೋಣೆಯಲ್ಲೇ ನೆಲದ ಮೇಲೆ ಆಹಾರ ಮತ್ತು ಪಾನೀಯಗಳೊಂದಿಗೆ ಮಗುಚಿಕೊಂಡಿದ್ದ ಟೇಬಲ್ ಪಕ್ಕದಲ್ಲಿ ಬಿದ್ದ ಸ್ಥಿತಿಯಲ್ಲಿ ಕಂಡುಬಂದಿದ್ದರು. ಪುಟಿನ್ ಬಿದ್ದಾಗ, ಟೇಬಲ್ ಮತ್ತು ಅದರ ಮೇಲಿದ್ದ ಆಹಾರ, ಡ್ರಿಂಕ್ಸ್ ಬಾಟಲಿಗಳು ಟೇಬಲ್‌ನಿಂದ ಕೆಳಗೆ ಬಿದ್ದಿದ್ದವು. ಅದರಿಂದ ದೊಡ್ಡ ಶಬ್ಧ ಉಂಟಾಗಿತ್ತು. ಭದ್ರತಾ ಸಿಬ್ಬಂದಿ ತಕ್ಷಣ ಅಲ್ಲಿಗೆ ಧಾವಿಸಿದಾಗ ಪುಟಿನ್ ನೆಲದ ಮೇಲೆ ಬಿದ್ದು, ನೋವಿನಿಂದ ನರಳುತ್ತಿರುವುದು ಕಂಡುಬಂದಿತ್ತು. ಕೂಡಲೇ ನಿವಾಸದಲ್ಲಿ ಕರ್ತವ್ಯದಲ್ಲಿದ್ದ ವೈದ್ಯರು ಕಾರ್ಯಪ್ರವೃತ್ತರಾಗಿ ತುರ್ತು ಚಿಕಿತ್ಸೆ ನೀಡಿದ್ದರು. ನಂತರ ಪುಟಿನ್‌ರನ್ನ ಅವರ ನಿವಾಸದಲ್ಲೇ ವಿಶೇಷವಾಗಿ ಸುಸಜ್ಜಿತ ಕೋಣೆಗೆ ಸ್ಥಳಾಂತರಿಸಲಾಗಿತ್ತು. ಅಲ್ಲಿರುವ ವಿಶೇಷ ಐಸಿಯು ಘಟಕಕ್ಕೆ ಕರೆದೊಯ್ದು ಚಿಕಿತ್ಸೆ ನೀಡಲಾಯಿತು. ಪ್ರಥಮ ಚಿಕಿತ್ಸೆ ನೀಡಿದ್ದರಿಂದಾಗಿ ಮತ್ತೆ ಅವರ ಹೃದಯ ಆರೋಗ್ಯ ಸ್ಥಿತಿಗೆ ಬಂದಿದೆ ಎಂದು ಟೆಲಿಗ್ರಾಮ್ ಚಾನೆಲ್ ವರದಿ ಮಾಡಿತ್ತು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ಗೆ ಹೃದಯ ಸ್ತಂಭನ – ಭದ್ರತಾ ಸಿಬ್ಬಂದಿ ಹೇಳಿದ್ದೇನು?

    ಮಾಸ್ಕೋ: ಕಳೆದ ವರ್ಷದಿಂದ ಉಕ್ರೇನ್‌ ವಿರುದ್ಧ ಯುದ್ಧ (Ukraine War) ಸಾರಿದಾಗಿನಿಂದಲೂ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ (Vladimir Putin) ಆರೋಗ್ಯ ವಿಚಾರ ನಿರಂತರ ಚರ್ಚೆಯಲ್ಲಿದೆ. ಈ ನಡುವೆ ಪುಟಿನ್‌ ಭಾನುವಾರ ಸಂಜೆ ಹೃದಯ ಸ್ತಂಭನಕ್ಕೆ (Cardiac Arrest) ಒಳಗಾಗಿರುವುದು ಕಂಡುಬಂದಿದೆ ಎಂದು ಟೆಲಿಗ್ರಾಮ್ ಚಾನೆಲ್ ‘ಜನರಲ್ SVR’ ಅನ್ನು ಉಲ್ಲೇಖಿಸಿ ವರದಿಯಾಗಿದೆ. ಜನರಲ್ ಎಸ್‌ವಿಆರ್ ಟೆಲಿಗ್ರಾಮ್‌ ಚಾಲನೆಲ್‌ ಅನ್ನು ಕ್ರೆಮ್ಲಿನ್‌ನ್‌ ನಿವೃತ್ತ ಅಧಿಕಾರಿಗಳು ನಡೆಸುತ್ತಿದ್ದಾರೆ ಎನ್ನಲಾಗಿದೆ.

    ಮಾಹಿತಿ ಪ್ರಕಾರ, ವ್ಲಾಡಿಮಿರ್‌ ಪುಟಿನ್ ಭಾನುವಾರ ರಾತ್ರಿ 9 ಗಂಟೆಯ ಸುಮಾರಿಗೆ ತನ್ನ ಮಲಗುವ ಕೋಣೆಯಲ್ಲೇ ನೆಲದ ಮೇಲೆ ಆಹಾರ ಮತ್ತು ಪಾನೀಯಗಳೊಂದಿಗೆ ಮಗುಚಿಕೊಂಡಿದ್ದ ಟೇಬಲ್‌ ಪಕ್ಕದಲ್ಲಿ ಬಿದ್ದ ಸ್ಥಿತಿಯಲ್ಲಿ ಕಂಡುಬಂದಿದ್ದರು ಎಂದು ಪುಟಿನ್‌ ಭದ್ರತಾ ಸಿಬ್ಬಂದಿ ತಿಳಿಸಿದ್ದಾರೆ. ಇದನ್ನೂ ಓದಿ: ದೃಷ್ಟಿ ಮಂಜಾಗ್ತಿದೆ, ಕೈ-ಕಾಲು ಸ್ವಾಧೀನ ಕಳೆದುಕೊಳ್ತಿದೆ – ಪುಟಿನ್‌ ಆರೋಗ್ಯದಲ್ಲಿ ಬಿಗ್‌ ಅಪ್ಡೇಟ್ಸ್‌

    ಬಿದ್ದು ಹೊರಳಾಡುತ್ತಿದ್ದ ಪುಟಿನ್‌: ಬಹುಶಃ, ಪುಟಿನ್‌ ಬಿದ್ದಾಗ, ಟೇಬಲ್ ಮತ್ತು ಅದರ ಮೇಲಿದ್ದ ಆಹಾರ, ಡ್ರಿಂಕ್ಸ್‌ ಬಾಟಲಿಗಳು ಟೇಬಲ್‌ನಿಂದ ಕೆಳಗೆ ಬಿದ್ದಿದ್ದವು. ಅದರಿಂದ ದೊಡ್ಡ ಶಬ್ಧ ಉಂಟಾಗಿತ್ತು. ಭದ್ರತಾ ಸಿಬ್ಬಂದಿ ತಕ್ಷಣ ಅಲ್ಲಿಗೆ ಧಾವಿಸಿದಾಗ ಪುಟಿನ್ ನೆಲದ ಮೇಲೆ ಬಿದ್ದು, ನೋವಿನಿಂದ ನರಳುತ್ತಿರುವುದು ಕಂಡುಬಂದಿತು. ಕೂಡಲೇ ನಿವಾಸದಲ್ಲಿ ಕರ್ತವ್ಯದಲ್ಲಿದ್ದ ವೈದ್ಯರು (Putin Doctors) ಕಾರ್ಯಪ್ರವೃತ್ತರಾಗಿ ತುರ್ತು ಚಿಕಿತ್ಸೆ ನೀಡಿದರು. ನಂತರ ಪುಟಿನ್‌ರನ್ನ ಅವರ ನಿವಾಸದಲ್ಲೇ ವಿಶೇಷವಾಗಿ ಸುಸಜ್ಜಿತ ಕೋಣೆಗೆ ಸ್ಥಳಾಂತರಿಸಲಾಯಿತು. ಅಲ್ಲಿರುವ ವಿಶೇಷ ಐಸಿಯು ಘಟಕಕ್ಕೆ ಕರೆದೊಯ್ದು ಚಿಕಿತ್ಸೆ ನೀಡಲಾಯಿತು. ಪ್ರಥಮ ಚಿಕಿತ್ಸೆ ನೀಡಿದ್ದರಿಂದಾಗಿ ಮತ್ತೆ ಅವರ ಹೃದಯ ಆರೋಗ್ಯ ಸ್ಥಿತಿಗೆ ಬಂದಿದೆ ಎಂದು ಟೆಲಿಗ್ರಾಮ್‌ ಚಾನೆಲ್‌ ವರದಿ ಮಾಡಿದೆ. ಇದನ್ನೂ ಓದಿ: ಪುಟಿನ್‌ಗೆ ಅಡುಗೆ ಭಟ್ಟನಾಗಿದ್ದ ಪ್ರಿಗೋಜಿನ್ – ರಷ್ಯಾ ಅಧ್ಯಕ್ಷನ ವಿರುದ್ಧವೇ ತಿರುಗಿ ಬಿದ್ದದ್ದು ಯಾಕೆ?

    ಸದ್ಯ ಮೂಲಗಳು ವ್ಲಾಡಿಮಿರ್ ಪುಟಿನ್ ಪ್ರತಿರೂಪ ಸಭೆ ಸಮಾರಂಭದಲ್ಲಿ ಸಕ್ರಿಯವಾಗಿದ್ದಾರೆ ಎಂದು ಹೇಳುತ್ತಿವೆ. ಕಳೆದ ವರ್ಷ ಉಕ್ರೇನ್‌ನ ಮೇಲೆ ರಷ್ಯಾದ ಆಕ್ರಮಣ ಪ್ರಾರಂಭವಾದಾಗಿನಿಂದ, ಪುಟಿನ್ ಪಾರ್ಕಿನ್ಸನ್ ಕಾಯಿಲೆಯಿಂದ ಬಳಲುತ್ತಿದ್ದಾರೆ ಎನ್ನಲಾಗಿತ್ತು. ಆದ್ರೆ ಕ್ರೆಮ್ಲಿನ್‌ ಮತ್ತೆ ಮತ್ತೆ ಪುಟಿನ್‌ ಆರೋಗ್ಯವಾಗಿದ್ದಾರೆ ಎಂಬುದನ್ನು ಒತ್ತಿ ಹೇಳುತ್ತಿದೆ. ಇದನ್ನೂ ಓದಿ: ಪುಟಿನ್‌ ವಿರುದ್ಧ ಬಂಡಾಯವೆದ್ದಿದ್ದ ಪ್ರಿಗೋಜಿನ್ ವಿಮಾನ ಅಪಘಾತದಲ್ಲಿ ದುರ್ಮರಣ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]